Blog

  • *ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ*

    “ನಿರಂತರ ಯೋಗಾಭ್ಯಾಸ ನಮ್ಮೆಲ್ಲರ ಜೀವನದಲ್ಲಿ ಅನುಷ್ಠಾನಗೊಂಡರೆ, ನಾವೆಲ್ಲರೂ 100 ವರ್ಷದವರೆಗೂ ಬದುಕಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ ತಿಳಿಸಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ಕಾಲಮಾನದಲ್ಲಿ ಯುವಕರು ಉತ್ಸಾಹ ಪೀಡಿತರಾಗಿ ಜೀವನ ಸಾಗಿಸುತ್ತಿದ್ದು ಅವರನ್ನು ಉತ್ಸಾಹಶೀಲಾರನ್ನಾಗಿ ಮಾಡಲು ಅರೋಗ್ಯಕರ ಯೋಗಭ್ಯಾಸ ಬಹಳ ಮುಖ್ಯವಾಗಿದೆ.ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ದೈಹಿಕ,ಮಾನಸಿಕ,ಸಾಮಾಜಿಕ, ಹಾಗೂ ಆದ್ಯಾತ್ಮಿಕವಾಗಿ ಅರೋಗ್ಯವನ್ನು ಸುಸ್ಥಿರದಲ್ಲಿಡಬೇಕಂದರೆ ಯೋಗಭ್ಯಾಸ ಅತ್ಯವಶ್ಯಕವಾಗಿದೆ ಎಂದರು.

     

    ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೇನಿವಾಸ್ ಮಾತನಾಡಿ ಪ್ರಸ್ತುತ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯೋಗಸನಗಳನ್ನು ಪರಿಚಯಿಸಿ ನಮ್ಮ ದೇಶದ ಪರಿಕಲ್ಪನೆಯನ್ನ ಜಗತ್ತಿಗೆ ಸಾರುತ್ತಿರುವುದು ಹೆಮ್ಮ ಪಡುವ ಸಂಗತಿಯಾಗಿದೆ. ನಮ್ಮ ಅರೋಗ್ಯವನ್ನು ಸಶಕ್ತವಾಗಿಟ್ಟುಕೊಳ್ಳಲು ಯೋಗ ಅವಶ್ಯಕವಾಗಿದೆ ” ಎಂದರು.

     

    ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಪಟು ಚೇತನ್ ರಾಮ್ ಮಾರ್ಗದರ್ಶನದಲ್ಲಿ ಯೋಗಭ್ಯಾಸ ನಡೆಸಲಾಯಿತು.

     

    ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ, .ಸಿದ್ದರಾಮರಾಜು , ಪ್ರೊ. ನೀರಜಾ ದೇವಿ, ಡಾ.ಪ್ರಕಾಶ್ ಮಂಟೆದ, ರಾಜ್ ಕುಮಾರ್, ಮಂಜುನಾಥ್ ಸೇರಿದಂತೆ ಕಾಲೇಜಿನ ಏನ್ ಎಸ್ ಎಸ್, ಏನ್ ಸಿ ಸಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • *ರಾಜಾನುಕುಂಟೆ ಯಲ್ಲಿ ಬೆಂಗಳೂರು ಆಟೋ ಸೇನೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ*

    ಪ್ರತಿನಿತ್ಯ ಆಟೋ ಚಾಲಕರು ನೂರಾರು ಸಮಸ್ಯೆಯನ್ನು ಎದುರಿಸುತ್ತಿದ್ದು. ಆಟೋ ಚಾಲಕರ ಶಕ್ತಿಯಾಗಿ ಬೆಂಗಳೂರು ಆಟೋ ಸೇನೆ ಶ್ರಮಿಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಚೇತನ್ ತಿಳಿಸಿದರು

     

    ರಾಜಾನುಕುಂಟೆ ವ್ಯಾಪ್ತಿಯಲ್ಲಿ ಬೆಂಗಳೂರು ಆಟೋ ಸೇನೆ ನೂತನ ಘಟಕದ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಳೆ ಏನದೇ ಬಿಸಿಲಿನದೇ ಪ್ರತಿನಿತ್ಯ ಸಾರ್ವಜನಿಕರ ಸೇವೆಗಾಗಿ ದುಡಿಯುವ ಆಟೋ ಚಾಲಕರು, ತಮ್ಮ ಕರ್ತವ್ಯದ ಅವಧಿಯಲ್ಲಿ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಟೋ ಚಾಲಕರು ಅಸಂಘಟಿತರಲ್ಲ,ನಾವು ಸಂಘಟಿತರು ಎಂದು ಸಾರುವ ನಿಟ್ಟಿನಲ್ಲಿ ಬೆಂಗಳೂರು ಆಟೋ ಸೇನೆ ಶ್ರಮಿಸಲಿದೆ. ಆಟೋ ಚಾಲಕನಿಗೆ ಸಮಸ್ಯೆಯಾದ ಪಕ್ಷದಲ್ಲಿ ನಮ್ಮ ಸೇನೆ ನ್ಯಾಯ ಪರವಾಗಿ,ಅವರ ಬೆಂಬಲವಾಗಿ ನಿಲ್ಲುತ್ತದೆ. ಈಗಾಗಲೇ ನಮ್ಮಲ್ಲಿ 4000ಕ್ಕೂ ಅಧಿಕ ಸದಸ್ಯರು ನೊಂದಣಿ ಮಾಡಿಸಿದ್ದು. ನೂತನವಾಗಿ ನೋಂದಣಿ ಮಾಡಬಯಸುವ ಯಾವುದೇ ಆಟೋ ಚಾಲಕರು ತಮ್ಮ ಆಧಾರ್ ಪ್ರತಿ, ವಾಹನ ಚಾಲನಾ ಪರವಾನಗಿ, ಶುಲ್ಕ ಪಾವತಿಸಿ, ನಮ್ಮ ಸಂಘಟನೆಯಲ್ಲಿ ಸೇರಬಹುದಾಗಿದೆ. ಚಾಲಕನಿಗೆ ಚಾಲಕನೇ ಬೆಂಬಲ ಎಂಬ ಮುಖ್ಯ ಉದ್ದೇಶದಿಂದ ಈ ಸಂಘಟನೆ ಕಟ್ಟಿದ್ದು. ನೂತನ ಘಟಕದಿಂದ ಮತ್ತಷ್ಟು ಬಲಬಂದಂತಾಗಿದೆ ಎಂದರು.

