Blog

  • *ಪತ್ರಕರ್ತರ ಪ್ರತಿಭಟನೆ : ಕಾಂಗ್ರೆಸ್ ಸುದ್ದಿಗೋಷ್ಠಿ ಬಹಿಷ್ಕಾರ ಮಾಡಿದ ಪತ್ರಕರ್ತರು*

    ದೊಡ್ಡಬಳ್ಳಾಪುರ ಏಪ್ರಿಲ್ 18 ( ವಿಜಯಮಿತ್ರ ) : ಸ್ಥಳೀಯ ಪತ್ರಕರ್ತರ ಕುರಿತು ಅಗೌರವ ತೋರಿದ ಹಿನ್ನಲೆ ತಾಲ್ಲೂಕಿನ ಪತ್ರಕರ್ತರು ಇದು ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಕಾಂಗ್ರೆಸ್ ಪತ್ರಿಕಾಗೋಷ್ಠಿಯನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡಿದರು.

    ಈ ಹಿಂದೆ ಏಪ್ರಿಲ್ 16 ರಂದು ನೆಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಪತ್ರಕರ್ತರನ್ನು ಕುರಿತು ಕೆಪಿಸಿಸಿ ವಕ್ತರರಾದ ಜಿ.ಲಕ್ಷ್ಮಿಪತಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದು. ಸೂಕ್ತ ಪ್ರತಿಕ್ರಿಯೆ ನೀಡದೆ ಪತ್ರಕರ್ತರಿಗೆ ಅಗೌರವ ತೋರಿರುತ್ತಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏಪ್ರಿಲ್ 18 ರಂದು ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯನ್ನು ತಾಲ್ಲೂಕಿನ ಸರ್ವಪತ್ರಕರ್ತರು ಸಾಮೂಹಿಕವಾಗಿ ಬಹಿಷ್ಕರಿಸಿ ಹೊರನೆಡೆದರು.

     

    ಇನ್ನೂ ಮುಂದೆ ನೆಡೆಯುವ ಕಾಂಗ್ರೆಸ್ ಪಕ್ಷದ ಎಲ್ಲಾ ಸುದ್ದಿಗೋಷ್ಠಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

     

    ಇನ್ನಾದರೂ ರಾಜಕೀಯ ನಾಯಕರಿಗೆ, ಮುಖಂಡರಿಗೆ ಪತ್ರಕರ್ತರ ನಡುವೆ ತಾರತಮ್ಯ ಮಾಡುವ ಮನಸ್ಥಿತಿ ಸರಿಹೋಗಲಿ ಎಂಬುದೇ ನಮ್ಮೆಲ್ಲರ ಆಶಯ.

  • *ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ: ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌*

    ಚಿಕ್ಕಬಳ್ಳಾಪುರ, ಏಪ್ರಿಲ್‌ 17 ( ವಿಜಯಮಿತ್ರ ) : ಪ್ರಭು ಶ್ರೀ ರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಇದಕ್ಕೆ ಪೂರಕವಾಗಿ ರಾಮರಾಜ್ಯ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತದ ಸಂಕಲ್ಪವೇ ಈ ಪ್ರಯತ್ನದ ಹೆಜ್ಜೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

     

    ಮರ್ಯಾದಾ ಪುರುಷೋತ್ತಮ, ಆದರ್ಶ ಪ್ರಜಾಪಾಲಕ ಪ್ರಭು ಶ್ರೀರಾಮಚಂದ್ರನು ಅವತರಿಸಿದ ಪವಿತ್ರ ದಿನವೇ ಶ್ರೀರಾಮ ನವಮಿ. 500 ವರ್ಷಗಳ ವನವಾಸದ ನಂತರ ಪ್ರಭು ಶ್ರೀರಾಮಚಂದ್ರ ಈಗ ತನ್ನ ಜನ್ಮಭೂಮಿ ಅಯೋಧ್ಯೆಯಲ್ಲಿ, ತನ್ನ ಭವ್ಯ ಮಂದಿರದಲ್ಲಿ ನೆಲೆಸಿದ್ದಾನೆ. ಈ ವರ್ಷದ ಶ್ರೀ ರಾಮ ನವಮಿ ಎಲ್ಲ ಭಾರತೀಯರಿಗೂ ಅತ್ಯಂತ ವಿಶೇಷ ದಿನ ಎಂದರು.

     

    ಧರ್ಮ ವಿರೋಧಿಗಳ ಕುತಂತ್ರದಿಂದ ಪ್ರಭು ಶ್ರೀರಾಮ 500 ವರ್ಷಗಳ ಕಾಲ ಒಂದು ಸಣ್ಣ ಟೆಂಟ್‌ನಲ್ಲಿ ವನವಾಸ ಅನುಭವಿಸಬೇಕಾಯಿತು ಆದರೆ ಪ್ರಧಾನಿ *ನರೇಂದ್ರ ಮೋದಿ ಅವರ ಪ್ರಯತ್ನದಿಂದ* ಶ್ರೀರಾಮನ ವನವಾಸಕ್ಕೆ ಮುಕ್ತಿ ಸಿಕ್ಕಿದೆ. ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿರುವುದು ಐನೂರು ವರ್ಷಗಳ ಹೋರಾಟದ ಫಲ. ಬಹುಶಃ ಇಡೀ ಜಗತ್ತಿನ ಇತಿಹಾಸದಲ್ಲಿ ಒಂದು ಧಾರ್ಮಿಕ ಕ್ಷೇತ್ರಕ್ಕೆ ಈ ಮಟ್ಟದ ನಿರಂತರ ವಿರೋಧ, ಹೋರಾಟ, ತ್ಯಾಗ, ಬಲಿದಾನ ಎಲ್ಲಿಯೂ ನಡೆದಿಲ್ಲ ಎಂದರು.

     

    ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಕೋಟ್ಯಂತರ ಬಡವರನ್ನು *ಬಡತನದಿಂದ ಮೇಲೆಕ್ಕೆತ್ತಿದ್ದಾರೆ.* ಜೊತೆಗೆ ಹಿಂದೂ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಮೋದಿ ಅವರದು ಪರಂಪರೆಯ ತಳಹದಿಯಲ್ಲಿ ನವ ಭಾರತ ಕಟ್ಟುವ ಪ್ರಯತ್ನ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಅಂದರೆ ಕೇವಲ ನಗರೀಕರಣ ಅಥವಾ ಕೈಗಾರೀಕರಣ ಆಗಿರಬಹುದು. ಭಾರತದಲ್ಲಿ ಹಾಗಲ್ಲ ಸನಾತನ ಧರ್ಮವೇ ದೇಶದ ಆತ್ಮ. ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತದ ಆತ್ಮ ತನ್ನ ಧರ್ಮದಲ್ಲಿ ಅಡಗಿದೆ. ಇಲ್ಲಿ ಎಷ್ಟೇ ಅಭಿವೃದ್ಧಿ, ಆಧುನಿಕತೆ ಬಂದರೂ ಹಿಂದೂ ಧರ್ಮ, *ಸನಾತನ ಸಂಸ್ಕೃತಿ, ಪರಂಪರೆಯ ಮುಂದುವರಿಕೆ ಇಲ್ಲದೆ* ಅಭಿವೃದ್ಧಿ ಅರ್ಥ ಕಳೆದುಕೊಳ್ಳುತ್ತದೆ ಎಂದರು.

     

    ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆದಿದ್ದಾರೆ. ಇದು *ರಾಮರಾಜ್ಯದ ಪರಿಕಲ್ಪನೆ* ಸಾಕಾರಗೊಳಿಸುವ ಹೆಜ್ಜೆ. ಶ್ರೀರಾಮನ ಆಡಳಿತದ ಆದರ್ಶಗಳನ್ನೇ ಪ್ರಧಾನಿ ಮೋದಿ ತಮ್ಮ ಆಡಳಿತದ ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಭಾರತ ಅಚ್ಚರಿ ಎನಿಸುವ ಮಟ್ಟಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಧರ್ಮರಕ್ಷಕ, ಸಕಲ ಸದ್ಗುಣ ಸಂಪನ್ನನಾದ ಪ್ರಭು ಶ್ರೀರಾಮಚಂದ್ರನ ಜೀವನವೇ ನಮಗೂ ರಾಮ ಮಾರ್ಗ ಎಂದು ಹೇಳಿದರು.

     

    *ರೋಡ್‌ ಶೋ*

     

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ಮತ ಯಾಚಿಸಲು ರೋಡ್‌ ಶೋ ನಡೆಸಿದರು. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದಿಂದ ಆರಂಭವಾಗಿ ಸೌಂದರ್ಯ ಮಹಲ್‌ವರೆಗೆ ನಡೆದ ರೋಡ್‌ ಶೋನಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಅಪಾರ ಬೆಂಬಲ ತೋರಿದರು. ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವ ಹಾಗೂ ಕ್ಷೇತ್ರದಲ್ಲಿ ಕಮಲ ಅರಳಿಸುವ ಘೋಷಣೆ ಕೇಳಿಬಂತು.

    ಅಭ್ಯರ್ಥಿ ಡಾ.ಕೆ.ಸುಧಾಕರ್‌ ಜೊತೆ ಶಾಸಕ ಧೀರಜ್‌ ಮುನಿರಾಜು ಹಾಜರಿದ್ದರು.

     

    *ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯ ಭೇಟಿ*

     

    ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠಕ್ಕೆ ಅಭ್ಯರ್ಥಿ ಡಾ.ಕೆ.ಸುಧಾಕರ್‌‌ ಭೇಟಿ ನೀಡಿದರು. ವಹ್ನಿಕುಲ ಕ್ಷತ್ರಿಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

     

    ನಂತರ ಮಾತನಾಡಿದ ಡಾ.ಕೆ.ಸುಧಾಕರ್‌, ಬೆಂಗಳೂರಿನ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವವನ್ನು ಪ್ರತಿ ವರ್ಷ *ತಿಗಳ ಸಮುದಾಯದವರು* ವಿಜೃಂಭಣೆಯಿಂದ ನಡೆಸುತ್ತಾರೆ. ಸುಪ್ರಸಿದ್ಧ ಲಾಲ್‌ಬಾಗ್ ಉದ್ಯಾನವನದ ನಿರ್ಮಾಣಕ್ಕೂ ತಿಗಳರ ಕೊಡುಗೆ ದೊಡ್ಡದಿದೆ. ಬೆಂಗಳೂರು ನಗರದ ಇತಿಹಾಸ ಹಾಗೂ ಪರಂಪರೆಗೆ ತಿಗಳ ಸಮುದಾಯ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಪವಿತ್ರವಾದ ಚೈತ್ರ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಜಗನ್ಮಾತೆ ಆದಿಶಕ್ತಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದು ನನ್ನಲ್ಲಿ ಹೊಸ ಶಕ್ತಿ, ಚೈತನ್ಯ ತುಂಬಿದೆ ಎಂದು ಹೇಳಿದರು.

     

    ನಂತರ ದೇವನಹಳ್ಳಿ ತಾಲ್ಲೂಕಿನ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ *ಆದಿಪರಾಶಕ್ತಿ ಮಹಾಸಂಸ್ಥಾನ ಪೀಠಕ್ಕೆ* ಭೇಟಿ ನೀಡಿ, ಪೀಠಾಧಿಪತಿ ಹಾಗೂ ವಹ್ನಿಕುಲ ಕ್ಷತ್ರಿಯ ಜನಾಂಗದ ಗುರು ಸದ್ಗುರು ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಶ್ರೀಗಳ ಆಶೀರ್ವಾದ ಪಡೆದರು.

  • *ಕನ್ನಡ ಸಾಹಿತ್ಯಕ್ಕೆ ಮತ್ತು ಸಾಹಿತಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಪ್ರಭಾವ ಅಪಾರವಾಗಿದೆ – ಪಿ.ಗೋವಿಂದರಾಜು*

    ದೊಡ್ಡಬಳ್ಳಾಪುರ ( ವಿಜಯಮಿತ್ರ ) : ಮಹಾನಾಯಕ ನಮ್ಮ ದೇಶದ ಮಾರ್ಗದರ್ಶಕ

    ನಮ್ಮ ಭಾರತ ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಮುಖರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಬರಹಗಳೇ ಭಾರತೀಯರಿಗೆ ಮಾರ್ಗದರ್ಶನವಾಗಿವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.

     

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜಕುಮಾರ್ ಕಲಾಮಂದಿರ ಆವರಣದಲ್ಲಿ‌ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಮತ್ತು ಸಾಹಿತಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಪ್ರಭಾವ ಅಪಾರವಾಗಿದೆ. ಅಂಬೇಡ್ಕರ್ ಚಿಂತನೆಗಳ ಪ್ರಭಾವ ಕನ್ನಡದ ದಲಿತ, ಬಂಡಾಯ, ಪ್ರಗತಿಪರ ಸಾಹಿತಿಗಳ ಮೇಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜಗತ್ತಿನ ಹಲವಾರು ದೇಶಗಳು ಪ್ರಶಂಸೆ ಮಾಡಿವೆ ಎಂದರು.

     

     

    ಕನ್ನಡ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷ. ಅಗ್ನಿವೆಂಕಟೇಶ ಮಾತನಾಡಿ, ನಮ್ಮ ದೇಶದ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರು ನಮಗೆ ಸಮಾನತೆಯ ಹಾದಿಯನ್ನು ತೋರಿಸಿದರು. ಜನಪರ ಹೋರಾಟಗಾರರಿಗೆ ಅಂಬೇಡ್ಕರ್ ಸದಾ ಸ್ಫೂರ್ತಿ. ಶೋಷಣೆ ಮುಕ್ತವಾದ ಸಮಾಜ ನಿಮಾರ್ಣವಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಮಹತ್ವವನ್ನು ತಿಳಿಸಿದರು ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ ಎಂದರು.

     

     

    ಕವಯಿತ್ರಿ ಆಶಾಗುಡ್ಡದಹಳ್ಳಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ವೈಯಕ್ತಿಕ ಜೀವನಕ್ಕಿಂತ. ದೇಶದ ಒಳಿತಿಗಾಗಿ ಬದುಕಿದ್ದವರು. ತಮ್ಮ ಅಪಾರ ಓದು ಮತ್ತು ಜ್ಞಾನಾರ್ಜನೆಯಿಂದಾಗಿ ಜಗತ್ತೇ ಮೆಚ್ಚುವಂತಹ ಸಂವಿಧಾನ ರಚಿಸಲು ಸಹಕಾರಿ ಆಯಿತು. ಶೋಷಿತ ಸಮುದಾಯಗಳಿಗೆ ಸಮಾನತೆಯ ಹಕ್ಕು ದೊರೆಯಲು ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮ‌ ಅಪಾರವಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ. ವೆಂಕಟರಾಜು, ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಸಾ.ಲ.ಕಮಲನಾಥ್ , ಕಸಬಾ ಹೋಬಳಿ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ದೊಡ್ಡಬೆಳವಂಗಲ ಹೋಬಳಿ ಘಟದ ಗೌರವ ಕಾರ್ಯದರ್ಶಿ ಮತ್ತು ಮುಖ್ಯಶಿಕ್ಷಕ ಅಂಜನಮೂರ್ತಿ, ಕನ್ನಡ ಜಾಗೃತ ವೇದಿಕೆ ತಾಲ್ಲೂಕು ಅಧ್ಯಕ್ಷ ನಾಗರಾಜು, ದಲಿತ ವಿಮೋಚನಾ ಸೇನೆ ನಗರ ಅಧ್ಯಕ್ಷ ಮಧು, ಪ್ರಗತಿಪರ ಸಂಘಟನೆಯ ಅಬ್ದುಲ್ ಸುಹಾನ್ ಸಾಬ್, ಆರಿಫ್, ದರ್ಗಾಜೋಗಿಹಳ್ಳಿ ಮಲ್ಲೇಶ್ , ದಲಿತ ವಿಮೋಚನಾ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು. ‌

  • *ದ್ವಾರಕೀಶ್‌ ಅವರ ಸಾಧನೆಗೆ  ವಿಶ್ವವಿದ್ಯಾಲಯದಿಂದ  ಗೌರವ ಡಾಕ್ಟರೇಟ್  ದೊರೆಯಬೇಕಿದೆ –   ವಿ.ಎಸ್.ಹೆಗಡೆ*

    ದೊಡ್ಡಬಳ್ಳಾಪುರ ಏಪ್ರಿಲ್ 17 ( ವಿಜಯಮಿತ್ರ ) : ಕನ್ನಡ ಚಲನಚಿತ್ರ ರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ವಿತರಕ  ಹೀಗೆ  ಬಹುಮುಖ ಪ್ರತಿಭೆಯೊಂದಿಗೆ ಚಿತ್ರ  ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್‌   ಅವರ ಸಾಧನೆಗೆ  ವಿಶ್ವವಿದ್ಯಾಲಯದಿಂದ  ಗೌರವ ಡಾಕ್ಟರೇಟ್  ದೊರೆಯಬೇಕಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ  ನಿವೃತ್ತ ಅಧ್ಯಾಪಕ   ವಿ.ಎಸ್.ಹೆಗಡೆ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ  ಪರಿಷತ್ತು ಮತ್ತು  ಕನ್ನಡ ಜಾಗೃತ  ಪರಿಷತ್ತು   ಸಹಯೋಗದಲ್ಲಿ  ಕನ್ನಡ ಜಾಗೃತ ಭವನದಲ್ಲಿ  ನಡೆದ  ಕನ್ನಡದ ಹಿರಿಯ  ನಟ, ನಿರ್ದೇಶಕ ಮತ್ತು  ನಿರ್ಮಾಪಕ   ದ್ವಾರಕೀಶ್  ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

     

    ಚಲನಚಿತ್ರಗಳಲ್ಲಿ ನಾಯಕ ನಟ ದೊರೆಯುವ ಪ್ರಾಮುಖ್ಯತೆ ಹಾಸ್ಯನಟನಿಗೂ ದೊರೆಯುವಂತೆ ಆದದ್ದು  ದ್ವಾರಕೀಶ್ ಮೊದಲಾದ ಹಾಸ್ಯ ನಟರಿಂದ.  ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದವರಲ್ಲಿ ದ್ವಾರಕೀಶ್  ಪ್ರಮುಖರಾಗಿದ್ದಾರೆ ಎಂದರು.

    ಕನ್ನಡಪರ ಹಿರಿಯ ಹೋರಾಟಗಾರ  ತ.ನ.ಪ್ರಭುದೇವ್ ಮಾತನಾಡಿ,  ಕನ್ನಡ ಚಿತ್ರರಂಗದಲ್ಲಿ ಸಾಹಸ ಪ್ರವೃತ್ತಿಯುಳ್ಳವರು ದ್ವಾರಕೀಶ್.  ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದವರು. ವಿದೇಶಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ‌ ಕನ್ನಡ ಚಿತ್ರರಂಗದ ವ್ಯಾಪ್ತಿಯನ್ನು ವಿಸ್ತರಿಸಿದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ದ್ವಾರಕೀಶ್ ತಮ್ಮ ಸ್ವಂತ  ಜೀವನದಲ್ಲಿ ಸಾಕಷ್ಟು ನೋವು ನಲಿವು ಕಂಡವರು ಎಂದರು.

    ಕನ್ನಡ ಪಕ್ಷದ ಮುಖಂಡ ಸಂಜೀವವಾಯಕ್ ಮಾತನಾಡಿ, ಉತ್ತಮ ಚಲನಚಿತ್ರಗಳಲ್ಲಿ ನಟನೆ ಮತ್ತು ಸದಾಭಿರುಚಿ ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ ಮಾಡಿರುವ ದ್ವಾರಕೀಶ್ ಕನ್ನಡ ಮನಸ್ಸುಗಳನ್ನು ಗೆದ್ದಿದ್ದಾರೆ. ಕನ್ನಡ ನಾಡು ನುಡಿ ವಿಚಾರದ ಕಾಳಜಿ ಹೊಂದಿದ್ದ ಅವರು ಕನ್ನಡ ನಾಡು ಪಕ್ಷದಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ಚಿತ್ರರಂಗದಲ್ಲಿ ಕನ್ನಡಿಗರು ಸಾಧನೆ ಮಾಡಬಲ್ಲರು ಎಂಬುದನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿಕೊಟ್ಟರು  ಎಂದರು.

    ದ್ವಾರಕೀಶ್ ನುಡಿನಮನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಪಿ.ಗೋವಿಂದರಾಜು, ಕೋಶಾಧ್ಯಕ್ಷ. ಸಾ.ಲ.ಕಮಲನಾಥ್,  ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್,  ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜು ಶಿರವಾರ,  ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ,  ಕನ್ನಡ ಪಕ್ಷದ ಅಧ್ಯಕ್ಷ ಡಿ.ವೆಂಕಟೇಶ್,  ಕಾರ್ಯದರ್ಶಿ ಮುನಿಪಾಪಣ್ಣ,  ಸ್ಕೌಟ್ ಮತ್ತು ಗೈಡ್  ಜಿಲ್ಲಾ ಸಹಾಯಕ ಆಯುಕ್ತರ ವೆಂಕಟರಾಜು,  ಕನ್ನಡ ಸಂಘಟನೆಯ ಪದಾಧಿಕಾರಿಗಳಾದ ಸೂರ್ಯನಾರಾಯಣ್ ( ಸೂರಿ),   ದರ್ಗಾಜೋಗಿಹಳ್ಳಿಮಲ್ಲೇಶ್, ಜನಪರ ಚಂದ್ರು   ಮೊದಲಾದವರು ಭಾಗವಹಿಸಿದ್ದರು.

  • *ಚುನಾವಣಾ ಸಿಬ್ಬಂದಿಗೆ ಚುನಾವಣಾ ತರಬೇತಿ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 17(ವಿಜಯ ಮಿತ್ರ ): ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿ/ನೌಕರರಿಗೆ 2 ನೇ ಹಂತದ ತರಬೇತಿಯನ್ನು ಏಪ್ರಿಲ್ 20 ರಂದು ಹಮ್ಮಿಕೊಳ್ಳಲಾಗಿದ್ದು 04 ವಿಧಾನಸಭಾ ಕ್ಷೇತ್ರವಾರು ಆಯಾ ತಾಲೂಕು ಕೇಂದ್ರಗಳಲ್ಲಿ ನಿಯೋಜಿಸಲಾದ ಮತಗಟ್ಟೆ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳಿಂದ ಆಯಾ ನಿಯೋಜಿತ ತರಬೇತಿ ಸ್ಥಳಗಳಿಗೆ ಹಾಜರಾಗುವ ಸಲುವಾಗಿ ಜಿಲ್ಲೆಯ 04 ತಾಲೂಕು ಕೇಂದ್ರಗಳಿಂದ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 20 ರಂದು ಬೆಳಿಗ್ಗೆ 07:00 ರಿಂದ 07:30 ಗಂಟೆ ಒಳಗಾಗಿ ಎಲ್ಲಾ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳು ತಮಗೆ ಈಗಾಗಲೇ ನಿಯೋಜಿಸಿದ ಸ್ಥಳಕ್ಕೆ ತೆರಳುವ ಸಲುವಾಗಿ ಸಂಬಂಧಪಟ್ಟ ತಾಲೂಕು ಕೇಂದ್ರಗಳಿಂದ ಬಸ್ಸುಗಳ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ.

     

    ಹೊಸಕೋಟೆ ತಾಲೂಕು ಕೇಂದ್ರದಿಂದ 7 ಬಸ್ಸುಗಳು, ದೇವನಹಳ್ಳಿ ತಾಲೂಕು ಕೇಂದ್ರದಿಂದ 12 ಬಸ್ಸುಗಳು, ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 12 ಬಸ್ಸುಗಳು, ನೆಲಮಂಗಲ ತಾಲೂಕು ಕೇಂದ್ರದಿಂದ 11 ಬಸ್ಸುಗಳು ಸೇರಿ ಒಟ್ಟು 42 ಬಸ್ಸುಗಳು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬೇರೆ ತಾಲೂಕುಗಳಿಗೆ ಪ್ರಯಾಣಿಸಲಿರುವ ಮತಗಟ್ಟೆ ಸಿಬ್ಬಂದಿಗಳು ಏಪ್ರಿಲ್ 20 ರಂದು ಬೆಳಿಗ್ಗೆ 6:30 ರಿಂದ 7:30 ಗಂಟೆಯ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ ಟೌನ್, ದೇವನಹಳ್ಳಿ ತಾಲೂಕು ಕೇಂದ್ರದಿಂದ ತಾಲೂಕು ಕಛೇರಿ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಮಾದಗೊಂಡನಹಳ್ಳಿ ಮುಖ್ಯ ರಸ್ತೆ ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ ಟೌನ್ ಈ ಸ್ಥಳಗಳಲ್ಲಿ ಹಾಜರಿದ್ದು, ತಮಗೆ ನಿಯೋಜಿಸಲಾದ ತಾಲೂಕು ಕೇಂದ್ರಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಏ.19 ರಿಂದ 21 ವರೆಗೆ ಗೈರು ಹಾಜರಿ ಮತದಾರರಿಗೆ ಅಂಚೆ ಮತದಾನ:ಅಪರ ಜಿಲ್ಲಾಧಿಕಾರಿ ಸಂಗಪ್ಪ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 17(ವಿಜಯಮಿತ್ರ ):- ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಗತ್ಯ ಸೇವೆಯಲ್ಲಿರುವ ಗೈರು ಹಾಜರಿ ಮತದಾರರಿಗೆ ಅಂಚೆ ಮತದಾನ ಮಾಡಲು ಏಪ್ರಿಲ್ 19 ರಿಂದ 21 ವರೆಗೆ ಅವಕಾಶ ಕಲ್ಪಿಸಲಾಗಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ದೇವನಹಳ್ಳಿ ತಾಲ್ಲೂಕಿನ ತಾಲ್ಲೂಕು ಕಚೇರಿ, ಮಿನಿ ವಿಧಾನಸೌಧವನ್ನು ಅಂಚೆ ಮತದಾನ ಕೇಂದ್ರವನ್ನಾಗಿ ಗುರುತಿಸಲಾಗಿದ್ದು ಇಲ್ಲಿ ಅಂಚೆ ಮತದಾನ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಅಂಚೆ ಮತದಾನ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 327 ಗೈರುಹಾಜರಿ ಮತದಾರರಿದ್ದು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 49 ಮತದಾರರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 68 ಮತದಾರರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 109 ಮತದಾರರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 101 ಗೈರುಹಾಜರಿ ಮತದಾರರು ಇದ್ದಾರೆ.ಮತದಾನದ ದಿನದಂದು ಕರ್ತವ್ಯ ನಿರ್ವಹಿಸುವ ನೌಕರರನ್ನು ಗೈರು ಹಾಜರಿ ಮತದಾರರು ಎಂದು ಚುನಾವಣಾ ಆಯೋಗ ಪರಿಗಣಿಸಿ ಅವರಿಗೆ ಮುಂಚಿತವಾಗಿ ಮತದಾನ ಮಾಡಲು ಚುನಾವಣೆ ಆಯೋಗ ಅವಕಾಶ ಕಲ್ಪಿಸಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೈರುಹಾಜರಿ ಮತದಾರರು ಏಪ್ರಿಲ್ 19(ಶುಕ್ರವಾರ),20(ಶನಿವಾರ),21(ಭಾನುವಾರ) ರಂದು ಅಂಚೆ ಮತದಾನ ನಡೆಯಲಿದ್ದು ದೇವನಹಳ್ಳಿ ತಾಲ್ಲೂಕಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯ ಸಮಯದಲ್ಲಿ ಬಂದು ಮತದಾನ ಮಾಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.

  • *ಮೊಬೈಲ್ ಕಳ್ಳರ ಬಂಧನ : ಸುಮಾರು 4.20 ಲಕ್ಷ ಮೌಲ್ಯದ ಮೊಬೈಲ್ ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಪೊಲೀಸ್*

    ದೊಡ್ಡಬಳ್ಳಾಪುರ ಏಪ್ರಿಲ್ 17 ( ವಿಜಯ ಮಿತ್ರ ) : ಆರೋಪಿಗಳಾದ ಆಕಾಶ್, ಪ್ರವೀಣ್, ಹನುಮಂತರನ್ನು ದಸ್ತಗಿರಿ ಮಾಡಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಒಳಪಡಿಸಿ ಅವರ ಕಡೆಯಿಂದ 4.20.000/- ರೂ ಬೆಲೆ ಬಾಳುವ ವಿವಿಧ ಕಂಪನಿಯ 20 ಅಂಡ್ರೈಡ್ ಮೋಬೈಲ್ ಫೋನ್ ಗಳನ್ನು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸ್ ವಶಪಡಿಸಿಕೊಂಡಿದ್ದೇವೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಸಾದೀಕ್ ಪಾಷ ತಿಳಿಸಿದರು

     

     

    ಈ ಕುರಿತು ಮಾಹಿತಿ ನೀಡಿದ ಅವರು ದಿನಾಂಕ ಏಪ್ರಿಲ್ 14ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಆಲೂರು-ದುದ್ದನಹಳ್ಳಿ ಗ್ರಾಮದ ನಿವಾಸಿ ಅಮರ್ ಹಾಗೂ ಅವರ ಸ್ನೇಹಿತ ಕೋಡಿಹಳ್ಳಿ ನಿವಾಸಿ ಅನೀಲ್ ಕುಮಾರ್ ರವರು ತಮ್ಮ ದ್ವಿಚಕ್ರ ವಾಹನದಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕೋಳಿಫಾರಂ ಬಳಿ 3 ಜನ ಅಪರಿಚಿತರು ಅಮರ್ ಹಾಗೂ ಅನಿಲ್ ಕುಮಾರ ರವರು ಬರುತ್ತಿದ್ದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಮ್ಮ ಬಳಿ ಇದ್ದ ಮಾರಕಾಸ್ತ್ರ( ಲಾಂಗ್ ) ವನ್ನು ತೋರಿಸಿ ಹೆದರಿಸಿದ್ದು ಅಮರ್ ಹಾಗೂ ಅನಿಲ್ ಕುಮಾರ್ ರವರು ತಮ್ಮ ಬಳಿ ಇದ್ದ ಮೋಬೈಲ್ ಮತ್ತು ಹಣವನ್ನು ಆಸಾಮಿಗಳಿಗೆ ನೀಡಲು ಹೋದಾಗ ಅಕ್ಕಪಕ್ಕ ಗ್ರಾಮದ ಸಾರ್ವಜನಿಕರು ಬಂದು ಆಸಾಮಿಗಳನ್ನು ಹಿಡಿದುಕೊಂಡು ಬಂದು ಠಾಣೆಗೆ ಒಪ್ಪಿಸಿದ್ದರು.ಈ ಬಗ್ಗೆ ಅಮರ್ ರವರು ದೂರು ನೀಡಿದ್ದು ಅದರಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 126/2024 ಕಲಂ 384 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇವೆ ಎಂದರು.

     

     

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕರರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ನಾಗೇಶ್ ಕುಮಾರ್, 2 ನೇ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಕೆ.ಎಸ್. ನಾಗರಾಜ ಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ರವಿ ಪಿ. ರವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಸಾದೀಕ್ ಪಾಷ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸುವ ಮೂಲಕ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

     

     

    *ಪ್ರಕರಣ ಭೇದಿಸಲು ವಿಶೇಷ ತಂಡ ರಚನೆ*

     

    ವಿಶೇಷ ತಂಡದ ಅಧಿಕಾರಿ ಶ್ರೀ. ಸಾದೀಕ್ ಪಾಷ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀ. ರವಿ ಟಿ.ಎನ್. ಹಾಗೂ ಸಿಬ್ಬಂದಿಯವರಾದ ಹೆಚ್.ಸಿ 483, ಶ್ರೀ. ಅರ್ಜುನ್ ಲಮಾಣಿ, ಪಿಸಿ 584, ಶ್ರೀ. ಪ್ರವೀಣ್, ಪಿಸಿ 144 ಶ್ರೀ. ಸಚಿನ್ ಉಪ್ಪಾರ್ ರವರನ್ನು ನೇಮಿಸಲಾಗಿತ್ತು.

     

     

    ಎl. ಆಕಾಶ ಬಿನ್ ಸಿದ್ದಪ್ಪ (19 ವರ್ಷ ) ಎ2. ಪ್ರವೀಣ ಬಿನ್ ಅಂಜೀನಪ್ಪ, (18 ವರ್ಷ)ಎ3. ಹನುಮಂತ ಎಸ್.ಡಿ ಬಿನ್ ಶರಣಪ್ಪ, (22 ವರ್ಷ) ಬಂಧಿತ ಆರೋಪಿಗಳು.

  • *ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಸಲ್ಲದು : ಬಿಜೆಪಿ ಪಕ್ಷ ಸುಳ್ಳಿನ ಪಕ್ಷ – ಮಾಜಿ ಶಾಸಕ ಟಿ. ವೆಂಕಟರಮಣಯ್ಯ*

    ದೊಡ್ಡಬಳ್ಳಾಪುರ ಏಪ್ರಿಲ್ 16 ( ವಿಜಯಮಿತ್ರ ) : ಏಪ್ರಿಲ್ 17 ರಂದು ತಾಲೂಕಿನಾದ್ಯಂತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಸೇರಿದಂತೆ ಹಲವು ಗಣ್ಯರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಹಾಗೂ ಏಪ್ರಿಲ್ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾಲೂಕಿಗೆ ಆಗಮಿಸಲಿದ್ದು ರ್ಯಾಲಿ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಟಿ ವೆಂಕಟರಮಣಯ್ಯ ತಿಳಿಸಿದರು

    ತಾಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಜಕ್ಕಲ ಮಡುಗು ಕುಡಿಯುವ ನೀರಿನ ಯೋಜನೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ಶಂಕು ಸ್ಥಾಪನೆ ಮಾಡಲಾಗಿತ್ತು. 2009 – 2010 ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು. ಕಾರಣಾಂತರಗಳಿಂದ 2013ರ ವರೆಗೂ ತಾಲ್ಲೂಕಿನ ಜನತೆಗೆ ಯಾವುದೇ ಫಲ ನೀಡಿರಲಿಲ್ಲ.

    ತದನಂತರ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಹಲವು ಸಭೆ ನೆಡೆಸಲಾಯಿತು ಅಂದು ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಕೆ.ಸುಧಾಕರ್ ನೀರು ಬಿಡಲು ಒಪ್ಪಿಗೆ ಸೂಚಿಸಲಿಲ್ಲ ಆದರೆ ಇಂದು ತಾಲೂಕಿನ ಜನತೆಗೆ ನೀರು ಒದಗಿಸುವ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.

     

    ಬಿಜೆಪಿ ಒಂದು ಸುಳ್ಳಿನ ಪಕ್ಷ. ಕೇವಲ ಸುಳ್ಳುಗಳನ್ನು ಹೇಳುವ ಮೂಲಕ ಅಧಿಕಾರವನ್ನು ಪಡೆಯುವ ಪಕ್ಷ ಬಿಜೆಪಿ,ಸುಳ್ಳು ಹೇಳುವ ನಾಯಕರೇ ತುಂಬಿರುವ ಪಕ್ಷ ಬಿಜೆಪಿ ಎಂದು ಆರೋಪಿಸಿದರು.

     

     

    *ನೇಕಾರಿಕೆ ಕುರಿತು ವಿಶೇಷ ಕಾಳಜಿ*

    ನೇಕಾರರ ಬಗ್ಗೆ ವಿಶೇಷ ಕಾಳಜಿ ಇರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇಕಾರರಿಗೆ ವಿಶೇಷ ಯೋಜನೆ ರೂಪಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿ ಯೋಜನೆಗಳ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದೆ ಅಂತೆಯೇ 6ನೇ ವಿಶೇಷ ಯೋಜನೆಯಾಗಿ 10 ಹೆಚ್ ಪಿ ವಿದ್ಯುತ್ ಉಚಿತವಾಗಿ ನೀಡಿದ್ದು ನೇಕಾರ ಸಮುದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿರುವ ವಿಶೇಷ ಕೊಡುಗೆಯಾಗಿದೆ ಎಂದರು.

     

    *ಜನಧನ್ ಯೋಜನೆ ಮೂಲಕ ಮೋಸ*

    ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ಸುಳ್ಳುಗಳ ಸರಮಾಲೆಯನ್ನು ಹೇಳಿದ ಬಿಜೆಪಿ ವಿದೇಶದಲ್ಲಿರುವ ಕಪ್ಪು ಹಣ ತಂದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ಹಾಕುವುದಾಗಿ ಘೋಷಣೆ ಮಾಡಿತ್ತು. ಅದು ಇಂದಿಗೂ ಕನಸಾಗೇ ಉಳಿದಿದೆ ಏಕೆಂದರೆ ಅದು ಮತ ಪಡೆಯಲು ಬಿಜೆಪಿ ಹೇಳಿದ್ದು ಸುಳ್ಳು ಎಂದರು.

     

    ಜನರ ಅನುಕೂಲಕಕ್ಕಾಗಿ ಪಡಿತರ ವಿತರಣೆಯಲ್ಲಿ ಪರಿಷ್ಕರಣೆ

    ಆರು ಏಳು ಕಿಲೋಮೀಟರ್ ನಡೆದು ಪಡಿತರ ಪಡೆಯುವ ಪರಿಸ್ಥಿತಿ ನಮ್ಮಲ್ಲಿತ್ತು ಅಂತಹ ಪರಿಸ್ಥಿತಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನ್ಯಾಯಬೇಲೆ ಅಂಗಡಿಗಳನ್ನು ಕೇವಲ 2km ವ್ಯಾಪ್ತಿಗೆ ಇಳಿಸಿ ಗ್ರಾಮೀಣ ಭಾಗದ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

     

    *ಮೋದಿ ಆಡಳಿತ ಕುರಿತು ಲೇವಡಿ*

    ಕಳೆದ ಹತ್ತು ವರ್ಷಗಳಿಂದ ಕೇವಲ ಸುಳ್ಳುಗಳನ್ನೇ ಜನರಿಗೆ ಭರವಸೆಗಳನ್ನಾಗಿ ನೀಡುತ್ತಾ ಬಂದಿರುವ ಬಿಜೆಪಿ ಸರ್ಕಾರ ಬಡ ಮಹಿಳೆಯರಿಗೆ ಕೇವಲ 450 ರೂಪಾಯಿಗಳಿಗೆ ಗ್ಯಾಸ್ ನೀಡುವುದಾಗಿ ಘೋಷಣೆ ಮಾಡಿ ಏಕಾಏಕಿ 1050ರ ಗಡಿದಾಟಿಸಿದ್ದು ಜನತೆ ಮರೆತಿಲ್ಲ ಗ್ರಾಮೀಣ ಭಾಗದ ಕಡುಬಡ ಕುಟುಂಬಗಳಿಗೆ ಉಜ್ವಲ್ ಯೋಜನೆ ಮುಖಾಂತರ ಉಚಿತ ಗ್ಯಾಸ್ ಅಸೆ ನೀಡುವುದಾಗಿ ಆಸೆ ಹುಟ್ಟಿಸಿ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟಿದೆ. ಎಂದು ಆರೋಪಿಸಿದರು .

     

    *ಕಾಂಗ್ರೆಸ್ ಗ್ಯಾರೆಂಟಿಯಿಂದಾದ ಲಾಭ*

    ಕಾಂಗ್ರೆಸ್ ನೀಡಿರುವ ಗ್ಯಾರೆಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲತೆಗಳೇ ಆಗಿವೆ.ರಾಜ್ಯದ ಸಾಧಾರಣ ಕುಟುಂಬಗಳ ಆರ್ಥಿಕತೆ ಹೆಚ್ಚಿದ್ದು. ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದರು. ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ಸರಿಸುಮಾರು 400 ನೂತನ ದ್ವಿಚಕ್ರ ವಾಹನಗಳು, 200 ಫ್ರಿಡ್ಜ್, 150 ವಾಷಿಂಗ್ ಮಿಷಿನ್ ಮಾರಾಟವಾಗಿದೆ ಎಂಬ ಮಾಹಿತಿ ದೊರೆತಿದ್ದು. ಈ ಮಾರಾಟಕ್ಕೆ ಮೂಲ ಕಾರಣ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳೇ ಕಾರಣ ಎಂಬುದು ಅತ್ಯಂತ ಸಂತೋಷ ಸಂಗತಿಯಾಗಿದೆ. ಈ ಕುರಿತು ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದ್ದು ವ್ಯವಹಾರದಲ್ಲಿ ನೂತನ ಚೇತನ್ಯ ಮೂಡಿದೆ ಎಂದಿದ್ದಾರೆ.

     

     

     

    *ಜಿಲ್ಲಾಸ್ಪತ್ರೆ ನಿರ್ಮಾಣ ನಮ್ಮ ಪ್ರಯತ್ನದ ಫಲ*

    ತಾಲೂಕಿನಲ್ಲಿ ನಿರ್ಮಾಣಕ್ಕೆ ಸಿದ್ಧವಾಗಿರುವ ಜಿಲ್ಲಾ ಆಸ್ಪತ್ರೆ ಕುರಿತು ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವೆಲ್ಲವೂ ಸತ್ಯಕ್ಕೆ ದೂರವಾಗಿದ್ದು. ಈ ಹಿಂದೆ ಜಿಲ್ಲಾ ಕೇಂದ್ರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ವಿಷಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿಗೆ ಆದ ಮೋಸವನ್ನು ಪ್ರಶ್ನಿಸಿ ಹಲವು ಬಾರಿ ಸಭೆ, ಚರ್ಚೆಗಳು ನಡೆಸಿದ್ದೇವು. ಆ ಸಂದರ್ಭದಲ್ಲಿ  ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಡೆದ  ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ  ಅಧಿಕಾರಿಗಳು ನಾಲ್ಕು ತಾಲ್ಲೂಕಿನ ಮುಖಂಡರನ್ನು ಕರೆದು ಸಭೆಯಲ್ಲಿ  ನಿರ್ಣಾಯಕೈಗೊಳ್ಳಲಾಗಿದ್ದು  . ಅಂದಿನ ತೀರ್ಮಾನದಂತೆ ಸರಿಸುಮಾರು 9 1/2 ಎಕ್ಕರೆ ಸ್ಥಳದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಹಸ್ತು ಎಂದಿದೆ . ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ರಾಜ್ಯನಾಯಕರನ್ನು ನಿರಂತರ ಭೇಟಿ ಮಾಡುವ ಮುಖಾಂತರ ತಾಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣದ ಕನಸು ನನಸಾಗಿದೆ ಎಂದರು.

     

    ಈ ಸಂದರ್ಭದಲ್ಲಿ ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್ ( ಅಪ್ಪಿ ), ಮುಖಂಡರಾದ ಬೈರೇಗೌಡ,ಹೇಮಂತ್ ರಾಜು, ಆನಂದ್, ಅಂಜನ್ ಮೂರ್ತಿ, ರೇವತಿ ಅನಂಥರಾಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಅಂಬೇಡ್ಕರರು ಕೇವಲ ಒಬ್ಬ ವ್ಯಕ್ತಿಯಲ್ಲ, ಸಮುದಾಯದ ಶಕ್ತಿ – ನೇರಳೆಘಟ್ಟ ರಾಮು*

    ದೊಡ್ಡಬಳ್ಳಾಪುರ ಏಪ್ರಿಲ್ 16 ( ವಿಜಯಮಿತ್ರ ) :  ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಅಷ್ಟೇ ಅಲ್ಲದೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಇದು ನಮ್ಮ ನಾಯಕ ಅಂಬೇಡ್ಕರ್ ರವರಿಗೆ ನಾವು ನೀಡುವ ಉಡುಗೊರೆಯಾಗಿದೆ ಎಂದು ಖ್ಯಾತ ವಕೀಲರಾದ ಆರ್ ವಿ ಮಹೇಶ್ ತಿಳಿಸಿದರು

    ತಾಲೂಕಿನ ಗಾಳಿ ಪೂಜೆ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ 133ನೇ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಭಾಗವಹಿಸಿ ಮಾತನಾಡಿದರು ಸಮ ಸಮಾಜದ ಕಲ್ಪನೆ ಹೊಂದಿದ್ದ ಡಾಕ್ಟರ್ ಬಿ ಆರ್ ಅಂಬೇಡ್ಕರರು ದೇಶದ ಪ್ರತಿ ಪ್ರಜೆಯೂ ಉತ್ತಮ ಜೀವನ ಸಾಗಿಸಲು ಬೇಕಾಗುವ ಅನುಕೂಲಗಳನ್ನು ಸಂವಿಧಾನದ ಮೂಲಕ ಮಾಡಿದ್ದಾರೆ. ಪ್ರತಿ ಮನುಷ್ಯರಿಗೂ ಅರಿವು ತುಂಬಾ ಮುಖ್ಯವಾದದ್ದು. ಅರಿವು ಕೇವಲ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಲ್ಲರೂ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಅಭಿಲಾಷೆಯನ್ನು ಹೊಂದಿರುತ್ತಾರೆ, ಕೇವಲ ಅಭಿಲಾಷೆ ಇದ್ದರೆ ಸಾಲದು ಉತ್ತಮ ಶಿಕ್ಷಣದಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ, ಬಡತನದಿಂದ ಹೊರಬರಲು ನಮಗಿರುವ ಏಕೈಕ ಮಾರ್ಗ ಶಿಕ್ಷಣ. ಈಗಿನ ಮಕ್ಕಳು ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿಯಬೇಕಿದೆ. ಶಿಕ್ಷಣಕ್ಕೆ ಪೋಷಕರು ಹೆಚ್ಚು ಹೊತ್ತು ನೀಡಬೇಕೆಂದು ಮನವಿ ಮಾಡಿದರು

     

    21ನೇ ಶತಮಾನದಲ್ಲಿ ಜೀವಿಸುತ್ತಿದ್ದರು. ನಮ್ಮಲ್ಲಿ ಸಮ ಸಮಾಜದ ಪರಿಕಲ್ಪನೆ ಪರಿಪೂರ್ಣವಾಗಿಲ್ಲ… ಅದು ಶಿಕ್ಷಣದಿಂದ ಮಾತ್ರ ಸಾಧ್ಯ, ಸಂವಿಧಾನ ನಮಗೆ ಅನ್ಯಾಯವನ್ನು ಎದುರಿಸುವ ಶಕ್ತಿ ನೀಡುತ್ತದೆ.ನಾವೆಲ್ಲರೂ ಸಂವಿಧಾನದ ಉಳಿವಿಗಾಗಿ ಶ್ರಮಿಸಬೇಕಿದೆ. ಒಟ್ಟಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

     

    ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ನೇರಳೆ ಘಟ್ಟ ರಾಮು ಮಾತನಾಡಿ ಇಂದು ಸಂಘಟನೆ ಹಾಗೂ ಸ್ಥಳೀಯ ದಲಿತ ಮುಖಂಡರ ಸಹಾಯದಿಂದ 133 ನೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ ಅವರು ಸಮುದಾಯದ ಶಕ್ತಿ, ದೇಶ ಕಂಡ ಮಹಾ ನಾಯಕ ಕೇವಲ ಭಾರತ ದೇಶದಲ್ಲಷ್ಟೇ ಅಲ್ಲದೆ, ಪ್ರಾಶ್ಚತ್ಯ ದೇಶಗಳಲ್ಲೂ ಅಂಬೇಡ್ಕರರ ಸವಿನೆನಪು ಕಾಡುತ್ತದೆ. ಅವರ ಆಶಯವೇ ನಮ್ಮ ಜೀವನದ ಗುರಿ, ದಲಿತರ ಉದ್ದಾರ ಸಮ ಸಮಾಜದ ನಿರ್ಮಾಣ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ರಾಜಕುಮಾರ್, ರವಿ ಸಿದ್ದಪ್ಪ, ರಮೇಶ್, ನಾಗರಾಜ್, ಮುರಳಿ, ಮುನಿರಾಜು  ಸೇರಿದಂತೆ  ಹಲವು  ಮುಖಂಡರು, ಗ್ರಾಮಸ್ಥರು   ಉಪಸ್ಥಿತರಿದ್ದರು.

  • *ಕಾಂಗ್ರೆಸ್ ಗ್ಯಾರೆಂಟಿ ಯಿಂದ ಜನಸಾಮಾನ್ಯರ ಆರ್ಥಿಕತೆ ಅಭಿವೃದ್ಧಿ ಹೊಂದಿದೆ – ಟಿ. ವೆಂಕಟರಮಣಯ್ಯ*

    ದೊಡ್ಡಬಳ್ಳಾಪುರ ಏಪ್ರಿಲ್ 16 ( ವಿಜಯ ಮಿತ್ರ ) : ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭಿವೃದ್ಧಿಯ ಫಲವಾಗಿ 400 ದ್ವಿಚಕ್ರ ವಾಹನ ಗಳು, 200 ಫ್ರಿಡ್ಜ್ ಹಾಗೂ 150 ವಾಷಿಂಗ್ ಮಿಷಿನ್ ಮಾರಾಟ ವಾಗುವ ಮೂಲಕ ಸ್ಥಳೀಯ ವ್ಯಾಪಾರಸ್ಥರಿಗೆ ಉದ್ಯಮದಲ್ಲಿ ಹೊಸ ಉಮ್ಮಸ್ಸು ಬಂದಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ ವೆಂಕಟರಮಣಯ್ಯ ತಿಳಿಸಿದರು.

    ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳನ್ನು ಟಿಕಿಸುವ ಬಿಜೆಪಿ ಪಕ್ಷ ಸತ್ಯವನ್ನು ಅರಿಯಬೇಕಿದೆ. ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡುವಲ್ಲಿ ನಮ್ಮ ಗ್ಯಾರೆಂಟಿ ಯೋಜನೆಗಳು ಪ್ರಬಲವಾಗಿ ಶ್ರಮಿಸಿದೆ ಎಂದರು.

     

     

    ಈ ಸಂದರ್ಭದಲ್ಲಿ ಮುಖಂಡರಾದ ಬೈರೇಗೌಡ, ನೇಕಾರ ಮುಖಂಡ ಹೇಮಂತ್ ರಾಜು, ಕೃಷ್ಣಮೂರ್ತಿ, ವೆಂಕಟೇಶ್ ( ಅಪ್ಪಿ) ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.