*ಶುದ್ಧ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ : ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ : ಪಟ್ಟು ಬಿಡದ ಗ್ರಾಮಸ್ಥರು*

ದೊಡ್ಡಬಳ್ಳಾಪುರ : ಶುದ್ಧ ನೀರಿಗಾಗಿ ಒತ್ತಾಯಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ಎರಡನೇ ಬಾರಿಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನ ಆರಂಭಿಸಿದ್ದಾರೆ.

ಧರಣಿ ಕುಳಿತ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ಶಿವಶಂಕರ್ ಭೇಟಿ ನೀಡಿ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಹೋರಾಟಗಾರರನ್ನು ಮನವಿ ಮಾಡಿದರು.

 

ಘಟಕದ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ ಮಾಡಿರುವ ದಾಖಲೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯಿಂದ ಒದಗಿಸಿದ ನಂತರ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು.

 

ದದೊಡ್ಡಬಳ್ಳಾಪುರ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕೈಗಾರಿಕೆಗಳ ತ್ಯಾಜ್ಯ ನೀರಿನಿಂದ ಆರ್ಕಾವತಿ ಜಲಮೂಲ ಸೇರಿ ನದಿಪಾತ್ರದಲ್ಲಿನ ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ.

 

 

ರೈತ ಮುಖಂಡ ವಸಂತ್ ಕುಮಾರ್ ಮಾತನಾಡಿ ಎಸ್ ಡಿ ಪಿ ಘಟಕದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ನಡುವಿನ ಪತ್ರ ವ್ಯವಹಾರದ ಪ್ರತಿ ನೀಡುವಂತೆ ಮನವಿ ಮಾಡಿದ್ದೇವೆ.

ಪತ್ರ ವ್ಯವಹಾರದಲ್ಲಿನ ಸತ್ಯಾಂಶವನ್ನ ತಿಳಿದ ನಂತರವಷ್ಟೇ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದ್ದಾಗಿ ಹೇಳಿದರು.

ಹೋರಾಟಗಾರರ ತಂಡ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಾದ ಶಿವಶಂಕರ್ ಜೊತೆ ಮಾತುಕಥೆಯನ್ನ ನಡೆಸಿದರು.

 

ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ ವಿಧಾನಸಭೆಯಲ್ಲಿ ಶಾಸಕರಾದ ಧೀರಜ್ ಮುನಿರಾಜು ಕೇಳಿದ ಪ್ರಶ್ನೆಗೂ ಮತ್ತು ಸಚಿವರಾದ ಬೈರತಿ ಸುರೇಶ್ ನೀಡಿದ ಉತ್ತರದಲ್ಲಿ ಕಮ್ಯುನಿಕೇಷನ್ ಗ್ಯಾಪ್ ನಿಂದಾಗಿ ಗೊಂದಲ ವಾತಾವರಣ ಸೃಷ್ಟಿಯಾಗಿದೆ. ದೊಡ್ಡಬಳ್ಳಾಪುರ ಒಳಚರಂಡಿ ಮತ್ತು ಚಿಕ್ಕತುಮಕೂರು ಕೆರೆಯಂಗಳದಲ್ಲಿ ಎಸ್ ಟಿ ಪಿ ಘಟಕ ನಿರ್ಮಿಸಲು 135 ಕೋಟಿಯ ಕಾಮಾಗಾರಿಯ ಡಿಪಿಆರ್ ಸಿದ್ಧವಾಗಿದೆ ಎಂದರು.

 

ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನ ಜಿಲ್ಲಾಧಿಕಾರಿಗಳು ಹೋರಾಟಗಾರರಿಗೆ ತೋರಿಸಿದರು.

ಇದೇ ವೇಳೆ ಹೋರಾಟಗಾರರಿಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳಾದ ಶಿವಶಂಕ‌ರ್ ಹಸಿರು ನ್ಯಾಯ ಮಂಡಳಿ ಆದೇಶವಿದ್ದು, SDP ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದೆ. ಘಟಕ ಕಾಮಗಾರಿಯ ಕೆಲಸ ಇಲಾಖೆ ಮತ್ತು ಸರ್ಕಾರಕ್ಕೆ ಹೋಗ ಬೇಕಿದೆ. 4 ತಿಂಗಳಲ್ಲಿ ಘಟಕ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಲಿದೆ ಎಂದರು.

ಜಿಲ್ಲಾಧಿಕಾರಿಗಳ ಭರವಸೆಯ ಮತ್ತು ದಾಖಲೆಗಳಿಂದ ಹೋರಾಟಗಾರರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನ ಸ್ಥಗಿತಗೊಳಿಸಿದ್ದಾರೆ.

 

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಸನ್ನ, ಸತೀಶ್, ವಸಂತ್, ರಮೇಶ್ ಚಿಕ್ಕತುಮಕೂರು. ಸುರೇಶ್, ವಿಜಿಕುಮಾರ್, ಮಂಜುನಾಥ್ ಎಲ್ ಐ ಸಿ, ಲೋಕೇಶ್, ನರಸಿಂಹ ಸೇರಿದಂತೆ ಎರಡು ಗ್ರಾಮ ಪಂಚಾಯಿತಿಗಳ ಜನರು ಹಾಜರಿದ್ದರು.

Comments

Leave a Reply

Your email address will not be published. Required fields are marked *