ರಾಗಿ ಹುಲ್ಲಿಗೆ ಕಿಡಿಗೇಡಿಗಳಿಂದ ಬೆಂಕಿ : 40 ಸಾವಿರ ರೂ ಬೆಲೆಯ ರಾಗಿ ಹುಲ್ಲು ಸಂಪೂರ್ಣ ಸುಟ್ಟು ಭಸ್ಮ

ದೊಡ್ಡಬಳ್ಳಾಪುರ :ತಾಲ್ಲೂಕಿನ ತೂಬಗೆರೆ ಹೋಬಳಿಯ ನೆಲ್ಲುಕುಂಟೆ ಗ್ರಾಮದಲ್ಲಿ ಮುಂಜಾನೆ ರಾಗಿ ಹುಲ್ಲು ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆಗೆ ರಾಗಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಸಂಭವಿಸಿದೆ.

 

ನೆಲ್ಲುಕುಂಟೆ ಗ್ರಾಮದ ರೈತ ರಾಮಾಂಜಿನಪ್ಪನವರಿಗೆ ಸೇರಿದ ರಾಗಿ ಹುಲ್ಲಿನ ಬಣವೆಗೆ ಬೇಕಂತಲೇ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ರಾಗಿ ಹುಲ್ಲು ಸಂಪೂರ್ಣ ಸುಟ್ಟು ಬೂದಿಯಾಗಿದೆ.

 

ಈ ಕುರಿತ ರೈತ ರಾಮಾಂಜಿನಪ್ಪ ಮಾತನಾಡಿ ತಡರಾತ್ರಿ ಸುಮಾರು ಎರಡು ಗಂಟೆಯಲ್ಲಿ ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂತು. ಸುತ್ತಲಿನ ಜನರು ಸೇರಿ ಬೆಂಕಿ ನಂದಿಸುವ ಪ್ರಯತ್ನ‌ ಮಾಡಿದೆವು. ಆದರೆ, ಈ ವೇಳೆಗಾಗಲೇ ಸುಮಾರು 40 ಸಾವಿರ ರೂ. ಬೆಲೆ ಬಾಳುವ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

Comments

Leave a Reply

Your email address will not be published. Required fields are marked *