Blog

  • *ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿವಿಧ ರಾಜಕೀಯ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ*

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾರ್ಚ್ 25(ವಿಜಯಮಿತ್ರ ):- ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಲುವಾಗಿ ಏಪ್ರಿಲ್ 26 ರಂದು ನಡೆಯಲಿರುವ ಮತದಾನದ ಅಂಗವಾಗಿ ಭಾರತ ಚುನಾವಣಾ ಆಯೋಗವು ಪಾರದರ್ಶಕವಾಗಿ ಚುನಾವಣೆ ನಡೆಸಲು ಈ ಕೆಳಕಂಡ ಅಂತರ್ಜಾಲ ತಾಣ(Website)ನ್ನು ಅಳವಡಿಸಿದ್ದು, ಎಲ್ಲಾ ರಾಜಕೀಯ ಪಕ್ಷದವರು ಹಾಗೂ ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

    *ಸುವಿಧ*

    ಈ ಅಂತರ್ಜಾಲ ತಾಣ(Website)ನಲ್ಲಿ ರಾಜಕೀಯ ಪಕ್ಷದವರು ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಚುನಾವಣಾ ಪ್ರಚಾರಕ್ಕಾಗಿ ಹಾಗೂ ವಾಹನಗಳಿಗೆ ವಿವಿಧ ರೀತಿಯ ಅನುಮತಿಗಳನ್ನು ಸುಲಭವಾಗಿ ಹಾಗೂ ಪ್ರಯಾಸವಿಲ್ಲದೇ ಪಡೆಯಲು ನಿರ್ಮಿಸಲಾಗಿರುತ್ತದೆ. ಈ ಅಂತರ್ಜಾಲ ತಾಣ(Website)ವನ್ನು www.ceokarnataka.kar.nic.in ಹಾಗೂ http//164.100.128.75/suvidha_kt ಭೇಟಿ ನೀಡಿ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು.

     

    *ಪಾಂಪ್ಲೇಟ್ ಪ್ರತಿ ನೀಡುವುದು ಕಡ್ಡಾಯ*

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರಿಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಜಾಹಿರಾತಿಗಾಗಿ ಮುದ್ರಿಸುವ ಹ್ಯಾಂಡ್ ಬಿಲ್ಸ್ ಮತ್ತು ಪಾಂಪ್ಲೆಟ್ಸ್ ಮುದ್ರಿಸುವಾಗ ಕಡ್ಡಾಯವಾಗಿ ಪ್ರಿಂಟಿಂಗ್ ಪ್ರೆಸ್‌ ಹೆಸರು ಮತ್ತು ಪ್ರತಿಗಳ ಸಂಖ್ಯೆಯನ್ನು ನಮೂದಿಸುವುದು ಹಾಗೂ ಕಡ್ಡಾಯವಾಗಿ ಮುದ್ರಿಸಲಾದ ಚುನಾವಣಾ ಸಾಮಾಗ್ರಿಯ ಒಂದು ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಂದ ನೇಮಕ ಮಾಡಲಾಗಿರುವ (MCMC) ಎಂ.ಸಿ.ಎಂ.ಸಿ ಅಧಿಕಾರಿಗಳ ತಂಡಕ್ಕೆ ಆಯಾ ದಿನದಂದೇ ನೀಡಬೇಕು.

     

    *ಚುನಾವಣಾ ಪ್ರಚಾರಕ್ಕಾಗಿ ಎಸ್.ಎಂ.ಎಸ್ ಕಳುಹಿಸಲು ಪೂರ್ವಾನುಮತಿ ಕಡ್ಡಾಯ*

    ಯಾವುದೇ ರಾಜಕೀಯ ಪಕ್ಷದಿಂದ ಚುನಾವಣಾ ಪ್ರಚಾರಕ್ಕಾಗಿ ಮೊಬೈಲ್ ಸರ್ವಿಸ್ ಮೂಲಕ ಕಳುಹಿಸುವ ಎಲ್ಲಾ ತರಹದ ಬಲ್ಕ್ ಎಸ್‌ಎಂಎಸ್ ಗಳ ವಿಷಯವನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ ತಂಡದಿಂದ ಪರಿಶೀಲನೆಯಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮೋದನೆ ಪಡೆದು, ನಂತರದಲ್ಲಿ ಮೊಬೈಲ್ ಸರ್ವಿಸ್ ಮೂಲಕ ಉದ್ದೇಶಿತ/ನಿಗದಿತ ಚುನಾವಣಾ ಪ್ರಚಾರ ಕೈಗೊಳ್ಳಬೇಕು. ತಪ್ಪಿದಲ್ಲಿ ಚುನಾವಣಾ ನಿಯಮಗಳಡಿ ನಿಯಮಾನುಸಾರ ಕ್ರಮ ವಹಿಸಲಾಗುವುದು.

     

    *ಕಂಟ್ರೋಲ್ ರೂಂ ಸ್ಥಾಪನೆ*

    ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧಿಸಿದಂತೆ ಜಿಲ್ಲಾ ಕಂಟ್ರೋಲ್ ರೂಮ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿನ ಯಾವುದೇ ರೀತಿಯ ನಗದು ಹಣ ಹಂಚಿಕೆ, ಬೆದರಿಕೆ ಮತ್ತು ಇತ್ಯಾದಿ ನೀತಿ ಸಂಹಿತೆ ವಿಚಾರದಲ್ಲಿ ಉಲ್ಲಂಘನೆಯನ್ನು ಕಂಡುಬಂದಲ್ಲಿ ತಕ್ಷಣವೇ ಟೋಲ್ ಫ್ರೀ ನಂಬರ್ 080-29902025, ಗೆ ದೂರುಗಳನ್ನು ನೀಡಬಹುದಾಗಿರುತ್ತದೆ.

     

     

    *ಸಿ-ವಿಜಿಲ್ ಸಿಟಿಜನ್ ಆ್ಯಪ್ ನಲ್ಲಿ ದೂರು ಸಲ್ಲಿಸಿ*

     

    ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಮಾದರಿ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ದಾಖಲಿಸಲು ಭಾರತ ಚುನಾವಣಾ ಆಯೋಗದ “ಸಿ-ವಿಜಿಲ್ ಸಿಟಿಜನ್ ಆ್ಯಪ್ (cVIGIL Citizen Application)” ಅನ್ನು ಬಳಕೆ ಮಾಡಬಹುದಾಗಿದೆ.

    ಮೊಬೈಲ್‌ ನ ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುವ ಸಿ-ವಿಜಿಲ್ ಸಿಟಿಜನ್ ಆ್ಯಪ್ (CVIGIL Citizen Application)ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮ‌ೂಲಕ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ದೂರುಗಳನ್ನು ದಾಖಲು ಮಾಡಲು ಚುನಾವಣಾ ಆಯೋಗವು ಮತದಾರರಿಗೆ/ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.

    ಫೋನ್‌ ನಲ್ಲಿ ಸೆರೆಹಿಡಿಯಲಾದ ವಿಡಿಯೋ ಅಥವಾ ಫೋಟೋ ರೂಪದ ದಾಖಲೆಗಳ ಮೂಲಕ ಸುಲಭವಾಗಿ ದೂರು ಸಲ್ಲಿಸಬಹುದು. ಈ ಆಪ್‌ ಜಿಪಿಎಸ್ ಆಧಾರಿತವಾಗಿ ಕೆಲಸ ಮಾಡಲಿದ್ದು, ದೂರು ಸಲ್ಲಿಸುವ ವಿಳಾಸ ಚುನಾವಣಾ ಆಯೋಗಕ್ಕೆ ಹಾಗೂ ಸಂಬಂಧಿಸಿದ ಪೊಲೀಸರಿಗೆ ತಿಳಿಯುತ್ತದೆ. ಇದರಿಂದ ಆರೋಪಿತರನ್ನು ಸುಲಭವಾಗಿ ಪತ್ತೆಮಾಡಲು ಸಹಕಾರಿಯಾಗಲಿದೆ.

    ಯಾವ ಸಮಯದಲ್ಲಿ ದೂರನ್ನು ಸಲ್ಲಿಸಬಹುದು.

    ಹಣ ಹಂಚುವುದು, ಉಡುಗೊರೆಗಳು/ಕೂಪನ್‌ಗಳ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್‌ಗಳು/ಬ್ಯಾನರ್‌ಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಬೆದರಿಕೆ, ಅನುಮತಿಯಿಲ್ಲದೆ ವಾಹನಗಳು ಅಥವಾ ಬೆಂಗಾವಲುಗಳನ್ನು ಬಳಕೆ ಮಾಡುವುದು, ಪಾವತಿಸಿದ ಸುದ್ದಿ, ಆಸ್ತಿ ವಿರೂಪಗೊಳಿಸುವಿಕೆ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ, ರ್ಯಾಲಿಗಳಿಗೆ ಸಾರ್ವಜನಿಕರ ಸಾರಿಗೆ ಬಳಕೆ ಸೇರಿದಂತೆ ಇನ್ನಿತರೆ ದೂರುಗಳನ್ನು ಸಲ್ಲಿಸಬಹುದು. ದೂರು ಸಲ್ಲಿಸಿದ ನಂತರ ರಶೀದಿ ದೊರೆಯಲಿದ್ದು, ಅದು ಯಾವ ಹಂತದ ವಿಚಾರಣೆಯಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಮೂಲಕ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೈಜೋಡಿಸಬಹುದು.

    ಸಿ-ವಿಜಿಲ್ ಸಿಟಿಜನ್ ಆಪ್ (cVIGIL Citizen Application)ನಲ್ಲಿ ದಾಖಲಾಗುವ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

    ಸಾರ್ವಜನಿಕರು ಚುನಾವಣಾ ದೂರುಗಳ ಹೆಚ್ಚಿನ ಮಾಹಿತಿಯನ್ನು https://cvigil.eci.gov.in/ ನ ವೆಬ್‌ಸೈಟ್‌ನಲ್ಲಿ ಪಡೆದು ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಜಾಲಿಗೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನೂತನ ಕಾನೂನು ಸಲಹಾ ಕೇಂದ್ರಕ್ಕೆ ಚಾಲನೆ ನೀಡಿದರು.*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾ 25 ( ವಿಜಯಮಿತ್ರ ) : ದೇವನಹಳ್ಳಿ ತಾಲ್ಲೂಕಿನಲ್ಲಿ ಜಾಲಿಗೆ ಗ್ರಾಮದಲ್ಲಿ *ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂಜೀವ್ ಖಾನ್ಹ ನ್ಯಾಯಮೂರ್ತಿಗಳು, ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ರವರು* ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನೂತನ ಕಾನೂನು ಸಲಹಾ ಕೇಂದ್ರಕ್ಕೆ ಚಾಲನೆ ನೀಡಿದರು. ನಂತರ ಉಚಿತ ಕಾನೂನು ನೆರವು ಬಗ್ಗೆ ಗ್ರಾಮಸ್ಥರಿಗೆ ಕಾನೂನು ಜಾಗೃತಿ ಮೂಡಿಸಿ, ರಾಷ್ಟ್ರೀಯ ಕಾನೂನು ‌ಸೇವೆ ಬಗ್ಗೆ ಜನರ ಜೊತೆಗೆ ಮುಕ್ತವಾಗಿ ಸಮಾಲೋಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ  ಡಾ.ಎನ್ ಶಿವಶಂಕರ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ. ಎನ್, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ್ ಸಾಲಿಯಾನ, ಉಪವಿಭಾಗಾಧಿಕಾರಿ ಎ.ಸಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ ಕೆ ರಮೇಶ್, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ , ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಾಲಿಗೆ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

  • *ಚುನಾವಣಾ ನೀತಿ‌ ಸಂಹಿತೆ ಉಲ್ಲಂಘನೆಯಾದಲ್ಲಿ “ಸಿ-ವಿಜಿಲ್ ಸಿಟಿಜನ್ ಆ್ಯಪ್ ನಲ್ಲಿ ದೂರು ಸಲ್ಲಿಸಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 25 (ವಿಜಯಮಿತ್ರ ): ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಮಾದರಿ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ದಾಖಲಿಸಲು ಭಾರತ ಚುನಾವಣಾ ಆಯೋಗದ “ಸಿ-ವಿಜಿಲ್ ಸಿಟಿಜನ್ ಆ್ಯಪ್ (cVIGIL Citizen Application)” ಅನ್ನು ಬಳಕೆ ಮಾಡಬಹುದಾಗಿದೆ.

    ಮೊಬೈಲ್‌ ನ ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುವ ಸಿ-ವಿಜಿಲ್ ಸಿಟಿಜನ್ ಆ್ಯಪ್ (CVIGIL Citizen Application)ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮ‌ೂಲಕ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ದೂರುಗಳನ್ನು ದಾಖಲು ಮಾಡಲು ಚುನಾವಣಾ ಆಯೋಗವು ಮತದಾರರಿಗೆ/ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.

    ಫೋನ್‌ ನಲ್ಲಿ ಸೆರೆಹಿಡಿಯಲಾದ ವಿಡಿಯೋ ಅಥವಾ ಫೋಟೋ ರೂಪದ ದಾಖಲೆಗಳ ಮೂಲಕ ಸುಲಭವಾಗಿ ದೂರು ಸಲ್ಲಿಸಬಹುದು. ಈ ಆಪ್‌ ಜಿಪಿಎಸ್ ಆಧಾರಿತವಾಗಿ ಕೆಲಸ ಮಾಡಲಿದ್ದು, ದೂರು ಸಲ್ಲಿಸುವ ವಿಳಾಸ ಚುನಾವಣಾ ಆಯೋಗಕ್ಕೆ ಹಾಗೂ ಸಂಬಂಧಿಸಿದ ಪೊಲೀಸರಿಗೆ ತಿಳಿಯುತ್ತದೆ. ಇದರಿಂದ ಆರೋಪಿತರನ್ನು ಸುಲಭವಾಗಿ ಪತ್ತೆಮಾಡಲು ಸಹಕಾರಿಯಾಗಲಿದೆ.

    ಯಾವ ಸಮಯದಲ್ಲಿ ದೂರನ್ನು ಸಲ್ಲಿಸಬಹುದು.

    ಹಣ ಹಂಚುವುದು, ಉಡುಗೊರೆಗಳು/ಕೂಪನ್‌ಗಳ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್‌ಗಳು/ಬ್ಯಾನರ್‌ಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಬೆದರಿಕೆ, ಅನುಮತಿಯಿಲ್ಲದೆ ವಾಹನಗಳು ಅಥವಾ ಬೆಂಗಾವಲುಗಳನ್ನು ಬಳಕೆ ಮಾಡುವುದು, ಪಾವತಿಸಿದ ಸುದ್ದಿ, ಆಸ್ತಿ ವಿರೂಪಗೊಳಿಸುವಿಕೆ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ, ರ್ಯಾಲಿಗಳಿಗೆ ಸಾರ್ವಜನಿಕರ ಸಾರಿಗೆ ಬಳಕೆ ಸೇರಿದಂತೆ ಇನ್ನಿತರೆ ದೂರುಗಳನ್ನು ಸಲ್ಲಿಸಬಹುದು. ದೂರು ಸಲ್ಲಿಸಿದ ನಂತರ ರಶೀದಿ ದೊರೆಯಲಿದ್ದು, ಅದು ಯಾವ ಹಂತದ ವಿಚಾರಣೆಯಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಮೂಲಕ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೈಜೋಡಿಸಬಹುದು.

    ಸಿ-ವಿಜಿಲ್ ಸಿಟಿಜನ್ ಆಪ್ (cVIGIL Citizen Application)ನಲ್ಲಿ ದಾಖಲಾಗುವ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

    ಸಾರ್ವಜನಿಕರು ಚುನಾವಣಾ ದೂರುಗಳ ಹೆಚ್ಚಿನ ಮಾಹಿತಿಯನ್ನು https://cvigil.eci.gov.in/ ನ ವೆಬ್‌ಸೈಟ್‌ನಲ್ಲಿ ಪಡೆದು ಕೊಳ್ಳಬಹುದಾಗಿದೆ.

  • *ಸಾರ್ವತ್ರಿಕ ಲೋಕಸಭಾ ಚುನಾವಣೆ-2024: ಅಬಕಾರಿ ಅಕ್ರಮಗಳ ಬಗ್ಗೆ ದೂರು ನೀಡಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್25(ವಿಜಯಮಿತ್ರ ): ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಭಾರತೀಯ ತಯಾರಿಕಾ ಮದ್ಯ ಹಾಗೂ ಅಬಕಾರಿ ವಸ್ತುಗಳ ಹೊಂದುವಿಕೆ, ದಾಸ್ತಾನು, ಸಾಗಾಣಿಕೆ, ಮಾರಾಟ ಮತ್ತು ಸಾರ್ವಜನಿಕರಿಗೆ ಹಂಚುವಿಕೆ ಇತ್ಯಾದಿ ಅಬಕಾರಿ ಅಕ್ರಮಗಳ ಬಗ್ಗೆ ಯಾವುದೇ ದೂರುಗಳು/ಮಾಹಿತಿಗಳು ಕಂಡು ಬಂದಲ್ಲಿ ಅಬಕಾರಿ ಉಪ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ರವರ ಕಛೇರಿಯಲ್ಲಿ ಸ್ಥಾಪಿಸಲಾಗಿರುವ ಅಬಕಾರಿ ನಿಯಂತ್ರಣಾ ಕೊಠಡಿಯ ದೂರವಾಣಿ ಸಂಖ್ಯೆ “080-29787450” ಅಥವಾ ಟೋಲ್ ಫ್ರೀ ದೂರವಾಣಿ ಸಂಖ್ಯೆ: 18004255273 ಗಳಿಗೆ ಕರೆಮಾಡಿ ತಿಳಿಸಬಹುದಾಗಿದೆ.

