Blog

  • *ಜೂಲೈ 31ರ ಒಳಗೆ ನಿಮ್ಮ ಬಾಕಿ ಅಸ್ತಿತೆರಿಗೆ ಪಾವತಿಸಿ – ಡಿಸಿಎಂ ಡಿ ಕೆ ಶಿವಕುಮಾರ್*

    ಆಸ್ತಿ ತೆರಿಗೆಯು ಬಿಬಿಎಂಪಿಯ ಆದಾಯದ ಪ್ರಾಥಮಿಕ ಮೂಲವಾಗಿದ್ದು, ಇದು ನಮ್ಮ ನಗರದ ಕಾರ್ಯಾಚರಣೆಯನ್ನು ನೇರವಾಗಿ ಸಮರ್ಥಿಸುತ್ತದೆ. ಸುಮಾರು 4 ಲಕ್ಷ ನಾಗರಿಕರು ರೂ.1000 ಕೋಟಿಗಳಷ್ಟು ಆಸ್ತಿತೆರಿಗೆಯನ್ನು ಪಾವತಿಸದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

    Ad

    ವಿಧಾನಸೌಧದಲ್ಲಿ ನೆಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಒಂದು ಬಾರಿ ಪರಿಹಾರ ಯೋಜನೆಯನ್ನು (OTS) ಪರಿಚಯಿಸಿದ್ದೇವೆ . ಇದರ ಅಡಿಯಲ್ಲಿ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಈ ಸುವರ್ಣಾವಕಾಶವು 31ನೇ ಜುಲೈ 2024 ರಂದು ಕೊನೆಗೊಳ್ಳಲಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಈ ಯೋಜನೆಯ ಅವಕಾಶವಿದ್ದು, ಇದರ ವಿಸ್ತರಣೆ ಇರುವುದಿಲ್ಲ. ಇಲ್ಲಿಯವರೆಗೆ 4 ಲಕ್ಷ ಆಸ್ತಿವಾರಸುದಾರರ ಪೈಕಿ ಸುಮಾರು 50000 ಜನರು ಮಾತ್ರ ಈ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಸ್ವತ್ತಿನ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಬೇಕೆಂದು ಕೋರುತ್ತೇನೆ ಎಂದರು.

    Ad

    ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿತೆರಿಗೆ ಬಾಕಿ ವಸೂಲಾತಿಗೆ ಅವಕಾಶವಿದೆ. ಆದಾಗ್ಯೂ, ಒಟಿಎಸ್ ನಾಗರಿಕರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಮತ್ತು ಬಿಬಿಎಂಪಿಯೂ ಜೊತೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

     

    ಕರ್ನಾಟಕ ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿ

    (1) ನಾಗರಿಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ

    (ii) ನಾಗರಿಕ ಸ್ನೇಹಿ ಸಹಾಯ ಅಪ್ಲಿಕೇಶನ್

    (iii) ನಮ್ಮ ಲೇಕ್ ಮೊಬೈಲ್ ಅಪ್ಲಿಕೇಶನ್

    (iv) ನಮ್ಮ ಪಾರ್ಕ್ ಮೊಬೈಲ್‌ನಂತಹ ನಾಗರಿಕ ಸ್ನೇಹಿ ಸೇರಿದಂತೆ ಹಲವು ಹೊಸದಾದ ಉಪಕ್ರಮಗಳನ್ನು ಪರಿಚಯಿಸಲಾಗಿದೆ.

     

    ಈ ರೀತಿಯ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ . ನಾಗರಿಕರು bbmptax.karnataka.gov.in ಮೂಲಕ ಆನ್‌ಲೈನ್ ನಲ್ಲಿ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಬಹುದು. ಒಟಿಎಸ್ ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ಈಗಾಗಲೇ ಕಡಿಮೆ ಮಾಡಲಾಗಿದ್ದು, ಆಗಸ್ಟ್ 1, 2024 ರಿಂದ ಹೆಚ್ಚಾಗಲಿದೆ ಎಂದರು.

