Blog

  • *ಉದ್ಯಮಿ ಸಮಾಜಸೇವಕ ಸಂದೀಪ್ ರವರಿಗೆ ಹುಟ್ಟುಹಬ್ಬದ ಸಂಭ್ರಮ : ವಿಜೃಂಭಣೆಯ ಕಾರ್ಯಕ್ರಮ ಆಯೋಜನೆ ಮಾಡಲಿರುವ ಅಭಿಮಾನಿ ವರ್ಗ *

    ದೊಡ್ಡಬಳ್ಳಾಪುರ:ಯುವ ಮುಖಂಡ ಉದ್ಯಮಿ ಹಾಗೂ ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ
    ಜನ್ಮ ದಿನಾಚರಣೆ ಜುಲೈ 31 ಬುಧವಾರದಂದು ಅವರ ಸ್ವಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ.

    ನಿರಂತರ ಸಮಾಜಸೇವೆ ಹಾಗೂ ಕನ್ನಡಪರ ಧ್ವನಿಯಾಗಿ ಶ್ರಮಿಸುವ ಸಂದೀಪ್ ರವರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದ್ದು ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು,ಹಿತೈಷಿಗಳು ಸೇರಿದಂತೆ ಅಭಿಮಾನಿ ವರ್ಗ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಕಾರ್ಯಕ್ರಮವನ್ನು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ವಿತರಣೆ ಕಾರ್ಯನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು.

    ಕಾರ್ಯಕ್ರಮಕ್ಕೆ ದೇವನಹಳ್ಳಿ ಮಾಜಿಶಾಸಕ ನಿಸರ್ಗ ನಾರಾಯಣಸ್ವಾಮಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಕರವೇ ಕುಟುಂಬ ಬಳಗಸೇರಿದಂತೆ ತಾಲ್ಲೂಕಿನ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಸಂಘಟಕರು ತಿಳಿಸಿದ್ದಾರೆ.

  • *ನಿಗಮ ಮಂಡಳಿಗಳು ಲೂಟಿ ಕೇಂದ್ರಗಳಾಗಿವೆ – ಡಾ. ವೆಂಕಟಸ್ವಾಮಿ*

    ದೊಡ್ಡಬಳ್ಳಾಪುರ( ವಿಜಯಮಿತ್ರ) : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಾಳ ಹಾಗೂ ಸ್ವಾಭಿಮಾನಿ ಎಸ್.ಸಿ./ಎಸ್.ಟಿ. ಸಂಘಟನೆಗಳ ಒಕ್ಕೂಟದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮತ್ತು ಹಗರಣಗಳನ್ನು ಸಿ.ಬಿ.ಐ. ತೆನಿಖೆಗೆ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನೆಡೆಸಲಾಯಿತು.

    ಪ್ರತಿಭಟನೆಯಲ್ಲಿ ದಲಿತನಾಯಕ ಹಾಗೂ ಎಸ್ ಎಸ್ ಡಿ ರಾಜ್ಯಾಧ್ಯಕ್ಷರ ಡಾ. ವೆಂಕಟಾಸ್ವಾಮಿ ನೇತೃತ್ವದಲ್ಲಿ ತಾಲ್ಲೂಕಿನ ಉಪವಿಭಾಗ ಅಧಿಕಾರಿಗಳ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

     

    ನಂತರ ಮಾತನಾಡಿದ ಅವರು ಕರ್ನಾಟಕ ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದಿದು ನಿಗಮವೊಂದೇ ಅಸ್ತಿತ್ವದಲ್ಲಿದ್ದಾಗ ಲೂಟಿ ದಂಧೆಗಳ ಮುಕ್ತವಾಗಿ ಆಡಳಿತ ನಡೆದು ಈ ಜನಾಂಗಗಳ ಫಲಾನುಭವಿಗಳಿಗೆ ಯೋಜನೆಗಳ ಉಪಯೋಗ ದೊರೆಯುತ್ತಿತ್ತು.ಆದರೆ ಈ ನಿಗಮವು ವಿವಿಧ ಜಾತಿ, ಉಪಜಾತಿಗಳ ಹೆಸರಲ್ಲಿ ವಿಭಜನೆಗೊಂಡು ಅಂತಹ ನಿಗಮಗಳಲ್ಲಿ ಇದೀಗ ಲೂಟಿ ದಂಧೆಯು ಅವ್ಯಾಹತವಾಗಿ ನಡೆದಿವೆ. ಈ ನಿಗಮಗಳ ಆಡಳಿತವು ಆಯಾಉಪಜಾತಿಗಳ ಶಾಸಕರ,ಜಾತಿ ಸಂಘಟನೆಗಳ ಮುಖಂಡರ ಕೈ ಸೇರಿ ಅವು ಲೂಟಿ ಕೇಂದ್ರಗಳಾಗಿವೆ ಎನ್ನಲು ಇಂದಿನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಜೀವಂತ ಸಾಕ್ಷಿಯಾಗಿದೆ ಎಂದರು.

     

    Ad

    ಈ ಪ್ರಕರಣದ ನೇರ ಹೊಣೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಹೊರುವಂತಹ ಘಟ ತಲುಪಿದೆ.ನಿಗಮದ ಬಹುದೊಡ್ಡ ಹಣವು ಹೈದರಬಾದಿಗೆ ವರ್ಗಾವಣೆಯಾಗಿ ಅದು ವಿವಿಧ ಅನೇಕ ವ್ಯಾಪಾರ ಕೇಂದ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಬಳಕೆಯಾಗಿರುವುದನ್ನು ಮುಖ್ಯಮಂತ್ರಿಗಳು ಲಘುವಾಗಿ ಪರಿಗಣಿಸಿರುವುದು ಮತ್ತು ತನ್ನ ಸಹೋದ್ಯೋಗಿ ಸಚಿವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ತನ್ನ ತಲೆದಂಡ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಲಾಗಿದೆ.ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊರಬೇಕು ಸದನದ ಸಭಾಪತಿಗಳು ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಪಡೆದು ಪರಿಶಿಷ್ಟ ಜನಾಂಗಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅಗ್ರಹಿಸಿದರು.

     

     

    ಪಂಚಮರ ಹಣ ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.ಪರಿಶಿಷ್ಟರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಮತ್ತು ವಿದೇಶಿ ವಿದ್ಯಾರ್ಥಿ ವೇತನ ಕಡಿತಗೊಳಿಸುವ ಮೂಲಕ ಮುಖ್ಯಮಂತ್ರಿಗಳು ದಲಿತ ದ್ರೋಹಿಯಾಗಿದ್ದಾರೆ. ಈ ಕಾರಣಗಳಿಗಾಗಿ ಸ್ವಾಭಿಮಾನಿ ಎಸ್ಸಿ/ಎಸ್ಟಿ ಸಂಘಟನೆಗಳ ಒಕ್ಕೂಟವು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತದೆ ಎಂದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರು, ಮುತ್ತೂರು ಬಿ. ಎನ್, ಓಬಳೇಶ್,ನಗರ ಅಧ್ಯಕ್ಷರು ಇಮ್ರಾನ್ ಪಾಷ,ತಾಲ್ಲೂಕು ಮಹಿಳಾ ಅಧ್ಯಕ್ಷರು ರತ್ನಮ್ಮ ಕೊನಘಟ್ಟ, ಸುನಂದಮ್ಮ , ನಗರ ಸಮಿತಿ ಸದಸ್ಯರಾದ ದೊಡ್ಡರಾಜು ಟಿ ಸಿ, ಜಿಲ್ಲಾಧ್ಯಕ್ಷರು ಪಿವಿಸಿ ಸ್ವಾಭಿಮಾನ ಸಿದ್ದಲಿಂಗಮ್ಮ, ವಿಜಯಲಕ್ಷ್ಮೀ.ಸಿದ್ದಗಂಗಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ನಿಧನ ವಾರ್ತೆ : ಸಾವಿನ ಮನೆಯಲ್ಲಿ ಭಜನೆ ಮಾಡುತ್ತಿದ್ದ ಧ್ವನಿ ಇನ್ನಿಲ್ಲ : ನೇತ್ರಾದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ*

    ದೊಡ್ಡಬಳ್ಳಾಪುರ (ವಿಜಯಮಿತ್ರ) : ತಮ್ಮ ಭಜನೆಗಳ ಮೂಲಕವೇ ಪ್ರಸಿದ್ದಿ ಪಡೆದಿದ್ದ ಕೊನಘಟ್ಟ ಹನುಮಂತರಾಯಪ್ಪ ರವರು ಇಂದು ವಿಧಿವಶರಾಗಿದ್ದಾರೆ.

     

    ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಜನೆ ಮಾಡುವ( ತಿಥಿ ಕಾರ್ಯಕ್ರಮಗಳಲ್ಲಿ ) ಮೂಲಕ ಹೆಸರುವಾಸಿಯಾಗಿದ್ದ ಅವರು ಇನ್ನು ನೆನಪು ಮಾತ್ರ.

     

    ಹನುಮಂತರಾಯಪ್ಪನವರ ನೇತ್ರಾದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

     

    ಕೊನಘಟ್ಟ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕ್ರಿಯೆ ನೆಡೆಯಲಿದೆ ಎಂದು ಕುಟುಂಬದ ಮೂಲಗಳು ತಿ.ಳಿಸಿವೆ.

  • *ಆರೋಗ್ಯ ಸಮಸ್ಯೆ ಕುರಿತು ಗ್ರಾಮಸ್ಥರ ದೂರು : ಆರೋಗ್ಯ ತಪಾಸಣಾ ಶಿಬಿರದ ಮೂಲಕ ಪರಿಶೀಲನೆಗೆ ಮುಂದಾದ ನ್ಯಾಯಾಂಗ ಇಲಾಖೆ*

    ದೊಡ್ಡಬಳ್ಳಾಪುರ : ಸ್ಥಳೀಯ ಇಂಡೇನ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ವಿರುದ್ಧ ಸ್ಥಳೀಯ ಗ್ರಾಮಸ್ಥರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ಸಹಯೋಗದೊಂದಿಗೆ ಜುಲೈ 27ರಂದು ರಘುನಾಥಪುರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಆರೋಗ್ಯ ತಪಾಸರ ಶಿಬಿರ ಆಯೋಜನೆ ಮಾಡಲಾಗಿತ್ತು.

     

    ಶಿಬಿರದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಡಿಪಿ, ಶುಗರ್, ತಲೆನೋವು, ಜ್ವರ,ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಆರೋಗ್ಯ ಇಲಾಖೆಯಿಂದ ಪ್ರಾಥಮಿಕವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಆರ್ ಎಂ ಮಹದೇವ್ ಮಾತನಾಡಿ ರಘುನಾಥಪುರ ಗ್ರಾಮಸ್ಥರು ಆರೋಗ್ಯ ಸಮಸ್ಯೆ ಕುರಿತಾಗಿ ನ್ಯಾಯಾಲಯಕ್ಕೆ ದೂರು ನೀಡಿದ್ದು ಈ ಸಂಬಂಧ ನ್ಯಾಯಾಂಗ ಇಲಾಖೆಯ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಗ್ರಾಮಸ್ಥರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ.

     

    ಶಿಬಿರದಲ್ಲಿ ಪಾಲ್ಗೊಂಡ ಗ್ರಾಮಸ್ಥರಲ್ಲಿ ಸಾಮಾನ್ಯವಾಗಿ ಜ್ವರ,ಮೈ ಕೈ ನೋವು, ತಲೆ ನೋವು, ಸೇರಿದಂತೆ ಉಸಿರಾಟದ ತೊಂದರೆ ಕಂಡುಬರುತ್ತಿದ್ದು. ಈ ಕುರಿತು ಆರೋಗ್ಯ ಇಲಾಖೆ ಸೂಕ್ಷ್ಮವಾಗಿ ಗಮನಿಸಬೇಕಿದೆ. ನಮ್ಮ ಗ್ರಾಮಸ್ಥರ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣ ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂಡೇನ ಕಾರ್ಖಾನೆಯಿಂದ ಹೊರಬರುವ ವಿಷಕಾರಿ ಅನಿಲವೇ ಆಗಿದೆ. ಕಾರ್ಖಾನೆಯನ್ನು ಈ ಕೂಡಲೇ ವರ್ಗಾಯಿಸುವ ಮೂಲಕ ಸ್ಥಳೀಯರ ಜೀವ ಉಳಿಸಬೇಕಿದೆ. ಎಂದು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು .

    ಗ್ರಾಮಸ್ಥರಾದ ಮುನಿರಾಜಪ್ಪ ಮಾತನಾಡಿ ಈಗಾಗಲೇ ತಾಲೂಕಿನ ಜನತೆ ಅಧಿಕಾರಿಗಳಿಗೆ ಗ್ರಾಮದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು ಗ್ರಾಮಸ್ಥರ ಆರೋಗ್ಯ ಕಾಪಾಡುವಂತೆ ಮನವಿ ಮಾಡಿದ್ದೇವೆ, ನ್ಯಾಯಾಲಯಕ್ಕೆ ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಸರ್ಕಾರದ ವತಿಯಿಂದ ಆರೋಗ್ಯ ತಪಾಸದ ಶಿಬಿರವನ್ನು ಯೋಜನೆ ಮಾಡಲಾಗಿದೆ. ಈಗಾಗಲೇ ನೂರಾರು ಗ್ರಾಮಸ್ಥರು ವೈದ್ಯರ ಬಳಿ ಬಂದು ಸಲಹೆ ಪಡೆದಿದ್ದಾರೆ. ಬರ ಬರುತ್ತಾ ಗ್ರಾಮದಲ್ಲಿ ಆರೋಗ್ಯ ಕ್ಷೀಣಿಸುತ್ತಿದ್ದು. ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಿದೆ ಎಂದರು.

     

    ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರ್ ಎಚ್ ಚನ್ನಪ್ಪ, ಆರ್. ಎಂ ಲಕ್ಷ್ಮೀಪತಿ,ನರಸಿಂಹಮೂರ್ತಿ, ಆರ್. ಜಿ.ಗಂಗರಾಜು, ಜಗದೀಶ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.

  • *ವಿಶೇಷ ರೀತಿಯಲ್ಲಿ ಸಮಾಜಮುಖಿ ಕಾರ್ಯಾ ಮಾಡುವ ಮೂಲಕ ಗಾನಕೋಗಿಲೆ ಕೆ ಎಸ್ ಚಿತ್ರಮ್ಮನವರ ಹುಟ್ಟು ಹಬ್ಬ ಆಚರಿಸಿದ ವೀರ ಅಭಿಮಾನಿ ಮುಕ್ಕೇನಹಳ್ಳಿ ರವಿ*

    ದೊಡ್ಡಬಳ್ಳಾಪುರ : ಹಿನ್ನೆಲೆ ಗಾಯನದಲ್ಲಿ ಭಾರತ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ, ಪದ್ಮ ವಿಭೂಷಣ ಪುರಸ್ಕೃತ ಗಾನಕೋಗಿಲೆ ಕೆ.ಎಸ್. ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ ಆಚರಿಸಲಾಯಿತು.

    ತಾಲ್ಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನ್ನದಾಸೋಹ ಸಮಿತಿಯ ಸಹಕಾರದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ )ದ ವತಿಯಿಂದ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ, ವೃದ್ಧರಿಗೆ ಹೊದಿಕೆ ವಿತರಣೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಕೆಎಸ್ ಚಿತ್ರಮ್ಮರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

    ಮಾಜಿ ನಗರಸಭಾ ಸದಸ್ಯ ಪಿ. ಸಿ. ಲಕ್ಷ್ಮೀನಾರಾಯಣ್ ಮಾತನಾಡಿ ಕೊರೋನ ಸಂದರ್ಭದಲ್ಲಿ ಮಿತ್ರರ ಸಲಹೆ ಮೇರೆಗೆ ಅನ್ನದಾಸೋಹ ಸಮಿತಿಯೊಟ್ಟಿಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಅನ್ನ ದಾಸೋಹಕ್ಕೆ ಸಹಾಯ ನೀಡುತ್ತಿದ್ದು ಮುಂದೆಯೂ ಇದೇ ರೀತಿ ಸಹಕಾರ ನೀಡಲಾಗುವುದು ಎಂದರು.

    ಈ ಕಾರ್ಯಕ್ರಮಕ್ಕೆ ಧನಸಹಾಯ ಮಾಡುವುದು ಸುಲಭ ಆದರೆ ಅದನ್ನು ಸಮರ್ಪಕವಾಗಿ ಪ್ರತಿಯೊಬ್ಬರಿಗೂ ಹಂಚಿಕೆಯಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದು ಅತ್ಯಂತ ಕಷ್ಟಕರ ಸಂಗತಿಯಾಗಿದೆ ಅಂತಹ ಕಾರ್ಯವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಲ್ಲೇಶ್ ನೆಡೆಸಿಕೊಂಡು ಬರುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು

     

    ಕರ್ನಾಟಕ ರಕ್ಷಣಾ ವೇದಿಕೆಯ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲ್ಲೂಕು ಘಟಕ ಅಧ್ಯಕ್ಷರಾದ ಹಮಾಮ್ ವೆಂಕಟೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ತುಂಬಾ ವಿಶೇಷವಾಗಿದ್ದು ಸುಮಾರು 21 ಭಾಷೆಗಳಲ್ಲಿ 25,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಾನಕೋಗಿಲೆ ಎಂದು ಹೆಸರುವಾಸಿ ಪಡೆದಿರುವ ಶ್ರೀಮತಿ ಕೆ ಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬದ ಆಚರಣೆಯನ್ನು ಅನ್ನದಾಸೋಹ ಸಮಿತಿಯೊಟ್ಟಿಗೆ ಆಹಾರ ವಿತರಣೆ,ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಹಾಗೂ ವೃದ್ಧರಿಗೆ ಹೊದಿಕೆ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸ ತಂದಿದೆ.

    ಕಾರ್ಯಕ್ರಮವನ್ನು ಕೆ ಎಸ್ ಚಿತ್ರಮ್ಮನವರ ವೀರಾಭಿಮಾನಿ ಮುಕ್ಕೇನ ಹಳ್ಳಿ ರವಿಯವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದು. ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯಕ್ರಮವಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಮುಕ್ಕೇನಹಳ್ಳಿ ರವಿ ಮಾತನಾಡಿ ಕೆ ಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದೇವೆ. ಸತತವಾಗಿ ಕಳೆದ ಹಲವು ವರ್ಷಗಳಿಂದ ಅನ್ನದಾಸೋಹಿ ಮಲ್ಲೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕತೆ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದು ಮುಂದೆಯೂ ಈ ಕಾರ್ಯಕ್ರಮವು ನಡೆಯಲಿದೆ ಎಂದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಇಂದು ಸಂಗೀತ ಲೋಕದಲ್ಲಿ ಮಿನುಗು ತಾರೆಯಂತೆ ಮಿಂಚುತ್ತಿರುವ ಅದ್ಭುತ ಗಾಯಕಿ, ಗಾನಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ ಪದ್ಮಭೂಷಣ ಕೆಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ಅವರ ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ಅವರ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಿದ್ದೇವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಅಥವಾ ನಟಿಯರ ಹುಟ್ಟು ಹಬ್ಬಗಳಲ್ಲಿ ದುಂದು ವೆಚ್ಚ ಮಾಡುವ ಮೂಲಕ ಸಂಭ್ರಮಿಸುತ್ತಾರೆ ಆದರೆ ಪ್ರತಿಯೊಬ್ಬ ಅಭಿಮಾನಿಯೂ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕ ನಟರಿಗೆ ಅಥವಾ ನಟಿಯರಿಗೆ ಗೌರವ ಸಲ್ಲಿಸಬೇಕಿದೆ ಅದಕ್ಕೆ ಉತ್ತಮ ಉದಾಹರಣೆ ಇಂದಿನ ಕಾರ್ಯಕ್ರಮವಾಗಿದೆ ಶ್ರೀಯುತ ರವಿಯವರು ತಮ್ಮ ನೆಚ್ಚಿನ ಗಾಯಕರಾದ ಕೆ ಎಸ್ ಚಿತ್ರಮ್ಮನವರ ಹುಟ್ಟು ಹಬ್ಬದ ಆಚರಣೆಯನ್ನು ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವೃದ್ಧರಿಗೆ, ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡಿದ್ದಾರೆ ಇದು ಸಮಾಜಕ್ಕೆ ಉತ್ತಮ ಮಾದರಿಯಾಗಿದೆ. ಅಭಿಮಾನಿಗಳು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಲಿ ಎಂದರು.

     

    ಕರ್ನಾಟಕ ರಕ್ಷಣಾ ವೇದಿಕೆಯ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್ ಎಲ್ ಎನ್ ವೇಣು,ತಾಲ್ಲೂಕು ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಕಾರಳ್ಳಿ ಮಂಜು, ಮುಖಂಡರಾದ ಸೂರಿ, ಶಿವು, ರಂಗ, ಸೇರಿದಂತೆ ಹಲವು ಮುಖಂಡರು ಉಪಸ್ಥಿರಿದರು.

  • *ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಪಿಸುವ ದಿನವೇ ಕಾರ್ಗಿಲ್ ವಿಜಯ್ ದಿವಸ್ – ಮಹಾಬಲೇಶ್ವರ್*

    ದೊಡ್ಡಬಳ್ಳಾಪುರ : ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ .‌ ಭಾರತೀಯರಲ್ಲಿ ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಪಿಸುವ ದಿನವನ್ನು ಕಾರ್ಗಿಲ್ ವಿಜಯ್ ದಿವಸ್  ಎಂದು   ಎನ್.ಸಿ.ಸಿ  ನಿವೃತ್ತ ಅಧಿಕಾರಿ  ಮೇಜರ್ ಎಸ್.ಮಹಾಬಲೇಶ್ವರ್  ತಿಳಿಸಿದರು.

     

    ಅವರು  ದೊಡ್ಡಬಳ್ಳಾಪುರ ನಗರದ  ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ   ಎನ್.ಸಿ.ಸಿ ಘಟಕದಿಂದ   ನಡೆದ ಕಾರ್ಗಿಲ್ ವಿಜಯೋತ್ಸವ      ದಿನಾಚರಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತೀಯರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ದ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.   1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್‌ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು ಎಂದರು.

     

    ಕಾರ್ಗಿಲ್  ವಿಜಯೋತ್ಸವ ದಿನಾಚರಣೆಯ ಅಂಗವಾಗಿ ಎನ್.ಸಿ.ಸಿ ವಿದ್ಯಾರ್ಥಿಗಳು ಕಾರ್ಗಿಲ್ ಸೈನಿಕರನ್ನು ಸ್ಮರಿಸಿ ಭಾರತದ ಭೂಪಟ ರಚನೆ ಮಾಡಿ  ದೀಪ ಬೆಳಗಿಸಿ ಗೌರವ ನಮನವನ್ನು ಸಲ್ಲಿಸಿದರು.

     

     

    ಕಾರ್ಯಕ್ರಮದಲ್ಲಿ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆನಂದಮೂರ್ತಿ, ಉಪಪ್ರಾಂಶುಪಾಲ ಎಸ್.ಎಸ್.ಶಿವಶಂಕರ್,  ಎನ್.ಸಿ.ಸಿ ಅಧಿಕಾರಿಗಳಾದ ಎನ್.ಶ್ರೀನಿವಾಸ, ಪ್ರವೀಣ್,  ಶ್ರೀಕಾಂತ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • *ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ 80ರಷ್ಟು ಉದ್ಯೋಗವನ್ನು ಕಲ್ಪಿಸಿ – ಎ. ನಂಜಪ್ಪ*

    ದೊಡ್ಡಬಳ್ಳಾಪುರ (ವಿಜಯಮಿತ್ರ) : ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ
    ಹಾಗೂ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕಾಗಿ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


    ಉದ್ಯೋಗ ಮೀಸಲಾತಿ ನೀಡುವ ವಿದಾಯಕವನ್ನು ಅಂಗೀಕಾರ ಮಾಡಿದ 12 ಗಂಟೆಯಲ್ಲಿ ಉದ್ದಿಮೆದಾರರ ಒತ್ತಡಕ್ಕೆ ಮಣಿದು ತಡೆ ಹಿಡಿದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಈ ಕೂಡಲೇ ಮುಖ್ಯಮಂತ್ರಿಗಳು ವಿದಾಯಕವನ್ನು ಅಂಗೀಕರಿಸಿ ಜಾರಿಗೆ ತರಬೇಕಿದೆ ಎಂದು ಕನ್ನಡಪರ ಸಂಘಟನೆಗಳು ಒಕ್ಕೂಟದ ಜಿಲ್ಲಾಧ್ಯಕ್ಷ ಎ. ನಂಜಪ್ಪ ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ 40 ವರ್ಷಗಳ ಇತಿಹಾಸವಿರುವ ಡಾ. ಸರೋಜಿನಿ ಮಹಿಷಿ ವರದಿಯನ್ನು
    ಜಾರಿಗೊಳಿಸಬೇಕಾಗಿ ಒತ್ತಾಯಿಸುತ್ತೇವೆ ಸರ್ಕಾರವು ಈ ಕುರಿತು ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರ ಶಕ್ತಿಪ್ರದರ್ಶನವನ್ನು ಕಂಪನಿಗಳ ಮಾಲೀಕರ ಮೇಲೆ ತೋರಿಸಬೇಕಾಗುತ್ತದೆ ಎಂದರು.

    ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಾಗರಾಜು. ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುಪ್ರಸಾದ್, ನಗರಾಧ್ಯಕ್ಷ ನಗರ ತರುಣ್ ಸರ್ಜಾ, ಗುಣಶೇಖರ್, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಹರಿ ಕುಮಾರ್,ಮಹಿಳಾ ಮುಖಂಡರುಗಳಾದ ಕುಮುದಾ, ಶಶಿಕಲಾ, ಒಕ್ಕೂಟದ ಮುಖಂಡರುಗಳಾದ ಅಗ್ನಿ ವೆಂಕಟೇಶ್, ಉಪಾಧ್ಯಕ್ಷರಾದ ನಯಾಜ್ ಖಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

  • *ದಲಿತ ಮುಖಂಡ ಅನೀಷ್ ರನ್ನು ಭೇಟಿಯಾದ ರಾಜ್ಯ ಸಹಕಾರ ಪ್ರಕೋಷ್ಠ ಸದಸ್ಯ ಓಬದೇನಹಳ್ಳಿ ಡಾ. ಕೆ.ಮುನಿಯಪ್ಪ*

    ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿರುವ ದಲಿತ ಮುಖಂಡ ಅನೀಷ್ ರನ್ನು ಕರ್ನಾಟಕ ಭಾರತೀಯ ಜನತಾ ಪಾರ್ಟಿ ಯ ರಾಜ್ಯ ಸಹಕಾರ ಪ್ರಕೋಷ್ಠ ಸದಸ್ಯ ಓಬದೇನಹಳ್ಳಿ ಡಾ. ಕೆ.ಮುನಿಯಪ್ಪ ಭೇಟಿ ಮಾಡಿ ಸಾಂತ್ವನ ಹೇಳಿದರು.

     

     

    ನಂತರ ಮಾತನಾಡಿದ ಅವರು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಮಾಳಗಾಳು ಗ್ರಾಮದ ದಲಿತ ಮುಖಂಡ ಅನೀಷ್ ಎಂಬುವವರನ್ನು ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು ಇವರನ್ನು ಇಂದು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಸಮಾಜ ಕಲ್ಯಾಣ ಇಲಾಖೆಯವರನ್ನ ಭೇಟಿ ಮಾಡಿ ಪರಿಹಾರ ವಿತರಿಸಲು ತಿಳಿಸಿದ್ದೇನೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದಲಿತ ಕುಟುಂಬದವರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

  • *ಲ್ಯಾಂಡ್ ಡೆವಲಪರ್ಸ್ ವಿರುದ್ಧ ರೈತನ ಹೋರಾಟ : ಬೆಂಬಲಕ್ಕೆ ನಿಂತ ಕರವೇ ಸ್ವಾಭಿಮಾನಿ ಬಳಗ*

    Devanahalli : ರೈತನ ಜಮೀನು ಸೈಟ್ ಗಳನ್ನಾಗಿ ಮಾಡುವುದ್ದಾಗಿ ಹೇಳಿ ಅಗ್ರಿಮೆಂಟ್ ಮಾಡಿಸಿಕೊಂಡ್ ಡೆವಲಪರ್ಸ್, 11 ವರ್ಷ ಕಳೆದ್ರು ಜಮೀನು ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯತೆ ತೋರಿದ್ದಾರೆ, ಡೆವಲಪರ್ಸ್ ವಿರುದ್ಧ ರೈತ ಕೋರ್ಟ್ ನಲ್ಲಿ ದಾವೆ ಹೂಡಿದ, ಡೆವಲಪರ್ಸ್ ಗೆ ಕೋರ್ಟ್ ನೋಟಿಸ್ ನೀಡಿದೆ, ಜಮೀನು ವಿವಾದ ಹಿನ್ನಲೆ ಡೆವಲಪರ್ಸ್ ರೈತನ ಮೇಲೆ ಕೇಸ್ ದಾಖಲಿಸಿದ್ದಾನೆ, ವಿನಾಕಾರಣ ರೈತನ ವಿರುದ್ಧು ಪ್ರಕರಣ ದಾಖಲಿಸಿದ ವಿಶ್ವನಾಥಪುರ ಪೊಲೀಸ್ ಠಾಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಬೇಸರ ವ್ಯಕ್ತಪಡಿಸಿದೆ.

     

    ದೇವನಹಲ್ಳಿ ತಾಲ್ಲೂಕಿನ ಶೆಟ್ಟೇರಹಳ್ಳಿ ಸರ್ವೇ ನಂಬರ್ 51/1 ಮತ್ತು 69/2 15 ಎಕರೆ ಜಮೀನು ಹೊನ್ನಪ್ಪನವರಿಗೆ ಸೇರಿದ್ದಾಗಿದ್ದು, ಈ ಜಮೀನಿನ್ನು ಸೈಟ್ ಗಳನ್ನಾಗಿ ಮಾಡುವ ಉದ್ದೇಶಕ್ಕಾಗಿ ವೀರಸ್ವಾಮಿ ಎಂಬುವರಿಗೆ ಜಿ.ಪಿ.ಎ ಮಾಡಿಕೊಟ್ಟಿದ್ದರು, ಈ ವಿಚಾರವಾಗಿ ಠಾಣೆ ಮೆಟ್ಟಿಲೇರಿ ವಿವಾದವಾದ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ‌ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ರೈತರ ಪರವಾಗಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಪಡೆದರು.

     

     

    ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ‌ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಮಾತನಾಡಿ, 2013-14 ರಲ್ಲಿ ವೀರಸ್ವಾಮಿ ಎಂಬುವ ಡೆವಲಪರ್ ಹೊನ್ನಪ್ಪನವರ ಕಡೆಯಿಂದ 15 ಎಕರೆ ಜಮೀನನ್ನು ಜಿ.ಪಿ.ಎ ಮಾಡಿಸಿಕೊಂಡರು. ಆದರೆ 6 ವರ್ಷವಾದರೂ ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ, 2019 ರಲ್ಲಿ ಮತ್ತೆ ಇದೇ ವಿಚಾರವಾಗಿ ಹೊಸದಾಗಿ ಅಗ್ರಿಮೆಂಟ್ ಮಾಡಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿದ್ರು, ಇದಾದ 5 ವರ್ಷ ಕಳೆದರೂ ಜಮೀನು ಅಭಿವೃದ್ಧಿ ಮಾಡದೆ ಕಾಲಹರಣ ಮಾಡಿದ್ದಾರೆ, ವೀರಸ್ವಾಮಿ ವಿರುದ್ಧ ಹೊನ್ನಪ್ಪನವರು ಕೋರ್ಟ್ ಮೊರೆ ಹೋದರು, ನ್ಯಾಯಾಲಯವು ವೀರಸ್ವಾಮಿಯವರಿಗೆ ನೋಟೀಸ್ ನೀಡಿದ ನಂತರ ಜಮೀನಿನ ಬಳಿ ಬಂದು ಲೇಔಟ್ ಅಭಿವೃದ್ಧಿ ಪಡಿಸುತ್ತೇವೆ ಎಂದು ಹೊನ್ನಪ್ಪನ ಜಮೀನಿನ ಬಳಿ ಬಂದಿದ್ದಾರೆ, ಜಮೀನು ವಿಚಾರ ಇತ್ಯರ್ಥವಾಗುವವರೆಗೂ ಯಾವ ಕೆಲಸ ಮಾಡಲು ಬಿಡುವುದಿಲ್ಲಾ ಎಂದು ರೈತ ಹೊನ್ನಪ್ಪ ಹೇಳಿದ್ದಾರೆ, ಇದೇ ಕಾರಣಕ್ಕೆ ರೈತನ ವಿರುದ್ಧ ಸುಖಾಸುಮ್ಮನೆ ಕೇಸು ದಾಖಲಿಸಿದರೆ ಎಂದು ಅಕ್ರೋಶ ವ್ಯಕ್ತಪಡಿಸದರು.

     

    ಜಮೀನಿನ ಮಾಲೀಕ ಹೊನ್ನಪ್ಪ ಮಾತನಾಡಿ, ಕಳೆದ 11 ವರ್ಷಗಳಿಂದ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದ್ದಾರೆ ಹೊರತು ಯಾವುದೇ ಕೆಲಸ ಮಾಡುತ್ತಿಲ್ಲಾ, ಇತ್ತೀಚೆಗೆ ಜಮೀನಿನ ಬಳಿ ‌ಬಂದಾಗ ಕೆಲಸ ಮಾಡಲು ಬಿಡದಾಗ ನಮ್ಮ ಮೇಲೆ ದೂರು ನೀಡಿರುತ್ತಾರೆ. ಇಷ್ಟು ವರ್ಷಗಳಾದರೂ ಅಭಿವೃದ್ಧಿ ಪಡಿಸದಿದ್ದರಿಂದ ನಮ್ಮ ಕುಟುಂಬದ ಸದಸ್ಯರೆಲ್ಲಾ ಅವರಿಗೆ ಜಮೀನು ನೀಡುವುದಿಲ್ಲಾ ಎಂದು ತೀರ್ಮಾನಿಸಿದೆ ಹಾಗೂ ಅವರು ನೀಡಿರುವ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ತಿಳಿಸಿದರು.

     

    ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ರೈತರು ಇದ್ದರು.

  • *ಶುದ್ಧ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ : ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ : ಪಟ್ಟು ಬಿಡದ ಗ್ರಾಮಸ್ಥರು*

    ದೊಡ್ಡಬಳ್ಳಾಪುರ : ಶುದ್ಧ ನೀರಿಗಾಗಿ ಒತ್ತಾಯಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ಎರಡನೇ ಬಾರಿಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನ ಆರಂಭಿಸಿದ್ದಾರೆ.

    ಧರಣಿ ಕುಳಿತ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ಶಿವಶಂಕರ್ ಭೇಟಿ ನೀಡಿ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಹೋರಾಟಗಾರರನ್ನು ಮನವಿ ಮಾಡಿದರು.

     

    ಘಟಕದ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ ಮಾಡಿರುವ ದಾಖಲೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯಿಂದ ಒದಗಿಸಿದ ನಂತರ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು.

     

    ದದೊಡ್ಡಬಳ್ಳಾಪುರ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕೈಗಾರಿಕೆಗಳ ತ್ಯಾಜ್ಯ ನೀರಿನಿಂದ ಆರ್ಕಾವತಿ ಜಲಮೂಲ ಸೇರಿ ನದಿಪಾತ್ರದಲ್ಲಿನ ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ.

     

     

    ರೈತ ಮುಖಂಡ ವಸಂತ್ ಕುಮಾರ್ ಮಾತನಾಡಿ ಎಸ್ ಡಿ ಪಿ ಘಟಕದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ನಡುವಿನ ಪತ್ರ ವ್ಯವಹಾರದ ಪ್ರತಿ ನೀಡುವಂತೆ ಮನವಿ ಮಾಡಿದ್ದೇವೆ.

    ಪತ್ರ ವ್ಯವಹಾರದಲ್ಲಿನ ಸತ್ಯಾಂಶವನ್ನ ತಿಳಿದ ನಂತರವಷ್ಟೇ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದ್ದಾಗಿ ಹೇಳಿದರು.

    ಹೋರಾಟಗಾರರ ತಂಡ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಾದ ಶಿವಶಂಕರ್ ಜೊತೆ ಮಾತುಕಥೆಯನ್ನ ನಡೆಸಿದರು.

     

    ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ ವಿಧಾನಸಭೆಯಲ್ಲಿ ಶಾಸಕರಾದ ಧೀರಜ್ ಮುನಿರಾಜು ಕೇಳಿದ ಪ್ರಶ್ನೆಗೂ ಮತ್ತು ಸಚಿವರಾದ ಬೈರತಿ ಸುರೇಶ್ ನೀಡಿದ ಉತ್ತರದಲ್ಲಿ ಕಮ್ಯುನಿಕೇಷನ್ ಗ್ಯಾಪ್ ನಿಂದಾಗಿ ಗೊಂದಲ ವಾತಾವರಣ ಸೃಷ್ಟಿಯಾಗಿದೆ. ದೊಡ್ಡಬಳ್ಳಾಪುರ ಒಳಚರಂಡಿ ಮತ್ತು ಚಿಕ್ಕತುಮಕೂರು ಕೆರೆಯಂಗಳದಲ್ಲಿ ಎಸ್ ಟಿ ಪಿ ಘಟಕ ನಿರ್ಮಿಸಲು 135 ಕೋಟಿಯ ಕಾಮಾಗಾರಿಯ ಡಿಪಿಆರ್ ಸಿದ್ಧವಾಗಿದೆ ಎಂದರು.

     

    ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನ ಜಿಲ್ಲಾಧಿಕಾರಿಗಳು ಹೋರಾಟಗಾರರಿಗೆ ತೋರಿಸಿದರು.

    ಇದೇ ವೇಳೆ ಹೋರಾಟಗಾರರಿಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳಾದ ಶಿವಶಂಕ‌ರ್ ಹಸಿರು ನ್ಯಾಯ ಮಂಡಳಿ ಆದೇಶವಿದ್ದು, SDP ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದೆ. ಘಟಕ ಕಾಮಗಾರಿಯ ಕೆಲಸ ಇಲಾಖೆ ಮತ್ತು ಸರ್ಕಾರಕ್ಕೆ ಹೋಗ ಬೇಕಿದೆ. 4 ತಿಂಗಳಲ್ಲಿ ಘಟಕ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಲಿದೆ ಎಂದರು.

    ಜಿಲ್ಲಾಧಿಕಾರಿಗಳ ಭರವಸೆಯ ಮತ್ತು ದಾಖಲೆಗಳಿಂದ ಹೋರಾಟಗಾರರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನ ಸ್ಥಗಿತಗೊಳಿಸಿದ್ದಾರೆ.

     

    ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಸನ್ನ, ಸತೀಶ್, ವಸಂತ್, ರಮೇಶ್ ಚಿಕ್ಕತುಮಕೂರು. ಸುರೇಶ್, ವಿಜಿಕುಮಾರ್, ಮಂಜುನಾಥ್ ಎಲ್ ಐ ಸಿ, ಲೋಕೇಶ್, ನರಸಿಂಹ ಸೇರಿದಂತೆ ಎರಡು ಗ್ರಾಮ ಪಂಚಾಯಿತಿಗಳ ಜನರು ಹಾಜರಿದ್ದರು.