Blog

  • *ಯುವರಾಜ್ – ಶ್ರೀದೇವಿ ವಿಚ್ಛೇದನ ಪ್ರಕರಣ – ವಕೀಲರ ಆರೋಪಗಳೇನು…?*

    ಬೆಂಗಳೂರು : ವರನಟ ಡಾಕ್ಟರ್ ರಾಜ್‌ಕುಮಾರ್‌ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಅವರ 2ನೇ ಮಗ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ಅವರ ನಡುವಿನ ವಿವಾಹ ಈಗ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ .

    ಜೂನ್‌ 6 ರಂದು ಇಬ್ಬರೂ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು. ವಿಚ್ಚೆದನ ಅರ್ಜಿಯನ್ನು ಸಲ್ಲಿಕೆ ಮಾಡಿರುವ ಯುವ ರಾಜ್‌ಕುಮಾರ್‌, ಶ್ರೀದೇವಿ ತಮಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಮತ್ತೊಂದೆಡೆ ಶ್ರೀದೇವಿ ಭೈರಪ್ಪ ಕೂಡ ಯುವ ರಾಜ್‌ಕುಮಾರ್‌ ಅವರಿಗೆ ಸಿನಿಮಾ ಹೀರೋಯಿನ್‌ ಜೊತೆ ಅಕ್ರಮ ಸಂಬಂಧವಿದೆ ಎನ್ನುವಂತೆ ಆರೋಪಿಸಿದ್ದಾರೆ.

    Ad

    ಈ ಕುರಿತು ಯುವ ರಾಜ್‌ಕುಮಾರ್ ಪರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ವಕೀಲ ಸಿರಿಲ್ ಪ್ರಸಾದ್‌ ಮಾತನಾಡಿದ್ದು,ಶ್ರೀದೇವಿ ಅವರು ಯುವ ರಾಜಕುಮಾರ್ ವಿರುದ್ಧ ಹಣಕಾಸು,ಅಕ್ರಮ ಅನೈತಿಕ ಸಂಬಂಧದ ಆರೋಪ ಹೊರಿಸಿದ್ದಾರೆ.

     

    ‘ಮಾನಸಿಕ ಹಾಗೂ ದೈಹಿಕ ಹಲ್ಲೆಯ ಮೇಲೆ ವಿಚ್ಛೇದನ ಅರ್ಜಿ ಹಾಕಲಾಗಿದೆ. ಆಕೆ ಬೇರೆ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಾರೆ. ಮೊದಲು ಈ ಬಗ್ಗೆ ಲೀಗಲ್ ನೋಟಿಸ್ ನೀಡಲಾಗಿತ್ತು. ಇಬ್ಬರ ನಡುವೆ ವೈಯಸ್ಸಿನ ಅಂತರವೂ ಇದೆ. ಬೇರೆ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಐಎಎಸ್‌ ಮಾಡುವ ಪ್ರಯತ್ನ ಮಾಡಿದ್ರು, ಒಂದೆರಡು ದಿನ ಮಾತ್ರ ಕ್ಲಾಸ್‌ಗೆ ಹೋದ ಹಾಗೆ ಮಾಡಿದ್ದರು. ಆ ನಂತರ ಗುರು (ಯುವರಾಜ್‌) ಜೊತೆ ಜಗಳ ಆರಂಭ ಮಾಡಿದ್ದರು. ರಾತ್ರಿ ವೇಳೆ ಬಾಯ್‌ಫ್ರೆಂಡ್‌ ಮನೆಗೆ ಹೋಗುತ್ತಿದ್ದ ಆಕೆ, ಬೆಳಗ್ಗೆ ಅಳುತ್ತಾ ಮನೆಗೆ ಬರುತ್ತಿದ್ದರು. ಮದುವೆಗೂ ಮುನ್ನ ಆಕೆಗೆ ಬೇರೆ ಸಂಬಂಧವಿತ್ತು. ಈ ಕುರಿತಂತೆ ಆಕೆಗೆ ಲೀಗಲ್‌ ನೋಟಿಸ್‌ ನೀಡಲಾಗಿತ್ತು. ಇದಕ್ಕೆ ಅವರು ಉತ್ತರ ನೀಡಿಲ್ಲ. ಸಿನಿಮಾದಲ್ಲಿದ್ದ ಫೋಟೋ ತೆಗೆದು ಯುವರಾಜ್‌ ಮೇಲೆ ಆಕೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ..’ ಎಂದು ವಕೀಲರು ದೂರಿದ್ದಾರೆ.

