Blog

  • ಘಾಟಿ ಸುಬ್ರಮಣ್ಯ ಬ್ರಹ್ಮ ರಥೋತ್ಸವ : ರಥೋತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಶ್ರೀ ಕ್ಷೇತ್ರ ಎಸ್.ಎಸ್ ಘಾಟಿಯಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಆಹಾರ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಚಾಲನೆ ನೀಡಿದರು.

     

    ದೇವಾಲಯಕ್ಕೆ ಸಚಿವರು ತಮ್ಮ ಪುತ್ರ ಕೇಂದ್ರ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿ ನರಸಿಂಹರಾಜು, ಶೃತಿ ಶ್ರೀ, ಪುತ್ರಿ ಡಾ. ಜ್ಞಾನೇಶ್ವರಿ, ಡಾ. ಜಯಕುಮಾರ್, ಸೇರಿದಂತೆ ಕುಟುಂಬಸ್ಥರೊಂದಿಗೆ ಭೇಟಿ ನೀಡಿ, ಘಾಟಿ ಸುಬ್ರಮಣ್ಯ ದೇವರ ದರ್ಶನ ಪಡೆದು ಎಲ್ಲರಿಗೂ ಶುಭ ಹಾರೈಸಿದರು .

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಎಸ್ಪಿ ಸಿಕೆ ಬಾಬಾ, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು, ಮುಜರಾಯಿ ಇಲಾಖೆ ತಹಸೀಲ್ದಾರ್, ಸ್ಥಳೀಯ ಮುಖಂಡರು ಹಾಗೂ ವಕೀಲರು ಆದ ಆರ್ ವಿ ಮಹೇಶ್ (ಮನು), ಜಿಲ್ಲಾ‌ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಿದ್ದರು.

  • 1745ನೇ ದಿನದ ಅನ್ನದಾಸೋಹ ಕಾರ್ಯಕ್ರಮ :ಆಹಾರ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ

    ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಹಸಿದವರಿಗೆ ಆಹಾರ ವಿತರಿಸುವ ಮೂಲಕ ಶಿವಕುಮಾರ್ ಮತ್ತು ಕುಟುಂಬಸ್ಥರು ಪುಟಾಣಿ ಸುಶ್ವತ್ ರವರ 3ನೇ ವರ್ಷದ ಹುಟ್ಟುಹಬ್ಬದವನ್ನು ಆಚರಿಸಿದರು.

    1745 ದಿನಗಳಿಂದಲೂ ನಿರಂತರ ದಾನಿಗಳ ಸಹಾಯದೊಂದಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಮಲ್ಲೇಶ್ ಮತ್ತು ತಂಡ ನಡೆಸಿಕೊಂಡು ಬರುತ್ತಿದ್ದು, ತಾಲ್ಲೂಕಿನ ಮಲ್ಲತಳ್ಳಿಯ ಶಿವಕುಮಾರ್ ಮತ್ತು ಕುಟುಂಬಸ್ಥರು ಇಂದಿನ( ಜ. 04) ರಂದು ನಿರಾಶ್ರಿತ ಕಡು ಬಡವರಿಗೆ ಆಹಾರ ವಿತರಣೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಸಂಭ್ರಮದ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ಈ ಕುರಿತು ದಾನಿಗಳಾದ ಶಿವಕುಮಾರ್ ಮಾತನಾಡಿ ಕೊರೋನ ಸಂದರ್ಭದಲ್ಲಿ ಹಸಿದವರಿಗೆ ಆಹಾರ ನೀಡುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಮಲ್ಲೇಶ್ ಮತ್ತು ತಂಡ ನಿರಂತರ ಸೇವೆಯಲ್ಲಿ ತೊಡಗಿದೆ, ಈ ಬಗ್ಗೆ ಮಾಹಿತಿ ದೊರೆತ ಕ್ಷಣದಿಂದ ನಾವು ನಮ್ಮ ವಿಶೇಷಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುತ್ತಾ ಬಂದಿದ್ದೇವೆ , ಮುಂದೆಯೂ ಸಹ ನಮ್ಮ ಕುಟುಂಬದ ವಿಶೇಷ ಹಾಗೂ ಸಂಭ್ರಮದ ದಿನಗಳನ್ನು ಸಮಿತಿ ಒಟ್ಟಿಗೆ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲು ಬಯಸುತ್ತೇವೆ ಎಂದರು.

    ದಾನಿಗಳಾದ ಮಂಜುನಾಥ್ ಮಾತನಾಡಿ ಇದೇ ಮೊದಲ ಬಾರಿಗೆ ಅನ್ನ ದಾಸೋಹ ಸಮಿತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ತುಂಬ ಸಂತೋಷವಾಗಿದೆ ಹಸಿದವರಿಗೆ ನಿರಂತರವಾಗಿ ಆಹಾರ ನೀಡುತ್ತಿರುವ ಮಲ್ಲೇಶ್ ಅವರಿಗೆ ಶುಭವಾಗಲಿ, ಇಂದು ನಮ್ಮ ಕುಟುಂಬದ ಕಾರ್ಯಕ್ರಮವನ್ನು ಮಲ್ಲೇಶ್ ಒಟ್ಟಿಗೆ ಆಚರಿಸುತ್ತಿರುವುದು ಸಂತಸ ತಂದಿದೆ, ದುಂದು ವೆಚ್ಚ ಮಾಡುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸುವ ಪ್ರತಿಯೊಬ್ಬರು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಅನ್ನದಾಸೋಹ ಮಾಡುವ ಮುಖಾಂತರ ಆಚರಿಸುವುದು ಸೂಕ್ತ ಎಂದರು.

     

    ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರವಾಗಿ ಕಳೆದ ಮೂರು ವರ್ಷಗಳಿಂದಲೂ ನಮ್ಮೊಟ್ಟಿಗೆ ಬೆಂಬಲವಾಗಿ ನಿಂತಿರುವ ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಅನ್ನದಾಸೋಹ ಸಮಿತಿ ಆಭಾರಿಯಾಗಿದೆ , ತಮ್ಮ ವಿಶೇಷ ದಿನಗಳನ್ನು ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ, ಶಾಲಾ ಮಕ್ಕಳಿಗೆ ವಿಶೇಷ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಆಚರಣೆ ಮಾಡಿಕೊಳ್ಳುತ್ತಿರುವ ಶಿವಕುಮಾರ್ ಕುಟುಂಬಸ್ಥರಿಗೆ ಶುಭವಾಗಲಿ, ಮುಂದೆ ಅವರಿಂದ ಮತ್ತಷ್ಟು ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

     

    ಈ ಸಂದರ್ಭದಲ್ಲಿ ಲಕ್ಷ್ಮೀ ನರಸಮ್ಮ, ಮಂಜುನಾಥ್ , ಸಂಗೀತ, ಹರೀಶ್, ಶಿವಕುಮಾರ್, ಗಜೇಂದ್ರ, ಶೃತಿ, ಅಪೂರ್ವ, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

  • ಭಾರತ ಸೇವಾದಳ ಸಪ್ತಾಹ : ದೊಡ್ಡಬಳ್ಳಾಪುರದಲ್ಲಿ ಅರ್ಥಪೂರ್ಣ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ

    ದೊಡ್ಡಬಳ್ಳಾಪುರ : ಇಂದಿನ ಕಾರ್ಯಕ್ರಮ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಮುಖ್ಯ ಉದ್ದೇಶ ಹೊಂದಿದ್ದು, ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಯ ಮಕ್ಕಳು ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಭಾರತ ಸೇವಾದಳ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ಆರ್ ವಿ ಮಹೇಶ್ ತಿಳಿಸಿದರು

    ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸೇವಾದಳ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹೇಳಿರುವಂತೆ ಸಮಾಜದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಎಲ್ಲಾ ರಂಗಗಳಲ್ಲೂ ಉನ್ನತ ಮಟ್ಟದ ಸ್ಥಾನಗಳನ್ನು ಅಲಂಕರಿಸಿ ಉತ್ತಮ ಸಾಧನೆ ತೋರುವಂಥಗಲಿ ಎಂಬುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

     

    ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಭಾಗವಹಿಸಿ ರಾಷ್ಟ್ರೀಯ ಭಾವೈಕ್ಯತೆ ಕುರಿತು ಶಾಲಾ ಮಕ್ಕಳಿಗೆ ವಿಶೇಷ ಮಾಹಿತಿ ನೀಡಿದ ತಾಲ್ಲೂಕುದಂಡಧಿಕಾರಿಗಳಾದ ವಿದ್ಯಾವಿಭಾ ರಾಥೋಡ್ ರವರಿಗೆ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸಮಿತಿ ಸದಸ್ಯರ ಶ್ರಮ ಶ್ಲಾಘನಿಯ ಎಂದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಲಕ್ಷ್ಮೀಪತಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ 5 ಕಾರ್ಯಕ್ರಮಗಳನ್ನು ನಿರ್ವಹಿಸಲಾಗುವುದು, ಅಂತೆಯೇ ಇಂದು ತಾಲ್ಲೂಕು ಮಟ್ಟದಲ್ಲಿ ಭಾರತ ಸೇವಾದಳ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮವನ್ನು ತಾಲ್ಲೂಕು ಅಧ್ಯಕ್ಷರಾದ ಆರ್. ವಿ ಮಹೇಶ್ ಅವರ ನೇತೃತ್ವದಲ್ಲಿ ತಾಲ್ಲೂಕಿನ 13ಕ್ಕೂ ಅಧಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡುವ ಸಾರ್ವಜನಿಕರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಅರಿವು ಮೂಡಿಸುವಲ್ಲಿ ಉತ್ತಮ ಕಾರ್ಯಕ್ರಮ ರೂಪಿಸಿದ್ದು ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಸದಸ್ಯರಾದ ರವಿಕುಮಾರ್,ತಾಲ್ಲೂಕುದಂಡಧಿಕಾರಿ ವಿದ್ಯಾವಿಭಾ ರಾಥೋಡ್ , ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ದೊಡ್ಡಬಳ್ಳಾಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ದೊಡ್ಡಬಳ್ಳಾಪುರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮುರಳಿಧರ್, ನಗರಸಭಾ ಅಧ್ಯಕ್ಷರಾದ ಸುಮಿತ್ರ ಆನಂದ್, ವಕೀಲರಾದ ಆರ್ ವಿ ಶಿವಕುಮಾರ್ ಸೇರಿದಂತೆ ತಾಲ್ಲೂಕು ಸಮಿತಿಯ ಸರ್ವ ಪಧಾದಿಕಾರಿಗಳು ಉಪಸ್ಥಿತರಿದ್ದರು.

  • ಹಾಡೋನಹಳ್ಳಿ ಅಪ್ಪಯ್ಯಣ್ಣನವರ ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಂಸದ ಡಾ. ಕೆ.ಸುಧಾಕರ್

    ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡರಾದ ಶ್ರೀ ಹಾಡೋನಹಳ್ಳಿ ಅಪ್ಪಯ್ಯಣ್ಣನವರ ನಿವಾಸಕ್ಕೆ ಇಂದು ಸಂಸದ ಸುಧಾಕರ್ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು

     

    ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣನವರು ಬೆಂಗಳೂರು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಬಮುಲ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಹೀಗೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದರು.

     

    ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

  • ಹಿಂದಿನ ವರ್ಷಗಳ ಅನುಭವ ಮತ್ತು ಪಾಠಗಳಿಂದ ಕಲಿತು ಈ ವರ್ಷದ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳೋಣ: ಸಿ.ಎಂ ಸಿದ್ದರಾಮಯ್ಯ ಸಲಹೆ

    ಬೆಂಗಳೂರು ಜ1: ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ನಿಮ್ಮ ಸಹಕಾರ ಹೆಚ್ಚು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು IAS-IPS ಅಧಿಕಾರಿಗಳಿಗೆ ಕರೆ ನೀಡಿದರು.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿ ಮಾತನಾಡಿದರು.

     

    ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

     

    ಆಡಳಿತಾಂಗದಲ್ಲಿ IAS-IPS-IRS-IFS ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

     

    ಸಂವಿಧಾನ‌ ಜಾರಿ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಡಿದ ಮಾತುಗಳನ್ನು ಉಲ್ಲೇಖಿಸಿದ ಸಿಎಂ, ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ-ಆರ್ಥಿಕ‌ ಸ್ವಾತಂತ್ರ್ಯ ಒದಗಿಸಬೇಕು. ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ ಎಂದರು.

     

    ಭಾರತದ ಆರ್ಥಿಕತೆ ಕುಸಿತ ಕಂಡಿದ್ದಾಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದರು. ದೇಶದ ಆರ್ಥಿಕ‌ ಬೆಳವಣಿಗೆ ಆಗಿ ಇದರ ಲಾಭ ದೇಶದ ಜನರಿಗೆ ಲಭಿಸುವಂತೆ ಮಾಡಿದರು. ಸಂವಿಧಾನದ ನಿರ್ದೇಶಕ ತತ್ವಗಳಾದ ಸಮಾನತೆ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ದೇಶದ ಜನರ ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು. ಮಾಹಿತಿ ಹಕ್ಕು, ಆಹಾರದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಕಡ್ಡಾಯ ಮಾಡಿದರು. ಆ ಮೂಲಕ ಸಮಾನತೆಯೆಡೆಗೆ ದೇಶವನ್ನು ಮುನ್ನಡೆಸಿದರು ಎಂದು ವಿವರಿಸಿದರು.

