ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಸಿ ಆರ್ ಪಿ ಎಫ್ ಕ್ಯಾಂಪಸ್ ದೊಡ್ಡಬಳ್ಳಾಪುರ ರಸ್ತೆ ,ಯಲಹಂಕ ಬೆಂಗಳೂರು ಇಲ್ಲಿ ದಿನಾಂಕ 14 2 2024ರಂದು ಆಯೋಜನೆ ಮಾಡಲಾಗಿದ್ದು.

ಪುಲ್ವಾಮಾ ದಾಳಿಯಲ್ಲಿ ದೇಶಕ್ಕಾಗಿ ಮಡಿದ ಯೋಧರ ಸವಿನೆನಪಿನಲ್ಲಿ ಮಾಜಿ ಅರೇಸೇನಾಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ರಾಜ್ಯದ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ .

ಈ ಕುರಿತು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ಮಾತನಾಡಿ ಮಾಜಿ ಅರೆಸೇನಾ ಯೋಧರ ಹಲವು ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಮುಂದೆ ನಿವೇದನೆ ಹೇಳಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಲಿದೆ ನಮ್ಮ ಅರೆಸೇನಾ ಪಡೆಗಳು ಹಲವು ವರ್ಷಗಳಿಂದ ಸರ್ಕಾರಿ ಸೌಲಭ್ಯಗಳಿಗೆ ಪರದಾಡುವ ಸ್ಥಿತಿಯಿದು.ನಮ್ಮ ಪ್ಯಾರಾ ಮಿಲಿಟರಿ ಪಡೆಗಳಿಗೆ ಪ್ರತ್ಯೇಕ ಬೋರ್ಡ್ ಅವಶ್ಯಕತೆ ಇದೆ. ಸರ್ಕಾರಿ ಸೌಲಭ್ಯಗಳು ನೇರವಾಗಿ ನಮ್ಮ ಸೈನಿಕರು ಹಾಗೂ ಮಾಜಿ ಸೈನಿಕರ ಕೈ ಸೇರಬೇಕಿದೆ. ಫೆಬ್ರವರಿ 14ರ ಸಮಾವೇಶ ಸಂಭ್ರಮಾಚರಣೆಯಲ್ಲ ಇದೊಂದು ಕರಾಳ ದಿನದ ಆಚರಣೆಯಾಗಿದೆ . ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಿದ್ದು ರಾಜ ನಾಯಕರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ .ಈ ಬೃಹತ್ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅರೆಸೇನಾ ಪಡೆಗಳ ಮಾಜಿ ಯೋಧರು ಸೇರಲಿದ್ದು . ನಮ್ಮ ಬೇಡಿಕೆ ಹಾಗೂ ಮನವಿಗಳನ್ನು ಸಮಸ್ತ ಯೋಧರನ್ನು ಪ್ರತಿನಿಧಿಸುವ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ವಹಿಸಲಿದ್ದಾರೆ. ಈ ಕಾರ್ಯಕ್ರಮವು ನಿವೃತ್ತ ಮಹಾ ನಿರೀಕ್ಷಕರು ( ಸಿ ಆರ್ ಪಿ ಎಫ್ ) ಶ್ರೀ ಕೆ .ಆರ್ಕೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ರಾಜ್ಯದ ಎಲ್ಲೆಡೆಯಿಂದ ಮಾಜಿ ಯೋಧರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು .
Leave a Reply