  • *ಆಂಧ್ರಗೆ ಹೊಸ ಸಿಎಂ : ಏನ್ ಡಿ ಎ ಬೆಂಬಲಿತ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ…*

    ಆಂಧ್ರದಲ್ಲಿ ಎನ್‌ಡಿಎ ಬೆಂಬಲಿತ ಸಿಎಂ ಆಗಿ ಚಂದ್ರಬಾಬು ನಾಯ್ಡು ಡಿಸಿಎಂ ಆಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

     

    ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ, ಚಿರಂಜೀವಿ, ರಜಿನಿಕಾಂತ್ ಸೇರಿ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.ಚಂದ್ರಬಾಬು ಸಂಪುಟದಲ್ಲಿ ಬಿಜೆಪಿಗರಿಗೂ ಸ್ಥಾನಮಾನ ಸಿಗಲಿದೆ ಎಂದು ಹೇಳಲಾಗಿದೆ.

    Ad

    ಅಮರಾವತಿಯೇ ಆಂಧ್ರ ರಾಜಧಾನಿ. ವಿಶಾಖಪಟ್ಟಣ ಆರ್ಥಿಕ ರಾಜಧಾನಿ ಎಂದು ಭಾವಿ ಸಿಎಂ ಚಂದ್ರಬಾಬು ನಾಯ್ಡು ಈಗಾಗಲೇ ಘೋಷಣೆ ಮಾಡಿದ್ದು.

    Ad

    ಇನ್ನು ಆಂಧ್ರದಲ್ಲಿಯೂ ಕರ್ನಾಟಕ, ತೆಲಂಗಾಣ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಯೋಜನೆ ರೂಪಿಸಲು ಮುಂದಾಗಿದ್ದಾರೆ.

  • *ಶಿಕಾರಿಪುರ ಪ್ರಗತಿ ಪರಿಶೀಲನಾ ಸಭೆ : ಸಭೆಯಲ್ಲಿ ವಿಜಯೇಂದ್ರ ಯಡಿಯೂರಪ್ಪ ಭಾಗಿ*

    ಶಿಕಾರಿಪುರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

    Ad

    ಮುಂಗಾರು ಮಳೆ ಎಲ್ಲೆಡೆ ಆರಂಭವಾಗಿದ್ದು ರೈತರ ಮುಂಗಾರು ಬಿತ್ತನೆಗೆ ಬಿತ್ತನೆ ಬೀಜಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು, ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಕ್ರಮ ವಹಿಸಿ, ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ತಿಳಿಸಿದರು.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು, ಆರೋಗ್ಯ ಇಲಾಖೆ ಹಾಗೂ ಕ್ಷೇತ್ರದ ವಿವಿಧ ಇಲಾಖೆಗಳ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ತುರ್ತಾಗಿ ಕೈಗೆತ್ತಿಕೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    Ad

     

     

    ಈ ವೇಳೆ ತಾಲ್ಲೂಕು ದಂಡಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

  • *ಎನ್ ಡಿಎ ಚುನಾವಣೆಗೆ ಹೋಗಿದ್ದು ದೇಶವನ್ನ ಗೆಲ್ಲಿಸಲು. ಆದ್ದರಿಂದ ದೇಶ ಗೆದ್ದಿದೆ – ಆರ್ ಅಶೋಕ್*

    ಗ್ಯಾರೆಂಟಿಗಳು ಸೋತಿದೆ, ಗ್ಯಾರೆಂಟಿಗಳು ನಮಗೆ ಮತ ತಂದು ಕೊಟ್ಟಿಲ್ಲ, ಗ್ಯಾರೆಂಟಿಗಳ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳುತ್ತಿರುವುದು ನಾನಲ್ಲ ಸಿದ್ದರಾಮಯ್ಯನವರೇ, ನಿಮ್ಮ ಸಚಿವರುಗಳು, ಶಾಸಕರುಗಳೇ ಗ್ಯಾರೆಂಟಿಗಳ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಎಕ್ಸ್ ಖಾತೆ ಮೂಲಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

