Blog

  • “ನಮ್ಮ ಶಾಲೆ ನಮ್ಮ ಹಕ್ಕು”ರಾಜಘಟ್ಟ ಮಾರುತಿ ಶಾಲೆ ಉಳಿಸಲು ಹಳೇ ವಿದ್ಯಾರ್ಥಿಗಳ ವಿಭಿನ್ನ ಪ್ರಯತ್ನ

    ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಗ್ರಾಮದ ಶ್ರೀ ಮಾರುತಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ” ನಮ್ಮ ಶಾಲೆ ನಮ್ಮ ಹಕ್ಕು ” ಎಂಬ ಹೆಸರಲ್ಲಿ ಹಳೆ ವಿದ್ಯಾರ್ಥಿಗಳ ಮಹಾ ಸಂಗಮ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

     

    ಬೆಂಗಳೂರಿನ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯ ಕೆಲವು ಸದಸ್ಯರು, ಕಟ್ಟಡ ನಿರ್ಮಿಸಿಕೊಂಡು ಕಳೆದ 5 ವರ್ಷಗಳಿಂದ ಖಾಸಗಿ ಶಾಲೆ ಶಾಲೆಯನ್ನು ನಡೆಸುತ್ತಿದ್ದಾರೆ. ಆದರೆ ಸುಮಾರು 50ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಗ್ರಾಮದ ಹೆಸರಾಂತ ಶ್ರೀ ಮಾರುತಿ ಪ್ರೌಢಶಾಲೆಯನ್ನು ಮುಚ್ಚಿಸುವ ಹುನ್ನಾರ ನೆಡೆಯುತ್ತಿದೆ ಎಂದು ಹಳೆ ವಿದ್ಯಾರ್ಥಿಗಳು ಆರೋಪಿಸಿದರು.

     

    1972ರಲ್ಲಿ ಅಂದಿನ ದೊಡ್ಡಬಳ್ಳಾಪುರ ಶಾಸಕರಾದ ಜಿ.ರಾಮೇಗೌಡರ ಸಹಕಾರದಿಂದ ಪ್ರಾರಂಭವಾಗಿ ಹಿಂದಿನಿಂದಲೂ ಸರ್ಕಾರಿ ಅನುದಾನದಿಂದ ನಡೆಯುತ್ತಿದೆ ಈ ಶ್ರೀ ಮಾರುತಿ ಪ್ರೌಢಶಾಲೆಯು ತಾಲ್ಲೂಕಿನಲ್ಲಿ ಈಗಾಗಲೇ ಹೆಚ್ಚಿನ ಪ್ರಸಿದ್ಧಿ ಪಡೆದಿದ್ದು ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ರಾಜ್ಯಗಳಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಉತ್ತಮ ಸ್ಥಾನ- ಮಾನ ಗಳಿಸಿದ್ದಾರೆ. ಆದರೆ ಈ ಶಾಲೆಯ ಆವರಣದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಸ್ಥಾಪಿಸುವ ಮೂಲಕ ಸರ್ಕಾರಿ ಅನುದಾನಿತ ಶಾಲೆಯನ್ನು ಮುಚ್ಚುವ ಹುನ್ನಾರ ನೆಡೆಯುತ್ತಿದೆ.ನಮ್ಮ ಶಾಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯ ಉಳಿವಿಗಾಗಿ ಹಳೆಯ ವಿದ್ಯಾರ್ಥಿಗಳಿಂದ ಲಯನ್ಸ್ ಕ್ಲಬ್ ಯಲಹಂಕ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸುವ ರಕ್ತ ಕೊಟ್ಟೆವು ಪ್ರಾಣ ಬಿಡೆವು ಎಂಬ ಸಂದೇಶವನ್ನು ಈ ಮೂಲಕ ಶಾಲೆಯ ಆಡಳಿತ ಮಂಡಳಿಗೆ ನೀಡುತ್ತಿದ್ದೇವೆ ಎಂದು ಹಳೆ ವಿದ್ಯಾರ್ಥಿ ರಾಜಘಟ್ಟ ಗಣೇಶ್ ತಿಳಿಸಿದರು.

    ಹಳೇ ವಿದ್ಯಾರ್ಥಿಗಳಾದ ಸುರೇಶ್,ವಿನೋದ್ ಮಾತನಾಡಿ ಸಾವಿರಾರು ಬಡ ವಿದ್ಯಾರ್ಥಿಗಳ ಜೀವನ ರೂಪಿಸಿರುವ ಮಾರುತಿ ಪ್ರೌಢಶಾಲೆಗೆ ಇಂದು ಅಳಿವು ಉಳಿವಿನ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ, ನಮ್ಮ ಶಾಲೆ ಉಳಿವಿಗಾಗಿ ನಾವೆಲ್ಲರೂ ಒಟ್ಟಾಗಿ ಮುಂದಾಗಿದ್ದೇವೆ. ಸುತ್ತಲ ಹತ್ತಾರು ಹಳ್ಳಿಗಳ ವಿದ್ಯಾಭ್ಯಾಸಕ್ಕೆ ಮೂಲವಾಗಿರುವ ಸರ್ಕಾರಿ ಅನುದಾನಿತ ಶಾಲೆ ಮುಚ್ಚಿಸುವ ಹುನ್ನಾರ ನೆಡೆಯುತ್ತಿದೆ ನಮ್ಮ ಶಾಲೆ ಬಿಟ್ಟುಕೊಡುವ ಮಾತೇ ಇಲ್ಲ ಇದು ನಮ್ಮ ಶಾಲೆ ಎಂದರು.

     

    ಈ ಸಂದರ್ಭದಲ್ಲಿ ಸುರೇಶ, ವಿನೋದ್, ಅನಂತ್, ವೇಣು, ಮಂಜುನಾಥ್, ಅಂಬರೀಷ್, ನವೀನ್, ಗಂಗರಾಜು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

     

     

  • ಕೊನಘಟ್ಟ ಗ್ರಾ.ಪಂಗೆ ಅಧ್ಯಕ್ಷರಾಗಿ ಚಾಂದಿನಿ ಆಯ್ಕೆ.

    ದೊಡ್ಡಬಳ್ಳಾಪುರ : ತಾಲ್ಲೂಕಿನ ಕಸಬಾ ಹೋಬಳಿಯ ಕೊನಘಟ್ಟ ಗ್ರಾಮ ಪಂಚಾಯತಿಗೆ ಜ್ಯೋತಿರಮೇಶ್ ರಾಜೀನಾಮೆಯಿಂದ ತೆರವಾಗಿದ್ದ ಹಿನ್ನೆಲೆ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಚಾಂದಿನಿಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾದ ತಾಲ್ಲೂಕು ಪಂಚಾಯತಿ ಒಓ ಮಂಜುನಾಥ ಹರ್ತಿ ಅವಿರೋಧ ಆಯ್ಕೆಯನ್ನ ಪ್ರಕಟಿಸಿದರು.

    ನೂತನ ಅಧ್ಯಕ್ಷ ಅಭಿನಂದಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಕೊನಘಟ್ಟ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬಿಜೆಪಿ ಮುಖಂಡರು ಅನೋನ್ಯದಿಂದ ಇದ್ದೇವೆ. ಮೈತ್ರಿಯಿಂದಾಗಿ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

    ನೂತನ ಅಧ್ಯಕ್ಷೆ ಚಾಂದಿನಿಸತೀಶ್ ಮಾತನಾಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಸಿಕ್ಕಿರಿವ ಅಲ್ಪಾವಧಿ ಸಮಯದಲ್ಲಿ ಸೂಕ್ತವಾಗಿ ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುವುದು ಎಂದರು.

    ದೊಡ್ಡಬಳ್ಳಾಪುರದ ಕೊನಘಟ್ಟ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಾಂದಿನಿಸತೀಶರನ್ನುಮುಖಂಡರು ಅಭಿನಂದಿಸಿದರು.

    ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಕೆ.ಕೆ ಆಂಜಿನಪ್ಪ, ಕೃಷ್ಣಪ್ಪ, ಜಿ.ಲಕ್ಷ್ಮೀಪತಿ, ಅಶ್ವಥ್ ನಾರಾಯಣಸ್ವಾಮಿ, ಚೈತ್ರಾ, ಮಂಜುಳಾ, ಸೋಮಶೇಖರ್, ಪುಷ್ಪಶಿವಶಂಕರ್, ಸಿದ್ದಲಿಂಗಯ್ಯ, ಪ್ರಕಾಶ್, ರಮೇಶ್, ಪಿಡಿಓ ರಶ್ಮಿ ಮತ್ತಿತ್ತರರು ಇದ್ದರು.

  • ತಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳಲು ಸಜ್ಜಾದ “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್”

    ದೊಡ್ಡಬಳ್ಳಾಪುರ :ಜೀವನದಲ್ಲಿ ಕನಸುಕಂಡಂತೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ನಾಮಕರಣ, ಗರ್ಭಿಣಿ ಸಮಾರಂಭ, ನಿಶ್ವಿತಾರ್ಥ, ಮದುವೆ ಸೇರಿದಂತೆ ಇತರೆ ತಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳಲು “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ಸಜ್ಜಾಗಿದ್ದು, ಇಂದು ಶಾಸಕ ಧೀರಜ್ ಮುನಿರಾಜ್ ಅವರು ಟೇಪ್ ಕತ್ತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು..

    ನೂತನ “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಟೆಲ್ ರಾಜಣ್ಣ ಹಾಗೂ ಸತೀಶ್ ಅವರು ನನಗೆ ತುಂಬಾ ಆತ್ಮೀಯರು. ಅವರ ಆಹ್ವಾನದ ಮೇರೆಗೆ “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ನ್ನು ಉದ್ಘಾಟಿಸಿದ್ದೇನೆ. ಮಕ್ಕಳಿಗೆ ಶಿಕ್ಷಣ ನೀಡಲು ನ್ಯಾಷನಲ್ ಪ್ರೈಡ್ ಶಾಲೆಯನ್ನು ಕಟ್ಟಿದ್ದಾರೆ. ಈ ಶಾಲೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ‌.ಇದರ ಜೊತೆಗೆ ಜೀವನದಲ್ಲಿ ಕನಸುಕಂಡಂತೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ನಾಮಕರಣ, ನಿಶ್ವಿತಾರ್ಥ, ಮದುವೆ ಸೇರಿದಂತೆ ಇತರೆ ತಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳಲು “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್”ನ್ನು ಪ್ರಾರಂಭ ಮಾಡಿದ್ದಾರೆ ಎಂದರು.

     

    ಈ ಕಾರ್ನರ್ ವಿಶಿಷ್ಟವಾಗಿದ್ದು, ಅತಿ ಕಡಿಮೆ ದರದಲ್ಲಿ ಸೆಲೆಬ್ರೇಷನ್ ಮಾಡಿಕೊಳ್ಳಬಹುದು. ಇದು ಯಶಸ್ವಿಯಾಗಿ ನಡೆದುಕೊಂಡು ಹೋಗಲಿ ಎಂದು ಶುಭಹಾರೈಸಿದರು.

    “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ಎಲ್ಲಿದೆ..?

    ದೊಡ್ಡಬಳ್ಳಾಪುರ ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿ, ನ್ಯಾಶನಲ್ ಪ್ರೈಡ್ ಶಾಲೆಯ ಎದುರು, ದುಂಡು ಪಲಾವ್ ಸೆಂಟರ್ ನ ಮೊದಲ ಮಹಡಿಯಲ್ಲಿ “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ಇದೆ.

    ಪ್ರೀತಿಪಾತ್ರರನ್ನು ಅಚ್ಚರಿಪಡಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ. ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಗರ್ಭಿಣಿ ಸಮಾರಂಭ, ನಾಮಕರಣ, ನಿಶ್ವಿತಾರ್ಥ, ಮದುವೆ ಸೇರಿದಂತೆ ಇತರೆ ವಿಶೇಷ ಆಚರಣೆಗಳಿಗೆ ದೂರ ಹೋಗುವ ಅವಶ್ಯಕತೆಯೂ ಇಲ್ಲ.

    ಈ ಎಲ್ಲಾ ವಿಶೇಷ ಸಂಭ್ರಮಗಳನ್ನು *ದಿ ಪ್ರೈಡ್ ಸೆಲೆಬ್ರೇಶನ್ ಕಾರ್ನರ್* ನಲ್ಲಿ ಕೇವಲ ರೂ.299/- ರಿಂದ ಪ್ರಾರಂಭವಾಗುವ ದರಗಳಲ್ಲಿ ನಡೆಸಬಹುದು. ಅಲಂಕರಣ ಮತ್ತು ಥೀಮ್‌ಗಳ ಬಗ್ಗೆ ಚಿಂತೆಯೂ ಇಲ್ಲ. ಸೆಲಬ್ರೇಷನ್ ಕನಸುಗಳನ್ನು ನನಸುಮಾಡುವ ಪ್ರಯತ್ನದಲ್ಲಿ ಈ ಕಾರ್ನರ್ ತಯಾರಾಗಿದೆ.

    ವಿವಿಧ ಥೀಮ್‌ಗಳ ಅಲಂಕರಿತ ಸ್ಥಳಗಳೊಂದಿಗೆ:

    ಫೆದರ್ ಟಚ್, ಹಾರ್ಟ್ ಬೀಟ್, ಡ್ರೀಮ್ ಡ್ವೆಲ್ಲಿಂಗ್, ಲವ್ ಪ್ಯಾರಡೈಸ್, ಕೋಸಿ ಕಾರ್ನರ್, ಕೋಸಿ ಲವ್, ಪ್ರಿನ್ಸೆಸ್ ಡಿಸೈರ್, ಪಿಂಕ್ ಕ್ಲಾಸಿಕ್ ಎಂಬ ವಿವಿಧ ಥೀಮ್‌ಗಳ ಅಲಂಕೃತಗೊಂಡಿವೆ. ಪ್ಯಾಕೇಜ್ ದರಗಳು ರೂ.299/- ರಿಂದ ರೂ.9,999/- ವರೆಗೆ ಲಭ್ಯವಿದೆ.

    ಸಂಭ್ರಮವನ್ನು ಇನ್ನಷ್ಟು ಆಕರ್ಷಕವಾಗಿಸಲು ಮತ್ತು ಸ್ಮರಣೀಯವಾಗಿಸಲು ಹೆಚ್ಚುವರಿ ಆಯ್ಕೆಗಳು (Add-ons) ಈ ಕಾರ್ನರ್ ಹೊಂದಿದೆ ಉದಾ… ಕೆಕ್‌ಗಳು, ಗುಲಾಬಿ ಹೂಗುಚ್ಚ, ಹೂಮಾಲೆ ಪ್ರವೇಶ, ಕಾರ್ಟೂನ್ ಎಂಟ್ರಿ, ಫಾಗ್ ಎಂಟ್ರಿ, ಫೈರ್ ವರ್ಕ್ಸ್, ಕ್ಯಾಂಡಲ್ ಲೈಟ್ ಡಿನ್ನರ್, ಆಹಾರ ಮತ್ತು ಪಾನೀಯಗಳು.

    ಲವ್ಲಿ ರೋಸ್ ಫಂಕ್ಷನ್ ಹಾಲ್ ಸಹ ಲಭ್ಯವಿದೆ — 50 ರಿಂದ 100 ಜನರ ಸಾಮರ್ಥ್ಯದ ಈ ಹಾಲ್‌ನಲ್ಲಿ 1ನೇ ವರ್ಷದ ಜನ್ಮದಿನ, ನಿಶ್ಚಿತಾರ್ಥ ಮತ್ತು ಮದುವೆಗಳನ್ನು ಸುಂದರ ಅಲಂಕಾರಗಳೊಂದಿಗೆ ರೂ.9,999/- ಕ್ಕೆ ಆಯೋಜಿಸಬಹುದು.

    ಆದ್ದರಿಂದ ಈಗಲೇ ಇಲ್ಲಿಗೆ ಭೇಟಿ ನೀಡಿ ಮತ್ತು ವಿವಿಧ ಥೀಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಸ್ಲಾಟ್‌ಗಳನ್ನು ಬುಕ್ ಮಾಡಿ.

    ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ: www.thepridecelebrationcorner.com

    ಸಂಪರ್ಕಿಸಿ: 9972661155

    9972444466

  • ಶಿಕ್ಷಕರ ಕ್ಷೇತ್ರದ ಮತದಾರರ ಹೆಸರು ಸೇರಿಸಲು ನ.06 ಕೊನೆಯ ದಿನ

    ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಸಾರ್ವಜನಿಕ ಪ್ರಕಟಣೆಯಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ.

     

    ಅದರಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಬಗ್ಗೆ ಸೆಪ್ಟೆಂಬರ್ 30 ರಂದು ಪ್ರಕಟಣೆ ಹೊರಡಿಸಲಾಗಿದೆ. ನಮೂನೆ 19 ರಲ್ಲಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಲು ನವೆಂಬರ್ 06 ಕೊನೆಯ ದಿನವಾಗಿದೆ. ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 25 ರಂದು ಪ್ರಕಟಿಸಲಾಗುತ್ತಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 25 ರಿಂದ ಡಿಸೆಂಬರ್ 10 ವರೆಗೆ ಕಾಲಾವಕಾಶವಿದೆ. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ತಿಳಿಸಿದ್ದಾರೆ.

     

    ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-19ರ ಅರ್ಜಿಗಳನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ

    1)ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಇ.ಓ ಕಚೇರಿ, ಮುಕ್ತಾಂಬಿಕ ರಸ್ತೆ, ವಡ್ಡರಪೇಟೆ, ಕಚೇರಿ ದೂರವಾಣಿ ಸಂಖ್ಯೆ 080-27622208, ಮೊಬೈಲ್ ನಂ: 9480695013.

    2)ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ, ತಾಲ್ಲೂಕು ಕಚೇರಿ ರಸ್ತೆ ದೊಡ್ಡಬಳ್ಳಾಪುರ ಕಚೇರಿ ದೂರವಾಣಿ ಸಂಖ್ಯೆ 080-27622002, ಮೊಬೈಲ್ ನಂ: 9448346792 ಸ್ವೀಕರಿಸಲಿದ್ದಾರೆ.

     

    ದೇವನಹಳ್ಳಿ ತಾಲ್ಲೂಕಿನಲ್ಲಿ 1)ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಇ.ಓ ಕಚೇರಿ, ಬಿ.ಬಿ ರಸ್ತೆ ಗುರು ಭವನ, ದೇವನಹಳ್ಳಿ. ಕಚೇರಿ ದೂರವಾಣಿ ಸಂಖ್ಯೆ 080-27682384, ಮೊಬೈಲ್ ನಂ: 9480695012.

    2) ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ. ಬಿ.ಬಿ. ರಸ್ತೆ, ದೇವನಹಳ್ಳಿ ಕಚೇರಿ ದೂರವಾಣಿ ಸಂಖ್ಯೆ 080-22122999, ಮೊಬೈಲ್ ನಂ:6363263117 ಸ್ವೀಕರಿಸಲಿದ್ದಾರೆ.

     

    ಹೊಸಕೋಟೆ ತಾಲ್ಲೂಕಿನಲ್ಲಿ

    1)ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಇ.ಓ ಕಛೇರಿ. ಮಿಷನ್ ಆಸ್ಪತ್ರೆ ರಸ್ತೆ, ಬೈರೇಗೌಡ ಪೆಟ್ರೋಲ್ ಬಂಕ್ ಹತ್ತಿರ ಹೊಸಕೋಟೆ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 080-27931311 ಮೊಬೈಲ್ ನಂ: 9480695014.

    2)ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ, ಹಳೆ ಬಸ್ ನಿಲ್ದಾಣ ಹತ್ತಿರ ಹೊಸಕೋಟೆ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 080-27931237,ಮೊಬೈಲ್ ನಂ:9845637542

     

    ನೆಲಮಂಗಲ ತಾಲ್ಲೂಕಿನಲ್ಲಿ

    1)ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ಓ ಕಛೇರಿ, ಗುರು ಭವನ, ನೆಲಮಂಗಲ ಬಸ್ ನಿಲ್ದಾಣ ಹತ್ತಿರ, ನೆಲಮಂಗಲ ಮೊಬೈಲ್ ನಂ: 9480695015

    2)ತಹಶೀಲ್ದಾರ್ (ಗ್ರೇಡ್-2), ತಾಲ್ಲೂಕು ಆಡಳಿತ ಸೌಧ, ಬಿ ಹೆಚ್ ರಸ್ತೆ, ನೆಲಮಂಗಲ ಕಚೇರಿ ದೂರವಾಣಿ ಸಂಖ್ಯೆ:080-27722126, ಮೊಬೈಲ್ ನಂ: 8147397189

     

    *ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಮಾನದಂಡಗಳು*

    ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಸಾಮಾನ್ಯ ನಿವಾಸಿ ಆಗಿರಬೇಕು (ಈ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಒಳಗೊಂಡಿರುತ್ತದೆ)

    ಅರ್ಹತಾ ದಿನಾಂಕ ಹಿಂದಿನ 6 ವರ್ಷಗಳ ಅವಧಿಯ ಪೈಕಿ ಕನಿಷ್ಟ 3 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಹೊಂದಿರುವ/ಮಾನ್ಯತೆ ಹೊಂದಿರುವುದಾಗಿ ಘೋಷಿಸಲ್ಪಟ್ಟಿರುವ ಸೆಕೆಂಡರಿ ಶಾಲೆಗಿಂತ ಕಡಿಮೆ ಇಲ್ಲದ ಯಾವುದೇ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿರಬೇಕು.

    ಸೆಕೆಂಡರಿ ಶಾಲೆ ಅಂದರೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢಶಾಲೆ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿರಬೇಕು.

    ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಖಾಯಂ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಹಾಗೂ ಪಾರ್ಟ್ ಟೈಂ’ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ನೋಂದಣಿಗೆ ಅವಕಾಶವಿರುವುದಿಲ್ಲ.

     

    *ಸಹಾಯವಾಣಿ ಕೇಂದ್ರಗಳು*

    ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿಗಾಗಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರವರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂ.ಸಂ-080-29902025.

    ಚುನಾವಣಾಧಿಕಾರಿ ಯವರ ಕಛೇರಿ, 178-ಹೊಸಕೋಟೆ ವಿಧಾನಸಭಾ ಕ್ಷೇತ್ರ ದೂ.ಸಂ-080-27931237.

    ಚುನಾವಣಾಧಿಕಾರಿಯವರ ಕಛೇರಿ, 179-ದೇವನಹಳ್ಳಿ ವಿಧಾನಸಭಾಕ್ಷೇತ್ರ ದೂ.ಸಂ-080-22122999.

    ಚುನಾವಣಾಧಿಕಾರಿಯವರ ಕಛೇರಿ, 180-ದೊಡ್ಡಬಳ್ಳಾಪುರ ವಿಧಾನಸಭಾಕ್ಷೇತ್ರ

    ದೂ.ಸಂ-080-27622002.

    ಚುನಾವಣಾಧಿಕಾರಿಯವರ ಕಛೇರಿ, 181-ನೆಲಮಂಗಲ ವಿಧಾನಸಭಾ ಕ್ಷೇತ್ರ ದೂ.ಸಂ-080-27722126

     

    ಅರ್ಜಿದಾರರು ಶಿಕ್ಷಕ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಂದ ದೃಢೀಕೃತ ದಾಖಲೆ/ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

    ಮತದಾರರ ಪಟ್ಟಿ ನೋಂದಣಿಗೆ ಅರ್ಜಿದಾರರ ವಾಸಸ್ಥಳವು ಅರ್ಹತೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯ ಸ್ಥಳವು ಪರಿಗಣಿಸಲ್ಪಡುವುದಿಲ್ಲ.

