*ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಸನ್ಮಾನ*

ದೊಡ್ಡಬಳ್ಳಾಪುರ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಉಪ ವಿಬಾಗಾಧಿಕಾರಿ ದುರ್ಗ ಶ್ರೀ, ತಾಲೂಕು ದಂಡಾಧಿಕಾರಿಗಳಾದ ವಿದ್ಯಾ ವಿಭಾ ರಾಥೋಡ್ ಸೇರಿದಂತೆ ಹಲವು ಗಣ್ಯರು ಪ್ರಶಂಸನಾ ಪತ್ರ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು

 

 

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಸಿದ್ದಯ್ಯ, ಕೃಷಿ ಕ್ಷೇತ್ರದಿಂದ ಹಳ್ಳಿರೈತ ಅಂಬರೀಶ್,ನಾಟಕ ಕ್ಷೇತ್ರದಿಂದ ಕಲಾವಿದರಾದ ಆಶ್ವತ ನಾರಾಯಣ, ಸಾಹಿತ್ಯ ಕ್ಷೇತ್ರದಿಂದ ಅಂಜನ್ ಗೌಡ (ಅಂಜನ್), ಆರೋಗ್ಯ ಇಲಾಖೆಯಿಂದ ಡಾ. ಜಿ ರಾಜು, ಏನ್ ಸಿ ಸಿ ಕ್ಷೇತ್ರದಿಂದ ಜಿ. ಹಿತೇಶ್, ಶುಶ್ರುಷಕ ಜಯಕುಮಾರ್, ಪತ್ರಿಕೋದ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತರಾದ ಕೊತ್ತೂರಪ್ಪ ರವರಿಗೆ ಪ್ರಶಂಸನಾ ಪತ್ರ ನೀಡುವ ಮೂಲಕ ಗಣ್ಯರು ಗೌರವಿಸಿದರು.

 

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಕ ರಂಗದ ಕಲಾವಿದರಾದ ಡಾ. ಕೃಷ್ಣಮೂರ್ತಿ ಕೆ.ಎಂ., ಕರ್ನಾಟಕ ಸಂಗೀತ ಅಕಾಡೆಮಿ ಸದಸ್ಯರಾದ ನಿರ್ಮಲ ಡಿ ಆರ್, ಲವಕುಮಾರ್ ಟಿ ಎಚ್, ಜನಪದ ಅಕಾಡೆಮಿ ಸದಸ್ಯರಾದ ಹುಲಿಕುಂಟೆ ಮೂರ್ತಿ ರವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

 

 

ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರು, ಪ್ರಗತಿಪರ ಚಿಂತಕರು, ತಾಲೂಕಿನ ಮುಖಂಡರು, ವಿವಿಧ ಶಾಲೆಗಳ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *