Blog

  • ಖಾಸಗಿ ಬಡಾವಣೆ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ ಒತ್ತುವರಿಯ ಆರೋಪ : ಶೀಘ್ರ ಕ್ರಮ ಕೈಗೊಳ್ಳುವಂತೆ ಕರವೇ ಅಗ್ರಹ

    ದೊಡ್ಡಬಳ್ಳಾಪುರ : ಪಾಲನಜೋಗಿಹಳ್ಳಿ ಕೆರೆಯ ಅಂಗಳವನ್ನು ಮುಚ್ಚಿ ಸುಮಾರು 60 ಅಡಿ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ಖಾಸಗಿಯವರು ಬಡಾವಣೆಯವರು ಮುಂದಾಗಿದ್ದಾರೆ, ಈ ಕುರಿತು ತಾಲೂಕು ಆಡಳಿತ ಈ ಕೊಡಲೇ ಸೂಕ್ತ ಕ್ರಮ ಕೈಗೊಂಡು ಕೆರೆ ಸಂಪತ್ತನ್ನು ಉಳಿಸಬೇಕೆಂದು ಹೋರಾಟಗಾರ ಪು.ಮಹೇಶ್ ತಿಳಿಸಿದರು

     

    ತಾಲ್ಲೂಕಿನ ಪಾಲನಜೋಗಿಹಳ್ಳಿ ಕೆರೆಯ ಸರ್ವೆ ನಂ.21 ರಲ್ಲಿ 13-21 ಎ.ಗು ಜಮೀನಲ್ಲಿ 60 ಅಡಿಗಳ ವಿಸ್ತೀರ್ಣವನ್ನು ಖಾಸಗಿ ಬಡಾವಣೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆಯನ್ನು ನಿರ್ಮಾಣ ಮಾಡುವುದನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನೆಡೆಸಲಾಯಿತು

     

    ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ಜಿಲ್ಲೆಯು ಅತಿ ವೇಗವಾಗಿ ಬೆಳೆಯುತ್ತಿದ್ದು, ಕೆಲವು ಖಾಸಗಿಯವರು ಬಡಾವಣೆಗಳು ಇದನ್ನು ತಿಳಿದು, ಯಾವುದೇ ಸರಿಯಾದ ಅನುಮತಿಗಳಿಲ್ಲದೆ ಬಡಾವಣೆಗಳನ್ನು ಮಾಡಿ ಗ್ರಾಹಕರಿಗೆ ಟೋಪಿ ಹಾಕಿ ಮೋಸ ಮಾಡಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರು ಅನಂತಪುರ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಪಾಲನಜೋಗಳ್ಳಿಯ ಸರ್ವೇ ನಂಬರ್ 21ರಲ್ಲಿ ಸುಮಾರು 13 ಎಕರೆಯಲ್ಲಿ ಕೆರೆ ಇದ್ದು ಮುಖ್ಯ ರಸ್ತೆಯಿಂದ ಬಡಾವಣೆಗೆ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದು ಕೆರೆಯನ್ನು ಸಂಪೂರ್ಣವಾಗಿ ಮುಚ್ಚುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕಂದಾಯ ಅಧಿಕಾರಿಗಳು ಈ ಕುರಿತು ತನಿಖೆ ನೆಡೆಸಿ ಸ್ಥಳ ಪರಿಶೀಲನೆ ಮಾಡುವ ಮೂಲಕ ಕೆರೆಯ ಸಂರಕ್ಷಣೆಯನ್ನು ಮಾಡಬೇಕಿದೆ ಎಂದರು.

     

    ಸಂಘಟನೆಯ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡುತ್ತೇವೆ ಕೆರೆ ಸಂಪನ್ಮೂಲ ಹಾಳಾಗುತ್ತಿದ್ದು , ಅದನ್ನು ಉಳಿಸುವ ಕಾರ್ಯ ಅತಿ ಶೀಘ್ರವಾಗಿ ನಡೆಯಬೇಕಿದೆ , ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಮುಖಾಂತರ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕಿದೆ , ತಾವು ಈ ಅರ್ಜಿ ಬಂದ ಹತ್ತು ದಿನಗಳ ಒಳಗಾಗಿ ಸ್ಥಳ ಪರಿಶೀಲನೆ ಮಾಡದಿದ್ದಲ್ಲಿ ನಾವು ಕೆರೆಯ ಸ್ಥಳದಲ್ಲೇ ಗ್ರಾಮಸ್ಥರ ಸಮ್ಮುಖದಲ್ಲಿ ನ್ಯಾಯ ಸಿಗುವವರೆಗೂ ನಾವು ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

     

    ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್ ಎಲ್ ಎನ್ ವೇಣು, ಖಜಾಂಚಿ ಆನಂದ್ ಕುಮಾರ್, ನಗರ ಅಧ್ಯಕ್ಷ ಶ್ರೀನಗರ ಬಶೀರ್, ನಗರ ಪ್ರಧಾನ ಕಾರ್ಯದರ್ಶಿ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಕೆ ಆರ್ ಮಂಜುನಾಥ ,ಮುಕ್ಕೇನಹಳ್ಳಿ ರವಿ ಸೇರಿದಂತೆ ಹಲವರು ಉಪಸಿತರಿದ್ದರು.

  • ಮಹಾತ್ಮ ಗಾಂಧೀಜಿ ಅವರ ದುಶ್ಚಟ ಮುಕ್ತ ದೇಶದ ಕನಸು ನನಸಾಗಬೇಕಿದೆ : ಉಮಾರಬ್ಬ

    ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡ ಬೆಲವಂಗಲ ವಲಯದ ಹುಲಿಕುಂಟೆ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಇವರ ವತಿಯಿಂದ ಮಾದಕ ವ್ಯಸನಗಳ ದುಷ್ಪರಿಣಾಮಗಳ ಅರಿವಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಉಮರಬ್ಬ ಮಾತನಾಡಿ ಭಾರತ ವಿಶ್ವದಲ್ಲಿ ಅತೀ ಹೆಚ್ಚು ಯುವಕ ಯುವತಿಯರನ್ನು ಹೊಂದಿದ ದೇಶವಾಗಿದೆ ಹೆಚ್ಚಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಮಹಾತ್ಮ ಗಾಂಧೀಜಿ ಅವರ ದುಶ್ಚಟ ಮುಕ್ತ ದೇಶದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ವ್ಯಸನ ಮುಕ್ತ ಸಮಾಜಕ್ಕೆ ಅರಿವು ಕಾರ್ಯಕ್ರಮಗಳು ಅತಿ ಮುಖ್ಯವಾಗಿದೆ ಎಂದರು.

     

     

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗೋವಿಂದರಾಜು ಮಾತನಾಡಿ ಬೀಡಿ, ಸಿಗರೇಟು,ಗುಟ್ಕಾ , ಗಾಂಜಾ,ಅಫೀಮ್, ಮದ್ಯಸೇವನೆ ಸೇರಿ ಇನ್ನಿತರ ಮಾದಕ ವಸ್ತುಗಳ ಸೇವನೆ ಜೀವಕ್ಕೆ ಹಾಗೂ ಜೀವನಕ್ಕೆ ಅಪಾಯಕಾರಿಯಾಗಿದೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂತಹ ಮಾದಕ ವ್ಯಸನಗಳ ದುಶ್ಚಟಗಳಿಂದ ದೂರವಿರಬೇಕು, ಮಾದಕ ವ್ಯಸನಗಳ ದುಷ್ಪರಿಣಾಮಗಳಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂದರು

     

    ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮುನಿ ಕೃಷ್ಣಪ್ಪ, ತಾಲ್ಲೂಕು ಯೋಜನಾದಿಕಾರಿಗಳಾದ ಸುಧಾ ಭಾಸ್ಕರ್,ವಲಯ ಮೇಲ್ವಿಚಾರಕರಾದ ಅನ್ನಪೂರ್ಣ ಸೇರಿದಂತೆ ಸೇವಾಪ್ರತಿನಿಧಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

  • ಮುನೇಶ್ವರ ಸ್ವಾಮಿ ದೇವಾಲಯದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ : ತೆರವುಗೊಳಿಸುವ ಮೂಲಕ ಪೂಜೆಗೆ ಅನುಕೂಲ ಕಲ್ಪಿಸುವಂತೆ ಸ್ಥಳೀಯರ ಆಗ್ರಹ

    ದೊಡ್ಡಬಳ್ಳಾಪುರ : ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಮುನೇಶ್ವರ ಸ್ವಾಮಿ ದೇವಾಲಯದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಶ್ರೀ ಗಂಗಾಪರಮೇಶ್ವರಿ ದೇವಿ ಸೇವಾ ಅಭಿವೃದ್ಧಿ ಸಮಿತಿ ಟ್ರಸ್ಟ್ ನ ಯುವಕರು ಆರೋಪಿಸಿದರು.

     

    ಈ ಕುರಿತು ಸ್ಥಳೀಯರಾದ ಮುನಿರಾಜು ಮಾತನಾಡಿ ಕಸಬಾ ಹೋಬಳಿ ರೋಜಿಪುರ ಗ್ರಾಮ ಸರ್ವೆ ನಂಬರ್ 92 ರಲ್ಲಿ 0.23 ಗುಂಟೆ ಖರಾಬು ಹೂವಿನ ತೋಟ ಎದ್ದಿದ್ದ ಸದರಿ ಜಾಗದಲ್ಲಿ ಅನಾಧಿ ಕಾಲದಿಂದಲೂ ದಲಿತ ಕುಟುಂಬದವರು ಸುಮಾರು ವರ್ಷಗಳಿಂದ ಶ್ರೀ ಮುನೇಶ್ವರ ಸ್ವಾಮಿ ದೇವರ ಪೂಜೆ ನೆಡೆಸಿಕೊಂಡು ಬರುವುದಲ್ಲದೇ ದೇವಾಲಯದಲ್ಲಿ ಮುಡಿ ಕಾರ್ಯ ಹಾಗೂ ಯುಗಾದಿ ಹಬ್ಬದಂದು ವಿಶೇಷ ಪೂಜಾ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ ಆದರೆ ಸರ್ವೇ ನಂ 92ರ ಸರ್ಕಾರಿ ಖರಾಬು ಜಾಗವು ಪ್ರಸ್ತುತ ವೀರಪ್ಪ ಶೆಟ್ಟಿ ಎಂಬುವರ ಹೆಸರಿನಲ್ಲಿ ಪಹಣಿ ಬರುತ್ತಿದೆ ಇದು ಹೇಗೆ ಸದ್ಯ..

     

    ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ಜಾಗವನ್ನು ಇಂದು ನಮಗೆ ಸೇರಿದ ಜಾಗ ಎಂದು ಸದರಿ ಜಾಗದಲ್ಲಿ ವಾಣಿಜ್ಯ ಮಳಿಗಳನ್ನು ನಿರ್ಮಿಸಲಾಗುತ್ತಿದೆ,ಈ ಸಂಬಂಧ ತಹಶೀಲ್ದಾರ್, ನಗರಸಭೆ ಪೌರಯುಕ್ತರಿಗೆ ದೂರು ನೀಡಲಾಗಿದ್ದು, ವಾಣಿಜ್ಯ ಮಳಿಗೆಗಳನ್ನು ವಶಕ್ಕೆ ಪಡೆದು ಮುಜರಾಯಿ ಇಲಾಖೆ ವಶಕ್ಕೆ ನೀಡ ಬೇಕು ಹಾಗೂ ಸ್ಥಳೀಯರು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅಗ್ರಹಿಸಿದರು

     

     

    ಸ್ಥಳೀಯರಾದ ಗಜೇಂದ್ರ ಮಾತನಾಡಿ ನಮ್ಮ ತಾತನ ಕಾಲದಿಂದ ಈ ಜಾಗದಲ್ಲಿ ಪೂಜೆ ಮಾಡುತ್ತಿದ್ದೆವು, ಕಳೆದ ವರ್ಷದ ಯುಗಾದಿ ಹಬ್ಬದ ದಿನ ಸಹ ನಾವು ಪೂಜೆ ಮಾಡಿ ಹೋಗಿದ್ದೆವು, ಈ ಮೊದಲು ಈ ಜಾಗದಲ್ಲಿ ಹೂವಿನ ತೋಟ ಇತ್ತು, ಮುನೇಶ್ವರಸ್ವಾಮಿ ಪೂಜೆ ಮಾಡುವ ದಿನ ಪೆಂಟಾಲ್ ಹಾಕಿ ಮರಿ ಹೊಡೆದು ಜನರಿಗೆ ಊಟ ಹಾಕುತ್ತಿದ್ದೆವು, ಆದರೀವತ್ತು ದೇವಸ್ಥಾನದ ಜಾಗವನ್ನ ಒತ್ತುವರಿ ಮಾಡಿ, ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡಿ ನಾವು ಒಳಗೆ ಬರದಂತೆ ತಡೆಯುತ್ತಿದ್ದಾರೆ, ಒತ್ತುವರಿಯಾಗಿರುವ ಜಾಗವನ್ನ ತೆರವು ಮಾಡಿ ನಮ್ಮ ಮಕ್ಕಳಿಗೆ ಪೂಜೆ ಮಾಡುವ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

     

    ಈ ವೇಳೆ ಸ್ಥಳೀಯರಾದ ನಾಗರಾಜು, ಕುಮಾರ್, ವಿನಯ್, ಮುನಿರಾಜು, ಮಾದೇಶ, ಶಿವಕುಮಾರ್, ವೆಂಕಟೇಶ್

     

  • ರಾಜಘಟ್ಟ ಸ್ಮಶಾನದ ಅಳತೆ, ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಲು ಸ್ಥಳಕ್ಕೆ ಅಧಿಕಾರಿಗಳ ಮರುಭೇಟಿ : ಈ ಬಾರಿಯಾದರೂ ಸೂಕ್ತ ಕ್ರಮ ಕೈಗೊಳ್ಳಲಿ – ಗಣೇಶ್ ರಾಜಘಟ್ಟ

    ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮದ ಸ.ನಂ. 138 ರ ಸ್ಮಶಾನದ ಅಳತೆ ಮಾಡುವಂತೆ ಹಾಗೂ ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಲು ಹಲವು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಈ ಕುರಿತಂತೆ ಡಿಸೆಂಬರ್ 18ರಂದು ಗ್ರಾಮಕ್ಕೆ ಭೇಟಿಕೊಡುತ್ತಿರುವ ಅಧಿಕಾರಿಗಳು ಈ ಬಾರಿಯಾದರೂ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕಿದೆ ಎಂದು ರಾಜಘಟ್ಟ ಗ್ರಾಮಾಭಿರುದ್ದಿ ಯುವಕರ ಸೇನೆ ಸಂಸ್ಥಾಪಕ ಗಣೇಶ್ ರಾಜಘಟ್ಟ ತಿಳಿಸಿದರು.

     

    ಈ ಕುರಿತು ಮಾತನಾಡಿದ ಅವರು ನಮ್ಮ ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆಯ ವತಿಯಿಂದ ಹಲವು ಬಾರಿ ಈ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ರಾಜಘಟ್ಟ ಗ್ರಾಮದ ಸ.ನಂ. 138 ರ ಸ್ಮಶಾನದ ಜಾಗದಲ್ಲಿ ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಲು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸ್ಥಳದ ಕಂಪ್ಯೂಟರ್ ಸರ್ವೇ ಮಾಡಲಾಗಿತ್ತು , ಆದರೆ ಸ್ಥಳದ ಸರ್ವೇ ನೆಡೆದು ಒಂದು ವರ್ಷ ಕಳೆದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಶ್ನಾರ್ಥಕವಾಗಿದೆ , ಇದೇ ತಿಂಗಳ 18ನೇ ತಾರೀಕಿನಂದು ಸ್ಮಶಾನ ಒತ್ತುವರಿ ಕುರಿತಂತೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಲಿರುವ ಭೂ ದಾಖಲೆಯ ಸಹಾಯಕ ನಿರ್ದೇಶಕ ಅಧಿಕಾರಿ ಮೋಹನ್ ಹಾಗೂ ಸಿಬ್ಬಂದಿ ವರ್ಗ ಈ ಬಾರಿಯಾದರೂ ಸೂಕ್ತ ಕ್ರಮ ಕೈಗೊಂಡು ಸ್ಮಶಾನ ಜಾಗದ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಗ್ರಾಮಸ್ಥರ ಪರ ನಿಲುವು ಕೈಗೊಳ್ಳಲಿದ್ದಾರಾ…??? ಎಂದು ಕಾದು ನೋಡಬೇಕಿದೆ ಎಂದರು.

     

    ಗ್ರಾಮದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಅಧಿಕಾರಿಗಳು ನಿಷ್ಪಕ್ಷಪಾತ ಸ್ಪಷ್ಟ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರಿ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಕಲ್ಪಿಸಬೇಕಿದೆ ಎಂದರು.

     

  • ಕಟ್ಟಡ ಹಾಗೂ ಕೂಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಕಿಟ್ ವಿತರಣೆ : ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ – ಭಾಗ್ಯಲಕ್ಷ್ಮಿ

    ದೊಡ್ಡಬಳ್ಳಾಪುರ: ಕಾರ್ಮಿಕರಿಗೆ ಸೇಪ್ಟಿ ಕಿಟ್ ಟ್ರೈನಿಂಗ್ ಕಾರ್ಯಕ್ರಮವನ್ನು ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘ(ರಿ) ಇದರ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

     

    ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಭಾಗವಹಿಸಿ ಸೇಫ್ಟಿ ಕಿಟ್ ನ ಬಗ್ಗೆ ಟ್ರೈನಿಂಗ್ ಪಡೆದರು.

     

    ಈ ಸಮಯದಲ್ಲಿ ಕಟ್ಟಡ ಹಾಗೂ ಕೂಲಿ ಕಾರ್ಮಿಕರ ರಾಜ್ಯಾಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮಿ ರವರು ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಈ ಮೊದಲೇ ನ್ಯೂಟ್ರಿಷನ್ ಕಿಟ್ ಕಾರ್ಮಿಕರಿಗೆ ವಿತರಿಸಿದ್ದು ಕಳಪೆ ಗುಣಮಟ್ಟದ ಕಿಟ್ ಗಳನ್ನು ನೀಡಿರುತ್ತಾರೆ, ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳುತ್ತಾ ಇದರ ಅವಶ್ಯಕತೆ ಕಾರ್ಮಿಕರಿಗೆ ಇಲ್ಲವೆಂದು ಸಾವಿರಾರು ಕಾರ್ಮಿಕರು ತಿಳಿಸಿರುತ್ತಾರೆ ಮತ್ತು ಇಂತಹ ಕಿಟ್ ಗಳ ಬದಲಾಗಿ ಅದೇ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿದ್ದರೆ ತಮಗೆ ಬೇಕಾದ ಆರೋಗ್ಯ ಸೌಲಭ್ಯವನ್ನು ತಾವೇ ಪಡೆದುಕೊಳ್ಳುತ್ತಿದ್ದೆವು ಎಂದು ತಿಳಿಸಿರುತ್ತಾರೆ ಎಂದು ಹೇಳಿದರು.

     

    ಅದರಂತೆ ಎಲೆಕ್ಟ್ರಿಷಿಯನ್ ಕಿಟ್, ವೆಲ್ಡಿಂಗ್ ಕಿಟ್‌ಗಳನ್ನು ನೀಡಿದ್ದು ಅದರಲ್ಲಿ ಕಳಪೆ ಮಷೀನ್ ಗಳನ್ನು ಕಾರ್ಮಿಕ ಇಲಾಖೆ ನೀಡಿರುತ್ತದೆ ಈ ಮಿಷಿನ್ ಗಳು ಒಂದು ಬಾರಿ ಉಪಯೋಗಕ್ಕೆ ಮಾತ್ರ ಯೋಗ್ಯವಾಗಿವೆ. ಕಳಪೆ. ಇಂತಹ ಕಳಪೆ ಕಿಟ್ ಗಳನ್ನು ನೀಡಿರುವುದನ್ನ ಗಮನಿಸಿದರೆ ಕಾರ್ಮಿಕ ಇಲಾಖೆಯು ಯಾವುದೋ ಸಂಸ್ಥೆಗಳನ್ನು ಉದ್ದಾರ ಮಾಡಲು ಕೆಲವೊಂದು ಯೋಜನೆಗಳನ್ನು ರೂಪಿಸಿದಂತೆ ಕಾಣುತ್ತಿದೆ ಎಂದು ರಾಜ್ಯಾಧ್ಯಕ್ಷರಾದ ಭಾಗ್ಯಲಕ್ಷ್ಮಿಯವರು ಬೇಸರವನ್ನು ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಸದಸ್ಯರು, ಕೂಲಿ ಕಾರ್ಮಿಕರು ಹಾಜರಿದ್ದರು.

  • ಆರ್ ಎಲ್ ಜಾಲಪ್ಪ ವಿದ್ಯಾ ಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯ, ಪಾಲಿಟೆಕ್ನಿಕ್ ಕಾಲೇಜು, ಅಂತಾರಾಷ್ಟ್ರೀಯ ವಸತಿ ಶಾಲೆಗಳಲ್ಲಿ ಜೆ.ನರಸಿಂಹಸ್ವಾಮಿಯವರಿಗೆ ನುಡಿನಮನ ಸಂತಾಪ

    ದೊಡ್ಡಬಳ್ಳಾಪುರ:ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಹಾಗೂ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರ ನಿಧನ ಹಿನ್ನಲೆ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳಲ್ಲಿ ಸೋಮವಾರ ಸಂತಾಪ ಸೂಚಕ ನುಡಿನಮನ ಕಾರ್ಯಕ್ರಮಗಳು ನಡೆದವು.

     

     

    ಆರ್‌ಎಲ್‌ಜೆಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಮತ್ತು ನರಸಿಂಹಸ್ವಾಮಿ ಕಿರಿಯ ಸಹೋದರ ಜೆ.ರಾಜೇಂದ್ರ ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದರು. ಅವರು ಮಾತನಾಡಿ, ಸಹೃದಯಿ ಮನೋಸ್ಥಿತಿಯ ನರಸಿಂಹಸ್ವಾಮಿ ಅವರು ಎಲ್ಲ ಹಂತಗಳಲ್ಲಿ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆ ನೋವು ತಂದಿದೆ ಎಂದು ಸ್ಮರಿಸಿದರು.

     

    ಎಸ್‌ಡಿಯುಐಎಂ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಸಾಮಾಜಿಕ ಬದುಕಿನಲ್ಲಿ ಏರಿಳಿತಗಳನ್ನು ಕಂಡರೂ ಜನರ ವಿಶ್ವಾಸವನ್ನು ಪಡೆದಿದ್ದರು. ರಾಜಕಾರಣ ಮತ್ತು ವ್ಯಕ್ತಿಗತ ಬದುಕಿನಲ್ಲಿ ಗೆದ್ದು ಸೋತ ನರಸಿಂಹಸ್ವಾಮಿ ಅವರು, ದೊಡ್ಡಬಳ್ಳಾಪುರದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

     

     

    ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸಂತಾಪ:

    ಇಲ್ಲಿನ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆ.ನರಸಿಂಹಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿ, ಶ್ರದ್ದಾಂಜಲಿ ಅರ್ಪಿಸಲಾಯಿತು.

     

     

    ಪ್ರಾಂಶುಪಾಲ ಪ್ರೊ.ನರಸಿಂಹರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್‌ ನರಸಿಂಹಸ್ವಾಮಿ ಅವರ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಕುರಿತು ಮಾತನಾಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

     

    ವಸತಿ ಶಾಲೆಯಲ್ಲಿ ಶ್ರದ್ದಾಂಜಲಿ:

    ಶ್ರೀ ದೇವರಾಜ ಅರಸ್‌ ಅಂತಾರಾಷ್ಟ್ರೀಯ ವಸತಿ ಶಾಲೆಯ ಆವರಣದಲ್ಲಿ ಪ್ರಾರ್ಥನೆಯ ವೇಳೆ ನರಸಿಂಹಸ್ವಾಮಿ ನುಡಿನಮನ ಆಯೋಜಿಸಲಾಗಿತ್ತು. ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೃತರ ಗೌರವಾರ್ಥ ಮೌನಾಚರಣೆ ನಡೆಯಿತು. ಪ್ರಾಂಶುಪಾಲ ಧನಂಜಯ್ ಅಧ್ಯಕ್ಷತೆ ವಹಿಸಿದ್ದರು.

     

     

    ಲಯನ್ಸ್‌ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬು ರೆಡ್ಡಿ, ಅಕಾಡೆಮಿಕ್ ಡೀನ್ ಡಾ.ಶ್ರೀನಿವಾಸರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಇಇ ರಮೇಶ್‌ಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಹಂತೇಶಪ್ಪ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ನರಸಿಂಹರೆಡ್ಡಿ, ವಸತಿ ಶಾಲೆ ಪ್ರಾಂಶುಪಾಲ ಧನಂಜಯ್, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್, ಐಟಿಐ ಪ್ರಾಂಶುಪಾಲ ರವಿಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಜರಿದ್ದರು.

     

     

  • ಆಹಾರ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್

    ಬೆಂ. ಗ್ರಾ. ಜಿಲ್ಲೆ :- ಹೋಟೆಲ್, ಬೇಕರಿ, ಬೀದಿಬದಿ ಆಹಾರ ಘಟಕಗಳು ಹಾಗೂ ಇತರೆ ಆಹಾರ ತಯಾರಿಕಾ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಹೇಳಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಸುದ್ದಿಗಳು ಕಂಡುಬರುತ್ತಿರುತ್ತವೆ. ಆಹಾರ ತಯಾರಿಕೆಗೆ ಕಳಪೆ ಗುಣಮಟ್ಟದ ಪದಾರ್ಥಗಳ ಬಳಕೆ, ಒಮ್ಮೆ ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುವುದು. ಇಂತಹ ಕಳಪೆ ಗುಣಮಟ್ಟದ ಆಹಾರ ಕಂಡುಬಂದಲ್ಲಿ ಅಂತಹ ಉದ್ದಿಮೆಗಳಿಗೆ ದಂಡದ ಜೊತೆಗೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

     

    ಆಹಾರ ಸುರಕ್ಷತೆ ಅಧಿಕಾರಿಗಳು ಹೋಟೆಲ್, ಬೀದಿಬದಿ ಆಹಾರ ಘಟಕಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿ ಎಂದರು.

     

    ಆಹಾರ ತಯಾರಿಕೆಯಲ್ಲಿ ಯಾವುದನ್ನು ಬಳಸಬೇಕು, ಯಾವುದನ್ನು ಬಳಸಬಾರದು ಎಂಬುದರ ಬಗ್ಗೆ ಸಾರ್ವಜನಿಕರಿಗೆ, ಆಹಾರ ಉದ್ದಿಮೆಗಳಿಗೆ ಜಾಗೃತಿ ಮೂಡಿಸಿ ಎಂದರು.

     

    ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ, ಅಂಗನವಾಡಿ ಮತ್ತು ವಸತಿನಿಲಯ, ಹಾಸ್ಟೆಲ್ ಗೆ ಭೇಟಿ ನೀಡಿ ಆಹಾರ ತಯಾರಿಸುವುದರ ಬಗ್ಗೆ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಅರಿವು ಮೂಡಿಸಿ ಎಂದರು.

     

    *ಕೃತಕ ಬಣ್ಣ ನಿಷೇಧ*

     

    ಈಗಾಗಲೇ ಸರ್ಕಾರವು ಗೋಬಿ ಹಾಗೂ ಕಬಾಬ್ ತಯಾರಿಕೆಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿದೆ. ಅದಾಗ್ಯೂ ಹೋಟೆಲ್ ಗಳು, ರೆಸ್ಟೋರೆಂಟ್, ಬೀದಿಬದಿ ಘಟಕಗಳು ಕೃತಕ ಬಣ್ಣ ಬಳಸಿ ಆಹಾರ ತಯಾರಿಸುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

     

    ವೆಜ್ ಆಹಾರ, ಚಿಕನ್, ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಿದರೆ ಏಳು ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ನಿಯಮ 59ರಡಿ ವಿಧಿಸಲಾಗುವುದು ಎಂದು ತಿಳಿಸಿದರು.

     

    ಆಹಾರ ಘಟಕಗಳು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ನೋಂದಣಿ ಹಾಗೂ ಪರವಾನಗಿಗಳನ್ನು ಹೆಚ್ಚು ಹೆಚ್ಚು ಮಾಡಿಸಿ, ಆಹಾರದ ಸ್ಯಾಂಪಲ್ ಗಳನ್ನು ಹೆಚ್ಚು ಸಂಗ್ರಹಿಸಿ ವರದಿ ಪಡೆಯಿರಿ. ಆಹಾರ ಉದ್ದಿಮೆಗಳು ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ನಿರ್ದೇಶಿಸಿ ಎಂದರು.

     

    ಬೀದಿಬದಿಗಳಲ್ಲಿ ತಯಾರಿಸುವ ಆಹಾರದ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ನಿಗಾ ವಹಿಸಿ, ನಿಯಮಿತವಾಗಿ ಸಾರ್ವಜನಿಕರಿಂದ ಬಂದಂತಹ ದೂರಿನನ್ವಯ ಆಹಾರ ಮಾದರಿಗಳನ್ನು ಸಂಗ್ರಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

     

    ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ ಜಿಲ್ಲೆಯಲ್ಲಿ 5326 ಆಹಾರ ಪರವಾನಗಿ ಪಡೆದ ಆಹಾರ ಉದ್ದಿಮೆಗಳು ಇದ್ದು ಎಪ್ರಿಲ್ ಮಾಹೆಯಿಂದ ನವೆಂಬರ್ ಅಂತ್ಯದವರೆಗೆ 209 ಆಹಾರ ಘಟಕಗಳಿಗೆ ಭೇಟಿ ನೀಡಿ 41 ಘಟಕಗಳಿಗೆ ನೋಟಿಸ್ ನೀಡಲಾಗಿದೆ. 22 ಘಟಕಗಳಿಗೆ ದಂಡ ವಿಧಿಸಿ 69000 ರೂ ದಂಡ ಸಂಗ್ರಹಿಸಲಾಗಿದೆ ಎಂದರು.

     

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಆಧಿಕಾರಿ ಡಾ.ನಾಗೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ ಸೇರಿದಂತೆ ಜಿಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಆಹಾರ ಸುರಕ್ಷತೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಡ್ರೋನ್ ತರಬೇತಿ:ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

    ಬೆಂ.ಗ್ರಾ.ಜಿಲ್ಲೆ, ಡಿ.16 (ಕ.ವಾ):-ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗಾಗಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದ್ದು ಡಿಸೆಂಬರ್ 23 ರವರೆಗೆ ಅವಧಿ ವಿಸ್ತರಿಸಲಾಗಿದೆ.

     

    ಹೆಚ್ಚಿನ ವಿವರಗಳಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ- 08029787448, ದೇವನಹಳ್ಳಿ ತಾಲ್ಲೂಕು ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ- 08027681784, ದೊಡ್ಡಬಳ್ಳಾಪುರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ದೂ.ಸಂ-08027623681, ನೆಲಮಂಗಲ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ದೂ.ಸಂ- 08027723172, ಹೊಸಕೋಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ದೂ.ಸಂ- 08027931528 ಈ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್ 2024 : ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ

    ಡಿಸೆಂಬರ್ 9 ರಂದು ಬ್ಯಾಂಕಾಕ್ ಥೈಲ್ಯಾಂಡಿನಲ್ಲಿ ನಡೆದ 6ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ನಗರದ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪದಕಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ.

     

    ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಕೀರ್ತನ ಬಿ.ಎಂ (ಬೆಳ್ಳಿ ಪದಕ),ಪುನೀತ್ ಕೊಂಗಾಡಿ ಎನ್ ( ಕಂಚಿನ ಪದಕ ),ಕೀರ್ತನ ಬಿ.ಎಸ್ ( ಬೆಳ್ಳಿ ಪದಕ) ಮತ್ತು ರೋಜಿಪುರದ ಚಿನ್ನರ ಕೂಟ ವಿದ್ಯಾರ್ಥಿಯಾದ ರಾಧಾ ಸ್ವರೂಪ್ .ಎಸ್ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

     

    ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಂತರಾಷ್ಟ್ರೀಯ ಯೋಗ ತರಬೇತಿದಾರರಾದ ವಿನೋದ್ ಕುಮಾರ್ ಎಸ್, ನವ್ಯಶ್ರೀ ಎಂ.ಕೆ ಮತ್ತು ಜಯಭಾರತಿ ಅರವಿಂದ್ ರವರು ಅಭಿನಂದಿಸಿದ್ದಾರೆ.

  • ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ ಮುಕ್ತಾಯ : ಹುಂಡಿ ಎಣಿಕೆಯಲ್ಲಿ ಒಟ್ಟು 75, 30, 068ರೂ. ಮೊತ್ತ ಸಂಗ್ರಹ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು ರೂ.75ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದೆ.

     

    ಹೌದು ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿಯಲ್ಲಿ ಭಕ್ತರ ಕಾಣಿಕೆಯನ್ನು ಸೋಮವಾರ ಎಣಿಕೆ ಮಾಡಲಾಯಿತು.

     

    ಹುಂಡಿ ಎಣಿಕೆಯಲ್ಲಿ ಒಟ್ಟು 75, 30, 068ರೂ. ಮೊತ್ತ ಸಂಗ್ರಹವಾಗಿದೆ.

     

     

    ಇದರೊಂದಿಗೆ 76,500 ರೂ ಮೌಲ್ಯದ 02 ಕೆಜಿ 250 ಗ್ರಾಂ ಬೆಳ್ಳಿ, 18900 ರೂ ಮೌಲ್ಯದ 3 ಗ್ರಾ.600 ಮಿಲಿ ತೂಕದ ಚಿನ್ನ ಹುಂಡಿಯಲ್ಲಿ ಸಂಗ್ರಹವಾಗಿದೆ.ದೇವಾಲಯದ ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

     

     

    ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಾಹಶೀಲ್ದಾರ್ ರವರು ಜಿ.ಜೆ. ಹೇಮಾವತಿ, ಪ್ರಧಾನ ಅರ್ಚಕ ಆರ್ ಸುಬ್ರಹ್ಮಣ್ಯ, ದೇವಾಲಯದ ಸಿಬ್ಬಂದಿ ನಂಜಪ್ಪ ಹಾಗೂ ದೇವಾಲಯದ ಸಿಬ್ಬಂದಿಗಳು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಪೊಲೀಸ್ ಇಲಾಖೆ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳು ಹಾಜರಿದ್ದರು.