Blog

  • ಕನ್ನಡ ಸುಗಮ ಸಂಗೀತವನ್ನು ಶ್ರೀಮಂತಗೊಳ್ಳುವಲ್ಲಿ ಬೇಂದ್ರೆಯವರ ಗೀತೆಗಳು ಪ್ರಮುಖ ಪಾತ್ರವಹಿಸಿವೆ – ಜಿ. ಸುರೇಶ್

    ದ.ರಾ. ಬೇಂದ್ರೆಯವರ ಕಾವ್ಯವು ಕನ್ನಡ ಭಾಷೆ ಹಾಗೂ ಸಾಹಿತ್ಯದ  ಅನನ್ಯತೆಯನ್ನು ಹೆಚ್ಚಿಸಿದೆ. ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗಿರುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ನಗರದ ಎಂ.ಎ.ಬಿ.ಎಲ್ ಪ್ರೌಢಶಾಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ಡಾ.ದ.ರಾ.ಬೇಂದ್ರೆಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಸುಗಮ ಸಂಗೀತವನ್ನು ಶ್ರೀಮಂತಗೊಳ್ಳುವಲ್ಲಿ ಬೇಂದ್ರೆಯವರ ಗೀತೆಗಳು ಪ್ರಮುಖ ಪಾತ್ರ ವಹಿಸಿವೆ. ಜೀವನಪ್ರೀತಿ, ಮಾನವೀಯ ಅಂತಃಕರಣ ಮೊದಲಾದ ಮೌಲ್ಯಗಳನ್ನು ಪ್ರತಿಪಾದಿಸುವ ಬೇಂದ್ರೆಯವರ ಭಾವಗೀತೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿವೆ ಎಂದರು.

     

    ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಅಸದೃಶವಾದ ಸೃಜನಶೀಲ ಪ್ರತಿಭೆ.  ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೆ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು. ಅವರ ಭಾವಗೀತೆಗಳು ಗೀತೆಗಳು ಯುವ ಕವಿಗಳಿಗೆ ಸದಾ ಸ್ಪೂರ್ತಿದಾಯಕವಾಗಿವೆ. ಕನ್ನಡಕ್ಕೆ ಜ್ಞಾನಪೀಠದ ಗರಿಯನ್ನು ತಂದುಕೊಟ್ಟ ಬೇಂದ್ರೆಯವರು ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

     

    ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕಿ ಸಿ.ನಿರ್ಮಲ ಮಾತನಾಡಿ, ಮಕ್ಕಳು ಭಾವಗೀತೆಗಳನ್ನು ಹಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಗಾಯನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಈ ಸದಾವಕಾಶವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ದ.ರಾ.ಬೇಂದ್ರೆ ವಿರಚಿತ ಗೀತೆಗಳನ್ನು ಹಾಡುವ ಮೂಲಕ ವರಕವಿಗೆ ಗೀತನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

     

    ಜವಾಹರ ನವೋದಯ ವಿದ್ಯಾಲಯ : ದೊಡ್ಡಬಳ್ಳಾಪುರ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಜೆ.ಪಿ. ಉಪಾಧ್ಯೆ ಮಾತನಾಡಿ, ‘ದ.ರಾ. ಬೇಂದ್ರೆ ಯವರ ಜೀವನವೇ ಒಂದು ಮಹಾ ಕಾವ್ಯ. ಬೇಂದ್ರೆಯವರ ಕವನಗಳು ಕಾವ್ಯ ಗುಣದಲ್ಲಿ ಉನ್ನತಮಟ್ಟ ಹೊಂದಿವೆ. ಬೇಂದ್ರೆಯವರ ಕಾವ್ಯ ಭಾವಗೀತೆ ಮತ್ತು ಜಾನಪದವನ್ನು ಜನಪ್ರಿಯಗೊಳಿಸಿತು.  ಭಾಷೆಯ ಪದಸಂಪತ್ತು ಮತ್ತು ನಾದ ಸಂಪತ್ತು ಎರಡನ್ನು ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಜವಾಹರ ನವೋದಯ ವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ‌

  • ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ರಾಜಕೀಯ ಫ್ಲೆಕ್ಸ್ ಅಳವಡಿಕೆ : ಸಾರ್ವಜನಿಕರಿಂದ ನೀತಿಸಂಹಿತೆ ಉಲ್ಲಂಘನೆ ಆರೋಪ

    ದೊಡ್ಡಬಳ್ಳಾಪುರ ತಾಲ್ಲೂಕಿನ ನಗರಭಾಗದ ತಾಲ್ಲೂಕು ಕಚೇರಿ ವೃತ್ತದಲ್ಲಿ ಆರ್. ಅಶೋಕ್ ದೊಡ್ಡಬಳ್ಳಾಪುರಕ್ಕೆ ಭೇಟಿ ಕೊಡುತ್ತಿರುವ ಹಿನ್ನಲೆ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ.

     

    ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು. ಸಾರ್ವಜನಿಕರಿಗೆ ಒಂದು ನ್ಯಾಯ ರಾಜಕೀಯ ನಾಯಕರಿಗೆ ಒಂದು ನ್ಯಾಯವ ಎಂದು ಪ್ರಶ್ನೆ ಮಾಡಿದ್ದಾರೆ.

     

    ಈ ಕುರಿತು ತಾಲ್ಲೂಕು ಆಡಳಿತ ಮಂಡಳಿ ಹಾಗೂ ನಗರ ಸಭೆ ಉತ್ತರ ನೆಡಬೇಕಿದೆ.. ಹಾಗೂ ಈ ಕೂಡಲೇ ಫ್ಲೆಕ್ಸ್ ಬ್ಯಾನರ್ ಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ

  • ಜನವರಿ 30 ರಂದು ಬಿಜೆಪಿ ಪ್ರತಿಭಟನೆ : 5000 ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ

    ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 250 ಬೆಡ್ ಗಳ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿದ್ದು ಆಸ್ಪತ್ರೆಯ ನಿರ್ಮಾಣ ಕಾರ್ಯ ತಡವಾಗುತ್ತಿರುವ ಹಿನ್ನಲೆಯಲ್ಲಿ ಜ.29 ರಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ವತಿಯಿಂದ ವಿಪಕ್ಷ ನಾಯಕರಾದ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನೆಡೆಸುತ್ತಿದ್ದೇವೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ 5000ಕ್ಕೂ ಅಧಿಕ ಕಾರ್ಯಕರ್ತರು, ಸಾರ್ವಜನಿಕರು ಸೇರುವ ಸಾಧ್ಯತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು

     

     

    ಇಂದು ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರೆಂಟಿಗಳನ್ನು ಈಡೇರಿಸುವಲ್ಲಿ ಸೋತಿದೆ. ಗ್ಯಾರೆಂಟಿ ಎಂಬ ಅಸ್ತ್ರ ಬಳಸಿ ಚುನಾವಣೆ ಗೆದ್ದ ಕಾಂಗ್ರೆಸ್ ಸರ್ಕಾರ ಜನತೆಯ ಬಗ್ಗೆ ಕಾಳಜಿ ಮರೆತಿದೆ. ನಮ್ಮ ತಾಲ್ಲೂಕಿನಲ್ಲಿ 100ಹಾಸಿಗೆಗಳ ಆಸ್ಪತ್ರೆ ಇದ್ದು ತಿಂಗಳಿಗೆ 10000ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ 100 ಕ್ಕೂ ಅಧಿಕ ಯಶಸ್ವೀ ಶಸ್ತ್ರ ಚಿಕಿತ್ಸೆಗಳು ನೆಡೆಯುತ್ತಿದ್ದು ನಮ್ಮ ತಾಲ್ಲೂಕಿನ ಜನತೆ ಅಷ್ಟೇ ಅಲ್ಲದೆ ಹೊರ ತಾಲ್ಲೂಕಿನ ಸಾರ್ವಜನಿಕರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 250ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದ್ದು. ಆಸ್ಪತ್ರೆ ನಿರ್ಮಾಣ ಕುರಿತು ಯಾವುದೇ ಕ್ರಮ ನೆಡೆದಿಲ್ಲ ಈ ಹಿನ್ನಲೆಯಲ್ಲಿ ನಾಳೆ ಬಿಜೆಪಿ ಪಕ್ಷದ ರಾಜ್ಯ ಮುಖಂಡರು ಹಾಗೂ ವಿಪಕ್ಷ ನಾಯಕರು ಆದ ಆರ್. ಅಶೋಕ್ ರವರ ನೇತೃತ್ವದಲ್ಲಿ ಪ್ರತಿಭಟನೆ ನೆಡೆಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಯು ನಗರ ಭಾಗದ ನೆಲದಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಟು ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು

     

    ಜಿಲ್ಲಾ ವಕ್ತರರಾದ ಪುಷ್ಪ ಶಿವಶಂಕರ್ ಮಾತನಾಡಿ ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು ಸರಿಪಡಿಸುವಲ್ಲಿ ನಮ್ಮೆಲ್ಲರ ಭಾಗವಹಿಸುವಿಕೆಯ ಅವಶ್ಯಕತೆ ಇದೆ ಜ.30 ರಂದು ಬೆಳ್ಳಿಗೆ 10:00ಘಂಟೆಗೆ ಜಿಲ್ಲೆಯ ನಾಲ್ಕು ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಹೋರಾಟ ಮಾಡಲು ಮುಂದಾಗಿದ್ದೇವೆ. ತಾಲ್ಲೂಕಿನ ಜನತೆಗಾಗಿ ಈ ಹೋರಾಟ ನಮ್ಮ ಆರೋಗ್ಯಕ್ಕಾಗಿ ತಾಲ್ಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕಾಗಿ ಒತ್ತಾಯಿಸುತ್ತಿದ್ದು ಇದು ಪ್ರಾರಂಭವಷ್ಟೇ ಈ ಹೋರಾಟವು ಮುಂದೆ ತಾಲ್ಲೂಕಿನ ಅಭಿವೃದ್ಧಿಗೆ ಅನುವು ಮಾಡಿಕೊಡಲಿದೆ ಎಂದು ತಿಳಿಸಿದರು.

     

    ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಉಮಾ ಮಹೇಶ್ವರಿ , ನಗರ ಸಭಾ ಅಧ್ಯಕ್ಷರಾದ ಸುಧಾರಾಣಿ ಲಕ್ಷ್ಮಿ ನಾರಾಯಣ , ನಗರ ಸಭೆ ಸದಸ್ಯರಾದ ನಾಗರತ್ನಮ್ಮ , ಪ್ರಧಾನ ಕಾರ್ಯದರ್ಶಿ ಗೋಪಿ, ಮುಖಂಡರಾದ ಜಗನ್ನಾಥ್, ಲಕ್ಷ್ಮಿ ನಾರಾಯಣ್, ಮತ್ತಿತರರು ಉಪಸ್ಥಿತರಿದ್ದರು

  • ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಭ್ರಮೋತ್ಸವ : ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಸಮಿತಿ ಭಾಗಿ

    ದೊಡ್ಡಬಳ್ಳಾಪುರ: ಕರ್ನಾಟಕದಲ್ಲಿ ದಲಿತ ಚಳವಳಿಯನ್ನ ಪ್ರಾರಂಭಿಸಿದವರು ಪ್ರೋ.ಬಿ.ಕೃಷ್ಣಪ್ಪ, ಕರ್ನಾಟಕ ದಲಿತ ಚಳವಳಿಗೆ 50 ವರ್ಷಗಳು ತುಂಬಿದೆ, ಪ್ರೋ.ಬಿ. ಕೃಷ್ಣಪ್ಪ ಸ್ಥಾಪಿಸ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪನ ದಿನವಾದ ಇಂದು ದಸಂಸ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅಯೋಜನೆ ಮಾಡಲಾಗಿದ್ದು, ಈ ವೇಳೆ ಪ್ರೋ.ಬಿ.ಕೃಷ್ಣಪ್ಪನವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಕೊಡುವಂತೆ ಒತ್ತಾಯ ಮಾಡುವುದ್ದಾಗಿ ದಲಿತ ಮುಖಂಡರು ಹೇಳಿದರು.

     

    ಬೆಂಗಳೂರಿನ ಗಾಂಧಿ ಭವನದ ಮಾದೇವ ದೇಸಾಯಿ ಭವನದಲ್ಲಿ ಇಂದು ದಸಂಸ ಸಂಭ್ರಮೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೊಡ್ಡಬಳ್ಳಾಪುರದಿಂದ 300ಕ್ಕೂ ಹೆಚ್ಚು ಜನರು ಹೊರಟ್ಟರು, ಹೊರಡುವ ಮುನ್ನ ಡಾ.ಬಿ.ಆರ್.ಅಂಬೇಡ್ಕರ್, ಪ್ರೋ.ಬಿ. ಕೃಷ್ಣಪ್ಪನವರಿಗೆ ಜಯಕಾರ ಹಾಕಿದ ದಲಿತ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು

     

    ಈ ವೇಳೆ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷರಾದ ರಾಮು ನೇರಳೆಘಟ್ಟ, ದಲಿತ ಚಳವಳಿ ಎಂದರೆ ಪ್ರೋ.ಬಿ. ಕೃಷ್ಣಪ್ಪನವರ ಹೆಸರು ಬರುತ್ತದೆ, 1974ರಲ್ಲಿ ಭದ್ರಾವತಿಯಲ್ಲಿ ದಲಿತ ಚಳವಳಿಯನ್ನ ಹುಟ್ಟು ಹಾಕಿದ್ದು ಅವರು, ದಲಿತ ಚಳವಳಿಯನ್ನ ಇಡೀ ರಾಜ್ಯಕ್ಕೆ ಹರಡಿ ಮತ್ತು ಹೆಮ್ಮಯವಾಗಿ ಬೆಳೆಯಲು ಕಾರಣಕರ್ತರು , ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ 50 ವರ್ಷಗಳು ತುಂಬಿದ್ದು, ಸಂಸ್ಥಾಪನಾ ದಿನವಾದ ಇಂದು ದಸಂಸ ಸಂಭ್ರಮೋತ್ಸವ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಅಯೋಜನೆ ಮಾಡಲಾಗಿದ್ದು, ಈ ವೇಳೆ ಪ್ರೋ.ಬಿ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವಂತೆ ಒತ್ತಾಯಿಸಲಾಗುವುದು ಎಂದರು.

     

    ತಾಲೂಕು ಘಟಕದ ಗೌರವ ಅಧ್ಯಕ್ಷರಾದ ನರಸಪ್ಪ ಶಿರವಾರ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ದಲಿತರ ಸಮಸ್ಯೆಗಳಿಗೆ ಸಾಮಾಜಿಕ ನ್ಯಾಯದ ಪರಿಹಾರಗಳನ್ನ ಹುಡುಕಿದವರು ಪ್ರೋ.ಬಿ ಕೃಷ್ಣಪ್ಪನವರು, ಕರ್ನಾಟಕದಲ್ಲಿ ದಲಿತ ಚಳವಳಿಯ ಹೋರಾಟದ ಕಾರಣದಿಂದ ದಲಿತರ ಗುಡಿಸಲುಗಳು ಹೆಂಚಿನ ಮತ್ತು ಸಿಮೆಂಟ್ ಶೀಟಿನ ತಗಡಿನ ಮನೆಗಳು ಬಂದವು, ಜೀತ ಮಾಡುತ್ತಿದ್ದ ದಲಿತರಿಗೆ ತುಂಡು ಭೂಮಿ ಸಿಕ್ಕಿತು, ಭೂ ಮಾಲೀಕರ ದನ ಎಮ್ಮೆ ಮೇಯಿಸುತ್ತಿದ್ದ ಹುಡುಗರು ಶಾಲೆಗೆ ಹೋದರು, ಶಾಲೆಯಲ್ಲಿ ಅಕ್ಷರ ಕಲಿತು ಅಧಿಕಾರ ಹಿಡಿದರು ಎಂದರು.

     

    ತಾಲೂಕು ಘಟಕದ ಸಂಚಾಲಕರಾದ ಎಂ.ಕೆ.ನರೇಂದ್ರಮೂರ್ತಿ ಮಾತನಾಡಿ ಹೋರಾಟಗಾರರಾದ ಪ್ರೋ.ಬಿ.ಕೃಷ್ಣಪ್ಪನವರ ಅಪಾರವಾದ ತ್ಯಾಗವಿದೆ, ಅವರ ತ್ಯಾಗದ ಫಲವಾಗಿ ಕರ್ನಾಟಕದಲ್ಲಿ ದಲಿತರ ಸುಧಾರಣೆಯಾಗಿದೆ, ದಲಿತ ಚಳವಳಿಗೆ ಅವರ ಕೊಡುಗೆ ದೊಡ್ಡದ್ದು ಹಿನ್ನಲೆ ದಸಂಸ 50 ವರ್ಷ ಪೂರೈಸಿದ ಹಿನ್ನಲೆ ಬೆಂಗಳೂರಿನಲ್ಲಿ ಸಂಭ್ರಮೋತ್ಸವ ಆಚರಣೆ ಮಾಡಲಾಗುತ್ತಿದೆ, ಕಾರ್ಯಕ್ರಮದಲ್ಲಿ ಭಾಗಿಯಾಗಲು ದೊಡ್ಡಬಳ್ಳಾಪುರದಿಂದ 300ಕ್ಕೂ ಹೆಚ್ಚು ಹೋಗುತ್ತಿರುವುದ್ದಾಗಿ ಹೇಳಿದರು.

     

    ಜಿಲ್ಲಾ ಸಮಿತಿ ಸಂಚಾಲಕರಾದ ದೊಡ್ಡಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ದಲಿತರ ಹೋರಾಟವನ್ನ ಮತ್ತಷ್ಟು ಚುರುಕುಗೂಳಿಸಲಾಗುವುದು, ದಲಿತರಿಗೆ ಅನ್ಯಾಯವಾದಲ್ಲಿ ನ್ಯಾಯ ಕೊಡಿಸುವ ಕೆಲಸವನ್ನ ನಮ್ಮ ಸಂಘಟನೆ ಮಾಡಲಿದೆ. ಗ್ರಾಮೀಣ ಭಾಗದಲ್ಲಿ ಸಂಚಾರಿಸುವ ಮೂಲಕ ದಲಿತರನ್ನ ಜಾಗೃತಗೊಳಿಸಲಾಗುವುದು ಎಂದರು.

     

    ಈ ವೇಳೆ ತಾಲೂಕು ಘಟಕದ ಸಂಚಾಲಕರಾದ ಹನುಮಯ್ಯ, ಕಾರ್ಯದರ್ಶಿ ರಮೇಶ್ ಜಾಲಗೆರೆ, ಎನ್.ಎ.ನಾಗರಾಜ್ ನಾಗದೇನಹಳ್ಳಿ, ಸಹ ಕಾರ್ಯದರ್ಶಿ ರಮೇಶ್ ಹಾಲೇನಹಳ್ಳಿ, ಕುಮಾರ್ ತೂಬುಕುಂಟೆ, ಚೌಡಮೂರ್ತಿ ಕಸಘಟ್ಟ, ನರಸಿಂಹಯ್ಯ ಬೊಮ್ಮನಹಳ್ಳಿ, ಹನುಮಂತರಾಜು ಲಿಂಗಾಪುರ, ರಾಮಚಂದ್ರಪ್ಪ ಸಾಸಲು, ವೆಂಕಟೇಶ್ ಸೂಲುಕುಂಟೆ ಇದ್ದರು.

  • ಪಕ್ಷ ವಿರೋಧಿ ಚಟುವಟಿಕೆ ಆರೋಪ: ವೆಂಕಟೇಶ್ ಬಾಬು ವಿರುದ್ಧ ಶಿಸ್ತುಕ್ರಮಕ್ಕೆ ಗಂಟಿಗಾನಹಳ್ಳಿ ಜೆಡಿಎಸ್ ಮುಖಂಡರ ಆಗ್ರಹ

    ರಾಜ್ಯ ತೆಂಗಿನ ನಾರು ಸಹಕಾರ ಮಹಾಮಂಡಳ ಅಧ್ಯಕ್ಷ ಹಾಗೂ ತೂಬಗೆರೆ ಹೋಬಳಿ ಜೆಡಿಎಸ್ ಮುಖಂಡ ಎಸ್.ಎಲ್.ವೆಂಕಟೇಶಬಾಬು ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ವರಿಷ್ಠರು ಸೂಕ್ತ ಕ್ರಮ ಜರುಗಿಸಬೇಕು ಎಂದು ತೂಬಗೆರೆ ಹೋಬಳಿ ಗಂಟಿಗಾನಹಳ್ಳಿ ಜೆಡಿಎಸ್ ಮುಖಂಡ ಸಂದೀಪ್ ಒತ್ತಾಯಿಸಿದರು.

    ಗಂಟಿಗಾನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ವೆಂಕಟೇಶ್ ಬಾಬು ಅವರು ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದರಿಂದ ಹೋಬಳಿಯಲ್ಲಿ ಜೆಡಿಎಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ವೆಂಕಟೇಶ್ ಬಾಬು ವಿರುದ್ದ ಕೂಡಲೇ ವರಿಷ್ಠರು ಶಿಸ್ತುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಮುಖಂಡರು ಪರ್ಯಾಯ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

     

    ಗ್ರಾಮ ಪಂಚಾಯ್ತಿ, ವಿಧಾನಸಭೆ ಹಾಗೂ ಗಂಟಿಗಾನಹಳ್ಳಿ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ವೆಂಕಟೇಶಬಾಬು ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಸೇರಿ ಪಕ್ಷಕ್ಕೆ ಹಿನ್ನೆಡೆಯುಂಟು ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕುರಿತು ತಾಲೂಕು ಹಾಗೂ ಹೋಬಳಿ ಮುಖಂಡರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ. ಜ.27 ರಂದು ನಡೆದ ಗಂಟಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ಅಭ್ಯರ್ಥಿಗಳಲ್ಲಿ ನಾಲ್ವರು ಜಯ ಗಳಿಸಿದ್ದಾರೆ. ಉಳಿದವರು ಅತ್ಯಲ್ಪ ಮತಗಳಲ್ಲಿ ವಿರೋಚಿತ ಸೋಲು ಕಂಡಿದ್ದಾರೆ. ವೆಂಕಟೇಶಬಾಬು ಬಣದ ಏಳು ಅಭ್ಯರ್ಥಿಗಳು ಕಾಂಗ್ರೆಸ್, ಬಿಜೆಪಿ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದಾರೆ. ಪಕ್ಷದಿಂದ ಸಾಕಷ್ಟು ಅನುಕೂಲ ಪಡೆದ ವೆಂಕಟೇಶ್ ಬಾಬು ಅವರು ಅನ್ಯಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

    ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ವೆಂಕಟೇಶಬಾಬು ಅವರನ್ನು ಕೂಡಲೇ ಪಕ್ಷದಿಂದ ಕಿತ್ತೊಗೆಯಬೇಕು. ಇಲ್ಲವಾದಲ್ಲಿ ಮುಂಬರುವ ತಾ.ಪಂ, ಜಿ.ಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

     

    ಮೆಳೇಕೋಟೆ ಜೆಡಿಎಸ್ ಮುಖಂಡ ಗೌರೀಶ್ ಮಾತನಾಡಿ, ಕಾಂಗ್ರೆಸ್ , ಬಿಜೆಪಿ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ವೆಂಕಟೇಶ್ ಬಾಬು ಅವರಿಗೆ ಪಕ್ಷ ವಿರೋಧಿ ಚಟುವಟಿಕೆ ನಿಲ್ಲಿಸುವಂತೆ ಈಗಾಗಲೇ ಸಾಕಷ್ಟು ತಿಳಿಹೇಳಿದ್ದೇವೆ .ಆದರೆ, ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿಲ್ಲ ಈ ಕುರಿತು ಜೆಡಿಎಸ್ ಹಿರಿಯ ಮುಖಂಡರಾದ ಎಚ್.ಅಪ್ಪಯ್ಯಣ್ಣ, ತೂಬಗೆರೆ ಹೋಬಳಿ ಅಧ್ಯಕ್ಷ ಜಗನ್ನಾಥ್ ಹಾಗೂ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು ವೆಂಕಟೇಶ್ ಬಾಬು ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸ್ಥಳೀಯ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಮುಂಬರುವ ಚುನಾವಣೆಗಳನ್ನು ಎದುರಿಸಲಾಗುವುದು ಎಂದು ಹೇಳಿದರು.

     

    ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮೆಳೇಕೋಟೆ ಗ್ರಾ.ಪಂ. ಉಪಾಧ್ಯಕ್ಷರಾದ ಭಾಗ್ಯಮ್ಮ ರಮೇಶ್, ಪ್ರಕಾಶ್ ಬಾಬು, ಕೃಷ್ಣಮೂರ್ತಿ, ಮರಿಯಣ್ಣ, ಶ್ರೀನಿವಾಸ, ಅಶೋಕ್, ವಿಜಯ್ ಕುಮಾರ್,ಚಂದನ್, ಆರ್.ಮಂಜುನಾಥ, ಮಹೇಶ್, ಮಿಥುನ್,ನವೀನ್, ಹರೀಶ್ ಕುಮಾರ್, ಆನಂದಮೂರ್ತಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

  • ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ “ಯುವ ಸೌರಭ” ಕಾರ್ಯಕ್ರಮ

    ಯುವ ಪ್ರತಿಭಾವಂತರ  ಪ್ರತಿಭೆಗಳನ್ನು ಗುರುತಿಸಿ  ಪ್ರೋತ್ಸಾಹ  ನೀಡುವುದು  ಯುವಸೌರಭ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ  ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ   ರವಿಕುಮಾರ್ ತಿಳಿಸಿದರು.

