Blog

  • ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಹಳ್ಳಿ ರೈತ ಅಂಬರೀಷ್ ಕಾರಣ ಏನು ಗೊತ್ತಾ…???

    ದೊಡ್ಡಬಳ್ಳಾಪುರ : ರೈತರ ಪರ ಧ್ವನಿಯಾಗಿ ರಾಜ್ಯದ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಆದರೆ ನಮ್ಮ ಜೆಡಿಎಸ್ ಪಕ್ಷದಲ್ಲಿ ಈ ರೀತಿಯ ಕಾರ್ಯವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿದೆ ಹಾಗಾಗಿ ಜೆಡಿಎಸ್ ಪಕ್ಷದ ನನ್ನಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹಳ್ಳಿರೈತ ಅಂಬರೀಷ್ ತಿಳಿಸಿದ್ದಾರೆ

    ಈ ಕುರಿತು ಮಾತನಾಡಿರುವ ಅವರು ರೈತರಿಗೆ ಉತ್ತಮ ಮಾರುಕಟ್ಟೆ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ಸ್ಥಳೀಯ ರೈತರು ಬೆಳೆದ ಹಲಸಿನ ಹಣ್ಣನ್ನು ರಾಷ್ಟ್ರ ಹಾಗೂ ರಾಜ್ಯದ ವಿವಿಧ ಪ್ರಮುಖರಿಗೆ ನೀಡಲಾಗಿದೆ. ಹಾಗೂ ಇತಿಹಾಸ ಪ್ರಸಿದ್ಧವಾದ ಶ್ರೀ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ನೆಡೆಯುವ ದನಗಳ ಜಾತ್ರೆ ಅಂಗವಾಗಿ ಜಾತ್ರೆಗೆ ಬರುವ ದನ ಕರುಗಳಿಗೆ ಹಾಗೂ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಹುಲ್ಲು ಮತ್ತು ನೀರು ವಿತರಣೆ ಕಾರ್ಯಕ್ರಮ ರೂಪಿಸಿದ್ದೇವು ಆದರೆ ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಜೆಡಿಎಸ್ ಪಕ್ಷದ ಕೆಲ ಪ್ರಮುಖರು ಮಾತನಾಡಿದ್ದಾರೆ ಹಾಗಾಗಿ ನಮ್ಮಿಂದ ಯಾರಿಗೂ ಬೇಸರವಾಗಬಾರದು ಹಾಗೂ ನನ್ನ ಸೇವೆ ರೈತರ ಪರವಾಗಿ ಸದಾ ನಿರಂತರವಾಗಿ ಸಾಗುತ್ತದೆ ಎಂದು ತಿಳಿಸಲು ಈ ನಿರ್ಧಾರಕ್ಕೆ ಮುಂದಾಗಿದ್ದೇನೆ ಎಂದರು .

    ಪಕ್ಷದ ಜಿಲ್ಲಾ ಹಾಗೂ ರಾಜ್ಯ ವರಿಷ್ಠರನ್ನು ಭೇಟಿ ಮಾಡಿ ನಂತರ ಅಧಿಕೃತ ರಾಜೀನಾಮೆ ಘೋಷಣೆ ಮಾಡುತ್ತೇನೆ ಎಂದು ವಿಜಯಮಿತ್ರ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

  • ಶೂ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ – ರಾಮಾಮೂರ್ತಿ( ರಾಮು) ನೇರಳೆಘಟ್ಟ 

    ದೊಡ್ಡಬಳ್ಳಾಪುರ : ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ಮೇಲೆ ಶೂ ಎಸೆತ ಪ್ರಯತ್ನದ ಪ್ರಕರಣವನ್ನು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಬೆಂಗಳೂರು ಜಿಲ್ಲಾ ಸಂಚಾಲಕ ರಾಮಾಮೂರ್ತಿ (ರಾಮು) ನೇರಳೆಘಟ್ಟ ತಿಳಿಸಿದರು.

    ಶೂ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕು. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯನ್ನು ನಡೆಸಿ, ಈ ದಾಳಿಯ ಹಿಂದಿನ ಹುನ್ನಾರವನ್ನು ಕೇಂದ್ರ ಸರ್ಕಾರ ಬಯಲಿಗೆಳೆಯ ಬೇಕೆಂದು ಒತ್ತಾಯಿಸಿದ್ದಾರೆ.

     ಪ್ರಕರಣ ಕುರಿತು ಮಾತನಾಡಿದ ಅವರು ಇದು ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ದಾಳಿಯಲ್ಲ. ಇದು ಭಾರತದ ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ದೇಶದಲ್ಲಿ ಸಂವಿಧಾನ ಜಾರಿಯಾದಾಗಲೇ ನಮ್ಮ ದೇಶದ ಸಂವಿಧಾನವನ್ನು ಈ ಸನಾತನವಾದಿಗಳು ವಿರೋಧಿಸಿದ್ದರು. ದಲಿತನೊಬ್ಬ ಮುಖ್ಯ ನ್ಯಾಯಮೂರ್ತಿಯ ಪೀಠದಲ್ಲಿ ಕೂತು ನ್ಯಾಯ ಕೊಡುವುದನ್ನು ಈ ಸನಾತನವಾದಿಗಳು ಯಾವೊತ್ತು ಒಪ್ಪಿಕೊಳ್ಳುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದಿದ್ದಾರೆ.

