Blog

  • ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ

    ದೊಡ್ಡಬಳ್ಳಾಪುರ : ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ . ಸಮಾಜದಲ್ಲಿ ಹೆಣ್ಣು ನಿರ್ಭೀತಿಯಿಂದ ಜೀವಿಸುವ ವಾತಾವರಣದ ನಿರ್ಮಾಣವಾಗಬೇಕಿದೆ ನಮ್ಮ ಬಳಿಗೆ ಬರುವ ಸಾರ್ವಜನಿಕರಿಗೆ ಹೆಣ್ಣು ಮಕ್ಕಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ರಮೇಶ್ ತಿಳಿಸಿದರು

    ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಸ್ಪತ್ರೆಯ ಸಿಬ್ಬಂದಿ” ಬೇಟಿ ಬಚಾವೋ ಬೇಟಿ ಪಡಾವೋ ” ಎಂಬ ಧ್ಯೇಯ ವಾಕ್ಯದೊಂದಿಗೆ 2024ರ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯನ್ನು ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಹಾಗೂ ಕೈ ಬರವಣಿಗೆಯಲ್ಲಿ ಬರೆದ ಗಿಫ್ಟ್ ಕಾರ್ಡುಗಳನ್ನು ಹೆಣ್ಣು ಮಕ್ಕಳ ತಾಯಂದಿರಿಗೆ ನೀಡುವ ಮೂಲಕ ಹೆಣ್ಣು ಮಕ್ಕಳ ದಿನಾಚರಣೆಯನ್ನು ಸಂತಸದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೆಣ್ಣು ಮಕ್ಕಳ ರಕ್ಷಣೆಗೆ ವೈದ್ಯಕೀಯ ಇಲಾಖೆ ಸದಾ ಸಿದ್ಧವಿದ್ದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ಹಲವಾರು ಯೋಜನೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರೂಪಿಸಿದೆ. ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಸಿಬ್ಬಂದಿಗಳ ಸಹಾಯದಿಂದ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಇದು ಕೇವಲ ಆಚರಣೆ ಎಲ್ಲ ನಮ್ಮ ಜವಾಬ್ದಾರಿ . ಸಮಾಜದಲ್ಲಿ ಹೆಣ್ಣು ಮಕ್ಕಳು ಬೇಡವೆಂಬ ಭಾವನೆ ಹೋಗಿ ಹೆಣ್ಣು ಮಕ್ಕಳೇ ಬೇಕು ಎಂಬ ಭಾವನೆ ಬರಬೇಕಿದೆ. ಹೆಣ್ಣು ಬ್ರೂಣಹತ್ಯೆ ಸಂಪೂರ್ಣವಾಗಿ ನಿಲ್ಲಬೇಕಿದೆ. ಹೆಣ್ಣು ಬ್ರೂಣ ಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮ ಮತ್ತಷ್ಟು ಬಿಗಿ ಆಗಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ಅಂಗವಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ  ಇಂದು ಸಂಜೆ ವಿಶೇಷ ದೀಪಲಂಕಾರದಿಂದ ಕಂಗೊಳಿಸಿದೆ.

    ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಸವಿತಾ ,ಡಾ. ರಾಜು ,ಡಾ. ಮಂಜುನಾಥ್, ಡಾ.ಹರಿಣಿ, ಶುಶ್ರೂಷಕರಾದ ಅಲೀಮಾ,ಒಂಕರಮ್ಮ, ರಾಧಾ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

  • X (ಎಕ್ಸ್ ) ಸಂದೇಶದ ಮೂಲಕ ಬಿಜೆಪಿ ಪೋಸ್ಟ್ : ಶ್ರೀ ರಾಮ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಆರೋಪ

    ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಪ್ರಚೋದಿಸುವ ಮತ್ತು ಅವರ ಆಳವಾದ ನಂಬಿಕೆಗಳಿಗೆ ಸವಾಲು ಹಾಕುವ ಮೂಲಕ ಕಾಂಗ್ರೆಸ್ 500 ವರ್ಷಗಳ ಹೋರಾಟ ಮತ್ತು ನೋವಿನ ಗಾಯಗಳನ್ನು ಆಳಗೊಳಿಸುತ್ತಿದೆ ಎಂದು ರಾಜ್ಯ ಬಿಜೆಪಿ ಎಕ್ಸ್ (ಟ್ವಿಟ್) ಮಾಡಿದೆ.

     

    ತಮ್ಮ ಎಕ್ಸ್ ಖಾತೆಯಲ್ಲಿ ಹಲವು ಅಂಶಗಳನ್ನು ಬರೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ನೇರ ಆರೋಪ ಮಾಡಿದೆ

     

    ಪ್ರಮುಖ ಅಂಶಗಳು ಇಂತಿವೆ :

     

    ▪️ ಪ್ರಭು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸುವುದು.

    ▪️ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುವುದು.

    ▪️ ರಾಮಸೇತುವಿನ ಅಸ್ತಿತ್ವವನ್ನು ತಳ್ಳಿಹಾಕುವುದು.

    ▪️ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಬಹಿಷ್ಕರಿಸುವುದು.

    ▪️ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಪ್ರಸಾರದ ಮೇಲೆ ನಿಷೇಧ ಹೇರುವುದು.

    ▪️ ರಾಮಮಂದಿರ ಪ್ರಾಣ ಪ್ರತಿಷ್ಠಾ ಆಚರಣೆಗಾಗಿ ಹಿಂದೂಗಳಿಗೆ ಕಿರುಕುಳ.

    ▪️ ರಾಮಭಕ್ತಿಯ ಪ್ರತಿಪಾದನೆಗಾಗಿ ಹಿಂದೂಗಳನ್ನು ಬಂಧಿಸುವುದು.

    ▪️ ಆರತಿ ಮತ್ತು ದೀಪೋತ್ಸವ ಆಚರಣೆಗಳನ್ನು ರದ್ದುಗೊಳಿಸಲಾಗುತ್ತಿದೆ.

    ▪️ ಅಯೋಧ್ಯೆಯಲ್ಲಿ ರಾಮನಿಲ್ಲ ಎಂದು ಹೇಳುವ ಮೂಲಕ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಅಪಹಾಸ್ಯ ಮಾಡುವುದು.

     

    ಕಾಂಗ್ರೆಸ್ ಪ್ರಭುರಾಮ್ ವಿರುದ್ಧವಾಗಿದೆ ಮತ್ತು ಹಿಂದೂಗಳು ಅವರನ್ನು ಆಚರಿಸಲು ಮತ್ತು ಪೂಜಿಸದಂತೆ ತಡೆಯಲು ಎಲ್ಲಾ ಕೊಳಕು ತಂತ್ರಗಳನ್ನು ಬಳಸುತ್ತಿದೆ ಎಂದು ಇತಿಹಾಸವು ನೆನಪಿಸಿಕೊಳ್ಳುತ್ತದೆ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಪೋಸ್ಟ್ ಮಾಡಿದೆ.

     

    ಕಾಂಗ್ರೆಸ್ ಪಕ್ಷದ ಉತ್ತರ ಕಾದು ನೋಡಬೇಕಿದೆ….

  • ಗಾಂಧೀಜಿ ಕುರಿತು ಪ್ರಬಂಧ ಸ್ಪರ್ಧೆ : ಶಿಕ್ಷಣ ಸಚಿವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

    “21ನೆ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು” ಎಂಬ ವಿಷಯದ ಕುರಿತಾದ ಪ್ರಬಂಧ ಸ್ಪರ್ಧೆ ನೆಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ.

     

    ಪ್ರತಿ ಶಾಲೆಗಳ 6ನೆ ತರಗತಿ ನಂತರದ ವಿದ್ಯಾರ್ಥಿಗಳಿಗೆ ( ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು, ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ವರೆಗೆ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದರಿಂದ ಗಾಂಧೀಜಿಯವರನ್ನು ಅರಿತುಕೊಳ್ಳಲು ಇನ್ನೂ ಹೆಚ್ಚಿನ ಅವಕಾಶ ನೀಡಿದಂತಾಗುತ್ತದೆ, ಹಾಗಾಗಿ ಈ ತಿಂಗಳ ಅಂತ್ಯದೊಳಗೆ ಸ್ಪರ್ಧೆಗಳನ್ನು ನಡೆಸಲು ಕ್ರಮ ವಹಿಸಬೇಕು ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಸೂಚಿಸಿ ಪತ್ರರವಾನೆ ಮಾಡಲಾಗಿದೆ.

    ಗಾಂಧೀಜಿಯವರ ಚಿಂತನೆಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿದೆ. ಆದ್ದರಿಂದ “21ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು ” ಎಂಬ ವಿಷಯವನ್ನು ಪ್ರತಿ ಶಾಲೆ (6ನೇ ತರಗತಿ ನಂತರ ) ಪ್ರತಿ ಕಾಲೇಜಿನ ಪ್ರತಿ ವಿದ್ಯಾರ್ಥಿಗಳಿಗೆ ( ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಿ ನೆಡೆಸುತ್ತಿರುವ ಮಕ್ಕಳನ್ನು ಹೊರತು ಪಡಿಸಿ ) ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಗಾಂಧೀಜಿಯವರನ್ನು ಅರಿತುಕೊಳ್ಳಲು ಅವಕಾಶ ಒದಗಿಸಿದಂತಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿ ತರಗತಿಯ ಮಕ್ಕಳಿಗೆ ಸೂಕ್ತ ಬಹುಮಾನ ನೀಡುವುದು, ಉಳಿದವರ ಭಾಗವಹಿಸುವಿಕೆಗಾಗಿ ಪ್ರಶಂಸನಾ ಪತ್ರಗಳನ್ನು ನೀಡಲು ಕ್ರಮವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರಾದ ಮಧು ಬಂಗಾರಪ್ಪ ರವರಿಗೆ ಮನವಿ ಮಾಡಿ ಆದೇಶ ಹೊರಡಿಸಲಾಗಿದೆ.

  • ರೈತರಿಗೆ ಅನುಕೂಲವಾಗುವ ರಸ್ತೆಗೆ ರೈತರಿಂದಲೇ ಅಡ್ಡಿ : ಸರ್ಕಾರಿ ನಕಾಶೆ ರಸ್ತೆ ಬದಲು ಪಥ ಬದಲಾವಣೆಯ ರಸ್ತೆ ನಿರ್ಮಾಣ

    ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ನಕಾಶೆ ರಸ್ತೆ ಬಿಡಲು ಒಪ್ಪದ ರೈತರಿಗೆ ಮನವೊಲಿಸಿ, ಪಥ ಬದಲಾವಣೆ ರಸ್ತೆಯನ್ನು ಕಂದಾಯ ಇಲಾಖೆ ವತಿಯಿಂದ ಮಾಡಲಾಯಿತು

    ಕೆಲಕಾಲ ರೈತರ ನಡುವೆ ಮಾತಿನ ಚಕಮಕಿ ನಡೆಯಿತು . ರೈತರ ಜಟಾಪಟಿಯಿಂದ ಬೇಸತ್ತ ಕಂದಾಯ ಇಲಾಖೆ ಅಧಿಕಾರಿಗಳು ಪಥ ಬದಲಾವಣೆ ರಸ್ತೆ ಕುರಿತು ಮಾಹಿತಿ ನೀಡಿ ರೈತರ ಮನವೋಲಿಸಿದ್ದಾರೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಹರಸಾಹಸ ಮಾಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಪ್ರಾಥಮಿಕ ಹಂತ ಮುಗಿಸಿದ್ದಾರೆ.

    ಸ್ಥಳೀಯ ರೈತರಾದ ನಾಗರಾಜ್ ಮಾತನಾಡಿ ನಮ್ಮದು ಪಿತ್ರಾರ್ಜಿತ ಆಸ್ತಿ ನಮ್ಮ ಆಸ್ತಿಯ ಪಕ್ಕದಲ್ಲಿ ಸುಮಾರು 200 ವರ್ಷಗಳಿಂದ ಓಣಿಗೆ ಬರುತ್ತಿದೆ . ನಕಾಶೆಯಲ್ಲಿ ತೋರುತ್ತಿರುವ ಓಣಿಯನ್ನು ನೀಲಗಿರಿ ಬೆಳೆಸಿ ಒತ್ತುವರಿ ಮಾಡಿದ್ದರು ಆ ಒತ್ತುವರಿ ಓಣಿಯನ್ನು ಬಿಡಿಸಲು 2020 ರಿಂದ ಸತತ ಪ್ರಯತ್ನ ಮಾಡುತ್ತಿದ್ದೇವೆ ತಹಶೀಲ್ದಾರ್ ಹಾಗೂ ನ್ಯಾಯಾಲಯವು ಆದೇಶ ನೀಡಿದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆ ಬಿಡಲು ಓಪ್ಪದ ರೈತರು ತಹಶೀಲ್ದಾರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸರ್ವೇ ನಂಬರ್ 70 ಸರ್ಕಾರಿ ಹಳ್ಳವಾಗಿದ್ದು ಸರ್ಕಾರಿ ಜಾಗವನ್ನು ಅತಿಕ್ರಮ ಪ್ರವೇಶ ಮಾಡಲಾಗಿದೆ .ಸ್ಥಳೀಯ ಮುಖಂಡರ ಹಾಗೂ ಮಾಜಿ ಶಾಸಕರ ಬೆಂಬಲ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು ಹಾಗೂ ಇಂದು ಮಾಡುತ್ತಿರುವ ರಸ್ತೆ ನಕಾಶೆ ರಸ್ತೆ ಅಲ್ಲ ಪಥ ಬದಲಾವಣೆ ಎಂದು ರಸ್ತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು

    ಹತ್ತರಿಂದ ಹದಿನೈದು ರೈತರಿಗೆ ಸಹಾಯವಾಗುವ ರಸ್ತೆ ನಿರ್ಮಿಸಲು ಅರಸಹಾಸ ಪಡಬೇಕಾಗಿದೆ ಸರ್ಕಾರ ತನ್ನ ರಸ್ತೆ ಪಡೆಯಲು ಅತಿಕ್ರಮ ಪ್ರವೇಶಮಾಡಿರುವ ರೈತರ ಮನವೊಲಿಸಬೇಕಾಗಿದೆ ಸ್ಥಳೀಯ ಮುಖಂಡರ ಬೆಂಬಲ ಇದಕ್ಕೆ ಕಾರಣ ಇನ್ನಾದರೂ ರಸ್ತೆ ನಿರ್ಮಾಣವಾಗುವ ಮೂಲಕ ರೈತರಿಗೆ ಅನುಕೂಲವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

  • ದೀಪೋತ್ಸವ ಮಾಡುವ ಮೂಲಕ ರಾಮೋತ್ಸವದ ಆಚರಣೆ

    ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಶ್ರೀ ರಾಮ ದೇವರಿಗೆ ದೀಪ ಬೆಳಗುವ ಮೂಲಕ ಈ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ . ಅಯೋಧ್ಯೆ ಆಚರಣೆಯನ್ನು ಗ್ರಾಮಗಳಲ್ಲಿ ಗ್ರಾಮಸ್ಥರು ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ತಿಳಿಸಿದರು

    ಗ್ರಾಮಗಳಲ್ಲಿ ಟ್ರ್ಯಾಕ್ಟರ್ ನಲ್ಲಿ ಶ್ರೀರಾಮರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ರಾಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು ಗ್ರಾಮದಲ್ಲಿ ಪ್ರತಿ ಮಹಿಳೆಯರು ದೀಪ ಬೆಳಗಿಸಿ ರಾಮದೇವರಿಗೆ ಆರತಿ ಮಾಡುವ ಮೂಲಕ ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಸ್ಥಳೀಯ ಮುಖಂಡ ಗಂಗಾಧರ್ ಅವರ ನೇತೃತ್ವದಲ್ಲಿ ಆಚರಿಸಿದರು

    ಈ ಸಂದರ್ಭದಲ್ಲಿ ಗಂಗಾಧರ್ ಮಾತನಾಡಿ ಈ ಹಿಂದೆ ರಾಮದೇವರ ಮಂತ್ರಾಕ್ಷತೆಯನ್ನು ಗ್ರಾಮಗಳ ಹೆಣ್ಣುಮಕ್ಕಳು ಕಳಸ ಹೊತ್ತು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು. ಹಾಗೂ ಗ್ರಾಮಗಳ ಮುಖಂಡರಿಂದ ಮಂತ್ರಾಕ್ಷತೆಯನ್ನು ಮನೆಮನೆಗೂ ತಲುಪಿಸುತ್ತಿರುವ ಕಾರ್ಯ ನಡೆದಿತ್ತು ಇಂದು ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ಬಾಲರಾಮರ ಪ್ರಾಣ ಪ್ರತಿಷ್ಠಾಪನ ಕಾರ್ಯದ ಅಂಗವಾಗಿ ನಮ್ಮ ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮಗಳಲ್ಲಿ ದೀಪ ಬೆಳಗಿಸಿ ಗ್ರಾಮ ದೇವರಿಗೆ ಆರತಿ ಮಾಡುವ ಮೂಲಕ ವಿಶೇಷವಾಗಿ ರಾಮೋತ್ಸವ ಆಚರಣೆ ಮಾಡಲಾಗಿದೆ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು .

     

    ಸ್ಥಳೀಯ ಮುಖಂಡರಾದ ಮುನೇಗೌಡ ಮಾತನಾಡಿ ಇಂದಿನ ಕಾರ್ಯಕ್ರಮ ಹಿಂದು ಧರ್ಮದ ಪ್ರತಿಯೊಬ್ಬರಿಗೂ ಹೆಮ್ಮೆಯ ಹಬ್ಬವಾಗಿದೆ ರಾಮನಿಗಾಗಿ ಬೆಳಗಿರುವ ಜ್ಯೋತಿಗಳ ಬೆಳಕು ಪ್ರಕಾಶಮಾನವಾಗಿ ಜಗತ್ತಿನ ತುಂಬೆಲ್ಲಹಬ್ಬಲಿದೆ ನಮ್ಮ ಗ್ರಾಮಗಳಲ್ಲಿ ರಾಮರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಪ್ರತಿ ಮನೆಮನೆಗೂ ರಾಮ ಭಕ್ತಿಯ ಭಾವ ತುಂಬುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು

     

    ಸ್ಥಳೀಯ ಗ್ರಾಮಸ್ಥರಾದ ಚಂದು ಮಾತನಾಡಿ ಪ್ರತಿ ವರ್ಷವೂ ದೀಪಾವಳಿ ಆಚರಿಸುತ್ತಿದ್ದವು ಆದರೆ ಇಂದು ವಿಶೇಷವಾಗಿ ಮನೆಯ ಮುಂದೆ ದೀಪಗಳನ್ನು ಬೆಳಗುವ ಮೂಲಕ ರಾಮೋತ್ಸವದ ಆಚರಣೆ ಮಾಡಿದ್ದೇವೆ ತುಂಬ ಸಂತೋಷ ಅನಿಸುತ್ತಿದೆ ಪ್ರತಿ ವರ್ಷವೂ ಹೀಗೆ ರಾಮೋತ್ಸವದ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು

    ಸ್ಥಳೀಯ ಗ್ರಾಮಸ್ಥರಾದ ಅರುಣ ಮಾತನಾಡಿ ಸ್ಥಳೀಯ ಮುಖಂಡರ ಸಹಾಯದಿಂದ ಸಂಪೂರ್ಣ ಗ್ರಾಮಸ್ಥರು ರಾಮೋತ್ಸವದಲ್ಲಿ ಭಾಗಿಯಾಗಿದ್ದು ಸಂತಸ ಮೂಡಿದೆ ಗ್ರಾಮದಲ್ಲಿ ಎಲ್ಲರ ಒಗ್ಗಟ್ಟು ಹಬ್ಬಕ್ಕೆ ವಿಶೇಷ ಕಳೆ ತಂದಿದೆ . ಮನೆ ಮನೆಯಲ್ಲಿ ರಾಮಜಪದ ವಿಶೇಷತೆ ಮತ್ತಷ್ಟು ಸಂತಸ ತಂದಿದೆ ಎಂದರು.

