Blog

  • ಕಲ್ಯಾಣಿ ಸ್ವಚ್ಚತೆ ಹಾಗೂ ದೇವಾಲಯದ ಸ್ವಚ್ಚತಾ ಕಾರ್ಯ : ಗ್ರಾಮಸ್ಥರಿಂದ ಭರ್ಜರಿ ರೆಸ್ಪಾನ್ಸ್

    ದೊಡ್ಡಬಳ್ಳಾಪುರ : ದೇವಾಲಯಗಳ ಸ್ವಚ್ಚತೆಯನ್ನು ಕಾಪಾಡುವ ಸಲುವಾಗಿ ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯಿಂದ ಇಂದು ತೂಬಗೆರೆ ಹೋಬಳಿಯ ಕೊಂಡಸಂದ್ರದ ಕಾಶಿವಿಶ್ವನಾಥ ದೇವಾಲಯದ ಕಲ್ಯಾಣಿ ಸ್ವಚ್ಚತೆ ಹಾಗೂ ದೇವಾಲಯದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಕೆಂಪೇಗೌಡ ತಿಳಿಸಿದರು.

    ದೊಡ್ಡಬಳ್ಳಾಪುರ ಭಾಗದ ಪತ್ರಕರ್ತರು, ಕಾಶಿವಿಶ್ವನಾಥ ದೇವಾಲಯದ ಅಭಿವೃದ್ಧಿ ಸಮಿತಿ, ಹಾಗೂ ದೊಡ್ಡಬಳ್ಳಾಪುರ ಭಾಗದ ಹಲವಾರು ಹಿಂದೂ ಕಾರ್ಯಕರ್ತರೊಡನೆ ಸೇರಿ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.ನಮ್ಮ ಸಮಿತಿಯ ಸ್ವಚ್ಚತಾ ಕಾರ್ಯವೈಖರಿ ಮುಂದುವರೆದಿದ್ದು ಮುಂದಿನ ಭಾನುವಾರ ಆಯುಧ ಪೂಜಾ ವಿಶೇಷವಾಗಿ ತಾಲ್ಲೂಕಿನ ಲಿಂಗನಹಳ್ಳಿಯ ಪ್ರಸಿದ್ದ ಚೋಳರ ಕಾಲದ ಶ್ರೀ ಆಂಜನೇಯ ದೇಗುಲದಲ್ಲಿ ನೆಡೆಯಲಿದ್ದು ತಾಲ್ಲೂಕಿನ ಜನತೆ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ ಎಂದರು.

    ಕಾಶಿ ವಿಶ್ವನಾಥ ದೇವಾಲಯದ ಸ್ವಚ್ಚತಾ ಕಾರ್ಯ ಪಕ್ಷತೀತವಾಗಿ ಎಲ್ಲರೂ ಒಟ್ಟಾಗಿ ಕೈಜೋಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದ್ದಾರೆ. ತೂಬಗೆರೆ ಗ್ರಾಮಸ್ಥರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಜೆಸಿಬಿ ವ್ಯವಸ್ಥೆಯನ್ನು ತೂಬಗೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಲಗುಮಯ್ಯ ನೀಡಿದ್ದು . ಬೆಳಗಿನ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ತೂಬಗೆರೆ ಬಿಜೆಪಿ ಮುಖಂಡರು ಹಾಗೂ ವಕೀಲರಾದ ಪ್ರತಾಪ್ ಹಾಗೂ ಟಿ.ಎನ್. ಕೃಷ್ಣಪ್ಪ ಕಲ್ಪಿಸಿದ್ದಾರೆ. ಹಾಗೂ ಸ್ವಚ್ಛತಾ ಕಾರ್ಯಕ್ಕೆ ಅನುಕೂಲ ಕಲ್ಪಿಸಲು ಟ್ರಾಕ್ಟರ್ ವ್ಯವಸ್ಥೆಯನ್ನು ತೂಬಗೆರೆ ಬಿಜೆಪಿ ಮುಖಂಡ ರಾಮಕೃಷ್ಣಪ್ಪ ನೀಡಿದ್ದು, ಬ್ಯಾನರ್ ವ್ಯವಸ್ಥೆಯನ್ನು ದೊಡ್ಡಬಳ್ಳಾಪುರ ಮಧುಮಿತ ಆರ್ಟ್ಸ್ ನ ವಿಜಯಕುಮಾರ್ ಮಾಡಿಕೊಟ್ಟಿದ್ದಾರೆ ಎಲ್ಲಾ ದಾನಿಗಳಿಗೂ ನಮ್ಮ ಸ್ವಚ್ಛತಾ ಸಮಿತಿ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.

    ಕಾರ್ಯ

     

     

     

     

    ಕಾರ್ಯಕ್ರಮದಲ್ಲಿ  ಮುಖಂಡರಾದ ಸಿ.ಎಂ.ಕೃಷ್ಣಪ್ಪ, ಮುನಿಕೃಷ್ಣಚಾರ್, ಕೇಬಲ್ ಮಂಜು, ಗೋಪಾಲ್, ಶ್ರೀನಿವಾಸ ಗುರೂಜಿ, ಘನ ಶ್ಯಾಮ್, ಕೆಂಪರಾಜು, ಮಲ್ಲೇಶ್, ಶ್ರೀನಿವಾಸ್, ಮಧು, ನರಸಿಂಹಮೂರ್ತಿ ಉದಯ ಆರಾಧ್ಯ, ಹಳ್ಳಿ ರೈತ ಅಂಬರೀಶ್, ಶಿವಕುಮಾರ್ ಸ್ವಾಮಿ, ಕಿರಣ್ ನಾರಸಿಂಹನಹಳ್ಳಿ, ಗಂಗರಾಜು, ರಾಜೇಶ್ ಸೇರಿದಂತೆ ತೂಬಗೆರೆ ಭಾಗದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಹಲವಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

  • ಹೃದಯವಂತ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಜನ್ಮದಿನದ ಆಚರಣೆ

    ವಿಜಯಮಿತ್ರ ಸುದ್ದಿ ದೊಡ್ಡಬಳ್ಳಾಪುರ(ಸೆ.18) : ಸರಳ, ಸಜ್ಜನಿಕೆ ಹಾಗೂ ತಮ್ಮ ಅಭಿನಯ ಕಲೆಯಿಂದಲೇ ಎಲ್ಲರ ಆರಾಧ್ಯ ದೈವ ವಾಗಿರುವ ಡಾ. ವಿಷ್ಣುವರ್ಧನ್ ರವರ ಜೀವನಶೈಲಿಯೇ ನಮ್ಮಗೆ ಆದರ್ಶ ಅವರ ಉತ್ತಮ ಕಾರ್ಯಗಳು ನಮಗೆ ಸದಾ ಮಾರ್ಗದರ್ಶನವಾಗಿರುತ್ತವೆ ಎಂದು ಅಭಿಮಾನಿ ಅನ್ನದಾಸೋಹಿ ಮಲ್ಲೇಶ್ ತಿಳಿಸಿದರು.

    ತಾಲ್ಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಹೃದಯವಂತ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಡಾ. ವಿಷ್ಣುವರ್ಧನ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು . ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಅಭಿಮಾನಿಗಳಿಂದ ದಾದಾ ಎಂದೇ ಪ್ರಸಿದ್ದಿ ಪಡೆದಿರುವ ಸಾಹಸಸಿಂಹ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಕೇವಲ ಒಬ್ಬ ನಾಯಕ ನಟರಾಗಿ ಉಳಿದಿಲ್ಲ ಅವರೊಂದು ಶಕ್ತಿಯಾಗಿ ಪ್ರತಿ ಅಭಿಮಾನಿಯ ಉತ್ತಮ ಕಾರ್ಯಗಳಲ್ಲಿ ಸದಾ ಜೀವಂತರಾಗಿದ್ದಾರೆ. ಕನ್ನಡ ಭಾಷೆ ನಾಡು ನುಡಿಯ ಬಗ್ಗೆ ಅವರಿಗಿದ್ದ ಗೌರವ ಅಪಾರವಾದದ್ದು , ನಾವುಗಳು ಅವರ ಅಭಿಮಾನಿಗಳಾಗಿದ್ದೇವೆ ಎಂದು ಹೇಳುವುದೇ ಹೆಮ್ಮೆಯ ವಿಷಯವಾಗಿದೆ ಎಂದರು.

     

     

    ಹೃದಯ ವಂತ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಲಕ್ಷ್ಮಣ ಮಾತನಾಡಿ ಡಾ. ವಿಷ್ಣುವರ್ಧನ್ ಪಂಚ ಭಾಷ ನಟರು , ಅವರ ಉತ್ತಮ ನಡತೆಯಿಂದಲೇ ಸಾಕಷ್ಟು ಹೆಸರು ಮಾಡಿದ ಅವರು ನಮ್ಮೆಲ್ಲರ ಅಚ್ಚುಮೆಚ್ಚು, ಅಭಿಮಾನಿಗಳ ಮೇಲೆ ಅವರಿಗಿದ್ದ ಗೌರವ ನಾವು ನೋಡಿದ್ದೇವೆ , ಅಂತಹ ಉತ್ತಮ ನಟರು ಮುಂದೆಂದೂ ಬರಲು ಸಾಧ್ಯವಿಲ್ಲ , ಉತ್ತಮ ಕೌಟುಂಬಿಕ ಕಥೆಯುಳ್ಳ ಚಿತ್ರಗಳ ಮೂಲಕ ರಾಜ್ಯವಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿಯೂ ತಮ್ಮ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ನಟ ಎಂದರೆ ತಪ್ಪಾಗಲಾರದು ಎಂದರು.

     

     

    ಕಾರ್ಯಕ್ರಮದಲ್ಲಿ ಅನ್ನ ದಾಸೋಹಿ ಮಲ್ಲೇಶ್ ,ಮಾಜಿ ಗ್ರಾಮ ಪಂಚಾಯಿತಿ ಸದಸ್ಯ H. ರಂಗನಾಥ್, ಹೃದಯ ವಂತ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ಕೇಶವ, ಎಂ.ರಾಜಣ್ಣ ಹೈಟೆಕ್, ಸೇರಿದಂತೆ ಎಲ್ಲಾ ವಿಷ್ಣುವರ್ಧನ್ ಅಭಿಮಾನಿ ಬಳಗದ ಎಲ್ಲಾ ಪ್ರಮುಖರು ಹಾಜರಿದ್ದರು.

  • 15 ದಿನಗಳ ಕಾಲ ದೊಡ್ಡಬಳ್ಳಾಪುರ ತಾಲೂಕು ಸುತ್ತಮುತ್ತ ನಡೆಯಲಿದೆ “ದೈವ ಪುತ್ರ” ಚಿತ್ರೀಕರಣ – ನಾಯಕ ನಟ ಸುಧೀರ್

    ದೊಡ್ಡಬಳ್ಳಾಪುರ : ಶ್ರೀ ವಾಸವಿ ಮಾತ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಾಯಕನಟ ಸುಧೀರ್ ಹಾಗೂ ಸುವರ್ಣ ಪ್ರಕಾಶ್ ಇದೇ ಮೊದಲ ಬಾರಿಗೆ ನಾಯಕನಟಿಯಾಗಿ ಅಭಿನಯಿಸಿರುವ “ದೈವ ಪುತ್ರ “ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.

    ಸದ್ಯ ದೊಡ್ಡಬಳ್ಳಾಪುರ ನಗರದ ಜಿ ಕೆ ವ್ಯಾಲಿಯ ಡಿ ಏನ್ ತಿಮ್ಮರಾಜು ಅವರ ಮನೆಯಲ್ಲಿ ಚಿತ್ರೀಕರಣ ಸಾಗುತ್ತಿದ್ದು, ತಾಲ್ಲೂಕಿನ ಸುತ್ತಮುತ್ತ 15 ದಿನಗಳ ನಿರಂತರ ಚಿತ್ರೀಕರಣ ನೆಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ

    ಚಿತ್ರದಲ್ಲಿ ವೀಡೆ ಚಿತ್ರದ ಮೂಲಕ ಪ್ರಸಿದ್ಧಿ ಪಡೆದಿರುವ ನಟ ಸುಧೀರ್, ಹೊಸ ಪರಿಚಯ ಸುವರ್ಣ ಪ್ರಕಾಶ್, ಬಹು ತಾರಗಣ ಹೊಂದಿರುವ ಚಿತ್ರಕ್ಕೆ ಕೃಷ್ಣ ಮೋಹನ್ ಆಕ್ಷನ್ ಕಟ್ ಹೇಳಲಿದ್ದಾರೆ.

    ನಾಯಕನಟ ಸುಧೀರ್ ಸಿನಿಮಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ತೆಲುಗು ಚಿತ್ರಗಳಲ್ಲಿ ಈಗಾಗಲೇ ನಾಯಕನನ್ನಾಗಿ ಅಭಿನಯಿಸಿದ್ದು, ಮೊದಲ ಬಾರಿಗೆ ಕನ್ನಡದಲ್ಲಿ ನಾಯಕ ನಟನಾಗಿ ದೈವ ಪುತ್ರ ಚಲನಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ . ಸಹನಟನಾಗಿ ಕನ್ನಡ ಭಾಷೆಯ ನಾಲ್ಕೈದು ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಮೊದಲ ಸಿನಿಮವಾದರೂ ಸಹ ಸ್ಥಳೀಯವಾಗಿ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದು , ಕನ್ನಡ ಭಾಷೆಯಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡಲು ಹುಮ್ಮಸ್ಸು ದುಪ್ಪಟ್ಟಾಗಿದೆ , ದೈವ ಪುತ್ರ ಸಿನಿಮಾ ಕೌಟುಂಬಿಕ ಕಥೆಯುಳ್ಳ ಪ್ರಸ್ತುತ ವಿದ್ಯಮಾನಗಳು ಒಳಗೊಂಡ ಯುವ ಪೀಳಿಗೆಯನ್ನು ಎಚ್ಚರಿಸುವಂತಹ ಹಲವು ವಿಷಯಗಳೊಂದಿಗೆ ಸಿದ್ಧವಾಗುತ್ತಿದ್ದು . ಕರುನಾಡಿನ ಎಲ್ಲ ಸಿನಿಪ್ರಿಯರು ನಮ್ಮ ದೈವಪುತ್ರ ಸಿನಿಮಾ ನೋಡಿ ಆಶೀರ್ವದಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.

    ಸಿನಿಮಾದ ನಾಯಕ ನಟಿ ಸುವರ್ಣ ಪ್ರಕಾಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಉತ್ತಮ ಸಿನಿಮಾಗಳು ಬರುವುದು ಗಣನಿಯವಾಗಿ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಸಿನಿಪ್ರೇಕ್ಷಕರಿಗೆ ಬೇಕಾಗುವ ಎಲ್ಲಾ ಅಂಶಗಳು ಉತ್ತಮ ಸಂಸಾರಿಕ ಕಥೆಯೊಂದಿಗೆ ನಮ್ಮ ದೈವಿಪುತ್ರ ಸಿನಿಮಾ ತೆರೆಯ ಮೇಲೆ ಬರಲಿದೆ. ಉತ್ತಮ ಕಂಟೆಂಟ್ ಉಳ್ಳ ಸಿನಿಮಾಗಳನ್ನು ಕನ್ನಡಿಗರು ಎಂದು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.

    ಸ್ಥಳೀಯ ಮುಖಂಡರದ ಮಲ್ಲೇಶ್ ಮಾತನಾಡಿ ತೆಲುಗು ಭಾಷೆಯಲ್ಲಿ ವೀಡೆ ಸಿನಿಮಾದ ಮೂಲಕ ಈಗಾಗಲೇ ಪ್ರಸಿದ್ದಿ ಪಡೆದಿರುವ ನಾಯಕ ನಟ ಸುಧೀರ್ ರವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ, ಅವರಿಗೆ ಶುಭವಾಗಲಿ ದೈವ ಪುತ್ರ ಚಿತ್ರವು ಉತ್ತಮ ಪ್ರದರ್ಶನ ಕಂಡು ಚಿತ್ರತಂಡಕ್ಕೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಚೌಡರಾಜು, ಮಲ್ಲೇಶ್,ಶರವಣ, ಸೇಲ್ವಮ್, ಡಿ ಏನ್ ತಿಮ್ಮರಾಜು, ಸಾಹಸಮಯ ದೃಶ್ಯಗಳ ನಿರ್ದೇಶಕ ಯೇಸುದಾಸ್, ನಿರ್ದೇಶಕ ಮೋಹನ್ ಕೃಷ್ಣ, ನೃತ್ಯ ಸಂಯೋಜಕ ಬಾಲು , ಖಳನಾಯಕ ನಟ ಬಟ್ಟು, ಹನುಮಂತು ಸೇರಿದಂತೆ ಹಲವರು ಹಾಜರಿದ್ದರು.

  • ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಉಪಾಧ್ಯಕ್ಷರಾಗಿ ನಾಗೇಶ್ ಆಯ್ಕೆ

    ಬೆಂಗಳೂರು ಗ್ರಾಮಾಂತರ ವಿಜಯ ಮಿತ್ರ ಸುದ್ದಿ (ಸೆ. 11) : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ).ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾಗಿ ಶ್ರೀಯುತ ನಾಗೇಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

     

    ಕಳೆದ 3ವರ್ಷಗಳಿಂದ ಜನಜಾಗೃತಿ ವೇದಿಕೆಯಲ್ಲಿ ಸದಸ್ಯರಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾಗಿ ನಾಗೇಶ್ ರವರನ್ನು ಆಯ್ಕೆ ಮಾಡಲಾಗಿದೆ ಇವರ ಸೇವೆ ನಮ್ಮ ಜಿಲ್ಲೆಯ ಜನತೆಗೆ ಮತ್ತಷ್ಟು ಸಿಗಲಿ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

     

    ನಾಗೇಶ್ ರವರು ದೊಡ್ಡಬಳ್ಳಾಪುರ ಫೋಟೋಗ್ರಫಿ ಮತ್ತು ವೀಡಿಯೊಗ್ರಾಪಿ ಸಂಘದ ರಾಜ್ಯಾಧ್ಯಕ್ಷರಾಗಿ,ಸಂಸ್ಕೃತಿ ಟ್ರಸ್ಟ್ ನಿರ್ದೇಶಕರಾಗಿ, ಬೀರುವೇಶ್ವರ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸದಸ್ಯರಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಅವರ ಉತ್ತಮ ನಡವಳಿಕೆ ಹಾಗೂ ನಾಯಕತ್ವದ ಗುಣಗಳನ್ನು ಕಾರ್ಯ ವೈಖರಿಯನ್ನು ಗುರುತಿಸಿ ಈ ಜನಜಾಗೃತಿ ವೇದಿಕೆಯಲ್ಲಿ ಈ ನೂತನ ಜವಾಬ್ದಾರಿ ನೀಡಿ ಗೌರವಿಸಿರುವುದು ನಮ್ಮಲ್ಲರ ಹೆಮ್ಮೆ ಎಂದು ಸಮಿತಿಯ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನನಗೆ ನೂತನ ಜವಾಬ್ದಾರಿಯನ್ನು ನೀಡಿದ್ದು, ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ಸಮಿತಿಗಳ ಸಲಹೆ ಸೂಚನೆ ಪಡೆದು ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು, ಜನಜಾಗೃತಿ ವೇದಿಕೆಯ ಘನತೆ ಯನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

     

    ಜಿಲ್ಲೆಯ ಜನಜಾಗೃತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ರವರಿಗೆ ಜಿಲ್ಲಾನಿರ್ದೇಶಕರು,ಯೋಜನಾಧಿಕಾರಿಗಳು, ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಸಮಿತಿಯ ಪದಾಧಿಕಾರಿಗಳು ಶುಭಕೋರಿದ್ದಾರೆ.

  • ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪ್ರತಿಭಟನೆ

    ಮದ್ದೂರು, ಸಾಗರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಗಣೇಶ ವಿಸರ್ಜನೆ ಹಾಗೂ ಶೋಭಾಯಾತ್ರೆಯ ಮೇಲೆ ಕಲ್ಲುತೂರಾಟ ಮಾಡಿರುವ ಘಟನೆ ಸಂಭವಿಸಿದ್ದು ಅಂತಹ ಕೃತ್ಯಕ್ಕೆ ಮುಂದಾದ ಕಿಡಿಗೇಡಿಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಜರಂಗದಳದ ವಿಭಾಗ ಸಂಯೋಜಕ ನರೇಶ್ ರೆಡ್ಡಿ ಅಗ್ರಹಿಸಿದರು.

    ಮದ್ದೂರಿನ ಗಣೇಶ ವಿಸರ್ಜನೆ ಸಮಯದಲ್ಲಿ ನೆಡೆದಿರುವ ಕಲ್ಲು ತೂರಾಟದ ವಿರುದ್ಧ ಹಾಗೂ ರಾಜ್ಯಾದ್ಯಂತ ಗಣೇಶ ವಿಸರ್ಜನೆಗೆ ತಡೆ ಒಡ್ಡುತ್ತಿರುವುದು ಮತ್ತು ಪ್ರಾಂತ್ಯದ ಅನೇಕ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳ ಪ್ರವೇಶಕ್ಕೆ ನಿಷೇದ ಒಡ್ಡುತ್ತಿರುವುದನ್ನು ಖಂಡಿಸಿ ನಗರದ ತಾಲ್ಲೂಕು ಕಛೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್,ಮತ್ತು ಭಜರಂಗದಳದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ದೇಶದ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ್ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಹಬ್ಬವನ್ನಾಗಿ ಪರಿವರ್ತಿಸಿದರು. ಅಂದಿನಿಂದ ಇಂದಿನವರೆಗೂ ಗಣೇಶೋತ್ಸವವು ಸಾರ್ವಜನಿಕ ಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

    ಆದರೆ ಈ ಬಾರಿ ಗಣೇಶ ಉತ್ಸವ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ವಿಘ್ನ ವಿನಾಶಕನ ಉತ್ಸವಕ್ಕೆ ರಾಜ್ಯ ಸರ್ಕಾರವು ನಿಯಮಗಳ ಕಾರಣ ನೀಡಿ ಅನೇಕ ರೀತಿಯ ವಿಘ್ನಗಳನ್ನು, ಗಣೇಶನ ಭಕ್ತರ ಮೇಲೆ ಹೇರುತ್ತಿದೆ. ಈ ಉತ್ಸವದಲ್ಲಿ ಭಾಗವಹಿಸಲು ವಿಶ್ವ ಹಿಂದೂ ಪರಿಷತ್ತಿನ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರಿಗೆ ಚಿತ್ರದುರ್ಗ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಹಲವು ಕಡೆ ಧ್ವನಿ ವರ್ಧಕಗಳನ್ನು ಬಳಸಲು ನಿಷೇಧ ಹೇರಿದೆ.

    ನಮ್ಮ ರಾಜ್ಯದಲ್ಲಿ ಮದ್ದೂರು, ಸಾಗರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಗಣೇಶ ಶೋಭಯಾತ್ರೆ ಹಾಗೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಮೆರವಣಿಗೆ ಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ. ಇವರ ಮೇಲೆ ರಾಜ್ಯ ಪೊಲೀಸರು ಯಾವುದೇ ಬಲವಾದ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಕಲ್ಲುತೂರಾಟ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಕಲ್ಲು ತೂರುವ ಸ್ಥಳಗಳ ಮೇಲೆ ಡೋನ್ ಕ್ಯಾಮೆರಾ ಅಳವಡಿಸಬೇಕೆಂದು, ರಾಜ್ಯ ಸರ್ಕಾರವನ್ನು ಆಗ್ರಹಿಸಿ, ನಾಳೆಯಿಂದ ಜಿಲ್ಲಾ ಮಟ್ಟದ ಪ್ರತಿಭಟನಾ ಸಭೆ ನಡೆಸಿ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆಗ್ರಹ ಪತ್ರ ನೀಡಲು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನಿರ್ಧರಿಸಿದೆ ಎಂದರು.

    ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ರವಿ ಕುಮಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಗಂಗಾಧರ್, ಭಜರಂಗದಳ ತಾಲೂಕು ಸಂಯೋಜಕ ವಿರಾಜ್, ತಾಲೂಕು ಕಾರ್ಯದರ್ಶಿ ಉಮೇಶ್ ಸೇರಿದಂತೆ ಹಿಂದೂ ಪರ ಸಂಘಟನೆಯ ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹಾಜರಿದ್ದರು.

  • ಡಾ. ಬಾಬು ಜಗಜೀವನ್ ರಾಂ ಭವನದದ ನವೀಕರಣ ಕಾಮಗಾರಿಗೆ ಚಾಲನೆ : ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಧೀರಜ್ ಮುನಿರಾಜು

    ನಗರದ ಡಾ. ಬಾಬು ಜಗಜೀವನ್ ರಾಂ ಭವನದದ ನವೀಕರಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಗುರುವಾರ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ಸರ್ಕಾರಿ ಕಟ್ಟಡಗಳಲ್ಲಿ ಅತಿ ವಿಶಾಲ ಹಾಗೂ ಬೃಹತ್ ಕಟ್ಟಡ ಹೊಂದಿರುವ ಡಾ.ಜಗಜೀವನ್ ರಾಂ ಭವನದಲ್ಲಿ ಹಲವು ಕುಂದು ಕೊರತೆಗಳ ಕಾರಣದಿಂದಾಗಿ ಸಾರ್ವಜನಿಕರ ಸದ್ಬಳಕೆ ಪ್ರಮಾಣ ಕಡಿಮೆಯಾಗಿದೆ, ಹೀಗಾಗಿ ಭವನದಲ್ಲಿನ ಸೌಂಡ್ ಸಿಸ್ಟಮ್, ಅಡಿಗೆ ಸಂಬಂಧಿತ ವಸ್ತುಗಳು, ಮೊಲ್ಡಿಂಗ್ ಸೇರಿದಂತೆ ಇತರ ನೂನ್ಯತೆಗಳನ್ನು ಸರಿಪಡಿಸಲಾಗುವುದು. ಕಾಮಗಾರಿಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಭವನದ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸುವ ಮೂಲಕ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಶೀಘ್ರ ಮುಕ್ತಯಗೊಳಿಸಲಾಗಿವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಶಿವು,ವೆಂಕಟೇಶ್, ವತ್ಸಲಾ, ಹಂಸಪ್ರಿಯ,ವಕೀಲರಾದ ಕಾಂತರಾಜು, ಜೆ ವೈ ಮಲ್ಲಣ್ಣ, ಸಮಾಜದ ಮುಖಂಡರಾದ ರಾಮಮೂರ್ತಿ( ರಾಮು ) ನೇರಳೆಘಟ್ಟ, ಟಿ ಡಿ ಮುನಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

  • Когда «расслабиться» — не лучший совет: мир девушек по вызову и психологические нюансы интим-досуга

    Когда «расслабиться» — не лучший совет: мир девушек по вызову и психологические нюансы интим-досуга

    Знаете ли вы, что согласно исследованиям, проведенным в странах, где проституция легализована, уровень удовлетворенности клиентов часто зависит не столько от физического взаимодействия, сколько от психологического комфорта и эмоциональной связи? Этот факт открывает двери в мир интим-досуга, где городская легенда и мифы о «расслаблении» часто вводят в заблуждение. В этой статье мы погрузимся в уникальный аспект жизни девушек по вызову, которые представляют собой не просто исполнителей услуг, но и личностей, обладающих особыми переживаниями и настроениями. Мы рассмотрим, как они понимают своих клиентов, какую поддержку могут предложить и почему их подход к интимной близости может далеко выходить за рамки простых телесных удовольствий.

    Девушки по вызову: не только физическое удовольствие

    На первый взгляд, кажется, что основная цель вызова девушки — удовлетворить физические потребности клиента. Однако, в мире интим-досуга существуют гораздо более глубокие аспекты, которые многие не осознают. Девушки по вызову зачастую являются не только компаньонками в постели, но и эмоциональными поддержками для мужчин, которые сталкиваются с разными кризисами в своей жизни. Они могут играть роль слушателя, друга или даже советчика, и это важный момент, который стоит учитывать.

    Когда клиент приходит к девушке по вызову, он может ожидать, что она предложит расслабление и лишь физические наслаждения. Но зачастую, многие мужчины приходят не только за этим. Эмоциональный аспект intimate-досуга оказывается гораздо более значимым, чем многие могли бы подумать. Например, мужчины, испытывающие стресс на работе или в личной жизни, могут находить утешение в разговоре с девушкой, которая понимает их проблемы.

    Сложно игнорировать тот факт, что многие вызывают девушек, потому что они хотят избежать осуждения и иллюзий, которые могут возникать в обычных отношениях. В этом контексте девочка по вызову становится не просто доставщиком удовольствий, а своего рода тиллёй — местом, где можно быть собой, не опасаясь осуждения.

    Психология клиентов: что стоит за выбором услуг интим-досуга?

    Интересно, но выбор воспользоваться услугами девушек по вызову может служить знаком многих факторов, которые стоит рассмотреть более подробно. Среди них — одиночество, необходимость быть понятым и даже уход от реальности. Это вызывает вопрос: что движет мужчинами, когда они решают вызвать девушку?

    • Одиночество. Многие современные мужчины чувствуют себя изолированными в обществе, лишены нормальных социальных контактов. Услуги интим-досуга становятся для них выходом из этого порочного круга.
    • Страх интимности. Некоторые мужчины могут быть не готовы к серьезным отношениям и предпочитают краткосрочные связи, которые не несут в себе обязательств.
    • Стресс и давление. В жизни современных людей стресс является постоянным спутником. Услуги девушек по вызову могут стать для них своего рода «отдушиной».

    Когда мужчины понимают, что получение удовольствия — это не единственное, что они ищут, они начинают видеть в девушках по вызову нечто большее. Они оказываются в эмоциональном состоянии, где открываются для новых впечатлений, понимая, что в интим-досуге есть место и для душевных бесед.

    Эмоциональная связь: как она влияет на опыт клиента

    Создание эмоциональной связи между клиентом и девушкой по вызову — это важный аспект, который влияет на общее качество опыта. Данный процесс может быть интуитивным и совершенно не заметным, однако его последствия могут быть довольно значительными. Психологи утверждают, что наличие эмоционального контакта позволяет добиться большего уровня удовлетворенности.

    Сложность заключается в том, что не каждая девушка может уметь наладить подобную связь. Тут играет роль не только умение общаться, но и способность устанавливать доверие. Часто женщины в этой сфере работают с клиентами, которые могут быть замкнутыми и недоверчивыми из-за своего опыта. Умение понимать их потребности и создавать безопасное пространство для общения — это искусство, доступное не всем.

    Примером может служить ситуация, когда клиент приходит с определенной проблемой (например, чувствует себя неуверенно) и с помощью диалога находит поддержку в виде активного слушателя. Это важно, потому что в такие моменты даже одно слово поддержки может иметь огромное значение.

    Границы и ожидания: как правильно взаимодействовать с девушками по вызову

    Важно отметить, что в интим-досуге существуют границы, которые никогда не следует пересекать. Это касается и ожиданий от взаимодействия с девушкой по вызову. Многие мужчины идут на такие встречи, не осознавая, что у каждой девушки есть свои пределы, которые не стоит превышать.

    Зачастую мужчина, вызывая девушку, может считать, что он полностью контролирует ситуацию. Однако такая установка может обернуться стрессом как для клиента, так и для девушки. Поэтому важно четко знать, что ожидать и воспринимать данное взаимодействие как совместное путешествие, в котором обе стороны играют равноправные роли.

    Взаимное уважение не только создает комфорт, но и способствует более глубокому опыту. У многих девушек по вызову есть правила и предпочтения, касающиеся личной безопасности и границ, лучше заранее обсудить эти моменты, чтобы избежать недопонимания.

    Клиенты и стереотипы: разрушение мифов о девушках по вызову

    Существует множество стереотипов о девушках по вызову, которые порой отвратительны и неправдивы. Это создаёт неправильное представление о том, кто они на самом деле и с чем сталкиваются ежедневно. Многие люди ошибочно полагают, что такие женщины имеют низкий уровень интеллекта или моральных принципов. Это не так.

    Девушки по вызову — это часто умные и образованные молодые женщины, которые принимают решение о своей карьере по самым разным причинам. Некоторые из них могут быть студентками, профессионалами в других сферах или просто ищущими способ самовыражения. Это важно понимать, так как стереотипы ограничивают как восприятие клиентов, так и их взаимодействие.

    ishb-me.top

    Умение развенчивать мифы может создать более здоровую атмосферу и помочь обеим сторонам извлечь больше удовольствия из опыта. Существует множество успешных инициатив по повышению осведомленности, которые помогают как клиентам, так и девушкам по вызову понять друг друга и строить более гармоничные отношения.

    Безопасность и ответственность: важные аспекты работы в данной сфере

    Жизнь девушек по вызову также сопряжена с множеством рисков и проблем, связанных с безопасностью. Этой теме стоит уделить свое внимание, ведь она касается не только девушек, но и их клиентов. Установление правил безопасности становится важным шагом в создании комфортной рабочей обстановки для всех участников.

    • Проверка клиентов. Некоторые девушки могут предложить проверку клиента через социальные сети или другие источники. Это помогает предотвратить непредсказуемые ситуации.
    • Обсуждение услуг заранее. Прежде чем начинать взаимодействие, важно четко обсудить предоставляемые услуги и ожидания, чтобы избежать неприятных ситуаций.

    Забота о безопасности создает устойчивую платформу для всех участников и помогает избавиться от многих предрассудков и стереотипов относительно интим-досуга.

    Способы улучшения опыта: как делать встречи запоминающимися

    Улучшение опыта в интим-досуге требует от обеих сторон желания поработать над взаимодействием. Есть множество способов сделать встречу более запоминающейся и продуктивной. Среди них можно выделить несколько подходов:

    • Приятная обстановка. Создание комфортной атмосферы — это основа для хорошей встречи. Это может быть уютный интерьер, мягкий свет и музыка, создающая расслабляющее настроение.
    • Чувствительность к потребностям друг друга. Умение понимать и учитывать потребности партнера — это ключевой аспект интим-досуга.
    • Общение и активное участие. Открытое общение между сторонами может значительно улучшить общий опыт. Не бойтесь обсуждать то, что вам нравится или не нравится.

    Важно помнить, что каждая встреча — это возможность создать что-то уникальное, и чем больше вы об этом заботитесь, тем более удовлетворяющими будут результаты.

    В заключение, мир девушек по вызову неисчерпаем и многообразен. Они способны предложить не только физическое удовольствие, но и эмоциональную поддержку, уверенность и понимание. Учитывая психологию клиентов, их ожидания и предвзятости, становится очевидным, что интим-досуг — это искусство, требующее взаимоуважения и участия. С каждой встречей можно открыть новые грани общения, разрушить стереотипы и сделать шаг к более глубокому пониманию друг друга.

  • ರೈತರ ಹಿತಾಸಕ್ತಿಗಳನ್ನು ಕಾಪಾಡುವುದು, ಕೃಷಿ ಉನ್ನತೀಕರಣ, ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಭಾರತೀಯ ಕಿಸಾನ್ ಸಂಘ ಶ್ರಮಿಸುತ್ತದೆ – ನಾಗರಾಜಯ್ಯ

    ದೊಡ್ಡಬಳ್ಳಾಪುರ:ಭಾರತೀಯ ಕಿಸಾನ್ ಸಂಘದ ಜಿಲ್ಲಾ ಹಾಗು ತಾಲ್ಲೂಕು ಘಟಕದ ವತಿಯಿಂದ ರೈತರ ಆರಾಧ್ಯ ದೈವ ಕೃಷಿಯ ಮೂಲ ಪುರುಷ ಬಲರಾಮ ದೇವರ ಜಯಂತೋತ್ಸವ ಕಾರ್ಯಕ್ರಮ ಅಚರಣೆ ಮಾಡಲಾಯಿತು.

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಆಚರಣೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ರವರು ಬಲರಾಮ ದೇವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಭಾರತೀಯ ಕಿಸಾನ್ ಸಂಘ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೈದ್ಧಾಂತಿಕವಾಗಿ ಸಂಬಂಧ ಹೊಂದಿರುವ ಭಾರತದ ಅತಿದೊಡ್ಡ ರೈತ ಸಂಘಟನೆಯಾಗಿದೆ. ಇದನ್ನು 1978 ರಲ್ಲಿ ದತ್ತೋಪಂತ್ ಥೇಂಗಡಿ ಅವರು ಸ್ಥಾಪಿಸಿದ ಈ ಸಂಘಟನೆಯು ರೈತರ ಹಿತಾಸಕ್ತಿಗಳನ್ನು ಕಾಪಾಡುವುದು, ಕೃಷಿ ಉನ್ನತೀಕರಣ, ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ. ಇದು ರಾಜಕೀಯ ರಹಿತ ಸಂಸ್ಥೆಯಾಗಿದೆ ಎಂದರು.

     

     

    ಭಾರತವು ಕೃಷಿ ಪ್ರಧಾನ ದೇಶ, ಆದರೆ ಗ್ರಾಮೀಣ ಜನಸಂಖ್ಯೆಯ ಸುಮಾರು 70% ರಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದೆ, ರೈತ ವಿರೋಧಿ ಕಾನೂನುಗಳು, ಹೆಚ್ಚಿನ ಸಾಲದ ಹೊರೆ, ಕಳಪೆ ಸರ್ಕಾರಿ ನೀತಿ, ಸಬ್ಸಿಡಿಗಳಲ್ಲಿನ ಭ್ರಷ್ಟಾಚಾರ, ಬೆಳೆ ವೈಫಲ್ಯ, ಮಾನಸಿಕ ಆರೋಗ್ಯ, ವೈಯಕ್ತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆ ಗಳಿಂದ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅದರೆ ಇಂತಹ ಸಮಸ್ಯೆಗಳನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಅದರಿಂದ ಸಂಘಟನೆಯ ಮೂಲಕ ನಮ್ಮ ಹಕ್ಕು ಪಡೆಯಬೇಕಾದರೆ ರೈತರು ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಾದ್ಯ ಎಂದರು.

    ಭಾರತೀಯ ಕಿಸಾನ್ ಸಂಘ ತಾಲ್ಲೂಕು ಅಧ್ಯಕ್ಷ ನೆಲ್ಲುಗುದಿಗೆ ಚಂದ್ರು ಮಾತನಾಡಿ ವ್ಯವಸಾಯ ಅಧಿಕ ಶ್ರಮ ಕಡಿಮೆ ಪ್ರತಿಫಲ ಎನ್ನುವ ಹಂತ ತಲುಪಿದೆ.ಹಾಗಾಗಿ ರೈತರು ಹಾಗೂ ಕಾರ್ಮಿಕ ವರ್ಗ ವ್ಯವಸಾಯ ಬಿಟ್ಟು ನಗರದ ಕಡೆ ಮುಖಮಾಡಿ ಅಂಗಡಿ ಮಂಗಟ್ಟುಗಳು ಮಾಡಿಕೊಂಡು ವ್ಯವಸಾಯದ ಕೆಲಸ ಮರೆಯುವ ಸ್ಥಿತಿಗೆ ತಲುಪಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ಒಂದಿಷ್ಟು ವೇತನ ಹಾಗು ಆರೋಗ್ಯ ಕವಚ ಜೊತೆಯಲ್ಲಿ ಕಾರ್ಮಿಕ ನಿಧಿ ಯಿಂದ ನಿವೃತ್ತಿ ಸಮಯದಲ್ಲಿ ಸಹಾಯವಾಗುತ್ತೆ ಎಂದು ವ್ಯವಸಾಯಮರೆತು ಜೀವನ ಸಾಗಿಸಲು ಮುಂದಾಗಿದ್ದಾರೆ ಎಂದರು.

     

    ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಅಂಜೀನಪ್ಪ,ಮಹಿಳಾ ಪ್ರಮುಖರಾದ ಅಂಬಿಕಾ, ತಾಲ್ಲೂಕು ಪ್ರದಾನ ಕಾರ್ಯದರ್ಶಿ ರಾಜಘಟ್ಟ ಗಣೇಶ್,ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರಾದ ಗೀತಾ ಹಾಗು ಗೂಳ್ಯ ಶಿವಣ್ಣ ಹಾಗೂ ಮತ್ತಿತರರು ಹಾಜರಿದ್ದರು.

  • ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ 1972 ನೇ ಮಧ್ಯವರ್ಜನ ಶಿಬಿರ ಸಮಾರೋಪ ಸಮಾರಂಭ : ಗುಣಮುಖರಾದ ಮದ್ಯವ್ಯಾಸನಿಗಳಿಗೆ ಗಣ್ಯರಿಂದ ಶುಭ ಹಾರೈಕೆ

    ಸಮಾಜದಲ್ಲಿ ವ್ಯಸನಕ್ಕೆ ಬಲಿಯಾಗಿ ತನ್ನ ಜೀವ ಮತ್ತು ಜೀವನವನ್ನು ಹಾಳುಮಾಡಿಕೊಳ್ಳುವಂತಹ ವ್ಯಕ್ತಿಗಳ ಮನಃಪರಿವರ್ತನೆ ಮಾಡುವ ಮೂಲಕ ಮದ್ಯವ್ಯಾಸನಿಗಳಿಗೆ ಒಂದು ಕುಟುಂಬವನ್ನು ಕಟ್ಟುವಂತಹ ಪರಿಕಲ್ಪನೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ನೆಡೆಸಲಾಗುತ್ತಿದೆ ಎಂದು ಯೋಜನಾಧಿಕಾರಿ ತಿಮ್ಮಯ್ಯ ನಾಯಕ್ ತಿಳಿಸಿದರು.

     

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ಆಯೋಜನೆ ಮಾಡಲಾಗಿದ್ದ 1972 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮಧ್ಯವರ್ಜನ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನೆಡೆಯುತ್ತಿರುವ ಸಮಾಜದ ಮಾದರಿ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿದ್ದು ಈ ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ನೊಂದ ಕುಟುಂಬಗಳು ನೆಮ್ಮದಿಯ ಬದುಕು ನಡೆಸುವಂತಾಗಿದೆ, ಅಲ್ಲದೇ ಕುಡಿತದ ಚಟಕ್ಕೆ ಬಲಿಯಾಗಿ ಜೀವನ ಮೌಲ್ಯ ಮರೆತ ಎಷ್ಟೋ ಜನರಿಗೆ ಮತ್ತೆ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಮಾರ್ಗದರ್ಶನ ನೀಡಿದೆ ಎಂದರು.

     

    ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಒಂದು ಧಾರ್ಮಿಕ ಕ್ಷೇತ್ರವಾಗಿ ಉಳಿಯದೆ. ಯಾವುದೇ ಜಾತಿ ಭೇದವಿಲ್ಲದೆ ಸಮಾಜದಲ್ಲಿ ಪ್ರತಿಯೊಂದು ಸಮುದಾಯವು ತನ್ನದೇ ಆದ ಬದುಕು ಕಟ್ಟಿಕೊಳ್ಳಲು ಹಲವು ರೀತಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ .

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಗುಡಿ ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ರೂಪಿಸಿದೆ , ಇಂದು ಈ ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ನೊಂದ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಲಿವೆ ಇಂತಹ ಮತ್ತಷ್ಟು ಕಾರ್ಯಕ್ರಮಗಳು ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

    ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಮಾತನಾಡಿ ಮದ್ಯಪಾನದ ಚಟಕ್ಕೆ ಬಲಿಯಾಗಿ ಹಲವಾರು ಸಮಸ್ಯೆಗಳಿಂದ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು,ಅಂತಹ ಕುಟುಂಬಗಳ ಅಭಿವೃದ್ಧಿ ಹಾಗೂ ಮದ್ಯವ್ಯಾಸನಿಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಮಧ್ಯವರ್ಜನ ಶಿಬಿರ ಸಹಕರಿಯಾಗಿದೆ.

     

    ಈ ಶಿಬಿರದಲ್ಲಿ ಮದ್ಯ ವ್ಯಸನಕ್ಕೆ ಬಲಿಯಾಗಿದ್ದ 50 ಜನರನ್ನು ಗುಣಪಡಿಸಲಾಗಿದೆ. ಅಂದರೆ ಈ ಶಿಬಿರದಿಂದಾಗಿ 50 ಕುಟುಂಬಗಳು ನೆಮ್ಮದಿಯ ಜೀವನ ನಡೆಸಲಿವೆ. ಮಧ್ಯವರ್ಜನ ಶಿಬಿರವು ಯಾವುದೇ ಅಡ್ಡಿ ಆತಂಗಗಳಿಲ್ಲದೆ ಸುಸೂತ್ರವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇವೆ ಎಂದರು.

     

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ತಾ.ನ.ಪ್ರಭುದೇವ್,ನಿವೃತ್ತ ಶಿಕ್ಷಕರಾದ ಕೆ.ಮಹಲಿಂಗಯ್ಯ, ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ, ಕಂಟನಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭರಾಜ್ ಗೋಪಾಲ್, ಜಿಲ್ಲಾ ಜನಜಾಗೃತಿ ಸದಸ್ಯರಾದ ವಾಣಿ, ಮಮತ, ಪುಷ್ಪ,ಧರ್ಮೆಂದ್ರ, ರಮೇಶ್,ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ದಿನೇಶ್, ಶಿಬಿರಾಧಿಕಾರಿ ದೇವಿಪ್ರಸಾದ್,ಮೇಲ್ವಿಚಾರಕರಾದ ಲೋಹಿತ್ ಗೌಡ, ಸೇರಿದಂತೆ ಸೇವಾಪ್ರತಿನಿಧಿಗಳು ನವಜೀವನ ಸಮಿತಿ ಸದಸ್ಯರು ಹಾಜರಿದ್ದರು.

  • ಒಳಮೀಸಲಾತಿ ಅನ್ಯಾಯ ಕುರಿತು ರಾಜ್ಯ ಸರ್ಕಾರದ ವಿರುದ್ದ ಸೆ.10ನೇ ತಾರೀಕಿನಂದು ಪ್ರತಿಭಟನೆ ಕೈಗೊಳ್ಳಲಿದ್ದೇವೆ – ಒಬದೇನಹಳ್ಳಿ ಮುನಿಯಪ್ಪ

    ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ಅವೈಜ್ಞಾನಿಕವಾದದ್ದು ಎಂದು ಆರೋಪಿಸಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ. 1 ಮೀಸಲಾತಿ ಕೊಡಬೇಕು. ಬೋವಿ ಕೊರಚಾ ಕೊರಮ ಲಂಬಾಣಿ ಸಮುದಾಯಗಳಿಗೆ ಕನಿಷ್ಠಪಕ್ಷ ಶೇ. 5 ಒಳ ಮೀಸಲಾತಿ ಘೋಷಿಸಬೇಕು ಎಂದು ಅಗ್ರಹಿಸಿ ರಾಜ್ಯ ಸರ್ಕಾರದ ವಿರುದ್ದ ಸೆಪ್ಟೆಂಬರ್ 10ನೇ ತಾರೀಕಿನಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಭಾರತೀಯ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ಒಬದೇನಹಳ್ಳಿ ಮುನಿಯಪ್ಪ ತಿಳಿಸಿದರು.

     

     

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಹಲವು ವರ್ಷಗಳ ಹೋರಾಟಕ್ಕೆ ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಒಳ ಮೀಸಲಾತಿ ಜಾರಿಗೊಳಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಧುಸ್ವಾಮಿಯವರ ನೇತೃತ್ವದಲ್ಲಿ ಒಳ ಮೀಸಲಾತಿ ಕುರಿತು ಎಡಗೈ ಸಮುದಾಯಕ್ಕೆ ಶೇ. 6 ಬಲಗೈ ಸಮುದಾಯಕ್ಕೆ ಶೇ.5.5, ಭೋವಿ,ಕೊರಚಾ, ಕೊರಮ, ಲಂಬಾಣಿ ಸೇರಿದಂತೆ ಇತರೆ ಸಮುದಾಯಗಳಿಗೆ ಶೇ.4.5 , ಹಾಗೂ ಅಲೆಮಾರಿ ಸಮುದಾಯಕ್ಕೆ ಶೇ.1 ನೀಡುವಂತೆ ಸಮಿತಿ ಶಿಫಾರಸ್ಸು ಮಾಡಿತ್ತು. ಸಮಿತಿಯ ಶಿಫಾರಸ್ಸನ್ನು ಯಥಾವತ್ತಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಕೂಡ ಸರ್ಕಾರಕ್ಕೆ ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು . ಅಲ್ಲದೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಯಾವುದೇ ಶಿಫಾರಸ್ಸುಗಳನ್ನು, ಆದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದಂತೆ ಒಳ ಮೀಸಲಾತಿ ಜಾರಿಗೊಳಿಸಿದ್ದು ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲಕ್ಕೆ ಕಾರಣವಾಗಿದೆ.

    ಈ ಒಳ ಮೀಸಲಾತಿ ಜಾರಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ ಕಾರಣ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ. 1 ಒಳ ಮೀಸಲಾತಿ ನೀಡಬೇಕಿದೆ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು

     

    ಬೋವಿ ಸಮಾಜ ಒಳಗೊಂಡಂತೆ ಇತರ ಸಮುದಾಯಗಳಿಗೆ ಕನಿಷ್ಠ ಪಕ್ಷ ಶೇ. 5 ಒಳ ಮೀಸಲಾತಿ ಜಾರಿಗೊಳಿಸಬೇಕಿದೆ ನಮ್ಮ ಭೋವಿ ಸಮುದಾಯದ ಜೊತೆಗೆ ಸುಮಾರು 59 ಉಪಜಾತಿಗಳನ್ನು ಸೇರಿಸಲಾಗಿದೆ ಎಂದರು.ಪ್ರಸ್ತುತ ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ನಾವು ಸ್ವಾಗತಿಸುತ್ತೇವೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ತಳ ಸಮುದಾಯಗಳಿಗೆ ಜನಸಂಖ್ಯೆ ಆದರದ ಮೇಲೆ ಈಗ ನಿಗದಿ ಮಾಡಿರುವ ಮೀಸಲಾತಿಯನ್ನು ಶೇಕಡಾ ಒಂದರಷ್ಟು ಹೆಚ್ಚಳ ಮಾಡಿ ತೀರಾ ಕೆಳ ಸಮುದಾಯಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕೆಂದು ನಮ್ಮ ಒತ್ತಾಯವಿದೆ ಎಂದು ಓಬದೇನಹಳ್ಳಿ ಮುನಿಯಪ್ಪ ಹೇಳಿದರು.

     

    ಕೊರಮ ಕೊರಚ ಸಮುದಾಯದ ಮುಖಂಡ ಬಿ ಜಿ ಗೋವಿಂದ ರಾಜು, ಭೋವಿ ಸಮುದಾಯದ ಮುಖಂಡಬಸವರಾಜು, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಮಾರುತಿ,ಲಂಬಾಣಿ ಸಮುದಾಯದ ಮುಖಂಡ ಅಂಜನಾ ನಾಯಕ್, ಮಂಜುನಾಥ್ ನಾಯಕ್ ಸೇರಿದಂತೆ ಹಲವರು ಹಾಜರಿದ್ದರು.