    ಇತ್ತೀಚೆಗೆ ಆರೆಸ್ಸೆಸ್ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ನಿರಾಕರಿಸಿದ ಗವಾಯಿ “ತಾನು ಅಂಬೇಡ್ಕರ್‌ವಾದಿ. ಆರ್ ಎಸ್ ಎಸ್ ನಂತಹ ಕಾರ್ಯಕ್ರಮಕ್ಕೆ ಹೋಗೋಕೆ ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.

    ಇದರ ಬೆನ್ನಲ್ಲೆ ವಿಚಾರಣೆಯ ವೇಳೆಯಲ್ಲಿ ವಕೀಲನೊಬ್ಬ ಚಪ್ಪಲಿ ಎಸೆಯಲೆತ್ನಿಸಿದ್ದಾನೆ. ಸನಾತನ ಧರ್ಮಕ್ಕೆ ಅಪಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಉದ್ದಟತನದಿಂದ ಮಾತನಾಡಿರುವುದು ಸನಾತನವಾದಿಗಳ ಮುಖವಾಡ ಕಳಚಿದಂತಾಗಿದೆ ಎಂದಿದ್ದಾರೆ.

    ಸಿ ಜೆ ಐ ಗವಾಯಿಯವರು ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿದ್ದಲ್ಲದೆ ಯಾವುದೇ ಪ್ರಕರಣವಿದ್ದರೂ ಸಂವಿಧಾನದಡಿಯಲ್ಲಿ ಆದೇಶ ನೀಡುತ್ತಿರುವುದು ಸನಾತನವಾದಿಗಳಿಗೆ ಬಿಸಿ ತುಪ್ಪವಾಗಿದೆ ಎಂದರು.

  • ನಮ್ಮ ಆಸ್ಪತ್ರೆ ವಿರುದ್ಧ ಅಪಪ್ರಚಾರ ಆರೋಪ : ಬೇಸರ ವ್ಯಕ್ತಪಡಿಸಿದ ಹೀಲಿನ್ ಆಸ್ಪಿಟಲ್ಸ್ ಮಾಲೀಕ ಹಾಗೂ ವೈದ್ಯ ಡಾ. ವೆಂಕಟೇಶ್ ಪ್ರಸಾದ್

    ದೊಡ್ಡಬಳ್ಳಾಪುರ : ನೂತನ ಹೀಲಿನ್ ಆಸ್ಪಿಟಲ್ಸ್ ವಿರುದ್ಧ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿ ಇಲ್ಲಸಲ್ಲದ ಆರೋಪಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೀಲಿನ್ ಆಸ್ಪಿಟಲ್ಸ್ ಮಾಲೀಕ ಹಾಗೂ ವೈದ್ಯ ಡಾ. ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

     

    ಈ ಇದ್ದ ಸೆವೆನ್ ಹಿಲ್ಸ್ ಆಸ್ಪತ್ರೆಯು ಕಾರಣಾಂತರಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಅದೇ ಕಟ್ಟಡದಲ್ಲಿ ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಪರವಾನಗಿ ಪಡೆದುಕೊಂಡು ನೂತನವಾಗಿ ಹೀಲಿನ್ ಆಸ್ಪಿಟಲ್ಸ್ ಪ್ರಾರಂಭ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಅ.15ರಂದು ಈ ಆಸ್ಪತ್ರೆ ಉದ್ಘಾಟನೆಯಾಗಲಿದೆ.. ಹೀಗಿರುವಾಗ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿ ನಮ್ಮ ಆಸ್ಪತ್ರೆಯ ಭಾವಚಿತ್ರ ತೆಗೆದು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

     

    ಸೆವೆನ್ ಹಿಲ್ಸ್ ಆಸ್ಪತ್ರೆಗೂ ಹೀಲಿನ್ ಆಸ್ಪಿಟಲ್ಸ್ ಗೂ ಯಾವುದೇ ಸಂಬಂಧವಿಲ್ಲ. ಹಾಗೂ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿಗೂ ಹೀಲಿನ್ ಆಸ್ಪಿಟಲ್ಸ್ ಗೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ನಮ್ಮ ಆಸ್ಪಿಟಲ್ ಗೆ ಅವಮಾನ ಮಾಡಲು ಯತ್ನಗಳು ನಡೆಸಲಾಗಿದೆ.

