Blog

  • ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ ಉಪಮುಖ್ಯಮಂತ್ರಿ ಡಿ ಕೆ ಶಿವಕಮಾರ್

    ಹಾಸನ : ವಿಶೇಷ ದೇವಾಲಯಗಳಲ್ಲಿ ಒಂದಾದ ಹಾಸನಾಂಬೆ ದೇವಾಲಯ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ

    ಈ ಹಿನ್ನಲೆಯಲ್ಲಿ ಸಹಸ್ರರು ಭಕ್ತದಿಗಳಂತೆ ರಾಜ್ಯದ ಘಟಾನುಘಟಿ ನಾಯಕರು ದರ್ಶನ ಪಡೆಯುತ್ತಿದ್ದು ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ದರ್ಶನ ಪಡೆದಿದ್ದು

    ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹ ತಮ್ಮ ಕುಟುಂಬದೊಂದಿಗೆ ತಾಯಿ ಹಾಸನಾಂಬೆಯ ದರ್ಶನ ಪಡೆದು ಆಶೀರ್ವಾದ ಪಡೆದರು

     

    ಈ ಸಂದರ್ಭದಲ್ಲಿ ಸರ್ವರಿಗೂ ಸಮೃದ್ಧಿ ನೀಡಿ ರಾಜ್ಯದ ರೈತರ ಬದುಕು ಹಸನಾಗಿಸಲಿ ಎಂದು ತಮ್ಮ ಎಕ್ಸ್ ಸಂದೇಶದ ಮೂಲಕ ತಿಳಿಸಿದ್ದಾರೆ.

  • 9,60,000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ

    ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಕಾರ್ಮಿಕ ಇಲಾಖೆಯು ಬೆಂಗಳೂರು ನಗರ ಭಾಗದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮವನ್ನು ಉದ್ಘಾಟಿಸಿದರು

     

    ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಬಸವಣ್ಣನವರು ಕಾಯಕ ಪದ್ಧತಿಯನ್ನು ಹೇಳಿದರು.

    ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

     

    ಅಸಮಾನತೆಯನ್ನು ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು. 9,60,000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು.

     

    ಸಹಾಯ ಧನ ಪಡೆಯುತ್ತಿರುವ ಇವರೆಲ್ಲರೂ ಅಸಂಘಟಿತ ಕಾರ್ಮಿಕರ ಮಕ್ಕಳು. ಶೇ 83 ರಷ್ಟು ಕಾರ್ಮಿಕರು ಇವತ್ತಿಗೂ ಅಸಂಘಟಿತರಾಗಿದ್ದಾರೆ. ದೇಶದಲ್ಲಿ ರೈತ ಸಮುದಾಯವನ್ನು ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಕಾರ್ಮಿಕ ಸಮುದಾಯವಾಗಿದೆ

    ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು

  • KIDB ಯಿಂದ ರೈತರ ಭೂಮಿಗೆ ಅವೈಜ್ಞಾನಿಕ ಬೆಲೆ ನಿಗದಿ : ರೈತ ಪರ ಬೆಲೆ ನಿಗದಿ ಪಡಿಸಲು ಆಗ್ರಹ

    ದೊಡ್ಡಬಳ್ಳಾಪುರ : KIDB ರೈತರ ಭೂಮಿಗೆ ಅವೈಜ್ಞಾನಿಕ ಬೆಲೆ ನಿಗದಿ ಪಡಿಸಿದ್ದು ರೈತರ ಕೂಗು ಅಧಿಕಾರಿಗಳಿಗೆ ಕೇಳದಂತಾಗಿದೆ ರೈತರ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ನೆಡೆ ಸರಿಯಿಲ್ಲ ಎಂದು ಇಂದು ನೆಡೆದ ಪತ್ರಿಕಾಗೋಷ್ಠಿಯಲ್ಲಿ ಕೊನಘಟ್ಟ ಗ್ರಾಮದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದ ರೈತರಿಂದ KIDB ಭೂಸ್ವಾಧೀನ ಕುರಿತಾಗಿ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು.

     

    ಈ ಸಂದರ್ಭದಲ್ಲಿ ಸ್ಥಳೀಯ ರೈತ ರಾಮೇಗೌಡ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಉಳುಮೆ ಮಾಡುವ ಭೂಮಿಯನ್ನು ರೈತರಿಂದ ಪಡೆದುಕೊಳ್ಳಲಾಗುತ್ತಿದೆ ಆದರೆ ಆ ಭೂಮಿಗೆ ಸರಿಯಾದ ರೀತಿಯಲ್ಲಿ ಬೆಲೆ ನಿಗದಿ ಮಾಡುವಲ್ಲಿ KIDB ಸೋತಿದೆ ..ರೈತರ ಮನವಿ ಕೇಳಲು ಸಿದ್ದವಿಲ್ಲದ KIDBಗೆ ಭೂಮಿ ನೀಡಲು ರೈತರು ಸಿದ್ಧರಿಲ್ಲ ಅಧಿಕಾರಿಗಳು ಇನ್ನಾದರೂ ಎಚ್ಚೆದ್ದು ರೈತ ಕುಟುಂಬಗಳ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದರು

     

    ರೈತ ಮುಖಂಡರಾದ ಆನಂದ್ ಮಾತನಾಡಿ KIDB ಯಾವ ಆಧಾರದ ಮೇಲೆ ಭೂಮಿ ಬೆಲೆ ನಿಗದಿ ಮಾಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ರೈತರ ಮನಸ್ಸನ್ನು ಓಲೈಸಲು ಎರಡು ಬಾರಿ ಸಭೆ ಕರೆದಿದ್ದು ರೈತರು ಭೂಮಿ ಕೊಡಲು ಇಚ್ಛೆ ಇಲ್ಲದೆ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ ಆದರೂ ಏಕಾಏಕಿ ಅವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಸುತ್ತೋಲೆ ನೀಡಿರುವುದು ಸರಿಯಲ್ಲ ಮೊದಲು ರೈತರೊಂದಿಗೆ ಸಂವಾದ ನಡೆಸಿ ವೈಜ್ಞಾನಿಕ ಬೆಲೆ ನಿಗದಿ ಪಡಿಸಲು ಕ್ರಮ ಕೈಗೊಳ್ಳಲಿ ಇಲ್ಲದಿದ್ದಲ್ಲಿ ರೈತರು ಹೋರಾಟಕ್ಕೂ ಸಿದ್ದ ಎಂದು ತಿಳಿಸಿದರು

    ಸ್ಥಳೀಯ ರೈತ ಮುಖಂಡರಾದ ರಾಮಾಂಜಿನಪ್ಪ ಮಾತನಾಡಿ ಕೊನಘಟ್ಟ ಗ್ರಾಮವು ತರಕಾರಿ ಉತ್ಪಾದನೆ ಮಾಡುವಲ್ಲಿ ಹೆಸರುವಾಸಿಯಾಗಿದ್ದು ಇಂದು KIDB ಯಿಂದಾಗಿ ರೈತರು ತಮ್ಮ ಜಮೀನುಗಳನ್ನು ಕೆಳೆದು ಕೊಳ್ಳುವ ಪರಿಸ್ಥಿತಿ ಎದುರಾಗಿದೆ ಸರಿಯಾದ ಬೆಲೆ ಸಿಗದೆ ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಭೂಮಿಯನ್ನೇ ಆಧರಿಸಿ ಜೀವನ ಸಾಗಿಸುತ್ತಿರುವ ರೈತ ಸರಿಯಾದ ಬೆಲೆ ಸಿಗದ ಮೇಲೆ ಯಾರ ಬಳಿ ಕೇಳಬೇಕು ಅಧಿಕಾರಿಗಳು ರೈತರ ಕಷ್ಟಗಳನ್ನು ಕೇಳಬೇಕಿದೆ KIDB ಗೆ ತಿಳಿಹೇಳಬೇಕಿದೆ ಆದರೆ ಇಲ್ಲಿ ಅಧಿಕಾರಿಗಳೇ ರೈತರ ಪರ ಇಲ್ಲದಿರುವುದು ವಿಪರ್ಯಾಸ ರೈತರ ಭೂಮಿಗೆ ಸರಿಯಾದ ಬೆಲೆ ಸಿಗದ ಪಕ್ಷದಲ್ಲಿ ಹೋರಾಟ ಖಂಡಿತ ಎಂದು ತಿಳಿಸಿದರು

     

     

    ಈ ಸಂದರ್ಭದಲ್ಲಿ ಕೊನಘಟ್ಟ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು

  • ಎದ್ದಲಹಳ್ಳಿಕೆರೆ ನಾಮಫಲಕ ಅನಾವರಣ : ಕೆರೆಗೆ ಬಾಗಿನ ಸಮರ್ಪಣೆ

    ದೊಡ್ಡಬಳ್ಳಾಪುರ :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ಮತ್ತು ತೂಬಗೆರೆ ಗ್ರಾಮ ಪಂಚಾಯಿತಿ ಮತ್ತು ಎದ್ದಲ ಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಎದ್ದಲಹಳ್ಳಿ ಕೆರೆ ಹೂಳೆತ್ತುವ ಕೆಲಸ ಮುಕ್ತಾಯವಾಗಿದ್ದು

     

    ಕೇಂದ್ರ ಕಚೇರಿಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ಆನಂದ್ ಸುವರ್ಣ ರವರಿಂದ ಎದ್ದಲಹಳ್ಳಿಕೆರೆಯ ನಾಮಫಲಕ ಅನಾವರಣಗೊಳಿಸಿ ಸಮಿತಿಯವರಿಗೆ ಹಸ್ತಾಂತರ ಮಾಡುವ ಮೂಲಕ ಕೆರೆಗೆ ಬಾಗಿನ ಸಮರ್ಪಣೆ ಮಾಡಲಾಯಿತು.

     

     

    ಕಾರ್ಯಕ್ರಮದಲ್ಲಿ ಶುದ್ಧಗಂಗಾ ನಿರ್ದೇಶಕರಾದ ಮಾನ್ಯ ಶಿವಾನಂದಾಚಾರ್ , ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕರಾದ ಮಾನ್ಯ ಉಮರಬ್ಬ , ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿಗಳಾದ ಪುಷ್ಪರಾಜ್ , ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್ , ಕೆರೆ ಅಭಿಯಂತರರು ಮಾನ್ಯ ಅರುಣ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾನ್ಯ ವೆಂಕಟೇಶ್ ರವರು ಹಾಗೂ ಕೆರೆ ಸಮಿತಿಯ ಅಧ್ಯಕ್ಷರು ನವೀನ್ ಕುಮಾರ್ ಮತ್ತು ಕೆರೆ ಸಮಿತಿಯ ಸದಸ್ಯರು ತೂಬಗೆರೆಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು,ತಾಲೂಕಿನ ಕೃಷಿ ಮೇಲ್ವಿಚಾರಕ ಲೋಹಿತ್ ,ವಲಯ ಮೇಲ್ವಿಚಾರಕ ಪ್ರಕಾಶ್ ಮೂರ್ತಿ ಮತ್ತು ಸೇವಾ ಪ್ರತಿನಿಧಿಗಳು ಮತ್ತು ಎದ್ದಲಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧಿವೇಶನ

    ಬೆಂಗಳೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ವತಿಯಿಂದ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧಿವೇಶನವನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ಕಬ್ಬನ್ ಪಾರ್ಕ್ ) ಇಲ್ಲಿ ಆಯೋಜಿಸಲಾಗಿತ್ತು ..

     

    ಪ್ರೊಫೆಸರ್ ಕೃಷ್ಣಪ್ಪ ರವರ ನೇತೃತ್ವದಲ್ಲಿ ಸ್ಥಾಪಿಸಲಾದ ದಲಿತ ಸಂಘರ್ಷ ಸೇನೆ (ರಿ)ಗೆ ನೂತನ ಪದಾಧಿಕಾರಿಗಳ ನೇಮಕ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕ ಕುರಿತಾದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು

    ಸಭೆಗೆ ರಾಜ್ಯದ ಹಲವು ಭಾಗಗಳಿಂದ ಪದಾಧಿಕಾರಿಗಳು , ಸದಸ್ಯರು ಭಾಗವಹಿಸಿದ್ದರು.. ಸದರಿ ಸಭೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖಂಡರಾಗಿ ದೊಡ್ಡಯ್ಯ ಲಿಂಗಾಪುರ, ನರೇಂದ್ರ ಮೂರ್ತಿ ಮಾಡೇಶ್ವರ, ಆನಂದ್ ಸಕ್ಕರೆ ಗೊಲ್ಲಹಳ್ಳಿ , ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ, ಹನುಮಯ್ಯ ,ಕಮಲಮ್ಮ ಚೆನ್ನದೇವಿ ಅಗ್ರಹಾರ ,ನಾಗರತ್ನಮ್ಮ ಮಲ್ಲೋಹಳ್ಳಿ,ಮುನಿರಾಜು ಚಿಕ್ಕ ಬೆಳವಂಗಲ,ಸಿದ್ದರಾಜು , ಮೈಲಾರಪ್ಪ ಮುಂತಾದವರು ಭಾಗವಹಿಸಿದ್ದರು

  • ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ನಿರ್ಮಾಣ : ಫಲಾನುಭವಿ ಮುತ್ತಮ್ಮ ರವರಿಗೆ ಹಸ್ತಾಂತರ

    ದೊಡ್ಡಬಳ್ಳಾಪುರ :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಸಾಶನ ಫಲಾನುಭವಿ ಮುತ್ತಮ್ಮ ರವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆಯನ್ನು ನಿರ್ಮಾಣ ಮಾಡಿದ್ದು, ಗೌರವಾನ್ವಿತ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಆನಂದ ಸುವರ್ಣ ರವರು ವಾತ್ಸಲ್ಯ ಮನೆಯನ್ನು ಫಲಾನುಭವಿ ಮುತ್ತಮ್ಮ ರವರಿಗೆ ಹತ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ಫಲಾನುಭವಿ ಮುತ್ತಮ್ಮ ಮಾತನಾಡಿ ವಾತ್ಸಲ್ಯ ಯೋಜನೆಯಿಂದ ತುಂಬಾ ಸಹಾಯವಾಗಿದೆ ಈ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ನನಗೆ ವಾಸ ಮಾಡಲು ಅನುವು ಮಾಡಿಕೊಟ್ಟ ಸಮಸ್ತ ವಾತ್ಸಲ್ಯ ತಂಡಕ್ಕೆ ಸಹಕರಿಸಿದ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ತಿಳಿಸಿದರು

     

     

    ಈ ಸಂದರ್ಭದಲ್ಲಿ ಜಿಲ್ಲೆಯ ನಿರ್ದೇಶಕರಾದಂತಹ ಶ್ರೀ ಉಮರಬ್ಬ, ಶುದ್ಧ ಗಂಗಾ ನಿರ್ದೇಶಕರಾದ ಶಿವಾನಂದ್ ಆಚಾರ್ಯ, ಬೆಂಗಳೂರು ಪ್ರಾದೇಶಿಕ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಶ್ರೀಮತಿ ಸಂಧ್ಯಾ ಶೆಟ್ಟಿ, ಸಮುದಾಯ ಅಭಿವೃದ್ಧಿ ಯೋಜನಾಧಿಕಾರಿಗಳಾದ ಪುಷ್ಪರಾಜ್, ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಯ್ಯ (ಅಪ್ಪಿ )ತಾಲ್ಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್ ನಾಯಕ್, ಕೆರೆ ಇಂಜಿನಿಯರ್ ಅರುಣ್, ಜ್ಞಾನವಿಕಾಸ ಸಮನ್ವಯಾಧಿಕಾರಿ ವೈಷ್ಣವಿ ನಾಗರಾಜ್ ಪಂಚಾಯತ್ ಅಧ್ಯಕ್ಷರು ಹಾಗೂ ಒಕ್ಕೂಟದ ಅಧ್ಯಕ್ಷರು, ವಲಯದ ಮೇಲ್ವಿಚಾರಕರಾದ ಸಂತೋಷ್, ಸೇವಾಪ್ರತಿನಿಧಿ ರೂಪ & ರಾಧಾ, ಸ್ವ ಸಹಾಯ, ಪ್ರಗತಿ ಬಂಧು ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

  • ಪ್ರತಿ ತಿಂಗಳ 20ರೊಳಗೆ ಅನ್ನಭಾಗ್ಯ,ಗೃಹಲಕ್ಷ್ಮಿ ಹಣ ಜನರ ಖಾತೆಗೆ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಂಗಳೂರು : ಕಾಂಗ್ರೆಸ್ ಸರ್ಕಾರ ತನ್ನ ವಿವಿಧ ಗ್ಯಾರೆಂಟಿ ಯೋಜನೆಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು .. ಆ ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ವಿಶೇಷ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

     

    ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಣವು ಜನಸಾಮಾನ್ಯರ ಖಾತೆಗೆ ಜಮೆಯಾಗದಿರುವುದು ಅಥವಾ ಜಮೆಯಾಗುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಘೋಷಣೆಯನ್ನು ಮಾಡಿದ್ದಾರೆ …

     

     

    ಇನ್ನು ಮುಂದೆ ಪ್ರತಿತಿಂಗಳು ದಿನಾಂಕ 20 ರೊಳಗೆ ಯೋಜನೆಗಳ ಹಣ ಸಂಬಂಧಪಟ್ಟವರ ಖಾತೆಗೆ ಜಮೆಯಾಗುವಂತೆ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಪ್ರತಿ ತಿಂಗಳು ದಿನಾಂಕ 5 ರೊಳಗೆ ಜನರಿಗೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ

     

    ಎಕ್ಸ್ ಮೂಲಕ ಸಂದೇಶ ರವಾನಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿಯ ಗ್ಯಾರಂಟಿ ಸರ್ಕಾರ ಎಂದು ತಿಳಿಸಿದ್ದಾರೆ

  • ಹೊಸಲುಕ್ ನಲ್ಲಿ ಮಿಂಚಲಿರುವ ಕಮಲ್…. *ಥಗ್ ಲೈಫ್* ಮಾಡಲಿದೆಯಾ ಕಾಮಾಲ್….

    ಕಮಲ್ ಹಾಸನ್ ತಮ್ಮ ಹೊಸ ಸಿನಿಮಾ KH234 ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೌದು ತಮ್ಮ ಹೊಸ ಸಿನಿಮಾ *ಥಗ್ ಲೈಫ್* ನ ಟೈಟಲ್ ಅನೌನ್ಸ್ಮೆಂಟ್ ವಿಡಿಯೋ ಬಿಡುಗಡೆಯಾಗಿದ್ದು ಯೌಟ್ಯೂಬ್ ನಲ್ಲಿ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ…

    ಈ ಸಿನಿಮಾವನ್ನು ನಿರ್ದೇಶಕ ಮನಿರತ್ನಮ್ ನಿರ್ದೇಶಸುತ್ತಿದ್ದು ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಈ ಸಿನಿಮಾ ಕಮಲ್ ಹಾಸನ್ ರವರ 234 ನೇ ಸಿನಿಮಾ ಇದಾಗಿದ್ದು ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ..

    ವಿಕ್ರಂನಂತೆ ಈ ಥಗ್ ಲೈಫ್ ಕೂಡ ಪ್ರೇಕ್ಷಕರಿಗೆ ಕಾಮಲ್ ಮಾಡುತ್ತಾ ಕಾದು ನೋಡಬೇಕಿದೆ…

  • ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಘಾಟಿಗೆ ಭೇಟಿ ಕೊಟ್ಟ ಕಿರುತೆರೆ ನಟಿ ಅಭಿನಯ

    ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಕಿರುತೆರೆಯ ಖ್ಯಾತ ನಟಿ ಅಭಿನಯ ರವರು ತಮ್ಮ ತಾಯಿ ಮತ್ತು ಸಹೋದರನೊಂದಿಗೆ ಭೇಟಿ ನೀಡಿ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು

     

    ಈ ಸಂದರ್ಭದಲ್ಲಿ ಹಲವು ಭಕ್ತದಿಗಳು ತಮ್ಮ ನೆಚ್ಚಿನ ಕಿರುತೆರೆ ನಟಿಯೊಂದಿಗೆ ಸೆಲ್ಫಿ ಪಡೆಯುವ ಮೂಲಕ ಸಂಭ್ರಮಿಸಿದರು

     

    ಈ ಸಂದರ್ಭದಲ್ಲಿ ದೇವಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

  • 1318 ನೇ ದಿನದ ಅನ್ನದಾಸೋಹ ಕಾರ್ಯಕ್ರಮ : ವಿಶೇಷ ದಿನಗಳನ್ನು ನಮ್ಮೊಂದಿಗೆ ಆಚರಿಸಿ – ಮಲ್ಲೇಶ್‌

    ದೊಡ್ಡಬಳ್ಳಾಪುರ :

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತವಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕಡುಬಡವರಿಗೆ ಮಲ್ಲೇಶ್ ಮತ್ತು ತಂಡ ದಾನಿಗಳ ನೆರವಿನಿಂದ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿದ್ದು

    ಇಂದು ವಿ ಎಸ್ ಡಿ ಕೆ ಚಿಕನ್ ಸೆಂಟರ್ ನ ಮಾಲೀಕರಾದ ಕಿರಣ್ ಮತ್ತು ವೈಷ್ಣವಿ ಹೋಟೆಲ್ ಮಾಲೀಕರಾದ ಮಧುಸೂಧನ್ (ಅಪ್ಪು) ರವರ ಸಹಯೋಗದೊಂದಿಗೆ ಶ್ರೀ ಕಿರಣ್ ರವರ ಹುಟ್ಟು ಹಬ್ಬದ ಅಂಗವಾಗಿ 1318 ನೇ ದಿನದ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸಲಾಯಿತು ..

    ಈ ಸಂದರ್ಭದಲ್ಲಿ ಕಿರಣ್ ರವರು ಮಾತನಾಡಿ ಹಸಿದ ಹೊಟ್ಟೆಗೆ ಊಟ ನೀಡುವುದು ಉತ್ತಮ ಕಾರ್ಯ ಹಸಿವಿಗೆ ಜಾತಿ ಧರ್ಮಗಳ ಬೇಧವಿಲ್ಲ ನನ್ನ ಹುಟ್ಟು ಹಬ್ಬವನ್ನು ಇಂದು ಅನ್ನ ದಾಸೋಹ ಮಾಡುವ ಮೂಲಕ ಆಚರಿಸಿಕೊಂಡಿದ್ದೇನೆ, ಮುಂದೆಯೂ ಸಹ ಇದೇ ರೀತಿ ನಮ್ಮ ಬೆಂಬಲ ಅನ್ನದಾಸೋಹ ಸಮಿತಿಗೆ ನೀಡಲಾಗುವುದು ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಮಧುಸೂದನ್ ಮಾತನಾಡಿ
    ಮಲ್ಲೇಶ್ ರವರ ತಂಡ ಮಾಡುತ್ತಿರುವ ಕಾರ್ಯ ಶ್ಲಾಘನೀಯ ನಮ್ಮ ಸಹಕಾರ ಎಂದಿಗೂ ಮಲ್ಲೇಶ್ ಮತ್ತು ತಂಡಕ್ಕೆ ಇರುತ್ತದೆ ಎಂದು ತಿಳಿಸಿದರು

     

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಸಾರ್ವಜನಿಕರು ,ದಾನಿಗಳು ದಯಮಾಡಿ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಬಡವರಿಗೆ ಅನ್ನದಾಸೋಹ ನಡೆಸುವ ಮುಖಾಂತರ ಆಚರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು

    ಈ ಸಂದರ್ಭದಲ್ಲಿ ಅನ್ನ ದಾಸೋಹ ಸಮಿತಿಯ ಸದಸ್ಯರು ಉಪಸ್ಥಿತಿದ್ದರು..