Blog

  • ಇಮೇಲ್ ಮೂಲಕ ಶಾಲೆಗಳಿಗೆ ಬಾಂಬ್ ಬೆದರಿಕೆ : ಆತಂಕಪಡುವ ಅಗತ್ಯವಿಲ್ಲ ಬಿ ದಯಾನಂದ್

    ಬೆಂಗಳೂರು : ಬೆಂಗಳೂರು ನಗರದ 15ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತಕರು khaarijjitas@bebble.com ಎಂಬ ಇ- ಮೇಲ್ ಮೂಲಕ ಬಸವೇಶ್ವರ ನಗರದ ನ್ಯಾಪಲ್, ಸೇರಿದಂತೆ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ

     

    ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಆತಂಕಗೊಂಡ ಪೋಷಕರು ಶಾಲೆಯ ಬಳಿ ಬಂದಿದ್ದಾರೆ.

     

    ಈ ಬಾಂಬ್ ಬೆದರಿಕೆ ಹಿನ್ನಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ರವರ ನೇತೃತ್ವದಲ್ಲಿ ಪ್ರತ್ಯೇಕ ಎರಡು ತಂಡಗಳ ರಚನೆಮಾಡಿ ತನಿಖೆ ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

    ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ. ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ ಈ ಹಿನ್ನಲೆ ಶಾಲೆಗಳಿಗೆ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳವನ್ನು ಕಳಿಸಿದ್ದೇವೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಲಾಗುತ್ತಿದೆ . ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

  • ಸತ್ಯಾಂಶ ತಿಳಿಯದೆ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ – ಕಾಂಗ್ರೆಸ್ ಮುಖಂಡ ರುದ್ರಮೂರ್ತಿ

    ಕೆಲ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಆರೋಪ ಮಾಡಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಲಾಗಿದೆ .ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಸತ್ಯ ಅರಿತು ನಂತರ ಅರೋಪಿಸಬೇಕಿತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸೇನೆ ವತಿಯಿಂದ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡ ರುದ್ರಮೂರ್ತಿ ತಿಳಿಸಿದರು

     

    ನವೆಂಬರ್ 29 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮಕ್ಕೆ ಸೇರಿರುವ ಗ್ರಾಮಠಾಣಾ ಸ್ಥಳವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಲಾಗಿದೆ ಎಂಬ ಆರೋಪ ಒಳಗೊಂಡಂತೆ ಹಲವು ಆರೋಪಗಳನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ರುದ್ರಮೂರ್ತಿ ಹಾಗೂ ಪಿಡಿಓ ಮುನಿರಾಜು ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬಸವರಾಜ್ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಸಿದ್ದರು

     

    ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರುದ್ರಮೂರ್ತಿ ಪ್ರತಿಭಟನೆ ಪೂರ್ವ ನಿಯೋಜಿತವಾಗಿದ್ದು ಬೇಕಂತಲೇ ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ . ಆರೋಪಿಸಿರುವ ಬೂಚನಹಳ್ಳಿ ಸ್ಥಳವು ಲಿಂಗಯ್ಯ ಮತ್ತು ಮುನಿಮುತ್ತಯ್ಯ ಎಂಬುವರ ಹೆಸರಿನಲ್ಲಿದೆ .ಪ್ರತಿಭಟನಾಕಾರರ ಬಳಿ ನಿಖರ ದಾಖಲಾತಿಗಳಿಲ್ಲದೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ . ಮಣ್ಣು ಮಾರಿಕೊಂಡು ಜೀವನ ನಡೆಸುವ ಸ್ಥಿತಿ ನಮಗಿನ್ನೂ ಬಂದಿಲ್ಲ ನಾನು ಚಿಕ್ಕಕಾಳೆನಹಳ್ಳಿ ಕೆರೆಯ ಮಣ್ಣನ್ನು ಯಾರಿಗೂ ಮಾರಾಟ ಮಾಡಿಲ್ಲ ಈ ಕುರಿತು ಸಾಕ್ಷಾಧಾರಗಳಿದ್ದಲ್ಲಿ ನೀಡಲಿ ಎಂದರು ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಬಿಬಿಎಂಪಿ ಯಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ 17 ಲಕ್ಷ ರೂಪಾಯಿ ಹಣ ಗ್ರಾಮ ಪಂಚಾಯಿತಿ ಖಾತೆಯಲ್ಲಿ ಇತ್ತು.ಅದು ಈಗ ಏನಾಗಿದೆ . ಗ್ರಾಮ ಪಂಚಾಯಿತಿಯ ಯಾವ ಅಭಿವೃದ್ಧಿಗೆ ಅನುದಾನಗಳನ್ನು ಬಳಸಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಕೋನೇನಹಳ್ಳಿ ಗಾಣಗಪ್ಪನ ಕಟ್ಟೆ ದುರಸ್ತಿಗೆ ಕ್ರಿಯಾ ಯೋಜನೆಯಲ್ಲಿ 50ಸಾವಿರ ಆಗಿದ್ದು ಇನ್ನೂ ಬಿಲ್ ಸಹ ಆಗಿರುವುದಿಲ್ಲ ಈ ವಿಚಾರವಾಗಿ 10 ಲಕ್ಷ ಎಂದು ಆರೋಪಿಸಿದ್ದಾರೆ ..

    ನಮ್ಮಿಂದ ಪಂಚಾಯಿತಿಗೆ ಯಾವುದೇ ಮೋಸ ಆಗಿಲ್ಲ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ವೆಸಗುವುದು ಸರಿಯಲ್ಲ ಮೊದಲು ಸತ್ಯಂಶ ತಿಳಿಯಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

  • 44 ವರ್ಷದ ವೆಂಕಟೇಶ್ ನೇಣಿಗೆ ಶರಣು: ನಗರ ಭಾಗದ ಕಚೇರಿ ಪಾಳ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ದೊಡ್ಡಬಳ್ಳಾಪುರ: ನಿರ್ಮಾಣ ಹಂತದ ಮನೆಯ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ವೈರ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕಛೇರಿಪಾಳ್ಯದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

     

    ವೆಂಕಟೇಶ್(44) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಲಹಂಕದ ಲಕ್ಷ್ಮೀಪುರದಲ್ಲಿ ಮೃತರ ಹೆಂಡತಿ, ಮಕ್ಕಳು ವಾಸವಾಗಿದ್ದರು. ಮಗ್ಗದ ಕೆಲಸ‌ ಮಾಡಿಕೊಂಡು ಕಛೇರಿಪಾಳ್ಯದಲ್ಲಿಯೇ ವೆ‍ಂಕಟೇಶ್ ಮನೆ ಕಟ್ಟುತ್ತಿದ್ದರು.

     

    ಗುರುವಾರ ಬೆಳಿಗ್ಗೆಯಿಂದಲೇ ಕೈಯಲ್ಲಿ ವೈರ್ ಹಿಡಿದುಕೊಂಡು ಓಡಾಡುತ್ತಿದ್ದರು. ಮಧ್ಯಾಹ್ನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

     

    ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆತನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ರೈತರ ಗೋಳು ಕೇಳುವವರಾರು …? : ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ , ಬೀರಸಂದ್ರ, ಬೈರದೆನಹಳ್ಳಿ, ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮಗಳಲ್ಲಿ 118-37ಗುಂಟೆ ವಿಸ್ತೀರ್ಣದ ಜಮೀನನ್ನು ಕೆ. ಐ. ಎ. ಡಿ. ಬಿ. ಕಾಯ್ದೆ ಅನ್ವಯ ಪರಿಹಾರ ನಿಗದಿ ಪಡಿಸಲು ದಿನಾಂಕ ನೆವೆಂಬರ್ 29 ರಂದು ನೆಡೆದ ಸಭೆಯ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿ ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಕರೆಯಲಾಗಿದ್ದು

    ಸಂಪರ್ಕ ರಸ್ತೆಯ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸರಿಯಾದ ಬೆಲೆ ನೀಡದೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳ ವಿರುದ್ಧ ಬೀರಸಂದ್ರ, ಬೈರದೇನಹಳ್ಳಿ, ಹಾಗೂ ನಾಗದೇನಾಹಳ್ಳಿ ರೈತರು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು

    ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರಾದ ಆನಂದ್ ಮೂರ್ತಿ ಮಾತನಾಡಿ ಸರ್ಕಾರಿ ಅಧಿಕಾರಿಗಳು ನಮ್ಮ ಭೂಮಿಗೆ ಸರಿಯಾದ ಬೆಲೆ ಘೋಷಣೆ ಮಾಡದೆ ಫಲವತ್ತಾದ ನಮ್ಮ ಭೂಮಿಯನ್ನು ಕಸಿದು ಕೊಳ್ಳುತ್ತಿದ್ದಾರೆ ,ಸಂಪರ್ಕ ರಸ್ತೆಯ ಹೆಸರಿನಲ್ಲಿ ಮೋಸ ನಡೆಯುತ್ತಿದೆ. ನಮ್ಮ ಭೂಮಿಗೆ ಸರಿಯಾದ ಬೆಲೆ ನೀಡಲು ಮನಸಿಲ್ಲದ ಅಧಿಕಾರಿಗಳು ಹಲವಾರು ಕಾರಣಗಳನ್ನು ಹೇಳಿ ಪಲಾಯನ ಮಾಡುತ್ತಿದ್ದಾರೆ ರೈತರ ಗೋಳನ್ನು ಕೇಳುವವರಿಲ್ಲ ರೈತರ ಪರ ಇರಬೇಕಾದ ಅಧಿಕಾರಿಗಳು ರೈತರ ವಿರುದ್ಧ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಶೋಚನೀಯ ಸಂಗತಿ ನೆನ್ನೆ ನೆಡೆದ ಸಭೆಗೆ ನಮ್ಮ ಬೆಂಬಲವಿಲ್ಲ ಎಂಬುದನ್ನು ಸ್ಪಷ್ಟವಾಗಿ ಈ ಮೂಲಕ ತಿಳಿಸುತ್ತೇವೆ .ಸರಿಯಾದ ಬೆಲೆ ನೀಡದೇ ನಮ್ಮ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂದರು . ಸಾಕಷ್ಟು ಬಾರಿ ಬೆಂಗಳೂರು ಕೆ ಐ ಎ ಡಿ ಬಿ ಕಛೇರಿಗೆ ದಾಖಲೆಗಳೊಂದಿಗೆ ಪರಿಹಾರದ ಹಣವನ್ನು ಪಡೆಯಲು ಮನವಿ ಮಾಡಿಕೊಂಡಿದ್ದರೂ ಸಹ ಅಧಿಕಾರಿಗಳ ವಿಳಂಬಧೋರಣೆಯಿಂದ ರೈತರಿಗಾಗುತ್ತಿರುವ ನಷ್ಟದ ಬಗ್ಗೆ ಯೋಚಿಸದ ಅಧಿಕಾರಿಗಳು ರೈತರಿಗೆ ಇಲ್ಲ ಸಲ್ಲದ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಕೇಳುತ್ತಿದ್ದಾರೆ ಭೂ ಸ್ವಾಧೀನಕ್ಕೆ ಒಳಪಟ್ಟ ಜಾಮೀನುಗಳ ಮಾರುಕಟ್ಟೆ ಹೊರತುಪಡಿಸಿ ವಾಣಿಜ್ಯೇತರ ಉದ್ದೇಶಕ್ಕಾಗಿ ಒಂದು ಗುಂಟೆ ಜಮೀನು 30 ರಿಂದ 40 ಲಕ್ಷದ ವರೆಗೂ ಸಹ ಮಾರಾಟವಾಗುತ್ತಿದ್ದು ಸದರಿ ಗ್ರಾಮಗಳ ಜಮೀನಿಗೆ ಸರಿಯಾದ ಬೆಲೆ ನೀಡಬೇಕೆಂದು ಮನವಿ ಮಾಡಿದರು .

    ಈ ಸಂದರ್ಭದಲ್ಲಿಗ್ರಾಮಸ್ಥರಾದ ನಾಗರಾಜು, ಮಂಜುನಾಥ್ ,ನರಸಪ್ಪ ಮತ್ತಿತರರು ಉಪಸ್ಥಿತರಿದ್ದರು

  • ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವುದೇ ನನ್ನ ಮುಖ್ಯ ಉದ್ದೇಶ – ಉದಯ್ ಸಿಂಗ್

    ದೊಡ್ಡಬಳ್ಳಾಪುರ : ವಿಧಾನಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆ ಮುಂದಿನ ವರ್ಷ 2024 ರ ಜೂನ್ ನಲ್ಲಿ ನಡೆಯಲಿದ್ದು ಈ ಸಂಬಂಧ ಮತದಾರರ ನೋಂದಣಿ ಕಾರ್ಯ ನಡೆದು ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ .ಮತದಾರರ ನೋಂದಣಿ ಪಟ್ಟಿ ಸೇರ್ಪಡೆಗೆ ಈವರೆಗೆ 67787 ಮಂದಿ ಪದವೀಧರರು ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ .ಎಂದು ಪದವೀಧರರ ಕ್ಷೇತ್ರದ ಅಭ್ಯರ್ಥಿ ಉದಯ್ ಸಿಂಗ್ ತಿಳಿಸಿದರು

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪದವೀಧರಕ್ಷೇತ್ರದ ಅಭ್ಯರ್ಥಿ ಉದಯ್ ಸಿಂಗ್ ಮಾತನಾಡಿ ಪದವೀಧರ ಜ್ವಲಂತ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಕಂಡುಕೊಳ್ಳುವ ಕಾರ್ಯ ಆಗಿಲ್ಲ ಎಂಬುದಕ್ಕೆ ಈ ಕ್ಷೇತ್ರಗಳಿಂದ ಆಯ್ಕೆಯಾದವರ ಇಚ್ಛಾಶಕ್ತಿ ಕೊರತೆಯೇ ಕಾರಣ ಪದವೀಧರ ಮತ್ತು ಶಿಕ್ಷಕರ ಮೂಲಕ ಆಯ್ಕೆಯಾಗುವ ಪದವೀಧರ ಕ್ಷೇತ್ರದ ಪ್ರತಿನಿಧಿ ಮೇಲೆ ಅಪಾರವಾದ ಜವಾಬ್ದಾರಿಗಳಿದ್ದು , ಆಯ್ಕೆಯಾದ ಸದಸ್ಯರು ಸರ್ಕಾರದ ಮಟ್ಟದಲ್ಲಿ ಪದವೀಧರರ ಹಿತರಕ್ಷಣೆ ಕಾಯುವ ಜೊತೆಗೆ ಅವರ ಸಮಸ್ಯೆಗಳನ್ನು ,ಬೇಡಿಕೆಗಳನ್ನು ಈಡೇರಿಸುವ ಸರ್ಕಾರ ಮತ್ತು ತಾವು ಪ್ರತಿನಿಧಿಸುತ್ತಿರುವ ಸುಶಿಕ್ಷಿತ ವರ್ಗದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾಗಿರುತ್ತದೆ.ಪದವೀಧರರ ಪರ ನಿಲ್ಲಬೇಕೆಂಬ ದೃಷ್ಟಿಯಿಂದ ಈ ಚುನಾವಣೆಯನ್ನು ಒಂದು ಆಂದೋಲನದ ಮಾದರಿಯಲ್ಲಿ ನಡೆಸಬೇಕೆಂಬ ಗುರಿಯಿಟ್ಟುಕೊಂಡು ನಾನು ಕಣಕ್ಕಿಳಿಯುತ್ತಿದ್ದೇನೆ ಪದವೀಧರರು ಚುನಾವಣೆಯಲ್ಲಿ ಒಂದು ಅವಕಾಶ ನೀಡುವಂತೆ ಹಾಗೂ ಇಲ್ಲಿಯ ವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡದ ಪದವಿಧರಿಗೆ ಕೂಡಲೇ ಅರ್ಜಿ ಸಲ್ಲಿಕೆ ಮಾಡಿ ಹೆಸರು ಸೇರಿಸಿಕೊಳ್ಳಿ ಎಂದು ಮನವಿ ಮಾಡಿದರು

  • ನಕಲಿ ದಾಖಲಾತಿ ಸೃಷ್ಟಿಸಿ ಭೂಕಂಬಳಿಕೆ ಆರೋಪ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಡಿಎಸ್ಎಸ್ ಮನವಿ

    ದೊಡ್ಡಬಳ್ಳಾಪುರ: ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬೂಚನಹಳ್ಳಿ ಗ್ರಾಮದ ಗ್ರಾಮ ಠಾಣಾ ಜಾಗವನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು, ಭೂ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿ ರುದ್ರಮೂರ್ತಿ ಹಾಗೂ ಬೋಗಸ್ ಇ ಖಾತಾ ಮಾಡಿಕೊಡಲಾಗಿದೆ ಎಂಬ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಿಡಿಒ ಮುನಿರಾಜು ರವರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ನಡೆಸಲಾಯಿತು

    ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರ ಪತಿ ರುದ್ರಮೂರ್ತಿ ಒಳಗೊಂಡಂತೆ ಪಿಡಿಒ ಮುನಿರಾಜು ವಿರುದ್ಧ ತನಿಖೆ ಕೈಗೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೋರಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

    ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜ್ ಮಾತನಾಡಿ
    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂಚನಹಳ್ಳಿ ದಲಿತ ಸಮುದಯಕ್ಕೆ ಸೇರಿದ ಗ್ರಾಮಠಾಣಾ ಜಾಗವನ್ನು ಮಾಜಿ ಅಧ್ಯಕ್ಷರ ಪತಿ ರುದ್ರಮೂರ್ತಿ ಎಂಬುವರು ಪಿಡಿಒ ಮುನಿರಾಜು ರವರಿಗೆ ಹಣದ ಆಮಿಷ ಒಡ್ಡಿ ನಕಲಿ ದಾಖಲೆ ಸೃಷ್ಟಿ ಮಾಡಿರುತ್ತಾರೆ ,ಹಾಗೂ ನಕಲಿ ದಾಖಲೆಯ ಮೇಲೆ ಸದರಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿರುತ್ತಾರೆ .ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಮಂಜೂರಾಗಿದ್ದ ಹಲವು ಅನುದಾನಗಳ ದುರ್ಬಳಕೆ ಮಾಡಲಾಗಿದೆ ಸಕ್ಕರೆ ಗೊಲ್ಲಹಳ್ಳಿ ಗ್ರಾಮದ ಪರಿಶಿಷ್ಠ ಕಾಲೋನಿಯಲ್ಲಿ ಒಳಚರಂಡಿ ಕಾಮಗಾರಿ ಕಳಪೆ ಮಾಡಲಾಗಿದ್ದು ಕೂಡಲೇ ಗುಣಮಟ್ಟ ಪರಿಶೀಲನೆ ಆಗಬೇಕಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಕಳೇನಹಳ್ಳಿ ಕೆರೆಯಲ್ಲಿ ಮಣ್ಣು ಮಾರಾಟ ಮಾಡಲಾಗುತ್ತಿದೆ ಕೂಡಲೇ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತನಿಖೆ ಕೈಗೊಂಡು ತಪ್ಪು ಮಾಡಿದವರಿಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು

    ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಬಸವರಾಜು,ನೆಲಮಂಗಲ ತಾಲ್ಲೂಕು ಸಂಚಾಲಕರಾದ ಬರದಿ ಹನುಮಂತರಾಯಪ್ಪ,ಜಿಲ್ಲಾ ಸಂಚಾಲಕರಾದ ದೊಡ್ಡಯ್ಯ ಲಿಂಗಪುರ, ಜಿಲ್ಲಾ ಸಂಘಟನಾ ಸಂಚಾಲಕರಾದ ನರೇಂದ್ರ ಮೂರ್ತಿ ಮಾಡೇಶ್ವರ,ಆನಂದ್ ಸಕ್ಕರೆಗೊಲ್ಲಹಳ್ಳಿ,ಹನುಮಂತಯ್ಯ, ಹನುಮಯ್ಯ, ರಾಮು ನೇರಳೆಘಟ್ಟ , ಮಹಿಳಾ ಸಂಚಾಲಕರಾದ ಕಮಲಮ್ಮ,  ನಾಗರತ್ನಮ್ಮ, ಸರಸ್ವತಿ, ರತ್ನಮ್ಮ ,ಚಲವಾದಿ ಮಹಾಸಭಾ ಅಧ್ಯಕ್ಷರಾದ ಉದಯಶಂಕರ್   ,  ಎಲ್ ಎನ್  ಮೂರ್ತಿ ಹಾಗು ಸ್ಥಳಿಯರು , ಗ್ರಾಮಸ್ಥರು ಉಪಸ್ಥಿತರಿದ್ದರು

  • ‘ಸ್ಪೆಷಲ್ ಜ್ಯೂರಿ ಅವಾರ್ಡ್ ‘ ಪ್ರಶಸ್ತಿಯನ್ನು ನೆಚ್ಚಿನ ನಟ ಶಂಕರ್ ನಾಗ್ ರವರಿಗೆ ಅರ್ಪಿಸಿದ ನಟ ನಿರ್ದೇಶಕ ರಿಷಬ್ ಶೆಟ್ಟಿ

    ಹೊಂಬಾಳೆ ಫಿಲಂಸ್‍ ನಿರ್ಮಾಣದ, ರಿಷಭ್‍ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ನಟ , ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ನಟ, ನಿರ್ದೇಶಕ ಶಂಕರ್ ನಾಗ್ ಅವರಿಗೆ ಅರ್ಪಿಸಿದ್ದಾರೆ. ಈ ಪ್ರಶಸ್ತಿಯು ಹಿಂದೆ ಶಂಕರ್ ನಾಗ್ ಅವರಿಗೆ ಸಂದಿತ್ತು.

    ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ “ಕಾಂತಾರ” ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ.

    ಇಂದು 54 ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ‘ ಸ್ಪೆಷಲ್ ಜ್ಯೂರಿ ಅವಾರ್ಡ್ ‘ ದೊರೆತ್ತಿದ್ದು, ಎಂದೂ ಮರೆಯಲಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ .1979ರಲ್ಲಿ ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಸಾರ್ ರವರಿಗೆ ‘ಒಂದಾನೊಂದು ಕಾಲದಲ್ಲಿ ‘ ಚಿತ್ರಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರೆತ್ತಿದ್ದು.ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತಸ ನೀಡಿದೆ.
    ಕಾಂತಾರವನ್ನು ನೋಡಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು, ಇದೀಗ ಕಾಂತಾರ ಅಧ್ಯಾಯ 1ಕ್ಕೂ ನೀಡುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.
    ಮತ್ತೊಮ್ಮೆ ಉತ್ತಮವಾದ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ.ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಆಭಾರಿ,ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ . ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ

  • ಬಗೆಹರಿಯದ ಟ್ರಾಫಿಕ್ ಸಿಗ್ನಲ್ ಸಮಸ್ಯೆ : ದಿನನಿತ್ಯ ವಾಹನ ಸವಾರರ ಪರದಾಟ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿ ಮಂದಿರ ಮುಂಭಾಗದ ಟ್ರಾಫಿಕ್ ಸಿಗ್ನಲ್ ಹಲವು ತಿಂಗಳು ಗಳಿಂದ ಕೆಟ್ಟು ನಿಂತಿದ್ದು ವಾಹನ ಸವಾರರ ಗೋಳು ಕೆಳದಂಥಾಗಿದೆ

    ನಾಲ್ಕು ರಸ್ತೆಗಳನ್ನು ಒಳಗೊಂಡಿರುವ ಈ ವೃತ ದಲ್ಲಿ ಅತಿಯಾದ ವಾಹನಗಳು ಚಲಿಸುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ಬೆಳಗಿನ ಸಮಯದಲ್ಲಿ ಶಾಲೆಗೆ ಹೋಗುವ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಬೇಗ ಹೋಗಬೇಕೆನ್ನುವ ಅತುರದಲ್ಲಿ ವಾಹನ ಸವಾರರು ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ಅಡ್ಡಾದಿಡ್ಡಿ ವಾಹನ ಚಲಾಯಿಸಲು ಮುಂದಾಗಿದ್ದು ಪಾದಚಾರಿ ರಸ್ತೆಯನ್ನು ಅಕ್ರಮಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ

    ಸಂಜೆ ಸಮಯದಲ್ಲಿ ಚಲಿಸುವ ಕಾರ್ಖಾನೆಗಳ ವಾಹನಗಳಿಗಂತು ಯಾವುದೇ ನಿಯಮವೇ ಇಲ್ಲ ಎಂಬಂತೆ ಸಾಗುತ್ತವೆ ಅತಿಯಾದ ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಸರಿಪಡಿಸಿದೆ ಇರುವುದಕ್ಕೆ ಕಾರಣ ಏನೆಂಬುದು ತಿಳಿಯದಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಟ್ರಾಫಿಕ್ ಸಿಗ್ನಲ್ ಸರಿಪಡಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ

  • ಅಡ್ಡಾದಿಡ್ಡಿ ವಾಹನ ನಿಲುಗಡೆ : ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಸಾರ್ವಜನಿಕ ಆಸ್ಪತ್ರೆ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಮುಂಬಾಗ ದ್ವಿಚಕ್ರ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ.
    ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದಲ್ಲಿ ನಿರ್ಮಾಣಗೊಂಡು ಸೇವೆಸಲ್ಲಿಸುತ್ತಿರುವ ಸರ್ಕಾರಿ ತಾಯಿ ಮತ್ತು ಮಗುವಿನ ಆಸ್ಪತ್ರೆ (ಸಾರ್ವಜನಿಕ ಆಸ್ಪತ್ರೆ) ಯಲ್ಲಿ ಸುಸರ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತಾಲ್ಲೂಕಿನ ಹಲವು ಭಾಗಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆ ಧಾವಿಸುವ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನ , ಕಾರು,ಆಟೋ , ಇನ್ನಿತರ ವಾಹನಗಳನ್ನು ಆಸ್ಪತ್ರೆಯ ಮುಂಭಾಗ ಅಡ್ಡಾದಿಡ್ಡಿ ನಿಲುಗಡೆ ಮಾಡುವ ಕಾರಣ ತುರ್ತು ಸೇವೆಗಳಗಾಗಿ ಬಳಸುವ ಆಂಬುಲೆನ್ಸ್ ವಾಹನಗಳು ಆಸ್ಪತ್ರೆಯ ಒಳ ಒಕ್ಕಲು ಅರಸಹಸ ಮಾಡಬೇಕಾಗಿದೆ

    ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ಗಮನ ಹರಿಸಬೇಕಿದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಹಾಗೂ ಆಸ್ಪತ್ರೆಗೆ ಬರುವ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ನೀಡಿ ಉತ್ತಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ

  • ಮಗ ವೇಣುಗೋಪಾಲ್ ಕನವರಿಕೆಯಲ್ಲಿ ಹಿರಿಜೀವ : ಕೊನೆಗಾಲದಲ್ಲಿ ಮಗನನ್ನು ನೋಡುವ ಬಯಕೆ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ
    ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ನಿವಾಸಿ ರಾಮಕೃಷ್ಣಪ್ಪ, ಅವರಿಗೆ ವೇಣುಗೋಪಾಲ್ ಎಂಬ ಮಗನಿದ್ದ, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದು 15 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ, ಮನೆ ಬಿಟ್ಟು ಹೋದಾಗ 22 ವರ್ಷಯ ಯುವಕ ವೇಣುಗೋಪಾಲ್, ಕಳೆದೆ 15 ವರ್ಷಗಳಿಂದ ಇಂದಲ್ಲಾ ನಾಳೆ ಮನೆಗೆ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿ ರಾಮಕೃಷ್ಣಪ್ಪ ಕಾಯುತ್ತಿದ್ದರು.

    ರಾಮಕೃಷ್ಣಪ್ಪನವರ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ, ಹಾಸಿಗೆಯಲ್ಲಿ ಮಗ ವೇಣುಗೋಪಾಲನನ್ನ ಕನವರಿಸುತ್ತಿದ್ದಾರೆ, ಸಾಯುವ ಕೊನೆ ಗಳಿಗೆಯಲ್ಲೂ ಮಗನ ಮುಖ ನೋಡ ಬೇಕೆಂಬುದು ಅವರ ಆಸೆ, ಆದರೆ ಅವನು ಎಲ್ಲಿದ್ದಾನೆಂಬ ಸುಳಿವಿಲ್ಲ, ವೇಣುಗೋಪಾಲ್ ತಾಯಿ ರತ್ನಮ್ಮ ಮತ್ತು ಅಕ್ಕ ಸವಿತಾ ಮನೆಗೆ ಬರುವಂತೆ ಅಂಗಲಾಚಿ ಬೇಡಿ ಕೊಳ್ಳುತ್ತಿದ್ದಾರೆ, ವೇಣುಗೋಪಾಲ್ ಎಲ್ಲೇ ಇದ್ರು ಹೇಗೆ ಇದ್ರು ಬೇಗ ಆಸ್ಪತ್ರೆಗೆ ಬಾ ಎಂದು ಕಣ್ಣೀರಿಟ್ಟು ಕರೆಯುತ್ತಿದ್ದಾರೆ, ಒಮ್ಮೇ ಮಗನ ಮುಖ ನೋಡಿದ್ರೆ ರಾಮಕೃಷ್ಣಪ್ಪನವರು ನೆಮ್ಮದಿಯಿಂದ ಕೊನೆಯುಸಿರೆಳೆತ್ತಾರೆಂಬ ಸಣ್ಣ ಆಸೆ ಕುಟುಂಬಸ್ಥರಿಗೆ.

    ಮನೆ ಬಿಟ್ಟು ಹೋದ ಮಗನ ಕನವರಿಕೆಯಲ್ಲಿ ತಂದೆ ಜೀವ ಹಿಡಿದುಕೊಂಡಿದ್ದಾರೆ, ಮಗನ ಮುಖ ನೋಡಿದ್ರೆ ಸಾಯುವ ಜೀವಕ್ಕೆ ನೆಮ್ಮದಿ ಸಿಗುತ್ತೆ ಎಂಬುದು ಕುಟುಂಬಸ್ಥರ ಆಸೆ,
    ಅನಾರೋಗ್ಯದಿಂದ ಬಳಲುತ್ತಿರುವ ಸುಮಾರು 70 ವರ್ಷದ ರಾಮಕೃಷ್ಣಪ್ಪ ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಸ್ಥಿತಿ ಚಿಂತಾಜನಕವಾಗಿದ್ದು ಸಾಯುವ ಕೊನೆಯ ಕ್ಷಣದಲ್ಲಿದ್ದಾರೆ, ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಅವರು ಮಗನ ಹೆಸರು ಕರೆದ್ದಾಗ ಮಾತ್ರ ಸ್ಪಂದನೆ ಮಾಡುತ್ತಿದ್ದಾರೆ, ಮನೆ ಬಿಟ್ಟು ಹೋದ ಮಗನ ಕನವರಿಕೆಯಲ್ಲಿ ಕೊನೆಯುಸಿರನ್ನ ಹಿಡಿದಿದ್ದಾರೆ.

    ವೇಣುಗೋಪಾಲ್ ಬಗ್ಗೆ ಮಾಹಿತಿ ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಬೇಡಿಕೊಂಡಿದ್ದಾರೆ. ರವಿರಾಜ್ -9113011791 ರಮೇಶ್ -7760874762 ಸುರೇಶ್ – 9945845483