     

    ನೂತನವಾಗಿ ಹೀಲಿನ್ ಆಸ್ಪಿಟಲ್ಸ್ ಪ್ರಾರಂಭ ಮಾಡಲು ಕಾನೂನಾತ್ಮಕವಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಹೀಲಿನ್ ಆಸ್ಪಿಟಲ್ಸ್ ಎಂಬ ಹೆಸರು ಇಡೀ ದೇಶದಲ್ಲೇ ಇಲ್ಲ. ಆದ್ದರಿಂದ ಟ್ರೇಡ್ ಮಾರ್ಕ್ ಸಹ ಪಡೆಯಲಾಗಿದೆ. ಇದನ್ನು ಸಹಿಸದ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿ ನಮ್ಮ ಆಸ್ಪತ್ರೆ ವಿರುದ್ಧ ಅಪಪ್ರಚಾರ ಮಾಡುವ ದೃಷ್ಟಿಯಿಂದ ಹೀಲಿನ್ ಆಸ್ಪಿಟಲ್ಸ್ ಹೆಸರು ಬಳಸಿ, ಆಸ್ಪತ್ರೆಯ ಭಾವಚಿತ್ರ ತೆಗೆದು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ನಮಗೆ ಕಿಡಿಗೇಡಿಗಳು ಎಂಬ ಪದವನ್ನು ಬಳಸಿ ಅವಮಾನ ಮಾಡುತ್ತಿದ್ದಾರೆ. ಈತನ ವಿರುದ್ಧ ನಗರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರನ್ನು ಸಹ ನೀಡಲಾಗಿದೆ.

     

    ದಯವಿಟ್ಟು ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ, ನಾವು ಯಾವುದೇ ರೀತಿಯ ಕಾನೂನು ಬಾಗಿರವಾಗಿ ಆಸ್ಪತ್ರೆ ಪ್ರಾರಂಭ ಮಾಡಲು ಮುಂದಾಗುತ್ತಿಲ್ಲ. ಕಾನೂನಾತ್ಮಕವಾಗಿ, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ಆಸ್ಪತ್ರೆ ಪ್ರಾರಂಭ ಮಾಡಲು ತಯಾರು ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ 24×7ಫಾರ್ಮಸಿ, ಆಕ್ಸಿಡೆಂಟ್ ಮತ್ತು ಟ್ರಾಮಾ, ಆರ್ಥೋಪೆಡಿಕ್ಸ್, ನ್ಯೂರೋ ಕೇಂದ್ರಗಳು ಲಭ್ಯವಿರಲಿದೆ. ಜೊತೆಗೆ ಮಾತೃತ್ವ, ಮಕ್ಕಳ ಆರೈಕೆ ಘಟಕವನ್ನು ಸಹ ಪ್ರಾರಂಭ‌ ಮಾಡಲಾಗುವು ಎಂದರು.

  • ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನದ ಆಚರಣೆ

    ಹಿರಿಯ ನಾಗರಿಕರು ಅನುಭವದ ಗ್ರಂಥಗಳು ಅವರ ಜೊತೆ ಸಮಯ ಕಳೆಯಿರಿ ಅವರ ಆರೋಗ್ಯಕ್ಕೆ ಭದ್ರತೆ ಕೊಡಿ. ಹಿರಿಯರ ತ್ಯಾಗ ಪರಿಶ್ರಮದಿಂದ ಇಂದು ನಾವೆಲ್ಲರೂ ಸುಖ-ಸೌಕರ್ಯವನ್ನು ಅನುಭವಿಸುತ್ತಿದ್ದೇವೆ ಹಿರಿಯ ನಾಗರಿಕರನ್ನು ಪ್ರೀತಿಸಿ, ಗೌರವಿಸಿ ಅವರ ಆಶೀರ್ವಾದವನ್ನು ಪಡೆದು ಸಂತೋಷದ ವಾತಾವರಣ ನಿರ್ಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರು ತಿಳಿಸಿದರು.

     

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

     

    ಹಿರಿಯರ ತ್ಯಾಗ ಸೇವೆ, ಜ್ಞಾನವನ್ನು ನೆನಪಿಸುವ ಮಹತ್ತರ ದಿನವಾಗಿದೆ. ಹಿರಿಯರು ನಮ್ಮ ಭೂತಕಾಲದ ನೆನಪುಗಳು ವರ್ತಮಾನದ ಆಸ್ತಿಗಳು ಮತ್ತು ಭವಿಷ್ಯದ ಪ್ರೇರಣೆ. ಅವರು ನಮ್ಮ ಸಮಾಜದ ಬೆನ್ನೆಲುಬು ತಮ್ಮ ಜೀವನವನ್ನು ಕುಟುಂಬ,ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಅರ್ಪಿಸಿದ್ದಾರೆ. ಹಿರಿಯರು ಸಂಸ್ಕೃತಿಯ ಸಾಗರ ಅನುಭವದ ವಿಶ್ವಕೋಶ. ಅವರ ಆಶೀರ್ವಾದವಿಲ್ಲದೆ ಯಾವ ಕುಟುಂಬ ಸಮೃದ್ಧಿ ಹೊಂದಲು ಸಾಧ್ಯವಿಲ್ಲ. ನಾವು ಹಿರಿಯರನ್ನು ಕೇವಲ ಕುಟುಂಬದ ಸದಸ್ಯರಾಗಿ ಕಾಣಬಾರದು ಅವರನ್ನು ಜ್ಞಾನಿಗಳಾಗಿ ಮಾರ್ಗದರ್ಶಕರಾಗಿ ಕಾಣಬೇಕು. ಅವರ ಪ್ರೀತಿ ಸಲಹೆ ಮಾರ್ಗದರ್ಶನಗಳು ನಮ್ಮ ಬದುಕಿಗೆ ದಾರಿ ತೋರುವ ದೀಪಗಳು ಎಂದರು.

     

    ಜಿಲ್ಲೆಯಲ್ಲಿ 1,12,236 ಜನ ಹಿರಿಯ ನಾಗರಿಕರು ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರು ಓಡಾಡುವಾಗ ಕೆಲ ಸಂದರ್ಭದಲ್ಲಿ ಬಿದ್ದು ಪ್ರಾಣ ಹಾನಿಗಳು ಆಗಿವೆ ಕೆಲವರು ಕೈ ಕಾಲುಗಳನ್ನು ಕಳೆದು ಕೊಂಡಿದ್ದಾರೆ ಹೀಗೆ ಹಲವಾರು ರೀತಿ ಅನಾಹುತಗಳು ಆಗಿವೆ ಅದಕ್ಕಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ನಮ್ಮ ಊರುಗೋಲು ಎಂಬ ಕಾರ್ಯಕ್ರಮ ರೂಪಿಸಿ ಅದರಲ್ಲಿ 5000 ಹಿರಿಯ ನಾಗರಿಕರಿಗೆ ಊರಗೋಲನ್ನು ವಿತರಿಸಲಾಯಿತು.

     

    ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ಹಿರಿಯ ನಾಗರಿಕರು ಅನುಭವದಿಂದ ಪಾಠ ಕಲಿತಿರುತ್ತಾರೆ. ಹಿರಿಯರು ಹೇಳುವ ಕಥೆಯಲ್ಲಿ ನೈತಿಕತೆಯ ಸಾರಂಶ, ನೀತಿ ಪಾಠ ತುಂಬಿರುತ್ತದೆ. ಅವರು ಮಾನಸಿಕವಾಗಿ ಸಧೃಡರಾಗಿರುತ್ತಾರೆ. ಅವರು ವಿದ್ಯಾಭ್ಯಾಸ ಮಾಡಿರದಿದ್ದರು ಔಷಧೋಪಚಾರದ ಅರಿವಿರುತ್ತಿತ್ತು. ಅವರ ಅನುಭವದ ಸಾಮರ್ಥ್ಯ ಬಹಳ ದೊಡ್ಡದು ಹಾಗಾಗಿ ಅವರ ಮಾತನ್ನು ಕೇಳಬೇಕು. ಇಂದು ನಾನು ಅಧಿಕಾರಿಯಾಗಿ ಕೆಲಸ ನಿರ್ವಹಿಸಲು ಕಾರಣ ಹಿರಿಯರು ಎಂದು ನೆನಪಿಸಿಕೊಂಡರು.

     

    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೆಲಮಂಗಲ ತಾಲ್ಲೂಕಿನ ಎಂ.ಆರ್. ರುದ್ರೇಶ್ ವಯಸ್ಸು 69 ಪೋಲಿಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ, ಹೊಸಕೋಟೆಯ ಕೃಷ್ಣಮೂರ್ತಿ ವಯಸ್ಸು 87 ಇವರು 31 ವರ್ಷಗಳ ಕಾಲ ಅರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಿರಿಯ ಆರೋಗ್ಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಚ್ ಹನುಮಂತರಾಯಪ್ಪ ವಯಸ್ಸು 90 ನಿವೃತ್ತ ಗಾಮ ಲೆಕ್ಕಾಧಿಕಾರಿಗಳು, ದೇವನಹಳ್ಳಿ ತಾಲ್ಲೂಕಿನ ರಮೇಶ್ ವಯಸ್ಸು 61 ಕಲಾವಿದರು ಇವರುಗಳಿಗೆ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ನೀಡಿದರು. ಜೊತೆಗೆ ಬ್ಯಾಪ್ಟಿಸ್ಟ್ ಆಸ್ಪತ್ರೆಯವರ ವತಿಯಿಂದ ಇಬ್ಬರು ಅಂಗವಿಕಲರಿಗೆ ಕೃತಕ ಕಾಲುಗಳನ್ನು ನೀಡಲಾಯಿತು

     

    ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ್ ಪಾಣಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರ ಮುದ್ದಣ ಎಂ, ಹಾಗೂ ಇಲಾಖೆ ಅಧಿಕಾರಿ ಜಗದೀಶ್ ಎನ್. ಎಂ, ಹಿರಿಯ ನಾಗರಿಕರ ನಿವೃತ್ತ ಸಂಘದ ಕಾರ್ಯದರ್ಶಿ ಪ್ರಭಾಕರ್ ಹಾಗೂ ಜಿಲ್ಲೆಯ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

  • ಆತ್ಮ ನಿರ್ಭರ ಭಾರತ ಅಭಿಯಾನ : ಇದು ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಕಾರ್ಯಕ್ರಮ – ರಾಮಕೃಷ್ಣಪ್ಪ

    ದೊಡ್ಡಬಳ್ಳಾಪುರ : ಅಳಿವಿನ ಅಂಚಿನಲ್ಲಿರುವ ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಆತ್ಮನಿರ್ಭರ ಭಾರತ ಅಭಿಯಾನ ಮಾಡುತ್ತಿದ್ದು, ಈ ಅಭಿಯಾನವು ಒಟ್ಟು 3 ಸಪ್ತಾಹಗಳ ಕಾಲ ನೆಡೆಯಲಿದೆ ಎಂದು ಬಿಜೆಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು

     

    ನಗರದ ಬಿಜೆಪಿ ಜಿಲ್ಲಾ ಕಛೇರಿ ಕಾರ್ಯಲಯದಲ್ಲಿ ಜಿಲ್ಲಾ ಮಟ್ಟದ ಆತ್ಮ ನಿರ್ಭರ ಭಾರತ ಕಾರ್ಯಕ್ರಮ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶಿಯ ಉತ್ಪಾದಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಕಾರ್ಯಕ್ರಮವನ್ನು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು 11ವರ್ಷಗಳಿಂದ ನೆಡೆಸಿಕೊಂಡು ಬರುತ್ತಿದ್ದಾರೆ, ಈ ಅಭಿಯಾನದ ಮುಖ್ಯ ಉದ್ದೇಶ ಸಣ್ಣ ಹಾಗೂ ಗುಡಿ ಕೈಗಾರಿಕೆಗಳನ್ನ ಪ್ರೋತ್ಸಹಿಸಿ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಶದ ಜನತೆ ಬಳಸುವ ಮೂಲಕ ಸ್ವದೇಶಿ ಉತ್ಪಾದಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದಾಗಿದೆ ಎಂದರು.

     

    ಜಿಲ್ಲಾ ಸಂಚಾಲಕ ಒಬದೇನಹಳ್ಳಿ ಮುನಿಯಪ್ಪ ಮಾತನಾಡಿ ನಮ್ಮ ಸ್ಥಳೀಯ ಗುಡಿಕೈಗಾರಿಕೆಗಳಲ್ಲಿ ಸಿದ್ದಪಡಿಸಿದ ವಸ್ತುಗಳನ್ನು ಖರೀದಿ ಮಾಡುವ ಮೂಲಕ ನಮ್ಮ ದೇಶದ ಉತ್ಪದಕರ ಅಭಿವೃದ್ಧಿಗೆ ದೇಶದ ಜನತೆ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನಕ್ಕೆ ದೇಶದ ಪ್ರಧಾನಿಗಳು ಚಾಲನೆ ನೀಡಿದ್ದಾರೆ.ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಭಾರತೀಯ ಜನತಾ ಪಕ್ಷವು ಅರಿವು ಮೂಡಿಸುತ್ತಿದೆ ಎಂದರು.

     

    ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್ ಎಂ ರವಿಕುಮಾರ್ , ಜಿಲ್ಲಾ ಆತ್ಮ ನಿರ್ಭರ ಭಾರತದ ಸಂಚಾಲಕ ಒಬೆದೇನಹಳ್ಳಿ ಮುನಿಯಪ್ಪ, ಜಿಲ್ಲಾ ಸಹ ಸಂಚಾಲಕರಾದ ವಾಣಿ ನಂದಕುಮಾರ್,ಜಿಲ್ಲಾ ಸಹ ಸಂಚಾಲಕ ಕೆ ನಾಗೇಶ್, ದೊಡ್ಡಬಳ್ಳಾಪುರ ಮಂಡಲ ಅಧ್ಯಕ್ಷ ಮುದ್ದಪ್ಪ , ನಗರ ಮಂಡಲದ ಆತ್ಮ ನಿರ್ಭರ ಭಾರತದ ಸಹ ಸಂಚಾಲಕ ಪಿ ಎಸ್ ವೆಂಕಟೇಶ್, ಜಿಲ್ಲಾ ಕಚೇರಿ ಕಾರ್ಯಲಯದ ಕಾರ್ಯದರ್ಶಿಯಾದ ಮಂಜುನಾಥ ಉಪಸ್ಥಿತರಿದ್ದರು.

  • ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ. ಬೆಂಬಲ ಬೆಲೆ ನಿಗದಿ : ಅಕ್ಟೋಬರ್ 01 ರಿಂದ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭ

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಇಲಾಖೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ರವರ ಅಧ್ಯಕ್ಷತೆಯಲ್ಲಿ ನೆಡೆಯಿತು

     

    ಸಭೆಯಲ್ಲಿ ಮಾತನಾಡಿದ ಅವರು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಅಕ್ಟೋಬರ್ 01 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ರೈತರು ಹತ್ತಿರದ ನೋಂದಣಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಿ ಎಂದರು.

    ಸರ್ಕಾರವು 2025-26 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ.ಗಳ ಬೆಲೆ ನಿಗದಿ ಪಡಿಸಿದೆ. ಅಕ್ಟೋಬರ್ 01 ರಿಂದ ಡಿಸೆಂಬರ್ 15 ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. 2026 ಜನವರಿ 01 ರಿಂದ ಮಾರ್ಚ್ 31 ರ ಅವಧಿಯವರೆಗೆ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದರು.

     

     

    “ಐಡಿ ಇಲ್ಲದ ರೈತರು ಹತ್ತಿರದ ಕೃಷಿ ಇಲಾಖೆಯಲ್ಲಿ ಐ ಡಿ ಪಡೆಯಿರಿ “

     

    ರೈತರು ಬೆಳೆದಿರುವ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಫ್ರೂಟ್ಸ್ ದತ್ತಾಂಶದಿಂದ ಮಾಹಿತಿಯನ್ನು ಪಡೆಯಲಾಗುತ್ತದೆ ಹಾಗಾಗಿ ನೋಂದಣಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದ್ದು ಐಡಿ ಇಲ್ಲದ ರೈತರು ಕೃಷಿ ಇಲಾಖೆಯ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪ್ರೂಟ್ಸ್ ಐಡಿ ಪಡೆದು ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದರು.

     

    ರಾಗಿ ನೋಂದಣಿ ಕೇಂದ್ರಗಳ ಬಗ್ಗೆ ಮಾಹಿತಿ

    ನೆಲಮಂಗಲ

    1)ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ, ನೆಲಮಂಗಲ ತಾಲ್ಲೂಕು.

    2) ವ್ಯವಸಾಯ ಸೇವಾ ಸಹಕಾರ ಸಂಘ, ಕಲಾಲು ಘಟ್ಟ, ತ್ಯಾಮಗೊಂಡ್ಲು ಹೋಬಳಿ.

    3)ವ್ಯವಸಾಯ ಸೇವಾ ಸಹಕಾರ ಸಂಘ, ದಾಬಾಸ್ ಪೇಟೆ, ಸೋಂಪುರ ಹೋಬಳಿ.

     

    ದೊಡ್ಡಬಳ್ಳಾಪುರ

    1)ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್, ದೊಡ್ಡಬಳ್ಳಾಪುರ.

    2)ರೈತ ಸಂಪರ್ಕ ಕೇಂದ್ರ, ಸಾಸಲು ಹೋಬಳಿ.

     

    ದೇವನಹಳ್ಳಿ

    ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರ ದೊಡ್ಡಿ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ದೇವನಹಳ್ಳಿ.

    ಹೊಸಕೋಟೆ

    ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್, ಮಾಲೂರು ರಸ್ತೆ, ಹೊಸಕೋಟೆ.

     

     

    ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುಳಾ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಸಹಕಾರ ಸಂಘಗಳ ಉಪ ನಿಬಂಧಕರಾದ ಚಂದ್ರಶೇಖರ್, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ತನ್ವೀರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅಬಿದಾ ಅಜುಂ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಗೋಪಾಲ ಕೃಷ್ಣ, ಜಿಲ್ಲಾ ಉಗ್ರಾಣ ಕೇಂದ್ರಗಳ ವ್ಯವಸ್ಥಾಪಕರು, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

     

     

  • ದಸರಾ ವಿಶೇಷ : ಬೊಮ್ಮಲಿಂಗೇಶ್ವರ ಹಾಗು ಮಾಚಿದೇವರಿಗೆ ವಿಶೇಷ ಪೂಜೆ ಸಲ್ಲಿಕೆ

    ವಿಜಯಮಿತ್ರ ಸುದ್ದಿ ದೊಡ್ಡಬಳ್ಳಾಪುರ : ಬೊಮ್ಮದೇವರ (ಬೊಮ್ಮ ಲಿಂಗೇಶ್ವರ )ಮತ್ತು ಮಾಚಿದೇವರ ದೇವಾಲಯದಲ್ಲಿ ಆಯುಧಪೂಜೆ ಹಾಗು ವಿಜಯದಶಮಿ ಅಂಗವಾಗಿ ಶ್ರೀ ಬೊಮ್ಮದೇವರ (ಬೊಮ್ಮ ಲಿಂಗೇಶ್ವರ )ಮತ್ತು ಮಾಚಿದೇವರ ದೇವಾಲಯದ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ .) ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

     

    ಟ್ರಸ್ಟ್ ನ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಜಿ.ರಂಗಸ್ವಾಮಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೊಮ್ಮ ಲಿಂಗೇಶ್ವರ ಮತ್ತು ಮಾಚಿದೇವರಿಗೆ ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಲ್ಲಾ ಕುಲಭಾಂದವರಿಗೂ ಶುಭ ಕೋರಿದ್ದೇವೆ . ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ . ದೇವಾಲಯದ ಅಭಿವೃದ್ಧಿ ಹಾಗೂ ಸಮುದಾಯದ ಏಳಿಗೆಗೆ ಎಲ್ಲರ ಸಹಕಾರದ ಅವಶ್ಯಕತೆ ಇದೆ ಎಂದರು .

     

    ದೇವಾಲಯಕ್ಕೆ ಬಂದ ಭಕ್ತದಿಗಳಿಗೆ ಪೂಜೆ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು .

     

    ಪೂಜಾ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಕೃಷ್ಣಪ್ಪ ,ಅಧ್ಯಕ್ಷಕೆ. ಬಿ.ರಾಜಣ್ಣ, ಕಾರ್ಯಾಧ್ಯಕ್ಷ ಪಿ.ನಾಗರಾಜು, ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಿವಕುಮಾರ್ , ಮಾಜಿ ಖಜಾಂಚಿ ಈ. ನಾಗರಾಜು ನಿರ್ದೇಶಕರಾದ ಪಿ.ಹೆಚ್.ರಮೇಶ್ ,ಡಿ ವಿ.ಸುಂದರ್ ರಾಜ್ ,ಆರ್. ಆನಂದ್ ,ಹೆಚ್.ರಮೇಶ್ ,ಆರ್.ಮೂರ್ತಿ ,ರಾಜ್ ಕುಮಾರ್ ,ಜಿ. ಮಂಜುಳ ,ಬಿ.ಈಶ್ವರ್ ,ಜಿ.ರಂಗಸ್ವಾಮಿ ,ವಜ್ರಪ್ಪ ,ಬಿ.ಈಶ್ವರ್ ಸೇರಿದಂತೆ ಹಲವರು ಹಾಜರಿದ್ದರು .