     

    ಇಡೀ ದೇಶದಲ್ಲಿ 40 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸುಳ್ಳು, ಅಪಪ್ರಚಾರ ಮಾಡಿದರೂ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಪಡೆದಷ್ಟು ಸೀಟುಗಳನ್ನೂ INDI ಮೈತ್ರಿಕೂಟ ಪಡೆಯಲಾಗಲಿಲ್ಲ. ರಾಹುಲ್ ಗಾಂಧಿ ಅವರನ್ನು ಎಷ್ಟು ಬಾರಿ ರೀಲಾಂಚ್ ಮಾಡಿದರೂ ಕಾಂಗ್ರೆಸ್ ತಕ್ಕಡಿ ಎರಡಂಕಿ ದಾಟಲಿಲ್ಲ. ಈಗ ಹೇಳಿ ಸೋತಿದ್ದು ಯಾರು ಗೆದಿದ್ದು ಯಾರು?

    Ad

    ಇನ್ನು ರಾಜ್ಯದ ವಿಚಾರದಲ್ಲಿ ರಾಜ್ಯದ 154 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮುನ್ನಡೆ ಸಿಕ್ಕಿದೆ. 17 ಸಂಪುಟ ಸಚಿವರ ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡಿಸಲು ವಿಫಲರಾಗಿದ್ದಾರೆ. ಸಚಿವರ ಮಕ್ಕಳು, ತಮ್ಮಂದಿರು, ಕುಟುಂಬ ಸದಸ್ಯರು ಸೋತಿದ್ದಾರೆ

     

    ಕಾಂಗ್ರೆಸ್ ಪಕ್ಷ ಗೆದ್ದರೆ ಇವಿಎಂ ಸರಿಯಿದೆ. ಕಾಂಗ್ರೆಸ್ ಪಕ್ಷ ಸೋತರೆ ಇವಿಎಂ ಸರಿಯಿಲ್ಲ. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಗೋಸುಂಬೆ ರಾಜಕಾರಣ. ಶತಾಯ ಗತಾಯ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ನೀವು ನೀಡಿದ ಸುಳ್ಳು ಭರವಸೆಗಳಿಂದ ದೇಶಾದ್ಯಂತ ಹೆಣ್ಣುಮಕ್ಕಳ ನಿಮ್ಮ ಪಕ್ಷಕ್ಕೆ ಹೇಗೆ ಶಾಪ ಹಾಕುತ್ತಿದ್ದಾರೆ

    Ad

    ಕಾಂಗ್ರೆಸ್ ಪಕ್ಷ ಚುನಾವಣೆಗೆ ಹೋಗಿದ್ದು ಮೋದಿ ಅವರನ್ನು ಸೋಲಿಸಲು. ಎನ್ ಡಿಎ ಚುನಾವಣೆಗೆ ಹೋಗಿದ್ದು ದೇಶವನ್ನ ಗೆಲ್ಲಿಸಲು. ಆದ್ದರಿಂದ ದೇಶ ಗೆದ್ದಿದೆ, INDI ಸೋತಿದೆ ಎಂದು ಎಕ್ಸ್ ಖಾತೆಯ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • *ಕೋಟ್ಪಾ ಕಾಯ್ದೆ ಉಲ್ಲಂಘನೆ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿ 3400 ರೂಗಳ ದಂಡ ಸಂಗ್ರಹಿಸಿದ ಅಧಿಕಾರಿಗಳು*

    ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಹಳ್ಳಿ ಯಲ್ಲಿ ಕೋಟ್ಪಾ-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ವಿವಿಧ ಅಂಗಡಿಗಳ ಮೇಲೆ ಕೋಟ್ಪಾ ದಾಳಿಯನ್ನು ನಡೆಸಿದ್ದು.

