Blog

  • ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ – ಪ್ರಿಯಾಂಕ್ ಖರ್ಗೆ

    ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

     

    ಈ ಕುರಿತು ಮಾತನಾಡಿರುವ ಅವರು ನಾನು ಅನೇಕ ಬಾರಿ ಹೇಳಿರುವಂತೆ ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ. ಜನರ ಸಂಕಷ್ಟಗಳನ್ನು ಆಲಿಸಿ ಪ್ರಾಮಾಣಿಕವಾಗಿ ಸ್ಪಂದಿಸುವ ಸರ್ಕಾರ. ಕನ್ನಡಿಗರ ಹಿತಾಸಕ್ತಿ ಕಾಪಾಡಲು ಸರ್ವ ರೀತಿಯಲ್ಲೂ ಶ್ರಮಿಸುತ್ತಿರುವ ಸಾರ್ಥಕ ಸರ್ಕಾರ.

     

    ನಿನ್ನೆಯಷ್ಟೆ ದೆಹಲಿಯಲ್ಲಿ ಒಕ್ಕೂಟ ಸರ್ಕಾರದ ಆರ್ಥಿಕ ಅನ್ಯಾಯಗಳ ವಿರುದ್ಧ ಘರ್ಜಿಸಿದ್ದ ನಿಮ್ಮ ಸರ್ಕಾರ, ಇಂದು ವಿಧಾನ ಸೌಧದಲ್ಲಿ ಐತಿಹಾಸಿಕ “ಜನಸ್ಪಂದನ” ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರಾಜ್ಯದ ಜನರ ಸಂಕಷ್ಟಗಳಿಗೆ ನೆರವಾಗಲು ಸಮರೋಪಾಧಿಯಾಗಿ ಕೆಲಸ ಮಾಡುತ್ತಿದೆ.

     

    ವಿಧಾನಸೌಧದ ಮುಂಭಾಗ ಕಲ್ಲುಗಳಲ್ಲಿ ಕೆತ್ತಿರುವ “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಪದಗಳನ್ನು ಹಾಗೂ ಜಗಜ್ಯೋತಿ ಗುರು ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಅಕ್ಷರಶಃ ಕಾರ್ಯರೂಪಕ್ಕಿಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

    ಜನಸ್ಪಂದನ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12:00 ಗಂಟೆವರೆಗೆ ಬರೊಬ್ಬರಿ 8,000 ಜನ “ಜನಸ್ಪಂದನ” ಕಾರ್ಯಕ್ರದಲ್ಲಿ ಹಾಜರಾಗಿ ನೊಂದಾಯಿಸಿಕೊಂಡಿದ್ದಾರೆ. ಜನರಿದ್ದಲ್ಲಿಯೇ ಅವರ ಸಮಸ್ಯೆ ಆಲಿಸುವ, ಬಂದಿರುವ ಎಲ್ಲರ ಸಮಸ್ಯೆಗಳನ್ನು ಸಮರ್ಥ ರೀತಿಯಲ್ಲಿ ಆಲಿಸಲು ವೈಜ್ಞಾನಿಕವಾಗಿ ವ್ಯವಸ್ಥೆ ಒದಗಿಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇವಲ ಉಳ್ಳವರ ಸೌಧವಾಗಿದ್ದ ವಿಧಾನಸೌಧವನ್ನು ನಮ್ಮ ಸರ್ಕಾರವು ಈಗ ಮತ್ತೊಮ್ಮೆ ಜನ ಕಲ್ಯಾಣ ಸೌಧವನ್ನಾಗಿಸಿದೆ ಎಂದು ತಿಳಿಸಿದ್ದಾರೆ

  • ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ: ವಿಜಯೇಂದ್ರ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿ

    ಯಶವಂತಪುರ ವಿಧಾನಸಭಾ ಕ್ಷೇತ್ರದ ಗೊಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ರವರಿಂದ “ಗ್ರಾಮ ಚಲೋ ಅಭಿಯಾನಕ್ಕೆ”ಚಾಲನೆ ನೀಡಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ಶ್ರೀ ನರೇಂದ್ರಮೋದಿ ಜೀ ಅವರ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡ ಜೀ ಅವರುಗಳ ಅಪೇಕ್ಷೆಯಂತೆ ಫೆಬ್ರವರಿ 9 ರಿಂದ 11 ರವರೆಗೆ 3 ದಿನಗಳ ಕಾಲ ನಡೆಯಲಿರುವ “ಗ್ರಾಮ ಚಲೋ ಅಭಿಯಾನಕ್ಕೆ” ಯಶವಂತಪುರ ವಿಧಾನಸಭಾ ಕ್ಷೇತ್ರದ ಗೊಲ್ಲಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

     

    ರಾಜ್ಯದ 28 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ, 19 ಸಾವಿರ ನಗರ ಮಟ್ಟದ ಬೂತ್ ಗಳಲ್ಲಿ 42 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಿ ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ದೊಂದಿಗೆ,

    ಪ್ರಧಾನಿ ಮೋದಿಜೀ ಅವರ ಕನಸು 2047 ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು, ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಮನೆ ಮನೆಗಳಿಗೆ ತಲುಪಿಸಿ ಮಗದೊಮ್ಮೆ ಮೋದಿಜೀ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಸಂಕಲ್ಪವಾಗಿದೆ. ಎಂದು ತಿಳಿಸಿದರು.