     

    ಸಮಾನ ಅವಕಾಶಗಳು ಸಿಕ್ಕಾಗ ಸಮಾನತೆ ದಿಕ್ಕಿಗೆ ನಾವು ಸಾಗಬಹುದು ಎನ್ನುವ ಕಾರಣದಿಂದಲೇ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜನರ ಕೈಯಲ್ಲಿ ಕಾಸು ಇರಬೇಕು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಇದಕ್ಕೆ ತಕ್ಕಂತೆ ರಾಜ್ಯದ ಜನರ ಜೇಬಲ್ಲಿ ಹಣ ಇರುವ ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದೆವು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

     

    ಇಲ್ಲಿಯವರೆಗೂ 35 ಸಾವಿರ ಕೋಟಿ ರೂಪಾಯಿಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ. ಈಗಲಾದರೂ ನಂಜುಂಡಪ್ಪ ಅವರ ವರದಿಯಲ್ಲಿನ ಪ್ರಾದೇಶಿಕ ಅಸಮಾನತೆ ಕಡಿಮೆಯಾಗಿದೆಯಾ ಎನ್ನುವುದನ್ನು ಅಧ್ಯಯನ ನಡೆಸಿ ವರದಿ ನೀಡಿಲು ಗೋವಿಂದರಾವ್ ಅವರ ಸಮಿತಿ ರಚಿಸಲಾಗಿದೆ. ಏಕೆ ಉತ್ತರ ಕರ್ನಾಟಕದ ಅಸಮಾನತೆ ಕಡಿಮೆ ಆಗಿಲ್ಲ ಎನ್ನುವ ಬಗ್ಗೆಯೂ ಬೆಳಗಾವಿ ಅಧಿವೇಶನದಲ್ಲೂ ಚರ್ಚಿಸಿದ್ದೇವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನೀವೂ ಅಷ್ಟೆ ಗಂಭೀರವಾಗಿ ಪರಿಗಣಿಸಿ ಪ್ರಾದೇಶಿಕ ಅಸಮತೋಲನ ತೊಡೆದು ಹಾಕಲು ಶ್ರಮಿಸಬೇಕು ಎಂದರು.

     

    ಯುವ ಜನತೆ ನಮ್ಮ ಆಸ್ತಿ: ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲು IPS ಅಧಿಕಾರಿಗಳು ಸ್ವೀಕರಿಸಬೇಕು

     

    ಯುವ ಜನತೆ ನಮ್ಮ ಸಮಾಜದ ಆಸ್ತಿ. ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲನ್ನು IPS ಅಧಿಕಾರಿಗಳು ಸ್ವೀಕರಿಸಬೇಕು. ಡ್ರಗ್ಸ್ ಹಾವಳಿ, ಅಪರಾಧಿಕ ಜಗತ್ತಿನ‌ ಕಡೆಗೆ ಯುವ ಜನತೆ ಆಕರ್ಷಿತರಾಗದಂತೆ ಎಚ್ಚರ ವಹಿಸಿ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಆಗುತ್ತಿದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆ ಆಗದೆ ಯುವ ಜನರ ಭವಿಷ್ಯ ರೂಪಿಸಲು ಸಹಕಾರಿ ಆಗುವಂತೆ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

     

    ನೀವು ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ರಾಜ್ಯದಲ್ಲಿ ಅದ್ಭುತ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಕಾರ್ಯಕ್ಷಮತೆ ಬಳಕೆಯಾಗಲಿ ಎಂದರು.

     

    ಅಧಿಕಾರಿ ವರ್ಗಕ್ಕೆ ನಮ್ಮ ಸಲಹೆಯ ಅಗತ್ಯ ಇಲ್ಲ. ನೀವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು. ಭ್ರಷ್ಟಾಚಾರ ವ್ಯವಸ್ಥೆ ಕಡಿಮೆ ಆಗುವ ಬದಲಿಗೆ ಹೆಚ್ಚಾಗುತ್ತಿರುವುದು ದುರಂತ. ಆದ್ದರಿಂದ ನಾವೆಲ್ಲರೂ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ ಎಂದು ಕರೆ ನೀಡಿದರು.

     

    ನಮ್ಮ-ನಿಮ್ಮ ಉದ್ದೇಶ ಒಂದೇ. ಸಮಾಜದ ಪ್ರಗತಿ ಮತ್ತು ಆರೋಗ್ಯಕರ ಬದಲಾವಣೆ. ಇದಕ್ಕಾಗಿ ನಮ್ಮ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳೋಣ ಎಂದು ಕರೆ ನೀಡಿದರು.

     

    ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಸುಳ್ಳನ್ನು ಪದೇ ಪದೇ ಹರಡಿಸುತ್ತಿದ್ದಾರೆ. ಇದು ಸುಳ್ಳು ಎನ್ನುವುದು ನಿಮಗೇ ಗೊತ್ತಿದೆ. ಹಿಂದಿನ ಸರ್ಕಾರ ಬಜೆಟ್ ಒಪ್ಪಿಗೆ ಪಡೆಯದೆ ಯದ್ವಾ ತದ್ವಾ ಟೆಂಡರ್ ಕರೆದು ಹಾನಿ ಮಾಡಿತ್ತು. ಸುಮಾರು 39 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿ ಹೋಗಿದ್ದರು. ಜೊತೆಗೆ ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಮುಂದುವರೆದಿದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದೇವೆ. ಆದ್ದರಿಂದ ಇಲಾಖೆಗಳಲ್ಲಿರುವ ಹಣ ಹೆಚ್ಚು ಸೋರಿಕೆ ಆಗದಂತೆ ತಡೆಯುವ ಜವಾಬ್ದಾರಿ ಮತ್ತು ಕರ್ತವ್ಯ ನಿಮ್ಮ ಮೇಲಿದೆ ಎಂದರು.

     

    ಹಣ ಸಂಗ್ರಹಿಸುವ ಇಲಾಖೆಗಳು ಮತ್ತು ಹಣ ಖರ್ಚು ಮಾಡುವ ಇಲಾಖೆಗಳೆರಡೂ ಸಮತೂಕದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

    ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಸ್ಥಾನಗಳಿಗೆ ಚುನಾವಣೆ : ನೂತನ ಅಧ್ಯಕ್ಷರಾಗಿ ಆರ್ ಮುರುಳಿಧರ್ ಅವಿರೋಧ ಆಯ್ಕೆ

    ದೊಡ್ಡಬಳ್ಳಾಪುರ: ಕೃಷಿ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಸ್ಥಾನಗಳಿಗೆ ಚುನಾವಣೆ ನಡೆಯಿತು.ನೂತನ ಅಧ್ಯಕ್ಷ ಮುರುಳಿಧರ್.ಆರ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

     

     

    ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಅಧ್ಯಕ್ಷ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಆಯ್ಕೆಯಾದವರನ್ನು ಹೊರತುಪಡಿಸಿ ಬೇರೆಯವರು ತಮ್ಮ ನಾಮಪತ್ರಗಳನ್ನು ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕರು ಅವಿರೋಧ ಆಯ್ಕೆ ಪ್ರಕಟಿಸಿದ್ದಾರೆ.

     

     

    ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಅವಧಿ 5 ವರ್ಷಗಳಾಗಿದ್ದು, 2029-30ನೇ ಸಾಲಿನಲ್ಲಿ ಇವರ ಅವಧಿ ಅಂತ್ಯವಾಗಲಿದೆ .

     

     

    ಈ ಕುರಿತು ನೂತನ ಅಧ್ಯಕ್ಷ ಆರ್.ಮುರುಳಿಧರ್ ಮಾತನಾಡಿ ಅಧ್ಯಕ್ಷನಾಗಿ ಕೃಷಿಕ ಸಮಾಜಕ್ಕೆ  ಉತ್ತಮ ಕಟ್ಟಡ ನಿರ್ಮಾಣ ಮಾಡುವುದು ನನ್ನ ಮುಖ್ಯ ಉದ್ದೇಶ ವಾಗಿದೆ,ಈ ಕುರಿತು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಬಳಿ ಮನವಿ ಮಾಡಲಾಗುವುದು. ಅಂತೆಯೇ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

     

     

    ಉಪಾಧ್ಯಕ್ಷರಾದ ಅರಸೇಗೌಡ.ಕೆ.ಎಚ್ ಮಾತನಾಡಿ, ಹಿರಿಯರ ಮಾರ್ಗದರ್ಶನಂತೆ ನಾನು ಕೆಲಸ ಮಾಡುತ್ತೇನೆ, ಅವರ ಹೆಸರಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಕೆಲಸ ಮಾಡುವೆ, ಸ್ವತಃ ನಾನು ರೈತನಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ನನಗೆ ಇರುವುದರಿಂದ ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದರು.

     

     

    ಕಾಂಗ್ರೆಸ್ ಮುಖಂಡರಾದ ರಂಗಪ್ಪ ಮಾತನಾಡಿ, ಕೆಲವು ದುಷ್ಟ ಶಕ್ತಿಗಳು ಕೃಷಿ ಸಮಾಜಕ್ಕೆ ಚುನಾವಣೆಯಾಗದಂತೆ ತಡೆದಿದ್ದರು, ಈಗ ಎಲ್ಲ ಪಕ್ಷದವರನ್ನು ಹೊಂದಾಣಿಕೆ ಮಾಡಿಕೊಂಡು ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪರಸ್ಪರ ಹೊಂದಾಣಿಕೆ ಮೂಲಕ ಅಧಿಕಾರವನ್ನ ಹಂಚಿಕೆ ಮಾಡಲಾಗಿದ್ದು, ಮುಂದಿನ ಅವಧಿಯಲ್ಲೂ ಅಧಿಕಾರ ಹಂಚಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡುವ ಕೆಲಸ ಮಾಡುವುದಾಗಿ ತಿಳಿಸಿದರು.

     

     

    ಕಾಂಗ್ರೆಸ್ ಮುಖಂಡರಾದ ಆರ್.ವಿ.ಮಹೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು, ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಜಾರಿಗೆ ಬರಲಿದ್ದು, ಅರ್ಹ ರೈತರನ್ನು ಗುರಿತಿಸಿ ಯೋಜನೆಯ ಲಾಭ ಸಿಗುವ ಪ್ರಮಾಣಿಕ ಕೆಲಸ ಮಾಡುವುದ್ದಾಗಿ ಹೇಳಿದರು.

     

     

    ಅವಿರೋಧವಾಗಿ ಆಯ್ಕೆಯಾದ ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀನಿವಾಸ, ಎ.ರವೀಂದ್ರ, ಪಿ.ನಾಗರಾಜು, ಮಂಜುನಾಥ್, ಎಂ.ಗೋಪಾಲರೆಡ್ಡಿ, ಜಿ.ಆರ್.ಅಶೋಕ್, ಆರ್.ಕೃಷ್ಣಮೂರ್ತಿ,ಟಿ.ವಿ.ರವಿಕುಮಾರ್, ಆರ್.ಜಯರಾಮಯ್ಯ, ಕೆ.ನರಸಿಂಹಯ್ಯರವರನ್ನು ಅಭಿನಂದಿಸಲಾಯಿತು.

     

     

    ಈ ವೇಳೆ ಅಧ್ಯಕ್ಷ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಜಿಲ್ಲಾ ಪಂಚಾಯತಿ ಸದಸ್ಯ ಅರವಿಂದ್, ದೇವನಹಳ್ಳಿ ರವಿ ಕುಮಾರ್, ಕಾಂಗ್ರೆಸ್ ಮುಖಂಡ ರವಿ ಸಿದ್ದಪ್ಪ, ಭೂ ಮಂಜೂರಾತಿ ಸದಸ್ಯ ಶ್ರೀಧರ್.ಜಿ.ಕೆ ಗಂಗಸಂದ್ರ , ವಕೀಲರಾದ ಆರ್ ವಿ ಶಿವಕುಮಾರ್ ಸೇರಿದಂತೆ ತಾಲೂಕಿನ ಮುಖಂಡರು ಇದ್ದರು.

     

     

  • ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿವತಿಯಿಂದ 2025ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    ದೊಡ್ಡಬಳ್ಳಾಪುರ : ಪ್ರತಿವರ್ಷದ ಪರಂಪರೆಯಂತೆ ಈ ವರ್ಷವೂ ಕೂಡ ದಿನದ ಪ್ರಾಮುಖ್ಯತೆ ಹಾಗೂ ದಿನಾಂಕ ತಿಳಿಸುವ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಯುವ ಸಮಿತಿ ವತಿಯಿಂದ ಮಾಡಲಾಗಿದೆ ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ಅಧ್ಯಕ್ಷ ಚಂದ್ರುಶೆಟ್ಟಿ ತಿಳಿಸಿದರು

     

    ಗಾಣಿಗರ ಪೇಟೆಯ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸೇವಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಿತಿಯು ಹಲವು ವರ್ಷಗಳಿಂದ ನಿರಂತರವಾಗಿ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ಸಮುದಾಯಕ್ಕೆ ಶುಭಾಶಯ ಕೋರುವುದಷ್ಟೇ ಅಲ್ಲದೆ, ಸಮಿತಿಯ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ರವಾನಿಸುವ ಕೆಲಸ ಮಾಡುತ್ತಿದ್ದು , ಅಂತೆಯೇ ಈ ವರ್ಷವೂ ಕೂಡ ಯುವ ಸಮಿತಿ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇವೆ. ವರ್ಷದ ಶುಭಾರಂಭಕ್ಕೆ ಇದೊಂದು ಉತ್ತಮ ಕಾರ್ಯವೆಂದು ಭಾವಿಸಿದ್ದೇವೆ , 2025ನೇ ವರ್ಷವೂ ಸರ್ವರಿಗೂ ಶುಭವುಂಟುಮಾಡಲಿ ಎಂದು ಹಾರೈಸಿದರು

     

    ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರ ಮಧುಚಂದ್ರ, ಗೋಪಿ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ,ಕಾರ್ಯದರ್ಶಿ ಪ್ರಸನ್ನ ಕುಮಾರ್ , ಸಹ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಲಕ್ಷ್ಮಣ್,ಸಂಚಾಲಕರಾದ ಮಂಜುನಾಥ್ ,ವಿಶ್ವಾಸ್ ಶೆಟ್ಟಿ ಹಾಗೂ ಸಮುದಾಯದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

  • ಎಸ್ ಎಂ ಹರೀಶ್ ಗೌಡ ರವರ ನೇತೃತ್ವದಲ್ಲಿ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ : 2028ರಲ್ಲಿ ನೆಡೆಯುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ಹರೀಶ್ ಗೌಡ ಸ್ವಯಂ ಘೋಷಣೆ : ಚುನಾವಣೆ ಎದುರಿಸಲು ಸಿದ್ದರಾಗುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಸಂದೇಶ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಹಲವು ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ವಾರ್ಷಿಕ ಸೇವಾ ಸಾಧನೆಗಳನ್ನ ಒಳಗೊಂಡಂತ 2025ನೇ ನೂತನ ವರ್ಷದ ಕ್ಯಾಲೆಂಡರ್ ನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎಂ.ಹರೀಶ್ ಗೌಡ ಬಿಡುಗಡೆ ಮಾಡಿದರು.

    ಶ್ಯಾಕಲದೇವನಪುರದಲ್ಲಿ ತಮ್ಮ ಸ್ವಗೃಹದ ಸಮೀಪ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಲವು ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು ವೇದಿಕೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಮತ್ತು ತಾಲ್ಲೂಕು ಜೆಡಿಎಸ್ ಪಕ್ಷದ ಮುಖಂಡ ಎಚ್. ಅಪ್ಪಯ್ಯಾಣ್ಣ ರವರಿಗೆ ಸಂತಾಪ ಸೂಚಿಸಿ ಮೌನಾಚಾರಣೆ ಮಾಡಲಾಯಿತು.

     

    ವೇದಿಕೆಯಲ್ಲಿ ದಿ.ಎಚ್ ಅಪ್ಪಯಣ್ಣ ಅವರನ್ನು ನೆನೆದು ಕಣ್ಣೀರಿಟ್ಟ ಹರೀಶ್ ಗೌಡ 

    ಕಾರ್ಯಕ್ರಮದ ವೇದಿಕೆಯಲ್ಲಿ ತಾಲ್ಲೂಕಿನ ಜೆಡಿಎಸ್ ಮುಖಂಡ ಅಪ್ಪಯಣ್ಣ ಅವರನ್ನು ನೆನೆದು ಮಾತನಾಡುತ್ತಾ ನನ್ನನ್ನು ತಾಲೂಕಿನ ರಾಜಕೀಯಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅಪ್ಪಯಣ್ಣ ಅವರಿಗೆ ಸಲ್ಲುತ್ತದೆ , ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿದ್ದು ನನ್ನ ಬೆನ್ನೆಲುಬಾಗಿ ನಿಂತು ರಾಜಕೀಯವಾಗಿ ಸಮಸ್ಯೆಗಳು ಎದುರಾದಾಗ ನನ್ನೊಂದಿಗಿದ್ದು ಬುದ್ಧಿವಾದ ಹೇಳುತ್ತಿದ್ದ ಅಪ್ಪಯ್ಯಣ್ಣ ಅವರು ಇಂದು ನಮ್ಮೊಂದಿಗಿಲ್ಲ ಎಂದು ಭಾವುಕರಾದರು.

     

    ಅವರ ಕನಸು ತಾಲೂಕಿನಲ್ಲಿ ಜೆಡಿಎಸ್ ಅಧಿಕಾರ ಹಿಡಿಯಬೇಕೆಂಬುದು ಅವರ ಕನಸು, ಇಂದು ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಭಾವನಾತ್ಮಕವಾಗಿ ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ, 2028ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಮೂಲಕ ಅವರ ಕನಸು ನನಸು ಮಾಡಲಾಗುತ್ತದೆ ಎಂದರು.

    ವೇದಿಕೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಪ್ರತಿ ಮನೆಗೆ ನಾವು ಭೇಟಿಕೋಟ್ಟು ನಮ್ಮ ಸೇವಾ ಸಾಧನೆಗಳನ್ನು ಹೇಳಲು ಕಷ್ಟಸಾಧ್ಯ ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಾಧನೆಗಳನ್ನು ಪ್ರತಿ ಮನೆ ಮನಗಳಿಗೆ ತಲುಪಿಸುವ ಕಾರ್ಯವನ್ನು ಈ ಕ್ಯಾಲೆಂಡರ್ ಮೂಲಕ ಮಾಡುತ್ತಿದ್ದೇವೆ ಈ ಕಾರ್ಯಕ್ರಮವು ಅದ್ದೂರಿಯಾಗಿ ನೆಡೆಯಬೇಕಿತ್ತು ಆದರೆ ಕಾರಣಾಂತರಗಳಿಂದ ಸರಳ ರೀತಿಯಲ್ಲಿ ಮಾಡುತ್ತಿದ್ದೇವೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನೊಂದಿಗೆ ಕೈ ಜೋಡಿಸಿದ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

     

    ನಾನೇ ಅಭ್ಯರ್ಥಿ ಚುನಾವಣೆ ಎದುರಿಸಲು ಸಿದ್ದರಾಗಿ – ಹರೀಶ್ ಗೌಡ 

    ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ತಾಲ್ಲೂಕಿನಲ್ಲಿ ರಾಜಕೀಯ ಬದಲಾವಣೆಯ ಅವಶ್ಯಕತೆ ಇದೆ, ಮೊದಲಿನಿಂದಲೂ ಜೆಡಿಎಸ್ ಪಕ್ಷವು ತಾಲ್ಲೂಕಿನಲ್ಲಿ ಶಾಸಕ ಸ್ಥಾನದ ಅಧಿಕಾರ ಪಡೆಯುವಲ್ಲಿ ವಿಪಲವಾಗಿದೆ, ಜಿಲ್ಲಾಪಂಚಾಯತ್, ತಾಲ್ಲೂಕು ಪಂಚಾಯತ್, ಹಾಗೂ ನಗರಸಭೆಗಳಲ್ಲಿ ಈಗಾಗಲೇ ಅಧಿಕಾರ ಪಡೆದಿದ್ದು 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಪಡೆಯಲು ಶ್ರಮಿಸಲಿದೆ ಎಂದರು.

    ಶೇಕಡಾ 100ರಷ್ಟು ನಾನು ಅಭ್ಯರ್ಥಿಯಾಗಿ ಸ್ಪರ್ದಿಸುವುದು ಖಚಿತ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲಬೇಡ ಚುನಾವಣೆ ಎದುರುಸಲು ಸಿದ್ದರಾಗಿ ಎಂದು ವೇದಿಕೆಯಿಂದ ಸಂದೇಶ ರವಾನಿಸಿದರು. ಚುನಾವಣೆಯ ಸಲುವಾಗಿ ಈಗಾಗಲೇ ತಾಲ್ಲೂಕಿನ ಹಲವು ಸಹಕಾರ ಸಂಘ, ಗ್ರಾಮ ಮಟ್ಟದ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತಿದ್ದು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದರು.

    ಶಾಸಕರು ತಮ್ಮ ಪಕ್ಷ ಬಗ್ಗೆ ಚಿಂತಿಸಲಿ ನಮ್ಮ ಪಕ್ಷದ ಪದಾಧಿಕಾರಿಗಳ ಬಗ್ಗೆ ಚಿಂತಿಸುವುದು ಬೇಡ 

    ಪಕ್ಷದಲ್ಲಿ ಹರೀಶ್ ಗೌಡರ ಸ್ಥಾನ ಕುರಿತು ಮೂಡಿದ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಪಕ್ಷದಲ್ಲಿ ನನ್ನ ಸ್ಥಾನ ಮನ ಏನೆಂಬುದನ್ನು ಕುರಿತು ಚಿಂತಿಸಲು ನಿರ್ಧರಿಸಲು ಪಕ್ಷದ ಹಿರಿಯ ನಾಯಕರು ಮುಖಂಡರು ಇದ್ದಾರೆ, ಅದರ ಚಿಂತೆ ಶಾಸಕರಿಗೆ ಬೇಡ, ಅವರು ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಬಗ್ಗೆ ಚಿಂತಿಸಲಿ, ತಮ್ಮ ಪಕ್ಷದ ಬಗ್ಗೆ ಯೋಚಿಸಲಿ, ನಮ್ಮ ಪಕ್ಷದ ಪದಾಧಿಕಾರಿಗಳು ಕುರಿತು ಮಾತನಾಡುವುದು ಸರಿಯಲ್ಲ, ಅವರ ಪಕ್ಷದ ಸಮಸ್ಯೆ ಮೊದಲು ಬಗೆಹರಿಸಿ ಕೊಳ್ಳಲಿ ಎಂದರು.

     

    ವೇದಿಕೆಯಲ್ಲಿ ಕಂತಾಮಣಿ ಹರೀಶ್ ಗೌಡ ಮಾತನಾಡಿ ತಾಲ್ಲೂಕಿನಲ್ಲಿ ಈವರೆಗೂ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದೇವೆ ಮುಂದೆಯೂ ಸಹ ಈ ಸೇವೆಗಳು ನಿರಂತರ ಸಾಗಲಿವೆ, ಹರೀಶ್ ಗೌಡರು ತಾಲ್ಲೂಕಿನ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ, ಉದಾಹರಣೆಗೆ ತಾವು ವಿದ್ಯಾಭ್ಯಾಸ ನೆಡೆಸಿದ ಪುರುಷನ ಹಳ್ಳಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಅಷ್ಟೇ ಅಲ್ಲದೇ ತಾಲ್ಲೂಕಿನ ಜನತೆಯ ಆರೋಗ್ಯ ವಿಚಾರದಲ್ಲಿ,ಕ್ರೀಡಾ ವಿಚಾರದಲ್ಲಿ, ದೇವಾಲಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ತಾಲ್ಲೂಕಿನ ಜನತೆಯೊಂದಿಗೆ ನಾವಿದ್ದೇವೆ, ನಮ್ಮ ಸೇವೆಗೆ ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ, ನಮ್ಮ ಶಕ್ತಿ ಮೀರಿ ತಮ್ಮ ಸೇವೆಗೆ ಶ್ರಮಿಸುತ್ತೇವೆ ಎಂದರು.

     

    ತಾಳಗವಾರ ನಾಗರಾಜ್ ಮಾತನಾಡಿ ನಿರಂತರ ಸೇವೆ ಸಲ್ಲಿಸುವ ಹರೀಶ್ ಗೌಡರ ಗುಣ ಸದಾ ಹೀಗೆ ಇರಲಿ, ತಾಲೂಕಿನ ಜನತೆಗೆ ಅವರು ತೋರಿಸುವ ಪ್ರೀತಿ ಕಾಳಜಿ ಅಪಾರವಾದದ್ದು , ತಾಲೂಕಿನ ಯಾವುದೇ ಮೂಲೆಯ ಗ್ರಾಮದಲ್ಲಾದರೂ ಸಮಸ್ಯೆಯನ್ನು ತಿಳಿದರೆ ತಾವೇ ಸ್ವತಃ ಗ್ರಾಮಕ್ಕೆ ತೆರಳಿ ಸಹಾಯಕ ನೀಡುವ ನಾಯಕರು ಹರೀಶ್ ಗೌಡರು ಅವರ ಸೇವೆ ಸದಾ ನಿರಂತರವಾಗಿ ನಡೆಯಲಿ ಎಂದರು.

    ಇಂದು ತಾಲ್ಲೂಕಿನ ಅಹಿಂದ ಶಕ್ತಿಯಾದ ಅಪ್ಪಯಣ್ಣ ಅವರನ್ನು ಕಳೆದು ಕೊಂಡಿದ್ದೇವೆ, ಅವರು ನಮ್ಮನ್ನು ಬಿಟ್ಟು ಹೋಗುವ ಕೆಲ ದಿನಗಳ ಹಿಂದೆ ಅಷ್ಟೇ ನಮ್ಮೊಂದಿಗೆ ಹರೀಶ್ ಗೌಡರ ಕುರಿತು ರಾಜಕೀಯವಾಗಿ ಅವರಿಗೊಂದು ಸ್ಥಾನಮಾನ ದೊರಕಿಸುವ ಸಲುವಾಗಿ ಅವರ ಚಿಂತನೆಯನ್ನು ಹಂಚಿಕೊಂಡಿದ್ದರು. ಮುಂದೆ ತಾಲೂಕಿನ ಜನರ ಸೇವೆ ಮಾಡುವ ಅದೃಷ್ಟ ದಿವಂಗತ ಅಪಾಯಣ್ಣ ಅವರ ಆಶೀರ್ವಾದ ಹಾಗೂ ಆಶಾಯದಂತೆ ಹರೀಶ್ ಗೌಡರಿಗೆ ಲಭಿಸಲಿ ಎಂದು ಹಾರೈಸಿದರು.

     

    TAPMCS ಸದಸ್ಯ ಆನಂದ್ ಕುಮಾರ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ತಾಲ್ಲೂಕಿನ ಪ್ರತಿ ಮನೆಗೆ ತಲುಪಲಿ ಎಂಬುದು, ಉತ್ತಮ ರಾಜಕೀಯ ಅನುಭವದೊಂದಿಗೆ ಮುಂದೆ ಉತ್ತಮ ಭಾವಿಷ್ಯ ರೂಪಿಸಿಕೊಳ್ಳಲಿ ಪಕ್ಷತೀತವಾಗಿ ಹಾಗೂ ಸಂಸ್ಕಾರಯುತವಾಗಿ ರಾಜಕೀಯ ಮಾಡುವುದು ಕಷ್ಟವೇ ಸರಿ,ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸದಾ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವ ಹರೀಶ್ ಗೌಡ ಮತ್ತು ಅವರ ಶ್ರೀ ಮಾತಿಯವರಿಗೆ ಶುಭವಾಗಲಿ ಎಂದರು.

    ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್. ಗಂಗೆಗೌಡ ಹೊನ್ನಾವರ,ನಗರಸಭಾ ಸದಸ್ಯ ತ ನ ಪ್ರಭುದೇವ್, ನಾರಾಯಣಪ್ಪ, ಚಿಕ್ಕ ಹೆಜ್ಜಾಜಿ ಪ್ರಕಾಶ್, ತಿಮ್ಮೆಗೌಡ, ಅರಸೇಗೌಡ, ಸಿದ್ದ ಲಿಂಗಪ್ಪ, ದೊಡ್ಡತುಮಕೂರು ಚಿಕ್ಕಣಪ್ಪ, ಬಾಶೆಟ್ಟಿ ಹಳ್ಳಿ ಕೃಷ್ಣಪ್ಪ, ಪ್ರವೀಣ್ ಕುಮಾರ್ ಶಾಂತಿನಗರ, ಸಾಹಿತಿ ಆಶಾ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಸಿನಿಮಿಯಾ ಸ್ಟೈಲ್ ನಲ್ಲಿ ನೆಡೆದ ಕೊ*ಲೆ : ಹಣ ಕೊಡುವುದಾಗಿ ನಂಬಿಸಿ ಹ*ತ್ಯೆ ಮಾಡಿದ ಆರೋಪಿಗಳು ಅಂದರ್ : ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮತ್ತು ತಂಡದ ಮಿಂಚಿನ ಕಾರ್ಯಾಚರಣೆ

    ದೊಡ್ಡಬಳ್ಳಾಪುರ ಹೊರವಲಯದ ಇನ್ಫೋಸಿಟಿಯಲ್ಲಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಬೆಳಗಿನಂದಲೇ ನಿರಂತರವಾಗಿ ಸೋಕೋ ತಂಡದೊಂದಿಗೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು , ಹತ್ಯೆಗಿಡಾದ ದೇವರಾಜು ಅವರ ಅಸ್ಥಿಪಂಜರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಪತ್ತೆಯಾಗಿದೆ.

    ಅ.17ರಂದು ಬಾಶೆಟ್ಟಿ ಹಳ್ಳಿ ನಿವಾಸಿ ದೇವರಾಜು(65ವರ್ಷ) ಕಾಣುತ್ತಿಲ್ಲವೆಂದು ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿ, ಕೊನೆಗೆ ಆರೋಪಿಗಳಾದ ರಾಜಕುಮಾರ್ ಮತ್ತು ಅನಿಲ್ ರನ್ನು ವಶಕ್ಕೆ ಪಡೆದು ಕೊಲೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

     

    ಏನಿದು ಘಟನೆ….????

     

    ಅ.17ರಂದು ಹಣ ಕೊಡುವುದಾಗಿ ಹೇಳಿ ರಾಜಕುಮಾರ್ ದೇವರಾಜ್ ರವರನ್ನು ಕಾರಿನಲ್ಲಿ ಕರೆದೋಯ್ದು ಗೌರಿಬಿದನೂರು ಸಮೀಪ ಹಗ್ಗದಿಂದ ನೇಣು ಬಿಗಿದು ಸಾಯಿಸಿದ್ದಾರೆ , ನಂತರ ಈಗಾಗಲೇ ನಾರಾಯಣ ಇನ್ಫೋಸಿಟಿಯಲ್ಲಿ ಸಿದ್ಧಪಡಿಸಿದ್ದ ಗುಂಡಿಯಲ್ಲಿ ಶವ ಹಾಕಿ ಮುಚ್ಚಲಾಗಿದೆ. ಇಷ್ಟಾದರೂ ಸಮಾಧಾನವಾಗದ ಕೊಲೆಪಾತಕಿ ರಾಜಕುಮಾರ್ ದೇವರಾಜ್ ಶವವನ್ನು ಗುಂಡಿ ಇಂದ ಹೊರ ತೆಗೆದು ಗ್ಯಾರೇಜ್ ನಿಂದ ತಂದಿದ್ದ ಮೆಟಲ್ ಡ್ರಮ್‌ನಲ್ಲಿ ಹಾಕಿ ಪೆಟ್ರೋಲ್ ಸುರಿದು ಸುಟ್ಟು ವಿಕೃತಿ ಮೆರೆದಿದ್ದಾನೆ, ಸುಟ್ಟ ನಂತರ ಬೂದಿ ಮತ್ತು ಅಸ್ಥಿಪಂಜರವನ್ನು ತಾಲೂಕಿನ ಮಧುರೆ ಕೆರೆಯಲ್ಲಿ ಬಿಸಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .

     

     

    ಇಂದು ಬೆಳಗಿನಿಂದಲೇ ಶವವನ್ನು ಹೂತಿಟ್ಟಿದ್ಧ ಸ್ಥಳದಲ್ಲಿ ಪೊಲೀಸ್ ಇಲಾಖೆ ಕಾರ್ಯಚರಣೆ ಆರಂಭಿಸಿದ್ದು , ಸ್ಥಳದಲ್ಲಿ ದುರತ ತಲೆಕೂದಲು,ಚಪ್ಪಲಿಯನ್ನು ಸ್ವೀಕರಿಸಿಕೊಂಡು ಮುಂದಿನ ಕಾರ್ಯಾಚರಣೆಗೆ ಮಧುರೆ ಕೆರೆಯ ಕಡೆಗೆ ಪ್ರಯಾಣ ಬೆಳೆಸಿದರು . ತಾಲೂಕಿನ ಮಧುರೆ ಕೆರೆಯಲ್ಲಿ ಸತತ ಕಾರ್ಯಾಚರಣೆ ನಂತರ ಅಸ್ಥಿಪಂಜರ ದೊರೆತಿದ್ದು ಹೆಚ್ಚಿನ ವಿಚಾರಣೆಗಾಗಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

     

     

    ಈ ಕುರಿತು ಮೃತ ದೇವರಾಜ್ ಸಹೋದರನ ಮಗ ಮೋಹನ್ ಕುಮಾರ್ ಮಾತನಾಡಿ ಚೀಟಿ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡ ರಾಜಕುಮಾರ್ ನಮ್ಮ ಚಿಕ್ಕಪ್ಪ ದೇವರಾಜ್ ಅವರನ್ನು ಕೊ* ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ, ವ್ಯವಹಾರಿಕವಾಗಿ ತುಂಬಾ ಆತ್ಮೀಯರಾಗಿದ್ದ ರಾಜಕುಮಾರ ಹಣದ ವ್ಯವಹಾರವನ್ನು ನಿರಂತರವಾಗಿ ಮಾಡುತ್ತಿದ್ದರು , ಹಣ ನೀಡುವುದಾಗಿ ಕರೆದು ಈ ಕೃತ್ಯ ವೆಸಗಿದ್ದಾರೆ, ಕಂಪ್ಲೇಂಟ್ ಕೊಟ್ಟ ದಿನದಿಂದಲೇ ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನಗಳು ಹಲವು ಬಾರಿ ಮಾಡಿದ್ದರು ಆದರೆ ಅವರ ಮೇಲಿದ್ದ ವಿಶ್ವಾಸದಿಂದ ನಮಗೆ ಅವರೇ ಹಂತಕರು ಎಂದು ಅರಿಯಲು ಸಾಧ್ಯವಾಗಲಿಲ್ಲ , ಈಗ ಆರೋಪಿಗಳು ಪೊಲೀಸ್ ಬಳಿಯೇ ಸತ್ಯವನ್ನು ಬಿಚ್ಚಿಟ್ಟಿದ್ದಾರೆ, ನಮಗಿನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಇನ್ನು ಕಾರ್ಯಾಚರಣೆ ನಡೆಯುತ್ತಿದೆ, ಕುಟುಂಬಕ್ಕೆ ಆಧಾರವಾಗಿದ್ದ ನಮ್ಮ ಚಿಕ್ಕಪ್ಪನ ಕಳೆದುಕೊಂಡಿದ್ದೇವೆ , ಪೊಲೀಸ್ ಇಲಾಖೆಯು ಆರೋಪಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕಿದೆ ಎಂದರು.

