Blog

  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಂವಿಧಾನ ಜಾಗೃತಿ ಸಮಾವೇಶ

    ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ ಅಂಗೀಕರಣದ 75ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಮ್ಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರು ಭಾಗವಸುತ್ತಿರುವುದು ನಮ್ಮ ಪುಣ್ಯವೇ ಸರಿ. ಕಾರ್ಯಕ್ರಮಕ್ಕೆ ಸ್ವಇಚ್ಛೆಯಿಂದ ಸಾರ್ವಜನಿಕರು ತಾವಾಗಿಯೇ ಮುಂದೆ ಬರುತ್ತಿರುವುದು ಮತಷ್ಟು ಖುಷಿ ತಂದಿದೆ ಎಂದು ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಹನುಮಯ್ಯ ತಿಳಿಸಿದರು

     

     

    ಭಾರತ ಸಂವಿಧಾನ ಅಂಗೀಕರಣದ 75ನೇ ವರ್ಷದ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.25 ರಂದು ರಾಜ್ಯ ಸರ್ಕಾರವು ‘ಸಂವಿಧಾನ ಜಾಗೃತಿ ಸಮಾವೇಶ’ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲೂ ಸಕ್ಕರೆ ಗೊಲ್ಲಹಳ್ಳಿ ಗ್ರಾಮದಿಂದ ಹೋರಾಟ ಬಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇದ್ದು. ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದ್ದು ಎಲ್ಲರಲ್ಲೂ ಸಂತಸ ಮನೆ ಮಾಡಿದೆ ಎಂದು ತಿಳಿಸಿದರು.

     

     

    ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹನುಮಂತಯ್ಯ ಮಾತನಾಡಿ ಸರ್ಕಾರದ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ. ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಲ್ಲಾ ಪದಾಧಿಕಾರಿಗಳು ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನಕ್ಕೆ 75 ವರ್ಷಗಳು ಕಳೆದಿವೆ. ಇಂದಿಗೂ ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ತನ್ನ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಾಗುತ್ತಿರುವುದು ಕೇವಲ ಸಂವಿಧಾನದಿಂದ ಮಾತ್ರ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

     

     

     

     

    ಈ ಸಂದರ್ಭದಲ್ಲಿ ಸಕ್ಕರೆ ಗೊಲ್ಲಹಳ್ಳಿ ಪಂಚಾಯಿತಿ ಸದಸ್ಯರಾದ ಗೀತಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮುನಿರಾಜು ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಖಜಾಂಜಿ ಆನಂದ್, ಸಕ್ಕರೆ ಗೊಲ್ಲಹಳ್ಳಿ ಪಂಚಾಯಿತಿಯ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

  • ಭಾರತ ಸೇವಾದಳ ಶಿಬಿರದ ಸಮಾರೋಪ ಸಮಾರಂಭ : ತರಬೇತಿ ದಿನಗಳನ್ನು ನೆನೆದು ಭಾವುಕರಾದ ಶಿಬಿರಾರ್ಥಿಗಳು

    ಭಾರತ ಸೇವಾದಳ ಜಿಲ್ಲಾ ಸಮಿತಿ ವತಿಯಿಂದ ಸೇವಾದಳ ಶತಮಾನೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕ ಶಿಕ್ಷಕಿಯರ ಸಹಾಯಕ ಶಿಕ್ಷಣ ತರಬೇತಿ ಶಿಬಿರವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಬಿಸೆಂಟ್ ಪಾರ್ಕ್ ನಲ್ಲಿ ಆಯೋಜನೆ ಇಂದು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನೆರವೇರಿತು

    ಆರು ದಿನಗಳ ಶಿಬಿರದಲ್ಲಿ ಸಾಧನೆ ಮಾಡಿದ ಹಲವು ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

     

    ಸೇವಾದಳದ ವಿಶೇಷ ಆರು ದಿನಗಳ ಶಿಬಿರವನ್ನು ಕುರಿತು ಶಿಕ್ಷಕಿ ಸರಸ್ವತಿಯವರು ಮಾತನಾಡಿ ಒತ್ತಡ ನಿರ್ವಹಣೆ ಹೇಗೆ ಎಂಬುದು ಈ ಶಿಬಿರದಲ್ಲಿ ಕಲಿತ್ತಿದ್ದೇವೆ, ಮುಖ್ಯವಾಗಿ ಧ್ವಜಾವಂದನಾ ಕಾರ್ಯಕ್ರಮ ನಮ್ಮಲ್ಲಿ ನೂತನ ಚೈತನ್ಯ ತಂದಿದೆ, ಧ್ವಜಾರೋಹಣ ಹಾಗೂ ಧ್ವಜ ಅವರೋಹಣ ಹೇಗೆ ಮಾಡಬೇಕು ಧ್ವಜವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಈ ಶಿಬಿರದಲ್ಲಿ ಹಿರಿಯರಿಂದ ಕಲಿತಿದ್ದೇವೆ. ತರಬೇತಿಯು ಅತ್ಯುತ್ತಮವಾಗಿ ಮೂಡಿ ಬಂದಿದ್ದು ನಮ್ಮ ಶಾಲಾ ಮಕ್ಕಳಿಗೆ ಅನುಕೂಲಕರವಾಗಿರುವ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇವೆ ಎಂದು ತಿಳಿಸಿದರು

     

    ನೆಲಮಂಗಲ ಶಿಕ್ಷಕಿಯಾದ ಪ್ರೀತಿ ಮಾತನಾಡಿ ಸಾಮಾನ್ಯವಾಗಿ ನಾವೆಲ್ಲ ನಮ್ಮ ಶಾಲೆಗಳಲ್ಲಿ ಒಂದು ವಿಷಯಕ್ಕೆ ಸೀಮಿತವಾಗಿರುವ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತೇವೆ. ಆದರೆ ನಾವು ಎಲ್ಲಾ ವಿಷಯಗಳಲ್ಲೂ ಆಸಕ್ತಿಯುಳ್ಳ ವ್ಯಕ್ತಿತ್ವ ಹೊಂದಿರಬೇಕು ಹಾಗೂ ನೃತ್ಯ ಹಾಡುಗಾರಿಕೆ ಬರವಣಿಗೆ ಎಲ್ಲಾ ವಿಷಯಗಳನ್ನು ಬೋಧಿಸುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂಬುದು ಈ ಶಿಬಿರದಿಂದ ನನಗೆ ಅರ್ಥವಾಗಿದೆ. ಹಿರಿಯ ಶಿಬಿರರ್ಥಿಗಳ ಮಾರ್ಗದರ್ಶನದಿಂದ ಹಲವು ವಿಚಾರಗಳನ್ನು ಕಲಿತಿದ್ದೇವೆ ಎಂದರು ಶಿಬಿರಾವಧಿಯಲ್ಲಿ ತಮಗೆ ಹಿರಿಯ ತರಬೇತಿದಾರರು ನೀಡಿದ ಸಹಕರವನ್ನು ನೆನೆದು ಭಾವುಕರಾದರು.

     

     

    ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಜಿ ಲಕ್ಷ್ಮಿಪತಿ ಮಾತನಾಡಿ ಶಿಬಿರದಲ್ಲಿ ಆರು ದಿನಗಳ ಕಾಲ ತಾವು ಕಾಯುತ್ತಿರುವ ಸಕಲ ವಿದ್ಯೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಉತ್ತಮ ಸಮಾಜದ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮುಂದಾಗಬೇಕು. ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಧ್ವಜಾರೋಹಣ ಮತ್ತು ಧ್ವಜ ಅವರೋಹಣ ಕುರಿತು ತರಬೇತಿ ನೀಡಬೇಕಿದೆ. ಶಿಬಿರದಲ್ಲಿ ಹಲವು ವಿಚಾರಗಳನ್ನು ಕುರಿತು ತಿಳುವಳಿಕೆ ಪಡೆದುಕೊಂಡಿರುವ ತಾವು ದೇಶಪ್ರೇಮ,ಧ್ವಜಗೌರವ, ಶಿಸ್ತು, ಸಮಯ ಪ್ರಜ್ಞೆ, ಉತ್ತಮ ನಡವಳಿಕೆ ಕುರಿತಂತೆ ತಮ್ಮ ಶಾಲಾ ಮಕ್ಕಳಿಗೆ ತಿಳಿಸುವ ಮೂಲಕ ಮಕ್ಕಳನ್ನು ನಮ್ಮ ದೇಶದ ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವ ಕಾರ್ಯ ತಮ್ಮಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು

     

    ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸೇವಾದಳ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಪ್ರತಿವರ್ಷದಂತೆ ಈ ವರ್ಷವೂ ಕೂಡ ಕುಡಿಯುವ ನೀರು ಹಾಗೂ ಮಜ್ಜಿಗೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ – ಬಿ. ಮುನೇಗೌಡ

    ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು

     

    ತಾಲ್ಲೂಕಿನ ಹಲವು ಭಾಗಗಳಿಂದ ಹರಿದು ಬಂದ ಭಕ್ತಸಾಗರ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದರ್ಶನ ಪಡೆದು ಪುನೀತರಾದರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೋರಿ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಸಂಭ್ರಮಿಸಿದರು.

    ಬ್ರಹ್ಮರಥೋತ್ಸವದಲ್ಲಿ ತಾಲ್ಲೂಕಿನ ಹಲವು ಗಣ್ಯರು ಭಾಗಿಯಾಗಿ ದೇವರ ದರ್ಶನ ಪಡೆದರು.

    ಬ್ರಹ್ಮರಥೋತ್ಸವದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಿ. ಮುನೇಗೌಡರವರ ಅಭಿಮಾನಿ ಬಳಗದ ವತಿಯಿಂದ ಜಾತ್ರಾ ಮಹೋತ್ಸವಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಮಜ್ಜಿಗೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

     

     

    ಈ ಕುರಿತು ಜೆಡಿಎಸ್ ಮುಖಂಡ ಮುನೇಗೌಡ ಮಾತನಾಡಿ ನಮ್ಮ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಜಾತ್ರೆ ನಡೆಯುತ್ತಿದ್ದು ಬೇಸಿಗೆ ಸಮಯದಲ್ಲಿ ಈ ಬ್ರಹ್ಮರಥೋತ್ಸವ ಇರುವ ಕಾರಣ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ದಣಿವಾರಿಸಲು ಮಜ್ಜಿಗೆ ಮತ್ತು ಕುಡಿಯುವ ನೀರು ನೀಡುವ ಅರವಂಟಿಕೆ ಕಾರ್ಯಕ್ರಮವನ್ನು ಕಳೆದ ಹಲವು ವರ್ಷಗಳಿಂದ ಆಯೋಜನೆ ಮಾಡುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಯೋಜನೆ ಮಾಡಿದ್ದೇವೆ. ಸುಮಾರು 3000ಕ್ಕೂ ಅಧಿಕ ಮಜ್ಜಿಕೆ ವಿತರಣೆ ಮಾಡಲಾಗುತ್ತಿದೆ,ಸಾರ್ವಜನಿಕರು ಶಾಂತ ರೀತಿಯಲ್ಲಿ ಭಾಗವಹಿಸಿ ರಥೋತ್ಸವ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

     ಈ ಸಂದರ್ಭದಲ್ಲಿ ತಾಲೂಕಿನ ಜೆಡಿಎಸ್ ಮುಖಂಡರು ಅಂಚರ ಹಳ್ಳಿ ಆನಂದ್, ಕುಂಟನ ಹಳ್ಳಿ ಮಂಜುನಾಥ್, ವಕೀಲರಾದ ಮುರುಳಿ, ಮಧುಸೂಧನ್ ಸೇರಿದಂತೆ ಬಿ ಮುನೇಗೌಡರವರ ಅಭಿಮಾನಿಗಳು ಉಪಸ್ಥಿತರಿದ್ದರು

  • ಮೈಸೂರು- ಅಯೋಧ್ಯ ಧಾಮ ರೈಲಿಗೆ ಯಾತ್ರಿಕರ ತಡೆ

    ಮೂವರು ಅನ್ಯಕೋಮಿನ ಯುವಕರಿಂದ ಯಾತ್ರಿಕರಿಗೆ ಧಮ್ಕಿ ಹಾಕಿರುವ ಹಿನ್ನಲೆಯಲ್ಲಿ ಯಾತ್ರಿಕರು 2ಗಂಟೆಗಳ ಕಾಲ ರೈಲು ತಡೆದು ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ವಿಜಯನಗರದ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.

     

    ಹೌದು ಅನ್ಯಕೋಮಿನ ಮೂವರು ಯುವಕರು ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದ ಹಿನ್ನಲೆ ಮೈಸೂರು – ಅಯೋಧ್ಯಾಧಾಮ ರೈಲಿನ ಪ್ರಯಾಣಿಕರು ರೈಲು ತಡೆದು ಪ್ರತಿಭಟನೆ ಮಾಡಿದರು. ತಮಗೆ ರಕ್ಷಣೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

     

     

    ಬೆದರಿಕೆ ಒಡ್ಡಿದ ಅನ್ಯಕೋಮಿನ ಯುವಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದರು.

  • ಇಂದು ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

    ಇಂದು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಮಧ್ಯಾಹ್ನ 12 ಗಂಟೆಗೆ ನಗರದ ತೇರಿನ ಬೀದಿಯಲ್ಲಿ ನಡೆಯಲಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದ್ದು ರಥೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಾಳೆ ಫೆಬ್ರವರಿ 25ರಂದು ಹಗಲು ಪರಿಷೆ ನೆಡೆಯಲಿದೆ.

     

    ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಜಾತ್ರಾ ಸಂಸ್ಕೃತಿಕ ಸಮಿತಿ ವತಿಯಿಂದ ನಗರಸಭೆ ಹಾಗೂ ತಾಲ್ಲೂಕು ಕಲಾವಿದರ ಸಂಘ, ಅನಿಕೇತನ ಟ್ರಸ್ಟ್ ಸಹಯೋಗದೊಂದಿಗೆ ಬ್ರಹ್ಮರಥೋತ್ಸವದ ಅಂಗವಾಗಿ ಫೆಬ್ರವರಿ 24 ಮತ್ತು 25 ರಂದು ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

     

     

    ಇಂದು ಸಂಜೆ 6 ಗಂಟೆಗೆ ಶ್ರೀ ಲಕ್ಷ್ಮಿ ಲಲಿತ ನಾಟ್ಯ ಕಲಾಸಂಘದಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ರಾತ್ರಿ 9 ಗಂಟೆಗೆ ಶ್ರೀ ಆಂಜನೇಯ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀಕೃಷ್ಣಗಾರುಡಿ ಪೌರಾಣಿಕ ನಾಟಕ ಪ್ರದರ್ಶನ ನೆಡೆಯಲಿದೆ.

     

    ನಾಳೆ ಫೆಬ್ರವರಿ 25ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ರಾತ್ರಿ 9:00ಗೆ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದಿಂದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ನೆಡೆಯಲಿದೆ.

  • ನೂತನ ಈಚರ್ ಪ್ರೋ 2119 : ವಾಹನ ವಿಶೇಷತೆ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದ ಪಿ ಎಸ್ ಎನ್ ಸಂಸ್ಥೆ

    ಈ ವಾಹನವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು. ಚಾಲಕರಿಗೆ ಉತ್ತಮ ಅನುಭವವನ್ನು ಕೊಡುತ್ತದೆ ಈಚರ್ ಪ್ರೊ 2119 ಉತ್ತಮ ಮೈಲೇಜ್ ನೀಡುವುದರ ಜೊತೆಗೆ ವಾಹನದ ಮಾಲೀಕರಿಗೆ ಆದಾಯವನ್ನು ಹೆಚ್ಚಿಸಲಿದೆ ವಾಹನದಲ್ಲಿ ಎಂದು ಪಿ ಎಸ್ ಏನ್ ಸಿಬ್ಬಂದಿ ಕೃಷ್ಣ ತಿಳಿಸಿದರು

     

    ದೊಡ್ಡಬಳ್ಳಾಪುರ ನಗರ ಭಾಗದ ಖಾಸಗಿ ಹೋಟೆಲ್ ಒಂದರಲ್ಲಿ ಪಿ ಎಸ್ ಏನ್ ವತಿಯಿಂದ ಈಚರ್ ಪ್ರೊ 2119 ಕುರಿತು ಗ್ರಾಹಕರಿಗೆ ಮಾಹಿತಿ ಹಾಗೂ ವಾಹನದ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು .

    ಗ್ರಾಹಕ ಉಸೇನ್ ಮಾತನಾಡಿ ವಾಹನ ತುಂಬಾ ಚೆನ್ನಾಗಿದ್ದು ಕೊಂಡುಕೊಳ್ಳುವ ಮನಸ್ಸಾಗಿದೆ .ಉತ್ತಮ ಮೈಲೇಜ್ ನೊಂದಿಗೆ ಅದ್ಭುತ ತಂತ್ರಜ್ಞಾನ ಒಂದಿದೆ .ಕಾರ್ಯಕ್ರಮದಲ್ಲಿ ಪಿ ಎಸ್ ಏನ್ ಸಿಬ್ಬಂದಿ ಸವಿಸ್ತಾರವಾಗಿ ವಾಹನದ ಕುರಿತು ಮಾಹಿತಿ ಕೊಟ್ಟಿದ್ದು ವಾಹನ ಸವಾರರ ಜೊತೆ ಜೊತೆಗೆ ಮಾಲೀಕರಿಗೂ ಸಹಾಯವಾಗುವ ವಾಹನ ಈಚರ್ ಪ್ರೊ 2119 ಆಗಿದೆ ಎಂದು ಅಭಿಪ್ರಾಯ ಪಟ್ಟರು

    ಗ್ರಾಹಕ ನಿಸಾರ್ ಮಾತನಾಡಿ ನಮ್ಮ ಬಳಿ 22 ಹಾಗೂ 16 ಚಕ್ರಗಳ ವಾಹನಗಳನ್ನು ಹೊಂದಿದ್ದೇವೆ ಇದೇ ಮೊದಲಬಾರಿಗೆ ಈಚರ್ ಪ್ರೊ 2119 ಬಗ್ಗೆ ತಿಳಿದು ಕೊಂಡುಕೊಳ್ಳುವ ಯೋಚನೆ ಮಾಡಿದ್ದೇವೆ . ಸಿಮೆಂಟ್ ಸಾಗಿಸಲು ಇದೊಂದು ಉತ್ತಮ ವಾಹನ ಎಂದರೆ ತಪ್ಪಾಗಲಾರದು ಪಿ ಎಸ್ ಎನ್ ಸಂಸ್ಥೆಯು ಉತ್ತಮ ಸೇವೆ ಒದಗಿಸುವ ಜೊತೆ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡಿದ್ದೆ.ಇಂದು ನೂತನ ವಾಹನ ಈಚರ್ ಪ್ರೊ 2119 ಕುರಿತು ಸಂಪೂರ್ಣವಾಗಿ ಉತ್ತಮ ಮಾಹಿತಿ ನೀಡಿದ್ದಾರೆ ಚಾಲಕರ ಅನುಕೂಲಕ್ಕಾಗಿ ನೂತನ ವಿನ್ಯಾಸ ಹಾಗೂ ತಂತ್ರಜ್ಞಾನದೊಂದಿಗೆ ವಾಹನ ನಿರ್ಮಾಣ ಮಾಡಿರುವ ಈಚರ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು

     

    ಮಾರಾಟವಿಭಾಗದ ವ್ಯವಸ್ಥಾಪಕರಾದ ಚೈತನ್ಯ ಮಾತನಾಡಿ ನೂತನ ವಿನ್ಯಾಸದೊಂದಿಗೆ ಮಾಲೀಕರ ಹಾಗೂ ಚಾಲಕರ ಸ್ನೇಹಿ ವಾಹನವನ್ನು ಈಚರ್ ಸಂಸ್ಥೆ ನಿರ್ಮಾಣ ಮಾಡಿದ್ದು ಪ್ರೊ 2119 ಹೆಸರಿನಲ್ಲಿ ಲೋಕಾರ್ಪಣೆ ಮಾಡಿದೆ ಉತ್ತಮ ಮೈಲೇಜ್ ಸಹಿತ ಕಡಿಮೆ ವೆಚ್ಚದ ನಿರ್ವಹಣೆಯೊಂದಿಗೆ ಅಧಿಕ ಲಾಭ ತಂದುಕೊಂಡಬಲ್ಲ ವಾಹನ ಇದಾಗಿದೆ . ನೂತನವಾಗಿ ವಾಹನ ಖರೀದಿ ಮಾಡಬಯಸುವ ಪ್ರತಿಯೊಬ್ಬರಿಗೂ ಈಚರ್ ಪ್ರೊ 2119 ಉತ್ತಮ ಆಯ್ಕೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಪಿ ಎಸ್ ಎನ್ ಸಂಸ್ಥೆಯ ಸಿಬ್ಬಂದಿ ವ್ಯವಹಾರಿಕ ಮುಖ್ಯಸ್ಥರಾದ ಚೈತನ್ಯ, ಸೇವಾ ವ್ಯವಸ್ಥಾಪಕರಾದ ಯುವರಾಜ ಸಿ ವಿ, ಸಿ ಎಸ್ ಎಂ ಕೃಷ್ಣ ರಾಜನಾಥ್ ಮತ್ತಿತರರು ಉಪಸ್ಥಿತರಿದ್ದರು .

  • *ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ*

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Indigenous Technologies for Societal Development” ಎಂಬ ವಿಷಯದ ಮೇಲೆ 2024ರ ಫೆಬ್ರವರಿ 28 ರಂದು (ಬುಧವಾರ) ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅಕಾಡೆಮಿ ಕಛೇರಿಯಲ್ಲಿ (ಪ್ರೊ. ಯು.ಆರ್. ರಾವ್ ವಿಜ್ಞಾನ ಭವನ, ಮೇ. ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಆವರಣ, ಜಿಕೆವಿಕೆ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು-560097) ಆಯೋಜಿಸಲಾಗುತ್ತಿದೆ.

    ಕಾರ್ಯಕ್ರಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಡ್ರಾಯಿಂಗ್ & ಪೆಂಟಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಗುವುದು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಗೂಗಲ್ ಫಾರ್ಮ್-https://forms.gle/e5UbmGWkkaC1utgLA ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ http://www.kstacademy.in ವೀಕ್ಷಿಸಬಹುದಾಗಿದೆ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎ.ಎಂ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ರಾಜ್ಯ ಮಟ್ಟದ ಉದ್ಯೋಗ ಮೇಳಕ್ಕೆ ವಿಕಲಚೇತನ ಅಭ್ಯರ್ಥಿಗಳು ನೋಂದಾಯಿಸಿ*

    ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಫೆಬ್ರವರಿ 26 ಮತ್ತು 27 ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಸನ್ಮಾನ್ಯ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.

    ಈ ಉದ್ಯೋಗ ಮೇಳದಲ್ಲಿ 500ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿ/ಉದ್ದಿಮೆ/ಉದ್ಯೋಗದಾತ ಸಂಸ್ಥೆಗಳು ಭಾಗವಹಿಸುತ್ತಿರುವುದರಿಂದ ವಿಕಲಚೇತನ ಅಭ್ಯರ್ಥಿಗಳು/ಉದ್ಯೋಗಾಕಾಂಕ್ಷಿಗಳು https://udyoga.skillconnet.kaushalkar.com/ ಲಿಂಕ್‌ನಲ್ಲಿ ನೋಂದಾಯಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು

    ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ದಲಿತರ ಮೇಲೆ ದೌರ್ಜನ್ಯ ಖಂಡನೀಯ : ಹೋರಾಟಕ್ಕೆ ನಾವು ಸದಾ ಸಿದ್ದ – ಅಶ್ವಥ್ ನಾರಾಯಣ್

    1985ರ ಉಳುವುದಕ್ಕೆ ಭೂಮಿಕೊಡಿ ವಾಸ ಮಾಡಲು ನಿವೇಶನ ಕೊಡಿ ಎಂಬ ಧ್ಯೇಯ ವಾಕ್ಯದಂತೆ ಅಂದಿನಿಂದ ಇಂದಿನವರೆಗೂ ರಾಜ್ಯಾದ್ಯಂತ ನಿವೇಶನ ಹಾಗೂ ಭೂಮಿ ಕುರಿತು ಸತತ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ .ಸ್ಥಳೀಯವಾಗಿ ದೊಡ್ಡಬಳ್ಳಾಪುರದಲ್ಲಿ ನೂರಾರು ಭೂ ಹೋರಾಟಗಳು ನಡೆದಿವೆ ಸ್ಥಳೀಯ ಮುಖಂಡರು ಹಾಗೂ ಸಂಘಟನೆಯ ರಾಜ್ಯ ಉಪ ಸಂಚಾಲಕರು ಆದ ಪಿಳ್ಳಪ್ಪ ನವರ ನೇತೃತ್ವದಲ್ಲಿ ಮುಂದೆಯೂ ಹೋರಾಟಕ್ಕೆ ಮುಂದಾಗುತ್ತೇವೆ ಏನು ದಲಿತ ಸಂಘರ್ಷ ಸಮಿತಿ (ಸಂಘರ್ಷ ಸಮಿತಿ ) ಯ ರಾಜ್ಯಾಧ್ಯಕ್ಷರಾದ ಡಾ. ಅಶ್ವಥ್ ನಾರಾಯಣ ತಿಳಿಸಿದರು

    ದೊಡ್ಡಬಳ್ಳಾಪುರ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಂತರ ಮಾತನಾಡಿದ ಅವರು ನಮ್ಮ ಸಂಘಟನೆ ಬಲಿಷ್ಟವಾಗಿದೆ ಸಮಾಜದಲ್ಲಿ ನೆಡೆಯುವ ಅನ್ಯಾಯಗಳ ವಿರುದ್ಧ ನಮ್ಮ ಸಮಿತಿ ಹೋರಾಟ ಸದಾ ಜೀವಂತ.ಸಂವಿಧಾನವೇ ನಮ್ಮ ಶಕ್ತಿ ನ್ಯಾಯ ಪರ ಹೋರಾಟಕ್ಕೆ ನಾವು ಸದಾ ಸಿದ್ದ ಎಂದು ತಿಳಿಸಿದರು

     

     

    ರಾಜ್ಯ ಉಪಸಂಚಲಕರಾದ ಪಿಳ್ಳಪ್ಪ ಮಾತನಾಡಿ ದಲಿತರ ವಿಷಯದಲ್ಲಿ ರಾಜಕೀಯ ನಾಯಕರು ಕೇವಲ ನಟಿಸುತ್ತಾರೆ ಇಂದಿಗೂ ನಮ್ಮ ರಾಜ್ಯದಲ್ಲಿ ಎಷ್ಟೋ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡಲಾಗಿಲ್ಲ ಅದನ್ನು ಪ್ರಶ್ನಿಸುವ ನಾಯಕರು ನಮ್ಮಲ್ಲಿ ಇಲ್ಲದಿರುವುದು ನಮ್ಮ ದೌರ್ಭಾಗ್ಯ. ನಮ್ಮ ಸಮಿತಿ ಉದ್ದೇಶ ನೇರ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ವಿರುದ್ದ ನಮ್ಮ ಹೋರಾಟ ಅದು ಎಂದಿಗೂ ನಿಲ್ಲುವುದಿಲ್ಲ .ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಂತೆ ಸಮಾಜದಲ್ಲಿ ಸಮಾನತೆ ,ಶಾಂತಿಯುತ ಸಹಬಾಳ್ವೆ ನಮ್ಮ ಉದ್ದೇಶ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

     

     

    ದಲಿತ ಮುಖಂಡರಾದ ಹಲೇನಹಳ್ಳಿ ರವಿಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಎದುರಿಸಲು ನಮ್ಮ ಈ ಸಂಘಟನೆಯನ್ನು ಕಟ್ಟಲಾಗಿದೆ ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಗಳ ಬುನಾದಿಯಲ್ಲಿ ನಾವು ಸಾಗುತ್ತಿದ್ದೇವೆ .ಇಲ್ಲಿನ ಭೂ ಹಗರಣಗಳಿಂದಾಗಿ ತಾಲ್ಲೂಕಿನಲ್ಲಿ ಬೆಟ್ಟ ಗುಡ್ಡಗಳು ಕಣ್ಮರೆಯಾಗುತ್ತಿವೆ ಗೋಮಾಳಗಳು ಮಾಯವಾಗುತ್ತಿವೆ. ದಲಿತರ ದೂರು ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆ ಈ ವ್ಯವಸ್ಥೆ ಬದಲಾಗಬೇಕಿದೆ .ಹೋರಾಟದ ಮೂಲಕ ಸಮಾಜದಲ್ಲಿ ಬದಲಾವಣೆಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ರಾಮಾಂಜಿನಪ್ಪ ಮಾತನಾಡಿ ಇತ್ತೀಚಿನ ಸಂಘಟನೆಗಳು ರಾಜಕೀಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿಗೆ ತಲುಪಿವೆ .ಇದು ಒಡೆದು ಆಳುವ ನೀತಿಗೆ ಉತ್ತಮ ಉದಾಹರಣೆಯಾಗಿದೆ ಜಾತಿ ಹೆಸರಿನಲ್ಲಿ ಸಂಘಟನೆ ಕಟ್ಟುವ ಮೂಲಕ ನಮ್ಮಲ್ಲಿ ಒಗ್ಗಟ್ಟನ್ನು ಓಡೆಯುತ್ತಿದ್ದಾರೆ. ಸ್ವಯಂಘೋಷಿತ ರಾಜ್ಯಾಧ್ಯಕ್ಷರು, ಅಧ್ಯಕ್ಷರು ಆಗುವ ಕೆಲವು ಮಂದಿಯಿಂದ ಸಮುದಾಯಕ್ಕೆ ಯಾವುದೇ ಉಪಯೋಗ ಇಲ್ಲದಿರುವುದು ಶೋಚನೀಯ ಸಂಗತಿ .ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಕ್ಕೆ ನಿವೇಶನ ಹಂಚಿಕೆಯಾದ ಉದಾಹರಣೆ ಎಲ್ಲೂ ಕಾಣುತ್ತಿಲ್ಲ ,ಪ್ರಸ್ತುತ ದಲಿತರು ವಾಸಿಸುವ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಂದು ಕುಟುಂಬ ವಾಸಿಸುವ ಸ್ಥಳದಲ್ಲಿ 3 ರಿಂದ 4 ಕುಟುಂಬಗಳು ಸಣ್ಣ ಸಣ್ಣ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ ಈ ಪರಿಸ್ಥಿತಿ ಯಾವ ರಾಜಕಾರಣಿಗಳಿಗೂ ಕಾಣದಿರುವುದು ವಿಪರ್ಯಾಸ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಪದಾಧಿಕಾರಿಗಳ ಪಟ್ಟಿ ಇಂತಿದೆ:-

    ತಾಲ್ಲೂಕು ಅಧ್ಯಕ್ಷರಾಗಿ ಅಂಜಿನಪ್ಪ, ತಾಲ್ಲೂಕು ಉಪಾಧ್ಯಕ್ಷರಾಗಿ ರವಿಕುಮಾರ್ ,ಬಸವರಾಜು, ಕಾಂತರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ರಾಜಕುಮಾರ್ , ತಾಲ್ಲೂಕು ಉಪಕಾರ್ಯದರ್ಶಿಯಾಗಿ ಮಲ್ಲೇಶ್ ,ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನ ಕೇದರಯ್ಯ, ಕಸಬಾ ಹೋಬಳಿ ಅಧ್ಯಕ್ಷರಾಗಿ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಮುತ್ತುರಾಜು, ದೊಡ್ಡಬೇಳವಂಗಲ ಹೋಬಳಿ ಅಧ್ಯಕ್ಷರಾಗಿ ವೆಂಕಟ ಅರಸಯ್ಯ, ನಗರ ಅಧ್ಯಕ್ಷರಾಗಿ ಮೂರ್ತಿ ,ಮಧುರೆ ಹೋಬಳಿ ಅಧ್ಯಕ್ಷರಾಗಿ ನಾಗರಾಜು , ಸಾಸಲು ಹೋಬಳಿ ಅಧ್ಯಕ್ಷರಾಗಿ ನಾಗರಾಜು ರವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ

     

    ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ , ಪೂರ್ವ ಜಿಲ್ಲಾ ಸಂಯೋಜಕರಾದ ಏಚ್.ನಾರಾಯಣ ಸ್ವಾಮಿ, ಮಹಿಳಾ ಸಂಯೋಜಕರಾದ ಗಂಗಮ್ಮ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಮೈಸೂರು ಕಾಗದ ಕಾರ್ಖಾನೆ (MPM)ಗೆ ಮರುಜೀವ : ಕಾರ್ಖಾನೆ ಪುನಶ್ಚೇತನ ಕುರಿತು ಮಹತ್ವದ ಸಭೆ

    ಗುಣಮಟ್ಟದ ಕಾಗದಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದ್ದ ಮೈಸೂರು ಕಾಗದ ಕಾರ್ಖಾನೆ (MPM)ಗೆ ಬೀಗ ಮುದ್ರೆ ಬಿದ್ದಿದ್ದು ಪುನಶ್ಚೇತನ ನೀಡುವ ಕುರಿತಂತೆ ಇಂದು ಮಹತ್ವದ ಸಭೆ ನಡೆಸಿದೆ.

    40 ವರ್ಷಗಳ ಅವಧಿಗೆ 20,005 ಹೆಕ್ಟೇರ್ ಅರಣ್ಯ ಭೂಮಿ ಹಸ್ತಾಂತರ; ನೀಲಗಿರಿ ಬೆಳೆಯಲು MPMಗೆ ಅವಕಾಶ ನೀಡುವ ಸಂಬಂಧ ಚರ್ಚಿಸಿ, ಸೂಕ್ತ ತೀರ್ಮಾನ ಮಾಡಲು ಉನ್ನತಾಧಿಕಾರ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಿ, ತಿಂಗಳಲ್ಲಿ ವರದಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು

    ಈ ಸಂದರ್ಭದಲ್ಲಿ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ, ವರ್ಚುವಲ್ ಮೂಲಕ ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧುಬಂಗಾರಪ್ಪ, ಭದ್ರಾವತಿಯ ಶಾಸಕರಾದ ಶ್ರೀ ಬಿ.ಕೆ. ಸಂಗಮೇಶ್ವರ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.