Blog

  • ತೂಬಗೆರೆಯಲ್ಲಿ ಭೂತ ನೆರಿಗೆ ಆರ್ಭಟ

    ದೊಡ್ಡಬಳ್ಳಾಪುರ(ಜೂ.7): ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಭೂತನೆರಿಗೆ ಹಬ್ಬವನ್ನು ಆಚರಿಸಲಾಯ್ತು. 600 ವರ್ಷಗಳ ಇತಿಹಾಸವಿರುವ ಭೂತನೆರಿಗೆ ಆಚರಣೆಯಲ್ಲಿ ಪ್ರಮುಖ ಆಕರ್ಷಣೆ ಕೆಂಚಣ್ಣ ಮತ್ತು ಕರಿಯಣ್ಣ. ಕೈಯಲ್ಲಿ ಖಡ್ಗ, ಗುರಾಣಿ ಹಿಡಿದಿರುವ ಇವರು ಹಸಿವಿನಿಂದ ಆಕ್ರೋಶಗೊಂಡಿರುತ್ತಾರೆ. ಇವರ ಹಸಿವು ತಣಿಸಲು ಹಲಸು ಮತ್ತು ಬಾಳೇ ಹಣ್ಣಿನ ರಸಾಯನ ಕೊಡಲಾಗುತ್ತದೆ. ಕೋಳಿಗಳನ್ನು ಸಹ ನೀಡಲಾಗುತ್ತೆ.ಭೂತ ನೆರಿಗೆ ಹಬ್ಬಇವರಿಬ್ಬರ ಮೇಲೆ ಭೂತಗಳ ಅಹ್ವಾಹನೆಯಾಗಿ, ಜನರನ್ನು ಅಟ್ಟಾಡಿಸಿಕೊಂಡು ಹೋಗುತ್ತವೆ. ಯುವಕರು ರೇಗಿಸಿ ಮನರಂಜನೆ ಪಡೆಯುತ್ತಾರೆ, ಮಹಿಳೆಯರು ದೂರದಲ್ಲಿಯೇ ನಿಂತು ಭೂತಗಳ ಆರ್ಭಟ ನೋಡುತ್ತಾರೆ.

     

    ಭೂತನೆರಿಗೆ ಆಚರಣೆಗಿದೆ 600 ವರ್ಷಗಳ ಇತಿಹಾಸ:

     

    ತೂಬಗೆರೆಯ ಗ್ರಾಮದ ಪಾಳ್ಯ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಭೂತಗಳ ಆರ್ಭಟ ಊರಿನ ವಿವಿಧೆಡೆ ಸಂಚರಿಸಿ ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತದೆ, ಕೆಂಚಣ್ಣ ವೇಷಧಾರಿಯಾಗಿ ಶೇಖರ್, ಕರಿಯಣ್ಣ ವೇಷಧಾರಿಯಾಗಿ ಮತ್ತು ತೇರಿನ ಬೀದಿಯ ಮಂಜುನಾಥ್, ಪ್ರಮುಖ ಆಕರ್ಷಣೆಯಾಗಿರುತ್ತಾರೆ.

     

    ಆಂಜನೇಯ ದೇವಸ್ಥಾನದಲ್ಲಿ ಮಂತ್ರವಾದಿ ಆನಂದ್ ಸ್ವಾಮಿ, ಕರಿಯಣ್ಣ – ಕೆಂಚಣ್ಣರ ಮೇಲೆ ಮಂತ್ರಪಠಣ ಮಾಡಿ ಅವರಿಬ್ಬರ ಮೇಲೆ ಭೂತಗಳ ಆವಾಹನೆ ಮಾಡುತ್ತಾರೆ. ಭೂತಗಳ ಆವಾಹನೆ ನಂತರ ಆಕ್ರೋಶಗೊಳ್ಳುವ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಭೂತಗಳ ಆರ್ಭಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತೂಬಗೆರೆಗೆ ಬರುತ್ತಾರೆ.ಹಿನ್ನೆಲೆ:ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ – ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.

     

    ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ.

    ಈ ವಿಶಿಷ್ಟವಾದ ಆಚರಣೆ ಬಂತೆಂದರೆ ನಮಗೆ ಅದೇನೋ ಸಂಭ್ರಮ ಚಿಕ್ಕಂದಿನಿಂದಲೂ ಈ ಹಬ್ಬವನ್ನು ನೋಡುತ್ತಾ ಬೆಳೆದಿರುವ ನಮಗೆ ಇದೊಂದು ರೀತಿಯ ಸಂಭ್ರಮ ಸಡಗರದ ಈ ನೋಡುತ್ತಾ. ನಮ್ಮೂರಿನಲ್ಲಿ ಮಾತ್ರ ನೋಡ ಸಿಗುವ ಹಬ್ಬ ಎಂಬುವ ಜಂಬ . ಒಟ್ಟಾರೆ ಈಗ ಮತ್ತೊಮ್ಮೆ ಹಬ್ಬ ಬಂದಿದೆ

     

  • ಆರೋಗ್ಯ ,ನೈರ್ಮಲ್ಯ, ನೀರಿನ ಬಳಕೆ ಕುರಿತು ಅರಿವು ಮೂಡಿಸುವ ಬೀದಿನಾಟಕ ಪ್ರದರ್ಶನ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ವತಿಯಿಂದ ಆರೋಗ್ಯ ,ನೈರ್ಮಲ್ಯ, ನೀರಿನ ಸಂರಕ್ಷಣೆ ಕುರಿತಂತೆ ನಗರದ ಲಕ್ಷ್ಮಿ ದೇವಾಲಯ ಆವರಣದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

     

    ಕಾರ್ಯಕ್ರಮವನ್ನು ತಾಲ್ಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನುಉದ್ಘಾಟನೆ ಮಾಡಿದರು.

     

    ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಯೂಟ್ಯೂಬ್ ಚಾನೆಲ್ , ಆರೋಗ್ಯ ಹಾಗೂ ನೈರ್ಮಲ್ಯ, ನೀರು ಉಳಿಸಿ ಕಾರ್ಯಕ್ರಮದ ಬಗ್ಗೆ, ಪರಿಸರ ಸಂರಕ್ಷಣೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಬಗ್ಗೆ ಬೀದಿ ನಾಟಕದ ಮೂಲಕ ಸದಸ್ಯರಿಗೆ ಅರಿವನ್ನು ಮೂಡಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಗೀತಾ ,ವಲಯ ಮೇಲ್ವಿಚಾರಕರಾದ ಶಶಿಕಲಾ ಸಮನ್ವಯಾಧಿಕಾರಿ ಛಾಯಾ ಹಾಗೂ ಸೇವಾಪ್ರತಿನಿಧಿಯಾದ ಗಂಗಮ್ಮ, ನಂದಿನಿ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

  • ಲಯನ್ಸ್ ಕ್ಲಬ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

    ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ನಲ್ಲಿ ನಡೆದ ಡಯಾಬಿಟಿಕ್ ಉಚಿತ ತಪಾಸಣಾ ಶಿಬಿರ ಮತ್ತು ಮರೆಗುಳಿತನ ತರಬೇತಿ ಶಿಬಿರ ನೆಡೆಯಿತು

    ಶ್ರೀ ದಿವ್ಯ ಜ್ಞಾನಾನಂದ ಪುಷ್ಪಾಂಡಜ ಸ್ವಾಮೀಜಿ ಹಾಗೂ ಗಣ್ಯ ವರ್ಗ ದೀಪ ಬೆಳಗುವ ಮೂಲಕ ಸಮಾರಂಭದ ಉದ್ಘಾಟನೆಯನ್ನು ಮಾಡಿದರು.

    ಉಳ್ಳವರ ಹತ್ತಿರ ಪಡೆದು ಇಲ್ಲದವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿ ಅವರ ನೈತಿಕ ಸ್ಥೈರ್ಯ . ಆರೋಗ್ಯ ಸ್ವಾವಲಂಭನೆಯ ಬದುಕನ್ನು ರೂಪಿಸುವಂತೆ ಮಾಡುವುದೇ ಈ ಸಮಾಜದ ದೇವರ ಕೆಲಸವಾಗುತ್ತದೆ. ಸರ್ಕಾರ ಮಾಡುವ ಕೆಲಸವನ್ನು ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಮಾಡುತ್ತಾ ಬರುತ್ತಿದೆ ಎಂದು ಶ್ರೀ ದಿವ್ಯ ಜ್ಞಾನಾನಂದ ಪುಷ್ಪಾಂಡಜ ಸ್ವಾಮೀಜಿ ತಿಳಿಸಿದರು.

     

    ನೈಟಿಂಗೆಲ್ ಸಂಸ್ಥೆ ವತಿಯಿಂದ 121 ಜನರಿಗೆ ಮರೆಗುಳಿತನದ ಕಾರಣಗಳು ಹಾಗು ಪರಿಹಾರಗಳ ಬಗ್ಗೆ ತರಬೇತಿ ನೀಡಲಾಯಿತು, ಹಾಗೂ ಬ್ಲೂ ಕಂಪನಿಯವರಿಂದ ಪ್ರತಿಯೊಬ್ಬರಿಗೂ ಉಚಿತ ಔಷದಿ ವಿತರಣೆ ಮಾಡಲಾಯಿತು

     

    ಸಮಾರಂಭದ ಅಧ್ಯಕ್ಷರಾದ ಲಯನ್ ಅದ್ಯಕ್ಷರಾದ ಲಯನ್ ಎಸ್ ವಿ ನಂಜುಂಡೇಶ್ವರಸ್ವಾಮಿ , ವೇದಿಕೆಯಲ್ಲಿ ಲಯನ್ ಹುಲಿಕಲ್ ನಟರಾಜ್ ಲಯನ್ ಎನ್ ಜಗಧೀಶ್, ಲಯನ್ ಮಹಾಲಕ್ಷ್ಮಿ ನಂಜುಂಡೇಶ್ವರ್ ದಾನಿಗಳಾದ ಎಸ್ ವಿ ಮಲ್ಲಪ್ಪದೇವುಡು ಮತ್ತು ಲಯನ್ ಪ್ರಸನ್ನಕುಮಾರ್ ಲಯನ್ ಎಂ ಪಿ ಸಿ ವೆಂಕಟೇಶ್ ಉಪಸ್ಥಿತರಿದ್ದರು

  • ಹುಡುಗಿಗೆ ಅಶ್ಲೀಲ ಮೇಸಜ್ ಕಳಿಸಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟ ಯುವಕರು

    ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕುಶಾಲ್ ಎಂಬ ಯುವಕನನ್ನು 8-10 ಮಂದಿ ಯುವಕರು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ.

     

    ಸೋಲದೇವನಹಳ್ಳಿಯ ಈ ಕಿಡ್ನ್ಯಾಪ್ ಪ್ರಕರಣ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ನೆನಪಿಸುವಂತಿದೆ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದಂತೆ ಈ ಪ್ರಕರಣದಲ್ಲಿ ಕೂಡ ಕುಶಾಲ್ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮರ್ಮಾಂಗ ತುಳಿದು, ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ. “ಇದು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್‌ ತರ ಆಗತ್ತೆ” ಎಂದು ಹಲ್ಲೆ ನಡೆಸಿರುವ ಯುವಕರು ಮಾತನಾಡಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಕುಶಾಲ್ ಎಂಬಾತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟಿರುವುದು ಆಘಾತ ತಂದಿದೆ. ಒಂದು ಹುಡುಗಿಯ ವಿಚಾರಕ್ಕೆ ಈ ಕೃತ್ಯ ನಡೆದಿದೆ. ಯುವತಿಗೆ ಕುಶಾಲ್ ಅಶ್ಲೀಲ ಮೆಸೇಜ್ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

     

    ಏನಿದು ಕೇಸ್….???

    ಕುಶಾಲ್ ಕಾಲೇಜಿಗೆ ಹೋಗುವಾಗ ಯುವತಿಯೊಬ್ಬಳ ಜೊತೆ ಪ್ರೀತಿ ಮೂಡಿತ್ತು. 2 ವರ್ಷಗಳ ಬಳಿಕ ಆ ಪ್ರೀತಿ ಮುರಿದು ಬಿದ್ದಿತ್ತು. ಬಳಿಕ ಯುವತಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ಕುಶಾಲ್‌ಗೆ ಗೊತ್ತಾಗಿದೆ. ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಆಕೆ ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ. ಕೋಪಗೊಂಡ ಆತ ತನ್ನ ಸ್ನೇಹಿತರ ಜೊತೆ ಸೇರಿ ಕುಶಾಲ್‌ನನ್ನು ಮಾತನಾಡಿ ಎಲ್ಲಾ ಬಗೆಹರಿಸಿಕೊಳ್ಳೋಣ ಎಂದು ಕರೆಸಿ ಬಳಿಕ ಕಾರಿನಲ್ಲಿ ಅಪಹರಿಸಿದ್ದಾರೆ.

     

    ಕುಶಾಲ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ತಳಿಸಿದ್ದಾರೆ ಎನ್ನಲಾಗಿದೆ. ಬಟ್ಟೆ ಬಿಚ್ಚಿಸಿ ಚಿತ್ರಹಿಂಸೆ ನೀಡಿದ್ದಾರೆ ಅದನ್ನೆಲ್ಲಾ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ಸಂಬಂಧ ಈಗಾಗಲೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸೇರಿ ಶಿವಶಂಕರ್, ಶಶಾಂಕ್ ಗೌಡ, ಹೇಮಂತ್, ಯಶ್ವಂತ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

     

    ಕುಶಾಲ್‌ನನ್ನು ಯುವಕರು ಥಳಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಅಪಹರಣ, ಹಲ್ಲೆ ಘಟನೆಯನ್ನು ಹೀಗೆ ಯುವಕರು ಸ್ಫೂರ್ತಿಯಾಗಿ ತೆಗೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ.

     

     

  • ವಿದೇಶಿ ಪ್ರಜೆಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ರಾಜಾನುಕುಂಟೆ ಪೊಲೀಸ್

    ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅದ್ದಿಗಾನಹಳ್ಳಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನಿಷೇಧಿತ ಮಾದಕವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸ್.

     

     

     

    ಅದ್ದಿಗಾನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ವಿದೇಶಿ ಪ್ರಜೆಗಳು ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ ನಿಷೇಧಿತ ಮಾದಕ ವಸ್ತುಗಳಾದ MDMA Crystal 2 ಕೆಜಿ 820 ಗ್ರಾಂ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ 07 ಮೊಬೈಲ್ ಫೋನ್ ಗಳು, 02 ತೂಕದ ಯಂತ್ರ ಹಾಗೂ 2,06,870 /- ರೂ ನಗದು ಹಣವನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಗಳಿಂದ ಅಮಾನತ್ತು ಪಡಿಸಿಕೊಂಡ ವಸ್ತುವಿನ ಒಟ್ಟು ಮೌಲ್ಯ 04 ಕೋಟಿ 50 ಲಕ್ಷ ರೂಗಳೆಂದೂ ಅಂದಾಜಿಸಲಾಗಿದ್ದು ಆರೋಪಿಗಳ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದಾಗಿದ್ದಾರೆ.

    ಈ ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರುಗಳನ್ನು ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ ಕೆ ಬಾಬಾ ಅಭಿನಂದಿಸಿದರು.

  • ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ:ಡಿ.ಸಿ

    ಘಾಟಿ ಸುಬ್ರಮಣ್ಯ ದೇವಸ್ಥಾನದ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಇನ್ನೂ ಮುಂದೆ ಮಾಡುವಂತಿಲ್ಲ .

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರದೇಶದ ವ್ಯಾಪ್ತಿಯಲ್ಲಿ ಥರ್ಮಕೋಲ್, ಪ್ಲಾಸ್ಟಿಕ್ ಮತ್ತು ಮೈಕ್ರೋ ಬೀಡ್ಸ್ ನಿಂದ ತಯಾರಾದಂತಹ ಪ್ಲಾಸ್ಟಿಕ್ ವಸ್ತುಗಳ ಕೊಂಡೊಯ್ಯುವಿಕೆ, ಬಳಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಆದೇಶಿಸಿದ್ದಾರೆ.

     

    ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರದೇಶದಲ್ಲಿರುವ ಸಸ್ಯ ಸಂಕುಲಗಳನ್ನು, ಪ್ರಾಣಿ ಪಕ್ಷಿಗಳನ್ನು, ಸೂಕ್ಷ್ಮ ಜೀವಿಗಳನ್ನು ಮತ್ತು ಮಾನವ ಸಂಕುಲವನ್ನು ಸಂರಕ್ಷಿಸುವ ಹಾಗೂ ಇಲ್ಲಿನ ಪ್ರಾಕೃತಿಕ ಸೊಬಗಿನ ನೈರ್ಮಲ್ಯತೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.

  • ದೊಡ್ಡಬಳ್ಳಾಪುರದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಕ್ರಿಯ : ದಲಿತರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಟ – ಅರುಣ್ ಕುಮಾರ್

    ದೊಡ್ಡಬಳ್ಳಾಪುರ : ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ಕೆ.ಎಂ.ಸಂದೇಶ್ ಸ್ಥಾಪಿತ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ದೊಡ್ಡಬಳ್ಳಾಪುರದಲ್ಲಿ ಸಕ್ರಿಯವಾಗಿದ್ದು, ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡುವುದ್ದಾಗಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ತಿಳಿಸಿದ್ದಾರೆ.

     

    ಕೆ.ಎಂ.ಸಂದೇಶ್ ನೇತೃತ್ವದ ಹೋರಾಟಗಳು ರಾಜ್ಯದಲ್ಲಿ ಸಂಚಲನ ಮೂಡಿಸಿದೆ, ರಾಜ್ಯದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸುವ ಮೂಲಕ ಅಂತಹ ಪ್ರಕರಣಗಳ ವಿರುದ್ಧ ಹೋರಾಟ ಮಾಡಿ ದಲಿತರಿಗೆ ನ್ಯಾಯ ಕೊಡಿಸುತ್ತಿದ್ದಾರೆ, ದಲಿತರ ಜಮೀನು ಕಬಳಿಸುವ ಭೂಮಾಲೀಕರ ವಿರುದ್ಧ ಹೋರಾಟ ನಡೆಸುತ್ತಿರುವ ಅವರು ಸಾವಿರಾರು ಎಕರೆ ದಲಿತರ ಜಾಮೀನು ರಕ್ಷಣೆ ಮಾಡಿ ದಲಿತರಿಗೆ ನ್ಯಾಯ ಕೊಡಿಸಿದ್ದಾರೆ, ಅವರು ಸ್ಥಾಪಿಸಿರುವ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ(ASSK) ದೊಡ್ಡಬಳ್ಳಾಪುರದಲ್ಲಿಯೂ ಸಕ್ರಿಯವಾಗಿದ್ದು, ತಾಲೂಕಿನಲ್ಲಿ ದಲಿತರ ಪರವಾಗಿ ಹೋರಾಟ ಮಾಡುವುದ್ದಾಗಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಕೊಡಿಗೇಹಳ್ಳಿ ತಿಳಿಸಿದ್ದಾರೆ.

     

    ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಿಯಲ್ ಎಸ್ಪೇಟ್ ಮಾಫಿಯಾ ಕಾಲಿಟ್ಟಿದ್ದು ದಲಿತರ ಜಮೀನು ಕಬಳಿಸಲು ಸಂಚು ನಡೆಸುತ್ತಿದ್ದಾರೆ, ಇವತ್ತಿಗೂ ತಾಲೂಕಿನ ಹಲವು ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವಿಲ್ಲ, ಬೆಂಗಳೂರಿಗೆ ಕೂಗಳತೆಯ ದೂರದಲ್ಲಿದ್ದರು ದಲಿತರ ಮೇಲೆ ದಬ್ಬಾಳಿಕೆ ನಿಂತಿಲ್ಲ, ದಲಿತರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನ ಅಂಬೇಡ್ಕರ್ ಸೇವಾ ಸಮಿತಿ ಖಂಡಿಸುವುದರ ಜೊತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದ್ದಾಗಿ ಹೇಳಿದರು.

  • ನಮ್ಮ ರಾಜ್ಯಕ್ಕೆ ಮಾತೃಭಾಷೆ ಕನ್ನಡ ಹಾಗೂ ಪರ್ಯಾಯ ಭಾಷೆ ಇಂಗ್ಲಿಷ್ ಸಾಕು.. ಹಿಂದಿ ಬೇಡ – ಪುರುಷೋತ್ತಮ್ ಗೌಡ

    ರಾಜ್ಯದಲ್ಲಿ ತ್ರಿಭಾಷಾ ನೀತಿಯನ್ನ ರದ್ದು ಮಾಡಿ ದ್ವಿಭಾಷಾ ನೀತಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ನೇತೃತ್ವದಲ್ಲಿ ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯದ ಮುಖ್ಯಮಂತ್ರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.

    ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಕರವೇ ಕಾರ್ಯಕರ್ತರು ರಾಜ್ಯದಲ್ಲಿ ತ್ರಿಭಾಷಾ ನೀತಿಯನ್ನ ರದ್ದು ಮಾಡಿ ದ್ವಿಭಾಷಾ ನೀತಿಯನ್ನ ಜಾರಿ ಮಾಡುವಂತೆ ಒತ್ತಾಯಿಸಿದರು, ಕರವೇ ಕಾರ್ಯಕರ್ತರ ಮನವಿಯನ್ನು ಡಿಸಿ ಕಚೇರಿಯ ತಹಶೀಲ್ದಾರ್ ರಾಜೀವ್ ಸುಲೋಚನ ಸ್ವೀಕರಿಸಿದರು.

     

    ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ, ಆದರೂ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ, ಉತ್ತರ ಭಾರತದ ರಾಜ್ಯಗಳಲ್ಲಿನ ಮಕ್ಕಳು ಎರಡು ಭಾಷೆಗಳನ್ನು ಕಲಿಯುತ್ತಾರೆ.ಆದರೆ ನಮ್ಮ ರಾಜ್ಯದ ಮಕ್ಕಳು ಮೂರು ಭಾಷೆ ಕಲಿಯುತ್ತಾರೆ, ಮೂರನೇ ಭಾಷೆಯಾಗಿ ಹಿಂದಿ ಕಲಿಕೆ ನಮ್ಮ ಮಕ್ಕಳಿಗೆ ಹೊರೆಯಾಗಿದೆ, ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಲಿದೆ ಎಂದರು.

     

    ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ತೃತೀಯ ಭಾಷೆ ಶಿಕ್ಷಣ ನೀತಿಯನ್ನು ಅಳವಡಿಸಬಾರದು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಹಾಗಾಗಿ ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿ ಕನ್ನಡ ಹಾಗೂ ಪರ್ಯಾಯವಾಗಿ ಇಂಗ್ಲಿಷ್ ಮಾತ್ರ ನಮ್ಮ ರಾಜ್ಯಕ್ಕೆ ಸೀಮಿತವಾಗಿರಲಿ ಎಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.

     

     

     

  • ಖಾಸಗಿ ಬಸ್ ಗಳ ನಿಲ್ದಾಣಕ್ಕೆ ಸ್ಥಳ ಕಲ್ಪಿಸಿ : ಖಾಸಗಿವಾಹನಗಳ ನಿಲ್ದಾಣಕ್ಕೆ ನಿರ್ಭಂದಿಸಿರುವ ನಾಮಫಲಕ ತೆರವುಗೊಳಿಸಲು ಖಾಸಗಿ ಬಸ್ ಮಾಲೀಕರ ಅಗ್ರಹ

    ಬಿ.ಎಂ.ಟಿ.ಸಿ.ಸಂಸ್ಥೆಯವರಿಗೆ ಅನುಕೂಲ ಕಲ್ಪಿಸಲು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಖಾಸಗಿ ಬಸ್ ಗಳ ಪ್ರವೇಶಕ್ಕೆ, ನಿರ್ಭಂದ ಏರಲಾಗಿದೆ ಅಲ್ಲದೇ ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ನಾಮಫಲಕ ಅಳವಡಿಸಿದ್ದು ಕೂಡಲೇ ನಗರ ಸಭೆ ಈ ನಾಮಫಲಕವನ್ನು ತೆರವುಗೊಳಿಸಬೇಕೆಂದು ಖಾಸಗಿ ಬಸ್ ಮಾಲೀಕರಾದ ವಿಕ್ರಂ ಅಗ್ರಸಿದರು.

     

    ನಾವುಗಳು ಸರ್ಕಾರದ ಪರವಾನಗಿಯಂತೆ ಖಾಸಗಿ ಬಸ್ ನಿಲ್ದಾಣವಾಗಿಸಿಕೊಂಡು ಅಂದಿನಿಂದಲೂ ಪ್ರತಿ ನಿತ್ಯ ದೊಡ್ಡಬಳ್ಳಾಪುರ ನಗರಸಭೆಗೆ ಪ್ರತಿ ಬಸ್ ಗೂ ಇಂತಿಷ್ಟು  ಸುಂಕವನ್ನು ಪಾವತಿಸಿಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಬಂದಿದ್ದೇವೆ  ನಮ್ಮ ಹಳೆಯ ಬಸ್ ನಿಲ್ದಾಣಕ್ಕೆ ಬೆಂಗಳೂರು, ನೆಲಮಂಗಲ, ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೋಲಾರ, ತಿರುಪತಿ ಇನ್ನೂ ಮುಂತಾದ ನಗರಗಳಿಂದ ನೂರಾರು ಖಾಸಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ಈ ಎಲ್ಲಾ ಬಸ್ಸುಗಳು ಈ ಪ್ರದೇಶವನ್ನು ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿವೆ ಎಂದರು.

    ಎರಡು-ಮೂರು ದಿನಗಳ ಹಿಂದೆ ಬಿ.ಎಂ.ಟಿ.ಸಿ. ಸಂಸ್ಥೆಯವರು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಏಕಾಏಕಿ ಖಾಸಗಿ ಬಸ್‌ಗಳಿಗೆ ನಿರ್ಬಂಧ ಹಾಗೂ ಪ್ರವೇಶಿಸಿದರೆ ದಂಡ ವಿಧಿಸುವುದಾಗಿ ಒಂದು ಎಚ್ಚರಿಕೆ ಕೊಡುವ ಅನಧಿಕೃತ ನಾಮಫಲಕ ಅಳವಡಿಸಿರುತ್ತಾರೆ. ಈ ವಿಷಯದ ಬಗ್ಗೆ, ಸರ್ಕಾರವಾಗಲಿ, ದೊಡ್ಡಬಳ್ಳಾಪುರ ನಗರಸಭೆಯವರಾಗಲಿ ಯಾವುದೇ ರೀತಿಯ ಪ್ರಕಟಣೆಯಾಗಲಿ ಅಥವಾ ನೋಟೀಸ್ ಅಲ್ಲಿ ನೀಡಿರುವದಿಲ್ಲ ಅದರಿಂದ ನಮ್ಮ ದೊಡ್ಡಬಳ್ಳಾಪುರ ನಗರ ಸಭೆ ದಯಮಾಡಿ ಸದರಿ ಆನಧಿಕೃತ ನಾಮಫಕಲವನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಸಂಬಂಧ ಪಟ್ಟವರಿಗೆ ಸೂಕ್ತ ಆದೇಶ ನೀಡಬೇಕಾಗಿ ವಿನಂತಿಸುತ್ತೇವೆ ಎಂದರು

     

    ಈ ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ಇನ್ನಷ್ಟು ಅಭಿವೃುದ್ಧಿ ಪಡಿಸಿ ಸಾರ್ವಜನಿಕರ ಸ್ನೇಹಿಯಾಗಿ ಮಾರ್ಪಾಡಿಸಬೇಕೆಂದು ನಗರ ಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದರು

  • ತೂಬಗೆರೆ : ಕಾಂಗ್ರೆಸ್ ನೂತನ ಪದಾಧಿಕಾರಿಗಳಿಗೆ ಘಾಟಿ ಸುಬ್ರಹ್ಮಣ್ಯದ ಪ್ರವಾಸಿ ಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ

    ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ರವಿ ಸಿದ್ದಪ್ಪ. ವಿಜಯಪುರ ಹೋಬಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಮಂಜುನಾಥ. ಹಾಗೂ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ವೆಂಕಟೇಶ್‌ ರವರುಗಳಿಗೆ ಅಭಿನಂದನೆ ಹಾಗು ಸನ್ಮಾನ ಸಮಾರಂಭವನ್ನು ಘಾಟಿ ಸುಬ್ರಹ್ಮಣ್ಯದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ತೂಬಗೆರೆ ನಿಕಟ ಪೂರ್ವ ಬ್ಲಾಕ್ ಅಧ್ಯಕ್ಷ ಹಾಗು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರಂಗಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಕಾರ್ಯಗಳನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚಿತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಕಾರ್ಡುಗಳನ್ನು ಪ್ರತಿ ಮನೆಗೂ ತಲುಪಿಸಿ ಅದರಂತೆಯೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳ ಅನುಷ್ಠಾನ ಬರುವಂತೆ ಮಾಡಿತ್ತು.ಅದರಂತೆ ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆಯ ಬೇದ ವಿಲ್ಲದೆ ಸರ್ಕಾರ ಘೋಷಿಸಿರುವ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಅದರೆ ಕಾಂಗ್ರೇಸ್ ಸರ್ಕಾರ ತಳ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಎಲ್ಲರಿಗೂ ಸಮಾನತೆಯ ಅಧಿಕಾರವನ್ನು ನೀಡಿದೆ ಎಂದರು.

    ನಂತರ ಸಾಸಲು ಹೋಬಳಿ ನಿಕಟ ಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ ಎನ್ ಅರವಿಂದ ಮಾತನಾಡಿ.ದೇವನಹಳ್ಳಿ ಅವಿಭಾಜ್ಯ ಅಂಗವಾಗಿರುವ ತೂಬಗೆರೆ ಹೋಬಳಿಯ ಕೆಲವು ಗ್ರಾಮಗಳು ಮೂಲಭೂತ ಸೌಲಭ್ಯಗಳಾದ ಹೋಬಳಿ ಯಿಂದ ಗ್ರಾಮಗಳಿಗೆ ಕಲ್ಪಿಸುವ ರಸ್ತೆ. ಕುಡಿಯುವ ನೀರು. ಚರಂಡಿ.ಮನೆ ಇಲ್ಲದವರಿಗೆ ಮನೆ ಬೀದಿ ದೀಪ ಇಂತಹವುಗಳಿಗೆ ಹೆಚ್ಚು ಗಮನ ಇಟ್ಟು ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುವಂತೆ ಒತ್ತಾಯಿಸಿದರು.

     

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ರವಿ ಸಿದ್ದಪ್ಪ ಪಕ್ಷ ಕೊಟ್ಟಿರುವ ಜವಾಬ್ದಾರಿ ಯನ್ನು ಸಮರ್ಪಕವಾಗಿ ಹಾಗು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇನೆ.ನಮ್ಮ ವ್ಯಾಪ್ತಿಗೆ ಸುಮಾರು 58 ಬೂತ್ ಗಳು ಬರಲಿದ್ದು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷವನ್ನು ಸಂಘಟಿಸುತ್ತೇನೆ ಜೊತೆಗೆ ನಮ್ಮ ಹೋಬಳಿಯ ಹಿರಿಯರ ಮಾರ್ಗದರ್ಶನ ದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ,ಕಾಂಗ್ರೆಸ್ ವಕ್ತಾರ ಲಿಂಗನಹಳ್ಳಿ ಲಕ್ಷ್ಮೀಪತಿ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಜಗನ್ನಾಥ. ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಪ್ರಾಧಿಕಾರ ಸದಸ್ಯರುಗಳಾದ ಆರ್ ವಿ ಮಹೇಶ್,ಎಸ್ ರವಿ. ಲಕ್ಷ್ಮನಾಯಕ್ , ಶ್ರೀಮತಿ ಹೇಮಲತಾ ರಮೇಶ್ , ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣ ಗೌಡ, ದೇವನಹಳ್ಳಿ ನೂತನ ಬಮೂಲ್ ನಿರ್ದೆಶಕ ಎಸ್.ಪಿ ಮುನಿರಾಜು ಕಾಂಗ್ರೆಸ್ ಹೋಬಳಿ ಪದಾಧಿಕಾರಿಗಳಾದ. ಕಾಂತಮ್ಮ ,ಸವಿತಾ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.