Blog

  • ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ: ರಥೋತ್ಸವದಲ್ಲಿ ಭಾಗಿಯಾದ ಅಸಂಖ್ಯಾತ ಭಕ್ತಗಣ

    ದೊಡ್ಡಬಳ್ಳಾಪುರ : ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ‌ ಸ್ವಾಮಿ ಬ್ರಹ್ಮರಥೋತ್ಸವವು ಭಕ್ತಮಹಾಗಣ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಸಲ್ಲುವ ಶುಭ ಮೇಷ ಲಗ್ನ ಮುಹೂರ್ತದಲ್ಲಿ ಬಹಳ ವೈಭವದೊಂದಿಗೆ ನೆರವೇರಿತು.

    ರಥೋತ್ಸವಕ್ಕೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದು, ರಥವನ್ನ ಎಳೆದು, ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಭಕ್ತಿ ಇಚ್ಚಾನುಸಾರ ಸಮರ್ಪಿಸಿ ಪುನೀತರಾದರು.

     

    ಷಷ್ಠಿಯ ದಿನದಂದು ಮುಂಜಾನೆ 3ರಿಂದ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಆರಂಭವಾಗಲಿವೆ. ಅಭಿಷೇಕ ಕಾರ್ಯಗಳು ಪ್ರಾರಂಭಗೊಂಡು, 5:30ಕ್ಕೆ ಮಹಾಮಂಗಳಾರತಿ ನೆರವೇರಿತು. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ ಕಾಲದಲ್ಲಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂದಾಭಿಷೇಕ, ಭಸ್ಮದಭಿಷೇಕದೊಂದಿಗೆ ಹೂವಿನ ಅಲಂಕಾರ ನೆರವೇರಿಸಲಾಯಿತು. ರಾತ್ರಿ 8:30ರವರೆಗೂ ಭಕ್ತರಿಗೆ ದರ್ಶನ ವ್ಯವಸ್ಥೆ ದೊರೆಯಲಿದೆ.

     

    ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

    ಬ್ರಹ್ಮರಥೋತ್ಸವಕ್ಕೆ ಬರುವ ಸಹಸ್ರಾರು ಭಕ್ತಾಧಿಗಳಿಗೆ ಮೊಬೈಲ್‌ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಶುಧ್ಧ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ವ್ಯವಸ್ಥೆ‌ ಮಾಡಲಾಗಿದೆ. ಚಿನ್ನಾಭರಣ ಕಳವು ಸೇರಿದಂತೆ ಯಾವು‌ದೇ‌ ಅಪರಾಧ ಕೃತ್ಯಗಳು ನಡೆಯದಂತೆ ತಡೆಯಲು ದ್ರೋಣ್‌ ಕ್ಯಾಮೆರಾ ಮತ್ತು ದೇವಾಲಯದ ಸುತ್ತಾಮುತ್ತಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

     

    ಪಾರ್ಕಿಂಗ್ ವ್ಯವಸ್ಥೆ

     

    ಸಂಚಾರ ದಟ್ಟಣೆ ನಿಯಂತ್ರಿಸಲು ದೇವಾಲಯದಿಂದ 1 ಕಿ.ಮೀ ಅಂತರದಲ್ಲೇ 14 ಕಡೆ ಬೈಕ್, ಕಾರು, ಬಸ್‌ ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

     

    ಪೊಲೀಸ್ ಭದ್ರತೆ

     

    ಘಾಟಿ ಬ್ರಹ್ಮರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು, ಅಗತ್ಯವಿರುವ ಕಡೆ ಬ್ಯಾರಿಕೇಡ್ ವ್ಯವಸ್ಥೆ ಸಹ ವ್ಯವಸ್ಥೆ ಮಾಡಲಾಗಿತ್ತು.

    ಜಾತ್ರಾ ಮಹೋತ್ಸವದ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ ವತಿಯಿಂದ ಘಾಟಿಯಿಂದ ದೊಡ್ಡಬಳ್ಳಾಪುರ, ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೋಲಾರ ಹಾಗೂ ಮುಂತಾದ ಸ್ಥಳಗಳಿಗೆ 84 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅದೇರೀತಿ ‘ಶಕ್ತಿ ಯೋಜನೆ’ ಅಡಿಯಲ್ಲಿ ಮಹಿಳಾ ಪ್ರಯಾಣಿಕರು ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಅವಕಾಶವನ್ನ ಸಹ ಕಲ್ಪಿಸಲಾಗಿತ್ತು.

  • ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿಗೆ ಕುಳಿತ ರೈತರು

    ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮದ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ, ಗ್ರಾಮಗಳ ರೈತರು ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗದ ಹಿನ್ನಲೆ ಇಂದಿನಿಂದ ( ಜ.16) ಕೊನಾಘಟ್ಟ ಗ್ರಾಮದ ರಾಮನಬಂಡೆ ಬಳಿ ಒಮ್ಮತದಿಂದ ಅನಿರ್ದಿಷ್ಟವಾಧಿ ಧರಣಿಗೆ ಕುಳಿತ್ತಿದ್ದಾರೆ.

    ನಾಲ್ಕು ಗ್ರಾಮಗಳ ಫಲವತ್ತಾದ 1540 ಎಕರೆ ರೈತರ ಜಮೀನು ಸ್ವಾಧೀನಕ್ಕಾಗಿ ಕೆಐಎಡಿಬಿ ಮುಂದಾಗಿದೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂ ಸ್ವಾಧೀನ ನಿಯಮದ ಆಧಾರದಂತೆ ಜಮೀನು ಸ್ವಾಧೀನಕ್ಕೆ ಪರಿಹಾರ ನೀಡಬೇಕೆಂಬುದು ರೈತರು ಆಗ್ರಹಿಸುತ್ತಿದ್ದಾರೆ, ಆದರೆ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಕೊಡದ ಹಿನ್ನಲೆ ನಾಲ್ಕು ಗ್ರಾಮದ ರೈತರು ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ .

     

    ಭೂಮಿ ಕಳೆದುಕೊಳ್ಳುತ್ತಿರುವ ರೈತರ ಜೀವನದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರ್ಕಾರಕ್ಕೆ ನಮ್ಮ ಫಲವತ್ತಾದ ಭೂಮಿ ಬೇಕು . ರೈತರ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ನಮ್ಮ ಈ ಪ್ರತಿಭಟನೆ ಸರ್ಕಾರ ರೈತರಿಗೆ ಸ್ಪಂದಿಸಿ ನ್ಯಾಯವಾದ ಬೆಂಬಲ ಬೆಲೆ ನಿಗದಿ ಮಾಡುವವರೆಗೂ ನಮ್ಮ ಈ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

    ನಗರದ ಪ್ರವಸಿಮಂದಿರದ ಬಳಿ ರೈತರ ನಡೆಸುತ್ತಿರುವ ಧರಣಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಎಂ.ಬಿ.ಪಾಟೀಲರ ಜೊತೆ ಮಾತನಾಡಿ ರೈತರ ಸಮಸ್ಯೆ ಬರಿಹರಿಸುವುದಾಗಿ ತಿಳಿಸಿದರು

  • ಮನೆ ಮನೆಗೂ ಶ್ರೀರಾಮ ಮಂತ್ರಾಕ್ಷತೆ ತಲುಪಿಸುವುದು ನಮ್ಮ ಸೌಭಾಗ್ಯ – ಸ್ಥಳೀಯ ಮುಖಂಡ ಗಂಗಾಧರ್

    ದೊಡ್ಡಬಳ್ಳಾಪುರ : ಶ್ರೀ ರಾಮನ ಮಂತ್ರಾಕ್ಷತೆ ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ನಾವು ಭಾಗಿಯಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯವೇ ಸರಿ . ಅಯೋಧ್ಯೆಯ ಪ್ರತಿಷ್ಠಾಪನ ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇವೆ ದೊಡ್ಡಬಳ್ಳಾಪುರದಿಂದ ತೂಬಗೆರೆ ಹೋಬಳಿಗೆ ಮಂತ್ರಾಕ್ಷತೆಯನ್ನು ವಿಜೃಂಭಣೆ ಯಿಂದ ತಂದಿದ್ದು ತೂಬಗೆರೆ ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೂ ಶ್ರೀ ರಾಮರ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ್ ತಿಳಿಸಿದರು

    ತೂಬಗೆರೆ ಹೋಬಳಿಯ ಗ್ರಾಮಗಳಾದ ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ವಿಶೇಷ ದಿನದಂದು ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್ ರವರ ನೇತೃತ್ವದಲ್ಲಿ ಮಂಗಳವಾದ್ಯ ಸಹಿತ ಅಯೋಧ್ಯ ಶ್ರೀ ರಾಮರ ಮಂತ್ರಾಕ್ಷತೆಯನ್ನು ಮನೆಮನೆಗೆ ತಲುಪಿಸಲಾಯಿತು . ಅಯೋಧ್ಯೆ ಶ್ರೀ ರಾಮನ ಮಂತ್ರಾಕ್ಷತೆಯನ್ನು ಗ್ರಾಮದ ಮಹಿಳೆಯರು ವಿಶೇಷವಾಗಿ ಕಳಸ ಹೊತ್ತು ಆರತಿ ಮಾಡುವ ಮೂಲಕ ಸ್ವಾಗತಿಸಿದರು

     

    ಸಂದರ್ಭದಲ್ಲಿ ಮಾತನಾಡಿದ ಅವರು ಅಯೋಧ್ಯೆ ಶ್ರೀ ರಾಮರ ಮಂತ್ರಾಕ್ಷತೆಯನ್ನು ತೂಬಗೆರೆ ಹೋಬಳಿಯ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ತೂಬಗೆರೆ ಹೋಬಳಿಯ ಪ್ರತಿಗ್ರಾಮಕ್ಕೂ ತಲುಪಿಸಲಾಗಿದೆ ಮಂತ್ರಾಕ್ಷತೆಯ ಮಹತ್ವ ಹಾಗೂ ಅಯೋಧ್ಯೆ ಶ್ರೀರಾಮ ದೇವಾಲಯದ ಕುರಿತು ಸ್ವಯಂಸೇವಕರಾಗಿ ಗ್ರಾಮಸ್ಥರು ಮುಂದೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ ಹೊಸಹಳ್ಳಿ, ಸುನಘಟ್ಟಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಮಂತ್ರಾಕ್ಷತೆ ತಲುಪಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದು ಸ್ಥಳೀಯ ಗ್ರಾಮಸ್ಥರ ಹಾಗೂ ಮುಖಂಡರ ಸಹಕಾರದೊಂದಿಗೆ ಮಂತ್ರಾಕ್ಷತೆಯನ್ನು ಗ್ರಾಮದ ಪ್ರತಿ ಮನೆಮನೆಗೂ ತಲುಪಿಸಲಾಗಿದೆ ಮಂತ್ರಾಕ್ಷತೆ ತಲುಪಿಸುವ ಕಾರ್ಯಕ್ಕೆ ಸಾರ್ವಜನಿಕರ ಅಭೂತಪೂರ್ವ ಬೆಂಬಲ ದೊರೆತಿದೆ ಸ್ಥಳೀಯರಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯುತ್ತಿದ್ದು ಸ್ವಯಂಸೇವಕರಿಗೆ ಮತ್ತಷ್ಟು ಹುಮ್ಮಸ್ಸು ಸಂತೋಷ ತಂದಿದೆ ಎಂದು ತಿಳಿಸಿದರು