     

    ‘ರಾಜ್‌ಕುಮಾರ್‌ ಅಕಾಡೆಮಿಯಲ್ಲಿ ಇವರು ಪಾಲುದಾರರಾಗಿದ್ದರು. ಅಕಾಡೆಮಿ ಸೇರಿದ 3 ಕೋಟಿ ಹಣ ಅವರ ಖಾತೆಗೆ ಹೋಗಿದೆ. ಕುಟುಂಬದ ಹೆಸರನ್ನು ಕೆಟ್ಟದಾಗಿ ಬಳಕೆ ಮಾಡಿಕೊಂಡಿದ್ದಾರೆ. ಅಕಾಡೆಮಿಯಿಂದ ಬಂದ ಹಣದಲ್ಲಿ ಮೈಸೂರಿನಲ್ಲಿ 20 ಸೈಟ್, ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಅನ್ನು ಖರೀದಿ ಮಾಡಿದ್ದಾರೆ. ರಾಜ್ ಕುಮಾರ್ ಅಕಾಡೆಮಿ ಬಿಟ್ಟು ಹೋಗುವಾಗ ‘ನಿನ್ನ ಜೊತೆ ಜೀವಿಸುವ ಮನಸ್ಸಿಲ್ಲ..’ ಅಂತ ಯುವರಾಜ್‌ಗೆ ಹೇಳಿದ್ದಾರೆ. ಇನ್ನೊಮ್ಮೆ ಅಮೆರಿಕ್ಕೆ ಬರುವಂತೆ ಯುವರಾಜ್‌ಗೆ ಕರೆದಿದ್ದರು. ಸುಮಾರು 4 ರಿಂದ 4.5 ಕೋಟಿ ಹಣ ತೆಗೆದುಕೊಂಡು ಹೋಗಿದ್ದಾರೆ. ಕುಟುಂಬದ ಆಸ್ತಿಗಳ ಅಡಇಟ್ಟು ಸಾಲ ಪಡೆಯಲಾಗಿದೆ ಆ ಮೂಲಕ ಯುವರಾಜ್, ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ..’ ಎಂದು ವಕೀಲರು ದೂರಿದ್ದಾರೆ.

    Ad

    ರಾಧಯ್ಯ ಎನ್ನುವ ವ್ಯಕ್ತಿಯ ಜೊತೆ ಆಕೆಗೆ ಅಕ್ರಮ ಸಂಬಂಧವಿದೆ. ಯುವ ಜೊತೆ ಮದುವೆಯ ನಂತರವೂ ಇದು ಮುಂದುವರಿದಿತ್ತು. ಶ್ರೀದೇವಿ ಹಾಗೂ ಯುವ ಮದುವೆಯ ಬಳಿಕ ರಾಧಯ್ಯ ಮಂಕಾಗಿದ್ದರು. ರಾಧಯ್ಯ ಅವರ ಪತ್ನಿ ಮನೆಯಿಂದ ಹೊರಹೋದ ಬಳಿಕ, ರಾಧಯ್ಯ ಹಾಗೂ ಶ್ರೀದೇವಿ ಭೇಟಿ ಮಾಡೋದು ಮಾಡುತ್ತಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

     

    ಯಾವ ನಟಿಯು ಜೊತೆಯೂ ಯುವರಾಜ್‌ಗೆ ಸಂಬಂಧವಿಲ್ಲ:

     

    ಲೀಗಲ್‌ ನೋಟಿಸ್ ಗೆ ಉತ್ತರ ಕೊಡುವಾಗ ಯುವರಾಜ್‌ಗೆ ಸೆಕ್ಸ್‌ನಲ್ಲಿ ಸಮಸ್ಯೆ ಇದೆ ಎಂದು ಶ್ರೀದೇವಿ ಆರೋಪ ಮಾಡಿದ್ದಾರೆ. ಈಗ ಅವರು ಬೇರೆ ನಟಿಯ ಜೊತೆ ಸಂಬಂಧ ಇದೆ ಎನ್ನುತ್ತಿದ್ದಾರೆ. ಸೆಕ್ಸ್‌ನಲ್ಲಿ ಸಮಸ್ಯೆ ಇದೆ ಎಂದು ಆರೋಪ ಮಾಡಿದ ಬಳಿಕ ಅನೈತಿಕ ಸಂಬಂಧ ಅರೋಪ ಮಾಡಲು ಹೇಗೆ ಸಾಧ್ಯ? ಕುಟುಂಬ ಸರಿ ಮಾಡುವ ಪ್ರಯತ್ನ ಯುವರಾಜ್ ಮಾಡಿದ್ದರೂ ಅದರಲ್ಲಿ ಸಫಲವಾಗಲಿಲ್ಲ. ಇನ್ನು ಶ್ರೀದೇವಿ ಬಾಯ್ ಫ್ರೆಂಡ್ ರಾದಯ್ಯನಿಂದ ಮಗು ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

  • *ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಸ್ಟ್…. ಸುದ್ದಿ ನೋಡಿ*

    ಆರ್ ಆರ್ ನಗರದ ಮನೆಯಿಂದ ಸ್ಯಾಂಡಲ್ ವುಡ್ ನಟ ದರ್ಶನ್ ಅರಸ್ಟ್ ಆಗಿದ್ದಾರೆ.ಕಾಮಾಕ್ಷಿ ಪಾಳ್ಯ ಪೊಲೀಸರಿಂದ ಡಿ ಸಿ ಪಿ ಗಿರೀಶ್ ನೇತೃತ್ವದ ಪೊಲೀಸರಿಂದ ನಟ ದರ್ಶನ್ ಅರಸ್ಟ್ ಆಗಿದ್ದಾರೆ

     

    ನಟ ದರ್ಶನ್ ಪರಿಚಯಸ್ಥ ಮಹಿಳೆಗೆ ಚಿತ್ರದುರ್ಗ ಮೂಲದ ಯುವಕ ರೇಣುಕಾಸ್ವಾಮಿ ಮೇಸಜ್ ಮಾಡುತ್ತಿದ್ದು. ಅಶ್ಲೀಲ ಮೆಸೇಜ್ ಮಾಡಿ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ ಎಂಬ ವಿಚಾರಕ್ಕೆ ಬುದ್ದಿವಾದ ಹೇಳಲು ಕರೆಸಿ ನಟ ದರ್ಶನ್ ಹಾಗೂ ಬೌನ್ಸರ್ಸ್ ಹಲ್ಲೆ ನೆಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

     

    ಹಲ್ಲೆವೇಳೆ ಯುವಕನ ಗುಪ್ತಾಂಗಕ್ಕೆ ಹೊಡೆತಬಿದ್ದಿರುವ ಕಾರಣ ಯುವಕ ಸಾವನಪ್ಪಿದ್ದಾನೆ ಈ ಕುರಿತು ಪ್ರಕರಣ ದಾಖಲಾಗಿದ್ದು. ಕಾಮಾಕ್ಷಿ ಪಾಳ್ಯ ಪೊಲೀಸ್ ನಟ ದರ್ಶನ್ ರನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

     

    ನಟ ದರ್ಶನ್ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಸತ್ಯ ಸತ್ಯತೆ ಎಂಬುದು ಪೂರ್ಣ ತನಿಖೆ ಮೂಲಕ ಹೊರಬೀಳಬೇಕಿದೆ.

  • *ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನೈಜ ಪತ್ರಕರ್ತರಿಗೆ ಅವಕಾಶ ನೀಡಿ – ಶಿವಾನಂದ ತಗಡೂರು*

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ನಿಯೋಗ ತೆರಳಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಅಭಿನಂದಿಸಿದರು.

     

    ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪತ್ರಕರ್ತರು ಸಮಾಜವನ್ನು ತಿದ್ದುವ ಸೇನಾನಿಗಳಾಗಿದ್ದು ನಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಮೌಲ್ಯಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕು. ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಿ 90 ವರ್ಷಗಳನ್ನು ಪೂರೈಸಿ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿದೆ. ಡಿ ವಿ ಗುಂಡಪ್ಪನವರು ಸ್ಥಾಪಿಸಿರುವ ಈ ಸಂಘವನ್ನು ನಾವು ಕೂಡ ಯಾವುದೇ ರೀತಿಯ ಕಳಂಕ ಬಾರದಂತೆ ಯಶಸ್ವಿಯಾಗಿ ಮುನ್ನಡೆಸಬೇಕಿದೆ.

     

    ತಾಲೂಕು ಸಂಘಗಳಿಗೆ ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳು ಸಂಘದ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಏನೇ ಮನಸ್ತಾಪಗಳಿದ್ದರೂ ಇದ್ದರೂ ಕೂಡ ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಿಕೊಂಡು ಸಂಘದ ಹಾಗೂ ಸದಸ್ಯರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

     

    *ನೈಜ ಪತ್ರಕರ್ತರನ್ನು ಗುರುತಿಸಿ :*

     

    ಪ್ರಮುಖವಾಗಿ ಸಂಘದಲ್ಲಿ ಸದಸ್ಯತ್ವ ನೀಡುವ ಸಂದರ್ಭದಲ್ಲಿ ನೈಜ ಪತ್ರಕರ್ತರಿಗೆ ಅವಕಾಶ ನೀಡುವ ಕೆಲಸ ನೂತನ ಪದಾಧಿಕಾರಿಗಳಿಂದ ಆಗಬೇಕು. ಪತ್ರಿಕಾ ಕೆಲಸವನ್ನೇ ಮಾಡದೆ, ಪತ್ರಿಕೆಯನ್ನೇ ಮುದ್ರಣ ಮಾಡದೆ ಇರುವ ವ್ಯಕ್ತಿಗಳಿಗೆ ಸದಸ್ಯತ್ವ ನೀಡದೆ ಸಂಘದ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಸಂಘವನ್ನು ಮುನ್ನಡೆಸಬೇಕಿದೆ.

    ಪದಾಧಿಕಾರಿಗಳಾದವರು ಸಂಘದ ಸದಸ್ಯರಿಂದ ಬೆರಳು ತೋರಿಸಿಕೊಳ್ಳುವ ಅಷ್ಟರಮಟ್ಟಿಗೆ ಹೋಗಬಾರದು. ಈ ನಿಟ್ಟಿನಲ್ಲಿ ಸಾಕಷ್ಟು ಜಾಗರೂಕರಾಗಿ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

     

    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿಸಿ ಲೋಕೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ಶಾಂತ ಮೂರ್ತಿ,ಉಪಾಧ್ಯಕ್ಷ ಮುರಳಿ ಮೋಹನ್, ನಿರ್ಧೇಶಕರಾದ ಸತೀಶ್,ರಮೇಶ್ ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ್ ಡಿ ಉಪ್ಪಾರ್, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ,ಪುರುಷೋತ್ತಮ ಗೌಡ,ಉಪಾಧ್ಯಕ್ಷ ಕೊತ್ತೂರಪ್ಪ,ತಾಲ್ಲೂಕು ಖಜಾಂಚಿ ಕೃಷ್ಣಮೂರ್ತಿ,ನಿರ್ದೇಶಕರಾದ ತೆರದಾಳ ಶ್ರೀನಿವಾಸ್,ಉಮೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

  • *ಮೋದಿ 3.0 ಪ್ರಾರಂಭ : ವಿಕಸಿತ ಭಾರತದ ಕನಸು ನನಸು ಮಾಡಲಿದ್ದಾರೆ ನರೇಂದ್ರ ಮೋದಿಜೀ – ಚಂದ್ರು ಶೆಟ್ಟಿ*

    ದೊಡ್ಡಬಳ್ಳಾಪುರ: ವಿನೂತನ ಯೋಜನೆಗಳನ್ನು ರೂಪಿಸುವ ಮೂಲಕ ಭಾರತ ದೇಶದ ಅಭಿವೃದ್ಧಿ ದುಪ್ಪಟ್ಟು ಮಾಡುವಲ್ಲಿ ಮೋದಿಜೀ ನೇತೃತ್ವದ ಏನ್ ಡಿ ಎ ಸರ್ಕಾರ ಶ್ರಮಿಸುವ ಭರವಸೆ ಇದೆ ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ಅಧ್ಯಕ್ಷ ಚಂದ್ರುಶೆಟ್ಟಿ ಅಭಿಪ್ರಾಯವ್ಯಕ್ತಪಡಿಸಿದರು.

    ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಮಿತಿ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ನರೇಂದ್ರ ಮೋದಿಜೀ ಯವರು ಪ್ರಮುಖರಾಗಿದ್ದಾರೆ. ತಮ್ಮ ಕಾರ್ಯ ವೈಖರಿಯಿಂದಲೇ ಜನಮನ್ನಣೆ ಗಳಿಸಿರುವ ಮೋದಿಜೀ ಮತ್ತೆ ದೇಶದ ಪ್ರಧಾನ ಸೇವಕರಾಗಿ ಅಧಿಕಾರ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ಅಭಿವೃದ್ಧಿಯ ಹೊಸ ಅಧ್ಯಾಯವಾಗಲಿದೆ. ಮೋದಿಜೀಯವರ ವಿಕಸಿತ ಭಾರತದ ಕನಸು ನನಸಾಗಲಿದೆ ಎಂದರು.

    ಮುಖಂಡರಾದ ನಟರಾಜ್ ಮಾತನಾಡಿ ದೇಶದ ಜನತೆಯ ಕುರಿತು ಮೋದಿಜೀಯವರ ಚಿಂತನೆಗಳು ವಿಶೇಷವಾಗಿದ್ದು. ಭಾರತವನ್ನು ವಿಕಸಿತ ಭಾರತವನ್ನಾಗಿ ಪರಿವರ್ತನೆಗೊಳಿಸುವ ಪ್ರಕ್ರಿಯೆ ಮೋದಿ 3.0ನಲ್ಲಿ ನಡೆಯಲಿದೆ. ಭಾರತ ದೇಶವು ಕೃಷಿ, ರೈಲ್ವೆ, ಆರೋಗ್ಯ ಸೇರಿದಂತೆ ಇತರ ಇಲಾಖೆಗಳಲ್ಲಿ ಹಿಂದೆಂದೂ ಕಾಣದ ಗಣನೀಯ ಅಭಿವೃದ್ಧಿಯನ್ನು ದೇಶದ ಜನತೆ ಕಳೆದ ಹತ್ತು ವರ್ಷಗಳಲ್ಲಿ ನೋಡಿದ್ದಾರೆ. ಉತ್ತಮ ರಸ್ತೆಗಳು, ಸುಸಜ್ಜಿತ ಆಸ್ಪತ್ರೆಗಳು, ನರೇಂದ್ರ ಮೋದಿಜೀ ಅವರ ಸಾಧನೆಗಳಿಗೆ ಉತ್ತಮ ಉದಾಹರಣೆಗಳಾಗಿವೆ ಎಂದರು.

    ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಹಕಾರ್ಯದರ್ಶಿ ವೆಂಕಟೇಶ್,ಸಂಚಾಲಕ ಮಂಜುನಾಥ್, ವೆಂಕಟೇಶ್, ಪ್ರಶಾಂತ್ ಭಾಗವಹಿಸಿದ್ದರು

  • *ಸ್ವಚ್ಛ ಗಾಳಿ ಬೆಳಕು ನಮ್ಮೆಲ್ಲರ ಹಕ್ಕು ಅದಕ್ಕಾಗಿ ನಮ್ಮ ಸುತ್ತಮುತ್ತಲ ಪರಿಸರ ಉಳಿಸಿ – ಉಮಾರಬ್ಬ*

    ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮರ ಗಿಡಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ. ಪರಿಸರದ ಬಗ್ಗೆ ನಮ್ಮಲ್ಲರ ಹಿಂದಿನ ಕಾಳಜಿ ಮುಂದಿನ ಪೀಳಿಗೆಗೆ ವರವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ. ಟ್ರಸ್ಟ್ ( ರಿ )ನ ಜಿಲ್ಲಾ ನಿರ್ದೇಶಕರಾದ ಉಮರಬ್ಬ ತಿಳಿಸಿದರು.

    ” *ವಿಶ್ವ ಪರಿಸರ ದಿನಾಚರಣೆ* ” ಯ ಅಂಗವಾಗಿ ತಾಲ್ಲೂಕಿನ ಮೇಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಮೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣಾದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಹೊಸ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

     

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಬದುಕಿಗೆ ಗಿಡ /ಮರಗಳು ಹಾಗೂ ಸುತ್ತಲಿನ ಪರಿಸರ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ,ನಮ್ಮ ಹುಟ್ಟಿದ ಹಬ್ಬಕ್ಕೆ ದುಂದು ವೆಚ್ಚ ಮಾಡುವ ಬದಲಿಗೆ ನಮ್ಮ ಸುತ್ತ ಮುತ್ತಲಿನ ಜಾಗದಲ್ಲಿ ವರ್ಷಕ್ಕೊಂದು ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಬೇಕೆಂದು ತಿಳಿಸಿ ಯೋಜನೆಯ ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಜೊತೆಗೆ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ಹಾದಿ ಹಾಗೂ ಯೋಜನೆಯಲ್ಲಿರುವ ಸವಲತ್ತುಗಳ ಮಾಹಿತಿ ನೀಡಿದರು.

    ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನೆಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.

     

    ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ಮಾತನಾಡಿ ಮನುಷ್ಯ ತನ್ನ ಅವಶ್ಯಕತೆಗಿಂತ ಹೆಚ್ಚಿನ ಗಿಡ/ಮರಗಳನ್ನು ನಾಶ ಮಾಡುತ್ತಿದ್ದಾನೆ.ಪರಿಸರ ಸಂರಕ್ಷಣೆಯಲ್ಲಿ ಹಾಗೂ ಗಿಡ ನೆಟ್ಟು ಪೋಷಣೆ ಮಾಡುವುದರಲ್ಲಿ ನಾವು ತುಂಬಾ ಹಿಂದೆ ಇದ್ದೇವೆ, ಹೀಗೆ ಆದರೆ ಮುಂದೆ ನಾವೆಲ್ಲ ಶುದ್ಧ ಗಾಳಿಗಾಗಿ, ಮಳೆ /ಬೆಳೆಗಾಗಿ ಕಷ್ಟವನ್ನು ಪಡುವಂತ ಪರಿಸ್ಥಿತಿ ಬರುತ್ತದೆ. ಹಾಗಾಗಿ ನಾವೆಲ್ಲರೂ ಸೇರಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್,ಸದಸ್ಯರಾದ ಪಿಳ್ಳಣ್ಣ, ಶಿಕ್ಷಕಿ ಸವಿತಾ,ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ,ಮೇಲ್ವಿಚಾರಕರಾದ ದೀಪಕ್ ಸೇವಾಪ್ರತಿನಿಧಿಗಳಾದ ಸಿದ್ದಗಂಗಮ್ಮ, ರತ್ನಮ್ಮ ,ರಿಜ್ವಾನಾ, ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • *ಕೇರಿಯರ್ ಗಾಗಿ ಡೈವೋರ್ಸ್ ಪಡೆದ್ರಾ ಕನ್ನಡದ ಕ್ಯೂಟ್ ಕಪಲ್ಸ್….??*

    ಕನ್ನಡದ ರ‍್ಯಾಪ್ ಸಿಂಗರ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ಸ್ ಎಂದೇ ಖ್ಯಾತಿ ಪಡೆದಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2020ರ ಫೆಬ್ರುವರಿ 26ರಂದು ವಿವಾಹವಾಗಿದ್ದರು. ಆದರೆ ಇದೀಗ ದಿಢೀರ್ ಎಂದು ಡಿವೋಸ್ ಪಡೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

    ಆದರೆ ತಮ್ಮ ಕೇರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿವಾಹ ವಿಚ್ಚೇಧನ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ

    ಇಂದು ಶಾಂತಿನಗರದ ಕೋರ್ಟ್ ನಲ್ಲಿ ವಿಚ್ಚೇಧನ ಪಡೆದಿದ್ದರೆ ಎಂಬ ಮಾಹಿತಿ ತಿಳಿದು ಬಂದಿದೆ.

  • *ಅಭಿವೃದ್ಧಿ ಕಾಣದ ತೂಬಗೆರೆ – ಮಂಚೇನಹಳ್ಳಿ ರಸ್ತೆ l ರಸ್ತೆಗುಂಡಿಗಳಲ್ಲಿ ತುಂಬಿದ ಮಳೆನೀರು l ರಸ್ತೆಗಳು ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ*

    ದೊಡ್ಡಬಳ್ಳಾಪುರ (ತೂಬಗೆರೆ) ಜೂ. 7:- ಹದಗೆಟ್ಟ ರಸ್ತೆಯಿಂದಾಗಿ ಬೇಸತ್ತಗ್ರಾಮಸ್ಥರು ದಿಡೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ತಾಲೂಕಿನ ತೂಬಗೆರೆ -ಮಂಚೇನಹಳ್ಳಿ ಮಾರ್ಗ ಮಧ್ಯದಲ್ಲಿ ನಡೆದಿದೆ.

     

    ಎರಡು ವಾರದಿಂದ ಸುರಿದ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು, ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಕೆಸರು ಗದ್ದೆಯಂತಾಗಿದೆ. ಈ ರಸ್ತೆಗಳಲ್ಲಿ ಸಂಚಾರ ಮಾಡುವ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು. ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹಾಗೂ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ

     

    ಈ ಬಗ್ಗೆ ಗ್ರಾಮಸ್ಥರು ರಸ್ತೆ ದುರಸ್ಥಿ ಮಾಡಿಸುವಂತೆ ಸತತ ಮೂರ್ನಾಲ್ಕು ವರ್ಷದಿಂದ ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗೂ ಕೆಲ ದಿನಗಳ ಹಿಂದೆ ರಸ್ತೆಗೆ ತೇಪೆ ಹಾಕಿ ಅಧಿಕಾರಿಗಳು ಕೈತೋಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

     

    ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಇದಕ್ಕೆಲ್ಲ ಕಾರಣ.. ಎಂದು ದೂರಿದ್ದಾರೆ.

     

    ರಸ್ತೆ ಕಿರಿಕಿರಿಯಿಂದ ಬೇಸತ್ತ ಗ್ರಾಮಸ್ಥರು ಶುಕ್ರವಾರ ರಸ್ತೆಯ ಗುಂಡಿಗಳ ಬಳಿ ನಿಂತು ಪ್ರತಿಭಟನೆ ನಡೆಸಿದರು . ಸ್ಥಳೀಯ ಶಾಸಕರು ಹಾಗೂ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಇನ್ನಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಿ ಎಂದರು.

    ಗ್ರಾಮದ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳುಸಂಚರಿಸುವುದು ಕಷ್ಟವಾಗಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ.ರಸ್ತೆ ಹಾಳಾಗಿರುವುದರಿಂದ ದಿನನಿತ್ಯ ಜೀವನ ನಡೆಸುವುದು ಸಹ ಕಷ್ಟವಾಗಿದೆ. ಬಿತ್ತನೆ ಸಮಯದಲ್ಲಿ ರಸಗೊಬ್ಬರ ಇತ್ಯಾದಿ ತರಲು ರೈತರು ಕಷ್ಟ ಅನುಭವಿಸಬೇಕಾಗಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಕಾರಣ ವ್ಯವಸಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ಕಷ್ಟಕರವಾಗಿದೆ. ಅಲ್ಲದೇ ಸೋಮವಾರ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸವನ್ನೇ ಪಟ್ಟಿದ್ದಾರೆ. ಎಂದು ಪ್ರತಿಭಟನಾನಿರತರೊಬ್ಬರು ಮಾತನಾಡಿ ರಸ್ತೆಯ ಅವಸ್ಥೆಯನ್ನು ಖಂಡಿಸಿ, ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಇನ್ನಾದರೂ ಸ್ಥಳೀಯ ಶಾಸಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸುವ ಮೂಲಕ ರೈತರಿಗೆ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಿ ಎಂಬುದೇ ವಿಜಯ ಮಿತ್ರ ಸುದ್ದಿವಾಹಿನಿಯ ಆಶಯ..

  • *ನಿರಂತರ ಅನ್ನದಾಸೋಹ ಕಾರ್ಯಕ್ರಮಕ್ಕೆ 1532ನೇ ದಿನದ ಸಂಭ್ರಮ.*

    ದೊಡ್ಡಬಳ್ಳಾಪುರ : ಸದಾ ದಾನಿಗಳ ನೆರವಿನಿಂದ ನಡೆಯುವ ಅನ್ನದಾಸೋಹಕಾರ್ಯಕ್ರಮದಲ್ಲಿ ದಾನಿಗಳು ತಮ್ಮ ವಿಶೇಷ ದಿನಗಳನ್ನು ಹಸಿದವರಿಗೆ ಆಹಾರ ನೀಡುವ ಮೂಲಕ ಆಚರಿಸುವುದು ಕಾರ್ಯಕ್ರಮದ ಹೆಮ್ಮೆಯ ಸಂಗತಿಯಾಗಿದೆ.

