Blog

  • ಜಿಲ್ಲಾ ವಿಪತ್ತು ನಿರ್ವಹಣೆ ಕೇಂದ್ರ ಹಾಗೂ ಉಸ್ತುವಾರಿ ಘಟಕ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅ. 10 ( ವಿಜಯಮಿತ್ರ ) :-ಜಿಲ್ಲಾ ವಿಪತ್ತು ನಿರ್ವಹಣೆ ಕೇಂದ್ರ ಹಾಗೂ ಉಸ್ತುವಾರಿ ಘಟಕದ ಉದ್ಘಾಟನೆ ಕಾರ್ಯಕ್ರಮವು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ನೆರವೇರಿತು.

    Ad

    ಜಿಲ್ಲಾ ವಿಪತ್ತು ನಿರ್ವಹಣೆ ಕೇಂದ್ರ(ಕೊಠಡಿ ಸಂಖ್ಯೆ. 117A) ಮತ್ತು ಉಸ್ತುವಾರಿ ಘಟಕ(ಕೊಠಡಿ ಸಂಖ್ಯೆ. 117B)ದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ನೆರವೇರಿಸಿದರು.

    Ad

     

    ಈ ವೇಳೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಆರ್. ಸುಮಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್ ಮುಯಿಜ್ಜು ಮತ್ತು ಪ್ರಥಮ ಮಹಿಳೆ ಶ್ರೀಮತಿ ಸಾಜಿದಾ ಮೊಹಮ್ಮದ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

    ಬೆಂಗಳೂರು :ಅ. 10 (ವಿಜಯಮಿತ್ರ):ಬೆಂಗಳೂರು ಭೇಟಿಗಾಗಿ ಆಗಮಿಸಿದ್ದ ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್ ಮುಯಿಜ್ಜು ಮತ್ತು ಪ್ರಥಮ ಮಹಿಳೆ ಶ್ರೀಮತಿ ಸಾಜಿದಾ ಮೊಹಮ್ಮದ್ ಹಾಗೂ ಅವರ ನಿಯೋಗವನ್ನು ಇಂದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯದ ಉನ್ನತ‌ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಆತ್ಮೀಯವಾಗಿ ಬೀಳ್ಕೊಟ್ಟರು.

    ಗೌರವಾನ್ವಿತ ಅಧ್ಯಕ್ಷರ ನಿಯೋಗವು ಅಕ್ಟೋಬರ್ 09 ರಂದು ರಾಜಭವನ ಕಚೇರಿಗೆ ಭೇಟಿ ನೀಡಿ ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾಲ್ಡೀವ್ಸ್ ನ ವಾಣಿಜ್ಯ ವ್ಯವಹಾರ ಮತ್ತಿತರ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ನಂತರ ರಾಜಭವನದಲ್ಲಿ ರಾಜ್ಯಪಾಲರು ಆಯೋಜಿಸಲಾಗಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದರು.

    Ad

    Ad

    ನಂತರ ಹೊಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ದೇಶದ ಮತ್ತು ರಾಜ್ಯದ ವಾಣಿಜ್ಯೋದ್ಯಮಿಗಳೊಂದಿಗೆ ಹಮ್ಮಿಕೊಳ್ಳಲಾದ ಸಭೆಗಳಲ್ಲಿ ಭಾಗವಹಿಸಿ ತಾಜ್‌ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿ ಇಂದು ಅಕ್ಟೋಬರ್ 10 ರಂದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೆಗೆ ಪ್ರಯಾಣಿಸಿತು‌

    ಈ ಸಂದರ್ಭದಲ್ಲಿ ಇಂಡಿಯಾ ಮಾಲ್ಡೀವ್ಸ್ ಹೈ ಕಮಿಷನರ್ ಮುನು ಮಹವರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಸತ್ಯವತಿ ಜಿ., ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಎನ್. ಶಿವಶಂಕರ್, ಪ್ರಾದೇಶಿಕ ಪಾಸ್ ಪೋರ್ಟ್ ಆಧಿಕಾರಿಗಳಾದ ಕೃಷ್ಣ. ಕೆ., ಸೇರಿದಂತೆ ಗಣ್ಯರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಪೆರ್ಲ್ ಗ್ಲೋಬಲ್ l ಕಾರ್ಮಿಕರೊಂದಿಗೆ ದಸರಾ ಆಚರಣೆ : ನೃತ್ಯ ಗಾಯನ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾರ್ಮಿಕರು ಭಾಗಿ

    ದೊಡ್ಡಬಳ್ಳಾಪುರ : ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆ ವತಿಯಿಂದ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮಗಳ ಯೋಜನೆ ಮಾಡುವ ಮುಖಾಂತರ ದಸರಾ ಹಬ್ಬದ ಶುಭಾಶಯಗಳು ಕೋರಲಾಯಿತು.

    ಕಾರ್ಮಿಕರ ಮನೋರಂಜನೆಗಾಗಿ ವಿಶೇಷ ವೇದಿಕೆಯನ್ನು ಕಾರ್ಖಾನೆ ಆಡಳಿತ ಮಂಡಳಿ ಸಿದ್ಧಪಡಿಸಿದ್ದು ವೇದಿಕೆಯಲ್ಲಿ ಮಿಮಿಕ್ರಿ ಕಲಾವಿದ ಗೋಪಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ನೃತ್ಯ ಗೀತೆ ಭಾವಗೀತೆ ಮಿಮಿಕ್ರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕಾರ್ಮಿಕರಿಗಾಗಿ ಆಯೋಜನೆ ಮಾಡಲಾಗಿತ್ತು.

    Ad

     

    Ad

    ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಉದಯ್ ಮಾತನಾಡಿ ನಮ್ಮಲ್ಲಿ ಎರಡುವರೆ ಸಾವಿರಕ್ಕೂ ಅಧಿಕ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಕಾರ್ಮಿಕರು ನಮ್ಮ ಕಾರ್ಖಾನೆಗೆ ಅತ್ಯಮೂಲ್ಯ ರತ್ನಗಳಿದ್ದಂತೆ ಅವರಿಂದಲೇ ಕಾರ್ಖಾನೆಯ ಅಭಿವೃದ್ಧಿ ಬೆಳವಣಿಗೆ ಸಾಧ್ಯ, ಈ ನಿಟ್ಟಿನಲ್ಲಿ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಮನೋರಂಜನೆಯ ಜೊತೆಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಈ ಬಾರಿಯ ದಸರಾ ಹಬ್ಬದ ಶುಭಾಶಯಗಳು ಕೋರಲಾಗಿದೆ ದಿನನಿತ್ಯ ಕೆಲಸದಲ್ಲೆ ತೊಡಗುವ ಕಾರ್ಮಿಕರಿಗೆ ಇಂದಿನ ದಸರ ಸಂಭ್ರಮ ನಿಜ್ಜಕ್ಕು ಖುಷಿ ಕೊಟ್ಟಿದ್ದು ನೋಡುವರ ಮನಸ್ಸಿಗೆ ಸಮಾಧಾನ ನೀಡಿದೆ ಎಂದರು

    ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಖಾನ್    ಮಾತನಾಡಿ ವರ್ಷವಿಡಿ ಕಾರ್ಖಾನೆಗಾಗಿ ದುಡಿಯುವ ಕಾರ್ಮಿಕರಿಗೆ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ, ಕಾರ್ಮಿಕರಿಗಾಗಿ ಈ ವೇದಿಕೆ ಸಿದ್ಧಪಡಿಸಿದ್ದು , ತಮ್ಮ ಪ್ರತಿಭೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರು ಬೆಳಗಿಂದಲೇ ಅತ್ಯಂತ ಉತ್ಸಾಹಕಾರಾಗಿ ದಸರಾ ಹಬ್ಬವನ್ನು ಸ್ವಾಗತಿಸುತ್ತಿರುವುದು ಸಂತಸ ತಂದಿದೆ ಎಂದರು.

     

    ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಯೋಗಿ,ಶಂಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

  • ದೊಡ್ಡಬಳ್ಳಾಪುರ ನಗರಸಭೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ : ಅನುದಾನದ ಬಳಕೆ ಕುರಿತು ಆರೋಪಿಸಿದ ಮುಖಂಡರು

    ದೊಡ್ಡಬಳ್ಳಾಪುರ :ನಗರಸಭಾ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರಿಗಾಗಿ ಮಂಜೂರಾಗಿರುವ ಕಾಮಗಾರಿಗಳನ್ನು ಅಲ್ಪಸಂಖ್ಯಾತ ಜನರು ವಾಸವಿಲ್ಲದೇ ಇರುವ ಕಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ ನೆಡೆಸಲಾಯಿತು.

    ನಗರಸಭಾ ಸದಸ್ಯ ಶಿವಶಂಕರ್ ಮಾತನಾಡಿ ತಾಲ್ಲೂಕಿನ ನಗರಸಭಾ ವ್ಯಾಪ್ತಿಯಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ಅಲ್ಪಸಂಖ್ಯಾತ ಅನುದಾನವನ್ನು ಮಂಜೂರು ಮಾಡಿರುವುದು ಸರಿಯಷ್ಟೆ. ಆದರೆ ಕಾಮಗಾರಿಗಳು ಮಾತ್ರ ಅಲ್ಪಸಂಖ್ಯಾತ ಜನ ವಾಸ ಮಾಡದೇ ಇರುವ ಸ್ಥಳಗಳಲ್ಲಿ ಕಾಮಗಾರಿಗಳು ಮಾಡುತ್ತಿದ್ದು, ಅಲ್ಪಸಂಖ್ಯಾತ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.

    Ad

    ಈ ಕಾಮಗಾರಿಗಳಿಗೆ ನಗರಸಭೆಯಿಂದ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ರೀತಿಯ ಎನ್.ಓ.ಸಿ.ಯನ್ನು ಪಡೆದುಕೊಂಡಿರುವುದಿಲ್ಲ. ಅಷ್ಟೇ ಅಲ್ಲದೇ ಈ ಅನುದಾನದಲ್ಲಿ ಮಂಜೂರು ಆಗಿರುವಂತೆ ಆಂದಾಜು ಪಟ್ಟಿಯಂತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಯೊಂದಿಗೆ ಚರ್ಚಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.

    ಯಾವುದೇ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಬೇಕಾದರೇ ಶಿಷ್ಟಾಚಾರ ಪಾಲಿಸಬೇಕು. ಆದರೆ, ಇದು ಯಾವುದೂ ನಡೆಯುತ್ತಿಲ್ಲ. ಗುತ್ತಿಗೆದಾರರು ಒಂದು ರೀತಿಯ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    Ad

    ನಂತರ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಕೆ.ಆರ್.ಐ.ಡಿ.ಎಲ್ ನಡೆಸುತ್ತಿರುವ ಕಾಮಗಾರಿ ಕಳಪೆಯಿಂದೆ ಕೂಡಿದೆ, ಅಲ್ಪಸಂಖ್ಯಾತರು ವಾಸ ಮಾಡದ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದೆವು, ಆದರೆ, ಅವರು ಇದು ನನ್ನ ಗಮನಕ್ಕೆ ಬಂದಿಲ್ಲ, ಗುತ್ತಿಗೆದಾರರು ಅಂದಾಜು ಪಟ್ಡಿಯೇ ನೀಡಿಲ್ಲ, ನೀವು ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕೇಳಬೇಕು ಎಂದು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

     

    ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಫೋನ್ ಕರೆ ಮಾಡಿ ಮಾತಾಡಿದಾಗ ಅವರು ಯಾವುದೇ ರೀತಿಯ ನಿಖರ ಮಾಹಿತಿ ನೀಡದೇ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

     

    ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಮಕೃಷ್ಣಯ್ಯ, ನಗರ ಸಭಾ ಸದಸ್ಯರಾದ ಫಯಾಜ್, ಅಲ್ತಾಫ್, ರೂಪಿಣಿ ಮಂಜುನಾಥ್, ರಜನಿ ಸುಬ್ರಮಣಿ, ನಾಗಮಣಿ, ಮಂಜುಳಾ, ಚಂದ್ರಮೋಹನ್, ಆನಂದ್, ನಾಗರಾಜ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ ಪಿ ಜಗನ್ನಾಥ್, ಮುಖಂಡರಾದ,ಅಖಿಲೇಶ್, ರಾಜಘಟ್ಟ ರವಿ, ವಿಶ್ವಾಸ್ ಗೌಡ, ಜನಪರ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಖ್ಯಾತ ಉದ್ಯಮಿ ರತನ್ ಟಾಟಾ ಇನ್ನಿಲ್ಲ

    ಮುಂಬೈ : ಖ್ಯಾತ ಉದ್ಯಮಿ, ದೇಶ ಖಂಡ ಮಹಾನ್ ವ್ಯಕ್ತಿ ರತನ್ ಟಾಟಾ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

     

    ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ನಿಧನರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ.

     

  • ಅಭಿಮಾನಿಗಳಿಂದ ಯುವಮುಖಂಡ ರಾಮಕೃಷ್ಣ ಅವರ ಹುಟ್ಟುಹಬ್ಬ ಆಚರಣೆ : ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ

    ದೊಡ್ಡಬಳ್ಳಾಪುರ ಅ. 05 (ವಿಜಯಮಿತ್ರ ) : ತಾಲ್ಲೂಕಿನ ಯುವ ಮುಖಂಡ, ತಾಲ್ಲೂಕು ಭೋವಿ ಸಮುದಾಯ(occ ) ಘಟಕದ ಅಧ್ಯಕ್ಷ ರಾಮಕೃಷ್ಣ ರವರ 37 ನೇ ಹುಟ್ಟುಹಬ್ಬದ ಆಚರಣೆಯನ್ನು ತಾಲ್ಲೂಕಿನ OCC ಕಚೇರಿಯಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.

    ಕಾರ್ಯಕ್ರಮದಲ್ಲಿ ಭೋವಿ ಸಮುದಾಯದ ರಾಜ್ಯ ಹಿರಿಯ ಮುಖಂಡ ಮಾಕಳಿ ರವಿ ಸೇರಿದಂತೆ ಹಲವು ಮುಖಂಡರು ಸಮಾಜಸೇವಕರು ಭಾಗವಹಿಸಿ ರಾಮಕೃಷ್ಣ ಅವರಿಗೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮಧ್ಯಮಗಳೊಂದಿಗೆ ಮಾಕಳಿ ರವಿ ಮಾತನಾಡಿ ರಾಜ್ಯದಾದ್ಯಂತ ನಮ್ಮ ಭೋವಿ ಸಮುದಾಯದ ಬಂಧುಗಳನ್ನು ಒಟ್ಟುಗೂಡಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುತ್ತಿದ್ದೂ, ಪೂಜ್ಯ ಗುರುಗಳು ನಮ್ಮೊಂದಿಗೆ ಸಹಕಾರ ನೀಡಿರುವುದು ಸಂತಸದ ವಿಷಯವಾಗಿದೆ.ಜೊತೆಗೆ ನಮ್ಮ ಯುವ ಮುಖಂಡ ರಾಮಕೃಷ್ಣ ರವರು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಭೋವಿ ಸಂಘಟನೆ ಬಲಿಷ್ಠಗೊಳಿಸುವ ಮೂಲಕ ಸಮುದಾಯದ ಕಾರ್ಯಾಚಟುವಟಿಕೆಗೆ ತಾಲ್ಲೂಕಿನಲ್ಲಿ ಹೊಸ ಸ್ಫೂರ್ತಿ ತರುವುದಲ್ಲದೇ ಸಮುದಾಯಕ್ಕೆ ಶಕ್ತಿ ತುಂಬಿದ್ದಾರೆ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಅವರು ಮತ್ತಷ್ಟು ಉತ್ತಮ ಸೇವೆಗಳನ್ನು ಸಮಾಜಕ್ಕೆ ಸಲ್ಲಿಸುವ ಮೂಲಕ ಖ್ಯಾತಿಗಳಿಸಲಿ ಎಂದು ಶುಭ ಹಾರೈಸಿದರು.

     

    ಮುಖಂಡರಾದ ಮುನಿರಾಜು ಮಾತನಾಡಿ ಸಮಾಜದಲ್ಲಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮನೆ ಮಾತಾಗಿರುವ ರಾಮಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.ಸಾಮಾನ್ಯ ರೈತ ಕುಟುಂಬದಿಂದ ಬಂದ ಯುವಕ ಇಂದು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ತನ್ನ ಅಭಿಮಾನಿಬಳಗ ಹೊಂದಿರುವುದು ಸಂತೋಷದ ವಿಷಯ,ಅವರ ಸೇವೆ ಹೀಗೆ ಮುಂದುವರೆಯಲಿ ಮುಂದೆ ಅವರಿಗೆ ಉತ್ತಮ ಸ್ಥಾನ ಮನ ದೊರೆಯುವ ಮೂಲಕ ತಾಲ್ಲೂಕಿನ ಜನತೆಗೆ ಮತ್ತಷ್ಟು ಸೇವೆ ಸಲ್ಲಿಸುವಂತಾಗಲಿ ಎಂದರು.

    ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸುತ್ತಿರುವುದು ನನ್ನ ಭಾಗ್ಯ, ಜನತೆಯ ಸೇವೆಯನ್ನು ಸದಾ ಯಾವುದೇ ಅಪೇಕ್ಷೆ ಇಲ್ಲದೆ ನಿರಂತರ ಮಾಡುತ್ತಾ ಬಂದಿದ್ದೇನೆ. ಮುಂದೆ ಮತ್ತಷ್ಟು ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.

    ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಅಭಿಮಾನಿಗಳು,ಉಪಸ್ಥಿತರಿದ್ದರು.

  • ಮಹಾತ್ಮಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ – ತ. ನ. ಪ್ರಭುದೇವ್

    ದೊಡ್ಡಬಳ್ಳಾಪುರ ಅ 02(ವಿಜಯಮಿತ್ರ ): ಮಹಾತ್ಮ ಗಾಂಧೀಜಿ ಅವರು ಭಾರತೀಯರ ಮನಸ್ಸಿನಲ್ಲಿ ಮಾತ್ರವಲ್ಲದೆ  ವಿಶ್ವದಾದ್ಯಂತ  ಜನರ  ಮನಸೆಳೆಯದವರು.  ವಿಶ್ವಸಂಸ್ಥೆ  ಮಹಾತ್ಮ‌ ಗಾಂಧೀಜಿ ಜನ್ಮದಿನವನ್ನು  ವಿಶ್ವ ಅಹಿಂಸಾ ದಿನವನ್ನಾಗಿ  ಆಚರಿಸಲಾಗುತ್ತದೆ ಎಂದು ಕನ್ನಡಪರ  ತ.ನ.ಪ್ರಭುದೇವ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ನಗರದ ಮಹಾತ್ಮಗಾಂಧಿ ಪ್ರತಿಮೆಯ‌    ಆವರಣದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ  ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

     

     

    ಮಹಾತ್ಮಗಾಂಧೀಜಿ ಅವರ  ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಪ್ರತಿರೋಧ  ಭಾರತ ಸ್ವಾತಂತ್ರ್ಯ ಚಳುವಳಿಗೆ ಮಾತ್ರ ಸೀಮಿತವಾಗಲಿಲ್ಲ. ವಿಶ್ವದ ಹಲವು ‌ದೇಶದ ನಾಗರಿಕರಿಗೆ ಮಾನವ ಹಕ್ಕುಗಳು ಮತ್ತು ವಿಮೋಚನಾ ಚಳುವಳಿಗಳ ಮೇಲೆ ಅಳವಾದ ಪ್ರಭಾವ ಬೀರಿತು.‌  ಮಹಾತ್ಮ ಗಾಂಧೀಜಿಯವರು  ಮಾನವಹಕ್ಕು,  ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ನಡೆಸಿದ  ಹೋರಾಟಗಳು  ಜಾಗತಿಕ ಮನ್ನಣೆಯನ್ನು ಪಡೆದವು.‌  ಬ್ರಿಟಿಷರ ನಿಯಂತ್ರಣದಿಂದ ಭಾರತವನ್ನು ವಿಮೋಚನೆಗೊಳಿಸಿದ  ಹೋರಾಟವನ್ನು ಭಾರತೀಯರು ಎಂದೂ ಮರೆಯಲಾರರು. ಮಹಾತ್ಮಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ ಎಂದರು.

     

    Ad

    ಲಾಲ್ ಬಹದ್ದೂರ್ ಶಾಸ್ತ್ರಿ ಅವರು   ಪ್ರಮಾಣಿಕತೆ,  ಮತ್ತು ವಿನಮ್ರತೆ, ಸಹಿಷ್ಣುತೆ ಮತ್ತು ದೃಢನಿಶ್ಚಯವುಳ್ಳ ವ್ಯಕ್ತಿತ್ವ ಹೊಂದಿದ್ದವರು.   ಭಾರತವನ್ನು ಪ್ರಗತಿಯೆಡೆಗೆ  ಮುನ್ನಡೆಸಿದವರು. ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ಜೈ ಜವಾನ್ ಮತ್ತು ಜೈ ಕಿಸಾನ್  ಘೋಷ ವಾಕ್ಯದ ಮೂಲಕ ದೇಶದ ಅಭಿವೃದ್ಧಿಯ ಹರಿಕಾರ ಎನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಬಾಲ್ಯದಲ್ಲಿಯೇ ಧೈರ್ಯ, ಸಾಹಸ ಪ್ರೇಮ, ತಾಳ್ಮೆ, ಸ್ವಯಂ ನಿಯಂತ್ರಣ, ಸೌಜನ್ಯ ಮತ್ತು ನಿಸ್ವಾರ್ಥತೆಯಂತಹ ಗುಣಗಳನ್ನು ಬೆಳೆಸಿಕೊಂಡರು ಎಂದರು.

     

     

    ಕಾರ್ಯಕ್ರಮದಲ್ಲಿ  ದೊಡ್ಡಬಳ್ಳಾಪುರ ನಗರಸಭೆ  ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್,  ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್,  ಮಾಜಿ‌ ಖಜಾಂಚಿ  ನಂ.ಮಹಾದೇವ್,  ದೊಡ್ಡಬಳ್ಳಾಪುರ ತಾಲ್ಲೂಕು ‌ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು,  ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್,    ಗೌರವ ಕಾರ್ಯದರ್ಶಿ ಎ.ಜಯರಾಮ, ಕೋಶಾಧ್ಯಕ್ಷ  ಸಾ.ಲ.ಕಮಲನಾಥ್,  ಕಸಬಾ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ರಾಜು ಸಣ್ಣಕ್ಕಿ,  ಮುನಿರಾಜು,  ನಾಗರತ್ನಮ್ಮ,  ಸಫೀರ್,  ಮಲ್ಲೇಶ್,    ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ‌ ಆಯುಕ್ತ ವೆಂಕಟರಾಜು,  ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ಆರ್ಯವೈಶ್ಯ ಮಂಡಲಿಯ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

  • ಮಹಾತ್ಮ ಗಾಂಧೀಜಿಯವರು ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ – ಡಾ. ಎಂ ಚಿಕ್ಕಣ್ಣ

    ದೊಡ್ಡಬಳ್ಳಾಪುರ: ಹರಿಜನ್, ನವಜೀವನ್, ಯಂಗ್ ಇಂಡಿಯಾ ಮುಂತಾದ ಪತ್ರಿಕೆಗಳನ್ನು ಆರಂಭಿಸಿದ ಗಾಂಧೀಜಿ ತನ್ನ ಬರವಣಿಗೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ತ್ರವಾಗಿ ಬಳಸಿಕೊಂಡಿದ್ದರು ಎಂದು ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಜೆ. ರಾಜೇಂದ್ರ ಹೇಳಿದರು.

     

    ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

     

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಅವರು ಪತ್ರಿಕಾ ಮಾಧ್ಯಮದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು, ಅವರು ಹೊಂದಿದ್ದ ಅಭಿಪ್ರಾಯ ಹಾಗೂ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ, ಅವರು ಅಂದು ಆಡಿದ ಮಾತುಗಳು ಇಂದಿಗೂ ಕೂಡ ಸತ್ಯವಾಗಿವೆ, ಸತ್ಯವೇ ದೇವರು ಸತ್ಯಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು, ಅವರು ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸಮಸ್ತ ಭಾರತೀಯರನ್ನು ಒಗ್ಗೂಡಿಸಿ ಜಾಗತಿಕ ಮನ್ನಣೆ ಗಳಿಸಿದರು, ಅಹಿಂಸೆಯನ್ನು ತಮ್ಮ ದಿನನಿತ್ಯದ ಜೀವನದಲ್ಲೂ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದು ಎಂಬುದನ್ನು ತಮ್ಮದೇ ಉದಾಹರಣೆಯ ಮೂಲಕ ಪ್ರದರ್ಶಿಸಿದ್ದು ಅವರ ದೊಡ್ಡ ಸಾಧನೆಯಾಗಿದೆ. ಅವರ ಇಡೀ ಜೀವನ ಸತ್ಯದ ಪ್ರಯೋಗವಾಗಿತ್ತು, ಅವರಂತೆಯೇ ಲಾಲ್ ಬಹದ್ದೂರ್ ಶಾಸ್ತ್ರಿಗಳು ಸಹ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದರು ಎಂದರು.

    Ad

    ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಾಪೀರ್ ಪ್ರಸ್ತಾವಿಕವಾಗಿ ಮಾತನಾಡಿದರು.

     

    ಕಾರ್ಯಕ್ರಮದಲ್ಲಿ ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಚಿಕ್ಕಣ್ಣ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಇಂದು ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಗಾಂಧೀಜಿ ತಮ್ಮನ್ನು ಯಾರು ದ್ವೇಷಿಸಿದರೋ ಅವರನ್ನೇ ಪ್ರೀತಿಸುತ್ತಿದ್ದರು, ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕಿದೆ, ತತ್ವ, ಅಹಿಂಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕಿದೆ ಅವರ ಬದುಕು ಬೋಧನೆ, ತತ್ವ, ಆದರ್ಶಗಳು ನಮ್ಮೆಲ್ಲರ ಹೃದಯಗಳಲ್ಲಿ ಎಂದಿಗೂ ಅಜರಾಮರ ಅವರು ಹೇಳಿದ ಅನೇಕ ಮಾತುಗಳು ಇವತ್ತಿಗೂ ಸತ್ಯ ಎಂದರು.

     

     

    ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾದ ಬಾಬುರೆಡ್ಡಿ, ಅಭಿಯಂತರರಾದ ರಮೇಶ್ , ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಮಹಾಂತೇಶಪ್ಪ, ನರಸಿಂಹರೆಡ್ಡಿ, ಧನಂಜಯ್ ರವಿಕುಮಾರ್, ಉಪ ಪ್ರಾಂಶುಪಾಲರಾದ ದಕ್ಷಿಣ ಮೂರ್ತಿ, ಜಿಯಾಉಲ್ಲಾಖಾನ್, ಮ್ಯಾನೇಜರ್ ಯತಿನ್, ಉದ್ಯೋಗ ಅಧಿಕಾರಿಯಾದ ಬಾಬುಸಾಬಿ ,  ಎನ್.ಎಸ್.ಎಸ್ ಅಧಿಕಾರಿ ಲಕ್ಷ್ಮೀಶ, ಲಯನ್ಸ್ ಕ್ಲಬ್ ಖಜಾಂಚಿ ರವಿಕುಮಾರ್, ಪ್ರಾಧ್ಯಾಪಕರಾದ ಶ್ರೀನಿವಾಸ್,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

  • ಕಸವನ್ನು ಸ್ವಚ್ಛಗೊಳಿಸಿ ಸಸಿ ನೆಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಚ್ಚತಾ ದಿನಾಚರಣೆಗೆ ಚಾಲನೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅ 02 (ವಿಜಯಮಿತ್ರ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ದಿನಾಚರಣೆಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಸವನ್ನು ಸ್ವಚ್ಚಗೊಳಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷವು ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ’ ವನ್ನು ಆಯೋಜಿಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರ ವರೆಗೆ ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಆಂದೋಲನ’ ಹಮ್ಮಿಕೊಳ್ಳಲಾಗಿತ್ತು.

    ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್ ಅವರು ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು.

    Ad

    ಸ್ವಚ್ಛತಾ ಹೀ ಸೇವಾ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾದ ಜಿಲ್ಲೆಯ ನಗರಸಭೆ, ಪುರಸಭೆಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

    ಸ್ವಚ್ಛ ಭಾರತ ಅಭಿಯಾನ ಅಥವಾ ಸ್ವಚ್ಛ ಭಾರತ್ ಮಿಷನ್ ಅನ್ನು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ.ಗಾಂಧೀಜಿ ಅವರು ಸದಾ ಸ್ವಚ್ಛತೆಗೆ ಒತ್ತು ನೀಡುತ್ತಿದ್ದರು. ಸ್ವಚ್ಛತೆಯಲ್ಲಿ ಮಾತ್ರ ದೇವರು ನೆಲೆಸಿದ್ದಾನೆ ಎಂದು ಹೇಳುತ್ತಿದ್ದರು. ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಸ್ವಚ್ಛ ಭಾರತ ಮಿಷನ್ ಆರಂಭಿಸಿ ಆಚರಿಸಲಾಗುತ್ತದೆ ಎಂದು ಸಚಿವರು ಹೇಳಿದರು.

    ದೇಶಾದ್ಯಂತ ಸಾರ್ವಜನಿಕ ಆಸ್ತಿಗಳು, ರಸ್ತೆಗಳು ಮತ್ತು ಸಮಾಜವನ್ನು ಸ್ವಚ್ಛವಾಗಿಡುವುದು ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಸ್ವಚ್ಛ ಭಾರತ ಅಭಿಯಾನ ಆರಂಭಿಸಿಲಾಗಿದೆ.


    ಬಯ್ಯಪ್ಪಾ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕಿನ ದೇವನಹಳ್ಳಿ ಅಧ್ಯಕ್ಷರಾದ ಜಗನ್ನಾಥ್, , ಕೃಷಿ ಸಮಾಜದ ಅಧ್ಯಕ್ಷರಾದ ರವಿ, ರಾಮಚಂದ್ರಪ್ಪ, ಲೋಕೇಶ್, ಮಂಜುನಾಥ್, ಅಪರ ಜಿಲ್ಲಾಧಿಕಾರಿ ಆರ್. ಸುಮಾ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ನಗರಾಭಿವೃದ್ಧಿ ಯೋಜನ ನಿರ್ದೇಶಕರಾದ ರಮೇಶ್, ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಬಾಲಕೃಷ್ಣ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

  • *ಸಬರಮತಿ ಯಿಂದ ದಂಡಿಯವರೆಗೆ ಗಾಂದೀಜಿ ನಡೆಸಿದ ದಂಡಿ ಯಾತ್ರೆಯ ಮಾರ್ಗ ಸುಮಾರು 388 ಕಿಮೀ ರಸ್ತೆ ಅಭಿವೃದ್ಧಿ ಮಾಡಿದ ಕೀರ್ತಿ ನಂದು ಸಚಿವ ಮುನಿಯಪ್ಪ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 02 (ವಿಜಯಮಿತ್ರ):- ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆಯನ್ನು ಸಚಿವ ಕೆ ಹೆಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಿದವರು, ಜಗತ್ತು ಮೆಚ್ಚಿಕೊಂಡ ಮಹಾನ್ ಚೇತನರು. ಗಾಂಧೀಜಿಯವರು ರಾಷ್ಟ್ರಪಿತರೆಂದೇ ಪ್ರಸಿದ್ಧರಾದವರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ನೀತಿಯನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮ ರೂವಾರಿಯಾಗಿ ಸ್ವಾತಂತ್ರ್ಯ ತಂದುಕೊಟ್ಟರು.

     

    ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವದಾದ್ಯಂತ ಗಾಂಧಿ ಜಯಂತಿ ದಿನವನ್ನು ಆಚರಿಸಲಾಗುತ್ತದೆ. ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ ಎಂದರು.

     

     

     

    ದಂಡಿ ಉಪ್ಪಿನ ಸತ್ಯಾಗ್ರಹ

    ಉಪ್ಪಿನ ಕಾನೂನನ್ನು ಮುರಿಯಲು 1930 ರ ಮಾರ್ಚ್ 12 ರಂದು ದಂಡಿಯಾತ್ರೆಯನ್ನು ಸಬರಮತಿ ಆಶ್ರಮದಿಂದ ಆರಂಭಿಸಿ, 1930 ಏಪ್ರಿಲ್‌ 06 ರಂದು ದಂಡಿ ತಲುಪಿತು. ಸುಮಾರು 388 ಕಿಮೀ ದೂರದ ಪಾದಯಾತ್ರೆಯಲ್ಲಿ 78 ನಿಷ್ಠಾವಂತ ಅನುಯಾಯಿಗಳು ಸೇರಿ 60 ಸಾವಿರ ಹೋರಾಟಗಾರರೊಂದಿಗೆ ನಡೆಸಿದ ಉಪ್ಪಿನ ಸತ್ಯಾಗ್ರಹ ದೇಶದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟವಾಗಿದೆ.ಮಹಾತ್ಮ ಗಾಂಧಿಜೀಯವರು ಸಬರಮತಿ ಆಶ್ರಮದಿಂದ ದಂಡಿಯವರೆಗೂ ಉಪ್ಪಿನ ಸತ್ಯಾಗ್ರಹ ಕೈಗೊಂಡ ಹೆದ್ದಾರಿಯನ್ನು ಅಂದು ನಾನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವನಾಗಿದ್ದಾಗ ಸುಮಾರು 388 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದ್ದು ನನ್ನ ರಾಜಕೀಯ ಜೀವನದ ಅತ್ಯಂತ ಅವಿಸ್ಮರಣೀಯವಾದುದಾಗಿದೆ ಎಂದರು.

    Ad

    ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ, ತಾಲ್ಲೂಕಿನ ಗ್ಯಾರಂಟಿ ಅಧ್ಯಕ್ಷರಾದ ಜಗನ್ನಾಥ್, ಬಯ್ಯಪ್ಪಾ ಅಧ್ಯಕ್ಷರಾದ ಶಾಂತಕುಮಾರ್, ಕೃಷಿ ಸಮಾಜದ ಅಧ್ಯಕ್ಷರಾದ ರವಿ, ರಾಮಚಂದ್ರಪ್ಪ,ಲೋಕೇಶ್, ಮಂಜುನಾಥ್,ಮಹಿಳಾ ಮುಖಂಡರು, ಸೇವಾದಳದ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.