Blog

  • *ಮಾಹಿತಿ ನೀಡದೆ ಆಸ್ಪತ್ರೆ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮ ಮುಂದೂಡಿಕೆ : ಕಾರ್ಯಕ್ರಮಕ್ಕೆ ಬಂದಿದ್ದ ನಗರಸಭಾ ಸದಸ್ಯರಿಂದ ಇಲಾಖೆ ವಿರುದ್ಧ ಪ್ರತಿಭಟನೆ*

    ದೊಡ್ಡಬಳ್ಳಾಪುರ : ತಾಯಿ-ಮಗು ಆಸ್ಪತ್ರೆಯ ವಿವಿಧ ಕಾಮಾಗಾರಿಗಳ ಶಂಕು ಸ್ಥಾಪನೆಗೆ ಆಹ್ವಾನ ನೀಡಿದ್ದ ಅಧಿಕಾರಿಗಳು ಕಾರ್ಯಕ್ರಮವನ್ನು ಏಕಾಏಕಿ ರದ್ದು ಮಾಡಿದ್ದಾರೆ, ಅಧಿಕಾರಿಗಳಿಂದ ಜನಪ್ರತಿನಿಧಿಗಳ ತೋಜೋವಧೆ ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.

    ದೊಡ್ಡಬಳ್ಳಾಪುರ ನಗರದ ತಾಯಿ-ಮಗು ಆಸ್ಪತ್ರೆಯ ಅವರಣದಲ್ಲಿ ಸುಮಾರು 5 ಕೋಟಿ ವೆಚ್ಚದ ಕಾಂಪೌಂಡ್, ಸ್ವಾಗತ ಕಾಮಾನು ಮತ್ತು ಶಿಫ್ಟ್ ಕಾಮಾಗಾರಿಗಳ ಶಂಕುಸ್ಪಾಪನೆಯ ಕಾರ್ಯಕ್ರಮವನ್ನು ಇಂದು(ಆಗಸ್ಟ್ 29)ಬೆಳಗ್ಗೆ ಅಯೋಜನೆ ಮಾಡಲಾಗಿದ್ದು, ಆರೋಗ್ಯಾಧಿಕಾರಿಗಳು ಕಾರ್ಯಕ್ರಮಕ್ಕೆ ಬರುವಂತೆ ಜನಪ್ರತಿನಿಧಿಗಳಿಗೆ ಆಹ್ವಾನವನ್ನು ನೀಡಿದ್ದರು , ಬೆಳಗ್ಗೆ 8 ಗಂಟೆಗೆ ದೊಡ್ಡಬಳ್ಳಾಪುರ ನಗರಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಕಾರ್ಯಕ್ರಮ ರದ್ದಾಗಿರುವ ವಿಚಾರ ತಿಳಿದಿದೆ, ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಅಕ್ರೋಶಗೊಂಡ ನಗರಸಭಾ ಸದಸ್ಯರು ಆರೋಗ್ಯಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.

     

     

    ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್ ಮಾತನಾಡಿ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಸಣ್ಣದೊಂದು ಮಾಹಿತಿ ನೀಡದೆ ಇಲಾಖೆ ಅಧಿಕಾರಿಗಳು ಶಾಸಕರನ್ನು ಸೇರಿದಂತೆ ಜನಪ್ರತಿನಿಧಿಗಳ ತೋಜೋವಧೆ ಮಾಡಿದ್ದಾರೆ, ಕಾರ್ಯಕ್ರಮ ರದ್ದಾಗಲು ಕಾರಣ ಕೇಳಿದರೆ ಜಿಲ್ಲಾ ಉಸ್ತುವಾರಿಗಳ ನೆಪ ಹೇಳುತ್ತಿದ್ದಾರೆ, ಪದೇ ಪದೇ ಕಾರ್ಯಕ್ರಮವನ್ನ ಮುಂದೂಡಿಕೆ ಮಾಡಿ ಸಾರ್ವಜನಿಕರ ಹಣವನ್ನ ವ್ಯರ್ಥ ಮಾಡುತ್ತಿದ್ದಾರೆ ಅಧಿಕಾರಿಗಳ ವರ್ತನೆಗೆ ಬೇಸತ್ತು ನಾವೇ ಗುದ್ದುಲಿ ಪೂಜೆ ಮಾಡುತ್ತಿದ್ದೇವೆ ಎಂದರು.

    ಪ್ರತಿಭಟನೆಯಲ್ಲಿ ನೆರೆದಿದ್ದ ನಗರಸಭಾ ಸದಸ್ಯರು ತಾವೇ ಗುದ್ದಲಿ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಿದರು.

     

     

    ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಸುಧಾಲಕ್ಷ್ಮೀನಾರಾಯಣ್, ನಗರಸಭಾ ಸದಸ್ಯರಾದ ಪದ್ಮನಾಬ್, ಸುಮಿತ್ರ ಆನಂದ್, ಹಂಸಪ್ರಿಯ, ಮುಖಂಡರಾದ ಗೋಪಿ, ಮುದ್ದಪ್ಪ ಭಾಗವಹಿಸಿದ್ದರು.

  • *ಕೆಸ್ತೂರು ಪಂಚಾಯತಿ ಅಧ್ಯಕ್ಷರ ವಿರುದ್ಧ ಸದಸ್ಯರ ಆಕ್ರೋಶ : ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ*

    ದೊಡ್ಡಬಳ್ಳಾಪುರ : 17 ಸದಸ್ಯರ ಬಲ ಹೊಂದಿರುವ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರನ್ನು ಕುರಿತು ಪಂಚಾಯಿತಿ ಸದಸ್ಯರಲ್ಲಿ ಅಸಮಾಧಾನ ಉಂಟಾಗಿದ್ದು,ಅಧ್ಯಕ್ಷರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

     

    ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರ ಬೆಂಬಲದೊಂದಿಗೆ 6 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷರಾಗಿ ಇರುವುದ್ದಾಗಿ ಹೇಳಿ ಅವರ ಅವಧಿ ಮುಗಿದು 7 ತಿಂಗಳು ಕಳೆದರು ರಾಜೀನಾಮ ಕೊಡದೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ, ಕಳೆದ ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆಯಾಗಲಿ, ಗ್ರಾಮಸಭೆಯಾಗಲಿ ಅಥವಾ ವಾರ್ಡ್ ಸಭೆಗಳಾಗಲಿ ನಡೆದಿಲ್ಲ, ರಸ್ತೆ,ನೀರು ಮತ್ತು ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ನಿರ್ಧಾರ ಕೈಗೊಳ್ಳುವ ಅವರ ಗುಣ ಸರ್ವಾಧಿಕಾರಿ ಧೋರಣೆಯನ್ನು ತೊರುತ್ತದ್ದೆ , ಸ್ಥಳೀಯ ಸಮಸ್ಯೆಗಳನ್ನ ಬಗೆಹರಿಸಲಾಗದೆ ಗ್ರಾಮಸ್ಥರಿಂದ ಪ್ರತಿನಿತ್ಯ ನಿಂದನೆಗೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.

     

    ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಮಂಜುನಾಥ್ ಮಾತನಾಡಿ ಅಧ್ಯಕ್ಷರಾದ ರಮೇಶ್ ರವರು ತಮ್ಮ ಸ್ವಾರ್ಥಕ್ಕಾಗಿ ಅಧ್ಯಕ್ಷ ಸ್ಥಾನವನ್ನ ಬಳಸಿಕೊಂಡಿದ್ದಾರೆ, ಸ್ಥಳೀಯರ ಸಮಸ್ಯೆಗಳನ್ನ ಅಲಿಸುವ ವ್ಯವಧಾನ ಸಹ ಇಲ್ಲ, ನಾನೇ ಅಧ್ಯಕ್ಷನಾಗಿರ ಬೇಕು, ನಂದೇ ಮಾತು ನಡೆಯ ಬೇಕೆಂಬ ಧೋರಣೆಯನ್ನ ಹೊಂದಿದ್ದಾರೆ, ಯಾವೊಬ್ಬ ಸದಸ್ಯರಿಗೂ ಅವರ ಮೇಲೆ ವಿಶ್ವಾಸವಿಲ್ಲದೆ ಇರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

     

    ಸದಸ್ಯರಾದ ರಾಜಣ್ಣ ಮಾತನಾಡಿ, ಸರ್ವ ಸದಸ್ಯರು ಒಮ್ಮತದಿಂದ ಸ್ಥಳೀಯ ರಮೇಶ್ ರವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೆವು , ಆದರೆ ಇಂದು ಯಾವ ಸದಸ್ಯರಿಗೂ ಅವರು ಗೌರವ ನೀಡುತ್ತಿಲ್ಲ , ಅವರ 12 ತಿಂಗಳ ಅವಧಿಯಲ್ಲಿ ಕೇವಲ 3 ಸಾಮಾನ್ಯ ಸಭೆಗಳನ್ನು ಮಾಡಲಾಗಿದೆ, ಇದರಿಂದ ನೀರು,ರಸ್ತೆ, ಸ್ವಚ್ಛತೆ ಸಮಸ್ಯೆಗಳನ್ನ ಬಗೆಹರಿಸಲು ಸಾಧ್ಯವಾಗಿಲ್ಲ, ಅಧ್ಯಕ್ಷರ ದೆಸೆಯಿಂದ ಸದಸ್ಯರಾದ ನಾವು ಗ್ರಾಮಸ್ಥರಿಂದ ಬೈಸಿಕೊಳ್ಳುವಂತಾಗಿದೆ ಎಂದರು.

     

    ಗ್ರಾಮ ಪಂಚಾಯತಿ ಸದಸ್ಯರಾದ ಅಶ್ವಥನಾರಾಯಣ್ ಮಾತನಾಡಿ, ಹಾಲಿ ಅಧ್ಯಕ್ಷರಾಗಿ ರಮೇಶ್ ರವರು ಉಪಾಧ್ಯಕ್ಷ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು, ಒಂದು ಅವಕಾಶವನ್ನ ಮಾಡಿಕೊಡಲು ಸದಸ್ಯರೆಲ್ಲರು ಒಮ್ಮತದಿಂದ ರಮೇಶ್ ರವನ್ನ ಅಧ್ಯಕ್ಷರನ್ನಾಗಿ ಮಾಡಿದೆವು, 6 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷರನ್ನಾಗಿ ಮಾಡಿದ್ದು, ಅವಧಿ ಮುಗಿದು 7 ತಿಂಗಳಾದ್ರು ರಾಜೀನಾಮೆ ಕೊಟ್ಟಿಲ್ಲ, ರಾಜೀನಾಮೆ ಕೇಳಿದ್ರೆ ನಮ್ಮನ್ನು ಮಾತನಾಡಿಸುವದನ್ನೇ ಬಿಟ್ಟುಬಿಡುತ್ತಾರೆ, ಅವರೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಬೆಲೆ ಇರುತ್ತದೆ, ಇಲ್ಲದಿದ್ದಾರೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ತೆಗೆದು ಕೊಳ್ಳುತ್ತೇವೆ ಎಂದರು.

     

     

    ಸದಸ್ಯರಾದ ಕೃಷ್ಣಪ್ಪ ಮಾತನಾಡಿ, ಕೆಸ್ತೂರು ಗ್ರಾಮ ಪಂಚಾಯಿತಿ 17 ಸದಸ್ಯರು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ, ಎಲ್ಲರ ಒಮ್ಮತದಿಂದ ರಮೇಶ್ ರನ್ನ ಅಧ್ಯಕ್ಷರನ್ನ ಮಾಡಿದೆವು, ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದಾರೆ ಅಧ್ಯಕ್ಷರ ವಿರುದ್ಧ ನಾವು ಮಾತನಾಡುತ್ತಿರಲಿಲ್ಲ, ಸ್ವಾರ್ಥ ಮನೊಭಾವದ ವ್ಯಕ್ತಿ ಅವರು, ಅಧ್ಯಕ್ಷ ಸ್ಥಾನಕ್ಕೆ ಅವರು ಸೂಕ್ತರಲ್ಲ, ಇ ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ 1 ಲಕ್ಷ ಹಣವನ್ನ ಕಳೆದ 8 ತಿಂಗಳಿಂದ ಅವರೇ ಇಟ್ಟು ಭ್ರಷ್ಟಚಾರ ನಡೆಸಿದ್ದಾರೆಂದು ಆರೋಪಿಸಿದರು.

     

    ಇದೇ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆಂಜಿನಮ್ಮ, ಕೆ.ಎಂ.ಮುರಳಿ, ವಿಜಿಕುಮಾರ್, ಮುನಿರಾಜು, ಗಾಯಿತ್ರಿ, ಮಧುಮಾಲತಿ, ರಾಜಮ್ಮ, ರಾಜಮ್ಮ , ಶೃತಿ, ಲಕ್ಷಮ್ಮ, ಪಂಕಜ ಹಾಜರಿದ್ದರು

  • *ಸ್ಥಳೀಯ ಅಂಗನವಾಡಿಗಳ ಸಮಸ್ಯೆ ಕುರಿತಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸುದ್ದಿಗೋಷ್ಠಿ*

    ಬೆಂಗಳೂರು (ವಿಜಯಮಿತ್ರ) : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ದಿನಾಂಕಃ 14.08.2024 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ, ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳಿಗೆ ಆಕಸ್ಮಿಕ ಬೇಟಿ ನೀಡಿ ಪರಿಶೀಲನೆ ನೆಡೆಸಿ ವರದಿ ಸಲ್ಲಿಸಿರುವ ಕುರಿತು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಕೆ. ಬಿ. ಗೀತಾ ತಿಳಿಸಿದರು.

     

    ಒಟ್ಟು ಅಂಗನವಾಡಿಗಳು ಎಸ್ಟಿವೆ…??

    ಆನೇಕಲ್ ತಾಲ್ಲೂಕಿನಲ್ಲಿ ಒಟ್ಟು 467, ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು 247, ನೆಲಮಂಗಲ ತಾಲ್ಲೂಕಿನಲ್ಲಿ ಒಟ್ಟು 287, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಟ್ಟು 379 ಹಾಗೂ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 232 ಅಂಗನವಾಡಿ ಕೇಂದ್ರಗಳು ಹೀಗೆ ಜಿಲ್ಲೆಯಾದ್ಯಂತ ಒಟ್ಟು 1612 ಅಂಗನವಾಡಿ ಕೇಂದ್ರಗಳಿದೆ.

    ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಆಗಸ್ಟ್ 14ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸದಸ್ಯ ಕಾರ್ಯದರ್ಶಿಯವರು ತಾಲ್ಲೂಕಿನ ಕಣಿವೆ ಪುರ, ಹೆಗ್ಗಡೆ ಹಳ್ಳಿ ಗ್ರಾಮ, ಅಚರಲ ಹಳ್ಳಿ ದಂಡ ದಾಸರಹಳ್ಳಿ, ಲಿಂಗನ ಹಳ್ಳಿ, ಕೋಣ ಘಟ್ಟ -2 ಮತ್ತು ಕೋಣ ಘಟ್ಟ -1 ಹೀಗೆ ಒಟ್ಟು 7 ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ, ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮೂಲ ಉದ್ದೇಶ ಬಡ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದಾಗಿರುತ್ತದೆ ಆದರೆ ಸ್ಥಳೀಯ ಅಂಗನವಾಡಿಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸರಿಪಡಿಸುವ ಅಗತ್ಯವಿದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

     

    ಸ್ಥಳೀಯ ಅಂಗನವಾಡಿಗಳಲ್ಲಿ ಏನೆಲ್ಲಾ ಸಮಸ್ಯೆಗಳಿವೆ

    *ಮಕ್ಕಳಿಗೆ ಅಪೌಷ್ಟಿಕ ಆಹಾರ ( ಅನ್ನ ಮತ್ತು ತಿಳಿ ಸಾರು ) ನೀಡಲಾಗುತ್ತಿದೆ.

    *ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅವದಿ ಮುಗಿದ ಪೌಷ್ಟಿಕ ಆಹಾರಗಳ ಪ್ಯಾಕೇಟ್‌ಗಳು, ಅವಧಿ ಮುಗಿದ ಹಾಲಿನ ಪೌಡರ್‌ಗಳ ಪ್ಯಾಕೇಟ್‌ಗಳು ಸಿಕ್ಕಿರುತ್ತವೆ.

    *ಮಕ್ಕಳಿಗೆ ಪ್ರತೇಕವಾದ ಆಟದ ಮೈದಾನ ಇರುವುದಿಲ್ಲ.

    *ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾದ ಆಟಿಕೆ ಸಾಮಾನುಗಳು ಕಂಡುಬಂದಿರುವುದಿಲ್ಲ.

    *ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಶೌಚಾಲಯದ ಕೋಣೆಗಳು ಇರುವುದಿಲ್ಲ *ಕೆಲವು ಕೇಂದ್ರಗಳಲ್ಲಿ ಸಹಾಯಕ ಸಿಬ್ಬಂದಿ ಇರಲಿಲ್ಲ.

    *ಸುಮಾರು ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ಗೋಡೆಗಳ ಕೊರತೆ ಇದೆ.

    *ಮಕ್ಕಳಿಗೆ ಸಮರ್ಪಕವಾದ ಬೆಳಕಿನ ವ್ಯವಸ್ಥೆ ಇಲ್ಲ,ಬೆಳಕಿನ ಅಭಾವ ಕಂಡುಬಂದಿರುತ್ತದೆ.

    *ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಮತ್ತು ಕೆಲವು ಪಂಚಾಯಿತಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

     

    ಅಂಗನವಾಡಿಗಳ ವಾಸ್ತವ ಸ್ಥಿತಿ ಕುರಿತಂತೆ ಪ್ರಾಧಿಕಾರದಿಂದ ಮಾನ್ಯ ರಾಜ್ಯ ಪ್ರಾಧಿಕಾರಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸಲಾಗುತ್ತಿದೆ. ಈ ಅಂಗನವಾಡಿ ಕೇಂದ್ರಗಳಿಗೆ ತಕ್ಷಣ ಜಿಲ್ಲಾ ಆಡಳಿತವು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕೊರತೆ ಇರುವ ಎಲ್ಲಾ ಸೌಲಭ್ಯ ಗಳನ್ನು ತಕ್ಷಣ ಒದಗಿಸುವಂತೆ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಮತ್ತು ಕಾರ್ಯದರ್ಶಿಗಳಾದ ಬೋಲಾ ಪಂಡಿತ್ ಸೇರಿದಂತೆ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ l ಸಾರಾಯಿ ಅಂಗಡಿ(ಬಾರ್ ಅಂಡ್ ರೆಸ್ಟೋರೆಂಟ್ )ತೆರೆಯದಂತೆ ಸಾರ್ವಜನಿಕರ ಪ್ರತಿಭಟನೆ*

    ದೊಡ್ಡಬಳ್ಳಾಪುರ ಆಗಸ್ಟ್ 28 ( ವಿಜಯಮಿತ್ರ) : ನಗರದ 30ನೇ ವಾರ್ಡ್ ನಿವಾಸಿಗಳು ಸ್ಥಳೀಯವಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದಂತೆ ಅಗ್ರಹಿಸಿ ನೂತನವಾಗಿ ಪ್ರಾರಂಭವಾಗುತ್ತಿರುವ ಮದ್ಯದ ಅಂಗಡಿ ಮುಂಭಾಗ ಪ್ರತಿಭಟನೆ ನೆಡೆಸಿದರು.

    ನೂತನವಾಗಿ ಪ್ರಾರಂಭಗೊಳ್ಳಲು ಸಿದ್ದವಾಗಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು ಬಾರ್ ತೆರೆಯದಂತೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನೆಡೆಸಿದರು.

     

    ಈ ಕುರಿತು 30ನೇ ವಾರ್ಡ್ ನ ನಗರಸಭಾ ಸದಸ್ಯೆ ಪ್ರಭ ನಾಗರಾಜ್ ಮಾತನಾಡಿ ನಾವು ಬಾರ್ ಮಾಲೀಕರಿಗೆ ಇಲ್ಲಿ ಸಾರಾಯಿ ಅಂಗಡಿ ತೆರೆಯದಂತೆ ನಿರಂತರವಾಗಿ ಮನವಿ ಮಾಡಿದ್ದೇವೆ.ಸ್ಥಳೀಯ ಸಾರ್ವಜನಿಕರ ವಿರೋಧದ ನಡುವೆಯೂ ಬಾರ್ ತೆರೆಯಲು ಮುಂದಾಗಿರುವ ಬಾರ್ ಮಾಲೀಕರ ವಿರುದ್ಧ ಇಂದು ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ರಸ್ತೆಯಲ್ಲಿ ಹಲವು ಶಾಲೆಗಳಿದ್ದು ನೂರಾರು ಶಾಲಾ ಮಕ್ಕಳು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರಿಸುತ್ತಾರೆ. ಬಾರ್ ತೆರೆದರೆ ಹೆಣ್ಣು ಮಕ್ಕಳು ಓಡಾಡಲು ಅಸಾಧ್ಯ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬಾರ್ ಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕೆಂದು ಮನವಿ ಮಾಡಿದರು.

    ಬಾರ್ ಮಾಲೀಕ ಪ್ರದೀಪ್ ಮಾತನಾಡಿ ಈ ಹಿಂದೆ ನಾಗಸಂದ್ರ – ಇಸ್ಲಾಂಪುರ ಮುಖ್ಯ ರಸ್ತೆಯಲ್ಲಿದ್ದ ಜನನಿ ಬಾರ್ ಅನ್ನು ಇಲ್ಲಿಗೆ ಸ್ಥಳಾಂತರಿಸಿದ್ದೇವೆ. ನಾವು ಕಾನೂನು ಬದ್ದವಾಗಿ ಪ್ರತಿ ಇಲಾಖೆಯಿಂದಲೂ ಅನುಮತಿ ಪಡೆದುಕೊಂಡಿದ್ದೇವೆ,ಸ್ಥಳೀಯವಾಗಿ ಕೆಲ ಮುಖಂಡರು ಬೇಕಂತಲೇ ಪ್ರತಿಭಟನೆ ಮಾಡಿಸಲು ಮುಂದಾಗಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

     

    ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.

  • *ಡಾ.ಎಂ ಚಿಕ್ಕಣ್ಣ ಅವರ “ಹೊಸ ಚಿಗುರು” ಸಂಶೋಧನಾ ಲೇಖನಗಳ ಸಂಕಲನ ಹಾಗೂ ಡಾ.ಆರ್.ನಾಗರಾಜು ಅವರ ಪ್ರಿನ್ಸಿಪಲ್ಸ್ ಆಫ್ ಇಂಟರ್ನೆಟ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ*

    ದೊಡ್ಡಬಳ್ಳಾಪುರ ಆಗಸ್ಟ್ 28( ವಿಜಯಮಿತ್ರ) : ಲೇಖಕರ ಕೃತಿಗಳನ್ನು ಓದುವ ಮೂಲಕ ಅವರನ್ನು ಸಮಾಜದಲ್ಲಿ ಗುರುತಿಸುವ ಕಾರ್ಯವನ್ನು ಮಾಡಬೇಕು ಹಾಗೂ ಸಾಹಿತಿಗಳನ್ನ ಪ್ರೋತ್ಸಾಹಿಸಬೇಕು ಎಂದು ಶ್ರೀ ದೇವರಾಜ ಅರಸ್ ಎಜುಕೇಶನಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ರಾಜೇಂದ್ರ ಹೇಳಿದರು.

     

    ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜೆ.ಸಮೂಹ ಶಿಕ್ಷಣ ಸಂಸ್ಥೆಗಳು, ಐ.ಕ್ಯೂ.ಎ.ಸಿ ಇವರ ಸಹಯೋಗದಲ್ಲಿ

    ಹಮ್ಮಿಕೊಂಡಿದ್ದ ಡಾ.ಎಂ ಚಿಕ್ಕಣ್ಣ ಅವರ “ಹೊಸ ಚಿಗುರು” ಸಂಶೋಧನಾ ಲೇಖನಗಳ ಸಂಕಲನ ಹಾಗೂ ಡಾ.ಆರ್.ನಾಗರಾಜು ಅವರ ಪ್ರಿನ್ಸಿಪಲ್ಸ್ ಆಫ್ ಇಂಟರ್ನೆಟ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

     

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಯಾರಲ್ಲಿ ವಿವೇಕ, ವಿದ್ವತ್ತು ಇದೆಯೋ ಅವರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಸಾಗಬೇಕು, ಸಾಹಿತಿಗಳನ್ನು ಪ್ರೀತಿಸಬೇಕು ಅವರ ಕೃತಿಗಳನ್ನು ಇಷ್ಟಪಡಬೇಕು ಆಗ ಮಾತ್ರ ಸಾಹಿತಿ ಬೆಳೆಯುತ್ತಾನೆ ಎಂದರು.

     

    ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನೃಪತುಂಗ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಸಿ ಪುಟ್ಟೇಶ್ “ಹೊಸ ಚಿಗುರು” ಕೃತಿ ಕುರಿತು ಮಾತನಾಡಿದ ಅವರು

    ಸಂಶೋಧನಾ ಸಂಕಲನದ ಲೇಖನಗಳು ಕನ್ನಡ ಅಧ್ಯಾಪಕರು, ಯುವ ಸಂಶೋಧನಾರ್ಥಿಗಳು ಸಮಕಾಲೀನ ಸಂದರ್ಭದಲ್ಲಿ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿರುವ ರೀತಿಯನ್ನೂ ಹಾಗೂ

    ಈ ಕೃತಿಯಲ್ಲಿ ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹ, ವಿಶ್ಲೇಷಣೆಗಳು ಗಮನ ಸೆಳೆಯುತ್ತವೆ, ವಿವಿಧ ಜ್ಞಾನಶಿಸ್ತುಗಳ ಆಕರಗಳನ್ನು ಇಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ, ಸಾಹಿತ್ಯ ಕೃಷಿ, ಸಂಶೋಧನೆಯು ನಿರಂತರವಾಗಿ ಸಾಗಬೇಕಾದುದು, ಸಾಹಿತ್ಯ ಶೋಧವು ಚಲನಶೀಲ ಪ್ರಕ್ರಿಯೆ ಎಂಬುದು ಇಲ್ಲಿನ ಪ್ರಧಾನ ದೃಷ್ಟಿಕೋನವಾಗಿದೆ,ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ರೀತಿಯನ್ನು ಸಹ ಇಲ್ಲಿನ ವಿಶ್ಲೇಷಣೆಗಳಲ್ಲಿ ಕಾಣಿಸುತ್ತದೆ ಎಂದರು.

     

    ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್. ಎಲ್ ಜಾಲಪ್ಪ ಕ್ಯಾಂಪಸ್ ನ ಅಧ್ಯಕ್ಷರಾದ ಜೆ. ಆರ್ ರಾಕೇಶ್, ಮಾನವ ಸಂಪನ್ಮೂಲ ನಿರ್ದೇಶಕರಾದ ಬಾಬುರೆಡ್ಡಿ, ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಪಿ. ಚೈತ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಕಾಶ್ ಸಿ.ಪಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್, ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಬಾಬುಸಾಬಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಬಿ ಮತ್ತಿತರರು ಹಾಜರಿದ್ದರು.

  • *ಡಿ ಕ್ರಾಸ್ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ : ನಗರದ ಹಲವಡೆ ನಾಳೆ ಇರಲ್ಲ ಕರೆಂಟ್*

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ಆಗಸ್ಟ್ 23ರ ಶುಕ್ರವಾರದಂದು ದೊಡ್ಡಬಳ್ಳಾಪುರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.

     

    ಡಿ ಕ್ರಾಸ್ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಉಪಕೇಂದ್ರದಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 09:00 ಗಂಟೆ ಇಂದ ಸಂಜೆ 6:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಪ್ರಕಟಣೆಯಲ್ಲಿ ಕೊರಲಾಗಿದೆ.

     

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

     

    ದೊಡ್ಡಬಳ್ಳಾಪುರ ನಗರದ, ಡಿಕ್ರಾಸ್, ಮುತ್ಸಂದ್ರ ಟಿ.ಬಿ.ಬಡಾವಣೆ, ಪ್ರಿಯರ್ದಶಿನಿ ಬಡಾವಣೆ, ರೋಜಿಪುರ, ಗಂಗಧರಪುರ, ವಿನಾಯಕನಗರ, ಸೋಮೇಶ್ವರ ಬಡಾವಣೆ, ಬಸವೇಶ್ವರನಗರ, ಮಾರುತಿನಗರ, ಕುಂಭಾರಪೇಟೆ, ದರ್ಜಿಪೇಟೆ, ಗಾಣಿಗರಪೇಟೆ, ವಡ್ಡರಪೇಟೆ, ದೇಶದಪೇಟೆ, ಸಿನಿಮಾ ರಸ್ತೆ, ಹಳೇಬಸ್ ನಿಲ್ದಾಣ, ಕಛೇರಿಪಾಳ್ಯ, ಇಸ್ಲಾಂಪುರ, ಕಲ್ಲುಪೇಟೆ, ತ್ಯಾಗರಜನಗರ, ದೇವರಾಜನಗರ, ಶಾಂತಿನಗರ, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ ಮಾದಗೊಂಡನಹಳ್ಳಿ, ಹಸನ್‌ ಘಟ್ಟಾ, ಕೋಳುರು, ಕಂಟನಕುಂಟೆ, ಆಳ್ವಾಲಸಂದ್ರ, ಅಂತರಹಳ್ಳಿ ಗೊಲ್ಲಹಳ್ಳಿ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋವರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹೀರೆಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟಾ, ಕಂಚಿಗನಾಳ, ದಾಸಗೊಂಡನಹಳ್ಳಿ, ಗಂಡರಾಜಪುರ, ಅಂಚರಹಳ್ಳಿ, ಬೀಡಿಕೆರೆ, ಹಮಾಮ್, ಶಿವಪುರ, ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ, ಕೊನಘಟ್ಟಾ, ಲಿಂಗನಹಳ್ಳಿ, ಕಮಲೂರು, ನೆಲ್ಲುಕುಂಟೆ, ನಾಗಶೆಟ್ಟಿಹಳ್ಳಿ, ಮಜರಾಹೊಸಹಳ್ಳಿ, ಶಿರವಾರ, ಮೆಣಸಿ, ಆಣಗಲಪುರ, ನೇರಳೆಘಟ್ಟು ಹೊನ್ನಾಘಟ್ಟಾ, ಕೆಸ್ತೂರು, ಹಣಬೆ, ಮರಳೇನಹಳ್ಳಿ, ಶ್ರೀನಿವಾಸಮರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿಟ್ಟೂರು ಹಾಗು ಸುತ್ತಮುತ್ತಲಿನ ಪ್ರದೇಶಗಳು ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • *ಜಿಲ್ಲಾ ಬಿಜೆಪಿ ವತಿಯಿಂದ ಕೈ ನಾಯಕರ ವಿರುದ್ಧ ಪ್ರತಿಭಟನೆ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ*

    ದೊಡ್ಡಬಳ್ಳಾಪುರ ಆಗಸ್ಟ್ 22( ವಿಜಯಮಿತ್ರ) : ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

    ನಗರದ ತಾಲೂಕು ಕಚೇರಿ ವೃತ್ತದಲ್ಲಿ ಕಾಂಗ್ರೆಸ್ ನಾಯಕ ಐವಾನ್ ಡಿಸೋಜರ ಪ್ರತಿಕೃತಿಯನ್ನು ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ವ್ಯಕ್ತಿಗಳು ನೀಡಿರುವ ದೂರುಗಳ ಬಗ್ಗೆ ತನಿಖೆಗೆ ಅನುಮತಿ ನೀಡಿದ ಕೂಡಲೇ ರಾಜ್ಯಪಾಲರ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರುಗಳು ಹಾಗೂ ಬೆಂಬಲಿಗರು ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯ ಘನತೆಯನ್ನು ಅರಿಯದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಅವರ ಪ್ರತಿಕೃತಿಯನ್ನು ಸುಡುವಂತಹ ಹೀನಕೃತ್ಯಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ, ಇದು ಹಿಂದೆಯೂ ನಡೆದಿದೆ. ಅತ್ಯಂತ ವಿವೇಚನಾಯುಕ್ತವಾಗಿ ಕಾನೂನು ತಜ್ಞರೊಡನೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಪರಾಮರ್ಶಿಸಿ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸುವುದು, ಅವರ ಪ್ರತಿಕೃತಿಯನ್ನು ಸುಡುವುದು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ. ಇಂತಹ ಕೃತ್ಯಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮಾಡುತ್ತಿರುವ ಕಾಂಗ್ರೆಸ್ ನಾಯಕರುಗಳ ಮೇಲೆ ಕಾನೂನು ರೀತಿಯ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕಿದೆ ಎಂದರು.

     

    ಪ್ರತಿಭಟನೆಯಲ್ಲಿ ರಾಜ್ಯ ವೈದ್ಯಕೀಯ ವಿಭಾಗದ ಸಂಚಾಲಕ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,, ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಆರ್.ಗೋಪಿ, ನಗರ ಅಧ್ಯಕ್ಷ ಮುದ್ದಪ್ಪ, ತಾಲ್ಲೂಕು ಅಧ್ಯಕ್ಷ ನಾಗೇಶ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಜೆ.ಮಂಜುನಾಥ್, ತಿರುಮಲ ಮಂಜು, ಯುವ ಮೋರ್ಚಾದ ಅನಿಲ್, ಅಜೇಯ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕವಿತ, ಮುಖಂಡರಾದ ವತ್ಸಲಾ ಜಗನ್ನಾಥ, ಪ್ರತಾಪ್ ಯಾದವ್, ಪ್ರಿಯಾಂಕ, ರಾಮಕಿಟ್ಟಿ ಮತ್ತಿತ್ತರರು ಇದ್ದರು.

  • *ಮೂಲಸೌಕರ್ಯಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ : ಸಮಸ್ಯೆ ಬಗೆಹರಿಯದಿದ್ದರೆ ನಗರಸಭೆ ವಿರುದ್ಧ ಉಗ್ರ ಹೋರಾಟ ಎಚ್ಚರಿಕೆ.*

    ದೊಡ್ಡಬಳ್ಳಾಪುರ ಆಗಸ್ಟ್ 22(ವಿಜಯಮಿತ್ರ) : ನಾವು 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿದ್ದರೂ ಮೂಲಸೌಕರ್ಯಕ್ಕಾಗಿ ಪ್ರತಿಭಟಿಸುವಂತಹ ಪರಿಸ್ಥಿತಿಯಲ್ಲಿರುವುದು ವಿಪರ್ಯಾಸ ಎಂದು ಕರವೇ ಪ್ರವೀಣ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ತಿಳಿಸಿದರು.

    ನಗರಸಭೆಯ ಮುಂಭಾಗದಲ್ಲಿ ಗುರುವಾರ ನಗರಸಭೆ ದುರಾಡಳಿತ, ಒಳಚರಂಡಿ ಅವ್ಯವಸ್ಥೆ ಹಾಗೂ ಮಳೆ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದನ್ನು ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣ್ಣದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು ನಗರಸಭೆ ವ್ಯಾಪ್ತಿಯ ಜನ ಸಂಖ್ಯೆಗೆ ಪೂರಕವಾಗಿ ನಗರಸಭೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ . ಮಳೆ ಬಂದಾಗ ನಗರದ ಪ್ರಮುಖ ರಸ್ತೆಗಳ ಜತೆಗೆ ತಾಲೂಕುಕಚೇರಿ ವೃತ್ತದಲ್ಲೂ ಕೂಡ ಮಳೆ ನೀರು ನಿಂತು ಕೆರೆಯಾಗುತ್ತದೆ. ಈ ಹಿಂದೆ ಮಳೆ ಬಂದಾಗ ಹೋಟೆಲ್ ಗಳಿಗೆ, ಸರ್ಕಾರಿ ಶಾಲೆ ಆವರಣಕ್ಕೂ ನೀರು ನುಗ್ಗಿದೆ ಅನುಕೂಲಸ್ಥರಿಗೆ ಮಾತ್ರ ಮಧ್ಯವರ್ತಿಗಳಿಂದ ನಗರಸಭೆಯಲ್ಲಿ ಖಾತೆಯಾಗುತ್ತದೆ. ಉಳಿದಂತೆ ಬಡವರಿಗೆ ಯಾವುದೇ ಸೌಲಭ್ಯಗಳು ಕೂಡ ನಗರಸಭೆಯಿಂದ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

     

     

    ನಗರ ಅಧ್ಯಕ್ಷ ಶ್ರೀನಗರ ಬಷೀರ್ ಮಾತನಾಡಿ, ಕರವೇ ವತಿಯಿಂದ ಅನೇಕ ಬಾರಿ ರಸ್ತೆ ಅಗಲೀಕರಣ ,ಒಳಚರಂಡಿ ಸಮಸ್ಯೆ, ಸರಕಾರಿ ಜಮೀನು ಒತ್ತುವರಿ ಬಗ್ಗೆ ಹೋರಾಟ ಮಾಡಲಾಗಿದೆ. ಆದರೆ ಯಾವುದೇ ಪ್ರತಿಫಲ ಮಾತ್ರ ಸಿಗಲಿಲ್ಲ. ತಹಶೀಲ್ದಾರ್, ನಗರಸಭೆ ಅಧಿಕಾರಿ ವರ್ಗ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ನಗರಸಭೆಯಲ್ಲಿ ಮಧ್ಯವರ್ತಿಗಳಿಂದ ಏನು ಬೇಕಾದರೂ ಮಾಡಿಸಿಕೊಳ್ಳಬಹುದು. ಜನಸಾಮಾನ್ಯರು ಮಾತ್ರ ಅಲೆದಾಡುವ ಪರಿಸ್ಥಿತಿ ಇದೆ ಎಂದರು.

    ನಗರದ ಒಳಚರಂಡಿ ವ್ಯವಸ್ಥೆ ಗಬ್ಬುನಾರುತ್ತಿದೆ.ಮಳೆಯಿಂದ ಚರಂಡಿ ನೀರು ಕೂಡ ರಸ್ತೆಗೆ ಬರುತ್ತಿದೆ. ಇದು ಸಾಂಕೇತಿಕ ಪ್ರತಿಭಟನೆ ಮಾತ್ರ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರವಾದ ಹೋರಾಟ ನಡೆಸಲಾಗುತ್ತದೆ ಎಂದರು.

     

    ಪೌರಾಯುಕ್ತರಿಗೆ ಮನವಿ:

     

    ನಗರಸಭೆ ಮುಭಾಂಗದಲ್ಲಿ ಪ್ರತಿಭಟನೆ ನಡೆಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕವು ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಸ್ತೆ ಗುಂಡಿಗಳ ದುರಸ್ಥಿಗೆ ಮಳೆ ಅಡ್ಡಿ ಉಂಟು ಮಾಡುತ್ತಿದ್ದು, ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಮಾಡಲಾಗುತ್ತದೆ. ಉಳಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗಿದ್ದು, ಆದಷ್ಟು ಬೇಗ ನಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದರು.

     

     

    ಪ್ರತಿಭಟನೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್ , ತಾಲೂಕು ಉಪಾಧ್ಯಕ್ಷ ಜೋಗಳ್ಳಿ ಅಮ್ಮು , ಪ್ರಧಾನ ಕಾರ್ಯದರ್ಶಿ ಎನ್.ಎಲ್.ಎನ್ ವೇಣು, ಖಜಾಂಚಿ ಆನಂದ್ , ಕಾನೂನು ಸಲಹೆಗಾರ ಆನಂದ್ ಕುಮಾರ್, ಕಾರ್ಯದರ್ಶಿಗಳಾದ ಮಂಜು ಮುಕ್ಕೇನಳ್ಳಿ , ರವಿ ಮುಕ್ಕೇನಹಳ್ಳಿ , ರಾಜಘಟ್ಟ ಮಹೇಶ್ , ನಗರ ಉಪಾಧ್ಯಕ್ಷ ನೂರಲ್ಲ ,ಮಂಜುನಾಥ್ , ರವಿ, ಕೆಂಪೇಗೌಡ, ರಾಜಣ್ಣ , ಶ್ರೀನಿವಾಸ್ ,ರಾಮ ,ಮಂಜು, ದಯಾನಂದ್ ಇತರರು ಹಾಜರಿದ್ದರು.

  • *ಪ್ರಾದೇಶಿಕ ಸಭೆಯ ಮುಖ್ಯ ಉದ್ದೇಶ ರೈತರ ಕುಂದುಕೊರತೆ ಸರಿಪಡಿಸುವುದು – ಬಿ ಸಿ ಆನಂದ್ ಕುಮಾರ್*

    ದೊಡ್ಡಬಳ್ಳಾಪುರ ಆಗಸ್ಟ್ 21 ( ವಿಜಯಮಿತ್ರ) : ಪ್ರಾದೇಶಿಕವಾಗಿ ಹಾಲು ಉತ್ಪಾದಕರ ಕುಂದು ಕೊರತೆಗಳನ್ನು ಅರಿತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ಪ್ರಾದೇಶಿಕ ಸಭೆ ಕರೆಯಲಾಗಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಬಿಸಿ ಆನಂದ್ ಕುಮಾರ್ ತಿಳಿಸಿದರು.

    ಇಂದು ತಾಲೂಕಿನ ಶಿಬಿರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಾದೇಶಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಪ್ರಾದೇಶಿಕವಾಗಿ ಹಾಲು ಉತ್ಪಾದಕ ರೈತರಲ್ಲಿ ಕೆಲ ಸಮಸ್ಯೆಗಳಿದ್ದು ಅವುಗಳನ್ನು ಮನಗೊಂಡು ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಈ ಸಭೆ ಆಯೋಜನೆ ಮಾಡಲಾಗಿದೆ ಹಾಗೂ ಡೈರಿಗಳ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಪ್ರಶಂಸನಾ ಪತ್ರ ನೀಡಿ ಬಹುಮಾನ ವಿತರಣೆ ಮಾಡುವ ಮೂಲಕ ಗೌರವಿಸಲಾಗಿದೆ ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಉತ್ತಮ ಸ್ಥಿತಿಯಲ್ಲಿದ್ದು ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.


    ಕಾರ್ಯಕ್ರಮದಲ್ಲಿ ಬಮುಲ್ ಅಧ್ಯಕ್ಷ ರಾಜಕುಮಾರ್, ಎಲ್. ವಿ. ನಾಗರಾಜು, ಡಾ. ಜಿಯಾ ಉಲ್ಲಾ, ಡಾ. ಶ್ರೀಧರ್ ಸೇರಿದಂತೆ ತಾಲೂಕಿನ ಹಲವು ಗಣ್ಯರು, ಹಾಲು ಉತ್ಪಾದಕ ರೈತರು ಉಪಸ್ಥಿತರಿದ್ದರು.

  • *ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವ*

    ದೊಡ್ಡಬಳ್ಳಾಪುರ ಆಗಸ್ಟ್ 21( ವಿಜಯಮಿತ್ರ ) : ತಾಲೂಕಿನ ಬಾಶೆಟ್ಟಹಳ್ಳಿ ವ್ಯಾಪ್ತಿಯ ವಿಜಯನಗರದಲ್ಲಿರುವ ಶ್ರೀ ಕ್ಷೇತ್ರ ರಾಯರ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

    ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಪ್ರಹ್ಲಾದ ದೇವರ ವಿಶೇಷ ರಥಯಾತ್ರೆ ನಡೆಸಲಾಯಿತು .

    ಈ ಕುರಿತು ದೇವಾಲಯದ ಪ್ರಧಾನ ಅರ್ಚಕ ಗುರುರಾಜ್ ಆಚಾರಿ ಮಾತನಾಡಿ ಈ ಬೃಂದಾವನವು 48ಸಾಲಿಗ್ರಾಮಗಳಿಂದ ನಿರ್ಮಿಸಲ್ಪಟ್ಟಿದೆ.ಇಂದು ವಿಶೇಷ ದಿನವಾಗಿದ್ದು ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರರ ಮಧ್ಯಾರಾಧನೆ ದಿನವಾಗಿದೆ. ಮೂರು ದಿನಗಳ ಸತತ ಆರಾಧನೆಯಲ್ಲಿ ಬೃಂದಾವನ ಶ್ರೀಗಳು ಬಹಿರ್ಮುಖವಾಗಿ ಭಕ್ತಾದಿಗಳನ್ನು ನೋಡುವ ಮೂಲಕ ಸಕಲ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾರೆ. ಶ್ರೀ ಗುರು ರಾಘವೇಂದ್ರರ ಆರಾಧನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಕಲ ದೋಷ ನಿವಾರಣೆಯ ಜೊತೆಗೆ ಉತ್ತಮ ಆರೋಗ್ಯ ಆಯಸ್ಸು ಲಭಿಸುತ್ತದೆ. ಕಳೆದ ಮೂರು ದಿನಗಳಿಂದ ರಾಯರ ಆರಾಧನೆಯಲ್ಲಿ ಸಾವಿರಾರು ಭಕ್ತಾದಿಗಳು ತಮ್ಮ ತನು ಮನ ಧನವನ್ನು ರಾಯರಿಗೆ ಸಮರ್ಪಿಸುವ ಮೂಲಕ ಭಕ್ತಿ, ಭಾವದೊಂದಿಗೆ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಸರ್ವರಿಗೂ ಶುಭವಾಗಲಿ ಆಗಸ್ಟ್ 22ರಂದು ಉತ್ತರ ಆರಾಧನೆ ಇದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

    ರಾಯರು ಹಲವಾರು ಪವಾಡಗಳನ್ನು ಮಾಡಿದ್ದು ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಅವರ ಆರಾಧನೆಯಲ್ಲಿ ಪಾಲ್ಗೊಳುವುದೇ ಒಂದು ಭಾಗ್ಯ ನಮ್ಮ ಪೂರ್ವ ಜನ್ಮದ ಪುಣ್ಯ ನಾವು ರಾಯರ ಆರಾಧನೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ ಎಂದು ನೆರೆದಿದ್ದ ಭಕ್ತದಿಗಳು ಅಭಿಪ್ರಾಯವ್ಯಕ್ತಪಡಿಸಿದರು.