Blog

  • ರಾಜಕೀಯ ಸ್ನೇಹಮಯವಾಗಿರಲಿ ದ್ವೇಷಮಯವಾಗುವುದು ಬೇಡ : ಜೆಡಿಎಸ್ ಪಕ್ಷ ಸೋತಿದೆ ನಿಜ ಸತ್ತಿಲ್ಲ – ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

    ದೊಡ್ಡಬಳ್ಳಾಪುರ : ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು ಹಾಗೂ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಮತ್ತೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ .ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ನಿಮ್ಮೊಂದಿಗೆ ನಾವಿದ್ದೇವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದರು

     

    ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸೋಲು ಕಂಡಿದ್ದು ನಮ್ಮ ಸೋಲಿಗೆ ಕೆಲ ಕೆಟ್ಟ ಶಕ್ತಿಗಳೇ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ ಸೋಲಿನಿಂದ ಹೊರಬಂದು ತಾಲ್ಲೂಕಿನ ಪ್ರತಿ ಕಾರ್ಯಕರ್ತರಿಗೆ ಪಕ್ಷ ಸಂಘಟಿಸಲು ಹೊಸ ಚೈತನ್ಯ ತುಂಬಲು ಈ ಕಾರ್ಯಕ್ರಮವನ್ನು ರಾಜ್ಯ ಹಾಗೂ ತಾಲ್ಲೂಕಿನ ವರಿಷ್ಠರ ಅನುಮತಿಯ ಮೇರೆಗೆ ಆಯೋಜನೆ ಮಾಡಿದ್ದೇವೆ ಕಾರ್ಯಕರ್ತರ ಶ್ರಮ ಇಂದಿನ ಕಾರ್ಯಕ್ರಮದ ಯಶಸ್ಸು ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು

     

    ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮೈತ್ರಿ ಕುರಿತು ಮಾತನಾಡಿದ ಅವರು ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತ ವೈಖರಿ ಸಮಾಜಮುಖಿ ಕಾರ್ಯಗಳ ಬಗೆಗಿನ ಒಲವು ಜೊತೆಗೆ ಬಿಜೆಪಿ ನೀಡಿರುವ ಆಹ್ವಾನವನ್ನು ಜೆಡಿಎಸ್ ಪಕ್ಷ ಒಪ್ಪಿಕೊಂಡಿದೆ ಈ ಹಿನ್ನಲೆಯಲ್ಲಿ ಸನ್ಮಾನ್ಯ ಮಾಜಿ ಪ್ರಧಾನಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಆದ ಹೆಚ್. ಡಿ.ದೇವೇಗೌಡ ರವರು ಹಾಗೂ ಮಾಜಿ ಮುಖ್ಯಮಂತ್ರಿಗಳು ರಾಜ್ಯ ವರಿಷ್ಠರು ಆದ ಎಚ್ ಡಿ ಕುಮಾರಸ್ವಾಮಿಯವರು ಕೇಂದ್ರ ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿಕೊಂಡಿದ್ದಾರೆ , ವರಿಷ್ಠರ ಈ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಇದು ಗೌರವ ಪೂರ್ಣ ಮೈತ್ರಿ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ನಮ್ಮ ಪಕ್ಷದ ವರಿಷ್ಠರು ಸಾಧಕ ಬಾಧಕಗಳನ್ನು ಯೋಚಿಸಿಯೇ ಈ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು

     

    ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಕುರಿತು ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದ ಕೊರತೆಯಿಂದ ಹಾಗೂ ಕೆಲವು ಕೆಟ್ಟ ಶಕ್ತಿಗಳ ಪ್ರಭಾವದಿಂದ ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಮುಂದೆ ಈ ರೀತಿ ಯಾಗುವುದು ಬೇಡ ಎಂಬ ಉದ್ದೇಶದಿಂದಲೇ ಇಂದಿನ ಕಾರ್ಯಕ್ರಮದ ಆಯೋಜನೆ ಮಾಡಿರುವುದು ಕಾರ್ಯಕರ್ತರೊಂದಿಗೆ ನಾವು ನಮ್ಮ ಮುಖಂಡರು ಸದಾ ಇರುತ್ತೇವೆ ತಾಲ್ಲೂಕಿನ ಪ್ರತಿ ಮನೆ- ಮನೆಗೂ ಕ್ಯಾಲೆಂಡರ್ ತಲುಪಿಸುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ನಡೆಯಲಿದೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು

     

    ತಮ್ಮ ಪಕ್ಷದ ಮುಂದಿನ ಯೋಜನೆಗಳನ್ನು ಕುರಿತು ಮಾತನಾಡಿದ ಅವರು ನಮ್ಮ ತಾಲ್ಲೂಕಿನಲ್ಲಿ ಪಕ್ಷದ ವತಿಯಿಂದ ಯಾವುದೇ ಕಾರ್ಯಕ್ರಮವನ್ನು ರೂಪಿಸಿದರು ನಗರ ಹಾಗೂ ಗ್ರಾಮಾಂತರ ಭಾಗದ ಎಲ್ಲರನ್ನೂ ಒಳಗೊಂಡಂತೆ ರೂಪಿಸಲಾಗುವುದು .ನಮ್ಮ ಪಕ್ಷವನ್ನು ನಗರ ಭಾಗದಲ್ಲಿ ಬಲ ಪಡಿಸುವ ಅವಶ್ಯಕತೆ ಇದ್ದು ನಗರ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಷ್ಟು ಶ್ರಮವಹಿಸಬೇಕಿದೆ ಜನರ ಮನಸ್ಸನ್ನು ಸೇವೆ ಮಾಡುವ ಮುಖಾಂತರ ಪರಿವರ್ತನೆ ಮಾಡಿ ಎಂದು ತಿಳಿಸಿದರು ಹಾಗೂ ತಾವು ಮುಂದೆ ತಾಲ್ಲೂಕಿನ ಪ್ರತಿ ಬೂತ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಸಭೆಗಳ ಆಯೋಜನೆ ಪಡುವ ಮುಖಾಂತರ ಮತ್ತಷ್ಟು ಸಕ್ರಿಯರಾಗಿ ಸೇವೆ ಸಲ್ಲಿಸುತ್ತೇವೆ ಎಂದು ತಿಳಿಸಿದರು

     

    ತಾಲ್ಲೂಕಿನ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಅಪ್ಪಯ್ಯಣ್ಣ ಮಾತನಾಡಿ ಕಾರ್ಯಕ್ರಮದ ಆಯೋಜನೆ ಸುಲಭದ ಮಾತಲ್ಲ ಹರೀಶ್ ಗೌಡ ರವರ ದೈರ್ಯ ಕಾರ್ಯಕರ್ತರ ಹುಮ್ಮಸ್ಸು ಈ ಕಾರ್ಯಕ್ರಮದ ಆಯೋಜನೆಗೆ ಪ್ರಮುಖ ಕಾರಣ ಜೆಡಿಎಸ್ ಕಾರ್ಯಕರ್ತರ ಪಕ್ಷ .ಕೆಲ ಕಾರಣಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಮುಂದೆ ಈ ರೀತಿ ಸಲ್ಲದು ಹರೀಶ್ ಗೌಡ ರಂತಹ ಉತ್ತಮ ನಾಯಕತ್ವ ತಾಲ್ಲೂಕಿಗೆ ದೊರೆತ್ತಿದ್ದು ಜೆಡಿಎಸ್ ಪಕ್ಷ ಪ್ರಬಲ ಪಕ್ಷವಾಗಿ ತಾಲ್ಲೂಕಿನಲ್ಲಿ ಹೊರಹೊಮ್ಮಲಿದೆ ಎಂದು ತಿಳಿಸಿದರು

    ಜೆಡಿಎಸ್ ಮುಖಂಡ ಸಾರಥಿ ಸತ್ಯಪ್ರಕಾಶ್ ಮಾತನಾಡಿ ತಾಲ್ಲೂಕಿನಲ್ಲಿ ಇದು ಉತ್ತಮ ಬೆಳವಣಿಗೆ ಕಾರ್ಯಕರ್ತರ ಮನೋಬಲ ಹೆಚ್ಚಿಸಲು ನಮ್ಮ ಪಕ್ಷ ಮುಂದಾಗಿದ್ದು ಮುಂದಿನ ಚುನಾವಣೆಗಳನ್ನು ಪ್ರಬಲವಾಗಿ ಎದುರಿಸಲಿದ್ದೇವೆ ತಾಲ್ಲೂಕಿನಲ್ಲಿ ಜೆಡಿಎಸ್ ಬೆಂಬಲಿಗರ ಸಂಖ್ಯೆ ಅಪಾರವಾಗಿದೆ .ನಮ್ಮ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಶ್ರಮದಿಂದ ಬೆಂಬಲಿಗರ ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚು ಮಾಡುತ್ತೇವೆ ಎಂದು ತಿಳಿಸಿದರು

     

     

    ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜೆಡಿಎಸ್ ಮುಖಂಡರಾದ ಕುರುವಿಗೆರೆ ನರಸಿಂಹಯ್ಯ, ಸ್ಥಾಯಿಸಮಿತಿ ಅಧ್ಯಕ್ಷರಾದ ವಡ್ಡರಹಳ್ಳಿ ರವಿ ,ನಗರ ಸಭಾ ಸದಸ್ಯರಾದ ತ. ನಾ. ಪ್ರಭುದೇವ್, ಕೊನಘಟ್ಟ ಆನಂದ್ ,ಪ್ರವೀಣ್ ಶಾಂತಿನಗರ ಹಾಗೂ ತಾಲ್ಲೂಕಿನ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು .

  • ಪ್ರಸಿದ್ಧ ದಿನ್ನೆ ಆಂಜನೇಯಸ್ವಾಮಿ ಜಾತ್ರ ಮಹೋತ್ಸವ : ದೇವರಿಗೆ ವಿಶೇಷ ಪೂಜೆ, ಅಲಂಕಾರ ಕಣ್ತುಂಬಿಕೊಂಡ ಭಕ್ತರು ಗಣ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಗ್ರಾಮದ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದ ಜಾತ್ರ ಮೊಹೋತ್ಸವ ಕಾರ್ಯಕ್ರಮ ನೆಡಯಿತು

     

     

    ಮರದಲ್ಲಿ ಮೂಡಿದ ಹನುಮ ಮೂರ್ತಿ ಆಕರ್ಷಣಿಯವಾಗಿತ್ತು

     

     

    ಸುಮಾರು 500 ವರ್ಷಗಳ ಇತಿಹಾಸವಿರುವ ದೇವಾಲಯ ಇದಾಗಿದ್ದು ವಿಶೇಷ ಆಚರಣೆ ಹೊಂದಿದೆ. ಜೋಡೆತ್ತುಗಳ ರಥಯಾತ್ರೆ, ಹಯಗ್ರಿವ ಉತ್ಸವ ಒಳಗೊಂಡಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಈ ಕ್ಷೇತ್ರವನ್ನು ಸಂಗಮ ಕ್ಷೇತ್ರ ಎಂದು ಕರೆಯಲಾಗುತ್ತದೆ ಕಾರಣ ಸುತ್ತಮುತ್ತಲಿನ ಸಪ್ತಮಾತೃಕೆಯರ ಉತ್ಸವ ಮೂರ್ತಿಗಳು ಈ ಜಾತ್ರ ಮಹೋತ್ಸವಕ್ಕೆ ಬಂದು ಸೇರುತ್ತವೆ. ಈ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿ, ಹರಕೆ ಬೇಡಿಕೆಗಳನ್ನು ಈಡೇರಿಸುವ ಅದ್ಭುತ ಶಕ್ತಿ ಹೊಂದಿರುವ ಹನುಮ ದೇವರು ಸುತ್ತಮುತ್ತಲಿನ ಗ್ರಾಮಸ್ಥರ ಆರಾಧ್ಯ ದೈವ ಎಂದು ದೇವಾಲಯದ ಪ್ರಧಾನ ಅರ್ಚಕ ವಾಸುದೇವಚಾರ್ ತಿಳಿಸಿದರು

    ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳು ಮಾತನಾಡಿ ದೇವಾಲಯವು ಪುರಾತನ ಕಾಲದಗಿದ್ದು ದೇವಾಲಯದ ಮುಂಭಾಗದಲ್ಲಿ ಇರುವ ಬನ್ನಿಮರ ಸಾಕ್ಷಿಯಾಗಿದೆ ಸುತ್ತಮುತ್ತಲಿನ ಗ್ರಾಮಸ್ಥರ ಹರಕೆ, ಬೇಡಿಕೆಗಳನ್ನು ನೆರೆವಿರಿಸಿರುವ ದೇವರಿಗೆ ಅಪಾರ ಭಕ್ತಗಣವಿದೆ ಎಂದು ತಿಳಿಸಿದರು

     

    ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು

  • “ರನ್ ವಿಜಯಪುರ ರನ್” ವೃಕ್ಷಥಾನ್ ಕಾರ್ಯಕ್ರಮ : ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

    ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಸಚಿವ ಎಂ ಬಿ ಪಾಟೀಲ ಅವರು ಏರ್ಪಡಿಸಿದ್ದ ವೃಕ್ಷಥಾನ್ ಹೆರಿಟೇಜ್ ರನ್ `ರನ್ ವಿಜಯಪುರ ರನ್’ ಭಾನುವಾರ ಯಶಸ್ವಿಯಾಗಿ ನಡೆಯಿತು.

     

    21 ಕಿ.ಮೀ, 10 ಕಿ.ಮೀ, 5 ಕಿ.ಮೀ, 3.50 ಕಿಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧಿಸಿದ್ದವರಲ್ಲಿ `ಬರಿಗಾಲ ಓಟಗಾರ್ತಿ’ ಖ್ಯಾತಿಯ ಪ್ರೀತಿ ಮನೀಶ್, ನಟರಾದ ಮಾಸ್ಟರ್ ಕಿಶನ್ ಮತ್ತು ಗುರುನಂದನ್, ಪುಣೆಯ ಶರದ್ ಚವಾಣ್, ಕಟಪಾಡಿ ಸುಲತಾ ಕಮಾತ್, ಪ್ರಶಾಂತ್ ಹಿಪ್ಪರಗಿ, ರಾಜಿಂದರ್ ಕೌರ್, ವೆಂಕಟೇಶ ಅಡಿಗ, ಸಮೀರ್ ಜೋಶಿ, ಅನಂತರಾಮು ಮುಂತಾದವರು ಇದ್ದರು. ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಗೋಳಗುಮ್ಮಟದ ಬಳಿ ಮ್ಯಾರಥಾನ್ ಓಟಗಾರರನ್ನು ಸೇರಿಕೊಂಡು ಸುಮಾರು 3 ಕಿ.ಮೀ. ಓಡಿ ನೆರೆದವರನ್ನು ಹುರಿದುಂಬಿಸಿದರು.

    ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ವಿಜಯಪುರದ ಹಸುರೀಕರಣದ ಗುರಿಯೊಂದಿಗೆ ಪ್ರತೀವರ್ಷವೂ ಹೆರಿಟೇಜ್ ರನ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ವಿಜಯಪುರಕ್ಕೆ ಒಂದು ಬ್ರ್ಯಾಂಡ್ ಮೌಲ್ಯ ಸೃಷ್ಟಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.

     

    ಇದರಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವೆದ್ ನಾಗಠಾಣ ಮತ್ತು ಈಶ್ವರ ಕಲಾಲ ಅವರು ಡ್ರೋನ್ ಕ್ಯಾಮರಾ ಬಳಸಿ ಸೃಷ್ಟಿಸಿದ್ದ ವಿಜಯಪುರದ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳು, ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಜತೆಗೆ, ನಾನಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಹೊರಾಂಗಣದಲ್ಲಿ 15ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು.

     

    ಈ ಸಂದರ್ಭದಲ್ಲಿ ಮಾತನಾಡಿದ ಎಂ ಬಿ ಪಾಟೀಲ, “ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇಕಡ 0.17ರಷ್ಟು ಇದ್ದ ಸಂದರ್ಭದಲ್ಲಿ ವೃಕ್ಷಥಾನ್ ಆಂದೋಲನ ಆರಂಭಿಸಲಾಯಿತು. ಇದುವರೆಗೆ ಸುಮಾರು 1.5 ಕೋಟಿ ಸಸಿಗಳನ್ನು ನೆಡಲಾಗಿದ್ದು, ಈಗ ಹಸುರಿನ ವ್ಯಾಪ್ತಿ ಶೇಕಡ 2ನ್ನು ಮುಟ್ಟಿದೆ. ಆದರೆ, ಇದು ಶೇಕಡ 30ರಿಂದ 35ರ ಪ್ರಮಾಣಕ್ಕೆ ತಲುಪಬೇಕೆಂದರೆ ನಾವು ಸಾಗಬೇಕಾದ ದಾರಿ ಇನ್ನೂ ತುಂಬಾ ಇದೆ” ಎಂದರು.

     

    ಇಲ್ಲಿ ನಾವು ನಡೆಸುತ್ತಿರುವ ವೃಕ್ಷಥಾನ್ ಎಲ್ಲರ ಬೆಂಬಲದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಯಶಸ್ಸು ಕಾಣುತ್ತಿದೆ. ಮುಂದಿನ ವರ್ಷದಿಂದ ಜಿಲ್ಲೆಯ ಹಳ್ಳಿಗಳನ್ನೂ ಇದರಲ್ಲಿ ಒಳಗೊಳ್ಳಿಸಿಕೊಳ್ಳಲು ಯೋಜನೆ ರೂಪಿಸೋಣ ಎಂದರು.

     

    ಗಿಡ, ಮರಗಳನ್ನು ಬೆಳೆಸಿ ಪರಿಸರ ಸುಸ್ಥಿರತೆ ಕಾಪಾಡಿಕೊಳ್ಳಬೇಕೆಂಬುದು ಈ ವೃಕ್ಷಥಾನ್ ಮ್ಯಾರಥಾನ್ ನ ಉದ್ದೇಶವಾಗಿದೆ. ಇದನ್ನು ತಿಳಿದು, ಪ್ರತಿಯೊಬ್ಬರೂ ಒಂದಾದರೂ ಸಸಿ ನೆಟ್ಟು ಬೆಳೆಸಿದರೆ ಉದ್ದೇಶ ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

     

    ನಾವಿರುವ ಜಾಗದ ಸುತ್ತಲ ಪರಿಸರವನ್ನು ಬೇರೆ ಯಾರೋ ಬಂದು ಸ್ವಚ್ಛಗೊಳಿಸುತ್ತಾರೆ ಎಂಬ ಮನೋಭಾವ ಅಪಾಯಕಾರಿ. ನಾವಿರುವ ಸ್ಥಳದಲ್ಲಿನ ಉತ್ತಮ ಪರಿಸರಕ್ಕೆ ನಾವೇ ಕೊಡುಗೆ ಕೊಡಬೇಕು. ಹೀಗಾದಾಗ,

    ನಮಗೆಲ್ಲಾ ಆಸರೆ ನೀಡಿರುವ ಈ ಭೂಗ್ರಹದ ಪರಿಸರವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

    ನಮ್ಮ ಭಾರತ ದೇಶಕ್ಕೆ ದೊಡ್ಡ ಇತಿಹಾಸ ಮತ್ತು ಪರಂಪರೆ ಇದೆ. ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಮೂಲ ಪರಿಕರಗಳು ವಿಪುಲವಾಗಿವೆ. ಆದರೆ, ಇದುವರೆಗೆ ನಾವು ಪ್ರವಾಸಿಗರಿಗೆ ಸ್ವಚ್ಛ ಬಾತ್ ರೂಮ್, ಶೌಚಾಲಯ, ಉತ್ತಮ ರಸ್ತೆ ಸಂಪರ್ಕ, ಶುಚಿಯಾದ ಊಟೋಪಚಾರ ವ್ಯವಸ್ಥೆ ಇವುಗಳನ್ನು ಒದಗಿಸಲು ವಿಫಲವಾಗಿದ್ದೇವೆ. ಇವನ್ನು ಅಭಿವೃದ್ಧಿಪಡಿಸಿದರೆ ನಾವು ಪ್ರವಾಸೋದ್ಯಮದ ಮೂಲಕ ಅತ್ಯಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ಆದಾಯ ಕೂಡ ಗಳಿಸಬಹುದು ಎಂದು ಹೇಳಿದರು.

     

    ಮುಂದಿನ ವರ್ಷ ವೃಕ್ಷಥಾನ್ ಅನ್ನು ಡಿಸೆಂಬರ್ ಎರಡನೇ ವಾರದಲ್ಲಿ ನಡೆಸಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು.

     

    ರಾಜಾಸ್ಥಾನದಿಂದ ಬಂದಿದ್ದ ಜಲ ಭಗೀರಥ ರಾಜೇಂದ್ರ ಸಿಂಗ್ ಅವರು ವೇದಿಕೆ ಮೇಲಿದ್ದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅನಿಲಗೌಡ ಪಾಟೀಲ, ವಿಜಯಪುರದ ಗಣ್ಯರಾದ ಪ್ರಮೋದ ದೇಶಪಾಂಡೆ, ಕಿರಣ ಬೆಟಗೇರಿ, ಡಾ.ಪ್ರವೀಣ ಬಸನಗೌಡರ, ನರೇಂದ್ರಕುಮಾರ ನಾಗಶೆಟ್ಟಿ, ಬಿ ಎಸ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

  • ಬಿಜೆಪಿ ರಾಜ್ಯ ಯುವ ಘಟಕಕ್ಕೆ ನೂತನ ಸಾರಥಿಯಾಗಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ನೇಮಕ

    ಬೆಂಗಳೂರು : ರಾಜ್ಯ ಬಿಜೆಪಿಯ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

    ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ಮುರುಗೇಶ್ ನಿರಾಣಿ, ಭೈರತಿ ಬಸವರಾಜು, ರಾಜುಗೌಡ ನಾಯಕ್, ಎನ್.ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ಸಂತೋಷ್ ನಾಯಕ್, ಡಾ.ಬಸವರಾಜ್ ಕೇಲಗಾರ, ಮಾಳವಿಕಾ ಅವಿನಾಶ್, ಎಂ.ರಾಜೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ವಿ.ಸುನೀಲ್ ಕುಮಾರ್, ಪಿ.ರಾಜೀವ್, ಎನ್.ಎಸ್.ನಂದೀಶ್ ರೆಡ್ಡಿ, ಜೆ.ಪ್ರೀತಂ ಗೌಡ ಅವರನ್ನು ನಿಯುಕ್ತಿಗೊಳಿಸಲಾಗಿದೆ.

    ರಾಜ್ಯ ಕಾರ್ಯದರ್ಶಿಗಳನ್ನಾಗಿ ಶೈಲೇಂದ್ರ ಬೆಲ್ದಾಳೆ, ಡಿ.ಎಸ್.ಅರುಣ್, ಬಸವರಾಜ್ ಮತ್ತೀಮೋಡ್, ಸಿ.ಮುನಿರಾಜು, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ,ಲಲಿತಾ ಅನಾಪುರ, ಡಾ.ಲಕ್ಷ್ಮಿ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್ ಅವರನ್ನು ನೇಮಕ ಮಾಡಲಾಗಿದೆ.

    ರಾಜ್ಯ ಖಜಾಂಚಿಯನ್ನಾಗಿ ಸುಬ್ಬನರಸಿಂಹ ಅವರನ್ನು ನೇಮಿಸಲಾಗಿದೆ. ಮಹಿಳಾ‌ಮೋರ್ಚಾ ರಾಜ್ಯಾಧ್ಯಕ್ಷೆಯನ್ನಾಗಿ ಸಿ.ಮಂಜುಳಾ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಎಸ್ಟಿ ಮೋರ್ಚಾ ಅಧ್ಯಕ್ಷರನ್ನಾಗಿ ಬಂಗಾರು ಹನುಮಂತು, ಎಸ್ಸಿ ಮೋರ್ಚಾ ಅಧ್ಯಕ್ಷರನ್ನಾಗಿ ಎಸ್.ಮಂಜುನಾಥ್( ಸಿಮೆಂಟ್ ಮಂಜು), ಹಿಂದುಳಿದ ವರ್ಗಗಳ‌ ಮೋರ್ಚಾದ ಅಧ್ಯಕ್ಷರನ್ನಾಗಿ ರಘು ಕೌಟಿಲ್ಯ, ರೈತ ಮೋರ್ಚಾದ ಅಧ್ಯಕ್ಷರನ್ನಾಗಿ ಎ.ಎಸ್.ಪಾಟೀಲ‌ ನಡಹಳ್ಳಿ ಹಾಗೂ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರನ್ನಾಗಿ ಅನೀಲ್ ಥಾಮಸ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

     

    ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕದ ನೂತನ ಅಧ್ಯಕ್ಷರಾದ ಧೀರಜ್ ಮುನಿರಾಜು ಮಾತನಾಡಿ ರಾಜ್ಯ ಬಿಜೆಪಿ ನನಗೆ ನೂತನ ಜವಾಬ್ಧಾರಿಯನ್ನು ವಹಿಸಿದೆ ನನ್ನ ಮೇಲೆ ಭರವಸೆ ಇಟ್ಟು ಈ ಅವಕಾಶ ಕಲ್ಪಿಸಿಕೊಟ್ಟ ರಾಷ್ಟ್ರ ಹಾಗೂ ರಾಜ್ಯದ ವರಿಷ್ಟರಿಗೆ ಪಕ್ಷದ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರಿಗೆ ಹಾಗೂ ವಿಪಕ್ಷ ನಾಯಕರಾದ ಆರ್. ಅಶೋಕ್ ರವರಿಗೆ ಅಭಾರಿಯಾಗಿದ್ದೇನೆ. ರಾಜ್ಯದಲ್ಲಿ  ಬಿಜೆಪಿ ಯುವ ಘಟಕ ಬಲಪಡಿಸುವುದೇ  ನನ್ನ ಗುರಿಯಾಗಿದ್ದು ಮುಂದೆ ಪಕ್ಷ ಅಭಿವೃದ್ಧಿಗೆ ಮತ್ತಷ್ಟು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ತಿಳಿಸಿದರು

  • ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ಆಚರಣೆ : ದೇವರ ದರ್ಶನ ಪಡೆದ ಸಾವಿರಾರು ಭಕ್ತರು

    ದೊಡ್ಡಬಳ್ಳಾಪುರ :ನಾಡಿನಾದ್ಯಂತ ವೈಕುಂಠ ಏಕಾದಶಿ ಪ್ರಯುಕ್ತ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು

     

    ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ ಈ ದಿನ ವೆಂಕಟೇಶ್ವರ ಅಥವಾ ಶ್ರೀ ರಂಗನಾಥ ಸ್ವಾಮಿಯ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ .ಈ ಧನುರ್ಮಾಸದಲ್ಲಿ ಶ್ರೀ ರಂಗಪಟ್ಟಣದ ಆದಿರಂಗ ಶಿವನಸಮುದ್ರದ ಮಧ್ಯರಂಗ ಹಾಗೂ ತಮಿಳು ನಾಡಿನ ಶ್ರೀ ರಂಗಂ ಎಂದೇ ಖ್ಯಾತಿ ಪಡೆದಿರುವ ಅಂತ್ಯರಂಗ ದೇವರುಗಳ ದರ್ಶನ ಪಡೆದರೆ ಮನುಷ್ಯನ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ ಅಂತೆಯ ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಾಲ್ಲೋಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಭಕ್ತ ಸಮೂಹ ಹರಿದು ಬರುತ್ತಿದ್ದು ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಪುರುಷೋತ್ತಮ್ ತಿಳಿಸಿದರು

     

    ದೇವಸ್ಥಾನದಲ್ಲಿ ಪ್ರತಿ ಶನಿವಾರ ಮತ್ತು ಶ್ರವಣ ಶನಿವಾರಗಳಂದು ವಿಶೇಷ ಪೂಜೆ ನಡೆಸಲಾಗುತ್ತದೆ ಎಂದು ತಿಳಿಸಿದರು

  • ಬಗೆ ಹರಿಯದ ನೀರಿನ ಸಮಸ್ಯೆ : ತಲೆ ಕೆಡಿಸಿಕೊಳ್ಳದ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು..!

    ದೊಡ್ಡಬಳ್ಳಾಪುರ: ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಪೂರೈಕೆ ಇಲ್ಲದೆ ತಿರುಮಗೊಂಡನಹಳ್ಳಿ ಗ್ರಾಮಸ್ಥರು ಹಾಗು ಜಾನುವಾರು ಗಳು ಪರದಾಡುವ ಪರಿಸ್ಥಿತಿ ಬಂದಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ 150 ಕ್ಕೂ ಹೆಚ್ಚು ಮನೆಗಳಿದ್ದು ಜಾನುವಾರುಗಳ ಸಂಖ್ಯೆ ಕೂಡ ಹೆಚ್ಚಾಗಿವೆ..

     

    ಗ್ರಾಮದಲ್ಲಿ ಕೇವಲ ಒಂದು ಬೋರ್ ವೆಲ್ ಇದ್ದು, 24 ಗಂಟೆ ಕರೆಂಟ್ ನೀಡದೆ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಪ್ರಾರಂಭ ದಿನದಿಂದಲೂ ಕೂಡ ತಿರುಮಗೊಂಡನಹಳ್ಳಿ ಗ್ರಾಮದ ಜನರಿಗೆ ಅನ್ಯಾಯ ಮಾಡುತ್ತಿದ್ದು ಪಂಚಾಯ್ತಿ ಇಂದ ಸಿಗಬೇಕಾದ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

     

    ರಾಜಕೀಯ ಬಣ್ಣದ ತೇಪೆ ಹಾಕಿ ಗ್ರಾಮಕ್ಕೆ ಸಿಗಬೇಕಾದ ಕನಿಷ್ಠ ಸೌಕರ್ಯಗಳನ್ನು ಕೂಡ ಇವರು ನೀಡುತ್ತಿಲ್ಲ.ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಂಚಾಯ್ತಿ ಪ್ರತಿಭಟನೆ ಮಾಡಿದ್ದರು. ಕೇವಲ ಕಾಟಚಾರಕ್ಕೆ ನೀರನ್ನು ಪೂರೈಕೆ ಮಾಡಿ ಗ್ರಾಮಸ್ಥರು ಕಣ್ಣೊರೆಸುವ ತಂತ್ರ ರೂಪಿಸಿದರು..

     

    ದಶಕಗಳಿಂದ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದು, ಗ್ರಾಮ ಪಂಚಾಯ್ತಿ ಸದಸ್ಯರುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಗಾದೆ ನೆನಪಾಗುತ್ತೆ ಎಂದು ಗ್ರಾಮಸ್ಥರು ಆರೋಪಿಸಿದರು..

  • ಶುದ್ಧ ನೀರು ಪೂರೈಕೆಗೆ ಮುಂದಾದ ತೂಬಗೆರೆ ಪಂಚಾಯಿತಿ : ನೂತನ 3 ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

    ದೊಡ್ಡಬಳ್ಳಾಪುರ : ಮೂಲಭೂತ ಸೌಕರ್ಯಕ್ಕೆ ನಮ್ಮ ಆದ್ಯತೆ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಉದ್ದೇಶ ಎಂದು ತೂಬಗೆರೆ ಪಂಚಾಯತಿಯ ಅಧ್ಯಕ್ಷೆ ನಂಜಮ್ಮ ಬಿ ಚಿಕ್ಕಮುದ್ದೆನಹಳ್ಳಿ ತಿಳಿಸಿದರು

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ತೂಬಗೆರೆ ಮತ್ತು ಮುಕ್ಕಡಿಘಟ್ಟ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಿರುವ ಪದಾರ್ಥ ನೀರು , ಶುದ್ದ ನೀರು ಗ್ರಾಮಗಳ ಗ್ರಾಮಸ್ಥರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

    ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕೆನ್ನುವ ಆಶಯಕ್ಕೆ, ಪಂಚಾಯಿತಿಯ ಶ್ರಮಕ್ಕೆ ಇದ್ದು ಫಲ ಸಿಕ್ಕಿದೆ ತೂಬಗೆರೆ, ಮುಕ್ಕಡಿಘಟ್ಟ ಗ್ರಾಮಗಳ ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಕುಡಿಯುವ ನೀರಿನ ಘಟಕದ ಬಳಕೆ ಹಾಗೂ ನಿರ್ವಹಣೆ ಮಾಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು

    ಈ ಸಂದರ್ಭದಲ್ಲಿ ಕೆಪಿಪಿಸಿ ಸದಸ್ಯರಾದ ಎಸ್. ಆರ್.ಮುನಿರಾಜು ಮಾತನಾಡಿ ಸತತ ಹಲವು ವರ್ಷಗಳ ಹೋರಾಟದ ಪ್ರತಿಫಲ ನಮ್ಮ ಪಂಚಾಯಿತಿ ವ್ಯಾಪ್ತಿಗೆ ಶುದ್ದ ಕುಡಿಯುವ ನೀರಿನ ಘಟಕ ಸಿಕ್ಕಿದೆ. ಸಾರ್ವಜನಿಕರು ಶುದ್ದ ಕುಡಿಯುವ ನೀರಿನ ಘಟಕವನ್ನು ಸದುಪಯೋಗ ಪಡಿಸಿಕೊಳ್ಳಬೇಕು .ಅಧ್ಯಕ್ಷರ ಹಾಗೂ ಪಂಚಾಯಿತಿ ಅಧಿಕಾರಿಗಳ ಸತತ ಪ್ರಯತ್ನದಿಂದ ನೂತನ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ . ಈ ಘಟಕದ ಸದ್ಬಳಕೆ ಗ್ರಾಮಸ್ಥರ ಜವಾಬ್ದಾರಿ ಎಂದು ತಿಳಿಸಿದರು

    ಮುಕ್ಕಡಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಮಾತನಾಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ಗ್ರಾಮ ನಮ್ಮದಾಗಿದ್ದು ಸ್ಥಳೀಯ ಹೋಬಳಿ ಮುಖಂಡರ ಹಾಗೂ ತೂಬಗೆರೆ ಪಂಚಾಯಿತಿ ಅಧ್ಯಕ್ಷರ ಸಹಕಾರದೊಂದಿಗೆ ಈ ಶುದ್ದ ನೀರಿನ ಘಟಕ ಸ್ಥಾಪನೆಯಾಗಿ ಉದ್ಘಾಟನೆಯಾಗಿದ್ದು ಗ್ರಾಮಸ್ಥರಿಗೆ ಅನುಕೂಲವಾಗಿದೆ .ಗ್ರಾಮಸ್ಥರ ಉತ್ತಮ ಆರೋಗ್ಯ ಕಾಪಾಡುವಲ್ಲಿ ಈ ಶುದ್ದ ನೀರಿನ ಘಟಕಗಳು ಪ್ರಮುಖ ಪಾತ್ರವಹಿಸಲಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವರಲಕ್ಷ್ಮಿ ಕೃಷ್ಣಪ್ಪ ,ಮಾಜಿ ಅಧ್ಯಕ್ಷರಾದ ನವೀನ್ , ನರಸಿಂಹಮೂರ್ತಿ, ಮುನಿಕೃಷ್ಣಪ್ಪ , ಟಿ. ವಿ.ವೆಂಕಟೇಶ್, ಸದಸ್ಯರಾದ ಶಿವಣ್ಣ, ರಾಜ್ ಕುಮಾರ್,ನಾಗೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು

  • ವಕೀಲರ ದಿನಾಚಣೆಯೊಂದಿಗೆ ಕನ್ನಡ ರಾಜ್ಯೋತ್ಸವ ಆಚರಣೆ : ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜನೆ

    ದೊಡ್ಡಬಳ್ಳಾಪುರ : ನ್ಯಾಯಾಲಯಗಳಲ್ಲಿ ಮಾತೃಭಾಷೆ ಕನ್ನಡಭಾಷೆಯಲ್ಲಿ ವಾದ ಮಂಡನೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು.
    ದೊಡ್ಡಬಳ್ಳಾಪುರ ನಗರದ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ‌ ಸಂಘದ ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ಎಲ್ ರಘುನಾಥ್ ಮಾತನಾಡಿ ದೊಡ್ಡಬಳ್ಳಾಪುರ ಒಂದು ಐತಿಹಾಸಿಕ ಹಿನ್ನಲೆ ಇರುವ ಸ್ಥಳವಾಗಿದ್ದು ವಕೀಲರ ಸಂಘದ ಈ ಕಾರ್ಯಕ್ರಮವು ಇತಿಹಾಸದ ಪುಟಗಳಲ್ಲಿ ಸೇರುತ್ತದೆ ಕಾರ್ಯಕ್ರಮವು ತುಂಬಾ ಚೆನ್ನಾಗಿ ಮೂಡಿಬಂದಿದೆ ಕನ್ನಡಿಗರಾಗಿ ನಾವು ಜನ್ಮ ಪಡೆದಿರುವುದು ನಮ್ಮ ಪುಣ್ಯ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಕೆ ಇದ್ದು ಕನ್ನಡ ಭಾಷೆಯಲ್ಲಿ ತೀರ್ಪು ಬರೆಯುವ ಹಲವು ಜಡ್ಜ್ ಗಳಿಗೆ ಸನ್ಮಾನಿಸಿ ಗೌರವಿಸುವ ಅಭ್ಯಾಸ ತುಂಬಾ ಸಂತಸದ ವಿಷಯವಾಗಿದೆ . ಕನ್ನಡ ಭಾಷೆ ನಮ್ಮ ಭಾಷೆ ಯಾವುದೇ ವಿಷಯ ಸಂವಹನ ನೆಡೆಸಲು ಮಾತೃಭಾಷೆಯಷ್ಟು ಅದ್ಭುತ ಭಾಷೆ ಮತ್ತೊಂದು ಇಲ್ಲ ಎಂದು ಅಭಿಪ್ರಾಯಪಟ್ಟರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗಿಂತ ದೊಡ್ಡಬಳ್ಳಾಪುರ ನ್ಯಾಯಾಲಯ ಸುಸಜ್ಜಿತವಾಗಿದೆ. ವಕೀಲರ‌ ಸಂಘಕ್ಕೆ ಹೊಸ ಕಟ್ಟಡದ ಅಗತ್ಯವಿದ್ದು, ಶೀಘ್ರವೇ ಹೊಸ ಕಟ್ಟಡ‌ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು

    ಕಾರ್ಯಕ್ರಮದಲ್ಲಿ ವಕೀಲ ಪ್ರಭಾಕರ್ ರಾಜು ಸಂಪಾದಿಸಿರುವ ಜನ್ಮದಾತೆ ಕವನ ಸಂಕಲನ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ವಕೀಲರಾದ ರವಿ ಮಾವಿನಕುಂಟೆ ಮಾತನಾಡಿ ಈ ಕಾರ್ಯಕ್ರಮ ತುಂಬಾ ವಿಶೇಷವಾದದ್ದು ಕಾರಣ ವಕೀಲರ ದಿನಾಚರಣೆ ಜೊತೆಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಎಲ್ಲರ ಸಹಕಾರದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಕನ್ನಡ ಭಾಷೆ ಜೇನಿನಂತೆ ಸವಿದಷ್ಟು ಸಿಹಿ ಹೊರ ರಾಜ್ಯಗಳಿಂದ ಬಂದು ಜೀವನ ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನಮ್ಮ ನಾಡಿನ ಸವಲತ್ತು ಬೇಕಿದೆ ಭಾಷೆ ಬೇಡವಾಗಿದೆ ಈ ನಡವಳಿಕೆ ಬದಲಾಗಬೇಕಿದೆ ಕೇವಲ ವಾಣಿಜ್ಯ ವಿಚಾರಕ್ಕಾಗಿ ಕನ್ನಡ ಭಾಷೆಯನ್ನು ತಾತ್ಸಾರ ಮಾಡುವ ನಮ್ಮ ನಾಡಿನ ವ್ಯಾಪಾರಸ್ಥರಿಗೆ ನಾಚಿಕೆಯಾಗಬೇಕು ನಮ್ಮ ಮಾತೃಭಾಷೆಯನ್ನು ಬಿಟ್ಟು ಪರ ಭಾಷೆ ಬಳಸಲು ಮುಂದಾಗಿರುವ ವರ್ತನೆ ಕೂಡಲೇ ನಿಲ್ಲಬೇಕಿದೆ .ಮೊದಲು ಎಲ್ಲಾ ಕನ್ನಡಿಗರಲ್ಲಿ ನನ್ನ ನಾಡು ನನ್ನ ಭಾಷೆ ಎಂಬ ಭಾವನೆ ಮೂಡಬೇಕಿದೆ ನಮ್ಮ ಅಸ್ತಿತ್ವ ನಮ್ಮ ಭಾಷೆ ನಮ್ಮ ಅಳಿವು ಉಳಿವು ನಮ್ಮ ನಾಡು ನುಡಿಯ ಅಭಿವೃದ್ಧಿಯಲ್ಲಿದೆ ಎಂಬುದು ನಮ್ಮ ಅರಿವಿಗೆ ಬರಬೇಕಿದೆ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಅರ್ಥಪೂರ್ಣ ಕಾರ್ಯಕ್ರಮವನ್ನು ರೂಪಿಸಲು ಸಹಕರಿಸಿದ ಎಲ್ಲಾ ನನ್ನ ವಕೀಲ ಮಿತ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು


    ಕಾರ್ಯಕ್ರಮದಲ್ಲಿ ವಕೀಲರಾದ , ರವಿ ಮಾವಿನ ಕುಂಟೆ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ ಪಿ ರಂಗನಾಥ್ , ಶಿವಕುಮಾರ್ , ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ , ಪತ್ರಕರ್ತರಾದ ರವಿಕಿರಣ್ , ನಟರು ವಾಗ್ಮಿಗಳು ಆದ ಮಹಾದೇವ್ , ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು .

  • ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾದ ದೊಡ್ಡಬಳ್ಳಾಪುರ ಜೆಡಿಎಸ್ : ಡಿ 25 ರಂದು ವಾರ್ಷಿಕ ದಿನಚರಿ ( ಕ್ಯಾಲೆಂಡರ್ ) ಬಿಡುಗಡೆಗೆ ಸಿದ್ಧತೆ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಒಕ್ಕಲಿಗರ ಭವನದಲ್ಲಿ ಡಿಸೆಂಬರ್ 25 ರಂದು 2024 ನೂತನ ವರ್ಷದ ದಿನಚರಿ (ಕ್ಯಾಲೆಂಡರ್) ಬಿಡುಗಡೆ ಮಾಡುವ ಮೂಲಕ ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಲು ದೊಡ್ಡಬಳ್ಳಾಪುರ ಜೆಡಿಎಸ್ ಪಕ್ಷ ಸಿದ್ದತೆ ನಡೆಸಿದೆ ಎಂದು ಗುರುವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದರು

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು

    ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಜೆಡಿಎಸ್ ಪಕ್ಷವು ಪ್ರಬಲವಾಗಿದ್ದು ವಿಧಾನ ಸಭಾ ಚುನಾವಣಾ ಸಂದರ್ಭಗಳಲ್ಲಿ ಕೆಲ ಸಮಸ್ಯೆಗಳಿಂದ ಹಿನ್ನಡೆಯಾಗುತ್ತಿದೆ ಮುಂದೆ ಈ ರೀತಿಯ ಸಮಸ್ಯೆಗಳು ಎದುರಾಗದಂತೆ ಕಾರ್ಯ ನಿರ್ವಹಿಸಲು ನಮ್ಮ ಪಕ್ಷದ ಮುಖಂಡರು ಮುಂದಾಗಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಚೈತನ್ಯ ತುಂಬಲು ಹಾಗೂ ತಾಲ್ಲೂಕಿನ ಸಮಸ್ಯೆಗಳ ಪರಿಹಾರಕ್ಕೆ ತಾಲ್ಲೂಕಿನ ಜನತೆಯ ಬೆಂಬಲಕ್ಕೆ ನಾವು ಸದಾ ಸಿದ್ಧರಿದ್ದೇವೆ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು

     

    ಜೆಡಿಎಸ್ ಪಕ್ಷದ ಮುಖಂಡರಾದ ಅಪ್ಪಯ್ಯಣ್ಣ ಮಾತನಾಡಿ ತಾಲ್ಲೂಕಿನ ಜನತೆಗೆ ಹೊಸ ವರ್ಷದ ಅಂಗವಾಗಿ ಪಕ್ಷದ ವತಿಯಿಂದ ವಾರ್ಷಿಕ ದಿನಚರಿ ಬಿಡುಗಡೆ ಕಾರ್ಯಕ್ರಮವನ್ನು ಡಿಸೆಂಬರ್ 25 ರಂದು ಹಮ್ಮಿಕೊಳ್ಳಲಾಗಿದೆ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವು ಸದೃಢವಾಗಿದೆ ನಮ್ಮ ನಿಷ್ಟಾವಂತ ಕಾರ್ಯಕರ್ತರು ನಮ್ಮೊಂದಿಗೆ ಸದಾ ಇದ್ದಾರೆ ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ತಿಳಿಸಿದರು

     

    ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ತ. ನಾ ಪ್ರಭುದೇವ್ , ಎ.ನರಸಿಂಹಯ್ಯ , ಆನಂದ್ , ಪ್ರವೀಣ್ ಶಾಂತಿನಗರ , ತಳವಾರ್ ನಾಗಣ್ಣ , ತೂಬಗೆರೆ ಅಂಬರೀಷ್ , ಮತ್ತಿತರರು ಉಪಸ್ಥಿತರಿದ್ದರು

  • 13ನೇ ಕನ್ನಡ ಸಾಹಿತ್ಯ ಸಮ್ಮೇಳನ : ಕಸಾಪ ನೂತನ ಲೋಗೋ ಲೋಕಾರ್ಪಣೆ ಮಾಡಿದ ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : 2024 ರ ಜನವರಿ 21 ಹಾಗೂ 22 ರಂದು ತಾಲ್ಲೂಕಿನ ಭಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಡಶಾಲೆಯಲ್ಲಿ 13 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಘೋಷಿಸಿದರು ಈ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ . ಅಂಜಿನಪ್ಪ ವಹಿಸಿದ್ದಾರೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಲಾಂಛನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಮ್ಮುಖದಲ್ಲಿ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಲೋಕಾರ್ಪಣೆ ಮಾಡಿದರು .

     

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ 13 ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಬೇಕಿದೆ ಈ ಕಾರ್ಯಕ್ರಮ ನಮ್ಮ ಹಬ್ಬ ಕನ್ನಡಿಗರ ಹಬ್ಬವಾಗಿದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಡಾ ಅಂಜಿನಪ್ಪ ಸರ್ ರವರು ಪ್ರತಿಭಾನ್ವಿತರು ಸಮಾಜಕ್ಕೆ ತಮ್ಮದೇ ಆದ ವಿಶೇಷ ಸೇವೆ ಸಲ್ಲಿಸಿದ್ದಾರೆ ಕಾರ್ಯಕ್ರಮದ ದಿನಾಂಕ 2024 ರ ಜನವರಿ ತಿಂಗಳ 21ಮತ್ತು 22 ರಂದು ನಿಗದಿ ಪಡಿಸಲಾಗಿದೆ ಈ ಕಾರ್ಯಕ್ರಮವು ತುಂಬಾ ವಿಶೇಷವಾಗಿದ್ದು ತಾಲ್ಲೂಕಿನ ಕನ್ನಡ ಮನಸ್ಸುಗಳು ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು

    ಕನ್ನಡ  ಸಾಹಿತ್ಯ ಪರಿಷತ್ತಿನ  ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಭಾಷೇಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ಬೆಂಗಳೂರಿಗೆ ಹೆಬ್ಬಾಗಿಲು ಎಂದರೆ ತಪ್ಪಾಗಲಾರದು ಈ ಮೂಲಕ ರಾಜ್ಯಕ್ಕೆ ಕನ್ನಡ ಸಿಹಿಯನ್ನು ಹಂಚಲು ಹೊರಟಿರುವ ತಂಡಕ್ಕೆ ಶುಭವಾಗಲಿ ಈ ಸಮ್ಮೇಳನ ಬಹಳ ಅರ್ಥಪೂರ್ಣ ವಾಗಿದೆ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಒಬ್ಬ ನುರಿತ ವೈದ್ಯರಾದ ಡಾ ಅಂಜಿನಪ್ಪ ರವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯವಾಗಿದೆ ಲಾಂಛನ ಅನಾವರಣ ಮಾಡಿದ ಶಾಸಕ ಧೀರಜ್ ಮುನಿರಾಜು ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು

     

     

    ಶಾಸಕ ಧೀರಜ್ ಮುನಿರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೃಷ್ಣಪ್ಪ , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋವಿಂದ್ ರಾಜು, ಸ್ಥಳೀಯರಾದ ಪ್ರೇಮ್ ಕುಮಾರ್, ಮುದ್ದಪ್ಪ ,ಸುರೇಶ್ ಬಾಬು, ಸಿದ್ದಪ್ಪ, ರವಿ, ರಾಜಶೇಖರ್ ವೆಂಕಟೇಶ್,ಪೀಳ್ಳಣ್ಣ, ಮುಖ್ಯ ಶಿಕ್ಷಕರಾದ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು