ವಿವಿಧ ಕಾಮಗಾರಿಗಳಿಗೆ ತಾಲೂಕಿನ ಶಾಸಕ ಧೀರಜ್ ಮುನಿರಾಜು ಅವರ ಅಮೃತಹಸ್ತದಿಂದ ಚಾಲನೆ

ದೊಡ್ಡಬಳ್ಳಾಪುರ : ಸುಮಾರು 60 ಲಕ್ಷ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ವೀರಭದ್ರನ ಪಾಳ್ಯ ಹಾಗೂ ಕನಕದಾಸ ನಗರದಲ್ಲಿ ನೆರವೇರಿಸಲಾಗಿದೆ ಎಂದು ನಗರಸಭೆ ಸದಸ್ಯ ಶಿವ.ಎಂ (ಶಿವರಾಜ್ )ತಿಳಿಸಿದರು.

ನಗರದ 12ನೇ ವಾರ್ಡ್ ನ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗು ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ನಮ್ಮ ವಾರ್ಡಿಗೆ ಸುವರ್ಣ ದಿನವಾಗಿದ್ದು, ಮಾದರ ಚೆನ್ನಯ್ಯ ಹೆಬ್ಬಾಗಿಲು , ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಸ್ಥಳೀಯ ಗ್ರಂಥಾಲಯದ ಉದ್ಘಾಟನೆ ಒಳಗೊಂಡಂತೆ ಸ್ಥಳೀಯವಾಗಿ ನಗರಸಭಾ ಅನುದಾನ ಹಾಗೂ ನಗರೋತ್ಥಾನ ಯೋಜನೆ ಅಡಿಯಲ್ಲಿ ಸುಮಾರು 60 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ತಾಲೂಕಿನ ಶಾಸಕ ಧೀರಜ್ ಮುನಿರಾಜು ಅವರ ಅಮೃತಹಸ್ತದಿಂದ ಚಾಲನೆ ನೀಡಲಾಗಿದೆ ಎಂದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಸುಮಾರು 28ಕೋಟಿ 57ಲಕ್ಷದ ಅಭಿವೃದ್ದಿ ಕಾಮಗಾರಿಗಳು ನಗರದಾದ್ಯಂತ ಚಾಲನೆಗೊಂಡಿದ್ದು ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳ್ಳಲಿದೆ, ಈಗಾಗಲೇ ನಗರದಲ್ಲಿ ಮೊದಲ ಹಂತದ ವೈಟ್ ಟ್ಯಾಪಿಂಗ್ ರಸ್ತೆ ಸುಸರ್ಜಿತ ವ್ಯವಸ್ಥೆಯೊಟ್ಟಿಗೆ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಅಧ್ಯಕ್ಷರಾದ ಸುಮಿತ್ರ ಆನಂದ್ ಸೇರಿದಂತೆ ನಗರ ಸಭಾ ಸದಸ್ಯರು ಭಾಗವಹಿಸಿದ್ದರು

Comments

Leave a Reply

Your email address will not be published. Required fields are marked *