  • ವಿಜಯದಶಮಿ ವಿಶೇಷ :ಗುರು ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ

    ದೊಡ್ಡಬಳ್ಳಾಪುರ : ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮದ ಶ್ರೀ ಗುರು ಶನೇಶ್ವರ ದೇವಾಲಯದಲ್ಲಿ ಆಯುಧಪೂಜೆ ಹಾಗು ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಕಳೆದ ಸುಮಾರು 40 ವರ್ಷಗಳಿಂದ ದಿ. ಲಿಂಗಪ್ಪ ಹಾಗೂ ಶ್ರೀಮತಿ ಲಕ್ಷ್ಮಮ್ಮ ನವರ ಕುಟುಂಬಸ್ಥರು ಗುರು ಶನೇಶ್ವರ ದೇವರಿಗೆ ಪೂಜಾ ಹಾಗೂ ಸೇವಾ ಕಾರ್ಯಗಳನ್ನು ನೆಡೆಸಿಕೊಂಡು ಬರುತ್ತಿದ್ದು ಪ್ರಸ್ತುತ ಸೇವಾಕಾರ್ಯಗಳನ್ನು ಎಲ್.ಮೈಲಾರಪ್ಪ ನೇತೃತ್ವದಲ್ಲಿ ನೆಡೆಸಲಾಗುತ್ತಿದೆ .

    ದಸರಾ ವಿಶೇಷವಾಗಿ ದೇವರಿಗೆ ವಿವಿಧ ಪುಷ್ಪಾಗಳ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸಿ ದೇವಾಲಯಕ್ಕೆ ಬಂದ ಭಕ್ತದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು .

    ದೇವಾಲಯದ ಪ್ರಧಾನ ಅರ್ಚಕರಾದ ಮೈಲಾರಪ್ಪ ಮಾತನಾಡಿ ಹಲವಾರು ವರ್ಷಗಳಿಂದ ಸೇವೆ ನಿರಂತರವಾಗಿ ನೆಡೆಯುತ್ತಿದ್ದು , ದಸರಾ ಸಮಯದಲ್ಲಿ ದೇವಾಲಯಕ್ಕೆ ಸ್ಥಳೀಯ ಭಕ್ತದಿಗಳಷ್ಟೇ ಅಲ್ಲದೆ ಜಿಲ್ಲೆ ಹಾಗೂ ರಾಜ್ಯದ ಹಲವು ಭಾಗಗಳಿಂದಲೂ ಬರುವುದು ವಿಶೇಷವಾಗಿದೆ ಎಂದರು .

    ಸ್ಥಳೀಯ ಮುಖಂಡ ಮಲ್ಲೇಶ್ ಮಾತನಾಡಿ ಸೇವಾಕಾರ್ಯವೂ ಸುಮಾರು 40ವರ್ಷಗಳಿಂದ ಸತತವಾಗಿ ನೆಡೆಯುತ್ತಿದ್ದು ಅತ್ಯಂತ ಶ್ರದ್ದಾಭಕ್ತಿಗಳಿಂದ ದಸರಾ ಉತ್ಸವ ಆಚರಿಸಲಾಗುತ್ತದೆ . ಪ್ರತಿ ಸೋಮವಾರ ಹಾಗೂ ಶನಿವಾರ ದೇವಾಲಯದಲ್ಲಿ ಸ್ವಾಮಿಯವರಿಗೆ ವಿಶೇಷ ಪೂಜೆ ನಡೆಯುತ್ತದೆ .ನೂರಾರು ಭಕ್ತದಿಗಳು ಉತ್ಸವದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು .

    ದರ್ಗಾಜೋಗಿಹಳ್ಳಿ ಗ್ರಾಮಪಂಚಾಯತಿ ಸದಸ್ಯ ಜಿ .ರಂಗಸ್ವಾಮಿ ಮಾತನಾಡಿ ಶ್ರೀ ಶನೈಶ್ವರ ಸ್ವಾಮಿಯ ಸೇವಾ ಕಾರ್ಯಗಳನ್ನು ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೆ ಕಾಲಕಾಲಕ್ಕೆ ಮೈಲಾರಪ್ಪ ಹಾಗೂ ಮಲ್ಲೇಶ್ ಕುಟುಂಬದವರು ನೆರೆವೇರಿಸಿಕೊಂಡು ಬರುತ್ತಿದ್ದಾರೆ ದೈವಕಾರ್ಯ ಸದಾ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು .

  • ಶತಮಾನೋತ್ಸವ ಸಂಭ್ರಮ : ₹100 ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

    ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶತಮಾನೋತ್ಸದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ₹100 ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆಮುದ್ರಿಸಲಾಗಿದೆ. ಇದು ಬಹಳ ಹೆಮ್ಮೆ ಮತ್ತು ಐತಿಹಾಸಿಕ ಮಹತ್ವವನ್ನು ಸೂಚಿಸುತ್ತದೆ’ ಎಂದು ಹೇಳಿದ್ದಾರೆ.

     

    ನಾಣ್ಯದ ವಿಶೇಷತೆ ಏನು…??? ಒಂದಿಷ್ಟು ಮಾಹಿತಿ

     

    ₹100 ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವನ್ನು ಮತ್ತು ಇನ್ನೊಂದು ಬದಿಯಲ್ಲಿ ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಆಕೆಯ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುವ ಚಿತ್ರ ಮುದ್ರಿಸಲಾಗಿದೆ. ಅದರೊಂದಿಗೆ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ವರ್ಷ ಎಂದು ಬರೆಯಲಾಗಿದೆ.ನಾಣ್ಯದ ಮೇಲೆ ಆರ್‌ಎಸ್‌ಎಸ್ ಧೈಯ ವಾಕ್ಯವನ್ನು ಸಹ ಮುದ್ರಿಸಲಾಗಿದ್ದು, ‘ಎಲ್ಲವೂ ರಾಷ್ಟ್ರಕ್ಕೆ ಸಮರ್ಪಿತವಾಗಿದೆ. ಎಲ್ಲವೂ ರಾಷ್ಟ್ರದ್ದು, ಯಾವುದೂ ನನ್ನದಲ್ಲ..’ ಎಂಬುದು ಇದರ ಅರ್ಥ.

     

  • Best Practices im Bereich von Blackjack Online in Deutschland und Europa mit Schwerpunkt auf nachhaltigem und verantwortungsvollem Spielen

     

    Die Popularität von Online-Blackjack nimmt in Deutschland und Europa stetig zu. Während viele Spieler Spaß und spannende Unterhaltung beim Blackjack finden, ist es wichtig, dass sie auch verantwortungsvoll spielen. In diesem Artikel werden die besten Praktiken im Bereich von Blackjack Online diskutiert, insbesondere mit Blick auf nachhaltiges und verantwortungsvolles Spielen.

    Online-Glücksspiel bietet eine Vielzahl von Vorteilen, darunter Bequemlichkeit, verschiedene Spielvarianten und die Möglichkeit, von überall aus zu spielen. Allerdings birgt es auch Risiken, insbesondere für gefährdeten Personen wie Minderjährige und Spielsüchtige. Daher ist es wichtig, dass Spieler verantwortungsbewusst spielen und Maßnahmen ergreifen, um sicherzustellen, dass ihr Spielen kontrolliert und nachhaltig ist.

    Im Folgenden sind einige bewährte Praktiken aufgeführt, die Spieler beim Online-Blackjack befolgen können, um ein gesundes Spielverhalten zu fördern:

    1. Setzen Sie sich ein Limit für Ihre Spielzeit und Ihr Budget. Es ist wichtig, dass Spieler vor dem Spielen ein Budget festlegen und sich daran halten. Spieler sollten auch eine maximale Spielzeit pro Sitzung festlegen, um sicherzustellen, dass sie nicht zu lange spielen und sich ermüden.

    2. Behalten Sie Ihre Gewinne und Verluste im Auge. Spieler sollten regelmäßig überprüfen, wie viel sie gewonnen oder verloren haben. Wenn sie feststellen, dass sie mehr verlieren als gewinnen, ist es Zeit, eine Pause einzulegen und ihr Spielverhalten zu überdenken.

    3. Spielen Sie nur bei lizenzierten und regulierten Online-Casinos. Spieler sollten nur bei seriösen Online-Casinos spielen, die viperwin eine Lizenz von einer anerkannten Glücksspielbehörde haben. Auf diese Weise können sie sicher sein, dass ihre persönlichen und finanziellen Daten geschützt sind und dass die Spiele fair und transparent sind.

    4. Nehmen Sie sich regelmäßige Pausen. Es ist wichtig, dass Spieler regelmäßig Pausen einlegen, um sich zu erholen, sich zu entspannen und ihre Gedanken zu klären. Dies hilft ihnen, ein gesundes Gleichgewicht zwischen Spielen und anderen Aktivitäten zu finden.

    5. Suchen Sie Hilfe, wenn Sie merken, dass Sie ein Problem mit Spielsucht haben. Spielsucht ist eine ernste Erkrankung, die professionelle Hilfe erfordert. Spieler, die Anzeichen von Spielsucht bemerken, sollten sich an Beratungsstellen oder Selbsthilfegruppen wenden, um Unterstützung zu erhalten.

    Es ist wichtig, dass Spieler sich dieser bewährten Praktiken bewusst sind und sie in ihr Spielverhalten integrieren. Auf diese Weise können sie sicherstellen, dass ihr Online-Blackjack-Spiel nachhaltig und verantwortungsvoll bleibt.

    Insgesamt ist Online-Blackjack eine unterhaltsame und aufregende Aktivität, die jedoch auch Risiken birgt. Durch die Einhaltung bewährter Praktiken und die Förderung eines verantwortungsvollen Spielverhaltens können Spieler sicherstellen, dass ihr Spiel kontrolliert und nachhaltig ist. Letztendlich liegt es an jedem Einzelnen, sicherzustellen, dass sie ihre Spielgewohnheiten im Auge behalten und sicherstellen, dass sie Spaß haben, ohne dabei die Kontrolle zu verlieren.