Blog

  • ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ : ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರ

    ದೊಡ್ಡಬಳ್ಳಾಪುರ : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡರಾಯಪ್ಪನ ಹಳ್ಳಿ ಗ್ರಾಮದಲ್ಲಿ ಅಂತಿಮ ವರ್ಷದ ಬಿ ಎಸ್ಸಿ (ಅನರ್ಸ್ )ಕೃಷಿ ಮತ್ತು ಬಿ ಎಸ್ಸಿ (ಅನರ್ಸ್ )ಕೃಷಿ ವ್ಯವಹಾರ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು

    ಕಾರ್ಯಕ್ರಮದಲ್ಲಿ ವಿಶೇಷವಾಗಿ ಬರಡು ರಾಸುಗಳ ತಪಾಸಣೆ ಹಾಗೂ ಅರೋಗ್ಯ ಚಿಕಿತ್ಸೆ ಶಿಬಿರದ ಜೊತೆಗೆ ಜಂತು ನಿವಾರಣೆ, ಗರ್ಭಪರೀಕ್ಷೆ, ಲಸಿಕೆಗಳ ಮಾಹಿತಿ ನೀಡಲಾಯಿತು ತಪಾಸಣಾ ಶಿಬಿರಕ್ಕೆ ಹಲವಾರು ಡಾ ರವೀಂದ್ರ, ಡಾ ಬಿ ಆರ್ ಸುಚಿತ್ರ, ಡಾ ನರಸಿಂಹಮೂರ್ತಿ ಸೇರಿದಂತೆ ಹಲವಾರು ತಜ್ಞರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.

     

    ಸ್ಥಳೀಯ ರೈತರು ಮಾತನಾಡಿ ಕೃಷಿ ವಿಶ್ವವಿದ್ಯಾನಿಲಯ ಆಯೋಜನೆ ಮಾಡಿರುವ ಈ ಕಾರ್ಯಕ್ರಮ ತುಂಬಾ ಅನುಕೂಲವಾಗಿದೆ ರಾಸುಗಳ ಮೇವು ಆರೈಕೆ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿದ್ದು. ಲಸಿಕೆಗಳ ಬಗ್ಗೆ ಹಾಗೂ ರಾಸುಗಳಿಗೆ ಸೋಕಬಹುದಾದ ಖಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ ದೊಡ್ಡರಾಯಪ್ಪನಹಳ್ಳಿ ಯಲ್ಲಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮವು ಉತ್ತಮ ರಾಸುಗಳ ನಿರ್ವಹಣೆಗೆ ಸಹಕರಿಯಾಗಲಿದೆ ಎಂದು ತಿಳಿಸಿದರು

     

    ದೊಡ್ಡ ರಾಯಪ್ಪನಹಳ್ಳಿ ರೈತರು ಹಾಗೂ ತಾಲೂಕಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

  • ರಸ್ತೆ ಪಕ್ಕದ ಚರಂಡಿಯಲ್ಲಿ ಮಗುವಿನ ಶವ ಪತ್ತೆ: ಭಾಶೆಟ್ಟಿ ಹಳ್ಳಿ ಸಮೀಪ ಘಟನೆ

    ದೊಡ್ಡಬಳ್ಳಾಪುರ : ( ಡಿ.04) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದೊಡ್ಡ ಚರಂಡಿಯಲ್ಲಿ ಮಲಗಿರುವ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

    ಪುಟಾಣಿ ಮಗು ಮಲಗಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಭಾಷೆಟ್ಟಿಹಳ್ಳಿ ಸಮೀಪ ಸಂಭಾವಿಸಿದ್ದು ಮೃತ ದೇಹವನ್ನು ಪೊಲೀಸ್ ವಶಕ್ಕೆ ಪಡೆದಿದ್ದು ಶವಾಗಾರಕ್ಕೆ ರವಾನಿಸಿದೆ

    ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸತ್ಯಾಸತ್ಯತೆ ತನಿಖೆಯ ನಂತರ ಹೊರಬೀಳಲಿದೆ

    ಮೊದಲೇ ಸಾವನ್ನಪ್ಪಿರುವ ಮಗುವನ್ನು ತಂದು ಸ್ಥಳದಲ್ಲಿ ಬಿಟ್ಟಿರುವ ಸಂಶಯವಿದೆ ಕಾರಣ ಮಗುವಿನ ಶವ ಮಲಗಿರುವ ಸ್ಥಿತಿಯಲ್ಲಿ ದೊರೆತಿದೆ ಪುಟಾಣಿ ಮಗುವನ್ನು ರಸ್ತೆ ಬದಿಯ ಚರಂಡಿಯಲ್ಲಿ ಬಿಸಡಲು ಪೋಷಕರಿಗೆ ಮನಸ್ಸದರೂ ಹೇಗೆ ಬರುತ್ತದೆ ಪೊಲೀಸ್ ಇಲಾಖೆ ಈ ಕುರಿತು ತನಿಖೆ ಕೈಗೊಂಡು ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ ಎಂದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ

  • ಡಿಸೆಂಬರ್ 8 ರಂದು ಸ್ಕೂಲ್ ರಾಮಾಯಣ ಚಿತ್ರದ ನೂತನ ಹಾಡು ಬಿಡುಗಡೆ : ಚಿಗುರೋಡೆದಿದೆ ಲಿರಿಕಲ್ ವಿಡಿಯೋ ಸಂಜೆ 5:30ಕ್ಕೆ ಬಿಡುಗಡೆ

    ಚಹಾನಶ್ರೀ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ  ನಿರ್ಮಾಪಕಿ    ಲೀಲಾವತಿ ಹಸನ್ ಘಟ್ಟರವರು ನಿರ್ಮಾಣಮಾಡುತ್ತಿರುವ “ಸ್ಕೂಲ್ ರಾಮಾಯಣ ಇದು ನಿಮ್ಮ ಶಾಲೆಯ ಕತೆ…”ಚಿತ್ರದ ನೂತನ ಲಿರಿಕಲ್ ವಿಡಿಯೋ ಸಾಂಗ್ ಇದೇ ಡಿಸೆಂಬರ್ 8 ರಂದು ಸಂಜೆ 5: 30ಕ್ಕೆ ಬಿಡುಗಡಯಾಗಲಿದೆ.

    ವೇದ್ ಮತ್ತು ಸಂತೋಷ್ ಶರ್ಮ ರವರ ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನದಲ್ಲಿ ವಿಶೇಷ ಕಥೆಯೊಂದಿಗೆ ಸ್ಕೂಲ್ ರಾಮಾಯಣ ಚಿತ್ರ ಮೂಡಿಬರಲಿದ್ದು ಚಿತ್ರದ ಹಾಡುಗಳನ್ನು ಮಾಸ್ ಮ್ಯೂಸಿಕ್ ಅಡ್ಡ ಸಂಗೀತ ಸಂಯೋಜನಯಲ್ಲಿ ಕೇಳಬಹುದಾಗಿದೆ. ನೂತನ ಹಾಡು “ಚಿಗುರೋಡೆದಿದೆ “ಯು ಗಾಯಕ ಅಜಯ್ ವಾರಿಯರ್ ಧ್ವನಿಯಲ್ಲಿ ಮೂಡಿಬರಲಿದೆ ಹಾಡಿನ ಲಿರಿಕಲ್ ವಿಡಿಯೋ ಡಿಸೆಂಬರ್ ತಿಂಗಳ 8 ನೇ ತಾರೀಕಿನಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದ್ದು

     

    ಸ್ಕೂಲ್ ರಾಮಾಯಣ ಚಿತ್ರದ ಹಾಡನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದೆ

  • ಡಿಸೆಂಬರ್ 4 ರಂದು ಇಮ್ಮಡಿ ಪುಲಿಕೇಶಿ ಜನ್ಮದಿನಾಚರಣೆ : ಟ್ವಿಟ್ಟರ್ ಅಭಿಯಾನಕ್ಕೆ ಕರೆ ಕೊಟ್ಟ ಕರವೇ

    ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಾಳೆ(೦೪-೧೨-೨೦೨೩) ರಂದು ಕನ್ನಡದ ಹೆಮ್ಮೆಯ ದೊರೆ, ನೌಕಾಪಡೆಯ ಪಿತಾಮಹ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿ ಅಂಗವಾಗಿ ಸಮಾಜಿಕ ಜಾಲತಾಣಗಳಲ್ಲಿ ಇಮ್ಮಡಿ ಪುಲಿಕೇಶಿ ಮಹಾರಾಜರ ಇತಿಹಾಸವನ್ನು ತಿಳಿಸುವುದರ ಜೊತೆಗೆ ಬೆಳ್ಳಿಗೆ 9:00ಗಂಟೆಯಿಂದ ರಾತ್ರಿ 9 :00 ಗಂಟೆಯ ವರೆಗೆ ಟ್ವಿಟ್ಟರ್ ಅಭಿಯಾನ ನೆಡೆಸಲು ಕನ್ನಡಿಗರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಪರ ಸಂಘಟನೆಗಳ ಒಕ್ಕಟ)ಮನವಿ ಮಾಡಿದೆ . ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾದ ಇಮ್ಮಡಿ ಪುಲಿಕೇಶಿಯವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಸಂಭ್ರಮಿಸೋಣ ಎಂದು ಕರವೇ ತನ್ನ ಎಕ್ಸ್ ಸಂದೇಶದಲ್ಲಿ ಬರೆದು ಕೊಂಡಿದೆ

  • ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ : ಬೈಕ್ ರ್ಯಾಲಿ ಮೂಲಕ ಸಲಗ ನಟ ಸೂರಿಗೆ ಭರ್ಜರಿ ಸ್ವಾಗತ

    ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ಹುಸ್ಕುರು ಬಳಿಯ ಕೃಷಿಕ ಕುಟೀರ ಕಲ್ಯಾಣ ಮಂಟಪದಲ್ಲಿ ಕರುನಾಡ ಯುವ ರಕ್ಷಣಾ ವೇದಿಕೆಯ ವತಿಯಿಂದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಲಗ ಚಿತ್ರದ ಸೂರಿ ಅವರನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು

     

    ತಾಲ್ಲೂಕಿನ ನಗರ ಭಾಗದ ತಾಲ್ಲೂಕು ಕಛೇರಿ ಮುಂಭಾಗದಿಂದ ಕಾರ್ಯಕ್ರಮದ ಸ್ಥಳಕ್ಕೆ ನಟ ಸೂರಿ ಯವರನ್ನು ಬೈಕ್ ರ್ಯಾಲಿ ಮೂಲಕ ಕರೆತರಲಾಯಿತು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹುಸ್ಕೂರು ಆನಂದ್ ವಹಿಸಿದ್ದು ಕಾರ್ಯಕ್ರಮದಲ್ಲಿ ನಟ ಸೂರಿ,ತಾಲ್ಲೂಕಿನ ಪ್ರತಿಭೆ ಅಂಜಿ , ಸೇರಿದಂತೆ ಹಲವು ಸಾಧಕರಿಗೆ ಸನ್ಮಾನಿಸಲಾಯಿತು

    ಈ ಸಂದರ್ಭದಲ್ಲಿ ಸಲಗ ಸೂರಿ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನೊಂದಿಗೆ ನನಗೆ ವಿಶೇಷ ಅನುಬಂಧವಿದ್ದು ಕರುನಾಡ ಯುವ ರಕ್ಷಣಾ ವೇದಿಕೆ ಯ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ ಕಾರ್ಯಕ್ರಮದಲ್ಲಿ ನನ್ನನು ಆಹ್ವಾನಿಸಿ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟ ಸಂಘಟನೆಯ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮುಂದಿನ ಜನವರಿ ತಿಂಗಳಿನಲ್ಲಿ “ಸೂರಿ ಅಣ್ಣ” ಚಿತ್ರ ಸೆಟ್ಟೇರುತ್ತಿದೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದು ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು

    ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಹುಸ್ಕೂರು ಆನಂದ್ ಮಾತನಾಡಿ ಸಂಘಟನೆ ಸ್ಥಾಪಿಸಿದ ಉದ್ದೇಶವೇ ಕನ್ನಡ ನಾಡು, ಭಾಷೆಯ ಉಳಿವಿಗಾಗಿ ,ಇಂದಿನ ಕನ್ನಡ ಹಬ್ಬವನ್ನು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಸಂತಸದಿಂದ ಆಚರಿಸಿದ್ದಾರೆ ಕನ್ನಡ ಭಾಷೆ ಉಳಿವಿಗಾಗಿ ನಮ್ಮ ಶ್ರಮ ಯಾವಾಗಲೂ ಇರುತ್ತದೆ ನೊಂದವರ ಶಕ್ತಿ ನಮ್ಮ ಕರುನಾಡ ಯುವ ರಕ್ಷಣಾ ವೇದಿಕೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು

     

    ಈ ಸಂದರ್ಭದಲ್ಲಿ ಕರುನಾಡ ಯುವ ರಕ್ಷಣಾ ವೇದಿಕೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಶಂಕರ್ ತಾಲ್ಲೂಕು ಅಧ್ಯಕ್ಷರಾದ ಚೇತನ್ ತಾಲ್ಲೂಕು ಉಪಾಧ್ಯಕ್ಷರಾದ ಅರುಣ್ ಕುಮಾರ್ ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು .

  • ಬಿಸುವನಹಳ್ಳಿ ಗ್ರಾಮಸ್ಥರಿಂದ ಆಹಾರ ಸರಬರಾಜು ಅಧಿಕಾರಿಗೆ ಮನವಿ : ಸ್ವಗ್ರಾಮದಲ್ಲೇ ಪಡಿತರ ವಿತರಣೆಗೆ ಪಟ್ಟು ಹಿಡಿದ ಗ್ರಾಮಸ್ಥರು

    ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಿಸವನಹಳ್ಳಿ ಗ್ರಾಮದಲ್ಲಿ ಪಡಿತರ ಆಹಾರ ಧಾನ್ಯ ವಿತರಿಸುವಂತೆ ಆಹಾರ ಸರಬರಾಜು ಇಲಾಖೆಯ ಅಧಿಕಾರಿಯಾದ ಶಶಿಕಲಾರವರಿಗೆ ಗ್ರಾಮಸ್ಥರಿಂದ ಮನವಿ ಪತ್ರ ಸಲ್ಲಿಸಲಾಯಿತು.

     

    ಕಸುವನಹಳ್ಳಿ ಗ್ರಾಮದಲ್ಲಿ ಆಹಾರ ಪಡಿತರ ಕೇಂದ್ರವಿದ್ದು ಬಿಸುವನಹಳ್ಳಿ ಗ್ರಾಮದಿಂದ ಒಂದುವರೆ ಕಿಲೋಮೀಟರ್ ಹೋಗಿ ಪಡಿತರ ಆಹಾರ ದಾನ್ಯ ಪಡೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

     

    ಬಿಸವನಹಳ್ಳಿ ಗ್ರಾಮಸ್ಥರ ಮತ್ತು ಕಸುವನಹಳ್ಳಿ ಗ್ರಾಮಸ್ಥರ ನಡುವೆ ಆಹಾರ ಧಾನ್ಯ ಪಡೆಯುವ ವೇಳೆ ಜಗಳ ,ಗಲಾಟೆಗಳು ನಡಯುತ್ತಿದ್ದು ಅದನ್ನು ತಡಯುವ ಉದ್ದೇಶ ದಿಂದ ಬಿಸುವನ ಹಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಆಹಾರ ಪಡಿತರ ದಾನ್ಯ ವಿತರಿಸಬೇಕು ಹಾಗೂ ಸ್ಥಳೀಯವಾಗಿ ಕೇಂದ್ರ ಸ್ಥಾಪಿಸಿ ಅಹಾರ ಕೊಡಬೇಕೇಂದು ಬಿಸವನಹಳ್ಳಿ ಗ್ರಾಮಸ್ಥರು ಮತ್ತು ಮುಖಂಡರಿಂದ ಆಹಾರ ಸರಬರಾಜು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು .

     

    ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾರಾಯಣ ಸ್ವಾಮಿ ಮಾತನಾಡಿ ವಯಸ್ಸಾದವರು , ಅಂಗವಿಕಲರು ಕಿಲೋಮೀಟರ್ ಗಟ್ಟಲೇ ಧಾವಿಸಿ ಆಹಾರ ಧಾನ್ಯ ಪಡೆದುಕೊಳ್ಳಲು ಕಷ್ಟ ಸಾದ್ಯ, ಮತ್ತು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದ ಜನಾಂಗದವರು ಶೇಕಡಾ 80% ಇರುವುದರಿಂದ ದಯವಿಟ್ಟು ಬಿಸುವನ ಹಳ್ಳಿ ಗ್ರಾಮದಲ್ಲಿ ಆಹಾರ ಪಡಿತರ ದಾನ್ಯ ವಿತರಿಸಬೇಕಾಗಿ ಅಧಿಕಾರಿಯವರನ್ನು ಒತ್ತಾಯಿಸಿದ್ದೇವೆ ಕಸುವನಹಳ್ಳಿ ಗ್ರಾಮದ ಜನರು ನಮ್ಮ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡುತ್ತಿರುವ ಪ್ರಸಂಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.ನಮ್ಮ ಗ್ರಾಮದಲ್ಲಿ ಕಸುವನಹಳ್ಳಿ ಗ್ರಾಮಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಇದ್ದು ಪಡಿತರ ಚೀಟಿಯೂ ಸಹ ಆ ಗ್ರಾಮಕ್ಕಿಂತ ಹೆಚ್ಚು ಇವೆ. ಹಾಗೂ ಶೇ 80 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾತಿಗೆ ಸೇರಿದವರು ವಾಸಿಸುತ್ತಿದ್ದು. ಜೊತೆಗೆ ಇತರೆ ಜನಾಂಗದ ಜನರು ವಾಸಿಸುತ್ತಿದ್ದಾರೆ, ಸುಮಾರು 2500 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದರು ಸಹ ನಮ್ಮ ಗ್ರಾಮಸ್ಥರು ಕಸುವನಹಳ್ಳಿ ಗ್ರಾಮಕ್ಕೆ ಹೋಗಿ ಆಹಾರ ಪಡಿತರ ಧಾನ್ಯ ಪಡೆಯುವಂತ್ತಾಗಿದೆ. ಅಲ್ಲಿನ ಗ್ರಾಮಸ್ಥರು ನೀವೂ ಯಾಕೆ ಇಲ್ಲಿಗೆ ಬರುವುದು , ನಿಮಗೆ ಮಾನ ಮರ್ಯಾದೆ ಇಲ್ವ , ನಿಮ್ಮ ಗ್ರಾಮದಲ್ಲಿ ನೀವೂ ಆಹಾರ ಧಾನ್ಯ ಪಡೆದು ಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಎರಡು ಗ್ರಾಮಗಳ ಮಧ್ಯೆ ಜಗಳ ಗಲಾಟೆ ನಡೆಯುವ ಸನ್ನಿವೇಶಗಳು ಹೆಚ್ಚಿದೆ. ಈ ಸೂಕ್ಷ್ಮತೆಯನ್ನು ಮನಗಂಡು ಮುಂದೆ ಆಗುವ ಅನಾಹುತವನ್ನು ತಡೆಯುವ ಉದ್ದೇಶದಿಂದ ಕೂಡಲೇ ನಮ್ಮ ಗ್ರಾಮದ ಫಲಾನುಭವಿಗಳಿಗೆ ನಮ್ಮ ಗ್ರಾಮದಲ್ಲೇ ಆಹಾರ ಪಡಿತರ ಧಾನ್ಯ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ ಇಲ್ಲವಾದರೇ ನಾವೂ ಮುಂದಿನ ತಿಂಗಳಿಂದ ಕಸುವನಹಳ್ಳಿ ಅಥವಾ ಬಾಶೆಟ್ಟಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯ ಪಡೆಯುವುದಿಲ್ಲ ನಮ್ಮ ಗ್ರಾಮದಲ್ಲಿ ವಿತರಿಸುವ ತನಕ ಪ್ರತಿಭಟನೆ ಮಾಡುತ್ತೇವೆ ಗ್ರಾಮಸ್ಥರ ನೋವನ್ನು ಮನಗೊಂಡು ಮುಂದಿನ ತಿಂಗಳಿನಿಂದ ಪಡಿತರ ವಿತರಣೆ ನಮ್ಮ ಗ್ರಾಮದಲ್ಲೇ ನೀಡಬೇಕೆಂದು ಮನವಿ ಮಾಡಿದರು .

     

    ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಣ್ಣ , ಮಂಜುನಾಥ, ಯಲ್ಲಪ್ಪ , ನಾರಾಯಣಸ್ವಾಮಿ, , ವೆಂಕಟರಮಣಪ್ಪ ಮತ್ತು ನವೀಲ್ ಮತ್ತಿತರರು ಉಪಸ್ಥಿತರಿದ್ದರು

  • ಸುಂದರ ಭಾರತದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ – ಶಾಸಕ ದೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜೀವ್ ಗಾಂಧಿ ಬಡಾವಣೆಯಲ್ಲಿ ಅಜಾಕ್ಸ್ ಕಂಪನಿಯ ವತಿಯಿಂದ ಸಿಎಸ್ಆರ್ ಅನುದಾನದ ಅಡಿಯಲ್ಲಿ ನಿರ್ಮಾಣವಾಗಿರುವ ನೂತನ ಚಿಣ್ಣರ ಚಿಲಿಪಿಲಿ (ಅಂಗನವಾಡಿ ಕಟ್ಟಡ ) ಉದ್ಘಾಟನೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ನೆರವೇರಿಸಿದರು

     

    ನೂತನ ಕಟ್ಟಡವನ್ನು ಪುಟಾಣಿ ಮಕ್ಕಳೊಂದಿಗೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಲಾಯಿತು

    ಈ ಸಂದರ್ಭದಲ್ಲಿ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ಪ್ಲೇಹೊಮ್ ರೀತಿಯಲ್ಲಿ ಚಿಣ್ಣರ ಚಿಲಿಪಿಲಿ ನಿರ್ಮಿಸಿರುವ ಅಜಾಕ್ಸ್ ಕಂಪನಿಗೆ ಅಭಿನಂದನೆ ಅರ್ಪಿಸುತ್ತೇನೆ ನಗರ ಸಭೆಯ ಒಂದೇನೆ ವಾರ್ಡ್ ನಲ್ಲಿಂದು ಉತ್ತಮ ಪ್ರಾರಂಭ ವಾಗಿದ್ದು ಮುಂದೆ ತಾಲ್ಲೂಕಿನ ಪ್ರತಿ ವಾರ್ಡ್ ಗಳಲ್ಲಿ ಈ ರೀತಿಯ ಅಭಿವೃದ್ದಿ ಸಾಗಲಿ ಎಂದು ಹಾರೈಸಿದರು ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಪೂರ್ವ ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲ ಈ ಕುರಿತಾಗಿ ವಿಧಾನಸಭೆಯಲ್ಲಿ ಮಾಡುತ್ತೇನೆ ಶಾಸಕ ತಾಲ್ಲೂಕಿನ ದ್ವನಿ ನಿಮ್ಮೆಲ್ಲರ ದ್ವನಿಯಾಗಿ ತಾಲ್ಲೂಕಿನ ಏಳಿಗೆಗೆ ಶ್ರಮಿಸುತ್ತೇನೆ ಈ ಬಾರಿ ಸದನದ ಕಲಾಪದಲ್ಲಿ ಈ ಕುರಿತು ಮಾತನಾಡುತ್ತೇನೆ ಅಜಾಕ್ಸ್ ಕಂಪನಿ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ ಉದ್ಯಮದ ಜೊತೆ ಜೊತೆಗೆ ಸಮಾಜ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ . ತಾಲ್ಲೂಕಿನಲ್ಲಿ 350 ರಿಂದ 400 ಅಂಗನವಾಡಿಗಳಿದ್ದು ನಿಮ್ಮ ಸೇವೆ ಸದಾ ನಮಗೆ ಸಿಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಅಜಾಕ್ಸ್ ಕಂಪನಿಯ ಪ್ರತಿನಿಧಿ ಮಂಜುನಾಥ್ ಮಾತನಾಡಿ ಕಂಪನಿಯ ಸಿಎಸ್ಆರ್ ಅನುದಾನದಾಡಿಯಲ್ಲಿ ಚಿಣ್ಣರ ಚಿಲಿಪಿಲಿ ಪ್ರಾರಂಭ ಮಾಡಲಾಗಿದೆ .ತಾಲ್ಲೂಕಿನ ನಗರ ಕೆರೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದು ಕೆರೆಯ ಉಳೆತ್ತುವ ಕಾರ್ಯ ಮಾಡಿದ್ದೇವೆ . ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ನಮ್ಮ ಅಜಾಕ್ಸ್ ಕಂಪನಿಯ ಉದ್ದೇಶವಾಗಿದೆ ಯುವಕರಿಗೆ ಅನುಕೂಲವಾಗುವ ರೀತಿ ತರಬೇತಿ ಆಯೋಜನೆ ಮಾಡುವಲ್ಲಿ ನಾವು ಮುಂದಾಗಿದ್ದೇವೆ .ತಾಲ್ಲೂಕಿನ ಜನತೆಯ ಸೇವೆಗಾಗಿ ಸಾರ್ವಜನಿಕ ಆಸ್ಪತ್ರೆ ಮುಂಬಾಗ ನೂತನವಾಗಿ ಸುಸರ್ಜ್ಜಿತ ಓಪಿಡಿ ಕಟ್ಟಡದ ಸಿದ್ದತೆ ಸಾಗುತ್ತಿದ್ದು ಸದ್ಯದಲ್ಲೇ ಆ ಸೇವೆಯು ತಾಲ್ಲೂಕಿನ ಜನತೆಯ ಕೈ ಸೇರಲಿದೆ , ತಾಲ್ಲೂಕಿನ ಜನತೆಯ ಜೀವ ಉಳಿಸಲು ರಕ್ತನಿಧಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಉತ್ತಮ ಸಮಾಜಕ್ಕಾಗಿ ನಮ್ಮ ಶ್ರಮ ತಾಯಂದಿರು ಮಕ್ಕಳ ಮನಸ್ಸಿನಲ್ಲಿ ಉತ್ತಮ ಗುರಿಯನ್ನು ಬಿತ್ತಬೇಕು ಮಕ್ಕಳ ಭವಿಷ್ಯ ತಾಯಿ ಮತ್ತು ಶಿಕ್ಷಕರ ಕೈಯಲ್ಲಿದೆ ಎಂದು ಅಜಾಕ್ಸ್ ಕಂಪನಿಯ ಪ್ರತಿನಿಧಿ ಮಂಜುನಾಥ್ ತಿಳಿಸಿದರು

    ಕಾರ್ಯಕ್ರಮದಲ್ಲಿ ಶಾಸಕರಾದ ಧೀರಜ್ ಮುನಿರಾಜು ,ಅಜಾಕ್ಸ್ ಕಂಪನಿಯ ಸಿ ಹೆಚ್ ಆರ್ ಓ ಅಧಿಕಾರಿ ಜೋಸೆಫ್ ಸಿ ಎಸ್ ಆರ್ ಅಧಿಕಾರಿ ಮಂಜುನಾಥ್ ,ನಗರ ಸಭಾ ಅಧ್ಯಕ್ಷರಾದ ಸುಧಾರಾಣಿ ಲಕ್ಷ್ಮೀ ನಾರಾಯಣ ,ನಗರ ಸಭಾ ಸದಸ್ಯರಾದ ಬಂತಿ ವೆಂಕಟೇಶ್ , ಹಂಸ ಪ್ರಿಯ ದೇವರಾಜ್ , ರಮೇಶ್ , ಪತ್ರಕರ್ತರಾದ ವೆಂಕಟರಾಜು , ಮತ್ತಿತರರು ಉಪಸ್ಥಿತರಿದ್ದರು

  • ಹೊಸಹಳ್ಳಿ ವ್ಯಾಪ್ತಿಯಲ್ಲಿ ಸರಣಿ ಅಗ್ನಿ ದುರಂತ : ಸಂತ್ರಸ್ತರಿಗೆ ಜೆಡಿಎಸ್ ಮುಖಂಡ ಹರೀಶ್ ಗೌಡರಿಂದ ಸಾಂತ್ವನ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಡುಕುಂಟೆ ಗ್ರಾಮದ ರೈತ ಸುದರ್ಶನರೆಡ್ಡಿ ಅವರು, ತಮ್ಮ‌ ಜಮೀನಲ್ಲಿ ಮನೆ ನಿರ್ಮಿಸಿ ಪ್ರಥಮ ಬಾರಿಗೆ ರೇಷ್ಮೇ ಸಾಕಿದ್ದರು. ಆದರೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ 7 ರಿಂದ 8 ಲಕ್ಷ ಮೌಲ್ಯದ ರೇಷ್ಮೆ ಗೂಡು ಬೆಂಕಿಗೆ ಅವುತಿಯಾಗಿದೆ ಇದೇರೀತಿ

    ಮತ್ತೊಂದು ಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯ ಕುಕ್ಲಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರಿಗೆ ಸೇರಿದ ಸುಮಾರು 8 ರಿಂದ 10 ಲೋಡ್ ಜೋಳದ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ

    ಈ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ನಷ್ಟಕ್ಕೆ ಒಳಗಾದ ರೈತರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರೇಷ್ಮೆ ಕಳೆದು ಕೊಂಡವರಿಗೆ  25 ಸಾವಿರ ರೂಗಳ ಆರ್ಥಿಕ ನೆರವು ನೀಡುವ ಭರವಸೆ ನೀಡಿ , ಬಣವೇ ಕಳೆದುಕೊಂಡವರಿಗೆ ಮೂರು ಲೋಡ್ ಮೇವನ್ನು ವ್ಯವಸ್ಥೆ ಮಾಡುವಂತೆ ಸ್ಥಳೀಯ ಬೆಂಬಲಿಗರಿಗೆ ಸೂಚಿಸಿದರು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು, ಸಾವು ನೋವಿಗೆ ಕೊನೆಯೇ ಇಲ್ಲದಂತಾಗಿದೆ. ಸಣ್ಣ ಪುಟ್ಟ ಕಾರಣಕ್ಕೆ ಕೊಲೆ, ಹಲ್ಲೆ ನಡೆಯುತ್ತಿದ್ದು,ದುಷ್ಕರ್ಮಿಗಳು ಮೂಕ ಗೋವುಗಳು ತಿನ್ನುವ ಮೇವಿಗೆ ಬೆಂಕಿ ಹಚ್ಚಿರುವುದು ಶೋಚನೀಯ ಸಂಗತಿ ಇನ್ನೂ ಈ ಕುರಿತು ದೂರು ನೀಡಿದರು ಕ್ರಮಕೈಗೊಳ್ಳದೆ ಇರುವುದು ಬೇಸರ ವಿಚಾರ, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಹರೀಶ್ ಗೌಡ ಒತ್ತಾಯಿಸಿದರು.

     

    ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣಪ್ಪ, ಶಾಂತಿನಗರ ಪ್ರವೀಣ್, , ಶ್ರೀನಿವಾಸ್, ಅಜ್ಜಪ್ಪ, ಗಂಗಾಧರ್, ತಿಪ್ಪರಾಜು,  ಲಕ್ಷ್ಮೀಕಾಂತ್ ಮತ್ತಿತರರಿದ್ದರು.

  • ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ಅವಿರೋಧ ಆಯ್ಕೆ : ಗಣ್ಯರಿಂದ ಶುಭ ಹಾರೈಕೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರವಿ ಕುಮಾರ್ ಆಯ್ಕೆಯಾಗಿದ್ದು

    ಆದಿಲಕ್ಷ್ಮೀ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಅಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ವಿ ಎಸ್ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

    ಈ ಸಂದರ್ಭದಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ವಿ ಎಸ್ ರವಿಕುಮಾರ್ ಮಾತನಾಡಿ ನೂತನ ಜವಾಬ್ಧಾರಿ ಜೊತೆಗೆ ನಗರ ಭಾಗದ ಅಭಿವೃದ್ಧಿಗಾಗಿ ಶ್ರಮಿಸುವ ಅವಕಾಶ ಕಲ್ಪಿಸಲಾಗಿದೆ ನಗರದ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಮತ್ತು ಹಿರಿಯರ ಮಾರ್ಗದರ್ಶನದೊಂದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು

     

    ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ ಎಸ್ ರವಿ ಕುಮಾರ್ ರವರಿಗೆ ಶುಭವಾಗಲಿ. ಸ್ಥಳೀಯ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಕಾರ್ಯ ನಿರ್ವಹಿಸಲಿದ್ದು ನಗರದ ಅಭಿವೃದ್ಧಿಗೆ ಆಧ್ಯತೆ ನೀಡಲಿದೆ .ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇಲ್ಲಿ ಕಾಣಬಹುದಾಗಿದೆ ಸರ್ವಸದಸ್ಯರು ಒಮ್ಮತದಿಂದ ರವಿ ಕುಮಾರ್ ರವರನ್ನು ಅವಿರೋಧವಾಗಿ ಅಯ್ಕೆ ಮಾಡಿದ್ದಾರೆ ಸರ್ವ ಸದಸ್ಯರ ನಂಬಿಕೆ ನಗರ ಸಭೆಯಿಂದ ಉತ್ತಮ ಕಾರ್ಯ ನೀಡುವಲ್ಲಿ ಸಹಕರವಾಗಲಿದೆ ಎಂದು ತಿಳಿಸಿದರು

    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ರವಿಕುಮಾರ್ ಅವರನ್ನು ಜೆಡಿಎಸ್ ಮುಖಂಡರಾದ ಹೆಚ್. ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ಹರೀಶ್ ಗೌಡ, ಕುಂಟನಹಳ್ಳಿ ಮಂಜುನಾಥ್, ಸದಸ್ಯರಾದ ಮಲ್ಲೇಶ್, ಆನಂದ್ ಮತ್ತಿತರರು ಅಭಿನಂದನೆ ಸಲ್ಲಿಸಿದರು.

  • ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : 91 ನೇ ಅಧಿವೇಶನಕ್ಕೆ ಅದ್ದೂರಿ ಸಿದ್ಧತೆ

    ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಾಸದ ವಿಶೇಷ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 8 ರಿಂದ 12 ರ ವರೆಗೆ ಆಯೋಜನೆ ಮಾಡಲಾಗುತ್ತಿದ್ದು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 11 ಮತ್ತು 12ರಂದು ಆಯೋಜನೆ ಮಾಡಲಾಗುತ್ತಿದೆ.

    ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಆಚರಣೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಆಚರಿಸಿದ್ದು 91 ನೇ ಅಧಿವೇಶನಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಡಿಸೆಂಬರ್ 8 ರಿಂದ 12 ರ ವರೆಗೆ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

    ಡಿಸೆಂಬರ್ 8 ರಂದು ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆಯನ್ನು ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಮಾಡಲಿದ್ದು ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ. ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಅಮೃತ ವರ್ಷಿಣಿ ಸಭಾಂಗಣದಲ್ಲಿ ಡಿಸೆಂಬರ್ 11 ರಂದು ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ನೆಡೆಯಲಿದೆ. ಡಿಸೆಂಬರ್ 12 ರಂದು ವಿದ್ವಾಂಸರು ಮತ್ತು ಪ್ರಖ್ಯಾತ ಗಮಕಿಗಳು ಆದ ಡಾ. ಎ ವಿ ಪ್ರಸನ್ನ ರವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನೆಡೆಯದೆ ಎಂದು ತಿಳಿಸಲಾಗಿದೆ.