Blog

  • ಬಾಬು ಜಗಜೀವನ ರಾಮ್ ಜಯಂತಿ ಪ್ರಯುಕ್ತ ತೂಬಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ದೊಡ್ಡಬಳ್ಳಾಪುರ : ಬಾಬು ಜಗಜೀವನ ರಾಮ್ ಜಯಂತಿ ಪ್ರಯುಕ್ತ ಏಪ್ರಿಲ್ 5 ರ ಭಾನುವಾರದಂದು ತೂಬಗೆರೆ ಸರ್ಕಾರಿ ಮಾಧ್ಯಮಿಕ ಪಾಠಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಮತ್ತು ಸಾಯಿ ಮಿಲನ ಮೆಡಿಕಲ್ ಸೆಂಟರ್ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ತಿಳಿಸಿದರು.

     

    ಕಾರ್ಯಕ್ರಮ ಕುರಿತು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಡಾ.ಕೆ ಎಚ್ ಮುನಿಯಪ್ಪ ನೆರವೇರಿಸಲಿದ್ದು. ಕಾರ್ಯಕ್ರಮದಲ್ಲಿ ಸಚಿವರ ಪುತ್ರಿ ಡಾ. ಜ್ಞಾನೇಶ್ವರಿ ಮತ್ತು ಡಾ. ಜಯಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಈ ವೇಳೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್ ವಿ ಮಹೇಶ್, ಮುಖಂಡರಾದ ನಾಗೇನಹಳ್ಳಿ ಎಂ ಮಂಜುನಾಥ್ , ಎಸ್ ಮಂಜುನಾಥ್ (ಮೇಲೆಕೋಟೆ ಕ್ರಾಸ್), ಗೊಲ್ಲಹಳ್ಳಿ ಶ್ರೀನಿವಾಸ್, ಹಾಡೋನಹಳ್ಳಿ ಸವಿತಾ, ತೂಬಗೆರೆ ಯೂಥ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹ ಮೂರ್ತಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ಟೋಲ್ ರಸ್ತೆಯಲ್ಲಿ ನಿತ್ಯ ಅಪಘಾತ.. ಸವಾರರ ಜೀವಕ್ಕಿಲ್ಲ ಬೆಲೆ..ಟೋಲ್ ವಿರುದ್ಧ ಸ್ಥಳೀಯರ ಅಕ್ರೋಶ

    ದೊಡ್ಡಬಳ್ಳಾಪುರ : ತಾಲ್ಲೂಕಿನಲ್ಲಿ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಗೌರಿಬಿದನೂರು ಮಾರ್ಗದಲ್ಲಿರುವ ಎ ಪಿ ಎಂ ಸಿ ಮಾರುಕಟ್ಟೆ ಮುಂಭಾಗದ ರಸ್ತೆಯನ್ನು ದಿನಕ್ಕೊಂದು ಅವಘಡ ಸಂಭವಿಸುತ್ತಿದ್ದು. ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ಸ್ ಗಳನ್ನು ಹಾಕಬೇಕು ಇಲ್ಲವೇ ಸ್ಥಳೀಯ ಸಾರ್ವಜನಿಕರಿಂದ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ಮುಖಂಡ ಅಧಿಲ್ ಪಾಷಾ ತಿಳಿಸಿದರು.

     

    ಇಂದು ಬೆಳ್ಳಿಗೆ ಕೆಎಸ್ ಆರ್ ಟಿಸಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಪಾಲನಜೋಗಿಹಳ್ಳಿ ನಿವಾಸಿ ಪುರುಷೋತ್ತಮ (30)ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಈ ಕುರಿತು ರಸ್ತೆಯಲ್ಲಿ ವಾಹನಗಳ ಮಿತಿ ನಿಯಂತ್ರಿಸುವ ಸ್ಪೀಡ್ ಬ್ರೇಕರ್ಸ್ ಗಳನ್ನು ಅಳವಡಿಸುವಂತೆ ಕೋರಿ ಸ್ಥಳೀಯ ಮುಖಂಡರಾದ ಅಧಿಲ್ ಪಾಷಾ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು

    ಈ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಲನಜೋಗಿನಹಳ್ಳಿ ಮುಖ್ಯ ರಸ್ತೆಯಲ್ಲಿ ಎರಡು ಮುಖ್ಯ ಯು ಟರ್ನ್ ಗಳಿದ್ದು, ಈ ಯು ಟರ್ನ್ ಗಳ ಬಳಿ ಯಾವುದೇ ಸ್ಪೀಡ್ ಬ್ರೇಕರ್ಸ್, ಜೀಬ್ರಾ ಕ್ರಾಸಿಂಗ್ ಗಳಿಲ್ಲ ಈ ಕಾರಣಕ್ಕೆ ಬರುವ ವಾಹನಗಳು ಅತಿ ವೇಗವಾಗಿ ಬರುತ್ತಿದ್ದು ಸಾರ್ವಜನಿಕರು ವೃದ್ಧರು ಕೃಷಿಕರು ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ಅಲ್ಲದೆ ಇದೇ ಮಾರ್ಗವಾಗಿ ಎಪಿಎಂಸಿ ಮಾರುಕಟ್ಟೆ ಇರುವ ಕಾರಣ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವುದು ಸರ್ವೇ ಸಾಮಾನ್ಯ ಅತಿಯಾದ ವೇಗದಲ್ಲಿ ಬರುವ ವಾಹನಗಳಿಂದ ಪ್ರತಿನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಬೆಳಿಗ್ಗೆ ಮತ್ತು ಸಂಜೆ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.

     

    ರಸ್ತೆಯಲ್ಲಿ ಕೂಡಲೇ ವೇಗ ನಿಯಂತ್ರಣಕ್ಕೆ ಹುಬ್ಬುಗಳು,ಹಾಗೂ ಜೀಬ್ರಾ ಕ್ರಾಸಿಂಗ್ , ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು ಇಲ್ಲವಾದಲ್ಲಿ ಸ್ಥಳೀಯ ಸಾರ್ವಜನಿಕರು ರಸ್ತೆ ತಡೆ ಮಾಡುವ ಮೂಲಕ ಟೋಲ್ ವ್ಯವಸ್ಥಾಪಕರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

     

  • ದೊಡ್ಡಬಳ್ಳಾಪುರ ತಾಲ್ಲೂಕು ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷರಾಗಿ ನರಸಿಂಹಮೂರ್ತಿ ನೇಮಕ

    ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ಯವರನ್ನು ನೇಮಕ ಮಾಡಲಾಗಿದೆ 

    ನಗರದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಚಂದ್ರೇ ಗೌಡ ಅವರ ನೇತೃತ್ವದಲ್ಲಿ ನಡೆದ ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರ ನೇಮಕ ಸಭೆಯಲ್ಲಿ ನರಸಿಂಹ ಮೂರ್ತಿ ಅವರಿಗೆ ನೇಮಕ ಪತ್ರ ನೀಡಿಲಾಯಿತು ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಬಲಪಡಿಸಬೇಕು. ಅದಕ್ಕೆ ನಮ್ಮ ಸಹಕಾರವಿರುತ್ತದೆ ಎಂದು ತಿಳಿಸಿದರು.

    ನಂತರ ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್ ಮಾತನಾಡಿ, ನರಸಿಂಹ ಮೂರ್ತಿ ಅವರನ್ನು ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿತ್ತು, ಅದರಂತೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಚಂದ್ರೇ ಗೌಡ ಅವರು ನರಸಿಂಹ ಮೂರ್ತಿ ಅವರಿಗೆ ಆದೇಶ ಪತ್ರ ನೀಡಿ ಅಭಿನಂದಿಸಿದ್ದಾರೆ.‌ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದರು.

     

    ಈ ವೇಳೆ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹರಿಶ್ ಚಕ್ರವರ್ತಿ, ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾ ಮೂರ್ತಿ, ರಂಗಸ್ವಾಮಿ, ಕರಾಟೆ ಶ್ರೀನಿವಾಸ್,‌ ಮಂಜುನಾಥ್,‌‌ ಕೆಎಸ್ ನರಸಿಂಹಮೂರ್ತಿ, ವೀರೇಶ್, ರಮೇಶ್ ಸೇರಿದಂತೆ ಇತರರು ಇದ್ದರು..

  • ಅಗ್ನಿ ಬನ್ನಿರಾಯ ಸ್ವಾಮಿ ಸಮುದಾಯದ ಏಕತೆ ಮತ್ತು ವೀರ ಪರಂಪರೆಯ ಸಂಕೇತ – ಯುವ ಮುಖಂಡ ಸುಬ್ರಮಣಿ

    ದೇವನಹಳ್ಳಿ:ಅಗ್ನಿ ಬನ್ನಿರಾಯಸ್ವಾಮಿ ನಮ್ಮ ಕುಲದ ಮೂಲಪುರುಷ, ಕೃಷಿ, ತೋಟಗಾರಿಕೆ ನಮ್ಮ ಮೂಲಕಸುಬು. ನಮ್ಮ ಈ ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಅದ್ದೂರಿಯಾಗಿ ಆಚರಸಬೇಕೆಂಬುದು ನಮ್ಮೆಲ್ಲರ ಆಶಯ ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಚರಣೆ ಮಾಡುವ ಮೂಲಕ ತಾಲೂಕು ಆಡಳಿತದ ಸಹಕಾರದೊಂದಿಗೆ ಉನ್ನತ ಮಟ್ಟದಲ್ಲಿ ಆಚರಿಸಲಾಗುವುದು ಎಂದು ಯುವ ಮುಖಂಡ ಸುಬ್ರಮಣಿ ತಿಳಿಸಿದರು.

     

    ತಾಲ್ಲೂಕಿನ ಅರದೇಶನಹಳ್ಳಿಯಲ್ಲಿ ತಿಗಳ ಸಮುದಾಯದ (ಅಗ್ನಿವಂಶ ಕ್ಷತ್ರಿಯರು) ವತಿಯಿಂದ ಆಯೋಜನೆ ಮಾಡಲಾಗಿದ್ದ ವೀರಪುರುಷ ಅಗ್ನಿ ಬನ್ನಿರಾಯ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಗ್ನಿಯನ್ನೇ ಮೂಲವಾಗಿ ನಂಬಿ, 14 ಪಂಗಡಗಳನ್ನು ಒಗ್ಗೂಡಿಸಿ ಆರಾಧಿಸುವ ಈ ಸಮಾಜವು ಬನ್ನಿರಾಯನನ್ನು ವೀರ ಪುರುಷನನ್ನಾಗಿ ಪೂಜಿಸುತ್ತದೆ. ತಿಗಳ ಕ್ಷತ್ರಿಯ ಸಮಾಜದವರು ಪ್ರಮುಖವಾಗಿ ಹೂವು ಮತ್ತು ತರಕಾರಿ ಕೃಷಿಯಲ್ಲಿ ನಿರತರಾದವರು. ಅಗ್ನಿ ಬನ್ನಿರಾಯ ಸ್ವಾಮಿ ಸಮುದಾಯದ ಏಕತೆ ಮತ್ತು ವೀರ ಪರಂಪರೆಯ ಸಂಕೇತವಾಗಿದ್ದಾರೆ’ಎಂದರು.

     

    ವೀರಪುರುಷ ಅಗ್ನಿ ಬನ್ನಿರಾಯ ಜಯಂತಿ ಅಂಗವಾಗಿ ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ ಬೆಳ್ಳಿ ರಥದಲ್ಲಿ ಅಗ್ನಿ ಬನ್ನಿರಾಯ ಸ್ವಾಮಿ ಮೆರವಣಿಗೆ ಮಾಡಲಾಯಿತು.

     

    ಈ ವೇಳೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸಿ ಮಂಜುನಾಥ್ ಮಾತನಾಡಿ ಮಹಾನ್​ ದಾರ್ಶನಿಕರಾಗಿದ್ದ ಅಗ್ನಿ ಬನ್ನಿರಾಯ ಅವರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದೆ. ಶ್ರಮ ಜೀವನಕ್ಕೆ ಹೆಸರಾದ ತಿಗಳ ಕ್ಷತ್ರಿಯ ಸಮುದಾಯದವರು ಅಗ್ನಿ ಬನ್ನಿರಾಯ ಅವರನ್ನು ಆರಾಧ್ಯ ದೇವರಾಗಿ ಪೂಜಿಸುತ್ತಾರೆ. ಶೋಷಣೆಮುಕ್ತ ಸಮಾಜಕ್ಕೆ ಶ್ರಮಿಸಿದ್ದ ಅಗ್ನಿ ಬನ್ನಿರಾಯ ಸತ್ಯ ಪ್ರತಿಪಾದಕರಾಗಿದ್ದರು

     

     

    ದೇವನಹಳ್ಳಿ ತಹಶೀಲ್ದಾರ್ ಎಂ.ಅನಿಲ್ ಮಾತನಾಡಿ, ಅಗ್ನಿ ಬನ್ನಿರಾಯರು ತಿಗಳ ಸಮುದಾಯದ ಆರಾಧ್ಯ ದೈವ. ಅವರ ಧೈರ್ಯ, ತ್ಯಾಗ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಅಗ್ನಿವಂಶ ಅಥವಾ ವಹ್ನಿಕುಲ ಕ್ಷತ್ರಿಯ ಪರಂಪರೆಯ ಪ್ರತಿನಿಧಿಯಾಗಿರುವ ಅಗ್ನಿ ಬನ್ನಿರಾಯರು ಧರ್ಮರಕ್ಷಣೆ ಮತ್ತು ಜನರ ಹಿತಕ್ಕಾಗಿ ಹೋರಾಡಿದ ವೀರಪುರುಷ. ಅವರ ಜೀವನ ಮೌಲ್ಯಗಳು ಸಮಾನತೆ, ಧೈರ್ಯ ಮತ್ತು ನಿಷ್ಠೆಯ ಸಂದೇಶವನ್ನು ಸಾರುತ್ತವೆ ಎಂದು ತಿಳಿಸಲಾಯಿತು.

    ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಗಜಕೇಸರಿ ಸೇನೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರಾಜು , ಉಪಾಧ್ಯಕ್ಷ ಲಕ್ಷ್ಮಯ್ಯಾ, ಕಾರ್ಯದರ್ಶಿ ನಾಗೇಶ್, ಖಜಾಂಚಿ ಸುಂದರ್, ಮುಖಂಡರಾದ ಮಂಜಣ್ಣ, ವಿಜಿಕುಮಾರ್, ಸುಬ್ಬಣ್ಣ, ಅರದೇಶನಹಳ್ಳಿ ಸುಬ್ರಮಣಿ ಉಪಸ್ಥಿತರಿದ್ದರು.

     

     

     

  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಆಹಾರ ಸಚಿವ ಕೆ ಎಚ್ ಮುನಿಯಪ್ಪ ಭೇಟಿ : ಬೆಂಬಲ ಬೆಲೆ ಯೋಜನೆಯ 1446 ಕೋಟಿ ರೂ ಗಳ ಬಾಕಿ ಮೊತ್ತ ಬಿಡುಗಡೆಗೆ ಮನವಿ

    ನವ ದೆಹಲಿ :  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ನವದೆಹಲಿಯ ಕೃಷಿ ಭವನದಲ್ಲಿ ನಡೆದ ಆಹಾರ ಇಲಾಖೆಯ ಸಭೆಯಲ್ಲಿ ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.
    ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕರ್ನಾಟಕ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ಧಾನ್ಯಗಳು ಹಾಗೂ ಭತ್ತ/ಕಸ್ಟಮ್ ಮಿಲ್ಡ್ ರೈಸ್ (CMR) ಖರೀದಿ ಕಾರ್ಯವನ್ನು ನಿಯಮಾನುಸಾರವಾಗಿ ನಡೆಸುತ್ತಿದೆ. ಖರೀದಿಸಲಾದ ಆಹಾರ ಧಾನ್ಯಗಳನ್ನು ಕೇಂದ್ರ ಪೂಲ್‌ಗೆ ಸೇರಿಸಿ, ಭಾರತ ಸರ್ಕಾರದ ಅನುಮೋದನೆಯೊಂದಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (TPDS) ಅಡಿಯಲ್ಲಿ ವಿತರಿಸಲಾಗುತ್ತಿದೆ.
    ಈ ಹಿನ್ನೆಲೆಯಲ್ಲಿ, ನಿಗದಿತ ಪ್ರಕ್ರಿಯೆಯಂತೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪರಿಹಾರ ದಾವೆಗಳನ್ನು ಸಲ್ಲಿಸಿದೆ. ಆದರೆ ಖರೀದಿ ಋತು 2023–24 ಹಾಗೂ 2024–25ಕ್ಕೆ ಸಂಬಂಧಿಸಿದಂತೆ ರೂ. 1,446.36 ಕೋಟಿ ಮೊತ್ತದ ತಾತ್ಕಾಲಿಕ MSP ಪರಿಹಾರ ಮೊತ್ತವು ಬಹುಕಾಲದಿಂದ ಬಾಕಿ ಉಳಿದಿರುವುದು ರಾಜ್ಯದ ಆರ್ಥಿಕ ಸಂಪನ್ಮೂಲಗಳ ಮೇಲೆ ಗಂಭೀರ ಒತ್ತಡವನ್ನುಂಟುಮಾಡುತ್ತಿದೆ.
    ಇದಲ್ಲದೆ, 2025–26ರ ಖರೀದಿ ಋತುವಿನ ಕಾರ್ಯಾಚರಣೆಗಳು ಈಗಾಗಲೇ ಪ್ರಾರಂಭವಾಗಿದ್ದು, 31.01.2026ರ ತನಕ 2,86,365ಕ್ಕೂ ಅಧಿಕ ರೈತರು ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.
    ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವುದು, MSP ವ್ಯವಸ್ಥೆಯ ಮೇಲಿನ ಅವರ ವಿಶ್ವಾಸವನ್ನು ಕಾಯ್ದುಕೊಳ್ಳುವುದು ಹಾಗೂ ಪ್ರಸ್ತುತ ನಡೆಯುತ್ತಿರುವ ಖರೀದಿ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸಲು ಹಣದ ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ.
    ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಬಹುಕಾಲದಿಂದ ಬಾಕಿ ಉಳಿದಿರುವ MSP ಪರಿಹಾರ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಇದರಿಂದ ರಾಜ್ಯ ಸರ್ಕಾರವು ರೈತರಿಗೆ ಸಮಯಕ್ಕೆ ಸರಿಯಾಗಿ ಪಾವತಿಯನ್ನು ಮಾಡಲಿದ್ದು, ಖರೀದಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು.
    ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಹಾರ ನಿಗಮದ ನಿರ್ದೇಶಕರಾದ ಜಗದೀಶ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
  • ಸುರಕ್ಷಿತ ಅಂತರ್ಜಾಲ ದಿನ : ಆನ್ಲೈನ್ ಆಸೆ ಆಮಿಷಗಳಿಗೆ ಬಲಿಯಾಗದಿರಿ: ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್

    ಬೆಂಗಳೂರು ಗ್ರಾಮಾಂತರ : ಪ್ರತಿ ದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಇಂಟರ್ನೆಟ್ ಅನ್ನು ಬಳಸುತ್ತೇವೆ ಅದರಿಂದ ಎಷ್ಟು ಉಪಯೋಗ ಇದೆಯೇ ಅಷ್ಟೇ ಅಪಾಯ ಇದ್ದು ಆನ್ಲೈನ್ ನಲ್ಲಿ ತೋರುವ ಆಸೆ ಆಮಿಷಗಳಿಗೆ ಬಲಿಯಾಗದಿರಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಅವರು ತಿಳಿಸಿದರು.
    ಇಂದು ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ಆಯೋಜಿಸಿದ್ದ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು,ಇಂಟರ್ನೆಟ್ ಬಳಕೆಯಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನ್ಲೈನ್ ಸ್ಕ್ಯಾಮ್ ನಡೆಯುತ್ತಿವೆ, ಬ್ಲ್ಯಾಕ್ ಮೆಲ್, ಅನ್ ಲೈನ್ ಗೇಮ್ ಈ ರೀತಿಯ ಚಟಗಳಿಗೆ ಇಂದಿನ ಯುವ ಜನತೆ ಮೋಸ ಹೋಗುತ್ತಿದ್ಧಾರೆ. ರೀಲ್ಸ್ ನೋಡುವುದುದರಿಂದ ಸಮಯ ವ್ಯರ್ಥ್ಯ ಮಾಡುತ್ತಿದ್ಧಾರೆ. ಅಂರ್ಜಾಲವನ್ನು ವೃತ್ತಿ ಜೀವನಕ್ಕೆ ಮತ್ತು ವೈಯಕ್ತಿಕ ಜೀವನಕ್ಕೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರ ಬಳಸಿಕೊಳ್ಳಿ ಎಂದು ಹೇಳಿದರು.
    “ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು-ಎಐಯ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಅನ್ವೇಷಣೆ ಇಂಟರ್ನೆಟ್ ಬಳಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪಾಯಗಳು, ವಂಚನೆಗಳು ಹಾಗೂ ಕೃತಕ ಬುದ್ಧಿಮತೆ(AI) ಯ ಜವಾಬ್ದಾರಿಯುತ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರಾಮಕೃಷ್ಣ, ಜಿಲ್ಲಾಧಿಕಾರಿ ಕಛೇರಿ ಸಹಾಯಕ ರಾಜೀವ್ ಸುಲೋಚನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
  • ದೊಡ್ಡಬಳ್ಳಾಪುರ ನಗರದಲ್ಲಿ ರಾಜ್ಯದ ಮೊದಲ ಮಕ್ಕಳ ವಿಶೇಷ ನಗರ ಸಭೆ ಆಯೋಜನೆ

    ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಠಿಯಾಗಬೇಕು. ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದಾಗ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಇತ್ಯರ್ಥ್ಯಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್‌ ಕೋಸಂಬೆ ಅವರು ಹೇಳಿದರು.
     ನಗರಸಭೆ ದೊಡ್ಡಬಳ್ಳಾಪುರ, ಯುವ ಸಂಚಲನ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಡಿ ಪಟ್ಟಣದ ನಗರಸಭೆ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ವಿಶೇಷ ನಗರಸಭೆ ಕಾರ್ಯಕ್ರಮವನ್ನು ಉದ್ಘಾಡಟಿಸಿ ಮಾತನಾಡಿದ ಅವರು ಮಕ್ಕಳ ಹಕ್ಕುಗಳ ಸಮಸ್ಯೆ ಆಲಿಸಲು ಈ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಗ್ರಾಮಸಭೆ ಮಾಡಲಾಗುತ್ತಿತ್ತು. ನಗರ ಮಟ್ಟದಲ್ಲಿಮಕ್ಕಳು ಸಮಸ್ಯೆಗಳನ್ನು ಆಲಿಸುವ ಹಾಗೂ ಪರಿಹರಿಸುವ ವಿನೂತನ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ನಗರಸಭೆ ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು.
    ಆಯೋಗದ ಮುಂದೆ ವಿದ್ಯಾರ್ಥಿಗಳು ಹೇಳಿದ ಸಮಸ್ಯೆಗಳೇನು…???
      ಸಭೆಯಲ್ಲಿ ಶಾಲೆಗಳಲ್ಲಿನ ಶೌಚಾಲಯ, ಸ್ವಚ್ಛತೆ, ನೈರ್ಮಲ್ಯ, ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಕೊರತೆ, ವಿದ್ಯುತ್‌, ನೀರು ಸರಬರಾಜು, ಸೇರಿದಂತೆ ಕೌಟುಂಬಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಆಯೋಗದ ಮುಂದೆ ತೋಡಿಕೊಂಡಿದ್ದು,ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ಒಂದು ವಾರದೊಳಗೆ ಅನುಪಾಲನ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್‌ ಕೋಸಂಬೆ ಸೂಚಿಸಿದರು.
     ಅರಳು ಮಲ್ಲಿಗೆ ಬಾಗಿಲು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಕಸ ಸಂಗ್ರಹಣೆಯಾಗುತ್ತಿದ್ದು, ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ ಹಾಗೂ ಶಾಲೆ ಪಕ್ಕದಲ್ಲೇ ಚರಂಡಿ ಇದ್ದು, ಕಲ್ಮಶ ನೀರು ಶಾಲಾವರಣಕ್ಕೆ ನುಗ್ಗಿ ದುರ್ನಾತ ಬರುತ್ತಿದ್ದು, ತುಂಬಾ ಸಮಸ್ಯೆ ಎದುರಾಗುತ್ತದೆ ಎನ್ನುವ ಮಕ್ಕಳ ಪ್ರಶ್ನೆ ಪ್ರತ್ಯುತ್ತರ ನೀಡಿದ ಆಯೋಗದ ಅಧ್ಯಕ್ಷರು ನಗರಸಭೆಯ ಪೌರಾಯುಕ್ತರಿಗೆ ತುರ್ತಾಗಿ ಬಿಇಓ ಮತ್ತು ಪಟ್ಟಣದ ಎಲ್ಲಾ ಶಾಲೆಯ ಮುಖ್ಯಗುರುಗಳೊಂದಿಗೆ ಸಭೆ ಏರ್ಪಡಿಸಿ, ಕಸ ವಿಲೇವಾರಿ, ಶಾಲೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಇತರೆ ತೊಂದರೆಗಳ ಕುರಿತು ಚರ್ಚಿಸಿ, ಸಭೆಯ ಅನುಪಾಲನ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
    .
    ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಮ್ಮ, ಪೌರಾಯುಕ್ತ ಕಾರ್ತೀಕೇಶ್ವರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ವಾಸುದೇವ ಶರ್ಮಾ, ಪ್ರಭುದೇವ, ಚಿದಾನಂದ ಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
  • ಅನಧಿಕೃತ ಮೀಟರ್ ಅಳವಡಿಸಿ ವಿದ್ಯುತ್ ವಂಚನೆ ಆರೋಪ : ನೌಕರರ ವಿರುದ್ಧ ಬೆಸ್ಕಾಂ ದೂರು

    ದೊಡ್ಡಬಳ್ಳಾಪುರ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ದೊಡ್ಡಬಳ್ಳಾಪುರ ನಗರ ಉಪವಿಭಾಗ )ಯನ್ನು ವಂಚಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿರುವವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
    ಹೌದು ಕಳೆದ ಜನವರಿ 30ರಂದು ಬೆಸ್ಕಾಂ(ದೊಡ್ಡಬಳ್ಳಾಪುರ ನಗರ ವಿಭಾಗ) ನೌಕರ ಮನು ಎಂಬುವರ ಮೇಲೆ ಮೋಸ ಹಾಗೂ ವಂಚನೆ ಆರೋಪದ ಹಿನ್ನಲೆ ದೂರು ದಾಖಲಾಗಿದ್ದು, ಪ್ರಕರಣವು ಸದ್ಯ ತನಿಖೆ ಹಂತದಲ್ಲಿದೆ.
    ದೊಡ್ಡಬಳ್ಳಾಪುರ ಬೆಸ್ಕಾಂ ಸಂಸ್ಥೆಯಲ್ಲಿ ಕೇವಲ ಮನು ಅಷ್ಟೇ ಅಲ್ಲ ಕೆಲ ನೌಕರರು, ಗುತ್ತಿಗೆದಾರರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಅಲ್ಲದೇ ಕೆಲವು ಶಾಖಾ ಅಧಿಕಾರಿಗಳು ಖಾಸಗಿ ಕೆಲಸಗಳನ್ನು ಪಡೆದು ಆಯ್ದ ಕೆಲ ಗುತ್ತಿಗೆದಾರರಿಗೆ ನೀಡಿ ಬಂದ ಹಣದಲ್ಲಿ ಭಾಗಂಶ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಈ ಕುರಿತು ತನಿಖೆ ಕೈಗೊಳ್ಳುವ ಅಗತ್ಯವಿದೆ.
    ಏನಿದು ಪ್ರಕರಣ…??
    ತಾಲ್ಲೂಕಿನ ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ) ನೌಕರ ಮನು ಎಂಬುವರು ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ, ವಿದ್ಯುತ್ ಮೀಟರ್ ಅಳವಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು. ಹಲವು(30ಕ್ಕೂ ಅಧಿಕ)ಬೆಸ್ಕಾಂ ಅನುಮತಿಯಿಲ್ಲದೇ ಮೀಟರ್ ಅಳವಡಿಕೆ ಮಾಡಿ ವಿದ್ಯುತ್ ಕಳ್ಳತನ ಮಾಡಲು ಸಹಕರಿಸಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಕೇಳಿಬಂದ ಹಿನ್ನಲೆ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಬೆಸ್ಕಾಂ ವತಿಯಿಂದ ದೂರು ದಾಖಲು ಮಾಡಲಾಗಿದೆ.
    ನಿಮಗೆ ವಿದ್ಯುತ್ ಬಿಲ್ ಬರುತ್ತಿಲ್ಲವೇ ಹಾಗಾದರೆ ಎಚ್ಚರ
    ಪ್ರತಿ ತಿಂಗಳು ವಿದ್ಯುತ್ ಬಿಲ್ ಬರುವುದು ಸರ್ವೇ ಸಾಮಾನ್ಯ, ನಿಮ್ಮ ವಿದ್ಯುತ್ ಮೀಟರ್ ಸಂಬಂಧ ಮೂರ್ನಾಲ್ಕು ತಿಂಗಳು ವಿದ್ಯುತ್ ಬಳಕೆಯ ಬಿಲ್ ಬರಲಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಬೆಸ್ಕಾಂ ದೃಡೀಕರಿಸದ ಮೀಟರ್ ಅಳವಡಿಕೆ ನಿಮ್ಮನ್ನು ಜೈಲು ವಾಸಕ್ಕೆ ಅಥವಾ ದಂಡ ಕಟ್ಟುವಂತೆ ಮಾಡಬಹುದು. ಬಿಲ್ ಬರುತ್ತಿಲ್ಲ ಎಂಬ ಸಂತೋಷ ಬೇಡ ಕೂಡಲೇ ಎಚ್ಚೆದ್ದುಕೊಳ್ಳಿ ನಿಮ್ಮ ವಿದ್ಯುತ್ ಮೀಟರ್ ಅನ್ನು ಬೆಸ್ಕಾಂ ನಿಂದ ದೃಷ್ಟಿಕರಿಸಿಕೊಳ್ಳಿ ವಂಚನೆ ಮೋಸಗಳಿಂದ ಪರಾಗಿ..ಅಧಿಕಾರಿಗಳನ್ನು ನೇರ ಸಂಪರ್ಕ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ
    ಅಧಿಕೃತವಲ್ಲದ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಕಳ್ಳತನಕ್ಕೆ ಅನುವು ಮಾಡಿಕೊಟ್ಟಿರುವ ಮನು ಅವರ ವಿರುದ್ದ ಬೆಸ್ಕಾಂ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಸಂಸ್ಥೆಗೆ ಆಗಿರುವ ನಷ್ಟ ಹೇಗೆ ಹಿಂಪಡೆಯಲಿದೆ ಸಂಸ್ಥೆಗೆ ವಂಚಿಸಿರುವವರ ವಿರುದ್ಧ ಕಾನೂನು ಕ್ರಮ ನೆಡೆಯುವುದೇ ಎಂದು ಸಾಮಾಜಿಕ ವಲಯದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಕಾದುನೋಡಬೇಕಿದೆ.
  • ಟಿ ಎ ನಾರಾಯಣ ಗೌಡರ ಆದೇಶದಂತೆ ಕಾವೇರಿ ನದಿ ಉಳಿವಿಗಾಗಿ ಹೋರಾಟಕ್ಕೆ ನಾವು ಸಿದ್ದ – ಪುರುಷೋತ್ತಮ್ ಗೌಡ

    ಬೆಂಗಳೂರು ಗ್ರಾಮಾಂತರ: ರಾಜ್ಯದ ಜೀವನಾಡಿಯಾಗಿರುವ ಕಾವೇರಿ ನದಿಯ ಗುಣಮಟ್ಟ ಕಾಪಾಡಲು, ನದಿಗೆ ಸೇರುತ್ತಿರುವ ಕಲುಷಿತ ನೀರಿನ ಹರಿವನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ ಎ ನಾರಾಯಣಗೌಡರ ವೇದಿಕೆ )ಹೋರಾಟಕ್ಕೆ ಮುಂದಾಗಿದೆ.
    ರಾಜ್ಯದಲ್ಲಿ ಈಗಾಗಲೇ ಹಲವಾರು ನದಿ ನೀರು ಕೊಳಚೆ ಮತ್ತು ತಾಜ್ಯವಸ್ತುಗಳಿಂದ ಸಂಪೂರ್ಣ ಹಾಳಾಗಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪಿದೆ. ಪ್ರಸ್ತುತ ಕಾವೇರಿ ನದಿಮೂಲಕ್ಕೂ ಕಲುಷಿತ ವಸ್ತುಗಳು,ನೀರು ಸೇರುತ್ತಿದ್ದು ನಮ್ಮ ನಾಡಿನ ಜಲಮೂಲ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಹೋರಾಟದ ಮೂಲಕ ನಮ್ಮ ಕರವೇ ರಾಜ್ಯದ್ಯಂತ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
    ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಕಲುಷಿತ ರಾಸಾಯನಿಕಯುಕ್ತ ನೀರಿನಿಂದ ಈಗಾಗಲೇ ನಮ್ಮ ಸ್ಥಳೀಯ ನದಿಮೂಲ, ಕೆರೆ ಮೂಲಗಳು ಸಂಪೂರ್ಣ ಹಾಳಾಗಿವೆ ಇದಕ್ಕೆ ಉತ್ತಮ ಉದಾಹರಣೆ ನಮ್ಮ ತಾಲ್ಲೂಕಿನ ಆರ್ಕವತಿ ನದಿ ಹಾಗೂ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಭಾಗದ ಕೆರೆಯಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಕಾವೇರಿ ನದಿಗೂ ಬರುವುದರಲ್ಲಿ ಸಂಶಯವಿಲ್ಲ ಹಾಗಾಗಿ ನಮ್ಮ ಟಿ ಎ ನಾರಾಯಣ ಗೌಡರ ಆದೇಶದಂತೆ ಎಲ್ಲಾ ಕರವೇ ಸೈನಿಕರು ರಾಜ್ಯದ ನದಿ ಉಳಿವಿಗಾಗಿ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದರು.
  • ನಗರದ ಸಮಗ್ರ ಅಭಿವೃದ್ಧಿಗೆ ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ಅವರ ಕೊಡುಗೆ ಅಪಾರವಾಗಿದೆ – ಎಸ್.ಮಹಾಬಲೇಶ್ವರ್ 

    ದೊಡ್ಡಬಳ್ಳಾಪುರ : ನಗರದ ಸಮಗ್ರ ಅಭಿವೃದ್ಧಿಗೆ ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ಅವರ ಕೊಡುಗೆ ಅಪಾರವಾಗಿದೆ. ಅವರು ದೊಡ್ಡಬಳ್ಳಾಪುರದ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರು ಆಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಮಹಾಬಲೇಶ್ವರ್ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ನಗರದ ಶ್ರೀ ಕೊಂಗಾಡಿಯಪ್ಪ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು ಮತ್ತು ವಿಕಾಸ ಸಂಸ್ಥೆ ಸಹಯೋಗದಲ್ಲಿ ಲೋಕಸೇವಾನಿರತ ಡಿ ಕೊಂಗಾಡಿಯಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳಲ್ಲಿ ನಡೆಯುವ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‌ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಕೊಂಗಾಡಿಯಪ್ಪ ಅವರು ತಮ್ಮ ನಿಸ್ವಾರ್ಥ ಸೇವೆಯಿಂದಾಗಿ ಜನಮನ ಗೆದ್ದ ಮಹಾಪುರುಷರಾಗಿದ್ದಾರೆ ಎಂದರು.

    ದೊಡ್ಡಬಳ್ಳಾಪುರದಲ್ಲಿ ಕೊಂಗಾಡಿಯಪ್ಪ ಅವರು ಬಡ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲೇ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದರು. ದೊಡ್ಡಬಳ್ಳಾಪುರಕ್ಕೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅವಿರತವಾಗಿ ಶ್ರಮಿಸಿದರು. ಕೊಂಗಾಡಿಯಪ್ಪ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು  “ಲೋಕಸೇವಾನಿರತ” ಎಂಬ ಬಿರುದನ್ನು ನೀಡಿ ಗೌರವಿಸಿದರು ಎಂದರು.

    ಕಾರ್ಯಕ್ರಮದಲ್ಲಿ ಶ್ರೀ ಕೊಂಗಾಡಿಯಪ್ಪ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿಕಾಂತಮ್ಮ, ಪರಿಸರ ಪ್ರಜ್ಞಾ ಕೇಂದ್ರದ ಕಾರ್ಯದರ್ಶಿ ಡಿ.ಆರ್.ನಟರಾಜು, ನಿವೃತ್ತ ಪ್ರಾಂಶುಪಾಲ, ಆನಂದಮೂರ್ತಿ, ನಿವೃತ್ತ ಉಪನ್ಯಾಸಕ ಸತ್ಯನಾರಾಯಣ, ಕಾರ್ಯಕ್ರಮದ ಸಂಚಾಲಕರುಗಳಾದ ಶ್ರಾವಣಿ, ಕವಿತಾ, ರೇಣುಕಾ, ಪಲ್ಲವಿ ಮುಂತಾದವರು ಭಾಗವಹಿಸಿದ್ದರು.