    ಮತದಾರರ ಪಟ್ಟಿ ಸೇರ್ಪಡೆಗೆ ಕನ್ನಡ ಅಥವಾ ಅಂಗ್ಲ ಭಾಷೆಯ ನಮೂನೆ-19 ರಲ್ಲಿ ಅರ್ಜಿ ಸಲ್ಲಿಸಬಹುದು

    ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುವುದರಿಂದ ಅರ್ಜಿದಾರರು 2 ಇತ್ತೀಚಿನ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇಲಾಖಾ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಮಾನದಂಡಗಳಡಿಯಲ್ಲಿ ಅರ್ಹತೆ ಹೊಂದಿರುವ ಶಿಕ್ಷಕರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ದೊಡ್ಡಬಳ್ಳಾಪುರ ಶ್ರೀ ಮಡಿವಾಳರ ಸಂಘ (ರಿ.) ಮಾತ್ರ ಅಧಿಕೃತ – ಸಿ.ನಂಜಪ್ಪ

    ದೊಡ್ಡಬಳ್ಳಾಪುರ : ತಾಲ್ಲೂಕಿನಲ್ಲಿ ಎರಡು- ಮೂರು ಮಡಿವಾಳ ಸಂಘಗಳು ಚಾಲ್ತಿಯಲ್ಲಿ ಇರುವುದು ಗಮನಕ್ಕೆ ಬಂದಿದೆ. ತಾಲ್ಲೂಕಿನ ಮಡಿವಾಳ ಸಂಘದ ಅಧ್ಯಕ್ಷರಾಗಿ ಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕದ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಮಡಿವಾಳ ಮಾಚಿ ದೇವರ ಅಭಿವೃದ್ಧಿ ನಿಗಮ ಮಂಡಳಿ ನೂತನ ಅಧ್ಯಕ್ಷರಾದ ಸಿ.ನಂಜಪ್ಪ ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಕರ್ನಾಟಕ ರಾಜ್ಯ ಸರ್ಕಾರವು ಮಡಿವಾಳ ಸಮುದಾಯದ ಅಭಿವೃದ್ಧಿಗಾಗಿ ಮಾಚಿ ದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ನಮ್ಮ ನಿಗಮಕ್ಕೆ 33ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರೆ. ಮಡಿವಾಳ ಸಮುದಾಯದಲ್ಲಿ ಇಂದಿಗೂ ಹಲವಾರು ಕಡುಬಡ ಕುಟುಂಬಗಳಿವೆ ಅಂತಹ ಅರ್ಹರಿಗೆ ಈ ಅನುದಾನ ಸದ್ಭಾಳಕೆ ಆಗಲಿ ಎಂಬುದೇ ನಮ್ಮ ಉದ್ದೇಶ ಎಂದರು.

     

    ದೊಡ್ಡಬಳ್ಳಾಪುರ ಶ್ರೀ ಮಡಿವಾಳರ ಸಂಘ (ರಿ.) ದ ಗೌರವಾಧ್ಯಕ್ಷರಾಗಿ ರಾಜ್ ಕುಮಾರ್, ತಾಲ್ಲೂಕು ಅಧ್ಯಕ್ಷರಾಗಿ ಶಂಕರಪ್ಪ, ಕಾರ್ಯಧ್ಯಕ್ಷ ಈಶ್ವರ್, ಉಪಾಧ್ಯಕ್ಷ ನಟರಾಜ್, ನರಸಿಂಹ ಮೂರ್ತಿ ,ಪ್ರಧಾನ ಕಾರ್ಯದರ್ಶಿ ರಘು ಕುಮಾರ್, ಜಂಟಿ ಕಾರ್ಯದರ್ಶಿ ಆರ್ ಶಿವಕುಮಾರ್ (ವೈರ್ ಶಿವು), ತಾಲೂಕು ಹಿರಿಯ ಸಲಹೆಗಾರ ರಾಜಣ್ಣ ಜಿ.ಸಿ, ಖಜಾಂಜಿ ಬಾಲಾಜಿ, ಸಹ ಕಾರ್ಯದರ್ಶಿ ಆನಂದ್, ಮುತ್ತುರಾಜು, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ, ವೀರಾಂಜನೇಯ, ಸಂಜೀವ್, ರವಿಕುಮಾರ್,ನಿರ್ದೇಶಕರಾಗಿ ದುರ್ಗೇಶ್, ನಾಗರತ್ನಮ್ಮ, ತಿಪ್ಪಕ್ಕ, ಮಂಜುಳಾ ಇವರನ್ನು ಅಧಿಕೃತವಾಗಿ ಸಂಘದ ಪದಾಧಿಕಾರಿಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದರು.

     

    ಸುದ್ದಿಗೋಷ್ಠಿಯಲ್ಲಿ ಮಾಚಿ ದೇವರ ಅಭಿವೃದ್ಧಿ ನಿಗಮ ಮಂಡಳಿಯ ಉಪಾಧ್ಯಕ್ಷ ರಾಜಣ್ಣ, ರಾಜ್ಯ ಪ್ರಮುಖರು, ಮಡಿವಾಳ ಸಮುದಾಯದ ಜಿಲ್ಲೆ ಹಾಗೂ ತಾಲ್ಲೂಕು ಮುಖಂಡರು ಹಾಜರಿದ್ದರು.

  • 🟢 ದೊಡ್ಡಬಳ್ಳಾಪುರ : ಕುಡಿದ ಮತ್ತಿನಲ್ಲಿ ಮಗನ ಮೇಲೆ ಗುಂಡು ಹಾರಿಸಿದ ತಂದೆ

    ದೊಡ್ಡಬಳ್ಳಾಪುರ : ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನೀಡಿದ್ದು ಕುಡಿದ ಮತ್ತಿನಲ್ಲಿ ಮಗನ ಮೇಲೆ ಡಬ್ಬಲ್ ಬ್ಯಾರೆಲ್ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

     

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ಗ್ರಾಮದ ಹರೀಶ (30) ಮೇಲೆ ಗುಂಡಿನ ದಾಳಿ ಮಾಡಲಾಗಿದೆ, ಅಪ್ಪ ಸುರೇಶ (60) ನಿಂದ ಹರೀಶನ ತಲೆಗೆ ಗುಂಡು ಹೊಡೆಯಲಾಗಿದೆ, ಸೆಲ್ಫ್ ಲೋಡ್ ಗನ್ ಶೂಟ್ ಮಾಡಿ ಕೊಲೆ ಯತ್ನ ಮಾಡಲಾಗಿದೆ, ತಲೆಗೆ ತೀರ್ವ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವನಿಸಲಾಗಿದ್ದು , ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಆರೋಪಿ ಸುರೇಶನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

     

    ಘಟನೆ ಹಿನ್ನಲೆ 

    ಅಪ್ಪ ಸುರೇಶ ಮದ್ಯ ವ್ಯಸನದಿಂದ ಸಾಕಷ್ಟು ಜಮೀನು ಮಾರಾಟ ಮಾಡಿ ಹಾಳು ಮಾಡಿದ್ದ. ಇದ್ದ ಜಮೀನುಗಳನ್ನು ಮಾರಾಟ ಮಾಡಿ ಪಾನಮತ್ತನಾಗಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಗ ಹರೀಶ ಸಹ ಇತ್ತೀಚಿಗೆ ಮದ್ಯಪಾನ ಮಾಡಲು ಶುರು ಮಾಡಿದ್ದು, ಬೆಳ್ಳ ಬೆಳಿಗ್ಗೆ ಪಾನಮತ್ತ ತಂದೆ ಜೊತೆ ಜಗಳಕ್ಕೆ ಇಳಿದಿದ್ದ ಮಗ ಹರೀಶನ ಮೇಲೆ‌ ತಂದೆ ಸುರೇಶ ಅಲ್ಲೆ ಇದ್ದ ಹಳೆಕಾಲದ ಸೆಲ್ಫ್ ಲೋಡ್ ಗನ್ ನಿಂದ ತಲೆಗೆ ಶೂಟ್ ಮಾಡಿದ್ದಾನೆ.

     

     

     

  • ಎಸ್.ಎಲ್.ಎನ್. ಗೋಲ್ಡ್‌ ಲೀಫ್ ಪ್ರಾರಂಭೋತ್ಸವ ಶುಭ ಕೋರಿದ ಗಣ್ಯ ವರ್ಗ

    ತುಮಕೂರು :ಅ 31ರ ಶುಕ್ರವಾರದಂದು ಬೆಳಿಗ್ಗೆ 11.00 ಗಂಟೆಗೆ ನೂತನವಾಗಿ ನಿರ್ಮಿಸಲಾಗಿರುವ ಎಸ್.ಎಲ್.ಎನ್. ಗೋಲ್ಡ್‌ ಲೀಫ್ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

     

    ಶ್ರೀಮತಿ ಹೆಚ್.ವಿ. ಅನುಸೂಯ ಮತ್ತು ತುಮಕೂರು ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷರಾದ ಟಿ.ಎಲ್. ಕುಂಭಯ್ಯ ನವರ ಕುಟುಂಬಸ್ಥರ ನೇತೃತ್ವದಲ್ಲಿ ಈ ಪ್ರಾರಂಭೋತ್ಸವ ನೆಡೆಯಲಿದ್ದು.

    ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರಪಾಲಿಕೆ ಮಾಜಿ ಉಪಮಹಾಪೌರರಾದ ಟಿ.ಕೆ. ನರಸಿಂಹಮೂರ್ತಿ ಹಾಗೂ ಅವರ ಧರ್ಮಪತ್ನಿ ಪದ್ಮಶ್ರೀ, ಯಜಮಾನ್ ಟಿ.ಹೆಚ್. ಹನುಮಂತರಾಜುರವರು ಯಜಮಾನ್ ಶಿವಕುಮಾರ್‌ರವರು, ಶ್ರೀಮತಿ ಮಂಜುಳ ಮತ್ತು ಟಿ.ಕೆ. ಲಕ್ಷ್ಮೀನಾರಾಯಣ ಶ್ರೀಮತಿ ಸೌಭಾಗ್ಯ ಮತ್ತು ನಾಗರಾಜು ಹಾಗೂ ಕುಟುಂಬದವರು ಭಾಗವಹಸಲಿದ್ದಾರೆ.

     

    ಎಸ್.ಎಲ್.ಎನ್. ಗೋಲ್ಡ್‌ ಲೀಫ್ ಪ್ರಾರಂಭೋತ್ಸವದ ಅಂಗವಾಗಿ ಅಗ್ನಿವಂಶ ತಿಗಳ ಕ್ಷತ್ರಿಯ ಸಮುದಾಯದ ಮುಖಂಡರಾದ ದೇಶದ ಮನೆ ಯಜಮಾನ್ ಗಂಗಾ ಹನುಮಯ್ಯ ಕ್ಯಾತಸಂದ್ರ, ಹದಿನೆಂಟು ಗಡಿ ಯಜಮಾನ್ ಆರ್. ಜಗದೀಶ್ ಲಕ್ಕೂರು ತೋಟ, ಯಜಮಾನ್ ಉಮೇಶ್ ನೆಲಮಂಗಲ,ಸಮುದಾಯದ ಮುಖಂಡರಾದ ಸುಬ್ರಮಣಿ ಅರದೇಶನಹಳ್ಳಿ, ಹನುಮಂತರಾಜು ಅರದೇಶನಹಳ್ಳಿ, ಸುಂದರ್ ಅರದೇಶನಹಳ್ಳಿ, ನಾಗೇಶ್ ಅರದೇಶನಹಳ್ಳಿ, ಮಂಜುನಾಥ್ ಅರದೇಶನಹಳ್ಳಿ, ಹನುಮಂತಪ್ಪ ಅರದೇಶನಹಳ್ಳಿ, ಶೇಖರ್ ಅರದೇಶನಹಳ್ಳಿ ಸೇರಿದಂತೆ ಹಲವು ಪ್ರಮುಖರು ಶುಭ ಹಾರೈಸಿದ್ದಾರೆ.

     

     

  • ಶ್ರೀ ಚೌಡೇಶ್ವರಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಉದ್ಘಾಟನೆ

    ದೊಡ್ಡಬಳ್ಳಾಪುರ : ನಗರದ ಕೆ.ಸಿ.ಪಿ ವೃತ್ತದ ಬಳಿ ನೂತನವಾಗಿ ಆರಂಭಿಸಿರುವ ಶ್ರೀ ಚೌಡೇಶ್ವರಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ., ದ ದೊಡ್ಡಬಳ್ಳಾಪುರ ಶಾಖೆಯ ಉದ್ಘಾಟನಾ ಸಮಾರಂಭ ಶಾಖೆಯ ಆವರಣದಲ್ಲಿ ನಡೆಯಿತು.

     

    ದೊಡ್ಡಬಳ್ಳಾಪುರದಲ್ಲಿ ಶ್ರೀ ಚೌಡೇಶ್ವರಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ದೊಡ್ಡಬಳ್ಳಾಪುರ ಶಾಖೆಯನ್ನು ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ಪೀಠಾಧ್ಯಕ್ಷ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ತತ್ವವಿಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕುವುದು ಕಷ್ಟ. ಅಂತೆಯೇ ಸಹಕಾರ ಕ್ಷೇತ್ರದಿಂದ ಇಂದು ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುತ್ತಿದೆ. ನೂತನವಾಗಿ ಆರಂಭಿಸಿರುವ ಶ್ರೀ ಚೌಡೇಶ್ವರಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಸಹಕಾರ ತತ್ವಗಳಿಗೆ ಹಾಗೂ ನಿಯಮಗಳಿಗೆ ಬದ್ದವಾಗಿ ಸದಸ್ಯರ ಶ್ರೇಯೋಭಿವೃದ್ದಿಗೆ ನೆರವಾಗಬೇಕಿದೆ ಎಂದು ಹಾರೈಸಿದರು.

     

    ತೊಗಟವೀರ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್‌.ಸೋಮಶೇಖರ್‌ ಮಾತನಾಡಿ, ಸೊಸೈಟಿಯು ನೇಕಾರ ಸಮುದಾಯಕ್ಕೆ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ಸೊಸೈಟಿಯ ಆಶೋತ್ತರಗಳಿಗೆ ಸದಸ್ಯರು ಸ್ಪಂಧಿಸಿ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದರು.

     

    ಶ್ರೀ ಚೌಡೇಶ್ವರಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಜಿ.ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಪುಷ್ಪಾಂಡಜ ಮಹರ್ಷಿ ತೊಗಟವೀರ ಕುಲಗುರು ಪೀಠ ಟ್ರಸ್ಟ್‌ ಅಧ್ಯಕ್ಷ ಎಸ್‌.ಹರೀಶ್, ಮಾಜಿ ಅದ್ಯಕ್ಷ ಸಿ.ಅಶ್ವತ್ಥನಾರಾಯಣ್‌, ತೊಗಟವೀರ ಕ್ಷತ್ರಿಯ ಸಂಘದ ತಾಲೂಕು ಅಧ್ಯಕ್ಷ ಟಿ.ಎನ್‌.ತಿಮ್ಮರಾಜು ಸೂಸೈಟಿಯ ಆಡಳಿತ ಮಂಡಲಿಯ ಅಧ್ಯಕ್ಷ ಜಿ.ವಿಜಯಕುಮಾರ್‌, ಉಪಾಧ್ಯಕ್ಷ ಆರ್‌.ಮೋಹನ್‌ ಕುಮಾರ್‌ ನಿರ್ದೇಶಕರಾದ ಅಚ್ಚಪ್ಪ ನಾಗರಾಜ್‌, ಎನ್‌.ವೆಂಕಟರಮಣ, ಕೆ.ಆರ್.ಶಿವಪ್ಪ, ಎಂ.ಚಂದ್ರಮ್ಮ, ಎನ್‌.ಕೃಷ್ಣಪ್ಪ, ನಾಗರತ್ನಮ್ಮ, ಬಿ.ಎಂ.ಗಣೇಶ್‌ ಮೂರ್ತಿ, ಮುನಿ ವೆಂಕಟಪ್ಪ, ಎಸ್‌.ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.

     

     

  • ರಸ್ತೆ ಅಪಘಾತ ವ್ಯಕ್ತಿ ಸಾವು : ಸರ್ವಿಸ್ ರಸ್ತೆ ಇಲ್ಲದ ಕಾರಣ ಅಪಘಾತ ಸಂಭವಿಸುತ್ತಿವೆ ಎಂದ ಸ್ಥಳೀಯರು

    ದೊಡ್ಡಬಳ್ಳಾಪುರ : ಮೆಣಸಿ ಗೇಟ್ ಬಳಿ ಸರ್ವಿಸ್ ರಸ್ತೆ ಇಲ್ಲದೆ, ನೇರವಾಗಿ ಹೆದ್ದಾರಿಗೆ ಬಂದ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದೆ.

     

    ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ ಇಂದು ಬೆಳೆಗ್ಗೆ ಘಟನೆ ನಡೆದಿದ್ದು, ಘಟನೆಯಲ್ಲಿ ಹೆಸರಘಟ್ಟ ಮೂಲದ ಕನ್ನಯ್ಯ (62) ಸಾವನ್ನಪ್ಪಿದ್ದಾರೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

    ಮೆಣಸಿ ಗೇಟ್ ಬಳಿ ಉಪನಗರ ಹೊರವರ್ತುಲ ರಸ್ತೆ (STRR) ಹಾದು ಹೋಗಿದೆ, ಮೃತ ಕನ್ನಯ್ಯ ಮೆಣಸಿ ಗೇಟ್ ಬಳಿ ಹೆದ್ದಾರಿ ಪ್ರವೇಶಿಸುವಾಗ ದಾಬಸ್ ಪೇಟೆ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ, ಅಪಘಾತದಲ್ಲಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು

     

    ಇನ್ನು ಈ ಕುರಿತು ಕೆಸ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ ಮೆಣಸಿ ಗೇಟ್ ನಿಂದ ಮೆಸ್ಟ್ರು ಮನೆ ಕ್ರಾಸ್ ವರೆಗೂ ಸರ್ವಿಸ್ ರಸ್ತೆ ಇಲ್ಲ, ಸರ್ವಿಸ್ ರಸ್ತೆ ಮಾಡುವಂತೆ ಹಲವು ಬಾರಿ STRR ಗೆ ಮನವಿ ಮಾಡಲಾಗಿದೆ. ಸರ್ವಿಸ್ ರಸ್ತೆಗಾಗಿ ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡಿದ್ದರು ಸರ್ವಿಸ್ ರಸ್ತೆ ಮಾಡದ STRR ವಾಹನ ಸವಾರರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ರಾಜಕೀಯ ಪ್ರಮುಖರೋ ಸಿನಿಮಾ ತಾರೆಯರೋ ಅಪಘಾತಕ್ಕೆ ಒಳಗಾದರೆ ಶೀಘ್ರ ಕ್ರಮ ಕೈಗೊಳ್ಳುವ ರಸ್ತೆ ಪ್ರಾಧಿಕಾರ ಹತ್ತಾರು ಸಾರ್ವಜನಿಕರ ಪ್ರಾಣವೇ ಹೋಗುತ್ತಿದ್ದರು ಗಮನ ಹರಿಸದೆ ಇರುವುದು ವಿಪರ್ಯಾಸವೇ ಸರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

     

    ಮೆಣಸಿ ಗೇಟ್ ಬಳಿ ಸರ್ವಿಸ್ ರಸ್ತೆ ಇಲ್ಲದೆ ಇರುವುದರಿಂದ ಗ್ರಾಮಸ್ಥರು ನೇರವಾಗಿ ಹೆದ್ದಾರಿ ಪ್ರವೇಶಿಸುತ್ತಾರೆ, ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಅಮಾಯಕ ಗ್ರಾಮಸ್ಥರ ವಾಹನಗಳಿಗೆ ಡಿಕ್ಕಿ ಹೊಡೆಯುತ್ತದೆ, ವಾರಕ್ಕೊಂದು ಅಪಘಾತಗಳು ಸಾಮಾನ್ಯವಾಗಿದೆ ಇಲ್ಲಿ, ಹೆದ್ದಾರಿ ಪ್ರವೇಶಿಸುವುದಕ್ಕೆ ಹೆದರುವಂತ ಪರಿಸ್ಥಿತಿ ಇದೆ, ಅಪಘಾತಗಳನ್ನ ತಡೆಯುವುದ್ದಾಗಿ ವಾಹನ ಸವಾರರಿಗೆ ಸಲಹೆ ನೀಡುವ ಸರ್ಕಾರಗಳು, ಅದೇ ಸರ್ವಿಸ್ ರಸ್ತೆ ಮಾಡದೆ ಅಪಘಾತಗಳಿಗೆ ಕಾರಣವಾಗಿರುವ STRR ಯಾವುದೇ ಸೂಚನೆಗಳನ್ನ ನೀಡುತ್ತಿಲ್ಲ, ಸರ್ವಿಸ್ ರಸ್ತೆ ಮಾಡದೆ ಇದ್ದರೆ ಪ್ರತಿಭಟನೆ ಮಾಡುವುದ್ದಾಗಿ ಎಚ್ಚರಿಕೆಯನ್ನ ನೀಡಿದರು.

     

     

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ನೀರಿಕ್ಷಕರಾದ ಸಾದಿಕ್ ಪಾಷಾ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿದ್ದು ತನಿಖೆನಂತರ ಮತ್ತಷ್ಟು ಮಾಹಿತಿ ಹೊರ ಬರಲಿದೆ.

     

  • ಅಕ್ಟೋಬರ್ 24 ರಂದು ದಿ.ನರಸಿಂಹಯ್ಯ ನವರ ನುಡಿನಮನ ಕಾರ್ಯಕ್ರಮ

    ದಿವಂಗತ ನರಸಿಂಹಯ್ಯ ನವರ ನುಡಿನಮನ ಕಾರ್ಯಕ್ರಮವು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿಗಳ ನೇತೃತ್ವದಲ್ಲಿ ಕುರುವೇಲ್ ತಿಮ್ಮನಹಳ್ಳಿಯಲ್ಲಿ ನೆಡೆಯಲಿದೆ

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಕುರುವೇಲ್ ತಿಮ್ಮನಹಳ್ಳಿ ಗ್ರಾಮದ ಹಿರಿಯರು, ರೈತರು ,ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನಿರ್ಮಾಣ ಕರ್ತರು ,ಧಾರ್ಮಿಕ ಮುಖಂಡರಾದ ಶ್ರೀ ನರಸಿಂಹಯ್ಯನವರು ಅಕ್ಟೋಬರ್ 14 2025 ರಂದು ತಮ್ಮ 92 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು .ಅವರ ನುಡಿನಮನ ಕಾರ್ಯಕ್ರಮವನ್ನು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುರುವೇಲ್ ತಿಮ್ಮನಹಳ್ಳಿ ಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .

     

    ದಿವಂಗತ ನರಸಿಂಹಯ್ಯ ನವರು ರಂಗಮ್ಮ ನರಸಿಂಹಯ್ಯ ಪ್ರತಿಷ್ಠಾನ ಹೆಸರಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ

     

     

    ವಿಶ್ವ ಮಾನವ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕರುಹಾಗೂ ಪರಿಸರ ಜಗತ್ ಮಾಸ ಪತ್ರಿಕೆ ಸಂಪಾದಕರಾದ ಶಿವರಾಜ್ ಮಾತನಾಡಿ ನಿಲ್ಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ಕಳೆವುದರಲ್ಲಿ ನಮ್ಮ ಜನುಮ ಜನುಮಗಳು ಗೆಲುವಾರ್ಗೋ ಸೋಲಾರ್ಗೋ ಲೆಕ್ಕ ನೋಡುವುದೆಂದೂ ಫಲವು ಬರಿಯಾಟವೆಲೂ ಮಂಕು ತಿಮ್ಮ ಎಂಬ ಡಿವಿಜಿ ಯವರ ಸಾಲುಗಳಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿ ಯಾವುದೇ ಫಲಪೇಕ್ಷೆ ಇಲ್ಲದೆ ತಮ್ಮ ನಿಸ್ವಾರ್ಥ ಸೇವೆಯಿಂದಲೇ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ನಮ್ಮ ತಂದೆಯವರಾದ ದಿವಂಗತ ನರಸಿಂಹಯ್ಯ ನವರ ನುಡಿ ನಮನ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸಬೇಕೆಂದು ಮನವಿ ಮಾಡಿದರು.