    ಜೊತೆಗೆ ಜಿಲ್ಲೆಯ ಅಬಕಾರಿ ಇಲಾಖಾ ಅಧಿಕಾರಗಳ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದ್ದು ನೆಲಮಂಗಲ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಪರಮೇಶ್ವರಪ್ಪ ಎನ್.ಹೆಚ್( 9449597036), ಹೊಸಕೋಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಬಸಪ್ಪ ಪೂಜಾರ್(9449597034), ನೆಲಮಂಗಲ ವಲಯದ ಅಬಕಾರಿ ನಿರೀಕ್ಷಕರಾದ ಸುಮಲತಾ ಸಿ.ಕೆ(9449597271), ದೊಡ್ಡಬಳ್ಳಾಪುರ ವಲಯದ ಅಬಕಾರಿ ನಿರೀಕ್ಷಕರಾದ ಅರುಣ್ ಕುಮಾರ್ ವಿ(9449597269), ದೇವನಹಳ್ಳಿ ವಲಯದ ಅಬಕಾರಿ ನಿರೀಕ್ಷಕರಾದ ಸುನಿಲ್ ಬಿ.ಎಂ(9449597268), ಹೊಸಕೋಟೆ ವಲಯದ ಅಬಕಾರಿ ನಿರೀಕ್ಷಕರಾದ ಶೈಲಜಾ ಹೆಚ್.ಆರ್(9449597270), ನೆಲಮಂಗಲ ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಟಿ.ಜೆ ದಿವ್ಯಶ್ರೀ(9449597037), ಹೊಸಕೋಟೆ ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಭರತ್ ಜಿ.ಎನ್(9449597035), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಾದ ಆಶಿಷ್ ಎನ್(9449597031) ಇವರನ್ನು ಸಂಪರ್ಕಿಸಿ ಸಾರ್ವಜನಿಕರು ದೂರು/ಮಾಹಿತಿ ನೀಡಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತರ ಬಲೆಗೆ : ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ ಬೆಂ.ಗ್ರಾ ಜಿಲ್ಲಾ ಲೋಕಾಯುಕ್ತ ಪೊಲೀಸರು.

    ದೊಡ್ಡಬಳ್ಳಾಪುರ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸರು ಸೋಮವಾರ ದಿಢೀರ್ ದಾಳಿ ಮಾಡಿದ್ದಾರೆ.

     

    ಇಡೀ ದಿನ ಹೊಂಚಿಹಾಕಿ ಕಾಯುತ್ತಿದ್ದ ಲೋಕಾಯುಕ್ತ ಪೊಲೀಸರು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಸರ್ವೆಯರ್ ವೀರಣ್ಣ, ರೈತ ನಂದೀಶ್ ಎಂಬುವರಿಂದ 80000 ಹಣವನ್ನು ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಖೆಡ್ಡಾಗೆ ಕೆಡವಿದ್ದಾರೆ.

     

    ಜಿಲ್ಲಾ ಲೋಕಾಯುಕ್ತ ಎಸ್ಪಿ ಪವನ್ ನಜ್ಜೂರು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಮೇಶ್‌ .ಜೆ, ನಂದಕುಮಾರ್ ನೇತೃತ್ವದಲ್ಲಿ ಒಟ್ಟು 8 ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ದಾಳಿ ಮಾಡಿದೆ.

    ದೂರುದಾರ ನಂದೀಶ್ ಎಂಬುವರ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಗ್ರಾಮದ ಮೂರು ಎಕರೆ ಜಮೀನನ್ನು ಪೋಡಿ ಮಾಡಲು ಸರ್ವೆಯರ್ ವೀರಣ್ಣ ಮೇಲಾಧಿಕಾರಿಗಳ ಹೆಸರುಗಳನ್ನು ಹೇಳಿ ಪ್ರತಿ ಎಕರೆಗೆ ಒಂದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಟ್ಟು ಮೂರು ಎಕರೆ ಜಮೀನಿಗೆ ಮೂರು ಲಕ್ಷ ರೂ. ಮಾತನಾಡಿ 20000 ಸಾವಿರ ರೂ.ಹಣವನ್ನು ಮುಂಗಡವಾಗಿ ಪಡೆದಿದ್ದರು. ಸೋಮವಾರ 80ಸಾವಿರ ರೂ. ಹಣವನ್ನು ಪಡೆಯುತ್ತಿದ್ದಾಗ ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ರಮೇಶ್‌.ಜೆ ನೇತೃತ್ವದಲ್ಲಿ ದಾಳಿ ಮಾಡಿ ಸರ್ವೇಯರ್ ವೀರಣ್ಣ ಮತ್ತು ಸಹಚರ ಸತೀಶ್ ಎಂಬುವರ ವಿಚಾರಣೆ ನಡೆಸಿದರು.

     

    ಈ ಕುರಿತು ದೂರುದಾರ ನಂದೀಶ್ ಮಾತನಾಡಿ ನಮ್ಮ ಜಮೀನನ್ನ ಪೋಡಿ ಮಾಡಿಸಿಕೊಳ್ಳಲು ಕಳೆದ ಮೂರು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲೂ ಅಧಿಕಾರಿಗಳ ಬೇಜವಾಬ್ದರಿತನದ ವಿರುದ್ಧ ದೂರು ನೀಡಿದ್ದೆ. ಉಪವಿಭಾಗಾಧಿಕಾರಿಗಳು ಪೋಡಿ ಮಾಡಿಕೊಡುವಂತೆ ಆದೇಶ ನೀಡಿದ್ದರೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಮಾತ್ರ ಮೀನಾಮೇಷ ಎಣಿಸುತ್ತಿದ್ದರು. ಕೊನೆಗೆ ಸರ್ವೇಯರ್ ವೀರಣ್ಣ ಪ್ರತಿ ಎಕರೆಗೆ ಒಂದು ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದರು. 20ಸಾವಿರ ಅಡ್ವಾನ್ಸ್ ಕೊಟ್ಟಿದ್ದೆ. ಬಳಿಕ ಮನನೊಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದೆ. ಅವರ ಸಹಕಾರದಿಂದ ಸೋಮವಾರ 80 ಸಾವಿರ ಹಣ ನೀಡುವಾಗ ರೆಡ್ ಹ್ಯಾಂಡ್ ಆಗಿ ಭ್ರಷ್ಠ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

  • ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಕ್ತಾಯ : ಒಟ್ಟು 53,54,401 ರೂಪಾಯಿ ಹುಂಡಿ ಕಾಣಿಕೆ ಸಂಗ್ರಹ

    ದೊಡ್ಡಬಳ್ಳಾಪುರ ಮಾ.25 ( ವಿಜಯಮಿತ್ರ ) : ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಹುಂಡಿಯಲ್ಲಿ 53,54,401 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.

     

    ಮಾರ್ಚ್ 25 ರಂದು ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ನೆಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 56,800ರೂಪಾಯಿ ಬೆಲೆಬಾಳುವ 1ಕೆಜಿ 540ಗ್ರಾಂ ಬೆಳ್ಳಿ,5900 ರೂಪಾಯಿ ಬೆಲೆಬಾಳುವ 1ಗ್ರಾಂ 300 ಮಿಲಿಗ್ರಾಂ ಚಿನ್ನ, ಒಟ್ಟು ನಗದು 53,54,401 ರೂಪಾಯಿ ಕಾಣಿಕೆ ಸಂಗ್ರಹ ವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ

     

    ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ತಹಶೀಲ್ದಾರ್ ಜಿ ಜೆ ಹೇಮಾವತಿ, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಡಿ. ನಾಗರಾಜು, ಪ್ರಧಾನ ಅರ್ಚಕರಾದ ನಾಗೇಂದ್ರ ಶರ್ಮ, ಸಿಬ್ಬಂದಿಗಳಾದ ನಂಜಪ್ಪ ಸೇರಿದಂತೆ ಕೆನರಾಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.

  • ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತರ ದಾಳಿ : ಲೋಕಾಯುಕ್ತ ಬಲೆಗೆ ಓರ್ವ ಭೂ ಮಾಪಕ ಅಧಿಕಾರಿ

    ದೊಡ್ಡಬಳ್ಳಾಪುರ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತರ ತಂಡ ದಾಳಿ ನಡೆಸಿದ್ದು, ಲೋಕಾಯುಕ್ತ ಬಲೆಗೆ ಓರ್ವ ಭೂ ಮಾಪಕ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ

     

    ದೊಡ್ಡಬಳ್ಳಾಪುರ ತಹಶೀಲ್ದಾರ ಕಚೇರಿಯ ಅವರಣದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದು, ವೀರಣ್ಣ ಭೂ ಮಾಪಕ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ , ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

     

    ಕೆಲವು ತಿಂಗಳ ಹಿಂದೆಯಷ್ಟೇ ದೊಡ್ಡಬಳ್ಳಾಪುರ ಭೂ ದಾಖಲನೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

  • *ಅಪ್ಪು ಹೆಸರಲ್ಲಿ ರನ್ ಫಾರ್ ಪವರ್ ಮ್ಯಾರಥಾನ್; ಶಾಸಕ ಧೀರಜ್ ಮುನಿರಾಜು ಚಾಲನೆ*

    ದೊಡ್ಡಬಳ್ಳಾಪುರ: ಪವರ್‌ ಸ್ಟಾರ್ ಪುನೀತ್ ರಾಜಕುಮಾರ್ ರವರ 49ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಬ್ಲೂ ಸ್ಟೋನ್ ಫಿಟ್ನೆಸ್ ಕ್ಲಬ್ ವತಿಯಿಂದ ಮೊದಲ ಬಾರಿಗೆ ರನ್ ಫಾರ್ ಪವರ್ ಹೆಸರಲ್ಲಿ ಭಾನುವಾರ ಮ್ಯಾರಥಾನ್ ನಡೆಸಲಾಯಿತು. ಮ್ಯಾರಥಾನ್‌ಗೆ ಶಾಸಕ ಧೀರಜ್ ಮುನಿರಾಜು ಫ್ಲ್ಯಾಗ್ ಆಫ್‌ ಮಾಡಿದರು.

     

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬ್ಲೂ ಸ್ಟೋನ್ ಫಿಟ್ನೆಸ್ ಕ್ಲಬ್ ಮಾಲೀಕರಾದ ಕೆ ಸಿ ಲಿಂಗೇಗೌಡ (ಮಣಿ) ಮಾತಾನಾಡಿ ಬಾಡಿ ಫಿಟ್ನೆಸ್‌ಗೆ ನಟ ಪುನೀತ್ ರಾಜಕುಮಾರ್ ಆದ್ಯತೆ ನೀಡುತ್ತಿದ್ದರು. ಯೋಗ, ವ್ಯಾಯಾಮ‌, ರನ್ನಿಂಗ್ ಮಾಡುವುದರಿಂದ ದೇಹ ಸಧೃಡವಾಗಿರಲು ಸಾಧ್ಯವಾಗುತ್ತದೆ. ಹೀಗಾಗಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮ್ಯಾರಾಥಾನ್‌ ಆಯೋಜಿಸಲಾಗಿದೆ ಎಂದರು.

     

    ಶಾಸಕ ಧೀರಜ್ ಮುನಿರಾಜು ಮಾತಾನಾಡಿ, ವ್ಯಾಯಾಮ ಮಾಡುವಾಗ ಅಪ್ಪು ಸತ್ತಿದ್ದು ಎಂಬ ಸುದ್ದಿ ಅಳಿಸಬೇಕು. ವ್ಯಾಯಾಮ‌ ಮಾಡುವುದರಿಂದ ಸಾವು ಬರುವುದಿಲ್ಲ. ಹುಟ್ಟಿದ ಮನುಷ್ಯನಿಗೆ ಒಂದಲ್ಲ‌ ಒಂದು ದಿನ‌ ಸಾವು ಬಂದೇ ಬರುತ್ತದೆ. ಆದರೆ ಅಲ್ಲಿಯವರೆಗೂ ನಾವು ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು. ಈ ಬಾರಿಯ ಮ್ಯಾರಥಾನ್‌ನಲ್ಲಿ ನಾನು ಉತ್ಸಾಹದಿಂದ ಪಾಲ್ಗೊಂಡಿದ್ದೇನೆ ಎಂದರು.

     

    ಕಾರ್ಯಕ್ರಮದಲ್ಲಿ ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಂಡಿದ್ದ ಚಿತ್ರ ನಟ ಡಾ. ಶಿವರಾಜ್ ಕುಮಾರ್ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಚಿನ್ನೇಗೌಡ, ಪುನೀತ್ ರಾಜಕುಮಾರ್ ಕುಟುಂಬಸ್ಥರಾದ ಲಕ್ಷ್ಮೀ, ಗೋವಿಂದ ರಾಜು,ಶ್ಯಾನ್  ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದವರಿಗೆ ಅಭಿನಂದನೆಸಲ್ಲಿಸಿದರು.

     

    ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಧನ್ವಂತರಿ ಕ್ಲಿನಿಕ್ ಮತ್ತು ಮೆಡಿಕಲ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಅಕ್ಷತಾ ಮತ್ತು ತ್ರಿಭುವನ್ ನೇತೃತ್ವದಲ್ಲಿ ನೆಡೆಸಿಕೊಟ್ಟರು.

     

    ಪವರ್ ಸ್ಟಾರ್ ಹೆಸರಲ್ಲಿ ಆಯೋಜಿಸಿದ್ದ ರನ್ ಫಾರ್ ಪವರ್ ಮ್ಯಾರಥಾನ್‌ ಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಕ್ಕಳು, ಮಹಿಳೆಯರು, ಯುವಕರು ಹಾಗೂ ವೃದ್ಧರು ಸೇರಿದಂತೆ ಸುಮಾರು 600 ಜನ ಭಾಗವಹಿಸಿದ್ದರು. ಎಂದು ಮ್ಯಾರಥಾನ್ ಆಯೋಜಕರಾದ ಮಾನಸ ಕೆ ಲ್ ಗೌಡ ಮಾಹಿತಿ ನೀಡಿದರು.

     

    ಇದೇ ವೇಳೆ ಅಪ್ಪು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಪ್ರಮಾಣ ಸ್ವೀಕರಿಸಲಾಯಿತು. ಮ್ಯಾರಥಾನ್‌ನಲ್ಲಿ ಮೊದಲ ಸ್ಥಾನ ಪಡೆದವರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಕೆಲ ಸಾಧಕರಿಗೆ ಬಹುಮಾನ ನೀಡಿ ಸನ್ಮಾನಿಸಿಸಲಾಯಿತು.

     

    ಕಾರ್ಯಕ್ರಮದಲ್ಲಿ ಬ್ಲೂ ಸ್ಟೋನ್ ಫಿಟ್ನೆಸ್ ಕ್ಲಬ್ ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

  • ಆರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮೊದಲ ಪ್ರಯತ್ನದಲ್ಲೇ ಗೆಲುವು : ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ( NAAC) ವತಿಯಿಂದ ಸಂಸ್ಥೆಗೆ “A” ಶ್ರೇಣಿ

    ದೊಡ್ಡಬಳ್ಳಾಪುರ ಮಾ.23 ( ವಿಜಯ ಮಿತ್ರ ) : ಆರ್. ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯವು 23 ವರ್ಷಗಳ ನಂತರ ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್ ) ವತಿಯಿಂದ ನಮ್ಮ ಸಂಸ್ಥೆಗೆ “A”ಶ್ರೇಣಿ ನೀಡಿ ಗೌರವಿಸಿದೆ ಎಂದು ದೇವರಾಜ್ ಅರಸ್ ಟ್ರಸ್ಟ್ ನ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು.

    ಆರ್ ಎಲ್ ಜಾಲಪ್ಪ ತಾಂತ್ರಿಕ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಯಾವುದೇ ಉನ್ನತ ವಿದ್ಯಾ ಸಂಸ್ಥೆಗಳ ಗುಣಮಟ್ಟವನ್ನು ಹಲವು ಮನದಂಡಗಳ ಆಧಾರದಮೇಲೆ ನಿರ್ಧರಿಸುವ ಅಧಿಕಾರವನ್ನು ನ್ಯಾಕ್ ಸಂಸ್ಥೆಯು ಹೊಂದಿದ್ದು ದ. ನಮ್ಮ ಆರ್‌ಎಲ್‌ ಜಾಲಪ್ಪ ತಾಂತ್ರಿಕ ವಿದ್ಯಾ ಸಂಸ್ಥೆಯು ಪ್ರಾರಂಭಗೊಂಡು 23 ವರ್ಷ ಕಳೆದಿದೆ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆಗೆ ನ್ಯಾಕ್ ಮಂಡಳಿಯ ತ್ರಿಸದಸ್ಯರ ತಂಡ ಭೇಟಿಕೊಟ್ಟು, ನಮ್ಮ ಸಂಸ್ಥೆಯ ಎಲ್ಲಾ ವಿಭಾಗಗಳ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಿದ ನಂತರ ನಾಲ್ಕು ಅಂಕಗಳಿಗೆ 3.24 ಸಿಜಿಪಿಎ ಅಂಕಗಳೊಂದಿಗೆ ನಮ್ಮ ಸಂಸ್ಥೆಗೆ ಎ ಶ್ರೇಣಿ ನೀಡಲಾಗಿದ್ದು. ನಮ್ಮ ಸಂಸ್ಥೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

     

    **ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ*

     

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಬಯಸಿ ಬೆಂಗಳೂರು ಸೇರುವುದನ್ನು ತಪ್ಪಿಸುವುದು ಹಾಗೂ ಪೋಷಕರ ಕೈಗೆಟಕುವ ದರದಲ್ಲಿ ಉತ್ತಮ ಶಿಕ್ಷಣ ನೀಡುವುದು ಆರ್ ಎಲ್ ಜಾಲಪ್ಪನವರ ಆಶಯವಾಗಿತ್ತು. ಅಂತೆಯೇ ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಗುರಿಯನ್ನು ನಮ್ಮ ಸಂಸ್ಥೆ ನಿರ್ವಹಿಸುತ್ತಿದ್ದು. ನಮ್ಮ ಕಾಲೇಜು ವಿಟಿಯು ಅಡಿಯಲ್ಲಿ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು, ಇತರೆ ಖಾಸಗಿ ವಿದ್ಯಾ ಸಂಸ್ಥೆಗಳಿಗಿಂತ ವಿಭಿನ್ನ ವಿಶೇಷತೆಯನ್ನು ಹೊಂದಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಲವು ಸೌಕರ್ಯಗಳನ್ನು ಕಲ್ಪಿಸಿದ್ದು. ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶವನ್ನು ನಮ್ಮ ತಂಡ ಹೊಂದಿದೆ ಎಂದರು.

     

    *ಟ್ರಸ್ಟ್ ನ ಪದಾಧಿಕಾರಿಗಳ ಸಹಕಾರದಿಂದ ಕಾಲೇಜಿಗೆ ಮರುಜೀವ*

     

     

    ಟ್ರಸ್ಟ್ ನ ಪದಾಧಿಕಾರಿಗಳ ಸಹಕಾರದಿಂದ ಕಾಲೇಜು ನವೀಕರಣಕ್ಕೆ ನೂತನ ಅಧ್ಯಕ್ಷರಾದ ಜಿ.ಎಚ್.ನಾಗರಾಜು, ಕಾರ್ಯದರ್ಶಿಗಳಾದ ಹನುಮಂತ ರಾಜು ಹಾಗೂ ಇತರೆ ಒಂಬತ್ತು ಸದಸ್ಯರನ್ನು ಒಳಗೊಂಡ ಸಮಿತಿಯ ಸಹಕಾರದಿಂದ 23 ವರ್ಷದ ಹಳೆಯ ವಿದ್ಯಾಸಂಸ್ಥೆಯನ್ನು ನೂತನ ರೀತಿಯಲ್ಲಿ ಸಂಪೂರ್ಣ ಆಧುನಿಕರಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರಯೋಗಾಲಯ, ತರಗತಿ ಕೊಠಡಿಗಳು, ಆಟದ ಮೈದಾನ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು

     

     

    ಆರ್ ಜೆ ಐ ಟಿ ಪ್ರಾಂಶುಪಾಲರಾದ ಡಾ. ಕೆ.ವಿಜಯ ಕಾರ್ತಿಕ್ ಮಾತನಾಡಿ ಕಳೆದ 5 ವರ್ಷಗಳ ಸತತ ಪ್ರಯತ್ನ ಇಂದು ಫಲ ಕೊಟ್ಟಿದೆ. ನಮ್ಮ ಸಂಸ್ಥೆಗೆ ಇಂದು ಲಭಿಸಿರುವ ಎ ಶ್ರೇಣಿಯ ಗೌರವಕ್ಕಾಗಿ ನಮ್ಮ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಸಾಕಷ್ಟು ಶ್ರಮ ಪಟ್ಟಿದೆ.ಹಲವಾರು ಉತ್ತಮ ಬದಲಾವಣೆಗಳ ಫಲಿತಾಂಶ ನ್ಯಾಕ್ ಕಮಿಟಿ ನಮಗೆ ನೀಡಿರುವ A ಶ್ರೇಣಿಯಾಗಿದೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 15ಕ್ಕೂ ಹೆಚ್ಚು ಸ್ಮಾರ್ಟ್ ಬೋರ್ಡ್ ಗಳ ಮೂಲಕ ಪರಿಣಾಮಕಾರಿ ವಿದ್ಯಾಭ್ಯಾಸಕ್ಕೆ ಮುನ್ನುಡಿ ಬರೆದಿದ್ದೇವೆ. ಸಾಕಷ್ಟು ಬದಲಾವಣೆ ಹಾಗೂ ಉತ್ತಮ ಅಂಶಗಳೊಂದಿಗೆ ಶಿಕ್ಷಣ ಕ್ರಾಂತಿ ಮಾಡಲು ಹೊರಟಿದ್ದೇವೆ. ನಮ್ಮ ಜವಾಬ್ದಾರಿ ಸಮಾಜಕ್ಕೆ ಉತ್ತಮ ಇಂಜಿನಿಯರ್ಸ್ ಗಳನ್ನು ನೀಡುವುದಾಗಿದೆ ಎಂದರು.

     

    ಮಾನವ ಸಂಪನ್ಮೂಲ ಅಧಿಕಾರಿ ಪ್ರೊಫೆಸರ್ ಎನ್ಎಸ್ ಬಾಬು ರೆಡ್ಡಿ ಮಾತನಾಡಿ ನಮ್ಮ ಸಂಸ್ಥೆಯಿಂದ ಪ್ರತಿ ವರ್ಷವೂ ನೂರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದಾರೆ.ನಮ್ಮ ಮುಖ್ಯ ಉದ್ದೇಶ ಶಿಕ್ಷಣ ಪಡೆಯಲು ನಮ್ಮ ಸಂಸ್ಥೆಗೆ ಬರುವ ಪ್ರತಿ ಮಗುವಿಗೂ ಸೂಕ್ತ ಹುದ್ದೆ ಕಲ್ಪಿಸುವುದೇ ಆಗಿದೆ. ನಮ್ಮ ಸಂಸ್ಥೆಗೆ ಭೇಟಿ ಕೊಡುವ ಕಂಪನಿಗಳಲ್ಲಿ ಪ್ರಾರಂಭಿಕವಾಗಿ 3.5 ಲಕ್ಷ ದಿಂದ 30 ಲಕ್ಷದ ಉದ್ಯೋಗವಕಾಶಗಳನ್ನು ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ಗಳಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಉದ್ಯೋಗ ಪಡೆಯಲು ಸಹಕಾರ ನೀಡಲಾಗುತ್ತದೆ ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿ ಬೇಕಿರುವ ಸಂವಹನ ಕೌಶಲ್ಯ, ಸಂದರ್ಶನ ಕೌಶಲ್ಯ, ಕಂಪ್ಯೂಟರ್ ಕೌಶಲ್ಯ, ತಂತ್ರಜ್ಞಾನ ಕೌಶಲ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಪರಿಣಿತಿ ನೀಡಲಾಗುತ್ತಿದೆ ಎಂದರು

     

    *ಆರ್. ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಸಮಾಜಮುಖಿ ಕಾರ್ಯ*

     

    ಗ್ರಾಮೀಣ ಭಾಗದ ನಿರುದ್ಯೋಗ ಯುವತಿಯರು ಸ್ವಾವಲಂಬಿ ಜೀವನ ನೆಡೆಸಲು ಅಗರಬತ್ತಿ ತಯಾರಿಕ ತರಬೇತಿ, ವಾಣಿಜ್ಯ ಬೆಳೆಯಾದ ಹಣಬೆ ಬೇಸಾಯದ ತರಬೇತಿ, ಜೇನುಸಾಕಾಣಿಕೆ ಮುಂತಾದ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಏನ್. ಎಸ್. ಬಾಬು ರೆಡ್ಡಿ ತಿಳಿಸಿದರು.

     

    ಉಪ ಪ್ರಾಂಶುಪಾಲ ಡಾಕ್ಟರ್ ಶಿವಪ್ರಸಾದ್, ಪದವಿ ಕಾಲೇಜು ಪ್ರಾಧ್ಯಾಪಕ ಕೆಆರ್ ರವಿಕಿರಣ್, ನ್ಯಾಕ್ ಸಂಯೋಜಕರು,ಎಇಇ ಐ.ಎಂ. ರಮೇಶ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

     

    .

  • ಜಿಲ್ಲೆಯಾದ್ಯಂತ ಚುನಾವಣಾ ಅಕ್ರಮಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ – ಜಿಲ್ಲಾಧಿಕಾರಿ ಡಾ. ಏನ್. ಶಿವಶಂಕರ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾ.22 ( ವಿಜಯಮಿತ್ರ ) : ಈವರೆಗೆ 45 ಪ್ರಕರಣಗಳಲ್ಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ 7.5 ಕೋಟಿ ರೂ ಮೌಲ್ಯದ ಮದ್ಯ ಹಾಗೂ 9 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 10 ಕೆ.ಜಿ ಗಾಂಜಾವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.

    ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 21 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಎಸ್.ಎಸ್.ಟಿ ತಂಡ ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ಹಾಗೂ 104 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ಸಿ.ಸಿ ಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಪ್ರತಿ ಚಲನವಲನಗಳನ್ನು ನಿಗಾ ವಹಿಸಲಾಗುತ್ತಿದೆ.

     

    ಜಿಲ್ಲೆಯಾದ್ಯಂತ ಚುನಾವಣಾ ಅಕ್ರಮಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಇಲ್ಲಿಯವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,91,762 ಮತದಾರರು ಇದ್ದಾರೆ. ಇದರಲ್ಲಿ 4,40,884 ಪುರುಷರು,4,50,737 ಮಹಿಳೆಯರು ಹಾಗೂ 141 ಇತರೆ ಮತದಾರರು ಇದ್ದಾರೆ. ಮಾರ್ಚ್ 25ರವರೆಗೆ ಮತದಾರರ ಪಟ್ಟಿಗೆ ನೋಂದಾಯಿಸಲು ಅವಕಾಶವಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದ್ದು, ಎಲ್ಲಾ ಮತದಾರರಿಗೆ ಎಪಿಕ್ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.