     

    ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ವಕೀಲರು ಆದ ಪ್ರತಾಪ್ ಮಾತನಾಡಿ ದೇಶದಾದ್ಯಂತ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯವನ್ನು ಹಬ್ಬದಂತೆ ಆಚರಿಸುತ್ತಿದ್ದು ಕಳೆದ ಬಾರಿ ಅಯೋಧ್ಯೆ ಶ್ರೀರಾಮ ದೇವಾಲಯದ ಮಂತ್ರಾಕ್ಷತೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಸ್ಥಳೀಯ ಗಂಗಾಧರ್, ಶಿವಕುಮಾರ್, ಮುನೇಗೌಡ ಸೇರಿದಂತೆ ಹಲವು ಮುಖಂಡರು ನೆರವೇರಿಸಿದ್ದಾರೆ. ಈ ಬಾರಿ ರಾಮರ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ ಎಲ್ಲಾ ಗ್ರಾಮಸ್ಥರಿಗೂ ಶುಭವಾಗಲಿ ಎಂದು ಹಾರೈಸಿದರು

    ಸುನಘಟ್ಟಹಳ್ಳಿಯ ಮುಖಂಡರಾದ ಶಿವಕುಮಾರ್ ಮಾತನಾಡಿ ಗ್ರಾಮಸ್ಥರು ಕೈಜೋಡಿಸಿರುವುದರಿಂದ ಉತ್ತಮ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾಗಿದ್ದೇವೆ . ಗ್ರಾಮದಲ್ಲಿ ಒಗ್ಗಟ್ಟು ಮೂಡಿದೆ ಗ್ರಾಮದ ಮಹಿಳೆಯರು ಶ್ರೀ ರಾಮನಿಗೆ ಭಕ್ತಿ ಭಾವಗಳಿಂದ ಸೇವೆ ಸಲ್ಲಿಸುತ್ತಿದ್ದು ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ ಮುಂದೆಯೂ ಈ ಒಗ್ಗಟ್ಟು ಹೀಗೆ ಇರಲಿ ಎಂದು ಶ್ರೀರಾಮ ದೇವರಲ್ಲಿ ಬೇಡುತ್ತೇನೆ ಎಂದರು.

    ಸುನಘಟ್ಟ ಹಳ್ಳಿ ಗ್ರಾಮದ ಮಹಿಳೆಯರು ಮಾತನಾಡಿ ಗ್ರಾಮದಲ್ಲಿ ಮಂತ್ರಾಕ್ಷತೆಯನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದೆವು ಈಗ ರಾಮೋತ್ಸವವನ್ನು ದುಪ್ಪಟ್ಟು ಅದ್ದೂರಿಯಾಗಿ ಮಾಡಿದ್ದೇವೆ ಎಲ್ಲರಲ್ಲೂ ಭಕ್ತಿ ಭಾವ ತುಂಬಿದ್ದು ಶ್ರೀ ರಾಮರ ಆಶೀರ್ವಾದ ಪ್ರತಿ ಒಬ್ಬರಿಗೂ ಸಿಗಲಿ ಎಂದು ಹಾರೈಸಿದರು

     

    ಈ ಸಂದರ್ಭದಲ್ಲಿ ಟಿ ಹೊಸಹಳ್ಳಿ ಹಾಗೂ ಸುಣ್ಣಘಟ್ಟ ಹಳ್ಳಿ ಗ್ರಾಮದ ಎಲ್ಲಾ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು

  • ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಲಂಚದ ಆರೋಪ : ಚಿಕಿತ್ಸೆ ನೀಡಲು 50 ರೂಪಾಯಿ ಕೊಟ್ಟೆ ಎಂದ ಸಾರ್ವಜನಿಕರ ಆರೋಪ

    ಒಂದು ಇಂಜೆಕ್ಷನ್ ನೀಡಿ ರೂ.50 ಪಡೆದು ಸರಿಹೋಗುತ್ತೆ ಮನೆಗೆ ಹೋಗಿ ಎಂದು ಆರೋಗ್ಯ ಸಿಬ್ಬಂದಿ ಹೇಳಿದರು ಆದರೆ ಮನೆಗೆ ಹೋದ ನಂತರ ಸಮಸ್ಯೆ ಉಲ್ಬಣವಾಗಿದೆ ಮತ್ತೆ ಆಸ್ಪತ್ರೆಗೆ ಬಂದಿದ್ದೇವೆ ಆದರೆ ನಮ್ಮನ್ನು ಸ್ಪಂದಿಸುವವರು ಯಾರು ಇಲ್ಲ ಆರೋಗ್ಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಊದ್ನಳ್ಳಿ ಗ್ರಾಮದ ಗ್ರಾಮಸ್ಥ ಶಿವಕುಮಾರ್ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ

    ಸಂಜೆಯಿಂದ ತಡರಾತ್ರಿಯಾದರೂ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸಿಲ್ಲ 15 ಕಿ.ಮೀ ಗಳ ದೂರದಿಂದ ಆಸ್ಪತ್ರೆಗೆ ಬಂದಿದ್ದು ರೋಗಿಗಳನ್ನು ತಿರಸ್ಕೃತ ಭಾವದಿಂದ ಸಿಬ್ಬಂದಿ ನಡೆಸಿಕೊಳ್ಳುತ್ತಿದ್ದಾರೆ ಎಂದು ವೃದ್ಧ ಶಿವಕುಮಾರ್ ಕಣ್ಣೀರಿಡುತ್ತಾ ಹೇಳಿದರು .

    ಜನವರಿ 23ರಂದು ರಾತ್ರಿ 9:00 ಸುಮಾರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲ ಎಂದು ಸಾರ್ವಜನಿಕರು ಗಲಾಟೆ ಮಾಡಲು ಮುಂದಾದರು ಕೆಲಕಾಲ ವೈದ್ಯರು ಇಲ್ಲದ ಕಾರಣ ತುರ್ತು ಪರಿಸ್ಥಿತಿಯ ರೋಗಿಗಳ ಪರದಾಟವನ್ನು ನೋಡಿದ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿಯು ತಿಳಿಗೊಳಿಸಲು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು

    ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಮಾತನಾಡಿ ಆಸ್ಪತ್ರೆಯಲ್ಲಿ ಸರಿಯಾದ ಸಿಬ್ಬಂದಿ ವ್ಯವಸ್ಥೆ ಇಲ್ಲ. ರಾತ್ರಿ ಪಾಳಯದ ಡಾಕ್ಟರ್ ಊಟಕ್ಕೆ ಹೋಗಿ ಒಂದು ಗಂಟೆಯಾದರೂ ಪತ್ತೆ ಇಲ್ಲ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತೆ ಆಗಿದೆ. ಆಸ್ಪತ್ರೆಯಲ್ಲಿ ನೀಡುವ ಮಾತ್ರೆಗಳು ಹಾಗೂ ಇಂಜೆಕ್ಷನ್ ಗಳನ್ನು ಹೊರಗಡೆ ತರುವಂತೆ ಹೇಳಲಾಗುತ್ತದೆ ಸರಿಯಾದ ನಿಯಮಪಾಲನೆ ಇಲ್ಲ. ರಾತ್ರಿ ಪಾಳಯದಲ್ಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಗಳ ಮಾಹಿತಿ ನೀಡದ ಆಸ್ಪತ್ರೆ . ಈ ಕುರಿತು ಮುಖ್ಯ ವೈದ್ಯಾಧಿಕಾರಿಗಳು ಈ ಕೂಡಲೇ ಗಮನಹರಿಸಬೇಕು ಇಲ್ಲವಾದಲ್ಲಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ನಾರಾಯಣಸ್ವಾಮಿ ಮಾತನಾಡಿ ಔಷಧಿಯನ್ನು ಹೊರಗೆ ಬರೆದುಕೊಡುತ್ತಾರೆ ಖಾಸಗಿ ಮೆಡಿಕಲ್ಸ್ ನಲ್ಲಿ ತಂದು ಕೊಡಬೇಕಾಗಿದೆ ಇಲ್ಲದೆ ಇದ್ದಲ್ಲಿ ಮೆಡಿಸನ್ ಹಾಕುವುದಿಲ್ಲ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಆಸ್ಪತ್ರೆಗೆ ದಾಖಲಾಗಿ 15 ದಿನ ಕಳೆದಿದ್ದರೂ ಆರೋಗ್ಯದಲ್ಲಿ ಯಾವುದೇ ರೀತಿಯ ಚೇದರಿಕೆ ಇಲ್ಲದಂತಾಗಿದೆ ವೈದ್ಯರ ನಿರ್ಲಕ್ಷತೆ ಇದಕ್ಕೆ ಕಾರಣ ಎಂದು ಆರೋಪಿಸಿದರು

  • ಯಾವುದೇ ಅಪೇಕ್ಷೆ ಇಲ್ಲದೆ ಸಮಾಜಮುಖಿ ಕಾರ್ಯಗಳಿಗೆ ಯುವಕರು ಮುಂದಾಗಿದ್ದಾರೆ – ಹುಸ್ಕೂರ್ ಆನಂದ್

    ದೊಡ್ಡಬಳ್ಳಾಪುರ : ನಮ್ಮ ಸುತ್ತಮುತ್ತಲೂ ಅನ್ಯಾಯಕ್ಕೆ ಒಳಗಾಗಿ ನೋವಿನಲ್ಲಿ ಜೀವನ ಸಾಗಿಸುತ್ತಿರುವ ಏಷ್ಟೋ ಕುಟುಂಬಗಳಿದ್ದು ಅಂತಹ ಕುಟುಂಬಗಳ ಸಹಾಯಕ್ಕೆಂದೆ ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆ ಸ್ಥಾಪಿಸಲಾಗಿದೆ ಕನ್ನಡತನದ ಉಳಿವಿಗಾಗಿ ನ್ಯಾಯಪರ ಹೋರಾಟಕ್ಕಾಗಿ ನಮ್ಮ ನೆಡೆ ಎಂದು ಕರುನಾಡು ಯುವ ರಕ್ಷಣಾ ವೇದಿಕೆಯ  ಸಂಸ್ಥಾಪಕ ಅಧ್ಯಕ್ಷರಾದ ಹುಸ್ಕೂರು ಆನಂದ್ ತಿಳಿಸಿದರು

     

    ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಪನಾ ಕಾರ್ಯಕ್ರಮದ ಅಂಗವಾಗಿ ಕರುನಾಡು ಯುವ ರಕ್ಷಣಾ ವೇದಿಕೆಯ ವತಿಯಿಂದ ರಾಮೋತ್ಸವ ಹಾಗೂ ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡ್ ) ವಿತರಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಟೇಪ್ ಕತ್ತರಿಸಿ ದೀಪ ಬೆಳಗುವ ಮೂಲಕ ಹುಸ್ಕೂರು ಆನಂದ್ ಉದ್ಘಾಟಿಸಿದರು

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವಕರಲ್ಲಿ ನವ ಚೈತನ್ಯ ತುಂಬುವ ಶಕ್ತಿ ಸಂಘಟನೆಗೆ ಇದೆ .ಸಮಾಜಕ್ಕೆ ಒಳಿತನ್ನು ಮಾಡಬಯಸುವ ಪ್ರತಿಯೊಬ್ಬರಿಗೂ ಈ ನಮ್ಮ ಸಂಘಟನೆಯಲ್ಲಿ ಮುಕ್ತ ಅವಕಾಶ ನೀಡಲಾಗಿದೆ .ಕನ್ನಡ ಪರ ದ್ವನಿಯಾಗಿ ನಮ್ಮ ಸಂಘಟನೆ ಸದಾ ಶ್ರಮಿಸಲಿದೆ . ಅನ್ಯಾಯ ಅಕ್ರಮಗಳ ವಿರುದ್ಧ ನಮ್ಮ ಹೋರಾಟ ನೊಂದವರ ನೆರವಿಗೆ ನಾವು ಸದಾ ನಿಲ್ಲುತ್ತೇವೆ ಎಂದರು ಹಾಗೂ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಮೂರ್ತಿಗೆ ಪ್ರಾಣಪ್ರತಿಷ್ಠಪನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ .ರಾಮರ ಆಶೀರ್ವಾದದಿಂದ ಸಂಘಟನೆಗೆ ಒಳಿತಾಗಲಿ ಎಂದು ಹಾರೈಸಿದರು

    ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್ ಮಾತನಾಡಿ ಕನ್ನಡ ಮನಸ್ಸುಗಳ ಒಗ್ಗೂಡಿವಿಕೆಯಿಂದ ಈ ಸಂಘಟನೆ ರಚನೆಯಾಗಿದ್ದು ಇಂದಿನ ಶುಭ ಘಳಿಗೆ ನಮ್ಮ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಹುಸ್ಕೂರು ಆನಂದ್ ರವರ ಅಮೃತಹಸ್ತದಿಂದ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಐ ಡಿ ಕಾರ್ಡ್ ಗಳ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು

     

    ಕಾರ್ಯಕ್ರಮದಲ್ಲಿ ಗ್ರಾಮೀಣಾ ಪ್ರತಿಭೆ ರಾಕೇಶ್ ರಾಮೇಗೌಡ ಮಾತನಾಡಿ ಸ್ಥಳೀಯ ಯುವಕರ ಪ್ರಬಲ ಸಂಘಟನೆ ಇದಾಗಿದ್ದು .ಯಾವುದೇ ಅಪೇಕ್ಷೆ ಇಲ್ಲದೆ ಶ್ರಮಿಸುವ ತಂಡ ರಚನೆಯಾಗಿದ್ದು ಅಯೋಧ್ಯ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆಯಾಗಲಿರುವ ಈ ಸುಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಿಗೆ ಐ ಡಿ ಕಾರ್ಡ್ ಗಳ ವಿತರಣೆ ಶುಭಾಸುಚಕವಾಗಿದೆ ಎಲ್ಲರಿಗೂ ಶುಭವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಶಂಕರ್,ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್ , ಉಪಾಧ್ಯಕ್ಷ ಅರುಣ್ ಮತ್ತಿತರು ಉಪಸ್ಥಿತರಿದ್ದರು

  • ತಪ್ಪಿದ ಭಾರಿ ಅವಘಡ : ಟ್ಯಾಂಕರ್ ಚಕ್ರಕ್ಕೆ ಸಿಲುಕಿದ ದ್ವಿಚಕ್ರ ವಾಹನ

    ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದ ಬಳಿ ಪೆಟ್ರೋಲ್‌ ಟ್ಯಾಂಕ‌ರ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪರಾಗಿದ್ದಾರೆ.

