Blog

  • *ಹಣ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 01 (ವಿಜಯಮಿತ್ರ ): ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಏಪ್ರಿಲ್ 26 ರಂದು ನಡೆಯುವ ಮತದಾನದ ದಿನದಂದು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಹೇಳಿದರು.

     

    ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಡಳಿತ ಕಛೇರಿ ಮೇಲೆ ಮತದಾನ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಅನಾವರಣ ಹಾಗೂ ಮತದಾನ ಜಾಗೃತಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಮತದಾನ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಸಧೃಡ ದೇಶ ನಿರ್ಮಾಣ ಮಾಡಲು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಪ್ಪದೇ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಹೇಳಿದರು.

    ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ ಈ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಆಶಯದೊಂದಿಗೆ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿ ವತಿಯಿಂದ ವಿಭಿನ್ನವಾಗಿ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಪ್ಪದೇ ನಿರ್ಭೀತಿಯಿಂದ ಮತ ಚಲಾಯಿಸಿ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲಾ ಐಕಾನ್ ಆಗಿ ಕಾಮಿಡಿ ಕಿಲಾಡಿ ನಟ ರಘು, ಲಿಂಗತ್ವ ಅಲ್ಪಸಂಖ್ಯಾತರ ಕ್ಷೇತ್ರದಿಂದ ಅದ್ಯ ಮತ್ತು ವಿಕಲಚೇತನರ ಕ್ಷೇತ್ರದಿಂದ ಪ್ಯಾರ ಕ್ರೀಡಾ ಪಟು ಪ್ರಕಾಶ್ ಅವರು ಭಾಗವಹಿಸಿ ಎಲ್ಲರು ತಪ್ಪದೇ ಮತದಾನದ ಹಕ್ಕು ಚಲಾಯಿಸಿ ಎಂದು ಮತದಾನ ಜಾಗೃತಿ ಮೂಡಿಸಿದರು.

    *ಮತದಾನ ಜಾಗೃತಿಗಾಗಿ ಜಿಲ್ಲಾಧಿಕಾರಿ ಹಾಟ್ ಏರ್ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಮತದಾನ ಜಾಗೃತಿ ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸುವ ಮೂಲಕ ಎಲ್ಲರೂ ಸಹಿ ಹಾಕಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು*

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಸೇರಿದಂತೆ ಜಿಲ್ಲಾಡಳಿತದ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರದಲ್ಲಿ ಸಮ್ಮಿಲನ ಸಭೆ : ಒಂದೇ ವೇದಿಕೆಯಲ್ಲಿ ಬಿಜೆಪಿ – ಜೆಡಿಎಸ್ ನಾಯಕರು*

    ದೊಡ್ಡಬಳ್ಳಾಪುರ ಏಪ್ರಿಲ್ 01(ವಿಜಯಮಿತ್ರ ): ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಜೊತೆ ಜೊತೆಯಾಗಿ ಸಾಗುತ್ತಿತ್ತು.ಪಕ್ಷತೀತವಾಗಿ ಶ್ರಮಿಸುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿ ಜೀ ಅವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಉತ್ಸುಕರಾಗಿದ್ದು. ಎರಡು ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕಾರ್ಯಕ್ಕೆ ಎರಡು ಪಕ್ಷದ ನಾಯಕರು ಮುಂದಾಗಿದ್ದೇವೆ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ತಿಳಿಸಿದರು.

     

    ತಾಲ್ಲೂಕಿನ ರಾಜಘಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ.

     

    *ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೂ ಎಚ್ ಡಿ ಕುಮಾರಸ್ವಾಮಿ ಕುಟುಂಬಕ್ಕೂ ಅವಿನಾಭಾವ ಸಂಬಂಧ*

     

    2019 ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರ ಸ್ವಾಮಿ ರವರು ಚಿಕ್ಕಬಳ್ಳಾಪುರ ಮತ್ತು ರಾಮನಗರ ವನ್ನು ಜಿಲ್ಲೆಗಳನ್ನಾಗಿ ಘೋಷಣೆಮಾಡಿದ್ದರು. ಇಂದಿಗೂ ಚಿಕ್ಕಬಳ್ಳಾಪುರ ಕ್ಷೇತ್ರ ಹಾಗೂ ವಿಶೇಷವಾಗಿ ದೊಡ್ಡಬಳ್ಳಾಪುರ ಗ್ರಾಮಗಳಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರ ಸ್ವಾಮಿಯವರ ಅಭಿಮಾನಿಗಳಿದ್ದು. ಎನ್ ಡಿ ಎ ಪಕ್ಷದ ಅಭ್ಯರ್ಥಿ ಡಾ. ಕೆ ಸುಧಾಕರ್ ಅವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಯಾಗಲಿದೆ ಎಂದರು

     

     

    *ಬಚ್ಚೆಗೌಡರ ರಾಜೀನಾಮೆ ಕುರಿತು ಪ್ರತಿಕ್ರಿಯೆ*

     

    ವಯಕ್ತಿಕವಾಗಿ ಬಚ್ಚೆಗೌಡರ ಮೇಲೆ ಅಪಾರವಾದ ಗೌರವಿದ್ದು ಈ ಹಿಂದೆ ಜೆ ಪಿ ನಗರದ ನಿವಾಸದಲ್ಲಿ ಭೇಟಿ ಮಾಡಿದ ಸಂದರ್ಭ ಪಕ್ಷಕ್ಕೆ ರಾಜೀನಾಮೆ ನೀಡದಂತೆ ನಾನು ಮತ್ತು ನಮ್ಮ ತಂದೆಯವರು ಮನವಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷ ನೀಡುವ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಸಿದ್ದೆವು ಆದರೂ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ತಿಳಿದು ಬಂದಿದೆ. ರಾಜಕೀಯ ಜೀವನ ಅವರ ವಯಕ್ತಿಕ ನಿರ್ಧಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಬಲಿಷ್ಠವಾಗಿದ್ದು ಕಾರ್ಯಕರ್ತರು ಪಕ್ಷದ ಹಾಗೂ ಎನ್ ಡಿ ಎ ಅಭ್ಯರ್ಥಿ ಡಾ. ಕೆ ಸುಧಾಕರ್ ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸಲಿದ್ದಾರೆ ಎಂದರು.

     

     

    *ಬಿಜೆಪಿ ಮತ್ತು ನಮ್ಮದು ನ್ಯಾಚುರಲ್ ಸಂಬಂಧ ಇದು ಪಕ್ಷಗಳ ನೈತಿಕ ಮೈತ್ರಿ – ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ*

     

    ಒಮ್ಮೆ ಕಾಂಗ್ರೆಸ್ ಪಕ್ಷದ ಒಟ್ಟಿಗೆ ಮೈತ್ರಿ ಮಾಡಿಕೊಂಡಿದ್ದು ಅದು ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟುಮಾಡಿತ್ತು. ನಮ್ಮ ಜೆಡಿಎಸ್ ಪಕ್ಷವು ಒಂದು ಸ್ಥಾನಕ್ಕೆ ಬರಲು ಕಾರಣವಾಗಿತ್ತು. ಬಿಜೆಪಿ ಜೊತೆ ಮೈತ್ರಿ ನೈತಿಕ ಮೈತ್ರಿಯಾಗಿದ್ದು. ಜೆಡಿಎಸ್ ಮತ್ತು ಬಿಜೆಪಿ ಯ ಹೋರಾಟ ಕಾಂಗ್ರೆಸ್ ಪಕ್ಷದ ವಿರುದ್ಧವೇ ಆಗಿದೆ . ಈ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಸಮರ ಸಾರಿದ್ದೇವೆ ಎಂದರು.

     

    *ಬಿಜೆಪಿ ಮತ್ತು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರ ಸಮಾಗಮ : ಮಾಡಲಿದ್ಯಾ ಯುವ ಜೋಡಿ ಮೋಡಿ*

     

    ಈ ಲೋಕಸಭೆ ಚುನಾವಣೆ ವಿಶೇಷವಾಗಿದ್ದು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸುತ್ತಿದೆ. ಅಂತೆಯೇ ರಾಜ್ಯ ಯುವಘಟಕ ವಿಶೇಷ ಕಾಳಜಿಯಿಂದ ಶ್ರಮಿಸುತ್ತಿದ್ದು. ಬಿಜೆಪಿ ಯುವ ಘಟಕ ಅಧ್ಯಕ್ಷ ಧೀರಜ್ ಮುನಿರಾಜು ಹಾಗೂ ಜೆಡಿಎಸ್ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಜಂಟಿಯಾಗಿ ಯುವಕರೊಂದಿಗೆ ಚುನಾವಣಾ ಅಖಾಡದಲ್ಲಿ ಹೊರಡಲಿದ್ದಾರೆ..

    ಈ ವೇಳೆ ಬಿಜೆಪಿ ಯುವ ಘಟಕ ಅಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು,ದೇವನಹಳ್ಳಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಬಮೂಲ್ ನಿರ್ದೇಶಕರಾದ ಬಿ.ಸಿ.ಆನಂದ್ ಕುಮಾರ್, ಕೆ.ಎಂ.ಹನುಮಂತರಾಯಪ್ಪ, ಟಿ.ರಂಗರಾಜ್. ಇ.ಕೆ.ಕೃಷ್ಣಪ್ಪ, ಎಸ್.ಎಂ.ಹರೀಶ್ ಗೌಡ. ಎಂ.ಜಿ. ಶ್ರೀನಿವಾಸ್, ಬಿ.ಸಿ.ನಾರಾಯಣಸ್ವಾಮಿ ಹಾಜರಿದ್ದರು.

  • *ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಡಾ.ಕೆ.ಸುಧಾಕರ್ ಮಿಂಚಿನ ಸಂಚಾರ*

    ವಿಕಸಿತ ಭಾರತ ನಿರ್ಮಿಸುವ ಗುರಿಯೊಂದಿಗೆ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ರಾಜ್ಯಾದ್ಯಂತ ಚುರುಕಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವಿರುವ ಬಯಲುಸೀಮೆ ಭಾಗದಲ್ಲಿ ಚುನಾವಣಾ ಪ್ರಚಾರದೊಂದಿಗೆ ಬಿರುಸಿನ ರಾಜಕೀಯ ಚಟುವಟಿಕೆ ನಡೆದಿದೆ. ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಗಟ್ಟಿಯಾಗಿದ್ದು, ಅಭ್ಯರ್ಥಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಸಂಸದರಾಗಿಸಲು ಮುಖಂಡರು ಹಾಗೂ ಕಾರ್ಯಕರ್ತರು ಒಕ್ಕೊರಲ ವಿಶ್ವಾಸವನ್ನು ತೋರಿಸಿದ್ದಾರೆ.

     

    ಕಳೆದ ಭಾನುವಾರ ಟಿಕೆಟ್ ಘೋಷಣೆಯಾದಾಗಿನಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿರುವ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಮಿತ್ರ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಡಾ.ಕೆ.ಸುಧಾಕರ್ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಮನೆಗಳಿಗೆ ಖುದ್ದು ಭೇಟಿ ನೀಡಿ ಸಹಕಾರ ಕೋರಿದ್ದಾರೆ.

     

    ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಜೆಡಿಎಸ್ ಪ್ರಭಾವ ಹೆಚ್ಚಿರುವ ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲದಲ್ಲಿ ಸೋಮವಾರ ಸಮನ್ವಯ ಸಭೆ ನಡೆಯಲಿದ್ದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಡಾ.ಕೆ.ಸುಧಾಕರ್‌ ಅವರನ್ನು ಅಭ್ಯರ್ಥಿಯಾಗಿಸಲು ಸಂಪೂರ್ಣ ಸಹಕಾರ ನೀಡಿದ್ದು, ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಸಂದೇಶ ನೀಡಿದ್ದಾರೆ.