    ಇಂದು(ಜೂ06) ಸಮಾಜ ಸೇವಕರಾದ ರಮೇಶ್ ತಮ್ಮ ಹುಟ್ಟುಹಬ್ಬವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ಆಚರಿಸಿಕೊಂಡರು.

     

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಕೆಲವು ವರ್ಷಗಳಿಂದ ಮಲ್ಲೇಶ್ ಪರಿಚಯವಿದ್ದು ಅವರು ಮಾಡುವ ನಿರಂತರ ಅನ್ನದಾಸೋಹ ಸೇವೆಯಲ್ಲಿ ನಾವು ಜೊತೆಗೂಡಿ ನಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ದಾನಿಗಳ ಅವಶ್ಯಕತೆ ಇದೆ. ಇಚ್ಛೆಯುಳ್ಳ ದಾನಿಗಳು ಅನ್ನದಾಸೋಹ ಸಮಿತಿಯೊಂದಿಗೆ ತಮ್ಮ ವಿಶೇಷ ದಿನಗಳನ್ನು ಆಚರಿಸುವ ಮೂಲಕ ಸೇವೆ ಮಾಡುವುದರ ಜೊತೆಗೆ ಸಂಭ್ರಮಿಸಬಹುದಾಗಿದೆ ಎಂದರು.

     

    ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ರಮೇಶ್ ಅವರಿಗೆ ಹುಟ್ಟು ಹಬ್ಬದ ದಿನದಂದು ಶುಭ ಕೋರುತ್ತೇನೆ. ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಮನಸ್ಸುಗಳಿಗೆ ಇದು ಉತ್ತಮ ವೇದಿಕೆಯಾಗಿದೆ . ಹಸಿದವರಿಗೆ ಊಟ ನೀಡುವ ಮೂಲಕ , ಬಡ ಶಾಲಾ ಮಕ್ಕಳಿಗೆ ಪುಸ್ತಕ ಸೇರಿದಂತೆ ವಿದ್ಯಾಭ್ಯಾಸಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಮೂಲಕ ದಾನಿಗಳು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಬಹುದಾಗಿದೆ. ತಮ್ಮ ವಿಶೇಷ ದಿನಗಳನ್ನು ನಮ್ಮೊಂದಿಗೆ ಆಚರಿಸಿ ಎಂದು ದಾನಿಗಳಲ್ಲಿ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಅನ್ನ ದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

  • SustainableSolutions: Innovative Solutions for Environmental Challenges

    Ultrices aliquet potenti quisque quam posuere ridiculus risus phasellus pretium gravida, proin vitae sem nec ut tempor at lobortis elementum, tristique semper fusce ante dis platea class commodo est. Sem at curabitur conubia arcu commodo a lacus tellus ultricies, senectus convallis habitasse dignissim nibh congue proin mauris eleifend, quis laoreet viverra tincidunt ligula sagittis vitae nulla. Consequat faucibus donec sagittis a erat eget eros accumsan, rhoncus nibh ullamcorper bibendum himenaeos lacinia metus senectus, nascetur blandit varius proin id dapibus pharetra.

  • ArtsArchive: Art History and Cultural Heritage Features

    Ultrices aliquet potenti quisque quam posuere ridiculus risus phasellus pretium gravida, proin vitae sem nec ut tempor at lobortis elementum, tristique semper fusce ante dis platea class commodo est. Sem at curabitur conubia arcu commodo a lacus tellus ultricies, senectus convallis habitasse dignissim nibh congue proin mauris eleifend, quis laoreet viverra tincidunt ligula sagittis vitae nulla. Consequat faucibus donec sagittis a erat eget eros accumsan, rhoncus nibh ullamcorper bibendum himenaeos lacinia metus senectus, nascetur blandit varius proin id dapibus pharetra.