Blog

  • ದ್ವಜಸ್ತಂಭ ಖಾಲಿ ಖಾಲಿ: ಗಣರಾಜ್ಯೋತ್ಸವದ ಆಚರಣೆ ಮರ್ತೋದ್ರಾ ದೊಡ್ಡಬಳ್ಳಾಪುರ ವಿದ್ಯುತ್ ಮಗ್ಗ ಸೇವಾ ಕೇಂದ್ರ ಸಿಬ್ಬಂದಿ

    ದೊಡ್ಡಬಳ್ಳಾಪುರ : ದೇಶದಾದ್ಯಂತ ವಿಶೇಷವಾಗಿ ಜನವರಿ 26ರಂದು ಗಣರಾಜ್ಯೋತ್ಸವದ ದಿನವನ್ನಾಗಿ ಅತ್ಯಂತ ಸಂಭ್ರಮಾ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.ಸಾರ್ವಜನಿಕ ಕಚೇರಿಗಳಲ್ಲಿ ಈ ದಿನವು ಒಂದು ವಿಶೇಷ ಹಬ್ಬವೇ ಸರಿ..

    ಆದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಕಚೇರಿ ಪಾಳ್ಯದ ಸಮೀಪ ಜವಳಿ ಮಂತ್ರಾಲಯದ ವತಿಯಿಂದ ಸ್ಥಾಪಿಸಲಾಗಿರುವ ಕೆ ಎಸ್ ಟಿ ಐ ಡಿ ಸಿ ವಿದ್ಯುತ್ ಮಗ್ಗ ಸೇವಾ ಕೇಂದ್ರ ಕಚೇರಿ ಮುಂಭಾಗ ಭಾರತದ ಹೆಮ್ಮೆಯ ಧ್ವಜ ಕೊಂಗೊಳಿಸಬೇಕಿದ್ದ ಧ್ವಜಸ್ತಂಭ ಖಾಲಿ ಖಾಲಿ ಇದೆ.

     

    ಗಣರಾಜ್ಯೋತ್ಸವದ ದಿನದ ಅಂಗವಾಗಿ ಕಚೇರಿಯಲ್ಲಿ ಯಾವುದೇ ಆಚರಣೆ ನಡೆದಿಲ್ಲ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ತಿರಸ್ಕೃತ ಭಾವದಿಂದ ನೋಡಲಾಗುತ್ತದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ .

     

    ರಾಷ್ಟ್ರೀಯ ಹಬ್ಬದ ದಿನವಾದ ಗಣರಾಜ್ಯೋತ್ಸವ ದಿನದಂದು ಕಚೇರಿಯಲ್ಲಿ ಯಾರು ಇಲ್ಲದಿರುವುದು ವಿಪರ್ಯಾಸವೇ ಸರಿ. ವಿದ್ಯುತ್ ಮಗ್ಗ ಸೇವಾ ಕೇಂದ್ರದಲ್ಲಿ ಸರಳ ರೀತಿಯ ಆಚರಣೆಯು ಆಗಿಲ್ಲ ಎಂಬುದು ಸ್ಥಳೀಯ ಸಾರ್ವಜನಿಕರ ಆಕ್ರೋಶ.

     

    ಈ ಕುರಿತು ವಿದ್ಯುತ್ ಮಗ್ಗ ಸೇವಾ ಕೇಂದ್ರದ ಕಚೇರಿ ಸಿಬ್ಬಂದಿ ಉತ್ತರ ನೀಡಬೇಕಿದೆ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡದೇ ಇರುವುದರ ಕುರಿತು ಕಾರಣ ತಿಳಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

  • ಕಾಡಾನೆಗಳ ಹಾವಳಿ ತಪ್ಪಿಸಲು ಸರ್ಕಾರ ಹೊಸ ಪ್ಲಾನ್

    ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಕಾಡಾನೆಗಳ ಹಾವಳಿ ತಪ್ಪಿಸಲು ವಿಶೇಷ ಯೋಚನೆ ರೂಪಿಸಿರುವ ಸರ್ಕಾರ ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದರು

     

    ಈ ಕುರಿತಂತೆ ಮಾತನಾಡಿದ ಅವರು ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲಿಯೇ ಒದಗಿಸಿಕೊಡಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಇದರಿಂದಾಗಿ ಆನೆಗಳು ಕಾಡಿನಿಂದ ಊರಿನ ಕಡೆಗೆ ಬರುವುದು ಕಡಿಮೆಯಾಗುತ್ತದೆ.

    ಈ ಬಾರಿ ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ 600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪೂರ್ಣವಾಗಿ ತಡೆಗೋಡೆ ನಿರ್ಮಾಣವಾದರೆ ಆನೆ – ಮಾನವ ಸಂಘರ್ಷ ನಿಲ್ಲಲಿದೆ ಎಂದು ತಿಳಿಸಿದರು.

  • 12 ಕೋಟಿ ವೆಚ್ಚದಲ್ಲಿ ಕೊಡಗಿನ ಸಂಪ್ರದಾಯದಂತೆ ನೂತನ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಕಚೇರಿ ನಿರ್ಮಾಣ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಕರ್ನಾಟಕ ಪೊಲೀಸ್ ವಸತಿ ಗೃಹಗಳ ಕುರಿತಂತೆ ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮದ ವತಿಯಿಂದ 12 ಕೋಟಿ ರೂ.ಗಳ ವೆಚ್ಚದಲ್ಲಿ ಕೊಡಗಿನ ಸಂಪ್ರದಾಯದಂತೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ನಿರ್ಮಾಣವಾಗಿದೆ. ಕಚೇರಿ ಎಷ್ಟು ದೊಡ್ಡದು ಮುಖ್ಯವಲ್ಲ ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವುದು ಬಹಳ ಮುಖ್ಯ.

     

    ರಾಜ್ಯದಲ್ಲಿ ಪೊಲೀಸ್ ವಸತಿ ಗೃಹಗಳ ಕೊರತೆ ಇದ್ದು ಈ ನಿಟ್ಟಿನಲ್ಲಿ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ಗಮನ ಹರಿಸಲಿದೆ.

    ಚಿಕ್ಕಹೆಜ್ಜಾಲದಲ್ಲಿ ಪೊಲೀಸ್ ತರಬೇತಿ ಶಾಲೆ ಸ್ಥಾಪನೆಯಾಗಬೇಕೆಂಬ ಬೇಡಿಕೆ ನನ್ನ ಗಮನಕ್ಕೆ ಬಂದಿಲ್ಲ, ಬಂದರೆ ಪರಿಶೀಲಿಸಲಾಗುವುದು.

     

    ಹಿಂದಿನ ಸರ್ಕಾರದ ಅವಧಿಯಲ್ಲಿ ಗುಂಡೂರಾವ್ ಬಡಾವಣೆಯಲ್ಲಿನ ಪೊಲೀಸ್ ಇಲಾಖೆ ಕಟ್ಟಡಕ್ಕೆ ಅಡಿಪಾಯ ಹಾಕಿದ್ದು, ಅದಕ್ಕೆ ಉಚ್ಚನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವುಗೊಂಡ ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

  • ದೊಡ್ಡಬಳ್ಳಾಪುರ ತಾಲ್ಲೂಕು ಕಸಾಪ ವತಿಯಿಂದ ಗಣರಾಜ್ಯೋತ್ಸವ ಆಚರಣೆ

    ದೊಡ್ಡಬಳ್ಳಾಪುರ : ನಮ್ಮ  ಸಂವಿಧಾನವು  ದೇಶದ ಸಮಗ್ರ ಅಭಿವೃದ್ಧಿಯಲ್ಲಿ  ಮಹತ್ವದ ಪಾತ್ರ ವಹಿಸಿದೆ.  ಸಂವಿಧಾನದ ಆಶಯಗಳನ್ನು   ಸಾಕಾರಗೊಳಿಸುವುದು  ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು  ಜೆಸಿಐಯುಟಿ ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ  ಗಣರಾಜ್ಯೋತ್ಸವ  ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.  ನಮ್ಮ ಸಂವಿಧಾನವು    ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡಿದೆ.    ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ   ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ದೊರಕಿವೆ..  ಆದ್ದರಿಂದ   ನಮ್ಮ ದೇಶದ  ಪ್ರತಿಯೊಬ್ಬರೂ  ಸಂವಿಧಾನವನ್ನು ಗೌರವಿಸಬೇಕು. ಅದರಲ್ಲಿ ಇರುವ ನಿಯಮಗಳನ್ನು ಅನುಸರಿಸಬೇಕು ಎಂದರು.‌

    ಕಿರುತೆರೆ  ಬಾಲನಟಿ ಮತ್ತು ವಿದ್ಯಾರ್ಥಿನಿ  ಗಮನಗೌಡ ಮಾತನಾಡಿ,  ಭಾರತದ ಸಂವಿಧಾನ ರಚನೆಯಲ್ಲಿ‌    ಡಾ.ಬಿ.ಆರ್.ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದಾರೆ.  ಡಾ.ಬಿ‌.ಆರ್.ಅಂಬೇಡ್ಕರ್  ನೀಡಿದ. ಶಿಕ್ಷಣ, ಸಂಘಟನೆ ಮತ್ತು ಹೋರಾಟ   ಎಂಬ ವಿಚಾರಗಳು ಎಂದಿಗೂ ಪ್ರಸ್ತುತ ಎನಿಸುತ್ತದೆ.   ಗಣರಾಜ್ಯೋತ್ಸವ    ದಿನಾಚರಣೆ  ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮಹತ್ವದ ದಿನವಾಗಿದೆ ಎಂದರು. .

    ಕಾರ್ಯಕ್ರಮದಲ್ಲಿ      ಭಾರತ  ಸ್ಕೌಟ್ ಮತ್ತು ಗೈಡ್  ಜಿಲ್ಲಾ ಸಹಾಯಕ ಆಯುಕ್ತ   ವೆಂಕಟರಾಜು,  ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಕೋಶಾಧ್ಯಕ್ಷ  ನಂ.ಮಹಾದೇವ್,  ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್,     ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್,   ಮಾಜಿ ಅಧ್ಯಕ್ಷ  ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು,  ಕಸಬಾ ಹೋಬಳಿ ಘಟಕ  ಅಧ್ಯಕ್ಷ ದಾದಾಪೀರ್,  ತೂಬಗೆರೆ ಹೋಬಳಿ‌ ಘಟಕದ  ಅಧ್ಯಕ್ಷ  ಟಿ.ಆರ್.ಕುಮಾರ್, ಗೌರವ ಕಾರ್ಯದರ್ಶಿ  ಗಿರೀಶ್ ಎನ್.ಬರಗೂರು, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಮುನಿರಾಜು,   ಷಪೀರ್,  ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ರೇಣುಕಾರಾಧ್ಯ, ಅನಿಲ್ ಗುಪ್ತಾ , ಸಾಧಿಕ್, ನರೇಂದ್ರಕುಮಾರ್ ಮೊದಲಾದವರು ಭಾಗವಹಿಸಿದ್ದರು.

  • Sleep Study Unveils New Insights

    In a recent study, researchers challenge beliefs about sleep duration and health, opening avenues for personalized prescriptions.

    A wonderful tranquility has taken proprietorship of my entirety soul, like these sweet mornings of spring which I appreciate with my aggregate heart.

    I am so playful, my costly companion, so ingested inside the astonishing sense of immaterial quiet nearness, that I neglect my blessings.

    I am alone, and feel the charm of nearness in this spot, which was made for the euphoria of souls like mine. I am so cheerful, my expensive companion, so held inside the astonishing sense of insignificant quiet nearness, that I ignore my endowments.

    I got to be unfit of drawing a single stroke at the appear miniature; and in any case I feel that I never was a more noticeable skilled worker than by and by.

    When, while the dazzling valley proliferates with vapor around me, and the meridian sun strikes the upper surface of the invulnerable foliage of my trees, and but a few stray shimmers take into the internal safe house, I hurl myself down among the tall grass by the spilling stream; and, as I lie close to the soil, a thousand cloud plants are taken note by me: when I tune in the buzz of the little world among the stalks, and create commonplace with the inestimable extraordinary shapes of the frightening crawlies and flies, at that point I feel the closeness of the All-powerful, who formed us in his claim picture, and the breath of that all comprehensive cherish which bears and keeps up us, since it floats around us in an until the end of time of elation; and after, that my companion, when lack of clarity overspreads my eyes, and heaven and soil show up to stay in my soul and acclimatize its control, similar to the shape of a cherished favor lady, at that point I routinely think with longing, Goodness, would I might portray these conceptions, may rouse upon paper all that’s living so full and warm interior me, that it can be the reflect of my soul, as my soul is the reflect of the endless God!

    O my companion — but it is as well much for my quality — I sink underneath the weight of the quality of these dreams! A eminent quietness has taken possession of my entire soul, like these sweet mornings of spring which I appreciate with my aggregate heart. I am alone, and feel the charm of nearness in this spot, which was made for the delight of souls like mine.

    I am so cheerful, my costly companion, so retained inside the astonishing sense of basic tranquil nearness, that I ignore my capacities. I got to be unfit of drawing a single stroke at the appear miniature; and in any case I feel that I never was a more unmistakable skilled worker than directly. When, though the wonderful valley proliferates with vapor around me, and the meridian sun strikes the upper surface of the impenetrable foliage of my trees, and but numerous stray glints take into the internal refuge, I hurlmyself down among the tall grass by the gushing stream;and, as I lie close to the soil, a thousand cloud plants are taken note by me: when I tune in the buzz of the little world among the stalks, and create recognizable with the inestimable unbelievable shapes of the frightening crawlies.

  • 2024ರ ರಾಷ್ಟ್ರಪತಿ ಪದಕಕ್ಕೆ ದೊಡ್ಡಬೆಳವಂಗಲ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಆಯ್ಕೆ

    ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಇನ್ ಸ್ಪೆಕ್ಟರ್ ಎಂ.ಆರ್.ಹರೀಶ್ ಅವರು ಅತ್ಯುತ್ತಮ ಸೇವೆಗಾಗಿ 2024ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

     

    2003ನೇ ಬ್ಯಾಚ್ ಅಧಿಕಾರಿಯಾದ ಹರೀಶ್ ಅವರು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ದೊಡ್ಡಬಳ್ಳಾಪುರ ವೃತ್ತದ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.

     

    ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಿದ ಬಳಿಕ ದೊಡ್ಡಬೆಳವಂಗಲ ಠಾಣೆಯ ಪೊಲೀಸ್ ಇ‌ನ್ ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

     

    ಅಪರಾಧಿಗಳ ಪತ್ತೆಗಾಗಿ ಅತಿ ಹೆಚ್ಚು ಬಯೋಮೆಟ್ರಿಕ್ ಬಳಸಿದ ಪೊಲೀಸ್ ಠಾಣೆಗಳಲ್ಲಿ ದೊಡ್ಡಬೆಳವಂಗಲ ಠಾಣೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಾಗುವ ಲಾರಿಗಳನ್ನು ತಡೆದು ಬಯೋಮೆಟ್ರಿಕ್ ಮೂಲಕ ಅಪರಾಧಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

     

    ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಹರೀಶ್ ರವರಿಗೆ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಶುಭ ಹಾರೈಸಿದೆ.

  • 13000 ಏನ್ ಪಿ ಎಸ್ ನೌಕರರ ಕುಟುಂಬಗಳಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಆದೇಶ

    2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ.

    ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು.

     

    ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಎಲ್ಲಾ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  • ಫೂಟ್ ಪಾಥ್ ತುಂಬಿದ ಕಸದ ರಾಶಿ : ಗಮನ ಹರಿಸದ ಜನಪ್ರತಿನಿಧಿಗಳು

    ದೊಡ್ಡಬಳ್ಳಾಪುರ ತಾಲ್ಲೂಕಿನ ಪಾಲನಜೋಗಿಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಎಲ್ಲೂ ನೋಡಿದರೂ ಕಸದ ರಾಶಿ ತುಂಬಿದೆ .

    ಗೌರಿಬಿದನೂರು ಹೆದ್ದಾರಿ ಮಾರ್ಗದ ಅಕ್ಕ ಪಕ್ಕದಲ್ಲಿ ಕಸ ತುಂಬಿದ್ದು ಸಾರ್ವಜನಿಕರು ಸಂಚರಿಸುವ ಪಾದಚಾರಿ ಮಾರ್ಗ ಕಸದಿಂದ ತುಂಬಿದೆ. ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ..

    ಪಾಲನಜೋಗಿಹಳ್ಳಿ ಪಾದಚಾರಿಗಳ ಮಾರ್ಗ ಸಂಪೂರ್ಣ ಕಸದಿಂದ ತುಂಬಿದ್ದು ಸಾರ್ವಜನಿಕರು ಹೆದ್ದಾರಿಯ ಮೇಲೆ ನಡೆದಾಡುವಂಥಾಗಿದೆ .ಈ ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆದ್ದು ಕಸದ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರು ಪಾದಚಾರಿ ಮಾರ್ಗ ಬಳಸಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದರು .

  • ಘಾಟಿ ಸುಬ್ರಮಣ್ಯ ದರ್ಶನ ಪಡೆದ ನಿರ್ಮಾಪಕ ಉಮಾಪತಿ ಗೌಡ: ” ಉಪಾಧ್ಯಕ್ಷ ” ಸಿನಿಮಾ ಕುರಿತು ಹೇಳಿದ್ದೇನು..?

    ದೊಡ್ಡಬಳ್ಳಾಪುರ : ನಾಳೆ ಚಿಕ್ಕಣ್ಣ ಅಭಿನಯದ ನೂತನ ಚಲನಚಿತ್ರ “ಉಪಾಧ್ಯಕ್ಷ “ಬಿಡುಗಡೆಯಾಗಲಿದೆ. ಈಗಾಗಲೇ ಒಳ್ಳೆಯ ರೈಟ್ಸ್ ದೊರೆಯುತ್ತಿದ್ದು .ಕನ್ನಡಿಗರ ಮನಸ್ಸು ಗೆಲ್ಲುವ ಭರವಸೆ ಇದೆ. ನಾಳೆ ಬೆಂಗಳೂರಿನ ತ್ರಿವೇಣಿ ಸೇರಿದಂತೆ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದೇವೆ ಎಂದು ನಿರ್ಮಾಪಕ ಉಮಾಪತಿ ಗೌಡ ತಿಳಿಸಿದರು

     

    ಚಿಕ್ಕಣ್ಣ ಅಭಿನಯದ ” ಉಪಾಧ್ಯಕ್ಷ ” ಚಲನಚಿತ್ರ ಬಿಡುಗಡೆಯ ಹಿನ್ನಲೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ನಿರ್ಮಾಪಕ ಉಮಾಪತಿ ಗೌಡ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದವರು ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಒಂದು ರೀತಿಯ ಸಕಾರಾತ್ಮಕ ಭಾವನೆ ಉಂಟಾಗುತ್ತದೆ ಸಿನಿಮಾ ಕುರಿತು ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿದ್ದೇನೆ ಈ ಹಿಂದೆ ಹೆಬ್ಬುಲಿ ರಾಬರ್ಟ್ ಅಂತ ಸಿನಿಮಾಗಳಿಗೆ ಕನ್ನಡದ ಜನತೆ ಉತ್ತಮ ಪ್ರೋತ್ಸಾಹ ನೀಡಿದ್ದು ಉತ್ತಮ ಕಥೆಯುಳ್ಳ ಮನೋರಂಜನಾಭರಿತ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಿಗರ ಮುಂದೆ ಬರುತ್ತಿದ್ದೇವೆ. ಕನ್ನಡ ಜನತೆ ಸ್ವಾಗತಿಸಿ ಆಶೀರ್ವದಿಸಬೇಕಿದೆ. ವಿಶೇಷವಾಗಿ ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡುವ ಉದ್ದೇಶವಿದೆ ಎಂದು ತಿಳಿಸಿದರು

    ನಾಳೆ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಖ್ಯಾತ ನಟರು ಭಾಗವಹಿಸುತ್ತಿದ್ದು ಇದೇ ತಿಂಗಳ 27 ರಂದು ನಟ ಧ್ರುವ ಸರ್ಜಾ ಉಪಾಧ್ಯಕ್ಷ ಸಿನಿಮಾ ವೀಕ್ಷಸಲಿದ್ದಾರೆ ಎಂದು ತಿಳಿಸಿದರು

     

    ಹೆಬ್ಬುಲಿ ಹಾಗೂ ರಾಬರ್ಟ್ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿದ್ದು ಈ ಪಟ್ಟಿಗೆ ಉಪಾಧ್ಯಕ್ಷ ಸಿನಿಮಾ ಸೇರುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತಮ ಕಥೆಯುಳ್ಳ ಸಿನಿಮಾಗಳನ್ನು ಕನ್ನಡಿಗರು ಎಂದು ಕೈಬಿಡುವುದಿಲ್ಲ ಉತ್ತಮ ಕಥೆ ಹಾಗೂ ಮನೋರಂಜನೆ ಭರಿತ ಸಿನಿಮಾ ಮಾಡಿದ್ದೇವೆ ಜನ ನಿರ್ಣಯ ಕಾದು ನೋಡಬೇಕಾಗಿದೆ ಒಂದು ಸಿನಿಮಾ ಗೆಲ್ಲಲು ಅಥವಾ ಹಿಟ್ ಆಗಲು ಕಾರಣ ಜನರೇ ಆಗಿರುತ್ತಾರೆ ಉಪಾಧ್ಯಕ್ಷ ಸಿನಿಮಾ ಕುರಿತು ಕನ್ನಡ ಅಭಿಮಾನಿಗಳು ನೀಡುವ ತೀರ್ಪು ಕಾದುನೋಡಬೇಕಿದೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಆಕಾಶ್, ಹಳ್ಳಿರೈತ ಅಂಬರೀಶ್ ,ಉದಯಾರಾಧ್ಯ ಮತ್ತಿತರರು ಉಪಸ್ಥಿತರಿದ್ದರು

  • ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಬಿಜೆಪಿ ಗುಂಡಾ ವರ್ತನೆ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರ ಅಗ್ರಹ

    ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ನ್ಯಾಯಯಾತ್ರೆ’ ಮೇಲೆ ದಾಳಿ ಯತ್ನ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರದ ತಾಲ್ಲೂಕು‌ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

     

    ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ನಿಮಂತ್ ಬಿಸ್ವಾಸ್ ವಿರುದ್ಧ ಘೋಷಣೆ ಕೂಗಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಮಣಿಪುರದಿಂದ ಆರಂಭಿಸಿದ ಭಾರತ್ ಜೋಡೋ ನ್ಯಾಯಯಾತ್ರೆಯು ಅಸ್ಸಾಂ ಪ್ರವೇಶಿಸಿದಾಗ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಗೂಂಡಗಳನ್ನು ಬಿಟ್ಟು ನ್ಯಾಯಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ನಿಮಂತ್ ಬಿಸ್ವಾಸ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದಾಳಿ ಯತ್ನ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

     

    ಪ್ರತಿಭಟನೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಹಿರಿಯ ಮುಖಂಡರಾದ ಸಿ.ಡಿ.ಸತ್ಯನಾರಾಯಣಗೌಡ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಪಿ. ಜಗನ್ನಾಥ್ , ಶಿವಶಂಕರ್ ಸೇರಿದಂತೆ ಹಲವು ಘಟಕಗಳ ಮುಖಂಡರು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.