Posuere iaculis suspendisse lobortis imperdiet sem, fringilla sagittis per conubia lacus, netus metus accumsan ligula. Taciti nisl porta dui massa turpis augue etiam bibendum, duis semper odio primis ad enim venenatis, vulputate feugiat urna tortor congue nam consequat. Sociis blandit iaculis cursus suscipit praesent magna luctus, tortor vehicula proin urna eget ridiculus, lacus magnis sed class molestie netus.
Blog
-
CapitalChronicle: Insights into Legislative Affairs
Posuere iaculis suspendisse lobortis imperdiet sem, fringilla sagittis per conubia lacus, netus metus accumsan ligula. Taciti nisl porta dui massa turpis augue etiam bibendum, duis semper odio primis ad enim venenatis, vulputate feugiat urna tortor congue nam consequat. Sociis blandit iaculis cursus suscipit praesent magna luctus, tortor vehicula proin urna eget ridiculus, lacus magnis sed class molestie netus.
-
*25 ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವು*
ತಾಲ್ಲೂಕಿನ ರಾಜಾನುಕುಂಟೆ ಮತ್ತು ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ಮಧ್ಯೆ ಬಾಶೆಟ್ಟಿಹಳ್ಳಿ ಹತ್ತಿರ ಅಪರಿಚಿತ ಗಂಡಸು ಸುಮಾರು 25 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.
ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 103/2024 ಕಲಂ 174 Cr.P.C ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
*ಚಹರೆ* – 5.5ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು,ದುಂಡು ಮುಖ ಇದ್ದು ಸಾಧಾರಣವಾದ ಮೈಕಟ್ಟು,ಹೊಂದಿರುತ್ತಾರೆ .
*ಬಟ್ಟೆಗಳು* – ಗಿಳಿ ಹಸಿರು ಬಣ್ಣದ ಶರ್ಟ್ , ಕಪ್ಪು ಬಣ್ಣದ ಪ್ಯಾಂಟ್ ಬ್ರೌನ್ ಕಲರ್ ಅಂಡರ್ವೆರ್ ಧರಿಸಿದ್ದಾರೆ ಎಂದು ತಿಳಿಸಿದ್ದು.
ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಇವರನ್ನು ಸಂಪರ್ಕಿಸಲು ಕೋರಿದೆ.
-
*ಪ್ರತಿದಿನವೂ ವಿಶ್ವ ಪರಿಸರದಿನವೆಂದೇ ಭಾವಿಸಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ರಕ್ಷಿಸಿ – ರಾಜಶೇಖರ್*
ದೊಡ್ಡಬಳ್ಳಾಪುರ : ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆ, ಜವಾಹರ್ ನವೋದಯ ವಿದ್ಯಾಲಯ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನವೋದಯ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನದವನ್ನು ಆಚರಿಸಲಾಯಿತು. ಹೊಂಗೆ, ನೇರಳೆ, ಹಲಸು, ಬೆಟ್ಟದ ನೆಲ್ಲಿ, ಸಿಹಿ ಉಣಸೆ ಮತ್ತು ಹಿಪ್ಪೆ ಸಸಿಗಳನ್ನು ನೆಟ್ಟು ಶಾಲಾ ಮಕ್ಕಳಿಗೆ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು.
ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಆರ್ ಚಕ್ರವರ್ತಿ ಮಾತನಾಡಿ ಶಾಲಾ ಆವರಣದಲ್ಲಿ ಮಳೆ ನೀರು ಹಿಂಗಿಸುವುದು, ಬೂದು ನೀರು ಶುದ್ದಿಕಾರಣ, ಮರುಬಳಕೆ ಮತ್ತು ಶಾಲಾ ಆವರಣದಲ್ಲಿ ಹೆಚ್ಚು ಗಿಡಮರಗಳನ್ನು ಬೆಳಸುವುದರ ಮೂಲಕ ಪರಿಸರ ಸ್ನೇಹಿ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
ವಲಯ ಅರಣ್ಯ ಅಧಿಕಾರಿಗಳಾದ ರಾಜಶೇಖರ್ ಮಾತನಾಡಿ ಇಲಾಖೆಯ ವತಿಯಿಂದ ತಾಲೂಕಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಪ್ರತಿದಿನವನ್ನೂ ಪರಿಸರ ದಿನದಂತೆ ಪರಿಸರವನ್ನು ಕಾಪಾಡಬೇಕು ಎಂದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಚಂದ್ರಕುಮಾರ್, ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ, ಡಾ. ಶಾಂತನು ಗುಪ್ತ, ಕಾರ್ತಿಕ್, ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ಸುಮಾರು 50 ವಿದ್ಯಾರ್ಥಿಗಳ ತಂಡ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.
-
*ಜಿಲ್ಲಾಡಳಿತ ಭವನದಲ್ಲಿ ವಿಶ್ವ ಪರಿಸರ ದಿನ ಆಚರಣೆ*
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 05 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ದೇವನಹಳ್ಳಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ *ವಿಶ್ವ ಪರಿಸರ ದಿನಾಚರಣೆ* ಅಂಗವಾಗಿ “ನಮ್ಮ ಭೂಮಿ-ನಮ್ಮ ಭವಿಷ್ಯ, ನಮ್ಮ ಪೀಳಿಗೆಗೆ ಪುನಃಸ್ಥಾಪನೆ” ಎಂಬ ಘೋಷವಾಕ್ಯದೊಂದಿಗೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಬೆಂಗಳೂರು ಗ್ರಾಮಾಂತರ ಅರಣ್ಯ ಇಲಾಖೆಯ ಎ.ಸಿ.ಎಫ್ ಎಂ. ಶ್ರೀಧರ್, ದೇವನಹಳ್ಳಿ ವಲಯ ಅರಣ್ಯಾಧಿಕಾರಿ ಪವಿತ್ರ ವ್ಹಿ.ಜೆ ಸೇರಿ ಅರಣ್ಯ ಇಲಾಖೆಯ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.
-
*ಡಿಮೆನ್ಷಿಯಾ ಕಾಯಿಲೆ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರ*
ದೊಡ್ಡಬಳ್ಳಾಪುರ : ಆರೋಗ್ಯ ಇಲಾಖೆ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ (DIA), ನಿಮ್ಯಾನ್ಸ್, ಸೌಭಾಗ್ಯ ಸೇವಾ ಟ್ರಸ್ಟ್, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಗಳ ಜಂಟೀ ಸಹಭಾಗಿತ್ವದಲ್ಲಿ ಡಿಮೆನ್ಷಿಯಾ ಫ್ರೆಂಡ್ಸ್ ಮತ್ತು ಡಿಮೆನ್ಷಿಯಾ ಕುರಿತು ಜಾಗೃತಿ ಕಾರ್ಯಾಗಾರವನ್ನು ದೊಡ್ಡಬಳ್ಳಾಪುರ ದಲ್ಲಿ ಆಶಾ ಕಾರ್ಯಕರ್ತರಿಗಾಗಿ ಆಯೋಜಿಸಲಾಗಿತ್ತು.
ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಕುರಿತು
ಬೆಂಗಳೂರುನಲ್ಲಿ 25 ವರ್ಷಗಳಿಂದ ವೃದ್ಧರ ಮತ್ತು ಡಿಮೆನ್ಷಿಯಾ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಲಾಭ ರಹಿತ ಸಂಸ್ಥೆಯಾಗಿದೆ. ಕುಟುಂಬ ಬಾಂಧವ್ಯವನ್ನು ಬಲಪಡಿಸಲು ಮತ್ತು ಹಿರಿಯ ನಾಗರಿಕರಿಗಾಗಿ ಸಮುದಾಯ ಆಧಾರಿತ ಬೆಂಬಲ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ವೈವಿಧ್ಯಮಯ ಮತ್ತು ಅಗತ್ಯ ಯೋಜನೆಗಳ ಮೂಲಕ ಈ ಟ್ರಸ್ಟ್ ನೆರವು ನೀಡುತ್ತದೆ.
ಏನಿದು DIA
ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (DIA)ದೇಶವ್ಯಾಪಿ ಸಂಸ್ಥೆಯಾಗಿದ್ದು, ಡಿಮೆನ್ಷಿಯಾ ರೋಗ ನಿರ್ಣಯಗೊಂಡಿರುವ ವ್ಯಕ್ತಿಗಳ ಕುಟುಂಬಗಳನ್ನು ಜಾಗೃತಿ ಮೂಡಿಸುವಲ್ಲಿ ಮತ್ತು ಡಿಮೆನ್ಷಿಯಾ ಇರುವ ವ್ಯಕ್ತಿಗಳಿಗೆ ಗುಣಮಟ್ಟದ ಆರೈಕೆ ಒದಗಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಿದೆ.
ಡಿಮೆನ್ಷಿಯಾ ಸಹಾಯವಾಣಿ ಸಂಖ್ಯೆ 8585990990.
ತಾಲ್ಲೂಕಿನ ಸುಮಾರು 60 ಆಶಾ ಕಾರ್ಯಕರ್ತರಿಗೆ ಡಿಮೆನ್ಷಿಯಾ, ತಪಾಸಣಾ ಪ್ರಕ್ರಿಯೆ ಮತ್ತು ತಮ್ಮ ಸಮುದಾಯದಲ್ಲಿ ಡಿಮೆನ್ಷಿಯಾ ಶಂಕೆ ಇರುವ ಅಥವಾ ಡಿಮೆನ್ಷಿಯಾ ರೋಗ ನಿರ್ಣಯಗೊಂಡಿರುವ ವೃದ್ಧರಿಗೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಮಾಹಿತಿಗಳನ್ನು ಕಾರ್ಯಾಗಾರದಲ್ಲಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಮಾತನಾಡಿ ಹಿರಿಯ ನಾಗರೀಕರ ಸೇವೆಯು ಸಮಾಜದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುವ ಸೇವೆಯಾಗಿದೆ. ಹಿರಿಯ ನಾಗರೀಕರಿಗೆ ಸಾಂತ್ವಾನ, ಆರೈಕೆ, ರಕ್ಷಣೆ ಹಾಗೂ ಇತರೆ ಸೇವಾ ಸೌಲಬ್ಯತೆಗಳನ್ನು ಒದಗಿಸುವುದು ಅಗತ್ಯವಾಗಿದೆ. ತಾಲ್ಲೂಕಿನಲ್ಲಿ ಹಿರಿಯ ನಾಗರೀಕರ ಸೇವೆಗಾಗಿ 14 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಕಾರ್ಯಾರಂಭ ಆಗಿದ್ದು ಸದಾ ಕಾಲ ಬೆಡ್ ಗಳು ಭರ್ತಿ ಆಗಿರುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಸಂಖ್ಯೆಯ ಹಾಸಿಗೆಗಳನ್ನು ಹೊಂದುವ ಅಗತ್ಯತೆ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಹಿರಿಯ ನಾಗರೀಕರಿಗೆ ರೋಗ ನಿರೋಧಕ ಶಕ್ತಿಯು ಕಡಿಮೆ ಇರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಅವರಿಗೆ ಸೇವೆಯನ್ನು ನೀಡುವ ಬಗ್ಗೆ ಗಮನಹರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಿಮ್ಯಾನ್ಸ್ ಆಸ್ಪತ್ರೆಯ ಡಾ.ಆಶಾ, ಡಾ.ಅನ್ನಪೂರ್ಣ, ಸಾರ್ವಜನಿಕ ಆಸ್ಪತ್ರೆಯ ಡಾ.ಮಂಜುನಾಥ್, ಡಾ.ಪರಮೇಶ್ವರ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಅಮೇಲಿ ನಾಯಕ್, ಸೌಭಾಗ್ಯ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜಗೋಪಾಲ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನ ಸುರೇಶ್ ಹಾಗೂ ತಂಡದ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
-
*ದೊಡ್ಡತುಮಕೂರು ಕೆರೆ ಉಳಿವಿಗಾಗಿ ಹೋರಾಟ : ಕೆರೆಯೊಳಗೆ ಇಳಿದು ಗ್ರಾಮಸ್ಥರ ಪ್ರತಿಭಟನೆ*
ದೊಡ್ಡಬಳ್ಳಾಪುರ : ಎಲ್ಲೆಡೆ ವಿಶ್ವ ಪರಿಸರ ದಿನದ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಕೆರೆಗೆ ಇಳಿದು ವಿನೂತನ ರೀತಿಯ ಪ್ರತಿಭಟನೆ ಮಾಡಿದ್ದಾರೆ.

ತಾಲೂಕಿನ ನಗರಸಭೆ ಹಾಗೂ ಭಾಷೇಟ್ಟಿಹಳ್ಳಿ ಕಾರ್ಖಾನೆಗಳಿಂದ ದೊಡ್ಡ ತುಮಕೂರು ಕೆರೆ ಸೇರುತ್ತಿರುವ ತ್ಯಾಜ್ಯ ನೀರು ಅಂತರ್ಜಲ ಸೇರಿ ನೀರಿನ ಗುಣಮಟ್ಟ ಸಂಪೂರ್ಣ ಹಾಳಾಗಿದೆ . ಈ ಕುರಿತು ನಿರಂತರ ಪ್ರತಿಭಟನೆ ಹಾಗೂ ಹಲವು ಬಾರಿ ಮನವಿಗಳನ್ನು ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ಯಾವುದೇ ಕಾನೂನು ರೀತಿಯ ಕ್ರಮ ಕೈಗೊಂಡಿಲ್ಲ, ನಮ್ಮ ಜೀವದ ಜೊತೆ ಆಟವಾಡುತ್ತಿರುವ ಅಧಿಕಾರಿಗಳಿಗೆ ಪರಿಸರ ದಿನಾಚರಣೆ ಆಚರಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದರು.
ದೊಡ್ಡ ತುಮಕೂರು ಕೆರೆಯಲ್ಲಿ ಇಳಿದು ಗ್ರಾಮಸ್ಥರು ಅಧಿಕಾರಿಗಳಿಗೆ ಜಯ ಘೋಷ ಕೂಗುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಸ್ಥಳೀಯ ಕಾರ್ಖಾನೆಗಳ ತಾಜ್ಯ, ಹಾಗೂ ವಿಷಪೂರಿತ ರಾಸಾಯನಿಕ ಅಂಶವು ಕೆರೆಯ ನೀರಿನ ಮೂಲಕ ಅಂತರ್ಜಲಕ್ಕೆ ಸೇರುತ್ತಿದ್ದು. ನಿರಂತರ ಹೋರಾಟ ಮಾಡುವ ಮೂಲಕ ಹಲವಾರು ಮನವಿ ಗಳನ್ನು ಸಲ್ಲಿಸಿದ್ದರು ತಲೆ ಕೆಡೆಸಿಕೊಳ್ಳದ ಅಧಿಕಾರಿಗಳು ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.ಗ್ರಾಮಸ್ಥರ ಜೀವದ ಜೊತೆ ಚಲ್ಲಾಟವಾಡುತ್ತಿರುವ ಅಧಿಕಾರಿಗಳಿಗೆ ಪರಿಸರದಿನವನ್ನು ಆಚರಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯ ಮುಖಂಡ ವಸಂತ್ ಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಾದ ಗಾಯಿತ್ರಿ ಮಾತನಾಡಿ ದೊಡ್ಡ ತುಮಕೂರು ಕೆರೆಗೆ ಸೇರುತ್ತಿರುವ ನೀರು ಸಂಪೂರ್ಣ ವಿಷಪೂರಿತವಾಗಿದ್ದು . ರಾಸಾಯನಿಕ ಅಂಶಗಳನ್ನು ಒಳಗೊಂಡಿದೆ. ನಮಗೆ ಕುಡಿಯಲು ಶುದ್ಧ ನೀರಿಲ್ಲ. ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಮನಸ್ಸಿಲ್ಲ, ನಮಗೆ ಮೂರನೇ ಹಂತದ ಶುದ್ಧೀಕರಣ ಘಟಕ ಪ್ರಾರಂಭವಾಗಬೇಕಿದೆ. ಕಲುಷಿತ ನೀರನ್ನು ಕುಡಿದು ಈಗಾಗಲೇ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಸ್ಥರು, ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಉದಾಹರಣೆಗಳು ಕೂಡ ಇದೆ. ಇನ್ನಾದರೂ ಅಧಿಕಾರಿಗಳು ಎಚ್ಚೆದ್ದು ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮನಸ್ಸು ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ಹೋರಾಟಗಾರ ಸತೀಶ್ ಮಾತನಾಡಿ ಹಲವಾರು ಮನವಿಗಳನ್ನು ನೀಡಿದ್ದೇವೆ. ನಮಗೂ ಸಾಕಾಗಿದೆ ಸ್ಥಳೀಯ ಅಧಿಕಾರಿಗಳಿಗೆ ಇದು ಕೊನೆಯ ಅವಕಾಶ ಆದಷ್ಟು ಬೇಗ ನಮ್ಮ ಗ್ರಾಮಸ್ಥರ ಉಳಿವಿಗಾಗಿ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸದೆ ಇದ್ದಲ್ಲಿ ಮುಂದೆ ಉಗ್ರವಾದ ಹೋರಾಟವನ್ನು ಎದುರಿಸಬೇಕಾಗಿದೆ. ನಮ್ಮ ಗ್ರಾಮಗಳಲ್ಲಿ ಪಶು ಪಕ್ಷಿಗಳು ಕುಡಿಯಲು ಶುದ್ಧ ನೀರಿಲ್ಲ, ಜಲ ಸಂಪನ್ಮೂಲಗಳು ಸಂಪೂರ್ಣ ಹಾಳಾಗಿದ್ದು, ಈ ಸಮಸ್ಯೆ ರಾಜ್ಯದ ಸಮಸ್ಯೆ ಆಗುವ ಮುನ್ನ ಅಧಿಕಾರಿಗಳು ಎಚ್ಚೆದ್ದುಕೊಂಡರೆ ಒಳ್ಳೆಯದು ಇಲ್ಲವಾದಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಆಶಾ, ಶ್ವೇತಾ, ರೂಪ ಚಂದ್ರಶೇಖರ್ , ತ್ರಿವೇಣಿ, ಕಲಾವತಿ, ವಿಜಯಲಕ್ಷ್ಮಿ ಸೇರಿದಂತೆ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯ ಸದಸ್ಯರು, ಸ್ಥಳೀಯ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.
-
*ಮೋಟಾರ್ ರೀವೈಂಡಿಂಗ್ & ರಿಪೇರಿ ತರಬೇತಿ*
ಬೆಂಗಳೂರು ಗ್ರಾಮಾಂತರ ಜಿಲ್ಲೆ,ಜೂನ್05: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ಸ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 30 ದಿನಗಳ ಮೋಟಾರ್ ರೀವೈಂಡಿಂಗ್ ಉಚಿತ ತರಬೇತಿಯು 15 ಜುಲೈ 2024 ರಿಂದ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಪ್ರದೇಶದ ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ.
ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9241482541, 8884554510, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
*ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲು ಮೌಲ್ಯಮಾಪನ ಶಿಬಿರ*
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್05 : ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲು ಕೇಂದ್ರ ಸರ್ಕಾರದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಅಲಿಂಕೋ ಸಂಸ್ಥೆಯ ವತಿಯಿಂದ ಮೌಲ್ಯಮಾಪನ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.
ಆದರಂತೆ ಅಲಿಂಕೋ ಸಂಸ್ಥೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೌಲ್ಯಮಾಪನ ಶಿಬಿರಗಳನ್ನು ಆಯೋಜಿಸಲು ಕೆಳಕಂಡ ಸ್ಥಳಗಳಲ್ಲಿ ನಿಗದಿಪಡಿಸಿದ ದಿನಾಂಕಗಳಂದು ತೀರ್ಮಾನಿಸಲಾಗಿರುತ್ತದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಡಿ.ಡಿ.ಆರ್.ಸಿ ಯಲ್ಲಿ ಜೂನ್ 10, ನೆಲಮಂಗಲ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಜೂನ್ 11, ದೇವನಹಳ್ಳಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಜೂನ್ 12, ಹೊಸಕೋಟೆ ತಾಲ್ಲೂಕಿನ ಸ್ತ್ರೀಶಕ್ತಿ ಭವನದಲ್ಲಿ ಜೂನ್13 ರಂದು ಆಯೋಜಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
*ವಿಕಲಚೇತನರು ತರಬೇಕಾದ ದಾಖಲಾತಿಗಳು:* ಯುಡಿಐಡಿ ಕಾರ್ಡ್ 40%, ಆದಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ/ಬಿಪಿಎಲ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಕಲರ್ ಪೋಟೋ
*60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತರಬೇಕಾದ ದಾಖಲಾತಿಗಳು:*ಆದಾರ್ ಕಾರ್ಡ್,ಆದಾಯ ಪ್ರಮಾಣ ಪತ್ರ/ಬಿಪಿಎಲ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಕಲರ್ ಪೋಟೋ
ಹೆಚ್ಚಿನ ಮಾಹಿತಿಗಾಗಿ ಗ್ರಾಮ/ ಪಟ್ಟಣ/ ತಾಲ್ಲೂಕು ಪಂಚಾಯಿತಿ/ ಪುರಸಭೆ/ನಗರಸಭೆಯ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 080- 29787441 ಗೆ ಸಂಪರ್ಕಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
*ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ*
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್05: 2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು (6 ರಿಂದ 10ನೇ ತರಗತಿ) ಗಳಿಗೆ ವಾರ್ಷಿಕ ರೂ. 10,000/- ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಕಛೇರಿಯ ಅಧಿಕೃತ ಜಾಲತಾಣ: https://sevasindhuservices.karnataka.gov.in ಮೂಲಕ ಆನ್ಲೈನ್ನಲ್ಲಿ ಜೂನ್ 30 ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿದಾರರು 2023-24ನೇ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢಶಾಲೆ (6 ರಿಂದ 10ನೇ ತರಗತಿ) ಯಲ್ಲಿ ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು ದಿನಾಂಕ : 01.04.2023 ರಿಂದ 31.03.2024 ರ ವರೆಗೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು. ಅಂದರೆ ದಿನಾಂಕ 01-04-2023 ರಿಂದ 31-03-2024 ರ ಅವಧಿಯಲ್ಲಿ ನಡೆದ ಕ್ರೀಡಾಕೂಟಗಳಲ್ಲಿನ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು. ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ವಿದ್ಯಾರ್ಥಿವೇತನದ ಮೊತ್ತಕ್ಕೆ ಮಾತ್ರ ಅರ್ಹರಿರುತ್ತಾರೆ. ವಿದ್ಯಾರ್ಥಿ ವೇತನದ ಮೊತ್ತವನ್ನು ವಾರ್ಷಿಕ ರೂ. 10,000 ರೂ ಗಳನ್ನು ಮಾತ್ರ ಮಂಜೂರು ಮಾಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.