    ನೂತನ ಕಚೇರಿಯನ್ನು ಟೇಪ್ ಕತ್ತರಿಸಿ, ದೀಪ ಬೆಳಗಿಸಿ ಸಂವಿಧಾನ ಪುಸ್ತಕ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.

    ರಾಜಾನುಕುಂಟೆ ಘಟಕ ಅಧ್ಯಕ್ಷರನ್ನಾಗಿ ಜೈ ಭೀಮ್ ಚಂದ್ರುರವರನ್ನು ಆಯ್ಕೆ ಮಾಡಿದರು ಹಾಗೂ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

     

    ಬೆಂಗಳೂರು ಆಟೋ ಸೇನೆಯ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ಸುಮ ಮಾತನಾಡಿ ಆಟೋ ಚಾಲಕರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ನಮ್ಮ ಸೇನೆ ನಿಷ್ಠೆಯಿಂದ ಶ್ರಮಿಸುತ್ತದೆ . ಮೊದಲ ಬಾರಿಗೆ ಆಟೋ ವಾಹನಕ್ಕೆ ಪ್ರತ್ಯೇಕವಾಗಿ ವಾಹನ ಚಾಲನ ಪರವಾನಿಗೆಯನ್ನು ಸೇನೆಯ ವತಿಯಿಂದ ಕಡಿಮೆ ದರದಲ್ಲಿ ಮಾಡಿಸಿ ಕೊಡುತ್ತಿದ್ದು ಆಸಕ್ತ ಆಟೋ ಚಾಲಕರು ಸಂಪರ್ಕಿಸಲು ಮನವಿ ಮಾಡಿದರು. ಹಾಗೂ ಈಗಾಗಲೇ ಬೆಂಗಳೂರು ನಗರದಲ್ಲಿ 50ಕ್ಕೂ ಅಧಿಕ ಮಹಿಳೆಯರು ಆಟೋ ಚಾಲನೆ ಮಾಡುತ್ತಿದ್ದು ಮಹಿಳಾ ಚಾಲಕರಿಗೆ ಸೇನೆಯ ವತಿಯಿಂದ ಉತ್ತಮ ಬೆಂಬಲ ಸಿಕ್ಕಿದೆ . ಚಾಲಕರಿಗೆ ತೊಂದರೆಯಾದ ಪಕ್ಷದಲ್ಲಿ ಅಥವಾ ಆಟೋ ಸಮಸ್ಯೆಯಾದಲ್ಲಿ ತಕ್ಷಣವೇ ಬೆಂಗಳೂರು ಆಟೋ ಸೇನೆ ಪದಾಧಿಕಾರಿಗಳು ಸ್ಪಂದಿಸುತ್ತಿರುವುದು ಸಂತಸ ತಂದಿದೆ ಎಂದರು.

     

    ರಾಜನಕುಂಟೆ ಘಟಕದ ಉಪಾಧ್ಯಕ್ಷ ಮುನಿರಾಜು, ಎಸ್.ವಿ.ಎಸ್.ಎಲ್.ವಿ ಮಾತನಾಡಿ ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಮುಖ್ಯ ಉದ್ದೇಶ. ದಾಖಲಾತಿ ನವೀಕರಣದ ವೇಳೆ ಆಟೋ ಚಾಲಕರು ದಲ್ಲಾಳಿಗಳ ಕೈ ಗೊಂಬೆಗಳಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ . ಮುಂದೆ ನಮ್ಮ ಸೇನೆಯ ವತಿಯಿಂದ ಯಾವುದೇ ರೀತಿಯ ದಲ್ಲಾಳಿಗಳ ನೆರವಿಲ್ಲದೆ ಸರ್ಕಾರಿ ಸೇವೆಗಳನ್ನು ಪಡೆಯುವಂತೆ ಮಾಡುತ್ತೇವೆ. ಆಟೋ ಚಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಷ್ಟ ಪಡುತ್ತಾರೆ , ಅಂತಹ ಮಕ್ಕಳಿಗೆ ನಮ್ಮ ತಂಡದ ವತಿಯಿಂದ ವಿದ್ಯಾಭ್ಯಾಸಕ್ಕೆ ಬೇಕಾಗುವ ನೆರವು ಕಲ್ಪಿಸಲಾಗುವುದು. ಆಟೋ ಚಾಲಕರ ಯಾವುದೇ ಸಮಸ್ಯೆ ಇದ್ದರೂ ಸರಿಯೇ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಖಜಾಂಚಿ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಸಹ ಕಾರ್ಯದರ್ಶಿ ಸುರೇಂದ್ರ, ಮುನಿರಾಜು ( ಗೂಳಿ) ಘಟಕ ಉಪಾಧ್ಯಕ್ಷರು,ಸಂಘಟನಾ ಕಾರ್ಯದರ್ಶಿ ಮಂಜು ದಿಬ್ಬೂರು, ಸೇರಿದಂತೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಹಾನಾಯಕ ಕಾರ್ಮಿಕ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

  • *ಆಹಾರ, ವಿದ್ಯೆ ಪ್ರತಿ ಮನುಷ್ಯನಿಗೂ ಅತ್ಯವಶ್ಯಕ – ಮುನಿರಾಜು ಎಸ್ ವಿ ( ಎಸ್ ಎಲ್ ವಿ )*

    ದೊಡ್ಡಬಳ್ಳಾಪುರ :ನಿರಂತರವಾಗಿ ಹಸಿದವರ ಹೊಟ್ಟೆಯನ್ನು ತುಂಬಿಸುವ ಕಾರ್ಯವನ್ನು ಮಲ್ಲೇಶ್ ಮತ್ತು ತಂಡ ಮಾಡುತ್ತಿದ್ದು. ಇಂದು ನನ್ನ ವಿಶೇಷ ದಿನವನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಲು ನಿರ್ಧರಿಸಿ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ ಎಂದು ಎಸ್ ವಿ ಮುನಿರಾಜು( ಎಸ್ ಎಲ್ ವಿ ) ತಿಳಿಸಿದರು.

    1546 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಲವಾರು ದಿನಗಳಿಂದ ನನ್ನ ಪರಿಚಯಸ್ಥರು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನನ್ನ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇನೆ. ಹಣವನ್ನು ದುಂದು ವೆಚ್ಚ ಮಾಡದೆ ಹಸಿದವರಿಗೆ ಆಹಾರ ನೀಡುವ ಮೂಲಕ ಈ ವಿಶೇಷ ದಿನವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

    ಮಹಾ ನಾಯಕ ಕಾರ್ಮಿಕ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ನಾಗರಾಜು ಮಾತನಾಡಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅನ್ನದಾಸೋಹ ಮಾಡುವ ಜೊತೆಗೆ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್, ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಅನ್ನದಾಸೋಹ ಸಮಿತಿ ಒಟ್ಟಿಗೆ ಮಾಡಿದ್ದೇವೆ. ಇಂದು ಆತ್ಮೀಯ ಗೆಳೆಯರಾದ ಮುನಿರಾಜುರವರ ಹುಟ್ಟು ಹಬ್ಬದ ಆಚರಣೆಯನ್ನು ಅನ್ನದ ಸಮಿತಿಯೊಂದಿಗೆ ಆಚರಿಸುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ತಮ್ಮ ವಿಶೇಷ ದಿನವನ್ನು ಸಮಾಜ ಸೇವೆ ಮಾಡುವ ಮೂಲಕ ಆಚರಿಸಿಕೊಂಡ ಮುನಿರಾಜುರವರಿಗೆ ಶುಭವಾಗಲಿ ಎಂದು ಹಾರೈಸಿದರು.

     

    ಮಹಾ ನಾಯಕ ಕಾರ್ಮಿಕ ಹಿತ ರಕ್ಷಣಾ ವೇದಿಕೆಯ ರಾಜ್ಯ ನಿರ್ದೇಶಕರಾದ ಮುನಿರಾಜು ಮಾರಸಂದ್ರ ಮಾತನಾಡಿ ಅನ್ನದಾಸೋಹ ಕಾರ್ಯಕ್ರಮ ಅಷ್ಟು ಸುಲಭದ ಕೆಲಸವಲ್ಲ, ಆದರೆ ಅನ್ನ ದಾಸೋಹಿ ಮಲ್ಲೇಶ್ ರವರು ನಿರಂತರವಾಗಿ 1500ಕ್ಕೂ ಅಧಿಕ ದಿನಗಳಿಂದ ಈ ಕಾರ್ಯಕ್ರಮವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ಕಾರ್ಯ ಮತ್ತಷ್ಟು ಮುಂದುವರೆಯಲಿ ಬಡವರಿಗೆ ಹಸಿದವರಿಗೆ ಮತ್ತಷ್ಟು ಆಹಾರ ದೊರೆಯುವಂತಾಗಲಿ . ತಮ್ಮ ವಿಶೇಷ ದಿನವನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಂಡ ಮುನಿರಾಜು ಮತ್ತು ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸಿದರು.

    ಆನಂದ್ ಮಾರನೋರ್ ಮಾತನಾಡಿ ಹಲವಾರು ಕಡೆ ಹಲವಾರು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ನಿರಂತರ ಅನ್ನದಾಸೋಹ ಕಾರ್ಯಕ್ರಮ ವಿಶೇಷತೆಯಿಂದ ಕೂಡಿದ್ದು. ದಾನಿಗಳೇ ಸ್ವತಃ ಹಸಿದವರಿಗೆ ಆಹಾರ ವಿತರಣೆ ಮಾಡುವುದು ಇಲ್ಲಿನ ವಿಶೇಷ. ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ಒದಗಿಸುವ ಕಾರ್ಯವನ್ನು ದಾನಿಗಳ ನೆರವಿನಿಂದ ಮಲ್ಲೇಶ್ ರವರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

     

    ಕಾರ್ಯಕ್ರಮದಲ್ಲಿ  ನಾಗರಾಜ್ ( ಕಾಮೆನ ಹಳ್ಳಿ),ಮುನಿರಾಜಣ್ಣ (ಮಾರಸಂದ್ರ,),ಮುನಿಕೆಂಪಣ್ಣ,ಧನರಾಜ್,ಅಂಬರೀಶ್,ಪಾಪಣ್ಣ, ಜೈ ಭೀಮ್ ಚಂದ್ರು,ಪ್ರಕಾಶ್,ಆನಂದ್(ಸಾದೇನ ಹಳ್ಳಿ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • *ನಟ ದರ್ಶನ್ ಅಭಿಮಾನಿಗಳಿಂದ ಜೀವ ಬೆದರಿಕೆ ಆರೋಪ : ಪೊಲೀಸ್ ಠಾಣೆ ಮೊರೆಹೋದ ನಟ ಒಳ್ಳೆಹುಡ್ಗ ಪ್ರಥಮ್*

    ಬೆಂಗಳೂರು : ನಟ ದರ್ಶನ್ ಅಭಿಮಾನಿಗಳಿಂದ ತನಗೆ ಜೀವ ಬೆದರಿಕೆ ಬಂದಿದೆ ಎಂದು ನಟ ಪ್ರಥಮ್ ಅವರು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

     

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಥಮ್, ಜೀವನ ಬಹಳ ದೊಡ್ಡದು. ಯಾರಿಗೋಸ್ಕರವೋ ನೀವು ಅದನ್ನ ಹಾಳು ಮಾಡಿಕೊಳ್ಳಬೇಡಿ, ನಾನು ತುಂಬಾ ಶಾಂತಿಯಿಂದಲೇ ಇದ್ದೆ:ನೀವು ಅತೀಯಾಗಿ ನಮ್ಮ ಕರ್ನಾಟಕದ ಅಳಿಯ ತಂಡದ ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಾ, ಇನ್ನೇಲೆ ನನಗೆ ಬರೋ ಕಾಲ್ ಅಥವಾ ಎಲ್ಲವೂ ಪೋಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು. ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ, ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ,ಕಾವೇರಿಗಾಗಿ,ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ : ಯಾರಿಗೋಸ್ಕರವೋ ಲೈಪ ಹಾಳುಮಾಡಿಕೊಳ್ಳಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.

  • *ನಾಳೆ ದೊಡ್ಡಬಳ್ಳಾಪುರಕ್ಕೆ ಬರಲಿದೆ ‘ ವೆಲ್ ನೆಸ್ ಆನ್ ವೀಲ್ಸ್ ‘ : ಸಾರ್ವಜನಿಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವೈದ್ಯರ ಮನವಿ*

    ದೊಡ್ಡಬಳ್ಳಾಪುರ :- ವೋಲ್ವೋ ಗ್ರೂಪ್ ಹಾಗೂ ನಾರಾಯಣ ಹೆಲ್ತ್ ಸಹಯೋಗದಲ್ಲಿ ಸಿಎಸ್ ಆರ್ ಯೋಜನೆಯಡಿ ಒದಗಿಸಿರುವ ಸoಚಾರಿ ಆರೋಗ್ಯ ವಾಹನ ಜೂನ್ 20 ರಂದು ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೇವೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.


    ‘ವೆಲ್ ನೆಸ್ ಆನ್ ವ್ಹೀಲ್ಸ್’ ಎಂಬ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡಿರುವ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ನಾಳೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಬೆಳ್ಳಿಗೆ 8: 30 ರಿಂದ ಉಚಿತ ವೈದ್ಯಕೀಯ ಸೇವೆಗಳನ್ನು ಸಲ್ಲಿಸಲಿದೆ.

    ಏಕೋ ( ECHO), ಇಸಿಜಿ( ECG ), ಮಮ್ಮೊಗ್ರಾಮ್ ( MAMMO GRAM) LFT,TFT, HBA1c ಸೇರಿದಂತೆ
    ರಕ್ತ ಪರೀಕ್ಷೆಗಳ ಸೇವೆಯನ್ನು ಈ ಕೇಂದ್ರವು ಒದಗಿಸಲಿದ್ದು . ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವೈದ್ಯರ ತಂಡ ಮನವಿ ಮಾಡಿದೆ.

  • *ಬೀದಿ ನಾಟಕದ ಮೂಲಕ ಮಾನಸಿಕ ಆರೋಗ್ಯದ ಸುಧಾರಣೆ ಕುರಿತು ಅರಿವು ಮೂಡಿಸುತ್ತಿರುವ ವಿದ್ಯಾರ್ಥಿಗಳು*

    ಕಳೆದ ಒಂದು ವಾರದಿಂದ ಮೆಳೇಕೋಟೆ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ನಾಟಕದ ಮುಖಾಂತರ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತಿದ್ದಾರೆ ಎಂದು ನವೋದಯ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಚೇತನ್ ತಿಳಿಸಿದರು.

    ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸುರಾನಾ ಕಾಲೇಜು,ಬೆಂಗಳೂರು ಇವರ ಸಹಯೋಗದೊಂದಿಗೆ ಗ್ರಾಮೀಣ ಮಾನಸಿಕ ಆರೋಗ್ಯದ ಕಳಂಕದ ಬಗ್ಗೆ ಪ್ರಿ ಅಸೆಸ್ಮೆಂಟ್ ಮತ್ತು ಪೋಸ್ಟ್ ಅಸೆಸ್ಮೆಂಟ್ ಅನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಮಾಡ್ಯೂಲ್ ಅಭಿವೃದ್ಧಿಪಡಿಸುತ್ತಿದ್ದು, ಈ ಕಾರ್ಯಕರ್ಮದಲ್ಲಿ ಗ್ರಾಮೀಣ ಮಾನಸಿಕ ಆರೋಗ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಾಮೀಣ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಜಾಗೃತಿಯನ್ನು ಉತ್ತೇಜಿಸಲು ತಂಡವು ಕೆಲಸ ಮಾಡುತ್ತಿದೆ ಎಂದರು.

     

     

    ಈ ಕಾರ್ಯಕ್ರಮವನ್ನು ಕುರಿತು ಟ್ರಸ್ಟ್ ನ ಅಧ್ಯಕ್ಷ ಚೇತನ್ ಮಾತನಾಡಿ, ಮಾನಸಿಕ ಖಾಯಿಲೆ ನಮ್ಮ ಜೇವನ ಶೈಲಿಯ ಮೇಲೆ ಅವಲಂಬಿಸಿರುತ್ತದೆ, ನಗರಪ್ರದೇಶಗಳಲ್ಲಿ ಈಗಾಗಲೇ ನಾಲ್ಕುಜನರಲ್ಲಿ ಒಬ್ಬರು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ, ಅದರಂತೆಯೇ ನಗರ ಪ್ರದೇಶಗಳಲ್ಲಿ ಮಾನಸಿಕ ಖಾಯಿಲೆಗೆ ಸಂಬಂಧಪಟ್ಟ ಆಸ್ಪತ್ರೆ ಗಳು ಈಗಾಗಲೇ ಸಾಕಷ್ಟು ಇವೆ, ಆದರೆ ಗ್ರಾಮೀಣ ಭಾಗದಲ್ಲಿ ಅನುಕೂಲಗಳು ಕಡಿಮೆ ಹಾಗು ಜೊತೆಯಲ್ಲಿ ಮಾನಸಿಕ ಖಾಯಿಲೆಗಳ ಬಗ್ಗೆ ಅರಿವು ಕೂಡ ಕಡಿಮೆ ಹಾಗು ಹೆಚ್ಚು ಕಳಂಕ ಇರುವುದರಿಂದ, ಸಾಂಪ್ರದಾಯಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ನಿಯಮಗಳು ಹೆಚ್ಚಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಗ್ರಾಮೀಣ ಪ್ರದೇಶದ ಜನರನ್ನು ನಿರುತ್ಸಾಹಗೊಳಿಸುತ್ತಿದೆ.

     

    ಪ್ರಾರಂಭದ ಹಂತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಶೀಘ್ರದಲ್ಲೇ ಸಮಸ್ಯೆಯಿಂದ ಹೊರ ಬರಬಹುದು. ಆದ್ದರಿಂದ ನಾವು ಗ್ರಾಮೀಣ ಮಾನಸಿಕ ಆರೋಗ್ಯ ಉಪಕ್ರಮದ ಸಲಹೆಯ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು ಅದನ್ನು ನಮ್ಮ ದೊಡ್ಡಬಳ್ಳಾಪುರ ತಾಲೂಕಿನಿಂದಲೇ ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಮತ್ತು ಇದನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರುವುದು ನವೋದಯ ಟ್ರಸ್ಟ್ ಮತ್ತು ಸುರಾನ ಕಾಲೇಜಿನ ಗುರಿಯಾಗಿದೆ ಎಂದು ತಿಳಿಸಿದರು.

  • *ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಚಿವ ಕೆ.ಹೆಚ್ ಮುನಿಯಪ್ಪ ಸೂಚನೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 19 : ಜೂನ್ 27 ರಂದು ಜಿಲ್ಲೆಯ ಮೂರು ಪ್ರಮುಖ ಸ್ಥಳಗಳಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

     

     

    ದೇವನಹಳ್ಳಿ ಟೌನ್ ನಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಕೆಂಪೇಗೌಡ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಜಿಲ್ಲೆಯ ದೇವನಹಳ್ಳಿಯ ಪ್ರಮುಖ ಮೂರು ಸ್ಥಳಗಳಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪುತ್ಥಳಿಗೆ ಬೆಳಗ್ಗೆ 07.30 ಕ್ಕೆ ಮಾಲಾರ್ಪಣೆ ಮಾಡಲಾಗುವುದು. ನಂತರ ನಾಡಪ್ರಭು ಕೆಂಪೇಗೌಡರ ಹುಟ್ಟೂರಾದ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಬೆಳಿಗ್ಗೆ 08:00 ಗಂಟೆಗೆ ಜ್ಯೋತಿ ಬೆಳಗಿಸಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುವುದು. ಬೆಳಗ್ಗೆ 09.00 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

     

    ನಾಡಪ್ರಭು ಕೆಂಪೇಗೌಡರು ಎಲ್ಲಾ ವರ್ಗದವರನ್ನು ಒಳಗೊಂಡು ಬೆಂಗಳೂರು ನಿರ್ಮಿಸಿದ್ದಾರೆ. ಹಾಗಾಗಿ ಎಲ್ಲಾ ವರ್ಗದ ಜನರನ್ನು ಒಳಗೊಂಡಂತೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಆಚರಣೆ ಮಾಡಬೇಕಿದೆ. ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮುಖಂಡರು ಸಾರ್ವಜನಿಕರನ್ನು ಕರೆ ತರಲು ಬಸ್ ವ್ಯವಸ್ಥೆ ಕಲ್ಪಿಸಿ. ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

     

    ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ ವ್ಯವಸ್ಥೆ, ಮೂಲಭೂತ ಸೌಕರ್ಯ, ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಲಾ ತಂಡಗಳ ವ್ಯವಸ್ಥೆಯನ್ನು ಮಾಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

     

    ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ(ಬಯಪ) ಅಧ್ಯಕ್ಷ ಶಾಂತಕುಮಾರ್ , ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

  • *ತಂಬಾಕು ಉತ್ಪನ್ನಗಳಿಂದ ಮಕ್ಕಳನ್ನು ದೂರವಿಡಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಸಲಹೆ*

    ತಂಬಾಕು ಉತ್ಪನ್ನಗಳಿಂದ ಆಗುವಂತ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಹೆಚ್ಚಾಗಿ ಜಾಗೃತಿಯ ಕಾರ್ಯಕ್ರಮ ಮೂಡಿಸುವದು ಅತ್ಯವಶ್ಯವಿದೆ. ಅಲ್ಲದೇ ಪ್ರತಿಯೊಬ್ಬ ವ್ಯಕ್ತಿಗೂ ತಂಬಾಕು ಉತ್ಪನ್ನಗಳಿಂದ ಸಂಭವಿಸುವಂತ ಅನಾರೋಗ್ಯಗಳ ಕುರಿತು ಅರಿವು ಇರಬೇಕು, ದೂರವೀರಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು.

    ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ‘ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು’ ಎಂಬ ಘೋಷವಾಕ್ಯದೊಂದಿಗೆ ಮಂಗಳವಾರದಂದು ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಅವರು ಮಾತನಾಡಿದರು.

    ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಮೇ 31 ರಿಂದ ಜೂನ್ 30 ರ ವರೆಗೆ ಜಿಲ್ಲೆಯಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಾಲೆ ಹಾಗೂ ಕಾಲೇಜುಗಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಟಾ ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಯಿತು.

    ಪೋಲೀಸ್ ಇಲಾಖೆಯ ಸಿಬ್ಬಂದಿಗಳು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಟಾ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಜಿಲ್ಲೆಯಲ್ಲಿ ಕೋಟ್ಟಾ ಕಾಯ್ದೆಯ ಉನ್ನತ ಅನುಷ್ಠಾನಕ್ಕಾಗಿ ಜಿಲ್ಲೆಯ 4 ತಾಲ್ಲೂಕುಗಳಾದ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರಕ್ಷಕ ಠಾಣಾ ವ್ಯಾಪ್ತಿಯಲ್ಲಿ ಜೂನ್ ತಿಂಗಳಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಆಸ್ಪತ್ರೆ, ಸರ್ಕಾರಿ ಕಛೇರಿಗಳ ಆವರಣಗಳು ಮತ್ತು ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸುತ್ತ ನಿರಂತರವಾಗಿ ಕೋಟ್ಟಾ ದಾಳಿಗಳನ್ನು ನಡೆಸಿ ಹೆಚ್ಚು ಪ್ರಕರಣಗಳನ್ನು ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್, ಜಿಲ್ಲಾ ಆಯುಷ್ಯಾಧಿಕಾರಿ ಡಾ. ಶುಹಬುದ್ದಿನ್, ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರು ಡಾ. ವಿದ್ಯಾರಾಣಿ ಪಿ.ಎಸ್ ಸೇರಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • *ಏನಿದು ಲೋಕ್ ಅದಾಲತ್..??? ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಓದಿ..(ಕಿರುಪರಿಚಯ)*

    ಲೋಕ್ ಅದಾಲತ್‌ನ ಮೂಲ ಉದ್ದೇಶವೇನೆಂದರೇ ಯಾವುದೇ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸೌರ್ಹಾಧಯುತವಾದ ಜೀವನವನ್ನು ನಡೆಸಲು ಸಾಧ್ಯವಾಗಬೇಕು, ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೆ ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆಯಾದ ಕೆ.ಬಿ ಗೀತಾ ತಿಳಿಸಿದರು.

     

    ಈ ಕುರಿತು ಮಾತನಾಡಿದ ಅವರು ಲೋಕ್ ಅದಾಲತ್‌ನ ಬಗ್ಗೆ ಮಾಹಿತಿ ನೀಡುತಾ ಜನತಾ ನ್ಯಾಯಾಲಯದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಸಂಧಾನಕಾರರಾಗಿ ಇರುತ್ತಾರೆ. ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯವನ್ನು ಪ್ರವೇಶಿಸದೇ ಇರತಕ್ಕಂತಹ ಪ್ರಕರಣಗಳನ್ನು ಸಹ ನಾವು ಜನತಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದು ಆದ್ದರಿಂದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ತೀರ್ಮಾನದಂತೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದವರ ನಿರ್ದೇಶನದಂತೆ ನಾವು ಪ್ರತಿ ಜಿಲ್ಲೆಯಲ್ಲಿಯೂ ಸಹ ಈ ವರ್ಷದ ಜುಲೈ 13 ನೇ ತಾರೀಖು ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಇದು ಈ ವರ್ಷದ ಎರಡನೇ ಲೋಕ್ಸ್ ಅದಾಲತ್ ಆಗಿದೆ ಎಂದರು.

     

    16/03/2024 ರಂದು ಈ ವರ್ಷದ ಕೊನೆಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು ಅದರಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇದ್ದ 13,884 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಾದ 2.13,903 ಪ್ರಕರಣಗಳನ್ನು ಸೇರಿಸಿ ಒಟ್ಟು 227787 ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಲೇವಾರಿ ಮಾಡಲಾಗಿದೆ ಹಾಗೂ ವಿವಿಧ ನ್ಯಾಯಾಲಯದಲ್ಲಿ ವಿಚೇಧನಕ್ಕಾಗಿ ಅರ್ಜಿ ಸಲ್ಲಿಸಿದ 1 ಜೋಡಿ ಮತ್ತೆ ಒಂದುಗೂಡಿಸಲಾಗಿದೆ ಎಂದು ತಿಳಿಸಿದರು.

     

    ರಾಷ್ಟ್ರೀಯ ಅದಾಲತ್ ಜಿಲ್ಲೆಯ ಹಾಗೂ ಪ್ರತಿಯೊಂದು ತಾಲೂಕಿನ ನ್ಯಾಯಾಲಯಗಳಲ್ಲಿಯೂ ಸಹ ಜುಲೈ 13 ರಂದು ರಂದು ನಡೆಯಲಿದೆ.

     

    ಈ ಲೋಕ್ ಅದಾಲತ್‌ನ ಉಪಯೋಗಗಳೇನೆಂದರೆ ಪಕ್ಷಗಾರರು ತಮ್ಮ ಪ್ರಕರಣಗಳನ್ನು ನೇರವಾಗಿ ಶೀಘ್ರವಾಗಿ ಜನತಾ ನ್ಯಾಯಾಲಯದಲ್ಲಿ ಒಂದೇ ಸಿಟ್ಟಿಂಗ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಅವರು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ಎರಡು ಪಕ್ಷಗಾರರಿಗೆ ಒಪ್ಪಿಗೆಯಾದ ತೀರ್ಮಾನವನ್ನು ಮಾತ್ರ ಲೋಕ್ ಅದಾಲತ್‌ನಲ್ಲಿ ತೀರ್ಮಾನ ಮಾಡಲಾಗುವುದು, ಆದ್ದರಿಂದ ಇಬ್ಬರು ಪಕ್ಷಗಾರರ ಒಪ್ಪಿಗೆಯಿಂದ ತೀರ್ಮಾನವಾಗುವುದರಿಂದ ಅವರ ಬಾಂದವ್ಯವು ಚೆನ್ನಾಗಿ ಆಗಿ. ವಿವಾದವು ಸುಖಾಂತ್ಯವಾಗುತ್ತದೆ ಮತ್ತು ಅದರ ಮೇಲೆ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಿಲ್ಲದಿರುವುದರಿಂದ ಅದು ಅಂತಿಮ ತೀರ್ಮಾನವಾಗುತ್ತದೆ, ನ್ಯಾಯಾಲಯದಲ್ಲಿ ದಾಖಲು ಮಾಡಿದಾಗ ಸಲ್ಲಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಆದ್ದರಿಂದ ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ತೀರ್ಮಾನವಾಗುತ್ತದೆ ಕೇವಲ ಮೋಸ ಅಥವಾ ಮಿಸ್ ರೆಪ್ರಸೆಂಟೇಷನ್ ನಂತಹ ಸಂದರ್ಭದಲ್ಲಿ ಮಾತ್ರ ಸದರಿ ಲೋಕ್ ಅದಾಲತ್‌ನ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ. ಇದರಿಂದ ಕೇವಲ ಅರ್ಧ ಅಡಿ, ಒಂದು ಅಡಿಗಾಗಿ ಅಕ್ಕಪಕ್ಕದ ಮನೆಯವರು ಏನಾದರೂ ದಾವೆಗಳನ್ನು ಸಲ್ಲಿಸಿದ್ದೆ ಆದರೆ ಅಂತಹ ದಾವೆಗಳು ತೀರ್ಮಾನವಾದಾಗ ನೆರೆಹೊರೆಯವರ ಸಂಬಂಧ ಚೆನ್ನಾಗಿ ಆಗುತ್ತದೆ ಸೌರ್ಹಾದಯುತವಾಗುತ್ತದೆ ಇದರಿಂದ ನಾವು ಉತ್ತಮ ದೇಶದ ನಿರ್ಮಾಣ ಮಾಡಲು ಸಹಾಯವಾಗುತ್ತದೆ.

     

    *ರಾಜಿ ಸಂಧಾನದ ಮೂಲಕ ಲೋಕ್ ಅದಾಲತ್‌ ನಲ್ಲಿ ಯಾವ ಯಾವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ*

     

    ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು ಅಂದರೆ ಸೆಕ್ಷನ್ 138 ಆಫ್ ದ ಎನ್.ಐ ಆಕ್ಷ Negotable Instrument Act ಕಾಯ್ದೆ ಯ 138 ರ ಅಡಿಯಲ್ಲಿ ಸಲ್ಲಿಸಿರುವ ಪ್ರಕರಣಗಳು ಸಲ್ಲಿಸಬಹುದಾದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಪುನಃ ಸ್ಥಾಪಿಸಲ್ಪಡಬೇಕಾದ ಪ್ರಕರಣಗಳು, ಇತರೆ ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಪಟ್ಟಂತಹ ಪ್ರಕರಣಗಳು, ವಿದ್ಯುತ್ ನೀರಿನ ಶುಲ್ಕದ ಅದರಲ್ಲಿ Non Compoundable ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳು ಇತರೆ ಎಲ್ಲಾ ರಾಜಿ ಆಗ ತಕ್ಕಂತಹ ಅಪರಾಧಿಕ ಪ್ರಕರಣಗಳು ವೈವಾಹಿಕ ಪ್ರಕರಣಗಳು ಇತರೆ ಸಿವಿಲ್ ಪ್ರಕರಣಗಳನ್ನು ಸಹ ಇತ್ಯರ್ಥ ಪಡಿಸಿಕೊಳ್ಳಬಹುದು ಅದೇ ಪ್ರಕಾರ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರತಕ್ಕಂತಹ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿ ಆಗಬಹುದಾದಂತಹ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಪುನರ್ ಸ್ಥಾಪಿಸಲ್ಪಡಬೇಕಾದ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನದ ಪ್ರಕರಣಗಳು, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿನ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣಗಳು ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ ಅಥವಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನವನ್ನು ಹೊರತುಪಡಿಸಿದ ಉಳಿದ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರದ ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾಧಗಳು, ವಿದ್ಯುತ್ ನೀರಿನ ಶುಲ್ಕಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗೆ ಸಂಬಂಧಿಸಿದ ಪ್ರಕರಣಗಳು, ಪಿಂಚಣಿ ಪ್ರಕರಣಗಳು, ರಾಜೀ ಯಾಗಬಹುದಾದಂತಹ ಎಲ್ಲಾ ಸಿವಿಲ್ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು ಈ ರೀತಿಯ ಎಲ್ಲಾ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದು ಅದುದ್ದರಿಂದ ಈ ಬಾರಿಯ ಲೋಕ್ ಅದಾಲತ್ ನಲ್ಲಿ ದಿನಾಂಕ 13/07/2024 ರಂದು ನಡೆಯುತ್ತಿರುವ ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ತಮ್ಮ ಪ್ರಕರಣಗಳನ್ನು ಸಾರ್ವಜನಿಕರು ಇತ್ಯರ್ಥ ಪಡಿಸಿಕೊಳ್ಳಬಹುದು.

     

    ಈ ಲೋಕ್ ಅದಾಲತ್‌ನ ಉದ್ದೇಶವನ್ನು ಸಾರ್ವಜನಿಕರು ಸಫಲಗೊಳಿಸಲಿ ಮತ್ತು ಇದು ಎಲ್ಲಾ ಜನರನ್ನು ತಲುಪಲಿ ಎಂಬ ಸದುದ್ದೇಶದಿಂದ ಈ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದರು.

     

    ಲೋಕ್ ಅದಾಲತ್‌ ಸಂಬಂಧಿತ ಯಾವುದಾದರೂ ಪ್ರಶ್ನೆಗಳಿದ್ದರೆ ಅಧಿಕೃತ ವೆಬ್ ಸೈಟ್ ಇ disablrrural@gmail.com ಕಚೇರಿ ದೂರವಾಣಿ ಸಂಖ್ಯೆ 08022222919 ಸಹ ಸಂಪರ್ಕಿಸಬಹುದು, ಹಾಗೂ ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಇರತಕ್ಕಂತಹ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಖುದ್ದಾಗಿ ಭೇಟಿ ಮಾಡಿ ಕೂಡ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.

     

    ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 13 ರಂದು ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ರಾಜೀಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • *ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಜನಸ್ಪಂದನ ಸಹಕಾರಿ: ಶಾಸಕ ಧೀರಜ್ ಮುನಿರಾಜು*

    ದೊಡ್ಡಬಳ್ಳಾಪುರ : ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಲಿದೆ. ಜನಸ್ಪಂದನದಲ್ಲಿ ಸ್ವೀಕರಿಸಿದ ದೂರು, ಅಹವಾಲುಗಳನ್ನು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಗಳು ಬಗೆಹರಿಸಬೇಕು ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಧೀರಜ್ ಮುನಿರಾಜು ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕನಸವಾಡಿ ಗ್ರಾಮದ ಡಾ‌.ಬಿ.ಆರ್ ಅಂಬೇಡ್ಕರ್ ಭವನದಲ್ಲಿಂದು ಎರ್ಪಡಿಸಲಾಗಿದ್ದ “ಜನಸ್ಪಂದನಾ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜನರು ಪ್ರತಿ ದಿನ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಲಿದೆ. ತಾಲ್ಲೂಕಿನ ರಸ್ತೆ, ಸ್ಮಶಾನ ರಸ್ತೆ, ಅವೈಜ್ಞಾನಿಕ ಚರಂಡಿ ವ್ಯವಸ್ಥೆ, ನಿವೇಶನ ಹಂಚಿಕೆ, ಪೆನ್ಷನ್ ಸಮಸ್ಯೆ, ಆಧಾರ್ ಕೇಂದ್ರ ಮರು ಚಾಲನೆ, ಉಪ ತಹಸೀಲ್ದಾರ್ ಕಛೇರಿ ಕಾರ್ಯನಿರ್ವಹಣೆ ಮುಂತಾದ ವಿವಿಧ ರೀತಿಯ ಸಮಸ್ಯೆ ಮುಂತಾದ (ನ್ಯಾಯಾಲಯ ಪ್ರಕರಣಗಳನ್ನು ಹೊರತು ಪಡಿಸಿ) ಅರ್ಜಿಗಳನ್ನು ಶೀಘ್ರವೇ
    ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.

    ಸರ್ಕಾರಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು. ರೈತರ ಪರವಾಗಿ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಮಶಾನ ಜಾಗಗಳ ಗುರುತಿಸುವಿಕೆಗೆ ಕ್ರಮ ವಹಿಸಬೇಕಿದೆ. ಕೆರೆ ಸಂರಕ್ಷಣೆ, ಅಕ್ರಮ ಭೂ ಕಬಳಿಕೆ, ಗೋಮಾಳ ಒತ್ತುವರಿಯಂತಹ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದೇ ರೀತಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಅಧಿಕಾರಿಗಳು ಕ್ರಮವಹಿಸಲು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಮರೇಶ್ ಮಾತನಾಡಿ ಮುಖ್ಯಮಂತ್ರಿಗಳ ಆಶಯದಂತೆ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರವೇ ಜನರ ಬಳಿ ಬಂದು ಸಮಸ್ಯೆ ಬಗೆಹರಿಸುವ ಕೆಲಸ ಇದಾಗಿದೆ. ಸ್ವೀಕೃತವಾದ ಅರ್ಜಿಗಳನ್ನು ಸಕಾಲದಲ್ಲಿ ಪರಿಹರಿಸಲು ಅಧಿಕಾರಿಗಳು ಕ್ರಮವಹಿಸಬೇಕಿದೆ‌. ಇದರಿಂದಾಗಿ ಜನರ ಸಮಸ್ಯೆ ಶೀಘ್ರ ಬಗೆಹರೆಯಲಿದೆ ಎಂದರು.

    *126 ಅರ್ಜಿ ಸ್ವೀಕಾರ*

    ಪೋಡಿ ಪ್ರಕರಣ, ಜಮೀನು ತಕರಾರು, ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಜಮೀನು ಸರ್ವೆ, ಸ್ಮಶಾನ ಜಾಗ ಹಾಗೂ ರಸ್ತೆ ವ್ಯವಸ್ಥೆ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೆರೆ ಕಟ್ಟೆ ಸಂರಕ್ಷಣೆ, ಪಡಿತರ ಚೀಟಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ, ರಸ್ತೆ ಅಪಘಾತಗಳು, ಮೂಲಭೂತ ಸಮಸ್ಯೆಗಳು, ಸೇರಿದಂತೆ ಒಟ್ಟು 126 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.


    ಕಾರ್ಯಕ್ರಮದಲ್ಲಿ ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲಮ್ಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್,ದೊಡ್ಡಬಳ್ಳಾಪುರ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಡಿವೈಎಸ್ಪಿ ರವಿ, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆಯ ಮುಖಂಡರು, ಪಂಚಾಯಿತಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸಾರ್ವಜನಿಕರು ಉಪಸ್ಥಿತರಿದ್ದರು.