    ಅವರು   ದೊಡ್ಡಬಳ್ಳಾಪುರ ಜವಾಹರ್ ನವೋದಯ ವಿದ್ಯಾಲಯದ ಬಯಲು ರಂಗಮಂದಿರದಲ್ಲಿ    ಬೆಂಗಳೂರು ಗ್ರಾಮಾಂತರ  ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಮತ್ತು    ಕನ್ನಡ ಸಾಹಿತ್ಯ ಪರಿಷತ್ತು   ವತಿಯಿಂದ  ನಡೆದ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.‌ ಕನ್ನಡ ನಾಡು, ನುಡಿ, ಸಾಂಸ್ಕೃತಿಕ  ಪರಂಪರೆಯ  ಅರಿವು ಯುವಜನತೆಯಲ್ಲಿ ಇರಬೇಕು.       ಕಲೆ ಮತ್ತು ಸಾಹಿತ್ಯದ  ಆಸಕ್ತಿಯು ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣದಲ್ಲಿ  ಸಹಕಾರಿ ಆಗುತ್ತದೆ ಎಂದರು.

    ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ,  ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಮತ್ತು  ಸಂತಸದಾಯಕ ಕಲಿಕೆಗೆ ಸಾಂಸ್ಕೃತಿಕ ವೇದಿಕೆಗಳ ಅಗತ್ಯ ಇರುತ್ತದೆ. ನಮ್ಮ ಕನ್ನಡ ನಾಡು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ . ಇಂತಹ ಪರಂಪರೆಯನ್ನು ಮುಂದಿನ‌ ತಲೆಮಾರಿಗೆ ತಲುಪಿಸುವ. ಜವಾಬ್ದಾರಿಯನ್ನು ಯುವಜನತೆ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಯುವಜನತೆ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

    ಯುವ ಸೌರಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಆರ್.ಚಕ್ರವರ್ತಿ ವಹಿಸಿದ್ದರು. ಸಮಾರಂಭದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ. ಪಿ.ಗೋವಿಂದರಾಜು, ನವೋದಯ ವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಜೆ.ಪಿ.ಉಪಾಧ್ಯೆ, ಜಾನಪದ ಕಲಾವಿದರುಗಳಾದ ಶ್ಯಾಕಲದೇವನಪುರ ರಾಮಚಂದ್ರಯ್ಯ, ವಿಜಯಕುಮಾರ್ , ನವೋದಯ ವಿದ್ಯಾಲಯದ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಯುವ ಸೌರಭ ದೊಡ್ಡಬಳ್ಳಾಪುರ ಹಂಸವೇಣಿ ತಂಡದವರಿಂದ ಸಮೂಹ ನೃತ್ಯ, ದೇವನಹಳ್ಳಿ ಅರುಣ್ ಕುಮಾರ್ ತಂಡದವರಿಂದ ಸುಗಮಸಂಗೀತ, ಅರದೇಶನಹಳ್ಳಿ ಅಂಜಲಿ ತಂಡದವರಿಂದ ವಚನಗಾಯನ, ಟಿ.ಅಗ್ರಹಾರ ದೀಪಿಕಾ ತಂಡದವರಿಂದ ಸಾಮಾಜಿಕ ನಾಟಕ ಪ್ರದರ್ಶನ, ಹೊಸಕೋಟೆ ನವೀನ್ ತಂಡದವರಿಂದ ತಮಟೆ ಮತ್ತು ದೇವನಹಳ್ಳಿ ಮಧು ತಂಡದವರಿಂದ ನಗಾರಿ ವಾದ್ಯಗಳ ಕಾರ್ಯಕ್ರಮಗಳು ನಡೆದವು.

  • ದೊಡ್ಡಬಳ್ಳಾಪುರ ನಗರದ ಹಲವೆಡೆ ನಾಳೆ ವಿದ್ಯುತ್‌ ವ್ಯತ್ಯಯ

    ಜ.28ರಂದು ಕೆಐಡಿಬಿ ಉಪ ವಿದ್ಯುತ್ ಕೇಂದ್ರದಲ್ಲಿ ಹಾಗೂ ಅಪೆರಲ್ ಪಾರ್ಕ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆ ಈ ಮಾರ್ಗದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ದೊಡ್ಡಬಳ್ಳಾಪುರ ನಗರ ಉಪವಿಭಾಗದ AEE ಮಂಜುನಾಥ್ ತಿಳಿಸಿದ್ದಾರೆ.