     

     

    ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ಸಭೆ ನಡೆಸಿದ ಡಾ.ಕೆ.ಸುಧಾಕರ್‌, ಅಭಿವೃದ್ಧಿಯ ರಾಜಕಾರಣ, ದೇಶದ ಭದ್ರತೆ ಹಾಗೂ ಯುವಜನರ ಬದುಕು ರೂಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನನಗೆ ಮತ್ತು ದೊಡ್ಡಬಳ್ಳಾಪುರಕ್ಕೆ ಅವಿನಾಭಾವ ಸಂಬಂಧವಿರುವುದರಿಂದ ಇದು ನನಗೆ ಹೊಸ ಕ್ಷೇತ್ರವಲ್ಲ. ಈ ಕ್ಷೇತ್ರದಲ್ಲಿ ಅನೇಕ ಹಿರಿಯ ನಾಯಕರಿದ್ದಾರೆ. ಅವರೆಲ್ಲರ ಸಹಕಾರ ಪಡೆದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

     

    ದೊಡ್ಡಬಳ್ಳಾಪುರದಲ್ಲಿ ಸಭೆ ನಡೆಸಿ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗಿದೆ. ಹಿರಿಯ ನಾಯಕ ಎಂಟಿಬಿ ನಾಗರಾಜ್‌ ಹಾಗೂ ಶಾಸಕ ಧೀರಜ್‌ ಮುನಿರಾಜು ಅವರ ನಾಯಕತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಗಳಿಸಲು ಸಾಧ್ಯವಾಗಲಿದೆ. ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಕೂಡ ಗೆಲ್ಲಿಸುವ ಭರವಸೆ ನೀಡಿದ್ದಾರೆ.

     

    ಅಭಿವೃದ್ಧಿಯ ಭರವಸೆ

     

    ಈಗಾಗಲೇ ವೈದ್ಯಕೀಯ ಮತ್ತು ಆರೋಗ್ಯ ಸಚಿವರಾಗಿ ಕೋವಿಡ್‌ನಂತಹ ಸಾಂಕ್ರಾಮಿಕವನ್ನೂ ನಿಭಾಯಿಸಿದ ಅನುಭವವಿರುವ ಹಾಗೂ ಶಾಸಕರಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಿರುವ ಡಾ.ಕೆ.ಸುಧಾಕರ್‌, ಸಂಸದರಾಗಿ ತಮ್ಮ ಕ್ಷೇತ್ರವನ್ನು ವಿಕಸಿತ ಕ್ಷೇತ್ರವನ್ನಾಗಿಸುವ ಪಣ ತೊಟ್ಟಿದ್ದಾರೆ.

     

    ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಬೆಂಗಳೂರಿಗೆ ಉಪನಗರಗಳಾಗಿ ಬೆಳೆಸುವುದು ಅವರ ಗುರಿ. ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳು ಅರೆಬರೆಯಾಗಿ ಜಾರಿಯಾಗಿರುವುದರಿಂದ ಅನುದಾನವೇ ಇಲ್ಲದೆ ಅಭಿವೃದ್ದಿ ಶೂನ್ಯವಾಗಿದೆ. ಆದ್ದರಿಂದ ಈ ಬಾರಿಯೂ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಿ ಬಯಲುಸೀಮೆ ಭಾಗದಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಅಭಿವೃದ್ಧಿಗೆ ಮರು ಚಾಲನೆ ನೀಡಬೇಕೆಂದು ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

     

    ದೆಹಲಿಗೆ ಪರ್ಯಾಯವಾಗಿ ನೋಯ್ಡಾ ಇರುವಂತೆ ಬೆಂಗಳೂರಿಗೆ ಪರ್ಯಾಯವಾಗಿ ದೇವನಹಳ್ಳಿಯನ್ನು ಬೆಳೆಸುವ ಗುರಿ ಡಾ.ಕೆ.ಸುಧಾಕರ್‌ ಅವರದ್ದು. ಹಾಗೆಯೇ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ನನ್ನನ್ನು ಆಯ್ಕೆ ಮಾಡಿದರೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಸಹಾಯಕವಾಗುತ್ತದೆ. ಕಾಂಗ್ರೆಸ್‌ಗೆ ಮತ ಹಾಕಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

     

    ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವುದೇ ರಸ್ತೆ, ಸೇತುವೆ ನಿರ್ಮಿಸಿಲ್ಲ. ಎಲ್ಲಿಯೂ ಅಭಿವೃದ್ಧಿ ನಡೆಯುತ್ತಿಲ್ಲ. ಇದನ್ನು ಜನರಿಗೆ ತಿಳಿಸಬೇಕಿದೆ. ಜೆಡಿಎಸ್‌ ಜೊತೆ ಸಮನ್ವಯ ತಂಡಗಳನ್ನು ರಚಿಸಿ, ಪ್ರತಿ ಹಂತದಲ್ಲೂ ತಂಡಗಳನ್ನು ರಚಿಸಿ ಕೆಲಸ ಮಾಡಬೇಕು. ಬಿಜೆಪಿ-ಜೆಡಿಎಸ್‌ ಒಳಗೊಂಡ ಬೃಹತ್‌ ಪ್ರಚಾರ ಸಭೆಯನ್ನೂ ನಡೆಸಬೇಕಿದೆ ಎಂದು ಅವರು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

  • *_ರಕ್ಷಾ ರಾಮಯ್ಯಗೆ ” ಕೈ” ಟಿಕೆಟ್ : ಟಿಕೆಟ್ ” ಕೈ” ತಪ್ಪಿದ ನಿರಾಸೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ್ ರೆಡ್ಡಿ_*

