Blog

  • ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯ : ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ….???

    ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ನಡೆದಿದ್ದು, ಹುಂಡಿಯಲ್ಲಿ ಒಟ್ಟು 51,76,495 ರೂ. ಸಂಗ್ರಹವಾಗಿದೆ.

    ಜೊತೆಗೆ 7, 600 ರೂ ಮೌಲ್ಯದ 2ಗ್ರಾಂ ಚಿನ್ನ, ಹಾಗೂ ರೂ 48,000 ಮೌಲ್ಯದ 1 ಕೆಜಿ 94 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

    Ad

    ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನೆಡೆಯಿತು ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ ಹಾಗೂ ಮುಜರಾಯಿ ಇಲಾಖೆ ತಹಶೀಲ್ದಾ‌ರ್ ಜೆ.ಜೆ.ಹೇಮಾವತಿ ಪ್ರಧಾನ ಅರ್ಚಕ ಆ‌ರ್.ಸುಬ್ರಹ್ಮಣ್ಯ, ಕೆನರಾ ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ, ದೇವಾಲಯಕ್ಕೆ ಬಂದ ಭಕ್ತಾಧಿಗಳು ಉಪಸ್ಥಿತರಿದ್ದರು.

  • ಆಶ್ರಯ ಯೋಜನೆಯಡಿ ನಿವೇಶನ ನೀಡಿ ವರ್ಷಗಳು ಕಳೆದರು ಹಂಚಿಕೆ ಮಾಡದ ರಾಜಘಟ್ಟ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ

    ದೊಡ್ಡಬಳ್ಳಾಪುರ  ( ವಿಜಯಮಿತ್ರ ): ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಇಂದಿಗೂ ಜನರ ಸ್ಥಿತಿಯನ್ನು ಹೇಳಲು ಸಾಧ್ಯವಿಲ್ಲ ಕಾರಣ ಚಿಕ್ಕ ಚಿಕ್ಕ ಗುಡಿಸಲು, ಮತ್ತು ಮನೆಯಲ್ಲಿ ಮೂರು-ನಾಲ್ಕು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ, ನಿರಾಶ್ರಿತರಿಗಾಗಿ, ಕಡುಬಡವರಿಗಾಗಿ ಸರ್ಕಾರವು ಅಶ್ರಯ ಯೋಜನೆಯಡಿ ಜಾಗ ಮಂಜೂರು ಮಾಡಿದ್ದರು..ನಿವೇಶನ ಹಂಚಿಕೆ ಮಾಡಲು ಪಂಚಾಯಿತಿ ಮನಸ್ಸು ಮಾಡಿಲ್ಲ… ಸರ್ಕಾರವು ನಿವೇಶನ ಮಂಜೂರು ಮಾಡಿ ವರ್ಷಗಳೇ ಕಳೆದರು ಫಲನುಭವಿಗಳಿಗೆ ಮಾತ್ರ ನಿವೇಶನ ಸಿಕ್ಕಿಲ್ಲ….. ಎಂಬುದು ಗ್ರಾಮಸ್ಥರ ಆರೋಪವಾಗಿದೆ.

    ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ 2 ಸಾವಿರ ವರ್ಷಗಳ ಇತಿಹಾಸವಿರುವ ಐತಿಹಾಸಿಕ ಗ್ರಾಮ, ಬೆಂಗಳೂರು ಮಾಹಾನಗರಕ್ಕೆ 50 ಕಿ.ಮೀ ಅಂತರದಲ್ಲಿರುವ ಈ ಗ್ರಾಮ ದೊಡ್ಡಬಳ್ಳಾಪುರ ನಗರಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ ಅಷ್ಟೇ ಜೊತೆಗೆ ಇದು ಕಸಬಾ ಹೋಬಳಿಯ ಮುಖ್ಯ ಕೇಂದ್ರ ಕೂಡ ಹೌದು, ಗ್ರಾಮದಲ್ಲಿ ಸುಮಾರು 700ಕ್ಕೂ ಹೆಚ್ಚು ಕುಟುಂಬಗಳಿದ್ದು 3 ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ, ಗ್ರಾಮದಲ್ಲಿನ ಬಹುತೇಕ ಕುಟುಂಬಗಳಿಗೆ ಇರಲು ಸುಸರ್ಜಿತ ವಸತಿಯ ವ್ಯವಸ್ಥೆ ಇಲ್ಲ ಎಂಬುದೇ ವಿಪರ್ಯಾಸ

    Ad

    ಸಣ್ಣ ಸಣ್ಣ ಮನೆಗಳಲ್ಲಿ ಮೂರು – ನಾಲ್ಕು ಕುಟುಂಬಗಳು ವಾಸಮಾಡುತ್ತಿವೆ, ರಾತ್ರಿಯಾದರೆ ನಿದ್ರಿಸಲು ಜಾಗ ಹುಡುಕುವಂತಾಗಿದೆ. ಗ್ರಾಮದ ಸರ್ವೆ ನಂಬರ್ 193ರಲ್ಲಿ ಅಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗಾಗಿ 4 ಎಕರೆ ಜಾಗ ಮಂಜುರಾಗಿದೆ, 22 ವರ್ಷಗಳಾದರು ಬಡವರು ಮತ್ತು ನಿರ್ಗತಿಕರಿಗೆ ನಿವೇಶನ ಹಂಚಿಕೆ ಮಾಡಿಲ್ಲ, ಈಗಾಗಲೇ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಜಾಗಗಳು ಅಭಿವೃದ್ಧಿ ಹೆಸರಲ್ಲಿ ಸ್ವಾಧೀನ ಮಾಡಲಾಗುತ್ತಿದೆ, ಈ ಜಾಗ ಸಹ ಸ್ವಾಧೀನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಒಂದೇ ವೇಳೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಹೋರಾಟಕ್ಕೆ ಇಳಿಯುವುದ್ದಾಗಿ ಭಾರತೀಯ ಕಿಸಾನ್ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜಘಟ್ಟ ಎಚ್ಚರಿಕೆಯನ್ನ ನೀಡಿದ್ದಾರೆ.

     

    ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಜಘಟ್ಟ ನಾರಾಯಣಸ್ವಾಮಿ, 22 ವರ್ಷಗಳ ಹಿಂದೆಯೇ ಸಂಸದರಾಗಿದ್ದ ಆರ್ ಎಲ್ ಜಾಲಪ್ಪ, ಶಾಸಕರಾದ ನರಸಿಂಹಸ್ವಾಮಿಯವರ ಪ್ರಯತ್ನದಿಂದ ನಿವೇಶನಕ್ಕಾಗಿ 4 ಎಕರೆ ಮಂಜೂರಾಗಿತ್ತು, ಆನಂತರ ರಾಜಘಟ್ಟ ಗ್ರಾಮ ಪಂಚಾಯಿತಿ ಅಧಿಕಾರವನ್ನ ಜೆಡಿಎಸ್ ಪಕ್ಷ ಹಿಡಿದಿದ್ದು, ನಿವೇಶನ ಹಂಚಿಕೆ ಮಾಡಿದ್ದಲ್ಲಿ, ಅದರ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೆ ಅನ್ನುವ ಕಾರಣಕ್ಕೆ ಜೆಡಿಎಸ್ ಅಡ್ಡಗಾಲು ಹಾಕುತ್ತಿದೆ, ಎಲ್ಲ ಸಮುದಾಯದಲ್ಲೂ ಬಡವರಿದ್ದು, ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಲು ನಮ್ಮ ಸಹಕಾರ ಸದಾ ಇರುವುದ್ದಾಗಿ ಹೇಳಿದರು.

    ಇದೇ ವೇಳೆ ರಾಜಘಟ್ಟ ಗ್ರಾಮಾಭಿವೃದ್ಧಿ ಯುವ ಸೇನೆಯ ಕಾರ್ಯಕರ್ತರಾದ ವಿನಯ್, ನವೀನ್,ಸಾಗರ್, ರವಿ, ಗಗನ್, ಅನಂತ್, ಪ್ರಮೋದ್, ಆನಂದ್ ಇದ್ದರು.

     

     

     

  • ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಕೈಬಿಡಲಿದ್ದಾರಾ ಕಿಚ್ಚ ಸುದೀಪ್ : ಆಗಲಿದೆಯಾ ಬಿಗ್ ಬಾಸ್ 11 ಕಿಚ್ಚ ಸುದೀಪ್ ರ ಕೊನೆಯ ಶೋ,

    ಇದೇ ನನ್ನ ಕೊನೆಯ ಶೋ ಎಂದು ತಿಳಿಸಿದ ಕಿಚ್ಚ ಸುದೀಪ್ ತಿಳಿಸಿದ್ದಾರೆ, ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನೋ ಕಳೆದ 10 ಸೀಸನ್ ಳಿಂದ ನಟ ಕಿಚ್ಚ ಸುದೀಪ್ ಸಾರಥಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ, ಆದರೆ ಇದ್ದಕ್ಕಿದ್ದಂತೆ ಬಿಗ್ ಬಾಸ್ 11 ನನ್ನ ಕೊನೆಯ ಶೋ ಆಗಲಿದೆ ಎಂದು ತಾವೇ ತಮ್ಮ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ.

     

     

    ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಕೊಂಡಿರುವ ಅವರು ಬಿಗ್ ಬಾಸ್ (BBK)11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಟಿವಿಆರ್ (ಸಂಖ್ಯೆ) ಕಾರ್ಯಕ್ರಮ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯ ಬಗ್ಗೆ ಸಂಪುಟಗಳಲ್ಲಿ ಹೇಳುತ್ತದೆ. ಇದು ಉತ್ತಮ 10+1 ವರ್ಷಗಳ ಒಟ್ಟಿಗೆ ಪ್ರಯಾಣವಾಗಿದೆ, ಮತ್ತು ನಾನು ಏನು ಮಾಡಬೇಕೆಂಬುದನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಬಣ್ಣಗಳು ಮತ್ತು ಈ ಎಲ್ಲಾ ವರ್ಷಗಳಿಂದ BB ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ.

     

    ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ನನ್ನ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಎಂದು ತಮ್ಮ ಟ್ವಿಟ್ ಮೂಲಕ ತಿಳಿಸಿದ್ದಾರೆ.

  • ಗಣಪತಿ ದೇವಾಲಯ ಜಿರ್ಣೋದ್ದಾರಕ್ಕೆ 1,50,000 ರೂಗಳ ಡಿಡಿ ವಿತರಣೆ

    ದೊಡ್ಡಬಳ್ಳಾಪುರ ಅ 13 ( ವಿಜಯಮಿತ್ರ ): ತಾಲೂಕಿನ ಕನಸವಾಡಿ ಕಾಲೋನಿ ಮಧುರೆ ಹೋಬಳಿಯಗಣಪತಿ ದೇವಾಲಯ ಜಿರ್ಣೋದ್ದಾರಕ್ಕೆ 1,50,000 ರೂ ಗಳ ಡಿ ಡಿ ಯನ್ನು ತಾಲೂಕು ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ DD ವಿತರಿಸಿದರು.

     

    Ad

     

    ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ದೇವಾಲಯ ಜಿರ್ಣೋದ್ದಾರಕ್ಕೆ 1,50,000 ರೂ ಗಳನ್ನು ನೀಡಿದ್ದು ಕ್ಷೇತ್ರದ ಪರವಾಗಿ ತಾಲೂಕಿನ ಯೋಜನಾಧಿಕಾರಿ ಸುಧಾ ಬಾಸ್ಕರ್ DD ವಿತರಿಸಿ ಮಾತನಾಡಿದರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಮಾಡುತ್ತಿದ್ದು ದೇವಾಸ್ಥಾನ ಜಿರ್ಣೋದ್ದಾರ, ಡೈರಿ ಕಟ್ಟಡ,ಸ್ಮಶಾನ ಅಭಿವೃದ್ಧಿ, ಕೆರೆ ಅಭಿವೃದ್ದಿ ಹೀಗೆ ಸಮುದಾಯ ಅಭಿವೃದ್ಧಿ ಮೂಲಕ ಧರ್ಮಸ್ಥಳ ಕ್ಷೇತ್ರದಿಂದ ಅನುದಾನಗಳನ್ನು ನೀಡುತ್ತಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು

    ಕಾರ್ಯಕ್ರಮದಲ್ಲಿಗ್ರಾ.ಪಂ. ಸದಸ್ಯರಾದ ವಿಜಯಕುಮಾರ್, ಒಕ್ಕೂಟದ ಅಧ್ಯಕ್ಷರಾದ ವಸಂತ್,ದೇವಸ್ಥಾನದ ಸಮಿತಿ ಸದಸ್ಯರಾದ ಉಮಾಶಂಕರ್, ರಾಮಣ್ಣ,ಸಿದ್ದರಾಮಣ್ಣ, ಪುನೀತ್,ಸುವರ್ಣಮ್ಮ,ಸಿದ್ದಲಿಂಗಯ್ಯ,ಸಮಿತಿ ಸದಸ್ಯರು ಹಾಗೂ ಮಧುರೆ ವಲಯದ ಮೇಲ್ವಿಚಾರಕಿ ಶ ಗಿರಿಜಾ ಸೇವಾಪ್ರತಿನಿಧಿಗಳಾದ ಬಸವರಾಜು, ಭಾಗ್ಯ, ಸಂಘದ ಸದಸ್ಯರು ಉಪಸ್ಥಿತರಿದ್ದರು.

  • ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಬೇಕಿದೆ – ಪ್ರಕಾಶ್

    ದೊಡ್ಡಬಳ್ಳಾಪುರ ಅ 13( ವಿಜಯಮಿತ್ರ ): ಮಡಿವಾಳ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳೆಯಲು ಸದಾ ನಮ್ಮ ಸಂಘದ ಬೆಂಬಲವಿರುತ್ತದೆ. ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಉತ್ತಮ ಸೇವೆ ಸಲ್ಲಿಸಲಿ ಎಂಬುದು ನಮ್ಮ ಆಶಯ ಎಂದು ಕರ್ನಾಟಕ ರಾಜ್ಯ ಮಡಿವಾಳಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ಸಮುದಾಯದ ಏಳಿಗೆಗಾಗಿ ಯಾವುದೇ ಅಪೇಕ್ಷೆ ಇಲ್ಲದೆ ಸದಾ ದುಡಿಯುತ್ತಿದ್ದೇವೆ. ಸಮುದಾಯದ ಪ್ರತಿಯೊಬ್ಬರು ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ರೀತಿಯಲ್ಲಿ ಜೀವಿಸಲಿ ಎಂಬುದೇ ನಮ್ಮೆಲ್ಲರ ಆಶಯ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉತ್ತಮ ಸಂಘಟನೆಯಾಗಿದ್ದು, ಪ್ರತಿ ಕಾರ್ಯಕ್ರಮಕ್ಕೂ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿದೆ. ಸ್ಥಳೀಯ ಮುಖಂಡರ ಸಲಹೆ ಮತ್ತು ಸಹಕಾರದಿಂದ ತಾಲೂಕಿನಲ್ಲಿ ಮಡಿವಾಳ ಸಮುದಾಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದರು.

     

    Ad

    ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಶಾಮಯ್ಯ ಮಾತನಾಡಿ ಇಂದು ನಮ್ಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅವರ ಹುಟ್ಟು ಹಬ್ಬದ ಆಚರಣೆಯನ್ನು ತಾಲೂಕಿನ ಸಮುದಾಯದ ಮುಖಂಡರೊಂದಿಗೆ ಆಚರಿಸಿದ್ದೇವೆ. ತಾಲೂಕಿನಲ್ಲಿ ಸಮುದಾಯದವನ್ನು ಒಗ್ಗೂಡಿಸಲು ರಾಜ್ಯ ಸಮಿತಿಯಿಂದ ನಮಗೆ ಸಾಕಷ್ಟು ಬೆಂಬಲ ದೊರೆತಿದ್ದು ಪ್ರಮುಖವಾಗಿ ಪ್ರಕಾಶ್ ರವರ ಸಲಹೆ ಮತ್ತು ಸಹಕಾರ ಸದಾ ದೊರೆತಿದೆ. ಇಂದು ಪ್ರಕಾಶ್ ಅವರ ಹುಟ್ಟುಹಬ್ಬವನ್ನು ತಾಲೂಕಿನ ಮುಖಂಡರು ಒಮ್ಮತದಿಂದ ಒಟ್ಟಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

    ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಉಪಾಧ್ಯಕ್ಷ ನರಸಿಂಹಮೂರ್ತಿ ಮುಖಂಡರಾದ ರಾಜಘಟ್ಟ ದೇವರಾಜು,ನೆಲಮಂಗಲ ರಂಗಸ್ವಾಮಿ,ಮುನಿಯಪ್ಪ,ನಾರಾಯಣಪ್ಪ,ನಟರಾಜು,ವೀರಾಂಜಿನಿ, ವೈರ್ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ನೇಕಾರಿಕೆ ಅಭಿವೃದ್ದಿಗೆ ಒತ್ತು ನೀಡಿ : ನೇಕಾರರನ್ನು ಉಳಿಸಿ – ಹರೀಶ್ ಗೌಡ

    ದೊಡ್ಡಬಳ್ಳಾಪುರ : ನೇಕಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳಿಗೆ ಸರ್ಕಾರ ಉತ್ತಮ ಮಾರುಕಟ್ಟೆ ರೂಪಿಸುವ ಮೂಲಕ ನೇಕಾರರಿಗೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಲಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದ್ದಾರೆ.

    Ad

    ನಗರದ ಕರೇನಹಳ್ಳಿಯ ಶ್ರೀ ಪಾರ್ವತಿ ಪುತ್ರ ವಿನಾಯಕ ಗೆಳೆಯರ ಬಳಗ ಇವರ ವತಿಯಿಂದ ಆಯೋಜಿಸಲಾಗಿದ್ದ ಗಣೇಶನ ಪೂಜಾ ಕಾರ್ಯಕ್ರಮದಲ್ಲಿ ಮುಖಂಡರೊಂದಿಗೆ ಭಾಗವಹಿಸಿ ಮಾತನಾಡಿದರು ನಾಡಿನ ಹಾಗೂ ತಾಲ್ಲೂಕಿನ ಎಲ್ಲಾ ಸಮಸ್ತ ನಾಗರಿಕರಿಗೆ ಒಳ್ಳೆ ಆರೋಗ್ಯ ಭಾಗ್ಯ ವೃದ್ಧಿಸಲಿ ಎಲ್ಲರಿಗೂ ಒಳ್ಳೆಯದಾಗಲಿ, ಗಣೇಶ ಪೂಜೆಯು ಸಮುದಾಯವನ್ನು ಒಗ್ಗೂಡಿಸುವ ಸಂಕೇತವಾಗಿದೆ, ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಅಧ್ಯಕ್ಷರು ತ.ನಾ. ಪ್ರಭುದೇವ ನಗರ ಸಭಾ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್ ನಗರ ಸಭಾ ಸದಸ್ಯರು ಪ್ರಭಾ ನಾಗರಾಜು ಗ್ರಾಮಾಂತರ ಉಪ ನಿರೀಕ್ಷಕರು ಪಂಕಜ,ಆನಂದ ಶಾಸ್ತ್ರಿಗಳು.ನೇಕಾರರ ಹೋರಾಟ ಸಮಿತಿ ಅಧ್ಯಕ್ಷರು ವೆಂಕಟೇಶ್,ಜೆಡಿಎಸ್ ಮುಖಂಡರುಗಳಾದ ನಾಗಣ್ಣ, ಪ್ರವೀಣ್ ಶಾಂತಿನಗರ,ಕೇಶವಮೂರ್ತಿ, ಸಂಜೀವ,ಇಫ್ತಿಯರ್ ಅಹ್ಮದ್,ವೈರ್ ಶಿವು,ಕೋದಂಡರಾಮ,ಮಲ್ಲೇಶ್ ಕರೇನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

  • 49ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ದೊಡ್ಡಬಳ್ಳಾಪುರದ ಯೋಗಪಟುಗಳು ಆಯ್ಕೆ

    ದೊಡ್ಡಬಳ್ಳಾಪುರ : 49ನೇಯ ಸಬ್ ಜೂನಿಯರ್ ಅಂಡ್ ಜೂನಿಯರ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಂಪಿಯನ್‌ಷಿಪ್,2024 ಸ್ಪರ್ಧೆಗೆ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಯೋಗರಾಜ್ ತಿಳಿಸಿದ್ದಾರೆ.

     

     

    ಯೋಗ ಫೆಡರೇಷನ್ ಆಫ್ ಇಂಡಿಯಾ ಮತ್ತು ಹಿಮಾಚಲ ಯೋಗ ಅಸೋಸಿಯೇಷನ್‌ಆಶ್ರಯದಲ್ಲಿ ದಿನಾಂಕ 24-10-2024 ರಿಂದ 27-10-2024ರವರೆಗೆ ಹಿಮಾಚಲ ಪ್ರದೇಶದ ಊನ ಜಿಲ್ಲೆಯ ಇಂದಿರಾಗಾಂಧಿ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ 49ನೇಯ ಸಬ್ ಜೂನಿಯರ್ ಅಂಡ್ ಜೂನಿಯರ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಂಪಿಯನ್‌ಷಿಪ್,2024 ಸ್ಪರ್ಧೆಗೆ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ (ರಿ), ಯೋಗಪಟುಗಳಾದ ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ, ಯಶ್ವಿನ್.ಎಸ್, ಕುಶಲ್ ಎಸ್, ನೀರಜ್ ಎಲ್, ಶಶಾಂಕ್ ಪಿ.ಎಸ್, ಕೆ ಎನ್ ವಿಶ್ವನಾಥ್, ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ, ಎನ್ ಖುಷಿಪ್ರಿಯ, ಗೌತಮಿ.ಹೆಚ್,ಆರ್,.ಯಶಸ್ವಿನಿ,.ಟಿ,.ಹಿತಶ್ರೀ ಕೆ.ಎಂ, ಮಧುಶಾಲಿನಿ.ಡಿ.ಎಸ್, ಎಂ.ಆರ್.ಜಾಹ್ನವಿ, 49ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

    ಹಾಗೂ ಕರ್ನಾಟಕ ರಾಜ್ಯ ಬಾಲಕೀಯರ ತಂಡದ ನಾಯಕಿಯಾಗಿ ಎಂ ಆರ್ ಜಾಹ್ನವಿ ಮತ್ತು ಬಾಲಕರ ತಂಡದ ಮ್ಯಾನೇಜರ್ ಆಗಿ ಎಸ್ ಸಿ ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

    ಆಯ್ಕೆಯಾದ ಯೋಗಪಟುಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೇಚುರ್ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಂ ಜಿ ಅಮರ್‌ನಾಥ್, ಕಾರ್ಯದರ್ಶಿ ಎ ನಟರಾಜ್, ಖಜಾಂಚಿ ಕೆ ಆರ್ ಶ್ಯಾಮಸುಂದರ್, ಹೆಚ್ ಆರ್ ಪುಷ್ಪಕ್ ರವೀಂದ್ರ ಮತ್ತು ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭ ಶುಭ ಹಾರೈಸಿದರು.

  • ವಿಜಯದಶಮಿ ಪ್ರಯುಕ್ತ ಕುರುಕ್ಷೇತ್ರ ನಾಟಕ ಪ್ರದರ್ಶನ

    ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ‌ಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ವಿಜಯದಶಮಿ ಪ್ರಯುಕ್ತ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕ ಶನಿವಾರ ರಾತ್ರಿ ನಡೆಯಿತು.

     

    ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು ಮಾತನಾಡಿ, ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲೂ ಕಲಾವಿದರು ನಾಟಕದ ಪರಂಪರೆಯನ್ನು ಬಿಡದೆ, ನಾಟಕ ಕಲಿತು ಪ್ರದರ್ಶನ ಮಾಡುವ ಮೂಲಕ ರಂಗ ಕಲೆಯನ್ನು ಇನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದಾರೆ ರಂಗಕಲೆ ನಮ್ಮ ಗ್ರಾಮೀಣ ಬದುಕಿನ ಮೂಲಸೆಲೆ. ನಾಟಕಗಳು ರೈತಾಪಿ ಜನರ ಮನೋರಂಜನೆಯ ವೇದಿಕೆಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     

    ನಾಟಕ ರಾತ್ರಿ 9 ರಿಂದ ಮುಂಜಾನೆವರೆಗೂ ನಡೆಯಿತು. ಗ್ರಾಮಸ್ಥರು ದಸರಾ ಹಬ್ಬದಂದು ನಾಟಕವನ್ನು ಕಣ್ತುಂಬಿಕೊಂಡರು. ನಾಟಕದ ಎಲ್ಲ ಪಾತ್ರಧಾರಿಗಳು ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

     

    ಕಾರ್ಯಕ್ರಮದಲ್ಲಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾರಾಯಣಪ್ಪ ಹೋಬಳಿ ಜೆಡಿಎಸ್ ಕಾರ್ಯದರ್ಶಿ ಅಶೋಕ್, ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಯುವ ಮುಖಂಡ ಉದಯ ಆರಾಧ್ಯ, ಕನ್ನಡ ಪಕ್ಷ‌ದ ಅಧ್ಯಕ್ಷರಾದ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಬೇಡಿ – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಯೂ ಉತ್ತಮ ರೀತಿಯಲ್ಲಿ ನೆಡೆದಿದ್ದು, ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ ,ಮುಂದೆ ಪ್ರತಿ ಪಂಚಾಯಿತಿಗೆ 3ಕೋಟಿಗಳಷ್ಟು ಅನುದಾನದ ಕಾಮಗಾರಿ ನೆಡೆಸುವಂತೆ ಸೂಚನೆ ನೀಡಲಾಗಿದೆ ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ತಿಳಿಸಿದರು.

    ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಸ್ಥಳೀಯ ಶಾಸಕ ಧೀರಜ್ ಮುನಿರಾಜು ಸುದ್ದಿಗೊಷ್ಟಿಯಲ್ಲಿ ಮಾತನಾಡಿದರು.

     

    ನಗರದ ಅರ್ಕವತಿ ಬಡಾವಣೆಯ ಶಾಸಕರ ಸ್ವಗೃಹದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ಭಕ್ತರಹಳ್ಳಿ,ದೊಡ್ಡ ತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ.RDPR ಇಲಾಖೆಯೊಂದಿಗೆ ಚರ್ಚಿಸಿ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಸೂಕ್ತ ಷರತ್ತುಗಳೊಂದಿಗೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದರು.

    Ad

    ರಸ್ತೆ ಕಾಮಗಾರಿಗಳ ಬಗ್ಗೆ ಸ್ಪಷ್ಟನೆ  

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ ನಮ್ಮ ತಾಲ್ಲೂಕಿನಲ್ಲಿ 1300.km ರಸ್ತೆ ಇದ್ದು , RDPR 30/54 ಯೋಜನೆ ಅಡಿಯಲ್ಲಿ 49ಲಕ್ಷ ಅನುದಾನ ನೀಡಲಾಗಿದ್ದು. 50/54 ರಸ್ತೆ ಜಿಲ್ಲಾ ರಸ್ತೆ ಅಂತರ್ ಜಿಲ್ಲಾ ರಸ್ತೆ ಗಾಗಿ ಲೋಕಪಯೋಗಿ ಇಲಾಖೆ ವತಿಯಿಂದ ರಸ್ತೆ 8 ಕೋಟಿಗಳ ಅನುದಾನ ನೀಡಲಾಗಿದೆ. ರಸ್ತೆಗಳ ಉನ್ನತಿಕರಣಕ್ಕೆ 1.5ಕೋಟಿ ಮಂಜೂರು ಮಾಡಲಾಗಿದೆ.ಅತ್ಯಂತ ಹೆಚ್ಚಿನ ರಸ್ತೆಗಳು ನಮ್ಮಲ್ಲಿದ್ದು ನಿರ್ವಹಣೆ ಕಾರ್ಯಾ ಪ್ರಾರಂಭವಾಗಿದೆ

    ಜಿಲ್ಲೆಯಲ್ಲಿ ಮೊದಲಬಾರಿಗೆ ವೈಟ್ ಟ್ಯಾಪಿಂಗ್ ಸಿ ಸಿ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ,ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿ ಹಾಗೂ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೋಳಿಸುತ್ತಿದ್ದು, ವಿಚಾರ ತಿಳಿಯದೆ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದು ಸರಿಯಲ್ಲ ಎಂದರು.

    ಕ್ರಿಯಾ ಯೋಜನೆಯನ್ನು ಬದಲಿಸಿಲ್ಲ ಯಥಾಸ್ಥಿತಿ ಮುಂದುವರೆಸಲಾಗಿದೆ 

    ನಾನು ತಾಲ್ಲೂಕಿನ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿದ್ದೇನೆ, ಈ ಹಿಂದೆ ಮಾಡಿದ್ದ ಕ್ರಿಯಾಯೋಜನೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದು ಯಾವುದೇ ಬದಲಾವಣೆ ಮಾಡಿಲ್ಲ ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ, ರಾಜಕೀಯ ಬದಲಾವಣೆಗಳಿಗೆ ಅವಕಾಶ ನೀಡಿಲ್ಲ. ಈ ಹಿಂದೆ ತಾಲ್ಲೂಕಿನಲ್ಲಿ ನಿರ್ಮಿಸಿರುವ ಒಳಚರಂಡಿಗಳು ಇಂದು ಕುಸಿಯುತ್ತಿವೆ , ಒಂದು ಒಳಚರಂಡಿ ಕನಿಷ್ಠ 20ವರ್ಷ ಬಾಳಿಕೆ ಬರಬೇಕಿತ್ತು ಆದರೆ ಇಂದು ಒಳಚರಂಡಿ ಕುಸಿಯುತ್ತಿದೆ ಈ ಪ್ರಶ್ನೆಗೆ ಉತ್ತರವನ್ನು ಕಾಮಗಾರಿ ನಡೆಸಿದ ಗುತ್ತಿಗೆದಾರರೇ ನೀಡಬೇಕಿದೆ ಎಂದರು.

     

    ನಗರಸಭೆಯಲ್ಲಿ ಆದಾಯಕ್ಕಿಂತ ವ್ಯಯ ಹೆಚ್ಚು 

    27ರಿಂದ 28ಸಾವಿರ ಮನೆಗಳಿರುವ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಸರ್ಕಾರಿ ಅನುದಾನಗಳ ಕೊರತೆ ಇದೆ, ಪ್ರತಿ ತಿಂಗಳು ಸುಮಾರು 75 ಲಕ್ಷ ಆದಾಯವಿದೆ ಎಂದು ಭಾವಿಸಿದರೆ ನಗರಸಭಾ ವ್ಯಾಪ್ತಿಯ ಜನತೆಗೆ ಸೌಕರ್ಯ ಕಲ್ಪಿಸಲು 1ಕೋಟಿ 40 ಲಕ್ಷದಷ್ಟು ಮೊತ್ತದ ಅವಶ್ಯಕತೆ ಇದೆ, ನಮ್ಮಲ್ಲಿ ಆದಾಯಕ್ಕಿಂತ ವ್ಯಯವೇ ಹೆಚ್ಚಿದೆ ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ನಗರ ಭಾಗದ ಒಳಚರಂಡಿ ನಿರ್ವಹಣೆಗೆ 136ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದೇನೆ, ಈ ಕುರಿತು ಸದನದಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದು ಇಲಾಖೆ ಮತ್ತು ಸಚಿವರಿಗೆ ಮನವಿ ಕೂಡ ಸಲ್ಲಿಸಲಾಗಿದೆ ಎಂದರು.

     

    Ad

    ತಾಲೂಕಿನ ಜನತೆಯ ಆರೋಗ್ಯಕ್ಕೆ ಹೆಚ್ಚಿನ ಒತ್ತು  

     

    ತಾಲ್ಲೂಕಿನ ಜನತೆಯ ಅರೋಗ್ಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗಾಗಿ ಸಿದ್ದೇನಾಯಕನ ಹಳ್ಳಿಯಲ್ಲಿ 9 ಎಕ್ಕರೆ ಪ್ರದೇಶದಲ್ಲಿ ಸುಮಾರು 22ಕೋಟಿ ವೆಚ್ಚದಲ್ಲಿ 50 ಬೆಡ್ ಗಳ ವ್ಯವಸ್ಥೆ ಇರುವ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ಸಿದ್ದವಾಗಿದೆ.ಈ ಹಿಂದೆ ನಮ್ಮ ತಾಲೂಕಿಗೆ ನೀಡಲಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ಸ್ಥಳಾಂತರಿಸುವ ಹುನ್ನಾರ ನೆಡೆದಿತ್ತು,ಆದರೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ಹೋರಾಟ ಫಲವಾಗಿ ಜಿಲ್ಲಾಸ್ಪತ್ರೆ ನಮ್ಮಲ್ಲಿಯೇ ಉಳಿದಿದೆ 195 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದೆ.

     

    ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿ ಕಾಣುತ್ತಿದೆ ಈ ಕೊರತೆಯನ್ನು ನೀಗಿಸಲು 6 ಎಕ್ಕರೆ ಪ್ರದೇಶದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಸಂಬಂಧಪಟ್ಟ ಇಲಾಖೆ ವತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

     

     

    ತಾಲೂಕಿನಲ್ಲಿ ವಿಶೇಷವಾಗಿ ತಿಪ್ಪಾಪುರ ಸಮೀಪ 10ಕೋಟಿ ವೆಚ್ಚದಲ್ಲಿ ಮಹಿಳಾ ಕಾಲೇಜು ನಿರ್ಮಾಣ,25 ಕೋಟಿ ವೆಚ್ಚದಲ್ಲಿ ಉಪವಿಭಾಗಧಿಕಾರಿ (AC)ಆಫೀಸ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

     

    ನೇಕಾರಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು 

    ನಮ್ಮ ತಾಲ್ಲೂಕು ನೇಕಾರಿಕೆಗೆ ಪ್ರಸಿದ್ದಿ ಪಡೆದಿದ್ದು ನೇಕಾರರ ಅಭಿವೃದ್ಧಿ ನನ್ನ ಪ್ರಮುಖ ಉದ್ದೇಶ ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ 75 ಕೊಟ್ಟಿವೆಚ್ಚದಲ್ಲಿ ತಾಲ್ಲೂಕಿನ ಭಾಷೆಟ್ಟಿಹಳ್ಳಿಯಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಕರೆಂಟ್ ವ್ಯವಸ್ಥೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದು ನೇಕಾರರಿಗೆ ಮುಂದೆ ಇದೊಂದು ಉತ್ತಮ ಸೇವೆ ಸಲ್ಲಿಸುವ ಯೋಜನೆಯಾಗಲಿದೆ ಎಂದರು. ತಾಲೂಕಿನ ನೈಕಾರಿಕ್ಕೆ ಉಳಿಸಲು ನೇಕಾರರ ಹಿತರಕ್ಷಣೆ ಕಾಪಾಡುವ ಸಲುವಾಗಿ ಪವರ್ ಲೂಮ್ ಪ್ರೊಟೆಕ್ಷನ್ ಆಕ್ಟ್ ಜಾರಿ ತರಲು ಚಿಂತನೆ ನಡೆಸುತ್ತಿದ್ದೇವೆ, ಈ ಆಕ್ಟ್ ಜಾರಿಗೊಳಿಸಿದರೆ ನೇಕಾರಿಕೆ ಹಾಗೂ ನೇಕಾರರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

     

     

    ದೇವಾಂಗ ಮಂಡಳಿಗೆ ಧನ್ಯವಾದ ಅರ್ಪಿಸಿದ ಶಾಸಕರು.

    ಕೊರೋನ ಸಂದರ್ಭದಲ್ಲಿ ವಿದ್ಯುತ್ ಚಿತಾಗಾರದ ಸೇವೆ ಶ್ಲಾಘನಿಯ ದೇವಾಂಗ ಸಮುದಾಯದ ಸೇವೆ ತಾಲ್ಲೂಕಿನ ಜನತೆ ಮರೆಯಲು ಸಾಧ್ಯವಿಲ್ಲ ಇಂದಿಗೂ ಮುಕ್ತಿದಾಮ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇದಕ್ಕೆ ಪೂರಕವಾಗಿ ತಾಲ್ಲೂಕಿನ ಒಬದೇನಹಳ್ಳಿಯ ಸಮೀಪ 4ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

     

    ಪೈಪ್ ಲೈನ್ ಮೂಲಕ ದೊಡ್ಡತುಮಕೂರು ಮಜರಾ ಹೊಸಹಳ್ಳಿ ಗ್ರಾಮಗಳಿಗೆ ನೀರು ಪೂರೈಕೆ 

     

    ಕಳೆದ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮಸ್ಥರು ಹೋರಾಟ ನೆಡೆಸುತ್ತಿದ್ದಾರೆ, ಅವರ ಅನುಕೂಲಕ್ಕಾಗಿ 9.5ಕೋಟಿ ವೆಚ್ಚದಲ್ಲಿ ಕಾಡನೂರು ಗ್ರಾಮದಿಂದ ಪೈಪ್ ಲೈನ್ ಗಳ ಮೂಲಕ ದೊಡ್ಡತುಮಕೂರು,ಮಜರಾ ಹೊಸಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

     

     

    50 ವರ್ಷ ರಾಜಕಾರಣ ಮಾಡೇ ಮಾಡ್ತೀನಿ…

     

    ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನವ ದೊಡ್ಡಬಳ್ಳಾಪುರ ಖಂಡಿತ ಮಾಡುತ್ತೇನೆ, ಟೀಕೆ ಮಾಡುವ ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳಿದ್ದಲೇ ಉತ್ತರಿಸುತ್ತೇನೆ. ರಾಜಕಾರಣದಲ್ಲಿ ಸೋಲು ಗೆಲುವು ಇದ್ದದ್ದೇ ಗೆಲ್ಲಲಿ ಅಥವಾ ಸೋಲಲಿ 50 ವರ್ಷ ರಾಜಕಾರಣ ಮಾಡೇ ಮಾಡ್ತೀನೆ…ಒಂದು ವಿಷಯವನ್ನು ಕುರಿತು ತಮ್ಮ ಅಭಿಪ್ರಾಯ ಮಂಡಿಸುವ ಮುನ್ನ ಒಮ್ಮೆ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲಿ ಎಂದರು.

     

    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಗ್ರಾಮಾಂತರ ಘಟಕ ಅಧ್ಯಕ್ಷ ನಾಗೇಶ್, ನಗರ ಘಟಕ ಅಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯ ಪದ್ಮರಾಜು, ಮುಖಂಡರಾದ ಮೋಹನ್, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

     

     

     

     

     

     

     

     

     

     

     

     

     

     

     

     

     

     

     

     

     

     

  • ಎಂ ಎಸ್ ಜಿ ಪಿ ಘಟಕ ಕುರಿತು ವಿಧಾನಸಭೆಯಲ್ಲಿ ಚರ್ಚೆ : ಘಟಕವನ್ನು ಮುಚ್ಚಲು ಮುಂದಾಗುತ್ತಾ ಸರ್ಕಾರ….????

    ದೊಡ್ಡಬಳ್ಳಾಪುರ (ವಿಜಯಮಿತ್ರ ): ತಾಲ್ಲೂಕಿನಲ್ಲಿರುವ ಎಮ್.ಎಸ್.ಜಿ.ಪಿ ಘಟಕ ಸ್ಥಾಪನೆಯಾದಾಗ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿದ್ದ Consent for operation ಷರತ್ತುಗಳನ್ನು  ಘಟಕವು ಪಾಲಿಸುತ್ತಿವೆಯೇ; ಷರತ್ತುಗಳನ್ನು ಪಾಲಿಸುತ್ತಿರುವ ಕುರಿತು ಎಷ್ಟು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗಿದೆ ಎಂಬ ವರದಿ ನೀಡುವಂತೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ವಿಧಾನಸಭೆಯಲ್ಲಿ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಪ್ರಶ್ನೆ ಮಾಡಿದ್ದಾರೆ.

     

    ಹೌದು ತಾಲೂಕಿನಲ್ಲಿ ಈ ಹಿಂದೆ ಸದ್ದು ಮಾಡಿದ್ದ ಎಮ್ ಎಸ್ ಜಿ ಪಿ ಘಟಕವು ತನ್ನ ಕಾರ್ಯನಿರ್ವಹಣೆಯಲ್ಲಿ ಸಿಎಫ್ಓ ಷರತ್ತುಗಳನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಪ್ರಶ್ನೆ ಮಾಡಿದ್ದಾರೆ. ಸ್ಥಳೀಯ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

     

    ಈ ಕುರಿತು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಉತ್ತರಿಸಿದೆ,

    ಕರ್ನಾಟಕ ಪರವಾನಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿದ್ದ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ಕಾಲಕಾಲಕ್ಕೆ ಸದರಿ ಘಟಕವನ್ನು ತಪಾಸಣೆ ನಡೆಸುತ್ತಿದ್ದು, ತಪಾಸಣೆ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಆಧಾರದ ಮೇಲೆ ಮಂಡಳಿಯು ಜಲ ಮಾಲಿನ್ಯ (ನಿವಾರಣೆ) ನಿಯಂತ್ರಣ ಕಾಯ್ದೆ, 1974ರ ಅಡಿಯಲ್ಲಿ ದಿನಾಂಕ :01.12.20210 ಘಟಕದಿಂದ ಲೀಚೆಟ್ (Leachate) ಹೊರ ಹರಿಯುವಿಕೆಯನ್ನು ತಡೆಗಟ್ಟಲು ನಿಷೇಧಿತ ಆದೇಶವನ್ನು (Restraining Order) ಸದರಿ ಘಟಕಕ್ಕೆ ಹೊರಡಿಸಿರುತ್ತದೆ.

    ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ :30.12.2021 ರಂದು ಮಂಡಳಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸದರಿ ಘಟಕದ ಮುಖ್ಯಸ್ಥರ ಜೊತೆ ಮೌಖಿಕ ವಿಚಾರಣೆ ನಡೆಸಿ 30 ದಿನಗಳ ಒಳಗಾಗಿ ಸಂಪೂರ್ಣ ಪ್ರದೇಶದ ಮಳೆ ನೀರಿನ ಚರಂಡಿ ವ್ಯವಸ್ಥೆ, ಅದರ ಅಂದಾಜು ವೆಚ್ಚವನ್ನು ಸಲ್ಲಿಸುವಂತೆ ಹಾಗೂ ಅಂತರ್ಜಲ ಅಧ್ಯಯನ ಮತ್ತು ಅದರ ಸ್ಥರಗಳ (Hydrological study) ಲೀಚೆಟ್ ಅನ್ನು (Leachate) ಸಂಗ್ರಹಿಸಲು ಇಂಜಿನಿಯರಿಂಗ್ ವಿನ್ಯಾಸದ ಲಗೂನ್‌ಗಳನ್ನು ತುರ್ತಾಗಿ ನಿರ್ಮಿಸುವುದು. ಇದರ ಕಾಲಮಿತಿಯ ಕ್ರಿಯಾ ಯೋಜನೆಯನ್ನು ಸೂಚಿಸಿ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

     

    ಇದರಂತೆ ಎಮ್.ಎಸ್.ಜಿ.ಪಿ ಘಟಕದವರು ಕಾಲಮಿತಿಯ ಕ್ರಿಯಾಯೋಜನೆಯನ್ನು 07.04.2022 ರಂದು ಮಂಡಳಿಗೆ ಸಲ್ಲಿಸಿದ್ದು, ಸದರಿಯವರು ಕ್ರಿಯಾಯೋಜನೆಯಲ್ಲಿ ತಿಳಿಸಿದ್ದ ಯಾವುದೇ ಕ್ರಮವನ್ನು ಕೈಗೊಂಡಿರದ ಕಾರಣ ಮಂಡಳಿಯಿಂದ ಮತ್ತೊಮ್ಮೆ ದಿನಾಂಕ:09.06.2023ರಂದು ವಿಚಾರಣೆಯನ್ನು ನಡೆಸಿ 100 KLD ಸಾಮರ್ಥ್ಯದ ಲೀಚೆಟ್ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ವಿಸ್ತೀರ್ಣಾ ಸಮ್ಮತಿ ಪತ್ರ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಲು ಸೂಚಿಸಲಾಗಿತ್ತು. ಪ್ರಸ್ತುತ ಚಾಲನಾ ಸಮ್ಮತಿ ಪತ್ರವನ್ನು ಹಿಂತೆಗೆದುಕೊಳ್ಳಲು ಸೂಚಿಸಿ ನಿರ್ದೇಶನವನ್ನು ನೀಡಲಾಗಿರುತ್ತದೆ. 

    ದಿನಾಂಕ:31.08.2023ರಂದು ಸದರಿ ಘಟಕವನ್ನು ದೊಡ್ಡಬಳ್ಳಾಪುರ ಪ್ರಾದೇಶಿಕ ಅಧಿಕಾರಿಗಳು ಪರಿವೀಕ್ಷಣೆ ನಡೆಸಿ, ಪರಿವೀಕ್ಷಣಾ ವರದಿಯನ್ನು ಕೇಂದ್ರ ಕಛೇರಿಗೆ ಕಳುಹಿಸಿ “ಕಾರ್ಯ ಚಾಲನಾ ಸಮ್ಮತಿ ಪತ್ರ ಮತ್ತು ಪರಿಸರ ವಿಮೋಚನಾ ಪತ್ರದಲ್ಲಿ ಸೂಚಿಸಿರುವ ಷರತ್ತುಗಳನ್ನು ಕಾರ್ಯಗತಗೊಳಿಸುವವರೆಗೂ ಸದರಿ ಘಟಕವು ಹೊರಗಿನಿಂದ ಘನತ್ಯಾಜ್ಯವನ್ನು ತೆಗೆದುಕೊಳ್ಳದಂತೆ ಹಾಗೂ ಅಂತರ್ಜಲ ಮತ್ತು ಅದರ ಸ್ಥರಗಳ ಅಧ್ಯಯನವನ್ನು (Hydrological study) ಮಾಡುವಂತೆ ನಿರ್ಬಂಧಿಸಲು” ಶಿಫಾರಸ್ಸನ್ನು ಮಾಡಿರುತ್ತಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಂದು ಉತ್ತರದಲ್ಲಿ ತಿಳಿಸಲಾಗಿದೆ ಹಾಗೂ ಎಮ್.ಎಸ್.ಜಿ.ಪಿ ಘಟಕವು ಷರತ್ತುಗಳನ್ನು ಪಾಲಿಸದ ಬಗ್ಗೆ ನುರಿತ ತಾಂತ್ರಿಕ ತಜ್ಞರುಗಳ ಸಮಿತಿಯಿಂದ ಸದರಿ ಘಟಕವನ್ನು ಪರಿವೀಕ್ಷಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

     

    ಎಂ ಎಸ್ ಜಿ ಪಿ ಘಟಕವನ್ನು ಆದಷ್ಟು ಬೇಗ ತೆರವುಗೊಳಿಸಲಿ ಘಟಕವು ಹೊರ ಸೂಸುವ ಕೆಮಿಕಲ್ ಯುಕ್ತ ನೀರು, ದುರ್ವಾಸನೆಯಿಂದ ನಮ್ಮ ದೈನಂದಿಕ ಜೀವನ ನರಕವಾಗಿದೆ. ಸ್ಥಳೀಯ ಶಾಸಕರು ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ , ಸರ್ಕಾರದ ಆದೇಶಗಳನ್ನು ಪಾಲನೆ ಮಾಡದ ಘಟಕದಿಂದಾಗಿ ಸ್ಥಳೀಯ ರೈತರು ಸಾಕಷ್ಟು ನೊಂದಿದ್ದಾರೆ. ಇನ್ನಾದರೂ ಕಸ ವಿಲೇವಾರಿ ಘಟಕದಿಂದ ನಮಗೆ ಮುಕ್ತಿ ಸಿಗಲಿ. ಉತ್ತಮ ಜೀವನ ಸಾಗಿಸುವಂಥಾಗಲಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.