Blog

  • ನೂತನ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ : ಸ್ಥಳೀಯ ಶಾಸಕ ಧೀರಜ್ ಮುನಿರಾಜು ಸೇರಿ ಹಲವು ಗಣ್ಯರು ಭಾಗಿ

    ದೊಡ್ಡಬಳ್ಳಾಪುರ : ನಗರಸಭೆಯಿಂದ ಖಾಸಗಿ ಸಹಭಾಗಿತ್ವದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತು, ನಗರದ ಬಸವ ಭವನ ಮತ್ತು ಪ್ರವಾಸಿ ಮಂದಿರ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಪ್ರಯಾಣಿಕರ ತಂಗುದಾಣಕ್ಕೆ ಶಾಸಕ ಧೀರಜ್ ಮುನಿರಾಜು ಗುದ್ದಲಿಪೂಜೆ ನೆರವೇರಿಸಿದರು.

    ದೊಡ್ಡಬಳ್ಳಾಪುರ ನಗರದ ಬಹುತೇಕ ಕಡೆ ಬಸ್ ತಂಗುದಾಣಗಳಿಲ್ಲದೆ ಪ್ರಯಾಣಿಕರು ಮಳೆ.ಬಿಸಿಲಿನಲ್ಲೇ ಬಸ್ಸಿಗಾಗಿ ಕಾಯುತ್ತಿದ್ದರು, ಈ ಬಗ್ಗೆ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲು ದೊಡ್ಡಬಳ್ಳಾಪುರ ನಗರಸಭೆಯಲ್ಲಿ ತಿರ್ಮಾನ ಮಾಡಲಾಗಿತ್ತು.

     

    ಪ್ರಮುಖವಾಗಿ ಇಂದು ಬಸವ ಭವನ ಮುಂಭಾಗ ಮತ್ತು ಪ್ರವಾಸಿ ಮಂದಿರ ಮುಂಭಾಗದ ಬಸ್ ತಂಗುದಾಣ ಕಾಮಾಗಾರಿಗೆ ಶಾಸಕ ಧೀರಜ್ ಮುನಿರಾಜು ಗುದ್ದಲಿಪೂಜೆ ನೆರವೇರಿಸಿದರು, ಸುಮಾರು 8 ಲಕ್ಷ ವೆಚ್ಚದಲ್ಲಿ ಎರಡು ತಂಗುದಾಣ ನಿರ್ಮಾಣವಾಗಲಿದ್ದು, ಅಕ್ಕಮಹಾದೇವಿ ಬಳಗ ಮತ್ತು ಪುಟಾಣಿ ಕುಟುಂಬಸ್ಥರು ತಂಗುದಾಣ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ್ದಾರೆ

    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಸುಧಾಲಕ್ಷ್ಮಿನಾರಾಯಣ್, ಉಪಾಧ್ಯಕ್ಷರಾದ ಫರ್ಹಾನ್ ತಾಜ್, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ಪದ್ಮನಾಭ್, ಸುಮಿತ್ರ ಆನಂದ್, ಬಿಜೆಪಿ ಮುಖಂಡರಾದ ಪುಷ್ಪಶಿವಶಂಕರ್ ಭಾಗಿಯಾಗಿದ್ದರು

  • ಹುಲುಕುಡಿ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ

    ದೊಡ್ಡಬಳ್ಳಾಪುರ : ಶ್ರೀ ಹುಲುಕುಡಿ ಸುಕ್ಷೇತ್ರದಲ್ಲಿ ಶ್ರೀ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಳಮ್ಮ ನವರ 13 ನೇ ವರ್ಷದ ಕಾರ್ತಿಕ ಮಾಸದ ಕಡೆ ಮಂಗಳವಾರ ಡಿಸೆಂಬರ್ 12 ರಂದು ಸಂಜೆ 6: 30 ಕ್ಕೆ ಕಾರ್ತಿಕ ದೀಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ಆಯೋಜನೆ ಮಾಡಲಾಗಿದೆ

     

    ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಆಡಳಿತ ಮಂಡಳಿ ಬೆಳ್ಳಿಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ ಎಂಟು ಗಂಟೆಯವರೆಗೂ ನಡೆಯಲಿದ್ದು ಬರುವ ಭಕ್ತಾದಿಗಳಿಗೆ ರಾತ್ರಿ 8 ಗಂಟೆಗೆ ಟ್ರಸ್ಟ್ ವತಿಯಿಂದ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ

  • ಮಹಿಳಾ ಸಮಾಜದಲ್ಲಿ ಮಹಿಳೆಯರಿಗೆ ಅಜೀವ ಸದಸ್ಯತ್ವ ಪಡೆಯಲು ಅವಕಾಶ ಕೋರಿ ಮನವಿ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಮಹಿಳಾ ಸಮಾಜ ಕಸ್ತೂರ ಬಾ ಶಿಶುವಿಹಾರ (ರಿ) ದಲ್ಲಿ ನೆಡೆಯುವ ಕಾರ್ಯಕಾರಿ ಸಮಿತಿಯ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ವರ್ಗದ ಮಹಿಳೆಯರು ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸುವಂತೆ ಅವಕಾಶ ಮಾಡಿಕೊಡಬೇಕೆಂದು ಮಾಜಿ ನಿರ್ದೇಶಕರಾದ ಪ್ರಮೀಳಾ ಮಹಾದೇವ್ ರವರು ಮಹಿಳಾ ಸಮಾಜದ ಅಧ್ಯಕ್ಷರಾದ ­ಎಂ ಕೆ ವತ್ಸಲಾ ರವರಿಗೆ ಮನವಿ ಸಲ್ಲಿಸಿದ್ದಾರೆ

     

    ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಮಹಿಳಾ ಸಮಾಜದ ಮಾಜಿ ನಿರ್ದೇಶಕರು ಆದ ಪ್ರಮೀಳಾ ಮಹಾದೇವ್ ರವರು ಮಾತನಾಡಿ ಸಾಮಾಜಿಕ ನ್ಯಾಯದ ಅಡಿ ಮಹಿಳಾ ಸಮಾಜದಲ್ಲಿ ಎಲ್ಲಾ ವರ್ಗದ ಮಹಿಳೆಯರಿಗೆ ಅವಕಾಶ ಕಲ್ಪಿಸಲು ಮನವಿ ಮಾಡಲಾಗಿದೆ ಹಾಗೂ ಸದ್ಯ ಇರುವ ಒಂಬತ್ತು ನಿರ್ದೇಶಕರ ಸ್ಥಾನಗಳನ್ನು ಹದಿಮೂರಕ್ಕೆ ವಿಸ್ತರಿಸುವ ಬಗ್ಗೆ ಕೋರಲಾಗಿದೆ ಎಂದು ತಿಳಿಸಿದರು

  • ಹಿರಿಯ ನಟಿ ಡಾ ಲೀಲಾವತಿ ಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ : ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಮೌನಾಚರಣೆ

    ದೊಡ್ಡಬಳ್ಳಾಪುರ : ಕನ್ನಡಪರ ಸಂಘಟನೆಗಳ ಒಕ್ಕೂಟ ,ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಜಾಗೃತಿ ವೇದಿಕೆಯ ಸಹಯೋಗದೊಂದಿಗೆ ಹಿರಿಯ ನಟಿ ಡಾ. ಲೀಲಾವತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಂಬತಿ ಹಿಡಿದು ಸಂತಾಪ ಸೂಚಿಸಿದರು

     

    ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಮೌನಾಚರಣೆ ಮಾಡುವ ಮೂಲಕ ಹಿರಿಯ ನಟಿ ಲೀಲಾವತಿಯವರಿಗೆ ಗೌರವ ಸಮರ್ಪಣೆ ಮಾಡಿದರು

    ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಎ.ನಂಜಪ್ಪ ಮಾತನಾಡಿ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ರವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದ ನಷ್ಟ. ಕರುನಾಡು ಮತ್ತೊಬ್ಬ ಅದ್ಭುತ ಕಲಾವಿದರನ್ನು ಕಳೆದುಕೊಂಡಿದೆ ನಟ ವಿನೋದ್ ರಾಜ್ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿ ಭಗವಂತ ನೀಡಲಿ ಎಂದು ತಿಳಿಸಿದರು

     

    ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ನಾಗರಾಜು ಮಾತನಾಡಿ ಲೀಲಾವತಿ ಅಮ್ಮನವರ ಚಿತ್ರಗಳನ್ನು ನಾವು ನೋಡಿಕೊಂಡು ಬೆಳೆದಿದ್ದೇವೆ. ಅವರ ಅಗಲಿಕೆ ಮನಸ್ಸಿಗೆ ತುಂಬಾ ನೋವನ್ನು ಉಂಟುಮಾಡಿದೆ ಅವರ ಸಾವಿನ ವಿಷಯ ನಂಬಲು ಸಾಧ್ಯವಾಗತ್ತಿಲ್ಲ ಅವರು ತಮ್ಮ ಸಿನಿಮಾಗಳ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ಕನ್ನಡ ಸಾಹಿತ್ಯ ಪರಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪ್ರಮೀಳಾ ಮಹಾದೇವ್ ಮಾತನಾಡಿ ಲೀಲಾವತಿ ಯವರ ನಟನೆಗೆ ಅವರೇ ಸಾಟಿ ಅವರು ಮೊದಲ ಪಂಚಭಾಷಾ ನಟಿ ಎಂದರೆ ತಪ್ಪಾಗಲಾರದು ಕೇವಲ ಕೆಲವು ವಿಚಾರಗಳ ಹಿನ್ನಲೆಯಲ್ಲಿ ಒಬ್ಬ ಮಹಾನ್ ನಟಿಯನ್ನು ಕಡೆಗಣಿಸುವುದು ಸರಿ ಇಲ್ಲ ಇನ್ನಾದರೂ ಅವರಿಗೆ ತಕ್ಕ ಗೌರವ ಸಲ್ಲುವಂಥಗಬೇಕು , ನಟ ವಿನೋದ್ ರಾಜ್ ರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದೇವೆ ನಾವು ಲೀಲಾವತಿ ಅಮ್ಮನವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅವರ ಸಾವಿನ ಸಂಗತಿ ಆಘಾತವನ್ನುಂಟುಮಾಡಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

    ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಉಪದ್ಯಕ್ಷರಾದ ನಯಾಜ್ ಖಾನ್ ,ದರ್ಶನ್ ,ಹರೀಶ್, ಗಂಗಣ್ಣ, ಫಿರ್ ಪಾಷಾ,ಕುಮಾರ್,ಮಂಜುನಾಥ್, ತರುಣ್ ,ಮಮತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು

  • ಓಂ ಶಕ್ತಿ ಮಲಾದಾರಿಗಳಿಗೆ ಉಚಿತ ಬಸ್ ವ್ಯವಸ್ಥೆ : ಡಿಸೆಂಬರ್ 11 ರಿಂದ ಉಚಿತ ಬಸ್ ನೋಂದಣಿ ಪ್ರಾರಂಭ

    ದೊಡ್ಡಬಳ್ಳಾಪುರ : 2023- 2024 ನೇ ಸಾಲಿನ ಮೇಲ್ ಮರವತ್ತೂರ್ ಓಂ ಶಕ್ತಿಯಾತ್ರಾ ಪ್ರಯಾಣಕ್ಕೆ ದೊಡ್ಡಬಳ್ಳಾಪುರ ಮಾಲಾದಾರಿಗಳಿಗೆ ಉಚಿತ ಬಸ್ ನೋಂದಣಿ ಅಭಿಯಾನವನ್ನು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ರವರ ನೇತೃತ್ವದಲ್ಲಿ ಮಾಡಲಾಗುತ್ತಿದ್ದು ಉಚಿತ ಬಸ್ ನೋಂದಣಿ ಇದೇ ತಿಂಗಳ 11ನೇ ತಾರೀಕಿನಿಂದ ಪ್ರಾರಂಭವಾಗಲಿದೆ

    ಉಚಿತ ಬಸ್ ನೋಂದಣಿ ಬಯಸುವ ಮಾಲಾದಾರಿಗಳು 9916195222/9916295222 ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಥವಾ ಅಂಜನಾದ್ರಿ,ಅರ್ಕಾವತಿ ಬಡಾವಣೆ , ಡಿ ಕ್ರಾಸ್ ರಸ್ತೆ , ದೊಡ್ಡಬಳ್ಳಾಪುರ ಇಲ್ಲಿ ಸಂಪರ್ಕಿಸುವ ಮೂಲಕ ನೋಂದಣಿ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ

    ನೋಂದಣಿ ಪಡೆಯಲು ಅಗತ್ಯ ದಾಖಲೆಗಳು ಇಂತಿವೆ :

    ಪಡಿತರ ಚೀಟಿಯ ನಕಲು ಪ್ರತಿ ,ವೋಟರ್ ಕಾರ್ಡಿನ ನಕಲು ಪ್ರತಿ ,ಒಂದು ಪಾಸ್ ಪೋರ್ಟ್ ಸೈಜ್ ಫೋಟೋ ,ಹಾಗೂ ತಮ್ಮ ದೂರವಾಣಿ ಸಂಖ್ಯೆಗಳೊಂದಿಗೆ ಸಂಪರ್ಕಿಸಲು ಕೋರಿದೆ

  • ನಟಿ ಲೀಲಾವತಿ ಭಾವಚಿತ್ರಕ್ಕೆ ಪುಷ್ಪ ನಮನ : ಭಾವುಕರಾದ ಅಭಿಮಾನಿ ಗಣ

    ದೊಡ್ಡಬಳ್ಳಾಪುರ : ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಪುಷ್ಪನಮನ ಸಲ್ಲಿಸಿ ಕಂಬನಿ ಮಿಡಿದ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣ)

     

    ದೊಡ್ಡಬಳ್ಳಾಪುರ ತಾಲೂಕು ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣದ )ವತಿಯಿಂದ ನಗರದ ಡಿ ಕ್ರಾಸ್ ಬಳಿಯಿರುವ ಡಾ.ರಾಜಕುಮಾರ್ ವೃತ್ತದಲ್ಲಿ ಶುಕ್ರವಾರ ವಿಧಿವಶರಾದ ಡಾ.ಲೀಲಾವತಿ ರವರಿಗೆ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

     

    ಲೀಲಾವತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣದ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ ಹಿರಿಯ ನಟಿ ಲೀಲಾವತಿ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡಿದೆ .ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನಸ್ಸಲ್ಲೂ ಮನೆಮಾಡಿಕೊಡಿರುವ ಹಿರಿಯ ನಟಿ ಲೀಲಾವತಿ ಇನ್ನಿಲ್ಲ ಎಂಬುದು ನಂಬಲು ಸಾಧ್ಯವಿಲ್ಲ ಕಲಾವಿದರಿಗೆ ಎಂದಿಗೂ ಸಾವಿಲ್ಲ ಕಲಾಮಾತೆಯ ಮಕ್ಕಳು ಸದಾ ನಮ್ಮೊಂದಿಗೆ ತಮ್ಮ ಚಿತ್ರಗಳ ಮೂಲಕ ಇರುತ್ತಾರೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ್ ಶೆಟ್ಟಿ ಬಣ)ಯ ಪದಾಧಿಕಾರಿಗಳು ಉಸ್ಥಿತರಿದ್ದರು

  • 68 ನೇ ಕನ್ನಡ ರಾಜ್ಯೋತ್ಸವ ಆಚರಣೆ: ಶ್ರೀ ವರಸಿದ್ದಿ ವಿನಾಯಕ ಆನೆ ಬಳಗದ 35 ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಸಿದ್ಧತೆ

    ದೊಡ್ಡಬಳ್ಳಾಪುರ : ಶ್ರೀ ವರಸಿದ್ಧಿ ವಿನಾಯಕ ಆನೆ ಬಳಗದ ವತಿಯಿಂದ ತಾಲ್ಲೂಕಿನ ತ್ಯಾಗರಾಜನಗರದ ಆನೆ ಮೈದಾನದಲ್ಲಿ ಡಿಸೆಂಬರ್ 11ರಂದು ಸೋಮವಾರ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ

     

    ಕನ್ನಡ ರಾಜ್ಯೋತ್ಸವದ ಆಚರಣೆಯ ಜೊತೆಗೆ ಸಂಜೆ 6 : 30 ಕ್ಕೆ ಲಕ್ಷದೀಪೋತ್ಸವ ಹಾಗೂ ಕಡಲೆಕಾಯಿ ಪರಿಷೆ ಯನ್ನು ಏರ್ಪಡಿಸಲಾಗಿದೆ ತಾಲ್ಲೂಕಿನ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ವರಸಿದ್ದಿ ವಿನಾಯಕ ಆನೆ ಬಳಗ ಮನವಿ ಮಾಡಿದೆ

  • ಹಿರಿಯ ನಟಿ ಲೀಲಾವತಿ ವಿಧಿವಶ : ಕಣ್ಣೀರಲ್ಲಿ ಕರುನಾಡು

    ಕನ್ನಡ ಚಿತ್ರರಂಗದ ಹಿರಿಯ ನಟಿ‌ ಲೀಲಾವತಿ ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಸೋಲದೇವನಹಳ್ಳಿಯಲ್ಲಿನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಲೀಲಾವತಿಯವರ ಆರೋಗ್ಯದಲ್ಲಿ ಕಳೆದ ಎರಡು ದಿನಗಳಿಂದ ಚೇತರಿಕೆ ಕಂಡಿತ್ತು.

     

    ಡಿ 08 ರಂದು ಮಧ್ಯಾಹ್ನ ಲೋ ಬಿಪಿ ಸಮಸ್ಯೆ ಶುರುವಾಗಿದ್ದು ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ

     

    ಕನ್ನಡದಲ್ಲಿ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಸೂಪರ್​ ಹಿಟ್​ ಸಿನಿಮಾ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದ ಲೀಲಾವತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಅಭಿಮಾನಿಗಳಿಂದ ಯಶ್ 19 ಟೈಟಲ್ ಲಾಂಚ್ ಸಂಭ್ರಮ : ನಗರ ದೇವತೆ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ

    ದೊಡ್ಡಬಳ್ಳಾಪುರ : ನಗರ ಭಾಗದ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಟನ ನೂತನ ಚಿತ್ರದ ಟೈಟಲ್ ಲಾಂಚ್ ಟೀಸರ್ ಅನ್ನು ಸಂಭ್ರಮಿಸಲಾಗಿದೆ .

    ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ದೊಡ್ಡಬಳ್ಳಾಪುರದ ವತಿಯಿಂದ ತಮ್ಮ ನೆಚ್ಚಿನ ನಟ ಯಶ್ ರವರ ನೂತನ ಸಿನಿಮಾ ಟೈಟಲ್ ಲಾಂಚ್ ಪ್ರಯುಕ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು . ಯಶ್ 19 ನೇ ಸಿನಿಮಾ ‘ಟಾಕ್ಸಿಕ್’ ಎಂದು ಟೈಟಲ್ ಘೋಷಣೆ ಮಾಡಿದ್ದು . ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ.

    ಆ ಮೂಲಕ ‘ಕೆಜಿಎಫ್-2 ರಿಲೀಸ್ ಅದ 20 ತಿಂಗಳ ನಂತರ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

    ಏಪ್ರಿಲ್ 10 2025ರಂದು ಸಿನಿಮಾ ತೆರೆ ಕಾಣಲಿದೆ.ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

     

    ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ದೊಡ್ಡಬಳ್ಳಾಪುರದ ಪದಾಧಿಕಾರಿಗಳು ,ಅಭಿಮಾನಿಗಳು ಉಪಸ್ಥಿತರಿದ್ದರು

  • ನಿರ್ಮಾಪಕರಾಗಿ ನಟ ಯಶ್ ಚಿತ್ರರಂಗಕ್ಕೆ ಪಾದಾರ್ಪಣೆ : ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೆ ಮುಂದಾದ ಯಶ್

    ನಟ ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ ಹೌದು ಸತತ 20 ತಿಂಗಳುಗಳಿಂದ ತಮ್ಮ ನೂತನ ಸಿನಿಮಾ ಕುರಿತು ಯಾವುದೇ ಅಪ್ಡೇಟ್ ನೀಡದ ಯಶ್ ಇಂದು ಮುಂಜಾನೆ ಸಿನಿ ಚಿತ್ರ ರಸಿಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ

    ಕೆ ವಿ ಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ನೂತನ ಸಿನಿಮಾ ಟಾಕ್ಸಿಕ್ ( TOXIC) ನಲ್ಲಿ ಕೇವಲ ನಟರಾಗಿ ಉಳಿಯದೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ನಿರ್ಮಾಣಕ್ಕೂ ಕೈಹಾಕಿದ್ದಾರೆ

     

    ಯಶ್ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಮೂಲಕ ಡಬ್ಬಲ್ ಖುಷಿ ಸಿಕ್ಕಿದ್ದು ತಮ್ಮ ನೆಚ್ಚಿನ ನಟನ ನೂತನ ಸಿನಿಮಾದ ಟೈಟಲ್ ಲಾಂಚ್ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