     

    *ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು*

     

    ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಕೆಐಎಡಿಬಿ, ಅಪೆರಲ್ ಪಾರ್ಕ್ ಹಂತ 1,2,3, KSSIDC ಕೈಗಾರಿಕಾ ಪ್ರದೇಶ, ಮಜರಾಹೊಸಹಳ್ಳಿ ಗ್ರಾ.ಪಂ, ದೊಡ್ಡತುಮಕೂರು ಗ್ರಾ.ಪಂ, ಅರಳುಮಲ್ಲಿಗೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಆಡಚಣೆವಾಗಲಿದೆ.

     

    ದೊಡ್ಡಬಳ್ಳಾಪುರ ನಗರದ ತೇರಿನಬೀದಿ ವೃತ್ತ, ಭುವನೇಶ್ವರಿ ನಗರ, ಸಂಜಯನಗರ, ವೀರಭದ್ರನಪಾಳ್ಯ, ಚೈತನ್ಯನಗರ, ವಿದ್ಯಾನಗರ, ಕನಕದಾಸ ರಸ್ತೆ, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ರಂಗಪ್ಪ ಸರ್ಕಲ್, ಗಾಂಧಿ ನಗರ, ತೂಬಗೆರೆ ಪೇಟೆ, ಬ್ರಾಹ್ಮಣರ ಬೀದಿ, ಖಾಸ್ ಭಾಗ್, ಶ್ರೀನಗರ, ಚಂದ್ರಶೇಖರಪುರ, ರೈಲ್ವೆ ನಿಲ್ದಾಣ, ಅರೇಹಳ್ಳಿ, ಗುಡ್ಡದಹಳ್ಳಿ, ಮುತ್ತೂರು, ಸಿದ್ದೇನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಫೆಬ್ರುವರಿ 4 ರಂದು ಕನ್ನಡ ಜಾಗೃತಿ ವೇದಿಕೆ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ : ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

    ದೊಡ್ಡಬಳ್ಳಾಪುರ: ಕನ್ನಡ ಜಾಗೃತಿ ವೇದಿಕೆಯ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಫೆ‌.4 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಸ್ವಾಭಿಮಾನಿ ಕನ್ನಡಿಗರ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜು. ಎಂ ಹೇಳಿದರು.

     

    ಕನ್ನಡಪರ ಸಂಘಟನೆಗಳ ಒಕ್ಕೂಟದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಮಂಜುನಾಥ ದೇವ ಅವರ ನೇತೃತ್ವದಲ್ಲಿ‌ ಸಮಾವೇಶ ನಡೆಯಲಿದೆ. ಕನ್ನಡಪರ ಸಂಘನೆಗಳ ಮುಖಂಡರು, ಕನ್ನಡದ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

     

    ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷ, ಕರ್ನಾಟಕ ಏಕೀಕರಣವಾಗಿ 68 ವರ್ಷ ಹಾಗೂ ಕನ್ನಡ ಜಾಗೃತಿ ವೇದಿಗೆ ಸ್ಥಾಪನೆಯಾಗಿ 30 ವರ್ಷಗಳಾದ ಹಿನ್ನೆಲೆಯಲ್ಲಿ

    ಸ್ವಾಭಿಮಾನಿ ಕನ್ನಡಿಗರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಜನಪದ ಕಲಾತಂಡಗಳು ಮತ್ತು ಸ್ತಬ್ಧ ಚಿತ್ರಗಳ ಭವ್ಯ ಮೆರವಣಿಗೆ ಇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶದ ಉದ್ಘಾಟನೆ ನೆರವೇರಿಸಲಿದ್ದಾರೆ. ಕನ್ನಡಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

     

    ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಂಜಪ್ಪ ಮಾತನಾಡಿ, ಕನ್ನಡ ಜಾಗೃತಿ ವೇದಿಕೆ ಹಮ್ಮಿಕೊಂಡಿರುವ ಸ್ವಾಭಿಮಾನಿ ಕನ್ನಡಿಗರ ಸಮಾವೇಶದಲ್ಲಿ ತಾಲೂಕಿನ ಕನ್ನಡಾಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು. ನಾವೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ ಎಂದು ಹೇಳಿದರು.

     

    ಇದೇ ವೇಳೆ ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜು ಎಂ. ಹಾಗೂ ಪದಾಧಿಕಾರಿಗಳು ಕನ್ನಡಪರ‌ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಂಜಪ್ಪ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

     

    ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ತಾಲೂಕು ಉಪಾಧ್ಯಕ್ಷ ರವಿ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ, ಮಹಿಳಾ ಮುಖಂಡರಾದ ಅಂಬಿಕಾ ಟಿ, ವಿಶಾಲಾಕ್ಷಿ, ಪಾರ್ವತಿ, ಲಕ್ಷ್ಮಿ, ಚಂದ್ರಕಲಾ, ತಾಲೂಕು ಕಾರ್ಯದರ್ಶಿ ಸುಧಾಕರ್, ಯುವ ಘಟಕದ ಅಧ್ಯಕ್ಷ ತರುಣ್ ಸರ್ಜಾ, ಕಸಬಾ ಅಧ್ಯಕ್ಷ ಗಿರೀಶ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ಚಂದನ್, ರಮೇಶ್, ಜಗದೀಶ್, ಕಾರ್ಮಿಕ ಘಟಕದ ದಿಲ್ ರಾಜ್, ಆಟೋ ಘಟಕದ ರಾಘವ, ವಿದ್ಯಾರ್ಥಿ ಘಟಕದ ಚಂದನ್, ಮುಖಂಡರಾದ ರಾಕಿ, ಕೃಷ್ಣಪ್ಪ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.

