Blog

  • ರಾಜಘಟ್ಟ : ಗುರುವಂದನಾ ಕಾರ್ಯಕ್ರಮ: ಹಳೆಯ ನೆನಪುಗಳನ್ನು ನೆನೆದು ಭಾವುಕರಾದ ವಿದ್ಯಾರ್ಥಿಗಳು

    ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮದ ಮಾರುತಿ ಶಾಲೆಯಲ್ಲಿ 2007ರಿಂದ 2010ನೇ ಸಾಲಿನ ವಿದ್ಯಾರ್ಥಿಗಳು ಗುರು ವಂದನ ಕಾರ್ಯಕ್ರಮವನ್ನು ಆಚರಿಸಿದರು.

     

    ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಾಲಾ ದಿನಗಳನ್ನು ನೆನೆದು ಶಿಕ್ಷಕರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಶಾಲೆಯ ಮುಖ್ಯಪಾಧ್ಯಾಯರಾದ ಎಸ್ ಆದಿಶೇಷಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳು ಶಿಕ್ಷಕರಿಗೆ ಮತ್ತಷ್ಟು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿವೆ, ಶಾಲೆ ಎಂದರೆ ಕೇವಲ ಕಲಿಕೆಯ ಸ್ಥಳವಲ್ಲ, ಇದೊಂದು ಜೀವನದ ಸಾರಾಂಶ ಕಲಿಸುವ ಮತ್ತು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಸ್ಥಳವಾಗಿದೆ. ವಿದ್ಯೆ ಕಲಿತ ನಂತರ ಶಾಲೆಯನ್ನು ಮರೆಯುವ ಕೆಲವರ ನಡುವೆ ಎಲ್ಲಾ ಹಳೆ ವಿದ್ಯಾರ್ಥಿಗಳು ಇಂದಿನ ಗುರುಗುಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.

     

    ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಹಾಗೂ ಇಂದಿನ ಮಕ್ಕಳಿಗೆ ಮಾರ್ಗದರ್ಶನವಾಗಿದೆ, ಜೊತೆಗೆ ಮಕ್ಕಳಿಗೆ ಶಿಕ್ಷಕರ ಮೇಲೆ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದರು.

    ಕಾರ್ಯಕ್ರಮ ಕುರಿತು ಹಳೆಯ ವಿದ್ಯಾರ್ಥಿ ರಾಜಘಟ್ಟ ಗಣೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದೆ, ಕಾರಣ ಜೀವನದ ಪಾಠವನ್ನು ನಾವಿಲ್ಲಿ ಕಲಿತಿದ್ದೇವೆ, ನಮ್ಮ ಶಿಕ್ಷಕರು ಬೋಧನೆ ಅಷ್ಟೇ ಅಲ್ಲದೆ ಜೀವನದ ಸಾರಾಂಶವನ್ನು ತಿಳಿಸಿದ್ದಾರೆ, ನಮ್ಮ ಕಲಿಕೆ ಉತ್ತಮವಾಗಿರಲು, ಇಂದಿನ ಶಿಸ್ತು ಬದ್ಧ ಜೀವನಕ್ಕೆ ಕಾರಣ ನಮ್ಮ ಶಿಕ್ಷಕರು ನೀಡಿದ ಮಾರ್ಗದರ್ಶನ, ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ . ಈ ಗುರುವಂದನಾ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ನನ್ನ ಮಿತ್ರರಿಗೆ ಹೃದಯಪೂರ್ವಕ ಅಭಿನಂದನೆ ತಿಳಿಸುತ್ತೇನೆ ಎಂದರು.

     

    ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಮಾರುತಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

     

     

  • ಶ್ರೀ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಬಿಜೆಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಆರ್ ಪ್ರತಾಪ್ ನೇತೃತ್ವದಲ್ಲಿ ಅನ್ನದಾನ ಮಾಡಲಾಗುತ್ತಿದೆ

     

    ಘಾಟಿ ದನಗಳ ಜಾತ್ರೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ರೈತರು ರಾಸುಗಳನ್ನ ಕೊಳ್ಳುವ ಮತ್ತು ಮಾರುವ ವಹಿವಾಟಿನಲ್ಲಿ ತೊಡಿಗಿಸಿ ಕೊಳ್ಳುತ್ತಾರೆ, ಜಾತ್ರೆಯಲ್ಲಿ ಭಾಗವಹಿಸಿರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಕೀಲರು ಆಗಿರುವ ಆರ್.ಪ್ರತಾಪ್ ರವರು ಅನ್ನದಾನ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ

     

    ಈ ಕುರಿತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಆರ್ ಪ್ರತಾಪ್ ಮಾತನಾಡಿ, ದನಗಳ ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿದ್ದು , ಈ ಬಾರಿ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದೆ , ಜಾತ್ರೆಯನ್ನು ನೋಡಲು ಸಾವಿರಾರು ಸಾರ್ವಜನಿಕರು ಆಗಮಿಸುತ್ತಿದ್ದು , ಬರುವಂತಹ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುವ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ , ಸತತ ನಾಲ್ಕು ದಿನಗಳಿಂದ ಆಹಾರ ವಿತರಣೆ ಮಾಡುತ್ತಿದ್ದು, ಹಸಿದವರಿಗೆ ಆಹಾರ ವಿತರಣೆ ಮಾಡುವುದು ಸಂತಸ ತಂದಿದೆ ಎಂದರು.

     

    ಈ ಸಂದರ್ಭದಲ್ಲಿ ದೇವನಹಳ್ಳಿ ಒಪಿಸಿ ಮೋರ್ಚಾ ಉಪಾಧ್ಯಕ್ಷರಾದ ಸುರೇಶ್ , ಬಿಜೆಪಿ ಮುಖಂಡರಾದ ಹರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಕಿಟ್ಟಿ, ವಾಸು, ಮಾಜಿ ಸದಸ್ಯರಾದ ಮುನೇಗೌಡ ಇದ್ದರು.

  • ಮಹಿಳೆಯರ ಮೇಲೆ ಪೆಟ್ರೋಲ್ ಸುರಿದು ದೌರ್ಜನ್ಯ ಆರೋಪ : ಠಾಣೆ ಮೆಟ್ಟಿಲೇರಿದ ದಲಿತ ಕುಟುಂಬ

    ದೊಡ್ಡಬಳ್ಳಾಪುರ : ಜಮೀನು ವಂಚನೆ ವಿರುದ್ಧ ದೂರು ದಾಖಲಿಸಿದಕ್ಕೆ, ದಲಿತ ಮಹಿಳೆಯರ ಮೇಲೆ ಪೆಟ್ರೋಲ್ ಸುರಿದು ದೌರ್ಜನ್ಯ ನಡೆಸಲಾಗಿದೆ, ಬೆಂಕಿ ಹಚ್ಚುವ ಯತ್ನದಲ್ಲಿ ಮಹಿಳೆಯರು ಸ್ಥಳದಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ

     

    ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ನರಸಮ್ಮ ಮತ್ತು ಮಮತಾ ಎಂಬ ಮಹಿಳೆಯರ ಮೇಲೆ ದೊಣ್ಣೆ ಮತ್ತು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ, , ಹಲ್ಲೆಗೊಳಗಾದ ಮಹಿಳೆಯರು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

     

    ಹಲ್ಲೆಗೊಳಗಾದ ನರಸಮ್ಮ ಮತ್ತು ಮಮತಾ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಇವರಿಗೆ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ 3 ಎಕರೆ ಜಮೀನು ಇದೆ, 3 ಎಕರೆ ಜಮೀನು ನಂಬಿಕೊಂಡು ಮೂರು ಕುಟುಂಬಗಳ 80ಕ್ಕೂ ಹೆಚ್ಚು ಜನರು ಜೀವನ ಮಾಡುತ್ತಿದ್ದಾರೆ, ಇದೇ ಜಮೀನು ಕಬಳಿಸಲು ಇದೇ ಗ್ರಾಮದ ನರಸೇಗೌಡ, ನರಸಿಂಹಸ್ವಾಮಿ ಮತ್ತು ಲಕ್ಷ್ಮೀಪತಿ ಸಂಚು ನಡೆಸಿದ್ದಾರೆಂಬ ಆರೋಪವಿದೆ

     

    ನರಸೇಗೌಡ ಕುಟುಂಬ ನಮ್ಮ ಕುಟುಂಬಕ್ಕೆ ಸೇರಿದ 3 ಎಕರೆ ಜಮೀನನ್ನು ವಂಚಿಸಿದ್ದಾರೆಂದು ನರಸಮ್ಮ ಅವರ ಪತಿ ಚಿಕ್ಕಪ್ಪ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 23ರಂದು ಪ್ರಕರಣ ದಾಖಲು ಮಾಡಿದ್ದರು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದಕ್ಕೆ ಕೆರಳಿದ ನರಸೇಗೌಡ ಕುಟುಂಬ ನನ್ನ ಮತ್ತು ತಂಗಿಯಾದ ಮಮತಾರ ಮೇಲೆ ಹಲ್ಲೆ ಮಾಡಿದ್ದಾರೆಂದು ನರಸಮ್ಮ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

     

    ಡಿಸೆಂಬರ್ 24ರ ಬೆಳಗ್ಗೆ 10 ಗಂಟೆ ಸಮಯದಲ್ಲಿ ನರಸಮ್ಮ ಮತ್ತು ಮಮತಾ ತಮ್ಮ ಜಮೀನಿಗೆ ಹೋದಾಗ, ನರಸಿಂಹಸ್ವಾಮಿ, ಲಕ್ಷ್ಮೀಪತಿ ಎಂಬುವರು ಟ್ರ್ಯಾಕ್ಟರ್ ಗೆ ಸೌದೆಯನ್ನ ತುಂಬುತ್ತಿದ್ದರು, ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದಲ್ಲದೆ ತಮಗೆ ಸೇರಿದೆ ಸೌದೆಗಳನ್ನ ಟ್ರ್ಯಾಕ್ಟರ್ ಗೆ ತುಂಬುತ್ತಿರುವ ಬಗ್ಗೆ ನರಸಮ್ಮ ಪ್ರಶ್ನೆ ಮಾಡಿದ್ದಾರೆ.

     

    ನರಸೇಗೌಡ, ನರಸಿಂಹಸ್ವಾಮಿ ಮತ್ತು ಲಕ್ಷ್ಮೀಪತಿ ಎಂಬುವರು ಜಾತಿ ನಿಂದನೆ ಮಾಡಿದ್ದಾರೆ, ನಮ್ಮ ಕುಟುಂಬದ ವಿರುದ್ಧ ದೂರು ನೀಡುತ್ತಿರಾ, ನಿಮ್ಮನ್ನು ಟ್ರ್ಯಾಕ್ಟರ್ ನಿಂದ ಗುದ್ದಿ ಸಾಯಿಸುವುದ್ದಾಗಿ ಜೀವ ಬೆದರಿಕೆ ಹಾಕಿದ್ದಾರೆ, ನಮ್ಮ ಮೈ ಮೇಲೆ ಪೆಟ್ರೋಲ್ ಸುರಿದು ದೊಣ್ಣೆ ಮತ್ತು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ, ಬೆಂಕಿ ಹಚ್ಚುವ ಯತ್ನ ಮಾಡಿದ್ದಾಗ ಅಲ್ಲಿಂದ ಓಡಿ ಹೋಗಿದ್ದು, ಸುತ್ತಮುತ್ತಲಿನ ಜನ ಬರುವಷ್ಟರಲ್ಲಿ ಟ್ರ್ಯಾಕ್ಟರ್ ನನ್ನ ಅಲ್ಲಿಯೇ ಬಿಟ್ಟು ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆಂದು ದೂರು ನೀಡಲಾಗಿದೆ.

     

    ನರಸಮ್ಮ ಮತ್ತು ಮಮತಾ ದಲಿತ ಸಮುದಾಯಕ್ಕೆ ಸೇರಿದ್ದು, ಜೀವ ಬೆದರಿಕೆ ಮತ್ತು ಹಲ್ಲೆ ನಡೆಸುವ ಮೂಲಕ ನರಸೇಗೌಡ, ನರಸಿಂಹಸ್ವಾಮಿ ಮತ್ತು ಲಕ್ಷ್ಮೀಪತಿ ದಲಿತರ ಜಮೀನು ಹೊಡೆಯುವ ಸಂಚು ನಡೆಸಿದ್ದಾರೆ, ಅವರು ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮನವಿ ಮಾಡಿದ್ದಾರೆ

  • ಪಾಲಕರು ತಮ್ಮ‌ಮಕ್ಕಳ ಕಲಿಕೆ,‌ಪ್ರತಿಭೆಗಳ ಅಭಿರುಚಿಗೆ ತಕ್ಕಂತೆ ಅವಶ್ಯ ವಾತಾವರಣ ಕಲ್ಪಿಸಿ – ಪ್ರೊ. ಭರತ್ ಗೋಪಾಲನ್

    ನೆಲಮಂಗಲ: ಶಿಕ್ಷಣ ಸಂಸ್ಥೆಗಳು ಇಂದಿನ ವಿದ್ಯಾರ್ಥಿಗಳಲ್ಲಿ ಬಿತ್ತುವ ಗುಣಾತ್ಮಕ ಚಿಂತನೆಗಳು ಭವಿಶ್ಯದ ಅಭಿವೃದ್ಧಿ ಶೀಲ ದೇಶ ನಿರ್ಮಾಣಕ್ಕೆ‌ ಸಹಕಾರಿಯಾಗಲಿದೆ ಎಂದು ಜಿಐಬಿಎಸ್ ಬಿಸಿನೆಸ್ ಸ್ಕೂಲ್ ಮುಖ್ಯಸ್ಥ ಪ್ರೊ. ಭರತ್ ಗೋಪಾಲನ್ ತಿಳಿಸಿದರು.

     

    ತಾಲೂಕಿನ ಕಂಬಯ್ಯನ ಪಾಳ್ಯ ಗ್ರಾಮದಲ್ಲಿ ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಫೇಸ್ ‌2 ರಲ್ಲಿ‌ ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ 12 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

     

    ಒಳ್ಳೆಯ‌ ಚಿಂತನೆ ಆಲೋಚನೆಗಳಿಂದ ಗುಣಾತ್ಮಕ‌ ಮನಸ್ಸು ರಚೆನೆಯಾಗುವಂತೆ ಪಾಲಕರ ನಿರೀಕ್ಷೆಗೆ ಮೀರಿ ಕಲಿಯುವ ಸುವರ್ಣಾವಕಾಶವನ್ನು ಹರ್ಷ ಶಿಕ್ಷಣ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಶಾಲೆಯಲ್ಲಿನ ಬಹುತೇಕ ವಿದ್ಯಾರ್ಥಿಗಳು ಕ್ರೀಡೆ‌,‌ಸಾಂಸ್ಕೃತಿಕ‌‌ ಸ್ಪರ್ಧೆ ಸೇರಿದಂತೆ ಓದಿನಲ್ಲೂ‌ ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ. ಶಿಕ್ಷಣ ಸಂಸ್ಥೆಗಳು ಭವಿಷ್ಯದ ಔದ್ಯೋಗಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿನ ಸ್ಪರ್ಧೆ ನೀಡಲು ಬೇಕಾದ ಕೌಶಲ್ಯಗಳನ್ನು ಮಕ್ಕಳಲ್ಲಿ ಕಲಿಸಬೇಕೆನ್ನುವುದು ಪಾಲಕರ ಆಶಯವಾಗಿರುತ್ತದೆ.

     

    ಶಿಕ್ಷಣ, ಕಲಿಕೆಗೆ ಸಂಬಂದಿಸಿದಂತೆ ಹರ್ಷ‌ ಸಮೂಹ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹೊಂದಿರುವ ದೂರದೃಷ್ಟಿ ಚಿಂತನೆಗಳು ಮಹತ್ತರವಾಗಿವೆ. ಶಾಲೆಯಲ್ಲಿನ ಶಿಕ್ಷಕರು, ಪಾಲಕರು ತಮ್ಮ‌ಮಕ್ಕಳ ಕಲಿಕೆ,‌ಪ್ರತಿಭೆಗಳ ಅಭಿರುಚಿಗೆ ತಕ್ಕಂತೆ ಅವಶ್ಯ ವಾತಾವರಣ ವನ್ನು ಸೃಷ್ಟಿ ಮಾಡಿದಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಳ್ಳೆಯ ಫಲಿತಾಂಶ ದೊರೆಯುವುದರಲ್ಲಿ ಸಂದೇಹವಿಲ್ಲ. ಪಾಲಕರಾದವರು ತಮ್ಮ‌ ಮಕ್ಕಳ ಸಾಮಾರ್ಥ್ಯ ಮತ್ತು ಶಾಲಾ‌ ಆಡಳಿತ ಮಂಡಳಿ ಮೇಲೆ ನಂಬಿಕೆ‌ ಇಡಬೇಕಿದೆ. ಮಕ್ಕಳ ಹೋಲಿಕೆ‌ ಮಾಡಿ ಹೀಯಾಳಿಸುವುದನ್ನು ಬಿಡಬೇಕು ಎಂದರು.

     

    ಹರ್ಷ ಸಮೂಹ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಯಶಸ್ ಶಿವಕುಮಾರ್ ಶಿಕ್ಷಣ ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ, ಬದಲಾಗಿ ದೂರದೃಷ್ಟಿ ಯೋಜನೆಗಳಿಂದ ಪಾಲಕರ ಕನಸು ನನಸಾಗಿಸುವುದಾಗಿದೆ. ಇದು ಕೇವಲ ವಾರ್ಷಿಕೋತ್ಸವ ಕಾರ್ಯಕ್ರಮವಲ್ಲ, ಪ್ರತಿಭೆಗಳ ಅನಾವರಣ, ಧರ್ಮಸಂಸ್ಕತಿಗಳ ಸಮಾಗಮವಾಗಿದೆ. ಗ್ರಾಮೀಣಭಾಗದ ಎಲ್ಲರಿಗೂ ಉತ್ತಮ ಶಿಕ್ಷಣ ಒದಗಿಸುವ ಗುರಿ ಶಿಕ್ಷಣ ಸಂಸ್ಥೆಯದ್ದಾಗಿದೆ. ಪಾಲಕರ ಸಹಕಾರ, ಶಿಕ್ಷಕರ ಪರಿಶ್ರಮ ಸೇರಿದಂತೆ ವಿದ್ಯಾರ್ಥಿಗಳ ಪ್ರಯತ್ನಗಳೆಲ್ಲವೂ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತಿದೆ ಎಂದರು.

     

    ಅಭಿನಂದನೆ: ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿಹೆಚ್ಚು ಅಂಕ ಪಡೆದ ಎಲ್‌ಕೆಜಿ ಯಿಂದ ದ್ವೀತಿಯ ಪಿಯುಸಿ ವರೆಗೂ ಪ್ರತಿ ತರಗತಿಯಲ್ಲಿ ಮೂರು ವಿದ್ಯಾರ್ಥಿಗಳ ಸೇರಿದಂತೆ ವಿಷಯವಾರು ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

     

    ಅತ್ಯುತ್ತಮ ಶಿಕ್ಷಕ ಪ್ರಶಸ್ತಿ; ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಶಾಲೆಯ ಶಿಕ್ಷಕರಾದ ವಸಂತ, ಸಹನ, ಮೊಹಮ್ಮದ್ಅಲಿ ಹಾಗೂ ಮುಜೀದ್ ಪಾಷಾ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು‌ ನೀಡಿ ಗೌರವಿಸಲಾಯಿತು.

    ಸಾಂಸ್ಕೃತಿಕ ಕಾರ್ಯಕ್ರಮ: ವಾರ್ಷಿಕೋತ್ಸವ ಕಾರ್ಯಕ್ರಮ ಹಿನ್ನಲೆ ಶಾಲೆಯ ವಿದ್ಯಾರ್ಥಿಗಳನ್ನು ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೇರವೇರಿಸಿಕೊಟ್ಟರು.

     

    ಸಂದರ್ಭದಲ್ಲಿ ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅದ್ಯಕ್ಷ ಎಸ್.ಶಿವಕುಮಾರ್, ಉಪಾದ್ಯಕ್ಷೆ ಗಿರಿಜಾಶಿವಕುಮಾರ್, ಕಾರ್ಯದರ್ಶಿ ಹರ್ಷಶಿವಕುಮಾರ್, ಹರ್ಷ ಶಾಲೆ ಮುಖ್ಯಶಿಕ್ಷಕಿ ಎಲ್.ಪೂರ್ಣಿಮಾ, ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕಿ ಬಿಂಧುಶರ್ಮಾ, ಸಹ ಮುಖ್ಯಶಿಕ್ಷಕಿ ಪ್ರೀತಿ.ಕೆ.ಚೌಧರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಜ್ಯೋತಿಕಾಮತ್, ಉಪಪ್ರಾಂಶುಪಾಲೆ ವೀಣಾ ಮತ್ತಿತರರು ಉಪಸ್ಥಿತರಿದ್ದರು.

  • ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಲಿ ಎಂದು ಘಾಟಿ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು

    ದೊಡ್ಡಬಳ್ಳಾಪುರ : ಶಸ್ತ್ರಚಿಕಿತ್ಸೆಗೆಂದು ಅಮೇರಿಕಾ ಗೆ ತೆರಲಿರುವ ನಟ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಿ ಭಾರತಕ್ಕೆ ಆಗಮಿಸಲಿ ಎಂದು ಸಂಕಲ್ಪಿಸಿ ತಾಲ್ಲೂಕು ಶಿವರಾಜ್ ಕುಮಾರ್ ಅಭಿಮಾನಿಗಳ ವತಿಯಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

     

    ಈ ಕುರಿತು ಮುಖಂಡರಾದ ಚೌಡರಾಜ್ ಮಾತನಾಡಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭವ ಸಂಬಂಧವಿದೆ, ದೊರೆ,ನಂಜುಂಡಿ, ನಮ್ಮೂರು ಹುಡ್ಗ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಭಾಗವಹಿಸಿದರು, ಅಭಿಮಾನಿಗಳ ಆರಾಧ್ಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಸಂಕಲ್ಪಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೇವೆ, ಎಂದರು.

     

    ಸ್ಥಳೀಯ ಮುಖಂಡ ಹಳ್ಳಿ ರೈತ ಮಾತನಾಡಿ ಕನ್ನಡ ಚಲನಚಿತ್ರದ ಪ್ರಮುಖ ನಟರಾದ ಡಾ. ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಸಂಕಲ್ಪಿಸಿದ್ದೇವೆ. ಘಾಟಿ ಸುಬ್ರಮಣ್ಯ ದೇವರ ಆಶೀರ್ವಾದದೊಂದಿಗೆ ಶೀಘ್ರಗತಿಯಲ್ಲಿ ಭಾರತಕ್ಕೆ ಆರೋಗ್ಯವಂತರಾಗಿ ಬರಲಿ ಎಂದಿನಂತೆ ಸಿನಿಮಾ ರಂಗದಲ್ಲಿ ಎಂದಿನಂತೆ ಕ್ರಿಯಾಶೀಲರಾಗಿ ಪಾಲ್ಗೊಳ್ಳುವಂತಾಗಲಿ ಎಂದರು.

     

    ರಾಜ್ಯದ ಹೆಮ್ಮೆಯ ಕೆ ಎಂ ಎಫ್ ಸಂಸ್ಥೆಗೆ ರಾಯಭಾರಿಗಳಾಗಿ ಸದಾ ರೈತರ ಬೆನ್ನುಬಾಗಿ ನಿಂತಿರುವ ರಾಜ್ ಕುಮಾರ್ ಕುಟುಂಬಕ್ಕೆ ರಾಜ್ಯದ ಎಲ್ಲಾ ಹಳ್ಳಿ ರೈತರ ಶುಭ ಹಾರೈಕೆ ಸದಾ ಇರುತ್ತದೆ, ಘಾಟಿ ಸುಬ್ರಮಣ್ಯ ದನಗಳ ಜಾತ್ರೆ ಅಂಗವಾಗಿ ಉಚಿತ ಮೇವು ವಿತರಣೆಗೆ ಬೆಂಬಲವಾಗಿ ಒಂದು ಲೋಡ್ ಮೇವು ನೀಡಿರುವ ರಾಜ್ ಕುಟುಂಬದ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು

     

     

    ಈ ಸಂದರ್ಭದಲ್ಲಿ ತಾಲ್ಲೂಕಿನ ಶಿವರಾಜ್ ಕುಮಾರ್ ಅಭಿಮಾನಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

  • ರೈತರ ಪಾದಪೂಜೆ ಮಾಡುವ ಮುಖಾಂತರ ರಾಷ್ಟ್ರೀಯ ರೈತ ದಿನವನ್ನು ವಿಶೇಷವಾಗಿ ಆಚರಿಸಿದ ನವ ಕರ್ನಾಟಕ ಯುವಶಕ್ತಿ ವೇದಿಕೆ

    ದೊಡ್ಡಬಳ್ಳಾಪುರ: ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ರಾಷ್ಟ್ರೀಯ ರೈತ ದಿನವನ್ನು ರೈತರ ಪಾದ ಪೂಜೆ ಮಾಡುವ ಮೂಲಕ ವಿಶೇಷವಾಗಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದನಗಳ ಜಾತ್ರೆಯಲ್ಲಿ ಆಚರಿಸಲಾಗಿದೆ.

     

    ಕಳೆದ ಮೂರು ದಿನಗಳಿಂದ ನಿರಂತರವಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಳ್ಳಿ ರೈತ ಅಂಬರೀಶ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು , ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನವನ್ನು ಐದು ಜಿಲ್ಲೆಗಳ ರೈತರಿಗೆ ಪಾದ ಪೂಜೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.

     

    ಈ ಕುರಿತು ಮಾತನಾಡಿದ ಅವರು ಒಂದು ದೇಶದ ಭದ್ರತೆಗೆ ಸೈನಿಕ ಎಷ್ಟು ಮುಖ್ಯವೋ ದೇಶಕ್ಕೆ ಆಹಾರ ಒದಗಿಸುವ ಅನ್ನದಾತ ರೈತರು ಅಷ್ಟೇ ಮುಖ್ಯ, ರೈತರಿಗಾಗಿ ಈ ದಿನ ಮೀಸಲಿರುವುದು ಕೇವಲ ನಾಮ್ ಕಾ ವಾಸ್ತೆ ಆಗಬಾರದು, ದೇಶದ ಆರೋಗ್ಯವಂತ ಮಾನವ ಸಂಪನ್ಮೂಲ ಕಾಪಾಡುವಲ್ಲಿ ರೈತರ ಪಾತ್ರ ಪ್ರಮುಖವಾದದ್ದು, ಇಂದು ಸಾಂಕೇತಿಕವಾಗಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರೈತರ ಪಾದಪೂಜೆ ಮಾಡುವ ಮುಖಾಂತರ ಹಳ್ಳಿ ರೈತರ ಪ್ರಾಮುಖ್ಯತೆಯನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಮುಂದೆ ರಾಜ್ಯ ಹಾಗೂ ದೇಶದಾದ್ಯಂತ ಪ್ರತಿ ಗ್ರಾಮದಲ್ಲೂ ರೈತರನ್ನು ಆರಾಧಿಸುವ ಪರಂಪರೆ ಪ್ರಾರಂಭವಾಗಲಿ, ಹಳ್ಳಿ ರೈತ ಉಳಿಯಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿ ಮಾತನಾಡಿದರು ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ಉಚಿತ ಮೇವು ಮತ್ತು ನೀರು ವಿತರಣೆಯ ಕಾರ್ಯ ಶ್ಲಾಘನೀಯ , ರೈತರ ಪಾದಪೂಜೆ ಮಾಡುವ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿರುವ ನವ ಕರ್ನಾಟಕ ಯುವಶಕ್ತಿ ವೇದಿಕೆಯ ಅಂಬರೀಶ್ ಮತ್ತು ತಂಡಕ್ಕೆ ಶುಭವಾಗಲಿ , ರಾಜ್ಯದ ಅನ್ನದಾತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವಂತಾಗಲಿ ಉತ್ತಮ ಯೋಜನೆಗಳನ್ನು ರೂಪಿಸುವ ಮೂಲಕ ರಾಜ್ಯದ ಪ್ರತಿ ಹಳ್ಳಿಯ ರೈತರಿಗೆ ಅನುಕೂಲ ಕಲ್ಪಿಸಲಿ ಎಂದರು.

     

    ರೈತ ಮುಖಂಡ ರಾಜ್ಯ ಉಪಾಧ್ಯಕ್ಷ ಕೆಂಚೇಗೌಡ , ಹೊಸಕೋಟೆ ಅಕ್ಲೆಗೌಡ, ದೊಡ್ಡಬಳ್ಳಾಪುರ ಹನುಮೇಗೌಡ, ಕಾರ್ಯದರ್ಶಿ ಜಿಂಕೆಬಚ್ಚಳ್ಳಿ ಸತೀಶ್, ಮುಖಂಡರಾದ ವಾಸು, ಮುನಿರಾಯಣಪ್ಪ, ಸ್ಥಳೀಯ ಮುಖಂಡರಾದ ಉದಯ ಆರಾಧ್ಯ ಸೇರಿದಂತೆ ರೈತ ಸಂಘ ಮತ್ತು ಹಸಿರು ಸೇನೆಯ 4 ತಾಲೂಕಿನ ಪದಾಧಿಕಾರಿಗಳು, ಸದಸ್ಯರು, ನವ ಕರ್ನಾಟಕ ಯುವಶಕ್ತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ದೊಡ್ಡತುಮಕೂರು ಗ್ರಾಮದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ

    ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ವ್ಯಸಂಗ ಮಾಡುತ್ತಿರುವ ಶಾಲಾ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ 69 ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಯಿತು

     

    ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವ ಮೂಲಕ ಉತ್ತಮ ಆರೋಗ್ಯ ನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು

     

     

    ಮುಖ್ಯ ಅತಿಥಿ ಗಳಾದ ಖ್ಯಾತ ವೈದ್ಯರು ಡಾ ಅಂಜಿನಪ್ಪ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಭಾಷೆಯ ಜೀವಂತಿಕೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಭಾಷೆ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ, ವ್ಯವಹಾರಿಕ ಅನುಕೂಲಕ್ಕಾಗಿ ಪರಭಾಷೆಯ ಅವಶ್ಯಕತೆ ಇದೆ ಆದರೆ ಸಾಧ್ಯವಾದಷ್ಟು ಹೆಚ್ಚಿನ ರೀತಿಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಯುವ ಪೀಳಿಗೆಗೆ ಕನ್ನಡ ಭಾಷೆ ಕುರಿತು ವಿಶೇಷ ಅಭಿಮಾನ ಮೂಡಿಸಬೇಕಿದೆ ಎಂದರು .

     

    ಸ್ಥಳೀಯ ಮುಖಂಡ ಟಿ.ಜಿ.ಮಂಜುನಾಥ್ ಮಾತನಾಡಿ ಕರುನಾಡಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ, ಕನ್ನಡ ಭಾಷೆ ಅನ್ಯ ಪರಭಾಷೆಗಳಿಗಿಂತ ಸುಂದರ ಹಾಗೂ ವಿಶೇಷತೆಗಳಿಂದ ಕೂಡಿದೆ, ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕುಗ್ಗುತ್ತಿದೆ , ಭಾಷೆಯನ್ನು ಉಳಿಸುವ ಅವಶ್ಯಕತೆ ಇಲ್ಲ, ನಾವೆಲ್ಲರೂ ಭಾಷೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ , ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕಿದೆ, ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ಹಾಗೂ ಇತರರಿಗೆ ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ನಮ್ಮ ಸಣ್ಣ ಅಳಿಲುಸೇವೆಯನ್ನು ನೀಡೋಣ ಎಂದರು.

     

    ಕಾರ್ಯಕ್ರಮದಲ್ಲಿ ಡಾ ನವೀನ್,ಡಾ ಆನಂದ್,ಟಿ ಜಿ ಮಂಜುನಾಥ್ (LIC), V ವೆಂಕಟೇಶ್,ಚೈತ್ರ ಭಾಸ್ಕರ್, ಟಿ ಎಂ ಪ್ರಭಾಕರ್, ಟಿ ಏನ್ ನಾಗರಾಜು ( babu), ಟಿ ಹೆಚ್ ಶಿವಕುಮಾರ್, ಚೈತ್ರ ಶ್ರೀಧರ್, ಮಂಜುನಾಥ್ (SST), ಮಹಾಲಕ್ಷ್ಮಮ್ಮ, ರಾಮಕೃಷ್ಣಪ್ಪ, ಗ್ರಾ ಪಂ ಸದಸ್ಯ ಪಿ ಲೋಕೇಶ್, ಮುನಿರಾಜು,ರಂಗಸ್ವಾಮಯ್ಯ, ಚನ್ನೇಗೌಡ,ಸ್ಥಳೀಯ ಮುಖಂಡರಾದ C ಚಿಕ್ಕಣಪ್ಪ (ಮಾಸ್ಟರ್), ಮುನಿರಾಜಪ್ಪ (ಮಾಸ್ಟರ್), ಸಿ.ರಾಮಕೃಷ್ಣಪ್ಪ, ದೀಪು,ಸುಬ್ಬರಾಜು,ಭಾಸ್ಕರ್, ಪ್ರಕಾಶ್, ಅಂಜಿನಮೂರ್ತಿ,ಅಜಯ್, ವಸಂತ್,ನವೀನ್,ರಘು,ಮೋಹನ್,ಲಕ್ಷ್ಮಣ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

     

  • ಸರ್ಕಾರಿ ಜಮೀನನ್ನು ಉಳಿಸುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರಬುದ್ಧ ಕರ್ನಾಟಕ ಭೀಮ ಸೇನೆ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಅರೇಹಳ್ಳಿ ಗುಡ್ಡದಹಳ್ಳಿ ಗ್ರಾಮದ ಸರ್ವೆ ನಂ.57ರಲ್ಲಿ 10 ಎಕರೆ 25 ಗುಂಟೆ ಜಮೀನಿನ ಪೈಕಿ 6 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕಾನೂನು ಬಾಹಿರವಾಗಿ ಮಂಜೂರು ಮಾಡಿಕೊಂಡಿರುವ ಜಮೀನನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

     

     

    ಈ ಕುರಿತು ದಲಿತ ಮುಖಂಡ , ಸಂಘಟನೆಯ ಸಂಸ್ಥಾಪಕ ಅಧ್ಯಕ್ಷಯು. ಮುನಿರಾಜು ಮಾತನಾಡಿ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ, ಅರೇಹಳ್ಳಿ ಗುಡ್ಡದಹಳ್ಳಿ ಗ್ರಾಮದ ಸರ್ವೆ ನಂಬರ್ 57 ರಲ್ಲಿ 10 ಎಕರೆ 25ಗುಂಟೆ ಜಮೀನಿಗೆ ಸಂಬಂಧಿಸಿದಂತೆ 6 ಎಕರೆ ಜಮೀನಿನಲ್ಲಿ ತಲಾ 1 ಎಕರೆ 20 ಗುಂಟೆಯಂತೆ 4 ಜನಕ್ಕೆ ಕಾನೂನು ಬಾಹಿರವಾಗಿ ದಾಖಲಾತಿಗಳನ್ನು ಮಾಡಿಕೊಂಡಿದ್ದಾರೆ.

     

     

    ಅಧಿಕಾರಿಗಳು ಸ್ಥಳಕ್ಕೆ ಭೇಟಿಕೋಟ್ಟು ಪರಿಶೀಲನೆ ನೆಡೆಸಿ ಕಾನೂನು ಬಾಹಿರವಾಗಿ ಮಂಜೂರು ಮಾಡಿರುವ ಭೂಮಿಯನ್ನು ವಜಾ ಗೊಳಿಸುವ ಮುಖಾಂತರ ಸದರಿ ಜಾಗವನ್ನು ಸರ್ಕಾರವು ವಶಪಡಿಸಿಕೊಳ್ಳಬೇಕೆಂದು ತಿಳಿಸಿದರು.

     

    ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಪಕ್ಷದಲ್ಲಿ ಮುಂದೆ ಸಂಘಟನೆ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು

  • ರಾಜ್ಯ ವಿ-ಕರವೇ ಹಾಗೂ ಕನ್ನಡ ಪರ ಸಂಘಟನೆಯ ಒಕ್ಕೂಟ ದಿಂದ 69 ನೇ ಕನ್ನಡ ರಾಜ್ಯೋತ್ಸವ ಹಾಗು 51 ನೇ ಸುವರ್ಣ ಮಹೋತ್ಸವವನ್ನು ಆಚರಣೆ

    ದೊಡ್ಡಬಳ್ಳಾಪುರ : ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬಂತೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗು ಕನ್ನಡ ಪರ ಸಂಘಟನೆಯ ಒಕ್ಕೂಟ ದಿಂದ 69 ನೇ ಕನ್ನಡ ರಾಜ್ಯೋತ್ಸವ ಹಾಗು 51 ನೇ ಸುವರ್ಣ ಮಹೋತ್ಸವವನ್ನು ಆಚರಣೆ ಮಾಡಲಾಯಿತು.

     

    ನಗರದ ಡಿಕ್ರಾಸ್ ಮುಖ್ಯ ರಸ್ತೆಯಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಉದ್ಘಾಟನೆ ಮಾಡಿ ಮಾತನಾಡಿದರು, ಭಾರತದ ಸ್ವಾತಂತ್ರ್ಯದ ನಂತರ ದೇಶದ 500 ಹೆಚ್ಚು ಸಂಸ್ಥಾನಗಳಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಿ ಕನ್ನಡ ನಾಡನ್ನು ಮೈಸೂರ ಸಂಸ್ಥಾನ ವೆಂದು ಕರೆಯುತ್ತಿದ್ದರು ಮೈಸೂರು ರಾಜ್ಯವನ್ನು ಮಾ ರಾಮಮೂರ್ತಿ ಅರೂರು ವೆಂಕಟರಾಯರು ವಿ.ಕೃ ಗೋಕಾಕ್ ತು .ಸು. ಶ್ಯಾಮಸಂದರ್ 1972 ನವಂಬರ್ 1 ರಂದು ಕರುನಾಡು ಕರ್ನಾಟಕ ವೆಂದು ನಾಮಕರಣ ಮಾಡಲಾಗಿದ್ದು ಇಂದಿಗೆ 51 ವರ್ಷ ಕಳೆದರು ನಮ್ಮ ಕನ್ನಡ ನಾಡು ನುಡಿ ನೆಲ ಜಲ ಬಗ್ಗೆ ಹೋರಾಟ ಮಾಡಿ ಪಡೆಯುವಂತೆ ವ್ಯವಸ್ಥೆ ನಮ್ಮದಾಗಿದೆ ಕಾರ್ಖಾನೆಗಳಲ್ಲಿ ಬ್ಯಾಂಕ್ ಕನ್ನಡಿಗರಿಗೆ ಮಾನ್ಯತೆ ಇಲ್ಲ ಇದು ನಾವು ಉಳಿಯಬೇಕಾದರೆ ನಮ್ಮ ಹಕ್ಕು ನಮ್ಮ ಭಾಷೆಯನ್ನು ಉಳಿಸಿ ಬೇಕಾಗಿದೆ ಎಂದರು

     

    ನಂತರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ ಮನೆಯಲ್ಲಿ ಮಕ್ಕಳಿಗೆ ಮಮ್ಮಿ ಡ್ಯಾಡಿ ಅಂಕಲ್ ಎಂದು ಸಂಭೋದಿಸುವ ಬದಲು ಅಮ್ಮ ಅಪ್ಪ ಚಿಕ್ಕಪ್ಪ ದೊಡ್ಡಪ್ಪ ಎಂದು ಹೇಳಿ ಕೊಟ್ಟರೆ ಕನ್ನಡ ಭಾಷೆಗೆ ಗೌರವ ಕೊಟ್ಟಂತೆ ಪಾಶ್ಚಿಮಾತ್ಯ ಭಾಷೆ ಹಿಂದೆ ಹೋಗುವುದು ಬಿಟ್ಟು ನಮ್ಮ ತಾಯಿ ಭಾಷೆ ಮೂದಲು ಗೌರವಿಸಿ ನಮ್ಮ ಭಾಷೆಗಾಗಿ ಅನೇಕ ಮಹನೀಯರು ತ್ಯಾಗ ಬಲಿದಾನದಿಂದ ರಚನೆಯಾದ ಅಖಂಡ ಕರ್ನಾಟಕವನ್ನು ನಾವು ಉಳಿಸಿ ಬೆಳೆಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಬೇರೆ ರಾಜ್ಯ ದೇಶದಿಂದ ಬಂದಿರುವ ಕಾರ್ಮಿಕರಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಮುಡಿಸಿ ಮಾತನಾಡಲು ಕಲಿಸಿದೆ ಅದರೆ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದರು

     

    ಕಾರ್ಯಕ್ರಮದಲ್ಲಿ ಮಾಜಿ ನಗರ ಸಭಾ ಸದಸ್ಯೆ ಅನುಸೂಯಮ್ಮ, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಮಿತಿಯ ನಯಾಜ್ ಖಾನ್,ಕೆ ಆರ್ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ, ಬಿ. ಸೋಮರಾಜು, ಗಂಗರಾಜು, ಅಜಯ್ ಕುಮಾರ್,ಜಿಲ್ಲಾಧ್ಯಕ್ಷ ಮಂಜುನಾಥ,ಯುವ ಜಿಲ್ಲಾಧ್ಯಕ್ಷ ಪಣೀಶ್,ಮಹಿಳಾ ಜಿಲ್ಲಾಧ್ಯಕ್ಷ ಶಶಿಕಲಾ,ಕಾರ್ಯದರ್ಶಿ ರೇಷ್ಮಾ ಖಾನಂ , ತಾಲೂಕು ಅಧ್ಯಕ್ಷ ಹರಿ ಕುಮಾರ್. ಚಂದ್ರಶೇಖರಯ್ಯ. ನವೀನ್ ಕುಮಾರ್. ವಿದ್ಯಾಧರ. ನಗರ ಅಧ್ಯಕ್ಷ ಚರಣ್ ಕುಮಾರ್ ಸರ್ಕಾರಿ ಅಸ್ಪತ್ರೆಯ ರಾಜು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

  • ಕಲ್ಯಾಣ ಕರ್ನಾಟಕದಲ್ಲಿ ಕಣ್ಣು ತೆರೆಯುತ್ತಿರುವ ಜಯದೇವ ಆಸ್ಪತ್ರೆ

    ಬೆಂಗಳೂರು ಡಿ21 : ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆ ಲೋಕಾರ್ಪಣೆ ನಾಳೆ ಮುಖ್ಯಮಂತ್ರಿಗಳಿಂದ ನೆರವೇರಲಿದೆ.

     

    ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು,

    ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ

     

    ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾತಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ. ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಒಟ್ಟಾರೆ 371 ಹಾಸಿಗೆ ಸಾಮರ್ಥ್ಯ ಇದ್ದು, ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಇಲ್ಲಿ ಸಿಗಲಿದೆ.

     

    ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡವನ್ನು ಕಲಬುರಗಿಯಲ್ಲಿ ಆಸ್ಪತ್ರೆ ಹೊಂದಲಿದ್ದು, ಬೆಂಗಳೂರು ಬಿಟ್ಟರೆ ಕಲಬುರಗಿ ಶಾಖಾ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ಸೇವೆ ಸಹ ನೀಡಲು ಉದ್ದೇಶಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಮೊದಲನೇಯದು ಎನ್ನುವ ಹೆಗ್ಗಳಿಕೆ.‌

     

    ನೂತನ ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗದಂತೆ 7 ಲಕ್ಷ ಲೀ. ನೀರು ಸಾಮರ್ಥ್ಯ ಟ್ಯಾಂಕ್ ಸ್ಥಾಪಿಸಿದ್ದು, 11ಕೆ.ವಿ. ವಿದ್ಯುತ್ ಕೇಂದ್ರವನ್ನು 33 ಕೆ.ವಿ.ಗೆ ಮೇಲ್ದರ್ಜೇಗೇರಿಸಲಾಗಿದೆ.

     

    3 ತಿಂಗಳಲ್ಲಿ ಸೂಪರ್ ಸ್ಪೆಷಾಲಿಟ್ಟಿ ಆಸ್ಪತ್ರೆ ಲಭ್ಯ:

     

    ಜಯದೇವ ಆಸ್ಪತ್ರೆ ಉದ್ಘಾಟನೆ ನಂತರ ಮುಂದಿನ ಮೂರು ತಿಂಗಳಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಗಾಟಿಸಿ ಸಾರ್ವಜನಿಕರ ಸೇವೆಗೆ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡುವರು.

     

    ಹಳೇ ಜಿಲ್ಲಾ ಆಸ್ಪತ್ರೆ ಕಡೆವಿ ಅಲ್ಲಿ 100 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ಜಿಮ್ಸ್ ಆವರಣದಲ್ಲಿಯೇ 50 ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್, ಸುಟ್ಟು ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಗುಲಬರ್ಗಾ ವಿ.ವಿ.ಯಲ್ಲಿ 10 ಎಕರೆ ಜಮೀನಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತದೆ.

     

    *ಜಯದೇವ ಆಸ್ಪತ್ರೆಯಿಂದ 5.75 ಲಕ್ಷ ಓ.ಪಿ.ಡಿ. ಸೇವೆ*

     

    2016ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದ ಅವಧಿಯಲ್ಲಿಯೇ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ತಾತ್ಕಲಿಕ ಆರಂಭಿಸಲಾಗಿತ್ತು.

     

    ಕಳೆದ 8 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯಿಂದ 5.75 ಲಕ್ಷ ಜನ ಮತ್ತು 18,550 ಮಕ್ಕಳು ಓ.ಪಿ.ಡಿ. ಸೇವೆ ಪಡೆದಿದ್ದಾರೆ. 47,500 ಜನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು, 39,462 ಜನ ಕ್ಯಾತ್‌ಲ್ಯಾಬ್ ಸೇವೆಗೆ ಒಳಗಾಗಿದ್ದಾರೆ.

     

    25,000 ಮಂದಿ ಎನ್ಜಿಯೋಗ್ರಾಮ್ ಮಾಡಿಸಿದ್ದು, 13,000 ಎನ್ಜಿಯೋಪ್ಲಾಸ್ಟಿಸ್, 300 ಜನ ಪೇಸ್ ಮೇಕರ್ ಹಾಕಿಕೊಂಡಿದ್ದು, 1,300 ಜನ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ. 3.92 ಲಕ್ಷ ಜನ ಇ.ಸಿ.ಜಿ, 2.14 ಲಕ್ಷ ಜನ ಎಕೊ ಟೆಸ್ಟ್ ಮಾಡಿಸಿದ್ದು, 53,399 ಜನ ಎಕ್ಸ್ರೇ ಮಾಡಿಸಿಕೊಂಡಿದ್ದಾರೆ. ಆಸ್ಪತ್ರೆ ಸ್ಥಾಪನೆಯಿಂದ ಇಲ್ಲಿನ ಜನರು ದೂರದ ಬೆಂಗಳೂರು, ಸೋಲಾಪೂರ ಹೋಗುವುದು ತಪ್ಪಿದೆ.

     

    “ಶರಣ”ರ ನಾಡಿನಲ್ಲಿ ಆರೋಗ್ಯ ಕ್ಷೇತ್ರ “ಪ್ರಕಾಶ”ಮಾನ

     

    ಜಯದೇವ ಸಂಸ್ಥೆ ಎಂದರೆ “ಚಿಕಿತ್ಸೆ ಮೊದಲು, ಹಣ ನಂತರ(ಟ್ರೀಟ್‌ಮೆಂಟ್‌ ಫಸ್ಟ್‌-ಪೇಮೆಂಟ್‌ ನೆಕ್ಸ್ಟ್‌)

     

    ತೊಗರಿ ಕಣಜ, ಶರಣರ ನಾಡು ಎಂದೇ ಖ್ಯಾತಿ ಹೊಂದಿರುವ ಕಲಬುರಗಿ ಜಿಲ್ಲೆ ಈಗ “ಕಲ್ಯಾಣ”ಮಯವಾಗುತ್ತಿದೆ. ಅಂದರೆ ಎಲ್ಲ ಕ್ಷೇತ್ರಗಳ ಅದರಲ್ಲೂ ಆರೋಗ್ಯ ಕ್ಷೇತ್ರ ಪ್ರಕಾಶಮಾನವಾಗುತ್ತಿದೆ.

     

    ಕಾಂಗ್ರೆಸ್‌ ಸರ್ಕಾರದ ಅಧಿಕಾರಾವಧಿಯಲ್ಲಿ ಹಲವಾರು ಯೋಜನೆಗಳು ಇಲ್ಲಿ ಅನುಷ್ಠಾನಕ್ಕೆ ಬಂದಿವೆ.

     

    ಈ ಸಾಧನೆಯಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಕಾಳಜಿ ಮತ್ತು ಶ್ರಮ ಎದ್ದು ಕಾಣುತ್ತಿದೆ.

     

    ಶರಣ ಪ್ರಕಾಶ್‌ ಪಾಟೀಲ್‌ ಅವರ ಇಚ್ಛಾಶಕ್ತಿ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಯ ಜನರಿಗೆ ಆರೋಗ್ಯ ಸಿರಿ ದೊರಕಿಸಿಕೊಡಲು ನಿರಂತರ ಶ್ರಮಿಸುತ್ತಿದ್ದಾರೆ. ಹಾಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಲಬುರಗಿ ಜಿಲ್ಲೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರವಲ್ಲದೇ ಇಡೀ ಕರುನಾಡಿನಲ್ಲಿ ಹಲವಾರು ವಿನೂತನ ಹಾಗೂ ಜನೋಪಯೋಗಿ ಯೋಜನೆಗಳು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

     

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ(2013–2018) ಜಯದೇವ ಸಂಸ್ಥೆಯ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿತ್ತು. ಬೃಹತ್‌ ಆಸ್ಪತ್ರೆ ನಿರ್ಮಾಣ ಮಾಡಲು ಹಿಂದಿನ ಸರ್ಕಾರ ನಿರ್ಲಕ್ಷ್ಯ ತೋರಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

    ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಶರಣ್‌ ಪ್ರಕಾಶ್‌ ಪಾಟೀಲ್‌ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಕೂಡಲೇ ಈ ಯೋಜನೆ ಕೈಗೆತ್ತಿಕೊಂಡರು. ನಿರಂತರ ಪರಿಶೀಲನೆ ಹಾಗೂ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕೆಂಬ ಸಂಕಲ್ಪ ತೊಟ್ಟಿದ್ದರಿಂದ ಇಂದು ಜಯದೇವ ಹೃದ್ರೋಗ ಸಂಸ್ಥೆಯ ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ.

     

    *ಜಯದೇವ ಕಲಬುರಗಿ ನೂತನ ಶಾಖೆಯ ವಿಶೇಷತೆಗಳು*

     

    ❖ 371 ಹಾಸಿಗೆ ಸಾಮರ್ಥ್ಯದ ಕಟ್ಟಡ

    ❖ 3 ಕ್ಯಾಥ್‌ಲ್ಯಾಬ್‌ಗಳು

    ❖ 3 ಆಪರೇಷನ್ ಥಿಯೇಟರ್‌ಗಳು

    ❖ 1 ಹೈಬ್ರಿಡ್ OT

    ❖ 105 ICCU ಹಾಸಿಗೆಗಳು

    ❖ 120 ಸಾಮಾನ್ಯ ವಾರ್ಡ್ ಬೆಡ್‌

    ❖ ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು

    ❖ ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲಾರ್‌ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ CT ಸ್ಕ್ಯಾನ್, 1.5T MRI, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ ಒದಗಲಿದೆ.