Blog

  • *ಮಾರಸಂದ್ರ l ಶ್ರೀನಿವಾಸ ಕಲ್ಯಾಣ ಮತ್ತು ಪೂರಿಜಗನ್ನಾಥ ರಥೋತ್ಸವ ಕಾರ್ಯಕ್ರಮ l PWC ಅಪಾರ್ಟ್ಮೆಂಟ್ ನಿವಾಸಿಗಳಿಂದ ಸಂಭ್ರಮಾಚರಣೆ*

    ನಮ್ಮಲ್ಲಿ ಸರ್ವ ಧರ್ಮಗಳ ಸಮ್ಮಿಲನವಾಗಿದ್ದು, ಇಂದಿನ ಶ್ರೀನಿವಾಸ ಕಲ್ಯಾಣ ಮತ್ತು ಶ್ರೀ ಪೂರಿ ಜಗನ್ನಾಥ ರಥೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಮ್ಮ ಪ್ರಾವಿಡೆಂಟ್ ವೆಲ್ ವರ್ಥ್ ಸಿಟಿಯಲ್ಲಿ ಒಂದು ಮಿನಿ ಇಂಡಿಯಾ ವನ್ನು ಕಾಣಬಹುದಾಗಿದೆ ಎಂದು PWC ಅಪಾರ್ಟ್ಮೆಂಟ್ ನ ಅಧ್ಯಕ್ಷೆ ವಿದ್ಯಾ ಮಿಶ್ರ ತಿಳಿಸಿದರು.

    ಜುಲೈ 7ರಂದು ಪ್ರಾವಿಡೆಂಟ್ ವೆಲ್ ವರ್ಥ್ ಸಿಟಿಯ ನಿವಾಸಿಗಳು ಶ್ರೀನಿವಾಸ ಕಲ್ಯಾಣ ಹಾಗೂ ಪೂರಿಜಗನ್ನಾಥ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗೋ ಪೂಜೆ ಗಣೇಶ ಪೂಜೆ ಸೇರಿದಂತೆ ಬೆಳಗಿನಿಂದಲೂ ಹಲವು ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು ಕಾರ್ಯಕ್ರಮವು ಅದ್ದೂರಿಯಾಗಿ ಮೂಡಿ ಬಂದಿದೆ. ಸುಮಾರು 42 ಎಕ್ಕರೆ ಪ್ರದೇಶದಲ್ಲಿರುವ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಪೂರಿಜಗನ್ನಾಥ ರಥೋತ್ಸವ ಸಾಗುತ್ತಿದ್ದು ಸಂಪೂರ್ಣ ಅಪಾರ್ಟ್ಮೆಂಟ್ ಪ್ರದೇಶವು ಕೃಷ್ಣಮಯವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಧ್ಯಾಹ್ನ 1500 ಭಕ್ತಾದಿಗಳು ಪ್ರಸಾದ ಸ್ವೀಕರಿಸಿದ್ದು. ಸಂಜೆ ಬರೋಬ್ಬರಿ 3000ಕ್ಕೂ ಅಧಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

     

    ಸ್ಥಳೀಯ ನಿವಾಸಿ ಶಾಂತಕುಮಾರ್ ಗೌಡ ಮಾತನಾಡಿ ನಮ್ಮಲ್ಲಿ ದೇಶದ ಹಲವು ಭಾಗಗಳಿಂದ ಬಂದು ವಾಸ ಮಾಡುತ್ತಿರುವ ಹಲವು ಬಗೆಯ ನಿವಾಸಿಗಳನ್ನು ನೀವು ಕಾಣಬಹುದಾಗಿದೆ. ಆದರೆ ನಮ್ಮಲ್ಲಿ ಯಾವುದೇ ಜಾತಿ ಭೇದವಿಲ್ಲ ಸರ್ವರೂ ಸಮಾನರಾಗಿ ಸಮಾನತೆಯಿಂದ ಬಾಳ್ವೆ ನಡೆಸುತ್ತಿದ್ದೇವೆ. ನಮ್ಮಲ್ಲಿ ಎಲ್ಲಾ ರೀತಿಯ ಹಬ್ಬ ಹರಿದಿನಗಳನ್ನು ಸರ್ವ ಸಮುದಾಯದವರು ಒಗ್ಗೂಡಿ ಆಚರಿಸುವುದು ವಾಡಿಕೆಯಾಗಿದೆ ಎಂದರು.

    ಸ್ಥಳೀಯ ನಿವಾಸಿ ಚಂದ್ರಶೇಖರ್ ಶೆಟ್ಟಿ ಮಾತನಾಡಿ ಈ ಬಾರಿ ಪೂರಿ ಜಗನ್ನಾಥ ರಥೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸುವುದು ನೋಡಲು ಸಂತಸವಾಗುತ್ತದೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ಸ್ ಎಲ್ಲರೂ ಒಟ್ಟಾಗಿ ಸೇರಿ ಈ ಹಬ್ಬವನ್ನು ಆಚರಿಸುತ್ತಿದ್ದು. ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಸರ್ವಧರ್ಮಗಳ ಹಬ್ಬಗಳನ್ನು ಆಚರಿಸುತ್ತೇವೆ. ಉದಾಹರಣೆಗೆ ಬಕ್ರೀದ್, ರಂಜಾನ್, ಗುಡ್ ಫ್ರೈಡೇ, ಕ್ರಿಸ್ ಮಸ್, ಗಣೇಶ ಚತುರ್ಥಿ, ದಸರಾ ಹೀಗೆ ಎಲ್ಲಾ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ ಎಂದರು.

     

    ಕಾರ್ಯಕ್ರಮದ ಆಯೋಜಕ ದೇವಿ ಪ್ರಸಾದ್ ಮಿಶ್ರ ಮಾತನಾಡಿ ಜುಲೈ 7ರಂದು ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇದೇ ದಿನ ಶ್ರೀ ಕ್ಷೇತ್ರ ಪೂರಿ ಜಗನ್ನಾಥ ದೇವಾಲಯದಲ್ಲಿ ಜಗನ್ನಾಥ ರಥೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ನಮ್ಮ ಪಿಡಬ್ಲ್ಯೂಸಿ ಅಪಾರ್ಟ್ಮೆಂಟ್ ನಲ್ಲೂ ಕೂಡ ಜಗನ್ನಾಥ ರಥೋತ್ಸವ ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು ಸಂತಸ ತಂದಿದೆ ಎಂದರು.

     

    ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಸಿ ಅಪಾರ್ಟ್ಮೆಂಟ್ ನ ಮುಖಂಡರು, ಸಾವಿರಾರು ನಿವಾಸಿಗಳು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ l ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯ l ಒಟ್ಟು 66,83,320 ರೂ ಸಂಗ್ರಹ*

    ದೊಡ್ಡಬಳ್ಳಾಪುರ : ತಾಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ (ಜುಲೈ 7) ಸೋಮವಾರದಂದು ಹುಂಡಿ ಎಣಿಕೆ ಮಾಡ ಲಾಯಿತು.

     

    ದೇವಾಲಯದ ಹುಂಡಿಯಲ್ಲಿ ಒಟ್ಟು ಹಣ 66,83,320 ರೂ ಬೆಳ್ಳಿ 280ಗ್ರಾಂ, 2 ಗ್ರಾಂ 700ಮಿಲಿ ಬಂಗಾರ ಸಂಗ್ರಹವಾಗಿದೆ.

     

    ಹುಂಡಿ ಎಣಿಕೆ ಕಾರ್ಯಕ್ರಮದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ ನಾರಾಯಣಸ್ವಾಮಿ ಮುಜರಾಯಿ ಇಲಾಖೆ ತಹಸಿಲ್ದಾರ್ ಜೆಜೆ ಹೇಮಾವತಿ ರವರು ಪ್ರಧಾನ ಅರ್ಚಕರು ಆರ್ ಸುಬ್ರಹ್ಮಣ್ಯ ಸಿಬ್ಬಂದಿ ನಂಜಪ್ಪ ದೇವಾಲಯದ ಸಿಬ್ಬಂದಿ ಕೆನರಾ ಬ್ಯಾಂಕ್ ಸಿಬ್ಬಂದಿ ಪೊಲೀಸ್ ಇಲಾಖೆ ಹಾಗು ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹೆಣಿಕೆ ಮಾಡಲಾಯಿತು

  • *ವಿಶ್ವ ಪರಿಸರ ದಿನಾಚರಣೆ l ಸಸಿ ನೆಟ್ಟು ಪೋಷಿಸಿ ಪರಿಸರ ಉಳಿಸಿ – ಖ್ಯಾತ ವಕೀಲ ರವಿ ಮಾವಿನಕುಂಟೆ*

    ಕಾಡನ್ನು ಬೆಳಸಿ ನಾಡನ್ನು ಉಳಿಸಿ ಎಂಬ ಧೇಯ ವಾಕ್ಯವು ಕೇವಲ ಹೇಳಿಕೆಗಷ್ಟೇ ಸೀಮಿತವಾಗಿದ್ದು . ಕಾರ್ಯರೂಪಕ್ಕೆ ತರುವ ಕಾಯಕ ನಮ್ಮಿಂದ ಆಗಬೇಕಿದೆ. ಈ ಉದ್ದೇಶದಿಂದ ಪ್ರತಿ ಮನೆಗೂ ತೆಂಗಿನ ಸಸಿ ವಿತರಣೆ ಮಾಡುವ ಮೂಲಕ ಪರಿಸರದ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಖ್ಯಾತ ವಕೀಲರು, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ರವಿ ಮಾವಿನ ಕುಂಟೆ ತಿಳಿಸಿದರು.

    ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ವತಿಯಿಂದ ಸಾದೇನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರಿಗೆ ತೆಂಗಿನ ಸಸಿ ವಿತರಣೆ ಮಾಡಿದರು.

    ನಂತರ ಮಾತನಾಡಿದ ಅವರು ಪರಿಸರ ರಕ್ಷಣೆ ಸಂರಕ್ಷಣೆ ಎಂಬ ಮಾತುಗಳು ಕೇವಲ ಭಾಷಣಕ್ಕೆ ಸೀಮಿತವಾಗಿವೆ. ಅರಣ್ಯನಾಶ, ವನ್ಯಜೀವಿಗಳ ಮಾರಣಹೋಮ ನೆಡೆಯುತ್ತಿದ್ದು ಅದನ್ನು ತಡೆಯುವ ಕಾರ್ಯ ನಮ್ಮಿಂದ ಆಗಬೇಕಿದೆ . ವಿಶ್ವ ಪರಿಸರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ. ಪ್ರತಿಯೊಬ್ಬರೂ ಪ್ರತಿನಿತ್ಯ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಮೂಲಕ ಆಚರಿಸಬೇಕಿದೆ ಎಂದರು.

     

    ಕಳೆದ ಬಾರಿ ಹಲವು ಗಣ್ಯ ಸಮ್ಮುಖದಲ್ಲಿ ಸಾವಿರಾರು ಜನತೆಗೆ ಸಸಿ ವಿತರಣಾ ಕಾರ್ಯಕ್ರಮವನ್ನು ನಮ್ಮ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದು. ಅಂತೆಯೇ ಈ ಬಾರಿಯೂ ಸಾದೇನಹಳ್ಳಿ ಗ್ರಾಮದಲ್ಲಿ ಪ್ರತಿ ಮನೆಮನೆಗೂ ತೆಂಗಿನ ಸಸಿ ವಿತರಣೆ ಮಾಡುವ ಕಾರ್ಯವನ್ನು ಸ್ಥಳೀಯ ಮುಖಂಡರ ಬೆಂಬಲದೊಂದಿಗೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಆಯೋಜನೆ ಮಾಡಿದೆ. ಪ್ರತಿ ಮನೆಯಲ್ಲೂ ಸಸಿ ನೆಟ್ಟು ಪೋಷಿಸುವ ಕಾರ್ಯ ಮೊದಲಾಗಲಿ ಎಂಬುದೇ ನಮ್ಮ ಈ ಕಾರ್ಯಕ್ರಮದ ಉದ್ದೇಶ ಎಂದರು.

    ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ರಾಜನಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕಣ್ಣ ಸೇರಿದಂತೆ ಸ್ಥಳೀಯ ಮುಖಂಡರಾದ ಪ್ರಭಾಕರ್ ಅಪಾಯನ್ನಗೌಡ್ರು ಧ್ರುವನಾರಾಯಣ ರವರಿಗೆ ಧನ್ಯವಾದ ಅರ್ಪಿಸಿದರು.

     

    ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಶ್ರೀರಾಮ್ ಮಾತನಾಡಿ ಪರಿಸರ ದಿನಾಚರಣೆ ಪ್ರತಿಯೊಬ್ಬರು ಆಚರಿಸುತ್ತಾರೆ ಕೇವಲ ಗಿಡ ನೆಟ್ಟು ಫೋಟೋ ತೆಗೆಸಿಕೊಂಡರೆ ಸಾಲದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಕುರಿತು ಜನತೆಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಕಾರ್ಯಕ್ರಮವನ್ನು ರೂಪಿಸುವ ಸಂದರ್ಭದಲ್ಲಿ ಕಾರ್ಯಕ್ರಮವು ವಿಶೇಷವಾಗಿ ಇರಬೇಕೆಂದು ಸಮಿತಿಯು ತೀರ್ಮಾನಿಸಿ ಗ್ರಾಮದ ಪ್ರತಿ ಮನೆಮನೆಗೂ ಸಸಿ ವಿತರಣೆ ಮಾಡುವ ಮೂಲಕ ವಿಶೇಷ ರೀತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

     

    ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಎಂದು ನಾವೆಲ್ಲರೂ ಒಂದು ಶಪಥ ಮಾಡಬೇಕಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಗಿಡ ನೆಟ್ಟು ಪೋಷಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ. ಪರಿಸರದ ನೆರವಿಲ್ಲದೆ ಮನುಷ್ಯನ ಜೀವನ ಶೂನ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಗೂ ಎರಡು ಕಲ್ಪವೃಕ್ಷಗಳನ್ನು ವಿತರಣೆ ಮಾಡಲಾಗಿದ್ದು. ಸಸಿ ನೆಟ್ಟು ಪೋಷಿಸುವಂತೆ ಮನವಿ ಮಾಡಲಾಗಿದೆ. ಸ್ಥಳೀಯ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆತಿದ್ದು. ರಾಜ್ಯದ್ಯಂತ ಜನತೆ ಸ್ವಯಂ ಪ್ರೇರಿತರಾಗಿ ಈ ರೀತಿಯ ಕಾರ್ಯಕ್ಕೆ ಮುಂದಾಗಲಿ ಮುಂದೆ ನಮ್ಮೆಲ್ಲರ ಆಶಯ ಎಂದರು.

    ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕಣ್ಣ ಮಾತನಾಡಿ ಚಿರಋಣಿ ಕನ್ನಡಾಂಬೆ ಹೊರಟ ಸಮಿತಿಯ ಪದಾಧಿಕಾರಿಗಳು ನಮ್ಮ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಉತ್ತಮ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ಪರಿಸರವನ್ನು ರಕ್ಷಿಸುವುದು ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊಟ್ಟಿರುವ ಎಲ್ಲಾ ಪದಾಧಿಕಾರಿಗಳು ಶುಭವಾಗಲಿ ಎಂದು ಹಾರೈಸಿದರು.

    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅನ್ನದಾಸೋಹಿ ಮಲ್ಲೇಶ್ ಸಹಯೋಗದೊಂದಿಗೆ  ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ  ಆಹಾರ ಮತ್ತು ವಸ್ತ್ರ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್, ರಾಜನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ (ಚನ್ನಮ್ಮ ), ಸಾದೇನಹಳ್ಳಿ ಹಾಲು ಉತ್ಪಾದಕರ ಸಂಕೀರ್ಣ ಸಂಘದ ಅಧ್ಯಕ್ಷ ಪ್ರಭಾಕರ್, ಮುಖಂಡರ ಅಪ್ಪಣ್ಣ ಗೌಡ್ರು, ಧ್ರುವನಾರಾಯಣ್, ಸೇರಿದಂತೆ ಹಲವರು ಉಪಸ್ಥಿರಿದ್ದರು.

  • *ದೊಡ್ಡಬಳ್ಳಾಪುರ l ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟದ ಸಂಭ್ರಮ*

    ದೊಡ್ಡಬಳ್ಳಾಪುರ : ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

    ನಿಲಯದ ಮುಖ್ಯಸ್ಥರಾದ ರಾಧಾಮಣಿ ಉದ್ಘಾಟಿಸಿ, ಈ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವುದಲ್ಲದೆ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವಂತಹ ಸಾಮರ್ಥ್ಯವನ್ನು ತೋರಿಸಲು ಇದು ಸೂಕ್ತ ವೇದಿಕೆಯಾಗಿದೆ. ಆಟದಲ್ಲಿ ಸೋಲು ಗೆಲುವುಗಳು ಸಾಮಾನ್ಯ. ಸೋಲನ್ನು ಗೆಲುವಿನ ರೀತಿ ಒಪ್ಪಿಕೊಳ್ಳಬೇಕು ಆಗ ಮಾತ್ರ ಅವರು ಮುಂದೆ ಜಯಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

     

    ಸಮಾಜ ಕಲ್ಯಾಣ ಇಲಾಖೆಯ ಓಬಳೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಈ ರೀತಿಯಾದ ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಕಲಿಯಬಹುದು ಎಂದರು.

     

    ನಿಲಯದ ಜಿ.ಸಿ.ಮುನಿಕೃಷ್ಣ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ತುಂಬಿಸಿ, ನಾಯಕತ್ವ ಗುಣವನ್ನು ಬೆಳೆಸುತ್ತದೆ ಮತ್ತು ಮನಸ್ಸಿಗೆ ಮನರಂಜನೆಯನ್ನು ನೀಡುತ್ತದೆ ಎಂದರು.

     

    ಪಂದ್ಯದಲ್ಲಿ “ಸ್ಟಾರ್ ಬಾಯ್ಸ್” ತಂಡವು ವಿಜೇತವಾಯಿತು ಮತ್ತು “ಹಂಟರ್ಸ್” ತಂಡ ರನ್ನರ್ ಆಫ್ ಆಯಿತು. ಅತ್ಯುನ್ನತ ಬ್ಯಾಟರ್ ಹೇಮಂತ್, ಶಶಿಕಿರಣ್ ಮತ್ತು ಅತ್ಯುತ್ತಮ ಬಾಲರ್ ಪವನ್ ಪ್ರಶಸ್ತಿಯನ್ನು ಪಡೆದರು.

    ಇಲಾಖೆಯ ಸಂದೀಪ್,‌ ಶಾಂತಮ್ಮ, ಮುನಿ ರತ್ನಮ, ಮಂಜಮ್ಮ, ನೇತ್ರಾ, ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ವರದಿ – ಹೇಮಂತ್ ಕೋಲಾರ, ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ

  • *ಮೇಳೆಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳ ಚುನಾವಣೆ*

    ದೊಡ್ಡಬಳ್ಳಾಪುರ : ತಾಲ್ಲೂಕಿನ ತೂಬಗೆರೆ ಹೋಬಳಿಯ ಮೆಳೇಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು.

    ಶಾಲೆಯ ಮುಖ್ಯಶಿಕ್ಷಕರಾದ ಕೆ.ವಿ. ವೆಂಕಟೇಶ ರೆಡ್ಡಿ ಮುಖ್ಯ ಚುನಾವಣಾಧಿಕಾರಿಯಾಗಿ, ಸಮಾಜ ವಿಜ್ಞಾನ ಶಿಕ್ಷಕ ರಾಮಚಂದ್ರಯ್ಯ ಸಹಾಯಕ ಚುನಾವಣಾಧಿಕಾರಿಯಾಗಿ,

    ಶಿಕ್ಷಕರುಗಳಾ ಎಂ.ಬಸವರಾಜು, ಬಿ.ಸುಶೀಲ, ಪಿ.ಎನ್.ಸ್ವಾತಿ, ಡಿ.ಎಂ.ಮೋಹನ್ ಕುಮಾರ್, ಎಂ.ಸಿ.ಗಿರಿರಂಗಯ್ಯ ಮತ್ತು ಕೆ.ಎನ್.ಸಂತೋಷ. ತರಗತಿಯ ಚುನಾವಣಾ ಅಧಿಕಾಗಳಾಗಿ ಭಾಗವಹಿಸಿದ್ದರು.

    ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಚುನಾವಣೆಯಲ್ಲಿ 10ನೇ ತರಗತಿಗೆ ಭವಿಷ್ ಗೌಡ, ಎನ್.ನಿಶಾಂಕ್, ಮೋನಿಶಾ, ಜಾಹ್ನವಿ, 9ನೇ ತರಗತಿ ಎ.ವಿಭಾಗಕ್ಕೆ ಅಜಯ್ ಕುಮಾರ್, ಸಿ.ಎ.ಅಂಕಿತ್ ಕುಮಾರ್,

    ಟಿ.ಎ.ಅಮಿತಾ, ಎಸ್.ಬಿ.ತ್ರಿಶಾ ಮತ್ತು 9ನೇ ತರಗತಿ ಬಿ ವಿಭಾಗಕ್ಕೆ ಎಚ್.ಭುವನ್ ಗೌಡ, ಎನ್.ಅಪೂರ್ವ, 8ನೇ ತರಗತಿ ಎ ವಿಭಾಗಕ್ಕೆ ಎಸ್.ನಿತಿನ್ ಕುಮಾರ್, ಸಿ.ಜಿ.ಲಕ್ಷ್ಮಿ, 8 ನೇ ತರಗತಿ ಬಿ ವಿಭಾಗಕ್ಕೆ ಅಭಿಲಾಷ್, ಸಿ.ವಿ.ಬಿಂದು ಆಯ್ಕೆಯಾಗಿದ್ದಾರೆ.

    ಶಾಲಾ ಯುವ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿಯವರು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿಕುಮಾರ್ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

  • *ಕಸಾಪ ಸಾಹಿತ್ಯ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ*

    ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ನಡೆಸುವ ಕನ್ನಡ ಪ್ರವೇಶ, ಕನ್ನಡ ಕಾವ, ಕನ್ನಡ ಜಾಣ ಮತ್ತು ಕನ್ನಡ ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದೆ. ಬರುವ ಡಿಸೆಂಬರ್‌ನಲ್ಲಿ ಪರೀಕ್ಷೆಗಳು ನಡೆಯಲಿದೆ.

     

    ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯ, ವಿವರ ಹಾಗೂ ಮಾಹಿತಿಯನ್ನು ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ವಿಭಾಗದಲ್ಲಿ ಪಡೆಯಬಹುದು.

     

    2024-25ನೇ ಸಾಲಿನ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್‌ 31 ಕೊನೆಯ ದಿನವಾಗಿದ್ದು, 50 ರುಪಾಯಿ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಮಾಹಿತಿಗಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ(94492 46189), ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್(98861 69299), ಕೋಶಾಧ್ಯಕ್ಷ ಡಾ.ಮುನಿರಾಜು(98802 28259) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

  • *ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಸಿಕ ಸಭೆ : ಹಲವು ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ*

    ದೊಡ್ಡಬಳ್ಳಾಪುರ:- ಸಭೆಯಲ್ಲಿ ಕೈಗೊಳ್ಳುವ ಹಲವು ಸಮಾಜಮುಖಿ ಆರೋಗ್ಯಕರ ಚಟುವಟಿಕೆಗಳಿಗೆ ಮಾದರಿಯಾಗಿದ್ದು,ಈ ದಿಸೆಯಲ್ಲಿ ಪ್ರತಿ ತಿಂಗಳು ಸಭೆ ಸೇರಿ ಹಿರಿಯ ಚೇತನಗಳಿಗೆ ಚೈತನ್ಯ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಕನ್ನಡಿಗರ ಸ್ನೇಹ ಕೂಟದ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಆರಕ್ಷಕ ರತ್ನ ರಾಂ.ಕೆ.ಹನುಮಂತಯ್ಯ ಅಭಿಪ್ರಾಯಪಟ್ಟರು.

    ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ದೊಡ್ಡಬಳ್ಳಾಪುರ ತಾಲೂಕು ಶಾಖೆ ವತಿಯಿಂದ ಆಯೋಜನೆ ಮಾಡಿದ್ದ ಮಾಸಿಕ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

     

     

    ರಾಂ.ಕೆ. ಹನುಮಂತಯ್ಯ ಅವರು 96 ವರ್ಷ ವಯೋಮಾನದ ನರಸಯ್ಯನ ಅಗ್ರಹಾರ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ವೀರೇಗೌಡ,90 ವರ್ಷ ವಯೋಮಾನದ ಹಾದ್ರಿಪುರದ ನಿವೃತ್ತ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹನುಮಂತರಾಯಪ್ಪ,85 ವರ್ಷ ವಯೋಮಾನದ ರೋಜಿಪುರದ ನಿವೃತ್ತ ಶಿಕ್ಷಕಿ ಸರ್ವಮಂಗಳಮ್ಮ ,85 ವರ್ಷ ವಯೋಮಾನದ ಸೋಮೇಶ್ವರ ಬಡಾವಣೆ ನಿವೃತ್ತ ಮುಖ್ಯ ಶಿಕ್ಷಕ ಸಿ.ಬಸವರಾಜು ಮತ್ತು 80 ವಯೋಮಾನದ ಗುಂಡಪ್ಪ ನಾಯಕನಹಳ್ಳಿಯ ನಿವೃತ್ತ ಶಿಕ್ಷಕ ಉಗ್ರೇಗೌಡ ಇವರುಗಳಿಗೆ ಹೆಣ್ಣೂರು ಕನ್ನಡಿಗರ ಸ್ನೇಹ ಕೂಟ ಪರವಾಗಿ ಸನ್ಮಾನ ನೀಡುವ ಮೂಲಕ ಗೌರವಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಮಹಾಲಿಂಗಯ್ಯ ಮಾತನಾಡಿ ಅರವತ್ತು ವರ್ಷ ಮೇಲ್ಪಟ್ಟವರ ಜೀವನ ಶೈಲಿ ಹೇಗಿರಬೇಕು? ಅನ್ನುವ ಅತ್ಯುತ್ತಮ ಮಾಹಿತಿಯನ್ನು ಓದಿ ಮನವರಿಕೆ ಮಾಡಿಕೊಟ್ಟರು. ಸಂಘದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಎಲ್ಲಾ ಇಲಾಖೆಗಳ ನಿವೃತ್ತ ನೌಕರರು ಅಧಿಕಾರ ಅಂತಸ್ತು ಮರೆತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರಿದರು.

     

    ಇದೇ ವೇಳೆ ವಕೀಲರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಟಿ.ನಂಜಪ್ಪನವರು ಸಂಘದ ವರದಿಯನ್ನು ಆಧರಿಸಿ ಮಾತನಾಡಿ ಸಂಘದ ಪ್ರಗತಿ ಪರ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

    ಬೆಂಗಳೂರು ಉತ್ತರ ತಾಲೂಕಿನ ನಿವೃತ್ತ ಉಪನ್ಯಾಸಕ ಶಿವರಾಜು ರವರು ಪೌರಾಣಿಕ ಭಕ್ತಿ ಗೀತೆಗಳನ್ನೂ ಹಾಡೋನಹಳ್ಳಿ ಜಾನಪದ ಕಲಾವಿದ ಗೋವಿಂದರಾಜು ಮತ್ತು ಜಯರಾಂ ಗೀತೆಗಳನ್ನು ಹಾಡಿ ರಂಜಿಸಿದರು.

     

     

    ನವೋದಯ ವಿದ್ಯಾಲಯದ ನಿವೃತ್ತ ಜಿ.ಎಸ್ ಹೆಗಡೆ ಅವರು ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಸಾಧ್ಯವಾದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ನೆರವಾಗುವ ಅಂಶಗಳನ್ನು ತಿಳಿಸಿದರು.

     

    ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಟಿ.ಮುನಿರಾಜು ರವರು ಪ್ರತಿಯೊಬ್ಬ ನಿವೃತ್ತಿ ಹೊಂದಿದ ಸದಸ್ಯರು ಸಂಘದ ಸದಸ್ಯತ್ವ ಪಡೆದು ಕೈಗೊಳ್ಳುವಂತೆ ಸಲಹೆ ನೀಡಿದರು.ಪ್ರಸ್ತುತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲರೂ ಜಾಗರೂಕರಾಗಿರಿ ಎಂದು ಕರೆ ನೀಡಿದರು.

     

     

    ವೇದಿಕೆಯಲ್ಲಿ ಗೌರವಾಧ್ಯಕ್ಷ ಅಬ್ದುಲ್ ಕರೀಂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್ ಪ್ರಭಾಕರ್, ಉಪಾಧ್ಯಕ್ಷ ಕರಿಬಸವದೇವರು ,ಉಳಿದಂತೆ ಸಂಘದ ಹಿರಿಯರಾದ ತಿಪ್ಪೇಸ್ವಾಮಿ,ಶಿವರುದ್ರಯ್ಯ,ಪ್ರೊ.ಈಶ್ವರಾಚಾರ್,ಕೆ.ಎನ್ ಸರೋಜಮ್ಮ, ಗಂಗಾಂಬಿಕೆ,ಡಿ.ವಿ ಪದ್ಮಾವತಮ್ಮ, ರಾಧಾ ಲಕ್ಷ್ಮೀ,ಮಹಾದೇವಯ್ಯ, ಲಕ್ಷ್ಮೀಪತಿ,ಕೆ.ಜಿ ಮುನಿರಾಜು, ನಜೀರ್, ರಾಮಕೃಷ್ಣಯ್ಯ, ನರಸಿಂಹಯ್ಯ,ಕಗ್ಗೇರಪ್ಪ, ಮುಂತಾದವರು ಉಪಸ್ಥಿತರಿದ್ದರು.

  • *ಜಿಲ್ಲಾಡಳಿತ ಭವನದಲ್ಲಿ ವಿಶ್ವ ಝೂನೋಸಿಸ್ ದಿನ ಆಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 06 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ “ವಿಶ್ವ ಝೂನೋಸಿಸ್ ದಿನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿಂದು ಆಚರಣೆ ಮಾಡಲಾಯಿತು.

    1885 ರ ಜುಲೈ 06 ರಂದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾದ ರೇಬಿಸ್ ರೋಗಕ್ಕೆ ಮೊದಲು ಲಸಿಕೆಯನ್ನು ಸರ್.ಲೂಯಿಸ್ ಪಾಶ್ಚರ್ ರವರು ಯಶಸ್ವಿಯಾಗಿ ನೀಡಿದ ಸಂದರ್ಭದ ಸ್ಮರಣಾರ್ಥಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

    ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ಜಿಪಂ ಉಪ‌ ಕಾರ್ಯದರ್ಶಿ ಟಿ.ಕೆ ರಮೇಶ್,ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹೇಮಾವತಿ ಸೇರಿದಂತೆ ಜಿಲ್ಲಾ‌ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

  • *ಬೆ.ಗ್ರಾಂ.ಜಿಲ್ಲೆ: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ರವರ 38ನೇ ಪುಣ್ಯಸ್ಮರಣೆ ಆಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 6 (ವಿಜಯಮಿತ್ರ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ ರಾಂ ರವರ 38 ನೇ ಪುಣ್ಯಸ್ಮರಣೆ ಆಚರಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿಂದು ಆಚರಿಸಲಾಯಿತು.

     

    ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಡಾ.ಬಾಬು ಜಗಜೀವನ ರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

     

    ಇದೇ‌ ಸಂದರ್ಭದಲ್ಲಿ ಜಿಲ್ಲಾ‌ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್,

    ಜಿ.ಪಂ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಜಿ.ಪಂ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮಾ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನೀಲ್ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ‌ಮಟ್ಟದ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *ಅಂತರರಾಷ್ಟ್ರೀಯ ಛಾಯಾಗ್ರಾಹಕ ಜಿ.ರಾಜುರವರಿಗೆ ಕರ್ನಾಟಕ ರಾಜರತ್ನ ಪ್ರಶಸ್ತಿ*

    ದೊಡ್ಡಬಳ್ಳಾಪುರ:ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ, ಅಂತರರಾಷ್ಟ್ರೀಯ ಛಾಯಾಗ್ರಾಹಕ ಜಿ.ರಾಜು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

     

    ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ (ರಿ.)” ಮತ್ತು ” ಬೈಸೇಲ್ ಇಂಟ್ರಾಕ್ಷನ್ಸ್ ಪ್ರವೇಟ್ ಲಿಮಿಟೆಡ್ ಸಹಯೋಗ ದೊಂದಿಗೆ, ಬೆಂಗಳೂರಿನ ಅರಮನೆ ಮೈದಾನದ “ತ್ರಿಪುರ ವಾಸಿನಿ” ಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ “ಪೋಟೋ

    ಟುಡೇ ವಸ್ತು ಪ್ರದರ್ಶನದಲ್ಲಿ “ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ರಾಜು ರವರಿಗೆ ಕನ್ನಡ ಚಿತ್ರರಂಗದ ನಟ ಪ್ರತಮ್ ಅವರು ವಿತರಿಸಿ,ಗೌರವಿಸಿದರು.

     

    ಶುಕ್ರವಾರ ರಾಜಧಾನಿಯಲ್ಲಿ ನಡೆದ ಮೊದಲ ದಿನದ ವಸ್ತು ಪ್ರದರ್ಶನದಲ್ಲಿ ಒಟ್ಟು ಏಳು ಮಂದಿ ಮಹಿಳಾ ಛಾಯಾಗ್ರಾಹಕಿಯರು ಸೇರಿದಂತೆ 52ಮಂದಿ ಛಾಯಾಗ್ರಾಹಕರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

     

    ದೊಡ್ಡಬಳ್ಳಾಪುರ ನಗರದ ಹೊರವಲಯದ ಬಾಶೆಟ್ಟಿಹಳ್ಳಿಯ ಮಂಜುನಾಥ್ ಸ್ಟುಡಿಯೋ ಮಾಲೀಕರಾದ ಜಿ.ರಾಜು ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

     

    ಪ್ರಶಸ್ತಿ ಸ್ವೀಕರಿಸಿದ ರಾಜು ರವರು ಮಾದ್ಯಮ ದೊಂದಿಗೆ ಮಾತನಾಡುತ್ತಾ ಛಾಯಾಚಿತ್ರ ಕಲೆಯನ್ನು ಕಲಿಸಿದ ಗುರುಗಳಿಗೆ ಹಾಗೂ ನನ್ನ ಗ್ರಾಹಕರಿಗೆ ಈ ಪ್ರಶಸ್ತಿಯನ್ನು ಅರ್ಪಿಸಲಾಗುವುದೆಂದರು.

     

    ಕಾರ್ಯಕ್ರಮದಲ್ಲಿ ಕಿರುತೆರೆ ನಟ ವಿಕ್ರಂ ಸೂರಿ, ಸಿನಿಮಾಟೋಗ್ರಾಫರ್ ಜಿಜಿ ಕೃಷ್ಣ, ನಿಕಾನ್ ಮುಖ್ಯಸ್ಥ ಸಜ್ಜನ್,ಕೆವಿಪಿಎ ಅಧ್ಯಕ್ಷ ಬೆಂಜಮಿನ್, ಪದಾಧಿಕಾರಿಗಳಾದ ಕೃಷ್ಣಪ್ಪ, ಜಗದೀಶ್ ಮತ್ತಿತರರಿದ್ದರು.