    ಸ್ಥಳೀಯ ಕೆಲ ಅಂಗಡಿಗಳಲ್ಲಿ ನಿಯಮವನ್ನು ಉಲ್ಲಂಘಿಸಿ ತಂಬಾಕು ಮಾರಾಟ ಮಾಡುತ್ತಿದ್ದು ಅಂತಹ ಅಂಗಡಿಗಳಿಗೆ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು.

    Ad

    ತಾಲ್ಲೂಕಿನ ಬಾಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಅಧಿಕಾರಿಗಳು 19 ಪ್ರಕರಣಗಳನ್ನು ದಾಖಲಿಸಿ 3400 ರೂಗಳ ದಂಡವನ್ನು ಸಂಬಂಧಪಟ್ಟ ಅಂಗಡಿ ಮಾಲೀಕರಿಂದ ಸಂಗ್ರಹಿಸಲಾಗಿದೆ.

     

    Ad

    ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಡಾ. ವಿದ್ಯಾರಾಣಿ ಪಿ.ಎಸ್, ದೊಡ್ಡ ತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಂಜುವಾಣಿ, ಪೋಲಿಸ್ ಇಲಾಖೆಯ ಎ.ಎಸ್.ಐ ವೆಂಕಟೇಶ್, ಕಾನ್ಸ್ಟೇಬಲ್ ವೆಂಕಟೇಶ್, ಶುಶೂಷ್ರಕಿ ಶರಣಮ್ಮ ಉಪಸ್ಥಿತರಿದ್ದರು.

  • *ಬ್ಯೂಟಿ ಪಾರ್ಲರ್‌ ತರಬೇತಿಗೆ ಅರ್ಜಿ ಅಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 11(ವಿಜಯ ಮಿತ್ರ ):- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 30 ದಿನಗಳ ಬ್ಯೂಟಿ ಪಾರ್ಲರ್ ಉಚಿತ ತರಬೇತಿಯು 15 ಜುಲೈ 2024 ರಿಂದ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

    Ad

    18 ರಿಂದ 45 ವರ್ಷದ ವಯೋಮಾನದ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿದಾರರು ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಪ್ರದೇಶದ ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

     

    Ad

    ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

    ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ.

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9241482541, 8884554510, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ನಿರುದ್ಯೋಗ ಯುವಕ/ಯುವತಿಯರಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 11(ವಿಜಯಮಿತ್ರ ):- ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಇವರು ಸ್ವಂತ ಉದ್ಯೋಗವನ್ನು ಸ್ಥಾಪಿಸಲು ಇಚ್ಚಿಸುವವರಿಗಾಗಿ ದೇವನಹಳ್ಳಿ ಟೌನ್ ನಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಜುಲೈ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

     

    Ad

    ಕಾರ್ಯಕ್ರಮದಲ್ಲಿ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ನಾಯಕತ್ವದ ಗುಣಲಕ್ಷಣಗಳು, ಉದ್ಯಮವನ್ನು ಆಯ್ಕೆ ಮಾಡುವ ವಿಧಾನ, ವ್ಯಾಪಾರೋದ್ಯಮಗಳ ಅವಕಾಶಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವುದು ಹಾಗೂ ಈಗಾಗಲೇ ಸಿಡಾಕ್ ಮುಖಾಂತರ ತರಬೇತಿ ಪಡೆದು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಉದ್ಯಮಶೀಲರ ಅನುಭವ ಹಂಚಿಕೆ ಮತ್ತು ಸಂಬಂಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಅನುಭವಿ ಅತಿಥಿ ಬೋಧಕರಿಂದ ಉಪನ್ಯಾಸ/ಮಾಹಿತಿ ನೀಡಲಾಗುವದು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 18 ವರ್ಷ ದಿಂದ 40 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಈ ಕೆಳಕಂಡ ವಿಳಾಸದಲ್ಲಿ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ.

    Ad

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಕಛೇರಿ: ಜಿಲ್ಲಾ ಕೌಶಲ್ಯಾಭಿವೃದ್ಧಿಯವರ ಕಚೇರಿ ಕೊಠಡಿ ಸಂಖ್ಯೆ : 132, 1ನೇ ಮಹಡಿ, ಜಿಲ್ಲಾಡಳಿತ ಭವನ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.

     

    ಇಲ್ಲಿಗೆ 30 ಜೂನ್. 2024 ರ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

     

    ಹೆಚ್ಚಿನ ಮಾಹಿತಿಗಾಗಿ ಮೋಬೈಲ್ ಸಂಖ್ಯೆ 9353438881 ಇಲ್ಲಿಗೆ ಕರೆ ಮಾಡಬಹುದಾಗಿದೆ ಎಂದು ಸಿಡಾಕ್ ಸಂಸ್ಥೆಯ ಬೆಂಗಳೂರು ಗ್ರಾಮಾಂತರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಪ್ರತಿ ಮನೆಯ ಘನತ್ಯಾಜ್ಯಕ್ಕೆ 100 ರೂಗಳ ಶುಲ್ಕ ಫಿಕ್ಸ್…?? ಸುದ್ದಿ ನೋಡಿ*

    ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಿಬಿಎಂಪಿ ಈಗ ಜನರ ಮೇಲೆ ಮತ್ತೊಂದು ತೆರಿಗೆ ವಿಧಿಸಲು ಸಜ್ಜಾಗುತ್ತಿದೆ. ಹೌದು ಬಿಬಿಎಂಪಿ ವ್ಯಾಪ್ತಿಯ ಪ್ರತಿ ಮನೆಯಿಂದ 100 ರೂ. ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಯೋಜನೆ ರೂಪಿಸಲಾಗುತ್ತಿದೆ.

    Ad

    ಘನತ್ಯಾಜ್ಯ ನಿರ್ವಹಣೆಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯನ್ನು ಸ್ಥಾಪನೆ ಮಾಡಲಾಗಿದ್ದು ಇನ್ನುಮುಂದೆ ಈ ಕಂಪನಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳಲಿದೆ. ಈಗ ಕಂಪನಿಯಿಂದ ನೇರವಾಗಿ ಘನತ್ಯಾಜ್ಯ ಸೇವಾ ಶುಲ್ಕವಾಗಿ ಪ್ರತಿ ತಿಂಗಳು ಪ್ರತಿ ಮನೆಗೆ 100 ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    Ad

    ಈ ಹಿಂದೆ ಪ್ರತಿ ತಿಂಗಳು 30 ರೂ. ಶುಲ್ಕ ಸಂಗ್ರಹ ಮಾಡುವ ಚಿಂತನೆ ನಡೆದಿತ್ತು. ಆದರೆ ಈ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈಬಿಡಲಾಗಿತ್ತು. ಆದರೆ ಈಗ ಮತ್ತೆ ಮನೆ ಮನೆಗೂ ಘನತ್ಯಾಜ್ಯ ಶುಲ್ಕ ವಿಧಿಸುವುದಕ್ಕೆ ಸರ್ಕಾರ ಮುಂದಾಗಿದೆ.

     

    ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಮೂಲಕ ಹಣ ಸಂಗ್ರಹಕ್ಕೆ ಯೋಚನೆ ರೂಪಿಸಲಾಗಿದೆ.ಸದ್ಯ ವಸತಿ ಕಟ್ಟಡಗಳಿಗೆ ಮಾಸಿಕ 100 ರೂ. ವಾಣಿಜ್ಯ ಕಟ್ಟಡಗಳಿಗೆ 200 ರೂ ದರ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

  • *ನಾಳೆ ಕರೆಂಟ್ ಇರಲ್ಲ… ಯಾವ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ… ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ*

    ದೊಡ್ಡಬಳ್ಳಾಪುರ ನಗರದಲ್ಲಿ ನಾಳೆ ಜು.12 ರಂದು 66/11ಕೆವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ಸದರಿ ಉಪಕೇಂದ್ರದಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 09:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ಬೆಸ್ಕಾಂ ಕಾರ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    Ad

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

     

    ದೊಡ್ಡಬಳ್ಳಾಪುರ ನಗರದ, ಡಿ.ಕ್ರಾಸ್, ಮುತ್ಸಂದ್ರ, ಟಿ.ಬಿ.ಬಡಾವಣೆ, ಪ್ರಿಯದರ್ಶಿನಿ ಬಡಾವಣೆ, ರೋಜಿಪುರ, ಗಂಗಾಧರಪುರ, ವಿನಾಯಕನಗರ, ಸೋಮೇಶ್ವರ ಬಡಾವಣೆ, ಬಸವೇಶ್ವರನಗರ, ಮಾರುತಿನಗರ, ಕುಂಬಾರಪೇಟೆ, ದರ್ಜಿಪೇಟೆ, ಗಾಣಿಗರಪೇಟೆ, ವಡ್ಡರಪೇಟೆ, ದೇಶದಪೇಟೆ, ಸಿನಿಮಾ ರಸ್ತೆ, ಹಳೇಬಸ್ ನಿಲ್ದಾಣ, ಕಛೇರಿಪಾಳ್ಯ, ಇಸ್ಲಾಂಪುರ, ಕಲ್ಲುಪೇಟೆ, ತ್ಯಾಗರಾಜನಗರ, ದೇವರಾಜನಗರ, ಶಾಂತಿನಗರ, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ, ಮಾದಗೊಂಡನಹಳ್ಳಿ, ಹಸನ್‌ ಘಟ್ಟ, ಕೋಳೂರು, ಕಂಟನಕುಂಟೆ, ಅಳ್ಳಾಲಸಂದ್ರ, ಅಂತರಹಳ್ಳಿ, ಗೊಲ್ಲಹಳ್ಳಿ, ಮೇಲಿನನಾಯಕರಂಡಹಳ್ಳಿ, ಕೆಳಗಿನ ನಾಯಕರಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರುಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹಿರೇಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟ, ಕಂಚಿಗನಾಳ, ದಾಸಗೊಂಡನಹಳ್ಳಿ, ಗಂಡರಾಜಪುರ, ಆಚಾರಹಳ್ಳಿ, ಬೀಡಿಕೆರೆ, ಹಮಾಮ್, ಶಿವಪುರ, ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿ, ಕಮಲೂರು, ನೆಲ್ಲುಕುಂಟೆ, ನಾಗಶೆಟ್ಟಿಹಳ್ಳಿ, ಮಜರಾಹೊಸಹಳ್ಳಿ, ಶಿರಾವಾರ, ಮೆಣಸಿ, ಅಣಗಲಪುರ, ನೇರಳೆಘಟ್ಟಿ, ಹೊನ್ನಾಘಟ್ಟಾ, ಕೆಸ್ತೂರು, ಹಣಬೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿಟ್ಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

    Ad

  • *ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ*

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಪತ್ರ ವಹಿಸಿದ್ದ ಗ್ಯಾರಂಟಿಯೋಜನೆಗಳಲ್ಲಿ ಶಕ್ತಿ ಯೋಜನೆಯು ಪ್ರಮುಖವಾದದ್ದು.

    Ad

    ಶಕ್ತಿ ಯೋಜನೆ ಪ್ರಾರಂಭಗೊಂಡು ಸಂಪೂರ್ಣ ಒಂದು ವರ್ಷ ಪೂರ್ಣಗೊಳಿಸಿದೆ.

    Ad

    ಯೋಜನೆ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆ ಶುಭ ಕೋರುತ್ತಾ ಯೋಜನೆ ಜಾರಿಗೊಂಡ ನಂತರದಿಂದ 226 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈ ವರೆಗಿನ ಒಟ್ಟು ಟಿಕೇಟ್ ಮೌಲ್ಯ ರೂ.5,500 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ ಎಂದು ತಮ್ಮ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದಾರೆ.