Blog

  • ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ : ಮನೆ ಬಾಗಿಲಿಗೆ ಅರೋಗ್ಯ ಸಿಬ್ಬಂದಿ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವತಿಯಿಂದ ತಾಲ್ಲೂಕಿನಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ 2023 ರ ನೆವಂಬರ್ 15 ರಿಂದ ಡಿಸೆಂಬರ್ 2ರ ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕ್ಷಯರೋಗ ಮುಕ್ತ ಸಮಾಜಕ್ಕಾಗಿ ಅರೋಗ್ಯ ಸಿಬ್ಬಂದಿ ತಾಲ್ಲೂಕಿನ ಪ್ರತಿ ಮನೆ ಮನೆಗೂ ಭೇಟಿ ನೀಡಿ ಪರೀಕ್ಷೆ ನೆಡೆಸುತ್ತಿದ್ದಾರೆ ಈ ಅವಕಾಶವನ್ನು ತಾಲ್ಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ಷಯರೋಗ ಸಂದರ್ಶಕರಾದ ಯುವರಾಜ್ ಮನವಿ ಮಾಡಿದ್ದಾರೆ

    ಕ್ಷಯ ರೋಗದ ಪ್ರಮುಖ ಅಂಶಗಳು:
    •ನಿರಂತರ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದು. ಟಿಬಿ ಕಾಯಿಲೆಯು ಶ್ವಾಸಕೋಶಗಳಿಗಷ್ಟೇ ಅಲ್ಲದೆ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು
    •ರೋಗ ನಿರ್ಣಯಿಸಿದ ಎಲ್ಲಾ ಪ್ರಕರಣಗಳಿಗೆ ಉಚಿತ ಚಿಕಿತ್ಸೆ. ಕಫವನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ
    • ಅಪೂರ್ಣ ಚಿಕಿತ್ಸೆಯು ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು
    • ವಿಶೇಷವಾಗಿ ಕೊಳಚೆ ಪ್ರದೇಶದಲ್ಲಿ ವಾಸವಿರುವವರಿಗೆ,ಬಿಡಿ ಕಾರ್ಮಿಕರು, ನೇಕಾರ ಸಮುದಾಯ,ಹೆಚ್ಐವಿ ಸೊಂಕಿತರು,ಮಧುಮೇಹ , ತಂಬಾಕು ಸೇವನೆ, ಮಾಡುವವರಿಗೆ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ

    ಅರೋಗ್ಯ ಸಿಬ್ಬಂದಿ (ಆಶಾ ಕಾರ್ಯಕರ್ತೆಯರು )ನಿಮ್ಮ ಮನೆ ಬಳಿ ಬಂದಾಗ ಪರೀಕ್ಷೆಗೆ ಸಹಕರಿಸಿ ಕ್ಷಯರೋಗದ ಪತ್ತೆ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿನೀಡಿ…..
    ಕ್ಷಯಮುಕ್ತ ಸಮಾಜಕ್ಕೆ ಕೈ ಜೋಡಿಸಿ ಎಂದು ಅರೋಗ್ಯ ಇಲಾಖೆ ತಿಳಿಸಿದೆ

  • ಹಾಸನ : ಹಾಸನಾಂಬ ದರ್ಶನಕ್ಕೆ ತೆರೆ : ಬಾಗಿಲು ಮುಚ್ಚಿದ ದೇವಸ್ಥಾನ

    ಹಾಸನ : ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನಾಂಬ ದೇವಾಲಯ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕಲ್ಪಿಸುವ ಪ್ರತೀತಿ ಇದೆ ಅಂತೆಯೇ 2023 ರ ನವೆಂಬರ್ 2ರಂದು ಬಾಗಿಲು ತೆರೆದಿದ್ದು ಸತತವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿತ್ತು . ಇಂದು ದೇವಾಲಯದ ಬಾಗಿಲು ಮುಚ್ಚಲಾಗಿದೆ ಮತ್ತೆ ಮುಂದಿನ ವರ್ಷ ಅಕ್ಟೋಬರ್ ತಿಂಗಳಲ್ಲಿ ಮತ್ತೆ ತೆರೆಯುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ

    ಇಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ನಿರ್ಬಂಧಿಸಿದ್ದು ಇಂದು ಬೆಳಗಿನಿಂದಲೇ ದೇವಾಲಯದ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ದೇವಾಲಯದ ಸಿಬ್ಬಂದಿವರ್ಗ ದೀಪ ಹಚ್ಚಿ ನೈವೇದ್ಯ ಸಮರ್ಪಣೆಯ ಮೂಲಕ ದೇವಾಲಯದ ಬಾಗಿಲು ಮುಚ್ಚಲಾಗಿದೆ

    ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಭಕ್ತಾದಿಗಳು ತಾಯಿ ಹಾಸನಾಂಬೆ ದರ್ಶನ ಪಡೆದಿದ್ದು 6 ಕೋಟಿಗೂ ಅಧಿಕ ಕಾಣಿಕೆಯ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ

  • ಬಿ ಜೆ ಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಪದಗ್ರಹಣ

    ಬೆಂಗಳೂರು : ಇಂದು ಆಯೋಜಿಸಿದ್ದ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ರವರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಬಿ ವೈ ವಿಜಯೇಂದ್ರ ಸ್ವೀಕರಿಸಿದರು

    ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರಯಡಿಯೂರಪ್ಪ ವರಿಷ್ಠರ ನಿರೀಕ್ಷೆ, ಕಾರ್ಯಕರ್ತರ ಅಪೇಕ್ಷೆ ಗುರಿ ತಲುಪುವ ನಿಟ್ಟಿನಲ್ಲಿವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ, ಪಕ್ಷ ಸದೃಢಗೊಳಿಸಲು ಪಕ್ಷದ ಪ್ರತಿಯೊಬ್ಬ ಪ್ರಮುಖರೂ ನನ್ನೊಂದಿಗೆ ಹೆಗಲು ಕೊಡಲು ಮುಂದಾಗಿರುವುದು ನನ್ನಲ್ಲಿ ಅಮಿತೋತ್ಸಾಹ ತುಂಬಿದೆ.

    ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ದಾ ಗೃಹಸಚಿವರಾದ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎಲ್ಲಾ ಹಿರಿಯರೆಲ್ಲರ ಆಶೀರ್ವಾದ, ಮಾರ್ಗದರ್ಶನ,ಸಹಕಾರದೊಂದಿಗೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ನವ ಚೈತನ್ಯ ತುಂಬಿ 2024ರ ಲೋಕಸಭಾ ಚುನಾವಣೆಯಲ್ಲಿ 2019 ರ ಚುನಾವಣೆಯ ಫಲಿತಾಂಶ ಮತ್ತೆ ಮರುಕಳಿಸಿ ಮಗದೊಮ್ಮೆ ಮೋದಿಜೀ ಪ್ರಧಾನಿಯಾಗಿ ಭಾರತ ಪ್ರಜ್ವಲಿಸಲು ‘ಕರುನಾಡ ಜಯದ ಕಿರೀಟ’ ಸಮರ್ಪಿಸಬೇಕೆಂದು ಛಲ ಹೊತ್ತ ಕಾರ್ಯಕರ್ತರ ಪಡೆಯೊಂದಿಗೆ ಸಂಕಲ್ಪ ತೊಟ್ಟಿದ್ದೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  • ಜೆಡಿಎಸ್ ಪಕ್ಷದ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ

    ಬೆಂಗಳೂರು : KPCC ಕಚೇರಿಯಲ್ಲಿ ನಡೆದ ವಿವಿಧ ಪಕ್ಷದ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು

     

    ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ

    ನಾವಿದ್ದಾಗ ಜನತಾದಳ ಸೆಕ್ಯುಲರ್ ಆಗಿತ್ತು. ಈಗ “ಎಸ್” ಕಿತ್ತೋಗಿ ಕೇವಲ ಜನತಾದಳ ಆಗಿ ಉಳಿದಿದೆ. ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ದಾಂತದವರೆಲ್ಲಾ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜೊತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ “ಬಿ” ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ.

    ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷ ಆಗಿಯಷ್ಟೆ ಸೀಮಿತವಾಗಿದೆ. ಜೆಡಿಎಸ್ ನ ಡಬ್ಬಲ್ ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಜೊತೆಗೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ.

    ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಾಗ ಅದನ್ನು ಟೀಕಿಸಿದ್ದ ಪ್ರಧಾನಿಗಳು ಈಗ “ಮೋದಿ ಗ್ಯಾರಂಟಿ” ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು

  • “ಮೊಹಬ್ಬತ್ ಕಿ ದುಕಾನ್” ಉದ್ಘಾಟಿಸಿ ಬಜ್ಜಿ ಸವಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

    ಬೆಂಗಳೂರು : ಬೆಂಗಳೂರಿನ ಗಾಂಧಿ ಭವನದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿರುವ “ಮೊಹಬ್ಬತ್ ಕಿ ದುಕಾನ್” (ಪ್ರೀತಿಯ ಅಂಗಡಿ) ಯನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉದ್ಘಾಟಿಸಿದರು

     

    ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿರವರು ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಘೋಷಿಸಿದಂತೆ ಪ್ರಾಯೋಗಿಕವಾಗಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಜವಾಹರ್ ಬಾಲ್ ಮಂಚ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ “ಮೊಹಬ್ಬತ್ ಕಿ ದುಕಾನ್” ಆರಂಭಿಸಲಾಗಿದೆ

     

    ಪ್ರಾಯೋಗಿಕ ಮಳಿಗೆಯನ್ನು ಉದ್ಘಾಟಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೊಹಬ್ಬತ್ ಕಿ ದುಕಾನ್ ಮಳಿಗೆಯಲ್ಲಿ ಬಜ್ಜಿ ಸವಿಯುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುತಂದರು

  • ನಿಧನ ವಾರ್ತೆ : ಜಾನಪದ ಕಲಾವಿದೆ ಅಕ್ಕಯ್ಯಮ್ಮ ನಿಧನ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಕೋಳೂರು ಗ್ರಾಮದ ಜಾನಪದ ಕಲಾವಿದೆ ಅಕ್ಕಯ್ಯಮ್ಮ ನಿಧನರಾಗಿದ್ದಾರೆ.

    ಕಳೆದ ಐವತ್ತು ವರ್ಷಗಳಿಂದ ಜಾನಪದ ಕಲಾವಿದೆಯಾಗಿ ಸೇವೆ ಸಲ್ಲಿಸಿ ತಮ್ಮ ಹಾಡುಗಳ ಮೂಲಕ ಜನ ಮೆಚ್ಚುಗೆ ಪಡೆದಿದ್ದ ಅಕ್ಕಯ್ಯಮ್ಮನವರು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.. ತಮ್ಮ ವಯೋ ಸಹಜ ಕಾರಣದಿಂದಗಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ

    ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಕೋಳೂರು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

  • ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ನೂತನ ಶಾಖೆ ಉದ್ಘಾಟನೆ : ಬಾಶೆಟ್ಟಿಹಳ್ಳಿ ಶಾಖೆಯ ನೂತನ ಅಧ್ಯಕ್ಷರಾಗಿ ಗೋಪಿ ಆಯ್ಕೆ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ವ್ಯಾಪ್ತಿಯ ಬ್ಯಾಂಕ್ ಸರ್ಕಲ್ ನಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ನೂತನ ಶಾಖಾ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

    ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಡಿ ಜಿ ಬಾಬು ರವರ ಮಾರ್ಗದರ್ಶನದಲ್ಲಿ ತಾಲ್ಲೂಕು ಅಧ್ಯಕ್ಷರಾದ ಚಂದ್ರು ಶೆಟ್ಟಿ ಅವರ ನೇತೃತ್ವದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ರವರ ಅಧ್ಯಕ್ಷತೆಯಲ್ಲಿ ಬಾಶೆಟ್ಟಿಹಳ್ಳಿ ವ್ಯಾಪ್ತಿಯ ನೂತನ ಶಾಖೆಯ ನಾಮಫಲಕ ಅನಾವರಣ ಮಾಡಲಾಯಿತು

    ಈ ಸಂದರ್ಭದಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ಮಾತನಾಡಿ ಕನ್ನಡ ಭಾಷೆ ನಮ್ಮ ಹೆಮ್ಮೆ ಭಾಷೆಯ ಉಳಿವಿಗಾಗಿ ಶ್ರಮಿಸುವ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಗೆ ಮತ್ತೊಂದು ಶಾಖೆ ಸೇರ್ಪಡೆಗೊಂಡಿರುವುದು ಸಂತಸದ ವಿಷಯವಾಗಿದೆ . ವಿಶೇಷವಾಗಿ ಹೆಚ್ಚಿನ ಕಾರ್ಖಾನೆಗಳನ್ನು ಹೊಂದಿರುವ ಬಾಶೆಟ್ಟಿ ಹಳ್ಳಿ ವ್ಯಾಪ್ತಿಯಲ್ಲಿ ಕನ್ನಡಿಗರಿಗೆ ಮೊದಲ ಪ್ರಾಮುಖ್ಯತೆ ನೀಡಬೇಕು ಹಾಗೂ ಹೊರ ರಾಜ್ಯಗಳಿಂದ ವಲಸೆ ಬಂದು ಜೀವನ ಸಾಗಿಸುತ್ತಿರುವ ಅನ್ಯ ಭಾಷೆ ಮಾತನಾಡುವ ಜನರಿಗೆ ಕನ್ನಡವನ್ನು ಕಲಿಸುವ ಕೆಲಸ ನಮ್ಮಿಂದಾಗಬೇಕು ಎಂಬುದು ಈ ಶಾಖೆಯ ಮುಖ್ಯ ಉದ್ದೇಶವಾಗಿದೆ ನೂತನ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಪಿರವರಿಗೆ ಶುಭವಾಗಲಿ ಎಂದು ಹಾರೈಸಿದರು

    ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಬಿ ಆರ್ ಚಂದ್ರು ಶೆಟ್ಟಿ ರವರು ಮಾತನಾಡಿ ರಾಜ್ಯದಲ್ಲಿ ಕನ್ನಡ ಪರವಾಗಿ ಶ್ರಮಿಸುವ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಗೆ ಯುವಕರ ಬೆಂಬಲ ಮತ್ತಷ್ಟು ಶಕ್ತಿ ನೀಡಿದೆ ನಮ್ಮ ದ್ವನಿ ಎಂದಿಗೂ ಕನ್ನಡಪರ ಕನ್ನಡಿಗರ ಪರ ಕನ್ನಡದ ವಿಚಾರವಾಗಿ ಎಂದೆಂದಿಗೂ ನಮ್ಮ ಸಂಘಟನೆ ಹೋರಾಟಕ್ಕೆ ಸಿದ್ಧವಿರುತ್ತದೆ ನಮ್ಮ ಸಂಘದ ಮುಖ್ಯ ಉದ್ದೇಶ ಕನ್ನಡ ನಾಡಿನಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಅಭಿಮಾನ ಹುಟ್ಟಬೇಕು ಹಾಗೂ ಕನ್ನಡದ ಬಳಕೆ ಹೆಚ್ಚಾಗಬೇಕು ಎಂಬುದು ಕನ್ನಡಿಗರ ಶಕ್ತಿಯ ಪ್ರತಿರೂಪ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯಾಗಿದೆ . ನೂತನ ಅಧ್ಯಕ್ಷರಿಗೆ ಹಾಗೂ ಶಾಖೆಗೆ ಶುಭವಾಗಲಿ ತಮ್ಮಿಂದ ಮತ್ತಷ್ಟು ಕನ್ನಡ ಬೆಳೆಯಲಿ ಎಂದು ಹಾರೈಸಿದರು

    ಬಾಶೆಟ್ಟಿ ಹಳ್ಳಿ ಶಾಖೆಯ ನೂತನ ಅಧ್ಯಕ್ಷರಾದ ಗೋಪಿ ಮಾತನಾಡಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯೊಂದಿಗೆ ನಾವು ಸದಾ ಇರುತ್ತೇವೆ ಕನ್ನಡದ ಉಳಿವಿಗಾಗಿ ಶ್ರಮಿಸುವ ಎಲ್ಲಾ ಪದಾಧಿಕಾರಿಗಳ ಶಕ್ತಿಯಾಗಿ ನಮ್ಮ ಶಾಖೆ ಇರುತ್ತದೆ ನಮ್ಮಿಂದ ಖಂಡಿತವಾಗಿಯೂ ಕನ್ನಡವನ್ನು ಬೆಳೆಸುವ ಕಾರ್ಯ ಸದಾ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು

    ರಾಜ್ಯ ಅಧ್ಯಕ್ಷರು ಡಿ ಜಿ ಬಾಬು, ರಾಜ್ಯ ಉಪಾಧ್ಯಕ್ಷರು ಸಿ ಜಿ ಮಂಜುನಾಥ್ ,ರವರು ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷರು ಪದ್ಮಾವತಿ ,ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ,ರಾಜ್ಯ ಖಜಾಂಜಿ ಮಂಜುನಾಥ್,ರಾಜ್ಯ ಸಂಚಾಲಕರು ಭಾನುಪ್ರಕಾಶ್ ,ತಾಲ್ಲೂಕು ಗೌರವಾಧ್ಯಕ್ಷ ಗಂಗಾಧರ್,ತಾಲ್ಲೂಕು ಉಪಾಧ್ಯಕ್ಷ ಬೈರೇಗೌಡ, ನೂತನ ಶಾಖೆಯ ಉಪಾಧ್ಯಕ್ಷ ವಿಶ್ವಾಸ್ ಶೆಟ್ಟಿ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೌರಮ್ಮ ಆಯ್ಕೆ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೌರಮ್ಮ ರವರು ಆರ್ ಸಿ ಮಂಜುನಾಥ್ ವಿರುದ್ಧ ಏಳು ಮತಗಳನ್ನು ಪಡೆದು ಜಯಗಳಿಸಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

    ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌರಮ್ಮ ರವರನ್ನು ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ ಸನ್ಮಾನಿಸಿ ಶುಭಕೋರಿದರು .

    ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ ಮಾತನಾಡಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಮಹಿಳಾ ಅಭ್ಯರ್ಥಿ ಗೌರಮ್ಮ ರವರು ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ನೂತನ ಅಧ್ಯಕ್ಷರಾದ ಗೌರಮ್ಮ ರವರಿಗೆ ಶುಭಾಶಯಗಳನ್ನು ಕೋರುತ್ತೇನೆ ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘ ಮುಂದೆ ಮತ್ತಷ್ಟು ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು

    ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ನಾರಾಯಣಸ್ವಾಮಿ ಮಾತನಾಡಿ ಕಳೆದ 56 ವರ್ಷಗಳಿಂದ ಮಹಿಳೆಯರು ಅವಕಾಶದಿಂದ ವಂಚಿತರಾಗಿದ್ದು ಈ ಬಾರಿ ರಾಜಘಟ್ಟ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಮಹಿಳೆಗೆ ಒಂದು ಅವಕಾಶ ಸಿಕ್ಕಿದೆ ನೂತನ ಅಧ್ಯಕ್ಷರೊಂದಿಗೆ ನಮ್ಮ ಸಲಹೆ ಸಹಕಾರ ಸದಾ ಇರುತ್ತದೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌರಮ್ಮ ರವರಿಗೆ ಶುಭವಾಗಲಿ ಎಂದು ಹಾರೈಸಿದರು

    ಈ ಸಂದರ್ಭದಲ್ಲಿ ಜಗನ್ನಾಥ್, ಶೋಭಮ್ಮ, ಸುನಂದಮ್ಮ, ಶಾಂತಮ್ಮ ನಾರಾಯಣಮ್ಮ ನಾಮಿನಿ ನಿರ್ದೇಶಕರಾದ ನಾರಾಯಣ ಸ್ವಾಮಿ ಎಂ, ಸ್ಥಳೀಯ ಮುಖಂಡರಾದ ಚೆನ್ನಪ್ಪ, ಅಶ್ವತ್ಥಪ್ಪ, ಗೋವಿಂದಪ್ಪ,ರವಿ, ಮುಂತಾದವರು ಉಪಸ್ಥಿತರಿದ್ದರು

  • ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

    ದೊಡ್ಡಬಳ್ಳಾಪುರ :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಇಸ್ಲಾಂಪುರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಹಾಗು ಮುಸ್ಲಿಂ ಮುಖಂಡರಾದ ಡಿ ಕೆ ಬಾಬು ರವರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು

     

     

    ಹಿರಿಯ ಕನ್ನಡ ಪರ ಹೋರಾಟಗಾರರಾದ ಸಂಜೀವ್ ನಾಯಕ್ ಮಾತನಾಡಿ ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಕನ್ನಡ ನಾಡಿನ ಜೀವನಾಡಿ… ಜಾತಿ ಧರ್ಮಗಳ ಬೇಧಭಾವ ಇಲ್ಲದೆ ಭಾಷೆಯ ಕಲಿಕೆ ಜೊತೆಗೆ ಬಳಸುವಿಕೆಯಾಗಬೇಕು ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು

     

    ಕನ್ನಡ ಹೋರಾಟಗಾರರಾದ ಮುನಿಪಾಪಯ್ಯ ಮಾತನಾಡಿ ಕನ್ನಡಿಗರ ಹೋರಾಟವೇ ನಮ್ಮ ಕನ್ನಡ ಭಾಷೆಯ ಉಳಿವಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು ..ಭಾಷೆಯ ಶಕ್ತಿ ಸಾಮರ್ಥ್ಯ ಅರಿತರೆ ಭಾಷೆಯ ಬಗ್ಗೆ ಅಭಿಮಾನ ಹೆಚ್ಚುತ್ತದೆ ಮನೆಯಲ್ಲಿ ಸಾವಿರ ಭಾಷೆ ಮಾತನಾಡಿ ಆದರೆ ಸಮಾಜದಲ್ಲಿ ಕನ್ನಡ ಮಾತನಾಡಿ ..ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತೋಷ ವಿಷಯ ನಮ್ಮ ಕನ್ನಡ ಬೆಳೆಯಲಿ ಉಳಿಯಲಿ ಎಂದು ಆಶಿಸಿದರು

     

     

    ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ ಕನ್ನಡ ಭಾಷೆಯನ್ನು ಕಲಿಯುವುದು ಎಷ್ಟು ಮುಖ್ಯವೋ ಬಳಸುವುದು ಅಷ್ಟೇ ಮುಖ್ಯ.. ಕನ್ನಡ ರಾಜ್ಯೋತ್ಸವ ಪ್ರತಿ ಮನೆ ಮನಗಳಲ್ಲಿ ಪ್ರತಿನಿತ್ಯ ಆಚರಿಸುವ ಹಬ್ಬವಾಗಬೇಕಿದೆ ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ಕನ್ನಡ ಭಾಷೆಯ ಕುರಿತು ಒಳ್ಳೆಯ ವಿಚಾರಧಾರೆಗಳನ್ನು ನೀಡಬೇಕಿದೆ ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಉಳಿವು ಎಂದು ತಿಳಿಸಿದರು

     

    ಕಾರ್ಯಕ್ರಮದ ಆಯೋಜಕರಾದ ಡಿ ಕೆ ಬಾಬು ಮಾತನಾಡಿ ಸ್ನೇಹಿತರ ನೆರವಿನಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ ಕನ್ನಡ ಭಾಷೆ ಕುರಿತು ಅರಿವು ಮೂಡಿಸುವುದು ನಮ್ಮ ಕರ್ತವ್ಯ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬಂದರೆ ಸಾಕು ಭಾಷೆಯು ತಾನಾಗಿಯೇ ಅಭಿವೃದ್ದಿ ಹೊಂದುತ್ತದೆ ಕನ್ನಡ ಭಾಷೆಗೆ 2000ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ ನಮ್ಮ ಭಾಷೆ ನಮ್ಮ ಹೆಮ್ಮೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು

     

    ಕಾರ್ಯಕ್ರಮದಲ್ಲಿ ಪುಟ್ಟನಂಜಪ್ಪ, ಸಿ ಹೆಚ್ ರಾಮಚಂದ್ರಪ್ಪ, ದರ್ಗಾ ಮಸೀದಿ ಹಿಮಾಮ್ ಸಾಬ್, ಚಂದ್ ಸಾಬ್, ಜಬಿ, ಚಂದ್ ಶಾಫಿ, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು

  • ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ ವೈ ವಿಜಯೇಂದ್ರ ಆಯ್ಕೆ

    ನವದೆಹಲಿ : ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿದ್ದು ಬಿ ಜೆ ಪಿ ರಾಜ್ಯಾಧ್ಯಕ್ಷರ ಪಟ್ಟ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರ ಪುತ್ರ ಶಾಸಕ ಬಿ ವೈ ವಿಜಯೇಂದ್ರ ಯಡಿಯೂರಪ್ಪ ರವರಿಗೆ ನೀಡಲಾಗಿದೆ

     

    ಈ ಕುರಿತಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ದಾ ( ಜೆ ಪಿ ನಡ್ದಾ )ರವರು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಯಡಿಯೂರಪ್ಪ ರವರ ಹೆಸರನ್ನು ಘೋಷಿಸಿದ್ದಾರೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್  ಸಿಂಗ್   ಪತ್ರ  ರವಾನೆ ಮಾಡಿದ್ದಾರೆ.

     

    ಮುಂದಿನ ಲೋಕಸಭೆ ಚುನಾವಣೆಯನ್ನು ವಿಜಯೇಂದ್ರ ಯಡಿಯೂರಪ್ಪ ರವರ ನೇತೃತ್ವದಲ್ಲಿ ಬಿ ಜೆ ಪಿ ಎದುರಿಸಲು ಸಿದ್ದವಾಗಿದೆ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಯಡಿಯೂರಪ್ಪ ರವರ ನೇತೃತ್ವ ಲೋಕಸಭೆಯ ಚುನಾವಣೆಯಲ್ಲಿ ಮತ್ತೆ ಬಿ ಜೆ ಪಿ ಕಾಮಲ್ ಮಾಡುತ್ತಾ ಕಾದು ನೋಡಬೇಕಿದೆ