     

    ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಏನ್. ಎಸ್. ನಂದೀಶ , ಶಾಸಕರು ಹಾಗೂ ರಾಜ್ಯ ಕಾರ್ಯದರ್ಶಿ ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ವಿನಯ್ ಬಿದ್ರೆ , ಶ್ರೀ ಶರಣು ತಳ್ಳೀಕೆರೆ, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಮುಖಂಡರಾದ ಶ್ರೀ ಅನಿಲ್ ಚಳಗೇರಿ, ಶ್ರೀ ಎಂ.ರುದ್ರೇಶ್, ಶ್ರೀ ಎಂ.ರಂಗರಾಜು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  • ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಆಡಳಿತ ಯಂತ್ರಕ್ಕೆ ಜೀವಂತ ನಿದರ್ಶನ ಈ ಜನಸ್ಪಂದನ ಕಾರ್ಯಕ್ರಮ – ಆರ್. ಅಶೋಕ್

    ಜನಸ್ಪಂದನ ಕಾರ್ಯಕ್ರಮದ ವಿರುದ್ಧ ಗುಡುಗಿದ ವಿಪಕ್ಷ ನಾಯಕ ಆರ್ ಅಶೋಕ್

     

    ಸಿಎಂ ಸಿದ್ದರಾಮಯ್ಯನವರ ಮೇಲೆ ಎಕ್ಸ್ ಸಂದೇಶದ ಮೂಲಕ ವಾಗ್ದಾಳಿ ನೆಡೆಸಿದ್ದಾರೆ.

    ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು

    ವಿಧಾನಸೌಧದ ಮುಂದೆ ನಡೆಯುತ್ತಿರುವ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಅದೇನೋ ಮಹಾ ದೊಡ್ಡ ಸಾಧನೆ ಅಂತ ಮೆರೆಯುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ಅಸಲಿಗೆ ಅದು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಆಡಳಿತ ಯಂತ್ರಕ್ಕೆ ಜೀವಂತ ನಿದರ್ಶನ.

     

    ರಾಜ್ಯದಲ್ಲಿ 34 ಸಂಪುಟ ಸಚಿವರಿದ್ದಾರೆ. ಪ್ರತೀ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನದ 34 ನಿಗಮ ಮಂಡಳಿಗಳ ಅಧ್ಯಕ್ಷರಿದ್ದಾರೆ. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಇದ್ದಾರೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿಗಳು ಇವೆ.

     

    ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದ ಊರುಗಳಿಂದ ಬಸ್ಸು, ರೈಲು ಚಾರ್ಜು ಕೊಟ್ಟು ಅರ್ಜಿ ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ದಿನವೆಲ್ಲಾ ಕಾದು ಸಿಎಂ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇದೆ ಎಂದರೆ ಅದು ನಿಮ್ಮ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಅರ್ಜಿ ಹಿಡಿದು ಕೈಚಾಚುವ ಜನರ ಗೋಳನ್ನು ನಿಮ್ಮ ಬಿಟ್ಟಿ ಪ್ರಚಾರದ ಗೀಳಿಗೆ ಬಳಸಿಕೊಳ್ಳುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು.

     

    ಜನಸ್ಪಂದನ ಅಂತ ಪ್ರಚಾರಕ್ಕಾಗಿ ನಾಟಕ ಆಡುವ ಬದಲು ಮುಖ್ಯಮಂತ್ರಿಗಳು ತಮ್ಮ ಉಸ್ತುವಾರಿ ಮಂತ್ರಿಗಳಿಗೆ ಆಯಾ ಜಿಲ್ಲಾ ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವಂತೆ ಸೂಚನೆ ನೀಡಬೇಕು. ಶಾಸಕರು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಸಮ್ಮುಖದಲ್ಲಿ ಸ್ಥಳೀಯ ಮಟ್ಟದಲ್ಲೇ ಜನತಾ ದರ್ಶನ ನಡೆಸಿ ಅಲ್ಲೇ ಜನರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • COPTA ಕಾಯ್ದೆ ತಿದ್ದುಪಡಿ : ಕರ್ನಾಟಕದಲ್ಲಿ ಇನ್ಮುಂದೆ ಹುಕ್ಕಾ ಬ್ಯಾನ್

    ಸಾರ್ವಜನಿಕರ ಆರೋಗ್ಯ ಮತ್ತು ಯುವ ಜನತೆಯ ಭವಿಷ್ಯದ ರಕ್ಷಣೆಗಾಗಿ ರಾಜ್ಯದಾದ್ಯಂತ ಹುಕ್ಕಾ ನಿಷೇಧ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮಂತ್ರಿಗಳಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

     

    ಹುಕ್ಕಾ ಸೇವನೆಯಿಂದ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳನ್ನು ಗಮನದಲ್ಲಿರಿಸಿ ರಾಜ್ಯದಾದ್ಯಂತ ಹುಕ್ಕಾ ಸೇವನೆಯನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಲಾಗಿದೆ.

    ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ (COTPA) ತಿದ್ದುಪಡಿ ಮಾಡುವ ಮೂಲಕ ಹುಕ್ಕಾ ಸೇವನೆಯ ನಿಷೇಧವನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿದ್ದೇವೆ.

     

    ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

  • ರಾಜ್ಯದ ಪಾಲಿಗೆ 1.87 ಲಕ್ಷ ಕೋಟಿ ತೆರಿಗೆ ಹಂಚಿಕೆ ಬರದೆ ಅನ್ಯಾಯವಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ. 2017-18 ರಿಂದ ಇಲ್ಲಿಯವರೆಗೆ ರಾಜ್ಯದ ಪಾಲಿಗೆ 1.87 ಲಕ್ಷ ಕೋಟಿ ತೆರಿಗೆ ಹಂಚಿಕೆ ಬರದೇ ಅನ್ಯಾಯವಾಗಿದೆ. ರಾಜ್ಯಕ್ಕೆ ಈ ಮಟ್ಟದ ನಷ್ಟವಾಗಿರುವುದನ್ನು ಸರಿಯೆಂದು ಬಿಜೆಪಿಯವರು ಹೇಳುತ್ತಾರೆಯೇ? ನಿನ್ನೆಯ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನದಲ್ಲಿ ಮಾತನಾಡುತ್ತಾ, ರಾಜ್ಯ ತನ್ನ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದನ್ನು ದೇಶ ವಿಭಜನೆ ಮಾಡುವ ವಿಷಯ ಎಂದು ವ್ಯಾಖ್ಯಾನಿಸಿದ್ದಾರೆ.

     

    ಪ್ರತಿಭಟನೆ ಮಾಡಿದ ರಾಜ್ಯದ ನಡೆಯನ್ನು ಟೀಕಿಸಿದ ಮೋದಿಯವರು, ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್ ರಾಜ್ಯಕ್ಕೆ ಸಾಕಷ್ಟು ಅನುದಾನ ಹಂಚಿಕೆಯಾಗುತ್ತಿಲ್ಲವೆಂದೂ ಅಂದಿನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಾ, ‘60 ಸಾವಿರ ಕೋಟಿ ತೆರಿಗೆ ನೀಡುವ ಗುಜರಾತ್ ರಾಜ್ಯಕ್ಕೆ ಅನುದಾನ ಮರಳಿ ಬರುತ್ತಿಲ್ಲ, ಗುಜರಾತ್ ಭಿಕ್ಷೆ ಬೇಡುವ ರಾಜ್ಯವೇ? ಅಥವಾ ನಾವು ಭಿಕ್ಷುಕರೇ, ನಾವು ದೆಹಲಿಯಲ್ಲಿರುವವರ ಕರುಣೆಯ ಮೇಲೆ ಬದುಕಬೇಕೇ?’ಎಂದು ಟ್ವೀಟ್ ಮಾಡಿದ್ದರು. ಅಲ್ಲದೇ, 2008 ರಲ್ಲಿ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಗುಜರಾತ್ ರಾಜ್ಯ 40 ಸಾವಿರ ಕೋಟಿ ತೆರಿಗೆ ನೀಡಿದರೂ, ಕೇಂದ್ರದಿಂದ ಕೇವಲ 2.5 ರಷ್ಟು ಅನುದಾನ ಬರುತ್ತಿದೆ. ಇಂತಹ ಕನಿಷ್ಟ ಪ್ರಮಾಣದ ಅನುದಾನ ನೀಡುವ ಬದಲು ಒಂದು ವರ್ಷಗಳ ವರೆಗೆ ಗುಜರಾತ್ ನಿಂದ ತೆರಿಗೆ ಪಡೆಯುವುದನ್ನು ಬಿಟ್ಟುಕೊಡಲಿ’ ಎಂದು ಹೇಳಿದ್ದರು. ಈ ರೀತಿ ಮಾತನಾಡಿದ ಮೋದಿಯವರು, ನಾವು ಪ್ರತಿಭಟನೆ ಮಾಡಿದರೆ ಭಾರತವನ್ನು ಒಡೆಯಲಾಗುತ್ತಿದ್ದೆ ಎಂದು ಟೀಕಿಸುತ್ತಿದ್ದಾರೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತೆರಿಗೆ ಹಂಚಿಕೆ ಬಗ್ಗೆ ಹೇಳಿರುವ ಮಾತಿಗೂ, ಪ್ರಧಾನಿಯಾಗಿ ಈಗ ಹೇಳುತ್ತಿರುವ ಮಾತನಾಡಿರುವ ಮೋದಿಯವರಿಗೆ ಎರಡು ನಾಲಿಗೆಗಳಿವೆಯೇ? ಎರಡು ರೀತಿಯ ಧೋರಣೆ ಹೊಂದಿರುವ ಪ್ರಧಾನಿ ಮೋದಿಯವರ ಮಾತಿಗೆ ಕಿಮ್ಮತ್ತಿರಲು ಸಾಧ್ಯವೇ?

     

    ನಾವು ರಾಜ್ಯದ ಹಾಗೂ ಕನ್ನಡಿಗರ ಹಿತರಕ್ಷಣೆ ಮಾಡಲು ನಮ್ಮ ಉದ್ದೇಶವಾಗಿದೆ. ಕರ್ನಾಟಕದಿಂದ 4,30,000 ಕೋಟಿ ತೆರಿಗೆ ಕೇಂದ್ರಕ್ಕೆ ಹೋಗಿದೆ. ಆದರೆ ನಮಗೆ 52,257 ಕೋಟಿ ಮಾತ್ರ ರಾಜ್ಯಕ್ಕೆ ಮರಳಿ ಬರುತ್ತದೆ. ಅಂದರೆ 100 ರೂ. ರಲ್ಲಿ ಕೇವಲ 13 ರೂ. ರಾಜ್ಯಕ್ಕೆ ಬರುತ್ತಿದೆ. ಈ ಅನ್ಯಾಯವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಹಾಗೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಹೇಳಿದ್ದರು. ಆದರೆ ಹೇಳಿದ್ದ ಅನುದಾನ ಇನ್ನೂ ನೀಡಿಲ್ಲ. ರಾಜ್ಯಕ್ಕೆ 11,495 ಕೋಟಿ ವಿಶೇಷ ಅನುದಾನ ರಾಜ್ಯಕ್ಕೆ ನೀಡಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲವೆಂದ ಕೇಂದ್ರ ವಿತ್ತಸಚಿವೆ, ಆಯೋಗದ ಶಿಫಾರಸ್ಸನ್ನು ಅಲ್ಲಗೆಳೆದು ರಾಜ್ಯಕ್ಕೆ ನೀಡುವ ಈ ಮೊತ್ತವನ್ನು ನೀಡಲು ನಿರಾಕರಿಸಿದ್ದೇಕೆ?

     

    ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯಕ್ಕೆ ನೀಡುವ ಅನುದಾನದ ಗಾತ್ರವೂ ಹೆಚ್ಚಾಗಬೇಕಾಗಿತ್ತು. ಇದು ರಾಜ್ಯಕ್ಕೆ ಆಗಿರುವ ಅನ್ಯಾಯ. ಈ ವಿಷಯದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ನಾಟಕದ ಬಿಜೆಪಿ ಸಂಸದರು ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

  • 25 ದಿನಕ್ಕೆ ಕಾಲಿಟ್ಟ ರೈತರ ಹೋರಾಟ: ಕೇರ್ ಮಾಡದ ಕೆಐಎಡಿಬಿ ಅಧಿಕಾರಿಗಳು

    ದೊಡ್ಡಬಳ್ಳಾಪುರ : ಕಳೆದ 25 ದಿನಗಳಿಂದ ರೈತರು ಬಿಸಿಲಿನಲ್ಲಿ ದೂಳಿನ ವಾತಾವರಣದಲ್ಲಿ ಧರಣಿ ನಡೆಸುತ್ತಿದ್ದೇವೆ . ರೈತರ ಕುರಿತು ಕಿಂಚಿತ್ತೂ ಕರುಣೆ ಇಲ್ಲದ ಕೆಐಎಡಿಬಿ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸಿಲ್ಲ.ರೈತರ ಫಲವತ್ತಾದ ಭೂಮಿಯೊಂದಿಗೆ ದಂಧೆಗೆ ಇಳಿದಿರುವ ಅಧಿಕಾರಿಗಳಿಗೆ ರೈತರ ನೋವು ಅರ್ಥವಾಗುತ್ತಿಲ್ಲ ಎಂದು ರೈತ ಮುಖಂಡ ಆನಂದ್ ತಮ್ಮ ನೋವನ್ನು ವ್ಯಕ್ತಪಡಿಸಿದರು .

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನ ಬಂಡೆ ( ಕಡ್ಡಿಪುಡಿ ಕಾರ್ಖಾನೆ ಸಮೀಪ) ಕೆಐಎಡಿಬಿ ವಿರುದ್ಧ ಭೂ ಸ್ವಾಧೀನ ಕುರಿತಂತೆ ಕೋನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಅದಿನಾರಾಯಣ ಹೊಸಹಳ್ಳಿ ರೈತರಿಂದ ಅನಿರ್ದಿಷ್ಟವದಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಇಂದಿಗೆ 25 ದಿನಕ್ಕೆ ಕಾಲಿಟ್ಟಿದೆ

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ವೈಜ್ಞಾನಿಕ ಬೆಲೆ ನಿಗದಿಪಡಿಸದೆ ಏಕಾಏಕಿ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ .ಇದು ಬಲವಂತದ ಭೂ ಸ್ವಾಧೀನ ಪ್ರಕ್ರಿಯೆಯಾಗಿದ್ದು ಕೊನಘಟ್ಟ ಗ್ರಾಮದಲ್ಲಿ ಒಟ್ಟು 1500 ಎಕ್ಕರೆ ಜಮೀನಿದ್ದು ಲಿಂಗನ ಹಳ್ಳಿ,ಚಪ್ಪರದ ಹಳ್ಳಿ , ಕೋನಾಘಟ್ಟ ಗ್ರಾಮಗಳ ಪೈಕಿ ಸುಮಾರು 1400 ಎಕ್ಕರೆ ಜಾಗವನ್ನು ಕೆಐಎಡಿಬಿ ಪಡೆಯಲು ಮುಂದಾಗಿದ್ದಾರೆ. ನಮ್ಮ ಗ್ರಾಮದಲ್ಲಿರುವ ರೈತರು ವ್ಯವಸಾಯ ಮತ್ತು ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದು . ಈ ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಹೈನುಗಾರಿಕೆ ಮೇಲೆ ಅವಲಂಬಿತವಾಗಿರುವ ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದು . ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಎಲ್ಲೋ ಒಂದು ಕಡೆ ಕೆಐಎಡಿಬಿ ಅಧಿಕಾರಿಗಳು ಸರ್ಕಾರದ ಒತ್ತಾಯ ಮಾಡಿದ್ದು ಅವರ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ ಅಧಿಕಾರಿಗಳು ರೈತರ ಪರ ಕಾರ್ಯನಿರ್ವಹಿಸಬೇಕಿದೆ. ಇದೇ ತಿಂಗಳು 12ರಂದು ಪ್ರಾರಂಭವಾಗುವ ಸದನ ಕಲಪದಲ್ಲಿ ನಮ್ಮ ರೈತರ ಸಮಸ್ಯೆಯನ್ನು ಮಂಡಿಸುವಂತೆ ತಾಲೂಕಿನ ಶಾಸಕರಾದ ಧೀರಜ್ ಮುನಿರಾಜು ರವರಿಗೆ ಮನವಿ ಸಲ್ಲಿಸಲಾಗಿದೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ತಿಳಿಸಲಾಗಿದ್ದು ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ . ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದ ಪಕ್ಷದಲ್ಲಿ ಮುಂದೆ ಕೆಐಎಡಿಬಿ ವಿರುದ್ದ ಕಾನೂನು ರೀತಿಯ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು

     

    ರೈತರಾದ ಮೂರ್ತಿ ಮಾತನಾಡಿ ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಸೂಕ್ತ ಬೆಲೆ ನಿಗದಿಪಡಿಸದ ಕೆಐಎಡಿಬಿ ಅಧಿಕಾರಿಗಳು ಸೂಕ್ತ ದರ ನಿಗದಿ ಮಾಡುವಲ್ಲಿ ವಿಫಲರಾಗಿದ್ದಾರೆ . ಸರಿಯಾದ ಪರಿಹಾರ ಧನವನ್ನು ನೀಡಿದ ಕೆ ಐ ಎ ಡಿ ಬಿ ಅಧಿಕಾರಿಗಳ ವಿರುದ್ಧ ಕಳೆದ 25 ದಿನಗಳಿಂದ ರೈತರು ಧರಣಿ ಆರಂಭಿಸಿದ್ದು ಇದುವರೆಗೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಿಲ್ಲ . ಸೂಕ್ತ ಪರಿಹಾರ ನೀಡದೆ ಭೂಮಿ ಕೊಡುವ ಮಾತೇ ಇಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ಸ್ಥಳೀಯರಾದ ನಾಗರಾಜು ಮಾತನಾಡಿ ಪಾರಂಪರಿಕವಾಗಿ ಬಂದ ಭೂಮಿಯನ್ನು ಭೂಸ್ವಾದಿನದ ಅಡಿಯಲ್ಲಿ ಸರ್ಕಾರ ಕಸಿದುಕೊಳ್ಳುತ್ತದೆ . ವ್ಯವಸಾಯ ಮಾಡುವ ಮೂಲಕ ನೂರಾರು ಜನರಿಗೆ ಕೆಲಸ ಕೊಡುತ್ತಿದ್ದೆ ಈಗ ಆ ಭೂಮಿಯೇ ಇಲ್ಲದಂತಾಗಿದೆ. ನೀಡುವುದಾದರೆ ಸೂಕ್ತ ಪರಿಹಾರ ನೀಡಿ ಇಲ್ಲವಾದರೆ ಭೂಮಿಯನ್ನು ಕೈಬಿಡಿ ಹೈನುಗಾರಿಕೆನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದೇನೆ ಹಸುಗಳಿಗೆ ಮೇವು ಬೆಳೆಯಲು ಕೂಡ ಜಾಗ ಇಲ್ಲದಂತಾಗಿದೆ. ನಮ್ಮ ಭೂಮಿಯು ಇಲ್ಲದೆ ಅತ್ತ ಸೂಕ್ತ ಪರಿಹಾರವೂ ಇಲ್ಲದಂತಾಗಿದೆ ನಮ್ಮ ಗೋಳು ಯಾರಬಳಿ ಹೇಳಬೇಕೆಂಬುದೇ ಅರ್ಥವಾಗುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು

     

    ನಾಗರಾಜ್ ಆದಿನಾರಾಯಣ ಹೊಸಹಳ್ಳಿ,ಯಶವಂತ್ ಕೊನಘಟ್ಟ ,ಮಂಜುನಾಥ ಕೂನಘಟ್ಟ,ರಮೇಶ ಕೋಡಿಹಳ್ಳಿ,ರಾಮಣ್ಣ ಕೊನಘಟ್ಟ ,ಆನಂದ್ ಕೊನಘಟ್ಟ ,ಚಿಕ್ಕಮುನಿಯಪ್ಪ ಕೊನಘಟ್ಟ, ಪಿಳ್ಳಣ್ಣ ಕೋಡಿಹಳ್ಳಿ , ಮತ್ತಿತರು ಉಪಸ್ಥಿತರಿದ್ದರು

  • ರೈತರಿಂದ ಮೌನ ಪ್ರತಿಭಟನೆ : ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಗಾಯಿಸುವಂತೆ ಒತ್ತಾಯ

    ದೇವನಹಳ್ಳಿ : ಇಂದು ನಾವು ಸಾಂಕೇತಿಕವಾಗಿ ಬಾಯಿಗೆ ಬಟ್ಟೆ ಕಟ್ಟಿಕೊಳ್ಳುವ ಮೂಲಕ ಮೌನ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆಸಿದ್ದೇವೆ ಕಾರಣ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲದಿರುವುದು. ಆದಷ್ಟು ಬೇಗ ನಮ್ಮ ತಾಲ್ಲೂಕಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಘಟಕವನ್ನು ನೀಡುವ ಮೂಲಕ ರೈತರಿಗೆ ಜಿಲ್ಲಾಧಿಕಾರಿಗಳು ನೆರವಾಗಬೇಕೆಂದು ರೈತ ಮುಖಂಡ ವಸಂತ್ ಕುಮಾರ್ ಒತ್ತಾಯಿಸಿದರು .

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕ ತುಮಕೂರು ಹಾಗೂ ಮಜಾರಹೊಸಹಳ್ಳಿ ಗ್ರಾಮಗಳ ಕೆರೆಗಳು ಕಾರ್ಖಾನೆಗಳ ತ್ಯಾಜ್ಯ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿದ್ದು ಈ ಹಿನ್ನಲೆ ಬೆಂಗಳೂರು ಗ್ರಾಮಂತರ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಂದು ತಾಲ್ಲೂಕಿನ ರೈತ ಮುಖಂಡರು ಮೌನ ಪ್ರತಿಭಟನೆ ನಡೆಸಿದರು ಸಹಾಯಕ ಜಿಲ್ಲಾಧಿಕಾರಿ ಅಂಬರೀಶ್ ರವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರದಿಂದ 40 ಕಿ.ಮೀ ಹೆಚ್ಚು ದೂರವಿದೆ ಯಾವುದೇ ರೀತಿಯ ದೂರು ನೀಡಿದರು ದೂರು ನೀಡಿದ ದಿನ ಅವರು ಬರುವುದಿಲ್ಲ ಒಂದು ಅಥವಾ ಎರಡು ದಿನಗಳ ನಂತರ ಬರುತ್ತಾರೆ ಅನೇಕ ಕಾರ್ಖಾನೆಗಳ ವಿರುದ್ಧ ಈ ರೀತಿಯ ಕಷ್ಟ ನಾವು ಅನುಭವಿಸಿದ್ದೇವೆ ಈ ಹಿಂದೆ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರ ಜೊತೆ ಮತ್ತು ಮಜುರವನಳ್ಳಿ ಮತ್ತು ದೊಡ್ಡ ತುಮಕೂರು ಗ್ರಾಮ ಪಂಚಾಯತಿಯ ಸದಸ್ಯರ ಜೊತೆ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕೆಂದು ಸೂಚನೆ ನೀಡಿದರು ಆದರೂ ಇಲ್ಲಿವರೆಗೂ ಯಾವುದೇ ರೀತಿಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ಬರುವುದರ ಸೂಚನೆಗಳು ಕಂಡು ಬರುತ್ತಿಲ್ಲ ಆದ್ದರಿಂದ ಇಂದು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ ಮುಂದಿನ ಹದಿನೈದು ದಿನಗಳ ಒಳಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ವರ್ಗಾವಣೆ ಆಗದಿದ್ದರೆ ಗಾಂಧಿ ತತ್ವದ ಆಧಾರದ ಮೇಲೆ ನಂಬಿಕೆ ಇರುವ ನಾವು ಆಮರಣಾಂತಿಕ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ.

    ರೈತರಾದ ನಾಗರಾಜ್ ಬಾಬು ಮಾತನಾಡಿ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯು ಅರ್ಕಾವತಿ ನದಿಯ ಉಳಿವಿಗಾಗಿ ಕರೆಗಳ ಉಳಿವಿಗಾಗಿ ಜೀವ ಜಲದ ರಕ್ಷಣೆಗಾಗಿ ಉತ್ತಮ ಆರೋಗ್ಯಕ್ಕಾಗಿ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ದಿನೇ ದಿನೇ ಪರಿಸರ ಹಾಳಾಗುತ್ತಿದೆ ವಿನಹ ಪರಿಸರ ರಕ್ಷಣೆ ಮಾಡುವ ಕೆಲಸ ಆಗುತ್ತಿಲ್ಲ ನಮ್ಮ ತಾಲೂಕಿನಲ್ಲಿ ಕಾರ್ಖಾನೆಗಳ ತ್ಯಾಜ್ಯ ವಿಲೇವಾರಿಯಿಂದಾಗಿ ನಮ್ಮ ಗ್ರಾಮಗಳ ಕೆರೆಗಳು ಸಂಪೂರ್ಣ ಹಾಳಾಗಿದ್ದು , ವಿಷಪೂರಿತವಾಗಿದೆ, ಕಲುಷಿತ ನೀರನ್ನು ಸೇವಿಸಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ಸ್ಥಳೀಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ತಿಳಿಸಿದರು.

     

    ಈ ಮೌನ ಪ್ರತಿಭಟನೆಯಲ್ಲಿ ಸಂತೋಷ್, ವಿಜಯ್ ಕುಮಾರ,ಮುನಿಕೃಷ್ಣಪ್ಪ ,ಆಂಜಿನಪ್ಪ ,ಗಿಡ್ಡೇಗೌಡ ,ಮುನಿಯಪ್ಪ ,ಗೋಪಾಲ್ ಕೃಷ್ಣ ,ರಾಜಣ್ಣ ಇದ್ದರು

  • ಮಹಿಳೆಯ ಜೀವ ರಕ್ಷಿಸಿದ ಪೊಲೀಸರು : ಕಾರ್ಯಕ್ಷಮತೆಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಿಂದ ಅಭಿನಂದನೆ.

    ಮನೆಯ ಬಾಗಿಲು ಹಾಕಿಕೊಂಡು ಮಹಿಳೆಯೋರ್ವರು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗುತ್ತಿದ್ದ ವೇಳೆ

    ಸಿನಿಮೀಯ ಶೈಲಿಯಲ್ಲಿ ಇ.ಆರ್.ಎಸ್.ಎಸ್-112 ಸಿಬ್ಬಂದಿಗಳಾದ ಶಿವರಾಜು ಮತ್ತು ಅಭಿಷೇಕ್ ಬಾಗಿಲು ಒಡೆದು ನೇಣಿನ ಕುಣಿಕೆಯಿಂದ ಇಳಿಸಿ ಮಹಿಳೆಯ ಜೀವ ಉಳಿಸಿರುವ ಘಟನೆ ಜನವರಿ ೨೩ ರಂದು ನಡೆದಿದೆ. ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ತುರ್ತುಪರಿಸ್ಥಿತಿಯಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಸಿಬ್ಬಂದಿಗಳನ್ನು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿ ಪ್ರಶಂಸಾ ಪತ್ರವನ್ನು ಬೆಂಗಳೂರು ಕಚೇರಿಯಲ್ಲಿ ಬುಧವಾರ ವಿತರಣೆ ಮಾಡಿದ್ದಾರೆ.

     

    ಘಟನೆಯ ವಿವರ:

     

    ಜನವರಿ ೨೩ ರಂದು ಮೆಳೆಕೋಟೆ ಕ್ರಾಸ್ ಗ್ರಾಮದ ಮಹಿಳೆ ಭಾಗ್ಯಲಕ್ಷ್ಮಿ ಎಂಬಾಕೆ ಮನೆಯಲ್ಲಿ ಅತ್ತೆ, ನಾದಿನಿಯೊಂದಿಗೆ ಜಗಳ ನಡೆದಿದೆ. ತನ್ನ ಗಂಡನಿಲ್ಲದ ಸಮಯದಲ್ಲಿ ಭಾಗ್ಯಲಕ್ಷ್ಮಿಯ ಅತ್ತೆ ಮತ್ತು ನಾದಿನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪುಟ್ಟಮಕ್ಕಳ ಮುಂದೆಯೇ ಹಲ್ಲೆ ಮಾಡಿದ್ದಾರೆ. ಈ ವೇಳೆ ತೀವ್ರವಾಗಿ ಮನನೊಂದ ಭಾಗ್ಯಲಕ್ಷ್ಮಿ ಮನೆಯಿಂದ ಹೊರಬಂದು, ೧೧೨ ಪೊಲೀಸರಿಗೆ ಅತ್ತೆ, ನಾದಿನಿಯ ಕಿರುಕುಳದ ಬಗ್ಗೆಯ ಕರೆ ಮಾಡಿ ತಿಳಿಸಿದ್ದಾಳೆ. ಎಚ್ಚೆತ್ತ ೧೧೨ ಸಿಬ್ಬಂದಿಗಳು ಮೆಳೆಕೋಟೆ ಕ್ರಾಸ್ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಆಕೆ ಕೊನೆಯ ಬಾರಿ ಆಕೆ ಕರೆ ಮಾಡಿದ್ದ ಸ್ಥಳವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವೇಳೆಗೆ ಊರ ಆಚೆಗಿನ ಪಾಳುಬಿದ್ದ ಮನೆಯೊಂದರಲ್ಲಿ ಇಬ್ಬರು ಕಂದಮ್ಮಗಳ ಮುಂದೆಯೇ ನೇಣುಬಿಗಿದುಕೊಳ್ಳಲು ಯತ್ನಿಸಿದ್ದಾಳೆ. ಮಕ್ಕಳ ಚೀರಾಟದಿಂದ ಮನೆಯ ಕಿಟಕಿಯನ್ನು ಇಣುಕಿ ನೋಡಿದ್ದಾರೆ. ಮಹಿಳೆ ಸಾವುಬುದುಕಿನ ಮಧ್ಯೆ ಇರುವುದನ್ನ ಕಂಡು ಬಾಗಿಲು ಒಡೆದು ಒಳ ನುಗ್ಗಿ ಮಹಿಳೆಯನ್ನ ನೇಣಿನ ಕುಣಿಕೆಯಿಂದ ಪೊಲೀಸರು ರಕ್ಷಿಸಿದ್ದಾರೆ.

  • ಪಿಜಿ ಮಾಡುತ್ತೇವೆ ಎಂದು ಹೇಳಿ ಬಾರ್ ಮಾಡುತ್ತಿದ್ದಾರೆ – ಸ್ಥಳೀಯರ ಆಕ್ರೋಶ

    ದೊಡ್ಡಬಳ್ಳಾಪುರ :ಮದ್ಯದಂಗಡಿ ಪ್ರಾರಂಭಿಸಲಾಗುತ್ತಿರುವುದನ್ನು ಖಂಡಿಸಿ, ನಗರದ 31ನೇ ವಾರ್ಡ್‌ನ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

    ನಗರದ ಕರೇನಹಳ್ಳಿ-೨ ವಾರ್ಡ್ ನ ರಾಜೇಶ್ವರಿ ಚಿತ್ರಮಂದಿರದ ಸಮೀಪದ ಮದ್ಯದಂಗಡಿ ತೆರೆಯಲುದ್ದೇಶಿಸಿರುವ ಕಟ್ಟಡದ ಬಳಿ ಜಮಾಯಿಸಿದ ಮಹಿಳೆಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

     

    ಈ ವೇಳೆ ನಗರಸಭಾ ಸದಸ್ಯೆ ಪ್ರಭಾ ನಾಗರಾಜ್ ಮಾತನಾಡಿ ಈ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಗಾರ್ಮೆಂಟ್ಸ್, ಫ್ಯಾಕ್ಟರಿಗಳಿಗೆ ಹೋಗಿ ಬರುವ ನೂರಾರು ಮಹಿಳೆಯರು, ಶಾಲಾಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲದಕ್ಕೂ ರಸ್ತೆಯಲ್ಲಿಯೇ ಓಡಾಡಬೇಕು. 2500 ಜನರಿರುವ ಜನನಿಬಿಡ ಪ್ರದೇಶ ಇದಾಗಿದ್ದು . ಅಲ್ಲದೆ ನೂರಾರು ಕುಟುಂಬಗಳು ವಾಸವಾಗಿವೆ. ಹಾಲು, ತರಕಾರಿ ಮತ್ತಿತರ ಖರೀದಿಗೆ ಮುಖ್ಯರಸ್ತೆಯಲ್ಲಿರುವ ಅಂಗಡಿಗೆ ತೆರಳಬೇಕಾಗುತ್ತದೆ. ಈಗ ಮದ್ಯದಂಗಡಿ ತೆರೆಯುವುದರಿಂದ, ಮಹಿಳೆಯರು ಮನೆಯಿಂದಾಚೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಲ್ಲಿಂದ 20 ಮೀಟರ್ ಅಂತರದಲ್ಲಿ 2-3 ದೇವಸ್ಥಾನಗಳು ಸಹ ಹತ್ತಿರದಲ್ಲಿವೆ. ಆ ರಸ್ತೆಯು ಕಿರಿದಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳಬೇಕಿದೆ. ಜನನಿಬಿಡ ಪ್ರದೇಶವಾಗಿರುವುದರಿಂದ ಕುಡಕರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಇಲ್ಲಿನ ಗ್ರಾಮಸ್ಥರ ತೀವ್ರ ವಿರೋಧ ಇರುವುದರಿಂದ ಅಬಕಾರಿ ಮತ್ತು ಪೊಲೀಸ್ ಇಲಾಖೆ ಹೇಗೆ ಅನುಮತಿ ನೀಡಲೇಬಾರದು. ಕಳೆದ ವರ್ಷವೂ ಬಾರ್ ತೆರೆಯಲು ಮಾಲೀಕರು ಕಸರತ್ತು ನಡೆಸಿದ್ದರು. ಆಗಲೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಅಂದಿನ ಅಧಿಕಾರಿ ವರ್ಗ ಅನುಮತಿಯನ್ನು ನೀಡಿರಲಿಲ್ಲ. ಇದೀಗ ಅಧಿಕಾರಿಗಳು ಬದಲಾವಣೆ ಆಗಿರುವುದರಿಂದ ಬಾರ್ ಮಾಲೀಕರು ಅನುಮತಿ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಮತ್ತೋರ್ವ ಮಹಿಳೆ ಶಮೀನಾ ಮಾತನಾಡಿ ಈ ಭಾಗದಲ್ಲಿ ಬಹುತೇಕ ಕಡುಬಡವರು ವಾಸವಾಗಿದ್ದಾರೆ. ಮನೆಗಳಲ್ಲಿ ಮಹಿಳೆಯರು ಬಿಡಿಕಟ್ಟುವುದು, ಅಗರಬತ್ತಿ ಮಾಡುವುದು, ಹೂಕಟ್ಟುವುದು ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ವೇಳೆ ಇಲ್ಲಿ ಬಾರ್ ಗೆ ಅನುಮತಿ ನೀಡಿದರೆ ಗಂಡಸರು ಕುಡಿತ ಚಟಕ್ಕೆ ದಾಸರಾಗಿ ದಾರಿ ತಪ್ಪುತ್ತಾರೆ. ಮಹಿಳೆಯರು, ವಯಸ್ಸಾದವರು, ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಬಾರದು ಎಂದು ಕಣ್ಣೀರಿಟ್ಟರು.

     

    ಮಾಜಿ ಗ್ರಾ.ಪಂ ಸದಸ್ಯರ ಶಬ್ಬೀರ್ ಪಾಷ ಮಾತನಾಡಿ 2020 ರಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿದಾಗ ಇಲ್ಲಿ ಪಿಜಿ ಮಾಡುವುದಾಗಿ ಮಾಲೀಕರು ತಿಳಿಸಿದ್ದರು. ಇದೀಗ ಬಾರ್ ಅಂಡ್ ಲಾಡ್ಜ್ ಮಾಡಲು ಹೊರಟಿದ್ದಾರೆ. ಇಲ್ಲಿ ಬಾರ್ ಗೆ ಅನುಮತಿ ನೀಡಿ ಯುವಕರು ದಾರಿ ತಪ್ಪುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ಈಗಾಗಲೇ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ, ಗ್ರಾಮಾಂರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.

    ಪ್ರತಿಭಟನಾ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಸಾದಿಕ್ ಪಾಷ ಪ್ರತಿಭಟನಾ ನಿರತ ಮಹಿಳೆಯರಿಂದ ಮಾಹಿತಿ ಪಡೆದರು, ಸುತ್ತಮುತ್ತಲಿನ ಪ್ರದೇಶ ವೀಕ್ಷಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.

     

    ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಪ್ರಭಾ ನಾಗರಾಜು, ಮುಖಂಡರಾದ ನಾಗರಾಜು, ರಾಶಿದ್ ಉನ್ನಿಸಾ, ಶಮೀಮ್ ತಾಜ್, ಸುಬ್ಬಮ್ಮ, ನಳೀನ, ನರಸಮ್ಮ, ಶಬ್ಬೀರ್ ಪಾಷ, ಗೌರಮ್ಮ, ನಾಜೀರಬಾದ್, ಮಾಲ ಮತ್ತಿತ್ತರರು ಉಪಸ್ಥಿತರಿದ್ದರು.

  • ರಾಜ್ಯ ಬಿಜೆಪಿಯಿಂದ ಪ್ರತಿಭಟನೆ : ಮುಖ್ಯಮಂತ್ರಿ ಕಚೇರಿಗೆ ಬೀಗ ಹಾಕುವಂತೆ ಅಗ್ರಹ

    ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಪ್ರತಿಭಟನೆ ನೆಡೆಸಿತು.

     

    ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪಕ್ಷದ ವತಿಯಿಂದ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಜೊತೆಗೂಡಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಬಿ ವೈ ವಿಜಯೇಂದ್ರ ಪ್ರತಿಭಟನೆ ನಡೆಸಿದರು.

     

    ರೈತರಿಗೆ ಬರ ಪರಿಹಾರ ನೀಡದ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ರಾಜ್ಯ ಸರ್ಕಾರವಾಗಿದ್ದು, ಶಾಸಕರಿಗೆ ಅನುದಾನ ನೀಡುವ ವಿಚಾರದಲ್ಲೂ ತಾರತಮ್ಯವೆಸಗಿರುವ ಬೇಜಾವಾಬ್ದಾರಿ ಸರ್ಕಾರದ ನಿಲುವುಗಳನ್ನು ಖಂಡಿಸಲಾಯಿತು. ಬೊಕ್ಕಸ ಬರಿದು ಮಾಡಿಕೊಂಡು ವಿಧಾನ ಸೌಧ ಖಾಲಿ ಮಾಡಿಕೊಂಡು ದೆಹಲಿ ಚಲೋ ನಾಟಕ ಮಾಡುತ್ತಿರುವ ಸರ್ಕಾರ ಮುಖ್ಯಮಂತ್ರಿಗಳ ಕಛೇರಿಗೆ ಬೀಗ ಜಡಿಯುವಂತೆ ಆಗ್ರಹಿಸಲಾಯಿಸಿದರು.

     

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್.ಅಶೋಕ ಸೇರಿದಂತೆ ಬಿಜೆಪಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.