Blog

  • ವಿಶ್ವನಾಥಪುರ ಪಬ್ಲಿಕ್ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ : ನೆಚ್ಚಿನ ಗುರುಗಳಿಗೆ ಗೌರವ ಸಮರ್ಪಣೆ

    ದೇವನಹಳ್ಳಿ :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪಬ್ಲಿಕ್ ಶಾಲೆಯಲ್ಲಿ 2000-01 ಸಾಲಿನ ವಿದ್ಯಾರ್ಥಿಗಳಿಂದ ತಮ್ಮ ನೆಚ್ಚಿನ  ಗುರುಗಳಿಗೆ ಗುರುವಂದನ ಕಾರ್ಯಕ್ರಮವನ್ನು ಡಿಸೆಂಬರ್ 17 ರಂದು ಕುವೆಂಪುರಂಗ ಮಂದಿರದಲ್ಲಿ ಆಯೋಜಿಸಲಾಗಿತ್ತು.

     

    ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲರಾದ ಶ್ರೀ ಶಿವಶಂಕರ್ ರೆಡ್ಡಿ ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ವೆಂಕಟೇಶ್ವರ ರವರು ವಹಿಸಿದ್ದರು

     

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶಿವಶಂಕರ್ ರೆಡ್ಡಿ ಮಾತನಾಡಿ ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವ 2000-2001 ನೇ ಸಾಲಿನ ವಿದ್ಯಾರ್ಥಿಗಳ ಶ್ರಮಕ್ಕೆ ಅಭಿನಂಧನೆಗಳು, ತಮ್ಮ ನೆಚ್ಚಿನ ಗುರುಗಳಿಗೆ ಈ ಕಾರ್ಯಕ್ರಮವು ವಿಶೇಷ ಕೊಡುಗೆ ಎಂದರೆ ತಪ್ಪಾಗಲಾರದು ಪ್ರಸ್ತುತ ವಿದ್ಯಾರ್ಥಿಗಳಿಗೆ ಹಳೇ ವಿದ್ಯಾರ್ಥಿಗಳ ಈ ಕಾರ್ಯ ವೈಖರಿ ಮಾದರಿಯಾಗಲಿದೆ ಎಂದು ತಿಳಿಸಿದರು

    ಕಾರ್ಯಕ್ರಮದಲ್ಲಿ 2001-2001ನೇ ಸಾಲಿನ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ನೆಚ್ಚಿನ ಗುರುಗಳೊಂದಿಗೆ ಕಳೆದ ಸಮಯವನ್ನು ನೆನೆದು ಭಾವುಕರಾದರು ಹಾಗೂ ತಮ್ಮ ವಿದ್ಯಾಭ್ಯಾಸದ ಸಮಯದ ಸಿಹಿ ಸಮಯದ ಅನುಭವನ್ನು ಎಲ್ಲರೊಂದಿಗೆ ಹಂಚಿಕೊಂಡರು

    ಈ ಸಂದರ್ಭದಲ್ಲಿ 2000-01 ನೇ ಸಾಲಿನ ಶಿಕ್ಷಕರುಗಳಾದ ಶ್ರೀ ಪರಶುರಾಮಪ್ಪ, ಶ್ರೀ ನಾಗಪ್ಪ ಗೌಡ, ಶ್ರೀ ಶ್ರೀನಿವಾಸ ಉಮರ್ಜಿ ಶ್ರೀ ಹನುಮಂತಪ್ಪ ಶ್ರೀ ಮಂಜುನಾಥ ಶ್ರೀಮತಿ ಕುಸುಮ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು

     

     

  • ಮೂಲಭೂತ ಸೌಕರ್ಯಕ್ಕೆ ಗ್ರಾಮಸ್ಥರ ಮನವಿ : ಕ್ಯಾರೇ ಎನ್ನದ ರಾಜಘಟ್ಟ ಪಂಚಾಯಿತಿ ಅಧಿಕಾರಿಗಳು

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಪಂಚಾಯಿತಿಯಲ್ಲಿ ಚರಂಡಿಗಳು ಕಸದಿಂದ ತುಂಬಿದ್ದು ಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ,ಗ್ರಾಮದ ಸ್ವಚ್ಛತೆ ಕುರಿತಂತೆ ಸ್ಪಂದಿಸದ ಪಂಚಾಯತಿ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಸ್ಥಳೀಯ ಯುವಕರು ,ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾರೆ.

    ಸ್ವಚ್ಛತೆ ಕುರಿತು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅರ್ಜಿ ಸಲ್ಲಿಸಲು ತಿಳಿಸುತ್ತಾರೆ ಆದರೆ ನಾವು ನೀಡುವ ಅರ್ಜಿ ಕಸದ ಬುಟ್ಟಿ ಸೇರುತ್ತಿದೆ . ಅಭಿವೃದ್ದಿ ಮತ್ತು ಸ್ವಚ್ಛತೆ ಗ್ರಾಮದಲ್ಲಿ ಕಾಣದಾಗಿದೆ ನಮ್ಮ ನೋವಿಗೆ ಸ್ಪಂದಿಸದ ಪಂಚಾಯತಿ ನಮಗೆ ಬೇಡ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು

     

    ಗ್ರಾಮದ ಮುಖ್ಯ ರಸ್ತೆಯಲ್ಲಿ ತಮಟೆ ಬಾರಿಸುವ ಮೂಲಕ ಜನ ಜಾಗೃತಿ ಮೂಡಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಂತೆ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಲಾಯಿತು

     

    ರಾಜಘಟ್ಟ ಗ್ರಾಮದ ದಲಿತ ಕಲೋನಿಗಳು ಸೇರಿದಂತೆ ಗ್ರಾಮದ ಸ್ವಚ್ಛತೆ ಕಾಣೆಯಾಗಿದೆ ಗ್ರಾಮದ ಅಭಿವೃದ್ದಿ ಕುರಿತು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಗ್ರಾಮಸ್ಥರು ನರಳುವಂಥಗಿದೆ ಸ್ವಚ್ಛತೆ ಕುರಿತು ಪ್ರಶ್ನಿಸುವ ಗ್ರಾಮಸ್ಥರಿಗೆ ಸ್ಪಂದಿಸದ ಪಂಚಾಯಿತಿ ನಮಗೆ ಬೇಕಿಲ್ಲ ಗುರುವಾರದವರೆಗೂ ಕಾಲಾವಕಾಶ ನೀಡುತ್ತಿದ್ದು ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಗ್ರಾಮದ ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಸರ್ವ ಗ್ರಾಮಸ್ಥರಿಂದ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯರಾದ ರಾಜಘಟ್ಟ ಗಣೇಶ್ ತಿಳಿಸಿದರು

    ಗ್ರಾಮದ ಮಹಿಳೆಯರು ಮಾತನಾಡಿ ಗ್ರಾಮದ ಚರಂಡಿಗಳು ಕಸದರಾಶಿಯಿಂದ ತುಂಬಿವೆ ಕೊಳಚೆ ನೀರು ಮನೆಮುಂದೆ ನಿಂತಿದ್ದು ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಭಯದಲ್ಲಿ ಜೀವನ ಸಾಗಿಸುವಂಥಾಗಿದೆ ಹಲವು ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿವೆ ನಿಂತ ನೀರಿನಿಂದ ಬರುವ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡುವುದು ಕಷ್ಟಕರವಾಗಿದೆ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸರಿಪಡಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಪ್ರಮೋದ್ ,ವೇಣು, ಸಾಗರ್, ಆನಂದ್ ,ಪ್ರವೀಣ್, ಮನೋಜ್ ,ವೆಂಕಟೇಶ್, ಭರತ್, ಮಧು, ಸಂದೀಪ್ , ವಿನಯ್ ,ಶ್ರೀನಿವಾಸ್ , ಮಣಿ, ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

  • ನಾಡಿನ ರೈತರ ಧ್ವನಿ ನಮ್ಮ ಕುಮಾರಣ್ಣ – ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

    ದೊಡ್ಡಬಳ್ಳಾಪುರ : ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ತಾಲ್ಲೂಕಿನ ಶ್ರೀ ನೆಲದಾಂಜನೆಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು , ಬೆಡ್ ಶೀಟ್ ಗಳನ್ನು ನೀಡುವ ಮೂಲಕ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀ ಹರೀಶ್ ಗೌಡ ರವರ ನೇತೃತ್ವದ ತಂಡ ತಮ್ಮ ನೆಚ್ಚಿನ ನಾಯಕ ಕುಮಾರಸ್ವಾಮಿ ಯವರ ಹುಟ್ಟು ಹಬ್ಬವನ್ನು ಆಚರಿಸಿದರು .

    ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಕುಮಾರಸ್ವಾಮಿಯವರು ಕೂಡ ಒಬ್ಬರು ಇಂದಿಗೂ ರೈತರ ಧ್ವನಿಯಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ಶ್ರಮಿಸುವ ಏಕೈಕ ನಾಯಕ ಅವರಾಗಿದ್ದಾರೆ . ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಸದಾ ಜನಪರ ಕಾಳಜಿಯನ್ನು ಹೊಂದಿರುವ ನಾಯಕ ನಮ್ಮ ಕುಮಾರಸ್ವಾಮಿಯವರು ನಮ್ಮೆಲ್ಲರ ಹಾರೈಕೆ ದೇವರು ಅವರಿಗೆ ಆರೋಗ್ಯದೊಂದಿಗೆ ಸಕಲ ಸೌಭಾಗ್ಯಗಳನ್ನು ನೀಡಿ ಆಶೀರ್ವದಿಸಲಿ ಎಂಬುದೇ ಆಗಿದೆ ಕುಮಾರಸ್ವಾಮಿಯವರು ಮತ್ತೊಮ್ಮೆ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿ ರಾಜ್ಯದ ರೈತರಿಗೆ, ಜನಸಾಮಾನ್ಯರಿಗೆ ಮತ್ತಷ್ಟು ಉತ್ತಮ ಕೊಡುಗೆ ನೀಡಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಯಣ್ಣ . ಹಿರಿಯ ಮುಖಂಡರಾದ ಕುರುವಿಗೆರೆ ನರಸಿಂಹಯ್ಯ. ಮಾಜಿ ನಗರ ಸಭೆ ಅಧ್ಯಕ್ಷರಾದ ತ.ನಾ.ಪ್ರಭಣ್ಣ ರವರು ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಕುಮಾರ್ ರವರು. ಕೊನಘಟ್ಟ ಆನಂದ್ ರವರು, ಶಾಂತಿನಗರ ಪ್ರವೀಣ್ ಹಾಗೂ ತಾಲ್ಲೂಕಿನ ಹಲವು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

  • ಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡರಿಗೆ “ಸಹಕಾರ ರತ್ನ” ಪ್ರಶಸ್ತಿ : ಡಿ 19 ರಂದು ಅದ್ಧೂರಿ ನಾಗರೀಕ ಸನ್ಮಾನ ಸಮಾರಂಭ

    ಸಹಕಾರ ರತ್ನ ಪ್ರಶಸ್ತಿ ಪಡೆದ ಚುಂಚೆಗೌಡ ರವರಿಗೆ ತಾಲ್ಲೂಕಿನ ನಾಗರೀಕರ ಹಾಗೂ ಚುಂಚೇಗೌಡ ಅಭಿಮಾನಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ಡಿಸೆಂಬರ್ 19 ರಂದು ಆಯೋಜನೆ ಮಾಡಿರುವ ಕುರಿತು ಚುಂಚೇಗೌಡ ಅಭಿಮಾನಿಗಳಿಂದ ಸುದ್ದಿಗೋಷ್ಠಿ ನಡೆಸಲಾಯಿತು

     

    ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಜಿ.ಲಕ್ಷ್ಮೀಪತಿ ಮಾತನಾಡಿ ತಾಲ್ಲೂಕಿನ ಹೆಮ್ಮೆ ಎಂದರೆ ತಪ್ಪಾಗಲಾರದು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಚುಂಚೆಗೌಡ ರವರಿಗೆ ಕರ್ನಾಟಕ ರಾಜ್ಯ ಸರ್ಕಾರ “ಸಹಕಾರ ರತ್ನ “ಪ್ರಶಸ್ತಿ ನೀಡಿ ಗೌರವಿಸಿದೆ ಈ ಸಂಭ್ರಮವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗರೀಕರ ಹಾಗೂ ಅಭಿಮಾನಿಗಳಿಂದ ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ಗೌರವಿಸುವ ಸಲುವಾಗಿ ಕಾರ್ಯಕ್ರಮ ರೂಪಿಸಿದ್ದು ಚುಂಚೆಗೌಡರ ಅಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು

     

    ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಅಪ್ಪಯ್ಯಣ್ಣ ಮಾತನಾಡಿ ತಾಲ್ಲೂಕಿನ ಸಹಕಾರ ಸಂಘದ ಹೆಮ್ಮೆ ರಾಜ್ಯ ಮಟ್ಟದಲ್ಲಿ ಗುರುತಿಸುವುದು ಶ್ಲಾಘನೀಯ ಚುಂಚೇಗೌಡರ ಅಭಿಮಾನಿಗಳು ಹಾಗೂ ವಿಎಸ್ಎಸ್ಎನ್ ಹಾಗೂ ಇತರೆ ಸಹಕಾರಿ ಸಂಘಗಳ ಸಹಕಾರದೊಂದಿಗೆ ಸನ್ಮಾನಿತರ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು

     

    ಜೆಡಿಎಸ್ ಮುಖಂಡ ಕುರಿವಿಗೆರೆ ನರಸಿಂಹಯ್ಯ ಮಾತನಾಡಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ಯಾನ್ನು ಹಿರಿಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಆರ್.ಜಿ.ವೆಂಕಟಾಚಲಯ್ಯ ವಹಿಸಲಿದ್ದು ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ತಾಲ್ಲೂಕಿನ ಮಾಜಿ ಶಾಸಕರು ಆದ ಟಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

     

    ಪತ್ರಿಕಾ ಗೋಷ್ಠಿಯಲ್ಲಿ ತೆಂಗು ನಾರೀನ ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು ,ಜೆಡಿಎಸ್ ಹಿರಿಯ ಮುಖಂಡ ಎಚ್.ಅಪ್ಪಯ್ಯಣ್ಣ , ಎ.ನರಸಿಂಹಯ್ಯ, ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ಕಾಂಗ್ರೆಸ್ ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಮುಖಂಡರಾದ ಕೆಂಪೇಗೌಡ, ರಾಮಕೃಷ್ಣ, ರಾಜಗೋಪಾಲ್, ಮುನಿರಾಜು, ತಳವಾರ್ ನಾಗರಾಜ್, ನಾರಾಯಣಪ್ಪ, ವೆಂಕಟಾಚಲಪತಿ ಮತ್ತಿತರರು ಉಪಸ್ಥಿತರಿದ್ದರು

  • ಸಿರಿಧಾನ್ಯ ಪಾಕ ಸ್ಪರ್ಧೆ : ಸ್ಪರ್ಧಿಸಲು ಆಸಕ್ತರಿಗೆ ಅವಕಾಶ

    ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೃಷಿ ಇಲಾಖೆ ವತಿಯಿಂದ ಅಂತರ ರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಡಿಸೆಂಬರ್ 19 ರಂದು ಮಧ್ಯಾಹ್ನ 12.00 ಗಂಟೆಗೆ ಸಿರಿಧಾನ್ಯ ಪಾಕ ಸ್ಪರ್ಧೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣ, ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದೆ.

        ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಾರ್ವಜನಿಕರೂ ಭಾಗವಹಿಸಬಹುದು ಸಿರಿಧಾನ್ಯ ಸಸ್ಯಾಹಾರಿ ತಿನಿಸುಗಳಿಗೆ ಮಾತ್ರ ಅವಕಾಶ , ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯ ತಿನಿಸು ಪ್ರದರ್ಶಿಸಲು ಅವಕಾಶವಿದ್ದು ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ತಯಾರಿಸಿದ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳ ಪ್ರದರ್ಶನ ತೋರಿಕೆ (presentation/ appearance), ರುಚಿ, ಸುವಾಸನೆಗಳ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಹಾಗೂ ಪ್ರತಿ ಸ್ಪರ್ಧಿ ಒಂದು ತಿನಿಸು (ಸಿಹಿ ಅಥವಾ ಖಾರ) ತಯಾರಿಸಲು ಮಾತ್ರ ಅವಕಾಶವಿದೆ. ಆಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಡಿಸೆಂಬರ್ 18 ರೊಳಗೆ ಸಂಬಂಧಪಟ್ಟ ತಾಲ್ಲೂಕಿನ ಇ-ಮೇಲ್ ಗೆ ಕಳುಹಿಸಬೇಕು.

    ಇ-ಮೇಲ್ ವಿಳಾಸ adadevanahalli@gmail.com (ದೇವನಹಳ್ಳಿ), adaagridbp@yahoo.in (ದೊಡ್ಡಬಳ್ಳಾಪುರ), ada10hoskote@gmail.com (ಹೊಸಕೋಟೆ), adanelamangala@gmail.com (ನೆಲಮಂಗಲ).

        ಜಿಲ್ಲಾ ಮಟ್ಟದ ಪ್ರಥಮ ಸ್ಥಾನಕ್ಕೆ ಸಿಹಿ ತಿನಿಸು ಅಥವಾ ಖಾರ ತಿನಿಸುಗಳಿಗೆ ತಲಾ ರೂ.5000/- ಬಹುಮಾನ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಡಿಸೆಂಬರ್ 23 ರಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಬದ್ಧರಾಗಿರಬೇಕು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮೊಬೈಲ್ ಸಂಖ್ಯೆ 8277929923 ಕ್ಕೆ ಸಂಪರ್ಕಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅರ್ಕಾವತಿ ನದಿ ಸಂಪೂರ್ಣ ಕಲುಷಿತ : ಶುದ್ಧೀಕರಿಸಲು ರೈತರ ಹೋರಾಟಗಾರರ ಆಗ್ರಹ

    ದೊಡ್ಡಬಳ್ಳಾಪುರ : ಸ್ಥಳೀಯ ಕಾರ್ಖಾನೆಗಳ ಕಲುಷಿತ ನೀರು ನೇರವಾಗಿ ಆರ್ಕವತಿ ನದಿಯ ಜಲಮೂಲಕ್ಕೆ ಸೇರುತ್ತಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹರಿಯುವ ಅರ್ಕಾವತಿ ನದಿಗೆ ಅತಿ ಹೆಚ್ಚು ಕಲುಷಿತ ನದಿಯೆಂಬ ಹಣೆಪಟ್ಟಿ ಸಿಕ್ಕಿದೆ, ಈ ಪರಿಸ್ಥಿತಿಗೆ ಅಧಿಕಾರಿಗಳ ವೈಫಲ್ಯ ಕಾರಣ ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದರು

     

    ಬೆಳಗಾವಿ ಅಧಿವೇಶನದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಕೈಗಾರಿಕೆ ಮತ್ತು ಒಳಚರಂಡಿ ತ್ಯಾಜ್ಯದಿಂದ 12 ನದಿಗಳು ಕಲುಷಿತಗೊಂಡಿದ್ದು, 2022-23ನೇ ಸಾಲಿನಲ್ಲಿ ಮತ್ತೆ ನಾಲ್ಕು ನದಿಗಳು ಸೇರ್ಪಡೆಯಾಗುವ ಮೂಲಕ ರಾಜ್ಯದಲ್ಲಿ 16 ನದಿಗಳು ಕಲುಷಿತಗೊಂಡಿದೆ, ಇವುಗಳಲ್ಲಿ ಅರ್ಕಾವತಿ ನದಿ ಅತಿ ಹೆಚ್ಚು ಕಲುಷಿತಗೊಂಡಿರುವ ನದಿ, ಅರ್ಕಾವತಿ ನದಿಯಲ್ಲಿ ಬಿಒಪಿ ಸಾಂದ್ರತೆ ಪ್ರತಿ ಲೀಟರ್ ನಲ್ಲಿ ಮಿ.ಗ್ರಾಂ ಗಿಂತ ಹೆಚ್ಚಿದ್ದು ಬಳಕೆಗೂ ಸಹ ಯೋಗ್ಯವಾಗಿಲ್ಲ ಎಂಬ ವರದಿಗಳು ಬಂದಿದೆ ಎಂದು ತಿಳಿಸಿದ್ದು

    ಈ ಕುರಿತು ರೈತ ಹೋರಾಟಗಾರರಾದ ವಸಂತ್ ಕುಮಾರ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ಪ್ರಮುಖ ನದಿ ಅರ್ಕಾವತಿ, ಕೈಗಾರಿಕಾ ಪ್ರದೇಶಗಳು ಮತ್ತು ನಗರದ ಒಳಚರಂಡಿ ನೀರು ಶುದ್ದೀಕರಣವಾಗದೆ ನೇರವಾಗಿ ನದಿಗೆ ಸೇರುತ್ತಿರುವುದು ಅರ್ಕಾವತಿ ನದಿಯ ಈ ಸ್ಥಿತಿಗೆ ಕಾರಣವಾಗಿದೆ, ಅರ್ಕಾವತಿ ನದಿ ಅತಿಹೆಚ್ಚು ಕಲುಷಿತಗೊಳ್ಳಲು ದೊಡ್ಡಬಳ್ಳಾಪುರ ನಗರಸಭೆಯ ಪೌರಾಯುಕ್ತರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೇ ಪ್ರಮುಖ ಕಾರಣ, ಅರ್ಕಾವತಿ ನದಿಯ ಸಂರಕ್ಷಣೆಗಾಗಿ ಅರ್ಕಾವತಿ ನದಿ ಹೋರಾಟ ಸಮಿತಿ ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದೆ, 10 ವರ್ಷಗಳ ಹೋರಾಟಕ್ಕೂ ಯಾವುದೇ ಪ್ರತಿಫಲ ಸಿಕ್ಕಿಲ್ಲ, ಇಲ್ಲಿಯವರೆಗೂ STP ಘಟಕ ಸ್ಫಾಪನೆಯಾಗಿಲ್ಲ, ಬಾಶೆಟ್ಟಿಹಳ್ಳಿ ಕೈಗಾರಿಕ ಪ್ರದೇಶದ ವಿಷಕಾರಿ ನೀರು ನದಿಯ ಒಡಲು ಸೇರುತ್ತಿರುವುದು ಅರ್ಕಾವತಿ ನದಿಯ ನೀರು ವಿಷಕಾರಿಯಾಗಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

    ಹೋರಾಟಗಾರ ವಿಜಯ್ ಕುಮಾರ್ ಮಾತನಾಡಿ ಅರ್ಕಾವತಿ ನದಿ ಕಲುಷಿತಗೊಂಡಿರುವುದರಿಂದ ನದಿ ಸುತ್ತಮುತ್ತಲಿನ ಹಳ್ಳಿಗಳ ಅಂತರ್ಜಲ ನೀರು ಸಹ ವಿಷವಾಗಿದೆ, ಬೋರ್ ವೇಲ್ ನೀರಿನಲ್ಲಿ ಅಪಾಯಕಾರಿ ಖನಿಜಾಂಶ ಪತ್ತೆಯಾಗಿದ್ದು, ಅಂತರ್ಜಲದ ನೀರು ಬಳಕೆಗೂ ಯೊಗ್ಯವಲ್ಲ ಎಂಬ ವರದಿ ಬಂದಿದೆ, ಇದರಿಂದ ಆತಂಕಗೊಂಡಿರುವ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಎತ್ತಿನಹೊಳೆ ನೀರನ್ನು ಬಳಸಲಾಗುತ್ತಿದೆ . ಶುದ್ಧೀಕರಿಸದೆ ನದಿಯ ಮೂಲಗಳಿಗೆ ನೀರು ಬಿಟ್ಟಿರುವ ಕಾರಣ ಅಂತರ್ಜಲ ಸಂಪೂರ್ಣ ಹಾಳಾಗಿದೆ ಇನ್ನಾದರೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದರು

  • ಅಮೋಘವರ್ಷ ಕೋಚಿಂಗ್ ಸೆಂಟರ್ 10ನೇ ವಾರ್ಷಿಕೋತ್ಸವದ ಆಚರಣೆ : ವಿಶೇಷ ಕೊಡುಗೆಯೊಂದಿಗೆ ದಾಖಲಾತಿಗಳು ಪ್ರಾರಂಭ

    ರಾಜ್ಯದಲ್ಲಿ ಮೊದಲ ಬಾರಿಗೆ ಎಸ್ ಸಿ /ಎಸ್ ಟಿ / ಒಬಿಸಿ ಗ್ರಾಮೀಣ ಪ್ರದೇಶದ ಬಡ ರೈತ ಮಕ್ಕಳ ಸಬಲೀಕರಣದ ದೃಷ್ಟಿಯಿಂದ,ಬೆಂಗಳೂರಿನ ವಿಜಯನಗರದ ಅಮೋಘವರ್ಷ ಕೋಚಿಂಗ್ ಸೆಂಟರ್ ಸಂಸ್ಥೆಯ ವತಿಯಿಂದ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಕೊಡುಗೆಯನ್ನು ರೂಪಿಸಲಾಗಿದೆ ಈ ವಿಶೇಷ ಕೊಡುಗೆಯನ್ನು ಸ್ಪರ್ಧಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ಮನವಿ ಮಾಡಿದೆ

    ಸತತ ಒಂಬತ್ತು ವರ್ಷಗಳ ಸಾರ್ಥಕ ಸೇವೆಯೊಂದಿಗೆ ಹತ್ತನೇ ವರ್ಷದ ಆಚರಣೆಯ ಪ್ರಯುಕ್ತ ಉಚಿತ ಕೆಎಎಸ್,ಪಿಎಸ್ಐ,ಪಿಡಿಒ, ಎಫ್ ಡಿ ಎ ಪರೀಕ್ಷೆಗಳಿಗೆ ಕೇವಲ 8,000 ಪ್ಯಾಕೇಜ್ ನ ವಿಶೇಷ ಕೊಡುಗೆಯನ್ನು ಅಮೋಘ ವರ್ಷ ಕೋಚಿಂಗ್ ಸೆಂಟರ್ ನೀಡುತ್ತಿದೆ.

    ತರಗತಿಗಳು ಇದೇ ಡಿಸೆಂಬರ್ 26ರಂದು ಆರಂಭವಾಗಲಿದೆ.

     

    ಎಲ್ಲಾ ರೀತಿಯ ಪರೀಕ್ಷೆಗಳಿಗೆ ದಾಖಲಾತಿಗಳು 12-12-2023ರಿಂದ26-12-2023ರ ವರೆಗೆ ಮಾತ್ರ ಸೀಮಿತವಾಗಿದ್ದು. ಒಂದು ವರ್ಷದ ಅವಧಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ

    ವಿಶೇಷ :

    ° ಉಚಿತ 40 ಸರಣಿ ಕಿರುಪರೀಕ್ಷೆಗಳು

    ° ಸಂವಾದ ಹಾಗೂ ವಿಷಯದ ಚರ್ಚೆಗೆ ಅವಕಾಶ

    ° ವಸತಿ ಹಾಗೂ 24*7 ಗ್ರಂಥಾಲಯ ವ್ಯವಸ್ಥೆ ಇದೇ ಎಂದು ಸಂಸ್ಥೆಯು ತಿಳಿಸಿದೆ.

  • ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 7 ವಿಧ್ಯಾರ್ಥಿಗಳು ಆಯ್ಕೆ : ಹಳೆ ವಿಧ್ಯಾರ್ಥಿಗಳ ಸಂಘದ ವತಿಯಿಂದ ಅಭಿನಂದನೆ

    ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 7 ವಿದ್ಯಾರ್ಥಿಗಳು ರಾಷ್ಟೀಯ ಹಾಗೂ ರಾಜ್ಯ ಮಟ್ಟದ ವಿವಿಧ ಕ್ರೀಡೆಗಳಿಗೆ ಆಯ್ಕೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಭಿನಂದನೆ.

     

    ತಾವು ಓದಿದ ಕಾಲೇಜಿನ ವಿಧ್ಯಾರ್ಥಿಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾಗಿರುವ ಸುದ್ದಿ ತಿಳಿದ ಹಳೆ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹೆಚ್.ವಿ. ರವರು ಸಂಘದ ಪರವಾಗಿ ತಲಾ ಮೂರು ಸಾವಿರ ರೂಪಾಯಿಗಳ ಚೆಕ್ ಅನ್ನು 7 ವಿಧ್ಯಾರ್ಥಿಗಳಿಗೆ ನೀಡುವ ಮೂಲಕ ಕ್ರೀಡಾಪಟುಗಳು ಮುಂದೆ ತಾವು ಭಾಗವಹಿಸುತ್ತಿರುವ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಜಯಶೀಲರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೀರ್ತಿ ತರಬೇಕೆಂದು ಹಾರೈಸಿದರು .

     

    ಈ ಸಂದರ್ಭದಲ್ಲಿ ಹಳೆ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಮಾತನಾಡಿ ನಾವು ವ್ಯಾಸಂಗ ಮಾಡಿದ ಕಾಲೇಜಿನ ವಿಧ್ಯಾರ್ಥಿಗಳು ಇಂದು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಿರು ಧನ ಸಹಾಯ ಮಾಡಲಾಗಿದೆ .ಕ್ರೀಡಾಪಟುಗಳ ಗೆಲುವಿನಿಂದ ನಮ್ಮ ತಾಲ್ಲೂಕಿಗೆ ಹಾಗೂ ನಾವು ವ್ಯಾಸಂಗ ಮಾಡಿದ ಕಾಲೇಜಿಗೆ ಕೀರ್ತಿ ಹೆಚ್ಚಲಿ ಎಂದು ಹಾರೈಸಿದರು.

     

    ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸದಾಶಿವ ರಾಮಚಂದ್ರ ಗೌಡ ರವರು. ಪ್ರಾಧ್ಯಾಪಕರಾದ ಶ್ರೀನಿವಾಸ್.ಹಾಗೂ ಹಳೆ ವಿಧ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಮಮತ.ಎಸ್. ಶಾಂತ ಪಾಟೀಲ್.ಮಹೇಶ್.ಮಂಜುನಾಥ್

  • ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ : ಸಂಘದ ನೂತನ ಅಧ್ಯಕ್ಷರಾಗಿ ಸಿ.ಕೆ.ದೇವರಾಜ್ ಅವಿರೋಧವಾಗಿ ಆಯ್ಕೆ .

    ದೊಡ್ಡಬಳ್ಳಾಪುರ : ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಕೆ.ದೇವರಾಜ್ ಅವಿರೋಧವಾಗಿ ಆಯ್ಕೆ ಎಂದು ಚುನಾವಣಾಧಿಕಾರಿ ಸಿಡಿಒ ಮಧವರೆಡ್ಡಿ ತಿಳಿಸಿದ್ದಾರೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ನಡೆದಿದ್ದು ಸಂಘದ ನೂತನ ಅಧ್ಯಕ್ಷರಾಗಿ ಸಿ.ಕೆ.ದೇವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಉಪಾಧ್ಯಕ್ಷರಾಗಿ ಮುನಿಆಂಜಿನಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    14 ತಿಂಗಳ ಅವಧಿಗೆ ಸಂಬಂಧಿಸಿದಂತೆ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಸಿ.ಕೆ.ದೇವರಾಜ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮುನಿಆಂಜಿನಪ್ಪ ನಾಮಪತ್ರವನ್ನ ಸಲ್ಲಿಸಿದ್ದರು. ಸಂಘದ ಬೇರೆ ಯಾವ ಸದಸ್ಯರು ನಾಮಪತ್ರಗಳನ್ನು ಸಲ್ಲಿಸದ ಕಾರಣ ಎಲ್ಲಾ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿ ಸಿಡಿಒ ಮಾಧವರೆಡ್ಡಿ ತಿಳಿಸಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ನಿರ್ದೇಶಕರು, ಗಣ್ಯರು ಸನ್ಮಾನಿಸಿ ಸಿಹಿಹಂಚಿ ಸಂಭ್ರಮಿಸಿ ಗೌರವಿಸಿದರು.

     

    ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷ ಸಿ.ಕೆ.ದೇವರಾಜ್ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘವು ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಉನ್ನತ ಸ್ಥಾನಮಾನದಲ್ಲಿದೆ. ಈಗಾಗಲೇ 4 ಕೋಟಿ 8ಲಕ್ಷದ 50 ಸಾವಿರದವರೆಗೆ ಬೆಳೆ ಸಾಲವನ್ನು ರೈತರಿಗೆ ನೀಡಲಾಗಿದ್ದು. ಈ ರೀತಿಯ ಸಾಲವನ್ನು ಮುಂದೆ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೆಚ್ಚು ಮಾಡಲಾಗುವುದು, ಸಂಘದ ಅಡಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಮಾಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು

    ನಂತರ ಕರ್ನಾಟಕ ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಸ್.ಎಲ್.ವೆಂಕಟೇಶ್ ಬಾಬು ಮಾತನಾಡಿ, ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿರುವ ಸಿ ಕೆ ದೇವರಾಜ್ ಹಗು ಉಪಾಧ್ಯಕ್ಷ ಮುನಿ ಅಂಜಿನಪ್ಪ ಅವರಿಗೆ ಅಭಿನಂದನೆಗಳು , ನಮ್ಮ ಸಂಘದ ವತಿಯಿಂದ ರೈತರಿಗೆ ಬೇಕಾಗುವ ರಸಗೊಬ್ಬರಗಳು, ಬಿತ್ತನೆ ಬೀಜಗಳು ಸೇರಿದಂತೆ ಇತರೆ ಸವಲತ್ತುಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಈ ವೇಳೆ ಜಿ.ಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ, ಗೌರೀಶ್ ನರಸಿಂಹಯ್ಯ ಉದಯ ಆರಾಧ್ಯ ಕುರುವಿಗೆರೆ ಮುರುಳಿ ಮಧು ಹಾಗೂ ಸಂಘದ ನಿರ್ದೇಶಕರು, ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಜನಧ್ವನಿ ವೇದಿಕೆಯಿಂದ ಸ್ಥಳೀಯ ಸಮಸ್ಯೆಗಳ ಸಮಾಲೋಚನಾ ಸಭೆ : ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡಲು ವೇದಿಕೆ ಮುಖಂಡರ ನಿರ್ಣಯ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿಯ ಬಾಶೆಟ್ಟಹಳ್ಳಿ ಗ್ರಾಮದ ದೊಡ್ಡಮ್ಮ ದೇವಾಲಯದ ಬಳಿ ಜನದ್ವನಿ ವೇದಿಕೆಯ ಮುಖಂಡರು ಸ್ಥಳೀಯ ಸಮಸ್ಯೆಗಳನ್ನು ಕುರಿತು ಸಮಾಲೋಚನಾ ಸಭೆ ನಡೆಸಿದರು ಈ ಸಭೆಯಲ್ಲಿ

    ಜನಧ್ವನಿ ವೇದಿಕೆಯು ಜನ ಸಾಮಾನ್ಯರ ಧ್ವನಿಯಾಗಿ ಜನರ ಸಮಸ್ಯೆಗಳಿಗೆ ಸ್ವಂದಿಸುವಂತೆ ಮುಖಂಡರು ನಿರ್ಣಯಿಸಿದರು

    ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಜನಧ್ವನಿ ವೇದಿಕೆಯ ಮುಖಂಡರಾದ ನಾರಾಯಣ ಸ್ವಾಮಿ ಮಾತನಾಡಿ ಭಾಷೆಟ್ಟಿಹಳ್ಳಿ ಪಂಚಾಯಿತಿಯು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದ ಪರಿಣಾಮವಾಗಿ ಜನಸಾಮಾನ್ಯರಿಗೆ ಕಂದಾಯ ಮತ್ತು ನೀರಿನ ತೆರಿಗೆಗಳು ದುಪ್ಪಟ್ಟು ಮಾಡಿರುವ ಕಾರಣ ತೆರಿಗೆ ಕಟ್ಟಲು ಜನಸಾಮಾನ್ಯರಿಗೆ ತುಂಬಾ ಕಷ್ಟ ವಾಗುತ್ತಿದೆ. ಅವೈಜ್ಞಾನಿಕ ವಾರ್ಡುಗಳ ವಿಂಗಡಣೆ ಪರಿಣಾಮ ಚುನಾವಣೆಗಳು ನಡೆಯದೇ ಅಭಿವೃದ್ಧಿ ಕುಂಠಿತವಾಗಿದೆ . ಹೊರಗುತ್ತಿಗೆ ಅಧಿಕಾರಿಗಳು ಈಗಲೂ ಅಕ್ರಮ ಖಾತೆ ಮಾಡಿಸಿ ಕೊಡುತ್ತೇನೆ ಎಂದು ಜನ ಸಾಮಾನ್ಯರಿಗೆ ವಂಚಿಸುತ್ತಿದ್ದು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡದ ಅಧಿಕಾರಿಗಳ ನೆಡೆಯಿಂದ ವಾರ್ಡುಗಳ ರಸ್ತೆ , ಸ್ವಚ್ಛತೆ ಹದಗೆಟ್ಟಿದೆ ಈ ರೀತಿಯ ಹತ್ತು ಹಲವು ಸಮಸ್ಯೆಗಳನ್ನು ಕುರಿತು ಚರ್ಚಿಸಲಾಗಿದೆ ಈ ಕುರಿತು ಸಮಾಲೋಚನೆ ಮಾಡಿದ ಜನಧ್ವನಿ ವೇದಿಕೆಯ ಮುಖಂಡರು ಹೋರಾಟಕ್ಕೆ ಮುಂದಾಗಲು ನಿರ್ಣಹಿಸಿದ್ದೇವೆ ಎಂದು ತಿಳಿಸಿದರು

     

    ಸಭೆಯಲ್ಲಿ ಬಾಶೆಟ್ಟಹಳ್ಳಿ ಮದು, ಮುರಳಿ, ಶಿವು, ಗಂಗರಾಜು, ಹರ್ಷಿತ ನಾಯಕ ಬಿಸವಹಳ್ಳಿ ನಾರಾಯಣಸ್ವಾಮಿ, ನವೀನ್ ಎಳ್ಳುಪುರ ಮಹೇಶ.ಓಬದೇನಹಳ್ಳಿ ಮುನಿರಾಜ್, ರಾಜೇಂದ್ರ, ಅರಹಳ್ಳಿ ಗುಡದಹಳ್ಳಿ ರವಿ, ವೆಂಕಟೇಶ್, ಕಸುವನಹಳ್ಳಿ ಜಯಸಿಂಹ, ರಾಜೇಶ್. ಮತ್ತಿತರರು ಉಪಸ್ಥಿತರಿದ್ದರು