Blog

  • ಶಿವಕಾರ್ತಿಕೇಯನ್ ನಟನೆಯ ಮದರಾಸಿ ಟ್ರೇಲರ್ ರಿಲೀಸ್..ಮಾಸ್ ಲುಕ್ ನಲ್ಲಿ ಅಬ್ಬರಿಸಿದ ಅಮರನ್ ಹೀರೋ

    ಅಮರನ್ ಸೂಪರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮದರಾಸಿ. ಎ ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಆಕ್ಷನ್ ಪ್ಯಾಕ್ಡ್ ಟ್ರೇಲರ್ ನಲ್ಲಿ ಶಿವಕಾರ್ತಿಕೇಯನ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಉದ್ದಕ್ಕೂ ಬಂದೂಕು ಮತ್ತು ಸ್ಫೋಟ ಸದ್ದೇ ಜೋರಾಗಿದೆ. ಕನ್ನಡತಿ ರುಕ್ಮಿಣಿ ವಸಂತ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಸಾಥ್ ಕೊಟ್ಟಿದ್ದಾರೆ.

     

    ಪ್ರೀತಿ ಜೊತೆ ದ್ವೇಷ, ಪ್ರತೀಕಾರದ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಕನ್ನಡದಲ್ಲಿಯೂ ಟ್ರೇಲರ್ ಬಿಡುಗಡೆಯಾಗಿದೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ತಾರಾಬಳಗದಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.

     

    ಶ್ರೀ ಲಕ್ಷ್ಮೀ ಮೂವೀಸ್ ನಿರ್ಮಾಣದ ಮದರಾಸಿ ಸಿನಿಮಾಗೆ ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್, ಸುದೀಪ್ ಎಲಾಮನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದ್ದು. ಸೆಪ್ಟೆಂಬರ್ 5ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.

    Ad

  • “ನಾನು ಮತ್ತು ಗುಂಡ 2”: ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ

    ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ನಟಿಸಿದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದ ‘ನಾನು ಮತ್ತು ಗುಂಡ’ ಈಗಾಗಲೇ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ನಿಂತಿದೆ.

    Ad

    ಈಗ ಅದರ ಮುಂದುವರೆದ ಭಾಗವಾದ ‘ನಾನು ಮತ್ತು ಗುಂಡ-2’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 5ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಡಾ.ವಿ.ನಾಗೇಂದ್ರಪ್ರಸಾದ್ ಶಿವನ ಮೇಲೆ ರಚಿಸಿರುವ ಹಾಗೂ ವಿಜಯಪ್ರಕಾಶ್ ದನಿಯಾಗಿರುವ ‘ಓಂ ಶಿವಾಯ, ನಮೋ ಶಿವಾಯ’ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು.

    Ad

    ನಾನು ಮತ್ತು ಗುಂಡ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ಅದರ ಮುಂದುವರಿದ ಭಾಗಕ್ಕೆ ರಘುಹಾಸನ್ ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ನಾಯಕ ನಾಯಕಿಯಾಗ ನಟಿಸಿದ್ದಾರೆ.

     

    ಬಹಳ ದಿನಗಳ ನಂತರ ಆರ್.ಪಿ.ಪಟ್ನಾಯಕ್ ಸಂಗೀತ ಅವರ ಸಂಗೀತದಲ್ಲಿ ಹಾಡಿರುವುದು ಖುಷಿಯಾಗಿದೆ, ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿ ಎಂದು ಗಾಯಕ ವಿಜಯ ಪ್ರಕಾಶ್ ವಿಡಿಯೋ ಮೂಲಕ ಶುಭ ಹಾರೈಸಿದರು.

     

    ನಂತರ ವೇದಿಕೆಯಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡುತ್ತ ರಘುಹಾಸನ್ ಈ ಹಾಡಿನ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು, ಕಥೆ ಹೇಳಿದ ಹಾಗಿರಬಾರದು, ಆದರೆ ಲೈನ್ಸ್ ಕಥೆ ಹೇಳುವಂತಿರಬೇಕು, ಮನಸಿಗೆ ಇಳಿಯುವಂಥ ಕಂಟೆಂಟ್ ಈ ಹಾಡಲ್ಲಿದೆ, ಇದು ಪಕ್ಕಾ ಚಿತ್ರಗೀತೆ, ಸಿನಿಮಾದಲ್ಲಿ ನೋಡಿದಾಗ ತುಂಬಾ ಇಂಪ್ಯಾಕ್ಟ್ ಆಗುತ್ತೆ ಟ್ರೈಲರ್‌ನಲ್ಲಿ ಎಲ್ಲಾ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು,

     

    ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಘುಹಾಸನ್, ಮಾತನಾಡುತ್ತ ನಮ್ಮ ಚಿತ್ರ 2022ರಲ್ಲಿ ಪ್ರಾರಂಭವಾಗಿತ್ತು, ಇದೀಗ ಬಿಡುಗಡೆಯಾಗುತ್ತಿದೆ, ಸಂಗೀತ ನಿರ್ದೇಶನ ಪಟ್ನಾಯಕ್ ಅವರು ಈ ಹಾಡಿನ ಟ್ಯೂನ್ ಕೊಟ್ಟಾಗ ತಕ್ಷಣ ನೆನಪಾಗಿದ್ದೇ ನಾಗೇಂದ್ರ ಪ್ರಸಾದ್, ಲಿರಿಕ್ ಇಷ್ಟಪಟ್ಟು ವಿಜಯ ಪ್ರಕಾಶ್ ಸೊಗಸಾಗಿ ಹಾಡಿಕೊಟ್ಟರು, ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ ‘ಯು/ಎ’ ಕೊಟ್ಟಿದೆ, ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ. ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿ 6 ಹಾಡುಗಳನ್ನು ಆರ್.ಪಿ. ಪಟ್ನಾಯಕ್ ಅವರು ಕಂಪೋಜ್ ಮಾಡಿಕೊಟ್ಟಿದ್ದಾರೆ. ತನ್ವಿಕ್ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಿದರು.

     

    ಉಳಿದಂತೆ ನಾಯಕ ರಾಕೇಶ್ ಅಡಿಗ, ನಾಯಕಿ ರಚನಾ ಇಂದರ್, ಛಾಯಾಗ್ರಾಹಕ ತನ್ವಿಕ್, ಬಾಲನಟ ಜೀವನ್ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.ಈ ಚಿತ್ರದಲ್ಲಿ ಡಾಗ್ ಸಿಂಬನ ಮಗ ನಟಿಸಿದ್ದಾನೆ. ಸಿಂಬ ನಾಲ್ಕು ದಿನವಷ್ಟೇ ಶೂಟಿಂಗ್‌ನಲ್ಲಿ ಭಾವಹಿಸಿ ಮೃತನಾಗಿದ್ದ. ನಂತರ ಅವನ ಮಗ ಸಿಂಬ ನಟಿಸಿದ್ದಾನೆ. ಶಂಕರನ ಮಗ ಹಾಗೂ ನಾಯಿಯ ಪಾತ್ರದ ಮೂಲಕ ಎರಡನೇ ಭಾಗದ ಚಿತ್ರಕಥೆ ಮುಂದುವರೆಯಲಿದೆ. ಅಲ್ಲದೆ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಈ ಚಿತ್ರದಲ್ಲಿ ಅಭಿನಯಿಸಿದೆ.

    Ad

    ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ರಘು ಹಾಸನ್ ಅವರೇ ನರ್ಮಿಸಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದ್ದು,ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.

     

    Ad

  • ಲಯನ್ಸ್‌ ಕ್ಲಬ್‌ನಿಂದ ಪರಿಸರಸ್ನೇಹಿ ಗಣೇಶೋತ್ಸವ ಅಭಿಯಾನ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆಯಿಂದ ಜೇಡಿಮಣ್ಣಿನ ಬಣ್ಣರಹಿತ 108 ಗೌರಿ, 108 ಗಣೇಶ ವಿಗ್ರಹಗಳ ಉಚಿತ ವಿತರಣೆ

    ದೊಡ್ಡಬಳ್ಳಾಪುರ: ಈ ಬಾರಿಯ ಸ್ವರ್ಣಗೌರಿ ವ್ರತ ಮತ್ತು ಗಣೇಶ ಚತುರ್ಥಿಯನ್ನು ಪರಿಸರಸ್ನೇಹಿಯಾಗಿ ಆಚರಿಸುವ ಅಭಿಯಾನಕ್ಕೆ ಇಲ್ಲಿನ ಲಯನ್ಸ್‌ ಕ್ಲಬ್ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ನೇತೃತ್ವದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

    ಅಭಿಯಾನದ ಭಾಗವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಬಣ್ಣರಹಿತ 108 ಗೌರಿ ಹಾಗೂ 108 ಗಣೇಶ ವಿಗ್ರಹಗಳನ್ನು ವಿಜಯಲಕ್ಷ್ಮಿ ಎಂಟರ್‌ ಪ್ರೈಸಸ್‌ ಸಹಯೋಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.

    ಈ ವೇಳೆ ಮಾತನಾಡಿದ ಲಯನ್ಸ್‌ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌, ಧಾರ್ಮಿಕ ಆಚರಣೆಗಳು ಪರಿಸರಸ್ನೇಹಿಯಾಗಿದ್ದಾಗ ಹೆಚ್ಚಿ ಅರ್ಥಪೂರ್ಣವಾಗುತ್ತವೆ. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ಬಣ್ಣರಹಿತ ಮಣ್ಣಿನ ಗೌರಿ-ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಅಭಿಯಾನವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ.ಆರ್.ರವಿಕಿರಣ್ ಮಾತನಾಡಿ, ಲಯನ್ಸ್‌ ಕ್ಲಬ್‌ ಪರಿಸರಸ್ನೇಹಿ ಚಿಂತನೆಗಳನ್ನು ಬಿತ್ತುವ ಮಹತ್ವದ ಕೆಲಸವನ್ನು ಮಾಡುತ್ತಿದೆ. ರಾಸಾಯನಿಕಯುಕ್ತ ಬಣ್ಣಗಳಿಂದ ಜಲಮೂಲಗಳಿಗೆ ಹಾನಿಯಾಗುತ್ತದೆ. ಅಲ್ಲದೆ ಪಿಒಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಹಬ್ಬವನ್ನು ಪರಿಸರಕ್ಕೆ ಪೂರಕವಾಗಿ ಆಚರಿಸುವುದು ಎಲ್ಲರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಜನರಿಗೆ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.

    ಲಯನ್ಸ್‌ ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಕ್ಲಬ್‌ ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಸಹಕಾರ್ಯದರ್ಶಿ ಮುಕೇಶ್‌ ಎನ್.ಆರ್, ನಿರ್ದೇಶಕರಾದ ಕೆ.ವಿ.ಪ್ರಸನ್ನಕುಮಾರ್, ಕೆ.ಆರ್.ಮಂಜುಳಾ, ಮಂಜುನಾಥ್, ಕಾವ್ಯ, ಆರ್ಯಭಟ ಲಯನ್ಸ್‌ ಸಂಸ್ಥೆ ಅಧ್ಯಕ್ಷ ಮನೋಹರ್, ಮನಸ್ವಿ, ಮೇಧ, ಚಾರ್ವಿ, ಪೃಷಿತ, ಅಕ್ಷಯ್‌ ಸೇರಿದಂತೆ ಅಕ್ಷಯ ಲಿಯೋ ಕ್ಲಬ್, ಏಕಲವ್ಯ ಲಿಯೋ ಕ್ಲಬ್, ಆರ್ಯಭಟ ಲಿಯೋ ಲಯನ್ಸ್‌ ಕ್ಲಬ್‌ ಸದಸ್ಯರು ಉಪಸ್ಥಿತರಿದ್ದರು.

     

    Ad

    Ad

    Ad

  • ಕೌಶಲ್ಯಾಭಿವೃದ್ದಿ ತರಬೇತಿಗೆ ಅರ್ಜಿ ಆಹ್ವಾನ

    ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಅರ್ಜಿ ಆಹ್ವಾನಿಸಲಾಗಿದೆ.

     

    ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ (FCI) ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (IHM) ಬೆಂಗಳೂರು ರವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

     

    ತರಬೇತಿ ಹಂತದಲ್ಲಿ ಒದಗಿಸುವ ಸೌಲಭ್ಯಗಳು :

    ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಕೆಲಸ ಕಾತರಿಯಾಗಿರುವುದು.

    ಮಹೆಯಾನ ಅಭ್ಯರ್ಥಿಗಳಿಗೆ ತರಬೇತಿ ಪಡೆಯುವ ವೇಳೆ ರೂ.2000/- ಗಳು ತರಬೇತಿ ಭತ್ಯೆ ನೀಡಲಾಗುವುದು.

    ತರಬೇತಿಗೆ ಹಾಜರಾಗುವವರಿಗೆ ವಸತಿ, ಊಟ ಹಾಗೂ ಸಮವಸ್ತ್ರ ನೀಡಲಾಗುವುದು.

    ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಕೆಲಸದ ನೈಜ ಅನುಭವ ಸಹ ನೀಡಲಾಗುವುದು.

    IHM,ಬೆಂಗಳೂರು ಹಾಗೂ FCI ಮೈಸೂರು ಸಂಸ್ಥೆಗಳು ಪ್ರತಿಷ್ಠಿತ ಆತಿಥ್ಯ ಕ್ಷೇತ್ರದಲ್ಲಿ ತರಬೇತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳಿಂದ ತರಬೇತಿ ನೀಡಿ ಪ್ರಮಾಣ ಪತ್ರ ನೀಡುವುದರಿಂದ ರಾಜ್ಯದೊಳಗೆ ಅಲ್ಲದೇ ದೇಶದ ಯಾವುದೇ ಭಾಗದ ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗುವುದು.

     

    Food and Beverage Service Steward ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 4 ತಿಂಗಳ ತರಬೇತಿಯಿದ್ದು, ಹತ್ತನೇ ತರಗತಿ ಉತ್ತೀರ್ಣವಾಗಿರಬೇಕು, 20 ರಿಂದ 45 ರ ವಯಸ್ಸಿನವರಾಗಿರಬೇಕು.

     

    ಕೊಠಡಿ ಪರಿಚಾರಕ (Room Attendant) ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 4 ತಿಂಗಳ ತರಬೇತಿಯಿದ್ದು, ಐದನೇ ತರಗತಿ ಉತ್ತೀರ್ಣರಾಗಿರಬೇಕು, 20 ರಿಂದ 45 ರ ವಯಸ್ಸಿನವರಾಗಿರಬೇಕು.

     

    ಮುಂಭಾಗದ ಕಛೇರಿಯ ಸಹಾಯಕ (Front Office Associate) ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 4 ತಿಂಗಳ ತರಬೇತಿಯಿದ್ದು, ದ್ವಿತೀಯ ಪಿಯುಸಿ ಪಾಸಾಗಿರಬೇಕು, 20 ರಿಂದ 45 ರ ವಯಸ್ಸಿನವರಾಗಿರಬೇಕು.

     

    ಬಹು ಪಾಕಪದ್ಧತಿ ಅಡುಗೆ (Multi Cuisine Cook) ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 5 ತಿಂಗಳ ತರಬೇತಿಯಿದ್ದು, 8ನೇ ತರಗತಿ ಉತ್ತೀರ್ಣವಾಗಿರಬೇಕು, 20 ರಿಂದ 45 ರ ವಯಸ್ಸಿನವರಾಗಿರಬೇಕು.

     

    ತರಬೇತಿ ಪಡೆಯಲು ಆಸಕ್ತಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 10 ರಂದು ಸಂಜೆ 5:30 ರೊಳಗೆ ಕಚೇರಿಯ ಸಮಯದಲ್ಲಿ ಸಲ್ಲಿಸಬೇಕು.

     

    ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಕೊಠಡಿ ಸಂಖ್ಯೆ:09 ನೆಲ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂರವಾಣಿ ಸಂಖ್ಯೆ:080-22040633 ಇವರನ್ನು ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    Ad

    Ad

    Ad

     

  • ದೊಡ್ಡಬಳ್ಳಾಪುರದಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ ತೆರದಿದ್ದು, ಇದು ದಿನದ 24/7 ಕಾರ್ಯನಿರ್ವಹಿಸಲಿದೆ.

     

     

    ಒತ್ತಡ ಮತ್ತು ಹಿಂಸೆಯಿಂದ ಬಾಧಿತಾರದ ಮಹಿಳೆಯರು ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆ 181 ಕ್ಕೆ ಕರೆ ಮಾಡುವ ಮೂಲಕ ಸಖಿ ಒನ್ ಸ್ಟಾಪ್ ಸೆಂಟರ್ ನ ಸೇವೆ ಪಡೆಯಬಹುದಾಗಿದೆ.

     

    ಸಖಿ ಒನ್ ಸ್ಟಾಪ್ ಸೆಂಟರ್ ಕೇಂದ್ರದಲ್ಲಿ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಕಾನೂನು ಸಲಹೆ ಹಾಗೂ ತಾತ್ಕಾಲಿಕ ವಸತಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    Ad

    Ad

     

  • ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳು ಇವೆ : ಡಾ.ಎಲ್ ಹನುಮಂತಯ್ಯ

    ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಹಿರಿಯ ಸಾಹಿತಿಗಳು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ ಎಲ್ ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು.

     

    ಇಂದು ನಗರದ ಪ್ರವಾಸಿ ಮಂದಿರದಲ್ಲಿ ರಾಜಘಟ್ಟದಲ್ಲಿ ನಡೆಯಲಿರುವ ಬೌದ್ಧ ನೆಲೆಯ ಉತ್ಖನನದ ಬಗ್ಗೆ ಬುದ್ಧನ ಅನುಯಾಯಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಂಶೋಧಕರ ಸಭೆಯಲ್ಲಿ ಅವರು ಮಾತನಾಡಿದರು ರಾಜಘಟ್ಟದಲ್ಲಿ ಉತ್ಖನನ ನಡೆದ ಇಪ್ಪತ್ತು ವರ್ಷಗಳ ನಂತರ ನಾವು ಮತ್ತೆ ಎಚ್ಚೆತ್ತಿದ್ದೇವೆ. ಉತ್ಖನನದ ರೂವಾರಿಗಳಾದ ಮೈಸೂರಿನ ಕೃಷ್ಣಮೂರ್ತಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಮಳೆಗಾಲವಾದ್ದರಿಂದ ಉತ್ಖನನ ಕಾರ್ಯ ಸ್ವಲ್ಪ ಸ್ಥಗಿತವಾಗಿದೆ ಎಂದರು.

    Ad

    ಎರಡೂವರೆ ಸಾವಿರ ವರ್ಷಗಳ ಹಿಂದಿನ ಬೌದ್ಧ ನೆಲೆ ಇದಾಗಿದ್ದು, ಅಲ್ಲಿನ ಅವಶೇಷಗಳನ್ನು ಪರಿಶೀಲಿಸಿದರೆ ಗ್ರೀಕ್ ನಾಗರೀಕತೆಯನ್ನು ನೆನಪಿಸುತ್ತದೆ. ಬೌದ್ಧ ಧಮ್ಮ ಉಚ್ರಾಯ ಸ್ಥಿತಿಯಲ್ಲಿ ಇದ್ದಾಗಿನ ಕುರುಹುಗಳನ್ನು ಕಾಣಬಹುದಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ ಎಂದರು.

    Ad

    ಉತ್ಖನನ ಮುಂದುರೆಸಲು ಬೌದ್ಧ ಅವಶೇಷಗಳು ಎಷ್ಟು ಎಕರೆ ಪ್ರದೇಶದಲ್ಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿಬೇಕು. ಒಂದು ಅಂದಾಜಿನ ಪ್ರಕಾರ ಸುಮಾರು ನೂರು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರಬಹುದು ಎಂಬ ಮಾಹಿತಿ ಸಿಗುತ್ತಿದೆ. ಅದನ್ನು ತಜ್ಙರು ನಿರ್ಧಾರ ಮಾಡುತ್ತಾರೆ ಈ ಕಾರ್ಯದಲ್ಲಿ ಮಹಾಬೋಧಿ ಸೊಸೈಟಿ ಜೋಡಿಸಬೇಕು ಎಂದರು.

    Ad

    ಈ ಹಿಂದೆ 2002 ರಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ವಸ್ತುಗಳನ್ನು ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಇಡಲಾಗಿದೆ, ಅದನ್ನು ತಂದು ವಸ್ತು ಸಂಗ್ರಹಾಲಯ ಮಾಡಿದರೆ, ಈ ಹಿಂದೆ ರೈತರು ಬೂದಿ ಹಳ್ಳದಿಂದ ಬೂದಿ ತೆಗೆಯುವಾಗ ಸಿಕ್ಕ ಕೆಲವು ವಸ್ತುಗಳನ್ನು ಸುತ್ತಮುತ್ತಲಿನ ಗ್ರಾಮಗಳ ರೈತರು ಅವರ ಮನೆಗಳಲ್ಲಿ ಇಟ್ಟುಕೊಂಡಿರುವ ಮಾಹಿತಿ ಇದೆ. ಸರ್ಕಾರ ಮ್ಯೂಸಿಯಂ ಮಾಡಿದರೆ ರೈತರು ತಮ್ಮ ಬಳಿ ಇರುವ ವಸ್ತುಗಳನ್ನು ತಂದು ಇಡುತ್ತಾರೆ. ಅವರ ಮನವೊಲಿಸುವ ಕೆಲಸವನ್ನು ನಾವು ಮಾಡಬೇಕು. ಉತ್ಖನನ ಮಾಡಿದ ಸ್ಥಳವನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಬೇಕು ಮತ್ತು ಉತ್ಖನನವನ್ನು ಪೂರ್ಣಗೊಳಿಸಬೇಕು. ಹಾಗೆ ಮಾಡಿದರೆ ರಾಜಘಟ್ಟ ಭಾರತದ ಭೂಪಟದಲ್ಲಿ ಬಹಳ ಮುಖ್ಯವಾದ ಕೇಂದ್ರ ಸ್ಥಾನವಾಗುತ್ತದೆ ಎಂದರು.

     

    ಇನ್ನೂ ಉತ್ಖನನದ ಉದ್ದೇಶದಿಂದ ರೈತರನ್ನು ಬೀದಿಪಾಲು ಮಾಡಲು ಸಾಧ್ಯವಿಲ್ಲ, ಸರ್ಕಾರ ಕಾರ್ಖಾನೆಯ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಂಡಂತೆ ಬೌದ್ಧ ನೆಲೆಗೆ ಭೂಮಿಯನ್ನು ಖರೀದಿ ಮಾಡಬೇಕು. ಸರ್ಕಾರ ರೈತರಿಗೆ ಪರ್ಯಾಯ ಭೂಮಿ ನೀಡಿ ಸೂಕ್ತ ಪರಿಹಾರ ನೀಡಬೇಕು. ರಾಜಘಟ್ಟದ ಸುತ್ತ ಸರ್ಕಾರಿ ಭೂಮಿ ಇದ್ದರೆ ಅದನ್ನ ರಕ್ಷಣೆ ಮಾಡಬೇಕು. ಇದು ಪವಿತ್ರ ಬೌದ್ಧನೆಲೆಯಾಗಿರುವ ಕಾರಣಕ್ಕೆ ಅದನ್ನು ಉಳಿಸಕೊಂಡು ರಾಜಘಟ್ಟವನ್ನು ಒಂದು ಅಂತರಾಷ್ಟ್ರೀಯ ಬುದ್ಧಿಸ್ಟ್ ಸೆಂಟರ್ ಮಾಡಬೇಕಿದೆ.

     

    ಹಿರಿಯ ಸಾಹಿತಿ ಪ್ರೊ.ಹೆಚ್ ಗೋವಿಂದಯ್ಯ ಮಾತನಾಡಿ ರಾಜಘಟ್ಟ ನಾಲ್ಕು, ಐದನೇ ಶತಮಾನದಲ್ಲೇ ಅಂತರಾಷ್ಟ್ರೀಯ ಬೌದ್ಧ ಕೇಂದ್ರವಾಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಬೌದ್ಧ ಧಮ್ಮ ಪ್ರಚಾರಕ್ಕೆ ಬಿಕ್ಕುಗಳು ರಾಜಘಟ್ಟದಿಂದ ಹೋಗುತ್ತಿದ್ದರು. ಮಂಟೇಸ್ವಾಮಿ ಅಲ್ಲಮನ ಪ್ರತಿರೂಪವಾಗಿದ್ದು, ಬುದ್ಧನ ಮುಂದುವರೆದ ರೂಪವಾಗಿದೆ. ಹಾಗಾಗಿ ಗತಿಸಿರುವ ಇತಿಹಾಸವನ್ನು ಮರುಕಳಿಸುವ ಕೆಲಸವನ್ನ ನಾವು ಮಾಡಬೇಕಿದೆ. ಆದ್ದರಿಂದ ಇಂತಹ ಘನ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ. ರಾಜಘಟ್ಟ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಹಾಗೂ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು.

    ಬುದ್ಧನ ವಿಷಯದಲ್ಲಿ ಯಾವ ಗುಂಪುಗಾರಿಕೆ, ಜಾತಿ, ಧರ್ಮದ ತಾರತಮ್ಯ ಮಾಡಬಾರದು.ನಮ್ಮೆಲ್ಲರ ಗುರಿ ಬುದ್ಧ ಮಾತ್ರ ಆಗಿರಬೇಕು, ಬುದ್ಧನ ಮೂಲಕ ಜಾತಿ ಧರ್ಮದ ಎಲ್ಲೆಗಳನ್ನು ಮೀರಿ ಮನುಷ್ಯರಾಗೋಣ ಎಂದು ಕರೆಕೊಟ್ಟರು.ಮುಂದಿನ ಆರು ತಿಂಗಳಲ್ಲಿ ಮ್ಯೂಸಿಯಂ ಮಾಡಬೇಕು, ಒಂದು ವರ್ಷದಲ್ಲಿ ರಾಜಘಟ್ಟ ವಿಶ್ವ ಮಟ್ಟದಲ್ಲಿ ರಾರಾಜಿಸಬೇಕು. ಈ ಕೆಲಸ ಸಾಧಿಸಲು ಸದ್ಯಕ್ಕೆ 20-30 ಎಕರೆ ಸರ್ಕಾರಿ ಭೂಮಿ ಬೇಕು ಎಂದು ಅಭಿಪ್ರಾಯಪಟ್ಟರು.

     

    ಸಂಶೋಧಕ ಡಾ.ವೆಂಕಟೇಶ್ ಮಾತನಾಡಿ, ರಾಜಘಟ್ಟದ ಸುತ್ತಮುತ್ತ ಸುಮಾರು ನೂರಕ್ಕೂ ಹೆಚ್ಚು ವೀರಗಲ್ಲುಗಳಿವೆ. ಆ ಪ್ರದೇಶವನ್ನು ನರೇಂದ್ರ ಭೂಪಾಲ ಎಂಬ ರಾಜ ಆಳ್ವಿಕೆ ಮಾಡಿದ್ದ ಎಂಬುದು ವೀರಗಲ್ಲುಗಳಲ್ಲಿ ಸಿಗುತ್ತದೆ. ಬೌದ್ಧ ರಾಜರು ದೆಹಲಿಯ ರಾಜಘಾಟ್ ನಿಂದ ವಲಸೆ ಬಂದು ಅಲ್ಲಿ ನೆಲೆಸಿದ್ದರು ಆದ್ದರಿಂದ ಈ ಗ್ರಾಮಕ್ಕೆ ರಾಜಘಟ್ಟ ಎಂಬ ಹೆಸರು ಬಂದಿದೆ‌.

     

    ರಾಜಘಟ್ಟದಲ್ಲಿ ಕಡ್ಡಾಯವಾಗಿ ಮ್ಯೂಸಿಯಂ ಮಾಡಬೇಕು. ರಾಜ್ಯದ ಹಲವು ಸಂಶೋಧಕರ ಬಳಿ ಸಂಶೋಧನೆಯಲ್ಲಿ ದೊರೆತಿರುವ ಅದ್ಭುತವಾದ ವಸ್ತುಗಳು ಇದಾವೆ. ಗಾರೆ ಅಚ್ಚು ಶಿಲ್ಪಗಳಿವೆ. ಇವುಗಳನ್ನು ಒಂದೆಡೆ ಸಂಗ್ರಹಿಸಿ ಮ್ಯೂಸಿಯಂ ನಲ್ಲಿ ಇಡಬೇಕು ಹಾಗೂ ಈ ಸಂಗ್ರಹಾಲಯಕ್ಕೆ ಬೌದ್ಧವನ ಎಂದು ಹೆಸರಿಡಬೇಕು. ದೊಡ್ಡಬಳ್ಳಾಪುರ ಬೌದ್ಧ ಕೇಂದ್ರ ಎಂದು ತಿಳಿಸುವ ಕೆಲಸ ಮಾಡಬೇಕು‌. ಈ ಕಾರ್ಯಕ್ಕೆ ರಾಜಘಟ್ಟ ಸೇರಿದಂತೆ ಸುತ್ತಲಿನ‌ ಜನರ ಸಹಕಾರ ಬೇಕು ಎಂದರು.

     

    ಪತ್ರಕರ್ತ ಕೆ.ವೆಂಕಟೇಶ್ ಮಾತನಾಡಿ ವಿವಿಧತೆಯಲ್ಲಿ ಏಕತೆ ಎಂಬುದು ಇಲ್ಲ. ಜರ್ಮನಿ, ಶ್ರೀಲಂಕಾದಲ್ಲಿ ಜನ ತಮ್ಮ ಬೌದ್ಧಿಕ ದಿವಾಳಿತನವನ್ನು ಹೊರಗಟ್ಟಿ ಹೊಸ ಜೀವನಕ್ಕೆ ಕಾಲಿಟ್ಟ ಉದಾಹರಣೆ ನಮ್ಮ ಕಣ್ಣಮುಂದಿದೆ. ಅದನ್ನು ಮಾದರಿಯಾಗಿ ತೆಗೆದುಕೊಂಡು ರಾಜಘಟ್ಟದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಕೆಲಸಕ್ಕೆ ಕೈ ಹಾಕಬೇಕು. ಮೊದಲು ಸ್ಥಳೀಯರನ್ನು ಮನವೊಲಿಸಬೇಕು. ನಾವು ಮಾಡಬೇಕಾದ ಮೊದಲ ಕೆಲಸ ಸುತ್ತಲಿನ ಹಳ್ಳಿಯ ಜನರನ್ನು ತಮ್ಮ ವಿಸ್ಮೃತಿಯಿಂದ ಹೊರಕ್ಕೆ ತರುವುದಾಗಬೇಕು ಎಂದರು.

     

     

    ರಾಜಘಟ್ಟ ಬೌದ್ಧ ಸ್ಮಾರಕ ಸಮಿತಿಗೆ ಸಂಚಾಲಕರಾಗಿ ಕೆ.ಎಚ್.ರಾಜೇಂದ್ರ, ಡಾ.ಪ್ರಕಾಶ್ ಮಂಟೇದ ಮತ್ತು ರಾಜುಸಣ್ಣಕ್ಕಿ ಹಾಗೂ ಸಂಶೋಧಕ ಡಾ. ವೆಂಕಟೇಶ್ ಇವರುಗಳನ್ನು ಸಂಚಾಲಕರಾಗಿ‌ ಸಮಿತಿಗೆ ನೇಮಕ ಮಾಡಲಾಯಿತು.