    ಇಂದು ಮಧ್ಯಾಹ್ನ ಈ ಅಪಘಾತ ನಡೆದಿದೆ, ಘಟನೆಯಲ್ಲಿ ಕೆಳಗಿನಜೂಗನಹಳ್ಳಿ ಗ್ರಾಮದ ಹನುಮಂತಯ್ಯ ಎಂಬುವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪರಾಗಿದ್ದಾರೆ‌

    ಗಾಯಗೊಂಡ ಹನುಮಂತಯ್ಯರನ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಟ್ಯಾಂಕ‌ರ್ ಚಕ್ರಕ್ಕೆ ಸಿಲುಕಿದ ಬೈಕ್‌ ಸಂಪೂರ್ಣವಾಗಿ ಹಾಳಾಗಿದೆ.

    ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪೆಟ್ರೋಲ್ ಟ್ಯಾಂಕರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

  • ವಿಶೇಷ ದಿನಗಳನ್ನು ನಮ್ಮೊಂದಿಗೆ ಆಚರಿಸಿ – ಮಲ್ಲೇಶ್

    ದೊಡ್ಡಬಳ್ಳಾಪುರ : ಹಸಿದವರಿಗೆ ,ಕಡುಬಡವರಿಗೆ ಸಹಾಯ ಮಾಡಲು ದಾನಿಗಳ ನೆರವು ಅಗತ್ಯವಿದೆ .ಹುಟ್ಟುಹಬ್ಬ ಸೇರಿದಂತೆ ವಿಷೇಶದಿನಗಳನ್ನು ಹಸಿದವರಿಗೆ ಅನ್ನ ದಾಸೋಹ ಮಾಡುವ ಮೂಲಕ ಆಚರಿಸಿ ಎಂದು ಅನ್ನದಾಸೋಹಿ ಮಲ್ಲೇಶ್ ಮನವಿ ಮಾಡಿದರು

    1395 ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸತತವಾಗಿ ನಿರಾಶ್ರಿತ ಬಡವರಿಗೆ ಅನ್ನದಾಸೋಹ ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳನ್ನು ದಾನಿಗಳ ನೆರವಿನಿಂದ ನಡೆಸುತ್ತಿದ್ದು . ದಿನದಿಂದ ದಿನಕ್ಕೆ ಸೇವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ದಾನಿಗಳ ನೆರವು ಬೇಕಾಗಿದೆ .ಸೇವಾ ಮನೋಭಾವ ಹೊಂದಿರುವ ದಾನಿಗಳು ತಮ್ಮ ವಿಶೇಷ ದಿನಗಳನ್ನು ನಮ್ಮೊಂದಿಗೆ ಅನ್ನದಾಸೋಹ ಮಾಡುವ ಮೂಲಕ ಆಚರಿಸಿ ಸಹಕರಿಸಬೇಕಾಗಿ ಮನವಿ ಮಾಡಿದರು

     

    ದಾನಿಗಳು ಹಾಗೂ ಅದ್ದಿಗಾನಹಳ್ಳಿ ಯುವ ಮುಖಂಡರು ಆದ ಕಿರಣ್ ಗೌಡ ಮಾತನಾಡಿ ಮಲ್ಲೇಶ್ ಮತ್ತು ತಂಡ ಮಾಡುತ್ತಿರುವ ಜನಸೇವಾ ಕಾರ್ಯಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸಿದ್ದೇವೆ. ಈ ಅನ್ನದಾಸೋಹ ಸಮಿತಿಯ ಕುರಿತು ಕೇಳಿದ್ದೆವು ಆದರೆ ಇಲ್ಲಿ ಭೇಟಿಕೊಟ್ಟು ನೋಡುವ ಸಂದರ್ಭದಲ್ಲಿ ನೈಜತೆಯ ಅರಿವಾಗಿದೆ ಮುಂದೆ ಅನ್ನದಾಸೋಹ ಸಮಿತಿಯು ಆಯೋಜನೆ ಮಾಡುವ ಕಾರ್ಯಕ್ರಮಗಳಿಗೆ ಸ್ಪಂದಿಸಿ ಸಹಕರಿಸುವುದಾಗಿ ತಿಳಿಸಿದರು

    ಈ ಸಂದರ್ಭದಲ್ಲಿ ಮುಖಂಡರಾದ ನಿಶಾಂತ್, ರಾಕೇಶ್, ಬೆಟ್ಟದ ಅಲಸುರು ಪಂಚಾಯಿತಿ ಸದಸ್ಯರಾದ ಮುನಿಕೃಷ್ಣ ,ಮತ್ತು ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು .

  • ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನ

    ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನವಾಗಿದ್ದರೆ.

     

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ.ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದಾರೆ