Blog

  • *ನ್ಯಾಯಬೆಲೆ ಅಂಗಡಿಗಳು ರಜಾದಿನ ಹೊರತುಪಡಿಸಿ ಉಳಿದ ದಿನಗಳು ತೆರೆದಿರುವುದು ಕಡ್ಡಾಯ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 22 (ವಿಜಯ ಮಿತ್ರ ): ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲ್ಲೂಕಿನ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆಂದರೆ, ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶದಂತೆ, ಸರ್ಕಾರಿ ರಜಾದಿನ ಹಾಗೂ ಪ್ರತಿ ಮಂಗಳವಾರ ಹೊರತುಪಡಿಸಿ, ಉಳಿದಂತೆ, ಎಲ್ಲಾ ದಿನಗಳು ಬೆಳಗ್ಗೆ 7 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಬೇಕಾಗಿರುತ್ತದೆ ಹಾಗೂ ಮಾಹೆಯ ಕೊನೆಯವರೆಗೂ ಪಡಿತರ ವಿತರಣೆಮಾಡಬೇಕಾಗಿರುತ್ತದೆ. ಒಂದು ವೇಳೆ ತಾಲ್ಲೂಕುಗಳಲ್ಲಿ ಈ ಬಗ್ಗೆ ಅಂದರೆ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶದಂತೆ, ಕಾರ್ಯನಿರ್ವಹಿಸದೇ ಇದ್ದಲ್ಲಿ ದೇವನಹಳ್ಳಿ ತಾಲ್ಲೂಕು ಆಹಾರ ಶಿರಸ್ತೇದಾರ್ ಶ್ರೀಧರ್.ಎನ್(9945724948), ದೇವನಹಳ್ಳಿ ತಾಲ್ಲೂಕು ಆಹಾರ ನಿರೀಕ್ಷಕರು ಕೆ.ಶ್ಯಾಮ್‌ಪ್ರಸಾದ್(9448376570), ದೊಡ್ಡಬಳ್ಳಾಪುರ ತಾಲ್ಲೂಕು ಆಹಾರ ಶಿರಸ್ತೇದಾರ್ ಶಶಿಕಲಾ.ಈ(9110672505), ದೊಡ್ಡಬಳ್ಳಾಪುರ ತಾಲ್ಲೂಕು ಆಹಾರ ನಿರೀಕ್ಷಕರು ರಾಜು ಸಬಸ್ಟೀನ್(9945275227), ಹೊಸಕೋಟೆ ತಾಲ್ಲೂಕು ಆಹಾರ ಶಿರಸ್ತೇದಾರ್ ವಿ ನಟರಾಜ್ ರೆಡ್ಡಿ(9902294444), ಹೊಸಕೋಟೆ ತಾಲ್ಲೂಕು ಆಹಾರ ನಿರೀಕ್ಷಕರು ಬಿ.ಶಿವಕುಮಾರ್(9902805563), ನೆಲಮಂಗಲ ತಾಲ್ಲೂಕು ಆಹಾರ ಶಿರಸ್ತೇದಾರ್ ಕೃಷ್ಣಮೂರ್ತಿ(8660184016), ನೆಲಮಂಗಲ ತಾಲ್ಲೂಕು ಆಹಾರ ನಿರೀಕ್ಷಕರು ಜಯಕುಮಾರ್(9886781111), ನೆಲಮಂಗಲ ತಾಲ್ಲೂಕು ಆಹಾರ ನಿರೀಕ್ಷಕರು ಸೈಯದ್ ಅಮಾನುಲ್ಲಾ(9036434552)

    ತಾಲ್ಲೂಕು ಆಹಾರ ಶಾಖೆ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • 7 ದಿನಗಳಲ್ಲಿ ರೈತರ ಭೂ ದರನಿಗದಿ ಕುರಿತು ಅಧಿಕಾರಿಗಳ ಸಭೆ : ರೈತರ ಭೂಮಿಗೆ ಸೂಕ್ತ ದರ ನೀಡದ ಪಕ್ಷದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರದ ಎಚ್ಚರಿಕೆ

    ದೊಡ್ಡಬಳ್ಳಾಪುರ ಮಾ.22 ( ವಿಜಯಮಿತ್ರ ) : ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸೂಕ್ತ ಪರಿಹಾರ ನೀಡದ ಹೊರತು ಭೂಮಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಏಳು ದಿನಗಳ ಗಡುವು ಪಡೆದಿರುವ ಅಧಿಕಾರಿಗಳು ನಮ್ಮ ಸೂಕ್ತ ದರ ನಿಗದಿ ಮಾಡದ ಪಕ್ಷದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಮಾಜಿ ಟಿಎಪಿಎಂಸಿಎಸ್ ಅಧ್ಯಕ್ಷರಾದ ಎಂ.ಆನಂದ್ ತಿಳಿಸಿದರು

    ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನಬಂಡೆಯ ಸಮೀಪ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರ ಧರಣಿ ಕಳೆದ 69 ದಿನಗಳಿಂದ ನಡೆಯುತ್ತಿದ್ದು. ಈ ಕುರಿತು ಇಂದು ಧರಣಿ ಸ್ಥಳದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ 4-5 ಬಾರಿ ಅಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಿದ್ದೇವೆ. ಪ್ರತಿಭಾರಿಯೂ ಅಧಿಕಾರಿಗಳು ರೈತರ ಭೂಮಿಗೆ ಸೂಕ್ತ ಪರಿಹಾರ ದರ ನಿಗದಿಪಡಿಸುವಲ್ಲಿ ವಿಫಲರಾಗಿದ್ದು. ಇದು ಅಧಿಕಾರಿಗಳಿಗೆ ರೈತರು ನೀಡುತ್ತಿರುವ ಕೊನೆಯ ಅವಕಾಶವಾಗಿದೆ. ಅಧಿಕಾರಿಗಳು ರೈತರ ಭೂಮಿಗಳಿಗೆ ಸೂಕ್ತ ಪರಿಹಾರ ಧನ (1:4) ನಿಗದಿಪಡಿಸದೆ ಇದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಸರ್ವಾನುಮತದಿಂದ ಬಹಿಷ್ಕರಿಸಲಾಗುವುದು ಎಂದರು.

    ನಮ್ಮ ಗ್ರಾಮಗಳಲ್ಲಿ ಈಗಾಗಲೇ ಎತ್ತಿನಹೊಳೆ ಕಾಮಗಾರಿ ನೆಡೆಯುತ್ತಿದ್ದು. ಕಾಮಗಾರಿ ಪ್ರಕ್ರಿಯೆಗೆ ಒಳಪಟ್ಟ ರೈತರ ಭೂಮಿಗೆ 1:4ದರ ನಿಗದಿ ಪಡಿಸಿದ್ದಾರೆ. ಅಂತೆಯೇ ಕೆಐಎಡಿಬಿ ಸಹ ನಮ್ಮ ರೈತರ ಭೂಮಿಗೆ ಸೂಕ್ತ ದರ ನಿಗದಿ ಮಾಡಲಿ ಎಂದು ತಿಳಿಸಿದರು.

     

    ರೈತ ಮುಖಂಡರಾದ ರಾಮಾಂಜಿನಪ್ಪ ಮಾತನಾಡಿ ಕೊನಘಟ್ಟ, ಕೋಡಿಹಳ್ಳಿ,ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಗ್ರಾಮಗಳ ರೈತರ 971-00 ಎಕರೆ ಭೂಮಿಯ ಸ್ವಾದಿನಕ್ಕೆ ಕೆಐಎಡಿಬಿ ಮುಂದಾಗಿದ್ದು 2013 ರ ಕಾಯ್ದೆಯ ಮಾನದಂಡದಂತೆ 1:4 ರಂತೆ ಬೆಲೆ ನಿಗದಿ ಮಾಡುವ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ, ರೈತರ ಪಾಲವತ್ತಾದ ಭೂಮಿಯನ್ನು ಕಬಳಿಸುತ್ತಿರುವ ಕೆಐಎಡಿಬಿ ಅಧಿಕಾರಿಗಳಿಗೆ ಸೂಕ್ತ ದರ ನಿಗದಿ ಪಡಿಸಲು ಸಾಧ್ಯವಗುತ್ತಿಲ್ಲ. ಅಧಿಕಾರಿಗಳು ಕೆಲ ಏಜೇಂಟ್ ಗಳ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಕೆಲ ಎಜೇಂಟ್ ಗಳ ಸಮಸ್ಯೆಯಿಂದಾಗಿ 704 ರೈತರ ಜೀವನ ಹಾಳಾಗುತ್ತಿದೆ. ಸರ್ಕಾರ ರೈತರ ಪರ ನಿಲುವು ತೆಗೆದುಕೊಳ್ಳಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ ಕೆಐಎಡಿಬಿ ಅಧಿಕಾರಿಗಳು ಕೆಲ ಎಜೇಂಟ್ ಮೂಲಕ ರೈತರ ಭೂ ದಾಖಲಾತಿಗಳನ್ನು ಸಂಗ್ರಹ ಮಾಡಿಸಿದ್ದು. ಈ ಕುರಿತು ಮಾಹಿತಿ ಲಭ್ಯವಾದ ಹಿನ್ನಲೆ ಅಂತಹ ರೈತರಿಗೆ ಸೂಕ್ತ ದರ ನಿಗದಿ ಮಾಡದೇ ಹಣ ಬಿಡುಗಡೆ ಮಾಡದಂತೆ ಒತ್ತಾಯ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದು ಮಾರ್ಚ್ 7ರವರೆಗೂ ಗಡುವು ಪಡೆದಿದ್ದರೆ.ರೈತರ ಭೂಮಿಗೆ ದರ ನಿಗದಿ ಕುರಿತು ಇನ್ನೂ 7 ದಿನಗಳಲ್ಲಿ ಮತ್ತೊಂದು ಸಭೆ ಕರೆ ಕರೆದಿದ್ದು. ಅಧಿಕಾರಿಗಳು ರೈತರ ಪರ ಉತ್ತಮ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು.

     

    ಈ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರಾದ ನರಸಿಂಹ ಮೂರ್ತಿ, ರಾಮಾಂಜಿನಪ್ಪ, ವೆಂಕಟೇಶ್, ರಮೇಶ್, ಮಹೇಶ್,ನಾಗರಾಜು,ಕೃಷ್ಣಪ್ಪ ಕೋಡಿಹಳ್ಳಿ,ಬೈರೇಗೌಡ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕಿ ಸಾವು : ವಾರಸುದಾರರ ಹುಡುಕಾಟದಲ್ಲಿ ರೈಲ್ವೆ ಪೊಲೀಸ್

    ದೊಡ್ಡಬಳ್ಳಾಪುರ (ವಿಜಯ ಮಿತ್ರ ): ತಾಲ್ಲೂಕಿನ ಬಾಶೆಟ್ಟಿಹಳ್ಳಿ ರೈಲ್ವೆ ಬ್ರಿಡ್ಜ್ ಹತ್ತಿರ ಅಪರಿಚಿತ ಗಂಡಸು ಸುಮಾರು 35 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

     

    ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 61/2024 ಕಲಂ 174 Cr.P.C ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ **ಚಹರೆ- 5’5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಕೋಲು ಮುಖ, ಅಗಲವಾದ ಹಣೆ, ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು, ಇದ್ದು ಧೃಡ ಮೈಕಟ್ಟು,ಹೊಂದಿರುತ್ತಾರೆ.ಎಂದು ತಿಳಿಸಿದೆ

     

    ಮೃತ ವ್ಯಕ್ತಿಯ ಬಟ್ಟೆಗಳು- ನೀಲಿ ಬಿಳಿ ಚೆಕ್ಸ್ ಬಣ್ಣದ ಹರಿದ ಟೀ ಶರ್ಟ, ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸುತ್ತಾನೆ.ಮೆರೂನ್ ಬಣ್ಣದ ಅಂಡರ್ ವೇರ್ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ

  • ಗ್ರಾಮಗಳಿಗೆ ಸಂಪರ್ಕ ರಸ್ತೆ ಸಮಸ್ಯೆ: ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

    ದೊಡ್ಡಬಳ್ಳಾಪುರ ಮಾ 21 ( ವಿಜಯ ಮಿತ್ರ ) : ಚಿಕ್ಕ ತುಮಕೂರು, ಮಾಜರಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಸ್ಥಳೀಯವಾಗಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಅಗ್ರಹಿಸಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಿದರು.

     

    ನಗರ ಭಾಗದಿಂದ ಚಿಕ್ಕತುಮಕೂರು ಗ್ರಾಮಕ್ಕೆ ಸೇರುವ ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು ಸದರಿ ರಸ್ತೆಯನ್ನು ಗ್ರಾಮಸ್ಥರ ಅನುಕೂಲಕ್ಕೆ ನಿರ್ಮಿಸಿಕೊಡುವಂತೆ ಸ್ಥಳೀಯ ಮುಖಂಡರಾದ ಟಿ. ರಂಗರಾಜು, ಬಿ. ಸಿ.ಆನಂದ್, ಆದಿತ್ಯ ನಾಗೇಶ್ ಸೇರಿದಂತೆ ಹಲವು ರೈತರ ಮುಖಂಡರ ನೇತೃತ್ವದಲ್ಲಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಲಾಯಿತು.ಈ ಸಂದರ್ಭದಲ್ಲಿ ಬಮುಲ್ ನಿರ್ದೇಶಕರಾದ ಬಿ ಸಿ ಆನಂದ್ ಮಾತನಾಡಿ ಸ್ಥಳೀಯವಾಗಿ ಸಂಪರ್ಕ ರಸ್ತೆಯ ಅವಶ್ಯಕತೆ ಹೆಚ್ಚಾಗಿದ್ದು . ಈ ರಸ್ತೆ ನಿರ್ಮಾಣ ಮಾಡುವುದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ. ಆದರೆ ಸ್ಥಳೀಯ ಕೆಲ ಕಿಡಿಗೇಡಿಗಳು ರಸ್ತೆ ನಿರ್ಮಾಣ ಪ್ರಧಿಕಾರಕ್ಕೆ ಸುಳ್ಳು ಮಾಹಿತಿ ರವಾನಿಸುವ ಮೂಲಕ ಪ್ರಾಧಿಕಾರದ ದಿಕ್ಕು ತಪ್ಪಿಸಿದ್ದಾರೆ. ಸ್ಥಳೀಯ ಎಲ್ಲಾ ಗ್ರಾಮಸ್ಥರು ರಸ್ತೆ ತಡೆ ಮಾಡುವ ಮೂಲಕ ಗ್ರಾಮಗಳಿಗೆ ಸಂಪರ್ಕ ರಸ್ತೆಯ ಅವಶ್ಯಕತೆ ಎಷ್ಟಿದೆ ಎಂಬುದನ್ನು ಕುರಿತು ಪ್ರಾಧಿಕಾರಕ್ಕೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಪ್ರಾಧಿಕಾರಾದ ಮುಖ್ಯಸ್ಥರು ಸಂಪರ್ಕ ರಸ್ತೆ ನಿರ್ಮಿಸುವ ಭರವಸೆ ನೀಡಿರುವ ಹಿನ್ನಲೆ ನಮ್ಮ ಈ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ತಿಳಿಸಿದರು.

    ಗ್ರಾಮಾಂತರ ಪೊಲೀಸ್ ವೃತ್ತ ನೀರಿಕ್ಷಕರಾದ ಸಾದಿಕ್ ಪಾಷಾ ನೇತೃತ್ವದ ತಂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಯಿತು.

     

    ಸ್ಥಳೀಯ ಮುಖಂಡರಾದ ಆದಿತ್ಯ ನಾಗೇಶ್ ಮಾತನಾಡಿ ನಗರದಿಂದ ಚಿಕ್ಕ ತುಮಕೂರು ಮಾರ್ಗದ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು.ಪ್ರತಿದಿನ ಈ ಮಾರ್ಗವಾಗಿ 3000ಕ್ಕೂ ಅಧಿಕ ಸಾರ್ವಜನಿಕರು ಸಂಚಾರ ನೆಡೆಸುತ್ತಾರೆ . ಸ್ಥಳೀಯವಾಗಿ ಸಂಚಾರ ನೆಡೆಸಲು ಈ ರಸ್ತೆ ಅನಾನುಕೂಲವಾಗಿದ್ದು ಈ ಸಂಬಂಧ ಇಂದು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದೇವೆ. ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಬಿಸುವ ಭರವಸೆ ನೀಡಿದ್ದು, ಅಧಿಕಾರಿಗಳ ಮನವಿಗೆ ಸ್ಪಂದಿಸುವ ಮೂಲಕ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಕಾಮಗಾರಿ ಪೂರ್ಣಗೊಳಿಸದ ಪಕ್ಷದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು ಹಾಗೂ ಎರಡು ಪಂಚಾಯಿತಿಗಳ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಸ್ಕರಿಸುವ ಎಚ್ಚರಿಕೆ ನೀಡಿದರು.

     

    ಸ್ಥಳೀಯ ಮುಖಂಡರಾದ ಟಿ ರಂಗರಾಜು ಮಾತನಾಡಿ ಪಕ್ಷತೀತವಾಗಿ ಈ ಪ್ರತಿಭಟನೆ ನೆಡೆಯುತ್ತಿದ್ದು.ಸ್ಥಳೀಯವಾಗಿ ಹಳ್ಳಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಹಾಗೂ ಸಾರ್ವಜನಿಕರು ತಮ್ಮ ದೈನಂದಿಕ ಸಂಚಾರಕ್ಕೆ ಈ ಮುಖ್ಯ ರಸ್ತೆಯ ಮೇಲೆ ಅವಲಂಬಿತರಾಗಿದ್ದಾರೆ. ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸುವ ಮೂಲಕ ಹಲವು ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರಾಧಿಕಾರದ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದು ನಾಳೆಯಿಂದಲೇ ಕಾಮಗಾರಿ ಆರಂಬಿಸುವ ಭರವಸೆ ನೀಡಿದ್ದಾರೆ. ತಿಪ್ಪುರಿನ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ರಸ್ತೆ ನಿರ್ಮಿಸಿದ್ದು. ಹಲವು ಅಪಘಾತ ಪ್ರಕಾರಣಗಳಿಗೆ ಎಡೆಮಾಡಿ ಕೊಟ್ಟಿದೆ. ಆದಷ್ಟು ಬೇಗ ದೊಡ್ಡಬಳ್ಳಾಪುರ -ಚಿಕ್ಕತುಮಕೂರು ಮುಖ್ಯರಸ್ತೆಯ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಿ ಪ್ರಾಧಿಕಾರವು ಸ್ಥಳೀಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂಥಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸಂದೇಶ್ ಬಿ ಎಚ್ ಕಂಪಣ್ಣ,ರೈತ ಮುಖಂಡರಾದ ವಸಂತ್ ಕುಮಾರ್, ಸತೀಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಹಾಡೋನಹಳ್ಳಿಯಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ರೈತನ ಮನೆಗೆ ಬಿ.ಸಿ ಆನಂದ್ ಕುಮಾರ್ ಭೇಟಿ.

    ದೊಡ್ಡಬಳ್ಳಾಪುರದ ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಹಸು ಕಟ್ಟುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಅವಘಡದ ಪರಿಣಾಮದಿಂದ ಎರಡು ಹಸುಗಳು ಸೇರಿದಂತೆ ತೀವ್ರವಾಗಿ ಗಾಯಗೊಂಡಿದ್ದ ರೈತ ರಾಜಣ್ಣ ಮನೆಗೆ ಸೋಮವಾರ ಸಂಜೆ ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ರೈತ ರಾಜಣ್ಣ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿ ಹಸುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನಿಮಗೆ ಭಗವಂತ ಹೆಚ್ಚಿನ ಅಪಾಯವಾಗದಂತೆ ರಕ್ಷಿಸಿದ್ದಾನೆ. ನೀವು ಮಾಡಿದ ಪುಣ್ಯದ ಕೆಲಸ ನಿಮ್ಮನ್ನ ಕಾಪಾಡಿದೆ. ಯಾವುದಕ್ಕೂ ಎದೆಗುಂದದೆ ಧೈರ್ಯವಾಗಿರಿ. ಕೆಎಂಎಫ್ ಮತ್ತು ಬಮೂಲ್ ಒಕ್ಕೂಟದಿಂದ ಒಂದು ಲಕ್ಷ ಪರಿಹಾರ ಕೊಡಿಸುವೆ. ಹಸುಗಳ ಹೆಚ್ಚಿನ ಚಿಕಿತ್ಸೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಪಶುವೈದ್ಯರಿಂದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ರೈತ ರಾಜಣ್ಣ ಮತ್ತು ಮಗಳ ಕೈಗೆ ಸುಟ್ಟ ಗಾಯಗಳ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

     

     

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಾಡೋನಹಳ್ಳಿ ಡೇರಿ ಸ್ಥಾಪನೆಯಾದ ಸಂದರ್ಭದಿಂದಲೂ ಈವರೆಗೆ ರೈತ ರಾಜಣ್ಣ ಮತ್ತು ಅವರ ತಂದೆಯವರು ಹೈನುಗಾರಿಕೆಯನ್ನು ಜೀವನವನ್ನಾಗಿಸಿಕೊಂಡು ಡೇರಿಗೆ ಹಾಲು ಹಾಕುತ್ತಿದ್ದಾರೆ. ಇಂತಹ ನಿಷ್ಕಲ್ಮಶ ಹೃದಯ ಹೊಂದಿರುವ ರೈತನಿಗೆ ಹೆಚ್ಚಿನ ಅಪಾಯವಾಗದಂತೆ ಆ ಕಾಮಧೇನು ಕಾಪಾಡಿದ್ದಾಳೆ. ಹಸುಗಳ ಚಿಕಿತ್ಸೆಗೆ ಸ್ಪಂದಿಸುವಂತೆ ಪಶು ವೈದ್ಯರಿಗೆ ಮತ್ತು ದೊಡ್ಡಬಳ್ಳಾಪುರ ಒಕ್ಕೂಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪರಿಹಾರ ಧನ ಮತ್ತು ವಿಮೆ ವಿತರಿಸಲು ಕೈಗೊಳ್ಳಬೇಕಾದ ಕಡತದ ಕೆಲಸವನ್ನು ಶೀಘ್ರವಾಗಿ ಮುಗಿಸಿ ಕಡತವನ್ನು ತಾಲ್ಲೂಕು ಶಿಬಿರ ಕಚೇರಿಗೆ ರವಾನಿಸುವಂತೆ ಹಾಡೋನಹಳ್ಳಿ ಡೇರಿ ಕಾರ್ಯದರ್ಶಿ ನಾಗರಾಜುಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

     

    ಘಟನೆ ವಿವರ:

    ರೈತ ರಾಜಣ್ಣ ಅವರು ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿ ಮಲಗಿದ್ದ ಸಮಯದಲ್ಲಿ ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಕೊಟ್ಟಿಗೆ ಸುತ್ತಲು ಹೊದಿಸಲಾಗಿದ್ದ ಹುಲ್ಲಿಗೆ ಬೆಂಕಿ ಬಿದ್ದು, ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿದ್ದವು. ಹಸುವನ್ನು ಕಾಪಾಡಲು ಮುಂದಾದ ರೈತ ರಾಜಣ್ಣ ಹಾಗೂ ಅವರ ಮಗಳಿಗೆ ಸುಟ್ಟ ಗಾಯಗಳಾಗಿದ್ದವು

     

    ಈ ಸಂದರ್ಭದಲ್ಲಿ ತಾಲ್ಲೂಕು ಶಿಬಿರ ಕಚೇರಿ ವ್ಯವಸ್ಥಾಪಕ ಎಲ್.ಬಿ ನಾಗರಾಜು, ಶಿವಪುರ ಡೇರಿ ಅಧ್ಯಕ್ಷ ನಾಗರಾಜು, ಹಾಡೋನಹಳ್ಳಿ ಡೇರಿ ಕಾರ್ಯದರ್ಶಿ ನಾಗರಾಜು, ರೈತ ರಾಜಣ್ಣನ ಕುಟುಂಬಸ್ಥರು ಇದ್ದರು.

  • ದೇವಾಲಯಕ್ಕೆ ನುಗಿದ ಕಳ್ಳರು : ದೇವರ ಎರಡು ಬೆಳ್ಳಿ ಕಿರೀಟ ಒಂದು ಚಿನ್ನದ ತಾಳಿ ಕದ್ದು ಪರಾರಿ

    ದೊಡ್ಡಬಳ್ಳಾಪುರ : ಕಳೆದ ರಾತ್ರಿ ತೇರಿನ ಬೀದಿಯಲ್ಲಿರುವ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳವು ಯತ್ನ ನಡೆದಿದ್ದು, ಪಕ್ಕದ ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ದೇವರ ಎರಡು ಬೆಳ್ಳಿ ಕಿರೀಟ,ಒಂದು ಚಿನ್ನದ ತಾಳಿಯನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ

     

    ದೊಡ್ಡಬಳ್ಳಾಪುರ ನಗರದ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ನಡೆದಿದ್ದು, ದೇವಸ್ಥಾನದ ಹುಂಡಿಗೆ ಭಾರೀ ಹಣವೇ ಬಂದಿದೆ ಎಂದು ಲೆಕ್ಕಾಚಾರ ಹಾಕಿದ್ದ ಕಳ್ಳರು, ನಿನ್ನೆ ರಾತ್ರಿ ಹುಂಡಿಗೆ ಕಳವು ಮಾಡಲು ವಿಫಲ ಯತ್ನ ಮಾಡಿದ್ದಾರೆ, ಬರಿಗೈಯಲ್ಲಿ ವಾಪಸ್ ಹೋಗದ ಕಳ್ಳರು ಪಕ್ಕದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ದೇವರ ಎರಡು ಬೆಳ್ಳಿ ಕಿರೀಟ, ಒಂದು ಚಿನ್ನ ತಾಳಿ ಕದ್ದು ಪರಾರಿಯಾಗಿದ್ದಾರೆ.

     

    ಈ ಕುರಿತು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಮುಜರಾಯಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • *ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 18 ( ವಿಜಯ ಮಿತ್ರ ): ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಬದಲಾಗಿದ್ದು, ಸರ್ಕಾರಿ ಕೆಲಸಕಾರ್ಯಗಳನ್ನು ಮಾಡಿಕೊಡಲು ಲಂಚಕ್ಕಾಗಿ ಬೇಡಿಕೆ ಇಟ್ಟರೆ, ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಲ್ಲಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವುದು.

    ಪೊಲೀಸ್ ಅಧೀಕ್ಷಕರು ಮೊ.ಸಂಖ್ಯೆ 9364062509, ಪೊಲೀಸ್ ಉಪಾಧೀಕ್ಷಕರು-1 ಮೊ.ಸಂ 9364062550, ಪೊಲೀಸ್ ಉಪಾಧೀಕ್ಷಕರು-2 ಮೊ.ಸಂ 9364062551, ಪೊಲೀಸ್ ಇನ್ಸ್‌ಪೆಕ್ಟರ್-1 ಮೊ.ಸಂ 9364062626, ಪೊಲೀಸ್ ಇನ್ಸ್‌ಪೆಕ್ಟರ್-2 ಮೊ.ಸಂ 9364062627, ಪೊಲೀಸ್ ಇನ್ಸ್‌ಪೆಕ್ಟರ್-3 ಮೊ.ಸಂ 9364062628, ಪೊಲೀಸ್ ಇನ್ಸ್‌ಪೆಕ್ಟರ್-4, ಮೊ.ಸಂ 9364062629 ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪೊಲೀಸ್ ಅಧೀಕ್ಷಕರಾದ ಪವನ್ ನಜ್ಜೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವ : ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ

    ದೊಡ್ಡಬಳ್ಳಾಪುರ, (ಮಾ.19) ವಿಜಯ ಮಿತ್ರ : ಚಿಕ್ಕಮಧುರೆ (ಕನಸವಾಡಿ) ಶ್ರೀ ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವು ಅದ್ದೂರಿಯಾಗಿ ನೆರವೇರಿತು.

    ತಾಲ್ಲೂಕಿನ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಪಾಲ್ಗೊಂಡು ಯಶಸ್ವೀಗೊಳಿಸಿದರು.ಆಗಮಿಸಿದ ಭಕ್ತಾದಿಗಳಿಗೆ ದಾಸೋಹ ಭವನದ ಮುಂಭಾಗ ಊಟದ ವ್ಯವಸ್ಥೆ ಕಲ್ಪಿಸಿದ್ದು , ಭಕ್ತಾದಿಗಳಿಂದ ದೇವಾಲಯ ಹಲವು ಭಾಗಗಳಲ್ಲಿ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ಆಯೋಜನೆ ಮಾಡಲಾಗಿತ್ತು.

     

    ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಸಂಭ್ರಮಿಸಿದರು.

     

    ಈ ಸಂದರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿಗಳಾದ ಜಿ ಸತ್ಯನಾರಾಯಣ, ಕಾರ್ಯದರ್ಶಿಗಳಾದ ಸಿ.ಡಿ.ಸತ್ಯನಾರಾಯಣಗೌಡ, ಧರ್ಮದರ್ಶಿಗಳಾದ ಆದ ಕೆ ವಿ ಪ್ರಕಾಶ್ ರವರು ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.

  • ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬ ಆಚರಣೆ : ಬಿರಿಯಾನಿ ಹಂಚಿ ಸಂಭ್ರಮಿಸಿದ ಅಪ್ಪು ಫ್ಯಾನ್ಸ್

    ದೊಡ್ಡಬಳ್ಳಾಪುರ ಮಾ.17 ( ವಿಜಯ ಮಿತ್ರ ) : ಪುನೀತ್ ರಾಜಕುಮಾರ್ ರವರ 49ನೇ ಹುಟ್ಟುಹಬ್ಬದ ಅಂಗವಾಗಿ ಪುನೀತ್ ರವರಿಗೆ ಇಷ್ಟವಾದ ಬಿರಿಯಾನಿಯನ್ನು ಹಂಚಿಕೆ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ರಾಘವ ತಿಳಿಸಿದರು

    ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 49ನೇ ಹುಟ್ಟುಹಬ್ಬದ ದಿನವನ್ನು ರೋಜಿಪುರ ಮತ್ತು ಗಂಗಾಧರಪುರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜವಂಶದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕಲಿಯುಗದ ಕೃಷ್ಣ ಎಂದರೆ ತಪ್ಪಾಗಲಾರದು. ಕಾರಣ ತಮ್ಮ ಅಭಿಮಾನಿಗಳಿಗೆ ಹೇಗೆ ಬದುಕಬೇಕು ಎಂಬುದನ್ನು ಪುನೀತ್ ರಾಜಕುಮಾರ್ ರವರ ನಡತೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಜೀವನವೇ ನಮಗೆ ಮಾರ್ಗದರ್ಶನ. ಇಂದಿನ ಯುವ ಪೀಳಿಗೆ ಪುನೀತ್ ರಾಜಕುಮಾರ್ ರವರ ಅಭಿಮಾನಿಗಳಾಗಿ ಜೀವಿಸಲು ಹೆಮ್ಮೆ ಪಡುತ್ತದೆ. ಇಂದು ಅವರ 49ನೇ ಹುಟ್ಟುಹಬ್ಬದ ವಿಶೇಷವಾಗಿ 100 ಕೆ.ಜಿ.ಬಿರಿಯಾನಿ ಊಟವನ್ನು ತಯಾರಿಸಿದ್ದು. ಬರುವ ಸಾರ್ವಜನಿಕರಿಗೆ, ಅಭಿಮಾನಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು

    ಅಭಿಮಾನಿ ಹರ್ಷ ಮಾತನಾಡಿ ಇದೇ ಮೊದಲ ಬಾರಿಗೆ 14 ವರ್ಷಗಳ ನಂತರ ಬಿಡುಗಡೆಗೊಂಡ ಜಾಕಿ ಚಿತ್ರವು ಮುಂಜಾನೆ 4:30ಕ್ಕೆ ಪ್ರಥಮ ಫ್ಯಾನ್ಸ್ ಶೋ ನಡೆದಿದೆ. ಇತಿಹಾಸ ಪೂರ್ವ ಅಥವಾ ನಂತರದಲ್ಲಿ ಇಂತಹ ನಾಯಕ ನಟ ಮತ್ತೊಬ್ಬ ಬರಲು ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಆದರೆ ನಾವು ಮಾಡುವ ಸಮಾಜಮುಖಿ ಕಾರ್ಯಗಳಲ್ಲಿ, ನಮ್ಮ ಹೃದಯದಲ್ಲಿ ಸದಾ ಅವರು ಜೀವಂತವಾಗಿದ್ದಾರೆ. ಅವರಿಗೆ ಇಷ್ಟವಾದ ಬಿರಿಯಾನಿ ಊಟವನ್ನು ಇಂದು ಬರುವ ಸಾರ್ವಜನಿಕರಿಗೆ ವಿತರಿಸುತ್ತೇವೆ. ಪುನೀತ್ ರಾಜಕುಮಾರ್ ಕೇವಲ ನಾಯಕನಟರಲ್ಲ. ತಮ್ಮ ನಟನೆ ಹಾಗೂ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಹ ಮಹನೀಯರು ಎಂದರೆ ತಪ್ಪಾಗಲಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಇದೇ ವೇಳೆ ಸಮಾರಂಭದಲ್ಲಿ ಯುವನಟರಾದ ಅಂಜಿ, ಸುಬ್ರಮಣಿ, ಮಂಜುನಾಥ್ ಸೇರಿದಂತೆ ಹಲವು ಮುಖಂಡರು, ಪುನೀತ್ ರಾಜಕುಮಾರ್ ಅಭಿಮಾನಿಗಳು ಉಪಸ್ಥಿತರಿದ್ದರು.

  • ಪಡಿತರ ವಿತರಣೆ ಕುರಿತು ಯುವಕರ ಜನಜಾಗೃತಿ ಅಭಿಯಾನ : ನ್ಯಾಯಬೆಲೆ ಅಂಗಡಿಗಳು ಸರ್ಕಾರಿ ಆದೇಶ ಪಾಲಿಸುವಂತೆ ಒತ್ತಾಯ

    ದೊಡ್ಡಬಳ್ಳಾಪುರ ಮಾ.17(ವಿಜಯ ಮಿತ್ರ ): ಸರ್ಕಾರದ ಆದೇಶದಂತೆ ತಿಂಗಳ ಪ್ರತಿದಿನವೂ ನ್ಯಾಯಬೆಲೆ ಅಂಗಡಿಯನ್ನು ತೆಗೆಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿರುವ ಪಡಿತರ ವಿತರಕರು ತಿಂಗಳಿನಲ್ಲಿ ಕೇವಲ ಎರಡು ಮೂರು ದಿನಗಳು ನ್ಯಾಯಬೆಲೆ ಅಂಗಡಿ ತೆರೆಯುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಯುವ ಸಂಚಲನ ಮುಖಂಡ ಚಿದಾನಂದ ತಿಳಿಸಿದರು

     

    ಇಂದು ತಾಲೂಕಿನಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರಲ್ಲಿ ಯುವ ಸಂಚಲನ ತಂಡ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಪಡಿತರ ವಿಚಾರಣೆ ಕೇವಲ 2 ರಿಂದ 3 ದಿನಗಳ ಅವಧಿಯಲ್ಲಿ ವಿತರಿಸುತ್ತಿದ್ದು. ಹಲವಾರು ಸಾರ್ವಜನಿಕರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಯ ಮುಂಭಾಗ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಸರ್ಕಾರದ ಆದೇಶ ಪರಿಶೀಲಿಸಿದಾಗ ನಮಗೆ ತಿಳಿದುಬಂದ ಸತ್ಯವೇನೆಂದರೆ ಕರ್ನಾಟಕ ಸರ್ಕಾರದ ಆದೇಶದಂತೆ ಪ್ರತಿ ತಿಂಗಳು 11ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಬೆಳಗ್ಗೆ 7ರಿಂದ 12ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ (ಮಂಗಳವಾರ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ) ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ತೆರೆಯಬೇಕಿದೆ. ಆದರೆ ನಮ್ಮ ದೊಡ್ಡಬಳ್ಳಾಪುರ ನಗರ ಭಾಗದಲ್ಲಿ ತಿಂಗಳಲ್ಲಿ ಕೇವಲ ಎರಡು ಮೂರು ದಿನಗಳಿಗೆ ಪಡಿತರ ವಿತರಣೆ ಸೀಮಿತವಾಗಿದೆ. ಹಾಗಾಗಿ ಈ ಕುರಿತು ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು

     

    ಯುವ ಸಂಚಲನ ಮುಖಂಡ ಗಿರೀಶ್ ಮಾತನಾಡಿ ಸರ್ಕಾರದ ಆದೇಶ 2018 ರ ಪ್ರಕಾರ ನ್ಯಾಯಬೆಲೆ ಅಂಗಡಿಗಳು ತಿಂಗಳು ಪೂರ್ತಿ ಪಡಿತರೆ ವಿತರಣೆ ಮಾಡಬೇಕಿದೆ.(ಮಂಗಳವಾರ ಮತ್ತು ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ)ಆದರೆ ನಮ್ಮ ದೊಡ್ಡಬಳ್ಳಾಪುರ ವ್ಯಾಪ್ತಿಯ 85 ನ್ಯಾಯಬೆಲೆ ಅಂಗಡಿಗಳಲ್ಲಿ ಈ ಆದೇಶದ ಉಲ್ಲಂಘನೆ ಆಗುತ್ತಿದ್ದು ಈ ಕುರಿತು ನಾವು ಸ್ಥಳೀಯ ಶಿರಸ್ತಿದ್ದಾರ್ ಸೇರಿದಂತೆ ಆರೋಗ್ಯ ಸಚಿವರಿಗೂ ದೂರು ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಒಂದು ವರ್ಷದಿಂದ ಸತತವಾಗಿ ಪ್ರಯತ್ನಿಸಿದ್ದು ಈವರೆಗೂ ಸರ್ಕಾರಿ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದೇ ವಿಪರ್ಯಾಸ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

     

    ಈ ಸಂದರ್ಭದಲ್ಲಿ ಯುವ ಸಂಚಲನ ತಂಡದ ಎಲ್ಲ ಯುವಕರು ಉಪಸಿತರಿದ್ದರು