Blog

  • ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿ ಸಾದಿಕ್ ಪಾಷಾ ಅಧಿಕಾರ ಸ್ವೀಕಾರ : ನೂತನ ಅಧಿಕಾರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಸಿಬ್ಬಂದಿ ವರ್ಗ

    ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿ ಸಾದಿಕ್ ಪಾಷಾ ಅಧಿಕಾರ ಸ್ವೀಕಾರ

     

    ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಸಾದಿಕ್ ಪಾಷಾ ಅವರು ಅಧಿಕಾರ ವಹಿಸಿಕೊಂಡರು.

     

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಮುಂದಾಗಿ, ಕೆಲ ಡಿವೈಎಸ್ಪಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

     

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಮುನಿಕೃಷ್ಣ ಅವರನ್ನು ಸಹ ವರ್ಗಾವಣೆ ಮಾಡಲಾಗಿತ್ತು. ಮುನಿಕೃಷ್ಣ ಅವರ ಜಾಗಕ್ಕೆ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾದಿಕ್ ಪಾಷಾ ಅವರನ್ನು ನೇಮಿಸಲಾಗಿದೆ.

     

    ಈ ಹಿನ್ನೆಲೆ ಇನ್ಸ್ ಪೆಕ್ಟರ್ ಮುನಿಕೃಷ್ಣ ಅವರು ತಮ್ಮ ಅಧಿಕಾರವನ್ನ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರಿಗೆ ಹಸ್ತಾಂತರಿಸಿ ಶುಭಕೋರಿದರು.

     

    ಅದೇರೀತಿ ಗ್ರಾಮಾಂತರ ಠಾಣೆಯ ನೂತನ ಇನ್ಸ್ ಪೆಕ್ಟರ್ ಅಗಿ ಅಧಿಕಾರ ವಹಿಸಿಕೊಂಡ ಸಾದಿಕ್ ಪಾಷಾ ಅವರಿಗೆ ಹೂಗುಚ್ಚ ನೀಡಿ ಸಿಬ್ಬಂದಿ ವರ್ಗದವರು ಸ್ವಾಗತಿಸಿದರು.

  • ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರಾಗಿ ಸಾಧಿಕ್ ಪಾಷ ಅಧಿಕಾರ ಸ್ವೀಕರ : ನೂತನ ಪೊಲೀಸ್ ಅಧಿಕಾರಿಗೆ ಅಭಿನಂದಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ

    ದೊಡ್ಡಬಳ್ಳಾಪುರ : ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಸಯ್ಯದ್ ಪಾಷ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನೂತನ ವೃತ್ತ ನೀರಿಕ್ಷಕರಿಗೆ ವಿಶೇಷವಾಗಿ ಶಾಲು ಹೊದಿಸಿ ಹಾರ ಹಾಕಿ ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಲಾಯಿತು. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ವೃತ್ತ ನೀರಿಕ್ಷಕರೊಂದಿಗೆ ಫೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದರು

    ಸಂಘಟನೆಯ ತಾಲ್ಲೂಕು ಅಧ್ಯಕ್ಷ ನೇರಳೆಘಟ್ಟ ರಾಮು ಮಾತನಾಡಿ ನಮ್ಮ ತಾಲ್ಲೂಕಿಗೆ ನೂತನವಾಗಿ ವೃತ್ತ ನೀರಿಕ್ಷಕರಾಗಿ ಆಗಮಿಸಿರುವ ಸಾಧಿಕ್ ಪಾಷ ರವರನ್ನು ನಮ್ಮ ತಾಲ್ಲೂಕು ಘಟಕದ ಪದಾಧಿಕಾರಿಗಳ ವತಿಯಿಂದ ಸಾಂಕೇತಿಕವಾಗಿ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ. ಇದೇ ಸಮಯದಲ್ಲಿ ತಾಲ್ಲೂಕಿನ ದಲಿತರ ಧ್ವನಿಯಾಗಿ ಶ್ರಮಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಭಾವನೆಗಳಿಗೆ ಸಕಾರತ್ಮಕವಾಗಿ ಸ್ಪಂದಿಸಿರುವ ಅಧಿಕಾರಿಗಳು , ತಾಲ್ಲೂಕಿನಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ, ದೊಡ್ಡಯ್ಯ ಲಿಂಗಾಪುರ, ನರೇಂದ್ರ ಮಾಡೇಶ್ವರ, ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ, ರಮೇಶ್ ಹಾಲೇನಳ್ಳಿ, ನರಸಿಂಹಮೂರ್ತಿ ದೊಡ್ಡ ಕುಕ್ಕನಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ ಹಾಗೂ ಸಂಘಟನೆಯ ತಾಲ್ಲೂಕು ಹೋಬಳಿ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ರೈತರಿಂದ ಕೆಐಎಡಿಬಿ ದರ ನಿಗದಿ ಬಹಿಷ್ಕಾರ : ಫೆಬ್ರವರಿ 5ಕ್ಕೆ ಡೆಡ್ ಲೈನ್

    ಕೋನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಅದಿನಾರಾಯಣ ಹೊಸಹಳ್ಳಿ ರೈತರಿಂದ ಅನಿರ್ದಿಷ್ಟವದಿ ಧಾರಣಿ ಮುಂದುವರೆದಿದ್ದು ಕೆಐಎಡಿಬಿ ವಿರುದ್ಧ ರೈತರು ಕಿಡಿಕಾರಿದ್ದಾರೆ

    ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಕಾಮನ ಬಂಡೆ( ಕಡ್ಡಿಪುಡಿ ಕಾರ್ಖಾನೆ ಸಮೀಪ) ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಯಾವುದೇ ಪ್ರಯೋಜನವಾಗಿಲ್ಲ. ಕೆಐಎಡಿಬಿ ಅಧಿಕಾರಿಗಳು ಭೂಸ್ವಾಧಿನಕ್ಕೆ ಮುಂದಾಗಿದ್ದಾರೆ. ಯಾವುದೇ ವೈಜ್ಞಾನಿಕ ಬೆಲೆ ನಿಗದಿಪಡಿಸದೆ ಏಕಾಏಕಿ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ ಎಂದು ರೈತರು ತಮ್ಮ ಆಕ್ರೋಶ ಹೊರ ಹಾಕಿದರು. ನಮ್ಮ ಭೂಮಿಗಳನ್ನು ಕೆಐಎಡಿಬಿ ಅಧಿಕಾರಿಗಳು ಅತಿಕ್ರಮ ಪ್ರವೇಶ ಮಾಡುವ ಮೂಲಕ ರೈತರಿಗೆ ಪಾಠ ಕಳಿಸುತ್ತೇವೆ ಎಂಬಂತೆ ವರ್ತಿಸುತ್ತಿದ್ದಾರೆ ಆದರೆ ಅದು ಎಂದಿಗೂ ಸಾಧ್ಯವಿಲ್ಲ ನಮ್ಮ ಹಕ್ಕನ್ನು ನಾವು ಕೇಳುತ್ತೇವೆ ಹೊರತು ಮತ್ತೇನಿಲ್ಲ ಎಂದಿದ್ದಾರೆ.

     

    ರೈತರನ್ನು ಸಂಪರ್ಕಿಸದೆ ಭೂ ಸ್ವಾಧೀನಕ್ಕೆ ಮುಂದಾಗಿರುವ ಕೆಐಎಡಿಬಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರಿಯಾದ ಬೆಲೆ ನಿಗದಿ ಪಡಿಸದೆ ಅನ್ಯ ವ್ಯಕ್ತಿಗೆ ಭೂ ಹಸ್ತತರಮಾಡಿ ಎಂದು ಆದೇಶ ಹೊರಡಿಸಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲು ರೈತರು ನಿರ್ಧರಿಸಿದ್ದಾರೆ. ಸರ್ಕಾರದ ಮಾನದಂಡಗಳನ್ನು ಗಾಳಿಗೆ ತೂರಿರುವ ಕೆಐಎಡಿಬಿ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅನ್ಯ ಗ್ರಾಮಗಳಿಗೆ ಅನುಸರಿಸಿರುವ ಮನದಂಡವನ್ನೇ ನಮಗೂ ಅನುಸರಿಸಿ ಎಂದು ಒತ್ತಾಯಿಸಿದರು.

     

     

    ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ಕಳೆದ 2 – 3 ದಿನಗಳಿಂದ ಪ್ರಯತ್ನಿಸಿ ಕೆಐಎಡಿಬಿ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಅಧಿಕಾರಿಗಳು ಏರ್ಪಡಿಸಿದ ಸಭೆಯಲ್ಲಿ ಅವರೊಂದಿಗೆ ಚರ್ಚಿಸಿ ಸರಿಯಾದ ವೈಜ್ಞಾನಿಕ ಬೆಲೆ ನೀಡದೇ ಇದ್ದಲ್ಲಿ ರೈತರು ತಮ್ಮ ಭೂಮಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಕುರಿತು ಅಧಿಕಾರಿಗಳು ಸ್ಥಳೀಯ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪನವರ ಗಮನಕ್ಕೆ ತಂದಿದ್ದು. ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಹಾಗೂ ಫೆಬ್ರವರಿ 5 ರವರೆಗೂ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದು ಸಚಿವರ ಮನವಿಯಂತೆ ರೈತರು ಶಾಂತ ರೀತಿಯಲ್ಲಿ ಫೆಬ್ರವರಿ 5 ರವರೆಗೂ ಧರಣಿ ಸತ್ಯಾಗ್ರಹ ಮಾಡಲಿದ್ದಾರೆ ಎಂದು ತಿಳಿಸಿದರು

    ಸ್ಥಳೀಯ ರೈತರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಭೇಟಿ ಕುರಿತು ಪ್ರಶ್ನಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ರೈತರೊಂದಿಗೆ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸ್ಥಳೀಯ ಭೂ ಸ್ವಾಧೀನ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದ್ದೇನೆ.

    ರೈತರು ಒಗ್ಗಟ್ಟಾಗಿ ಮಾತನಾಡುವುದು ಅವಶ್ಯಕವಾಗಿದೆ ಹಾಗೂ ರೈತರ ಹೋರಾಟಕ್ಕೆ ತಾವು ಸದಾ ಬೆಂಬಲ ನೀಡುವುದಾಗಿ ಫೆಬ್ರವರಿ 5ರಂದು ಸಮಸ್ಯೆ ಬಗೆಹರಿಯದ ಪಕ್ಷದಲ್ಲಿ ತಾವೇ ಖುದ್ದು ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು

     

    ಕೆಐಎಡಿಬಿ ನೆಡೆ ಏನೆಂಬುದು ಕಾದು ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ರೈತರು  ಉಪಸ್ಥಿತರಿದ್ದರು.

  • ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ಸಮಿತಿಯ ಸಭೆ : ಗಣ್ಯರಿಂದ ಮಾರ್ಗದರ್ಶನ

    ದೊಡ್ಡಬಳ್ಳಾಪುರ ಯೋಜನಾ ಕಛೇರಿ ವ್ಯಾಪ್ತಿಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ಸಮಿತಿಯ ಸಭೆ ಯನ್ನು ದೊಡ್ಡಬಳ್ಳಾಪುರ ಯೋಜನಾ ಕಛೇರಿಯಲ್ಲಿ ನಡೆಸಲಾಯಿತು.ಸಭೆಯಲ್ಲಿ ಭಾಗವಹಿಸಿದ ಗಣ್ಯರನ್ನು ದೊಡ್ಡಬಳ್ಳಾಪುರ ಯೋಜನಾ ಕಛೇರಿಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್ ನಾಯಕ್ ಸ್ವಾಗತಿಸಿದರು.

     

    ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ತಿಮ್ಮಯ್ಯನಾಯ್ಕ ರವರು ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕ ಮಾತನಾಡಿ ವಿಪತ್ತು ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ ಸಾಂದರ್ಭಿಕವಾಗಿ ನಮ್ಮ ಶ್ರಮ ಹಾಗೂ ಪ್ರಯತ್ನ ಅತ್ಯವಶ್ಯಕ. ವಿಪತ್ತು ನಿರ್ವಹಣೆ ಕುರಿತು ತರಬೇತಿ ಪಡೆಯುವುದು ಸಾರ್ವಜನಿಕರ ಪ್ರಾಣ ಹಾನಿ ತಪ್ಪಿಸುವಲ್ಲಿ ಸಹಕಾರಿಯಾಗಲಿದೆ. ಇಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಶ್ರಮ ಎಲ್ಲರೂ ಮೆಚ್ಚುವಂತದ್ದು. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಬಂದಿರುವ ಗಣ್ಯರಿಗೆ ಅಭಿನಂದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು

    ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಯೋಜನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಉಮರಬ್ಬ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು ನಮ್ಮ ಯೋಜನೆಯಲ್ಲಿ ಕೇವಲ ಕೌಶಲ್ಯಧಾರಿತ ತರಬೇತಿಗಳನಷ್ಟೇ ಅಲ್ಲದೆ ವಿಪತ್ತು ನಿರ್ವಹಣಾ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಯೋಜನೆಯ ಪ್ರತಿಯೊಬ್ಬ ಸದಸ್ಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ವಿಪತ್ತು ನಿರ್ವಹಣಾ ತರಬೇತಿ ಅಥವಾ ಮಾಹಿತಿ ಪಡೆಯುವ ಮೂಲಕ ಅನ್ಯರಿಗೆ ನೇರವಾಗಬೇಕು ಎಂದು ತಿಳಿಸಿದರು

     

    ಕಾರ್ಯಾಗಾರದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಕೇಂದ್ರ ಕಛೇರಿಯ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್ ರವರು ಶೌರ್ಯ ಘಟಕಗಳ ಕಾರ್ಯವೈಕರಿ ಹಾಗೂ ವಿಶೇಷತೆ ಕುರಿತಂತೆ ಸಮಗ್ರವಾದ ವಿವರದೊಂದಿಗೆ ಶೌರ್ಯ ಘಟಕದ ಎಲ್ಲಾ ಸದಸ್ಯರಿಗೂ ಹಾಗೂ ಮೇಲ್ವಿಚಾರಕರುಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಧಳ ಮತ್ತು ಪೋಲಿಸ್ ಇಲಾಖೆಗಳೊಂದಿಗೆ ಉತ್ತಮ ಸಹಕಾರ ನೀಡಿ ಸೇವೆ ಸಲ್ಲಿಸುವ ಕುರಿತು ತಿಳಿಸಿದರು

    ಕಾರ್ಯಾಗಾರದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ದರ್ಶನ್.ಎಂ.ಎಸ್,ಲೋಹಿತ್ ಗೌಡ ಕೃಷಿ ಮೇಲ್ವಿಚಾರಕರು, ದೊಡ್ಡಬಳ್ಳಾಪುರ ಯೋಜನಾ ಕಛೇರಿ ವ್ಯಾಪ್ತಿಯ ಶೌರ್ಯ ಘಟಕದ ಮೇಲ್ವಿಚಾರಕರು,ಕೃಷಿ ಮೇಲ್ವಿಚಾರಕರು,ಆಡಳಿತ ಸಹಾಯಕ ಪ್ರಭಂದಕರು, ಹಾಗೂ ಶೌರ್ಯ ತಂಡದ ಸದಸ್ಯರುಗಳು ಹಾಜರಿದ್ದರು.

  • ಮಡಿವಾಳ ಮಾಚಿ ದೇವರ ಜಯಂತೋತ್ಸವ : ಸಮುದಾಯ ಮುಖಂಡರಿಂದ ಹಲವು ಬೇಡಿಕೆ ಈಡೇರಿಸುವಂತೆ ಮನವಿ

    ದೊಡ್ಡಬಳ್ಳಾಪುರ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿ ದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಹಲವು ಬೇಡಿಕೆಗಳನ್ನು ತಾಲ್ಲೂಕು ದಂಡಧಿಕಾರಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಿದ್ದು. ತಾಲ್ಲೂಕು ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್. ಆರ್. ಮುನಿಶ್ಯಾಮಯ್ಯ ತಿಳಿಸಿದರು

    ದೊಡ್ಡಬಳ್ಳಾಪುರ ನಗರ ಭಾಗದ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಡಿವಾಳ ಮಾಚಿ ದೇವರ ಜಯಂತೋತ್ಸವದ ಅಂಗವಾಗಿ ಸಮುದಾಯದ ಮುಖಂಡರು ಹಾಗೂ ಸದಸ್ಯರ ನೆರವಿಂದ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ಆಯೋಜನೆ ಕಾರ್ಯಕ್ರಮದಲ್ಲಿ ಮಾಚಿ ದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ನಮ್ಮ ಸಮುದಾಯಕ್ಕೆ ಎರಡು ಎಕ್ಕರೆ ಭೂಮಿಯನ್ನು ಮಂಜೂರು ಮಾಡಲು ಕೋರಿದ್ದೇವೆ, ಶ್ರೀ ಶರಣು ಮಾಚಿದೇವರ ಹೆಸರನ್ನು ರಸ್ತೆ /ವೃತ್ತ /ಉಧ್ಯಾನವನಕ್ಕೆ ನಾಮಕರಣ ಮಾಡಬೇಕಾಗಿ, ಪ್ರತಿ ಫೆಬ್ರವರಿ 1ರಂದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಾಚಿ ದೇವರ ಜಯಂತಿಯನ್ನು ಆಚರಿಸುವಂತೆ, ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಮಂಜೂರಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ತಾಲ್ಲೂಕು ದಂಡಧಿಕಾರಿಗಳ ಸಮ್ಮುಖದಲ್ಲಿ ತಿಳಿಸಲಾಗಿದ್ದು ಅಧಿಕಾರಿಗಳಿಂದ ಸಕಾರತ್ಮಕ ಸ್ಪಂದನೆ ದೊರೆತಿದೆ ಮುಂದೆ ಸಮುದಾಯದ ಬೆಳವಣಿಗೆಗೆ ಮತ್ತಷ್ಟು ಯೋಜನೆಗಳನ್ನು ರೂಪಿಸುವುದರ ಮೂಲಕ ಶ್ರಮಿಸಲಾಗುವುದು ಎಂದು ತಿಳಿಸಿದರು

     

    ಸಂಘದ ಖಜಾಂಜಿ ಶ್ರೀನಿವಾಸ್ ಮಾತನಾಡಿ ಸಮುದಾಯದ ಮುಖಂಡರು ಹಾಗೂ ಎಲ್ಲಾ ಸದಸ್ಯರನ್ನು ಒಳಗೊಂಡಂತೆ ಸರ್ವರೂ ಇಂದು ಮಡಿವಾಳ ಮಾಚಿ ದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ಧುರಿಯಾಗಿ ಆಚರಿಸಿದ್ದೇವೆ. ಸಾರ್ವಜನಿಕರಿಗೆ ಪಾನಕ ಮಜ್ಜಿಗೆ ಸಹಿತ ಪ್ರಸಾದ ವಿನಿಯೋಗ ಮಾಡಲಾಗಿದೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು

  • ತೂಬಗೆರೆಗೆ ನೂತನ ಬಿಎಂಟಿಸಿ ಬಸ್ : ವಿಶೇಷ ಪೂಜೆ ಸಲ್ಲಿಸಿ ಮೊದಲ ಪ್ರಯಾಣ ಪ್ರಾರಂಭಿಸಿದ ಬಿಎಂಟಿಸಿ

    ಹಲವು ಪ್ರಯತ್ನಗಳನಂತರ ಮತೊಮ್ಮೆ ನಮ್ಮ ಊರಿಗೆ ನೂತನ ಬಸ್ ಸಂಪರ್ಕ ನೀಡಲಾಗಿದ್ದು. ಜನರ ಮುಖದಲ್ಲಿ ಸಂತೋಷದ ಭಾವನೆ ಕಾಣುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸರ್ಕಾರಿ ಬಸ್ ಎಂಬುವ ಭಾವನೆ ಮರೆತು ತಮ್ಮ ಸ್ವಂತ ವಾಹನದಂತೆ ಭಾವಿಸಿ ಸ್ವಚ್ಛತೆ ಕಾಪಾಡುವಲ್ಲಿ ಮುಂದಾಗಬೇಕಿದೆ ಎಂದು ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜು ತಿಳಿಸಿದರು

    ತಾಲ್ಲೂಕಿನ ತೂಬಗೆರೆ ಗ್ರಾಮಕ್ಕೆ ನೂತನವಾಗಿ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸಿದ್ದು. ಬಸ್ ತನ್ನ ಮೊದಲ ಪ್ರಯಾಣ ಪ್ರಾರಂಭಿಸುವ ಮುನ್ನ ಗ್ರಾಮದ ಪ್ರಸಿದ್ಧ ದೇವಾಲಯದ ಲಕ್ಷ್ಮಿ ವೆಂಕಟೇಶ್ವರ ದೇವರಿಗೆ ಹಾಗೂ ಬಿಎಂಟಿಸಿ ವಾಹನಕ್ಕೆ ಎಸ್ ಆರ್ ಮುನಿರಾಜು   ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

     

    ವಿಶೇಷ ಪೂಜೆ ಸಲ್ಲಿಸಿ ಸುದ್ದಿಗರರೊಂದಿಗೆ ಮಾತನಾಡಿದ ಅವರು ನಮ್ಮ ತೂಬಗೆರೆ ಗ್ರಾಮಕ್ಕೆ ಬಸ್ಸಿನ ಅವಶ್ಯಕತೆ ತುಂಬಾ ಇದ್ದು ನಮ್ಮೆಲ್ಲ ಮುಖಂಡರ ಸತತ ಪ್ರಯತ್ನದಿಂದಾಗಿ ಇಂದು ನಮ್ಮ ಗ್ರಾಮದಿಂದ ಹೆಬ್ಬಾಳದ ಮಾರ್ಗವಾಗಿ ಚಲಿಸುವ ಬಿಎಂಟಿಸಿ ವಾಹನ ಲಭಿಸಿದೆ. ಗ್ರಾಮಸ್ಥರು ಈ ಅವಕಾಶವನ್ನು ಸದ್ಭಾಳಕ್ಕೆ ಮಾಡಿಕೊಳ್ಳಬೇಕು. ನಮ್ಮ ಗ್ರಾಮಕ್ಕೆ ವಾಹನ ನೀಡಿರುವ ಬಿಎಂಟಿಸಿ ಸಂಸ್ಥೆಗೆ, ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು

    ಸ್ಥಳೀಯ ಮುಖಂಡರಾದ ಅರವಿಂದ್ ಮಾತನಾಡಿ ಬಹಳ ವರ್ಷಗಳಿಂದ ತೂಬಗೆರೆ ಗ್ರಾಮಸ್ಥರ ಬಹು ಬೇಡಿಕೆ ಇಂದು ಈಡೇರಿದೆ. ಸ್ಥಳೀಯವಾಗಿ ಬಸ್ ವಾಹನದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಮುಂಜಾನೆ 7:00ಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಆಟೋಗಳ ಮೇಲೆ ಅವಲಂಬಿತರಾಗಿದ್ದರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆಎಚ್ ಮುನಿಯಪ್ಪ ರವರ ಬಳಿ ನಮ್ಮ ನಿವೇದನೆ ಹೇಳಿಕೊಂಡಾಗ ಈ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ತೂಬಗೆರೆ ಗ್ರಾಮ ಈಗ ಹೋಬಳಿಯ ಮುಖ್ಯ ಕೇಂದ್ರವಾಗಿದ್ದು ಜನಸಂಖ್ಯೆ ಕೂಡ ಬೆಳೆದಿದೆ. ಸ್ಥಳೀಯ ಗ್ರಾಮಸ್ಥರ ಅನುಕೂಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ ಸ್ಥಳೀಯ ಮುಖಂಡರ ಶ್ರಮಕ್ಕೆ ಹಾಗೂ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಿದ ಸಾರಿಗೆ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು

     

    ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗಪ್ಪ ಮಾತನಾಡಿ ಸ್ಥಳೀಯ ಶಾಸಕರು ಆಶ್ವಾಸನೆ ಕೊಟ್ಟಂತೆ ನೆಡೆದಿದ್ದಾರೆ ಗ್ರಾಮದ ಜನತೆಗೆ ಬಸ್ ಕಲ್ಪಿಸುವ ಮೂಲಕ ಗ್ರಾಮಸ್ಥರಿಗೆ ಮತ್ತಷ್ಟು ಅನುಕೂಲಮಾಡಿಕೊಟ್ಟಿದ್ದಾರೆ. ಗ್ರಾಮಕ್ಕೆ ನೂತನ ಬಸ್ ಕಲ್ಪಿಸಲು ಸ್ಥಳೀಯ ಮುಖಂಡರ ಪ್ರಯತ್ನ ಫಲ ಕೊಟ್ಟಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು

    ಈ ಹಿಂದೆ ನಮ್ಮ ಗ್ರಾಮಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ವಾಹನವನ್ನು ಪ್ರಯಾಣಿಕರ ಕೊರತೆಯಿಂದಾಗಿ ನಿಲ್ಲಿಸಲಾಗಿತ್ತು ಆದರೆ ಈಗ ತೂಬಗೆರೆ ಗ್ರಾಮದ ಗ್ರಾಮಸ್ಥರ ಸಂಖ್ಯೆ 5000 ಕ್ಕೂ ಹೆಚ್ಚಿದ್ದು. ಸ್ಥಳೀಯವಾಗಿ ಒಂದು ಬಸ್ಸಿನ ಅವಶ್ಯಕತೆ ತುಂಬಾ ಇತ್ತು. ಗ್ರಾಮಕ್ಕೆ ನೂತನ ಬಸ್ ವ್ಯವಸ್ಥೆ ಕಲ್ಪಿಸಿದ ಶಾಸಕರಿಗೆ ಹಾಗೂ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸ್ಥಳೀಯ ಮುಖಂಡರಾದ ರವಿ ಸಿದ್ದಪ್ಪ ತಿಳಿಸಿದರು.

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ತೂಬಗೆರೆ ಪಂಚಾಯಿತಿ ಅಧ್ಯಕ್ಷರಾದ ನಂಜಮ್ಮ ಬಿ ನರಸಿಂಹಮೂರ್ತಿ, ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟೇಶ್ ಟಿ ವಿ,  ಕಿಟ್ಟಿ , ಮಾಜಿ ಯೋಧರಾದ ರಾಘವೇಂದ್ರ, ಅನಂತ್ ರಾಜಗೋಪಾಲ, ಮುನಿಕೃಷ್ಣಪ್ಪ ಸೇರಿದಂತೆ ತೂಬಗೆರೆ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು

  • ಅರ್ಧಕ್ಕೆ ನಿಂತ ದೇವಾಲಯ ನಿರ್ಮಾಣ ಕಾರ್ಯ : ಸಹಾಯ ಮುಂದಾಗಲು ದಾನಿಗಳಲ್ಲಿ ಆಡಳಿತ ಮಂಡಳಿ ಮನವಿ

    ಸತತವಾಗಿ 10ವರ್ಷಗಳಿಂದ ಶ್ರಮ ಪಡುತ್ತಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ನಮ್ಮ ದೇವಾಲಯಕ್ಕೆ ದಾನಿಗಳ ಅವಶ್ಯಕತೆ ಇದ್ದು ದೈವ ಕಾರ್ಯಕ್ಕೆ ಸಹಕಾರ ನೀಡಿ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ್ ಮನವಿ ಮಾಡಿದರು.

    ದೇವಾಲಯವು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು ದಾನಿಗಳ ನೆರವಿನಿಂದ ಅಯ್ಯಪ್ಪ ಸ್ವಾಮಿ ದೇವಾಲಯವು ಶೇಕಡಾ 75 ರಷ್ಟು ಪೂರ್ಣಗೊಂಡಿದೆ. ಆದರೆ ಹಣದ ಕೊರತೆಯಿಂದ ಉಳಿದ ಕಾಮಗಾರಿ ಮಾಡಲು ಸಾಧ್ಯವಾಗದೆ ದೇವಾಲಯದ ಕಾಮಗಾರಿ ಅರ್ಧಕ್ಕೆ ನಿಂತುಬಿಟ್ಟಿದೆ. ದೇವಾಲಯ ಪೂರ್ಣಗೊಳಿಸಲು ದಾನಿಗಳ ನೆರವು ಅವಶ್ಯಕವಿದ್ದು ಆಸಕ್ತರು ವೆಂಕಟೇಶ್ ರವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ

    ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ ಹಲವಾರು ಕಳೆದ ಹತ್ತು ವರ್ಷಗಳಲ್ಲಿ ದಾನಿಗಳ ನೆರವಿನಿಂದ ನಮ್ಮ ಶಕ್ತಿ ಮೀರಿ ಪ್ರಯತ್ನ ಪಟ್ಟು ದೇವಾಲಯ ನಿರ್ಮಾಣ ಮಾಡಿದ್ದೇವೆ ಆದರೆ ದೇವಾಲಯದ ಕಾರ್ಯ ಇನ್ನು ಪೂರ್ಣಗೊಂಡಿಲ್ಲ ದೇವಾಲಯದ ಹಲವು ಕಾರ್ಯಗಳು ಬಾಕಿ ಇದ್ದು ದಾನಿಗಳ ನೆರವಿನ ಅವಶ್ಯಕತೆ ಇದೆ. ದಾನಿಗಳು ತಮ್ಮ ಕೈಲಾದ ಸಹಾಯವನ್ನು ದೇವಾಲಯದ ಮಂಡಳಿಗೆ ಸಲ್ಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.

    ದಾನಿಗಳ ಸಹಾಯಕ್ಕಾಗಿ ಮಾಹಿತಿ :

     

    ಅಯ್ಯಪ್ಪ ಸ್ವಾಮಿ ದೇವಾಲಯ, ತೂಬಗೆರೆ

    ವೆಂಕಟೇಶ್ ಅಧ್ಯಕ್ಷರು

    ಆಡಳಿತ ಮಂಡಳಿ

    ದೂ. ಸಂಖ್ಯೆ : 9591064333

  • ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಮಾಂಗಲ್ಯ ಭಾಗ್ಯ ಕಾರ್ಯಕ್ರಮ : ದಾಂಪತ್ಯ ಜೀವನಕ್ಕೆ ಕಾಲಿಟ್ಟ 13 ಜೋಡಿಗಳು

    ದೊಡ್ಡಬಳ್ಳಾಪುರ : ಕರ್ನಾಟಕ ಸರ್ಕಾರ ಧಾರ್ಮಿಕ‌ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಿನ‌ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ‌ ದೇವಸ್ಥಾನದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ‘ಮಾಂಗಲ್ಯ ಭಾಗ್ಯ’ ಎಂಬ ಯೋಜನೆಯ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನ ಇಂದು(ಜ. 31) ಬೆಳಗ್ಗೆ 11:20 ರಿಂದ 12:20ರವರೆಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ನೆಡೆಸಲಾಯಿತು

    ‘ ಮಾಂಗಲ್ಯ ಭಾಗ್ಯ ‘ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಿರಿಯರ ಆಶೀರ್ವಾದದೊಂದಿಗೆ ಒಟ್ಟು 13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ದೇವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ. ನಾಗರಾಜ್ ಮಾತನಾಡಿ ‘ಮಾಂಗಲ್ಯ ಭಾಗ್ಯ’ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ‌ 5 ಸಾವಿರ‌ ಹಾಗೂ ವಧುವಿಗೆ 10 ಸಾವಿರ ಸೇರಿದಂತೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು‌ ಹೀಗೆ ಒಟ್ಟು 55 ಸಾವಿರ ರೂ. ಗಳನ್ನ ದೇವಾಲಯದ ವತಿಯಿಂದ ಭರಿಸಲಾಗಿದೆ. ಹಾಗೂ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಸಹ ದೇವಾಲಯ ವತಿಯಿಂದ ಮಾಡಲಾಗಿತ್ತು ಎಂದು ತಿಳಿಸಿದರು

    ಈ ವೇಳೆ ದೇವಾಲಯದ ಮುಜರಾಯಿ ತಹಶೀಲ್ದಾರ್ ಜೆ.ಜೆ.ಹೇಮಾವತಿ, ನಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಬೆಸ್ಕಾಂ ವಿರುದ್ಧ ಹೋರಾಟಕ್ಕೆ ವಿದ್ಯುತ್ ಗುತ್ತಿಗೆದಾರರು : ಅಧಿಕಾರಿಗಳೇ ಬ್ರೋಕರ್ ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೆಸ್ಕಾಂ ಅಧಿಕಾರಿಗಳ ವಿರುದ್ಧ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಆರೋಪ ಮಾಡಲಾಯಿತು ಸ್ಥಳೀಯ ವಿದ್ಯುತ್ ಕಾಮಗಾರಿಗಳಲ್ಲಿ ಅಧಿಕಾರಿಗಳೇ ಗುತ್ತಿಗೆ ಪಡೆಯಲು ಮುಂದಾಗಿದ್ದು ಸರ್ಕಾರದ ಅನುಮತಿ ಪಡೆದಿರುವ ಗುತ್ತಿಗೆದಾರರು ಕೆಲಸ ಇಲ್ಲದಂತೆ ಪರದಾಡುವಂತಾಗಿದೆ ವಿದ್ಯುತ್ ಕಾಮಗಾರಿ ಕುರಿತು ಹಲವರಿಗೆ ಬೆಸ್ಕಾಂ ವತಿಯಿಂದ ವಿದ್ಯುತ್ ಗುತ್ತಿಗೆದಾರರನ್ನಾಗಿ ಅನುಮತಿ ನೀಡಲಾಗಿದ್ದು ಕಾರ್ಯನಿರ್ವಹಿಸುವಲ್ಲಿ ಪರಿಣಿತಿ ಜೊತೆಗೆ ಸರ್ಕಾರದ ಅನುಮತಿ ಪಡೆದಿರುವ ಗುತ್ತಿಗೆದಾರರು ಗುತ್ತಿಗೆ ಪಡೆಯಲು ಹರಸಾಹಸ ಪಡಬೇಕಿದೆ ಎಂದು ವಿದ್ಯುತ್ ಗುತ್ತಿಗೆದಾರರು ಆರೋಪಿಸಿದರು.

     

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮಿ ಕುಮಾರ್ ಮಾತನಾಡಿ ಅಧಿಕಾರಿಗಳೇ ಗುತ್ತಿಗೆ ಪಡೆಯುವಲ್ಲಿ ಮುಂದಾಗಿದ್ದಾರೆ, ತಾಲ್ಲೂಕಿನ ಬಹುತೇಕ ಗುತ್ತಿಗೆಗಳನ್ನು ಪರಿಣಿತಿ ಹೊಂದಿಲ್ಲದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಅಧಿಕಾರಿಗಳು ಗುತ್ತಿಗೆದಾರರು ನೀಡುವ ಹಣದ ಆಸೆಗೆ ಬಲಿಯಾಗಿದ್ದಾರೆ. ವಿದ್ಯುತ್ ಇಲಾಖೆಯ ಬಗೆಗಿನ ಗೌರವ ಸಾರ್ವಜನಿಕ ಕ್ಷೇತ್ರದಲ್ಲಿ ಬರಬರುತ್ತಾ ಕ್ಷಿಣಿಸುತ್ತಿದೆ ಎಂದು ತಿಳಿಸದರು

     

    ಸಂಘದ ಕಾರ್ಯಧ್ಯಕ್ಷರಾದ ಶಿವಶಂಕರ್ ಮಾತನಾಡಿ ವಿದ್ಯಾಭ್ಯಾಸ ಮುಗಿಸಿ ಪರಿಣಿತಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಒಂದು ಕಡೆಯದರೇ ಯಾವುದೇ ಪರಿಣಿತಿ ಪಡೆಯದೇ ಕೇವಲ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡಿ ಕಾರ್ಯ ಸಾಧನೆ ಮಾಡುತ್ತಿರುವ ಗುತ್ತಿಗೆದಾರರು ಮತ್ತೊಂದೆಡೆ ಎಂಬಂಥಾಗಿದೆ. ಮನಸೊಇಚ್ಛೆ ಅಧಿಕಾರಿಗಳು ವರ್ತಿಸುತ್ತಿದ್ದೂ ನಿಷ್ಟವಂತ ಗುತ್ತಿಗೆದಾರನಿಗೆ ಬೆಲೆ ಇಲ್ಲದಂಥಗಿದೆ. ಇದು ನಮ್ಮ ಜೀವನದ ಪ್ರಶ್ನೆ ಹೋರಾಟ ಒಂದೇ ನಮಗೆ ಉಳಿದಿರುವ ಮಾರ್ಗ. ಹಾಗಾಗಿ ನಮ್ಮ ವಿದ್ಯುತ್ ಗುತ್ತಿಗೆದಾರರ ಸಂಘ ಸ್ಥಳೀಯ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಹೋರಾಟ ಸಾರಿದ್ದೇವೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ಈ ಸಂದರ್ಭದಲ್ಲಿ ವಿದ್ಯುತ್ ಕುತ್ತಿಗೆದರ ಸಂಘದ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಿಕುಮಾರ್, ಕಾರ್ಯಧ್ಯಕ್ಷರಾದ ಶಿವಶಂಕರ್, ನಾರಾಯಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು

  • ದಂಡುದಾಸಕೊಡಿಗೇಹಳ್ಳಿಯಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮ : ಗ್ರಾಮಸ್ಥರರಿಂದ ಸಂಭ್ರಮದ ಆಚರಣೆ

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ ಗಿರಿಜನ ಉಪಯೋಜನೆ ಅಡಿಯಲ್ಲಿ ಗಿರಿಜನೋತ್ಸವ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ದಂಡುದಾಸ ಕೊಡಿಗೇಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ರವರ ವಹಿಸಿದ್ದು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿದ್ದ ಕಾರ್ಯಕ್ರಮವನ್ನು ಗ್ರಾಮಸ್ಥರು ಹಬ್ಬದಂತೆ ಆಚರಿಸಿದರು

    ಗಿರಿಜೋತ್ಸವ ಪಾರಂಪರೆ ಪಾರಂಪರಿಕವಾಗಿ ನಡೆದು ಬಂದಿರುವ ಹಬ್ಬವಾಗಿದೆ ಜನಪದ ಕಲೆ, ಉರುಸು ಕಾರ್ಯಕ್ರಮಗಳಂತೆ ಗಿರಿಜೋತ್ಸವ ಕೂಡ ನಮ್ಮ ಜೀವನದದಲ್ಲಿ ಅಳವಡಿಸಿಕೊಂಡಿದ್ದೇವೆ. ಇದು ಶತಮಾನಗಳಿಂದ ಬಂದಿರುವ ಪರಂಪರೆಯಾಗಿದ್ದು ಇಂತಹ ಕಾರ್ಯಕ್ರಮಗಳಿಂದ ನಮ್ಮ ಸ್ಪೂರ್ತಿ ದುಪ್ಪಟ್ಟಾಗುತ್ತದೆ. ನಮ್ಮ ಹಲವು ಜನಾಂಗಗಳು ನಡೆದು ಬಂದ ದಾರಿಯನ್ನು ಈ ಕಾರ್ಯಕ್ರಮಗಳು ಪ್ರತಿನಿಧಿಸುತ್ತವೆ. ಗ್ರಾಮಸ್ಥರು ಗಿರಿಜನೋತ್ಸವ ಕಾರ್ಯಕ್ರಮವನ್ನು ಹಬ್ಬದ ರೀತಿ ಆಚರಣೆ ಮಾಡುತ್ತಿದ್ದಾರೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು

    ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸಿಸುವ ನಮ್ಮ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಕಾರ್ಯಕ್ರಮವನ್ನು ಸಚಿವರಾದ ಕೆ ಎಚ್ ಮುನಿಯಪ್ಪ ರವರು ಉದ್ಘಾಟಿಸಿರುವುದು ಮತ್ತಷ್ಟು ಸಂತಸ ತಂದಿದೆ ಮಕ್ಕಳು ಸುಶಿಕ್ಷಿತರಾಗಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಹಾಗೂ ಜನಾಂಗಗಳು ಬೆಳೆದು ಬಂದ ಹಾದಿಯನ್ನು ಯುವ ಪೀಳಿಗೆ ತಿಳಿಸುವ ಮಹತ್ತರ ಕಾರ್ಯಕ್ರಮಗಳು ಇವಾಗಿದ್ದು ಗ್ರಾಮಸ್ಥರಲ್ಲಿ ವಿಶೇಷ ಸಂತಸ ಉಂಟುಮಾಡಿದೆ ಎಂದು ತಿಳಿಸಿದರು

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನುಕೃಷ್ಣಪ್ಪ,ಉಪಾಧ್ಯಕ್ಷರಾದ ಜಗಣ್ಣ, ಸ್ಥಳೀಯ ಮುಖಂಡರಾದ ಮುರಳಿ, ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಮ್ಮ, ಪ್ರೇಮಕುಮಾರಿ, ಮುನಿರಾಜು, ಚಿಕ್ಕಣ್ಣ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೌಮ್ಯ , ನಾರಾಯಣ ಸ್ವಾಮಿ, ಕೃಷ್ಣಪ್ಪ, ಕವಿತಮ್ಮ, ವಸಂತ್, ಮುನಿಶ್ಯಾಮ್, ವೆಂಕಟೇಶ್, ನರಸಿಂಹಣ್ಣ, ತಿಮ್ಮರಾಯಪ್ಪ, ದೇವರಾಜಪ್ಪ, ಕರವೇ ಮಂಜಣ್ಣ ಮೆಳೇಕೋಟೆ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.