Blog

  • ಡಿಫ್ರೆಂಟ್ ಲುಕ್ಕಲ್ಲಿ ರಿಷಬ್ : ಕಾಂತಾರ ಅಧ್ಯಾಯ ೧ ಪೋಸ್ಟರ್ ಬಿಡುಗಡೆ

    ಕನ್ನಡ ಚಿತ್ರರಂಗದಲ್ಲಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಮಾಡಿರುವ ಕಮಾಲ್ ನಮಗೆಲ್ಲ ತಿಳಿದಿದೆ ಆದರೆ ಈಗ ವಿಚಿತ್ರವಾದ ಪೋಸ್ಟರ್ ನೊಂದಿಗೆ ಕೈಯಲ್ಲಿ ತ್ರಿಶೂಲ ಹಿಡಿದು ರಗಡ್ ಲುಕ್ ಅಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ

     

    ಹೊಂಬಾಳೆ ಫಿಲಂಸ್ ಬ್ಯಾನರ್ ನ ಅಡಿಯಲ್ಲಿ ತಯಾರಾಗುತ್ತಿರುವ ಕಾಂತಾರ ಅಧ್ಯಾಯ ಒಂದು ಹಲವಾರು ವಿಶೇಷತೆಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ

     

    ಏಳು ಭಾಷೆಯಲ್ಲಿ ಪ್ರದರ್ಶನ ಕಾಣಲಿರುವ ಈ ಚಿತ್ರಕ್ಕಾಗಿ ಸಕ್ಕತ್ ತಾಲಿಮು ನಡೆಸಿರುವ ರಿಷಬ್ ಶೆಟ್ಟಿ ವಿಶೇಷ ಕುತೂಹಲಕಾರಿ ಕಥೆಯಿಂದ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ

     

    ಸದ್ಯ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು ಎಲ್ಲೆಡೆಯೂ ಕಾಂತಾರ ಅಧ್ಯಾಯ ಒಂದರ ಚರ್ಚೆ ನಡೆಯುವಂತಾಗಿದೆ

  • ಡಿಪಿವಿ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರಭಾಗದ ಡಿ ವಿ ಪಿ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಕಸಬಾ ವಲಯದ ವತಿಯಿಂದ ಶ್ರೀ ಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನವಜೀವನ ಸಮಿತಿಯ ಸಹಭಾಗಿತ್ವದಲ್ಲಿ ಶ್ರೀ ಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು..

     

    ಸಾಮೂಹಿಕ ಲಕ್ಷ್ಮಿ ಪೂಜೆಯ ಜೊತೆಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು

     

    ಪೂಜಾ ಕಾರ್ಯಕ್ರಮ ನೆರವೇರಿಸಿದ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ನಾಗರಾಜ್ ಮಾತನಾಡಿ ಸಂಘದ ಒಳಿತಿಗಾಗಿ ಹಾಗೂ ಸರ್ವರಿಗೂ ಶುಭವಾಗಲಿ ಎಂಬ ಕಾರಣಕ್ಕೆ ಈ ಸಾಮೂಹಿಕ ಲಕ್ಷ್ಮಿ ಪೂಜೆ ಆಯೋಜನೆ ಮಾಡಲಾಗಿದೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಮನವಿಯ ಮೇರೆಗೆ ಪೂಜೆಯಲ್ಲಿ ನಾವು ಪಾಲ್ಗೊಂಡಿದ್ದು ಸರ್ವರಿಗೂ ಶುಭವಾಗಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಸರ್ವರಿಗೂ ಧನ್ಯವಾದಗಳು ಎಂದು ತಿಳಿಸಿದರು

    ಧಾರ್ಮಿಕ ಪ್ರವಚನಕರರು ಹಾಗೂ ಶರಣ ಸಾಹಿತ್ಯ ಪರಿಷತ್ ನ ತಾಲ್ಲೂಕು ಅಧ್ಯಕ್ಷರಾದ ಶ್ರೀ ಮಹಾಲಿಂಗಯ್ಯ ನವರು ಮಾತನಾಡಿ ಮಾತೆಯರು ಮಕ್ಕಳನ್ನು ಬೆಳಸುವ ವಿಧಾನ ಅರಿಯಬೇಕಿದೆ ಭಕ್ತಿಗಿರುವ ಶಕ್ತಿ ಅಪಾರವಾದದ್ದು ಶಿಸ್ತು,ನಿಷ್ಠೆ, ಕಾಯಕ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ ಇಂದು ತಾವೆಲ್ಲರೂ ಸೇರಿ ಸಾಮೂಹಿಕವಾಗಿ ಆಚರಿಸಿರುವ ಲಕ್ಷ್ಮಿ ಪೂಜೆ ವಿಶೇಷವಾದದ್ದು ಸರ್ವರಿಗೂ ಲಕ್ಷ್ಮಿದೇವಿ ಒಳಿತು ಮಾಡಲಿ ಎಂದು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಧಾರ್ಮಿಕ ಅರಿವು ಮೂಡಿಸಿದರು

    ಜಿಲ್ಲಾ ನಿರ್ದೇಶಕರಾದ ಉಮರಬ್ಬ ರವರು ಮಾತನಾಡಿ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದ ಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ನವಜೀವನ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಲ್ಲರ ಸಹಕಾರ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಕಾರ್ಯಕ್ರಮದಲ್ಲಿ ಉಮರಬ್ಬ ಜಿಲ್ಲಾ ನಿರ್ದೇಶಕರು,ರಾಘವೇಂದ್ರ ಸ್ವಾಮಿಅರ್ಚಕರು ಮುತ್ಯಾಲಮ್ಮ ದೇವಾಲಯ,ನಾಗರಾಜ್  ಜನಜಾಗೃತಿ ವೇದಿಕೆ,ಶಶಿಕಲಾ ನಾಗರಾಜ್ ಗ್ರಾಮ ಪಂಚಾಯಿತಿ ಸದಸ್ಯರು ,ಸುಧಾ ಭಾಸ್ಕರ್ ಯೋಜನಾಧಿಕಾರಿಗಳು , ಶಶಿಕಲಾ ಯೋಜನಾಧಿಕಾರಿಗಳು,ದೊಡ್ಡನಂಜುಡಪ್ಪ ಅಧ್ಯಕ್ಷರು ಗ್ರಾಮ ಪಂಚಾಯಿತಿ ದರ್ಗಾ ಜೊಗಹಳ್ಳಿ,ವೈಷ್ಣವಿ,ಲೋಹಿತ್ ಕೃಷಿ ಮೇಲ್ವಿಚಾರಕರು,ಒಕ್ಕೂಟದ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿಗಳು, ಸಾವಿರಾರು ಸದಸ್ಯರು ಭಾಗವಹಿಸಿದ್ದರು

  • ವೀರಯೋಧನಿಗೆ ಗೌರವ ಸಮರ್ಪಣೆ : ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ದಾಂಜಲಿ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವೀರಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರವರಿಗೆ ಗೌರವ ಸಮರ್ಪಣೆ ಮಾಡಲಾಯಿತು

     

    ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ರವರ ಸ್ಮರಣೆಯನ್ನು ನೆನೆದು ವೀರಯೋಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಿಸಿ ಕನ್ನಡ ಪರ ಹೋರಾಟಗಾರರು ಭಾವುಕರಾದರು.

    ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಂಜಪ್ಪ ಮಾತನಾಡಿ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸೇರಿದಂತೆ ಸೇನೆಯಲ್ಲಿ ಹುತಾತ್ಮರಾದ ವೀರ ಯೋಧರು ಸದಾ ಅಮರರು ಅವರಿಗೆ ಸಾವಿಲ್ಲ ದೇಶಕ್ಕಾಗಿ ಮಡಿಯುವ ಯೋಧರು ನಿಜವಾದ ಹೀರೋಗಳು ಭಾರತ ಸರ್ಕಾರ ಈ ಸಾವಿಗೆ ತಕ್ಕ ಉತ್ತರ ನೀಡಬೇಕಿದೆ ಉಗ್ರರನ್ನು ಮಟ್ಟ ಹಾಕಬೇಕಿದೆ ಎಂದು ತಿಳಿಸಿದರು

     

    ಕನ್ನಡ ಪರ ಹೋರಾಟಗಾರ್ತಿ ಪ್ರಮೀಳಾ ಮಹದೇವ್ ಮಾತನಾಡಿ ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರು ನಮ್ಮ ಹೋರಾಟಕ್ಕೆ ಮಾದರಿ ಉಗ್ರರೊಂದಿಗೆ ಹೋರಾಡಿ ಹುತಾತ್ಮ ರಾಗಿರುವ ಕ್ಯಾಪ್ಟನ್ಎಂ  ವಿ ಪ್ರಾಂಜಲ್ ರವರು ನವ ಪೀಳಿಗೆಗೆ ಮಾದರಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದು ದೇಶಕ್ಕಾಗಿ ಶ್ರಮಿಸುವುದು ದೇಶ ಪ್ರೇಮದ ಕಿಚ್ಚು ಪ್ರತಿಯೊಬ್ಬರಲ್ಲೂ ಮೂಡಲಿ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿಜಿಲ್ಲಾ ಅಧ್ಯಕ್ಷ ಎ.ನಂಜಪ್ಪ, ನಾಗರಾಜ್, ಪ್ರಮೀಳಮಹದೇವ್, ಪ್ರವೀಣ್ ಕುಮಾರ್,  ಮತ್ತಿತರರು ಉಪಸ್ಥಿತರಿದ್ದರು

  • ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಇಲಾಖೆ ವರದಿ ನೀಡಲಿದೆ : ಜಿ. ಪಂ ಮಾಜಿ ಸದಸ್ಯ ಚುಂಚಗೌಡ ಸ್ಪಷ್ಟನೆ

    ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊನ್ನಾದೇವಿಪುರ -ಗೂಳ್ಯ ರಸ್ತೆಯ ಡಾಂಬರೀಕರಣ ಕಳಪೆಯಿಂದ ಕೂಡಿದೆ‌ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.

    ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 1.5 ಕೋಟಿ ಅನುದಾನದಲ್ಲಿ ತಾಲೂಕಿನ ಹೊನ್ನಾದೇವಿಪುರ-ಗೂಳ್ಯ ರಸ್ತೆಗೆ 1.5 ಕಿ.ಮೀ ಡಾಂಬರ್ ಹಾಕಲಾಗಿದೆ. ಆದರೆ ಬಿಜೆಪಿ ಯ ಕೆಲ ಮುಖಂಡರು ಬೇಕೆಂತಲೇ ಹಾರೇಕೋಲಿನಿಂದ ರಸ್ತೆಯ ಡಾಂಬರ್ ಅಗೆದು ಕಾಮಗಾರಿ ಕಳಪೆ ಎಂದು ದೂರುತ್ತಿದ್ದಾರೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಿರುವ ರಸ್ತೆಯ ಮೇಲೆ ಇನ್ನೂ ಒಂದು ಪದರ ಡಾಂಬರು ಹಾಕಬೇಕಿದೆ. ಅಷ್ಟರಲ್ಲಿ ಬಿಜೆಪಿ ಮುಖಂಡರು ವೃಥಾ ಆರೋಪ ಮಾಡಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಚುಂಚೇಗೌಡ ಹೇಳಿದರು.

    ಗುರುವಾರ ಹೊನ್ನಾದೇವಿಪುರ-ಗೂಳ್ಯ ರಸ್ತೆ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 20 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ಇರಲಿಲ್ಲ. ರಾತ್ರಿ ಹೊತ್ತು ಓಡಾಡಲೂ ಗ್ರಾಮಸ್ಥರು ಪರದಾಡಬೇಕಾಗಿತ್ತು. ಕೊನೆಗೂ ಹೊನ್ನಾದೇವಿಪುರ ರಸ್ತೆಗೆ ಡಾಂಬರು ಭಾಗ್ಯ ಸಿಕ್ಕಿದೆ, ಇದರಲ್ಲಿ ರಾಜಕೀಯ ಮಾಡಬಾರದು, ಗ್ರಾಮದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

    ಡಾಂಬರೀಕರಣ ಕಾಮಗಾರಿ ಕಳಪೆಯೋ ಅಥವಾ ಗುಣಮಟ್ಟದಿಂದ ಕೂಡಿದೆಯೋ ಎಂಬುದು ಸಂಬಂಧಿಸಿದ ಇಲಾಖೆಯ ಎಂಜಿನಿಯರ್ ಗಳು ಕಾಮಗಾರಿ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ. ಆಗ ಈ ಕುರಿತು ಸತ್ಯ ತಿಳಿಯಲಿದೆ. ಆದರೆ, ಇದ್ಯಾವುದೂ ನಡೆದೇ ಇಲ್ಲ. ಕಾಮಗಾರಿ ಇರುವಾಗಲೇ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

    ವಿಧಾನಸಭೆ ಚುನಾವಣೆಗೆ ಮುನ್ನವೇ ತಾಲೂಕಿನಲ್ಲಿ 40 ಕೋಟಿ ಅನುದಾನದಲ್ಲಿ 40 ಕಿ.ಮೀ ಡಾಂಬರೀಕರಣ ಕಾಮಗಾರಿ ಆರಂಭವಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಪ್ರಾರಂಭ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಕೆಲವೊಂದು ಕಡೆ ಬಿಜೆಪಿ ಮುಖಂಡರು ಡಾಂಬರೀಕರಣ‌ ಕಾಮಗಾರಿ ಬಗ್ಗೆ‌ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವ ಪುಡಾರಿಗಳನ್ನು ಹಾಲಿ ಶಾಸಕರು ದೂರವಿಡಬೇಕು. ಇಲ್ಲದಿದ್ದರೆ ಶಾಸಕರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.

    ಈ ವೇಳೆ ಚಂದ್ರಶೇಖರ್, ಶಶಿಕುಮಾರ್, ಅಶ್ವತ್ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • 5ಜಿ ಟವರ್ ಬೇಡ : ನೆಮ್ಮದಿಯ ಜೀವನಕ್ಕೆ ಅವಕಾಶ ನೀಡಿ

    ದೊಡ್ಡಬಳ್ಳಾಪುರ: 5 ಜಿ ಟವರ್ ಪ್ರಾಬ್ಲಮ್ ಸ್ಥಳೀಯರ ಗೋಳು ಕೇಳದ ಜನಪ್ರತಿನಿಧಿಗಳು.. ತಾಲ್ಲೂಕಿನ ಚಂದ್ರಮೌಳೇಶ್ವರ ಬಡಾವಣೆಯ ಜನವಸತಿ ಜಾಗದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಯು 5ಜಿ ಟವರ್ ನಿರ್ಮಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಬಡಾವಣೆ‌ಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಬಡಾವಣೆಯ ನಿವಾಸಿಯಾದ ಗೋಪಾಲ್ ಎಂಬುವರ ಜಮೀನಿನಲ್ಲಿ 5ಜಿ ಟವರ್ ನಿರ್ಮಿಸುತ್ತಿದ್ದು, ಪ್ರಾಣಿ ಪಕ್ಷಿಗಳಿಗೆ ಟವರ್ ನಿಂದ ಉಂಟಾಗುವ ತರಂಗಾಂತರ ಮಾರಕವಾಗಿದೆ. ಬಡಾವಣೆಯಲ್ಲಿರುವ 30ಕ್ಕೂ ಹೆಚ್ಚು‌ ಮನೆಗಳು, ಪಕ್ಕದ ರಾಜೀವ್ ಗಾಂಧಿ ಬಡಾವಣೆಯ ಜನರಿಗೂ ಇದರಿಂದ ಸಮಸ್ಯೆಯಾಗಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಟವರ್ ಅನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಚಂದ್ರಮೌಳೇಶ್ವರ ಬಡಾವಣೆಯಲ್ಲಿ ಯಾವುದೇ ನೆಟ್ ವರ್ಕ್ ಸಮಸ್ಯೆ ಇಲ್ಲ. ಆದಾಗ್ಯೂ ಖಾಸಗಿ ಭೂಮಾಲೀಕರು ಹಣದಾಸೆಗೆ ಟವರ್ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಮೊಬೈಲ್ ಟವರ್ ನಿರ್ಮಾಣದಿಂದ ಈಗಾಗಲೇ ಪಕ್ಷಿ ಸಂಕುಲ ನಾಶವಾಗಿದೆ. ಈಗ 5ಜಿ ಟವರ್ ಅಳವಡಿಕೆಯಿಂದ‌ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರ ಜೀವಕ್ಕೆ ಮಾರಕವಾಗಲಿದೆ . ಟವರ್ ನಿರ್ಮಾಣ ಕುರಿತು ಯಾವುದೇ‌ ಮಾಹಿತಿ ನೀಡದೇ ರಾತ್ರೋರಾತ್ರಿ ನಿರ್ಮಾಣ ಆರಂಭಿಸಿದ್ದಾರೆ. ಭೂಮಾಲೀಕರನ್ನು ಕೇಳಿದರೆ ಸರ್ಕಾರದಿಂದ ಅನುಮತಿ ಪಡೆದಿದ್ದೇವೆ. ನಮ್ಮ ಜಮೀನು, ನಮ್ಮಿಷ್ಟ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು. ಟವರ್ ನಿರ್ಮಾಣ ವಿರೋಧಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

    ಗೋಪಾಲ್ ಅವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು, ಅದೇ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆಂಬುದು ಸ್ಥಳೀಯರ ಆರೋಪ.

    ಜನ ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣ ಕಾನೂನುಬಾಹಿರ. ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸ್ಥಳೀಯರ ಒಪ್ಪಿಗೆ ಇಲ್ಲದೆ ಟವರ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದಾರೆ. ಮಕ್ಕಳ ಮತ್ತು ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ತರಂಗಾಂತರಗಳು ನೇರ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಏಕಾಗ್ರತೆಯ ಮೇಲು ಪರಿಣಾಮ ಬೀರಲಿದೆ ಎಂದು ಸ್ಥಳೀಯ ನಿವಾಸಿಗಳಾದ ಸೌಮ್ಯ, ಗುರುರಾಜ್ ಆರೋಪಿಸಿದ್ದಾರೆ.

  • ದೊಡ್ಡಬಳ್ಳಾಪುರ ಎಡಿಎಲ್ ಆರ್ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸ್ ದಾಳಿ

    ದೊಡ್ಡಬಳ್ಳಾಪುರ : ಸಾರ್ವಜನಿಕರ ದೂರು ಆಧರಿಸಿ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ 11 ಕಡೆಗಳಲ್ಲಿ ಎಡಿಎಲ್ ಆರ್ ಹಾಗೂ ಡಿಡಿಎಲ್ ಆರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

    ಯಲಹಂಕ, ಕೆ.ಆರ್.ಪುರಂ, ದೊಡ್ಡಬಳ್ಳಾಪುರ ಸೇರಿ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

    ದೊಡ್ಡಬಳ್ಳಾಪುರ ಎಡಿಎಲ್ ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ‌ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು
    ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಮಂದಿ ದಾಳಿ ನಡೆಸಿದ್ದಾರೆ.

    ಲೋಕಾಯುಕ್ತ ದಾಳಿ ವೇಳೆ ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಡಿ ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ‌ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು.

  • *1333 ನೇ ದಿನದ ಅನ್ನದಾಸೋಹ ಕಾರ್ಯಕ್ರಮ : ವಿಶೇಷದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ – ಮಲ್ಲೇಶ್*

    *ದೊಡ್ಡಬಳ್ಳಾಪುರ* : ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಲ್ಲೇಶ್ ರವರ ನೇತೃತ್ವದಲ್ಲಿ ಸತತವಾಗಿ ದಾನಿಗಳ ನೆರವಿನಿಂದ ಅನ್ನದಾಸೋಹ ಕಾರ್ಯಕ್ರಮ ನೆಡೆಯುತ್ತಿದ್ದು

    1333ನೇ ಅನ್ನದಾಸೋಹ ದಾನಿಗಳಾಗಿ ರವಿ ಕುಮಾರ್, ಹಾಗೂ ನಗರಭಾಗದ ದರ್ಬಾರ್ ಹೋಟೆಲ್ ಮಾಲೀಕರಾದ ಅಭಿಲಾಷ್ ರವರು ಸಹಾಯ ಹಸ್ತ ನೀಡಿದ್ದು ಕುಮಾರಿ ಮೌಲ್ಯ ರವರ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಈ ಸಂದರ್ಭದಲ್ಲಿ ದರ್ಬಾರ್ ಬಿರಿಯಾನಿ ಹೋಟೆಲ್ ಮಾಲೀಕರಾದ ಅಭಿಲಾಷ್ ಮಾತನಾಡಿ ನಮ್ಮ ಪುಟಾಣಿ ಮೌಲ್ಯ ರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಲಾಗಿದೆ ಹಾಗೂ ಮಲ್ಲೇಶ್ ರವರ ಸಹಕಾರದೊಂದಿಗೆ ಅನ್ನದಾಸೋಹ ನೆಡೆಸಲಾಗಿದೆ. ಎಲ್ಲರೂ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ ಎಂದು ಮನವಿ ಮಾಡಿದರು

    ಸಮಾಜಸೇವಕರಾದ ಸೇಲ್ವಮ್ ಮಾತನಾಡಿ ಮಲ್ಲೇಶ್ ಮತ್ತು ತಂಡ ಸತತವಾಗಿ 1333 ದಿನಗಳ ಅನ್ನದಾಸೋಹ ಕಾರ್ಯ ನೆಡೆಸುತ್ತಾ ಬಂದಿದೆ ಇನ್ನು ಮುಂದೆಯೂ ಸಹ ಯಾವುದೇ ಅಡೆತಡೆಗಳಿಲ್ಲದೆ ಸಾಗಲಿ ಎಂದು ಹಾರೈಸಿದರು

    ಕಾರ್ಯಕ್ರಮದ ಆಯೋಜಕರಾದ ಮಲ್ಲೇಶ್ ಮಾತನಾಡಿ ಸತತವಾಗಿ ದಾನಿಗಳ ನೆರವಿನಿಂದ ಅನ್ನದಾಸಹ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು. ಕಾರ್ಯಕ್ರಮಕ್ಕೆ ದಾನಿಗಳ ಅವಶ್ಯಕತೆ ಇದೆ ಯಾವುದೇ ವಿಶೇಷ ದಿನಗಳನ್ನು ನಮ್ಮ ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ, ಬಡವರ ಹಸಿವು ನೀಗಿಸುವ ಕಾಯಕವನ್ನು ಮಾಡಬೇಕಾಗಿ ಮನವಿ ಮಾಡಿದರು ಹಾಗೂ ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ಕಿರಣ್, ಮಧುಸೂದನ್ ರವರಿಗೆ ಧನ್ಯವಾದಗಳನ್ನು ಅರ್ಪಿಸಿದರು

    ಈ ಸಂದರ್ಭದಲ್ಲಿ ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

  • ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲನೆ : ಸ್ಥಗಿತಗೊಂಡ ರಸ್ತೆ ಕಾಮಗಾರಿ

    ದೊಡ್ಡಬಳ್ಳಾಪುರ : ರಸ್ತೆ ಕಾಮಗಾರಿ ಪರಿಶೀಲನೆಗೆ ಮುಂದಾದ ಗ್ರಾಮಪಂಚಾಯಿತಿ ವಿರುದ್ಧ ಹೋರಾಟ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿದೆ.

     

    ಘಟನೆ ಸಂಬಂಧ ಕೊನೇನಹಳ್ಳಿ ಯಿಂದ ಜ್ಯೋತಿಪುರದ ವರೆಗೆ ಸಾಗುವ ರಸ್ತೆ ಕುರಿತಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗುಣಮಟ್ಟದ ಪರಿಶೀಲನೆ ಎಂದು ತೆರಳಿದ್ದು ರಸ್ತೆ ಕಾಮಗಾರಿ ಕೆಲಸ ಸ್ಥಗಿತಗೊಂಡಿರುವ ಕಾರಣ ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳೀಯ ಮಟ್ಟದ ಮುಖಂಡರಿಂದ ಗ್ರಾಮ ಪಂಚಾಯಿತಿ ಮುಂಭಾಗ ಧರಣಿ ಮಾಡಲಾಯಿತು

     

    *ರಸ್ತೆ ಕುರಿತು ಸ್ಥಳೀಯರ ಮಾತು*

     

    ಸಕ್ಕರೆಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಮ್ಮ ಕಂಗಳಾಪುರ ಹಾಗೂ ಜ್ಯೋತಿಪುರ ಗ್ರಾಮಗಳಿಗೆ ಸರಿಯಾದ ರಸ್ತೆ ಮಾರ್ಗ ಇಲ್ಲವಾಗಿದ್ದು ಕಳೆದ ಬಾರಿ ಶಾಸಕರಾಗಿದ್ದ ಟಿ.ವೆಂಕಟರಮಣಯ್ಯಾ (ಮಾಜಿ ಶಾಸಕರು )ರವರ ನೇತೃತ್ವದಲ್ಲಿ ನಮ್ಮ ಊರಿಗೆ ರಸ್ತೆ ಯ ಅನುದಾನ ನೀಡಲಾಗಿದೆ ಮುಕ್ತಯ ಹಂತ ತಲುಪಿರುವ ರಸ್ತೆಗೆ ಮತ್ತೆ ವಿಘ್ನ ಎದುರಾದಂತಿದೆ. ರಸ್ತೆ ವಿಚಾರದಲ್ಲಿ ರಾಜಕೀಯ ನೆಡೆಯುತ್ತಿದೆಯೇ ಎಂದು ಅನುಮಾನ ಶುರುವಾಗಿದೆ ಎನ್ನುತ್ತಾರೆ ಸ್ಥಳೀಯರು

     

     

    *ಆರೋಪ ಏನು?*

     

    ಸ್ಥಳೀಯ ಹಾಲಿ ಶಾಸಕರಾದ ಧೀರಜ್ ಮುನಿರಾಜು ರವರ ಗಮನಕ್ಕೆ ತರದೆ ಡಾಂಬರೀಕರಣ ಮಾಡಲಾಗಿದೆ ಎಂಬ ಒಂದೇ ಕಾರಣಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲ ಬಿಜೆಪಿ ಮುಖಂಡರು ಇನ್ನೇನು ಮುಕ್ತಾಯ ಹಂತದಲ್ಲಿರುವ ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಎಂಬುದು ಕಾಂಗ್ರೆಸ್ ಮುಖಂಡರ ಆರೋಪವಾಗಿದೆ

     

    *ಕಂಗಳಾಪುರ ಗ್ರಾಮದ ಮುಖಂಡರು ಹೇಳಿದ್ದಿಷ್ಟು*

     

    ಗ್ರಾಮದ ಕೊನೇನಹಳ್ಳಿ ಹಾಗೂ ಜ್ಯೋತಿಪುರ ಮಾರ್ಗದ 1.5 ಕಿಲೋಮೀಟರ್ ರಸ್ತೆಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಡಾಂಬರು ಹಾಕಲಾಗುತ್ತಿದೆ. ನವೆಂಬರ್ 17ರಂದು ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಮೂರು ಗ್ರಾಮದ ಜನರಿಗೆ ಅನಾನುಕೂಲವಾಗಿದೆ ಕೇವಲ 200 ಮೀಟರ್ ರಸ್ತೆ ಕಾಮಗಾರಿ ಬಾಕಿ ಇದ್ದು ರಸ್ತೆ ಡಾಂಬರಿಕಾರಣ ನಿಂತು ಹೋಗಿದೆ ಗ್ರಾಮ ಪಂಚಾಯಿತಿಯು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು

     

    *ಅಭಿವೃದ್ಧಿಯ ವಿರೋಧಿಗಳು ನಾವಲ್ಲ : ರಸ್ತೆ ಕಾಮಗಾರಿಗೆ ನಾವು ಅಡ್ಡಿ ಮಾಡಿಲ್ಲ*

     

    ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ (ಅಪ್ಪಿ )ಅವರು,ಡಾಂಬರೀಕರಣದ ಸ್ಥಳಕ್ಕೆ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಭೇಟಿ ನೀಡಿದ್ದು ಈ ವೇಳೆ ಕಾಮಗಾರಿಗೆ ಅಗತ್ಯ ವಸ್ತುಗಳು ಖಾಲಿಯಾಗಿದ್ದರಿಂದ ಕೆಲಸಗಾರರು ಹೊರಟು ಹೋಗಿದ್ದರು. ಕಾಮಗಾರಿಗೆ ನಾವು ಅಡ್ಡಿ ಪಡಿಸಿಲ್ಲ ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಂಶವಿಲ್ಲ. ನಮಗೂ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿಯಾಗಬೇಕು. ಗ್ರಾಮಗಳ ಅಭಿವೃದ್ಧಿಗೆ ನಮ್ಮ ಬೆಂಬಲ ಸಹಕಾರ ಇದ್ದೇ ಇರುತ್ತೆದೆ. ಕೊನೇನಹಳ್ಳಿ ಮಾರ್ಗವಾಗಿ ಜ್ಯೋತಿಪುರ ಸೇರುವ ರಸ್ತೆಯ ಡಾಂಬರೀಕರಣ ಗುಣಮಟ್ಟದ್ದಾಗಿರಲಿ ಎಂಬುದಷ್ಟೇ ನಮ್ಮ ಉದ್ದೇಶ. ಗ್ರಾಮಗಳ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಪಕ್ಷಬೇದ, ಅಥವಾ ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಾಧರ್ ಬಿಜೆಪಿ ಮುಖಂಡರಾದ ಸಂಕರಸನಹಳ್ಳಿ ಕೆಂಪರಾಜು, ಸಕ್ಕರೆಗೊಲ್ಲಹಳ್ಳಿ ಹನುಮಂತಯ್ಯ, ಸೋಮಶೇಖರ್, ಸಕ್ಕರೆಗೊಲ್ಲಹಳ್ಳಿ ನವೀನ್, ಸಕ್ಕರೆಗೂಲ್ಲಹಳ್ಳಿ ತಿಮ್ಮರಾಜು, ಸಕ್ಕರೆಗೊಲ್ಲಹಳ್ಳಿ ದರ್ಶನ್, ಸಕ್ಕರೆಗೂಲ್ಲಹಳ್ಳಿ ವಿನೋದ್, ಸಂಕರಸನಹಳ್ಳಿ ಗಂಗಮುತ್ತೇಗೌಡ, ಕೊನೇನಹಳ್ಳಿ ರವಿ, ಸಕ್ಕರೆಗೊಲ್ಲಹಳ್ಳಿ ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು

  • ಘಾಟಿ ಸುಬ್ರಮಣ್ಯ ದೇವಾಲಯದ ಹುಂಡಿ ಎಣಿಕೆ : 53 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, ರೂ.53,22,602 ಹಣ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದರೊಂದಿಗೆ ಹನ್ನೆರಡು ಸಾವಿರ ಮೌಲ್ಯದ ಚಿನ್ನ, 54,000 ರೂ ಮೌಲ್ಯದ 01 ಕೆಜಿ 500 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಹಾಕಲಾಗಿದೆ.

    ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
    ಹುಂಡಿ ಎಣಿಕೆಯ ವೇಳೆ ಮುಜರಾಯಿ ಇಲಾಖೆ ತಹಶೀಲ್ದಾರ್ ಜೆ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ಸಿಬ್ಬಂದಿ ನಂಜಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು

  • ತಾಲ್ಲೂಕಿನ ಎಲ್ಲಾ ವಕೀಲರು ತಪ್ಪದೇ ಮತದಾನ ಮಾಡಿ – ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರಕಾಶ್ ಸಿ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ 2023-24 ಮತ್ತು 2024-25 ರ ಅವಧಿಗೆ ವಕೀಲರ ಸಂಘದ ಆಡಳಿತ ಮಂಡಳಿಯ ಚುನಾವಣೆ ಇದೇ ನೆವೆಂಬರ್ 20 ರಂದು ಬೆಳ್ಳಿಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನೆಡೆಯಲಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘ ತಿಳಿಸಿದೆ

    ಈ ಕುರಿತಂತೆ ವಕೀಲರಾದ ಪ್ರಕಾಶ್ ಸಿ ಮತ್ತು ಸಹ ವಕೀಲರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ 299 ವಕೀಲ ಸದಸ್ಯರಿದ್ದು ನೆವೆಂಬರ್ 20 ರಂದು ನೆಡೆಯುವ ವಕೀಲರ ಸಂಘದ ಚುನಾವಣೆಯಲ್ಲಿ ಎಲ್ಲಾ ವಕೀಲರು ಪಾಲ್ಗೊಂಡು ಮತದಾನ ಮಾಡಬೇಕೆಂದು ಮನವಿ ಮಾಡಿದರು