     

    ಸಭೆಯಲ್ಲಿ ನ್ಯಾನಲೋಕ ಬಂತೇಜಿ, ಗೋಪಾಲಕೃಷ್ಣ, ಮಾ.ಮುನಿರಾಜು ಕಂಟನಕುಂಟೆ ಕೃಷ್ಣಮೂರ್ತಿ,ಸಾಹಿತಿ ಚಿನ್ನು ಪ್ರಕಾಶ್, ರಾಜಗೋಪಾಲ್, ಗೂಳ್ಯಹನುಮಣ್ಣ, ಮಾಳವ ನಾರಾಯಣ, ಡಾ.ಪ್ರಕಾಶ್ ಮಂಟೇದ, ಡಾ.ಸತೀಶ್, ರಮೇಶ್‌ ಸಂಕ್ರಾಂತಿ, ಕೆ.ಎಚ್.ರಾಜೇಂದ್ರ, ವಕೀಲರಾದ ಸಿದ್ದಾರ್ಥ, ಅಶೋಕ, ಕರೀಂಸೊಣ್ಣೆನಹಳ್ಳಿ ಮುನಿಯಪ್ಪ, ರಾಜಘಟ್ಟ ಹೋಬಳೇಶ್ ಮುಂತಾದವರು ಉಪಸ್ಥಿತರಿದ್ದರು.

     

  • ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ‌. ಮುನಿಯಪ್ಪ

    ದೇವನಹಳ್ಳಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಮೂವರು ವಿಧ್ಯಾರ್ಥಿಗಳು ಗಾಯಗೊಂಡಿದ್ದರು.

    Ad

    Ad

    ಮೂವರು ವಿಧ್ಯಾರ್ಥಿಗಳಲ್ಲಿ ಭುವನ್ ಎಂಬ ವಿದ್ಯಾರ್ಥಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ದರ್ಶನ್ ಎಸ್ ಎಂ. ಎಂಬ ವಿದ್ಯಾರ್ಥಿ ಹಾಸ್ಮಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

    Ad

    ನಂತರ ವೈದ್ಯರೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡಲು ತಿಳಿಸಿದರು.

    Ad

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು,ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜನಪ್ಪ ಪಿ.ವೈಧ್ಯಾದಿಕಾರಿ ದೀಪಕ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಾಶೆಟ್ಟಿಹಳ್ಳಿ : ಗಣೇಶ ವಿಸರ್ಜನೆಗೆ ಕೃತಕ ಹೊಂಡ ನಿರ್ಮಾಣ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯ ಆಡಳಿತ ಅಧಿಕಾರಿ ನರಸಿಂಹಮೂರ್ತಿ ಮನವಿ

    ದೊಡ್ಡಬಳ್ಳಾಪುರ : ಪ್ರತಿ ಬಾರಿಯೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಕೆರೆ ಕುಂಟೆಗಳ ಬಳಿ ಹೋಗಿ ಅಪಾಯಕ್ಕೆ ಸಿಲುಕುವುದು ಸರ್ವೇಸಾಮಾನ್ಯವಾಗಿದೆ ಇದನ್ನು ತಪ್ಪಿಸಲು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ವಿಶೇಷ ಕ್ರಮಕ್ಕೆ ಮುಂದಾಗಿದ್ದು. ಸಾರ್ವಜನಿಕರ ಅನುಕೂಲಕ್ಕಾಗಿ ಕೃತಕ ಗಣಪತಿ ವಿಸರ್ಜನಾ ಹೊಂಡ ನಿರ್ಮಿಸಲಾಗಿದೆ.

    ಬಾಶೆಟ್ಟಿಹಳ್ಳಿ ಕೆರೆ ಪಕ್ಕದಲ್ಲಿ 11 ಗ್ರಾಮಗಳ ಗಣಪತಿ ವಿಸರ್ಜನೆಗಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಕೃತಕ ಹೋಂಡ ನಿರ್ಮಿಸಿದ್ದು, ಈ ವಿಸರ್ಜನಾ ಪ್ರಕ್ರಿಯೆಗೆ ಸತತ 9 ದಿನಗಳ ಕಾಲ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗಿದೆ.

    ಈ ಕುರಿತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಆಡಳಿತಾಧಿಕಾರಿ ನರಸಿಂಹಮೂರ್ತಿ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಕೃತಕ ಹೊಂಡ ನಿರ್ಮಾಣ ಮಾಡಲಾಗಿದೆ. ಮನೆಗಳಲ್ಲಿ ಕೂರಿಸುವ ಸಣ್ಣಪುಟ್ಟ ಗಣಪತಿಗಳ ವಿಸರ್ಜನೆಗೆ ಅನುಕೂಲ ಮಾಡುವ ಮಾಡುವ ನಿಟ್ಟಿನಲ್ಲಿ ಮನೆ ಮುಂಭಾಗಕ್ಕೆ ನಮ್ಮ ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರ್ ತೆರಳಲಿದ್ದು, ಟ್ರ್ಯಾಕ್ಟರ್ ನಲ್ಲಿ ಮೊದಲೇ ಇರಿಸಲಾದ ನೀರು ತುಂಬಿದ ಡ್ರಮ್ ಗಳಲ್ಲಿ ನಮ್ಮ ಸಿಬ್ಬಂದಿ ಗಣಪತಿ ವಿಸರ್ಜನೆ ಮಾಡದಿದ್ದಾರೆ , ಅಲ್ಲದೆ ಮೆರವಣಿಗೆ ಮೂಲಕ ತರಲಾಗುವ ಗಣಪತಿಗಳನ್ನು ಕೆರೆಯ ಪಕ್ಕದಲ್ಲಿ ಕೃತಕವಾಗಿ ನಿರ್ಮಾಣ ಮಾಡಲಾಗಿರುವ ಹೊಂಡದಲ್ಲಿ ನಮ್ಮ ಸಿಬ್ಬಂದಿಗಳೇ ವಿಸರ್ಜನೆ ಮಾಡಲಿದ್ದಾರೆ ಎಂದರು . ಸಾರ್ವಜನಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಿದ್ದು ಗಣಪತಿ ವಿಸರ್ಜನೆಗೆ ಬರುವ ಎಲ್ಲ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಸಾರ್ವಜನಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    Ad

     

