Blog

  • *ದೊಡ್ಡಬಳ್ಳಾಪುರ: ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಮಲೇರಿಯಾ ದಿನ ಆಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 28 (ವಿಜಯಮಿತ್ರ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ *ವಿಶ್ವ ಮಲೇರಿಯಾ ದಿನ* ದ ಅಂಗವಾಗಿ “ಹೆಚ್ಚು ಸಮಾನತೆಯ ಜಗತ್ತಿಗೆ, ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ” ಎಂಬ ಘೋಷವಾಕ್ಯದೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ವಿಶ್ವ ಮಲೇರಿಯಾ ದಿನದ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಿಂದ ನಗರದ ಟಿ.ಬಿ ವೃತ್ತದ ವರೆಗೆ ಜಾಥಾವನ್ನು ಮಾಡಲಾಯಿತು. ಮಾನವ ನಿರ್ಮಿತ ಸರಪಳಿ ರಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

    ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನೀಲ್ ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಾರದ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಶಿವಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಕೀಟ ಶಾಸ್ತ್ರ ತಜ್ಞರಾದ ಲತಾ, ಆರೋಗ್ಯ ಮೇಲ್ವಿಚಾರಕರಾದ ನಟರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, (ವಿಜಯಮಿತ್ರ): ರಾಜ್ಯದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2023-24ನೇ ಸಾಲಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು 2024 ರ ಜುಲೈ 01 ರಿಂದ 2025 ಮಾರ್ಚ್ 31ರ ವರೆಗೆ ಆಯೋಜಿಸುವ ಸಂಬಂಧ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ 2024 ಜೂನ್ 03 ರಂದು ಸಂಜೆ 5.30 ರ ವರೆಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ ಹಾಗೂ ಸಂದರ್ಶನದ ದಿನಾಂಕ: 06 ಜೂನ್ 2024 ಆಗಿರುತ್ತದೆ, ಆದುದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಇಲಾಖೆಯ ವೆಬ್ ಸೈಟ್ https://horticulturedir.karnataka.gov.in ನಲ್ಲಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ), ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಕಛೇರಿಗೆ ನಿಗದಿತ ದಿನಾಂಕದೊಳಗಾಗಿ ಸಲ್ಲಿಸಲು ತಿಳಿಸಿದೆ.

     

     

    ವಿದ್ಯಾರ್ಹತೆ: ಕನ್ನಡ ವಿಷಯಗಳೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ವಯೋಮಿತಿ: ಪರಿಶಿಷ್ಟ ಜಾತಿ/ಪಂಗಡ/ಅಂಗವಿಕಲ ರಿಗೆ ಕನಿಷ್ಠ 18 ವರ್ಷ ಮತ್ತು ಮಾಜಿ ಸೈನಿಕರಿಗೆ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ ಹಾಗೂ ಇತರರಿಗೆ ಕನಿಷ್ಠ 18 ವರ್ಷ ದಿಂದ ಗರಿಷ್ಠ 30 ವರ್ಷ.

    ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು.

     

     

    ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1750/-ಗಳ ಮಾಸಿಕ ಶಿಷ್ಯವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ)ವನ್ನು ನೀಡಲಾಗುವುದು. ಶಿಷ್ಯವೇತನ/Stipend ವನ್ನು ಅಭ್ಯರ್ಥಿಗಳ ಖಾತೆಗೆ ನೇರವಾಗಿ ಜಮೆ ಮಾಡುವುದು.

     

    ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಈ ಕೆಳಕಂಡ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

    1) ಶ್ರೀ ಗೋಪಾಲ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೋ. 8660733025

    2) ಶ್ರೀ ಶಿವಕುಮಾರ್, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೋ. 9844229157 ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ದೊಡ್ಡಬಳ್ಳಾಪುರದಲ್ಲಿ ನರ್ಸರಿ ಅಭಿವೃದ್ಧಿ ಪಡಿಸುವ ಕುರಿತು ಕಾರ್ಯಾಗಾರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ (ವಿಜಯಮಿತ್ರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಂದು ತೋಟಗಾರಿಕ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ವ ಸಹಾಯ ಮಹಿಳಾ ಸಂಘದಿಂದ ನರ್ಸರಿ ಅಭಿವೃದ್ಧಿ ಪಡಿಸುವ ಕುರಿತು ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್ ಅವರು ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.

    ಕಾರ್ಯಾಗಾರದಲ್ಲಿ ಜೆ.ಗುಣವಂತ, ತೋಟಗಾರಿಕೆ ಉಪನಿರ್ದೇಶಕರು,ಉಪ ನಿರ್ದೇಶಕರು ರೇಷ್ಮೆ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್, ಮುನಿರಾಜು, ಮಧು, ಮಂಜುನಾಥ್ ರವರು ಉಪಸ್ಥಿತರಿದ್ದರು.ಕೆ.ವಿ.ಕೆ.ಯ ವಿಜ್ಞಾನಿಗಳಾದ ಡಾ.ಜಗದೀಶ್, ಬಿ.ಚುಂಚಯ್ಯ ಹಿ.ಸ.ತೋ.ನಿ ಹಾಗೂ ಹರ್ಷವರ್ಧನ್ ,ಉಪನಿರ್ದೇಶಕರು ವಿಷಯವಾರು ತರಬೇತಿ ನೀಡಿದರು. ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನರ್ಸರಿ ಅಭಿವೃದ್ಧಿ ಪಡಿಸುವ ಸ್ವಸಹಾಯ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾಗವಹಿಸಿದ್ದರು.

  • *ಶ್ರೀ ಆನೆಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ : ದೇವರದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ*

    ದೊಡ್ಡಬಳ್ಳಾಪುರ ಗ್ರಾಮಾಂತರ ದೊಡ್ಡಬೆಳವಂಗಲ ಹೋಬಳಿ ತಿಪ್ಪೂರು ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅನೆಲಿಂಗೇಶ್ವರ ಸ್ವಾಮಿಯವರ ಕಟ್ಟೆಮನೆ ಮಹೋತ್ಸವ ನೆಡೆಯಿತು.

    ಹಾಲು ಮತ ಸಂಸ್ಕೃತಿ ವೈಭವ ಮತ್ತು ಪೂರ್ವಜರ ಪರಂಪರೆಗಳನುಸಾರ ಕುರುಬ ಜನಾಂಗದವರ ಕುಲದೈವ ಶ್ರೀ ಆನೆಲಿಂಗೇಶ್ವರ ದೇವರ ಜಾತ್ರಾಮಹೋತ್ಸವವನ್ನು ಸಂಪ್ರದಾಯದಂತೆ ಆಚರಿಸಿದರು.

    ದೇವಾಲಯದ ಪ್ರಧಾನ ಅರ್ಚಕ ಮಾತನಾಡಿ ಇತಿಹಾಸ ಹಿರಿಮೆಯ ದೈವತ್ವದ ಸದಾಚಾರಗಳನ್ನು ನಮ್ಮ ಸಮಾಜಕ್ಕೆ ಪಸರಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಆದ್ದರಿಂದ ಕುಲದೇವರ ಸದ್ಭಕ್ತರೂ ಹಾಗೂ ಪೂಜಾರಿಗಳು ಗಂಗೆ ಪೂಜೆ ಹಾಗೂ ಮಹಾಲಕ್ಷ್ಮೀ ಪೂಜೆ ಶ್ರೀ ಅನೆಲಿಂಗೇಶ್ವರಸ್ವಾಮಿ ಯವರಿಗೆ ಕಂಕಣ ಕಟ್ಟುವ ಶಾಸ್ತ್ರ ,ಶ್ರೀ ಗಜಾರೂಢ ಅನೆಲಿಂಗೇಶ್ವರಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸಾಹದೊಂದಿಗೆ ಹೊಳೆ ಸ್ನಾನದ ನಂತರ ನಂದಿಧ್ವಜ ಕುಣಿತ, ವೀರಗಾಸೆ,ಗೊರವರ ಕುಣಿತ ಮತ್ತು ಕೀಲು ಕುದರೆ ಕುಣಿತ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ಈ ಜಾತ್ರಾ ಮಹೋತ್ಸವದ ಅಂಗವಾಗಿ ಆಚರಿಸಲಾಗುತ್ತದೆ ಎಂದರು.

     

    ದೇವಾಲಯಧ ಅವರಣದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಸಮರ್ಪಣೆ ಮಾಡಲಾಯಿತು.ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿದ ಕಲಾತಂಡದಿಂದ ವೀರಗಾಸೆ,ಗೊರವನ ಕುಣಿತ, ಕಾಲಾಟಕಾರರು,ಡೊಳ್ಳು ಕುಣಿತ, ಪೂಜಾ ಕುಣಿತ,ಸೇರಿದಂತೆ ಜನಪದ ನೃತ್ಯ ಪ್ರದರ್ಶನಗಳು ನೆರೆದಿದ್ದ ಭಕ್ತರ ಗಮನ ಸೆಳೆಯಿತು.

     

    ವಿಶೇಷವಾಗಿ ತುಮಕೂರಿನಿಂದ ಅನೆಯನ್ನು ಕರೆತರಲಾಗಿತ್ತು ಬಂದ ಭಕ್ತರು ಮತ್ತು ಮಕ್ಕಳು ಆನೆಯ ಜೋತೆಯಲ್ಲಿ ಪೋಟೊ ತೆಗೆದುಕೊಳ್ಳುವುದು ಮತ್ತು ಮಕ್ಕಳಿಂದ ಬಾಳೆಹಣ್ಣು ಹಾಗೂ ಹಣವನ್ನು ನೀಡಿ ಆನೆಯಿಂದ ಆಶೀರ್ವಾದ ಪಡೆದುಕೊಳ್ಳುವುದು ಜಾತ್ರೆಗೆ ಬಂದ ಭಕ್ತರಲ್ಲಿ ವಿಶೇಷವಾಗಿ ಕಾಣುತ್ತಿತ್ತು.

    ಈ ಸಂದರ್ಭದಲ್ಲಿ ಶ್ರೀ ಆನೆಲಿಂಗೇಶ್ವರ ಸ್ವಾಮಿ ಕಟ್ಟೆಮನೆ ಜೀರ್ಣೋದ್ದಾರ ಟ್ರಸ್ಟ್ ನ ಅಧ್ಯಕ್ಷ ಟಿ.ಸಿ ಚನ್ನಕೇಶವ , ಗೌರವಅಧ್ಯಕ್ಷ ಎಸ್ .ವೆಂಕಟೇಶ, ಕಾರ್ಯದರ್ಶಿ ಎಂ ಎಸ್. ಜಗದೀಶ,ಪದಾಧಿಕಾರಿಗಳಾದ ಎಂ ಶಿವಲಿಂಗಪ್ಪ,ಎಂ ಮುನಿಕೃಷ್ಣಪ್ಪ. ಎಸ್ .ಗೋಪಾಲ್,ಹೆಚ್.ಕೆ. ವೀರ ಕೆಂಪಯ್ಯ, ಸೇರಿದಂತೆ ಟ್ರಸ್ಟ್ ನ ಸದಸ್ಯರು ಸಾವಿರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು .

  • *ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ : ಸಮಿತಿಯ ನೂತನ ಸಾರಥಿಯಾಗಿ ಚಂದ್ರು ಶೆಟ್ಟಿ ಅಧಿಕಾರ ಸ್ವೀಕಾರ*

    ದೊಡ್ಡಬಳ್ಳಾಪುರ : ಸಮುದಾಯದ ಏಳಿಗೆಗೆ ಸರ್ವ ಸದಸ್ಯರ ಸಹಮತದಿಂದ ಶ್ರಮಿಸಲಾಗುವುದು, ನನಗೆ ಕೊಟ್ಟಿರುವ ನೂತನ ಜವಾಬ್ಧಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುವುದು ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ಅಧ್ಯಕ್ಷ ಚಂದ್ರುಶೆಟ್ಟಿ ತಿಳಿಸಿದರು


    ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಾಣಿಗ ಸಮುದಾಯದಲ್ಲಿ ಹಲವಾರು ಸಮಸ್ಯೆಗಳಿದ್ದು ಸಮುದಾಯದ ಬೆಂಬಲವಾಗಿ ನಮ್ಮ ಸಮಿತಿ ನಿಷ್ಪಕ್ಷಪಾತವಾಗಿ ಶ್ರಮಿಸುವುದು. ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮೂಲಕ ಸಮುದಾಯದ ಘನತೆ ಮತ್ತಷ್ಟು ಹೆಚ್ಚಿಸುವಕಾರ್ಯ ಸಮಿತಿ ವತಿಯಿಂದ ನೆಡೆಯಲಿದೆ ಎಂದರು.

    ಕಾರ್ಯಕ್ರಮದಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ನಟರಾಜ್ ನೂತನ ಅಧ್ಯಕ್ಷ ಚಂದ್ರು ಶೆಟ್ಟಿ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರ ಮಧುಚಂದ್ರ, ಗೋಪಿ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ,ಕಾರ್ಯದರ್ಶಿ ಪ್ರಸನ್ನ ಕುಮಾರ್ , ಸಹ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಲಕ್ಷ್ಮಣ್,ಸಂಚಾಲಕರಾದ ಮಂಜುನಾಥ್ ,ವಿಶ್ವಾಸ್ ಶೆಟ್ಟಿ ಹಾಗೂ ಸಮುದಾಯದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

  • *ಕಾರ್ಮಿಕರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ – ಆಶಾ ಗೌಡ*

    ದೊಡ್ಡಬಳ್ಳಾಪುರ : ಕಾರ್ಮಿಕರ ಹಿತ ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವಲಯಗಳ ಅಭಿವೃದ್ಧಿಗಾಗಿ ಸರ್ಕಾರಗಳು ಮುಕ್ತ ಮನಸ್ಸಿನಿಂದ ಶ್ರಮಿಸಬೇಕಿದೆ ಎಂದು ಕರ್ನಾಟಕ ಜನತಾ ಸಮಿತಿಯ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಎಲ್. ಎಸ್. ಆಶಾಗೌಡ ತಿಳಿಸಿದರು.

    ನಗರದ ಕನ್ನಡ ಜಾಗೃತ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೇಲ್ನೋಟಕ್ಕೆ ಹಲವು ಯೋಜನೆಗಳ ರೂಪಿಸುವ ಮೂಲಕ ಕಾರ್ಮಿಕರ ಅಭಿವೃದ್ಧಿಯಾಗಿದೆ ಎಂದರೇ ಅಂದು ಸತ್ಯಕ್ಕೆ ದೂರವಾದ ಮಾತು. ಕೇವಲ ಯೋಜನೆ ರೂಪಿಸುವುದರಿಂದ ಕಾರ್ಮಿಕರ ಅಭಿವೃದ್ಧಿ ಸಾಧ್ಯವಿಲ್ಲ ಆ ಯೋಜನೆ ಫಲವು ಪ್ರತಿ ಕಾರ್ಮಿಕರಿಗೆ ತಲುಪಿದರೆ ಮಾತ್ರ ಕಾರ್ಮಿಕರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಇನ್ನು ಸರ್ಕಾರದ ಯೋಜನೆಗಳ ಲಾಭ ಪಡೆಯದ ಹಲವಾರು ಕಾರ್ಮಿಕ ಕುಟುಂಬಗಳಿದ್ದು. ಸದರಿ ಕುಟುಂಬಗಳಿಗೆ ಯೋಜನೆಗಳ ಫಲ ದೊರೆಯಬೇಕಿದೆ. ಕಾರ್ಮಿಕರು ದೇಶವನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ, ದೇಶದ ಆರ್ಥಿಕತೆ ಭದ್ರಗೊಳಿಸಲು ಸಹಕರಿಸುತ್ತಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸುವ ಮೂಲಕ ಪ್ರತಿ ಕಾರ್ಮಿಕ ಕುಟುಂಬದ ಆರ್ಥಿಕ ಭದ್ರತೆಯನ್ನು ಕಾಪಾಡಬೇಕಿದೆ ಎಂದರು.

    ಕಾರ್ಮಿಕರು ನೂರಾರು ವಿಭಾಗಗಳಲ್ಲಿ ತಮ್ಮದೇ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದು ಇಂದಿನ ಕಾರ್ಯಕ್ರಮ ಸಮಾಜದ ಏಳಿಗೆಗಾಗಿ ಶ್ರಮಿಸುವ ಪ್ರತಿ ಕಾರ್ಮಿಕರಿಗೆ ಅರ್ಪಿಸಲಾಗಿದೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕರ್ನಾಟಕ ಜನತಾ ಸಮಿತಿ ಸದಾ ಕಾರ್ಮಿಕರ ಬೆಂಬಲವಾಗಿ ನಿಲ್ಲುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿದೆ ಎಂದರು.

    ಕಾರ್ಯಕ್ರಮದಲ್ಲಿ ಡಿ. ಆರ್ . ಸೌಮ್ಯ ರಮೇಶ್, ಯಶೋಧರಾಜಣ್ಣ, ಜೆಡಿಎಸ್ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ. ಶ್ರೀ ರಾಮಯ್ಯ , ಜೆಡಿಎಸ್ ಘಟಕದ ರಾಜ ಉಪಾಧ್ಯಕ್ಷ ಲಿಂಗಯ್ಯ, ಕರ್ನಾಟಕ ಜನತಾ ಸಮಿತಿ ಸಂಸ್ಥಾಪಾಧ್ಯಕ್ಷ. ವಿ.ವೆಂಕಟ್ ರೆಡ್ಡಿ . ಕೆ ಜೆ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜರೆಡ್ಡಿ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಗೆ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ದೊಡ್ಡಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷ ತಾ.ನಾ. ಪ್ರಭುದೇವ್, ಕಾರ್ಮಿಕರ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿಪಾಪಣ್ಣ. ರಾಜ್ಯ ಕಾರ್ಯದರ್ಶಿ ಡಾ.ವಿಜಯ್ ಕುಮಾರ್. ಕೆ ಜೆ ಎಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ರುದ್ರೇಶ್. ದೊಡ್ಡಬಳ್ಳಾಪುರ ತಾಲೂಕು ಕಲಾಘಟದ ಅಧ್ಯಕ್ಷ. ಮುನಿರತ್ನ . ಕೆ ಜೆ ಎಸ್ ತಾಲೂಕು ಕಾರ್ಮಿಕರ ಘಟಕ ಅಧ್ಯಕ್ಷ . ಸ್ವರ್ಣಮ್ಮ. ವಿ ಸುನೀತ. ಕೆ ಜೆ ಎಸ್ ಗೌರವಾಧ್ಯಕ್ಷೆ ಗೌರಮ್ಮ. ಕೆಜೆಎಸ್ ಸಂಘಟನಾ ಕಾರ್ಯದರ್ಶಿ. ಲಕ್ಷ್ಮೀ. ಸಹ ಕಾರ್ಯದರ್ಶಿ. ನೇತ್ರಾ. ಗುಲ್ಬರ್ಗ ಕೆ ಜೆ ಎಸ್ ಜಿಲ್ಲಾಧ್ಯಕ್ಷ . ಅನುರಾಧ ಗೌಡ. ಕೆ ಜೆ ಎಸ್ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಮಾರುತಿ . ಜೆಡಿಎಸ್ ಹಿರಿಯ ಮುಖಂಡರಾದ ಹನುಮಂತೇಗೌಡ, ದೇವರಾಜ್ ಸೇರಿದಂತೆ ಕರ್ನಾಟಕ ಜನತಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

  • *ಹೊಲಗದ್ದೆಗಳಲ್ಲಿ ನಿಂತ ನೀರು, ಇದಕ್ಕೆ ಅವೈಜ್ಞಾನಿಕ ರಸ್ತೆಯೇ ಕಾರಣ ಎಂದ ಗ್ರಾಮಸ್ಥರು*

    ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕಾಚಹಳ್ಳಿ ಗ್ರಾಮದ ಕೆರೆಯ ಪಕ್ಕದ ಜಮೀನಿನಲ್ಲಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯಿಂದ ಕೆರೆ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು ಜಮೀನಿನ ಮಾಲೀಕರು ತಮ್ಮ ಜಮೀನಿಗೆ ಹೋಗಲು ಪರದಾಡುವ ಸ್ಥಿತಿ ಎದುರಾಗಿದೆ.

     

    ಈ ವೇಳೆ ಜಮೀನಿನ ಮಾಲೀಕರಾದ ಸುನಿಲ್ ಮಾತನಾಡಿ ಕೆರೆಗೆ ನೀರು ಹೋಗುವ ದಾರಿಯನ್ನೆಲ್ಲ ಮುಚ್ಚಿದ್ದು ಕೆರೆಗೆ ಹೋಗುವ ನೀರು ನಮ್ಮ ಜಮೀನುಗಳಿಗೆ ನುಗ್ಗಿದೆ. ಸ್ಥಳಿಯ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು ಅವರು ತಾತ್ಕಾಲಿಕವಾಗಿ ಮೂರು ದೊಡ್ಡ ಪೈಪುಗಳನ್ನು ಅಳವಡಿಸುವುದಾಗಿ ಕಾಂಟ್ರಾಕ್ಟರ್ ಹೇಳಿದ್ದಾರೆ ಎಂದರು

    ಸಂಬಂಧಪಟ್ಟ ಕಾಂಟ್ರಾಕ್ಟರ್ ಹಾಗೂ ಪಂಚಾಯತಿ ಅಧಿಕಾರಿಗಳು ಶೀಘ್ರ ಗತಿಯಲ್ಲಿ ನಮ್ಮ ಸಮಸ್ಯೆಗೆ ಪರಿಹಾರ ಕೊಡದೆ ಇದ್ದ ಪಕ್ಷದಲ್ಲಿ ಜೆಸಿಪಿ ಮುಖಾಂತರ ರೋಡನ್ನು ತೆರವು ಮಾಡಲಾಗುವುದು.ಕಳೆದ ಮೂರು ವರ್ಷಗಳಿಂದ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಇದರಿಂದ ಮೂರ್ನಾಲ್ಕು ಎಕರೆ ಜಮೀನಿಗೆ ನೀರು ನಿಂತಿದೆ ಈ ಕಾರಣದಿಂದಾಗಿ ಜಮೀನಿನ ಕಾಂಪೌಂಡ್ ಹಾಗೂ ಮರಗಳು ಹಾಳಾಗುತ್ತಿವೆ ಎಂದರು.


    ಮತ್ತೊಂದು ಜಮೀನಿನ ಮಾಲೀಕ ಭರತ್ ಬಾಬು ಮಾತನಾಡಿ ಇದೇ ರೀತಿ ಜಮೀನಿನಲ್ಲಿ ನೀರು ನಿಂತರೆ ನಮಗೆ ಮುಂಗಾರು ಬೆಳೆಗೆ ತೊಂದರೆ ಆಗುತ್ತದೆ . ಯಾವುದೇ ರೀತಿಯ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದರು.

    ಈ ಸಂದರ್ಭದಲ್ಲಿ ರೈತ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಶೀಘ್ರಗತಿಯಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಪಂಚಾಯಿತಿ ಅಧಿಕಾರಿಗಳಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರು .

  • *ಯು ಜಿ ಡಿ ಸಮಸ್ಯೆ : ರಸ್ತೆಯಲ್ಲಿ ಹರಿದ ಕೊಳಚೆ ನೀರು : ಗಬ್ಬು ನಾರುತ್ತಿದೆ ಚಂದ್ರಮೌಳೇಶ್ವರ ಲೇಔಟ್*

    ದೊಡ್ಡಬಳ್ಳಾಪುರ ಮೇ 27 ( ವಿಜಯಮಿತ್ರ) : ಸ್ಥಳೀಯವಾಗಿ ಯು ಜಿ ಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಚಂದ್ರಮೌಳೇಶ್ವರ ಲೇಔಟ್ ನ ಸಾರ್ವಜನಿಕರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

    ಕಳೆದ 2020ನೇ ಇಸವಿಯಿಂದ ನಿರಂತರವಾಗಿ ನಗರಸಭೆಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಸಂತ್ ಕುಮಾರ್ ಮಾತನಾಡಿ ಮಳೆಗಾಲದಲ್ಲಿ ನಮಗೆ ಹೆಚ್ಚಾಗಿ ಈ ಸಮಸ್ಯೆ ಉಲ್ಬಾಣವಾಗುತ್ತದೆ. ಸಂಬಂಧಪಟ್ಟ ನಗರಸಭಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಎಸ್ ಟಿ ಪಿ ಘಟಕವನ್ನು ಸರಿ ಪಡಿಸುವ ಮೂಲಕ ಜಾರಿಕೊಳ್ಳುವ ಅಧಿಕಾರಿಗಳು ನಮಗೆ ಶಾಶ್ವತ ಪರಿಹಾರ ಕೊಡುವಲ್ಲಿ ವಿಫಲರಾಗಿದ್ದಾರೆ. ನಮಗೆ ಕೊಳಚೆ ನೀರಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ಬೇಕಿದೆ. ಕೊಳಚೆ ನೀರು ಮನೆಯ ಮುಂಭಾಗ ಹರಿಯುವ ಕಾರಣ ಮಕ್ಕಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಮ್ಮ ಸಮಸ್ಯೆಯನ್ನು ಅರಿತು ನಗರಸಭಾ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

     

    ಸ್ಥಳೀಯರಾದ ಸೌಮ್ಯ ಮಾತನಾಡಿ ಮಳೆ ಹೆಚ್ಚಾದಲ್ಲಿ ಕೊಳಚೆ ನೀರು ಮನೆಗೆ ನುಗ್ಗುತಿದೆ. ನೀರಿನ ಕೆಟ್ಟವಾಸನೆಯಿಂದಾಗಿ ಮನೆಯಲ್ಲಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮಸ್ಯೆ ಅಧಿಕಾರಿಗಳ ಕಣ್ಣಿಗೆ ಕಾಣುತಿಲ್ಲ. ಮತ ಕೇಳಲು ಬರುವ ಜನಪ್ರತಿನಿಧಿಗಳು ಮೌನವಹಿಸಿರುವುದು ಸರಿಯಲ್ಲ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಎಂಬುದೇ ನಮ್ಮೆಲ್ಲರ ಒತ್ತಾಯ ಎಂದರು.

     

    ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ವಡ್ಡರಹಳ್ಳಿ ಮಾತನಾಡಿ ಈ ಬಡಾವಣೆಯು 2005 ರಲ್ಲಿ ಮಾಡಲಾಗಿದ್ದು ಬಡಾವಣೆಯ ನಿರ್ಮಾಣದ ಸಂದರ್ಭದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಪೈಪ್ ಲೈನ್ ಮಾಡಿದ್ದು. ಬಡಾವಣೆ ತಗ್ಗಿನಲ್ಲಿರುವ ಕಾರಣ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಲು ಸ್ಥಳೀಯವಾಗಿ ಎಸ್ ಟಿ ಪಿ ಘಟಕದ ಸ್ಥಾಪನೆ ಮಾಡಿದ್ದು ಮಳೆ ಹೆಚ್ಚಾದಾಗ ಈ ಘಟಕವು ಸಂಪೂರ್ಣ ತುಂಬಿಹೋಗುತ್ತದೆ. ನೀರಿನ ಹರಿವು ಸರಾಗವಾಗಿ ಆಗದ ಕಾರಣ ಸೈಟ್ ಗಳಲ್ಲಿ ಹುಕ್ಕುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರಕ್ಕೆ 3 ಹಂತದ ಒಳಚರಂಡಿ ಯೋಜನೆಯಲ್ಲಿ ಪ್ರಸ್ತವನೆ ಸಲ್ಲಿಸಿದ್ದು. ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು ಅಲ್ಲಿಯವರೆಗೂ ನಗರಸಭೆ ವತಿಯಿಂದ ಸ್ಥಳೀಯರಿಗೆ ತಾತ್ಕಾಲಿಕವಾಗಿ ಪರಿಹಾರ ನೀಡಲು ಸಹಕರಿಸಲಾಗುವುದು ಎಂದರು.

     

     

     

     

     

     

    ಪ್ರತಿಭಟನೆಯಲ್ಲಿ ಬಡಾವಣೆ ನಿವಾಸಿಗಳಾದ ರವಿಕುಮಾರ್, ವಸಂತ್, ನಾಗೇಶ್, ಸೌಮ್ಯ, ರವಿ, ಮಂಜುಳಾ, ಪ್ರಿಯಾಂಕಾ, ಶ್ರೀನಿವಾಸ್, ಮುಂತಾದವರು ಇದ್ದರು.

  • *ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನಮ್ಮ ವಿಶೇಷ ದಿನವನ್ನು ಆಚರಿಸಿದ್ದೇವೆ – ಪುನೀತ್ ಅಪ್ಪು*

    ದೊಡ್ಡಬಳ್ಳಾಪುರ ಮೇ 27 ( ವಿಜಯ ಮಿತ್ರ ) : ದಾನಿಗಳು ತಮ್ಮ ಸ್ವಯಿಚ್ಛೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಡವರಿಗೆ, ಹಸಿದವರಿಗೆ ಅನ್ನದಾನ ಮಾಡುತ್ತಿರುವುದು ಸಂತಸ ತಂದಿದೆ.1552 ನೇ ದಿನದ ದಾನಿಗಳಾಗಿ ಸಹಾಯಹಸ್ತ ನೀಡಿರುವ ಪುನೀತ್ ಅಪ್ಪು ರವರಿಗೆ ಶುಭವಾಗಾಲಿ ಎಂದು ಅನ್ನದಾಸೋಹಿ ಮಲ್ಲೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸತತ 1552ನೇ ದಿನಗಳ ಈ ನಿರಂತರ ಅನ್ನದಾಸೋಹ ಕಾರ್ಯಕ್ರಮವು ದಾನಿಗಳ ನೆರವಿನಿಂದ ಸಾಗುತ್ತಿದ್ದು. ಇಂದಿನ ಕಾರ್ಯಕ್ರಮಕ್ಕೆ ವಿಶೇಷವಾಗಿ ಎಳ್ಳುಪುರ ಕ್ರಾಸ್ ನಿವಾಸಿಗಳಾದ ಪುನೀತ್ ಅಪ್ಪು ರವರು ತಮ್ಮ ಪುತ್ರ ಪಿ ಸೂರ್ಯ ರವರ ಹುಟ್ಟುಹಬ್ಬದ ಅಂಗವಾಗಿ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಅನ್ನದಾಸೋಹ ಸಮಿತಿಗೆ ಸಹಕಾರ ನೀಡಿದ್ದು. ಅವರ ಈ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.

    ಪುನೀತ್ ಅಪ್ಪು ರವರು ಮಾತನಾಡಿ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಹಲವು ಬಾರಿ ಭಾಗವಹಿಸಿದ್ದು. ಮಲ್ಲೇಶ್ ಮತ್ತು ತಂಡದ ನಿಸ್ವಾರ್ಥ ಸೇವೆ ನೋಡಿದ್ದೇನೆ. ಅವರ ಜನಪರ ಕಾರ್ಯದಲ್ಲಿ ನಮ್ಮದೊಂದು ಸಣ್ಣ ಸಹಾಯ ಮಾಡಿದ್ದೇವೆ. ಎಲ್ಲರೂ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವ ಮೂಲಕ ಹಸಿದವರಿಗೆ ಆಹಾರ ವಿತರಣೆ ಮಾಡಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ಖಾಸ್ ಬಾಗ್ ಕೆಂಪರಾಜು , ಮಾರಸಂದ್ರ ಶಂಕರ್ , ಶ್ರೀನಗರ ಶಶಿ , ದೊಡ್ಡತುಮಕೂರು ರಘು , ರಘು , ಕಡತನ ಮಲೆ ಮಂಜುನಾಥ್, ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • *ಪದವೀಧರ ಕ್ಷೇತ್ರ ಚುನಾವಣೆ : ಕೆ ಆರ್ ಎಸ್ ಪಕ್ಷದಿಂದ ಜೀವನ್ ಸ್ಪರ್ಧೆ : ಮತ ನೀಡಿ ಬೆಂಬಲಿಸುವಂತೆ ಜಿಲ್ಲಾಧ್ಯಕ್ಷ ಶಿವಶಂಕರ್ ಮನವಿ*

    ದೊಡ್ಡಬಳ್ಳಾಪುರ ಮೇ 27 ( ವಿಜಯಮಿತ್ರ) : ಪದವೀಧರರ ಏಳಿಗೆಗಾಗಿ ಶ್ರಮಿಸಲು, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಕೆ ಆರ್ ಎಸ್ ಪಕ್ಷದ ವತಿಯಿಂದ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಜೀವನ್ ಸ್ಪರ್ಧಿಸುತ್ತಿದ್ದಾರೆ ಎಂದು ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ತಿಳಿಸಿದರು.

    ನಗರದ ಕೆ ಆರ್ ಎಸ್ ಪಕ್ಷದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನ ಉಳಿವಿಗಾಗಿ ಪ್ರಜಾಪ್ರಭುತ್ವದ ಅಡಿಯಲ್ಲಿ ಯಾವುದೇ ರೀತಿಯ ಆಮಿಷಗಳನ್ನು ಮತದಾರರಿಗೆ ನೀಡದೆ ಭ್ರಷ್ಟಾಚಾರ ರಹಿತ ಚುನಾವಣೆ ನಡೆಸುವುದು ನಮ್ಮ ಪಕ್ಷದ ಸಿದ್ದಂತವಾಗಿದೆ ಅಂತೆಯೇ ಈ ಬಾರಿಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಪದವೀಧರರು, ಯುವಕರು ಆದ ಜೀವನ್ ಸ್ಪರ್ಧಿಸುತ್ತಿದ್ದು . ಕ್ಷೇತ್ರದ ಪದವೀಧರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದಾರೆ ಎಂದರು.

    ಹಣ, ಹೆಂಡ ಸೇರಿದಂತೆ ಇತರೆ ಅಮಿಷಗಳನ್ನು ಮತದಾರರಿಗೆ ಒಡ್ಡುವ ಮೂಲಕ ಮತ ಪಡೆಯುವ ಹುನ್ನಾರ ನೆಡೆಯುತ್ತಿದೆ. ಆದರೆ ಕ್ಷೇತ್ರದ ಪದವೀಧರನ್ನು ಯಾಮಾರಿಸುವುದು ಅಷ್ಟು ಸುಲಭದ ಮಾತಲ್ಲ, ಅವರು ಪ್ರಜ್ಞಾವಂತರಾಗಿದ್ದು. ಈ ಬಾರಿ ತಮ್ಮ ಮತವನ್ನು ಕೆಆರ್‌ಎಸ್ ಪಕ್ಷಕ್ಕೆ ನೀಡುವ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕೆ ಆರ್ ಎಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಇಚ್ಚಿಸುವ ಆಕಾಂಕ್ಷಿಗಳು ಪಕ್ಷದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವಂತೆ ಮನವಿ ಮಾಡಿದರು.

    ಸುದ್ದಿಗೊಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಜಿಲ್ಲಾ ಕಾರ್ಯದರ್ಶಿ ಮಾರುತಿ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.