Blog

  • ಶ್ರೀ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ : ಸ್ಥಳೀಯ ಶಾಸಕ ಧೀರಜ್ ಮುನಿರಾಜು ಸೇರಿ ಹಲವು ಗಣ್ಯರು ಭಾಗಿ

    ದೊಡ್ಡಬಳ್ಳಾಪುರ : ದರ್ಗಾಜೋಗಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಭಾರತೀಯ ಜನತಾ ಪಾರ್ಟಿ, ಶ್ರೀ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ (ರಿ) ದೊಡ್ಡಬಳ್ಳಾಪುರ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿತ್ತು.

    ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ತಾಲೂಕಿನ ಶಾಸಕರಾದ ಧೀರಜ್ ಮುನಿರಾಜು ಭಾಗವಹಿಸಿ ಮಾತನಾಡಿದರು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಈ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು , ಹೋಬಳಿಯ ಹಾಗೂ ಸ್ಥಳೀಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಬಿಜೆಪಿ ಕಾರ್ಯ ಕರ್ತರು ಸ್ವ ಇಚ್ಛೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿರುವುದು ಸಂತಸ ತಂದಿದೆ.

     

    ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದ ಜನರು ಬಂದು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುತ್ತಿರುವುದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಮತ್ತಷ್ಟು ಸಂತಸ ತಂದಿದೆ ಎಂದರು.

    ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆ ಮಾಡಿರುವುದು ಸಂತಸದ ವಿಷಯವಾಗಿದ್ದು, ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ (ರಿ) ದೊಡ್ಡಬಳ್ಳಾಪುರ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

     

    ನಮ್ಮ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಾಳತ್ವ ವಹಿಸಿ ಸಾಕಷ್ಟು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ , ಕಾರ್ಯಕ್ರಮದಲ್ಲಿ ಕೇವಲ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಷ್ಟೇ ಅಲ್ಲದೆ.. ತಾಲೂಕಿನ ಹಲವು ಭಾಗಗಳ ಜನರು ಭಾಗವಹಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಂಡಿರುವುದು ಸಂತೋಷದ ವಿಷಯ , ನಮ್ಮ ಹೆಮ್ಮೆಯ ಶಾಸಕರಾದ ಧೀರಜ್ ಮುನಿರಾಜುರವರ ನೇತೃತ್ವದಲ್ಲಿ ಈ ರೀತಿಯ ಸಮಾಜಮುಖಿ ಕಾರ್ಯಗಳು ಮತ್ತಷ್ಟು ನಡೆಯಲಿ ಎಂದರು.

    ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ನಗರ ಮಂಡಲ ಅಧ್ಯಕ್ಷ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಜೆ ವೈ ಮಲ್ಲಣ್ಣ , ಸುರೇಶ್, ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ, ಸ್ಥಳೀಯ ಮುಖಂಡರಾದ ನಾಗರಾಜು, ಮಂಜುನಾಥ್, ಚಂದ್ರು, ಪರಮೇಶ್ವರಯ್ಯ, ಮನೋಜ್, ಗುರು, ಸುನಿಲ್, ವಿಜಿಕುಮಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

     

  • ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಯದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಿ – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮ ತಾಲೂಕು ಕಚೇರಿ ಆವರಣದಲ್ಲಿ ನಡೆಯಿತು.

     

    ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಾಸಕ ಧೀರಜ್ ಮುನಿರಾಜು ಮಾತನಾಡಿದರು,ವೇಮನರು ಸರಳ ಭಾಷೆಗಳಲ್ಲಿ ನುಡಿಗಟ್ಟುಗಳನ್ನು ರಚಿಸಿ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದ್ದರು, ಅವರ ವಚನಗಳಲ್ಲಿ ಬದುಕಿನ ಮೌಲ್ಯಗಳು ಅಡಗಿದ್ದು, ಇವುಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯವಿದೆ ಎಂದರು.

     

    ಆಚರಣೆಗಳಲ್ಲಿ ಅಧಿಕಾರಿಗಳನ್ನು ಭಾಗಿಯಾಗುವಂತೆ ತಿಳಿಸಿ – ಶಾಸಕ ಧೀರಜ್ ಮುನಿರಾಜು

     

    ಕಾರ್ಯಕ್ರಮದಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದನ್ನು ಗಮನಿಸಿದ ಶಾಸಕರು ರಜಾ ದಿನಗಳಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಹಾಗೂ ಈ ಕುರಿತು ತಾಲೂಕು ದಂಡಾಧಿಕಾರಿಗಳು ಪ್ರತಿ ಇಲಾಖೆಗಳಿಗೂ ಮನವರಿಗೆ ಮಾಡಿಕೊಡುವಂತೆ ತಿಳಿಸಿದರು.

     

     

    ವೇಮನ ರೆಡ್ಡಿ ಜನಸಂಘದ ತಾಲೂಕು ಅಧ್ಯಕ್ಷ ಎಂ.ಜಗದೀಶ್ ರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳ ಮೂಲಕ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸಿದ ಸರ್ವಜ್ಞ ಕವಿಯಂತೆ ತೆಲುಗಿನಲ್ಲಿ ವೇಮನ ಕವಿ ತಮ್ಮ ವಚನಗಳಲ್ಲಿ ಬದುಕಿನ ಸಿದ್ದಾಂತಗಳನ್ನು ತಿಳಿಸಿದ್ದರು. ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

     

     

    ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್ .ಹನುಮಂತ ರೆಡ್ಡಿ, ಮಾತನಾಡಿ, ರಾಜ ಮನೆತನದಲ್ಲಿ ಹುಟ್ಟಿ ಎಲ್ಲವನ್ನೂ ತ್ಯಜಿಸಿ, ಶ್ರೇಷ್ಠ ಸಂತರಾಗಿ, ದಾರ್ಶನಿಕರಾಗಿ, ಕವಿಯಾಗಿ ಮನುಕುಲದ ಏಳಿಗೆಗೆ ಸರಳ ಸಹಜವಾದ ಪ್ರಕೃತಿ ಧರ್ಮವನ್ನು ಉಪದೇಶಿಸಿದ ಶ್ರೀ ಮಹಾಯೋಗಿ ವೇಮನರು ಅನೇಕ ಸಾಮಾಜಿಕ ಅರ್ಥಗಾಂಭೀರ್ಯವನ್ನು ಹೊಂದಿರುವ ವಚನ ರಚಿಸಿದ್ದಾರೆ. ರೆಡ್ಡಿ ಸಮುದಾಯಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದೆ ಎಂದರು.

     

     

    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ರೆಡ್ಡಿ ಸಮುದಾಯದ ಬಿ.ಆನಂದರೆಡ್ಡಿ, ಪಿ.ವೆಂಕಟರಾಮರೆಡ್ಡಿ, ಎಂ.ನಾರಾಯಣ ರೆಡ್ಡಿ,ರಾಮಚಂದ್ರ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ,ದಯಾಕರರೆಡ್ಡಿ, ಪ್ರಭಾಕರರೆಡ್ಡಿ, ಶಿವಾರೆಡ್ಡಿ, ಕಸಬಾ ಗ್ರಾಮ ಲೆಕ್ಕಿಗ ಎಚ್.ಎಸ್.ರಾಜೇಂದ್ರ ಬಾಬು, ಗ್ರಾ.ಪಂ ಸದಸ್ಯೆ ನಾಗರತ್ನಮ್ಮ, ಕನ್ನಡ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ನಾಗರಾಜು ಮೊದಲಾದವರು ಭಾಗವಹಿಸಿದ್ದರು.

  • ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ : ಗೆಲುವಿನ ನಗೆ ಬಿರಿದ ಎನ್ ಡಿ ಎ ಅಭ್ಯರ್ಥಿಗಳು

    ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಲಿಗೆ ನೆಡೆದ 11 ಸ್ಥಾನಗಳಿಗೆ ಚುನಾವಣೆಯಲ್ಲಿ 31 ಅಭ್ಯರ್ಥಿಗಳು ಸ್ಪರ್ದಿಸಿದ್ದು ಎನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು 9 ಸ್ಥಾನಗಳನ್ನು ಪಡೆದು ಬಹುಮತದ ಜಯಗಳಿಸಿದ್ದಾರೆ.

    ಸಹಕಾರ ಸಂಘಗಳ ನಿಯಮಗಳ ಪ್ರಕಾರ ಮತಕ್ಷೇತ್ರದಿಂದ ವಿದ್ಯುಕ್ತವಾಗಿ ಸಾಲಗಾರರ ಕ್ಷೇತ್ರದಿಂದ ಬಿ.ಕೆ.ಆನಂದ ಕುಮಾರ್(143),ನಾರಾಯಣಸ್ವಾಮಿ(134),ಕೆ ಎಂ ಅಂಬರೀಷ್ (127),ಸಿ.ನಾರಾಯಣಸ್ವಾಮಿ(119),ವಿಶ್ವನಾಥ(93),ಸಂಜೀವಪ್ಪ(96),ಶಿವಕುಮಾರ್(113)ಕೆಂಪಣ್ಣ (137)ಬಿ.ರಮೇಶ್(118) ಆನಂದಮ್ಮ(134),ಪವಿತ್ರ(86) ಮತಗಳನ್ನು ಪಡೆಯುವ ಮೂಲಕ ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ (ನಿ.)ಕ್ಕೆ ನೂತನವಾಗಿ `ಚುನಾಯಿತರಾಗಿದ್ದಾರೆಂದು ರಿಟರ್ನಿಂಗ್ ಅಧಿಕಾರಿ ಕೆ ಏನ್ ನಾಗಮಣಿ ಘೋಷಿಸಿದರು.

    ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನೂತನವಾಗಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಪುಷ್ಪಮಾಲೆ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

     

    ಈ ಕುರಿತು ಸ್ಥಳಿಯ ಬಿಜೆಪಿ ಮುಖಂಡ ಪ್ರೇಮ್ ಕುಮಾರ್ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳು ಅಳಿವಿನ ಅಂಚಿನಲ್ಲಿವೆ, ಸಹಕಾರ ಸಂಘಗಳನ್ನು ಸಮೃದ್ಧಗೊಳಿಸಲು ಚುನಾಯಿತ ಪ್ರತಿನಿಧಿಗಳು ಸಾಕಷ್ಟು ಶ್ರಮವಹಿಸಬೇಕಿದೆ. ಸರ್ಕಾರದಿಂದ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಕಟ್ಟಡವನ್ನು ನಿರ್ಮಿಸುವ ಯೋಜನೆ ಇದ್ದು ಆ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ಶ್ರಮಿಸಲಿದ್ದಾರೆ ಎಂದರು .

    ಒಂದು ಚುನಾವಣೆ ನಡೆಸಲು ಕನಿಷ್ಠ 5 ಲಕ್ಷ ವೆಚ್ಚವಾಗುತ್ತದೆ ಎಂದು ಮಾಜಿ ಅಧ್ಯಕ್ಷರು ತಿಳಿಸಿದ್ದರು, ಸಹಕಾರ ಸಂಘಗಳ ಚುನಾವಣೆಗೆ 5 ಲಕ್ಷ ರೂಪಾಯಿ ಖರ್ಚು ಮಾಡಿದರೆ ರೈತರ ಹಣ ಪೋಲಾಗುವುದಿಲ್ಲವೇ ಆ ಕಾರಣಕ್ಕಾಗಿ ಕಳೆದ 30 ವರ್ಷಗಳಿಂದ ಸಹಕಾರ ಸಂಘವು ಹಾಳಾಗಬಾರದು , ಸಂಘವು ಉಳಿಯಲಿ ಎಂಬ ಉದ್ದೇಶದಿಂದ ಯಾವುದೇ ಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಂಡು ಬರುತ್ತಿದ್ದೆವು ಆದರೆ ಈ ಬಾರಿ ಚುನಾವಣೆಯಲ್ಲಿ ಕೆಲ ಕಿಡಿಗೇಡಿಗಳು ಕೇವಲ 11 ಸ್ಥಾನಗಳಿಗೆ 63 ಅರ್ಜಿಗಳನ್ನು ಹಾಕಿದ್ದ ಕಾರಣ ಕೆಲವರನ್ನು ಮನವೊಲಿಸಿ ಅರ್ಜಿಗಳನ್ನು ಹಿಂಪಡೆಯುವಂತೆ ಮಾಡಿದ್ದೇವೆ ಕೊನೆಯಲ್ಲಿ 31 ಆಕಾಂಕ್ಷಿಗಳ ನಡುವೆ ನಡೆದ ಚುನಾವಣೆಯಲ್ಲಿ ನಮ್ಮ ಎನ್ ಡಿಎ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಗಳಾಗಿರುವುದು ಸಂತಸ ತಂದಿದೆ ಎಂದರು.

     

    ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಕೆ ಎಂ ಅಂಬರೀಶ್ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು 9 ಸ್ಥಾನಗಳಲ್ಲಿ ಜಯ ಗಳಿಸಿದ್ದೇವೆ, ಈ ಹಿಂದೆ ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯು ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಕೈಗೊಂಡಿಲ್ಲ ಕನಿಷ್ಠ ಸಂಘದ ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯವನ್ನು ಕೂಡ ಮಾಡಲು ಅವರಿಂದ ಸಾಧ್ಯವಾಗಿಲ್ಲ, ಈ ಬಾರಿ ಯುವಕರಿಗೆ ಎನ್ ಡಿ ಎ ಮೈತ್ರಿ ಅವಕಾಶ ಕಲ್ಪಿಸಿದ್ದು ಹಿರಿಯರ ಮಾರ್ಗದರ್ಶನದೊಂದಿಗೆ ಸ್ಥಳೀಯ ಸಹಕಾರ ಸಂಘದ ಉನ್ನತಿಕರಣಕ್ಕೆ ಶ್ರಮಿಸಲಾಗುವುದು ಎಂದರು.

     

    ಬಾಶೆಟ್ಟೆಹಳ್ಳಿ ಪಟ್ಟಣ ಪಂಚಾಯಿತಿಯಿಂದ ಕೇವಲ 4-5 ಕಿಲೋ ಮೀಟರ್ ದೂರದಲ್ಲಿರುವ ಸಹಕಾರಿ ಸಂಘಗಳ ಕಟ್ಟಡಗಳು ಉತ್ತಮ ವೆಚ್ಚದಲ್ಲಿ ಉನ್ನತ ಶ್ರೇಣಿಯಲ್ಲಿ ನಿರ್ಮಾಣಗೊಂಡಿವೆ, ಆದರೆ ನಮ್ಮ ಸಹಕಾರಿ ಸಂಘದ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿ ಇರುವುದು ಶೋಚನಿಯ, ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ವತಿಯಿಂದ ಬ್ಯಾಂಕ್ ಸ್ಥಾಪಿಸುವ ಮೂಲಕ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ , ಈ ಬಾರಿಯ ಚುನಾಯಿತ ಪ್ರತಿನಿಧಿಗಳಾಗಿ ಯುವಕರು ಪ್ರಜ್ಞಾವಂತರು ಆಯ್ಕೆಯಾಗಿದ್ದು ಸಹಕಾರಿ ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸುವ ಆಶಯವಿದೆ ಎಂದರು .

     

    ಈ ಸಂದರ್ಭದಲ್ಲಿ ಎನ್ ಡಿ ಎ ಮುಖಂಡರಾದ ಪ್ರೇಮ್ ಕುಮಾರ್ ,ಕೃಷ್ಣಪ್ಪ ,ಮುನಿಚಂದ್ರ ಸುರೇಶ್ ಬಾಬು, ಮುನಿಶಂಕರ್ ಸೇರಿದಂತೆ ಬಾಶೆಟ್ಟಿಹಳ್ಳಿ ವ್ಯವಸಾಯ ಸಹಕಾರ ಸಂಘಕ್ಕೆ ಸೇರಿದ ಎಲ್ಲಾ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

     

  • ಸಹಾಯಧನ ಪಡೆಯಲು ಎನ್.ಜಿ.ಒ ಗಳಿಂದ ಅರ್ಜಿ ಅಹ್ವಾನ

    ಬೆಂ.ಗ್ರಾ.ಜಿಲ್ಲೆ,ಜ 18 : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು(ಎನ್.ಜಿ.ಒ) ಗಳು ಸಹಾಯಧನ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

     

    ಪರಿಶಿಷ್ಟ ಪಂಗಡದವರ

    ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯ ಕಲ್ಯಾಣಕ್ಕಾಗಿ ಶ್ರಮಿಸುವ ಸ್ವಯಂ ಸೇವಾ ಎನ್.ಜಿ.ಓ ಸಂಸ್ಥೆಗಳು ಹೊಸ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆಯಲು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

     

    ಅರ್ಜಿಯನ್ನು ಫೆಬ್ರುವರಿ 15 ರೊಳಗೆ ಎನ್.ಜಿ.ಓ ಪೋರ್ಟಲ್ ngo.tribal.gov.in ವೆಬ್ ಸೈಟ್ ಮೂಲಕ ಸಲ್ಲಿಸಬಹುದಾಗಿದೆ.

     

    ಹೆಚ್ಚಿನ ಮಾಹಿತಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಕಛೇರಿ ದೂರವಾಣಿ ಸಂಖ್ಯೆ 080-29787448 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕೇಂದ್ರ ವಿಮಾನಯಾನ ಸಚಿವರ ಜತೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ: ರಾಜ್ಯದಲ್ಲಿ ಸೀಪ್ಲೇನ್ ಸೇವೆ; ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಪ್ರಾರಂಭಿಸಲು ಪ್ರಸ್ತಾವನೆ

    ನವದೆಹಲಿ: ಕರ್ನಾಟಕದ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರ ಜತೆ ಮಹತ್ವದ ಮಾತುಕತೆ ನಡೆಸಿದರು.

     

    ನವದೆಹಲಿಯಲ್ಲಿ ಶುಕ್ರವಾರ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ನಾಯ್ಡು ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು; ಎರಡು ಪ್ರಮುಖವಾದ ಮನವಿ ಪತ್ರಗಳನ್ನು ಸಲ್ಲಿಸಿದರು.

     

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿರುವ ಕೃಷ್ಣರಾಜ ಸಾಗರ (ಕೆ ಆರ್ ಎಸ್) ಜಲಾಶಯದಲ್ಲಿ ಸೀಪ್ಲೇನ್ (ಸಮುದ್ರ ವಿಮಾನ ಸೇವೆ) ಆರಂಭಿಸುವ ಬಗ್ಗೆ ಸಚಿವರು, ವಿಮಾನಯಾನ ಸಚಿವರ ಜತೆ ಚರ್ಚೆ ನಡೆಸಿದರು.

     

    ಸಮುದ್ರವಿಮಾನ ಸೇವೆ ಕರ್ನಾಟಕಕ್ಕೆ ಬಹಳ ಮುಖ್ಯವಾದದ್ದು. ಪ್ರವಾಸೋದ್ಯಮಕ್ಕೆ ಇದು ಹೆಚ್ಚು ಬಳ ತುಂಬಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಕುಮಾರಸ್ವಾಮಿ ಅವರು; ಮೈಸೂರು, ಮಂಡ್ಯ, ಬೈಂದೂರು, ಆಲಮಟ್ಟಿ, ಬೇಲೂರು-ಹಳೆಬೀಡು ಮತ್ತು ವಿಜಯನಗರ (ಹಂಪಿ) ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಸಮುದ್ರ ವಿಮಾನ ಸೇವೆಗಳನ್ನು ಪ್ರಾರಂಭಿಸುವ ಪ್ರಸ್ತಾವನೆ ಸಲ್ಲಿಸಿದರು.

     

    ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ಸ್ಥಳಗಳು ತ್ವರಿತ ಮತ್ತು ಸುಲಭ ಪ್ರಯಾಣದ ಆಯ್ಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ ಎಂದು ರಾಮಮೋಹನ್ ನಾಯ್ಡು ಅವರಿಗೆ ಸಚಿವರು ಮನವರಿಕೆ ಮಾಡಿಕೊಟ್ಟರು.

     

    ಸಮುದ್ರ ವಿಮಾನ ಸೇವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜತೆಗೆ, ಕರ್ನಾಟಕದ ಪ್ರವಾಸೋದ್ಯಮಕ್ಕೆ ಅತಿದೊಡ್ಡ ಅವಕಾಶಗಳನ್ನು ತೆರೆಯಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಉಡಾನ್ ಯೋಜನೆ ಮತ್ತು ಆತ್ಮನಿರ್ಭರ ಭಾರತ್ ಪರಿಕಲ್ಪನೆಗೆ ಪೂರಕವಾಗಿವೆ ಎಂದು ಕುಮಾರಸ್ವಾಮಿ ಅವರು ವಿಮಾನಯಾನ ಸಚಿವರಿಗೆ ವಿವರಿಸಿದರು.

     

    *ಹಾಸನ ವಿಮಾನ ನಿಲ್ದಾಣ ಶೀಘ್ರ ಪೂರ್ಣಗೊಳಿಸಲು ಮನವಿ:*

     

    ಹಾಸನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ನಿರ್ಮಾಣವನ್ನು ತ್ವರಿತಗತಿಯಲ್ಲಿ ಮುಗಿಸುವ ಬಗ್ಗೆ ವಿಮಾನಯಾನ ಸಚಿವರಲ್ಲಿ ಬೃಹತ್ ಕೈಗಾರಿಕೆ ಸಚಿವರು ಮನವಿ ಮಾಡಿದರು.

     

    ಹಾಸನ ವಿಮಾನ ನಿಲ್ದಾಣದ ನಿರ್ಮಾಣ ಪೂರ್ಣವಾದರೆ ಪ್ರವಾಸೋದ್ಯಮಕ್ಕೆ ಅನುಕೂಲ ಆಗುವುದರ ಜತೆಗೆ ಕೃಷಿ, ಕೈಗಾರಿಕೆ, ಹೈನುಗಾರಿಕೆ ಸೇರಿದಂತೆ ಅನೇಕ ವಲಯಗಳ ಅಭಿವೃದ್ಧಿಗೆ ವೇಗ ದೊರೆಯಲಿದೆ. ಹಾಸನ ಶೈಕ್ಷಣಿಕ, ಕೃಷಿ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು, ರಾಷ್ಟ್ರೀಯ ಪ್ರವಾಸಿ ಜಾಲದ ಅತಿ ಪ್ರಮುಖ ಕೊಂಡಿಯಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ ಅವರ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ವಿಮಾನ ನಿಲ್ದಾಣ ಯೋಜನೆ ವ್ಯೂಹಾತ್ಮಕವಾಗಿ ಬಹಳ ಮಹತ್ವದ್ದಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

     

    ಹಾಸನ ವಿಮಾನ ನಿಲ್ದಾಣದ ಪ್ರಸ್ತುತ ಯೋಜನೆಗಳು ಈ ಭಾಗದ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಇದನ್ನು ಏರ್‌ಬಸ್ A320 ವಿಮಾನಗಳನ್ನು ನಿರ್ವಹಿಸುವಷ್ಟರ ಮಟ್ಟಿಗೆ ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ. ಇದರಿಂದ ಹಾಸನವು ಕರ್ನಾಟಕದ ಪರಂಪರೆ ಮತ್ತು ಕೈಗಾರಿಕಾ ವಲಯದ ಪ್ರವೇಶದ್ವಾರವಾಗುವಂತೆ ಮಾಡಬಹುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

     

    ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವಿಮಾನಯಾನ ಸಚಿವರು; ಆದಷ್ಟು ಬೇಗ ತಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

     

    ಹಾಸನ ವಿಮಾನ ನಿಲ್ದಾಣದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮುದ್ರ ವಿಮಾನ ಸೇವೆಗಳ ಮೂಲಸೌಕರ್ಯ ಕಾರ್ಯವನ್ನು ತ್ವರಿತಗತಿಯಲ್ಲಿ ಮುನ್ನಡೆಸಲು ನಾಗರಿಕ ವಿಮಾನಯಾನ ಸಚಿವಾಲಯ ಬದ್ಧವಾಗಿದೆ. ತಮ್ಮ ಮನವಿಗಳ ಕೂಡಲೇ ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಅವರು ಕುಮಾರಸ್ವಾಮಿ ಅವರಿಗೆ ಭರವಸೆ ಕೊಟ್ಟರು.

     

    ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಸಚಿವರ ಜತೆಯಲ್ಲಿ ಇದ್ದರು.

     

  • ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿದರು.

     

    ಇದಕ್ಕೂ ಮೊದಲು ಸಮ್ಮೇಳನದ ಆವರಣದಲ್ಲಿ ಆಯೋಜಿಸಿದ್ದ ಸ್ಟಾಲ್ ಗಳನ್ನು ವೀಕ್ಷಿಸಿದರು. ಮಹಿಳಾ ಸ್ವ ಸಹಾಯ ಸಂಘಗಳು ಸಿದ್ದಪಡಿಸಿದ ತಿಂಡಿ ಸವಿದರು.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾದ ಟಿ.ಬಿ.ಜಯಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿ ಜಿಲ್ಲೆಯ ಶಾಸಕರುಗಳು ಹಾಗೂ ಹಲವು ಪ್ರಮುಖರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

  • ತಾಲ್ಲೂಕಿನ ಅಧಿಕಾರಿಗಳ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಎಸ್.ಸಿ-ಎಸ್.ಟಿ. ಜಂಟಿ ಹೋರಾಟ ಸಮಿತಿಯಿಂದ ಪ್ರೆಸ್ ಮೀಟ್

    ದೊಡ್ಡಬಳ್ಳಾಪುರ : ತಾಲ್ಲೂಕಿನ ದಲಿತ ಅಧಿಕಾರಿಗಳ ಮೇಲೆ ಆರೋಪ ಮಾಡಿರುವ ವ್ಯಕ್ತಿ ಮೂರು ದಿನಗಳಲ್ಲಿ ಬೇಷರತ್ ಆಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿಎಸ್.ಸಿ-ಎಸ್.ಟಿ. ಜಂಟಿ ಹೋರಾಟ ಸಮಿತಿಯಿಂದ ಕ್ರಿಮಿನಲ್‌ ಮತ್ತು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಮುಖಂಡರಾದ ಜಿ. ಲಕ್ಷ್ಮೀಪತಿ ತಿಳಿಸಿದರು

     

     

    ನಗರದ ಪ್ರವಾಸಿ ಮಂದಿರದಲ್ಲಿ ಎಸ್.ಸಿ-ಎಸ್.ಟಿ. ಜಂಟಿ ಹೋರಾಟ ಸಮಿತಿವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಅವರು ಮಾತನಾಡಿದರು ನಿಷ್ಠಾವಂತ ಸರ್ಕಾರಿ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಆರ್.ಟಿ.ಐ.ಕಾರ್ಯಕರ್ತ ದಿನೇಶ್ ದೊಡ್ಡಬಳ್ಳಾಪುರ ತಾಲೂಕಿನ ದಲಿತ ಅಧಿಕಾರಿಗಳನ್ನ ಟಾರ್ಗೆಟ್ ಮಾಡಿ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ, ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ , ತಾಲೂಕಿನ ಅಧಿಕಾರಿಗಳಿಗೆ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದರು

     

    ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಮ.ಮುನಿರಾಜು ಮಾತನಾಡಿ ನಮ್ಮ ತಾಲ್ಲೂಕು ಆಡಳಿತ ವಿಚಾರದಲ್ಲಿ ಕಳಂಕ ರಹಿತವಾಗಿದೆ, ಸಾವಿರಾರು ಅಧಿಕಾರಿಗಳು ಈಗಾಗಲೇ ಉತ್ತಮ ಸೇವೆ ಸಲ್ಲಿಸಿ ಹೋಗಿದ್ದಾರೆ, ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಇಲ್ಲಿನ ವಾಸ್ತವಾಂಶವನ್ನು ತಿಳಿಯದೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ, ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡಬೇಕು, ಆದರೆ ಅವರು ಮಾಡುತ್ತಿರುವುದು ಧಮ್ಕಿ ಹೋರಾಟ ಎಂದರು

     

     

    ಉಪವಿಭಾಗಧಿಕಾರಿ ಕಛೇರಿಯಲ್ಲಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೋಜ್ ಎಂಬ ಸಿಬ್ಬಂದಿಯನ್ನ ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ, ಸರ್ಕಾರಿ ಕಚೇರಿಗಳಲ್ಲಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಇದು ಉತ್ತಮ ಬೆಳವಣಿಗೆಯಲ್ಲ, ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಉತ್ತಮ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ದಲಿತರ ಮುಖಂಡರು ಒಂದಾಗಿದ್ದವೇ ತೊಂದರೆ ಕೊಡುವವರಿಗೆ ತಕ್ಕ ಉತ್ತರ ನೀಡುವ ಎಚ್ಚರಿಕೆಯನ್ನು ನೀಡಿದರು.

     

    ದಲಿತ ಮುಖಂಡರಾದ ಆದಿತ್ಯನಾಗೇಶ್ ಮಾತನಾಡಿ, ಇತ್ತಿಚೇಗೆ ತಾಲೂಕಿನಲ್ಲಿ ಲಾಭಿ ಶುರುವಾಗಿದೆ, ಹೊರಗಿನಿಂದ ಬರುವ ರೋಲ್ ಕಾಲ್ ಪತ್ರಕರ್ತರು ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ , ಕೇವಲ ದಲಿತ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ, ಮಾನಸಿಕ ಕಿರುಕುಳ ಕೊಟ್ಟು ಅವರಿಂದ ಹಣ ವಸೂಲಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ, ಇವರಿಗೆ ದಲಿತರ ಅಧಿಕಾರಿಗಳು ಇರೋದು ಸಹಿಸಲು ಆಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು

     

    ಸಮಿತಿಯ ಜಿಲ್ಲಾಧ್ಯಕ್ಷ ಕೆಂಪಣ್ಣ ಮಾತನಾಡಿ ಇಂದು ತಾಲೂಕಿನ ಎಲ್ಲ ದಲಿತಪರ ಜನಪರ ಪ್ರಗತಿಪರ ಚಿಂತಕರು ಮುಖಂಡರು ಒಂದಾಗಿದ್ದೇವೆ , ಕಾರಣ ತಾಲೂಕಿನಲ್ಲಿ ಅಧಿಕಾರಿಗಳು ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ಸರಿಸಲಿ ಎಂಬುದಷ್ಟೇ ಉದ್ದೇಶ , ಪ್ರಮುಖವಾಗಿ ಕೆಲ ಸಾಮಾಜಿಕ ಹೋರಾಟಗಾರರು ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಡುತ್ತಿದ್ದು ಅಂಥವರ ವಿರುದ್ಧ ನಮ್ಮ ಸಮಿತಿಯು ಹೋರಾಟ ನಡೆಸಲಿದೆ , ಈ ಸುದ್ದಿಗೋಷ್ಠಿ ಕೇವಲ ಸಾಂಕೇತಿಕವಷ್ಟೇ.. ಕೂಡಲೇ ಆರ್ ಟಿ ಐ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಕ್ಷಮೆ ಯಾಚಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು .

     

    ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ರಾಮಮೂರ್ತಿ ( ರಾಮು ) ನೆರಳೇಘಟ್ಟ ಮಾತನಾಡಿ ಅಧಿಕಾರಿಗಳು ತಪ್ಪು ಮಾಡಿದ ಪಕ್ಷದಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸಲು ಉನ್ನತ ಅಧಿಕಾರಿಗಳು ಇದ್ದಾರೆ , ಆದರೆ ದಿನೇಶ್ ಕಲ್ಲಹಳ್ಳಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹರಡುವ ಮೂಲಕ ಸಾರ್ವಜನಿಕರಲ್ಲಿ ಅಧಿಕಾರಿಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಸಂಘಟನೆ ಹಾಗೂ ಸಮಿತಿ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದರು

     

    ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ-ಎಸ್ಟಿ ಹೋರಾಟ ಜಂಟಿ ಸಮಿತಿಯ ಜಿಲ್ಲಾಧ್ಯಕ್ಷರಾದ ಕೆಂಪಣ್ಣ, ತಾಲೂಕು ಅಧ್ಯಕ್ಷರಾದ ರಾಮಮೂರ್ತಿ ನೇರಳಘಟ್ಟ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ದಲಿತ ಮುಖಂಡರಾದ ಲಕ್ಷ್ಮೀಪತಿ, ಪ್ರೇಮ್ ಕುಮಾರ್, ಓಬದೇನಹಳ್ಳಿ ಮುನಿಯಪ್ಪ, ಗೋಪಾಲ್ ನಾಯ್ಕ್, ನಗರಸಭಾ ಸದಸ್ಯರಾದ ಮೋಹನ್ ಕುಮಾರ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅಪ್ಪಿವೆಂಕಟೇಶ್, ಕರವೇ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಸೇರಿದಂತೆ ತಾಲೂಕಿನ ದಲಿತ ಮುಖಂಡರು ಭಾಗವಹಿಸಿದರು

     

  • ನಿಧನ ವಾರ್ತೆ : ತೂಬಗೆರೆ ವೆಂಕಟೇಶಪ್ಪ ( ದೇವೇಗೌಡ್ರು) ಇನ್ನಿಲ್ಲ

    ತೂಬಗೆರೆ : ಪ್ರಮುಖರು ಸದಾ ದೈವ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ತೂಬಗೆರೆಯ ವೆಂಕಟೇಶಪ್ಪ ( ದೇವಗೌಡ್ರು, ಬಳೆಸ್ವಾಮಿ ) ರವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ .

     

    ಕಳೆದ ಶುಕ್ರವಾರ (ಜ. 10) ನಗರದ ಡಿ ಕ್ರಾಸ್ ಸಮೀಪ ಅಪಘಾತಕ್ಕಿಡಾಗಿದ್ದ ಅವರು ಕಳೆದ 7ದಿನಗಳಿಂದ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು , ಜ 16ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

     

    ಅಪಘಾತ ಕುರಿತಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಹಂತದಲ್ಲಿದೆ , ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • ಶಿಗ್ಗಾವಿಯಲ್ಲಿ “KRS ರೈತ ಸಮೃದ್ಧಿ ಕೇಂದ್ರ”ದ ಉದ್ಘಾಟನೆ : ಒಂದೆರಡು ತಿಂಗಳಿನಲ್ಲಿ ಬೀಜ, ಗೊಬ್ಬರಗಳು ಸೇರಿದಂತೆ ಪೂರ್ಣಪ್ರಮಾಣದ ವಹಿವಾಟು – ರವಿ ಕೃಷ್ಣ ರೆಡ್ಡಿ

    ಶಿಗ್ಗಾವಿ : ಸಣ್ಣಪ್ರಮಾಣದಲ್ಲಿ ಅದು ವ್ಯಾಪಾರ-ವಹಿವಾಟಿಗೆ ತೆರೆದುಕೊಂಡಿದ್ದ ಕೇಂದ್ರ ಮುಂದಿನ ಒಂದೆರಡು ತಿಂಗಳಿನಲ್ಲಿ ಬೀಜ, ಗೊಬ್ಬರಗಳು ಸೇರಿದಂತೆ ಪೂರ್ಣಪ್ರಮಾಣದ ವಹಿವಾಟು ಸಾಧ್ಯವಾಗಲಿದೆ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

     

    ಶಿಗ್ಗಾವಿಯಲ್ಲಿ ನೂತನ “KRS ರೈತ ಸಮೃದ್ಧಿ ಕೇಂದ್ರ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಸಾಮಾನ್ಯರು ನ್ಯಾಯ, ನೀತಿ, ನೈತಿಕತೆ, ಕಾಯಕದಿಂದ ಬದುಕುವುದೇ ದೊಡ್ಡ ಸವಾಲಾಗಿರುವ ಇಂದಿನ ದಿನಗಳಲ್ಲಿ ಪರ್ಯಾಯ ಮತ್ತು ಸುಸ್ಥಿರ ಮಾರ್ಗಗಳ ಹುಡುಕಾಟದ ಭಾಗವಾಗಿ ಇದನ್ನು ಆರಂಭಿಸಲಾಗಿದೆ.

     

    ವ್ಯವಸ್ಥೆಯೇ ಭ್ರಷ್ಟವಾಗಿರುವ ಮತ್ತು ದುಷ್ಟವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಬಡವರು ಮತ್ತು ರೈತರು ಅನ್ಯಾಯಕ್ಕೆ ಒಳಗಾಗದಿರುವುದು ಹೇಗೆ ಮತ್ತು ನ್ಯಾಯವಾಗಿ ಜೀವನ ಕಟ್ಟಿಕೊಳ್ಳುವ ಮಾರ್ಗಗಳೇನು ಎನ್ನುವ ನಿಟ್ಟಿನಲ್ಲಿ ಮಾದರಿಗಳನ್ನು ಯಾರಿಗಲ್ಲದಿದ್ದರೂ KRS ಪಕ್ಷದ ಸೈನಿಕರಿಗೆ ತೋರಿಸುವ ಕೆಲಸ ಮುಂದಿನ ದಿನಗಳಲ್ಲಿ ಇದರ ಮೂಲಕ ಆಗಲಿದೆ. ನಾವು ಶೀಘ್ರದಲ್ಲಿಯೇ ಆರಂಭಿಸಲಿರುವ ರೈತ ಉತ್ಪಾದಕ ಸಂಸ್ಥೆಗೆ(FPO) ಚಾಲಕ ಶಕ್ತಿಯಾಗಿ ಇದು ಕಾರ್ಯನಿರ್ವಹಿಸಲಿದೆ.

     

    ವ್ಯಾಪಾರ, ವ್ಯವಹಾರ, ಸ್ವಂತಉದ್ದಿಮೆ, ಸ್ವಉದ್ಯೋಗ ಮಾಡಬಯಸುವ KRS ಪಕ್ಷದ ಕಾರ್ಯಕರ್ತರು, ಅದರಲ್ಲಿಯೂ ಯುವಕಾರ್ಯಕರ್ತರು, ಇಲ್ಲಿಗೆ ಬಂದು ವ್ಯಾಪಾರದ ಅನುಭವ ಪಡೆಯಬಹುದು. ಜೊತೆಗೆ ಜನಸಾಮಾನ್ಯರ ಜೊತೆಗೆ ಸಂಪರ್ಕ ಏರ್ಪಡಿಸಿಕೊಂಡು ಪ್ರಾಮಾಣಿಕ ರಾಜಕಾರಣ ಮಾಡುವುದು ಹೇಗೆ ಎನ್ನುವುದನ್ನೂ ಅರಿಯಬಹುದು. ಬನ್ನಿ ಎಂದು ಈ ಮೂಲಕ ಆಹ್ವಾನಿಸುತ್ತಿದ್ದೇನೆ. ಎಂದಿನಂತೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ.

     

    ಮುಂದಿನ ದಿನಗಳಲ್ಲಿ KRS ಪಕ್ಷದ ಆಸಕ್ತ ಸೈನಿಕರಿಗೆ ಉದ್ಯಮಶೀಲತೆ ಕುರಿತು ಇಲ್ಲಿ ತರಬೇತಿ ಕಾರ್ಯಾಗಾರಗಳನ್ನೂ ನಡೆಸಲಾಗುದು ಎಂದರು.

     

    ಈ ಸಂದರ್ಭದಲ್ಲಿ ಸ್ಥಳೀಯ ಕೆ ಆರ್ ಎಸ್ ಪಕ್ಷದ ಸೇನಾನಿಗಳು, ಪ್ರಮುಖರು ಉಪಸ್ಥಿತರಿದ್ದರು.

  • ಬಾದಾಮಿ ಬನಶಂಕರಿದೇವಿಗೆ ಶ್ರೀಗಳಿಂದ ಪಿತಾಂಬರ ಸೀರೆ ವಸ್ತ್ರ ಸಮರ್ಪಣೆ

    ಬಾದಾಮಿ ಬನಶಂಕರಿದೇವಿಗೆ ಹಂಪೆ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನದ ವತಿಯಿಂದ ಹಂಪೆಯಿಂದ ಬಾದಮಿ ಕ್ಷೇತ್ರದವರೆಗೆ ಪಿತಾಂಬರ ಸೀರೆ ವಸ್ತ್ರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಪಾದಯಾತ್ರೆಯ ಮೂಲಕದ ತಂದು ಬನಶಂಕರಿದೇವಿಯ ಸನ್ನಿದಿಯಲ್ಲಿ ದೇವಾಸ್ಥಾನದ ಮುಖ್ಯ ಅರ್ಚಕರಿಗೆ ಪಿತಾಂಬರ ಸೀರೆಯನ್ನ ಸಮರ್ಪಣೆ ಮಾಡಲಾಯಿತು

     

     

    ಈ ಪಿತಾಂಬರ ಸೀರೆ ವಸ್ತ್ರವನ್ನು ಬನದ ಹುಣ್ಣಿಮೆಯ ದಿನ ಅಭಿಷೇಕದ ನಂತರ ಬ್ರಾಹ್ಮಿಕಾಲದಲ್ಲಿ ತಾಯಿ ಜಗನ್ಮಾತೆ ಬನಶಂಕರಿದೇವಿಗೆ ಪ್ರಥಮವಾಗಿ ಈ ಪಿತಾಂಬರ ಸೀರೆಯನ್ನ ಉಡಿಸಲಾಗುತ್ತದೆ. ತದನಂತರ ಇನ್ನಿತರ ವಸ್ತ್ರಗಳು, ಆಭರಣಗಳು ಹೂ-ಮಾಲೆಗಳೊಂದಿಗೆ ಅಲಂಕೃತಗೊಳಿಸಲಾಗುತ್ತದೆ ಎಂದು ಹಂಪೆ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನ ಶ್ರೀ ದಯಾನಂದಪುರಿ ಸ್ವಾಮೀಜಿಯವರು ತಿಳಿಸಿದರು.