    ಟಿ ಹೊಸಹಳ್ಳಿ ಗ್ರಾಮದ ಗ್ರಾಮಸ್ಥರಾದ ಶ್ರೀನಿಧಿ ಮಾತನಾಡಿ ರಾಮನ ಆಶೀರ್ವಾದದಿಂದ ಬಂದಿರುವ ಮಂತ್ರಾಕ್ಷತೆಯನ್ನು ಕುಂಭ ಸಹಿತ ಸ್ವಾಗತಿಸಿದ್ದೇವೆ ಶ್ರೀ ರಾಮರು ಸನಾತನ ಹಿಂದುತ್ವವನ್ನು ಬಿಂಬಿಸುವ ದೇವರಾಗಿದ್ದು ರಾಮ ಜನ್ಮಭೂಮಿಯು ಹಿಂದೂಗಳ ಪರ ಆಗಿರುವುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ ಈ ವಿಷಯ ನಮ್ಮ ಕಾಲಘಟ್ಟದಲ್ಲಾಗಿರುವುದು ಮತ್ತಷ್ಟು ಸಂತೋಷ ತಂದಿದೆ . ಜಗತ್ ಪ್ರಸಿದ್ಧ ಅಯೋದ್ಯ ರಾಮ ಮಂದಿರ ನಿರ್ಮಾಣದಲ್ಲಿ ನಾವು ಸಾಕ್ಷಿಯಾಗಿದ್ದೇವೆ ಎಂಬುದು ಸಂತಸದ ವಿಷಯ . ಮಂತ್ರಾಕ್ಷತೆಯನ್ನು ಸ್ವಾಗತ ಮಾಡುವ ಕಾರ್ಯ ನಮ್ಮೆಲ್ಲರಿಗೂ ತೃಪ್ತಿಯ ಭಾವನೆ ಉಂಟುಮಾಡಿದೆ ಇದು ನಮ್ಮ ಭಕ್ತಿ ಪೂರ್ವಕ ಸೇವೆಯಾಗಿದೆ ಜನವರಿ 22ರಂದು ದೀಪಗಳನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಲಾಗುವುದು ಎಂದು ತಿಳಿಸಿದರು

     

     

    ಸ್ಥಳೀಯ ಗ್ರಾಮಸ್ಥರಾದ ನಾಗರತ್ನ ಮಾತನಾಡಿ ಶ್ರೀರಾಮದೇವರ ಮಂತ್ರಾಕ್ಷತೆ ನಮ್ಮ ಮನೆ ಬಾಗಿಲಿಗೆ ಬಂದಿರುವುದು ನಮ್ಮೆಲ್ಲರ ಭಾಗ್ಯವೆಂದು ಭಾವಿಸುತ್ತೇವೆ . ನೂರಾರು ವರ್ಷಗಳ ಕನಸು ಜನವರಿ 22 ರಂದು ನನಸಾಗುತ್ತಿದೆ ಮಂತ್ರಾಕ್ಷತೆ ಪಡೆದಿರುವುದು ಅಯೋಧ್ಯೆಗೆ ಭೇಟಿಕೊಟ್ಟು ಶ್ರೀರಾಮ ದೇವರ ದರ್ಶನ ಪಡೆದಷ್ಟು ಸಂತೋಷ ತಂದಿದೆ ಶ್ರೀ ರಾಮನ ವಿಚಾರಧಾರೆಯನ್ನು ಮಕ್ಕಳಿಗೆ ತಿಳಿಸಲು ಹೆಮ್ಮೆ ಎನಿಸುತ್ತಿದೆ . ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು . ಶ್ರೀರಾಮರ ಮಂತ್ರಾಕ್ಷತೆಯನ್ನು ಪ್ರತಿ ಮನೆಗೂ ಸ್ವಯಂ ಸೇವಕರು ತಲುಪಿಸಿದ್ದಾರೆ ಎಂದು ತಿಳಿಸಿದರು

     

    ಸುನಘಟ್ಟಹಳ್ಳಿ ಗ್ರಾಮದ ಮುಖಂಡರಾದ ಶಿವಕುಮಾರ್ ಮಾತನಾಡಿ ಮಂತ್ರಾಕ್ಷತೆ ಮಕರ ಸಂಕ್ರಾಂತಿಯ ದಿನದಂದು ನಮ್ಮ ಊರಿಗೆ ಬಂದಿದ್ದು ನಮಗೆ ಹಬ್ಬದ ವಾತಾವರಣ ದ್ವಿಗುಣವಾಗಿದೆ .ಗ್ರಾಮದ ಮಹಿಳೆಯರು ಕಳಸ ಹೊತ್ತು ಮಂತ್ರಾಕ್ಷತೆಯನ್ನು ಸ್ವಾಗತಿಸಿದ್ದಾರೆ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಅತ್ಯಂತ ಸಂತೋಷದಿಂದ ಪ್ರತಿ ಮನೆಮನೆಗೂ ಭೇಟಿ ಕೊಟ್ಟು ನೀಡುತ್ತಿದ್ದೇವೆ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನಮ್ಮ ಗ್ರಾಮಗಳಲ್ಲಿಯೂ ಆಚರಿಸಲಾಗುವುದು ಹಬ್ಬದ ರೀತಿ ಪ್ರತಿ ಮನೆ ಮನೆಯಲ್ಲಿಯೂ ಶ್ರೀರಾಮಸ್ಮರಣೆ ಮಾಡಲಾಗುವುದು ದೀಪಗಳನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು

    ಸುನಘಟ್ಟಹಳ್ಳಿ ಗ್ರಾಮದ ಯುವತಿ ಮೈತ್ರಿ ಮಾತನಾಡಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಲು ಸ್ವಯಂಸೇವಕರಾಗಿ ಬಂದಿದ್ದೇವೆ ಜನವರಿ 22ರಂದು ರಾಮನ ಪ್ರತಿಷ್ಠಾಪನ ಕಾರ್ಯವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ರಾಮಸ್ಮರಣೆ ಮಾಡುವ ಮೂಲಕ ಆಚರಿಸಬೇಕೆಂದು ಮನವಿ ಮಾಡಿದರು

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಕುರುವಿಗೆರೆ ಮುರುಳಿ, ಸುನಘಟ್ಟಹಳ್ಳಿ ಶಿವಕುಮಾರ್, ಹೊಸಹಳ್ಳಿ ಚೆನ್ನೇಗೌಡ, ಚಂದ್ರಶೇಖರ್, ಕುಮಾರ್, ಗ್ರಾಮದ ಮುಖಂಡರು ಹಾಗೂ ಗ್ರಾಮದ ಯುವ ಸ್ವಯಂಸೇವಕರು ಉಪಸ್ಥಿತರಿದ್ದರು

  • ಜನಜಾಗೃತಿಗಾಗಿ ವಾಲ್ಮೀಕಿ ಜಾತ್ರಾ ಮಹೋತ್ಸವ : ತಾಲ್ಲೂಕಿನ ವಾಲ್ಮೀಕಿ ಸಮುದಾಯಕ್ಕೆ ಶ್ರೀಗಳಿಂದ ಅಧಿಕೃತ ಆಹ್ವಾನ

    ದೊಡ್ಡಬಳ್ಳಾಪುರ : ಸಮಾವೇಶ, ಜಾತ್ರಾ ಮಹೋತ್ಸವ, ಹಬ್ಬ-ಹರಿದಿನಗಳನ್ನು ಆಚರಣೆ ಮಾಡುವುದು ನಮ್ಮಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಲು. ರಾಜ್ಯದಲ್ಲಿ ವಾಲ್ಮೀಕಿ ಸಮಾಜದ ಒಗ್ಗಟ್ಟು ಬಲಿಷ್ಠವಾಗಿದೆ. ನಮ್ಮ ಬಲಿಷ್ಠತೆಯನ್ನು ಪ್ರದರ್ಶನ ಮಾಡಲು ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

    ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಯವರು ದೊಡ್ಡಬಳ್ಳಾಪುರದಲ್ಲಿ ತಾಲ್ಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2024 ಪೂರ್ವಭಾವಿ ಸಭೆ ಹಾಗೂ ತಾಲ್ಲೂಕು ಮಟ್ಟದ ಜನಜಾಗೃತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಈಗಾಗಲೇ ಐದು ಜಾತ್ರೆಗಳು ಯಶಸ್ವಿಯಾಗಿ ನಡೆದಿವೆ. ಇದೀಗ ಆರನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಸಮುದಾಯದ ಮುಂದಿರುವ ಹತ್ತು ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಆಗ್ರಹ ಮಾಡುವ ಮೂಲಕ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಬೃಹತ್ ಜನಜಾಗೃತಿಗಾಗಿ ಜಾತ್ರಾ ಮಹೋತ್ಸವವೇ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ. ಜಾತ್ರಾ ಮಹೋತ್ಸವದಲ್ಲಿ ವಿಚಾರ ಗೋಷ್ಠಿಗಳು, ನಾಡಿನ ಹಾಗೂ ಸಮುದಾಯದ ಇತಿಹಾಸ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬೃಹತ್ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

     

    ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ರಾಮ ಪ್ರತಿಷ್ಠಾಪನ ಕಾರ್ಯಕ್ರಮ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಜನವರಿ 22ರಂದು ಹಲವು ಮಠಗಳ ಶ್ರೀಗಳ ಸಂಗಡ ತಾವು ಆಯೋಧ್ಯೆಗೆ ತೆರಳಿ ರಾಮ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

     

    ಈ ಸಂದರ್ಭದಲ್ಲಿ, ತಾಲ್ಲೂಕು ಜಾತ್ರಾ ಸಮಿತಿ ಅಧ್ಯಕ್ಷರನ್ನಾಗಿ ಮುನಿರಾಜು(ಚಿಕ್ಕಪ್ಪಿ) ಅವರನ್ನು ಆಯ್ಕೆ ಮಾಡಲಾಯಿತು.

     

    ವಾಲ್ಮೀಕಿ ಸಮಾಜದ ಮುಖಂಡ ಮುನಿರಾಜು (ಚಿಕ್ಕಪ್ಪಿ) ಮಾತನಾಡಿ, ನಮ್ಮ ಸಮಾಜದ ಪ್ರಮುಖರು ಪೂಜ್ಯರು ಆದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜವಾಬ್ದಾರಿಯನ್ನು ವಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಬದ್ಧನಾಗಿ ನಮ್ಮ ಸಮುದಾಯದ ಮುಖಂಡರು ಹಾಗೂ ಸಂಗಡಿಗರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗೊಳಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್ ಕುಮಾರ್, ಕೇಬಲ್ ರಾಮಚಂದ್ರ, ಹಿರಿಯ ಹೋರಾಟಗಾರ ಸಂಜೀವ್ ನಾಯಕ, ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ರಾಜ್ಯಾಧ್ಯಕ್ಷ ಸುಬ್ರಮಣಿ, ಕುಮಾರ್, ರಾಜಣ್ಣ, ಅಂಬರೀಶ್, ರಘು, ನವೀನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿರಿದರು.

  • ಜನವರಿ 16ರಂದು ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ರಥೋತ್ಸವ : ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ಅರವಂಟಿಕೆ ಸಿದ್ಧತೆ

    ದೊಡ್ಡಬಳ್ಳಾಪುರ : ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವದ ಅಂಗವಾಗಿ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು ವ್ಯವಸ್ಥೆ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನವ ಕರ್ನಾಟಕ ಯುವಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಹಳ್ಳಿ ರೈತ ಅಂಬರೀಶ್ ತಿಳಿಸಿದರು

    ಈ ಕುರಿತು ಮಾತನಾಡಿದ ಅವರು ಘಾಟಿ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವವು ಜಗತ್ ಪ್ರಸಿದ್ಧವಾಗಿದ್ದು ಇಲ್ಲಿ ನಡೆಯುವ ದನಗಳ ಜಾತ್ರೆಯೂ ಕೂಡ ಅದ್ದೂರಿಯಾಗಿರುತ್ತದೆ ಈ ಬಾರಿಯ ದನಗಳ ಜಾತ್ರೆಯಗೆ ರಾಜ್ಯಾದ್ಯಂತ ರೈತರ ಉತ್ತಮ ಸ್ಪಂದನೆ ದೊರೆತಿದ್ದು ನಮ್ಮ ಸಂಘಟನೆಯ ವತಿಯಿಂದ ಉಚಿತ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು ಈ ಮೇವು ವಿತರಣಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ಬಾರಿಯ ದನಗಳ ಜಾತ್ರೆಯಲ್ಲಿ ಹಲವು ಬಗೆಯ ಉತ್ತಮ ತಳಿಯ ರಾಸುಗಳು ಮಾರಾಟ ಹಾಗೂ ಪ್ರದರ್ಶನವಾಗಿವೆ. ನಾಳೆ (ಜನವರಿ 16)ನಡೆಯುವ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವರ ರಥೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಬರುವ ಭಕ್ತಾದಿಗಳಿಗೆ ನಮ್ಮ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಹಾಗೂ ಹಿರಿಯ ನಾಗರಿಕರಿಗೆ ನಮ್ಮ ಸಂಘಟನೆಯ ವತಿಯಿಂದ ವಿಶೇಷ ದರ್ಶನ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು

    ಸಂಘಟನೆ ವತಿಯಿಂದ ಈ ವಿಶೇಷ ಕಾರ್ಯ ನಡೆಸಲು ಹತ್ತು ಜನಗಳ ವಿಶೇಷ ಸ್ವಯಂಸೇವಕ ತಂಡವನ್ನು ರಚನೆ ಮಾಡಲಾಗಿದ್ದು ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನಮ್ಮ ಸ್ವಯಂಸೇವಕರ ತಂಡದ ವತಿಯಿಂದ ಮಾಡಲಾಗುತ್ತದೆ ಹಾಗೂ ದೇವಾಲಯಕ್ಕೆ ಬರುವ ಹಿರಿಯ ನಾಗರಿಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕಕ್ಕೆ ನೂತನ ಸಾರಥಿಯಾಗಿ ರಾಮಮೂರ್ತಿ (ರಾಮು) ಆಯ್ಕೆ : ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಅಧಿಕೃತ ಘೋಷಣೆ

    ದೊಡ್ಡಬಳ್ಳಾಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ತಾಲ್ಲೂಕಿನಲ್ಲಿ ನೊಂದ ದಲಿತರ ಶಕ್ತಿಯಾಗಿ ಶ್ರಮಿಸಲಿದ್ದೇವೆ ತಾಲ್ಲೂಕಿನಲ್ಲಿ ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ ನೊಂದವರ ,ದಲಿತರ ದ್ವನಿಯಾಗಿ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ತಾಲ್ಲೂಕು ಘಟಕದ ನೂತನ ಅಧ್ಯಕ್ಷ ರಾಮು ತಿಳಿಸಿದರು

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ತಾಲ್ಲೂಕಿನಲ್ಲಿ ನಮ್ಮ ಸಂಘಟನೆ ಬಲಿಷ್ಠಗೊಂಡಿದೆ ಮುಂದೆ ದಲಿತರ ಕುಂದು ಕೊರತೆಗಳನ್ನು ಸರಿಪಡಿಸುವಲ್ಲಿ ಸಂಘಟನೆ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು . ಮುಂದೆ ಹೋಬಳಿ ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಇದರೊಟ್ಟಿಗೆ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ ಗೊಳಿಸಲಾಗುವುದು ಎಂದು ತಿಳಿಸಿದರು

    ತಾಲ್ಲೂಕು ಸಂಚಾಲಕರಾಗಿ ರಾಮಮೂರ್ತಿ ನೇರಳೆ ಘಟ್ಟ ( ರಾಮು) , ತಾಲ್ಲೂಕು ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ ಎಂ ಕೆ ಮಾಡೇಶ್ವರ ,ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ , ಆನಂದ್ ಸಕ್ಕರೆ ಗೊಲ್ಲಹಳ್ಳಿ ,ರಮೇಶ್ ಹಾಲೇನಹಳ್ಳಿ , ಕುಮಾರ್ ತೂಬಕುಂಟೆ ,ನಗರ ಘಟಕದ ಸಂಚಾಲಕರಾಗಿ ಶಿವಶಂಕರ್ ಕಚೇರಿಪಾಳ್ಯ, ಸಹಸಂಚಾಲಕರಾಗಿ ನರಸಿಂಹಯ್ಯ, ಹನುಮಂತರಾಜು, ವೆಂಕಟೇಶ್ , ದೊಡ್ಡ ಬೆಳವಂಗಲ ಹೋಬಳಿ ಸಂಚಾಲಕರಾಗಿ ನಾರಾಯಣ, ಗಂಗಣ್ಣ ಕತ್ತಿಹೊಸಹಳ್ಳಿ , ಗೌರವ ಸಂಚಾಲಕರಾಗಿ ನಂದಕುಮಾರ್ ,ಬೈಲಪ್ಪ ಸಹ ಸಂಚಾಲಕರಾಗಿ ವೆಂಕಟರಾಮಯ್ಯ , ಬಿ.ಹನುಮಯ್ಯ , ಮಾರಣ್ಣ , ಮಧುರೆ ಹೋಬಳಿ ಘಟಕದ ಸಂಚಾಲಕರಾಗಿ ಹನುಮಂತರಾಜು ಕಾಡನೂರು,ಹನುಮಂತರಾಯಪ್ಪ ಗಂಡ್ರಗೂಳಿಪುರ,ಅಶ್ವಥ್ ,ಮಹೇಂದ್ರ ,ಪ್ರದೀಪ್, ಸಾಸಲು ಸಂಚಾಲಕರಾಗಿ ಕೃಷ್ಣಪ್ಪ ಜಾಲಗೆರೆ, ಆನಂದ್, ಹನುಮಂತರಾಜು ,ದೇವರಾಜ್,

    ಚಂದ್ರಪ್ಪ, ತೂಬಗೆರೆ ಹೋಬಳಿ ಸಂಚಾಲಕರಾಗಿ ಮೈಲಾರಪ್ಪ ನಂದಿಗುಂದ, ಮಾರಪ್ಪ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಂಚಾಲಕರಾದ ಎಂ ಪಿ ಗಂಗಾಧರ್ ತಿಳಿಸಿದರು.

    ಜಿಲ್ಲಾ ಸಂಚಾಲಕರಾದ ಎಂಪಿ ಗಂಗಾಧರ್ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭವಾಗಲಿ ದೊಡ್ಡಬಳ್ಳಾಪುರ ತಾಲ್ಲೂಕು ಗ್ರಾಮಗಳಿಂದ ಕೂಡಿದ್ದು ಹೋಬಳಿ ಮಟ್ಟದ ಪದಾಧಿಕಾರಿಗಳು ತಾಲ್ಲೂಕು ಘಟಕದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸ್ಥಳೀಯವಾಗಿ ದಲಿತರ ಕುಂದು ಕೊರತೆಗಳನ್ನು ಅರಿತು ತ್ವರಿತವಾಗಿ ಸ್ಪಂದಿಸುವ ಕಾರ್ಯ ಆಗಬೇಕಿದೆ ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು ದಲಿತರ ಪರ ಧ್ವನಿಯಾಗಿ ನಮ್ಮ ನೂತನ ಪದಾಧಿಕಾರಿಗಳು ಶ್ರಮಿಸಲಿ ಸ್ಥಳೀಯವಾಗಿ ಸಂಘಟನೆ ಜನತೆಯ ಮನಸ್ಸನ್ನು ಗೆಲ್ಲಲಿ ಸಮಾಜದ ಕುಂದು ಕೊರತೆಗಳನ್ನು ಸರಿಪಡಿಸುವಲ್ಲಿ ನಮ್ಮ ಸಂಘಟನೆಯ ಪಾತ್ರ ಪ್ರಮುಖವಾದದ್ದು ಪ್ರೊಫೆಸರ್ ಬಿ ಕೃಷ್ಣಪ್ಪರವರ ಆಶಯದಂತೆ ಸಂಘಟನೆಯು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಹಾರೈಸಿದರು

    ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ, ದೊಡ್ಡಯ್ಯ ಲಿಂಗಾಪುರ, ನರೇಂದ್ರ ಮಾಡೇಶ್ವರ, ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ, ರಮೇಶ್ ಹಾಲೇನಹಳ್ಳಿ, ನರಸಿಂಹಮೂರ್ತಿ ದೊಡ್ಡ ಕುಕ್ಕನಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ ಹಾಗೂ ಸಂಘಟನೆಯ ತಾಲ್ಲೂಕು ಹೋಬಳಿ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಜನವರಿ 30 ರಂದು ಸೌಹಾರ್ಧ ಕರ್ನಾಟಕ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ : ಸಭೆಯಲ್ಲಿ ಹಲವು ಮುಖಂಡರು ಭಾಗಿ

    ದೊಡ್ಡಬಳ್ಳಾಪುರ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ರವರ ಸವಿನೆನಪಿನಲ್ಲಿ ಜನವರಿ 30 ರಂದು ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯ ಸಹಯೋಗದೊಂದಿಗೆ ಸೌಹಾರ್ಧ ಕರ್ನಾಟಕ ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಈ ಕಾರ್ಯಕ್ರಮದ ಆಯೋಜನೆ ಕುರಿತಂತೆ ದೊಡ್ಡಬಳ್ಳಾಪುರ ನಗರ ಭಾಗದ ಕನ್ನಡ ಜಾಗೃತಿ ಪರಿಷತ್ತಿನಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು

    ಸಭೆಯಲ್ಲಿ ತಾಲ್ಲೂಕಿನ ಪ್ರಗತಿಪರ ಚಿಂತಕರಾದ ಆರ್ .ಚಂದ್ರ ತೇಜಸ್ವಿ ಮಾತನಾಡಿ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಧರಿಸಲು ಈ ಸಭೆ ಕರೆಯಲಾಗಿದ್ದು ತಾಲ್ಲೂಕಿನ ಹಲವು ಮುಖಂಡರು ಸ್ವಯಿಚ್ಚೆಯಿಂದ ಭಾಗವಹಿಸಿದ್ದಾರೆ ಹಾಗೂ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು

     

    ದಲಿತ ಮುಖಂಡರು ,ಪತ್ರಕರ್ತರು ಆದ ರಾಜು ಸಣ್ಣಕ್ಕಿ ಮಾತನಾಡಿ ಕಾರ್ಯಕ್ರಮವನ್ನು ತಾಲ್ಲೂಕಿನ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪ್ರಚಾರಕ್ಕೆ ಒತ್ತು ನೀಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವಂತೆ ಶ್ರಮಿಸಬೇಕಿದೆ ಉತ್ತಮ ಸಂದೇಶವುಳ್ಳ ಕಾರ್ಯಕ್ರಮ ರೂಪಿಸಿರುವ ಹೆಮ್ಮೆ ನಮಗಿದೆ ಕಾರ್ಯಕ್ರಮದ ಆಯೋಜನೆಗೆ ತಾಲ್ಲೂಕಿನ ಪ್ರಗತಿಪರ ಚಿಂತಕರು , ದಲಿತ ಮುಖಂಡರು,ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಒಟ್ಟಾಗಿ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಸಭೆಯಲ್ಲಿ ಪ್ರಕಾಶ್ ಮಂಟೇದ ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು , ಪ್ರಗತಿಪರ ಚಿಂತಕರು, ದಲಿತ ಮುಖಂಡರು ಉಪಸ್ಥಿತರಿದ್ದರು .

  • ವಿಶ್ವಕ್ಕೆ ಭಾರತದ ವಿಶೇಷತೆಯನ್ನು ಪರಿಚಯಿಸಿದ ವಿಶ್ವಗುರು ಸ್ವಾಮಿ ವಿವೇಕಾನಂದರ ಜೀವನವೇ ನಮಗೆ ಆದರ್ಶ – ನರಸಿಂಹಮೂರ್ತಿ

    ದೊಡ್ಡಬಳ್ಳಾಪುರ : ಮಹಾನ್ ಸನ್ಯಾಸಿ ವಿಶ್ವಗುರು ಸ್ವಾಮಿ ವಿವೇಕಾನಂದರ 160 ನೇ ಜಯಂತೋತ್ಸವದ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆಮಾಡಲಾಗಿತ್ತು

     

    ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಂಕ್ ವಿತರಣೆ, ವಯೋವೃದ್ದರಿಗೆ ಹೊದಿಕೆ ( ಬೆಡ್ ಶೀಟ್) ವಿತರಣೆ, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ, ನಗರದ ನಿರ್ಗತಿಕರಿಗೆ ಗೀತಾ ಮಂದಿರದಲ್ಲಿ ಹಾಗೂ ಪಾಲನಜೋಗಹಳ್ಳಿ ಅನಾಥಾಶ್ರಮದಲ್ಲಿ ಮಕ್ಕಳಿಗೆ ಹಣ್ಣು ವಿತರಣೆ , ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಅನ್ನದಾಸೋಹ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸ್ವಾಮಿ ವಿವೇಕಾನಂದರ ಜಯಂತೋತ್ಸವವನ್ನು ಆಚರಣೆ ಮಾಡಲಾಗಿತ್ತು.

    ಈ ಕುರಿತು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ ವಿವೇಕಾನಂದರ ಜೀವನವೇ ಒಂದು ಅದ್ಭುತ , ಭಾರತ ಕಂಡ ಅತ್ಯುತ್ತಮ ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ವಿವೇಕಾನಂದರು ಪ್ರಮುಖರು ಅವರ ಜೀವನ ಮಾರ್ಗ ನಮ್ಮೆಲ್ಲರಿಗೂ ಆದರ್ಶ ಸಮಾಜಕ್ಕೆ ನಮ್ಮಿಂದಾಗುವ ಅಳಿಲುಸೇವೆಯನ್ನು ಖಂಡಿತ ಮಾಡಲಾಗುವುದು ನಮ್ಮ ಟ್ರಸ್ಟ್ ನ ವತಿಯಿಂದ ಇಂದು ಸಾಂಕೇತಿಕವಾಗಿ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಮುಂದೆ ಟ್ರಸ್ಟ್ ನ ಮೂಲಕ ತಾಲ್ಲೂಕಿನಲ್ಲಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಲಿದ್ದೇವೆ ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಮಾಜಕ್ಕೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ , ಯುವ ಸಮುದಾಯ ಕುರಿತು ಸ್ವಾಮಿ ವಿವೇಕಾನಂದರು ಕಂಡ ಕನಸು ಇನ್ನೂ ಕನಸಾಗಿಯೇ ಉಳಿದಿದೆ ಯುವ ಭಾರತ ನಿರ್ಮಾಣಕ್ಕೆ ನಮ್ಮ ಟ್ರಸ್ಟ್ ಶ್ರಮಿಸುತ್ತದೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಫೆಬ್ರವರಿ 14 ರಂದು ಮಾಜಿ ಯೋಧರ ಬೃಹತ್ ಸಮಾವೇಶ : ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ ಹಲವು ಗಣ್ಯರಿಗೆ ಆಹ್ವಾನ

    ಪ್ಯಾರಾಮಿಲಿಟರಿ ಮಾಜಿ ಯೋಧರ ವತಿಯಿಂದ ಫೆಬ್ರವರಿ 14 ರಂದು ಪುಲ್ವಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಈ ಬೃಹತ್ ಸಮಾವೇಶವು ಬೆಂಗಳೂರಿನ ಸಿ ಆರ್ ಪಿ ಎಫ್ ಪೆರೇಡ್ ಗ್ರೌಂಡ್ ನಲ್ಲಿ ನೆಡೆಯಲಿದೆ

    ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕೇಂದ್ರೀಯ ಅರೆಸೇನಾಪಡೆಗಳ ಮಾಜಿ ಯೋಧರ ಕ್ಷೇಮಭಿವೃದ್ಧಿ ಸಂಘದ ರಾಜ್ಯಧ್ಯಕ್ಷರಾದ ನರಸಿಂಹ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತರಾಜಗೋಪಾಲ, ಹಾಗೂ ಹಲವು ಮಾಜಿ ಯೋಧರು ಹೂಗುಚ್ಛ ನೀಡುವ ಮೂಲಕ ಬೃಹತ್ ಸಮಾವೇಶಕ್ಕೆ ಆಹ್ವಾನಿಸಿದರು.

     

    ಈ ಕುರಿತು ಕೇಂದ್ರೀಯ ಅರೇಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ಮಾತನಾಡಿ ಈ ಕಾರ್ಯಕ್ರಮವು ವಿಶೇಷವಾಗಿದ್ದು ಪ್ಯಾರಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ಮಾಡುವ ಉದ್ದೇಶ ನಮ್ಮದಾಗಿದೆ. ಸಮಾವೇಶಕ್ಕೆ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ಯಾರಾಮಿಲಿಟರಿಯಲ್ಲಿ ಸೇವೆಸಲ್ಲಿಸಿರುವ 17000ಕ್ಕು ಹೆಚ್ಚು ಮಾಜಿ ಯೋಧರು ಭಾಗವಹಿಸುವ ಸಾಧ್ಯತೆಯಿದ್ದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಮಾಜಿ ಯೋಧರ ಬೃಹತ್ ಸಮಾವೇಶ ಇದಾಗಿದೆ ಕಾರ್ಯಕ್ರಮದಲ್ಲಿ ಮಾಜಿ ಯೋಧರ ಹಲವು ಬೇಡಿಕೆಗಳನ್ನು ಕೂಡ ತಿಳಿಸಲಾಗುವುದು ಹಾಗೂ ಸರ್ಕಾರಕ್ಕೆ ಅರೆಸೇನಾ ಪಡೆಗಳ ಪ್ರತ್ಯೇಕ ಬೋರ್ಡ್ ಸ್ಥಾಪಿಸಲು ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು .

     

    ಈ ಸಮಾವೇಶಕ್ಕೆ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದಂತಹ ಕೆಎಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ ರಾಜ್ಯದ ಪ್ರತಿ ಗಣ್ಯರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡುತ್ತಿದ್ದು ಕಾರ್ಯಕ್ರಮವು ಅತ್ಯಂತ ಶಿಸ್ತು ಸಂಯಮದಿಂದ ನಡೆಯಲಿದೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಕೇಂದ್ರೀಯ ಅರೇಸೇನಾ ಪಡೆಗಳ ಮಾಜಿ ಯೋಧರ ಕ್ಷಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು

  • ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಅನ್ನದಾಸೋಹ ಮತ್ತು ಹೊದಿಕೆ ವಿತರಣಾ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ವಿವೇಕಾನಂದರ ಜಯಂತೋತ್ಸವದ ಅಂಗವಾಗಿ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ನಿರ್ಗತಿಕ ಕಡುಬಡವರಿಗೆ ಅನ್ನದಾಸೋಹ ಮತ್ತು ಉಚಿತ ಹೊದಿಕೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

    ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸತತವಾಗಿ 1387 ದಿನಗಳಿಂದ ಅನ್ನದಾಸೋಹ ಕಾರ್ಯಕ್ರಮವನ್ನು ದಾನಿಗಳ ನೆರವಿನಿಂದ ಮಲ್ಲೇಶ್ ಮತ್ತು ತಂಡ ನಡೆಸುತ್ತಿದ್ದು ಇಂದು ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದ ಸೇವಾಭೀವೃದ್ದಿ ಟ್ರಸ್ಟ್ ವತಿಯಿಂದ ವಯೋವೃದ್ಧರಿಗೆ ಹೊದಿಕೆ ವಿತರಣೆ ಮಾಡಲಾಯಿತು

     

    ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಕೆ ಎಸ್ ನರಸಿಂಹಮೂರ್ತಿ ಮಾತನಾಡಿ ನಮ್ಮ ಕೈಲಾದ ಅಳಿಲು ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಸವಿ ನೆನಪಿನಲ್ಲಿ ಮಲ್ಲೇಶ್ ಸಹಕಾರದೊಂದಿಗೆ ನಿರಾಶ್ರಿತ ಕಡುಬಡವರಿಗೆ ಅನ್ನದಾಸೋಹದ ಜೊತೆಗೆ ಹೊದಿಕೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು

     

    ಕಾರ್ಯಕ್ರಮದ ಆಯೋಜಕರಾದ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಸತತವಾಗಿ 1387ನೇ ಕಾಲಿಟ್ಟಿರುವ ಅನ್ನ ದಾಸೋಹ ಕಾರ್ಯಕ್ರಮ ದಾನಿಗಳ ನೆರವಿನಿಂದ ಸಾಗುತ್ತಿದ್ದು ನಿರಂತರ ಬಡವರ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ನಡೆಯುತ್ತಿದೆ ಎಂದು ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಅಂಗವಾಗಿ ವೃದ್ಧರಿಗೆ ಹೊದಿಕೆ ವಿತರಣೆ ಮಾಡಲಾಗಿದೆ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದ ಸೇವಾಭಿವೃದ್ದಿ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೆ ನಮ್ಮ ಅನ್ನದಾಸೋಹ ಟ್ರಸ್ಟ್ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದ ಸೇವಾಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷರಾದ ನರಸಿಂಹ ಮೂರ್ತಿ ಉಪಾಧ್ಯಕ್ಷರಾದ ಕೆ ಎಸ್ ನರಸಿಂಹಮೂರ್ತಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು