Blog

  • ಇ-ಖಾತಾ ಅಭಿಯಾನ : ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಇ-ಖಾತಾ ಪಡೆಯಿರಿ – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಇ-ಖಾತಾ ನೀಡಲಾಗುವುದು ಎಂದು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.

    ನಗರದ ತಾಲ್ಲೂಕು ಪಂಚಾಯಿತಿ ಶಾಸಕರ ಕಚೇರಿಯ ಸಭಾಂಗಣದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಮಾನ್ಯ ಸರ್ಕಾರದ ಅಧಿಸೂಚನೆಯಂತೆ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಅಧಿಕೃತ /ಅನಧಿಕೃತ ಆಸ್ತಿಗಳಿಗೆ ಆಸ್ತಿ ತೆರಿಗೆ ಪಾವತಿ ಕುರಿತು ಇ-ಖಾತಾ (ನಮೂನೆ3/3ಎ) ಪ್ರತಿಗಳನ್ನು ನೀಡಲು ಆದೇಶಿಸಲಾಗಿದೆ ಅದರಂತೆ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯ ಆಸ್ತಿಗಳಿಗೆ ನಗರ ಸಭೆ ವತಿಯಿಂದ ಆಯೋಜಿಸಿರುವ ಇ-ಖಾತಾ ಆಂದೋಲನದಲ್ಲಿ ಸ್ವತ್ತಿನ ಮಾಲೀಕರು ನಿಮ್ಮ ವಾರ್ಡ್‌ಗಳಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಬೆಳಗ್ಗೆ 10-00 ರಿಂದ ಸಂಜೆ 5-00 ಗಂಟೆವರೆಗೆ ನಿಗದಿತ ದಾಖಲೆಗಳೊಂದಿಗೆ ಹಾಜರಾಗಿ ತಮ್ಮ ಸ್ವತ್ತುಗಳಿಗೆ ಇ-ಖಾತಾ ಪಡೆದುಕೊಳ್ಳಬೇಕೆಂದು ತಿಳಿಸಿದರು.

     

    ಎ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು

    *ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು /ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು /ಕಂದಾದ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ.

    * ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.

    * ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.

    *ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ

    *ಮಾಲೀಕರ ಪೋಟೋ ಮತ್ತು ಸ್ವತ್ತಿನ ಪೋಟೋ

    * ಮಾಲೀಕರ ಗುರುತಿನ ದಾಖಲೆ ಪ್ರತಿ.

    ಬಿ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು

    *ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ: 10-09-2024 ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು /ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು.

    * ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.

    *ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.

    *ಮಾಲೀಕರ ಫೋಟೋ ಮತ್ತು ಸ್ವತ್ತಿನ ಪೋಟೋ

    *ಮಾಲೀಕರ ಗುರುತಿನ ದಾಖಲೆ ಪ್ರತಿ.

     

    ಇ-ಖಾತಾ ಆಂದೋಲನವು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏಪ್ರಿಲ್ 3ರಿಂದ ಪ್ರಾರಂಭವಾಗಲಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಏಪ್ರಿಲ್ 4 ರಿಂದ ಪ್ರಾರಂಭವಾಗಿ ಏಪ್ರಿಲ್ 22 ರವರೆಗೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಸ್ಥಳೀಯ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

     

    ನಗರಸಭಾ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಎಲ್ಲಿ ನಡೆಯಲಿದೆ…???

    04-04-2025 ರಂದು ವಿದ್ಯಾನಗರ ಸರ್ಕಾರಿ ಶಾಲೆ ( 9,10 ನೇ ವಾರ್ಡ್ )

    07-04-2025 ರಂದು ತೇರಿನ ಬೀದಿ ಸರ್ಕಾರಿ ಶಾಲೆ( 13, 14, 15 ವಾರ್ಡ್)

    08-04-2025ಮತ್ತು 09-04-2025 ರಂದು ಅಂಬೇಡ್ಕರ್ ಭವನ( 1, 2, 26, 27, 4 ವಾರ್ಡ್ )

    11-04-2025 ರಂದು ಬಾಬು ಜಗಜೀವನ್ ರಾಮ್ ಭವನ(3, 5, 25)

    15-04-2025 ರಂದು ಶ್ರೀನಗರ ಸರ್ಕಾರಿ ಶಾಲೆ( 6, 7, 8 ವಾರ್ಡ್ )

    16-04-2025 ರಂದು ನಂಜುಂಡೇಶ್ವರ ಕಲ್ಯಾಣ ಮಂಟಪ(11, 28, 29, 30, 31ವಾರ್ಡ್ )

    17-04-2025 ರಂದು ವೀರಭದ್ರನಪಾಳ್ಯ ಸರ್ಕಾರಿ ಶಾಲೆ(12, 18, 19, 20ವಾರ್ಡ್ )

    21-04-2025ಪುರಭವನ (ಟೌನ್ ಹಾಲ್) ಬಸ್‌ಸ್ಟ್ಯಾಂಡ್ ಹತ್ತಿರ(16, 17, 21ವಾರ್ಡ್ )

    22-04-2025ಚಿಕ್ಕಪೇಟೆ ಸರ್ಕಾರಿ ಉರ್ದು ಶಾಲೆ(22, 23, 24ವಾರ್ಡ್ )ಯಲ್ಲಿ ನೆಡೆಯಲಿದೆ.

    ಯಾವುದೇ ಮಧ್ಯವರ್ತಿಗಳಿಗೆ ಅಥವಾ ಇತರೆ ವ್ಯಕ್ತಿಗಳ ಮೇಲೆ ಅವಲಂಬಿತವಾಗಿ ಹಣ ನೀಡದೆ ಸ್ವತ್ತಿನ ಮಾಲೀಕರು ಸ್ವತಃ ತಾವೇ ಖುದ್ದಾಗಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಕೇವಲ 250 ರೂಪಾಯಿಗಳ ಶುಲ್ಕ ಪಾವತಿ ಮಾಡುವ ಮೂಲಕ 30 ದಿನಗಳ ಒಳಗಾಗಿ ಇ- ಖಾತಾ ಪಡೆಯಬಹುದಾಗಿದೆ ಎಂದು ತಿಳಿಸಿದರು.

     

     

  • ತೂಬಗೆರೆ : ನಿಲ್ಲದ ನಿಧಿ ಕಳ್ಳರ ಹಾವಳಿ : ವಾಮಾಚಾರ ಮಾಡಿ ನಿಧಿ ಶೋಧಕ್ಕೆ ಮುಂದಾದ ಕಳ್ಳರು

    ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಯದ್ದಲಹಳ್ಳಿ ಸಮೀಪವಿರುವ ಮಲೆನಾಡಿನ ಅನುಭವ ನೀಡುವ, ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಬೆನಕನಹಳ್ಳ  ಶ್ರೀ ಬೆನಕಪ್ಪ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸ್ಯೆಯ ದಿನ ವಾಮಾಚಾರ ಮಾಡಿ ನಿಧಿ ಕಳ್ಳರು ಪುರಾತನ ಛತ್ರ ವಿರೂಪಗೊಳಿಸಿ ಹಳ್ಳ ತೆಗೆದು ಹುಡುಕಾಟ ನಡೆಸಿರುವ ಘಟನೆ ನಡೆದಿದೆ.

    ನಿರ್ಜನ ಪ್ರದೇಶದಲ್ಲಿರುವ ಬೆನಕಪ್ಪ ದೇವಾಲಯದ ಛತ್ರದಲ್ಲಿ ನಿಧಿ ಶೋಧಕ್ಕಾಗಿ ದಿಗ್ಭಂಧನ, ಪೂಜೆ, ಮಾಟ, ಮಂತ್ರ ಮಾಡಲಾಗಿದೆ.  ಗುಂಡಿ ತೋಡಿ ಕುಡಿಕೆ,ಅರಿಶಿಣ, ಕುಂಕುಮ ಹಾಗೂ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಉಪಯೋಗಿಸಿ ಶೋಧಕಾರ್ಯ ನಡೆಸಿದ್ದಾರೆ. ಈ ಘಟನೆಯಿಂದ ದೇವಾಲಯದ ಬಳಿ ಗ್ರಾಮಸ್ಥರು ತೆರಳು ಭಯ ಭೀತರಾಗಿದ್ದಾರೆ.

    Ad

     

    Ad

    Adದೇವಸ್ಥಾನದ ಅರ್ಚಕ ಕುಟುಂಬದ ಉದಯ ಆರಾಧ್ಯ ಮಾತಾನಾಡಿ, ತಾಲೂಕಿನಾದ್ಯಂತ ದೇವಾಲಯಗಳ ಹುಂಡಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಜೂತೆಗೆ ಈಗ ನಿಧಿ ಕಳ್ಳರು ಹಾವಳಿ ಶುರುವಾಗಿದೆ. ಇತ್ತೀಚಿಗೆ ಘಾಟಿ ಸುಬ್ರಹ್ಮಣ್ಯ ರಸ್ತೆಯ ದೇವರ ಬೆಟ್ಟದಲ್ಲಿರುವ ಗುಟ್ಟೆನರಸಿಂಹಸ್ವಮಿ ದೇವಾಲದಲ್ಲೂ ಇದೇ ಮಾದರಿಯ ಶೋಧ ನಡೆಸಿ ಕಲ್ಲಿನ ಮೂರ್ತಿಯನ್ನೇ ಅಪಹರಿಸಿದ್ದರು.

    ಸರ್ಕಾರ ನಿರ್ಜನ ಪ್ರದೇಶದಲ್ಲಿರುವ ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಹೊದಗಿಸಬೇ ಮನವಿ ಮಾಡುತ್ತೇನೆ ಎಂದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಏಪ್ರಿಲ್ 1ರಿಂದ ಹಾಲು ಮೊಸರು ದುಬಾರಿ ಎಷ್ಟು ಗೊತ್ತಾ….????

    ಕರ್ನಾಟಕ ಸರಕಾರ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಏಪ್ರಿಲ್ 1 ರಿಂದ ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿ ಸಲು ತೀರ್ಮಾನಿಸಿದೆ.

     

    ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ಹಾಲು ಮತ್ತು ಮೊಸರಿನ ಬೆಲೆಯನ್ನು ಮುಂದಿನ ತಿಂಗಳಿನಿಂದ ₹ 4 ರಷ್ಟು ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ರಾಜ್ಯದ ರೈತರು ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಾ ಹೋರಾಟ ನೆಡೆಸಿದ್ದರು, ಈ ಹಿನ್ನಲೆ ರಾಜ್ಯ ಸರಕಾರ ಹಾಲು ಮತ್ತು ಮೊಸರಿನ ದರವನ್ನು ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿಸಲು ತೀರ್ಮಾನಿಸಿದೆ.

    Adad

    Adನಂದಿನಿಯ ಹಾಲಿನ ಪರಿಷ್ಕೃತ ಬೆಲೆಗಳು (ಬ್ರಾಕೆಟ್‌ಗಳಲ್ಲಿ ಅಸ್ತಿತ್ವದಲ್ಲಿರುವ ಬೆಲೆಗಳು): ಟೋನ್ಡ್ (ನೀಲಿ ಪ್ಯಾಕೆಟ್): ₹46 (₹42), ಹೋಮೋಜೆನೈಸ್ಡ್ ಟೋನ್ಡ್: ₹47 (₹43), ಹಸಿರು ಪ್ಯಾಕೆಟ್: ₹50 (₹46), ಶುಭಂ (ವಿಶೇಷ/ಕಿತ್ತಳೆ ಪ್ಯಾಕೆಟ್): ₹52 (₹48), ಮತ್ತು ಮೊಸರು: ₹54).

    ಪ್ರತಿನಿತ್ಯ ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಹಜ ಪ್ರಕ್ರಿಯೆಯಾಗಿದ್ದು, ಇದಕ್ಕೆ ಕಾರಣ ಅವುಗಳ ಉತ್ಪಾದನೆಯ ವೆಚ್ಚದಲ್ಲಿ ಆಗುತ್ತಿರುವ ಬೆಲೆ ಏರಿಕೆ.ಈ ರೀತಿ ಹೈನುಗಾರಿಕೆಯ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಹಿಂಡಿ, ಬೂಸಾ, ಜಾನುವಾರುಗಳ ಔಷಧಗಳ ಬೆಲೆಯಲ್ಲಿ ಬಹಳಷ್ಟು ವ್ಯತ್ಯಾಸವಾಗಿದ್ದು ಮೊದಲೇ ಹೈನುಗಾರಿಕೆ ಎಂಬುದು ನಷ್ಟದ ಉದ್ಯೋಗವೆಂದು ಹೇಳಲಾಗುತ್ತದೆ.ಮೇವು ಮತ್ತು ಮೇವಿನ ಬೆಲೆಯಲ್ಲಿ 35%-40% ರಷ್ಟು ಏರಿಕೆಯಾದ ನಂತರ ರೈತರ ಬೇಡಿಕೆಯನ್ನು ಉಲ್ಲೇಖಿಸಿ ಗುರುವಾರ ರಾಜ್ಯ ಸಚಿವ ಸಂಪುಟವು ಈ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೈನುಗಾರರು ಲೀಟರ್ ಹಾಲಿಗೆ ₹5 ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದರು.

     

  • ಎರಡು ದಿನಗಳಲ್ಲಿ ಇ-ಖಾತೆ ಲಭ್ಯವಾಗಲಿದೆ – BBMP ಆಯುಕ್ತ ಮುನೀಶ್ ಮೌದ್ಗಿಲ್

    ಬೆಂಗಳೂರಿನಲ್ಲಿ ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾವನ್ನು (E-khata) ಕಡ್ಡಾಯಗೊಳಿಸಲಾಗಿದ್ದು,ಜನರಿಗೆ ಇ-ಖಾತಾ ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದೆ.

     

    ಇ-ಖಾತಾ ಪಡೆಯಲು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ. ಆದರೂ ಕೆಲ ಸಮಸ್ಯೆಗಳಿಂದ ಇ-ಖಾತಾ ಪಡೆಯಲು ಸಾಧ್ಯವಾಗುತ್ತಿಲ್ಲ.

     

    ಈ ನಡುವೆ ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಶುಭ ಸುದ್ದಿ ನೀಡಿದ್ದಾರೆ, ಹೌದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು (ಅರ್ಜಿದಾರರು) ತಮ್ಮ ಮಾಹಿತಿಯನ್ನು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ bbmpeaasthi.karnataka.gov.in ನಲ್ಲಿ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಿದ ಎರಡು ದಿನಗಳಲ್ಲಿ ತಮ್ಮ ಅಂತಿಮ ಇ-ಖಾತಾವನ್ನು ಪಡೆಯಬಹುದು ಎಂದಿದ್ದಾರೆ.

     

    ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಮತ್ತು ಕೇಸ್‌ ವರ್ಕರ್‌ಗಳು ನಿಗದಿತ ಸಮಯದೊಳಗೆ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

     

     

  • ದೊಡ್ಡಬಳ್ಳಾಪುರ ರಕ್ತದಾನಿಗಳು ಎಂಬ ಹೊಸ ಪ್ರಯತ್ನ : ತುರ್ತು ಸಮಯಕ್ಕೆ ಸಿಗಲಿದ್ದಾರೆ ರಕ್ತದಾನಿಗಳು

    ತುರ್ತು ಸಂದರ್ಭದಲ್ಲಿ ರಕ್ತ ದಾನಿಗಳಿಗಳಿಗಾಗಿ ಹುಡುಕುವ ಕಷ್ಟ ಒಂದೆಡೆಯಾದರೇ ಸೂಕ್ತ ಗುಂಪಿನ ರಕ್ತ ಹುಡುಕುವ ಕಷ್ಟ ಮತ್ತೊಂದೆಡೆ .. ಇಂತಹ ತುರ್ತು ಸಮಯಕ್ಕೆ ಸಹಕಾರಿಯಾಗುವಂತೆ ಯುವ ಸಂಚಲನ ತಂಡ ನೂತನ ಕಾರ್ಯಕ್ಕೆ ಮುಂದಾಗಿದೆ.

     

    ಹೌದು https://blood.yuvasanchalana.com ಮೂಲಕ ಒಮ್ಮೆ ನೀವು ನೋಂದಣಿಯಾದರೆ ರಕ್ತದಾನಿಗಳ ಒಂದು ಡೈರಿ ಸಿದ್ದವಾದಂತೆ ಆಗುತ್ತದೆ ಇದರ ಮೂಲಕ ರಕ್ತದ ಅವಶ್ಯಕತೆ ಇರುವವರಿಗೂ ಹಾಗೂ ರಕ್ತದಾನಿಗಳ ನಡುವೆ ಈ ವೆಬ್ ಸೈಟ್ ಸಂಪರ್ಕ ಸಾಧನವಾಗಿ ಕಾರ್ಯನಿರ್ವಹಿಸಲಿದೆ.

    Ad

     

    Ad

    Ad

    ಈ ಲಿಂಕ್ ವಿಶೇಷವಾಗಿದ್ದು ಲಿಂಕ್ ಬಳಸಿ ಆಪ್ ಓಪನ್ ಮಾಡಿದ ತಕ್ಷಣ ತುರ್ತು ರಕ್ತ ನಿಧಿ ಹುಡುಕುವ ಹಾಗೂ ರಕ್ತದಾನಿಗಳಾಗಿ ಸೇರ್ಪಡೆಗೊಳ್ಳುವ ಎರಡು ಅವಕಾಶ ಕಲ್ಪಿಸಿದ್ದು, ತುರ್ತು ಸಂದರ್ಭದಲ್ಲಿ ತಮಗೆ ಬೇಕಾದ ಗ್ರೂಪಿನ ರಕ್ತವನ್ನು ಸರಳ ರೀತಿಯಲ್ಲಿ ಹುಡುಕಬಹುದಾಗಿದೆ.ಅಲ್ಲದೇ ತಾವು ರಕ್ತದಾನಿಗಳಾಗಿ ಸೇರ್ಪಡೆಗೊಳ್ಳಲು ಬಯಸಿದಲ್ಲಿ ತಾವು ಮುಕ್ತವಾಗಿ ತಮ್ಮ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ.

    ತಮ್ಮ ಮಾಹಿತಿ ಸುರಕ್ಷತೆಯಿಂದ ಕೂಡಿದ್ದು, ರಕ್ತದಾನಿಗಳ ಮಾಹಿತಿ ದುರ್ಬಳಕೆಯಾಗದಂತೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಯುವ ಸಂಚಲನ ತಂಡ ಜಾಗ್ರತೆ ವಹಿಸಿದ್ದು, ಆಸಕ್ತರು ತಮ್ಮ ಮಾಹಿತಿಯೊಟ್ಟಿಗೆ ನೋಂದಾಯಿಸಿಕೊಳ್ಳಬಹುದು ಎಂದು ಯುವ ಸಂಚಲನ ಮುಖಂಡ ಚಿದಾನಂದ್ ತಿಳಿಸಿದ್ದಾರೆ.

     

     

  • ಕೌಟುಂಬಿಕ ಕಲಹ ಹಿನ್ನೆಲೆ : ಯುಗಾದಿ ಹಬ್ಬದಂದೇ ನೇಣು ಬಿಗಿದುಕೊಂಡು ಆತ್ಮಹತ್ಯೆ

    ದೊಡ್ಡಬಳ್ಳಾಪುರ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಲೂಕಿನ ವೀರಾಪುರ ಗ್ರಾಮದ ನಿವಾಸಿ ವಾಸು ( 40ವರ್ಷ ) ನೇಣು ತೆಗೆದುಕೊಂಡು ಆತ್ಮಹತ್ಯೆ ಶರಣಾಗಿದ್ದು.

     

    ಚಾಲಕ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಾಸು (ಮಾ 30) ಭಾನುವಾರ ಮಧ್ಯಾಹ್ನದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ತನ್ನ ಸ್ವಗೃಹ ದಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

    ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಂತರವೇ ಸತ್ಯಸತ್ಯತೆ ಹೊರಬೀಳಲಿದೆ.

  • ಪ್ರಧಾನಿ ಮೋದಿ ಭೇಟಿ ಮಾಡಿದ ಸಂಸದ ಡಾ.ಕೆ.ಸುಧಾಕರ್

    ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು  ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿ ವಿಚಾರವಾಗಿ ಸಂಸದರಾದ  ಡಾ. ಕೆ ಸುಧಾಕರ್ ಅವರು ವಿಸ್ತೃತ ಚರ್ಚೆ ನಡೆಸಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ  ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ತುರ್ತು ಅಗತ್ಯವಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಮನವರಿಕೆ ಮಾಡಿಕೊಟ್ಟು, ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ .

    Ad

    Ad

    Ad

    ಸನ್ಮಾನ್ಯ ಪ್ರಧಾನಿಗಳು ಈ ಕುರಿತು ಪ್ರತಿಕ್ರಿಯೆ ನೀಡಿ  ಹಿಂದೆ ತಾವು ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮಳೆ ನೀರಿನ ಸಂರಕ್ಷಣೆ ಹಾಗು ಅಂತರ್ಜಲ ಮರುಪೂರಣ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಕೈಗೊಂಡ ಯೋಜನೆಗಳು ಹಾಗೂ ಉಪಕ್ರಮಗಳು ಬಗ್ಗೆ ವಿವರಿಸಿ, ಮಳೆಯಾಶ್ರಿತ ಪ್ರದೇಶವಾಗಿರುವ  ಕರ್ನಾಟಕದ ಬಯಲುಸೀಮೆ ಜಿಲ್ಲಗಳಲ್ಲಿಯೂ ಸಹ ಇದೇ ಮಾದರಿಯನ್ನು ಅನುಸರಿಸುವಂತೆ  ಸಂಸದರಿಗೆ  ಸಲಹೆ ನೀಡಿದ್ದಾರೆ.

     

  • ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವಸೇವೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    Ad

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ https://karnemakaone.kar.nic.in/abcd/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    Ad

    19 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ ಹೆಣ್ಣುಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು (ದೈಹಿಕ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿದೆ) ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 23 ಕೊನೆಯ ದಿನ.

    ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 206, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಅಥವಾ ಸಂಬಂಧಪಟ್ಟ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ

    ಬೆಂಗಳೂರು : 2024-25 ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಧ್ಯಮ ಮಾನ್ಯತೆ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಮಾಧ್ಯಮ ಕಿಟ್ ‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಿದರು.

    ಮಾಧ್ಯಮ ಪ್ರತಿನಿಧಿಗಳ ವೃತ್ತಿಪರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳ 168 ಪರಿಶಿಷ್ಟ ಜಾತಿ ಹಾಗೂ 32 ಪರಿಶಿಷ್ಟ ಪಂಗಡದ ಪತ್ರಕರ್ತರು ಸೇರಿ ಒಟ್ಟು 200 ಜನ ಪತ್ರಕರ್ತರು ಈ ಯೋಜನೆಯಡಿ ಲ್ಯಾಪ್‌ಟಾಪ್ ಹಾಗೂ ಕ್ಯಾಮೆರಾ ಒಳಗೊಂಡ ಮಾಧ್ಯಮ ಕಿಟ್ ಪಡೆಯುತ್ತಿದ್ದಾರೆ.

    Ad

     

    Ad

    ಅರಣ್ಯ ಸಚಿವ ಈಶ್ವರ್ ಖಂಡ್ರೆ,ಶಾಸಕ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎಂ.ನರೇಂದ್ರ ಸ್ವಾಮಿ,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್,ವಾರ್ತಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ,ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಸೇರಿದಂತೆ ಹಲವರು ಇದ್ದರು.

  • ಇನ್ನು ಮುಂದೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದಗಳು ಆನ್‌ಲೈನ್‌ ನಲ್ಲಿ ಲಭ್ಯ : ಏನಿದು ʼಇ-ಪ್ರಸಾದʼ ಸಂಪೂರ್ಣ ಮಾಹಿತಿ ನಿಮಗಾಗಿ

    ಕರ್ನಾಟಕ : ವಯಸ್ಸಾದವರು, ವಿಕಲಚೇತನರು, ಒಬ್ಬಂಟಿಗರು ಒಳಗೊಂಡಂತೆ ನಗರ, ಗ್ರಾಮೀಣ ಹಾಗೂ ಹೊರರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ವೆಬ್‌ಸೈಟ್‌ ಮೂಲಕ ಸುಮಾರು 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು https://csc.devalayas.com/ ವೆಬ್ ಸೈಟ್ ಮೂಲಕ ಆನ್‌ಲೈನ್‌ ನಲ್ಲಿ ಆರ್ಡರ್‌ ಮಾಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

     

    ಹೌದು ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ʼಎʼ ಮತ್ತು ʼಬಿʼ ದರ್ಜೆಯ 390 ದೇವಾಲಯಗಳಿವೆ. ಭಕ್ತಾದಿಗಳು ʼಇ-ಪ್ರಸಾದʼ ವೆಬ್‌ಸೈಟ್‌ ಮೂಲಕ ಮೊದಲ ಹಂತದಲ್ಲಿ 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

     

    ಈ ಕುರಿತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾತನಾಡಿ“ನಾನಾ ಕಾರಣಗಳಿಂದಾಗಿ ಎಲ್ಲರಿಗೂ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ವಯಸ್ಸಾದವರು, ವಿಶೇಷ ಚೇತನರು, ಒಬ್ಬಂಟಿಗರು ಒಳಗೊಂಡಂತೆ ಗ್ರಾಮೀಣ, ನಗರ ಹಾಗೂ ಹೊರ ರಾಜ್ಯದ ಭಕ್ತಾದಿಗಳ ಅನುಕೂಲಕ್ಕಾಗಿ ʼಇ-ಪ್ರಸಾದʼ ಸೇವೆ ಆರಂಭಿಸಲಾಗಿದೆ. ರಾಜ್ಯದ ಯಾವುದೇ ಭಾಗದ ಭಕ್ತಾದಿಗಳು ಪ್ರಸಾದಕ್ಕೆ ಆರ್ಡರ್‌ ಮಾಡಿದರೆ ಸಿಎಸ್‌ಸಿ ಇ ಗವರ್ನೆನ್ಸ್‌ ಸಂಸ್ಥೆಯು ಮನೆ ಬಾಗಿಲಿಗೆ ತಲುಪಿಸಲಿದೆ” ಎಂದು ತಿಳಿಸಿದ್ದಾರೆ.

    ಯಾವೆಲ್ಲ ದೇವಾಲಯಗಳ ಪ್ರಸಾದ ಲಭ್ಯ…

     

    ವಿನಾಯಕ ಸ್ವಾಮಿ ದೇವಾಲಯ ಜಯನಗರ, ಬೆಂಗಳೂರು. ಚಲುವನಾರಾಯಣ ಸ್ವಾಮಿ ದೇಗುಲ, ಮೇಲುಕೋಟೆ. ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ನಂಜನಗೂಡು, ಮೈಸೂರು.ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಾಲೂರು, ಕೋಲಾರ. ಸೋಮೇಶ್ವರ ಸ್ವಾಮಿ ದೇವಾಲಯ ಹಲಸೂರು, ಬೆಂಗಳೂರು. ಮೂಕಾಂಬಿಕಾ ದೇವಾಲಯ ಕೊಲ್ಲೂರು, ಉಡುಪಿ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಬೆಂಗಳೂರು.ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೀದರ್.ರೇಣುಕಾ ಯಲ್ಲಮ್ಮ ದೇವಸ್ಥಾನ ಸವದತ್ತಿ, ಬೆಳಗಾವಿ.ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ. ಕನಕದುರ್ಗಮ್ಮ ದೇವಾಲಯ, ಬಳ್ಳಾರಿ. ಮೈಲಾರಲಿಂಗೇಶ್ವರ ದೇವಸ್ಥಾನ, ವಿಜಯನಗರ. ಹುಲಿಗೆಮ್ಮ ದೇವಾಲಯ, ಕೊಪ್ಪಳ.ಗುರುದತ್ತಾತ್ತೇಯ ಸ್ವಾಮಿ ದೇವಾಲಯ, ಕಲ್ಬುರ್ಗಿ ದೇವಾಲಯಗಳ ಪ್ರಸಾದಗಳು ಲಭ್ಯ.