ಅನ್ನದಾತರ ಸಂಕಷ್ಟಕ್ಕೆ ಬಿಜೆಪಿ ಸದಾ ಸ್ಪಂದನೆ: ಬಿ.ವೈ ವಿಜಯೇಂದ್ರ

ಬೀದರ್: ಬಿಜೆಪಿ ಪಕ್ಷವು ಅನ್ನದಾತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತದೆ. ರೈತರ ಪರ ಧ್ವನಿಯಾಗಿ ನಾವು ಸದಾ ನಿಮ್ಮೊಟ್ಟಿಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ.

 

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಿ. ಖಾಶೆಂಪುರ ಗ್ರಾಮದ ರೈತ ಮಹಿಳೆ ಶ್ರೀಮತಿ ಗಂಗಮ್ಮ ಅವರ ಪತಿ ಶಂಕರಾವ ಮಚ್ಚಕುರಿ ಅವರು ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿ.ವೈ ವಿಜಯೇಂದ್ರ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮೃತರ ಮನೆಗೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಆರ್ಥಿಕ ನೆರವು ನೀಡಿ, ಧೈರ್ಯ ತುಂಬಿದರು.

 

ಮಾಜಿ ಸಚಿವ ಮತ್ತು ಶಾಸಕ ಪ್ರಭು ಚೌಹಾಣ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *