Blog

  • *ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮೆಲ್ಲರ ಬೆಂಬಲ – ದಲಿತ ಮುಖಂಡ ರಮೇಶ್*

    ದೊಡ್ಡಬಳ್ಳಾಪುರ ಏಪ್ರಿಲ್ 23 ( ವಿಜಯ ಮಿತ್ರ ) : ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರ್ಕಾರದಿಂದ ಬಿಡುಗಡೆ ಬಯಸಿ ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಒಮ್ಮತದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಣಯಿಸಿದೆ ಎಂದು ರಮೇಶ್ ರಾಮಗೊಂಡನಹಳ್ಳಿ ತಿಳಿಸಿದರು.

     

    ನಗರದ ಖಾಸಗಿ ಹೋಟೆಲ್ ನಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಇಂದು ಇಡೀ ದೇಶದ ದುಡಿಯುವ ಜನರು. ದಮನಿತ ಸಮುದಾಯಗಳು, ಅಲ್ಪಸಂಖ್ಯಾತರು. ಪ್ರಜ್ಞಾವಂತರು ಒಂದಾಗಿದ್ದಾರೆ. ಬಿಜೆಪಿಯನ್ನು ಸೋಲಿಸಲು ಸಂಘ ಪರಿವಾರದ ಷಡ್ಯಂತ್ರವನ್ನು ವಿಫಲಗೊಳಿಸಲು ಒಗ್ಗೂಡಿ ಶ್ರಮಿಸಲು ಮುಂದಾಗಿದ್ದು.

    ಸರ್ವ ಮುಖಂಡರ ನಿರ್ಣಾಯದಿಂದ “ಶರಣಾಗುವುದಿಲ್ಲ. ಸಂವಿಧಾನದ ನಾಶಕ್ಕೆ ಅವಕಾಶ ನೀಡುವುದಿಲ್ಲ” ಎಂಬ ಘೋಷಣೆಯೊಂದಿಗೆ ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ನಿಟ್ಟಿನಲ್ಲಿ,ನಾವಿರುವ ಊರು, ಕೇರಿ, ಹಾಡಿ ಗಲ್ಲಿಗಳಲ್ಲಿ ಪ್ರತಿಯೊಬ್ಬರೂ BJP/JDS ವಿರುದ್ಧ ಮತ ಹಾಕುವಂತೆ ಮನವೊಲಿಸಲು ಮುಂದಾಗಿದ್ದೇವೆ . ಯಾರೇ ಅಧಿಕಾರಕ್ಕೆ ಬಂದರೂ ಸಮಸ್ತ ದುಡಿಯುವ ಜನ ಒಂದುಗೂಡಿ. ಐಕ್ಯ ಶಕ್ತಿಯಾಗಿ ಸಂವಿಧಾನವನ್ನು ಬಲಪಡಿಸಲು ಹಾಗೂ ಪೂರ್ಣ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಶೋಷಿತ ಸಮುದಾಯಗಳು ಒಂದಾಗಿ ಇನ್ನಿತರ ಪ್ರಗತಿಪರ ಸಾಹಿತಿ-ಕಲಾವಿದರ ಜೊತೆಗೂಡಿ ಪರ್ಯಾಯ ರಾಜಕೀಯ ಕಟ್ಟುವ ಕಡೆಗೂ ಹೆಜ್ಜೆ ಹಾಕಬೇಕು. ಎಂಬ ನಿರ್ಧಾರವನ್ನು ನಾವು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಲ್ಲಿ ತೆಗೆದುಕೊಂಡಿದ್ದೇವೆ ಎಂದರು.

     

     

    ದಲಿತ ಮುಖಂಡರಾದ ರಾಜು ಸಣ್ಣಕ್ಕಿ ಮಾತನಾಡಿ ದೇಶದ ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿಯಾಗಿದ್ದು. ದೆಹಲಿಯಲ್ಲಿ ರೈತರು ನೆಡೆಸಿದ್ದ ಹೋರಾಟದ ಬಗ್ಗೆ ಗಮನ ಹರಿಸದ ಅವರು ಸುಮಾರು 700ಕ್ಕೂ ಅಧಿಕ ರೈತರ ಮಾರಣಹೋಮದ ನಂತರ ಈಗ ರೈತರ ಪರ ಎಂಬಂತೆ ನಾಟಕೀಯವಾಗಿ ಮಾತನಾಡುತ್ತಾರೆ. ಯುವಕರಿಗೆ ಉದ್ಯೋಗದ ಆಸೆ ಹುಟ್ಟಿಸಿ ಪಕೋಡ ಮಾರುವಂತೆ ಹೇಳಿದ್ದ ದೇಶದ ಪ್ರಧಾನಿ ಮೋದಿ ಬಿಟ್ಟರೆ ಮತ್ತೊಬ್ಬರಿಲ್ಲ ಎಂದರು.

    ಜನ ವಿರೋಧಿ ನೀತಿ ಗಳನ್ನು ಪ್ರಶ್ನೆ ಮಾಡುವುದೇ ತಪ್ಪು ಎಂಬ ವಾತಾವರಣ ನಿರ್ಮಾಣ ವಾಗಿದೆ…

    ಮನುವಾದಿ ಸಂಸ್ಕೃತಿಯನ್ನು ನಮ್ಮ ಮೇಲೆ ಹೆರಲು ಹೊರಟಿದೆ ಈ ಬಿಜೆಪಿ ಸರ್ಕಾರ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ ಮಾತನಾಡಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾ ಸಂವಿಧಾನ ಬಾಹಿರ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ. ಕೋಟ್ಯಂತರ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದ್ದ ಬಿಜೆಪಿಗರು ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿ ದೇಶದ ಯುವಜನರನ್ನು ಅತಂತ್ರದಲ್ಲಿಟ್ಟಿದ್ದಾರೆ. ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದ. ವಿದ್ಯಾರ್ಥಿವೇತನವನ್ನು ನಿಲ್ಲಿಸಿದ್ದಾರಲ್ಲದೆ ಧರ್ಮ ಜಾತಿಗಳ ನಡುವಿನ ಕಲಹಕ್ಕೆ ಅವರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಬಡವರ ದಿನಬಳಕೆಯ ವಸ್ತುಗಳ ಮೇಲೆ ತರಿಗೆ ಹೆಚ್ಚಿಸಿ ಬಡವರನ್ನು ಅತೀ ಬಡವರನ್ನಾಗಿಸಿ ಶ್ರೀಮಂತ ಹಾಗು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟು ಈ ದೇಶ ಬಡವರಿಗಲ್ಲ ಎಂಬ ಸಂದೇಶ ನೀಡುತ್ತಲೇ ಇದ್ದಾರೆ ಎಂದರು.ಹುಸಿ ಸುಳ್ಳು ಗಳನ್ನು ಹೇಳುವಲ್ಲಿ ತರಬೇತಿ ಪಡೆದಿರುವ ನಿಸ್ಸಿಮರಿಗೆ ರಾಷ್ಟ್ರಪ್ರಶಸ್ತಿ ನೀಡುವ ಭ್ರಷ್ಟ ಸರ್ಕಾರ ಮೋದಿ ಸರ್ಕಾರ…

    ಸಂವಿಧಾನ ರಕ್ಷಣೆಗೆ ಮುಂದಾಗುವ ಪಕ್ಷಕ್ಕೆ ನಮ್ಮೆಲ್ಲರ ಬೆಂಬಲ ನೀಡುತ್ತಿದ್ದು. ಡಾ. ಬಿ ಆರ್ ಅಂಬೇಡ್ಕರ್ ರರು ಸಮಾಜದ ಬದಲಾವಣೆಗಾಗಿ ನಮ್ಮೆಲ್ಲರಿಗೂ ಒಂದು ಶಸ್ತ್ರವನ್ನು ನೀಡಿದ್ದಾರೆ ಅದುವೇ ಮತದಾನ ಈ ಶಸ್ತ್ರದ ಮೂಲಕ ರಾಜಕೀಯದಲ್ಲಿ ಬದಲಾವಣೆ ಸಾಧ್ಯ ಎಂದರು.

     

    ಶಿಕ್ಷಕರಾದ ಚಂದ್ರಪ್ಪ ಮಾತನಾಡಿ ದಕ್ಷಿಣ ರಾಜ್ಯಗಳಿಂದ ಸಂಗ್ರಹವಾದ ಅತಿ ಹೆಚ್ಚು ತೆರಿಗೆಯ ಪಾಲನ್ನು ತಮ್ಮ ಆಡಳಿತವಿರುವ ರಾಜ್ಯಗಳಿಗೆ ಕೊಡುತ್ತಾ ಪ್ರಾದೇಶಿಕ ಅಸಮಾನತೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ ಹಾಗೂ ರಾಜ್ಯಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದ್ದಾರೆ ತಮ್ಮ ಜನವಿರೋಧಿ ನೀತಿಗಳನ್ನು ವಿರೋಧಿಸಿದವರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಾ ವಿರೋಧವನ್ನು ಹತ್ತಿಕ್ಕುತ್ತಿದ್ದಾರೆ ಹಾಗು ಇಡೀ ದೇಶವನ್ನು ಭಯದ ವಾತಾವರಣದಲ್ಲಿ ಬಂಧಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

    ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • *ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲ ಘೋಷಿಸಿದ ಕನ್ನಡ ಪಕ್ಷ*

    ದೊಡ್ಡಬಳ್ಳಾಪುರ ಏಪ್ರಿಲ್ 20 (ವಿಜಯಮಿತ್ರ ) : ಕೇಂದ್ರ ಬಿಜೆಪಿ ಸರ್ಕಾರದ ನಿಲುವುಗಳನ್ನು ಖಂಡಿಸಿ ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕನ್ನಡ ಪಕ್ಷದ ಬೆಂಬಲವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹಿರಿಯ ಮುಖಂಡ ಸಂಜೀವ್ ನಾಯಕ್ ತಿಳಿಸಿದರು.

     

    ನಗರದ ಕನ್ನಡ ಪಕ್ಷ ಕಚೇರಿಯಲ್ಲಿ ಆಯೋಜನೆಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ತಾಲ್ಲೂಕಿನಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದ ನಾಯಕ ವೆಂಕಟರೆಡ್ಡಿಯವರು ಅವರ ಆಶಾಯದಂತೆ ನಮ್ಮ ಪಕ್ಷವು ಸದಾ ಜನ ಸಾಮಾನ್ಯರ ಪರವಾಗಿ ಶ್ರಮಿಸುತ್ತಿದೆ. ನಮ್ಮದು ಜಾತ್ಯಾತೀತ ನಿಲುವಿನ ಪಕ್ಷ ಕಳೆದ ಬಾರಿ ಕೆಲ ಕಾರಣಗಳಿಂದ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು. ಈ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿ ಕಾಂಗ್ರೆಸ್ ಪಕ್ಷವು ಪತ್ರ ರವಾನಿಸಿದೆ. ಈ ಹಿಂದೆ ಜೆಡಿಎಸ್ ಪಕ್ಷವನ್ನು ಕುರಿತು ನಮಗೆ ಉತ್ತಮ ಭರವಸೆ ಇತ್ತು ಆದರೆ ಈಗ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು. ನಮ್ಮ ಭರವಸೆ ಹುಸಿಯಾಗಿದೆ. ರಾಜ್ಯದಲ್ಲಿ ಹತ್ತಾರು ಸಮಸ್ಯೆಗಳಿದ್ದು ಪರಿಹಾರದ ಕಡೆ ಯೋಚಿಸದ ಸಂಸದರು ಇಂದು ಮತ್ತೆ ಮತ ಕೇಳಲು ನಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಇದ್ದಕ್ಕೆ ತಕ್ಕ ಉತ್ತರವನ್ನು ಕನ್ನಡಿಗರು ನೀಡಬೇಕಿದೆ ಎಂದರು.

     

    ಕಾಂಗ್ರೆಸ್ ಪಕ್ಷವು ಜನಸಾಮಾನ್ಯರಿಗೆ ತನ್ನ ಗ್ಯಾರಂಟಿಗಳ ಮೂಲಕ ಉತ್ತಮ ಕಾರ್ಯಕ್ರಮ ರೂಪಿಸಿದ್ದು ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಅನುಕೂಲವಾಗಿದೆ.ಇದನ್ನು ಗಮನಿಸಿದ ನಮ್ಮ ಪಕ್ಷ ದೇಶದ ಸಂವಿಧಾನ ರಕ್ಷಣೆಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದರು

     

     

    ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ ಪಿ ಆಂಜನೇಯ ಮಾತನಾಡಿ ಸೈದಂತಿಕಾ ನಿಲುವುಗಳ ಮೇಲೆ ಚುನಾವಣೆ ನೆಡೆಯಬೇಕಿತ್ತು ಅದರೆ ಧರ್ಮದ ಮೇಲೆ ನೆಡೆಯುತ್ತಿದೆ. ರೈತರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಬೆನ್ನೆಲುಬು ಎನ್ನುವ ರೈತರ ಬೆನ್ನೆಲುಬ್ಬನ್ನು ಮುರಿಯುವ ನಿರ್ಧಾರಗಳನ್ನು ಕೈಗೊಂಡಿದ್ದು.ದೆಹಲಿಯಲ್ಲಿ ರೈತರು ನಿರಂತರ ಹೋರಾಟ ನೆಡೆಸುತ್ತಿದ್ದು . ರೈತರು ಹೋರಾಟಕ್ಕೆ ಬಾರದಂತೆ ಹಲವು ಅಡೆತಡೆಗಳನ್ನು ಉಂಟುಮಾಡಿರುವ ಮೋದಿ ನೇತೃತ್ವದ ಸರ್ಕಾರ ಸುಮಾರು 700 ರಿಂದ 800 ರೈತರ ಸಾವಿಗೆ ಕಾರಣವಾಗಿದೆ.ಮಣಿಪುರದ ಘಟನೆಗೆ ಸ್ಪಂದಿಸದ ಮೋದಿ ಸರ್ಕಾರದ ನೆಡೆ ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ತೋರುತ್ತದೆ. ರಾಜ್ಯದಿಂದ ನಾವು ಕೇಂದ್ರಕ್ಕೆ ಸಲ್ಲಿಸುತ್ತಿರುವ ಜಿ. ಎಸ್. ಟಿ. ಹಣವನ್ನು ನೀಡುವಲ್ಲಿ ಕೇಂದ್ರ ತರತಮ್ಯ ಮಾಡುತ್ತಿದೆ ಅದನ್ನು ಪ್ರಶ್ನಿಸಿ ರಾಜ್ಯದ ಅಭಿರುದ್ಧಿಗಾಗಿ ಕೇಂದ್ರದಿಂದ ಹಣ ತರಲು ಕರ್ನಾಟಕದ 25 ಸಂಸದರು ಸೋತಿದ್ದಾರೆ ಎಂದರು. ಪ್ರಜಾಪ್ರಭುತ್ವದ ಮೇಲೆ ನೆಡೆಯುತ್ತಿರುವ ದಬ್ಬಾಳಿಕೆ ಸಂವಿಧಾನದ ಮೆಲಿನ ದಾಳಿಯನ್ನು ನಿಲ್ಲಿಸುವ ಸಲುವಾಗಿ ರಾಜ್ಯದ ಮೇಲೆ ನೆಡೆಯುತ್ತಿರುವ ಕೇಂದ್ರದ ಅನ್ಯಾಯ ಹಾಗೂ ದೋರಣೆಗಳ ಆಧಾರದಲ್ಲಿ ನಮ್ಮ ಕನ್ನಡ ಪಕ್ಷದ ಬೆಂಬಲವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ರವರಿಗೆ ನಮ್ಮ ಬೆಂಬಲ ಸುಚಿಸುತ್ತಿದ್ದೇವೆ ಎಂದು ತಿಳಿಸಿದರು.

     

    ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕುರಿತು ನಮಗೆ ಅಸಮಧಾನವಿದ್ದು . ಪಕ್ಷದ ಎಲ್ಲ ಸದಸ್ಯರ ಸರ್ವಾನುಮತದಿಂದ ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿ ಪತ್ರ ಬರೆದಿರುವ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಕನ್ನಡ ಪಕ್ಷದ ಬೆಂಬಲವನ್ನು ನೀಡಲಿದ್ದೇವೆ ಎಂದು ತಿಳಿಸಿದರು

     

    ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮುನಿಪಾಪಯ್ಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

  • *ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರಿಗೆ ದೊಡ್ಡ ಗೆಲುವು ತಂದುಕೊಡಬೇಕು: ಪ್ರಧಾನಿ ನರೇಂದ್ರ ಮೋದಿ*

    ಚಿಕ್ಕಬಳ್ಳಾಪುರ, ಏಪ್ರಿಲ್‌ 20, ( ವಿಜಯ ಮಿತ್ರ )ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರಿಗೆ ದೊಡ್ಡ ಗೆಲುವು ತಂದುಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರಿಗೆ ಮತ್ತು ಜನರಿಗೆ ಮನವಿ ಮಾಡಿದ್ದಾರೆ. ಈ ಕರೆಯಿಂದಾಗಿ ಕ್ಷೇತ್ರದ ಎಲ್ಲ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರಲ್ಲಿ ಹೊಸ ಹುರುಪು ಉಂಟಾಗಿದೆ.

     

    ಚೊಕ್ಕಹಳ್ಳಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶವು ಅತಿ ಹೆಚ್ಚು ಸಂಖ್ಯೆಯ ಜನರು ಹಾಗೂ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಿಂದಾಗಿ ಯಶಸ್ವಿಯಾಯಿತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಹಾಗೂ ಕಾರ್ಯಕರ್ತರು ಬಂದಿದ್ದು, ಡಾ.ಕೆ.ಸುಧಾಕರ್‌ ಅವರಿಗೆ ದೊರೆತ ಸ್ಪಷ್ಟ ಬೆಂಬಲವನ್ನು ಇದು ಪ್ರತಿಬಿಂಬಿಸಿತ್ತು.

     

    ಚೊಕ್ಕಹಳ್ಳಿಯಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರ ಸೋದರ ಸೋದರಿಯರು ಏಪ್ರಿಲ್‌ 26 ರಂದು ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ವಿಶೇಷವಾಗಿ ಮನವಿ ಮಾಡುತ್ತೇನೆ. *ಚಿಕ್ಕಬಳ್ಳಾಪುರದಿಂದ ಡಾ.ಕೆ.ಸುಧಾಕರ್‌* ಮತ್ತು ಕೋಲಾರ ಕ್ಷೇತ್ರದಿಂದ ಮಲ್ಲೇಶ್‌ ಬಾಬು ಅವರಿಗೆ ದೊಡ್ಡ ಗೆಲುವು ತಂದುಕೊಡಬೇಕು. ಕಾರ್ಯಕರ್ತರು ಪ್ರತಿ ಮನೆಮನೆಗೆ ಹೋಗಿ, ಮೋದಿಜಿ ಬಂದಿದ್ದರು ಮತ್ತು ನಿಮ್ಮೆಲ್ಲರಿಗೂ ತಮ್ಮ ನಮಸ್ಕಾರ ತಿಳಿಸಿದ್ದಾರೆ ಎಂದು ಹೇಳಬೇಕು ಎಂದರು.

     

    ಸಂತ ಕೈವಾರ ತಾತಯ್ಯ ಹಾಗೂ ಸರ್‌ ಎಂ.ವಿಶ್ವೇಶರಯ್ಯನವರ ಈ ಭೂಮಿಯಲ್ಲಿ ಜನರನ್ನು ದರ್ಶನ ಮಾಡಿರುವುದು ನನ್ನ ಸೌಭಾಗ್ಯ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ʼಮತ್ತೊಮ್ಮೆ ಮೋದಿ ಸರ್ಕಾರʼ ಎಂಬ ಸಂದೇಶವನ್ನು ಈಗಾಗಲೇ ನೀಡಿದೆ. ನಾನು ನನ್ನ ರಿಪೋರ್ಟ್‌ ಕಾರ್ಡ್‌ ಜೊತೆಗೆ ಜನರ ಆಶೀರ್ವಾದ ಕೇಳಲು ಬಂದಿದ್ದೇನೆ. ನಾನು ಜನರನ್ನೇ ನನ್ನ ಕುಟುಂಬ ಎಂದು ನಂಬಿದ್ದೇನೆ. ಜನರಿಗಾಗಿ ಸೇವೆ ಸಲ್ಲಿಸುವಲ್ಲಿ ಯಾವುದೇ ಕೊರತೆ ಮಾಡಿಲ್ಲ. ನಾನು ಯೋಜನೆ ಮಾತ್ರ ನೀಡಿಲ್ಲ, ಗ್ಯಾರಂಟಿ ಕೂಡ ನೀಡಿದ್ದೇನೆ. *ಚಿಕ್ಕಬಳ್ಳಾಪುರದಲ್ಲಿ 4 ಲಕ್ಷಕ್ಕೂ ಅಧಿಕ ಆಯುಷ್ಮಾನ್‌ ಕಾರ್ಡ್‌* ನೀಡಿದ್ದು, ಇನ್ನು 70 ವರ್ಷದ ಮೀರಿದ ಹಿರಿಯ ನಾಗರಿಕರಿಗೂ 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು.

     

    ಎನ್‌ಡಿಎ ಸರ್ಕಾರ ನಮೋ ಡ್ರೋಣ್‌ ದೀದಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಡ್ರೋಣ್‌ ಬಳಸುವ ತರಬೇತಿ ನೀಡಲಾಗುತ್ತಿದೆ. *ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಹೆಣ್ಣುಮಕ್ಕಳು ಡ್ರೋಣ್‌* ತಂತ್ರಜ್ಞಾನ ಬಳಸುವ ದಿನ ದೂರವಿಲ್ಲ. ಶ್ರೀಅನ್ನಕ್ಕೆ ಪ್ರೋತ್ಸಾಹ ನೀಡಿದ್ದು, ಸಿರಿಧಾನ್ಯಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ಚಿಕ್ಕಬಳ್ಳಾಪುರ-ಕೋಲಾರ ಭಾಗದ ರೈತರಿಗೂ ಆದಾಯ ಹೆಚ್ಚಲಿದೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಪರಿಹರಿಸಲು 150 ಅಮೃತ ಸರೋವರ ರೂಪಿಸಲಾಗಿದೆ. ಈ ಭಾಗದಲ್ಲಿ *2.70 ಲಕ್ಷ ಜನರಿಗೆ ಕೊಳಾಯಿ* ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ನಂದಿ ಬೆಟ್ಟವಿದೆ, ತಾಯಿ ಭುವನೇಶ್ವರಿ, ತಾಯಿ ಕೋಲಾರಮ್ಮನ ಅನುಗ್ರಹವೂ ಇದೆ. ಈ ಸ್ಥಳಗಳನ್ನು ನಮ್ಮ ಸರ್ಕಾರ ತೀರ್ಥಕ್ಷೇತ್ರಗಳಾಗಿ, ವೀಕೆಂಡ್‌ ಗೇಟ್‌ವೇ ಆಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

     

    *ಡಾ.ಕೆ.ಸುಧಾಕರ್‌ಗೆ ಮತ ನೀಡಿ*

     

    ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ, ಮನಮೋಹನ್‌ ಸಿಂಗ್‌ ಸರ್ಕಾರ ಹತ್ತು ವರ್ಷ ದೇಶ ಆಳಿ ಚೊಂಬು ನೀಡಿದೆ. 2ಜಿ ಸೇರಿದಂತೆ ಅನೇಕ ಭ್ರಷ್ಟಾಚಾರ ನಡೆದಿದ್ದು, ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಖಾಲಿ ಚೊಂಬನ್ನು ಜನರಿಗೆ ನೀಡಿದ್ದಾರೆ. ಪಿಳ್ಳಪ್ಪನವರ ಮಗ ಬಿಜೆಪಿಗೆ ಬೆಂಬಲಿಸಲ್ಲ ಎಂದಿದ್ದಾರೆ. ಆದರೆ ಅವರ ತಂದೆಯನ್ನು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡದೆ ಗೆಲ್ಲಿಸಿದ್ದು ಇದೇ ದೇವೇಗೌಡ. ನೀವು ನಿಜವಾದ ಕಾರ್ಯಕರ್ತರಾಗಿದ್ದರೆ *ನನ್ನ ಆದೇಶದಂತೆ ಡಾ.ಕೆ.ಸುಧಾಕರ್‌ ಅವರಿಗೆ ಮತ ನೀಡಿ* ಎಂದರು.

     

    ಡಾ.ಕೆ.ಸುಧಾಕರ್‌ ಮತ್ತು ಮಲ್ಲೇಶ್‌ ಅವರನ್ನು ದೆಹಲಿಗೆ ಕಳುಹಿಸೋಣ. ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕುಡಿಯುವ ನೀರಿನ ಬವಣೆ ಬಗೆಹರಿಸಿ ಎಂದು ಕೇಳೋಣ. ಆ ಶಕ್ತಿಯನ್ನು ಜನರು ನೀಡಬೇಕು ಎಂದು ಮನವಿ ಮಾಡಿದರು.

     

    *ನಂದಿ ವಿಗ್ರಹ ಸಮರ್ಪಣೆ*

     

    ಚಿಕ್ಕಬಳ್ಳಾಪುರ ನಂದಿ ಬೆಟ್ಟ ಹಾಗೂ ಭೋಗನಂದೀಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಶಿವಭಕ್ತರಾದ ನರೇಂದ್ರ ಮೋದಿಯವರಿಗೆ ಅಭ್ಯರ್ಥಿ ಡಾ.ಕೆ.ಸುಧಾಕರ್‌ ನಂದಿ ವಿಗ್ರಹವನ್ನು ಕೊಡುಗೆಯಾಗಿ ನೀಡಿ ಗೌರವಿಸಿದರು.

  • *ಕಾರ್ಮಿಕನ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ : ಕಳ್ಳತನಕ್ಕೆ ಯತ್ನಿಸಿ ಬರೀಗೈಯಲ್ಲಿ ಎಸ್ಕಪ್ ಆದ ಕಳ್ಳರು*

    ದೊಡ್ಡಬಳ್ಳಾಪುರ ಏಪ್ರಿಲ್ 20 ( ವಿಜಯಮಿತ್ರ ) : ಮುಂಜಾನೆ 5:00 ಸಮಯಕ್ಕೆ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರ ಮೇಲೆ ಅಪರಿಚಿತರು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಗರ ಹೊರಹೊಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೆಡೆದಿದೆ.

     

    ಜೀನ್ಸ್ ನೆಟ್ ಪ್ರೈವೇಟ್ ಲಿಮಿಟೆಡ್ ( FFI) ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನರೇಂದ್ರಕುಮಾರ್ ವರ್ಮಾ ಹಲ್ಲೆಗೆ ಒಳಗಾದ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ನಾಲ್ವರು ಅಪರಿಚಿತರು ಕಾರಿನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನಿಸಿ ಮೊಬೈಲ್ ಕೊಡುವಂತೆ ಪಿಡಿಸಿದ್ದು ಮೊಬೈಲ್ ನೀಡದ ಹಿನ್ನೆಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ನರೇಂದ್ರ ಕುಮಾರ್ ವರ್ಮಾ ಆರೋಪಿಸಿದ್ದಾರೆ.

    ಬೆಲೆಬಾಳುವ ವಸ್ತುಗಳು ಸಿಗದ ಹಿನ್ನಲೆ ವ್ಯಕ್ತಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

     

    ಹೋರಾಟಗಾರ ಚಿದಾನಂದ್ ಮಾತನಾಡಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶವು ಬಹಳ ಅಭಿವೃದ್ಧಿ ಹೊಂದಿದೆ ಆದರೆ ಮೂಲಭೂತ ಸೌಕರ್ಯದ ವಿಷಯಕ್ಕೆ ಬಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ, ಸಿಸಿ ಕ್ಯಾಮೆರಗಳಿಲ್ಲ ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಈ ಪ್ರದೇಶವು ಕನಿಷ್ಠ ಸೌಲಭ್ಯ ಒದಗಿಸಲು ವಿಫಲವಾಗಿದೆ. ಸಾವಿರಾರು ಕಾರ್ಮಿಕರು ಹೊರ ರಾಜ್ಯಗಳಿಂದ ಬಂದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಇಂದು ಬೆಳಗ್ಗೆ ಕಾರ್ಮಿಕ ನರೇಂದ್ರ ಕುಮಾರ್ ವರ್ಮ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪುಂಡರ ಎಡೆಮುರಿ ಕಟ್ಟಬೇಕಿದೆ ಎಂದರು.

  • *ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ನಮ್ಮದು – ಸುಧಾಭಾಸ್ಕರ್ ನಾಯ್ಕ್*

    ದೊಡ್ಡಬಳ್ಳಾಪುರ ಏಪ್ರಿಲ್ 19 ( ವಿಜಯಮಿತ್ರ ) : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರ್ನಾಟಕದಲ್ಲಿ 820 ಕೆರೆಗಳನ್ನು ರೈತರ ಹಾಗೂ ಗ್ರಾಮಸ್ಥರ ಸಹಕಾರದಿಂದ ಹೂಳೆತ್ತಲಾಗಿದೆ ಎಂದು ಯೋಜನಾಧಿಕಾರಿಗಳಾದ ಸುಧಾಭಾಸ್ಕರ್ ನಾಯ್ಕ್ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಲವಂಗಲ ವಲಯದ ರಾಮೇಶ್ವರ ಗ್ರಾಮದಲ್ಲಿ *ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ* ತಾಲ್ಲೂಕು ಹಾಗೂ *ಹಾದ್ರಿಪುರ ಗ್ರಾಮ* ಪಂಚಾಯತಿ ಮತ್ತು *ಕೆರೆ ಅಭಿವೃದ್ಧಿ ಸಮಿತಿ ರಾಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ರಾಮೇಶ್ವರ ಗ್ರಾಮದ ಊರ ಮುಂದಿನ ಕೆರೆ* ಕಾಮಗಾರಿ ಮತ್ತು ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

     

    ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಿದ ಅವರು ಮಾತನಾಡಿ ನಮ್ಮ ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಬರಗಾಲದ ಹಿನ್ನೆಲೆ ಕೆರೆ ಹೂಳೆತ್ತುವುದರಿಂದ ಊರಿನ ಬೋರ್ವೆಲ್ ರಿಚಾರ್ಜ್ ಆಗುತ್ತದೆ, ದನಕರುಗಳಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ ಅಂತರ್ಜಲ ಮಟ್ಟ ಹೆಚ್ಚಳ ಆಗುತ್ತದೆ ಎಂದರು.

    ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಛೇರಿ ಅಭಿಯಂತರರಾದ ಅರುಣ್,ಕೆರೆ ಸಮಿತಿ ಅಧ್ಯಕ್ಷರಾದ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀನಿವಾಸ್, ವಲಯದ ಮೇಲ್ವಿಚಾರಕರಾದ ಸಂತೋಷ್, ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ , ಕೆರೆ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಸೇವಾಪ್ರತಿನಿಧಿ ಸಾಕಮ್ಮ ,ಗ್ರಾಮಸ್ಥರು ಉಪಸ್ಥಿತರಿದ್ದರು.

  • *ನಿಜವಾದ ಮಹಿಳಾ ಸಬಲೀಕರಣ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಮಾತ್ರ: ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌*

    ದೇವನಹಳ್ಳಿ, ಏಪ್ರಿಲ್‌ 18, ( ವಿಜಯಮಿತ್ರ) : ಪ್ರಧಾನಿ ನರೇಂದ್ರ ಮೋದಿಯವರು ನಿಜವಾದ ಮಹಿಳಾ ಸಬಲೀಕರಣ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಸರ್ಕಾರ ಕೇವಲ ಕೈಗೆ 2 ಸಾವಿರ ರೂಪಾಯಿ ನೀಡಿರುವುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

    ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರೆ 2 ಸಾವಿರ ರೂಪಾಯಿ ಎನ್ನುತ್ತಾರೆ. ಆದರೆ ಕೋವಿಡ್‌ ಅವಧಿಯಿಂದ ಆರಂಭವಾಗಿ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಂದಿನ ಐದು ವರ್ಷವೂ ಈ ಯೋಜನೆ ಮುಂದುವರಿಸುವುದಾಗಿ ಬಿಜೆಪಿ ತಿಳಿಸಿದೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮಹಿಳಾ ಮೀಸಲಾತಿ ತಂದಿದ್ದು, ಇದರಿಂದ ಮಹಿಳೆಯ ರಾಜಕೀಯ ಸಬಲೀಕರಣ ಸಾಧ್ಯವಾಗಲಿದೆ. ಮಹಿಳೆಯರು ಉದ್ಯಮಿಗಳಾಗಿ ಬೆಳೆಯಲು ಮುದ್ರಾ ಯೋಜನೆಯಡಿ *20 ಲಕ್ಷ ರೂ.* ಸಾಲ ನೀಡಲಾಗುತ್ತದೆ. ಇದು ನಿಜವಾದ ಸಬಲೀಕರಣವೇ ಹೊರತು ಕೈಗೆ ಹಣ ನೀಡುವುದಲ್ಲ ಎಂದರು.

     

    ಪ್ರಧಾನಿ ನರೇಂದ್ರ ಮೋದಿ ಜನ ಔಷಧಿ ಮಳಿಗೆಗಳನ್ನು ನೀಡಿದ್ದು, 40-50% ರಿಯಾಯಿತಿ ದರದಲ್ಲಿ ಔಷಧಿ ದೊರೆಯುತ್ತಿದೆ. ಇನ್ನು ಮುಂದೆ ಪ್ರಮುಖ ಔಷಧಿಗಳನ್ನು *90% ರಿಯಾಯಿತಿ ದರದಲ್ಲಿ* ನೀಡುವುದಾಗಿ ತಿಳಿಸಲಾಗಿದೆ. ಬಡವರಿಗೆ 3 ಕೋಟಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಈಗಾಗಲೇ 11 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ನೀಡಿದ್ದು, ಇದನ್ನೂ ಮುಂದುವರಿಸಲಾಗುವುದು. ಆದರೆ ಕಾಂಗ್ರೆಸ್‌ ಸಣ್ಣ ಆಸೆ ತೋರಿಸಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದೆ ಎಂದರು.

     

    ಕೋವಿಡ್‌ ಬಂದಾಗ ನಾನು ಆರೋಗ್ಯ ಸಚಿವನಾಗಿ ಜನರಿಗೆ ಲಸಿಕೆ ನೀಡಿದ್ದೆ. ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಳ ಮಾಡಿಸಿದ್ದೆ. ಆದರೆ ಈ ಸರ್ಕಾರ ಹಾಲಿನ ಪ್ರೋತ್ಸಾಹಧನ, ಕಿಸಾನ್‌ ಸಮ್ಮಾನ್‌, ಹಾಲು ಒಕ್ಕೂಟ ಎಲ್ಲವನ್ನೂ ಕಿತ್ತುಕೊಂಡಿದೆ. ವಿಧಾನಸೌಧದಲ್ಲಿ *ಪಾಕಿಸ್ತಾನಕ್ಕೆ ಜಿಂದಾಬಾದ್‌ ಘೋಷಣೆ* ಕೇಳಿಬರುತ್ತದೆ. ಇಂತಹವರು ಸರ್ಕಾರ ಮಾಡಬೇಕಾ ಎಂದು ಪ್ರಶ್ನಿಸಿದರು.

     

    ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿ ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಭಾರತ 5 ನೇ ಸ್ಥಾನಕ್ಕೆ ಬಂದಿದ್ದು, ಮುಂದಿನ ವರ್ಷಗಳಲ್ಲಿ ಜಪಾನ್‌ ಮೊದಲಾದ ದೇಶಗಳನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ಸಾಗಲಿದ್ದೇವೆ ಎಂದರು.

     

    ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ನೀರಾವರಿ ಹಾಗೂ ಜನಜೀವನಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತ ನೀಡಿ ಎಂದು ಮನವಿ ಮಾಡಿದರು.

     

    *ಭ್ರಷ್ಟಾಚಾರದಿಂದಲೇ ಸೋತಿದ್ದಾ?: ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್‌ ಪ್ರಶ್ನೆ*

     

    2018 ರಲ್ಲಿ ಮುಖ್ಯಮಂತ್ರಿ ಆಗಿದ್ದೂ 35,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರಲ್ಲ ಆಗ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಅಂತ ಜನ ನಿಮ್ಮನ್ನು ಸೋಲಿಸಿದ್ದರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾ.ಕೆ.ಸುಧಾಕರ್‌ ಪ್ರಶ್ನಿಸಿದ್ದಾರೆ.

     

    2019 ರಲ್ಲಿ ನಿಮ್ಮ ನಾಯಕ ರಾಹುಲ್‌ ಗಾಂಧಿ ಅವರು 55,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅಮೇಥಿಯಲ್ಲಿ ಸೋತಿದ್ದರು. ನಿಮ್ಮ ಪ್ರಕಾರ ರಾಹುಲ್ ಗಾಂಧಿ ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ, ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಿ. ಅದರಲ್ಲೇ ನಿಮ್ಮ ತನಿಖೆ *ಎಷ್ಟು ಪೂರ್ವಗ್ರಹ ಪೀಡಿತ,* ಎಷ್ಟು ನಿಷ್ಪಕ್ಷಪಾತ ಎಂದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

     

    ಎಲ್ಲಾ ಸರ್ವೆ ವರದಿಗಳು, ಸಮೀಕ್ಷೆಗಳು ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಗೆಲ್ಲುತ್ತದೆ, ನಾನು ಗೆಲ್ಲಲಿದ್ದೇನೆ ಎಂದು ಹೇಳುತ್ತಿರುವುದರಿಂದ ಹತಾಶೆಯಿಂದ ನನ್ನ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದೀರಿ. ಈ ಎಲ್ಲ ಅಪಪ್ರಚಾರಗಳು, ತೇಜೋವಧೆಯ ಪ್ರಯತ್ನಗಳು ಕಾಂಗ್ರೆಸ್ ಪಕ್ಷಕ್ಕೇ ತಿರುಗು ಬಾಣ ಆಗಲಿದೆ. 2013 ರಿಂದ 2018 ರವರೆಗೆ ನಿಮ್ಮ ಜೊತೆ ಕೆಲಸ ಮಾಡಿದ್ದೇನೆ. ನಾನು ಆಗ ನೋಡಿದ್ದ ಸಿದ್ದರಾಮಯ್ಯನವರಿಗೂ ಈಗ ನೋಡುತ್ತಿರುವ ಸಿದ್ದರಾಮಯ್ಯನವರಿಗೂ ಬಹಳ ವ್ಯತ್ಯಾಸವಿದೆ. ನಿಮ್ಮ ಸ್ಥಿತಿ ಬಗ್ಗೆ ಕನಿಕರವಿದೆ ಎಂದು ಅವರು ಹೇಳಿದ್ದಾರೆ.

    ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ತಮ್ಮ *ಒಕ್ಕಲಿಗ ದ್ವೇಷ ಗುಟ್ಟೇನೂ* ಅಲ್ಲ. ಅದು ಇಡೀ ರಾಜ್ಯಕ್ಕೆ ತಿಳಿದಿರುವ ವಿಷಯ. ನನ್ನ ಸೋಲು ಗೆಲುವು ಮತದಾರರು ನಿರ್ಧಾರ ಮಾಡುತ್ತಾರೆ. ನಿಮಗೆ ಒಳ್ಳೆಯದಾಗಲಿ ಎಂದು ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

  • *ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 18(ವಿಜಯಮಿತ್ರ ) : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಏಪ್ರೀಲ್ 26 ರಂದು ಮತದಾನ ನಡೆಸಲು ಹಾಗೂ ಜೂನ್ 4 ರಂದು ಮತ ಎಣಿಕೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ.

     

    ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಮತ್ತು ಮತದಾನ ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನಗಳು ಮತ್ತು ಮತ ಎಣಿಕೆಯ ದಿನದಂದು ಹಾಗೂ ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಏಪ್ರೀಲ್ 24 ರಂದು ಸಂಜೆ 5:00 ಗಂಟೆಯಿಂದ ಏಪ್ರೀಲ್ 26 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಹಾಗೂ ಜೂನ್ 03 ರ ಮಧ್ಯರಾತ್ರಿ 12.00 ಗಂಟೆಯಿಂದ ಜೂನ್ 04 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕೆ, ಶೇಖರಣೆ, ಇತ್ಯಾದಿಗಳನ್ನು ನಿಷೇಧಿಸಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ/ಬಿಯರ್/ವೈನ್ ತಯಾರಿಕಾ ಡಿಸ್ಟಿಲರಿ/ಬ್ರಿವರಿ/ವೈನರಿಗಳನ್ನು, ಸ್ಟಾರ್ ಹೋಟೆಲ್ಗಳನ್ನು ಮುಚ್ಚಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಆದೇಶಿಸಿದ್ದಾರೆ.

  • *ಏ.20ರಂದು ನಡೆಯುವ ತರಬೇತಿಗೆ ನಿಯೋಜಿತ ಮತಗಟ್ಟೆ ಅಧಿಕಾರಿಗಳು ಹಾಜರಾಗುವುದು ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 18(ವಿಜಯಮಿತ್ರ ): ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿ/ನೌಕರರಿಗೆ 2 ನೇ ಹಂತದ ತರಬೇತಿಯನ್ನು ಏಪ್ರಿಲ್ 20 ರಂದು ಹಮ್ಮಿಕೊಳ್ಳಲಾಗಿದ್ದು 04 ವಿಧಾನಸಭಾ ಕ್ಷೇತ್ರವಾರು ಆಯಾ ತಾಲೂಕು ಕೇಂದ್ರಗಳಲ್ಲಿ ನಿಯೋಜಿಸಲಾದ ಮತಗಟ್ಟೆ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳಿಂದ ಆಯಾ ನಿಯೋಜಿತ ತರಬೇತಿ ಸ್ಥಳಗಳಿಗೆ ಹಾಜರಾಗುವ ಸಲುವಾಗಿ ಜಿಲ್ಲೆಯ 04 ತಾಲೂಕು ಕೇಂದ್ರಗಳಿಂದ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳಿಗೆ ತೆರಳಲು ಏಪ್ರಿಲ್ 20 ರಂದು ಬೆಳಿಗ್ಗೆ 07:00 ರಿಂದ 07:30 ಗಂಟೆಗೆ ತಾಲೂಕು ಕೇಂದ್ರಗಳಿಂದ ಬಸ್ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ.

     

     

    ಹೊಸಕೋಟೆ ತಾಲೂಕು ಕೇಂದ್ರದಿಂದ 7 ಬಸ್ಸುಗಳು, ದೇವನಹಳ್ಳಿ ತಾಲೂಕು ಕೇಂದ್ರದಿಂದ 12 ಬಸ್ಸುಗಳು, ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 12 ಬಸ್ಸುಗಳು, ನೆಲಮಂಗಲ ತಾಲೂಕು ಕೇಂದ್ರದಿಂದ 11 ಬಸ್ಸುಗಳು ಸೇರಿ ಒಟ್ಟು 42 ಬಸ್ಸುಗಳು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬೇರೆ ತಾಲೂಕುಗಳಿಗೆ ಪ್ರಯಾಣಿಸಲಿರುವ ಮತಗಟ್ಟೆ ಸಿಬ್ಬಂದಿಗಳು ಏಪ್ರಿಲ್ 20 ರಂದು ಬೆಳಿಗ್ಗೆ 6:30 ರಿಂದ 7:30 ಗಂಟೆಯ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ ಟೌನ್, ದೇವನಹಳ್ಳಿ ತಾಲೂಕು ಕೇಂದ್ರದಿಂದ ತಾಲೂಕು ಕಛೇರಿ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಮಾದಗೊಂಡನಹಳ್ಳಿ ಮುಖ್ಯ ರಸ್ತೆ ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ ಟೌನ್ ಈ ಸ್ಥಳಗಳಲ್ಲಿ ಹಾಜರಿದ್ದು, ತಮಗೆ ನಿಯೋಜಿಸಲಾದ ತಾಲೂಕು ಕೇಂದ್ರಗಳಿಗೆ ಪ್ರಯಾಣಿಸಲ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಚುನಾವಣಾ ಅಧಿಕಾರಿಗಳು/ಸಿಬ್ಬಂದಿಗಳು ತರಬೇತಿಗೆ ಕಡ್ಡಾಯವಾಗಿ ಹಾಜರಿರಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ದೊಡ್ಡಬಳ್ಳಾಪುರದಲ್ಲಿ ವಿವಿಧ ಕಾಮಗಾರಿ ಹಾಗೂ ಯೋಜನೆಗಳ ಪರಿಶೀಲನೆ ನಡೆಸಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 18 (ವಿಜಯಮಿತ್ರ ): ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯೋಜನೆಗಳನ್ನು ಪರಿಶೀಲನೆ ನಡೆಸಿದರು.

    ಎಸ್.ಎಸ್ ಘಾಟಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಅಮೃತ ಸರೋವರದ ಕೆರೆ ವೀಕ್ಷಿಸಿದರು. ನಂತರ ತೂಬಗೆರೆ ಗ್ರಾಮ ಪಂಚಾಯಿತಿಯಲ್ಲಿ ಕಾವನಹಳ್ಳಿ ವೆನ್ಸಾಯಿ ಪ್ಲೋರಿಟೆಕ್ (ಶ್ರೀಕಾಂತ್ ಫಾರಂ) ಭೇಟಿನೀಡಿ Cold room stagging, Refer van

    ಪಾಲಿಮನೆಯಲ್ಲಿ ಪುಷ್ಪ ಬೆಳೆಗಳು (Rose, Gerbera, Gypsophila, Hydrangia, Limonium Snapdragon etc) ವೀಕ್ಷಿಸಿದರು.

    ಎನ್.ಎಸ್.ಆರ್ ಫಾರಂ ಕೃಷ್ಣರಾವ್ ರವರ ಪಾಲಿಮನೆಯಲ್ಲಿ Orchid ಬೇಸಾಯ (Dendrobium)ದ ಬಗ್ಗೆ ರೈತರ ಜೊತೆ ಸಮಾಲೋಚನೆ ನಡೆಸಿದರು.

    ದೊಡ್ಡಬಳ್ಳಾಪುರದಲ್ಲಿ ನೇಕಾರರ ಸಂಘದ ನೇಕಾರರ ಚೈತನ್ಯ WPO weavers producer Organisation ಸಂಸ್ಥೆಯಲ್ಲಿ ತಯಾರಿಸಿದ ಸೀರೆಗಳು ವೀಕ್ಷಿಸಿ, ನೇಕಾರ ಸಂಘದ ಅಧ್ಯಕ್ಷರ ಮತ್ತು ಸದಸ್ಯರು ಜೊತೆಗೆ ಸಮಾಲೋಚಿಸಿದರು.

     

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ‌.ಎನ್ ಅನುರಾಧ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಯೋಜನಾ ನಿರ್ದೇಶಕರಾದ ವಿಠ್ಠಲ ಕಾವಳೆ, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು‌ ಉಪಸ್ಥಿತರಿದ್ದರು.

  • *ಮಹಿಳೆ ಕುರಿತು ಅವಹೇಳನಕಾರಿ ಮತ್ತು ವೈಯಕ್ತಿಕ ನಿಂದನೆ ಸಲ್ಲದು – ಪ್ರಮೀಳಾ ಮಹದೇವ್*

    ದೊಡ್ಡಬಳ್ಳಾಪುರ ಏಪ್ರಿಲ್ 18 ( ವಿಜಯಮಿತ್ರ ) : ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮಹಿಳಾ ಅಭ್ಯರ್ಥಿ ಹಾಗೂ ಮಹಿಳಾ ಮತದಾರರನ್ನು ಕುರಿತು ವೈಯಕ್ತಿಕ ನಿಂದನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪ್ರಮೀಳಾ ಮಹದೇವ್ ತಿಳಿಸಿದರು.

     

    ಏಪ್ರಿಲ್ 17 ರಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು ಈ ಕುರಿತು ಮಾತನಾಡಿ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮಹಿಳೆಯರ ಬಗ್ಗೆ ಚುನಾವಣಾ ಪ್ರಚಾರಗಳಲ್ಲಿ ಅವಹೇಳನಕಾರಿಯಾಗಿ, ವೈಯಕ್ತಿಕ ನಿಂದನೆ, ಜಾತಿನಿಂದನೆ ಹಾಗೂ ತೀರಾ ಮುಜುಗರ ಉಂಟುಮಾಡುವ ಮಾತುಗಳು ಕಂಡು ಬಂದಲ್ಲಿ ಚುನಾವಣಾ ಆಯೋಗವು “ಸ್ವಯಂ ಪ್ರೇರಿತ ದೂರು ದಾಖಲಿಸಿ ಸೂಕ್ತ ಕಾನಾನುಕ್ರಮ ಜರುಗಿಸಿ, ಮಹಿಳೆಯರ ಆತ್ಮಸ್ಥೈರ್ಯ ಮತ್ತು ಗೌರವ ಕಾಪಾಡುವಂತೆ ಒತ್ತಾಯಿಸಿದ್ದಾರೆ.