Blog

  • ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು : ನಾವು ಯುದ್ಧದ ಪರ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಮೈಸೂರು : ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

     

    ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗವುದು ಎಂದರು.

     

     

    *ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಬೇಕಿತ್ತು*

    ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿತ್ತು.ಹಿಂದೆ ಪುಲ್ವಾಮಾದಲ್ಲಿಯೂ 40 ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಲ್ಲಿ ಭದ್ರತಾ ವೈಫಲ್ಯವಾಗಿದೆ. ಕೇಂದ್ರ ಸರ್ಕಾರದವರನ್ನು ನಂಬಿ ಪ್ರವಾಸಿಗರು ಹೋಗಿದ್ದರು ಹಾಗೂ ಈಗ ಯಾವುದೇ ಕ್ರಮಗಳನ್ನು ಕೇಂದ್ರ ಕೈಗೊಂಡರೂ, ಪ್ರಾಣ ಕಳೆದುಕೊಂಡ 26 ಜನ ಮತ್ತೆ ಬದುಕಿ ಬರಲು ಸಾಧ್ಯವೇ ? ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಿದ್ದು, ಅವರು ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದ್ದಾರೆ ಎಂದರು.

     

    *ನಾವು ಯುದ್ಧದ ಪರ ಇಲ್ಲ*

    ಉಗ್ರರ ದಾಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದರು.

     

    *ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ*

    ಕಾಶ್ಮೀರದ ಉಗ್ರರ ದಾಳಿಗೆ ಸಂಭಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಮಹತ್ವಯುತ ಸಭೆಯಾಗಿದ್ದು, ಪ್ರಧಾನಿಯವರು ಈ ಸಭೆಯಲ್ಲಿ ಹಾಜರಿರಬೇಕಿತ್ತು. ಆದರೆ ಅವರಿಗೆ ಈ ಸಭೆಗಿಂತ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಚಾಮರಾಜನಗರಕ್ಕೆ 20 ಬಾರಿ ಮುಖ್ಯಮಂತ್ರಿಯಾಗಿ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಚಾಮರಾಜನಗರಕ್ಕೆ ಮೊದಲ ಬಾರಿ ಭೇಟಿ ನೀಡಿದಾಗಲೇ, ಅಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆಂಬ ಕಳಂಕ ತೊಡೆದುಹೋಯಿತು ಎಂದರು.

  • ದೊಡ್ಡಬಳ್ಳಾಪುರ ನಗರಸಭೆ : ಜನನ ಪ್ರಮಾಣ ವಿತರಿಸಲು ಫೋನ್ ಪೇಯಲ್ಲಿ ಹಣ ಪಡೆದ ಅಧಿಕಾರಿ ವಿರುದ್ಧ ಕೆ ಆರ್ ಎಸ್ ಆಕ್ರೋಶ

    ದೊಡ್ಡಬಳ್ಳಾಪುರ : ನಗರಸಭೆಯಲ್ಲಿ ಜನನ ಪ್ರಮಾಣ ವಿತರಿಸಲು ಹೆಲ್ತ್ ಇನ್ಸ್ಪೆಕ್ಟರ್ ಒಬ್ಬರು ಫೋನ್ ಪೇ ಮುಕಾಂತರ ₹1400 ರೂಗಳನ್ನು ಪಡೆದು ಯಾವುದೇ ರಸೀದಿ ನೀಡದೆ ತಮ್ಮ ವಯಕ್ತಿಕ ಖಜಾನೆ ತುಂಬಿಸಿ ಕೊಳ್ಳುತ್ತಿದ್ದಾರೆ, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೊಡ್ಡಬಳ್ಳಾಪುರ ಕರ್ನಾಟಕ ರಾಷ್ಟ್ರ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

    ನಗರದ ನಗರಸಭೆ ಕಚೇರಿಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರಗಳ ವಿತರಣೆ ಮಾಡುವ ಅಧಿಕಾರಿಯೊಬ್ಬರು ನೆನ್ನೆ ಮಧ್ಯಾಹ್ನದ ಸುಮಾರಿಗೆ ಫೋನ್ ಪೇ ಮೂಲಕ 1400 ಪಡೆದಿದ್ದು, ಕಾನೂನು ಬದ್ಧವಾಗಿ 400 ರೂಗಳನ್ನು ಪಡೆಯಬೇಕಿದ್ದ ಅಧಿಕಾರಿ 1400 ಗಳನ್ನು ಪಡೆದಿದ್ದು, ಈ ಕುರಿತಂತೆ ಯಾವುದೇ ನಗದು ರಶೀದಿಯನ್ನು ಕೂಡ ನೀಡಿಲ್ಲ, ಸ್ಥಳೀಯ ಕೆಆರ್ ಎಸ್ ಪಕ್ಷದ ಪದಾಧಿಕಾರಿಗಳು ಈ ಕುರಿತು ಪ್ರಶ್ನೆ ಮಾಡಿದಾಗ ಅಧಿಕಾರಿ ಒಪ್ಪಿಕೊಂಡಿದ್ದು ಹಣ ಹಿಂದಿರುಗಿಸಲು ಮುಂದಾಗಿದ್ದಾರೆ, ಸಂಪೂರ್ಣ ಮಾತುಕತೆಯನ್ನು ವಿಡಿಯೋ ಮಾಡಿರುವ ಕೆ ಆರ್ ಎಸ್ ಪಕ್ಷವು ತನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧಿಕೃತ ಗ್ರೂಪ್ ನಲ್ಲಿ ವಿಡಿಯೋ ಹಂಚಿಕೊಂಡಿದೆ .

     

    ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವಶಂಕರ್ ಮಾತನಾಡಿ ನಗರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ, ಹಲವಾರು ಬಾರಿ ನಾವು ಪ್ರತಿಭಟನೆ ಮಾಡಿದರು ,ತಿಳುವಳಿಕೆ ನೀಡಿದರು, ಅರಿತುಕೊಳ್ಳದ ಅಧಿಕಾರಿಗಳು ತಮ್ಮ ದುರಾಸೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಸ್ಥಳೀಯ ಆಡಳಿತ ಈ ಕುರಿತು ಗಮನ ಹರಿಸಬೇಕಿದೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕಿದ್ದು ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಭ್ರಷ್ಟಾಚಾರ ಮುಕ್ತ ಸೇವೆ ಕಲ್ಪಿಸುವಂತಾಗಲಿ ಎಂದರು .

     

    ನಮ್ಮ ಕೆಆರ್‌ಎಸ್ ಪಕ್ಷವು ಸಾರ್ವಜನಿಕರ ಧ್ವನಿಯಾಗಿ ನಿರಂತರ ಹೋರಾಟದಲ್ಲಿ ತೊಡಗಿದ್ದು, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸದಾ ಪ್ರತಿಭಟಿಸುತ್ತೇವೆ , ಲಂಚಮುಕ್ತ ಸಮಾಜದ ನಿರ್ಮಾಣಕ್ಕೆ ಸದಾ ಶ್ರಮಿಸುತ್ತೇವೆ ಎಂದರು.

     

    ಸರ್ಕಾರವು ಸಾವಿರಗಟ್ಟಲೆ ಸಂಬಳ ನೀಡುತ್ತಿದ್ದರು ಇಂತಹ ನೀಚ ಕೃತ್ಯಗಳಿಗೆ ಪಾಲಾಗುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ ನಗರಸಭೆಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಹಣ ಅಂಶಗಳಿಗೆ ಒಳಗಾಗದೆ, ಬಯಸದೇ ಸಾರ್ವಜನಿಕರ ಸೇವೆಗೆ ಮುಂದಾಗಲಿ ಎಂಬುದೇ ನಮ್ಮ ಆಶಯ

  • ನನಗೆ ಹೆಂಡತಿ ಮಗು ಬೇಡವೆಂದು ಎರಡನೇ ಮದುವೆಯಾದ ಭೂಪ : ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ ಕುಟುಂಬ

    ದೊಡ್ಡಬಳ್ಳಾಪುರ : ಅಣ್ಣ ಮದುವೆಯಾಗಿದ್ದ ಮನೆಗೆ ಬಂದು ಹೋಗುತ್ತಿದ್ದ ಆತ, ಬಂದು ಹೋಗುವ ಸಮಯದಲ್ಲಿ ನನ್ನನು ಪ್ರೀತಿಸಿ ಮದುವೆಯಾದ, ಆದರೆ ಈಗ ನನ್ನನ್ನು ಮುತ್ತು ನನ್ನ ಮಗನನ್ನು  ಬಿಟ್ಟು  ಮತ್ತೊಬ್ಬಳನ್ನು ಮದುವೆಯಾಗಿ ನನಗೆ ಮೋಸ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಶಿಲ್ಪ ಆರೋಪಿಸಿದ್ದಾರೆ .

     

    ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಶಿಲ್ಪಾ 10 ವರ್ಷಗಳ ಹಿಂದೆ ನಗರಗೆರೆ ಗ್ರಾಮದವನೇ ಆದ ರಘು ಎಂಬಾತನ್ನು ಪ್ರೀತಿಸಿ ಮದುವೆಯಾಗಿದ್ರು. ಅಂದಹಾಗೇ ಈ ರಘು ಶಿಲ್ಪಾಳ ಅಕ್ಕ ಪ್ರೇಮ ಮದುವೆಯಾಗಿದ್ದ ಗಂಡನ ತಮ್ಮ, ಮದುವೆಯಾದ ಪ್ರಾರಂಭದಲ್ಲಿ ರಘು ಮತ್ತು ಶಿಲ್ಪಾ ದಾಪಂತ್ಯ ಚೆನ್ನಾಗಿಯೇ ಇತ್ತು, ಇಬ್ಬರು ಮುದ್ದಿನ ಗಂಡು ಮಕ್ಕಳಿದ್ರು, ಎರಡನೇ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ರಘುವಿನ ವರ್ತನೆಯೇ ಬದಲಾಯ್ತು ಅಂತಾರೆ ಶಿಲ್ಪಾ.

     

     

    ಹೆಂಡತಿ ಹೆಸರಿನಲ್ಲಿ ಸಾಲ ಮಾಡುತ್ತಿದ್ದ ರಘು, ಯಾಕೇ ಸಾಲ ಮಾಡ್ತಿರಾ ಅಂತಾ ಹೆಂಡತಿ ಕೇಳಿದ್ರೆ, ನನಗೆ ಹಣ ಬೇಕು, ನಿನ್ನ ಸಹೋದರರಿಂದ ವರದಕ್ಷಿಣೆಯ ಹಣ ತಂದುಕೊಡುವಂತೆ ಕೇಳುತ್ತಿದ್ದನಂತೆ, ಹಣ ತಂದು ಕೊಡದಿದ್ದಾರೆ ಮತ್ತೊಂದು ಮದುವೆಯಾಗುವೆ ಎಂದು ಕಿರುಕುಳ ಕೊಡುತ್ತಿದ್ದಾನಂತೆ, ಶಿಲ್ಪಾ ವರದಕ್ಷಿಣೆ ಕಿರುಕುಳ ಪ್ರಕರಣವನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದಾರೆ.

     

    ರಘು ದೊಡ್ಡಬಳ್ಳಾಪುರದ ಹುಡುಗಿಯೊಬ್ಬಳನ್ನು ಎರಡನೇ ಮದುವೆಯಾಗಿದ್ದಾನೆ, ಆತನ ತಂದೆಯೇ ಎರಡನೇ ಮದುವೆಯಾಗಿರುವ ಬಗ್ಗೆ ಸುದ್ದಿ ತಿಳಿಸಿದ್ದಾರೆ ಎಂದು ಶಿಲ್ಪಾ ಆರೋಪ ಮಾಡಿದ್ದಾರೆ, ರಘು ಎರಡನೇ ಮದುವೆಯಾಗಿರುವ ಹುಡುಗಿಗೂ ಸಹ ಇದು ಎರಡನೇ ಮದುವೆ, ಮೊದಲನೇ ಗಂಡ ಸಾವನ್ನಪ್ಪಿದ್ದಾನೆ, ಆಕೆಯ ಗಂಡನಿಂದ ಹಣ ಬರುವ ಸುಳಿವು ಸಿಕ್ಕ ರಘು ಮತ್ತು ಆತನ ಕುಟುಂಬದವರು ಆಕೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾರೆಂದು ಶಿಲ್ಪಾ ಮತ್ತು ಆಕೆಯ ಕುಟುಂಬ ಆರೋಪ ಮಾಡಿದೆ.

     

    ನನಗೆ ನನ್ನ ಗಂಡ ಬೇಕು, ಯಾವುದೇ ಕೆಲಸಕ್ಕೆ ಹೋಗದ ನಾನು ಮಗನನ್ನು ಸಾಕುವುದು ಹೇಗೆ ನನಗೆ ನ್ಯಾಯ ಬೇಕೆಂದು ಕೇಳಿಕೊಂಡಿದ್ದಾರೆ, ಇತ್ತಾ ರಘು ಕುಟುಂಬದವರಿಂದ ಜೀವ ಬೆದರಿಕೆ ಇದ್ದು ನಮ್ಮ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್​ ಕಮಿಟಿ ಆನ್ ಸೆಕ್ಯೂರಿಟಿ (ಸಿಸಿಎಸ್) ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು…ಗೊತ್ತಾ…???

    ದೆಹಲಿ : ಏಪ್ರಿಲ್​ 22 ರಂದು ಭಯೋತ್ಪಾಕದರು ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಅಟ್ಟಹಾಸ ಮೆರೆದಿದ್ದರು.ಬರೋಬ್ಬರಿ 26 ಪ್ರಾಣಗಳನ್ನು ಬಲಿ ಪಡೆದಿದ್ದರು. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿಯವರು ದಾಳಿಗೆ ಮೊದಲ ಪ್ರತ್ಯುತ್ತರವಾಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ.

    ಪ್ರಮುಖವಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್​ ಕಮಿಟಿ ಆನ್ ಸೆಕ್ಯೂರಿಟಿ (ಸಿಸಿಎಸ್) ಸಭೆಯಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲದ ನೀರು ಹಂಚಿಕೆ ಒಪ್ಪಂದವಾದ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲಾಗಿದ್ದು ಮುಂದಿನ ಸೂಚನೆ ಬರುವವರೆಗೆ ಸ್ಥಗಿತವಾಗಿರಲಿದೆ.ಎರಡೂ ದೇಶಗಳ ನಡುವಿನ ನಾಗರಿಕ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ ಅಟ್ಟಾರಿ ಚೆಕ್‌ಪೋಸ್ಟ್ ಅನ್ನು ಸದ್ಯಕ್ಕೆ ಪಾಕ್​​ ನಾಗರಿಕರಿಗೆ ಮುಚ್ಚಲಾಗಿದೆ. ಇದರಿಂದ ಪಾಕಿಸ್ತಾನಿಯರು ಈ ಮಾರ್ಗದ ಮೂಲಕ ಭಾರತ ಪ್ರವೇಶಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

    ಮೋದಿ ನೇತೃತ್ವದ ಸಭೆಯಲ್ಲಿ 5 ಮಹತ್ವದ ನಿರ್ಧಾರ

    *ಪಾಕ್ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತಕ್ಕೆ ನಿರ್ಧಾರ

    *ಪಾಕಿಸ್ತಾನದ ರಾಯಭಾರಿ ಕಚೇರಿ ಬಂದ್​ಗೆ ಸೂಚನೆ

    *ಭಾರತ- ಪಾಕ್ ನಡುವಿನ ಅಟಾರಿ ಗಡಿ ಬಂದ್​

    *48 ಗಂಟೆಯಲ್ಲಿ ಪಾಕ್ ಪ್ರಜೆಗಳು ಭಾರತ ತೊರೆಯಬೇಕು

    *ಪಾಕ್​​ನವರಿಗೆ ಭಾರತದ ವೀಸಾ ರದ್ದು- ವಿದೇಶಾಂಗ ಸಚಿವಾಲಯ

    ಜೊತೆಗೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಪಾಕಿಸ್ತಾನದ ರಾಯಭಾರಿಗಳು ಒಂದು ವಾರದ ಒಳಗೆ ಭಾರತವನ್ನು ಬಿಟ್ಟು ಹೋಗಲು ತಿಳಿಸಲಾಗಿದೆ. ಇನ್ನು ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳ ಒಳಗೆ ಅಂದರೆ 2 ದಿನದ ಒಳಗೆ ತಮ್ಮ ದೇಶಕ್ಕೆ ಹಿಂದಿರುಗಲು ತಿಳಿಸಿದೆ . ಇದರ ಜೊತೆ ನೆರೆಯ ರಾಷ್ಟ್ರದವರಿಗೆ ಭಾರತದ ವೀಸಾವನ್ನು ರದ್ದು ಮಾಡಲಾಗಿದೆ. ಈ ನಿರ್ಧಾರಗಳನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ನಟನೆ ಮತ್ತು ಗಾಯನ ಎರಡರಲ್ಲೂ  ಪ್ರಬುದ್ಧ ಕಲಾವಿದರಾದ ಡಾ.ರಾಜ್ ಕುಮಾರ್ – ಶ್ರೀಕಾಂತ್

    ದೊಡ್ಡಬಳ್ಳಾಪುರ : ಡಾ.ರಾಜಕುಮಾರ್  ಅವರ ಕನ್ನಡ ನಾಡು, ನುಡಿಯ  ಪ್ರೀತಿ ಅನನ್ಯವಾದದ್ದು. ಐತಿಹಾಸಿಕ ಪಾತ್ರಗಳ ಮೂಲಕ ಕರ್ನಾಟಕ ಇತಿಹಾಸದ ವೈಭವವನ್ನು ಮರುಸೃಷ್ಟಿ ಮಾಡಿದವರು ಎಂದು  ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

     

    ಅವರು‌ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ನಡೆದ  ಕನ್ನಡ ಅಭಿಮಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ರಾಜ್ ಕುಮಾರ್  ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು  ಎಚ್ಚರಿಸಿರುವುದನ್ನು ಕನ್ನಡಿಗರು ಎಂದು ಮರೆಯುವುದಿಲ್ಲ. ಸರಳ, ಸಜ್ಜನ, ನಿಷ್ಠಾವಂತ, ಪ್ರಾಮಾಣಿಕ, ಅಪ್ರತಿಮ  ಕಲಾವಿದ  ಎಂದು  ಎಲ್ಲಾ  ಜನರ ಪ್ರೀತಿಗೆ ಪಾತ್ರರಾದ ಡಾ.ರಾಜಕುಮಾರ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.

     

    ಡಾ.ರಾಜ್ ಕುಮಾರ್ ಅವರು  ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೀಡಲಾಗುವ ಅತ್ಯುನ್ನತ ಗೌರವವಾದ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ನಟರಾಗಿದ್ದಾರೆ. ಡಾ.ರಾಜಕುಮಾರ್ ತನಗೆ ಪ್ರೀತಿ, ಯಶಸ್ಸು ಹಾಗು ಬದುಕು ಕೊಟ್ಟ  ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸ್ಮರಣೀಯ ಕಾಣಿಕೆ ನೀಡಿದ್ದಾರೆ.    ಡಾ.ರಾಜ್ ಕುಮಾರ್  ಅವರ ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ಅವರ ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಜೀವನಶೈಲಿಯನ್ನು  ಎಲ್ಲರೂ ಗೌರವಪೂರ್ವಕವಾಗಿ ಸ್ಮರಿಸುತ್ತಾರೆ ಎಂದರು.

     

     

    ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ,  ಡಾ.ರಾಜ್ ಕುಮಾರ್  ಎಲ್ಲ ವರ್ಗದ ಪ್ರೇಕ್ಷಕರ ಮನಮುಟ್ಟುವ ಪಾತ್ರಗಳನ್ನು ಅಭಿನಯಿಸಿದ್ದಾರೆ.   ಮೇರು ನಟರಾದ ಸಂದರ್ಭದಲ್ಲೂ  ರೈತ, ಕೂಲಿಕಾರ, ವಾದ್ಯಗಾರ,  ಲಾಯರ್, ಅಧ್ಯಾಪಕ ಮುಂತಾದ ನೂರಾರು  ಪಾತ್ರಗಳನ್ನು   ಅಭಿನಯಿಸುವಾಗ ಸಾಕಷ್ಟು ಸಿದ್ದತೆ   ಮಾಡಿಕೊಳ್ಳುತ್ತಿದ್ದರು.   ನಟನೆ ಮತ್ತು ಗಾಯನ ಎರಡರಲ್ಲೂ  ಪ್ರಬುದ್ಧ ಕಲಾವಿದರಾದ ಡಾ.ರಾಜ್ ಕುಮಾರ್  ಎಲ್ಲಾ ಕಲಾವಿದರಿಗೂ ಮಾದರಿ ಆಗಿದ್ದಾರೆ.  ಕನ್ನಡಿಗರ ಮನಸ್ಸಿನಲ್ಲಿ  ಡಾ.ರಾಜ್ ಕುಮಾರ್  ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ  ಕನ್ನಡಪರ ಹಿರಿಯ ಹೋರಾಟಗಾರರುಗಳಾದ  ಗುರುರಾಜಪ್ಪ,  ಟಿ.ಜಿ.ಮಂಜುನಾಥ್, ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್,  ನಿಕಟಪೂರ್ವ  ಕೋಶಾಧ್ಯಕ್ಷ ನಂ.ಮಹಾದೇವ್,   ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್  ಸಹಾಯಕ‌‌ ಆಯುಕ್ತ ವೆಂಕಟರಾಜು,  ಸೂರ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ  ಎಂ.ಸಿ.ಮಂಜುನಾಥ್,  ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ,  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್,  ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ  ಸಾ.ಲ.ಕಮಲನಾಥ್,   ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್,  ಪ್ರತಿನಿಧಿ ನಾಗರತ್ನಮ್ಮ, ಷಫೀರ್,  ಕನ್ನಡ ಜಾಗೃತ ವೇದಿಕೆ  ಜಿಲ್ಲಾ ಅಧ್ಯಕ್ಷ ನಾಗರಾಜು,  ಕಲಾವಿದರಾದ   ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ  ಮುಂತಾದವರು ಭಾಗವಹಿಸಿದ್ದರು.

  • ವೃದ್ಧಾಶ್ರಮದ ನಿರ್ವಹಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1 ಲಕ್ಷ ಅನುದಾನ ಮಂಜೂರಾತಿ ಅನುದಾನ ವಿತರಣೆ

    ದೊಡ್ಡಬಳ್ಳಾಪುರ : ತಾಲ್ಲೂಕಿನ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪವಿತ್ರ ನಿರಾಶ್ರಿತರ ವೃದ್ಧಾಶ್ರಮ ದೊಡ್ಡಬಳ್ಳಾಪುರ ಇದರ ವೃದ್ಧಾಶ್ರಮದ ನಿರ್ವಹಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1 ಲಕ್ಷ ಅನುದಾನ ಮಂಜೂರಾತಿ ಮಾಡಲಾಗಿದೆ.

     

    ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ಸಮಿತಿ ಸದಸ್ಯರಿಗೆ 1ಲಕ್ಷ ಮೌಲ್ಯದ ಅನುದಾನವನ್ನು ಹಸ್ತಾಂತರ ಮಾಡಿದರು

     

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀಯುತ ಆನಂದ್,ಶಾಕಿರ್(ಬಾಬಿ)ವೃದ್ಧಾಶ್ರಮದ ಕಾರ್ಯದರ್ಶಿ ಲಕ್ಷ್ಮಮ್ಮ, ಸಿದ್ದಲಿಂಗಯ್ಯ,ಉಮಾ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ವಲಯ ಮೇಲ್ವಿಚಾರಕರಾದ ಸವಿತಾ, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಸೆವೆನ್ ಹಿಲ್ಸ್ ಆಸ್ಪತ್ರೆ ಮುಂಭಾಗ ಇಂಗ್ಲಿಷ್ ಬಳಕೆ ವಿರುದ್ಧ ಕರಾವೇ ಹೋರಾಟ : ಇಂಗ್ಲೀಷ್ ನಾಮಫಲಕದ ಬೆಳಕನ್ನು ಬಂದ್ ಮಾಡಿದ ಆಸ್ಪತ್ರೆ ಸಿಬ್ಬಂದಿ

    ದೊಡ್ಡಬಳ್ಳಾಪುರ : ನಗರದ ಖಾಸಗಿ ಒಡೆತನದ ಸವೆನ್ ಹಿಲ್ಸ್ ಆಸ್ಪತ್ರೆ ತನ್ನ ನಾಮಫಲಕದಲ್ಲಿ ಇಂಗ್ಲಿಷ್ ಬಳಕೆ ಮಾಡಿದ್ದ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ (ಟಿ ಏ ನಾರಾಯಣಗೌಡರ ಬಣ )ದ ವತಿಯಿಂದ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಲಾಯಿತು .

    ಈ ಸಂದರ್ಭದಲ್ಲಿ ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಸಹ ಆಸ್ಪತ್ರೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ , ಕನ್ನಡಕ್ಕೆ ಅವಮಾನಿಸಿದವರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಸದಾ ತೊಡೆತಟ್ಟುತ್ತದೆ, ಅಲ್ಲದೆ ಸ್ಥಳೀಯವಾಗಿ ಸಣ್ಣ ಸಮಸ್ಯೆ ಆದರೂ ಬಂದು ನಿಲ್ಲುವ ಹಲವು ಮುಖಂಡರು ಕನ್ನಡಕ್ಕೆ ಸಮಸ್ಯೆ ಆದಾಗ ಬರುವುದಿಲ್ಲ ಏಕೆ ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ, ಇದು ಕೇವಲ ಸಾಂಕೇತಿಕ ಹೋರಾಟ , ಆಸ್ಪತ್ರೆ ಸಿಬ್ಬಂದಿ ನಾಮಫಲಕ ಬದಲಿಸದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

     

    ಆಸ್ಪತ್ರೆ ಮಾಲೀಕರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ಕೂಡಲೇ ನಾಮಫಲಕದ ಬೆಳಕನ್ನು ಬಂದ್ ಮಾಡುವಂತೆ ಆಗ್ರಹಿಸಿದರು, ಒತ್ತಾಯಕ್ಕೆ ಮಾಡಿದ ಆಸ್ಪತ್ರೆ ಸಿಬ್ಬಂದಿ ಕೂಡಲೇ ಲೈಟ್ ಆಫ್ ಮಾಡುವ ಮೂಲಕ ಹೋರಾಟಗಾರರಿಗೆ ಸ್ಪಂದಿಸಿದ್ದಾರೆ ಹಾಗೂ ಆಸ್ಪತ್ರೆ ನಾಮಪಲಕವನ್ನು ಕನ್ನಡದಲ್ಲಿ ಬದಲಿಸುವುದಾಗಿ ತಿಳಿಸಿದ್ದಾರೆ .

    ಸ್ಥಳೀಯವಾಗಿ ಕನ್ನಡ ಭಾಷೆಗೆ ಸಣ್ಣಪುಟ್ಟ ಅಪಮಾನ ಅವಮಾನಗಳಾದ ತಕ್ಷಣವೇ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ರ ಬಣ ) ಸ್ಥಳಕ್ಕೆ ಧಾವಿಸಿ ಹೋರಾಟ ಅಥವಾ ಪ್ರತಿಭಟನೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ . ನಾಡು ನುಡಿ ಜಲದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಬದ್ಧತೆ ಮೆಚ್ಚುವಂಥದ್ದು ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಕನ್ನಡ ಪರ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂಬುದೇ ನಮ್ಮ ಆಶಯ ಕೂಡ..

     

     

  • ದ್ವಿತೀಯ ಪಿಯುಸಿ ಪರೀಕ್ಷೆ 2 : ಜಿಲ್ಲೆಯ  4 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಬರೆಯಲಿರುವ 2641 ವಿದ್ಯಾರ್ಥಿಗಳು

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆ 2 ಏಪ್ರಿಲ್ 24 ರಿಂದ ಪ್ರಾರಂಭಗೊಳ್ಳುತ್ತಿದೆ.   ಜಿಲ್ಲೆಯ  4 ಪರೀಕ್ಷಾ ಕೇಂದ್ರಗಳಲ್ಲಿ  ಒಟ್ಟು 2641 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 2 ಅನ್ನು ತೆಗೆದುಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ   ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ) ಉಪನಿರ್ದೇಶಕ ಎನ್. ಮೋಹನ್ ಕುಮಾರ್‌ ತಿಳಿಸಿದ್ದಾರೆ.

     

    ಅವರು    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ 2 ಕುರಿತು     ಕುರಿತು ಮಾಹಿತಿ ನೀಡಿ,   ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸರ್ಕಾರಿ ಪದವಿಪೂರ್ವ ಕಾಲೇಜು, ದೇವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಸಕೋಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ನೆಲಮಂಗಲ ಸರ್ಕಾರಿ ಪದವಿಪೂರ್ವ ಕಾಲೇಜು ಒಟ್ಟು 4 ಪರೀಕ್ಷಾ ಕೇಂದ್ರಗಳಾಗಿವೆ.‌ ದ್ವಿತೀಯ ಪಿಯುಸಿ ಪರೀಕ್ಷಾ 1 ರಲ್ಲಿ ಹೊಸ ವಿದ್ಯಾರ್ಥಿಗಳು ‌(ಅನುತ್ತೀರ್ಣರಾದ) 1659, ಖಾಸಗಿ ವಿದ್ಯಾರ್ಥಿಗಳು 03, ಪುನರಾವರ್ತಿತ (2025ಕ್ಕಿಂತ ಮೊದಲಿನವರು) 184, ಅಂಕ ಸುಧಾರಣೆ ಬಯಸಿರುವ 795 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 2 ಬರೆಯಲಿದ್ದಾರೆ ಎಂದರು.

     

    ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ

    ಏಪ್ರಿಲ್ 24 ರಿಂದ ಪ್ರಾರಂಭಗೊಳ್ಳುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ 2 ಕುರಿತು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಭಾಗವಹಿಸಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 2 ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕಿನ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

     

    ಸಕಲ ಸಿದ್ದತೆ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮತ್ತು ಜಿಲ್ಲಾಡಳಿತದ  ಮಾರ್ಗದರ್ಶನದಂತೆ     ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಸಿದ್ದತೆ ನಡೆದಿದೆ.‌

    ಕಾನೂನು ವ್ಯವಸ್ಥೆ :-  ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಪರೀಕ್ಷಾ ಕೇಂದ್ರಗಳಲ್ಲೂ ಜಾಗೃತ ದಳ‌ ವ್ಯವಸ್ಥೆ  ಜೊತೆಗೆ  ಪೊಲೀಸ್‌ ಭದ್ರತಾ ವ್ಯವಸ್ಥೆ, ಪರೀಕ್ಷಾ ಕೇಂದ್ರದ  ಸುತ್ತಲೂ 200 ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆ,  ಜೆರಾಕ್ಸ್ ಅಂಗಡಿಗಳು ಹಾಗೂ ಕಂಪ್ಯೂಟರ್ ಕೇಂದ್ರಗಳು ಮುಚ್ಚುವುದು ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ) ಉಪನಿರ್ದೇಶಕ ಎನ್. ಮೋಹನ್ ಕುಮಾರ್‌ ತಿಳಿಸಿದರು.

  • ಇದು ಕೇವಲ ಪುತ್ಥಳಿಯಲ್ಲ ವಿದ್ಯೆ ಸಂಘರ್ಷ ಹೋರಾಟ ಸಮಾನತೆಯ ಪ್ರತಿರೂಪವಾಗಿದೆ – ಮಹೇಶ್

    ದೊಡ್ಡಬಳ್ಳಾಪುರ : ತಾಲ್ಲೂಕಿನ ವಡ್ಡರಪಾಳ್ಯದಲ್ಲಿ ಸ್ಥಳೀಯ ಯುವಕರು ಹಾಗೂ ನಿವಾಸಿಗಳು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿಯ ಅಂಗವಾಗಿ ಪುತ್ಥಳಿ ಅನಾವರಣ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.

    ಕಾರ್ಯಕ್ರಮಕ್ಕೆ ಆಗಮಿಸಿದ ಕೆ ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ , ದಲಿತ ಮುಖಂಡರಾದ ರಾಜಗೋಪಾಲ್,ರಾಜುಸಣ್ಣಕ್ಕಿ,ಸ್ಥಳೀಯ ಮುಖಂಡ ಮಹೇಶ್ ಸೇರಿದಂತೆ ಹಲವು ಗಣ್ಯರು ನೂತನ ಪುತ್ಥಳಿಗೆ ಪುಷ್ಪ ನಮನ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಅನಾವರಣ ಮಾಡಿದರು.

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಮಹೇಶ್ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿ, ಅವರ ಜೀವನವೇ ನಮಗೆ ಆದರ್ಶ, ಹಲವು ಹೋರಾಟಗಳ ನಡುವೆಯೂ ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ, ಅವರ ಆಶಯದಂತೆ ವಿದ್ಯೆ ಸಂಘರ್ಷ ಸಮಾನತೆ ಸಾದಿಸುವ ನಿಟ್ಟಿನಲ್ಲಿ ಇಂದಿಗೂ ನಮ್ಮ ಹೋರಾಟ ನಿರಂತರವಾಗಿದೆ ಎಂದರು

     

    ನಾವು ದೇವರ ಕುರಿತಂತೆ ಹಲವಾರು ವಿಗ್ರಹಗಳನ್ನು ನೋಡಿದ್ದೇವೆ ಆದರೆ ನಮ್ಮ ಸಮಾನತೆಗಾಗಿ ಹೋರಾಡಿದ ಬಾಬಾ ಸಾಹೇಬರೇ ನಮ್ಮ ದೇವರು , ಅವರ ಪ್ರತಿಬಿಂಬವನ್ನು ಮುಂದಿನ ಪೀಳಿಗೆಗೂ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು , ಈ ನಿಟ್ಟಿನಲ್ಲಿ ನಮ್ಮ ವಡ್ಡರ ಪಾಳ್ಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ. ಇದು ಕೇವಲ ಪುತ್ಥಳಿಯಲ್ಲ ವಿದ್ಯೆ ಸಂಘರ್ಷ ಹೋರಾಟ ಸಮಾನತೆಯ ಪ್ರತಿರೂಪವಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮಹೇಶ, ಕೇಶವ್, ಕಿರಣ, ಬಾಲಕೃಷ್ಣ, ಪ್ರಜ್ವಲ್, ಅಭಿ, ಕಿರಣ ಎಸ್, ಮಹೇಶ್, ಪ್ರದೀಪ್ ನವೀನ್ ಸುರೇಶ್, ಮುರಳಿ, ನರಸಿಂಹ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ಜಾತಿಗಣತಿ ಕುರಿತು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದೇನು….???

    ಜಾತಿಗಣತಿ ವಿಚಾರವಾಗಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಎಲ್ಲರಿಗೂ ಅವರವರ ಅಭಿಪ್ರಾಯ ಹೇಳಿದ್ದಾರೆ ಚರ್ಚೆ ಮುಂದುವರಿದಿದೆ ಎಲ್ಲರ ಅಭಿಪ್ರಾಯ ಕೇಳಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ, ಇದು ಒಬ್ಬರ ನಿರ್ಧಾರ ಅಲ್ಲ. ಕ್ಯಾಬಿನೆಟ್ ನಿರ್ಧಾರ ಆಗಿರುತ್ತದೆ ಎಂದರು

     

    ಜಾತಿ ಗಣತಿ ಸರ್ವೆಯ ಉದ್ದೇಶ ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಸಮುದಾಯಗಳ ಸ್ಥಿತಿ ಗತಿ ತಿಳಿಯುವುದು ಜಾತಿ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಈಗಾಗಲೇ ಸರ್ಕಾರಕ್ಕೆ ಸಿಕ್ಕಿದ್ದು, ಸರ್ಕಾರವು ಆ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.

     

    ಆದರೆ ಕೆಲ ಸಮುದಾಯದ ಮುಖಂಡರು ತಮ್ಮ ಸಮುದಾಯ ಹೆಚ್ಚಿರಬೇಕಿತ್ತು ಅಂತ ಆತಂಕ ವ್ಯಕ್ತಪಡಿಸಿದ್ದಾರೆ‌, ಆದರೆ ಈಗ ಲಭ್ಯವಾಗಿರುವ ಮಾಹಿತಿಯನ್ನು ನಾನು ಅದ್ಯಯನ ಮಾಡಿದ ನಂತರ ಇದು ಅತ್ಯಂತ ವೈಜ್ಞಾನಿಕ ಸಮೀಕ್ಷೆ ಎಂದು ನನಗೆ ಅನಿಸಿದೆ ಕಾರಣ ಯಾಕಂದ್ರೆ ಒಬ್ಬ ಬೋರ್ ವೆಲ್ ಹಾಕಿದ್ರೆ ಅಲ್ಲಿ ನೀರು ಬಂತಾ ಇಲ್ವಾ? ಒಣಗಿಹೋಗಿದ್ಯಾ ಅಂತಲೂ ಮಾಹಿತಿ ಕಲೆ ಹಾಕಿದ್ದಾರೆ ಅಲ್ಲದೇ ಇಂತಹ ಮನೆಯ ಡಾಟಾ ಸಂಗ್ರಹಿಸಿ ಅವರ ಕೈಯಲ್ಲಿ ಸಹಿ ಮಾಡಿಸಿದ್ದಾರೆ ಜೊತೆಗೆ ಸೂಪರ್ ವೈಸರ್ ಕೂಡ ಸಹಿ ಮಾಡಿದ್ದಾರೆ ಒಟ್ಟು 1.37 ಕೋಟಿ ಕುಟುಂಬಗಳ ಡಾಟಾ ನಮ್ಮ ಬಳಿ ಇದೆ ಎಂದರು.

     

    *ಒಳಮೀಸಲಾತಿ ಗೆ ಜಾತಿಗಣತಿ ವರದಿ ಬಳಸೋ ಚರ್ಚೆ ವಿಚಾರ*

     

    ನಾಗಮೋಹನ್ ದಾಸ್ ರವರಿಗೆ ಮಾಹಿತಿ ಕಲೆ ಹಾಕಲು ತಿಳಿಸಲಾಗಿದೆ, ಅವರು ಸಲ್ಲಿಸುವ ವರದಿ ಜೊತೆಗೆ ಜಾತಿಗಣತಿ ವರದಿಯನ್ನು ಹೋಲಿಕೆ ಮಾಡಲಾಗುತ್ತದೆ ಸಮೀಕ್ಷೆ ಡಬಲ್ ಆದ್ರೆ ಒಳ್ಳೆಯದಲ್ವಾ? ಕಮೀಷನ್ ಈಗಾಗಲೇ ಡಾಟಾ ಮಾಹಿತಿ ಕಲೆಕ್ಟ್ ಮಾಡಲು ಶುರು ಮಾಡಿದೆಈಗ ನಿಲ್ಲಿಸಿ ಅಂತ ಹೇಳೋದು ಸರಿಯಲ್ಲ ಎಂದರು.