ಅಕೌಂಟ್ ನಲ್ಲಿದ್ದ ಹಣ ಗಾಯಬ್ : ನಮಗೆ ಸಂಬಂಧವೇ ಇಲ್ಲ ಎಂದ ಬ್ಯಾಂಕ್ ಅಧಿಕಾರಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಎಇಪಿಎಸ್ ಪ್ರಕರಣ ದಾಖಲಾಗಿದೆ .ಇತ್ತೀಚೆಗೆ ಎಇಪಿಎಸ್ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು . ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಳವಡಿಸಿರುವ ತಂತ್ರಾಂಶದಲ್ಲಿ ಬೆರಳಚ್ಚು ನೀಡಿದವರ ಖಾತೆಯಿಂದ ಹಣ ಕಡಿತವಾಗಿರುವ ಪ್ರಕರಣ ತೂಬಗೆರೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಹಣ ಕಳೆದುಕೊಂಡಿರುವ ನಾರಾಯಣಪ್ಪ ಪರವಾಗಿ ತೂಬಗೆರೆ ಗ್ರಾಮಸ್ಥರು ಗ್ರಾಮದ ಯೂನಿಯನ್ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು.ಜಮೀನು ಮಾರಾಟ ಸಂಬಂಧ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬೆರಳಚ್ಚು ನೀಡಿದ ಮರುದಿನದಿಂದ ನನ್ನ ಮತ್ತು ನನ್ನ ಮಗಳ ಬ್ಯಾಂಕ್ ಖಾತೆಯಿಂದ 45,000 ರೂ ಡ್ರಾ ಆಗಿದೆ. ಈ ಕುರಿತು ನಾನು ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದರೆ ಇದಕ್ಕೂ ಬ್ಯಾಂಕಿಗೂ ಯಾವುದೇ ಸಂಬಂಧವಿಲ್ಲ ಇದು ಸೈಬರ್ ಕ್ರೈಮ್ ಪ್ರಕರಣ ಎಂದು ಹರಿಕೆ ಉತ್ತರ ನೀಡುತ್ತಾರೆ ಎಂದು ನೊಂದ ವ್ಯಕ್ತಿ ನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳೀಯ ಗ್ರಾಮಸ್ಥರಾದ ಉದಯ ಆರಾಧ್ಯ ಮಾತನಾಡಿ ನಾರಾಯಣಪ್ಪರವರ ಖಾತೆ ತೂಬಗೆರೆ ಗ್ರಾಮದ ಯೂನಿಯನ್ ಬ್ಯಾಂಕ್ ನಲ್ಲಿದ್ದು ಅವರು ಎಟಿಎಂ ಹಾಗೂ ಆನ್ ಲೈನ್ ಬ್ಯಾಂಕಿಂಗ್ ಬಳಸುತ್ತಿಲ್ಲ. ಆದರೂ ಹಣ ಡ್ರಾ ಆಗಿದೆ. ಇಂತಹ ವಂಚನೆ ಪ್ರಕರಣಗಳು ನಿರಂತರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿವೆ. ಇದು ನಮ್ಮ ತೂಬಗೆರೆ ಗ್ರಾಮದಲ್ಲಿ ನಡೆದಿದೆ ಹಣ ಕಳೆದುಕೊಂಡಿರುವವರಿಗೆ ವಾಪಸ್ ಕೊಡಿಸುವ ಕಾರ್ಯಕ್ಕೆ ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು

.

ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಸೈಬರ್ ವಂಚನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು‌.

Comments

Leave a Reply

Your email address will not be published. Required fields are marked *