    Ad

    ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ಪ್ರಭಾರ ಆರೋಗ್ಯಧಿಕಾರಿ ಉಮಾಶಂಕರ್ ಮಾತನಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 11 ಗ್ರಾಮಗಳಲ್ಲಿ ಈಗಾಗಲೇ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಅನುಮತಿ ನೀಡಲಾಗಿರುವ ಎಲ್ಲಾ ಗಣಪತಿಗಳನ್ನು ನಿಯಮಾನುಸಾರ ನಮ್ಮಲ್ಲಿ ವಿಸರ್ಜನೆ ಮಾಡಬೇಕೆಂದು ತಿಳಿಸಲಾಗಿದೆ. ಈ ಹೊಂಡದ ಬಳಿ ಸದಾ ನಮ್ಮ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದು , ಗಣಪತಿ ವಿಸರ್ಜನೆಗೆ ಬರುವ ಸಾರ್ವಜನಿಕರಿಗೆ ಸಹಾಯ ಮಾಡಲಿದ್ದಾರೆ ಅಲ್ಲದೆ ಗಣಪತಿ ವಿಸರ್ಜನೆಯನ್ನು ನಮ್ಮ ಸಿಬ್ಬಂದಿಗಳೇ ಮಾಡಲಿದ್ದಾರೆ , ಗಣಪತಿ ವಿಸರ್ಜನಾ ಕಾರ್ಯಕ್ಕಾಗಿ ನುರಿತ ಈಜುಗಾರರನ್ನು ಗುರುತಿಸಿ ಹೊಂಡದ ಬಳಿ ನೇಮಿಸಲಾಗಿದೆ , ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    Ad

    Ad

  • ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ವಿಶೇಷ ದಿನಗಳನ್ನು ಆಚರಿಸಿ : ಸಂತೃಪ್ತಿಯ ಸಂಭ್ರಮಾಚರಣೆ ಮಾಡಿ – ವರುಣ್

    ದೊಡ್ಡಬಳ್ಳಾಪುರ : 1981ನೇ ದಿನದ ನಿರಂತರ ಅನ್ನದಾಸೋಹ ಸಮಿತಿಯ ದಾನಿಗಳಾಗಿ ಬೀಡಿಕೆರೆ ವರುಣ್ ರವರು ಸಹಾಯ ಹಸ್ತ ನೀಡಿದ್ದು , ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಈ ಕುರಿತು ಮಾತನಾಡುತ್ತಾ ನಮ್ಮ ಜೀವನದ ವಿಶೇಷ ದಿನಗಳಲ್ಲಿ ನಾವು ಹಲವಾರು ಉತ್ತಮ ಕಾರ್ಯಗಳನ್ನು ಮಾಡಬೇಕೆಂದುಕೊಳ್ಳುತ್ತೇವೆ ಆದರೆ ಅದು ಕೇವಲ ಯೋಚನೆ ಎಷ್ಟು ಸೀಮಿತವಾಗುತ್ತದೆ ಆದರೆ ವಿಶೇಷ ದಿನಗಳನ್ನು ಮಲ್ಲೇಶ್ ನೇತೃತ್ವದ ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಆಚರಣೆ ಮಾಡುವುದರಿಂದ ನೂರಾರು ಹಸಿದ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಉತ್ತಮ ಸೇವೆಯಲ್ಲಿ ತೊಡಗುವುದು ಮನಸ್ಸಿಗೆ ಸಂತೃಪ್ತಿ ಕೊಡುತ್ತದೆ.

    Ad

     

    Ad

    ಪ್ರತಿವರ್ಷವೂ ನನ್ನ ಹುಟ್ಟು ಹಬ್ಬವನ್ನು ಮಲ್ಲೇಶ್ ಮತ್ತು ತಂಡದೊಟ್ಟಿಗೆ ಆಚರಣೆ ಮಾಡಿಕೊಳ್ಳುವುದು ನನಗೆ ಅರ್ಥಪೂರ್ಣವೆನಿಸುತ್ತದೆ, ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ವಿಶೇಷ ದಿನಗಳನ್ನು ಇಂತಹ ವೇದಿಕೆಗಳಲ್ಲಿ ಆಚರಣೆ ಮಾಡಿಕೊಳ್ಳುವುದು ಉತ್ತಮ, ಕಾರಣ ನಮ್ಮ ವಿಶೇಷ ಆಚರಣೆ ಹತ್ತಾರು ಕುಟುಂಬಗಳಿಗೆ,ನೂರಾರು ಹಸಿದ ಹೊಟ್ಟೆಗಳಿಗೆ ಹಸಿವು ನೀಗಿಸುವ ಮಾರ್ಗವಾಗಿದೆ ಸರ್ವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು.

    Ad

    Ad

    ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷ ನಾಗರಾಜ್,ಹರೀಶ್ ರೆಡ್ಡಿ,ಮುನಿರಾಜು,ವಿಜಯ್ ಸೇರಿದಂತೆ ಹಲವರು ಹಾಜರಿದ್ದರು.

  • ಕಲಾವಿದ ಸೂರ್ಯಕುಮಾರ್ ಹಲವರಿಗೆ ಮಾರ್ಗದರ್ಶಕರಾಗಿ, ಗುರುಗಳಾಗಿ ತಮ್ಮ ಬದುಕಿನಲ್ಲಿ ಸಾಕಷ್ಟು ಜನ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟ ಮಹಾನ್‌ ಮಾನವತಾವಾದಿ – ಚಂದ್ರಶೇಖರ್.ಡಿ.ಉಪ್ಪಾರ್

    ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಹೃದಯಾ ಘಾತ ದಿಂದ ಸಾವನ್ನಪ್ಪಿದ ಹೆಸರಾಂತ ಕಲಾವಿದ ಸೂರ್ಯಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಕಕ್ಷ ಗುರುರಾಜ್ ಕೃಷ್ಣಪ್ಪ ಭಾಗವಹಿಸಿ ಹಿರಿಯ ಕಲಾವಿದರು ಸಂಘಟನೆಯ ಮಾರ್ಗದರ್ಶಕರು ಆದ ಸೂರ್ಯಕುಮಾರ್ ರವರ ಸಾವು ನಮ್ಮ ಸಂಘಟನೆ ತುಂಬಲಾರದ ನಷ್ಟ, ಸಂಘಟನೆ ಪ್ರಾರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಹಿರಿಯರು ಮತ್ತು ಕಲಾವಿದರ ಶ್ರೇಯೋಭಿಲಾಷಿಗಳು ನಮ್ಮಿಂದ ಭೌತಿಕವಾಗಿ ದೂರವಾದರೂ ಕಲಾವಿದರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೇಯೋದ್ದೇಶಗಳು ಸದಾ ಜೀವಂತ ಅವರ ದೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

     

    ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್.ಡಿ.ಉಪ್ಪಾರ್ ಮಾತನಾಡುತ್ತಾ ನಗರ ಮತ್ತು ತಾಲ್ಲೂಕಿನಲ್ಲಿ ದಶಕಗಳಿಂದ ನಾಮಪಲಕ ಗಳನ್ನು ಬರೆಯುತ್ತಾ,ತನ್ನ ಹೆಸರಿನ “ಎಸ್ ಕೆ ಆರ್ಟ್ಸ್,” ಎಂಬ ಅಂಗಡಿ ತೆರೆದು ವೃತ್ತಿಯನ್ನೇ ನಂಬಿ ಬಂದ ಕಾಯಕ ಯೋಗಿ ಇವರು, ಬಸವಣ್ಣ ನವರು ಜಗತ್ತಿಗೆ ಸಾರಿದಂತಹ “ಕಾಯವೇ ಕೈಲಾಸ’ ಎಂಬ ತತ್ವಸಿದ್ದಾಂತವನ್ನೇ ನಂಬಿ ಸಾರ್ಥಕತೆ ಕಂಡ ಕುಂಚ ಕಲಾವಿದ.ತಾನು ನಂಬಿದ ಕುಂಚ ಮತ್ತು ಬಣ್ಣ ದಿಂದಲ್ಲೇ ಬದುಕು ಕಟ್ಟಿಕೊಂಡು ತಾನೂ ಬೆಳೆಯತ್ತಾ ಹತ್ತಾರು ಮಂದಿ ಯುವ ಕಲಾವಿದರನ್ನೂ ಬೆಳೆಸುತ್ತಾ ಕಲಾಸೇವೆ ಮಾಡಿದ ಅವರು,ಹಲವರಿಗೆ ಮಾರ್ಗದರ್ಶಕರಾಗಿ, ಗುರುಗಳಾಗಿ ತಮ್ಮ ಬದುಕಿನಲ್ಲಿ ಸಾಕಷ್ಟು ಜನ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟ ಮಹಾನ್‌ ಮಾನವತಾವಾದಿ,ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡ ಕಲಾವಿದ ಸೂರ್ಯ ಕುಮಾರ್ ರವರು ಇತ್ತೀಚೆಗಷ್ಟೆ ಸ್ವರ್ಗಸ್ಥರಾಗಿದ್ದು ದೊಡ್ಡಬಳ್ಳಾಪುರದ ಜನತೆಗೆ ನಂಬಲಾಗದ ಸತ್ಯವಾದರೂ ನಂಬಲೇ ಬೇಕಿದೆ.ತನ್ನ ಜೀವಿತಾವಧಿಯಲ್ಲಿ , ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಧೃತಿಗೆಡದೆ ಸಾರ್ಥಕ ಜೀವನ ನಡೆಸಿಸಿದಂತಹ ಕಲಾವಿದರು ಎಂದರೆ ತಪ್ಪಾಗಲಾರದು.ಎಷ್ಟೇ ಕಷ್ಟ ನಷ್ಟಗಳು ಬಂದರು ತನ್ನ ಬಳಿ ಕೆಲಸ ಮಾಡುತಿದ್ದ ಮತ್ತು ಕೆಲಸ ಕಲಿಯುತಿದ್ದ ಕಲಾವಿದರನ್ನೂ ತನ್ನ ಇಬ್ಬರು ಮಕ್ಕಳಂತೆ ಸಲುಹಿ, ಬೆಳೆಸಿದ ಸಾಹುಕಾರ ಈ ಸೂರ್ಯಕುಮಾರ್ ಕರ್ನಾಟಕ ನಾಮಫಲಕ ಕಲಾವಿದರ ಸಂಘದ ದೊಡ್ಡ ಬಳ್ಳಾಪುರ ತಾಲ್ಲೂಕಿನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆದಲ್ಲಿಸಿದ್ದರು.ತಮ್ಮ ಸೇವೆ ಯಿಂದ ಇಡೀ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಸರು ಪಡೆದಿದ್ದರು.

    ಒಟ್ಟಾರೆ ಒಬ್ಬಕಲಾವಿದರಾಗಿ ವೃತ್ತಿಯೊಂದಿಗೆ ಸಾಮಾಜಿಕ ಕಾಲಜಿಯನ್ನು ಹೊಂದಿದ್ದ ಗುರುಗಳು ನಮ್ಮಿಂದ ದೂರ ವಾದರೂ ಅವರ ಕನಸುಗಳು ನಮ್ಮೊಂದಿಗಿವೆ ಅವುಗಳನ್ನು ಖಂಡಿತವಾಗಿ ನೆರವೇರಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳುತ್ತಾ ಅವರಿಗೆ ನನ್ನ ನುಡಿನಮಗಳನ್ನು ಅರ್ಪಿಸಿತ್ತೇನೆ ಎಂದರು.

    Ad

    ಕಾರ್ಯಕ್ರಮದಲ್ಲಿ ಕಾರ್ನಾಟಕ ರಾಜ್ಯ ನಾಮ ಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷರಾದ ಗುರುರಾಜ್ ಕೃಷ್ಣಪ್ಪ ,ಕಾರ್ಯಾಧ್ಯಕ್ಷ ರಂಗನಾಥ ಬಾಬು,ಉಪಾಧ್ಯಕ್ಷ ಚಂದ್ರಶೇಖರ್.ಡಿ. ಉಪ್ಪಾರ್,ನಿರ್ದೇಶಕರಾದ ಕೆ.ಜೆ.ವೆಂಕಟೇಶ್, ನಾಗಪ್ರದೀಪ್,ವಿನೋದ್ ಆಚಾರ್ಯ, ತಾಲ್ಲೂಕು ನೂತನ ಅಧ್ಯಕ್ಷ ಎಸ್.ಕೆ.ಸತೀಶ್, ಕಾರ್ಯಾಧ್ಯಕ್ಷ ವರದರಾಜ್,ಪ್ರದಾನ ಕಾರ್ಯದರ್ಶಿ ಉಮಾಶಂಕರ್,ಕಾರ್ಯದರ್ಶಿ ಸುಬ್ರಮಣಿ,ಖಂಜಾಂಚಿ ನಿಥಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.