  • ರಾಗಿ ಹುಲ್ಲಿಗೆ ಕಿಡಿಗೇಡಿಗಳಿಂದ ಬೆಂಕಿ : 40 ಸಾವಿರ ರೂ ಬೆಲೆಯ ರಾಗಿ ಹುಲ್ಲು ಸಂಪೂರ್ಣ ಸುಟ್ಟು ಭಸ್ಮ

    ದೊಡ್ಡಬಳ್ಳಾಪುರ :ತಾಲ್ಲೂಕಿನ ತೂಬಗೆರೆ ಹೋಬಳಿಯ ನೆಲ್ಲುಕುಂಟೆ ಗ್ರಾಮದಲ್ಲಿ ಮುಂಜಾನೆ ರಾಗಿ ಹುಲ್ಲು ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆಗೆ ರಾಗಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಸಂಭವಿಸಿದೆ.

     

    ನೆಲ್ಲುಕುಂಟೆ ಗ್ರಾಮದ ರೈತ ರಾಮಾಂಜಿನಪ್ಪನವರಿಗೆ ಸೇರಿದ ರಾಗಿ ಹುಲ್ಲಿನ ಬಣವೆಗೆ ಬೇಕಂತಲೇ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ರಾಗಿ ಹುಲ್ಲು ಸಂಪೂರ್ಣ ಸುಟ್ಟು ಬೂದಿಯಾಗಿದೆ.

     

    ಈ ಕುರಿತ ರೈತ ರಾಮಾಂಜಿನಪ್ಪ ಮಾತನಾಡಿ ತಡರಾತ್ರಿ ಸುಮಾರು ಎರಡು ಗಂಟೆಯಲ್ಲಿ ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂತು. ಸುತ್ತಲಿನ ಜನರು ಸೇರಿ ಬೆಂಕಿ ನಂದಿಸುವ ಪ್ರಯತ್ನ‌ ಮಾಡಿದೆವು. ಆದರೆ, ಈ ವೇಳೆಗಾಗಲೇ ಸುಮಾರು 40 ಸಾವಿರ ರೂ. ಬೆಲೆ ಬಾಳುವ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

  • AI in Education is Best Experiences

    CNN’s Rachel Crane goes inside Amazon HQ to see how Amazon uses AI to improve customer experiences, from cashier-less stores to Alexa’s new tricks.

    Artificial Intelligence (AI) is reshaping the landscape of education, offering personalized learning experiences and innovative teaching methods. This post delves into the various applications of AI in education, from adaptive learning platforms to intelligent tutoring systems. Explore how AI is revolutionizing the way students learn and educators teach, paving the way for a more inclusive and dynamic educational environment.

    I got to be unfit of drawing a single stroke at the appear miniature; and in any case I feel that I never was a more noticeable skilled worker than by and by.

    When, while the dazzling valley proliferates with vapor around me, and the meridian sun strikes the upper surface of the invulnerable foliage of my trees, and but a few stray shimmers take into the internal safe house, I hurl myself down among the tall grass by the spilling stream; and, as I lie close to the soil, a thousand cloud plants are taken note by me: when I tune in the buzz of the little world among the stalks, and create commonplace with the inestimable extraordinary shapes of the frightening crawlies and flies, at that point I feel the closeness of the All-powerful, who formed us in his claim picture, and the breath of that all comprehensive cherish which bears and keeps up us, since it floats around us in an until the end of time of elation; and after, that my companion, when lack of clarity overspreads my eyes, and heaven and soil show up to stay in my soul and acclimatize its control, similar to the shape of a cherished favor lady, at that point I routinely think with longing, Goodness, would I might portray these conceptions, may rouse upon paper all that’s living so full and warm interior me, that it can be the reflect of my soul, as my soul is the reflect of the endless God!

    O my companion — but it is as well much for my quality — I sink underneath the weight of the quality of these dreams! A eminent quietness has taken possession of my entire soul, like these sweet mornings of spring which I appreciate with my aggregate heart. I am alone, and feel the charm of nearness in this spot, which was made for the delight of souls like mine.

    I am so cheerful, my costly companion, so retained inside the astonishing sense of basic tranquil nearness, that I ignore my capacities. I got to be unfit of drawing a single stroke at the appear miniature; and in any case I feel that I never was a more unmistakable skilled worker than directly. When, though the wonderful valley proliferates with vapor around me, and the meridian sun strikes the upper surface of the impenetrable foliage of my trees, and but numerous stray glints take into the internal refuge, I hurlmyself down among the tall grass by the gushing stream;and, as I lie close to the soil, a thousand cloud plants are taken note by me: when I tune in the buzz of the little world among the stalks, and create recognizable with the inestimable unbelievable shapes of the frightening crawlies.