     

     

    ಮೃತ ವ್ಯಕ್ತಿ ದೇವರಾಜ್ ರವರ ಧರ್ಮಪತ್ನಿ, ಕಲಾವತಿ ಮಾತನಾಡಿ ನಾನು ಬರುವುದಿಲ್ಲ ಎಂದು ಅವರು ಎಷ್ಟು ಬಾರಿ ಹೇಳಿದರೂ, ಬರಲು ಇಷ್ಟವಿಲ್ಲ ಎಂದರೂ ಬಿಡದೆ ಪದೇ ಪದೇ ಕರೆ ಮಾಡಿ ನೀವು ಬಂದರೆ ಚೀಟಿ ಹಣ ನೀಡುತ್ತೇನೆ ಎಂದು ರಾಜಕುಮಾರ್ ಬಲವಂತವಾಗಿ ದೇವರಾಜ್ ರನ್ನು ತನ್ನ ಬಳಿಗೆ ಕರೆದುಕೊಂಡಿದ್ದು ಈ ಕೃತ್ಯ ವ್ಯಸಗಿದ್ದಾನೆ, ಕುಟುಂಬಸ್ಥರು ದೇವರಾಜು ಇಂದಲ್ಲ ನಾಳೆ ಬರುತ್ತಾರೆ ಎಂಬ ಆಶಾಭಾವನೆಯಿಂದ ಕಾದು ಕುಳಿತಿದ್ದೆವು , ಆದರೆ ಇಂದು ಪೊಲೀಸರ ಬಳಿ ಆರೋಪಿಗಳೇ ತಾವು ದೇವರಾಜ್ ಅವರನ್ನು ಹತ್ಯೆ ಮಾಡಿರುವಂತೆ ಒಪ್ಪಿಕೊಂಡಿದ್ದಾರೆ, ನಮ್ಮ ಮನೆಗೆ ಬಂದು ಊಟ ಮಾಡುತ್ತಿದ್ದ ರಾಜಕುಮಾರ್ ತುಂಬಾ ಆತ್ಮೀಯತೆಯಿಂದ ವರ್ತಿಸುತ್ತಿದ್ದ, ವ್ಯವಹಾರಿಕವಾಗಿ ಹಣ ಪಡೆದು ಹಿಂದಿರುಗಿಸುತ್ತೇನೆ ಎಂದು ಹೇಳುತ್ತಿದ್ದ, ಸುಮಾರು 70ರಿಂದ 80 ಲಕ್ಷ ಹಣವನ್ನು ಸಾಲ ಪಡೆದಿದ್ದ ಎಂದರು.

    ನಾವು ದೇವರನ್ನು ಎಲ್ಲೋ ಗೋಡನ್ನಲ್ಲಿ ಕೂಡು ಹಾಕಿದ್ದಾರೆ, ಇಂದಲ್ಲ ನಾಳೆ ಅವರು ಜೀವಂತವಾಗಿ ಬರುತ್ತಾರೆ ಎಂದು ಕಾಯುತ್ತಿದ್ದೆವು, ಆದರೆ ಇಂದು ಆರೋಪಿಗಳ ಒಪ್ಪಿಕೊಂಡಿರುವಂತೆ ಅವರನ್ನು ಕೊಲೆ ಮಾಡಿ ಹೂತು ಹಾಕಿ, ನಂತರ ಶವವನ್ನು ಸುಟ್ಟು ಹಾಕಿ, ಅವಶೇಷಗಳನ್ನು ಕೆರೆಗೆ ಬಿಸಾಡಿದ್ದಾರೆ ಎಂದರೇ ನಂಬಲು ಸಾಧ್ಯವಾಗುತ್ತಿಲ್ಲ, ಇಂತಹ ವಿಶ್ವಾಸ ಘಾತಕರಿಗೆ ಕಾನೂನು ಕಠಿಣ ಶಿಕ್ಷಣ ವಿಧಿಸಬೇಕಿದೆ . ಇಂಥವರಿಂದ ಮುಂದೆ ಯಾರ ಕುಟುಂಬಕ್ಕೂ ತೊಂದರೆ ಆಗಬಾರದು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

  • ಡಾ.ಮನಮೋಹನ್ ಸಿಂಗ್ ರಾಜಕೀಯ ಜೀವನ ಕುರಿತು ಒಂದಿಷ್ಟು ಮಾಹಿತಿ

    2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಸಿಂಗ್ ಅವರು ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಮತ್ತು 2009ರಲ್ಲಿ ಅದೇ ದಿನಾಂಕದಂದು ಮತ್ತೊಮ್ಮೆ ಪ್ರಧಾನಿಯಾಗಿ 2 ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದರು.

     

    ಸಿಂಗ್ ಅವರ ರಾಜಕೀಯ ಜೀವನು 1991ರಲ್ಲಿ ಅವರು ರಾಜ್ಯಸಭೆಗೆ ಪ್ರವೇಶಿಸಿದಾಗ ಪ್ರಾರಂಭವಾಯಿತು. ಕೇವಲ ನಾಲ್ಕು ತಿಂಗಳ ನಂತರ, ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು, ಇದು ಭಾರತದ ಆರ್ಥಿಕತೆಯಲ್ಲಿ ಪರಿವರ್ತನೆಗೆ ಕಾರಣವಾಗಿತ್ತು.

     

    1990 ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಮನಮೋಹನ್ ಸಿಂಗ್ ಹೊಸ ದಿಕ್ಕು ತೋರಿಸಿದ್ದರ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.

     

    6 ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಿಂಗ್, ಒಮ್ಮೆಯೂ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲಿಲ್ಲ. 1999 ರಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಿಂಗ್, ಬಿಜೆಪಿಯ ವಿಜಯ್ ಕುಮಾರ್ ಮಲ್ಹೋತ್ರ ವಿರುದ್ಧ ಪರಾಭವಗೊಂಡಿದ್ದರು.

     

    ಅಸ್ಸಾಂ ನಿಂದ 5 ಬಾರಿ ಹಾಗೂ ಅಲ್ಪಾವಧಿಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1998 ರಿಂದ 2004 ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಹೊಂದಿದ್ದರು.

     

    RBI ಗವರ್ನರ್ ಆಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್

    1932 ರ ಸೆ.26 ರಂದು ಅಂದಿನ ಅವಿಭಜಿತ ಭಾರತದಲ್ಲಿ ಜನಿಸಿದ ಡಾ. ಮನಮೋಹನ್ ಸಿಂಗ್, 1972 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ 1982-1985 ಅವಧಿಯಲ್ಲಿ ಆರ್ ಬಿಐ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

     

    ಅಸಾಧಾರಣ ಶೈಕ್ಷಣಿಕ ಹಿನ್ನೆಲೆಯೊಂದಿಗೆ, ಸಿಂಗ್ BA ಮತ್ತು MA ಎರಡರಲ್ಲೂ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಗ್ರಸ್ಥಾನ ಪಡೆದಿದ್ದರು. ಕೇಂಬ್ರಿಡ್ಜ್‌ನಲ್ಲಿ ಹೆಚ್ಚಿನ ಅಧ್ಯಯನವನ್ನು ಪಡೆದ ಅವರು, ಆಕ್ಸ್‌ಫರ್ಡ್‌ನಿಂದ ಡಾಕ್ಟರೇಟ್ ಪದವಿ ಗಳಿಸಿದರು. ಹಣಕಾಸು ಸಚಿವರಾಗಿ, ಅವರು ಭಾರತವನ್ನು ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.