    ಚಿಕ್ಕಬಳ್ಳಾಪುರ ಮಾ 30 ( ವಿಜಯ ಮಿತ್ರ ): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ರಕ್ಯಾ ರಾಮಯ್ಯ ರವರಿಗೆ ಸಿಕ್ಕಿದ್ದು , ಟಿಕೆಟ್ ವಿಚಾರವಾಗಿ ಮಾಜಿ ಸಂಸದರಾದ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿ ಹೆಸರು ಭಾರೀ ಸದ್ದು ಮಾಡಿತ್ತಾದರೂ , ಕೊನೆಗೆ ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ, ಕಳೆದ ಹಲವು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಸಂಚರಿಸಿ ಮುಖಂಡರನ್ನು ಭೇಟಿ ಮಾಡುತ್ತಿರುವ ರಕ್ಷಾ ರಾಮಯ್ಯ ನಾಳೆಯಿಂದಲೇ ಅಧಿಕೃತವಾಗಿ ಪ್ರಚಾರಕ್ಕೆ ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸುವೆ.

     

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ  ಪ್ರಭಾವಿ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ರಕ್ಷಾ ರಾಮಯ್ಯ ಕಳೆದ ಎರಡು ತಿಂಗಳುಗಳಿಂದ ಕ್ಷೇತ್ರದಲ್ಲಿ  ಸಂಚರಿಸಿ , ಪಕ್ಷ ಸಂಘಟನೆಯನ್ನ ಮಾಡಲು ಮುಂದಾಗಿದ್ದರು.ಮಾಜಿ ಸಂಸದರಾದ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿಯವರು ಸಹ ಟಿಕೆಟ್ ಅಕಾಂಕ್ಷಿಯಾಗಿದ್ದರು, ಟಿಕೆಟ್ ಗಾಗಿ ತೀರ್ವ ಪೈಪೋಟಿ ಇದ್ದ ಕಾರಣದಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಇಲ್ಲಿಯವರೆಗೂ ಘೋಷಣೆಯಾಗಿರಲಿಲ್ಲ, ಅಂತಿಮವಾಗಿ ಹೈಕಮಾಂಡ್ ರಕ್ಷಾ ರಾಮಯ್ಯನವರಿಗೆ ಟಿಕೆಟ್ ನೀಡಿದೆ.

     

     ರಕ್ಷಾ ರಾಮಯ್ಯನವರು ಹೊರಗಿನವರು ಎಂಬ ವಿಚಾರವನ್ನಿಟ್ಟುಕೊಂಡು ಕ್ಷೇತ್ರದ ಮುಖಂಡರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿತ್ತು, ಅನುಭವದ ಆಧಾರದ ಮೇಲೆ ತನಗೆ ಟಿಕೆಟ್ ನೀಡ ಬೇಕೆಂಬುದು ವೀರಪ್ಪ ಮೊಯ್ಲಿಯವರ ಒತ್ತಾಯವಾಗಿತ್ತು, ಅಂತಿಮವಾಗಿ ಯುವ ಮುಖಂಡರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ನಂತರ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ್ ರೆಡ್ಡಿಯವರು ನಿರ್ಧಾರ ಏನು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

  • *ಏಪ್ರಿಲ್ 1ರಂದು ಸಮ್ಮಿಲನ ಸಭೆ : ಒಂದೇ ವೇದಿಕೆ ಹಂಚಿಕೊಳ್ಳಲಿರುವ ಬಿಜೆಪಿ, ಜೆಡಿಎಸ್ ನಾಯಕರು*

    ದೊಡ್ಡಬಳ್ಳಾಪುರ ಮಾ.29( ವಿಜಯ ಮಿತ್ರ ) : ಜನವರಿ 1 ರಂದು ಆಯೋಜನೆ ಮಾಡಲಾಗಿರುವ ಸಮ್ಮಿಲನ ಸಭೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಜೊತೆಯಾಗಿ ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ ಮುನೇಗೌಡ ತಿಳಿಸಿದರು.

    ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಜೆಡಿಎಸ್ ಪಕ್ಷವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್. ಡಿ. ಎ ಗೆ ಬೆಂಬಲ ಸೂಚಿಸಿದ್ದು. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹಾಗೂ ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆದೇಶದಂತೆ ಈ ಬಾರಿ ನಮ್ಮ ಬೆಂಬಲವನ್ನು ಎನ್ ಡಿ ಎ ಅಭ್ಯರ್ಥಿಯಾದ ಡಾಕ್ಟರ್ ಕೆ ಸುಧಾಕರ್ ಅವರಿಗೆ ಸೂಚಿಸಿದ್ದೇವೆ. ಈ ಹಿನ್ನಲೆ ಎಲ್ಲಾ ತಾಲ್ಲೂಕಿನ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಹೊಸ ಉತ್ಸಹ, ಶಕ್ತಿ ತುಂಬಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹಲವು ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

     

    ಏಪ್ರಿಲ್ 1ರಂದು ಬೆಳಗ್ಗೆ 11 ಗಂಟೆಗೆ ದೇವನಹಳ್ಳಿ, ಮಧ್ಯಾಹ್ನ 2 ಗಂಟೆ ದೊಡ್ಡಬಳ್ಳಾಪುರ ತಾಲ್ಲೂಕಿನ ಒಕ್ಕಲಿಗರ ಭವನ , ಸಂಜೆ 4 ಗಂಟೆಗೆ ನೆಲಮಂಗಲದಲ್ಲಿ ಸಮ್ಮಿಲನ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಗಳ ಮುಖಂಡರು ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.

     

     

    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ಮಾತನಾಡಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ನಮ್ಮ ರಾಷ್ಟ್ರೀಯ ನಾಯಕರಾದ ಎಚ್ ಡಿ ದೇವೇಗೌಡ ಅವರು ಎನ್ ಡಿ ಎ ಜೊತೆ ಮೈತ್ರಿ ಮಾಡಿಕೊಂಡಿದ್ದು. ಈ ಹಿನ್ನಲೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಕೆ ಸುಧಾಕರ್ ಬೆಂಬಲಿಸಿ ಏಪ್ರಿಲ್ 1ಜಿಲ್ಲೆಯ ವರಿಷ್ಟರು ಹಾಗೂ ಮುಖಂಡರ ಸಮ್ಮತಿಯ ಮೇರೆಗೆ ಸಮ್ಮಿಲನ ಸಭೆ ಏರ್ಪಡಿಸಿದ್ದು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು, ತಾಲ್ಲೂಕಿನ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿಮಾಡಿದರು.

     

    ಸುದ್ದಿಗೊಷ್ಟಿಯಲ್ಲಿ ಜೆಡಿಎಸ್ ಮುಖಂಡರಾದ ಲಕ್ಷ್ಮೀಪತಯ್ಯ, ಶಾಂತಮ್ಮ, ದೇವರಾಜಮ್ಮ, ಮಂಜುನಾಥ್ , ರಂಗಸ್ವಾಮಿ, ಸಿದ್ದಪ್ಪ, ಕೆಂಪೇಗೌಡ, ಜಗನ್ನಾಥ್ ಚಾರ್, ನರಸಿಂಹಗೌಡ, ಅಶ್ವಥ್ಧನಾರಾಯಣ್, ನರಸಿಂಹಮೂರ್ತಿ, ನಟರಾಜ್, ಶ್ರೀನಿವಾಸ್. ಶಶಿಕಲಾ. ಜ್ಯೋತಿ, ಶಾರದಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಬೆಳ್ಳಿ ಪರದೆಯಲ್ಲಿ ಯುವ ಮಿಂಚಿಂಗ್ : ಹೋಳಿಗೆ ಹಂಚಿ ಸಂಭ್ರಮಿಸಿದ ಅಭಿಮಾನಿಗಳು*

    ಸಿನಿಮಾ: ದೊಡ್ಡಬಳ್ಳಾಪುರ ಮಾ.29 ( ವಿಜಯ ಮಿತ್ರ ) : ರಾಜ್ ವಂಶದ ಕುಡಿ ಯುವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಯುವ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ನಟ ಯುವರಾಜಕುಮಾರ್ ನಟನೆಯ ಮೊದಲ ಚಿತ್ರ ಇದಾಗಿದ್ದು. ಬಹಳಷ್ಟು ನಿರೀಕ್ಷೆ ಮೂಡಿಸಿದೆ. ರಾಜ್ ಕುಟುಂಬದ ಅಭಿಮಾನಿಗಳು ಚಿತ್ರವನ್ನು ಭರ್ಜರಿಯಾಗಿ ವೆಲ್ಲ್ಕಮ್ ಮಾಡಿದ್ದಾರೆ.

    ದೊಡ್ಡಬಳ್ಳಾಪುರ ನಗರ ಭಾಗದ ವೈಭವ ಚಿತ್ರಮಂದಿರದಲ್ಲಿ ಅಭಿಮಾನಿಗಳು ಯುವರಾಜ್ ಕುಮಾರ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದರು. ಕಲ್ಲುದೇವನಹಳ್ಳಿ ನಾಗರಾಜ್ ಮತ್ತು ಸಂಗಡಿಗರು ಚಿತ್ರಮಂದಿರಕ್ಕೆ ಬರುವ ಸಿನಿ ಪ್ರೇಕ್ಷಕರಿಗೆ ಹೋಳಿಗೆ ಮತ್ತು ತುಪ್ಪವನ್ನು ನೀಡುವ ಮೂಲಕ ಸಂಭ್ರಮಿಸಿದರು.

     

    ಈ ಕುರಿತು ಕಲ್ಲುದೇವನಹಳ್ಳಿ ನಾಗರಾಜ್ ಮಾತನಾಡಿ ಅಪ್ಪು ಅಭಿಮಾನಿಗಳು ಹಾಗೂ ರಾಜ್ ಕುಟುಂಬದ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ.. ಕಾರಣ ನಮ್ಮ ಯುವರಾಜಕುಮಾರ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅಂತೆಯೇ ಶಿವರಾಜ್ ಕುಮಾರ್ ಕೂಡ ಉತ್ತಮ ಚಿತ್ರಗಳನ್ನು ನೀಡುವ ಮೂಲಕ ಎಲ್ಲರ ಮನೆ ಗೆಲ್ಲಲಿ ಎಂದು ಹಾರೈಸಿದರು. ಹಾಗೂ ರಾಜ್ ಕುಟುಂಬದ ಅಭಿಮಾನಿಗಳಿಗೆ ಯುಗಾದಿ ಹಬ್ಬವು ಇಂದೇ ಪ್ರಾರಂಭವಾಗಿದ್ದು ಸಿನಿ ಪ್ರೇಕ್ಷಕರಿಗೆ ಒಬ್ಬಟ್ಟು ನೀಡಿ ಸ್ವಾಗತಿಸುತ್ತಿದ್ದೇವೆ ಎಂದರು.

     

    ಈ ಸಂದರ್ಭದಲ್ಲಿ ಕೆಂಪರಾಜು, ಚೌಡರಾಜು, ಚಂದ್ರಶೇಖರ್,ಸೀನಪ್ಪ,ನಿತಿನ್ ಕುಮಾರ್,ದೇವರಾಜ್,ವಿಕ್ಕಿ ಸೇರಿದಂತೆ ಎಲ್ಲಾ ರಾಜ್ ಕುಟುಂಬದ ಅಭಿಮಾನಿಗಳು ಉಪಸ್ಥಿತರಿದ್ದರು.

  • ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ : ನಾಸೀರ್ ಅಹಮದ್ ವಿರುದ್ಧ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು

     

    ದೊಡ್ಡಬಳ್ಳಾಪುರ ಮಾ.28 : ಸತತ ಏಳು ಭಾರಿ ಜನರ ಪ್ರೀತಿ ಹಾಗೂ ವಿಶ್ವಾಸದಿಂದ ಗೆಲುವು ಸಾಧಿಸಿರುವ ಕೆ ಎಚ್ ಮುನಿಯಪ್ಪ ರವರನ್ನು ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ನಾಸೀರ್ ಅಹಮದ್ ಈ ಕೂಡಲೇ ಸಾರ್ವಜನಿವಾಗಿ ಕ್ಷಮೆಯಾಚಿಸಬೇಕಿದೆ ಎಂದು ಮಾದಿಗ ಸಮುದಾಯ ಮುಖಂಡರಾದ ರಾಮಕೃಷ್ಣಪ್ಪ ತಿಳಿಸಿದರು.

    ನಗರದ ಪ್ರವಾಸಿ ಮಂದಿರ ವೃತ್ತದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಚಿವರಾದ ಕೆ.ಹೆಚ್.ಮುನಿಯಪ್ಪರವರ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ನಾಸೀರ್ ಸಾಬ್ ಮತ್ತು ಕೋಲಾರ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆಸುತ್ತಿರುವರ ಶಾಸಕರ ವಿರುದ್ಧ ಕೆ ಎಚ್ ಮುನಿಯಪ್ಪ ಅಭಿಮಾನಿಗಳು ಮತ್ತು ಮಾದಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಕೆ.ಹೆಚ್. ಮುನಿಯಪ್ಪ 7 ಬಾರಿ ಸಂಸದರಿಗೆ ಅಯ್ಕೆಯಾದವರು, 10 ವರ್ಷಗಳ ಕಾಲ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ರಾಜಕೀಯ ಮುತ್ಸದಿ ಅವರು, ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ನಾಸೀರ್ ಅಹಮದ್ ಕೀಳು ಅಭಿರುಚಿಯನ್ನು ವ್ಯಕ್ತಪಡಿಸಿದ್ದಾರೆ, ಇದು ಮಾದಿಗ ಸಮುದಾಯಕ್ಕೆ ಮಾಡಿದ ಅವಮಾನ , ಅವರು ಎಂದು ದ್ವೇಷ ರಾಜಕಾರಣ ಮಾಡಿಲ್ಲ ಎಲ್ಲರ ಮನಸ್ಸು ಗೆದ್ದಿದ್ದಾರೆ ಎಂದರು.

     

    ಕೋಲಾರದಲ್ಲಿ ಷಡಂತ್ರ ನಡೆಸಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದವರು ಇಂದು ಅವರ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ , ಅವರ ವಿರುದ್ಧದ ಷಡ್ಯಂತ್ರ ಸತ್ಯ ಶೋಧನ ಸಮಿತಿಯಿಂದ ಬಹಿರಂಗವಾಗಿದೆ, ದೆಹಲಿ ಹೈಕಮಾಂಡ್ ಚಿಕ್ಕಪೆದ್ದಣ್ಣನವರಿಗೆ ಟಿಕೆಟ್ ಫೈನಲ್ ಮಾಡಿತ್ತು, ಇದರಿಂದ ಬೇಸತ್ತು ಹೇಳಿಕೆ ಈ ನೀಡಿದ್ದಾರೆ, ತಕ್ಷಣವೇ ಅವರನ್ನು ವಜಾ ಮಾಡಬೇಕು, ಆಗ್ರಹಿಸಿದರು.

     

    ವಕೀಲರಾದ ಆರ್.ವಿ.ಮಹೇಶ್ ಮಾತನಾಡಿ ಮೃದು ಸ್ವಭಾವದ ಕೆ ಎಚ್ ಮುನಿಯಪ್ಪ ಕುರಿತು ನಸೀರ್ ಅಹಮದ್ ರವರ ಹೇಳಿಕೆ ಸಲ್ಲದು, ಈ ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಹಾಗೂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಈ ಕೂಡಲೇ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಮ್ಮ ಆಕ್ರೋಶ ವ್ಯಕ್ತಿಪಡಿಸಿದರು

    ಈ ಕುರಿತು ಸ್ಥಳೀಯ ತಾಲ್ಲೂಕು ದಂಡಧಿಕಾರಿಗಳಿಗೆ ದಲಿತ ಸಂಘಟನೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಅಂಜನ್ ಮೂರ್ತಿ, ರಾಮು, ನರೇಂದ್ರ ಮೂರ್ತಿ, ರಮೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐಎಂ ಪಕ್ಷದ ಅಭ್ಯರ್ಥಿಯಾಗಿ ಮುನಿವೆಂಕಟಪ್ಪ ಸ್ಪರ್ಧೆ : ಏಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ

    ದೊಡ್ಡಬಳ್ಳಾಪುರ ಮಾ. 28 ( ವಿಜಯ ಮಿತ್ರ ) : ಹೋರಾಟದ ಹಿನ್ನೆಲೆಯಿಂದ ಬಂದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಮುನಿವೆಂಕಟಪ್ಪರವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು ಏಪ್ರಿಲ್ 3ರಂದು ಸಂಗಡಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರು ತೇಜಸ್ವಿ ತಿಳಿಸಿದರು.

     

    ನಗರಭಾಗದ ಸಿಪಿಐ(ಎಂ ) ಕೇಂದ್ರ ಕಚೇರಿಯಲ್ಲಿ ಗುರುವಾರ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ ಮೊದಲ ಅಭ್ಯರ್ಥಿಯನ್ನಾಗಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಸುದೀರ್ಘ ಹೋರಾಟದ ಹಿನ್ನೆಲೆ ಉಳ್ಳ ಮುನಿವೆಂಕಟಪ್ಪ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವತಿಯಿಂದಕಣಕ್ಕಿಳಿಸುತ್ತಿದ್ದು. ಸುಮಾರು 500ಕ್ಕೂ ಅಧಿಕ ಸಂಗಡಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದರು.

     

     

    ಕಾರ್ಮಿಕರ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸದಾ ಪ್ರಥಮವಾಗಿ ಸ್ಪಂದಿಸುವ ಕಾರ್ಮಿಕರ ಧ್ವನಿಯಾಗಿ ಹೋರಾಟ ನಡೆಸುವ ಸಿಪಿಐಎಂ ಪಕ್ಷವನ್ನು ಬೆಂಬಲಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಅನ್ಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗಿ ಮನವಿ ಮಾಡಿದರು.

     

     

    ಜಿಲ್ಲಾ ಸಮಿತಿ ಸದಸ್ಯ ಪಿ.ಎ. ವೆಂಕಟೇಶ್ ಮಾತನಾಡಿ ತಮ್ಮ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸದಾ ಹಗರಣಗಳನ್ನು ಮಾಡುವ ಭ್ರಷ್ಟರ ವಿರುದ್ಧ ಭ್ರಷ್ಟಮುಕ್ತ ಸಮಾಜದ ಆಶಯ ಹೊತ್ತಿರುವ ಸಿಪಿಐಎಂ ಸ್ಪರ್ಧೆ ಮಾಡುತ್ತಿದ್ದು.ಈ ಚುನಾವಣೆ ಸಂವಿಧಾನ ಬದಲಿಸಲು ಹೊರಟಿರುವವರ ವಿರುದ್ಧದ ಚುನಾವಣೆಯಾಗಿದೆ ಎಂದರು.

    ನಾಮ್ಮ ಪಕ್ಷವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವ ಪಕ್ಷ. ನಮ್ಮ ಹೋರಾಟ ದೇಶದ ಕಾರ್ಮಿಕರ ಪರ, ದುಷ್ಟರ ವಿರುದ್ಧ ಎಂದರು.ಸಿಪಿಐಎಂ ಪಕ್ಷವು ” 0 “ಪರ್ಸೆಂಟ್ ಭ್ರಷ್ಟಾಚಾರದ ಪಕ್ಷ. ಸ್ವಾತಂತ್ರ್ಯ ಹೋರಾಟಗಾರರ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ , ಸಮಾನತೆಯ ಸಮಾಜಕಟ್ಟುವ ನಿಟ್ಟಿನಲ್ಲಿ ದುಡಿಯುತ್ತಿರುವ ಪಕ್ಷ ನಮ್ಮ ಸಿಪಿಐಎಂ ಎಂದರು.

    ಸುದ್ದಿಗೊಷ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಸಮಿತಿ ಕಾರ್ಯದರ್ಶಿಗಳಾದಂತ ಎಸ್ ರುದ್ರರಾಧ್ಯ,ತಾಲ್ಲೂಕು ಸಮಿತಿ ಸದಸ್ಯರಾದಂತ ಎಂ ಚೌಡಯ್ಯ, ತಾಲ್ಲೂಕು ಸಮಿತಿ ಸದಸ್ಯರಾದಂತ ಮಣೀಶ್ ಶರ್ಮ ರವರು ಹಾಜರಿದ್ದರು.

  • ಮನೆಗಾಗಿ ಸಹೋದರರ ಕಿತ್ತಾಟ : ಜೆಸಿಬಿಯಿಂದ ಮನೆ ದ್ವಂಸಗೊಳಿಸಿ ವಿಕೃತಿ ಮೆರೆದ ಸಹೋದರ

    ದೊಡ್ಡಬಳ್ಳಾಪುರ ಮಾ.28 : ಸಾಲ ಮಾಡಿ ಮನೆ ನವೀಕಾರಣ ಮಾಡಿದ್ದೇವೆ. ಇನ್ನೂ ಸಾಲ ತಿರಿಸಿಲ್ಲ ಆಗಲೇ ನಮ್ಮ ಮನೆಯನ್ನು ಜೆ ಸಿ ಬಿ ಯಿಂದ ಹೊಡೆದು ಹುರುಳಿಸಿದ್ದಾರೆ ಎಂದು ಮನೆ ಮಾಲೀಕರಾದ ಭಾಗ್ಯಲಕ್ಷ್ಮಿ ಆರೋಪಿಸಿದ್ದಾರೆ.

     

    ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ಶ್ರೀನಿವಾಸ್ ಮತ್ತು ಭಾಗ್ಯಲಕ್ಷ್ಮಿ ಕುಟುಂಬ ಮನೆಯ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಶ್ರೀನಿವಾಸ್ ಸಹೋದರ ಸಂಪತ್ ಕುಮಾರ್ ಮನೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹುಡಿದ್ದರೂ ಸತತವಾಗಿ ಸಂಪತ್ ಕುಮಾರ್ ನಿತ್ಯ ನಿರಂತರ ಮನೆಯನ್ನು ಕಸಿಯಲು ಪ್ರಯತ್ನನಿಸುತ್ತಿದ್ದು. ಈ ಕುರಿತು ನ್ಯಾಯ ಒದಗಿಸುವಂತೆ ಗ್ರಾಮಾಂತರ ಠಾಣೆ ಮೆಟ್ಟಿಲೇರಿದ್ದಾರೆ.

     

    ಮನೆಯಲ್ಲಿದ ದಿವಾನ, ಕುರ್ಚಿ, ಬೀರು ಸೇರಿದಂತೆ ಹಲವು ಪಿಟೋಪಕಾರಣಗಳನ್ನ ಹಾಗೂ ಮನೆಯ ಕಿಟಕಿ,ಬಾಗಿಲು ಟೈಲ್ಸ್ ದ್ವಾಂಸಗೊಳಿಸಿದ್ದಾರೆ.ನಮ್ಮಗೆ ಯಾವುದೇ ಮಾಹಿತಿ ನೀಡಿಲ್ಲ ಕನಿಷ್ಠ ಪಕ್ಷ ಮಾಹಿತಿ ನೀಡಿದ್ದರೆ ನಾವು ಅವನಾದರೂ ಉಳಿಸಿಕೊಳ್ಳುತ್ತಿದೇವು. ನ್ಯಾಯಾಲಯದಲ್ಲಿ ದಾವೆ ನೆಡೆಯುತ್ತಿದ್ದರು ಇವರ ಅಟ್ಟಹಾಸಕ್ಕೆ ಕೊನೆಯಿಂಲ್ಲದಂಥಗಿದೆ. ಪೊಲೀಸ್ ಕೋರ್ಟ್ ಎಂಬ ಭಯವೇ ಇಲ್ಲದ ಇವರಿಗೆ ತಕ್ಕ ಪಾಠ ಪೊಲೀಸ್ ಇಲಾಖೆ ಕಲಿಸಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

     

    ಶ್ರೀನಿವಾಸ್ ಮಾತನಾಡಿ ಸಹೋದರನ ಮೋಸದ ಫಲ ನಾವು ಇಂದು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ ನಮ್ಮ ಭಾಗದ ಮನೆಯನ್ನು ನಮ್ಮಿಂದ ಮೋಸ, ಹಾಗೂ ದೌರ್ಜನ್ಯದ ಮೂಲಕ ಕಸಿದುಕೊಳ್ಳಲು ಪ್ರಯತ್ನನಿಸುತ್ತಿದರೆ ನಮಗೆ ನ್ಯಾಯಕೊಡಿ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು

     

    ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂಪತ್ ಕುಮಾರ್ ರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ, ತನಿಖೆ ನಂತರ ಸತ್ಯ ಸತ್ಯತೆ ಹೊರಬೀಳಬೇಕಿದೆ.

  • ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ : ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ ಡಾ.ಕೆ.ಸುಧಾಕರ್

    ದೊಡ್ಡಬಳ್ಳಾಪುರ ಮಾ.26 ( ವಿಜಯಮಿತ್ರ ) :    ಭಾರತೀಯ ಜನತಾ ಪಾರ್ಟಿ ವತಿಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು ಈ ಹಿನ್ನಲೆ ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದೇನೆ ಎಂದು ಮಾಜಿ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು

     

    ಮಂಗಳವಾರ   ದೊಡ್ಡಬಳ್ಳಾಪುರ ತಾಲ್ಲೂಕು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನೆಡೆದ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಅವರು ಕೆಲ ಕಾರ್ಯಕರ್ತರು ಮುಖಂಡರಲ್ಲಿ ಒಂದಿಷ್ಟು ಗೊಂದಲ ಇದ್ದು. ಸರ್ವ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಶಾಸಕರ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬೆಂಬಲದೊಂದಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಬಹುಮತಗಳಿಂದ ವಿಜಯ ಸಾಧಿಸುವುದು ಖಂಡಿತ ಎಂದು ತಿಳಿಸಿದರು.

     

     

    ಮಾಜಿ ಸಚಿವರ ಮೇಲೆ ಕಾರ್ಯಕರ್ತರ ಆಕ್ರೋಶ

    ಕಾರ್ಯಕರ್ತ ಸಭೆಯಲ್ಲಿ ಕೆಲ ಮುಖಂಡರು ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಪಕ್ಷವು ಒಂದು ಕುಟುಂಬ, ಪಕ್ಷದ ಕಾರ್ಯಕರ್ತರು ಒಟ್ಟಾಗಿ ಸಭೆ ಸೇರಿದ್ದೇವೆ. ಇಂತಹ ಸಂದರ್ಭಗಳಲ್ಲಿ ಕುಂದು ಕೊರತೆಗಳ ಬಗ್ಗೆ ಮುಖಂಡರು ಅಥವಾ ಕಾರ್ಯಕರ್ತರು ಅಹವಾಲು ಸಲ್ಲಿಸುವುದು ಸರ್ವೇಸಾಮಾನ್ಯವಾಗಿರುತ್ತದೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಸ್ಥಳೀಯ ಶಾಸಕರ ಬೆಂಬಲ ಕಾರ್ಯಕರ್ತರ ಶ್ರಮದ ವಿಶ್ವಾಸವಿದೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದರು

     

     

    ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಮಾತನಾಡಿ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ, ಸಾವಿರಾರು ಕಾರ್ಯಕರ್ತರಲ್ಲಿ ಕೆಲ ಕುಂದುಕೊರತೆಗಳು ಇರುವುದು ಸಹಜ. ಕಾರ್ಯಕರ್ತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದ ವರಿಷ್ಠರು ಹಾಗೂ ರಾಜ್ಯ ನಾಯಕರು ಸೂಚಿಸಿರುವ ಅಭ್ಯರ್ಥಿಯ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಸರ್ವರೂ ಒಮ್ಮತದ ಶ್ರಮಿಸಲಿದ್ದೇವೆ ಅತ್ಯಧಿಕ ಮತಗಳ ಅಂತರದಿಂದ ಡಾಕ್ಟರ್ ಕೆ ಸುಧಾಕರ್ ಅವರನ್ನು ಲೋಕಸಭಾ ಸದಸ್ಯರಾಗಿ ಆಯ್ಕೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ ಎಂದರು

     

     

    ಈ ಸಂದರ್ಭದಲ್ಲಿ ಸ್ಥಳೀಯ ಪಕ್ಷದ ಜಿಲ್ಲಾಧ್ಯಕ್ಷರಾದ ರಾಮಕೃಷ್ಣಯ್ಯ, ತಾಲೂಕು ಅಧ್ಯಕ್ಷರಾದ ನಾಗೇಶ್, ಮುಖಂಡರಾದ ಪುಷ್ಪ ಶಂಕರ್, ಬಂತಿ ವೆಂಕಟೇಶ್, ವಾಣಿ ನಂದಕುಮಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿರಿದ್ದರು.