Blog

  • ಸಂಘಟನೆಯನ್ನು ಬಲಪಡಿಸುವ ಮೂಲಕ ದಲಿತರ ಧ್ವನಿಯಾಗಿ ಹೋರಾಟ ನಡೆಸಲಿದ್ದೇವೆ – ನಾಗಮಂಗಲ ವೆಂಕಟೇಶ್

    ದೊಡ್ಡಬಳ್ಳಾಪುರ  ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿದ್ದು . ಪ್ರತಿ ತಾಲೂಕಿನಲ್ಲೂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯ ವಿವಿಧ ಸಹ ಸಮಿತಿಗಳನ್ನು ರಚಿಸುವ ಇಂದು ಚರ್ಚಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ನಾಗಮಂಗಲ ವೆಂಕಟೇಶ್ ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಜಿಲ್ಲಾ ಸಂಚಾಲಕರಾದ ರಾಮಮೂರ್ತಿ (ರಾಮು) ನೇರಳಘಟ್ಟ ನೇತೃತ್ವದಲ್ಲಿ ಸಂಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಪ್ರಬಲವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ . ರಾಜ್ಯ ಸಮಿತಿಯು ಸಮಿತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಪ್ರತಿ ತಾಲೂಕಿನ ವ್ಯಾಪ್ತಿಗೆ ಉಪ ಸಮಿತಿಗಳ ರಚನೆಗೆ ಮುಂದಾಗಿದೆ , ತಾಲೂಕು ಸಮಿತಿ,ಕಾರ್ಯಕಾರಿ ಸಮಿತಿ,ಮಹಿಳಾ ಸಮಿತಿ,ನೌಕರರ ಸಮಿತಿ,ವಿದ್ಯಾರ್ಥಿ ಸಮಿತಿ ,ಅಲ್ಪಸಂಖ್ಯಾತರ ಸಮಿತಿ, ಕಲಾತಂಡ ಸಮಿತಿಗಳಿಗೆ ಅರ್ಹ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯ ಕುರಿತಂತೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ತಾಲೂಕುಗಳಿದ್ದು ಪ್ರತಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಜಿಲ್ಲಾ ಸಂಚಾಲಕರಾದ ರಾಮಮೂರ್ತಿ (ರಾಮು) ನೇರಳಘಟ್ಟ ರವರಿಗೆ ವಹಿಸಲಾಗಿದೆ. ಸಂಘಟನೆಯಿಂದ ಮತ್ತಷ್ಟು ಸಮಾಜಮುಖಿ ದಲಿತಪರ ಹೋರಾಟಗಳು ನಡೆಯಬೇಕಿದೆ. ಜಿಲ್ಲೆಯಲ್ಲಿ ರೈತರ ಸಾಗುವಳಿ ಚೀಟಿ ವಿತರಣಾ ಸಮಸ್ಯೆ, ವಸತಿ ಸಮಸ್ಯೆ, ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು ಇವುಗಳ ವಿರುದ್ಧವಾಗಿ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ ಎಂದರು.

     

    ರಾಜ್ಯ ಸಮಿತಿ ಸದಸ್ಯ ನೆಲಮಂಗಲ ಬಸವರಾಜು ಮಾತನಾಡಿ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಅವರ ಆದೇಶದ ಮೇರೆಗೆ ಇಂದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡ ಸಭೆ ಕರೆಯಲಾಗಿದೆ, ಜಿಲ್ಲೆ ಮತ್ತು ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಇಂದು ಸರ್ವ ಮುಖಂಡರ ಸಭೆ ಕರೆಯಲಾಗಿದೆ, ರಾಜ್ಯ ಸಂಚಾಲಕರ ಆದೇಶದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕಿನಾದ್ಯಂತ ಸಂಘಟನೆಯನ್ನು ಬಲಪಡಿಸಿ ಸಮುದಾಯಕ್ಕೆ ಉತ್ತಮ ಸೇವೆ ಸಲ್ಲಿಸಲು ಪದಾಧಿಕಾರಿಗಳಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ , ಕೇವಲ ಸಂಘಟನೆಯನ್ನು ಬಲಪಡಿಸುವುದಷ್ಟೇ ಅಲ್ಲದೆ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ ನಮ್ಮ ಸಮಿತಿ ವತಿಯಿಂದ ನಡೆಯುತ್ತಿದೆ ಎಂದರು.

    ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನ ಸಂಚಾಲಕರು ಬಸವರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನ ಸಂಚಾಲಕರು ಜಿ.ನರಸಿಂಹಮೂರ್ತಿ,ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಬೈಲಾಂಜಿನಮೂರ್ತಿ, ಎನ್.ನರಸಿಂಹಮೂರ್ತಿ,ಮನೋಜ್.ವಿ, ನಾಗರತ್ನಮ್ಮ ಮಲ್ಲೋಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ, ಹನುಮಂತಯ್ಯ, ಹನುಮಯ್ಯ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಂದಿಗುಂದ ಮೈಲಾರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • ಸಿಪಿಐ(ಎಂ) ಪಕ್ಷದ ಮುಖಂಡರಿಂದ ಸುದ್ದಿಗೋಷ್ಠಿ : ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ ಮಾಡಲು ಅಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನವೆಂಬರ್ 19ರಂದು ಪ್ರತಿಭಟನೆ

    ದೊಡ್ಡಬಳ್ಳಾಪುರ : ಕಾಮಗಾರಿ ಮುಗಿದು 2 ವರ್ಷ ಪೂರೈಸಿರುವ ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ ಮಾಡಲು ಮತ್ತು ಕಾರ್ಮಿಕರ ಇ.ಎಸ್.ಐ/ಪಿಎಫ್‌ಗಳ ವೇತನ ಮಿತಿ ತೆಗೆಯಲು ಆಗ್ರಹಿಸಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ನವೆಂಬರ್ 19ರಂದು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ತಿಳಿಸಿದರು.

     

    ತಾಲ್ಲೂಕಿನ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ಕಚೇರಿಯಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

    ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಆರಹಳ್ಳಿ ಗುಡ್ಡದಹಳ್ಳಿ ಅಪೇರಲ್ ಪಾರ್ಕ್ ಎರಡನೇ ಹಂತದಲ್ಲಿ 100 ಹಾಸಿಗೆಗಳ ಸಾಮರ್ಥ್ಯವಿರುವ ಮಲ್ಟಿ ಸ್ಪೆಷಾಲಿಟಿ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆಯು ಸುಮಾರು 85 ಕೋಟಿ ಯೋಜನೆ ವೆಚ್ಚದಲ್ಲಿ (ಸಲಹಾ ವೆಚ್ಚ ಮತ್ತು ಇತರೆ ಖರ್ಚುಗಳನ್ನು ಹೊರತುಪಡಿಸಿ) ನಿರ್ಮಾಣವಾಗಿದೆ. ಇ.ಎಸ್.ಐ. ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಗಣ್ಯರು ತಮ್ಮ ಭಾಷಣಗಳಲ್ಲಿ ಆಸ್ಪತ್ರೆ 2 ವರ್ಷಗಳಲ್ಲಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದರು. ಆದರೆ 11 ವರ್ಷಗಳು ಕಳೆದರೂ ಸಹ ಉದ್ಘಾಟನೆಯಾಗಿಲ್ಲ ಎಂಬುದು ವಿಷಾದನೀಯ, ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಉದ್ಘಾಟನೆ ಮಾಡಿ, ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸೇವೆ ಒದಗಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

     

     

    ಮುಖಂಡರಾದ ಪಿ ಎ ವೆಂಕಟೇಶ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಮಿಕರು ಅನಾರೋಗ್ಯದ ಸಂದರ್ಭಗಳಲ್ಲಿ ಬೆಂಗಳೂರು ನಗರಕ್ಕೆ ಅಲೆಯುವಂತಾಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿರುವ ಹಣ ಕಾರ್ಮಿಕರ ಸಂಬಳದಲ್ಲಿ, ಪ್ರತಿ ತಿಂಗಳು ಕಡಿತ ಮಾಡುವ ಹಣ, ಸರ್ಕಾರ ಇದಕ್ಕಾಗಿ ಬಿಡಿಗಾಸು ಸಹ ವೆಚ್ಚ ಮಾಡುವುದಿಲ್ಲ. ಆಸ್ಪತ್ರೆ ನಿರ್ಮಾಣ ಕಾರ್ಯವು ಮುಗಿದು ಎರಡು ವರ್ಷ ಕಳೆದರೂ ಸಹ ಇನ್ನೂ ಉದ್ಘಾಟನೆಯಾಗಿಲ್ಲ ಎಂದರು.

    ಸರ್ಕಾರ ರೂಪಿಸಿರುವ ನೂತನ ಕಾಯ್ದೆಯಲ್ಲಿ ಕಾರ್ಮಿಕರ ವೇತನ 21000 ರೂ. ದಾಟಿದರೆ ಇ ಎಸ್ ಐ ಸೌಲಭ್ಯದಿಂದ ವಂಚಿತರಾಗುತ್ತಾರೆ, ಈ ಬೆಲೆ ಏರಿಕೆಯ ಸಂದರ್ಭದಲ್ಲಿ ಆರೋಗ್ಯದ ವೆಚ್ಚ ದುಬಾರಿಯಾಗಿದೆ. ಆದ್ದರಿಂದ ಕಾರ್ಮಿಕರ ವೇತನದ ಮಿತಿಯನ್ನು ತೆಗೆಯಬೇಕು ಎಲ್ಲಾ ಕಾರ್ಮಿಕರಿಗೂ ಉತ್ತಮವಾದ ಆರೋಗ್ಯಸೇವೆ ಸಿಗಬೇಕು ಎಂದರು.

     

    ಪಕ್ಷದ ಮುಖಂಡರಾದ ಪ್ರಭಾ ಬೆಳವಂಗಲ ಮಾತನಾಡಿ ಜಿಲ್ಲೆಯಲ್ಲಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ, ಕೃಷಿ ಭೂಮಿಯನ್ನು ರೈತರಿಗೆ ಉಳಿಸುವ ನಿಟ್ಟಿನಲ್ಲಿ ಹಾಗೂ ವಸತಿಹೀನರಿಗೆ ವಾಸಯೋಗ್ಯ ಖಾಯಂ ಮನೆಗಳನ್ನು ಕಟ್ಟಿಸಿಕೊಡಲು ಒತ್ತಾಯಿಸಿ ತಾಲೂಕಿನ ಏಸಿ ಕಚೇರಿ ಮುಂಭಾಗ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ . ಸಿಪಿಐ(ಎಂ) ಪಕ್ಷವು ಸದಾ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ, ಅಂಗನವಾಡಿ ನೌಕರರಿಗೆ, ಆಟೋ ಚಾಲಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಕಟ್ಟಡ ಕಾರ್ಮಿಕರಿಗೆ, ನೇಕಾರರಿಗೆ ಸೇರಿದಂತೆ ಇನ್ನೂ ಮುಂತಾದ ವಿಭಾಗಗಳಲ್ಲಿ ದುಡಿಯುವ ಕಾರ್ಮಿಕರ ಧ್ವನಿಯಾಗಿ ಶ್ರಮಿಸುತ್ತದೆ ಎಂದರು.

     

     

    ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಆರ್. ಚಂದ್ರ ತೇಜಸ್ವಿ, ಎಸ್. ರುದ್ರರಾಧ್ಯ, ಪ್ರಭಾ ಬೆಳವಂಗಲ, ವೆಂಕಟರಾಜು, ಪಿ ಎ ವೆಂಕಟೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಬಿರ್ಸಾ ಮುಂಡಾ ಅವರ ಸಾಹಸ, ಧೈರ್ಯ, ನಾಯಕತ್ವ ಯುವಕರಿಗೆ ಸ್ಫೂರ್ತಿ : ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್

    ಬೆಂ.ಗ್ರಾ. ಜಿಲ್ಲೆ, ನ.15 : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಬ್ರಿಟಿಷರ ವಸಹಾತುಶಾಹಿ ಶೋಷಣೆಯ ವಿರುದ್ಧ ಸಿಡಿದೆದ್ದು ಹೋರಾಡಿದರು. ಇಂದಿನ ಯುವ ಸಮೂಹಕ್ಕೆ ಇವರ ಧೈರ್ಯ, ನಾಯಕತ್ವ ಗುಣಗಳು ಸ್ಪೂರ್ತಿಯಾಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಪ್ರಯುಕ್ತ ಬಿರ್ಸಾ ಮುಂಡಾ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಗೌರವ ನಮನ ಸಲ್ಲಿಸಿದರು.

    ನಂತರ ಮಾತನಾಡಿದ ಅವರು 1890 ರ ದಶಕದಲ್ಲಿ ಬಿರ್ಸಾ ಮುಂಡಾ ಅವರು 25ನೇ ವಯಸ್ಸಿಗೆ ಬ್ರಿಟಿಷರ ಶೋಷಣೆಯ ವಿರುದ್ಧ ಹೋರಾಟ ಮಾಡಿದವರು. ಬ್ರಿಟಿಷ್‌ ಅಧಿಕಾರಿಗಳು ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಶೋಷಣೆಗೆ ಮುಂದಾದಾಗ ಅವರ ಭೂಮಿ, ಆಚಾರ, ವಿಚಾರಗಳ ಮೇಲೆ ದೌರ್ಜನ್ಯ ಎಸೆಗುತ್ತಿದ್ದಾಗ, ಅದರ ವಿರುದ್ಧ ಸಿಡಿದ್ದೆದ್ದು ತಮ್ಮ ಹಕ್ಕುಗಳಿಗೆ ಹೋರಾಡಲು ನಾಯಕತ್ವ ವಹಿಸಿಕೊಂಡು ಹೋರಾಡಿದರು. ಹಾಗಾಗಿ ಅವರ ಜನ್ಮದಿನವನ್ನು ಸ್ಮರಣಾರ್ಥ ”ಜನ್ ಜಾತಿಯ ಗೌರವ್ ದಿವಸ್” ಎಂದು ಆಚರಿಸಲಾಗುತ್ತದೆ. ಇತಿಹಾಸದಲ್ಲಿ ಇವರ ಧೈರ್ಯ, ಸಾಹಸ ಮತ್ತು ನಾಯಕತ್ವದ ಗುಣಗಳು ಯುವಕರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಾಂಡುರಂಗ, ಜಿಲ್ಲಾಧಿಕಾರಿಗಳ ಕಛೇರಿ ಸಹಯಕರಾದ ರಾಜೀವ್ ಸುಲೋಚನ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಅಂತರಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ : ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ನೂರಾರು ಗ್ರಾಮಸ್ಥರು ಭಾಗಿ

    ದೊಡ್ಡಬಳ್ಳಾಪುರ ( ನ. 14) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಇಂದು(ನ. 14) ಕಂಟನಕುಂಟೆ ವಲಯದ ಅಂತರಹಳ್ಳಿ ಗ್ರಾಮದ ಸುಮಾರು 200 ವರ್ಷ ಇತಿಹಾಸವಿರುವ ಗ್ರಾಮದ ಕೆರೆಯನ್ನು ” ನಮ್ಮೂರು ನಮ್ಮ ಕೆರೆ ” ಕಾರ್ಯಕ್ರಮದ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಯನ್ನು ಕೈಗೊಳ್ಳಲಾಗಿದ್ದು ಇಂದು ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು

    ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕರಾದ ಉಮಾರಬ್ಬ, ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯಕ್,ಕೆರೆ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಹಾಗೂ ಸ್ಥಳೀಯ ಪ್ರಮುಖರು ನೆರವೇರಿಸಿದರು,

     

    ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 48 ಕಾರ್ಯಕ್ರಮಗಳಲ್ಲಿ ಅದರಲ್ಲಿ ವಿಶೇಷವಾಗಿ ನಮ್ಮೂರು ನಮ್ಮ ಕೆರೆ ಕೆರೆಗಳ ಪುನರ್ ಚೇತನ ಕಾರ್ಯಕ್ರಮವನ್ನು 2016 ರಿಂದ ಜಾರಿಗೆ ತರಲಾಯಿತು. ಅನೇಕ ರೈತ ಕುಟುಂಬಗಳು ಧರ್ಮಸ್ಥಳಕ್ಕೆ ಬಂದು ಪೂಜ್ಯರಲ್ಲಿ ಮತ್ತು ಬರಗಾಲದ ಬಗ್ಗೆ ಅಳಲನ್ನು ತೋಡಿಕೊಂಡಿರುತ್ತಾರೆ ಅದರಂತೆ ವೀರೇಂದ್ರ ಹೆಗ್ಗಡೆಯವರು ಈ ಬಗ್ಗೆ ಯೋಜನೆಯ ಕಾರ್ಯಕರ್ತರ ಮೂಲಕ ಅಧ್ಯಯನ ನಡೆಸಿ ಕೆರೆಗಳ ಸದುಪಯೋಗ, ಉಪಯೋಗ ಪಡೆದು ರೈತರು ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂಥಾಗಲು ಹಾಗೂ ಜನರಲ್ಲಿ ಜಲ ಸಮೃದ್ಧಿಯಾಗಲು ಕೆರೆ ಹೂಳೆತ್ತಿ ಅಭಿವೃದ್ಧಿ ಮಾಡಲು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.

     

    ನಿರ್ಗತಿಕ ಕುಟುಂಬಗಳಿಗೆ ಮಾಸಿಕ 1000 ರೂಗಳ ಮಸಾಸನ ವನ್ನು ರಾಜ್ಯದಲ್ಲಿ ಸುಮಾರು 15,000 ಕುಟುಂಬಗಳಿಗೆ ನೀಡಲಾಗುತಿದೆ ಅಲ್ಲದೆ ವಾತ್ಸಲ್ಯ ಕಾರ್ಯಕ್ರಮದಿಂದ ಇವರಿಗೆ ಮನೆ ಕಟ್ಟಿಕೊಡಗುಲಾಗುತಿದೆ, ವೃತ್ತಿಪರ ಕೋರ್ಸ್ ಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಾಸಿಕ 700 ರಿಂದ 1000 ಸಾವಿರು ರೂ ಸುಮಾರು 55000 ಸಾವಿರ ಕೋಟಿ ರೂ ವಿನಿಯೋಗಿಸಲಾಗಿದೆ, ಸಮುದಾಯ ಅಭಿವೃದ್ಧಿಗಳಾದ ದೇವಸ್ಥಾನ ಜೀರ್ಣೋದ್ಧಾರ, ಹಿಂದೂ ರುದ್ರ ಭೂಮಿಯ ಅಭಿವೃದ್ಧಿ, ಶುದ್ಧಗಂಗಾ ಕುಡಿಯುವ ನೀರು, ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆ , ಜನಮಂಗಳ ಕಾರ್ಯಕ್ರಮದ ಮೂಲಕ ವಿಕಲಚೇತನರಿಗೆ ವಿವಿಧ ಉಪಕರಣಗಳ ವಿತರಣೆ ಇತ್ಯಾದಿ ವಿಶೇಷ ಯೋಜನೆಗಳ ಸೌಲಭ್ಯವನ್ನು ಧರ್ಮಸ್ಥಳ ಯೋಜನೆಯು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

     

    ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯ್ಕ್ ಮಾತನಾಡಿ ಜೀವಜಲ ಕಾಪಾಡಿದರೆ ಮಾತ್ರ ನಮ್ಮ ಜೀವವೈವಿಧ್ಯವನ್ನು ಉಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸಿಕೊಂಡು ರಾಜ್ಯಾದ್ಯಂತ ಕೆರೆಗಳಿಗೆ ಕಾಯಕಲ್ಪ ನೀಡುವ ಧರ್ಮಸ್ಥಳ ಯೋಜನೆಯ ದಿಟ್ಟ ಹೆಜ್ಜೆ ಇದಾಗಿದೆ ಎಂದರು.

    ಯೋಜನೆಯ ಅಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದರು 

     

    ಕೆರೆ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಮಾತನಾಡಿ ನೀರು ಅತ್ಯ ಅಮೂಲ್ಯವಾದದ್ದು ಜೀವ ಜಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಕಾರ್ಯಾ ಶ್ಲಾಘನೀಯವಾದದ್ದು ಎಂದು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರಾದ ಗಿರೀಶ್ ಮತ್ತು ಕೃಷಿ ಮೇಲ್ವಿಚಾರಕರಾದ ಲೋಹಿತ್, ಸೇವಾಪ್ರತಿನಿಧಿಗಳು,ಊರಿನ ಪ್ರಮುಖರಾದ ಪ್ರಕಾಶ್,ಶಿವಣ್ಣ,ಬೈಯಣ್ಣ,ಮುನಿರತ್ನಮ್ಮ,ಪುಟ್ಟರಾಜು,ಮುನಿರಾಜು,ಚನ್ನಾರಾಮಯ್ಯ, ಸೇರಿದಂತೆ ಗ್ರಾಮಸ್ಥರು ಹಾಗೂ ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • ಶಾಸಕರು ಹಿಂಬಾಲಕರಿಗೆ ಬುಧ್ಧಿ ಹೇಳಲಿ: ದೊಡ್ಡತುಮಕೂರು ಕಾಂಗ್ರೆಸ್, ಜೆಡಿಎಸ್ ಮುಖಂಡರ ಆಗ್ರಹ.

    ದೊಡ್ಡಬಳ್ಳಾಪುರ : ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಮಾಡಿ ಮಾರನೇ ದಿನ ಅಣ್ಣತಮ್ಮಂದಿರಂತೆ ಇದ್ದ ದೊಡ್ಡತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಲ್ಲಿ ರಾಜಕೀಯ ದ್ವೇಷ, ಅಸೂಯೆ ಮೂಡುವಂತೆ ಮಾಡುವಲ್ಲಿ ಶಾಸಕರು ನೇರವಾಗಿ ಅಥವಾ ಅವರ ಕಾರ್ಯಕರ್ತರ ಮೂಲಕ ಮಾಡಿಸಿ ಅಶಾಂತಿಯ ವಾತವಾರಣಕ್ಕೆ ಕಾರಣರಾಗಿದ್ದಾರೆ ಎಂದು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಟಿಎನ್ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.

     

    ದೊಡ್ಡತುಮಕೂರು ವಿಎಸ್ಎಸ್ಎನ್ ಸಹಕಾರ ಸಂಘದ ಚುನಾವಣೆಯಲ್ಲಿನ ಬೆಳವಣಿಗೆ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಕೆಲವರು ಜೆಡಿಎಸ್ ಮುಖಂಡ ಹರೀಶ್ ಗೌಡರ ಬಗ್ಗೆ ಹಲವು ಪ್ರಶ್ನೆಗಳನ್ನು ಮಾಡಿದ್ದಾರೆ ಅವರಿಗೆ ತಿಳಿಸುವುದೇನೆಂದರೆ ನಮ್ಮ ಗ್ರಾಮಕ್ಕೆ ಹರೀಶ್ ಗೌಡರನ್ನು ಮೊದಲು ಕರೆತಂದವರೇ ವಸಂತ್ ಕುಮಾರ್ ಆದರೆ ಇಂದು ಅವರ ಕೊಡುಗೆ ಏನು ಎಂದು ಅವರೇ ಪ್ರಶ್ನೆ ಮಾಡುವುದು ಹಾಸ್ಯಸ್ಪದವಾಗಿದೆ, ಗ್ರಾಮದಲ್ಲಿ ಈವರೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದ್ದಾರೆ. ಹರೀಶ್ ಗೌಡ ತಾಲ್ಲೂಕಿನಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸಿದ್ದಾರೆ. ಜೆಡಿಎಸ್ ಇಬ್ಬಾಗವಾಗಿಲ್ಲ… ಜೆಡಿಎಸ್ ಕಾರ್ಯಕರ್ತರು ಸದಾ ಒಮ್ಮತದ ನಿರ್ಧಾರದಿಂದ ಜೊತೆಯಲ್ಲಿದ್ದೇವೆ ಎಂದರು.

     

    ಕಾಂಗ್ರೆಸ್ ಮುಖಂಡ ರಾಮಕೃಷ್ಣ ಮಾತನಾಡಿ ಈ ವಿಎಸ್ಎಸ್ಎನ್ ಸಹಕಾರಿ ಸಂಘ ಅಧಿಕಾರಕ್ಕೆ ಬರಲು ಮುಖ್ಯ ಕಾರಣ ಚುಂಚಗೌಡ ಹಾಗೂ ಕೆಂಪಣ್ಣನವರು, ಈ ಸಂಘ ಪ್ರಾರಂಭವಾದ ಸಮಯದಲ್ಲಿ ಸರ್ವ ಪಕ್ಷಗಳಿಗೆ ಸಮಪಾಲು ಅಧಿಕಾರ ನೀಡಿ ಪ್ರಾರಂಭಿಸಿದೆವು, ಆದರೆ ಈ ಒಪ್ಪಂದವನ್ನು ಬಿಜೆಪಿ ಪರಿಪಾಲನೆ ಮಾಡದ ಕಾರಣ ಈ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ರಾಜಕೀಯ ಉದ್ದೇಶದಿಂದ ಚುನಾವಣೆ ಅಧಿಕಾರಿಯಾಗಿದ್ದ ಮಾಧವರೆಡ್ಡಿ ಬದಲಾಗಿ ನಾಗಮಣಿಯವರನ್ನು ಕರೆತಂದವರು ನೀವು, ಚುನಾವಣೆಯಲ್ಲಿ ಗಲಾಟೆ ಉಂಟಾದಾಗ ಸ್ಥಳಕ್ಕೆ ಬಂದ ಶಾಸಕರು ಇತರೆ ಪಕ್ಷಗಳ ಅಹವಾಲುಗಳನ್ನು ಆಲಿಸದೇ ತಾವೇ ಬಿಜೆಪಿ ಪಕ್ಷದ ಪರ ನಿಂತು ಪ್ರತಿಭಟನೆಗೆ ಮುಂದಾಗುತ್ತಾರೆ. ಶಾಸಕರು ಕೇವಲ ಒಂದು ಪಕ್ಷಕ್ಕೆ ಶಾಸಕರಲ್ಲ ಅವರು ತಾಲ್ಲೂಕಿನ ಪ್ರಥಮ ಪ್ರಜೆಯಗಿರುತ್ತಾರೆ, ಸರ್ವರಿಗೂ ಹಿತ ಕಾಯುವ ಕಾರ್ಯ ಮಾಡುವುದು ಅವರ ಪ್ರಮುಖವಾಗಿರುತ್ತದೆ ಅದನ್ನು ಅವರು ಅರಿಯಬೇಕಿದೆ ಎಂದರು.

     

    ಮುಖಂಡ ವೆಂಕಟೇಶ್ ಮಾತನಾಡಿ ಹರೀಶ್ ಗೌಡ ಮುಖಕ್ಕೆ ಮಸಿ ಬಳಿಯುತ್ತೇವೆ ಎನ್ನುವ ಮನಸ್ಥಿತಿ ಕುರಿತು ಶಾಸಕರು ತಮ್ಮ ಹಿಂಬಾಲಕರಿಗೆ ಬುದ್ದಿ ಹೇಳಬೇಕಿದೆ, ಈ ಮಾತುಗಳು ಯಾರ ಭಾವನೆಯನ್ನು ವ್ಯಕ್ತಪಡಿಸುತ್ತವೆ ಎಂಬುದು ಪ್ರಶ್ನೆಯಾಗಿದೆ.. ?ಈ ಕುರಿತು ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೆವೆ ಶಾಸಕರು ತಮ್ಮ ಹಿಂಬಾಲಕರಿಗೆ ಈ ಮನಸ್ಥಿತಿಯನ್ನು ಕೈಬಿಡುವಂತೆ ಬುದ್ದಿ ಹೇಳಬೇಕಿದೆ ಎಂದರು.

     

    ಕಾಂಗ್ರೆಸ್ ಮುಖಂಡ ಮಾತನಾಡಿ ಅಜಯ್ ಮಾತನಾಡಿ ನಮ್ಮೊಂದಿಗೆ ಒಡಂಬಡಿಕೆಯಲ್ಲಿ ಮಾಡಿಕೊಳ್ಳುವ ಮನಸ್ಥಿತಿ ಇರುವ ಬಿಜೆಪಿಗರು ನಾವು ಬೆಂಬಲಿಸಿ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳನ್ನು ಬಲವಂತದಿಂದ ಹಿಂಪಡೆಯುವಂತೆ ಮಾಡುವುದು ಎಷ್ಟು ಸರಿ, ಅವರು ಕುತಂತ್ರದಿಂದ ಚುನಾವಣೆಗೆ ಮುಂದಾಗಿದ್ದರು ಅದಕ್ಕೆ ತಕ್ಕ ಉತ್ತರವನ್ನು ನಾವು ನೀಡಿದ್ದೇವೆ ಎಂದರು. ಚುನಾವಣೆಯಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ ಸಂಘವನ್ನು ಅಭಿವೃದ್ಧಿಯತ್ತಾ ನೆಡಿಸುವ ಮಾರ್ಗ ಅನುಸರಿಸಬೇಕಿದೆ ಎಂದರು.

     

    ಮುಖಂಡರಾದ ದೀಪು ಮಾತನಾಡಿ ಇದು ನಮ್ಮ ದೊಡ್ಡತುಮಕೂರಿನ ಮೊದಲ ಚುನಾವಣೆ, ಈ ಚುನಾವಣೆಯಲ್ಲಿ ಸತತವಾಗಿ ಮೈತ್ರಿಗೆ ಪ್ರಯತ್ನ ಮಾಡಿದ್ದೆವು ಆದರೆ ಬಿಜೆಪಿ ಒಪ್ಪದ ಕಾರಣ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ . ಚುನಾವಣೆಗೆ ವೆಚ್ಚ ಮಾಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿದ್ದರೆ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು, ಚುನಾವಣೆ ನೆಡೆಸಲು ಇದ್ದ ಬದ್ಧತೆ ಗ್ರಾಮದ ಅಭಿವೃದ್ಧಿಗೆ ಬಳಸಿ ಎಂದರು.

     

    ಗ್ರಾಮಪಂಚಾಯತಿ ಸದಸ್ಯ ವಿರೇಗೌಡ ಮಾತನಾಡಿ ಸೊಸೈಟಿಯನ್ನು ಒಂದು ಉತ್ತಮ ಸ್ಥಿತಿ ತಲುಪಿಸುವುದು ನಮ್ಮೆಲ್ಲರ ಉದ್ದೇಶವಾಗಿತ್ತು, ಆದರೆ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿ ನಮ್ಮ ಸೊಸೈಟಿ ಹೆಸರನ್ನು ಹಾಳುಮಾಡಿದ್ದಾರೆ, ಇಂದು ನಮ್ಮ ಸಹಕಾರಿ ಸಂಘ 3ಲಕ್ಷ ನಷ್ಟದಲ್ಲಿ ನೆಡೆಯುತ್ತಿದೆ, ಇದಕ್ಕೆ ಕಾರಣ ಯಾರು, ಕಾನೂನು ಮೊರೆಹೋದ ನಂತರ ಕಾನೂನು ಪಾಲನೆ ಮಾಡಬೇಕಲ್ಲವೇ.. ವಿನಾಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

     

     

    ಸುದ್ದಿಗೊಷ್ಟಿಯಲ್ಲಿ ಮುಖಂಡರಾದ ಚೈತ್ರ ಭಾಸ್ಕರ್, ವಿರೇಗೌಡ ಅಜಯ್, ದೀಪು, ಮಂಜುನಾಥ್, ಚೈತ್ರ ಶ್ರೀಧರ್, ಪ್ರವೀಣ್ ಶಾಂತಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

     

  • ತಾಲೂಕಿನ ಸಾಮಾನ್ಯ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ – ಎ. ನಂಜಪ್ಪ

    ದೊಡ್ಡಬಳ್ಳಾಪುರ : ಬಡ ವರ್ಗದ ಜನರ ಪಡಿತರ ಚೀಟಿಗಳನ್ನು ಏಕಾ ಏಕಿ ರದ್ದುಗೊಳಿಸಿ ಬಡವರ ಅನ್ನಕ್ಕೆ ಕನ್ನ ಹಾಕಿದಂತಾಗಿದೆ, ಬಡ ಜನರು ಪಡಿತರ ಚೀಟಿಗಾಗಿ ಪ್ರತಿನಿತ್ಯವೂ ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ ಈ ಕೂಡಲೇ ಈ ಸಮಸ್ಯೆಯನ್ನ ಸೂಕ್ತರೀತಿಯಲ್ಲಿ ಪರಿಹರಿಸಬೇಕು ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

     

    ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ತಾಲೂಕಿನ ಸಾಮಾನ್ಯ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನೆಡೆಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ಹಲವಾರು ಗೊಂದಲಗಳನ್ನು ಸೃಷ್ಟಿ ಮಾಡಿದೆ, ಇಂತಹ ಸಂದರ್ಭದಲ್ಲಿ ಬಡ ವರ್ಗದ ಜನರ ಪಡಿತರ ರದ್ದು ಪಡಿಸಿರುವುದು ಎಷ್ಟು ಸರಿ,

    ಹತ್ತಾರು ವರ್ಷಗಳಿಂದ ತಾಲೂಕಿನಲ್ಲಿ ಸೂರಿಲ್ಲದೆ ಇರುವಂತಹ ವಸತಿ ಹೀನರಿಗೆ ವಸತಿ ಕಲ್ಪಿಸಬೇಕು, ತಾಲೂಕಿನಾದ್ಯಂತ ನಾಯಿಗಳ ಹಾವಳಿ ಹೆಚ್ಚಾಗಿದ್ದು ವಯೋವೃದ್ದರು ಹಾಗೂ ಮಕ್ಕಳನ್ನು ಮಾರಕವಾಗಿ ಕಚ್ಚಿ ಗಾಯಗೊಳಿಸಿದ ಹಲವು ಘಟನೆಗಳು ಸಂಭವಿಸಿವೆ ಈ ಬಗ್ಗೆ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ,ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಪ್ರತಿನಿತ್ಯ ಸಿಗಬೇಕಾದ ಸೌಲಭ್ಯಗಳು ಸಿಗದೇ ಪ್ರತಿನಿತ್ಯ ಅಲೆದಾಡುವಂತಾಗಿದೆ,ಈ ರೀತಿಯ ವಿಳಂಬ ನೀತಿಯನ್ನು ತಪ್ಪಿಸಲು ಕ್ರಮಜರುಗಿಬೇಕು ಎಂದು ಎಚ್ಚರಿಕೆ ನೀಡಿದರು.

    ನಂತರ ಮಾತನಾಡಿದ ಜಿಲ್ಲಾದ್ಯಕ್ಷ ಮಂಜುನಾಥ್ ಅವರು ತಾಲೂಕಿನ ಕಸಬಾ ಹೋಬಳಿ ಪಾಲನಜೋಗಹಳ್ಳಿ ಗ್ರಾಮದ ಸ.ನಂ. 21 ರಲ್ಲಿ 5 ಎಕರೆ 0.13ಗುಂಟೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡಿದ್ದರೂ ಸಹ ತಾಲೂಕು ಆಡಳಿತ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಭೂಗಳ್ಳರಿಗೆ ಕುಮ್ಮಕ್ಕು ನೀಡಿದಂತೆ ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ, ಬಡಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಅಧಿಕಾರಿಗಳು ಶ್ರೀಮಂತರು ಹಾಗೂ ಭೂಮಾಫಿಯದವರಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ಎಲ್ಲಾ ಕೆಲಸ ಮಾಡಿಕೊಡುತ್ತಾರೆ, ಅಕ್ರಮಕ್ಕೆ ಒಳಪಟ್ಟಿರುವ ಸರ್ಕಾರಿ ಜಾಗಕ್ಕೆ ಈ ಕೂಡಲೇ ಬೇಲಿ ಹಾಕಿ ಸರ್ಕಾರಿ ಜಾಗ ಎಂದು ನಾಮ ಫಲಕ ಹಾಕಬೇಕು ಎಂದು ಒತ್ತಾಯಿಸಿದರು.

     

    ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದೆ ಇದ್ದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಬೃಹತ್ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದರು.

    ಅಂತಿಮವಾಗಿ ಸಂಘಟನೆಯ ವತಿಯಿಂದ ತಾಲ್ಲೂಕಿನ ಸಾಮಾನ್ಯ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹಾರಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

     

    ಈ ಪ್ರತಿಭಟನೆಯಲ್ಲಿ ಮುಖಂಡರಾದ ನಯಾಜ್ ಖಾನ್ ತಾ.ಅದ್ಯಕ್ಷ ಬಿ.ಪಿ.ಹರಿಕುಮಾರ್,ಮಹಿಳಾ ಘಟಕದ ಶಶಿಕಲಾ, ಕುಮುದ, ಇಫ್ತಾಖರ್ ಅಹಮದ್, ಪೀರ್ ಪಾಷಾ, ಕೃಷ್ಣ, ಮುನಿರಾಜಪ್ಪ, ಗಂಗರಾಜಪ್ಪ, ಅಶ್ವತ್, ರೇಷ್ಮಾ ಖಾನಂ, ಪದ್ಮಾವತಿ,ಸೌಮ್ಯ ಬಾಯಿ, ರಾಗಿಣಿ,ವಿನಯ್ ಪ್ರಸಾದ್, ಮುನಿಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಟೋಲ್ ಶುಲ್ಕ ತಪ್ಪಿಸಲು ಅಡ್ಡದಾರಿಯಲ್ಲಿ ಬಂದ ಬಿಬಿಎಂಪಿ ಕಸದ ಲಾರಿಗಳು: ಕುರುಬರಹಳ್ಳಿ ಸಮೀಪದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಗ್ರಾಮಸ್ಥರು

    ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಪ್ರತಿದಿನ ನೂರಾರು ಲಾರಿಗಳು ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿವೆ. ಇವರೆಗೂ ಕಸ ತುಂಬಿದ ದಾಬಸ್‌ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತಿದ್ದವು. ಆದರೆ, ಹುಲಿಕುಂಟೆ ಸಮೀಪ ಟೋಲ್ ಪ್ರಾರಂಭವಾದ ನಂತರ ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಈಗ ದೊಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಮೂಲಕ ಸಂಚರಿಸಲು ಪ್ರಾರಂಭಿಸಿವೆ ಎಂದು ನಗರಸಭೆ ಸದಸ್ಯ ಬಂತಿ ವೆಂಕಟೇಶ್ ತಿಳಿಸಿದರು.

    ತಾಲೂಕಿನ ಕುರುಬರಹಳ್ಳಿ ಸಮೀಪದ ಸ್ಯಾಟಲೈಟ್ ರಿಂಗ್ ರೋಡ್ ಬಳಿ ಸುಮಾರು 9ಕಸದ ಲಾರಿಗಳನ್ನು ತಡೆದು ಲಾರಿ ಚಾಲಕರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಎಲ್ಲಾ ಲಾರಿಗಳನ್ನು ಕೂಡಲೇ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮನವಿ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಟೋಲ್ ಶುಲ್ಕ ತಪ್ಪಿಸಲು ಬಿಬಿಎಂಪಿ ಕಸದ ಲಾರಿಗಳು ಅಡ್ಡದಾರಿ ಹುಡುಕಿಕೊಂಡಿದ್ದು .

    ತಾಲೂಕಿನ ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ದಿನನಿತ್ಯ ಸುಮಾರು 40-50 ಕಸದ ಲಾರಿಗಳು ಸಂಚಾರ ಮಾಡುತ್ತಿದ್ದು, ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ಬಿಬಿಎಂಪಿ ಕಸ ತುಂಬಿದ ಲಾರಿಗಳ ಸಂಚಾರ ಮಿತಿ ಮೀರಿದೆ. ಅಪಘಾತ ನಡೆಯುವ ಮುನ್ನ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

     

    ಗ್ರಾಮಗಳ ಮೂಲಕ ಕಸ ತುಂಬಿದ ಲಾರಿಗಳು ಹೋಗುವಾಗ ಬರುತ್ತಿರುವ ದುರ್ನಾತ ಹಾಗೂ ರಸ್ತೆಯುದ್ದಕ್ಕೂ ಲಾರಿಯಿಂದ ಸೋರುತ್ತಿರುವ ತ್ಯಾಜ್ಯ ನೀರಿನಿಂದ ಗ್ರಾಮಸ್ಥರು ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಟೋಲ್ ಶುಲ್ಕ ಉಳಿಸುವ ನೆಪದಲ್ಲಿಸ ಕಸದ ಲಾರಿಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಕಸದ ಲಾರಿಗಳು ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಇತರೆಡೆ ಅಪಘಾತ ನಡೆಸಿ ಹತ್ತಾರು ಜನರ ಜೀವ ತೆಗೆದಿರುವ ಪ್ರಕರಣಗಳು ಕಣ್ಮುಂದೆ ಇವೆ, ಇಂತಹ ಲಾರಿಗಳಿಂದ ನಮ್ಮ ಭಾಗದಲ್ಲೂ ಅನಾಹುತ ಸಂಭವಿಸುವ ಮುನ್ನ ಕಸದ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

    ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಬಂದ್ ಮಾಡುವಂತೆ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ಹಲವಾರು ಬಾರಿ ಧ್ವನಿ ಎತ್ತಿದ್ದಾರೆ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವಿರುವ ಸುತ್ತಾಮುತ್ತ ಹಳ್ಳಿಗಳ ಜನರು ಹಲವಾರು ಅರೋಗ್ಯ ಸಮಸ್ಯೆಗಳಿಂದ ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗದೇ ಊರು ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನಮ್ಮ ದೊಡ್ಡಬಳ್ಳಾಪುರ ಮಾರ್ಗವಾಗಿ ಕಸದ ಲಾರಿಗಳು ಸಂಚರಿಸಿ ಸಾರ್ವಜನಿಕರ ಆರೋಗ್ಯ ಮತ್ತು ಪ್ರಾಣಕ್ಕೆ ಕುತ್ತು ತರುವ ಮೊದಲೇ ನಾವು ಎಚ್ಚೆದ್ದುಕೊಳ್ಳಬೇಕಿದೆ ಎಂದು ತಿಳಿಸಿದರು.

  • ರೈಲಿಗೆ ಸಿಲುಕಿ ಆಟೋ ಚಾಲಕನ ಆತ್ಮಹತ್ಯೆ : ಮೃತಸ್ಥಳದಲ್ಲಿ ಆಟೋ ಪತ್ತೆ

    ಸರ್ಜಾಪುರ – ಮಾರತಹಳ್ಳಿ ಮಾರ್ಗದ ಹುಸ್ಕೂರು ಗೇಟ್ ಬಳಿ ಅಪರಿಚಿತ ವ್ಯಕ್ತಿ ಸಾವಿಗೆ ಶರಣಾಗಿರುವ ಘಟನೆ ನೆಡೆದಿದೆ.

     

    ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಓರ್ವ ಆಟೋ ಚಾಲಕನಾಗಿದ್ದು, ತಾಲ್ಲೂಕಿನ ಹುಸ್ಕೂರು ಗೇಟ್ ಬಳಿ ರೈಲಿಗೆ ಸಿಲುಕಿ ಸಾವನಪ್ಪಿದ್ದಾಗಿ ತಿಳಿದುಬಂದಿದೆ.

     

    ಮೃತಪಟ್ಟ ವ್ಯಕ್ತಿಯು ಆಟೋ ಚಾಲಕರ ಸಮವಸ್ತ್ರ ಧರಿಸಿದ್ದು, ಮೃತ ವ್ಯಕ್ತಿಯ ಸಮೀಪದಲ್ಲಿ ಆಟೋ(KA01A P1242)ಒಂದು ಪತ್ತೆಯಾಗಿದೆ. ಸಂಬಂಧಪಟ್ಟ ವಾರಸುದಾರರು ಕೂಡಲೇ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

     

    ಆಟೋ ಚಾಲಕರ ಆತ್ಮಹತ್ಯೆ ಕುರಿತು ಬೆಂಗಳೂರು ಆಟೋ ಸೇನೆ ರಾಜ್ಯಾಧ್ಯಕ್ಷ ಚೇತನ್ ಮಾತನಾಡಿ ಆಟೋ ಚಾಲಕರ ಈ ಸ್ಥಿತಿ ತುಂಬಾ ನೋವನ್ನುಂಟು ಮಾಡಿದೆ . ಮೃತವ್ಯಕ್ತಿಯ ಸಂಬಂಧಿಕರ ಕುರಿತು ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ, ಸಂಬಂಧಪಟ್ಟ ವ್ಯಕ್ತಿಗಳು ಕೂಡಲೇ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಮನವಿ ಮಾಡಿದ್ದಾರೆ.

  • ಶೇಕಡಾ 100 ರಷ್ಟು ಕನ್ನಡ ಬಳಕೆ ನಮ್ಮಲ್ಲಿ ಮಾಡುತ್ತಿದ್ದಾರೆ ಎಂಬುದು ನಮ್ಮ ಹೆಮ್ಮೆ – ವಿ. ಬಸವರಾಜು

    ದೊಡ್ಡಬಳ್ಳಾಪುರ, ( ವಿಜಯಮಿತ್ರ ) : 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರಸ್ತೆ ನಿಗಮ ದೊಡ್ಡಬಳ್ಳಾಪುರ ಘಟಕ ಹಾಗೂ ಕನ್ನಡ ಕ್ರಿಯಾ ಸಮಿತಿ ದೊಡ್ಡಬಳ್ಳಾಪುರ ಇವರ ಸಹಯೋಗದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.

    ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

     

    ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ವಿ. ಬಸವರಾಜು ಮಾತನಾಡಿ ಕನ್ನಡ ಭಾಷೆಯನ್ನು ಶೇಕಡಾ 100ರಷ್ಟು ನಮ್ಮ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಬಳಸುತ್ತಿದ್ದೇವೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ನಮ್ಮ ಚಾಲಕರು ಹಾಗೂ ಸಿಬ್ಬಂದಿವರ್ಗ ಸದಾ ಕನ್ನಡ ಭಾಷೆ ಪರವಾದ ಧ್ವನಿಯಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನಿಯ ಎಂದರು.

    ಇಂದು ಚಿಕ್ಕಬಳ್ಳಾಪುರ ವಿಭಾಗೀಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ತುಂಬಾ ಅಚ್ಚುಕಟ್ಟಾಗಿ 69 ನೇ ಕನ್ನಡ ರಾಜ್ಯೋತ್ಸವವನ್ನು ಆಯೋಜನೆ ಮಾಡಿ ನಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ, ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿಬಂದಿದ್ದು ಸಂತಸ ತಂದಿದೆ ಎಂದರು.

    ಕಾರ್ಯಕ್ರಮದಲ್ಲಿ ವಿಭಾಗಿಯ ತಾಂತ್ರಿಕ ಅಭಿಯಂತರರಾದ ಸಿ ಮಲ್ಲಿಕಾರ್ಜುನ, ವಿಭಾಗಿಯ ಸಂಚಲನಾಧಿಕಾರಿ ಎ ಮಂಜುನಾಥ, ವಿಭಾಗಿಯ ಸಂಖ್ಯಾಧಿಕಾರಿ ಜೆ. ಬಿ ಶಶಿಧರ, ಸಹಾಯಕ ಆಡಳಿತ ಅಧಿಕಾರಿ ಗುರು ಶಾಂತ, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಜಿ. ಶಾಂತ, ಸಹಾಯಕ ಕಾನೂನು ಅಧಿಕಾರಿ ಚೆನ್ನನಗೌಡ, ಸಹಾಯಕ ಲೆಕ್ಕಾಧಿಕಾರಿ ಎಚ್ ಎಚ್ ದಿನೇಶ, ಸೇರಿದಂತೆ ಕನ್ನಡ ಕ್ರಿಯಾ ಸಮಿತಿಯ ಸರ್ವ ಸದಸ್ಯರು , ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಜಿಲ್ಲೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ರಾಷ್ಟ್ರೀಯ ಸದಸ್ಯರಾದ ಡಾ. ಪಿ ಪಿ. ವಾವಾ ಭೇಟಿ :ಸಫಾಯಿ ಕರ್ಮಚಾರಿಗಳ ಕುಂದು ಕೊರತೆ ಕುರಿತು ಅಹವಾಲುಗಳ ಸ್ವೀಕಾರ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ರಾಷ್ಟ್ರೀಯ ಸದಸ್ಯರಾದ ಡಾ. ಪಿ ಪಿ. ವಾವಾ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ PEHS ಸಲಹಾ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

     

    ಸೋಮವಾರ ಭಾರತ ಸರ್ಕಾರ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಡಾ. ಪಿ ಪಿ. ವಾವಾ ಅವರು ಭೇಟಿನೀಡಿ ಕರ್ಮಚಾರಿಗಳ ಅಹವಾಲುಗಳನ್ನು ಸ್ವೀಕರಿಸಿದರು.

     

    ಈ ಸಂದರ್ಭದಲ್ಲಿ ಆಯೋಗದ ಜಿಲ್ಲಾ ಸದಸ್ಯರಾದ ಆರ್ ವಿ ಮನು ಮಾತನಾಡಿ ಸಫಾಯಿ ಕರ್ಮಚಾರಿಗಳ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿ ಅವರ ಕುಂದುಕೊರತೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ಆಯೋಗದ ಸದಸ್ಯರಾದ ಮಾನ್ಯ ಡಾ. ಪಿ ಪಿ ವಾವಾ ಸರ್ ಅವರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಸಫಾಯಿ ಕರ್ಮಚಾರಿಗಳನ್ನು ಕುರಿತು ಅವರಿಗಿರುವ ಕಾಳಜಿ ಶ್ಲಾಘನೀಯ ಎಂದರು.

     

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಸಿಇಒ ಸೇರಿದಂತೆ ಸಲಹಾ ಸಮಿತಿಯ ಸದಸ್ಯರಾದ ಮುನಿಯಪ್ಪ, ಮ್ಯಾತ್ಯು,ಮುನಿರಾಜಪ್ಪ ಹಾಜರಿದ್ದರು.